ಇಮಾಮ್ ಮದ್ಗಾರ “ಬಾಡದಿರಲಿ ಅನ್ನದಾತನ ಮುಖದ ಕಾಂತಿ”
ಕಾವ್ಯ ಸಂಗಾತಿ ಇಮಾಮ್ ಮದ್ಗಾರ “ಬಾಡದಿರಲಿ ಅನ್ನದಾತನ ಮುಖದ ಕಾಂತಿ” ಮೈ ನಡುಗುವ ತಂಪುಗಾಳಿಯುಕಂಪ ಸೂಸುತ್ತಿತ್ತು ಅದು…ನೀ ಮುಡಿದ ದುಂಡುಮಲ್ಲಿಗೆ ಘಮವೆಂದು ಮನಸು ಹೇಳುತ್ತಿತ್ತು. ಹಚ್ಚಹಸುರಿನ ಪಚ್ಚೆಪೈರಿನಬೆಳೆಯ ನೋಡುತ ಕೋಗಿಲೆಕೂಗುತ್ತಿತ್ತು. ಬರುವ ಸಂಕ್ರಾಂತಿಮುದತರಲಿ ರೈತರಿಗೆ ಎಂದು ಹಾಡುತ್ತಿತ್ತು. ಉಡಿತುಂಬಿದ ಧರೆಮುಡಿಗೇರಿದ ಫಸಲುಮುತ್ತಿಕ್ಕುವ ಚಳಿ ತಾ….ಮುನುಗುತ್ತಾ ಸುಗ್ಗಿಯಹಾಡಗುನುಗುತ್ತಾ.ಬರುವ ಸಂಕ್ರಾಂತಿಯಲಿ ಹಸನಾಗಿರಲಿ ಅನ್ನದಾತನ ಬದುಕುಎಂದು ದೇವರ ಬೇಡುತ್ತಿತ್ತು. ತಳಿರು ತೋರಣ ಕಟ್ಟುತಚಾಮರ ಬೀಸಿದೆ ಮಾಮರ.ಕರಗದಿರಲಿ ಅನ್ನದಾತನ ಕನಸುಈ ವರುಷ ಬರದೇ ಇರಲಿ ಬರ. ಹಸನಾಗಿರಲಿ ಅನ್ನದಾತನ ಮನಸುಹರಿದೋಗಿ ಬಿಡಲಿ ಈ ವರುಷ.ಸಾಲ ಸಾಲದ ಬಡ್ಡಿಮತ್ತೆಂದೂ ಕಾಡದಿರಲಿ ಸಾಲದ ಕನಸು. ಆ ಪಥ ಬದಲಿಸಿ ಈ ಪಥದಲಿಚಲಿಸಿ.ಆ ರಾಶಿ ಈ ರಾಶಿಯಲಿ ಸಾಗಿಕತ್ತೆ.ಕಪ್ಪೆ.ಗೋವು.ಮಾವುಯಾವುದೇ ವಾಹನ ಏರುಮಡಿವಾಳರ ಮನೆಯಲ್ಲೇ ವಾಸವಿರು ಮಡಿಯುಳ್ಳವರ ಮನೆಯಲ್ಲೇ ಮಲಗು ಒಟ್ಟಾರೆ ಅನ್ನದಾತನ ಮನೆಯಲ್ಲಿ ಅನವರತವಾಗಿರಲು ಬಂದುಬಿಡುಸಂಕ್ರಾಂತಿ ಬಾಡದಿರಲಿಅನ್ನದಾತನ ಮುಖದ ಕಾಂತಿ ಇಮಾಮ್ ಮದ್ಗಾರ
ಇಮಾಮ್ ಮದ್ಗಾರ “ಬಾಡದಿರಲಿ ಅನ್ನದಾತನ ಮುಖದ ಕಾಂತಿ” Read Post »









