“ಯಾರೇ ನೀ ಅಭಿಮಾನಿ?”ತಾತಪ್ಪ.ಕೆ.ಉತ್ತಂಗಿ
ಕಾವ್ಯ ಸಂಗಾತಿ ತಾತಪ್ಪ.ಕೆ.ಉತ್ತಂಗಿ “ಯಾರೇ ನೀ ಅಭಿಮಾನಿ?” ಅವಳೊಳಗಿನ ಇನಿಯಳುನೋಡುವಳು…ನೋಡುತ್ತಲೇ ಇರುವವಳುರನ್ನಗೆನ್ನೆಯ ಸನ್ನೆಯಿಂದಲೇಸವಿದೂರದಲ್ಲಿ ನಿಲ್ಲುವಳು.ನೋಡಿದರೆ ,ಕಣ್ರೆಪ್ಪೆಗಳು ಕದಲಿದರೆನಿಂತು ಕುಂತು ನಾಚಿತನಿಪನಿಯಂತೆ ನೀರಾಗುವಳು…. ಮತ್ತೊಮ್ಮೆ…….ಒಳಗಿನ ಇಂಪುಕಂಪಿನನೆನಪಿನ ಕೂಗಿಗೆಧ್ವನಿಯ ಇಂಚರವಾಗುವಳು.ಪ್ರೇಮದವರತೆಯ ಅವಲೋಕಿಸಿದ ಅವಲೋಕಿನಿಯಂತೆ,ಅಬ್ಬರಿಸಿ, ಹುಬ್ಬೇರಿಸಿರಮ್ಯಖುಷಿಗೈಯುವಳು ಹಿತಮಿತ ಪಯಣವನ್ನೇಹಿಗ್ಗಿಸಿ ಕುಗ್ಗಿಸಿ ಒಗ್ಗಿಸಿ ಜಗ್ಗಿಸಿರಾಗಿಣಿಯಂತೆ ಅನುರಾಗಿಸುವಅರೆದ್ವಂದ್ವದ ಅರ್ತಿಯ ಅರಗಿಣಿಯಾಗುವಳು…ಏಕಾಂತದಲ್ಲಿಯೂ ಕಾಂತಧ್ಯಾನಸ್ಥೆಯಾಗಿ,ವಿರಾಗಿಣಿ ಊರ್ಮಿಳೆಯಂತೆ.ಪ್ರೇಮದಿಂದ ರಾಮನನ್ನು ಆರಾಧಿಸುವ ಜಾನಕಿಯಂತೆಸದಾ ಜೊತೆಯಾಗಿರುವಅಂಟಿದ ನಂಟಿನ ನವತಾರೆಯಿವಳು ಚಿಕ್ಕ ಚಿಕ್ಕ ಸಂಗತಿಗಳಿಗೆಸದಾ ಸಂಗಾತಿಯಾಗಿಶುದ್ಧ ಸಂಭ್ರಮೆಯಾಗಿಗೆದ್ದಾಗ ಗೆಲುವಿಗೆಕೇಕೆ ಹಾಕಿ,ಸೋತಾಗ ಸಾಂತ್ವನಕ್ಕೆಸಖಿಯಾಗಿ ಜೊತೆಯಾಗಿಬಿಗಿದಪ್ಪಿ ಬಿಕ್ಕಿದವಳು. ಕಂಡರೂ ಕಾಣದಿದ್ದರೂಸದ್ದಿನ ಚಪ್ಪಾಳೆಗಳ ಸುರಿಮಳೆಗೈಯವಳು.ಅರೆತೆರೆಮರೆಯಲ್ಲಿದ್ದರೂಕಾವಲಿನ ಕಾಯದವಳುಕಾಳಜಿಯ ಕರುಣೆಯವಳು.ಹೇ ಮಧುರಪ್ರೇಮದ ಸಾಕಿಏನೇ ನಿನ್ನ ಉಸಿರಿನ ಹೆಸರು.. *ಯಾರೇ ನೀ ಅಭಿಮಾನಿ?*ಜಗವೇ ಮೆಚ್ಚುವ ಮಾನಿನಿ. ——— ತಾತಪ್ಪ.ಕೆ.ಉತ್ತಂಗಿ
“ಯಾರೇ ನೀ ಅಭಿಮಾನಿ?”ತಾತಪ್ಪ.ಕೆ.ಉತ್ತಂಗಿ Read Post »









