ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಪುಟ್ಟಪಾದ
ಕವಿತೆ ಪುಟ್ಟಪಾದ ಡಾ. ನಿರ್ಮಲಾ ಬಟ್ಟಲ ಪುಟ್ಟ ಪಾದಗಳಮಾಯೆಯಲ್ಲಿ ಜಗತ್ತೇ ಮರೆತಿದ್ದೆ….!!ಈ ರಾಮನಾಗಿ…..ನಾನು ಕೌಸಲ್ಯೆಯಾಗಿ….!! ಅರಮನೆ…. ,ಅಂಗಳದಲ್ಲೆಲ್ಲಾಓಡಾಡುವಾಗ ಅಡಿಗಡಿಗೆ ಅಂಗೈಯನ್ನೇ ಹಿಡಿದು ನಡೆಸಿದನಾನು ಮರೆತೆಬಿಟ್ಟೆ…ಬೆತ್ತಲೆ ಪಾದಗಳಲ್ಲಿ ಹದಿನಾಲ್ಕುವರುಷ ಕಾನನದ ಕಲ್ಲುಮುಳ್ಳುಗಳಲ್ಲಿಸುತ್ತುವಾಗ ನಿನ್ನ ಕೊಮಲ ಪಾದನೊಯುವುದೆಂದು….!! ಈ ಪಾದಗಳು …ಗರ್ಭ ಬಿಟ್ಟು ಭೂಮಿಸೊಕಲುಮರೆತೆಬಿಟ್ಟೆ ಸೆರೆಮನೆಯನ್ನಾ….!!ಈ ಶಾಮನಿಗಾಗಿನಾ ದೇವಕಿಯಾಗಿ…..!! ಕರುಳಿಗಷ್ಟೆ ಅಲ್ಲಾ ಮಮತೆಗೂ ಕತ್ತರಿಹಾಕಿ…..!!ಸಾವಿನ ಸೆರೆಮನೆಯಿಂದ ಹೊರನೂಕಿನಿನ್ನ ಬಾಲ ಲೀಲೆಗಳನೆಲ್ಲಾಯಶೋಧೆಯ ಮಡಿಲಿಗೆ ಹಾಕಿನೀ ಮತ್ತೆ ಬರುವ ದಾರಿಯನ್ನೇಕಾಯುತ್ತ ಕುಳಿತೆನಲ್ಲಾ….ನೀನೆ ದೈವವೆಂದು…..!! ಈ ಪುಟ ಪಾದದ ಮಯೆಯಲ್ಲಿಮತ್ತೆ ಕಳೆದು ಹೊಗಿದ್ದೇನೆ….!ನೆನಪುಗಳ ಆಳದಲ್ಲಿ….ನೀನೆ ರಾಮ, ನೀನೆ ಶಾಮಯೆಂದುನಾನೆ ಕೌಸಲ್ಯ ದೇವಕಿಯಂದುಭ್ರಮಿಸಿ ಸಂಭ್ರಮಿಸಿ….!!ಮರೆತು ಬಿಟ್ಟೆ ನಾನುಶೋಕದ ಹೊರತು ಕೊಟ್ಟರೆನವರು ಮಮತೆಗೆ….?!!!!ನೀನು ಹೊರತಾಗಿಲ್ಲ ಅದಕೆ….!!ಮುಸಂಜೆಯ ಈ ಮಬ್ಬು ಗತ್ತಲಿನಲಿಕಾಯುತಿರುವೆ ನಿನಗಾಗಿ….!!! ***********
ಬಿಡುಗಡೆ
ಕವಿತೆ ಬಿಡುಗಡೆ ಪ್ರೊ.ರಾಜನಂದಾ ಘಾರ್ಗಿ ಭಾವಗಳ ಬಡತನವಿಲ್ಲವಿಚಾರಗಳ ಕೊರತೆಯಲ್ಲಬರಿ ಅಸಹಾಯಕತೆಪ್ರತಿರೋಧದ ಕೊರತೆ ಎತ್ತಿ ನೀಡುವ ಕೈಗಳಲ್ಲಿಮೌಲ್ಯಗಳ ಸಂಕೋಲೆಎದ್ದುಬರಲು ಕಾಲುಗಳಲ್ಲಿಜವಾಬ್ದಾರಿಗಳ ಬೇಡಿ ಸುತ್ತಲೂ ಮನುಸ್ಮೃತಿಬರೆದ ಲಕ್ಮಣರೇಖೆಜ್ವಾಲೆಗಳಾಗಿ ಉರಿಯುತಕಾಲುಗಳ ಸುಡುತಿದೆ ಎದುರಿನಲಿ ತುಂಡಾದಮಾನವೀಯತೆ ನರಳುತಿದೆಸಾಮಾಜಿಕ ಕಟ್ಟಳೆಗಳಹರಿತ ಖಡ್ಗ ಪ್ರಹಾರಕ್ಕೆ ಸಬಲೀಕರಣದ ಮಂತ್ರಘೋಷಣೆಗಳ ಭಾಷಣಗಳಬುರುಡೆಗಳು ಉರುಳುತ್ತಿವೆಮರಿಚಿಕೆಗಳು ಕೈ ಬೀಸುತ್ತಿವೆ ಎಟುಕಿ ಮಾಯವಾಗುತ್ತಿರುವಬಿಡುಗಡೆಯನರಸುತನಡೆದಿರುವೆ ಬುದ್ದ ಬಸವಣ್ಣರೆಡೆಗೆಗಾಂಧಿಜಿಯ ಸ್ವಾತಂತ್ರದೆಡೆಗೆ.
ನಾನು ಭೂಮಿ , ನೀನು?
ಕವಿತೆ ನಾನು ಭೂಮಿ , ನೀನು? ನಾಗರಾಜ್ ಹರಪನಹಳ್ಳಿ ನನ್ನ ಎದೆ ಈಗ ಭೂಮಿಅಲ್ಲಿ ಬೆಳೆದ ಮರ ನೀನುಮೌನಿ ನೀಬೇರುಗಳು ನನ್ನೊಳಗೆ ಪಿಸುಗುಡುತ್ತಿವೆ ; ಪ್ರೇಮದ ಹೂ ಮರದ ತುದಿ ತುದಿಗೆ ಅರಳಿದೆ ನೋಡುಯಾರೋ ಹೂಗಳ ಮನೆಗೊಯ್ಯಯ್ದರು,ಇನ್ನಾರೂ ಸುಂದರಿ ಮುಡಿದು , ತನ್ನ ಗೆಳೆಯನ ಜೊತೆ ಕುಳಿತು ವೈಯಾರದ ಮಾತಾಡಿದಳು ; ಇಲ್ಲಿ ,ಈ ಮರದ ಬೇರು ನಸು ನಕ್ಕಿತು: ನಾನು ಆಕಾಶ ,ಅಲ್ಲಿ ಚಲಿಸುವ ನೀನುಆಕಾಶದಷ್ಟಗಲ ಅರಳಿದ ಬೆಳದಿಂಗಳುಬೆಳದಿಂಗಳ ಉಂಡ ಭೂಮಿಯ ಜನಅವರೀಗ ನಮ್ಮ ಪ್ರೇಮವ ಉಸಿರಾಡುತ್ತಿದ್ದಾರೆ ನಾನು ಕಡಲು, ನೀ ಅಲ್ಲಿ ಚಲಿಸುವ ದೋಣಿಕ್ಷಿತಿಜ ತಲುಪುವುದೇ ಇಲ್ಲಮುಗಿಯದ ಪಯಣದಲಿಲೋಕದ ಜನ ಕಡಲು , ದೋಣಿಯ ಕಂಡು ಚಪ್ಪಾಳೆ ತಟ್ಟಿ ನಕ್ಕು ನಲಿದು ಊರ ಸೇರಿದರುಮನೆಮನೆಯ ಗೋಡೆಯಲ್ಲಿ ನಾವು ಚಿತ್ರವಾದೆವು ಮರ ನೆರಳು ಹೂವು ಆಕಾಶ ಚಂದ್ರ ಬೆಳದಿಂಗಳು ಕಡಲು ದೋಣಿ ಪಯಣ ಎಲ್ಲವೂ ಚಲಿಸದೇ ಚಲಿಸುತ್ತವೆಜನ ಮಾತ್ರ ಮಣ್ಣಾಗುತ್ತಾರೆಮತ್ತೆ ಹುಟ್ಟುತ್ತಾರೆಪ್ರೇಮ ಪ್ರೇಮ ಮಾತ್ರ ದೀಪವಾಗಿ ಉಸಿರಾಡುತ್ತದೆಇಲ್ಲಿ ಚಲನೆ ಚೆಲುವುಆ ಬೆಳದಿಂಗಳಲ್ಲಿಮರ ನಿದ್ದೆ ಹೋಗಿದೆ ;ನಿದ್ದೆ ಹೋಗಿದೆ ….. *****************************
ಸ್ಥಾನ ಪಲ್ಲಟ
ಕವಿತೆ ಸ್ಥಾನ ಪಲ್ಲಟ ಡಾ. ನಿರ್ಮಲಾ ಬಟ್ಟಲ ದಶಕಗಳೆ ಕಳೆದುಹೋದವುಒಲೆ ಊದುವುದು ನಿಂತುಹೋಗೆ ಹಿಡಿಯುವುದು ನಿಂತುಸುಡುವುದು ನಿಂತಿಲ್ಲ…! ಇಗೋ….ಎಸರಿಡುವುದೆಮರೆತುಹೋಗಿದೆಪ್ರೆಶರ್ ಕುಕ್ಕರಿನಲ್ಲಿ ಹಾಕಿಕೂಗು ಹೋಡೆಸುವುದಷ್ಟೆಒತ್ತಡದಲಿ ಬೇಯುವುದು ನಿಂತಿಲ್ಲ…! ರೊಟ್ಟಿ ಬೇಯಿಸುವಾಗಮುಂಗೈಗೆ ಬೀಳುವಹೆಂಚಿನ ಬರೆಗಳಿಗ ಕಂಡಿಲ್ಲಾ…ಕಾಣದ ಬರೆಗಳು ಮನಸ ತುಂಬಾಬಿಳುವುದು ನಿಂತಿಲ್ಲ….! ಮನೆಯೊಡತಿ ಎಂದುಹೊರಗೆ ಬಿಗೀದರುಒಳ ಒಳಗೆ ದಾಸ್ಯ ಒಪ್ಪಿ ಕೊಳ್ಳುವುದು ನಿಂತಿಲ್ಲಾ…! ಏನೆಲ್ಲಾ ಬದಲಾಗಿಏನೆನೋ ಹೊಸದಾಗಿಬಂದು ಹಳೆಯದೆಲ್ಲ ಬದಲಾದರೂಬಸಿರುಹೊರುವುದು ನಿಂತಿಲ್ಲ….!! ಆಕಾಶಕ್ಕೆ ಹಾರಿದರೂಪಾತಾಳಕ್ಕೆ ಇಳಿದರೂಕುಕ್ಕುವ ಮುಕ್ಕುವದಾಳಿಗಳಿನ್ನು ನಿಂತಿಲ್ಲ….! ಹೆಣ್ಣೆಂದು ಪ್ರತಿ ಘಳಿಗೆಹಣ್ಣು ಮಾಡುವ,ಎತ್ತರಿಸಿದ ಧ್ವನಿ ಕತ್ತರಿಸಿಭ್ರೂಣಗಳ ಹೂಳುವುದುನ್ನುನಿಂತಿಲ್ಲ….! *******************************
ಸೋಜಿಗವಲ್ಲ…!
ಕವಿತೆ ಸೋಜಿಗವಲ್ಲ…! ಕಾಂತರಾಜು ಕನಕಪುರ ಒಳಕೋಣೆಯ ಬಾಗಿಲು ಜಡಿದಮೇಷ್ಟ್ರು ಆನ್ಲೈನ್ ತರಗತಿಯಲ್ಲಿಲಿಂಗ ಸಮಾನತೆಯ ಕುರಿತುವಿದ್ಯಾರ್ಥಿಗಳಿಗೆ ಮನಮುಟ್ಟುವಂತೆಬೋಧಿಸುತ್ತಿದ್ದುದನ್ನು ಕೇಳಿದಮೇಷ್ಟ್ರ ಮಡದಿ ಕಣ್ಣೀರು ಹಾಕಿದ್ದು ಸೋಜಿಗವಲ್ಲ…! ಸಮಾಜದಲ್ಲಿ ಅಸಮಾನತೆಯು ತೊಲಗಿಸಂಪನ್ಮೂಲಗಳ ಸಮಾನ ಹಂಚಿಕೆಯಾಗಬೇಕೆಂದುಹೋರಾಟದ ವೇದಿಕೆಗಳಲಿ ಕಿಡಿಕಾರುತಿದ್ದವನಬೀಳು ಹೊಲದಲ್ಲಿ ಒಲೆ ಹೂಡಿದ್ದ ಅಲೆಮಾರಿಕುಟುಂಬ ಜಾಗ ಖಾಲಿಮಾಡಿದ ನಂತರನಾಲಿಗೆ ಬಿದ್ದುಹೋಗಿರುವುದು ಸೋಜಿಗವಲ್ಲ…! ಮನದ ಮುಂದಣ ಆಸೆಯೇ ಮಾಯೆಎಂಬುದನ್ನು ಸರ್ವರೂ ತಲೆದೂಗುವಂತೆವಿವರಿಸುತ್ತಿದ್ದ ಬುದ್ಧಿಯವರುಸಿಗಬಾರದ ರೀತಿ ಸಿಕ್ಕಿಬಿದ್ದ ವಿಷಯಸವಿವರವಾಗಿ ಮಾಧ್ಯಮಗಳಲ್ಲಿಬಿತ್ತರಗೊಂಡದ್ದು ಸೋಜಿಗವಲ್ಲ…! ಊರ ಮಂದಿಯ ಜಗಳ ಜಂಜಡಗಳಿಗೆಒತ್ತರಿಸಿವನ ಹೊಲ ಹಾಳುಮಚ್ಚರಿಸಿದವನ ಮನೆ ಹಾಳು ಎಂದುತಿಳಿ ಹೇಳುತಿದ್ದ ಊರಿನ ಒಳೇಟು ಗೌಡರಹೊಲ ಮನೆ ಎರಡೂ ಹಾಳಾದದ್ದು ಸೋಜಿಗವಲ್ಲ…! ನಮಗೆ ಗ್ರಾಹಕನೇ ದೇವರುದೇವರಿಗೆ ದ್ರೋಹ ಬಗೆದವರುಂಟೇ?ಹೀಗೆಂದು ಅಂಗಡಿಗೆ ಆಗಮಿಸಿದವರ ಹಣೆಗೆತಮ್ಮ ಹಣೆಯ ನಾಮ ವರ್ಗಾಯಿಸುತ್ತಿದ್ದಮಹಡಿ ಮನೆಯ ಶೇಟ್ ಜೀ ರೋಗಗಳಗೂಡಾಗಿ ಕೊರಗುವುದು ಸೋಜಿಗವಲ್ಲ…! ಕಿಡಿಯನು ಕೆಂಡಮಾಡಿಉರಿಯನು ಊರಿಗೆ ಹಚ್ಚಿತಾನು ಬೆಚ್ಚಗಿದ್ದವನ ಇದ್ದೊಬ್ಬ ಮಗಕಿಚ್ಚಿನಲಿ ಸುಟ್ಟು ಬೂದಿಯಾದುದು ಸೋಜಿಗವಲ್ಲ…! ಮಂದಿ ಮತಿಯ ಮೇಲೆ ಮಂಕುಬೂದಿಯ ಸಿಡಿಸಿ ಮಾಯಾಜಾಲದಲಿ ಸಿಲುಕಿಸಿದೆವೆಂದು ಬೀಗಿಗೆದ್ದವರಿಲ್ಲ ಸೋತವರೆ ಎಲ್ಲಾ…ಹೆಣೆದ ಬಲೆಯೊಳಗೆ ಹೆಣವಾಗುವುದುಯಾವತ್ತಿಗೂ ಸೋಜಿಗವಲ್ಲ…! ************************
ಬದ್ಧತೆ ಮೆರೆಯುವ..
ಕವಿತೆ ಬದ್ಧತೆ ಮೆರೆಯುವ.. ಪ್ರೋ ವಿಜಯಲಕ್ಷ್ಮಿ ಪುಟ್ಟಿ ಗೆಳೆಯನಮ್ಮಪ್ರೀತಿಅದರ ರೀತಿನಿಭಾಯಿಸುವಒಲುಮೆಯಿಂದಜತನದಿಂದಪತನವಾಗದಂತೆ ..ನೆನಪಿಸಿಕೋ ನನ್ನನ್ನನನ್ನ ನೆನಪಿನ ಲೋಕಕ್ಕೆಮೇಲು ಹೆಜ್ಜೆ ಇರಿಸುನನ್ನ ಎಲ್ಲ ಖುಷಿ ನಿನ್ನಿಂದಲೇ ಇರದಿದ್ದರೂ ನಾನು ಖುಷಿಯಿಂದ ನೀನು ಮಾತ್ರ ದುಖಿ ಬೇಡನನ್ನ ಮುಖದ ನಗುನಿನ್ನ ಬಳುವಳಿನನ್ನ ಸುಖದುಃಖದಹರಿಕಾರ ನೀನುನಿನ್ನಿಂದ ಮುನಿಸಿದರೆ ಮುದುರಿಕೊಳ್ಳಬೇಡ ಮನಸು ..ಒಮ್ಮೊಮ್ಮೆ ಪ್ರೀತಿತುಸು ಹಟಮಾರಿಮನಸ್ಸು..ಮನಸ್ಸುಗಳದೂರ ಬೇಡಸಾಗಬೇಕಿದೆ ಬಲುದೂರ ಹಾದಿನಮ್ಮ ನಮ್ಮ ವಚನಪರಿಪಾಲಿಸುವಬದ್ಧತೆಗೆ ಪkkaಗೋಣಸುಂದರ ನಿನ್ನೊಂದಿಗೆ ಜೀವನ ಪಯಣನೆನಪಿಸಿಕೋ ನನ್ನನಸುನಗುವೆ ಇನ್ನ …. ******************









