ಗಜಲ್
ಕುರುಡರ ರಾಜ್ಯಕೆ ಶಶಿಯ ಹೊಂಬೆಳಕೇ?
ಸೋತು ಬರಲು ಬೇಕಿಲ್ಲ ಕಾರಣ ನಿನಗೆ
ಗಜಲ್ ಅರುಣಾ ನರೇಂದ್ರ ಹುಡುಗ ಯಾಕ ನೀ ಹಿಂಗ ಮುಸುಮುಸು ನಗತೀದಿನೀ ಸುಮ್ಮನಿದ್ರೂ ನನಗ್ಯಾಕೋ ನಕ್ಕಂಗ ಕಾಣತೀದಿ ನೀ ಬಿಳಿ ಬಟ್ಟಿ ಉಟಗೊಂಡ್ರ ಬೆಳ್ಳಕ್ಕಿ ಬೆದರತಾವುಗಾಂಧಿ ಟೊಪ್ಪಿಗಿ ಹಾಕ್ಕೊಂಡು ಮದುಮಗನಾಗೀದಿ ಸೋದರ ಮಾವನೆಂದು ಸಲಿಗೀಲಿ ಮಾತಾಡೀನಿಕಣ್ಣ ಕಾಡಿಗಿ ಕದ್ದು ನೀ ಕೊಳ್ಳೆ ಹೊಡದೀದಿ ಬಗಲಿಗೆ ಬಿಂದಿಗೆ ಇಟ್ಟು ಬಳುಕಾಡಿ ಬರುತ್ತಿದ್ದೆಬಾಯಾರಿ ಬಂದು ನೀ ಬೊಗಸೆ ಒಡ್ಡಿ ಕಾಡೀದಿ ಉರಿಬಿಸಿಲ ಬೇಗೆಯಲಿ ಹರದಾರಿ ನಡೆದೀನಿಅರುಣಾ ಎಂತೆಂದ್ಯಾಕ ಕೂಗಿ ಕೂಗಿ ಕರೆದೀದಿ.. *************************************
ಗಜಲ್ ಸುಜಾತ ಲಕ್ಷ್ಮೀಪುರ. ಕಳಚಿಕೊಂಡು ಸೋಗು ಅಹಂಕಾರ ಮಗುವಾಗಿದ್ದರೂ ನನ್ನ ಬಳಿ ಬರಲಿಲ್ಲ ನನ್ನ ದೇವರುಮನದಲಿ ಭಯ ಆತಂಕ ನೋವು ಪರಿತಾಪವಿದ್ದರೂನನ್ನ ಬಳಿ ಬರಲಿಲ್ಲ ನನ್ನ ದೇವರು ಮಂಜಾನೆ ನೇಸರ ಇರುಳು ಚುಕ್ಕಿ ಚಂದ್ರಮ ನಡುವೆ ಬೀಸುವಗಾಳಿಯೂ ಅವನ ನೆನಪಿಸಿದೆಹಸಿವು ನಿದಿರೆ ಸನಿಹ ಸುಳಿಯದೆ ಧ್ಯಾನದಲ್ಲಿದ್ದರೂ ನನ್ನ ಬಳಿ ಬರಲಿಲ್ಲ ನನ್ನ ದೇವರು ಋತುಮಾನಗಳು ಉರುಳುತ್ತಿವೆ ಚಳಿಗೆ ಚಳಿ ಕಾಣದೆ ಬೇಸಿಗೆ ಸುಡುದೆ ಕೊರಡಾಗಿದೆ ಬದುಕುಕಾಯ ಕರಗಿ ಚಿತ್ತ ಮಾಗಿ ತಾನಳಿದು ಶೂನ್ಯವಾದರೂನನ್ನ ಬಳಿ ಬರಲಿಲ್ಲ ನನ್ನ ದೇವರು ಅವನ ಕಾಣುವುದು ಆಸೆಯೋ ಪಾಶವೋ ಬಾಳಿನ ಗುರಿಯೋ ಅರಿಯದಾಗಿದೆ ಮನಕೆಕಣ್ಣಿನಲಿ ದೀಪ ಉರಿಸಿ,ಮೌನದ ವ್ರತ ತೊಟ್ಟಿದ್ದರೂ ನನ್ನ ಬಳಿ ಬರಲಿಲ್ಲ ನನ್ನ ದೇವರು ಶಿವೆ,ಒಮ್ಮೆ ದರುಶನವಾದರೆ ಸಾಕುಕಣ್ತುಂಬಿಕೊಂಡುನಿನ್ನನ್ನುಸಂತಸದಿಎವೆಮುಚ್ಚಿಬಿಡುವೆಕ್ಷಣ ಕ್ಷಣವು ಕಣಕಣವು ಆರಾಧಿಸಿ ಪೂಜಿಸುತ್ತಿದ್ದರೂ ನನ್ನ ಬಳಿ ಬರಲಿಲ್ಲ ನನ್ನ ದೇವರು.……….
ಗಝಲ್ ಆಸೀಫಾ ಬೇವು ಬೆಲ್ಲದೊಳಿಟ್ಟು ಕಷ್ಟ ಸುಖದ ಸಾಂಗತ್ಯ ಸಾರುತಿದೆ ಯುಗಾದಿಅಭ್ಯಂಜನವ ಮಾಡಿಸಿ ನವಚೈತನ್ಯ ಚೆಲ್ಲುತಿದೆ ಯುಗಾದಿ. ಹೊಸ ಚಿಗುರಿನ ಹೊದಿಕೆಯಲಿ ಕಂಗೊಳಿಸುತಿವೆ ಗಿಡಮರಗಳುಯುಗದ ಆದಿಯ ನೆನಪಿಸಿ ಹರ್ಷ ಹಂಚುತಿದೆ ಯುಗಾದಿ ಮೈಮರೆತ ದುಂಬಿಗಳ ಝೇಂಕಾರ ಹೊಂಗೆ ಬೇವು ಮಾಮರದ ತುಂಬಾಸವಿಜೇನಿನೊಲವು ಮನದ ಗೂಡುಗಳಲಿ ತುಂಬುತಿದೆ ಯುಗಾದಿ ತಳಿರು ತೋರಣ ಚೈತ್ರದಾಗಮನಕೆ ಸೂಚನೆಯನಿತ್ತು ನಗುತಿದೆಬ್ರಹ್ಮ ಸೃಷ್ಟಿಗೆ ಶಿರಬಾಗಿ ಶತಕೋಟಿ ನಮನ ಹೇಳುತಿದೆ ಯುಗಾದಿ ಹಳೆಯ ಹಗೆಯ ಕಳಚಿ ನಿಲ್ಲೋಣ ವಸಂತನಾಗಮನಕೆ ಎಲ್ಲಾಹೊಸ ವರುಷಕೆ ಕೈಬೀಸಿ ಆಸೀಯ ಕರೆಯುತಿದೆ ಯುಗಾದಿ ********************************
ಗಜಲ್ ಅಶೋಕ ಬಾಬು ಟೇಕಲ್ ಹಾಲುಂಡ ಹಸುಳೆಯೇ ಹದ್ದಂತೆ ಕುಕ್ಕಿ ಕುಕ್ಕಿ ತಿನ್ನುತ್ತಿದೆ ಈಗಹೊತ್ತೊತ್ತಿಗೂ ಮಡಿಲೇರಿದ ಕೂಸೇ ಕಾಳ ಸರ್ಪದಂತೆ ಬುಸುಗುಟ್ಟುತ್ತಿದೆ ಈಗ ನಿತ್ರಾಣಗೊಂಡು ಪಾತಾಳ ತುಳಿದಾಗ ಕೈ ಹಿಡಿದು ಮೇಲೆತ್ತಿದ್ದೆಕೃತಜ್ಞತೆಯ ಮರೆತು ನೇಣು ಕುಣಿಕೆ ಹುರಿಗೊಳಿಸುತ್ತಿದೆ ಈಗ ಮಾನವೀಯತೆ ಮುಂದೆ ಮಿಕ್ಕೆಲ್ಲವೂ ಗೌಣವೆಂದೇ ಭಾವಿಸಿದ್ದೆಅದೇ ಮಾನವೀಯತೆಗೆ ಚಟ್ಟ ಕಟ್ಟಿ ಬೀದಿಗಿಟ್ಟು ಹರಾಜಾಕುತ್ತಿದೆ ಈಗ ಊರಿಗೆ ಊರೇ ಅಪಸ್ವರದ ಕೊಳಲು ನುಡಿಸುತಿತ್ತು ಅಲ್ಲಿ !ಬುದ್ಧ ಸಾಗಿ ಬಂದ ಹಾದಿಯೂ ಮುಳ್ಳುಗಳನು ಮೊಳೆಸುತ್ತಿದೆ ಈಗ ಈಚಲು ಮರದ ನೆರಳು ಮಜ್ಜಿಗೆಗೆ ಯೋಗ್ಯವಲ್ಲ ಎಂದು ಅಬಾಟೇ ಗೆ ಹೇಳಿದ್ದೆಕಂಡವರ ಕಣ್ಣು ನಶೆ ಕುಡಿದು ಅಮಲೇರಿ ಬೊಬ್ಬೆ ಇಡುತ್ತಿದೆ ಈಗ. *************************************
ಗಜ಼ಲ್ ಎ. ಹೇಮಗಂಗಾ ಕೊರೋನಾ ಕನಸುಗಳ ಕಮರಿಸಿದೆ ಮರಳಿ ಊರ ಸೇರುವುದು ಹೇಗೆ ?ಹಾಳು ಸುರಿವ ಬೀದಿ ಮಸಣವಾಗಿದೆ ಮರಳಿ ಊರ ಸೇರುವುದು ಹೇಗೆ ? ಶಾಂತವಾಗಿ ಹರಿಯುತ್ತಿದ್ದ ಬಾಳಕಡಲಿನಲಿ ಎಣಿಸದ ಉಬ್ಬರವಿಳಿತಇರುವ ನೆಲೆ ಜೀವಗಳ ನಲುಗಿಸಿದೆ ಮರಳಿ ಊರ ಸೇರುವುದು ಹೇಗೆ ? ದುಡಿಮೆ ಆದಾಯವಿಲ್ಲದ ಬದುಕು ನರಕಸದೃಶವಲ್ಲದೇ ಮತ್ತೇನು ?ತಿನ್ನುವ ಅನ್ನಕೂ ತತ್ವಾರವಾಗಿದೆ ಮರಳಿ ಊರ ಸೇರುವುದು ಹೇಗೆ ? ಅನುಕಂಪವಿಲ್ಲದ ಸಾವು ಹಗಲಲ್ಲೂ ಭೀತಿಯ ಕಾರಿರುಳ ಹರಡಿದೆಬೆದರಿದ ಮನ ದೃಢತೆ ಕಳೆದುಕೊಂಡಿದೆ ಮರಳಿ ಊರ ಸೇರುವುದು ಹೇಗೆ ? ತಿಳಿದಿಲ್ಲ ಹೊಂಚು ಹಾಕಿದ ಹದ್ದಿನಂತೆ ಎಂದೆರಗುವುದೋ ಎಂದುಮದ್ದಿಲ್ಲದ ಮಹಾಮಾರಿ ಹೆದರಿಸಿದೆ ಮರಳಿ ಊರ ಸೇರುವುದು ಹೇಗೆ ? *****************
ಗಜಲ್ ಅರುಣಾ ನರೇಂದ್ರ ನಿನ್ನೆದೆಗೆ ಒರಗಿ ವೇದನೆ ಮರೆಯಬೇಕೆಂದಿರುವೆ ದೂರ ಸರಿಸದಿರುನಿನ್ನ ಮಡಿಲ ಮಗುವಾಗಿ ನಗೆ ಬೀರಬೇಕೆಂದಿರುವೆ ದೂರ ಸರಿಸದಿರು ಬೀಸುವ ಗಾಳಿ ಸೆರಗೆಳೆದು ನಕ್ಕು ಕಸಿವಿಸಿಗೊಳಿಸುತ್ತಿದೆನಿನ್ನ ತೋಳ ತೆಕ್ಕೆಯಲಿ ಚುಕ್ಕಿಗಳ ಎಣಿಸಬೇಕೆಂದಿರುವೆ ದೂರ ಸರಿಸದಿರು ಕಡಲ ಮೊರೆತ ಕಿವಿಗೆ ಅಪ್ಪಳಿಸಿದಾಗ ಜನ್ಮ ಜನ್ಮದ ವಿರಹ ಕೇಕೆ ಹಾಕುತ್ತದೆಮೈ ಬೆವರ ಗಂಧದಲಿ ರಾತ್ರಿಗಳ ಕಳೆಯಬೇಕೆಂದಿರುವೆ ದೂರ ಸರಿಸದಿರು ಉಕ್ಕೇರುವ ಯೌವನದ ಮಧು ಬಟ್ಟಲು ನಿನ್ನ ತುಟಿ ಸೋಕಲು ಕಾಯುತ್ತಿದೆನಶೆ ಏರಿದ ನಿನ್ನ ಕಣ್ಣ ಕೊಳದಲ್ಲಿ ಈಜಾಡಬೇಕೆಂದಿರುವೆ ದೂರ ಸರಿಸದಿರು ರಸಿಕತೆ ರಂಗೇರಿದಾಗ ಕೋಣೆಯ ದೀಪ ನಾಚಿ ಮುಖ ಮುಚ್ಚಿಕೊಳ್ಳುತ್ತದೆಅರುಣಾ ನೀ ಕೊಟ್ಟ ಹಿಡಿ ಪ್ರೀತಿ ಉಣ್ಣಬೇಕೆಂದಿರುವೆ ದೂರ ಸರಿಸದಿರು *******************************************
You cannot copy content of this page