ಹೀಗಾದಾಗ
ನನಗೆ ನಾನೇ ಎಂಬುದನು
ಕೈ ಜಾರಿಹೋಗಿ ನಿಂತಿದೆ ಬದುಕಿನ ಬಹುಪಾಲು
ಗಜಲ್ ಜುಗಲ್ ಬಂದಿ ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ ಗಜಲ್-07 ಪ್ರೇಮವೊಂದು ಪರಿಧಿಯಿಂದ ಜಾರುತ್ತಿದೆ ಎಂದರೆ ಏನರ್ಥಲೋಕವೊಂದು ಅಲಿಪ್ತವಾಗಿದೆ ಎಂದರೆ ಏನರ್ಥ ಒಂದೇ ದಿನದ ಬದುಕಿನಲಿ ಹೂವು ನಗುವುದ ಕಲಿಸುತ್ತದೆತಂಗಾಳಿಗೆ ಮನಸು ಹೆಪ್ಪುಗಟ್ಟುತ್ತಿದೆ ಎಂದರೆ ಏನರ್ಥ ಪುಟ್ಟ ಪುಟ್ಟ ಹೆಜ್ಜೆಗಳಲ್ಲಿ ದಣಿದ ರಿಂಗಣ ಕೇಳಲಾಗದುಗೂಡು ಕಟ್ಟುವ ಹಕ್ಕಿಯ ರೆಕ್ಕೆ ಸೋಲುತ್ತಿದೆ ಎಂದರೆ ಏನರ್ಥ ಗತಿಸಿದ ಕಾಲದಲಿ ನೂರಾರು ಕುರುಹುಗಳ ಉಸಿರ ವೇದನೆಶರಧಿ ಸ್ತಬ್ಧತೆಯ ಧರಿಸುತ್ತಿದೆ ಎಂದರೆ ಏನರ್ಥ ಕಾಲಚಕ್ರದ ಮೈಗೆ ಏನೊಂದೂ ಅಂಟಿಕೊಳ್ಳುವದಿಲ್ಲ “ಸ್ಮಿತ “ಮರೀಚಿಕೆಯ ಬೆನ್ನೇರಿ ಭಾವ ಸಾಗುತ್ತಿದೆ ಎಂದರೆ ಏನರ್ಥ/ ಸ್ಮಿತಾ ಭಟ್ ಆಡಿದ ಮಾತಿಗೆ ಜೀವವೇ ಇಲ್ಲವೆಂದರೆ ಏನರ್ಥಕಂಡ ಕನಸಿಗೆ ಕಾಯವೇ ಇಲ್ಲವೆಂದರೆ ಏನರ್ಥ ಹೊರ ಸುತ್ತ ಅದೆಷ್ಟು ಬಣ್ಣಗಳು ಮುತ್ತಿದರೇನುಅಂತರಂಗದಲಿ ಕುಂಚವೇ ಇಲ್ಲವೆಂದರೆ ಏನರ್ಥ ಹಂಚಿಕೊಂಡ ಭಾವಗಳು ಆಸರೆಯ ಬೇಡುತಿವೆಎದೆಗಡಲಿನೊಳಗೆ ಸಾರವೇ ಇಲ್ಲವೆಂದರೆ ಏನರ್ಥ ಬಾಡುತ್ತಿದ್ದರೂ ಸಂಪಿಗೆ ಕಂಪೆರೆಯುವುದು ತಾನೇಬೆಸೆದ ಬಂಧದಲಿ ಗಂಧವೇ ಇಲ್ಲವೆಂದರೆ ಏನರ್ಥ ನಿನ್ನೆಗಳ ಗೋರಿಯೊಳಗೆ ಹೋಗಲಾರದು ‘ರೇಖೆ’ನೆನಪುಗಳ ಸಂಚಿ ಭಾರವೇ ಇಲ್ಲವೆಂದರೆ ಏನರ್ಥ ರೇಖಾ ಭಟ್
ಮಕ್ಕಳಿಂದಲೇ ಗತಿ ಸದ್ಗತಿಯೆಂದುಲಿದವರು
ಅಪಗತರು ಇದ್ದವರ ಪಾಲಿಗಿಲ್ಲಿ |
ಬಿಟ್ಟಿರರು ಉಸಿರನ್ನು ಕೊಟ್ಟಿಹರು ಬದುಕನ್ನು
ಅಪಸದರು ಅರ್ಥೈಸು ಕಾಲ ಚಕ್ರದಲಿ ||
ತುಟಿಗೊಂದು ಮುದ್ರೆಯಿಟ್ಟು
ತನುವ ಸಂತೈಸುವ ನಿನ್ನ ಬಿಂಬ
ಪರಿತಪಿಸುವ ನನ್ನ ತಣಿಸಬಾರದೆ
ಹೀಗೊಂದು ಕನವರಿಕೆ ನಿನಗಾಗಿ
You cannot copy content of this page