ಮಾಜಾನ್ ಮಸ್ಕಿಯವರ ಗಜಲ್
ತಲ್ಲಣಗಳ ಬದುಕಲ್ಲಿ ಬದುಕಿಸಿದೆ
ಮಾತಿನ ಕೊಂಕುಗಳಲ್ಲಿ ನರಳಿಸಿದೆ
ಉಸಿರಾಗುವೆ ಎಂದದ್ದು ನೆಪವಷ್ಟೆ
ಸನಿಹವಾಗದ ಮನಸ್ಸಲ್ಲಿ ಜೀವಿಸಿದೆ
ಎಲ್ಲೆಡೆ ನೋವಿನೂಟವೆ ಉಂಡಿರುವೆ
ಗುಪ್ತಗಾಮಿನಿ ಸುಪ್ತ ಭಾವದಿ ನಡೆಸಿದೆ
ಸಾವಿನತ್ತ ಹೆಜ್ಜೆಗಳೆನೋ ಹಾಕುತ್ತಿರುವೆ
ಕುರಿ ಮಂದೆಯಲಿ ಒಂದಾಗಿ ತಲೆತಗ್ಗಿಸಿದೆ
ಕಣ್ಣೀರಲ್ಲೇ ಈಜು ಕಲಿತಾಯಿತು “ಮಾಜಾ”
ಸೋಲನ್ನು ಸೋಪಾನವಾಗಿಸಿ ಜೀವಿಸಿದೆ
ಮಾಜಾನ್ ಮಸ್ಕಿಯವರ ಗಜಲ್ Read Post »









