ಡಾ.ಬಸಮ್ಮ ಗಂಗನಳ್ಳಿ ಕವಿತೆ-ಭಾವ ಋಣ
ಕಾವ್ಯ ಸಂಗಾತಿ ಡಾ.ಬಸಮ್ಮ ಗಂಗನಳ್ಳಿ ಭಾವ ಋಣ ಯಾವ ಜನುಮದ ನಂಟೋಇನ್ನಾವ ಸೆಳೆತವೋ ತಿಳಿಯದುಎಲ್ಲಿಯ ಋಣಾನುಬಂಧವೋಮತ್ತಾವ ಭಾವ ಬಂಧನವೋಕರೆಯುತಿದೆ ಮುರಲಿಯ ಗಾನ…. ಎಂದೂ ಕಾಣದ ಆನಂದವುಎಲ್ಲ ಜನುಮಕೂ ಸಾಗಲಿಮತ್ತೆ ಕೋಗಿಲೆಯ ಸ್ವರವುಹೊಸವರುಷದ ಚಿಗುರನುಕಾದು ಮೆಲುವ ಮಾಗಿದಸವಿಯು… ಗಂಧ ತೀಡಿದಷ್ಟು ಕಂಪುಪಸರಿಸುವಂತೆ ಬದುಕುಸವೆದಷ್ಟೂ ಹಿತವಿರಬೇಕುಸ್ನಹಿತವಿಲ್ಲದ ಸ್ಹೇಹ ಸುಂದರಪ್ರೀತಿಯ ಸುಳಿಗಾಳಿ ಸೂಸಲಿನಿರಂತರ.. ನಾನು ನೀನೆಂಬ ಭಾವವಳಿದುಸಮತೆ ಸಮನ್ವಯ ಬರಲಿಸಹನೆ ಶಾಂತಿಯಿಂದ ಗೆಲುವುಇರಲಿ ಒಂದಿಷ್ಟು ಅಂತಃಕರುಣೆಮನೆ ಮನಗಳು ಮೇಳವಿಸಿಪ್ರೇಮಗಾನವು.. ಈ ಬದುಕಿನ ಜಂಜಡದಿಅಡಗಿರುವ ಸಮರಸವುಎಷ್ಟು ಸುಂದರ, ಸುಮಧುರಆಳಕಿಳಿದಾಗಲೇ ಅಲ್ಲವೇ?ಅಂತರಂಗದ ನಿಶ್ಯಬ್ದದಅಲೆಗಳುಲಿವು.. ಸರಸ ವಿರಸದ ಬಾಳಿನಲಿಸಮರಸದ ನವನೀತವಿದೆಕಡೆದು ತೆಗೆಯಬೇಕದನುಭಾವನೆಯ ಹುಡುಕಾಟದಲಿಇಹುದೊಂದು ಅರ್ಥವು ನಿಜದರಿವು… ಡಾ.ಬಸಮ್ಮ ಗಂಗನಳ್ಳಿ
ಡಾ.ಬಸಮ್ಮ ಗಂಗನಳ್ಳಿ ಕವಿತೆ-ಭಾವ ಋಣ Read Post »









