ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು”
ಕಾವ್ಯ ಸಂಗಾತಿ ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು” ಚಿವುಟಿದಷ್ಟು ಚಿಗುರುವ ರೀತಿಯುನಿನ್ನದಾಗಲಿ ಮನವೆಕವಿಯುವ ಕತ್ತಲ ಹಾದಿಯಲಿದೀಪವಾಗು ಮನವೆ// ತಿವಿಯುವ ಮುಳ್ಳಿನ ಮೇಲೆ ಹೆಜ್ಜೆಯಹಾಕದಿರು ತನುವೆಅವಿತಿಹ ಧೈರ್ಯವ ಹೊರಗೆ ಎಳೆದುಬಾಳುತಿರು ಸುಮವೆ// ಛಲವದು ಇದ್ದರೆ ಚಿವುಟಿದ ಹಾಗೆಚಿಗುರುವೆ ನೀಗಿಡವೆಒಲವನು ಬದುಕಲಿ ಅನುಕ್ಷಣ ತೋರುತಸಾಗುತಿರು ಬಲವೆ// ಚುಚ್ಚುವ ಮಾತಿಗೆ ಇರಿಯುವ ನುಡಿಗೆಅಳುಕದಿರು ಎಂದೂಹಚ್ಚು ಎಲ್ಲರ ಮನದಲಿ ಸಮತೆಯ ಹಣತೆಯ ನೀ ಮುಂದೂ// ಗೋಳನು ಹೊಯ್ಸುತ ಖುಷಿಯ ಪಡುವರುಕುಹಕದ ಜನರಿಲ್ಲಿಗಾಳವ ಹಾಕುತ ಸಿಕ್ಕಿಸಿ ಹಾಕಲುಕಾಯುವ ಸ್ಥಿತಿಯಿಲ್ಲಿ// ಕಮರದೆ ಕುಂದದೆ ಬಾಡಿ ಹೋಗದೆಬೆಳೆಯೋ ಬದುಕಲ್ಲಿವಿಮಲ ಚರಿತಗೆ ಸಕಲವ ಒಪ್ಪಿಸಿಶರಣಾಗು ಬಾಳಲ್ಲಿ// ಶುಭಲಕ್ಷ್ಮಿ ಆರ್ ನಾಯಕ
ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು” Read Post »









