ಜಯಶ್ರೀ ಭ ಭಂಡಾರಿಯವರ ಗಜಲ್
ಕಾವಚ್ಯ ಸಂಗಾತಿ ಹಳ್ಳಿಯ ಜೀವನ ಒಗ್ಗಟ್ಟಿನ ಒಲುಮೆಯ ಒರತೆಯಲ್ಲವೆಹಳ್ಳದ ದಂಡೆಯಲಿ ಕುಳಿತು ಸವಿಜೇನ ತುತ್ತು ಕೊಟ್ಟಿರುವೆಯಲ್ಲ ನೀನು ಮಲೆನಾಡಿನ ಸುಂದರ ಹಸಿರಿನ ವನಸಿರಿಯು ಬಣ್ಣನೆಗೆ ನಿಲುಕದಲ್ಲಾಅಲೆದಾಡುತ ಗದ್ದೆಯಲಿ ಬಣ್ಣದ ಉಡುಗೆಯ ತೊಟ್ಟಿರುವೆಯಲ್ಲ ನೀನು ಉಟ್ಟ ಸೀರೆಯಲಿ ಹೊರ ಬಂದರೂ ಬೇಸರಿಸದೆ ಸಲಹುತಿಹೆಯಲ್ಲ.ದಟ್ಟ ಇರುಳನು ಲೆಕ್ಕಿಸದೆ ಜೊತೆಯಲಿ ದಿಟ್ಟ ಹೆಜ್ಜೆಯ ಇಟ್ಟಿರುವೆಯಲ್ಲ ನೀನು ತೂತಿನ ಮಾಳಿಗೆ ಬೆಳಕಿನಲಿ ಜಯಾ ತಾರೆಗಳ ಹೊಳಪನು ಕಣ್ತುಂಬಿಕೊಳುವಳುತೊತ್ತಿನ ಚೀಲ ಹೊರೆಯಲು ಹೊಂಗನಸು ಹೊಸೆಯುದ ಬಿಟ್ಟಿರುವೆಯಲ್ಲ ನೀನು. ಜಯಶ್ರೀ ಭ ಭಂಡಾರಿ.
ಜಯಶ್ರೀ ಭ ಭಂಡಾರಿಯವರ ಗಜಲ್ Read Post »









