ಗಝಲ್
ಗಝಲ್ ಶ್ರೀದೇವಿ ಕೆರೆಮನೆ ನೀನು ಮತ್ತೆ ಬರುವುದಿಲ್ಲವೆಂದು ಬುದ್ಧಿಗೆ ಅರ್ಥವಾಗಿದೆಹಾಳಾದ ಮನಸ್ಸು ಇನ್ನೂ ನಿನಗಾಗಿ ಕಾತರಿಸುತ್ತಿದೆ ಹೀಗೆ ಬಂದು ಹಾಗೆ ಹೋಗಲು ನಾನೇಕೆ ಬೇಕಿತ್ತು ಹೇಳುನನ್ನ ಮನೆಯಂಗಳದ ಮಲ್ಲಿಗೆ ನಿನಗೀಗ ಮರೆತು ಹೋಗಿದೆ ಅಗಲುವ ಮಾತಾಡಿದ್ದು ಇಂದು, ನಿರ್ಧಾರ ಎಂದಾಗಿತ್ತು?ಮಾಮರದ ಕೋಗಿಲೆಯೇಕೆ ಹೀಗೆ ಕರ್ಕಶವಾಗಿ ಅಳುತಿದೆ ಕೊನೆಯ ಕ್ಷಣದವರೆಗೂ ಗುಟ್ಟು ಬಿಡದ ಮಹಾ ಚತುರ ನೀನುನೆತ್ತರಿಲ್ಲದೇ ಇರಿಯುವುದನು ನಿನ್ನಿಂದ ಕಲಿಯಬೇಕಿದೆ ನಾಟಕದ ಮಂದಿರದಲ್ಲೀಗ ಕಣ್ಣು ಕುಕ್ಕುವ ಬೆಳಕಿಲ್ಲಮನಸನು ಬಲಿಪಡೆದ ಪ್ರಹಸನವು ಜಗಜ್ಜಾಹೀರಾಗಿದೆ ನಿನ್ನವಳೆಂಬ ಹೆಮ್ಮೆ ಎದೆಯೊಳಗೆ ಮೊರೆದು ನೆತ್ತಿಗೇರಿತ್ತುಸುರೆಗೂ ಮಿಗಿಲಾಗಿ ಆವರಿಸಿದ ಯೌವನದ ನಶೆ ಇಳಿದಿದೆ ಸದಾ ಜೊತೆಗಿದ್ದ ಗೆಲುವಿಗು ನಾನೆಂದರೀಗ ತಿರಸ್ಕಾರಎಂದು ಬತ್ತದ ಉಕ್ಕುವ ಸೆಲೆಯಂತಹ ತುಟಿಯ ನಗು ಮಾಸಿದೆ ಶ್ರೀ, ಎರಡು ದಿನ ನಿನ್ನ ಹೆಸರಿನ ಸೆರಗಿನಲ್ಲಿ ಮೆರೆದಾಡಿದೆಮೇಲಕ್ಕೇರಿ ಕೆಳಗಿಳಿದ ಮೇಲೀಗ ಬದುಕು ಸಾಕೆನಿಸಿದೆ ***************************************************************









