ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್

ಗಜಲ್ ಶ್ರೀಲಕ್ಷ್ಮಿ ಆದ್ಯಪಾಡಿ. ಕಣ್ಣ ಜಗತ್ತಿನಲ್ಲೇ ಸಾವಿರ ಸಾವಿರ ನಕ್ಷತ್ರಗಳ ಚಿಮ್ಮಿಸಿದವನು ಅವನಿರುವುದೇ ಹಾಗೆ ಮೀಸೆಯ ತುಂಟ ನಗೆಯಲ್ಲೇ ಸಾವಿರ ಕನಸುಗಳ ಹೊಮ್ಮಿಸಿದವನು ಅವನಿರುವುದೇ ಹಾಗೆ ಮೌನವನ್ನಪ್ಪಿದ್ದ ನನ್ನೆದೆಯ ತಂತಿಯನ್ನು ಮತ್ತೆ ಬಿಗಿದು ಹೊಸ ರಾಗ ಮೀಟಿದನು ನನ್ನದೆಯ ಪ್ರತಿ ಬಡಿತದಲ್ಲೂ ನಲಿವಿನ ರಾಗಗಳ ಬೆರೆಸಿದವನು ಅವನಿರುವುದೇ ಹಾಗೆ ಕುದಿಯುತ್ತಿದ್ದ ತಪ್ತ ಎದೆಗೆ ತಂಪಿನ ಹನಿ ಬೆರೆಸಿ ಬದುಕಿನಲ್ಲಿ ಹೊಸ ಕನಸ ಬಿತ್ತಿದನು ಕಮರಿ ಹೋಗಿದ್ದ ಕನಸುಗಳಿಗೆ ಮತ್ತೆ ಹೊಸ ಜೀವ ತುಂಬಿದವನು ಅವನಿರುವುದೇ ಹಾಗೆ ಮೊರೆಯುತ್ತಿದ್ದ ಕಡಲಿಗೇನು ಗೊತ್ತಿತ್ತು ತನಗಾಗಿ ಹಂಬಲಿಸುವ ನದಿ ಎಲ್ಲಿದೆಯೆಂದು ಕಾಯುವ ಬದುಕಿಗೇ ವಿದಾಯ ಹೇಳಿ ಒಲವಿನಿಂದ ನಲಿದು ಬಂದವನು ಅವನಿರುವುದೇ ಹಾಗೆ ಕಾರ್ಗತ್ತಲ ಗೂಡಿನೊಳಗೆ ಒಂಟಿತನದ ನೋವಿನಲ್ಲೇ ಕೊರಗುತ್ತಿದ್ದ ಪುಟ್ಟ ಹಕ್ಕಿಯಾಗಿದ್ದೆ ಹಾರಲು ಪ್ರೇಮದ ವಿಶಾಲ ಆಗಸವಿದೆಯೆಂದು ತೋರಿ ರೆಕ್ಕೆಯಾದವನು ಅವನಿರುವುದೇ ಹಾಗೆ **********************************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಶಮಾ. ಜಮಾದಾರ. ತರಗಲೆಯ ಅಲುಗಾಟದಲಿ ನಿನ್ನ ಕಾಲ್ಸಪ್ಪಳಕೆ ಕಾಯುತಿರುವೆಕೊರಕಲಿನ ಇಳಿಜಾರಿನಲಿ ನಿನ್ನ ದರುಶನಕೆ ಕಾಯುತಿರುವೆ ಲೋಕದ ನಾಲಿಗೆ ಹೊಸದೊಂದು ಪಟ್ಟಕಟ್ಟಿ ನಗುತಿದೆಅಮವಾಸ್ಯೆ ರಾತ್ರಿಯಲಿ ಬೆಳದಿಂಗಳಕೆ ಕಾಯುತಿರುವೆ ಯುಗಗಳಿಂದಲೂ ಪ್ರೀತಿ ನಿರೀಕ್ಷೆಯಲಿ ಪರಿತಪಿಸಿದೆನಿರ್ಭೀತ ಹೊಸಗಾಳಿಯಲಿ ಉಸಿರಾಟಕೆ ಕಾಯುತಿರುವೆ ಮನುಜ ಮಾಡಿದ ಮತಪಂಗಡಗಳು ಬೇಲಿ ಕಟ್ಟುತ್ತಲಿವೆಸೌಹಾರ್ದದ ಹೃದಯಗಳಲಿ ಸಮನ್ವಯಕೆ ಕಾಯುತಿರುವೆ ಎದೆಯ ಗೂಡುಗಳಲಿ ನಗಬೇಕು ನಿಸ್ವಾರ್ಥ ಶಮೆಗಳುಕಳಚಿದ ಬೇಡಿಗಳಲಿ ಅನುಸಂಧಾನಕೆ ಕಾಯುತಿರುವೆ **********************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ರವಿ.ವಿಠ್ಠಲ.ಆಲಬಾಳ. ಬರೀ ಬತ್ತಿ ಬೇಕಾಗುವುದಿಲ್ಲ ದೀಪ ಬೆಳಗಲುಬರೀ ನೇಹ ಸಾಕಾಗುವುದಿಲ್ಲ ದೀಪ ಬೆಳಗಲು. ಕಡ್ಡಿ ಗೀರಿ ಸುಮ್ಮನಿರಬೇಡಿ ಒಂದು ದೀಪಕ್ಕೆನಿಮ್ಮ ಕೈಗಳಷ್ಟೇ ಆಸರೆಯಲ್ಲ ದೀಪ ಬೆಳಗಲು. ಉರಿಯುವ ದೀಪಕೂ ಗಾಳಿಯ ಅಗತ್ಯವಿದೆಶ್ವಾಸಕೋಶ ಅದಕ್ಕೂಇದೆಯಲ್ಲ ದೀಪ ಬೆಳಗಲು ಮನಸಿನ ಭಾವಗಳಲ್ಲಿ ತಮವೇ ತುಂಬದಿರಲಿಸಂಬಂಧದ ಕೊಂಡಿ ಬೇಕೇಬೇಕಲ್ಲ ದೀಪ ಬೆಳಗಲು ಸುಮ್ಮನೇ ದೀಪ ಹಚ್ಚಿ ದೀಪಾವಳಿ ಎಂದರಾಯಿತೆ?ಮನೆಮನೆಯಲಿ ಸುಖ ಇರಬೇಕಲ್ಲ ದೀಪ ಬೆಳಗಲು. ರವೀ, ಜೀವನದ ಹೆಜ್ಜೆಗುರುತನೆಂದೂ ಮರೆಯಬೇಡಒಂದಿನವಾದರೂ ನಾವು ಗೆಲ್ಲಲೇಬೇಕಲ್ಲ ದೀಪ ಬೆಳಗಲು *******************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅರುಣಾ ನರೇಂದ್ರ ಅವನು ನನ್ನದೆಯಲ್ಲಿ ದೀಪ ಹಚ್ಚಿಟ್ಟಿದ್ದಾನೆ ಸಖಿಮುಚ್ಚಿದ ಕದ ತೆರೆದು ಕತ್ತಲೆ ಬಚ್ಚಿಟ್ಟಿದ್ದಾನೆ ಸಖಿ ನಮ್ಮಿಬ್ಬರ ಪ್ರೀತಿಯನು ಮುಗಿಲೆತ್ತರಕ್ಕೆ ಹಿಡಿದಿದ್ದಾನೆತುಟಿದೆರೆಯದೆ ಒಲವಿನ ಮಾತುಗಳ ಬಿಚ್ಚಿಟ್ಟಿದ್ದಾನೆ ಸಖಿ ಮೊಗ್ಗುಗಳಿಗೆ ನಗುವ ಕಲಿಸುವ ಖಯಾಲಿ ಅವನದುಒಡಲ ಹೊದರಿನಲಿ ನೋವುಗಳ ಮುಚ್ಚಿಟ್ಟಿದ್ದಾನೆ ಸಖಿ ಅಂಗಳದ ಹಣತೆಗಳಿಗೆ ಅವನದೇ ಕಣ್ಣ ಹೊಳಪುಚುಚ್ಚುವ ಮುಳ್ಳುಗಳ ಲೆಕ್ಕಿಸದೆ ಹೂವ ಮುತ್ತಿಟ್ಡಿದ್ದಾನೆ ಸಖಿ ಬೆಳ್ಳಗಿರುವ ಬೆಳಕಿಗೂ ಬಣ್ಣ ಬಳಿಯುತ್ತಾರಲ್ಲ ಅರುಣಾಬರುವ ಬೇಸರಿಕೆಗಳನು ತಡೆದು ಅಲ್ಲಲ್ಲೇ ಹತ್ತಿಟ್ಟಿದ್ದಾನೆ ಸಖಿ **************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ವಿ.ಹುಸೇನಿ ವಲ್ಲೂರು ಜಿಂದಗಿ ತುಂಬಾ ಬರಿ ಇರುಳ ತುಂಬಿದೆ ನಿನ್ನ ಬಿಟ್ಟು ಹೇಗೆ ಇರಲಿ ಸಖಿ!ಮೊಹಬತ್ತಿನ ತುಂಬಾ ಅರಳಿದ ಇರಳು ಓಡಿಸಬೇಕು ಇಲಾಲು ಹಿಡಿದು ಬಾ ಸಖಿ!! ಹಗಲು ನಾಚಿತು ಮೈ ಬಾಚಿತು ಸೆರಗ ತುಂಬ ಗಂಟು ಕಟ್ಟಿಕೊಂಡು!ಜೀವದೊಳಗ ಜೀವ ನೀನು ಹುಡುಕುತ್ತಿದೆ ಮನಸು ಸನಿಹಕ್ಕೆ ಬಾ ಸಖಿ!! ತುಟಿ ಕಚ್ಚಿ ಹೇಳಬೇಕೆಂದ ಒಂದು ಮಾತು ನನ್ನ ಮನಸಲ್ಲೇ ಉಳಿಯಿತು!ನಾ ಹೋದರು ಮಸಣದ ಗೋರಿ ಮೇಲಿನ ಮರಕ್ಕೊಂದು ಹಾಡು ಕಲಿಸು ಬಾ ಸಖಿ!! ಎಷ್ಟೊಂದು ಆಶೆಗಳು ಹೆಪ್ಪುಗಟ್ಟಿವೆ ನಿನ್ನ ನೋಡದೆ ತಲಬಾಗಿಲ ಮುಂದೆ!ಊರ ಅಂಗಳ ತುಂಬಾ ನಿನಗಾಗಿ ರಂಗೋಲಿ ಕಾಯುತ್ತಿದೆ ಬಾ ಸಖಿ!! “ವೀರ” ಪ್ರೇಮಿಯ ಮುಂದೆ ಬತ್ತಿದ ಕೆರೆಯಂಗಳ ಆಗಬೇಡ ಸಖಿ!ಎಷ್ಟು ಸಲ ಸೋತು ಸೋತು ಮಂಡಿ ಊರಿದ್ದೇನೆ ನಿನಗಾಗಿ ಬಾ ಸಖಿ!! *************************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅಲ್ಲಾಗಿರಿರಾಜ್ ಕನಕಗಿರಿ. ನೀವು ಒಂದು ದಿನ ನನಗೆ ಒಪ್ಪಿಗೆ ಕೊಟ್ಟರೆ ನನ್ನ ಕಬ್ರ್ ನಾನೇ ತೋಡಿಕೊಳ್ಳುತ್ತೇನೆ.ನನ್ನ ಗೋರಿ ಕಟ್ಟಲು ತಂದ ಈ ಬಂಡೆಗಲ್ಲಿನ ಮೇಲೆ ನಾ ಹಿಂದೂಸ್ತಾನಿ ಎಂದು ನಾನೇ ಕೆತ್ತಿಕೊಳ್ಳುತ್ತೇನೆ. ನೀವು ಸುಮ್ಮನಿದ್ದರೆ ನನ್ನ ಮಸಣ ನಾನೇ ನಿರ್ಮಿಸಿಕೊಳ್ಳುತ್ತೇನೆ.ನಾಳೆ ನನ್ನ ಗಜಲ್ ಓದುವಾಗ ಯಾರೂ ಧರ್ಮ ಹುಡುಕಬಾರದೆಂದು ಬೇಡಿಕೊಳ್ಳುತ್ತೇನೆ. ನೀವು ದೂರವಿದ್ದರೆ ನನ್ನ ಗೋರಿ ಮೇಲೆ ಬಿಳಿ ಹೂ ಹುಟ್ಟಲು ಕೇಳಿಕೊಳ್ಳುತ್ತೇನೆ.ನನ್ನ ಗೋರಿ ಬಳಿ ಯಾವ ಧರ್ಮದ ಝಂಡಾ ಹಾರದಿರಲಿಯೆಂದು ವಿನಂತಿಸಿಕೊಳ್ಳುತ್ತೇನೆ. ನೀವು ಬರುವುದಾದರೆ ನನ್ನ ಗೋರಿ ಬಳಿ ಗಡ್ಡ ಜುಟ್ಟ ದಾರದ ಕುರುಹು ಕೇಳಬೇಡಿ ಎಂದು ಕೈಜೋಡಿಸುತ್ತೇನೆ.ನನ್ನ ಗಜಲ್ ನಿಮ್ಮ ನಡುವೆ ಮನುಷ್ಯ ಪ್ರೀತಿ ಕಟ್ಟಲಿಯೆಂದು ದುವಾ ಮಾಡುತ್ತೇನೆ. ನೀವು ಧರ್ಮದ ಅಮಲಿನಲ್ಲಿ ಸಾವು ಬೇಡುವುದಾದರೆ ನಾನು ಗೋರಿಯಲ್ಲಿ ಮರು ಜನುಮ ಧಿಕ್ಕರಿಸುತ್ತೇನೆ.ನನ್ನ ಗೋರಿ ಸುತ್ತ ಬಿಳಿ ಪಾರಿವಳದ ದಂಡು “ಗಿರಿರಾಜ”ನ ಐಕ್ಯತೆಯ ಮಂತ್ರ ಪಠಿಸಲಿಯೆಂದು ಬೇಡಿಕೊಳ್ಳುತ್ತೇನೆ **********************************.

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ವತ್ಸಲಾ ಶ್ರೀಶ ಕೊಡಗು ಕಲೆಯ ನೆಲೆಗೆ ಒಲವ ಬಳಸಿ ಸೆಳೆದೆಯಲ್ಲ ಗೆಳೆಯಹಲವು ಮಾತು ಗುನುಗಿ ದೂರ ನಿಂತೆಯಲ್ಲ‌ ಗೆಳೆಯ ಕಿವಿಯ ಜುಮುಕಿ ಮುತ್ತಿನಲ್ಲಿ ಹೆಸರ ಬರೆದೆ ಗುಟ್ಟಲಿತುಂಟತನದಿ ಕೆನ್ನೆ ಮುಟ್ಟಿ ಮತ್ತೇರಿದೆಯಲ್ಲ ಗೆಳೆಯ ದೂರದಲ್ಲಿ ಹಾಡನೊಂದು ಕೇಳೆ ಮನವು ಪುಳಕವಿಲ್ಲಿಹಣೆಯ ಮುತ್ತ ನೆನಪು ನೀಡಿ ಕಾಡಿದೆಯಲ್ಲ ಗೆಳೆಯ ಬೆರಳಿಗೊಂದು ಬೆರಳು ಸೇರಿಸಿ ನಾಲ್ಕು ಹೆಜ್ಜೆ ಇರಿಸಿದೆನೂರು ಜನ್ಮ ಜೊತೆಯ ಬೇಡಿ ನಿಂತೆಯಲ್ಲ ಗೆಳೆಯ ಬಿಸಿಯುಸಿರು ಕೊರಳ ತಾಗಿ ಪ್ರೀತಿ ಕವನ ಗೀಚಿದೆಕಣ್ಣಿನಲ್ಲಿ ಪ್ರೇಮ ಬಿಂಬ ಪ್ರತಿಷ್ಠೆಯಾಗಿದೆಯಲ್ಲ ಗೆಳೆಯ ಕದಪುಗಳ ರಂಗು ನುಡಿಯುತಿದೆ ಕೇಳದ ಕತೆಯೊಂದನುಭೂಮಿ ಬಾನು ಸಂಜೆ ಪ್ರಣಯ ಗುಲ್ಲಾಗಿದೆಯಲ್ಲ ಗೆಳೆಯ ಒಲವಿಗೆ ತೆರಿಗೆ ಪಾವತಿಸಿ ಬಂದು ನಿಂತಂತೆ ನಿಲ್ಲುವೆತಪಸ್ಯಾಳ ಗೆಲ್ಲಲು ಹೊಸ ವರಸೆಯಂತಿದೆಯಲ್ಲ ಗೆಳೆಯ *********************************** **************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ (ಸಂಪೂರ್ಣ ಮತ್ಲಾ ಗಜಲ್) ಸಿದ್ಧರಾಮ ಹೊನ್ಕಲ್ ಮನಸ್ಸೇಕೋ ಮತ್ತೆ ನೊಂದು ಮೌನದಿ ಕಮರಿಹೋಗಿದೆಯಾಕೋ ಸುಮ್ಮನೇ ಮನಸಲ್ಲೆ ಬೆಂದು ಲೀನವಾಗಿದೆ ಯಾಕೆ ಏನು ಯಾರಿಗಾಗಿ ಇದೆಲ್ಲ ಒಂದು ತಿಳಿಯದಾಗಿದೆಕಾರಣವಿಲ್ಲದೇ ಸಂಕಟ ಆಗುವದೇಕೋ ಅರಿಯದಾಗಿದೆ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರುಚಿ ಸಿಗದಾಗಿದೆಭರಪುರ ಬೆಳೆದ ರೈತನ ಫಸಲು ಹೊಲವೇ ಕದ್ದಂತಾಗಿದೆ ಬಿತ್ತುವದು ಅವನ ಧರ್ಮ ಬೆಳೆ ಪಡೆವುದು ಕರ್ಮವಾಗಿದೆಉಂಡು ಕೊಂಡು ಹೋದ ಲಂಡರದೇ ಬಲು ಹಿತವಾಗಿದೆ ಕೊಚ್ಚೆಯಲ್ಲಿ ಬಿದ್ದ ಮಾಣಿಕ್ಯಕ್ಕೆ ತನ್ನ ಬೆಲೆ ತಿಳಿಯದಾಗಿದೆಹೊನ್ನಸಿರಿ’ ಇರಲಿ ನೋಯಬೇಡ ಈ ಭೂಮಿ ಗುಂಡಾಗಿದೆ *****************************

ಗಜಲ್ Read Post »

ಕಾವ್ಯಯಾನ, ಗಝಲ್

ಲಂಕೇಶ-೭೮

ಲಂಕೇಶ-೭೮ ಸಿದ್ಧರಾಮ ಹೊನ್ಕಲ್ ಯಾರಿಗೂ ಏನನ್ನೂ ಬೇಡಲಿಲ್ಲ,ಬಯಸಲಿಲ್ಲ ಈ ಲಂಕೇಶಎಲ್ಲರಿಗೂ ಪಾಪಪ್ರಜ್ಞೆಯಾಗಿ ಕಾಡದೇ ಬಿಡಲಿಲ್ಲ ಈ ಲಂಕೇಶ ತಾನು ನಡೆದದ್ದು ಬರೀ ದಾರಿಯಲ್ಲ ಈ ಲಂಕೇಶನಿಗೆಅದು ರಾಜಮಾರ್ಗವೆಂದು ತೋರಿದನಲ್ಲ ಈ ಲಂಕೇಶ ಕನ್ನಡದ ಮೇರು ಲೇಖಕ ಮೇಲಾಗಿ ನಿರ್ಭೀತ ಪತ್ರಕರ್ತಶತಮಾನದ ದೃಷ್ಟಿಕೋನ ಬದಲಿಸಿದನಲ್ಲ ಈ ಲಂಕೇಶ ಕಥೆ,ಕವಿತೆ,ಪತ್ರಿಕೆ,ಸಿನೆಮಾ ನಿರ್ದೇಶನ ಹೀಗೆ ನಡೆದಂತೆಲ್ಲಾ ದಾರಿಗಳುನಡೆದ ದಾರಿಯಗುಂಟ ಬರೀ ಮುಳ್ಳುಗಳೇ ಹಸನಾದವಲ್ಲ ಈ ಲಂಕೇಶ ಯಾರಿಗೂ ಅಂಜಲಿಲ್ಲ ಅಳುಕಲಿಲ್ಲ ಯಾರ ಬಿಢೆಗೂ ಬೀಳಲಿಲ್ಲ“ಹೊನ್ನಸಿರಿ”ಕರ್ನಾಟಕಕ್ಕೆ ಹೊಸ ಮನ್ವಂತರ ಸೃಷ್ಟಿಸಿದರಲ್ಲ ಈ ಲಂಕೇಶ ******************************

ಲಂಕೇಶ-೭೮ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ರತ್ನರಾಯ ಮಲ್ಲ ಅಸಹಾಯಕತೆಯ ಬೇರಿಗೆ ನೀರೆರೆಯಬೇಡಿಮನಸ್ಸಿನ ಆತ್ಮವಿಶ್ವಾಸವನ್ನು ಚಿವುಟಬೇಡಿ ಕರುಣೆ-ಕನಿಕರದಿಂದ ಒಡಲ ಹಸಿವು ನೀಗದುಸಹಾನುಭೂತಿಯ ಜಾಲದಲ್ಲಿ ಸಿಲುಕಬೇಡಿ ಪಾಪ ಎಂದು ಪಾಪಿ ಎನ್ನುವರು ಜಗದೊಳಗೆಸಾಧನೆಯ ಶಿಖರದಿಂದ ಜಾರಿ ಬೀಳಬೇಡಿ ಕಾರಣಗಳು ಇತಿಹಾಸವನ್ನು ನಿರ್ಮಿಸುವುದಿಲ್ಲನೋವನ್ನು ಪ್ರದರ್ಶನದ ವಸ್ತು ಮಾಡಬೇಡಿ ‘ಮಲ್ಲಿ’ ಮಲ್ಲಿಗೆಯ ಮೊಗ್ಗನ್ನು ಪ್ರೀತಿಸುವರೆಲ್ಲರುಅನ್ಯರ ಕೈಯಲ್ಲಿ ಆಡುವ ಗೊಂಬೆ ಆಗಬೇಡಿ ***************************************

ಗಝಲ್ Read Post »

You cannot copy content of this page

Scroll to Top