ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ತಾತಪ್ಪ.ಕೆ.ಉತ್ತಂಗಿ ಕವಿತೆ “ಬಟ್ಟಕಂಗಳ ನಿರೋಷೆ”

ಕಾವ್ಯ ಸಂಗಾತಿ ತಾತಪ್ಪ.ಕೆ.ಉತ್ತಂಗಿ “ಬಟ್ಟಕಂಗಳ ನಿರೋಷೆ” ಅವಳು ಅವನಿಯೊಳಗಿನಅಪರೂಪದ ಅನುರೂಪೆ,ನುಡಿಗಂಪಿನ ಇಳೆತಂಪಿನಎಳೆಗಣ್ಣಿನ ಕೆಂಬಣ್ಣದ ಆಲಾಪೆ. ತನ್ನೋಟದಲಿ ನುಂಗುವಳುಅನಂತಲೋಕದ ಇಳೆಯನು,ವಾವ್ ವಾರೇ ನೋಟದ ಹುಡುಗಿನಾಚುವಳು ಕಣ್ಣಂಚಿನಲ್ಲಿ,ಲಾಸ್ಯಬಿಂಬದ ಬೆಡಗಿಕಣ್ಣು ಚುಮುಕಿಸುವ ಹುಡುಗಿಬಳಕುವಳು ತುಟಿಯಂಚಿನಲಿ. ಅವಳ ಕಣ್ಣಂಗಳದ  ಕಾಂತಿಯಹೊಳಪು,ಸಾವಿರದ ಸಹಸ್ರ ನೆನಪುಗಳ ಬುತ್ತಿ .ಗಾಢ ಪ್ರೇಮದ,ಕಡುದುಃಖಯಾನದ ಅನುರುಕ್ತಿ,ಸುಮಧುರ ಸಮ್ಮೋಹನದಸಾತ್ವಿಕ ಸರಸದ ಕಾಂತಿಯುಕ್ತಿ. ಕಣ್ಣೋಟದ ಬೆಸುಗೆಯಲಿನಂಬಿಗೆ ಧೈರ್ಯದ ವಿಶ್ವಾಸ,ಅವಳೆದುರಿನ  ಕಪಟತನದ  ಮನಕ್ಕೆನಿಂತು ಕುಂತು ಆಯಾಸದಿ ಭೋರ್ಗರೆಯುವಉಸಿರೋಟದ ಶ್ವಾಸ.ದ್ವಂದ್ವ ವಿಚಲಿತ ವಿರಹದವಿರಸದ  ನಯನನೋಟದಿಂದಮುಷ್ಕರದ ಅವಿಶ್ವಾಸ . ಚಂದ್ರಮುಖಿ ನೀಲಸಖಿಯಕಂಗಳಲಿ, ಒಮ್ಮೊಮ್ಮೆಸದ್ದಿಲ್ಲದೆ ಸುಡುವ ಅಗ್ನಿಜ್ವಾಲೆ,ಮತ್ತೊಮ್ಮೆ ಮಗದೊಮ್ಮೆಸಾಮರಸ್ಯದ ಸಂಪ್ರೀತಿಯಶಾಂತತನ್ಮಯದ ಪ್ರೇಮಲೀಲೆ. ಕಣ್ಣಲ್ಲೇ, ಕ್ರಾಂತಿಯಿಂದ  ಕಣ್ ಬಾಣದಿಂದ ಕೊಲ್ಲುವವಳುಕಂಗಳಲ್ಲೇ ಕಳಿತು ಮಿಳಿತು  ಕಾಡದೇ ಕುಂತವಳುನಯನಗಳಲ್ಲೇ ನಾಚಿನೀರಾಗಿ ನಿಂತವಳುಅಕ್ಷಿಗಳಲ್ಲೇ ಸಾಕ್ಷಿಯಾಗಿಸೋಲು ಗೆಲುವಿನದರ್ಶನಿಯಾದವಳುನೇತ್ರದಲ್ಲೇ ತಣಿದು ಮಣಿದು ಮಧುರಯಾತ್ರೆ ಹೊಂಟವಳು. ಬಟ್ಟಕಂಗಳ ಚೆಲುವೆಯಪ್ರೇಮಕಂಗಳ ಭಾಷೆ,ಹುಬ್ಬಕೆಳಗಿನ ಕಪ್ಪಂಗಳದಪಸರಿಕೆಯ ಪಕ್ವ ಪರಿಭಾಷೆ.ಭಾವಗಳು ಎದೆಯುಕ್ಕಿದಾಗ ಮಾತಿಲ್ಲದ ,ಸದ್ದಿಲ್ಲದ,ಮೌನದ  ಕಣ್ಸನ್ನೆಯ ಪರೀಷೆ.ಕತ್ತಲಲ್ಲಿಯೂ ಮಿನುಗಿಹೃದಯದಲಿ ಗುನುಗುವಹೊಳೆವ ಅಕ್ಷಿಗಳ ನಿರೋಷೆ. ತಾತಪ್ಪ.ಕೆ.ಉತ್ತಂಗಿ

ತಾತಪ್ಪ.ಕೆ.ಉತ್ತಂಗಿ ಕವಿತೆ “ಬಟ್ಟಕಂಗಳ ನಿರೋಷೆ” Read Post »

ಕಾವ್ಯಯಾನ

ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಅವರ ಕವಿತೆ ” ಹೊಸತೇನಿದೆ?”

ಕಾವ್ಯ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ” ಹೊಸತೇನಿದೆ?” ಹೊಸತೇನಿದೆಏನಿದೆ ಹೊಸತು ಈಮುಂಜಾವಿನಲ್ಲಿಅದೇ ಹಳೆಯಬಗೆಹರಿಯದ ನೂರುಕಂಟಕ ಆತಂಕಗಳುರಾತ್ರಿ ಕಚ್ಚಿದ ಕಹಿ ಸುದ್ದಿನಿನ್ನೆಯನೇ ಮತ್ತೆ ಮತ್ತೆಬಿಚ್ಚಿಡುವ ಆ ನಾಳೆಯಲ್ಲಿ…?ಹೊಸತೇನಿದೆ ಹೊಸತೇನಿದೆಮುಂದುವರೆದ ಈ ನಿನ್ನೆಯಲ್ಲಿ?ಯುದ್ಧ ಸಾವು ನೋವುಬಡತನ ಹಸಿವಿಗೆತತ್ತರಿಸಿದವರ ನಡುವೆಕುಡಿದು ತೂರಾಡುವವರ ಸಂಭ್ರಮ ಹೊಸತೇನಿದೆ ?ಬುದ್ಧ ಬಸವರ ಬೇಸಾಯವೇಮರೆತು ನಿತ್ಯ ಕೊಲೆ ಸುಲಿಗೆಯಲಿಸತ್ಯ ಹುಡುಕುವ ನಾಟಕಮತದಾನ ಮಾಡಲು ಜನರುಹೊರಗೆ ಟಿವಿ ಪತ್ರಿಕೆನೆಲದ ಭವಿಷ್ಯ ಬರೆಯುತ್ತಿವೆ ಹೊಸತೇನಿದೆ?ಶಾಂತಿ ಸಮತೆ ಸಮಾಧಿಯಾಗಿದಮನಗಳು ಹಿಂಸೆಯೇ ಧರ್ಮವಾಗಿರುವಾಗಕರುಳ ಪ್ರೀತಿಯ ಕೊಯ್ದುಎಳೆ ಹಸುಗಳ ಮಾರಣ ಹೋಮಇನ್ನೂ ನಿಂತಿಲ್ಲ ಹೊಸತೇನಿದೆ ?ಅದೇ ಜಾತಿ ಮತ ಧರ್ಮಗಳದ್ವೇಷ ಬೀಜ ಬಿತ್ತನೆನಿರುದ್ಯೋಗಿಗಳು ರೀಲ್ಮಾಡುತ್ತಿದ್ದಾರೆಭಜಿ ಮಾರುತ್ತಿದ್ದಾರೆ ಸೂರ್ಯನ ದಿನಚರಿಯೇಇರುಳ ಉಸ್ತುವಾರಿಯಲ್ಲಿರುವಾಗ..ಮುಂಜಾನೆಯ ಮುಂಗೋಳಿಗಳುಹೊರಡಿಸುತ್ತವೆ ಫರ್ಮಾನುಅವರ ಹೇಳಿಕೆಯಂತೆ ಬದುಕ ಬೇಕು ಹೊಸತೇನಿದೆ?ಮುಂದುವರೆದ ಆ ನಿನ್ನೆಯಲ್ಲಿ…?ವಿಶ್ವ ನಾಯಕನಾಗುವ ಬಯಕೆಸತ್ತ ಹೆಣಗಳ ಗೋರಿಯ ಮೇಲೆಸಾಮ್ರಾಟನ ಸಮೃದ್ಧಿ ಅಟ್ಟಹಾಸ ಹೊಸತೇನಿದೆ?ಕರಾಳ ಮುಖ ಸವರಿಕದ್ದು ಮುಚ್ಚಿಡುವಕನ್ನಡಿಗಳು ಇರುವತನಕನಂಜಿನ ಕೀವು ನೆತ್ತಿಗೇರಿಕಣ್ಣು ಮಂಜಾಗಿರುವ ತನಕ..ವಿಶ್ವಾಸ ಮೂಡಿಸದಸಾಹಿತ್ಯವಿರುವ ತನಕಸುತ್ತುತ್ತಲೇ ಇರುವಗಂಡು ಜೋಗುತಿಯರ ಮೆರವಣಿಗೆಚಕ್ರವ್ಯೂಹ ಬೇಧಿಸದ ತನಕ..ಏನಿದೆ ಹೊಸತು? ಹೊಸತೇನಿದೆ?ನಾಳೆಯಾಗದ ಈ ನಿನ್ನೆಯಲ್ಲಿ ?ಮಂದಿರ ಮಸೀದಿ ಚರ್ಚಬಸದಿ ವಿಹಾರಗಳು ಬೆಪ್ಪನೆ ಮಲಗಿವೆಕಾವಿ ಬುರ್ಖಾಗಳ ಕಾದಾಟಹಲಾಲ್ ಬಾಡೂಟಹತ್ತಿ ಉರಿಯುತ್ತಿದೆ ದೇಶ ಹೊಸತೇನಿದೆ ?ಮತ್ತೆ ಹೊರಗೆ ಸಜ್ಜಾಗಿವೆಮೊಹಲ್ಲಾಗಳ ಮುಂದೆಭುಸುಗುಟ್ಟುತ್ತಿರುವಬುಲ್ದೊಜರ್ ಭೀತಿಯಮತ್ತೊಂದು ಕ್ರೂರ ದಿನದಲ್ಲಿ .. ಹೊಸತೇನಿದೆ?ಕೇರಿಯಲೆಂದೂ ಕಾಲಿಡದಗ್ರಹಣ ಸೂರ್ಯನ ನಡಿಗೆಯಲ್ಲಿ..ಭಾನುವಾರಗಳೇ ಇರದತಾಯಂದಿರರ ಕ್ಯಾಲೆಂಡಿರಿನಲ್ಲಿ … ಹೊಸತೇನಿದೆ?ಮುಂದುವರೆದನಿನ್ನೆಯ ಆ ಹಳೆಯ ಕಥೆಯಲ್ಲಿ ?ಮನೆ ಚಾವಡಿಯಲ್ಲಿ ಮಾತುಒಳಗೆ ಒಲೆಗೆ ತೂತುನಡುಮನೆಯಲ್ಲಿಮನು ಸಂತಾನಸೈತಾನನ ಹಿರಿತನದಲಿಮಂತ್ರ ಪೂಜೆ ಘೋಷಣೆ ಹೊಸತೇನಿದೆ ?ಈ ಬೆಳಗಲ್ಲಿ ಮತ್ತೆಅದೇ ಹಳೆಯ ಪುಸ್ತಕದಹೊಸ ಭರವಸೆ ಹಳಸಲುಕನಸು ಕುಣಿಯುತಿವೆಮತ್ತೊಂದು ಅಧ್ಯಾಯದಲಿ.ಮಂಕಾಗಿವೆ ವಚನ ಹೊಸತೇನಿದೆ ಇಂದು ಮತ್ತೆ?ಇರುಳ ಮರುಳಿಲ್ಲದ ಹೊಸಬೆಳಕು ಬೇಕೀಗ ನಮ್ಮ ನಡುವೆಕರಾಳ ಕತ್ತಲ ಜೊತೆಒಳಒಪ್ಪಂದವಲ್ಲದರ್ಪಿಗೆ ಬೆದರಿ ಮುದುರಿಕುಳಿತುಕೊಳ್ಳುವುದಲ್ಲ. ಹೊಸತೇನಿದೆ?ಹತ್ತಿಕ್ಕುವ ತುಳಿಯುವದಮನಗಳ ಯುಗಯುಗಾಂತವಾಗಬೇಕೀಗವೇಷ ಮರೆಸಿದ ವರ್ಷಾಂತವಲ್ಲರಾತ್ರಿ ಕಂಠ ಪೂರ್ತಿ ಕುಡಿದುತೂರಾಡುವದಲ್ಲ ಹೊಸ ಸೂರ್ಯನ ಸಂಕ್ರಮಣಕ್ಕೆಸಿದ್ಧಾವಾಗ ಬೇಕುಸಮತೆ ಮಮತೆಗಳ ಹಣತೆಹಚ್ಚ ಬೇಕುತ್ಯಾಗ ಬಲಿದಾನಗಳ ತೈಲ ಸುರಿದುಬೆಳಗ ಬೇಕು ಭಾರತ ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಅವರ ಕವಿತೆ ” ಹೊಸತೇನಿದೆ?” Read Post »

ಕಾವ್ಯಯಾನ

ಪ್ರಶಾಂತ್‌ ಬೆಳತೂರು ಕವಿತೆ,”ಪ್ರೇಮ ಪ್ರಕರಣದ ತಪ್ಪಿತಸ್ಥರು..!”

ಕಾವ್ಯ ಸಂಗಾತಿ ಪ್ರಶಾಂತ್‌ ಬೆಳತೂರು “ಪ್ರೇಮ ಪ್ರಕರಣದ ತಪ್ಪಿತಸ್ಥರು..!” ಪ್ರೇಮದಲ್ಲಿನಾನು ತಪ್ಪು ಮಾಡಿದ್ದು ನಿಜಆದರೆನೀನು ನನ್ನನ್ನು ತಿದ್ದಬಹುದಿತ್ತು..!ಹಾಗೂಆ ಎಲ್ಲಾ ಅಧಿಕಾರವೂನಿನ್ನ ಬಳಿಯೇ ಇದ್ದವು..! ನೀನೋ ತಿದ್ದುವ ಭರದಲ್ಲಿಸ್ವತಃ ತಪ್ಪು ಮಾಡಿಬಿಟ್ಟೆಈಗ ನೀನು ಕೂಡ ನನ್ನಷ್ಟೇತಪ್ಪಿತಸ್ಥಳು..! ಪ್ರೇಮದ ಕೋರ್ಟಿನಲ್ಲಿಆತ್ಮಸಾಕ್ಷಿಯನ್ನು ಮುಂದಿರಿಸಿಕೊಂಡುಖಾಲಿ ಮಾತುಗಳ ವಕೀಲಿಕೆಯನ್ನುನಿನ್ನ ವಿರುದ್ಧ ನಡೆಸಲಾರೆಆಗಾಗಿನನ್ನ ತಪ್ಪುಗಳನ್ನು ಒಪ್ಪಿಕೊಂಡುಪ್ರಾಯಶ್ಚಿತ್ತವೆಂಬಂತೆಪ್ರೇಮದ ಸೆರಮನೆಯೊಳಗೆನಗುತ್ತಲೇಜೀವಾವಧಿ ಶಿಕ್ಷೆಗೆ ಒಳಗಾಗಿದ್ದೇನೆ..! ನೀನೋಮತ್ತೊಬ್ಬರ ಜಾಮೀನಿನಡಿಯಲ್ಲಿಹಳೆಯ ಪ್ರೇಮ ಪ್ರಕರಣವೊಂದರಆರೋಪಗಳೆಲ್ಲಾವನ್ನುತಳ್ಳಿ ಹಾಕುತ್ತಾನಿರಪರಾಧಿಯ ಸೋಗಿನಲ್ಲಿಬಿಡುಗಡೆಗೊಂಡಶಹರವೊಂದರ ಹಳೆಯ ಖೈದಿಯಂತೆಎಲ್ಲೆಲ್ಲೋ ಓಡಾಡುತ್ತಿರುವೆ..! ವಾಸ್ತವವೇನೆಂದರೆಪ್ರೇಮದ ಅಸಲಿಯತ್ತಿನಲ್ಲಿದಾವೆ ಹೂಡಲುಮೇಲ್ಮನವಿಯನ್ನು ಸಲ್ಲಿಸಲುಯಾವ ಕೋರ್ಟುಗಳೂ ಇಲ್ಲಒಮ್ಮೆ ತಪ್ಪು ಮಾಡಿದರೆ ಮುಗಿಯಿತುಸಾಯಬೇಕು ಅಥವಾಸಾಯುವ ತನಕ ಅದೇ ನೆನಪುಗಳನ್ನುಎದೆಯಲ್ಲಿಟ್ಟುಕೊಂಡು ನರಳಬೇಕು..! ಏಕೆಂದರೆಈ ಹಾಳು ಪ್ರೇಮ ಗ್ರಂಥಗಳಲ್ಲಿಯಾವ ಪ್ರಕರಣಗಳಿಗೂಆತ್ಮಸಾಕ್ಷಿಗಳ ಹೊರತಾಗಿಯಾವ ಕಾಯ್ದೆಗಳಾಗಲೀಕಲಮ್ಮುಗಳನ್ನಾಗಲೀಯಾರೊಬ್ಬರೂ ಕೂಡ ಇಲ್ಲಿಯವರೆಗೆ ಬರೆಯಲಾಗಿಲ್ಲವೆಂಬುದೆಇಲ್ಲಿನ ಒಂದು ಸೋಜಿಗ..! ಪ್ರಶಾಂತ್ ಬೆಳತೂರು

ಪ್ರಶಾಂತ್‌ ಬೆಳತೂರು ಕವಿತೆ,”ಪ್ರೇಮ ಪ್ರಕರಣದ ತಪ್ಪಿತಸ್ಥರು..!” Read Post »

ಕಾವ್ಯಯಾನ

ವಿಜಯಲಕ್ಷ್ಮಿ ಕೆ ಹಂಗರಗಿ ಕವಿತೆ “ನಿತ್ಯನೂತನ”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಕೆ ಹಂಗರಗಿ “ನಿತ್ಯನೂತನ” ನಿದ್ದೆಗೊಮ್ಮೆ ನಿತ್ಯ ಮರಣಎದ್ದ ಸಲ ನವೀನ ಜನನ”ದರಾ ಬೇಂದ್ರೆಯವರಅದ್ಭುತ ಕವನಗಳ ಸಾಲುನೆನೆಯುತ್ತ ಅಡಿ ಇಡೋಣಆಗಲಿ  ನಿತ್ಯ ನೂತನ… ದಿನ ತಿಂಗಳು ವರ್ಷಗಳುಮತ್ತೆ ಮತ್ತೆ ಮರಳಲಿಪರಿವರ್ತನೆ ಜಗದ ನಿಯಮಹೊಸ ಮೆಟ್ಟಿಲು, ಹೊಸ ಸಂಕಲ್ಪ ನಮ್ಮದಾಗಲಿ ನವ ನವೀನಹೊಸ ಬದುಕು ನಿತ್ಯ ನೂತನ… ಸಮಸ್ಟಿ ಇರಲಿ ಚಿಂತನಸಮನ್ವತೆ ಇರಲಿ ಮಂಥನಪ್ರಶಾಂತತೆ ಕಾಪಾಡಿ ಪ್ರಮಾಣಿಕಸಬ್ಯತೆ ಸೌಜನ್ಯತೆ ಕೂಡಿರಲಿಅರಿವಿನ ಪ್ರಯತ್ನ ಮಾಡಿರಿದಿನವೂ ಸಾಗಲಿ ನಿತ್ಯ ನೂತನ… ಪ್ರಕೃತಿಯ ಮಡಿಲಿನ ಪ್ರೀತಿದಿನವು ನಿತ್ಯ ನೂತನವಾಗಲಿಸೃಷ್ಟಿಯ ಚೈತ್ರ ಆರಂಭಇಬ್ಬನಿಯ ಜೊತೆಗೂಡಿಪ್ರತಿಫಲನ ನೀಡಿ ನೇಸರಬೆಟ್ಟದ ಮಧ್ಯೆ ಇರುವ ರವಿ ಬೆಳಗಲಿ… ಹೊಂಬಣ್ಣದ ನೇಸರ ಜಗಕೆಲ್ಲಸ್ವಾಗತ ಹೊಸ ಉತ್ಸಾಹ  ಹೊಸ ಚಿಲುಮೆಂತಿರಲಿಅದ್ಭುತ ಪ್ರಪಂಚ ಜ್ಞಾನ ದೀವಿಗೆಸಮಾನತೆ ಸಹಕಾರ ಇರಲಿಹೊಸ ವರುಷದ ಸಂಭ್ರಮ ನಿತ್ಯ ನೂತನವಾಗಲಿ…  ವಿಜಯಲಕ್ಷ್ಮಿ ಕೆ ಹಂಗರಗಿ

ವಿಜಯಲಕ್ಷ್ಮಿ ಕೆ ಹಂಗರಗಿ ಕವಿತೆ “ನಿತ್ಯನೂತನ” Read Post »

ಕಾವ್ಯಯಾನ

ಪರವಿನ ಬಾನು ಯಲಿಗಾರ “ಹೊಸ ವರ್ಷ”

ಕಾವ್ಯ ಸಂಗಾತಿ ಪರವಿನ ಬಾನು ಯಲಿಗಾರ “ಹೊಸ ವರ್ಷ” ಮದಿರೆಯ ಮತ್ತಿನಲ್ಲಿ ತೇಲುವವರು ,ಮಂಗಾಟದ ಮಂಪರಿನಲ್ಲೆ ಇರುಳಕಳೆಯುವವರು ,ಹಾದಿ ಬೀದಿಯಲಿ ಬಿದ್ದು ಹೊರಳಾಡುವವರು ,ಮೈ ಮನದ ಮಲೀನತೆಯಲಿಮುಳುಗಿದವರು ,ಸಂಭ್ರಮಿಸುವ ಹೊಸ ವರ್ಷ… ಹೊತ್ತಿನ ತುತ್ತಿಗೆ ಹಾತೊರೆಯುವವರು ,ಹಲುಬುವ ಹಸುಳೆಗೆ ಹಾಲುಣಿಸಲುಹೆಣಗುವವರು ,ಹೊತ್ತಿ ಉರಿಯುವ ಬಿಸಿಲಲಿಬೇಯುವವರು ,ಕೋರೆವ ಚಳಿಯಲಿ ಚಡಪಡಿಸುವವರು ,ಮೈ ಮಾನ ಮುಚ್ಚಲು ಏಗುವವರು ,ಬೇಸರಿಸಿದರೆ ಬೇಯದಿರುವ ಕೂಳುಎಂದು ನಿಟ್ಟುಸಿರು ಬಿಡುವವರು , ಎಷ್ಟು ಹೊಸ ವರ್ಷ ಬಂದರೆನು , ಹೋದರೆನುಇಂತಹ ಶಾಪಗ್ರಸ್ತರಿಗೆ ಎಂದು ಬರುವುದು ಹೊಸ ವರ್ಷ ?ಇವರೆಂದು ಕಾಣುವುದು ಹೊಸ ಕನಸ ?ಪರವಿನ ಬಾನು ಯಲಿಗಾರ

ಪರವಿನ ಬಾನು ಯಲಿಗಾರ “ಹೊಸ ವರ್ಷ” Read Post »

ಕಾವ್ಯಯಾನ

ಶಾಲಿನಿ ರುದ್ರಮುನಿ ಹುಬ್ಬಳ್ಳಿ ಅವರ ಕವಿತೆ,”ಜನವರಿ ಒಂದರ ಬೆಳಿಗ್ಗೆ”

ಕಾವ್ಯ ಸಂಗಾತಿ ಶಾಲಿನಿ ರುದ್ರಮುನಿ ಹುಬ್ಬಳ್ಳಿ “ಜನವರಿ ಒಂದರ ಬೆಳಿಗ್ಗೆ” ಜನವರಿ ಒಂದರ ಬೆಳಗ್ಗೆಕನ್ನಡಿಯೇ ಮೊದಲು ಪ್ರಶ್ನಿಸಿತು“ಈ ವರ್ಷ ಏನು ಬದಲಾವಣೆ?”ನಾನು ಉತ್ತರಿಸಿದೆ,“ಮೊದಲು ನಗು, ಉಳಿದದ್ದು ನೋಡೋಣ ಬಿಡು!” ಕ್ಯಾಲೆಂಡರ್ ಹೊಸದು,ಪೆನ್ನು ಹಳೆಯದು,ಸಂಕಲ್ಪಗಳು ಮಾತ್ರಪ್ರತಿವರ್ಷದಂತೆಫ್ರೆಶ್ ಪ್ಯಾಕೆಟ್! ನಿನ್ನೆ ತನಕಸೋಮಾರಿತನಕ್ಕೆ ಬೈದವರುಇಂದು ಅದನ್ನೇ ಹೇಳ್ತಾರೆ,“ರಿಲ್ಯಾಕ್ಸ್, ವರ್ಷ ಇನ್ನೂ ಚಿಕ್ಕದುಈಗಷ್ಟೇ ಹುಟ್ಟಿದೆ!” ಧ್ಯಾನ, ಯೋಗ, ಆರೋಗ್ಯಎಲ್ಲವೂ ಲಿಸ್ಟ್‌ನಲ್ಲಿ ಇದೆ,ಆದ್ರೆ ಈಗ ಕೈಲಿರುವಒಂದು ಚಹಾನೇ,ಜೀವನದ ತತ್ವ ಅನ್ಸತಿದೆ , ಜೀವನ ಅಂದ್ರೆಎಲ್ಲವನ್ನೂ ಸರಿಪಡಿಸೋ ಪ್ರಯತ್ನವಲ್ಲ,ಸ್ವಲ್ಪ ತಪ್ಪು, ಸ್ವಲ್ಪ ತತ್ವ,ಮಧ್ಯೆ ಮಧ್ಯೆ ಜೋರಾದ ನಗು ಅಷ್ಟೇಕ್ಷಣದ ಬದುಕ ಅನುಭವಿಸಲು, ಜನವರಿ ಒಂದೆಂದರೆಪರಿಪೂರ್ಣ ಆರಂಭವಲ್ಲ,ಅಪೂರ್ಣ ಬದುಕಿನೊಂದಿಗೆಸ್ನೇಹ ಮಾಡಿಕೊಂಡ ದಿನ, ಈ ಹೊಸ ಕ್ಯಾಲೆಂಡರ್ ವರ್ಷದಲ್ಲಿಖುಷಿ ಜಾಸ್ತಿ ಸಂಭ್ರಮಿಸೋಣಗಂಬೀರವಾಗಿರೋದನ್ನ ಕಡಿಮೆ ಮಾಡಿ,ಬದುಕುಸ್ವಲ್ಪ ಇನ್ನೂ ಚೆಂದವಾಗಿಸೋಣ…, ಶಾಲಿನಿ ರುದ್ರಮುನಿ ಹುಬ್ಬಳ್ಳಿ

ಶಾಲಿನಿ ರುದ್ರಮುನಿ ಹುಬ್ಬಳ್ಳಿ ಅವರ ಕವಿತೆ,”ಜನವರಿ ಒಂದರ ಬೆಳಿಗ್ಗೆ” Read Post »

ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ ಕವಿತೆ, ಮೇಷ್ಟ್ರು

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಮೇಷ್ಟ್ರು ನಿಮ್ಮಂತ ಮೇಷ್ಟ್ರು ನಂಗೆ ಸಿಕ್ಕರೆಕನ್ನಡ ಕಲಿಯಲು ನನಗೆ ಬಲು ಅಕ್ಕರೆನಮ್ಮ ಕನ್ನಡವೆಂದರೆ ಸಿಹಿ ಸಕ್ಕರೆಅ ಆ ಅಕ್ಷರಗಳೆಂದರೆ ಅರಳಿದ ತಾವರೆ// ನೀವಂದ್ರೆ ತಾಯ್ನುಡಿ ಭಾಷೆಯಲ್ಲೆ ಬರೆತಾಯ್ನುಡಿ ಸಿರಿಯಲ್ಲೇ ಮೈಮರೆಸಿರಿಗನ್ನಡ ನುಡಿ ಸವಿಗನ್ನಡ ನುಡಿಎನ್ನುತಾ ಎಲ್ಲರ ಕೈಮಾಡಿ ಕರೆವೆ// ನೀವು ಪಾಟೀ ಬಳಪ ಹಿಡಿ ಎಂದರೆಕುಣಿ ಕುಣಿದು ಬರೆವೆ ಇಲ್ಲಾ ತೊಂದರೆಸಹ್ಯಾದ್ರಿ ಬೆಟ್ಟ ಕೊಡಚಾದ್ರಿ ಕಣಿವೆಮೈಸೂರು ಚಾಮುಂಡಿ ಬೆಟ್ಟ ಸುತ್ತಿ ಬರುವೆ// ನಗುನಗುತ ಓದು ಅಂತಾ ಹೇಳಿದರೆಚಟ ಪಟ ಎಣಿಸಿ ಹೇಳುವೆ ಚುಕ್ಕಿ ತಾರೆಕಾವೇರಿ ನದಿ ಜೋಗದ ಝರಿಯ ಸಿರಿಎಲ್ಲಾ ಬಣ್ಣಿಸಿ ಹೊಗಳಿ ಹೊಗಳಿ ಹಾಡುವೆ// ಪದ್ಯಪಾಠ ಬಾಯಿಪಾಠ ಮಗ್ಗಿ ಹೇಳಿದರೆಜಿಗಿಜಿಗಿದು ಹೇಳುವೆ ನೀವು ಮುಂದಿದ್ದರೆಶಿಲ್ಪಕಲೆ ಸಂತಸದ ಹೊನ್ನ ಮಣ್ಣ ಮೇಲೆಹಾಯಾಗಿ ನಿದಿರಿಸಿ ಕನಸಲ್ಲೂ ಕನ್ನಡ ಕಾಣುವೆ// ಡಾ ಅನ್ನಪೂರ್ಣ ಹಿರೇಮಠ 

ಡಾ ಅನ್ನಪೂರ್ಣ ಹಿರೇಮಠ ಕವಿತೆ, ಮೇಷ್ಟ್ರು Read Post »

ಕಾವ್ಯಯಾನ

“ಹೊಸ ವರುಷ ತರಲಿ ಹರುಷ” ಎಮ್ಮಾರ್ಕೆ

ಕಾವ್ಯ ಸಂಗಾತಿ “ಹೊಸ ವರುಷ ತರಲಿ ಹರುಷ” ಎಮ್ಮಾರ್ಕೆ ಹೊಸ ವರುಷ ತರಲಿ ಹರುಷಎಂದೆಂದೂ ನಿಮ್ಮ ಬಾಳಿನಲಿಎಲ್ಲೇ ಇರಲಿ ಹೇಗೆ ಇರಲಿಬಾಳು ಬಂಗಾರವಾಗಿರಲಿ ಒಂದಾಗಿ ಎಲ್ಲರೂ ಬೆರೆತುನಮ್ಮೆಲ್ಲ ನೋವನು ಮರೆತುಸಿಹಿಯಾದ ಮಾತನು ಆಡಿಎಲ್ಲರ ಜೊತೆ ಒಡಗೂಡಿಹಾಡಿ ಕುಣಿಯುತಮೈ ಮರೆಯುತಈ ಬಾಳ ಸವಿಯೋಣ… ಕಳೆದಾಯ್ತು ಎಲ್ಲ ಇರುಳುಹಿಡಿದಾಯ್ತು ನೂರು ಬೆರಳುಮರೆತಾಯ್ತು ಎಲ್ಲ ನೋವುನಾವಿಂದು ಅರಳಿದ ಹೂವುಘಮ ಸೂಸುತಹೂ ಹಾಸುತಸ್ವಾಗತ ಕೋರುವೆನು.. ಹಳೆಬೇರ ಜೊತೆ ಹೊಸಚಿಗುರುಬೆರೆತಾಗಲೇ ಬಾಳು ಹಸಿರುನಿನ್ನೆಯ ಕ್ಷಣಗಳ ನೆನೆದುನಾಳೆಗೆ ಮನವನು ತೆರೆದುಇಂದು ಹಾಡುತಕುಣಿದಾಡುತಮೈ ಮರೆಯುವೆನು…. ಮಹಾಂತೇಶ ಆರ್ ಕುಂಬಾರ (ಎಮ್ಮಾರ್ಕೆ)

“ಹೊಸ ವರುಷ ತರಲಿ ಹರುಷ” ಎಮ್ಮಾರ್ಕೆ Read Post »

ಕಾವ್ಯಯಾನ

ಇಮಾಮ್ ಮದ್ಗಾರ ಅವರ ಕವಿತೆ,ಹೊಸತೇನಿಲ್ಲ

ಕಾವ್ಯ ಸಂಗಾತಿ ಇಮಾಮ್ ಮದ್ಗಾರ ಹೊಸತೇನಿಲ್ಲ ಸಾವಿರಾರು ಪಟಾಕಿಗಳ ಘರ್ಜನೆಯಲಿ ಪರಿಸರದಪರಿಗಮನವೂ ಇಲ್ಲದೇ..ನೂರಾರು ಜೀವಿಗಳ (ಮಾಂಸ)ತಿಂದು ತೇಗುತ್ತಾ..ನಶೆಯಲ್ಲಿ ನಿರ್ಗಮಿಸುತ್ತಾನಶೆಯಲ್ಲಿಯೇ ಆಗಮಿಸುವಹೊಸ ವರುಷವೇ ನಿನಗೆ ಸ್ವಾಗತ ಹೊಸತನದ ಆಶೆಯಷ್ಟೇ ಹನ್ನೆರಡು ತಿಂಗಳ ತುಂಬು ಗರ್ಭದಲಿ ಮತ್ತೊಂದು ಜನನಜನನ ೨೦೨೬ ಹೊಸತೇನಿಲ್ಲ !ಮತ್ತೇರಿದ ಮಸ್ತಕದಲ್ಲಿಹೊಸತನದ ಆಶೆಯಹೊತ್ತುಹಳೆಯ ನೋವುಗಳ ಹೊಸಕಿಹಾಕುತ್ತಾ ಬರುವ ಹೊಸವರುಷವೇ ನಿನಗೆ ಸ್ವಾಗತ ಹೊಸತನದ ಬಯಕೆ ಅಷ್ಟೇ ಕಳೆದ ಸಾಲಿನ ಸಂಕಟಸಡಗರವಾಗಿ ಬದಲಾಗಿ ಹೋದವರುಷದ ಸಂಭ್ರಮ ಸವೆಯದೇ ಗಟ್ಟಿಯಾಗಿರಿಸುತ್ತಾ ಬಂದುಬಿಡು ಹೊಸತನವೇ ನಿನಗೆ ಸ್ವಾಗತ ಹೊಸತನದ ಕನಸಷ್ಟೇ ಗತಕಾಲದ ನೆನಪುಗಳುನಶಿಸಿ ನೋವುಗಳ ನಶೆಯ ಅಳಿಸಿ ಕಂಡ ಕನಸುಗಳ ನನಸಾಗಿಸಲು ಬರುತ್ತಿರುವನವ ನವೀನ ವರುಷವೇ ನಿನಗೆ ಸ್ವಾಗತ ಹೊಸತೇನಿಲ್ಲ !ಹೊಸತನದ ಆಶೆಯಷ್ಟೇ… ಹಳೆಬೇರು ಹೊಸಚಿಗುರುಹೂವಾಗಿ ಕಾಯಿ ಫಲಿಸಿಹಣ್ಣಾಗಲಿದೆಂಬ ಭರವಸೆಯಷ್ಟೇ… ಹರುಷದ ಹೊನಲು ಹರಿಸಿಬಾಂಧವ್ಯ ಗಳ ಬೆಸೆಯುತ್ತಾಜಾತಿ ವಿಜಾತಿಗಳ ಹೊಲಸುತೊಳೆಯುತ್ತಾ ಎಲ್ಲರೊಂದೇಎಂಬ ಭಾವ ಪಸರಿಸುತ್ತಾಬಂದುಬಿಡು ಹೊಸವರುಷವೇನಿನಗೆ ಸ್ವಾಗತ ಆಯುಷ್ಯದಲ್ಲಿ ಮತ್ತೊಂದುವರುಷ ಕಡಿತವಾಗಿದೆ ಮತ್ತೇನಿಲ್ಲ ಹೊಸತೇನಿಲ್ಲಹೊಸತನದ ಆಶೆಯಷ್ಟೇ… ಇಮಾಮ್ ಮದ್ಗಾರ

ಇಮಾಮ್ ಮದ್ಗಾರ ಅವರ ಕವಿತೆ,ಹೊಸತೇನಿಲ್ಲ Read Post »

ಕಾವ್ಯಯಾನ

ಎ.ಹೇಮಗಂಗಾ ಅವರ ತನಗಗಳು

ಕಾವ್ಯ ಸಂಗಾತಿ ಎ.ಹೇಮಗಂಗಾ ತನಗಗಳು ಚಿಕ್ಕದೊಂದು ರಂಧ್ರವೂಬಲಶಾಲಿಯೇ ಹೌದುತೇಲುವ ಹಡಗನ್ನುಮುಳುಗಿಸುವುದದು ಸಾಗರದ ಮೇಲಿದೆಪುಟ್ಟ ಹಿಮ ಪರ್ವತಆಳದಲ್ಲಿದೆ ಇನ್ನೂಕಾಣಲಾಗದು ಕಣ್ಣು ಭೂಮಂಡಲ ಅಗಾಧನಶ್ವರ ಜೀವಿ ನಾನುಒಯ್ಯಲಾರೆ ಏನನ್ನೂಸಾವಪ್ಪಲು ನನ್ನನ್ನು ಪ್ರಾರ್ಥಿಸು ದೇವರಲಿಆಸೆ ಫಲಿಸಲೆಂದುಶ್ರಮದಿ ಸಾಧಿಸಲುಆತ್ಮ ಶಕ್ತಿ ನೀಡೆಂದು ಮನುಜ ಬುದ್ಧಿಜೀವಿಕಟ್ಟುತ್ತಾನೆ ಈಗಲೂಹಿಮದ ದಿಮ್ಮಿ ಮನೆಹೆಸರಾಗಿದೆ ‘ ಇಗ್ಲೂ ‘ ಹಕ್ಕಿಯಂತೆ ಹಾರಿವೆಪುಕಾರುಗಳು ಇಂದುರೆಕ್ಕೆ ಪುಕ್ಕ ಪಡೆದುಬಾಯಿಯಿಂದ ಬಾಯಿಗೆ ಚುಮು ಚುಮು ಚಳಿಗೆಕಂಬಳಿ ಹೊದ್ದ ಮಂದಿಆಗಿದ್ದಾರೆ ಮುಂಜಾನೆಮನೆಯೊಳಗೇ ಬಂದಿ ಚಳಿಗಾಲದ ಚಳಿಬೇಸಿಗೆಯಲ್ಲಿ ಬಿಸಿಎರಡು ಹೆಚ್ಚಾದರೂಜನಕ್ಕೆ ತಲೆ ಬಿಸಿ ಬೆಳೆಯಬೇಕು ನೀನುಯಾರೆಷ್ಟೇ ತುಳಿದರೂಗರಿಕೆ ಹುಲ್ಲಿನಂತೆಛಲವ ಬಿಡದಂತೆ ದಣಿವನ್ನು ತೋರದೇದುಡಿಯುವಳು ತಾಯಿನಗುತ್ತಲೇ ಹೊಣೆಯಪೂರೈಸುವಳು ಮಾಯಿ ಸಾವ ತೆಕ್ಕೆಯೊಳಗೆಜೀವಗಳು ನಿರ್ಜೀವಅನಲ ಅನಾಹುತಸೂತ್ರಧಾರಿ ವಿಧಾತ ಬೆಂಕಿಯು ವ್ಯಾಪಿಸಿತುಎಲ್ಲೆಡೆ ಸರಸರಕೊನೆಗೆ ಉಳಿಯಿತುಬಸ್ಸಿನ ಕಳೇಬರ ಎ. ಹೇಮಗಂಗಾ                                   

ಎ.ಹೇಮಗಂಗಾ ಅವರ ತನಗಗಳು Read Post »

You cannot copy content of this page

Scroll to Top