ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಒಮ್ಮೊಮ್ಮೆ ಹೀಗೂ ಆನ್ನಿಸುವುದುಂಟು-ಸುಧಾ ಹಡಿನಬಾಳ-ಕವಿತೆ

ಕಾವ್ಯ ಸಂಗಾತಿ ಒಮ್ಮೊಮ್ಮೆ ಹೀಗೂ ಆನ್ನಿಸುವುದುಂಟು ಸುಧಾ ಹಡಿನಬಾಳ ಒಮ್ಮೊಮ್ಮೆ ಹೀಗೂಅನ್ನಿಸುವುದುಂಟುನಾನು ನನ್ನ ಹುಟ್ಟಿನೊಂದಿಗೆಜಾತಿ ಹೆಸರನ್ನು ಹೊತ್ತುಬರಲೇ ಬಾರದಿತ್ತು ಎಂದು!ಕನ್ನಡ ಶಾಲೆಯಲ್ಲಿಓದುವಾಗೆಲ್ಲ ಏನೂಅನ್ನಿಸಿರಲಿಲ್ಲ ಆದರೆಪ್ರೌಢ ಶಾಲೆಗೆ ಬಂದಾಗಮಾಸ್ತರರೆಲ್ಲ ‘ಜಾತಿ’ಹೆಸರಿಡಿದು ಕರೆದಾಗಮೈಮೇಲೆ ಹುಳ ಬಿಟ್ಟಂತ ಅನುಭವ! ತಿಳಿವಳಿಕೆ ಇಲ್ಲದ ಕಾಲವದುಹೀಗಾಗಿ ಏನು ಮಾಡಬೇಕೆಂದು ತಿಳಿಯುತ್ತಿರಲಿಲ್ಲಆದರೆ ಮಗನ ಹೆಸರನ್ನು ಯಾರೂ ಜಾತಿಯಿಂದಕರೆಯಬಾರದೆಂದು ಜಾತಿಯನ್ನು ಮರೆಮಾಚಿ ಹೆಸರಿಟ್ಟೇವು ಆದರೂಅಲ್ಲಲ್ಲಿ ಸರ್ಟಿಫಿಕೇಟ್ನಲ್ಲಿಜಾತಿ ಸೇರಿಸಿಯೇ ಕೊಟ್ಟಾಗಏನೋ ಒಂಥರಾ ಅಸಹನೆ! ನಾವೆಲ್ಲ ಸರ್ಕಾರಿ ಅನ್ನತಿನ್ನುವವರು ಹೀಗಾಗಿಬೆನ್ನಿಗಂಟಿದ ಜಾತಿಭೂತವನ್ನುಎಂದಿಗೂ ಬಿಡಲಾಗದು!ಹಾಗಂತ ಜಾತಿ ಹೆಸರಹೇಳಲು ನಾಚಿಕೆ ಎಂದಲ್ಲಆದರೆ ‘ಜಾತಿ’ ಹೆಸರಲ್ಲಿಅವಕಾಶ ಮುಂಚಿತರು ನಾವೆಲ್ಲ!!ಈಗಲೂ ‘ ಜಾತಿ’ ಹೆಸರಿಂದಕರೆಯುವವರು ಇಲ್ಲವೆಂದಲ್ಲಆದರೆ ಈಗ ಸುಮ್ಮನಿರುವುದಿಲ್ಲ… ಅಲ್ಲಲ್ಲಿ ಆಗಾಗ ಜಾತಿಹೆಸರಲಿನಡೆಯುವ ದೌರ್ಜನ್ಯಮರ್ಯಾದಾ ಹತ್ಯೆಧರ್ಮದ ಹೆಸರಲ್ಲಿಕೋಮುಗಲಭೆಗಳುಗುಂಪು ಘರ್ಷಣೆಕೊಲೆ ಸುಲಿಗೆಗಳುಬೆಚ್ಚಿ ಬೀಳಿಸುತ್ತವೆಕರುಳು ಚುರ್ ಎನ್ನಿಸುತ್ತವೆ ಪ್ರಾಣಿ ಪ್ರಪಂಚದಲ್ಲಿ ಈ ಜಾತಿಧರ್ಮದ ಗೊಡವೆಯೇಇಲ್ಲವಲ್ಲಮತ್ತೆ ಯಾಕೆನಮ್ಮ ನಡುವೆ ಈ ಬೇಲಿ ಗೋಡೆ?ನಾವೆಲ್ಲಾ ವಿಶ್ವಮಾನವರಾಗುವುದುಸಾಧ್ಯವಿಲ್ಲವೇ?ಆಗುವುದಾದರೆ ಯಾವಾಗ?ಮತ್ತೆ ಮತ್ತೆ ಅನ್ನಿಸುವುದುಂಟುನಾವೆಲ್ಲ ಜಾತಿ ಹೆಸರಿನೊಂದಿಗೆಗುರುತಿಸಿಕೊಳ್ಳಲೇ ಬಾರದಿತ್ತು ಎಂದು-

ಒಮ್ಮೊಮ್ಮೆ ಹೀಗೂ ಆನ್ನಿಸುವುದುಂಟು-ಸುಧಾ ಹಡಿನಬಾಳ-ಕವಿತೆ Read Post »

ಕಾವ್ಯಯಾನ

ಕಾವ್ಯ ಸಂಗಾತಿ ತೀರವಿರದ ಕಡಲು ಅರುಣಾ ನರೇಂದ್ರ ಕಾವ್ಯ ಸ್ಪಂದನ ಕಣ್ಣೀರ ಕೋಡಿಯ ಲೆಕ್ಕಕರವಸ್ತ್ರ ಬರೆದಿಡುತ್ತದೆಒಡಲಾಳದ ನೋವಿನ ಲೆಕ್ಕನಿಟ್ಟುಸಿರು ಬರೆದಿಡುತ್ತದೆ*** ಹೃದಯಕ್ಕೆ ಹೃದಯ ಸ್ಪಂದಿಸಿದರೆಲೋಕ ನಾಕವಾಗುತ್ತದೆಮನಕೆ ಮನ ಮಿಡಿದರೆಮಾತು ಮೌನವಾಗುತ್ತದೆ** ಬಾಳ ದಾರಿಯಲಿನಾ ಒಂಟಿಯಾಗಿ ಅಳುವಾಗಬಾನ ಚಂದ್ರ ತಾಜೊತೆಯಾಗುವೆನೆಂದ** ನನ್ನ ಕಾವ್ಯನಿನ್ನ ನಗುವಿನಲ್ಲಿ ಹುಟ್ಟಿಚೆಂದುಟಿಯಲ್ಲಿ ಮಿಂದುಹೃದಯದಾಳದಲ್ಲಿ ಸೇರಿಕೊಳ್ಳುತ್ತದೆ ಅರುಣಾ ನರೇಂದ್ರ

Read Post »

ಕಾವ್ಯಯಾನ, ಗಜಲ್ ದುನಿಯಾ

ಗಜಲ್ ಜುಗಲ್ ಬಂದಿ

ಗಜಲ್ ಜುಗಲ್ ಬಂದಿ ಜುಲ್ ಕಾಫಿಯಾ ಗಝಲ್ ಸದ್ಭಾವಗಳ ತುಂಬಿಟ್ಟ ಮಾತಲ್ಲಿ ಹೃದಯಗಳ ಗೆಲ್ಲುವುದು ಖಾತ್ರಿಯಾಗಿದೆಸ್ವಾರ್ಥಿಗಳ ಲೋಕದಲ್ಲಿ ಮುಗ್ದ ಮನಸ್ಸುಗಳ ಕದಡುವುದು ಖಾತ್ರಿಯಾಗಿದೆ ಸ್ಫುರಿಸುತಿದೆ ಮನದೊಳಗೆ ಅನುಕ್ಷಣ ನೂತನ ಕನಸುಗಳ ನಿರವದ್ಯ ಚಿಲುಮೆಉದರದ ಕ್ಷುಧೆಗೆ ಕೈಗೂಡದ ಬಯಕೆಗಳ ಹೋಮಿಸುವುದು ಖಾತ್ರಿಯಾಗಿದೆ ಬೆರಗು ಕಣ್ಗಳಿಗೆ ಸಡಗರವು ತೀರವಿಲ್ಲದ ಜ್ಞಾನ ಸಾಗರದ ಸ್ವಚ್ಚಂದ ವಿಹಾರಹರಕಲು ಜೇಬಿಂದ ಆಸರೆಯಿಲ್ಲದ ಆಸೆಗಳ ಬೀಳಿಸುವುದು ಖಾತ್ರಿಯಾಗಿದೆ ಮುರುಕಲು ಮನೆಯೆದುರು ಜಗದ ತಾಪಕೆ ನಲುಗಿದ ಹೂವುಗಳ ತೋರಣಮರಣವೂ ಕರುಣೆ ತೋರದಂತೆ ಜೀವಗಳ ಹಿಂಸಿಸುವುದು ಖಾತ್ರಿಯಾಗಿದೆ ಅಲೆಯುತಿವೆ ನಿರಂತರ ನಿಶ್ಯಕ್ತ ಕಾಲ್ಗಳು ‘ವಿಜಯ’ ಪಥದ ಜಾಡು ಹಿಡಿದುಅಗಮ್ಯವ ಸೇರುವ ಭ್ರಮೆಯಲ್ಲಿ ಕನಸುಗಳ ಕಮರಿಸುವುದು ಖಾತ್ರಿಯಾಗಿದೆ. ———————————— ವಿಜಯಪ್ರಕಾಶ್ ಕೆ ರೆಪ್ಪೆಗಳನು ಮಿಟುಕಿಸದ ಕಂಗಳಲಿ ಅಪೇಕ್ಷೆಗಳ ಕೊಲ್ಲುವುದು ಖಾತ್ರಿಯಾಗಿದೆತುಡಿತಕೆ ಮಿಡಿಯದ ಮನದಿ ಮರುಕಗಳ ಮುದುಡಿಸುವುದು ಖಾತ್ರಿಯಾಗಿದೆ ಸ್ವೇಚ್ಛೆಯಲಿ ಘೀಳಿಡುತಿಹುದು ಮುಗ್ಧತೆಯ ಛಾಯೆ ಕುಣಿಕೆಗೆ ಕೊರಳೊಡ್ಡಿದಂತೆಆಸರೆಗಾಣದ ಅಕ್ಕರೆಯಲಿ ಹಿಂಜಿ ಭಾವನೆಗಳ ಹಿಸುಕುವುದು ಖಾತ್ರಿಯಾಗಿದೆ ಅನತಿ ದೂರದಲೇ ಹೊಳೆಯುತಿಹುದು ಹೊಂಗನಸು ಮುಗಿಲ ಚೆಲುವಿಗೆ ನೆಚ್ಚಿಬೆಚ್ಚಗಾಗದ ವಾಂಛೆಗಳೊಳು ಕ್ಲೇಶ ಅಶ್ರುಗಳ ಕುಂದಿಸುವುದು ಖಾತ್ರಿಯಾಗಿದೆ ನಂಟ ಸೆಳೆದ ಅಸುವಿನಲಿ ಮರೀಚಿಕೆಯಾಗುತಲಿದೆ ಹಿತದ ಸಖ್ಯ ಕಳಚಿ ಬೆಸುಗೆಹರೆಯದ ಹಂಬಲಿಕೆಯಲಿ ಹುಸಿಬಣ್ಣಗಳ ಮಸುಕಾಗಿಸುವುದು ಖಾತ್ರಿಯಾಗಿದೆ ಅಂಕೆ ಮೀರುತಿಹ ಚಲನೆಯಲಿ ಸ್ಥಿತಪ್ರಜ್ಞಳಾಗು ‘ನಯನ’ ಉತ್ಸುಕತೆಯ ಸೌಖ್ಯಕೆಹುಂಬತನದ ಪರಮಾವಧಿಯಲಿ ಹಸಿಸಂಚುಗಳ ಕಿವುಚುವುದು ಖಾತ್ರಿಯಾಗಿದೆ. ————————– ನಯನ. ಜಿ. ಎಸ್.

ಗಜಲ್ ಜುಗಲ್ ಬಂದಿ Read Post »

You cannot copy content of this page

Scroll to Top