ಗಜಲ್
ದಣಿದಿರುವೆ ಸಪ್ತರಾಗಗಳ ಬಹುತಂತಿಯ ವೀಣೆ ನುಡಿಸಿ
ಒಲಿದು ಒಂದಾಗಲು ಏಕತಾನ ದನಿಗಾಗಿ ಹಂಬಲಿಸುವೆ
ಗಜಲ್ ಪ್ರಕಾಶಸಿಂಗ್ ರಜಪೂತ ನಾವು ಮುಖದಲ್ಲಿ ರಸನೆ ಪಡೆದೇವಿಮೌನ ಎಂಬುವ ಕೀಲಿ ಜಡೆದೇವಿ ಸುಖಾ ಎಂಬುವದು ಒಂದು ಮೃಗತೃಷ್ಣೆನಾವು ಬರಿ ನೋವು ಮಾತ್ರ ಹಡೆದೇವಿ ಎಲ್ಲ ಸಂಬಂಧಗಳು ಬದಿಗಿಟ್ಟುಹಣಾ ಗಳಿಸುತ್ತ ಕಾಲ ಕಳೆದೇವಿ ದಾತ ನೀಡಿದ್ದು ಸಾಲಲಿಲ್ಲ ಅಂತನಿತ್ಯ ಆಸೆಯ ಒಡ್ಡು ಒಡೆದೇವಿ ಅರಿಯದೆ ಉಳಿದಿದೆ ಜಗದಾಗ ಗುರಿಅಮಲಿನಲಿ ಯಾವ ಯತ್ತ ನಡೆದೇವಿ ಬದುಕು ಜಗದಾಗ ಬರಿ ನಾಲ್ಕು ದಿನ“ಪ್ರಕಾಶ” ಈ ನಿಜಾನೇ ಮರೆತೇವಿ
ಕಾವ್ಯಯಾನ ಕನ್ನಡಿಯ ಅಮಾಯಕತೆ ಅಶೋಕ ಹೊಸಮನಿ ಹೀರಬೇಕಿತ್ತು ಈ ಮೊಗವನ್ನಾದರೂನಗುವ ಪರದೆಯ ಚೂರಿಯನ್ನಾದರೂ ಕಲಿಸಬೇಕಿತ್ತು ಮುಖಗಳ ಹೂಳಲುಈ ನೇತ್ರಗಳಿಗಾದರೂ ಒಡೆಯಬೇಕಿತ್ತು ಈ ಮಡಿಕೆಯದಾರಿಗಳಿಗಾದರೂ ಆಲಿಸಬೇಕಿತ್ತು ಗಾಯಗಳಅಣುಕು ಗೋಷ್ಠಿಗಳಾದರೂ ಸಾಕಿತ್ತು ಚಂದಿರನ ನಗುಹೃದಯದ ಕಿರು ಬೆರಳಿಗಾದರೂ ನೀನಾಗಬೇಕಿತ್ತುಹಸ್ತಗನ್ನಡಿಯ ನಕ್ಷತ್ರವಾದರೂ ನುಡಿಬೇಕಿತ್ತು ಕನ್ನಡಿಯ ಅಮಾಯಕತೆಯನ್ನ ನೆತ್ತರಾದರೂ
You cannot copy content of this page