ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ ಡೋ ನಾ ವೆಂಕಟೇಶ ಕವಿತೆ “ಕೋಡು”

ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಕೋಡು” ಬರಬಹುದೇ ಇಂಥಕ್ಯೂ ಆರ್ ಕೋಡ್ ಗಳು –ಮುಖಕ್ಕೆ ಹಿಡಿದಾಗ ನಿನ್ನ ನಖಶಿಖಾಂತ ಹೇಳುವ ಜಾತಕಗಳು. ನಿನ್ನ ಜೋಳಿಗೆಯಲ್ಲಿಯ ಹಣ ಪ್ರಪಂಚಕ್ಕೆ ಇಟ್ಟಿರುವ ಪಣ,  ನಿನ್ನ ಹಿಂದು ಮುಂದಿನವರ  ಆಸೆ ದುರಾಸೆಗಳ ಕ್ಷಣ. ಕಾಯುತ್ತಿದ್ದೇನೆ ಆ ಕೋಡಿಗೆನಿನ್ನ ನೈತಿಕದ ಭೌತಿಕದಇಹ ಪರ ಆಸ್ತಿಗಳ ಮುತ್ತಿಗೆಗೆದುರಾಸೆಗೆ ದುರ್ದಾನಕ್ಕೆ! ಸಿಗುವುದು ಯಾವಾಗಲೋತೀರದ ದಾಹಕ್ಕೆಎಲ್ಲರ ಮುಖ ಕೈ ಕಾಲು ದೇಹಕ್ಕೆ ಮರ್ಜಿ ಹಿಡಿಯುವಹೊತ್ತು ಗೊತ್ತಿಗೆ ಒಳಗೆಲ್ಲ ಹೊರಗೆಹೊರಗೆಲ್ಲ ಒಳಗೆ,ಬರಲಿದೆಯೇ ಇಂಥ ಕೋಡುಸ್ವಿಚ್ ಆಫ್ ಮಾಡಲಿದೆಯೇಎಲ್ಲರ ಮೂಡು! ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ ಕವಿತೆ “ಕೋಡು” Read Post »

ಕಾವ್ಯಯಾನ

ಚಂದ್ರು ಪಿ ಹಾಸನ್ “ಪ್ರೇಮಗಂಗೆ”

ಕಾವ್ಯ ಸಂಗಾತಿ ಚಂದ್ರು ಪಿ ಹಾಸನ್ “ಪ್ರೇಮಗಂಗೆ” ಪ್ರೇಮಗಂಗೆ ಓ  ನನ್ನೊಲವಗಂಗೆ ಎನ್ನೆದೆಯಾಳದಿ ಜನ್ಮಿಸಿದ ಪ್ರೇಮಗಂಗೆನಿನ್ನ ಚಲನವಲನ ನನ್ನವಳ ಕೂಗಿದೆ ನೀ ಮಿಡಿದ ಬಡಿತದ ಕಲರವಒಮ್ಮೆ ಕಾಣುವ ಹಂಬಲ ತಂದಿದೆ ಬಂಜರು ಭೂಮಿಯಲ್ಲಿ ಮಳೆಗರೆದು ಹಸಿರು ಹಸನಾಗಿ ಹರಡುವಂತೆನಿನ್ನ ನವಿರಾದ ಹರಿವಿನ ಅರಿವು ಮನದಲ್ಲಿ ಸೊಗಸಾದ ಆಸೆ ಚಿಗುರಿಸಿಪ್ರೇಮದ ಕಾರಂಜಿಯನ್ನು ಚಿಮ್ಮುತ್ತಿದೆ. ನೀರಿನ ಜುಳುಜುಳು ನಾದ ಕೇಳಿ ಹಕ್ಕಿಪಿಕ್ಕಿಗಳು ಚಿಲಿಪಿಲಿ ಎನ್ನುವಂತೆಹೃದಯದ ಅರಗಿಣಿ ಬಡಿತವ ಎಬ್ಬಿಸಿಭಾವ ಅಲೆಗಳು ನರನಾಡಿಯಲ್ಲಿ ಹರಡಿನಿನ್ನ ಹೆಸರಿನ ತುಡಿತವ ಮಿಡಿಯುತ್ತಿದೆ ಸ್ವಚ್ಛಂದದ ನೀರಿನ ಕಣಕಣದ ಹರಿವು ಧರೆಗೆ ಸೇರಿ ಘಮಘಮಿಸುವಂತೆಎನ್ನ ನೀರೆಯ ಒಲವು ತನುವೆಲ್ಲ ಹರಡಿ ಮುಖಕಮಲ ಮಿನುಗಿಸಿ ಅಡಗಿದೆಯೇ ಅಂತರಗಂಗೆ ಓ ನನ್ನ ಪ್ರೇಮಗಂಗೆ ಚಂದ್ರು ಪಿ ಹಾಸನ್

ಚಂದ್ರು ಪಿ ಹಾಸನ್ “ಪ್ರೇಮಗಂಗೆ” Read Post »

ಕಾವ್ಯಯಾನ

ಸುತ (ಸುರೇಶ ತಂಗೋಡ) ಅವರ ಕವಿತೆ “ಸಿಹಿಸುಳ್ಳುಗಳು”

ಕಾವ್ಯ ಸಂಗಾತಿ ಸುತ (ಸುರೇಶ ತಂಗೋಡ) “ಸಿಹಿಸುಳ್ಳುಗಳು” ಸಾವಿರಾರು ರೂಪಾಯಿಖರ್ಚು ಮಾಡಿಬಾಂಡು ತಂದೆನಂದ್ರ್ಅವ್ವ ಬೈತಾಳೆಂದು,ನೂರು ರೂಪಾಯಿಗೆ ತಂದೆನವ್ವಎಂದದ್ದು ನಾ ಹೇಳಿದ ಸುಳ್ಳು.. ಹೆಂಡತಿಗೆ  ಒಡವಿ ಕೊಡಿಸಿನೀವು ಹಬ್ಬಕ್ಕ ಏನು ತಗೋದಿಲ್ಲ ಏನ್?ಎಂದು ಕೇಳಿದಾಗನಂಗ್ಯಾಕ ಬಟ್ಟೆ ಬಹಳ ಅದಾವಅಂದದ್ದು ನಾ ಹೇಳಿದ ಸುಳ್ಳು… ಮಗ ಬೈಕ್ ಬೇಕು ಎಂದಾಗಬೈಕ್ ಹೋಡಿದ್ರೆ ಬೆನ್ನು ನೋಯಿತ್ತೆಎಂದು,ಸೈಕಲ್ ಕೊಡಿಸಿದ್ದುಮಗನಿಗೆ ನಾ ಹೇಳಿದ ಮೊದಲ ಸುಳ್ಳು.. ಮಗಳಿಗೆ ಮದುವೆ ಮಾಡುವಾಗಇರೋ ಬರೋ ಆಸ್ತಿ-ಹಣಕೂಡಿಸಿ ಒಂದೊಳ್ಳೆ ಸಂಬಂಧ ನೋಡಿಇನ್ನೇನು ಗಂಡನ ಮನೆಗೆ ಕಳುಹಿಸುವಾಗತನ್ನಿಂದ ತಾನೇ ಗೊತ್ತಿಲ್ಲದೇಜಾರಿದ ಕಣ್ಣೀರು ಯಾಕೆ?ಎಂದ ಮಗಳಿಗೆಕಣ್ಣಾಗ ಧೂಳ್ ಬಿದ್ದೀರಬೇಕೆಂದಿದ್ದುನಾ ಹೇಳಿದ ಸಿಹಿ ಸುಳ್ಳು… ಕ್ಷಮಿಸಿ ನನ್ನ ಸುಳ್ಳುಗಳುನನ್ನವರ ಸಂತೋಷಕ್ಕೆಬೇರೆವರ ನೋವಿಗಲ್ಲ. ಸುತ (ಸುರೇಶ ತಂಗೋಡ)

ಸುತ (ಸುರೇಶ ತಂಗೋಡ) ಅವರ ಕವಿತೆ “ಸಿಹಿಸುಳ್ಳುಗಳು” Read Post »

ಕಾವ್ಯಯಾನ

ಎ ಹೇಮಗಂಗಾ ಅವರ ಹೊಸ ತನಗಗಳು

ಕಾವ್ಯ ಸಂಗಾತಿ ಎ ಹೇಮಗಂಗಾ ತನಗಗಳು ಚರ್ಚಿನ ಮುಂದೆ ಮರಗೊಂಚಲ ಹೂ ಪಾದರಿಗಂಧಕ್ಕೆ ಮರುಳಾಗಿಅಲ್ಲೇ ನಿಂತರು ಪಾದ್ರಿ ರೈಲಿನ ಹಳಿಗಳುಎಂದೂ ಸೇರಲಾರವುಮುರಿದ ಮನಗಳುಮತ್ತೆ ಕೂಡಲಾರವು ಗಿಣಿಯಂತೆಯೂ ಇದೆಗೂಬೆಯಂತೆಯೂ ಇದೆಹಕ್ಕಿ ಹಾರಲಾಗದು‘ ಕಾಕಾಪೋ ‘ ಹೆಸರದು ವಿಭಿನ್ನ ಹಕ್ಕಿಯಿದುಗುಂಡು ಗುಂಡಗಿಹುದು‘ ಗೂಬೆಗಿಣಿ ‘ ಹೆಸರುಆಯುಷ್ಯ ವರ್ಷ ನೂರು ನಿಂದನೆಯ ಭಯಕೆಕೈ ಚೆಲ್ಲಿ ಕೂರದಿರುಸಾಧನೆಯತ್ತ ನಿಲ್ಲುಅಡಗುವುದು ಸೊಲ್ಲು ಮರಣಿಸಿದ ವ್ಯಕ್ತಿಮಹಾ ಹೃದಯವಂತಅಂಗಾಂಗ ದಾನದಲಿಆತನಿನ್ನೂ ಜೀವಂತ ಇಣಚಿ ಬೀಜವನುಮಣ್ಣಲಿ ಬಚ್ಚಿಟ್ಟಿತುಮಳೆ ಸುರಿದು ಅಲ್ಲಿಸಸಿಯೊಂದು ಹುಟ್ಟಿತು ಜಾಗತಿಕ ಸಮರಪರಿಣಾಮ ದುರ್ಭರಚಿನ್ನ ಬೆಳ್ಳಿ ಎರಡೂಜೇಬಿಗೆ ಬಲು ಭಾರ ಕೊಳ್ಳಲೆಂದು ಹೋದಾಗನನ್ನವರು ಹೇಳಿದ್ದು“ಹೇಮ ಎಂದರೆ ಚಿನ್ನಬೇಡ ದುಬಾರಿ ಸ್ವರ್ಣ” ಅರವತ್ತರ ವಯಅರಳು ಮರುಳಿದೆಲೆಕ್ಕಿಸದೇ ಮರಳಿನೀ ಅರಳಬೇಕಿದೆ ಎ. ಹೇಮಗಂಗಾ

ಎ ಹೇಮಗಂಗಾ ಅವರ ಹೊಸ ತನಗಗಳು Read Post »

ಕಾವ್ಯಯಾನ

ರತ್ನರಾಯ ಮಲ್ಲ ಅವರ “ಗಜಲ್”

ಕಾವ್ಯ ಸಂಗಾತಿ ರತ್ನರಾಯ ಮಲ್ಲ “ಗಜಲ್” ಗುಲಾಬಿ ಪಲ್ಲಂಗದಲಿ ಮಲ್ಲಿಗೆಯ ಸುಮದ ಪಕಳೆ ನಿನಗಾಗಿ ಅರಳುತಿದೆಬೆಳಗಿನ ಹನಿ ಸ್ಪರ್ಶದಂತೆ ನನ್ನೊಳಗೆ ಸುಕನಸು ಮರವಾಗಿ ಹೊನಲುತಿದೆ ನಿನ್ನ ಆಲಿಂಗನದಿ ಹೂದಳದ ತೇವವು ಆಯಸ್ಕಾಂತದಂತೆ ಸೆಳೆಯುತಿದೆಮಳೆ ಮಣ್ಣನು ಅಪ್ಪಿಕೊಳ್ಳುವ ಹೊತ್ತಲಿ ನಿನ್ನ ಸೇರುವ ಆಸೆ ಚಿಗುರುತಿದೆ ಉಸಿರಿನೊಳಗಿನ ತಾಪದಲಿ ಹೃದಯದ ಅಡುಗೆಮನೆ ರಸಪಾಕ ನೀಡಿದೆನಿನ್ನಿಂದ ಹೂ ಅರಳುವುದಕ್ಕೆ ಮುಂಚಿನ ಕಂಪನ ಮನದಲಿ ಹರಡುತಿದೆ ತೆರೆದ ಹೂದೋಟದಂತಹ ಪ್ರೇಮಲೋಕದಲಿ ನಮಗೆ ವಯಸ್ಸು ತಾಗದುಮಧುಚಂದ್ರಕಾಗಿ ಹೂವಿನ ತೊಟ್ಟಿಲಲಿ ಸುಗಂಧದ ಹೊದಿಕೆ ಕಾಯುತಿದೆ ನೀನು ಹೃದಯ ತಣಿಸುವ ರಮಣೀಯ ದೃಶ್ಯ ಕಾವ್ಯ ದಣಿಯುವ ಮಾತಿಲ್ಲನಿನ್ನ ಮಡಿಲಲಿ ದೀಪ ದೀಪಕ್ಕೆ ಬೆಳಕು ನೀಡಲು ಮಲ್ಲಿ ಮನ ಮಿನುಗುತಿದೆ ರತ್ನರಾಯಮಲ್ಲ

ರತ್ನರಾಯ ಮಲ್ಲ ಅವರ “ಗಜಲ್” Read Post »

ಕಾವ್ಯಯಾನ

“ಲೋಕದ ಡೊಂ(ಕೊಂ)ಕು”ಎಮ್ಮಾರ್ಕೆ ಕವಿತೆ

ಕಾವ್ಯ ಸಂಗಾತಿ “ಲೋಕದ ಡೊಂ(ಕೊಂ)ಕು” ಎಮ್ಮಾರ್ಕೆ ಕವಿತೆ ತನು ಮನ ಸಂತೈಸಿಕೊಂಡುಸುಮ್ಮನಿರಬೇಕಷ್ಟೇ ಇಲ್ಲಿ,ಮುಖಕ್ಕಿಂತ ಮುಖವಾಡವಮುದ್ದಿಸುವವರೇ ಹೆಚ್ಚು ಲೋಕದ ಡೊಂಕು ತಿದ್ದುವಹುದ್ದೆಗಳೆಲ್ಲವು ಖಾಲಿ ಇಲ್ಲಿ,ಕೊಂಕು ಮಾತಿನ ರೂಪದಿಸಿಗುವ ಸಂಬಳವೇ ಹೆಚ್ಚು ಮುಂಗಡದ ಜೊತೆ ಜೊತೆಗೆಕೈಗಡವ ನೀಡುವರು ಇಲ್ಲಿ,ಇಷ್ಟಾದರೂ ಈ ನೌಕರಿಯಬೇಡ ಎನುವವರೇ ಹೆಚ್ಚು ದಂತಕಥೆಗಳು ಕಣ್ಮುಂದಿವೆಬೇತಾಳ ಬೆನ್ನ ಹಿಂದೆ ಇಲ್ಲಿ,ಹೊತ್ತ ವಿಕ್ರಮಗರಿಗಿಂತಲೂಹೂತ ಅಕ್ರಮಗಳೇ ಹೆಚ್ಚು ಅಂಕು ಡೊಂಕುಗಳೇ ಮನೆಮನಗಳ ಸಿಂಗರಿಸಿವೆ ಇಲ್ಲಿ,ಲೋಕೋದ್ಧಾರ ಬಯಸದೇಹುಟ್ಟಿದ ಹುಳುಗಳೇ ಹೆಚ್ಚು ದೂರು ಇಲ್ಲ ದೂರುವರಿಲ್ಲದರ್ಬಾರು ನಡೆದಿದೆ ಇಲ್ಲಿ,ಕಾರ್ಯದ ಭಾರಕ್ಕಿಂತಲೂಕಾರುಬಾರುಗಳೇ ಹೆಚ್ಚು ನಾನು ನಾನಾಗುವುದ ಬಿಟ್ಟುಎಲ್ಲರೊಳಗೊಂದಾದೆ ಇಲ್ಲಿ,ಮಂಕುತಿಮ್ಮನ ತುಸುಮತಿಗೆಮಂಕು ಕವಿದಿಹುದೇ ಹೆಚ್ಚು ಎಮ್ಮಾರ್ಕೆ

“ಲೋಕದ ಡೊಂ(ಕೊಂ)ಕು”ಎಮ್ಮಾರ್ಕೆ ಕವಿತೆ Read Post »

ಕಾವ್ಯಯಾನ

“ತಾಯಿ ದೇವರಲ್ಲವೇ?” ಲೇಖನ ವನಜ ಮಹಾಲಿಂಗಯ್ಯ

ಜೀವನ ಸಂಗಾತಿ ವನಜ ಮಹಾಲಿಂಗಯ್ಯ “ತಾಯಿ ದೇವರಲ್ಲವೇ?” ಒಂದು ಪುಟ್ಟ ಕುಟುಂಬ ತಂದೆ ತಾಯಿ ಅಣ್ಣ ತಂಗಿ. ತಂದೆ ತಕ್ಕಮಟ್ಟಿಗೆ ಆಸ್ತಿ ಮಾಡಿ ಮಕ್ಕಳನ್ನು ಓದಿಸಿ  ಚನ್ನಾಗಿಯೇ ಬೆಳೆಸಿರುತ್ತಾರೆ.    ತಂದೆಒಂದುವ್ಯಾಪಾರದಲ್ಲಿತೊಡಗಿರುತ್ತಾರೆ.ಯಾವುದಕ್ಕೂ ಕೊರತೆಯಿಲ್ಲದೆ ಆ ಕುಟುಂಬ ಖುಷಿಯಲ್ಲಿರುತ್ತದೆ.ಮಗಳನ್ನು ಒಂದು ಒಳ್ಳೆಯ ಕುಟುಂಬದ ಹುಡುಗನಿಗೆ ಮದುವೆ ಮಾಡಿ ಕೊಡುತ್ತಾರೆ. ಮನೆಯ ಯಜಮಾನನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಮರಣ ಹೊಂದುತ್ತಾರೆ. ತಾಯಿ ಮಗ ಮನೆಯಲ್ಲಿ ಇಬ್ಬರೇ ಉಳಿಯುತ್ತಾರೆ.ತಾಯಿ ಮಗನನ್ನು ಮದುವೆ ಮಾಡಲು ಪ್ರಸ್ತಾಪಿಸುತ್ತಾರೆ. ಮಗನು ಸಹ ಒಪ್ಪಿಕೊಳ್ಳುತ್ತಾನೆ . ಮಗನು ತಂದೆಯ ವ್ಯಾಪಾರದ ಕಡೆ ಗಮನಹರಿಸಿ ಜವಾಬ್ದಾರಿಯಿಂದಲೇ ದುಡಿಯುತ್ತಿರುತ್ತಾನೆ.ಒಂದು ಒಳ್ಳೆಯ ಸಂಬಂಧದಿಂದ ಹೆಣ್ಣು ತಂದು ತಾಯಿ ಮಗನಿಗೆ ಮದುವೆಯನ್ನು ಮಾಡುತ್ತಾರೆ. ಪ್ರತಿದಿನ ಮಗ ತನ್ನ ಕೆಲಸದ ಕಡೆ ಹೆಚ್ಚಿನ ಗಮನಹರಿಸಿ ಚನ್ನಾಗಿಯೆ ದುಡಿಯುತ್ತಿರುತ್ತಾನೆ. ಮನೆಯಲ್ಲಿ  ಮನೆಯ ಕೆಲಸದ ನಂತರ ಖಾಲಿ ಕೂತಿದ್ದ  ಅವನ ಹೆಂಡತಿಗೆ ಅತ್ತೆಯ ಬಗ್ಗೆ ಏನೋ ಒಂದು ತರಹದ ತಾತ್ಸಾರ ಮನೋಭಾವ. ಪ್ರತಿದಿನ ಅತ್ತೆಯೊಂದಿಗೆ ಜಗಳ ಮಾಡಿ ಗಂಡ ಮನೆಗೆ ಬಂದ ತಕ್ಷಣ ಅವನಿಗೆ ಒಂದಕ್ಕೆ ಹತ್ತು ಸೇರಿಸಿ ಹೇಳುವುದು, ಆದರೆ ಮಗನಿಗೆ ತಾಯಿಯ ಮೇಲೆ ಅಪಾರವಾದ ಪ್ರೀತಿ , ಗೌರವ. ಅವನು ಹೆಂಡತಿಗೆ ನೀನು ಹೊಂದಾಣಿಕೆ ಮಾಡಿಕೊಂಡು ಹೋಗು ಅಮ್ಮ ವಯಸ್ಸಾದವರು ಅವರನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ ನಾನಲ್ಲದೇ ನನ್ನಮ್ಮನನ್ನು ಯಾರು ನೋಡಿಕೊಳ್ಳುತ್ತಾರೆಂದು ತಿಳಿ ಹೇಳಿ ತನ್ನ ಕೆಲಸಕ್ಕೆ ಹೋಗುತ್ತಿದ್ದ. ಆದರೆ ಅವನ ಹೆಂಡತಿ ಮಾತ್ರ ಅತ್ತೆಗೆ ಹಿಂಸೆ ಮಾಡುತ್ತಿದ್ದಳು.ಊಟ ಕೊಡದೆ  ತಿಂಡಿ ಕೊಡದೆ ಅವರನ್ನುಹಸಿವಿನಿಂದ ನರಳಿಸುತ್ತಿದ್ದಳು.ವಯಸ್ಸಾದ ತಾಯಿ ಹಸಿವಿನಿಂದ ಅರೋಗ್ಯ ಕೆಟ್ಟು ಹಾಸಿಗೆ ಹಿಡಿದು , ನಿದ್ದೆ ಮಾಡುವಾಗ ಏನೇನೋ ಬಡಬಡಿಸುತ್ತಿದ್ದಳು.ಪಾಪ ಮಗ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದು ಔಷದೋಪಚಾರ ಮಾಡಿಸುತ್ತಿದ್ದ ,ಆದರೆ  ತನ್ನ ಕೆಲಸದ ಒತ್ತಡದಿಂದ ಹೆಂಡತಿ ಏನು ಮಾಡುತ್ತಾಳೆಂದು  ಗಮನಹರಿಸಲಿಲ್ಲ.  ಒಂದು ದಿನ ಹೆಂಡತಿ ರೀ ನಿಮ್ಮ ಅಮ್ಮ ನಿದ್ದೆಯಲ್ಲಿ ಏನೇನೋ ಮಾತನಾಡುತ್ತಾರೆ ಅವರಿಗೆ ತಲೆ ಸರಿಯಿಲ್ಲ ಅನ್ನಿಸುತ್ತೆ, ಮಾನಸಿಕ ಅಸ್ಪತ್ರೆಗೆ ಸೇರಿಸೋಣ ಅಂದಳು. ಆಗ ಮಗ ಹೆಂಡತಿಗೆ ನಿನಗೆ ತಲೆ ಕಟ್ಟಿದೆ ಅಮ್ಮನಿಗಲ್ಲ ಅಂದ. ಅದರೂ ಅವಳು ಗಂಡನಿಗೆ ಒತ್ತಾಯ ಮಾಡಿ ನೀವೇನು ಬರಬೇಡಿ ನಾನೆ ಕರೆದುಕೊಂಡು ಹೋಗುವೆ ಅಂತ ಹೇಳಿ ಅತ್ತೆಯನ್ನು ಕರೆದುಕೊಂಡು ಹೋಗಿ ವೃದ್ಧಾಶ್ರಮಕ್ಕೆ ಸೇರಿಸಿ ಬಂದಳು. ಸಂಜೆ ಬಂದು ಗಂಡನಿಗೆ,  ಡಾಕ್ಟರ್ ಹೇಳಿದರು ಅತ್ತೆ  ಗುಣವಾಗುವವರೆಗೆ ಆಸ್ಪತ್ರೆಯಲ್ಲಿಯೇ ಇರಬೇಕಂತೆ, ನಾವುಗಳು ಪದೇ ಪದೇ ಹೋಗಬಾರದಂತೆ, ಅವರೆ ಕಾಲ್ ಮಾಡಿ ತಿಳಿಸುತ್ತಿರುತ್ತಾರಂತೆಅಂತ ಹೇಳಿದಳು.  ಕುರುಡು ಪ್ರೀತಿಯನ್ನು ಅರಿಯದ ಅವನು ಹೌದಾ ಏನಾದರಾಗಲಿ ಅಮ್ಮ ಗುಣವಾಗಿ ಬೇಗ ಮನೆ ಬಂದರೆ ಸಾಕು. ಅವರನ್ನು ಬಿಟ್ಟಿರಲು ಸಾಧ್ಯವಿಲ್ಲ ಅಂದು ತನ್ನ ಕೆಲಸದಲ್ಲಿ ನಿರತನಾದ. ಹೀಗೆ ದಿನ ,ತಿಂಗಳುಗಳು ಕಳೆದವು. ಮಗನ ವ್ಯಾಪಾರದಲ್ಲಿ ಕುಂಠಿತವಾಗುತ್ತಾ ಬಂತು. ಗಾಡಿ, ಕಾರು ಸೈಟು ಎಲ್ಲವನ್ನೂ ಮಾರಿಬಿಟ್ಟ. ಇವೆಲ್ಲವು ಇಲ್ಲವಾದ ಮೇಲೆ ಹೆಂಡತಿ ಗಂಡನೊಡನೆ ಜಗಳಮಾಡಿಕೊಂಡು ಮನೆ ಬಿಟ್ಟು ಹೋದಳು.ಅಗ ನೆನಪಾಗಿದ್ದು ಮಾತ್ರ ಅಮ್ಮ ಅಮ್ಮ ಅಮ್ಮ.ಅವಳಿರುವುದುಯಾವ ಆಶ್ರಮ  ಗೊತ್ತಿಲ್ಲ  ಅಮ್ಮನ ಪೋಟೋ ಹಿಡಿದು ಹುಡುಕುತ್ತಾ ಹೋದ. ಕೊನೆಗೆ ಒಂದು ಆಶ್ರಮದಲ್ಲಿ ಹೇಳಿದರು ನಿಮ್ಮ ತಾಯಿಯನ್ನು ಒಬ್ಬ ವ್ಯಕ್ತಿ ಅವರ ಮನೆಗೆ ಕರೆದೊಯ್ದರು  ಅಂತ. ಅವರ ವಿಳಾಸ ಪಡೆದು ಹೋದ. ಅಲ್ಲಿ ಮನೆಯ ಹತ್ತಿರ ಬಾಗಿಲು ಬಡಿದ ಒಬ್ಬ ವ್ಯಕ್ತಿ ಬಂದು ಬಾಗಿಲು ತೆಗೆದ. ಯಾರು ಬೇಕು ಅಂದ. ಇವನು ಒಳಗೆ ಕಣ್ಣಾಡಿಸಿದ ಒಬ್ಬ  ವಯಸ್ಸಾದ ಮಹಿಳೆ ಬೆಳ್ಳಿ ತಟ್ಟೆ ಯಲ್ಲಿ ಊಟಮಾಡುತ್ತಿದ್ದಳು. ಮನೆಯ ಯಜಮಾನ ಕೇಳಿದ ಯಾರು ಬೇಕಪ್ಪಾ ಅಂತ. ಅವನಿಗೆ ಮಾತು ಬರುತ್ತಿಲ್ಲ, ಓಡಿ ಹೋಗಿ ಅವಳ ಕಾಲಿಗೆ ಬಿದ್ದು ಕ್ಷಮಿಸಮ್ಮ ಎನ್ನುತ್ತಾ ಗೋಳಾಡಿದ. ತಾಯಿಗೆ ಏನೂಂತ ಗೊತ್ತಾಗಲೇ ಇಲ್ಲ. ಆಗ ಮನೆಯ ಯಾಜಮಾನನಿಗೆ ಹೇಳಿದ  ನನ್ನ ತಾಯಿ ಇವರು ಕಳಿಸಿಕೊಡಿ ನನ್ನ ಜೊತೆ ಅಂದ. ಆ ಯಜಮಾನ ಇಲ್ಲಪ್ಪ ಆಗಲ್ಲ, ನನಗೆ ತಂದೆ ತಾಯಿ ಯಾರೂ ಇಲ್ಲ, ಈ ತಾಯಿಯನ್ನುನಾನು ನನ್ನತಾಯಿಯೆಂದು  ಕರೆದು ಕೊಂಡು ಬಂದೆ,  ಈ ಮಹಾತಾಯಿ ಬಂದ ಮೇಲೆ ನನ್ನ ಬದುಕೇ ಬದಲಾಯಿತು,  ಇವತ್ತು ನಾನು ಇಷ್ಟೊಂದು  ಚನ್ನಾಗಿರುವೆ ಕಾರು ಬಂಗಲೆ ಎಲ್ಲವೂ ಈ ತಾಯಿಯ ಕಾಲ್ಗುಣ , ಈಕೆ ದೇವತೆ ನಾನು ಕಳಿಸುವುದಿಲ್ಲ ಅಂದ.   ನಾನು ನನ್ನ ಮನೆಯಲ್ಲಿ ಎಲ್ಲವನ್ನು ಕಳೆದುಕೊಂಡೆ, ಈಗ ನನ್ನ ಹತ್ತಿರ ಏನೂ ಇಲ್ಲ, ನನಗೆ ಏನೂ ಬೇಡ ,ನಾನು ನನ್ನ ತಾಯಿಯ ಸೇವೆ ಮಾಡುತ್ತಾ ಇಲ್ಲಿಯೇ ಇರಬಹುದಾ ಎಂದಾಗ ತಾಯಿ ಮಗನನ್ನು ತಬ್ಬಿಕೊಂಡಳು. ಯಜಮಾನ ಒಪ್ಪಿಕೊಂಡ.ಮಕ್ಕಳನ್ನು  ಹೊತ್ತು ಹೆತ್ತು, ಚಿಕ್ಕಂದಿನಿಂದ ಅವರ ಎಲ್ಲಾ ನಿತ್ಯಕಮ ೯ಗಳನ್ನು  ಸ್ವಚ್ಛ ಮಾಡಿ, ವಯಸ್ಸಿಗೆ ಬರೋ ತನಕ ಸಮಯಕ್ಕೆ ಸರಿಯಾಗಿ  ಊಟ ತಿಂಡಿ, ಬಟ್ಟೆ, ಒಳಿತು ಕೆಡಕು ಎಲ್ಲವನ್ನು ತಾಳ್ಮೆಯಿಂದ ನಿರ್ವಹಿಸಿ ತನ್ನನ್ನು ತಾನು ಸವೆಸಿಕೊಂಡ  ತಾಯಿ ಹೃದಯ ಕ್ಕೆ ಘಾಸಿಮಾಡುವ ಮಕ್ಕಳ ಸಂಖ್ಯೆ ಅತಿಯಾಗಿದೆ. ಇದಕ್ಕೆ ಮುಕ್ತಿ ಇಲ್ಲವೇ? ತಾಯಿ ದೇವರೆನ್ನುವುದು ಸುಳ್ಳಲ್ಲ  ಅಸೆ ಇಲ್ಲದೆ ಮಕ್ಕಳಿಗೋಸ್ಕರ ಬದುಕುವುದೇ ಅವಳು.ಯಾರೂ ತಾಯಿಯನ್ನ ದಿಕ್ಕರಿಸಬೇಡಿ.ಹೆಂಡತಿಯನ್ನು ನಿಮ್ಮಂತೆ ಮಾಡಿಕೊಳ್ಳಿ ಅವಳಂತೆ ನೀವು ಹೋಗಬೇಡಿ. ಹೆಂಡತಿಗೆ ಕೊಡುವ ಪ್ರೀತಿ ಹೆಂಡತಿಗೆ ಕೊಡಿ. ತಾಯಿಗೆ ಕೊಡುವ ಗೌರವ, ಪ್ರೀತಿ, ರಕ್ಷಣೆ ಮಗನೇ ಕೊಡಬೇಕಲ್ಲವೇ ? ಆಗ ಮಾತ್ರ ನೀವುಗಳು ಮಾಡುವ   “”Mothers day”” ಗೆ  ಆಥ೯ವಿದೆ. ವನಜ ಮಹಾಲಿಂಗಯ್ಯ.

“ತಾಯಿ ದೇವರಲ್ಲವೇ?” ಲೇಖನ ವನಜ ಮಹಾಲಿಂಗಯ್ಯ Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ಕೊಡಚಾದ್ರಿ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಕೊಡಚಾದ್ರಿ” ಕೊಡಚಾದ್ರಿ—ನೀನು ಪರ್ವತವಲ್ಲ,ಪ್ರತಿದಿನ ಹೊಸದಾಗಿ ಹುಟ್ಟುವನಿತ್ಯ ಸುಂದರಿ. ಶೋಲಾ ಕಾಡಿನ ಹಸಿರು ಸೀರೆಯಲಿನೀನು ಮೌನವಾಗಿ ನಿಂತಾಗ,ಮೋಡಗಳು ನಿನ್ನ ಕೆನ್ನೆಗೆಮುತ್ತಿಟ್ಟು ಹೋಗುತ್ತವೆ—ನನಗೆ ಮಾತ್ರದೂರದಿಂದ ನೋಡುವ ಹಕ್ಕು. ಹಿಡ್ಲುಮನೆನಿನ್ನ ಕೂದಲ ತುದಿಯಿಂದಜಾರಿ ಬೀಳುವ ನಗುವಿನಂತೆ,ಅದು ನೆಲ ತಾಕುವ ಮುನ್ನವೇನನ್ನ ಮನಸ್ಸು ತಾಕಿನನ್ನನ್ನು ಕರಗಿಸುತ್ತದೆ. ನಿನ್ನ ಹಾದಿಯಲ್ಲಿಜಿಗಣೆ ನನ್ನ ರಕ್ತ ಹೀರುವಾಗ,ನೋವಿಗಿಂತನಿನ್ನ ಹತ್ತಿರ ಇರುವ ಸವಿಹೆಚ್ಚಾಗಿ ಗೊತ್ತಾಗುತ್ತದೆ. ಬೆವರು ದೇಹ ಬಿಟ್ಟುನಿನ್ನ ಮಣ್ಣಲ್ಲಿ ಬೆರೆತಾಗ,ನಾನು ನಿಧಾನವಾಗಿನಿನ್ನೊಳಗೆ ಲೀನವಾಗುತ್ತೇನೆ—ಹೆಸರಿಲ್ಲದೆ,ಆಕಾರವಿಲ್ಲದೆ. ಏರುವೆಡೆಗೆ ಹೆಜ್ಜೆ ಹಾಕುತ್ತಾಉಸಿರು ಕಷ್ಟವಾದಾಗ,ನಿನ್ನ ಗಾಳಿ ಬಂದುಎದೆಯ ಮೇಲೆ ಕೈ ಇಟ್ಟುಹೇಳುತ್ತದೆ—“ನನ್ನನ್ನು ಬಯಸುವುದೂಒಂದು ತಪಸ್ಸೇ”. ಸರ್ವಜ್ಞ ಪೀಠದ ಬಳಿನೀನು ಶಾಂತಳಾಗುತ್ತೀಯ,ಅಲ್ಲಿನನ್ನ ಆಸೆಗಳು ಕೂಡತಲೆಯೊಗ್ಗಿ ಕುಳಿತುಕೊಳ್ಳುತ್ತವೆ. ಚಿತ್ರಮೂಲದ ಮೌನದಲ್ಲಿನಿನ್ನ ಕಣ್ಣು ಮಿಟುಕಿದಂತೆಒಂದು ಸಂಕೆತ,ಅದು ನನ್ನೊಳಗೆಹುಟ್ಟು–ಸಾವು ಎರಡನ್ನೂಒಂದೇ ಕ್ಷಣದಲ್ಲಿ ಕಲಿಸುತ್ತದೆ. ಸೂರ್ಯಾಸ್ತದ ಹೊತ್ತಿಗೆನೀನು ಕೆಂಪಾಗಿ ನಾಚಿದಾಗ,ಅರಬ್ಬೀ ಸಮುದ್ರವೂನಿನ್ನ ಸೌಂದರ್ಯಕ್ಕೆಅಲೆಗಳನ್ನೇ ಮರೆತು ನಿಂತುಬಿಡುತ್ತದೆ. ಕೊಡಚಾದ್ರಿ—ನಿನ್ನನ್ನು ಏರುವುದುಚಾರಣವಲ್ಲ,ನಿನ್ನೊಳಗೆ ಕಳೆದುಕೊಳ್ಳುವಪ್ರೇಮಯಾನ. ನೀನು ಆಧ್ಯಾತ್ಮ,ನೀನು ಆಕಾಂಕ್ಷೆ,ನೀನು ಶಿಖರ,ನೀನು ಶೃಂಗಾರ. ಒಂದು ದಿನನಾನು ಸಂಪೂರ್ಣವಾಗಿನಿನ್ನೊಳಗೆ ಲೀನವಾದರೆ—ಅಂದುನಾನು ಮಾನವನಲ್ಲ,ನಿನ್ನ ಮೌನದಒಂದು ಉಸಿರಾಗಿಬಿಡುತ್ತೇನೆ. ಅಷ್ಟೇ ಸಾಕು. ಡಾ. ಹೆಚ್. ನಟರಾಜ್ ಆರ್ಯ  

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ಕೊಡಚಾದ್ರಿ” Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ”ಸಂಗಾತಿ”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಸಂಗಾತಿ” ಸಂಗಾತಿ ನಿನ್ನ ನಗುವೇ ನನ್ನ ಬೆಳಗಿನಸೂರ್ಯನುನಿನ್ನ ಮಾತುಗಳೆ ನನ್ನ ಹೃದಯಕೆ ನುಡಿಸಿದಂತೆಸಪ್ತ ಸ್ವರಗಳನು ಆ ನಿನ್ನ ಕಣ್ಣುಗಳಲ್ಲಿ ಅಡಗಿರುವ ಲೆಕ್ಕಕೆಸಿಗದ ಕನಸುಗಳುಕತ್ತಲೆಯೆ ಕವಿದಿಹ ನನ್ನ ಬದುಕಿಗೆ ದಾರಿದೀಪವಾಗಿವೆ ನೀನು ಜೊತೆಯಾದ ಪ್ರತಿ ಕ್ಷಣವೂಕಾಲವೂ ಮೌನವಾಗಿ ನಿಂತಿದೆನಿನ್ನ ಸ್ಪರ್ಶದ ಹಿತದಲ್ಲಿ ಎಲ್ಲ ನೋವುಗಳುಕರಗಿ ಹೋಗಿವೆ ಈ ಜನ್ಮವಷ್ಟೇ ಅಲ್ಲ ಎಲ್ಲಾ ಜನ್ಮಗಳಲ್ಲೂನೀನೆ ಸಂಗಾತಿಯಾಗಿರುನನ್ನ ಪ್ರೀತಿಗೆ ಉಸಿರಾಗಿರು ಆ ಪ್ರೀತಿಯಹೆಸರೆ ನೀನಾಗಿರು ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ”ಸಂಗಾತಿ” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರ ಕವಿತೆ “ಪ್ರಕೃತಿ ಚಮತ್ಕಾರ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಪ್ರಕೃತಿ ಚಮತ್ಕಾರ” ಕತ್ತಲನು ಓಡಿಸಿ…ಮುಂಜಾನೆಯ ತೇರಲಿ,ಸೂರ್ಯ ಏರಿ ಬಂದ ಬಾನಲಿ,ಬೆಳಕು ಬೀರುತ್ತ ಕಿರು ನಗೆಯಲಿ,! ಭುವಿಯ ಬೆಳಕಾಗಿಸಿ…ಖುಷಿ ತಂದಿತು ಜನಮನದಲಿ,ಸಂತಸ ಎಲ್ಲೆಡೆಯು ಸಂಭ್ರಮದಲಿ,ಚಿಲಿಪಿಲಿ ಹಕ್ಕಿಗಳು ಹಾಡ ಇಂಪಿನಲಿ,! ತಂಪು ಶೀತಲ ಗಾಳಿಗೆ…ಮೈ ಪುಳಕಿತಗೊಂಡ ತನುಮನಬೀಸಿದ ತಂಗಾಳಿಗೆ ರೋಮಾಂಚನಮರ ಗಿಡಗಳ ಸ್ವಾಗತದ ನಿತ್ಯ ನರ್ತನ,! ಮತ್ತೆ ಕತ್ತಲಾಗಿಸಿ…ಸೂರ್ಯ ಪಶ್ಚಿಮಕ್ಕೆ ಜಾರಿದ,ಕೆಂಪು ಬಾನಲಿ ಬೆಂಕಿಯ ಚೆಂಡಾದ,ರಸಿಕರ ಕಣ್ಗಳ ಆನಂದಿಸಿ ಮರೆಯಾದ,! ಕರಿ ಬಾನಿನುದ್ದಕ್ಕೂ….ಮಿನುಗು ತಾರೆಗಳ ಆಲಂಕಾರ,ಬೆಳದಿಂಗಳ ಚಂದ್ರನ ಪೂರ್ಣ ಆಕಾರಪ್ರಕೃತಿ ಮಡಿಲಿಗೆ ಬೆಳಕು ಮತ್ತೆ ಚಮತ್ಕಾರ.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಅವರ ಕವಿತೆ “ಪ್ರಕೃತಿ ಚಮತ್ಕಾರ” Read Post »

You cannot copy content of this page

Scroll to Top