ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಝಲ್

ಮಾಲತಿ ಹೆಗಡೆ ಇಳೆಯ ಕೊಳೆಯನು ತೊಳೆದು ಹರಸಿದೆ ಮುಂಗಾರು ಮಳೆಕಂಗೆಟ್ಟ ರೈತರ ಕಣ್ಣಲ್ಲಿ ಕನಸು ಬಿತ್ತುತ್ತದೆ ಮುಂಗಾರು ಮಳೆ‌‌ ಬಿರು ಬಿಸಿಲ ಕಡು ತಾಪದಲಿ ಬೆಂದಿವೆ ಜೀವಕೋಟಿಎಲ್ಲರ ಬಾಳಿಗೆ ಭರವಸೆಯಾಗಿ ಬೀಳುತ್ತದೆ ಮುಂಗಾರು ಮಳೆ ಕಾದು ಕಾದು ಬಿರಿದ ಭುವಿಯ ತಣಿಸಲು ಬೇಕು ವರ್ಷಧಾರೆಮಣ್ಣಿನಲಿ ಅವಿತ ಬೀಜವ ಮೊಳೆಯಿಸುತ್ತದೆ ಮುಂಗಾರು ಮಳೆ ಕರಿಮುಗಿಲು ಕರಕರಗಿ ಹನಿ ಮುತ್ತಾಗಿ ಬೀಳುವುದೇ ಸೊಗಎಷ್ಟೇ ಅಬ್ಬರಿಸಿ ಬೊಬ್ಬಿದರೂ ಹಿತನಿಸುತ್ತದೆ ಮುಂಗಾರು ಮಳೆ ಮಾಲತಿಯ ಮನದಲ್ಲಿ ತುಂಬಿತ್ತು ಸಾವು ನೋವಿನ ಭೀತಿಹೊಸ ಹಸುರ ಹುಟ್ಟಿನ ಹರುಷ ಹಂಚುತ್ತದೆ ಮುಂಗಾರು ಮಳೆ ************

ಗಝಲ್ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ನೂರ್ ಸಾಘರ್ ಹಾದಿಗಳಿಂದ ಹಾದಿಗಳು ಹಾಯಿದಷ್ಟು ಕೈಮರಗಳಿವೆ ಇಲ್ಲಿ ಸಖಿಬೀದಿಗಳಿಂದ ಬೀದಿಗೆ ಬದುಕುಗಳು ಬೆತ್ತಲಾಗಿವೆ ಇಲ್ಲಿ ಸಖಿ ಜಗದ ಒಡಲು ಮನದ ಕಡಲುತಟ್ಟದಿದ್ದರೂ ಮುಟ್ಟದಿದ್ದರೂ ಔರ್ವ ಸ್ಪರ್ಶದಲೆಗಳಿವೆ ಇಲ್ಲಿ ಸಖಿ ಒಂದೇ ಒಂದು ಮಾತಿನ ಶಬ್ದಗಳು ಬಯಲಲಿ ಬಯಲಾಯಿತುಅರಿತು ಅರಿಯದ ಮರೆತು ಮರೆಯದ ಪುರಾವೆಗಳಿವೆ ಇಲ್ಲಿ ಸಖಿ ಬಾಳು ಬಿಕ್ಕಳಿಕೆಯ ಕಥೆಗಳಿವೆ ನೂರಾರು ಅನಾಥದ್ದು ಅನಾತ್ಮದ್ದು ಇನ್ನು…ತಡೆದರೂ ತಡೆಯದ ಪಡೆದರೂ ಪಡೆಯದ ನೋವುಗಳಿವೆ ಇಲ್ಲಿ ಸಖಿ ಕದವಿಲ್ಲದ ಎದೆಯನು ಪದಗಳಿಂದ ಆವರಿಸಲಾಗದುತಬಿದ ತಬ್ಬದ ಬಾಹುಗಳನು ಕಲ್ಪಿಸಲು ಖಾಲಿ ಕನಸುಗಳಿವೆ ಇಲ್ಲಿ ಸಖಿ *************

ಗಝಲ್ Read Post »

ಕಾವ್ಯಯಾನ, ಗಝಲ್

ಹೇಳದೇ ಹೋಗದಿರು

ಗಝಲ್ ಶ್ರೀದೇವಿ ಕೆರೆಮನೆ ಅದೆಷ್ಟೊ ಶತಮಾನಗಳಿಂದ ಕಾದಿರುವೆ ಹೇಳದೇ ಹೋಗದಿರುನೀ ಬರುವ ಹಾದಿಗೆ ಕಣ್ಣು ಕೀಲಿಸಿರುವೆ ಹೇಳದೇ ಹೋಗದಿರು ಬರಿದೆ ಮತ್ತೇರದಿರು ಸುರೆಗೆಲ್ಲಿದೆ ನಿನ್ನ ಮರೆಸುವ ತಾಕತ್ತುದೇಹದ ಬಟ್ಟಲಿಗೆ ಮದಿರೆ ತುಂಬಿಸಿರುವೆ ಹೇಳದೇ ಹೋಗದಿರು ಹಗಲಿರುಳೂ ಮತ್ತೇನೂ ಇಲ್ಲ ನಿನ್ನದೇ ಧ್ಯಾನ‌ದ ಹೊರತಾಗಿತಲಬಾಗಿಲ ಮೆಟ್ಟಿಲಲಿ ಕಾದು ಕುಳಿತಿರುವೆ ಹೇಳದೇ ಹೋಗದಿರು ಜೋಡಿಮಂಚದ ಬದಿಯಲ್ಲಿ ಹಚ್ಚಿಟ್ಟ ದೀಪದ ಎಣ್ಣೆ ತೀರಿದೆದೇವರ ಗೂಡಿಂದ ಹಣತೆಯೊಂದ ತರುವೆ ಹೇಳದೇ ಹೋಗದಿರು ವಿರಹ ತುಂಬಿದ ರಾತ್ರಿ ನಿದ್ದೆಯಿರದೆ ಬಲು ದೀರ್ಘವಾಗುವುದಂತೆಜೋಗುಳ ಹಾಡಿ ಮಡಿಲೊಳಗೆ ಮಲಗಿಸುವೆ ಹೇಳದೆ ಹೋಗದಿರು ಕಾಸಿದ ತುಪ್ಪವಿದೆ ಜೊತೆಗೆ ನಾನೆ ಮಾಡಿದ ಘಮಗುಡುವ ಹೋಳಿಗೆಮಧುರಾತ್ರಿಗೂ ಮುನ್ನ ಮೃಷ್ಟಾನ್ನ ಸಿದ್ಧಪಡಿಸುವೆ ಹೇಳದೇ ಹೋಗದಿರು ಕಣ್ಣು, ಕಿವಿ ಮೂಗು ನಾಲಿಗೆಗಳೆಲ್ಲವೂ ತಮ್ಮ ಕೆಲಸ ಮರೆತಿವೆಮುತ್ತಿನಲ್ಲೆ ಅಮರಾವತಿಯ ಧರೆಗಿಳಿಸುವೆ ಹೇಳದೇ ಹೋಗದಿರು ಸಿರಿ, ನಿನ್ನ ಪಾಲಿನ ಕಟ್ಟಿಗೆಯನ್ನೆಸೆದು ಬಿಡು ಅಗ್ನಿಕುಂಡದಲಿಚಿತೆಗೇರುವ ಮುನ್ನ ಕಣ್ತುಂಬಿಕೊಳ್ಳುವೆ ಹೇಳದೇ ಹೋಗದಿರು ************

ಹೇಳದೇ ಹೋಗದಿರು Read Post »

ಕಾವ್ಯಯಾನ, ಗಝಲ್

ಗಝಲ್

ಎ ಎಸ್. ಮಕಾನದಾರ ನೀನು ಹೋದ ಅರೆಗಳಿಗೆಗೆ ಬಾಗಿಲ ಕಿಟಕಿಗಳು ಬೋರಾಡಿ ಅಳುತಿವೆಇಂದಲ್ಲ ನಾಳೆ ಬರುತ್ತೀಯೆಂದು ಹೊಸ್ತಿಲ ಭರವಸೆಯಿಂದ ಕಾಯುತಿವೆ ಅಂಗಾಲಿಗೆ ಮುತ್ತಿಕ್ಕಿದ ಮಣ್ಣು ಹಿಮ್ಮಡಿಯಲಿ ಹಿಮ್ಮೇಳಹಾಕಿವೆ ಸಾಕಿದಣಿದ ದೇಹಕೆ ಖಬರಸ್ತಾನಿನ ಹೂಗಳು ಸದಾ ಸಾಂತ್ವನ ಹೇಳುತಿವೆ ಬೀದಿ ದೀಪಗಳು ಕಣ್ಣುಗಳನ್ನು ಪಿಳುಕಿಸಿ ಮಿಂಚುಹುಳು ವಾಗಿಸುತ್ತಿವೆನೆನಪುಗಳು ಮಗ್ಗುಲು ಬದಲಿಸಿ ನೇಸರನಿಗೆ ಕರೆದು ಸಾವು ತರಿಸುತಿವೆ ಹರಿದ ಅಂಗಿಗೆ ಬೆವರ ಉಣಿಸಿ ಬೆಂದ ಹಾಲಿಗೆ ನೆಮ್ಮದಿ ಬೇಡುತ್ತಿವೆತುಕ್ಕು ಹಿಡಿದ ತೊಟ್ಟಿಲಲಿ ಜೋಗುಳ ತೂಗಿ ಹರತಾಳವನು ಹೂಡುತಿವೆ ಸಾಹೇಬನ ಹಸಿವು ಕಂಡು ಹರಿದು ತಿನ್ನುವ ಹದ್ದು ಮೌನವಾಗಿಸುತ್ತಿವೆರಟ್ಟೆ ತಟ್ಟಿದ ತವೆಯಲಿ ಕರಕಲು ರೊಟ್ಟಿಗಳು ಹೊಟ್ಟಿಗೆ ಪ್ರಶ್ನಿಸುತಿವೆ *********

ಗಝಲ್ Read Post »

ಕಾವ್ಯಯಾನ, ಗಝಲ್

ಗಝಲ್

ರತ್ನರಾಯ ಮಲ್ಲ ಕೋಟೆಯಲ್ಲಿ ಕುಂತಿರುವೆ ಬರುವವರೆಲ್ಲ ಬಂದುಬಿಡಿಹಸಿವಿನಿಂದ ಬಳಲುತಿರುವೆ ತಿನ್ನುವವರೆಲ್ಲ ತಿಂದುಬಿಡಿ ಬುದ್ಧಿಮಾತುಗಳು ಬುದ್ಧಿಭ್ರಮಣೆಯಲಿ ಕೊಳೆಯುತಿವೆಜೋಳಿಗೆಯು ಹರಿದಿದೆ ನೋಟುಗಳಿಂದ ತುಂಬಿಸಿಬಿಡಿ ಭೂಷಣವಾಗಿದ್ಧ ನಾಚಿಕೆಯ ಪರದೆಯನ್ನು ಎಸೆದಿರುವೆನೀವು ಬಂದ ಕೆಲಸವನ್ನು ಮುಗಿಸಿಕೊಂಡು ಹೋಗಿಬಿಡಿ ಪೂಜೆ-ಪುನಸ್ಕಾರದ ಜೊಳ್ಳು ಮೌಲ್ಯಗಳು ಬೇಡವಾಗಿವೆನಮ್ಮ ಪಾಡಿಗೆ ನಮಗೆ ಸುಖವಾಗಿ ಇರಲು ಬಿಟ್ಟುಬಿಡಿ ಹಸಿಮಾಂಸ ತಿನ್ನುವ ರಣಹದ್ದುಗಳ ಪರಪಂಚವಿದುಅನ್ನ ತಿನ್ನುವುದನ್ನು ಕಲಿತು ನೆಮ್ಮದಿಯಾಗಿ ಇದ್ದುಬಿಡಿ **************

ಗಝಲ್ Read Post »

ಕಾವ್ಯಯಾನ, ಗಝಲ್

ಕಾವ್ಯಯಾನ

ಗಝಲ್ ಮಾಲತಿ ಹೆಗಡೆ ನೂರು ಆಸೆ ನೂರು ಕನಸ ಹತ್ತಿಕ್ಕುತ ನಡೆದೆಯೇಕೆ?ಕೋಪತಾಪದಲ್ಲಿ ಬಳಲಿ ಬಿಕ್ಕುತ್ತ ನಡೆದೆಯೇಕೆ? ಹೆತ್ತ ಕೂಸಿನ ವಾತ್ಸಲ್ಯವ ಕಳಚಿ ನಿರ್ಮೋಹ ಮೆರೆದೆಉತ್ತರ ಕೊಡದ ಮೌನ ಕಕ್ಕುತ್ತ ನಡೆದೆಯೇಕೆ? ಸಿಕ್ಕ ಬದುಕ ಕಟ್ಟಲರಿಯದೇ ಸಿಕ್ಕು ಸಿಕ್ಕಾಗಿಸಿ ಸೊರಗಿದೆನಕಾರಾತ್ಮಕ ವಿಚಾರದಲ್ಲೇ ಸೊಕ್ಕುತ್ತ ನಡೆದೆಯೇಕೆ? ಹುಟ್ಟಿದವರಿಗೆಲ್ಲ ಒಂದು ದಿನ ಬರುವುದು ಸಾವು ನಿಶ್ಚಿತಅರೆ ಆಯುಷ್ಯದಲ್ಲೇ ಸೋಲು ಮುಕ್ಕುತ್ತ ನಡೆದೆಯೇಕೆ? ಮುದ್ದುಕಂದನಿಗೆ ಅಮ್ಮನಾಗಿ ಹೆಮ್ಮೆಯ ದೇವತೆಯಾಗಿದ್ದೆನಕ್ಷತ್ರವಾಗುವ ಹುಚ್ಚಿನಲಿ ನೋಯುತ್ತ ನಡೆದೆಯೇಕೆ? ************

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಕಾವ್ಯಸಂಗಾತಿ

ಗಝಲ್ ಬಾಗೇಪಲ್ಲಿ ಕೃಷ್ಣಮೂರ್ತಿ ಬ್ರಹ್ಮಾಂಡದಿ ನೀನು ತೃಣಅದಕೆ ನೀ ಇರುವೆ ಋಣ ಹೇಗೆ ತೀರಿಸುವೆ ಅದನುಯೋಚಿಸು ಒಂದು ಕ್ಷಣ ಸದಾ ಸಲಹಲು ನಿನ್ನಬದಲಾಗಿಸು ನಿನ್ನ ಗುಣ ಅತಿಯಾಸೆಯಿಂದ ನೀನುಮಾಡಿರುವೆ ಎಲ್ಲಾ ರಣ ಸಿಕ್ಕ ಸಿಕ್ಕಲ್ಲೆಲ್ಲಾ ಅಗೆದುಮಾಡಿರುವೆ ಅದಕೆ ವ್ರಣ ಪರಿಸರ ರಕ್ಷಣೆ ಆಗಬೇಕುಸೇರು ನೀನು ಅದರ ಬಣ ಕ್ಷಮೆ ಎನೆ ಭೂಮಿ’ಮಂಕೇ’ಸಕಲರೂ ತೊಡಬೇಕು ರಕ್ಷಣೆಗೆ ಪಣ (ಚೋಟಿ ಬೆಹರ್ ರಚಿಸುವ ಯತ್ನ) **********

ಕಾವ್ಯಸಂಗಾತಿ Read Post »

ಕಾವ್ಯಯಾನ, ಗಝಲ್

ಕಾವ್ಯಯಾನ

ಗಝಲ್ ದೀಪಾಜಿ ಬದುಕು ಬಯಲಾಗಿದೆ ಬಾಳು ಹಣ್ಣಾಗಿದೆ ಬೇಕೆ ನಿನಗೀಗ ದೀಪದೇಹ ಬೆಂಡಾಗಿದೆ ಮನವೂ ಮಾಗಿಹೋಗಿದೆ ಬೇಕೆ ನಿನಗೀಗ ದೀಪ ಸುತ್ತಲು ಆವರಿಸಿ ನಿಂತ ಮಬ್ಬುಗತ್ತಲಿಗೆ ಎಷ್ಟೆಣ್ಣೆ ಸುರಿವೆಬಾಯ್ತುಂಬಿಕೊಂಡ ಗಾಳಿ ಉದುವ ದ್ವೇಷಿಗಳಿಗೆ ನಂಜಿದೆ ಬೇಕೆ ನಿನಗೀಗ ದೀಪ ಒಂದಿಷ್ಟು ಮೆಟ್ಟಿಲಾಚೆ ಬಾಗಿಲಿಲ್ಲದ ಬದುಕೊಂದಿದೆಸುತ್ತೆಲ್ಲ ಸಣ್ಣಗೆ ಮಳೆ ಇದೆ ದೀವಟಿಗೆ ಕುಡಿ ಮೇಲೆ ಅಂಗೈ ಹಿಡಿದೆ ಬೇಕೆ ನಿನಗೀಗ ದೀಪ.. ಕೂಸೆರಡು ಕೈಹಿಡಿದು ಪ್ರೇಮದಾರಿ ತೋರಿಸುತಿವೆಮುಳ್ಳ ಕಣಿವೆಯ ಮೇಲೆ ಮಮತೆಯ ಸೇತುವೆ ಕಟ್ಟಲಾಗಿದೆ ಬೇಕೆ ನಿನಗೀಗ ದೀಪ.. ಗಂವ್…ಎನ್ನುವ ಯೌವನವಿಲ್ಲ ಹುಚ್ಚೆಬ್ಬಿಸುವ ಕಾಮದ ತಹತಹಿ ಇಲ್ಲಇದ್ದುದೊಂದೆ ವಾತ್ಸಲ್ಲ ಹಿಡಿಯಷ್ಟು ಒಲವು ಇದೆ ಬೇಕೆ ನಿನಗೀಗ ದೀಪ… *******

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಕಾವ್ಯಯಾನ

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ನಿನ್ನ ನೆನಪು ಮರೆಯಲು ಮದಿರೆಯ ಸಂಗ ಮಾಡಿದ್ದೆ ಸಖಿವ್ಯಸನ ತೊರೆಯಲು ಸುರೆಯ ಹಂಗ ಬಿಡದಾಗಿದೆ ಸಖಿ ಮಧುವಿನ ದಾಸನಾಗಿ ದಾಸ್ಯದಿ ಬದುಕ ನೂಕುತಿರುವೆತುಟಿಯಂಚಿಗಿಟ್ಟ ಬಟ್ಟಲಿನಲ್ಲಿ ನೀನು ಕಾಣುತಿರುವೆ ಮರೆಯದಾಗಿದೆ ಸಖಿ ನೀರವ ಮೌನದ ಕತ್ತಲೆಯಲಿ ಸಿಗಬಹದೆಂದು ಹುಡುಕಿರುವೆಶರಾಬಿನ ಸಿಸೆಯೊಳಗೂ ನಿನ್ನದೆ ಬಿಂಬವ ಕಾಣುತಿದೆ ಸಖಿ ಮರೆಯಲಾಗದ ಹವ್ಯಾಸ ನನ್ನನು ಬೆಂಬಿಡದೆ ಕಾಡಿದೆಅವಳನು ಮರೆಯುವ ಮಾತಾಡಿಮಿಣುಕು ದೀಪದ ಮುಂದೆ ಕುಳಿತಿದ್ದೆ ಸಖಿ ಸುರಪಾನದ ಸುಖದಲಿ ತೇಲಾಡಿ ನೊಂದ ಮರುಳನು ಮರುಗುತಿರುವನುಆದದ್ದೇಲ್ಲ ಮರೆತು ಹೊಸಬಾಳ್ವೆಗೆ ಹೊಂದಿ ನಡೆಯ ಬೇಕೆಂದಿದ್ದೆ ಸಖಿ ***********

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಕಾವ್ಯಯಾನ

ಗಝಲ್ ರತ್ನರಾಯಮಲ್ಲ ಆಗಸದಲ್ಲಿ ನೇಸರ ಹುಟ್ಟುತಿದ್ದಾನೆ ನೋಡಿಕನಸುಗಳು ಮೂಟೆ ತರುತಿದ್ದಾನೆ ನೋಡಿ ಇರುಳು ಕಳೆದು ಹೋಗಿದೆ ಹಗಲಿನ ಒಡಲಲ್ಲಿಚೈತನ್ಯವನ್ನು ಹೊತ್ತು ಬಂದಿದ್ದಾನೆ ನೋಡಿ ಮೂಡಣದಲ್ಲಿ ರವಿ ಅಂಬೆಗಾಲು ಇಡುತಿರುವನುಅಕ್ಷಯ ಉಲ್ಲಾಸವನ್ನು ಹಂಚುತಿದ್ದಾನೆ ನೋಡಿ ಅವನಿಯನ್ನು ಹೊಂಗಿರಣಗಳು ಚುಂಬಿಸುತಿವೆಪಾದರಸದ ಚಲನೆಯನ್ನು ನೀಡುತಿದ್ದಾನೆ ನೋಡಿ ಹಕ್ಕಿಗಳ ಚಿಲಿಪಿಲಿಯು ಹೃದಯವನ್ನು ತಟ್ಟುತ್ತಿದೆನಿರಾಸೆಯ ಕೊಳೆಯನ್ನು ತೊಳೆಯುತಿದ್ದಾನೆ ನೋಡಿ ಗಿಡ-ಮರಗುಳು ತಂಗಾಳಿಯಿಂದ ಸ್ವಾಗತಿಸುತಿವೆಬಾಳಿನ ಅನನ್ಯ ಕಲೆಯನ್ನು ಕಲಿಸುತಿದ್ದಾನೆ ನೋಡಿ ಹಾಸಿಗೆಯನ್ನು ತೊರೆದು ಹೊರಗೆ ನೋಡು ಮಲ್ಲಿಮಂದಹಾಸದ ಪಾಠವನ್ನು ಹೇಳುತಿದ್ದಾನೆ ನೋಡಿ

ಕಾವ್ಯಯಾನ Read Post »

You cannot copy content of this page

Scroll to Top