ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯ ಸಂಗಾತಿ ನಿತ್ಯ ನೂತನ ಅದೇ ಬಿಳಿ ಮುಗಿಲುಅದೇ ತಿಳಿ ಕಡಲುಅದೇ ಉರಿವ ನೇಸರಅದೇ ಹೊಳವ ಚಂದಿರಬದಲಾದುದ ಕಂಡಿಹೆ ಏನು !!? ರಂಗು ರಂಗಿನಫಳ ಫಳ ಹೊಳೆವಪುಟ ಪುಟವೂಚೆಂದ ಅಚ್ಚೋತ್ತಿಹ ಪಟ !ತಿಥಿ ವಾರ ನಕ್ಷತ್ರಎಣಿಸಿ ಗುಣಿಸಿ ನೋಡುವಕೋಣೆ ಗೋಡೆಗೆ ನೆಲ ನೋಡುತಾಜೋತು ಬಿದ್ದು ಮಾಸಕೊಂದುಅಂಗಿ ಬಿಚ್ಚಿ…ವರುಷ ಪೂರ್ಣ ನೇತಾಡುವದಿನ ದರ್ಶಿಕೆ ಮಾತ್ರ !! ಇರುಳು ಸತ್ತು ಹಗಲು ಹುಟ್ಟಿಹಳೆಯ ಕ್ಷಣಗಳ ಮರೆಸಿಹೊಸ ಭಾವಗಳ ತಣಿಸಿಮೂಡಣದಿ ಮುಗಿಲೆಲ್ಲಹೊಂಬಣ್ಣವ ಚೆಲ್ಲಿಗಿರಿ ಶಿಖರಗಳ ಮೇಲೆರಗಿನವೋಲ್ಲಾಸ ಹೊತ್ತುತರುವ ಭಾಸ್ಕರನಿತ್ಯ ನೂತನ ನಿತ್ಯ ನವ ಚೇತನ !! ನಿನ್ನೆಯ ನೆನಹುಗಳಲಿಕಾಲ ದೂಡದಿರಿನಾಳೆಗಳ ಭರವಸೆಯಲಿಮುಂದಿರುವ ಗುರಿಯಡೆಗೆಕನಸುಗಳ ಗರಿ ಬಿಚ್ಚಿ ನನಸುಮಾಡುವುದ ಮರೆಯದಿರಿ..!! ಪ!! ಅಶೋಕ ಬಾಬು ಟೇಕಲ್.

Read Post »

ಕಾವ್ಯಯಾನ

ಕಾವ್ಯ ಸಂಗಾತಿ ಕಾಯುತ್ತಿದ್ದೇನೆ ದಿನವೊಂದಕ್ಕಾಗಿ ಕಾಯುತ್ತಿದ್ದೇನೆಅಮಾವಾಸ್ಯೆಯ ಚಂದಿರಹೊರಳಿ, ಮರಳಿ ಬೆಳದಿಂಗಳ ಹೊತ್ತುಹುಣ್ಣಿಮೆಯೂರಿಗೆ ಬಂದೇ ಬರುವನೆಂದು ಕಣ್ಣ ಬೆಳಕು ಮರೆಯಾದರೂಮತ್ತೆ ಸೂರ್ಯ ಉದಯಿಸುವನೆಂದುಸೇರದ ತೀರಗಳಿಗೆ ಮುತ್ತಿಡಲುಅಲೆಗಳು ಓಡೋಡಿ ಬಂದೇ ಬರುವವೆಂದು ಆಗಸದಂಚಿನಲ್ಲಿ ನಗುವಾಗಿ,ಒಲವಾಗಿ,ಗೆಲುವಾಗಿ, ನಮಗಾಗಿಕಾಮನಬಿಲ್ಲು ಮೂಡುವದಿನವೊಂದಕ್ಕಾಗಿ ಕಾಯುತ್ತಿದ್ದೇನೆ…. ಒಲವು

Read Post »

ಕಾವ್ಯಯಾನ

ಕಾವ್ಯ ಸಂಗಾತಿ ಚುಕ್ಕಾಣಿ ಬಯಸಲಿಲ್ಲ ಅರಸಲಿಲ್ಲ ಅರಸನಾಗಲುಕಿರೀಟದಂತೆ ಶಿರವೇ ರಲುಬಯಸಲಿಲ್ಲ ಗುಲಾಮನಾಗಲುಯಾರ ಕಾಲಡಿಯ ದೂಳಾಗಲು ಮುಚ್ಚಿಡಲಿಲ್ಲ ಮನದೊಳಗೆಯಾವ ಅಧಿಕಾರದಾಸೆಬಚ್ಚಿಟ್ಟಿದ್ದೊಂದೇ ಮನ ಮೆಚ್ಚಿಸೋಹರ್ಷಿಸೋ ಸಾಕಾರದಾಸೆ ಯಾರ ಮುಡಿ ಏರ ಬಯಸಲಿಲ್ಲಮುಡಿಪಾಗಿಸಿ ಯಾರನ್ನು ಕಾಯಲಿಲ್ಲದೇಹವ ಮಡಿ ಮಾಡಿಕೊಳ್ಳಲಿಲ್ಲವಡಬಾನಲದೊಳ್ ಯಾರನ್ನು ಸುಡಲಿಲ್ಲ ಬಯಸಿದ್ದೊಂದೇ ನನ್ತನದಕಂಪನ್ನು ಚಿಮ್ಮಿಸಲೆಂದೇಸುಕೋಮಲ ಕಾಂತಿಯ ಚಿತ್ತದಿ ಧನಾತ್ಮಕತೆಯ ಅರುಹಲೆಂದೇ ಬಯಸಿದ್ದೊಂದೇ ಜನ್ಮವನ್ನು ಅದುಸ್ವರ್ಗದಲ್ಲೂ ನರಕದಲ್ಲಿ ಅರಿಯೇಜನ್ಮಕ್ಕೆ ಶುಭಾಶಯ ವಾಗಬಲ್ಲೇಮರಣದಿ ಮಸಣದಲ್ಲಿ ಅಲಂಕಾರವಾಗಬಲ್ಲೇ ಅರಿತಿಲ್ಲ ಯಾರ ಬಾಳಿನ ಹೂರಣ ತೋರಣವೋತಂದ್ರೆ, ವೀರಭದ್ರೇಶ್ವರನ ಮುಡಿ ಸೇರುವಾಸೆಚರಣಗಳ ಸೋಕಿದರೆ ಪಾವನವು ಅಂದುಕಾರಣ ಜನಿಸಿದೆ ನಾನೊಂದು ಹೂವು ಚಂದ್ರು ಪಿ ಹಾಸನ್

Read Post »

You cannot copy content of this page

Scroll to Top