ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ ಮೀನಾಕ್ಷಿ ಪಾಟೀಲರ ಕವಿತೆ-ಬಣ್ಣದ ಪಂಜರ

ಸಹನೆ ಕರುಣೆ ತಾಳ್ಮೆ
ಸುಶೀಲ ಮಮತೆ ಸನ್ನಡತೆ
ವಿಶೇಷಣಗಳ ಸಿಂಗಾರ
ಚಿನ್ನದ ಬಲೆಗೊಂದು ಚಿತ್ತಾರ ಮೂಡಿಸಿ
ಬಣ್ಣದ ಪಂಜರದಲ್ಲಿ ಬಂಧಿಸಿದರು

ಸುಳ್ಳನ್ನೇ ಸತ್ಯವೆಂದು ನಂಬಿಸಿ
ಶೀಲದ ಪರಿಕಲ್ಪನೆಯಲಿ
ಉದಾತ್ತ ಗುಣಗಳ ಆರೋಪಿಸಿ
ಪರಮೋಚ್ಚ ಬದುಕು ಇದೆಂದು
ಬುರುಡೆ ಬಿಟ್ಟವರು

ಉಸಿರು ಗಟ್ಟುವ ಸಂಯೋಗದಿ
ಮೌನವೇ ಒಪ್ಪಿಗೆ
ಎಂದು ಭ್ರಮಿಸಿ
ಭಾವನೆಗಳ ಮೇಲೆ ಸವಾರಿ ಮಾಡಿ
ಮಖಾಡ ತೊಡಿಸಿದವರು

ಗಟ್ಟಿಮನಸ್ಸಿನ ದಿಟ್ಟ ನಿರ್ಧಾರವ
ಸಡಿಲಗೊಳಿಸಲು ಬಗೆ ಬಗೆಯ ತಂತ್ರ
ಆಸೆ ಆಮಿಷದ ಮೆರವಣಿಗೆ
ಒಣ ಸಿದ್ದಾಂತಗಳ ಮನಸ್ಸಿಗೆ ಲೇಪಿಸಿ
ಮಸುಕಾಗಿಸುವರು

ಹಣೆಗೆ ತಿಲಕವಿಟ್ಟವರನ್ನು
ಚಿತೆಗೇರಿಸುವ ಹೃದಯಹೀನರು
ಯುದ್ಧಗೆದ್ದವನಿಗೆ
ಸೋಲುಂಡವನ
ಮಡದಿಯ ಮೇಲೆ ಮೋಹ

ಸಾಕಿನ್ನು ದುರಾಚಾರ ದುರಾಕ್ರಮಣ
ನಿರಾಕರಿಸಬೇಕಿದೆ ಬಿರುದು ಬಾವಲಿಗಳ
ಧಿಕ್ಕರಿಸಬೇಕಿದೆ
ವಂದಿ ಮಾಗಧರ
ಬಹುಪರಾಕುಗಳ

ನಿಲ್ಲಬೇಕಿದೆ ಅಪಚಾರ
ಎಷ್ಟಂತ ಅವಿತುಕೊಂಡಿರುವುದು
ಗೋಡೆಗಳ ಮಧ್ಯೆ
ಇಣುಕಿಣುಕಿ ದಿನ ದೂಡುವುದು
ಕತ್ತಲೆಯ ಕೂಪದಲಿ

ನಲುಗಿ ಹೋಗಿರುವರು ಕಣ್ಣಳತೆಯಲಿ
ಮಥುರ ಇರೋಮ ಶರ್ಮಿಳ
ಭನವಾರಿ ಮತ್ಯಾರೋ …..
ಅಳಿಸಬೇಕಿದೆ ನೋವುಂಡವರ ಕಥೆಗಳ
ಬರೆಯಬೇಕಿದೆ ಗೌರವ ಆದರಗಳ ಹೊಸ ಪರ್ವವನ್ನ

ಆದರಿಸಬೇಕು ಅಸ್ತಿತ್ವ ನೆಲೆಯೂರಲು
ನೆರವಾದ ಊರುಗೋಲನ್ನ
ಕಣ್ಣೊರೆಸುವ ಕೈಗಳನ್ನ
ಸಾಂತ್ವಾನ ನುಡಿದ ಮಾತುಗಳನ್ನು
ಗಾಯ ಸವರಿದ ಬೆರಳುಗಳನ್ನು

ದಟ್ಟ ಕಾಡುಗಳ ಮಧ್ಯೆ
ಕಿರಣ ಸೋಂಕಿಸಲು ಸೆಣಸಾಡುವ
ಸೂರ್ಯನಂತೆ
ಭರವಸೆಯ ಬೆಳಕೊಂದು
ಮೂಡಿತು ಮುಂದೆ…,..

ಡಾ ಮೀನಾಕ್ಷಿ ಪಾಟೀಲ

ಡಾ ಮೀನಾಕ್ಷಿ ಪಾಟೀಲರ ಕವಿತೆ-ಬಣ್ಣದ ಪಂಜರ Read Post »

ಕಾವ್ಯಯಾನ

ಡಾ.ಜಿ.ಪಿ.ಕುಸುಮಾ ಮುಂಬಯಿ ಕವಿತೆ-ಕತ್ತರಿಸಿ ಬಿಟ್ಟ ಬಳ್ಳಿ

ಯಾಕೆ ಮುಂದಾಗುತ್ತಿಲ್ಲ ಗೆಳೆಯ
ಕಡಲ ಮಧ್ಯೆ ಬದುಕಬೇಕೆನ್ನುವ
ಆಸೆಯೊಂದು ಯಾಕೆ
ಬಲಿಯುತ್ತಿದೆ

ಡಾ.ಜಿ.ಪಿ.ಕುಸುಮಾ

ಡಾ.ಜಿ.ಪಿ.ಕುಸುಮಾ ಮುಂಬಯಿ ಕವಿತೆ-ಕತ್ತರಿಸಿ ಬಿಟ್ಟ ಬಳ್ಳಿ Read Post »

ಕಾವ್ಯಯಾನ

ಕವಿತಾ ವಿರೂಪಾಕ್ಷ ಅವರ ಕವಿತೆ-‘ನಾವುಹೆಂಗಸರೇ ಹೀಗೆ…!!’

ಹೆಂಚಿನ ಮೇಲಿನ
ಬಿಸಿ ರೊಟ್ಟಿಯ ರುಚಿ
ಚಿಕ್ಕಂದಿನಲ್ಲಿ ಆವ್ವಗೋಳು ತಿನಿಸಿದ್ದಷ್ಟೇ  ಗೊತ್ತು..!

ಕಾವ್ಯಸಂಗಾತಿ

ಕವಿತಾ ವಿರೂಪಾಕ್ಷ

‘ನಾವುಹೆಂಗಸರೇ ಹೀಗೆ…!!’

ಕವಿತಾ ವಿರೂಪಾಕ್ಷ ಅವರ ಕವಿತೆ-‘ನಾವುಹೆಂಗಸರೇ ಹೀಗೆ…!!’ Read Post »

ಕಾವ್ಯಯಾನ

ವೈ.ಎಂ.ಯಾಕೊಳ್ಳಿಯವರ ಕವಿತೆ-ಬಿಸಿಲಿಗೂ ನಿಮಗೂ ನಮಸ್ಕಾರ

ಅಣ್ಣ ತಮ್ಮ ಬಿಸಿಲಲ್ಲೆ
ಅವರಿವರ ಮನೆಯ
ಮುಂದೆ ನಿಂತು
ಬಿಕ್ಕೆ ಬೇಡಿದರು

ವೈ.ಎಂ.ಯಾಕೊಳ್ಳಿ

ವೈ.ಎಂ.ಯಾಕೊಳ್ಳಿಯವರ ಕವಿತೆ-ಬಿಸಿಲಿಗೂ ನಿಮಗೂ ನಮಸ್ಕಾರ Read Post »

ಕಾವ್ಯಯಾನ

ಇಂದಿರಾ ಮೋಟೆಬೆನ್ನೂರ ಕವಿತೆ-ಮುಗುಳು ಮಲ್ಲಿಗೆ

ಮುಗುಳುನಗೆ ಮಲ್ಲಿಗೆ
ಬಿರಿಯಬಾರದೇ ಒಮ್ಮೆ…
ನನ್ನ ಹೃದಯದ ಪುಟ್ಟ
ತೋಟದ ಹೂವಾಗು ಒಮ್ಮೆ

ಇಂದಿರಾ ಮೋಟೆಬೆನ್ನೂರ ಕವಿತೆ-ಮುಗುಳು ಮಲ್ಲಿಗೆ Read Post »

ಕಾವ್ಯಯಾನ

“ಮತ್ತೆವಸಂತ” ಸುಮಶ್ರೀನಿವಾಸ್ ಅವರ ಕವಿತೆ

ಮುಂಬರುವ ಭಾಗ್ಯಕ್ಕೆ
ಮೊಗದಲ್ಲಿ ನಗುವೆಂದು
ನಡೆದ ಹೆಜ್ಜೆ ತಲುಪಿದ್ದು
ಅನ್ನಪೂರ್ಣೆಯ ಸನಿಹ

ಸುಮಶ್ರೀನಿವಾಸ್

“ಮತ್ತೆವಸಂತ” ಸುಮಶ್ರೀನಿವಾಸ್ ಅವರ ಕವಿತೆ Read Post »

ಕಾವ್ಯಯಾನ

ನಾಗೊಂಡಹಳ್ಳಿ ಸುನಿಲ್ ಅವರ ಕವಿತೆ-ನಾನೂ ಮರೆತೆ , ನೀನೂ ಮರೆತೆ

ಅನುಕ್ಷಣ ಕವಿತೆಗಳು ಜೀವ ಪಡೆಯುತ್ತಿವೆ
ನಿನ್ನೊಂದಿಗಿನ ತನು ಮನದ ಇಂಗಿತಗಳು
ಇನ್ನೂ ಎದೆಯ ಹೆಬ್ಬಾಗಿಲಲ್ಲೇ ಬಿಕ್ಕುತ್ತಿವೆ.

ಕಾವ್ಯ ಸಂಗಾತಿ

ನಾಗೊಂಡಹಳ್ಳಿ ಸುನಿಲ್

ನಾಗೊಂಡಹಳ್ಳಿ ಸುನಿಲ್ ಅವರ ಕವಿತೆ-ನಾನೂ ಮರೆತೆ , ನೀನೂ ಮರೆತೆ Read Post »

You cannot copy content of this page

Scroll to Top