ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ
ಅಂಗ ಸಂಗದಾನಂದಕೆ ಹಾತೊರೆವ ಅಂಗನೆ ನಾನಲ್ಲ
ಕ್ಷಣಿಕ ಸುಖದಾತುರಗೆ ಮೈಮರೆವ ಅಂಗನೆ ನಾನಲ್ಲ
ಭವಬಂಧದೆ ಮೊರೆವ ಭವಸಾಗರವ ದಾಟಲೆಬೇಕಲ್ಲವೇ
ಮೋಹ ಸರಸಸಲ್ಲಾಪಕೆ ಮರುಳಾಗುವ ಅಂಗನೆ ನಾನಲ್ಲ
ಕಾರಣ ಗೊತ್ತಿಲ್ಲದೆ ಹುಟ್ಟಿ ಬಂದಿರುವೆ ಮನುಜ ಕುಲದೆ
ಹುರುಳಿಲ್ಲದ ಪ್ರೇಮದಾಲಾಪದೆ ಪವಡಿಸುವ ಅಂಗನೆ ನಾನಲ್ಲ
ಸಾಕೆನುವ ಭಾವವನೇ ಸಲಹುತ ಜೀವ ಸವಸಿದವಳು
ಪ್ರಣಯದಾಟದಲೆ ಹೊರಳಾಡುವ ಅಂಗನೆ ನಾನಲ್ಲ
ಅನುಳು ಅರ್ಥವಿಲ್ಲದ ಬಯಕೆಗಳ ಬೆನ್ನತ್ತಿ ಸಾಗಲಾರಳು
ಆತ್ಮಸಂಗಾತನ ಅನುರಕ್ತಿಯ ಕೆಣಕುವ ಅಂಗನೆ ನಾನಲ್ಲ
ಡಾ ಅನ್ನಪೂರ್ಣ ಹಿರೇಮಠ
ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ Read Post »









