ಜುಗಲ್ ಬಂದಿ ಗಜಲ್
ಗಜಲ್ ಜುಗಲ್ ಬಂದಿ
ಕಾವ್ಯ ಸಂಗಾತಿ ಗಜಲ್ ಎಂದರೇ ಶ್ರೀನಿವಾಸ ಜಾಲವಾದಿ ಒಲವ ತುಂಬಿದ ಹೃದಯದ ಮಾತುಪ್ರೀತಿ ಪ್ರೇಮದ ಸುಂದರ ಕನಸು ಕಾವ್ಯಾರಾಧಕರ ಪ್ರೀತಿಯ ನಲಿವುಮದಿರೆಯ ಮತ್ತಿನಲಿರುವ ದುಂಬಿ ಹೃದಯದ ಮಾತು ಪಿಸುಗುಟ್ಟುವಿಕೆಕಣ್ಣ ಸನ್ನೆಯ ತುಂಟಾಟದ ಮಜಲು ಪ್ರೇಮಿಯೊಡನಾಟದ ಯಕ್ಷಗಾನದುಂಬಿ ಝೇಂಕಾರ ದಿನ ಅನುದಿನ ನಿಸರ್ಗದ ಚೆಲುವಿಗೆ ಮುಂಗುರುಳುಸೂರ್ಯದೇವನ ಬೆಳ್ಳಿ ರಥಯಾತ್ರೆ ಗಜಲ್ ಎಂದರೆ ಪ್ರೀತಿ ಪ್ರೇಮದ ಜೇನುಹರುಷದ ಹೊನಲು ಬೆಳಕಿನ ಅಮಲು
ಕಾವ್ಯ ಸಂಗಾತಿ ಗಝಲ್ ಶಂಕರಾನಂದ ಹೆಬ್ಬಾಳ ಅನ್ಯಾಯವ ದಿಕ್ಕರಿಸಿ ಎದೆಗೊಟ್ಟವರುಕೋಟಿ ಚನ್ನಯ್ಯಬಡವರ ನೋವುಗಳಿಗೆ ದನಿಯಾದವರುಕೋಟಿ ಚನ್ನಯ್ಯ ಮಲ್ಲಯ್ಯ ಬುದ್ಯಂತನ ಯಮಪುರಿಗೆಅಟ್ಟಿದರೇಕೆಕಿನ್ನಿದಾರುವಿನ ಆಶ್ರಯವ ಪಡೆದವರುಕೋಟಿ ಚನ್ನಯ್ಯ ತುಳುನಾಡಿನಲಿ ದಂತಕಥೆಯಾಗಿ ಉಳಿದಮಹಾಚೇತನರಿವರುಸಾಯಿನ ಬೈದ್ಯನ ಮಮಕಾರದಿ ಬೆಳೆದವರುಕೋಟಿ ಚನ್ನಯ್ಯ ಚಂದುಗಿಡಿಯ ಕುತಂತ್ರಕ್ಕೆ ಬಲಿಯಾಗಿಬಂಧಿತರಾದವರುಎಣ್ಮೂರಿನ ದೇವಬಲ್ಲಾಳನಲಿ ಇರುವವರುಕೋಟಿ ಚನ್ನಯ್ಯ ಪಂಜದ ಗಡಿಯಲ್ಲಿ ವಾಸಸ್ಥಳವನುಮಾಡಿಕೊಂಡರೇಕೆಸುಂಕದ ಕಟ್ಟೆಯ ಜೋಯಿಸರ ಕೇಳಿದವರುಕೋಟಿ ಚನ್ನಯ್ಯ ಪಡುಮಲೆಯ ಬಲ್ಲಾಳರ ಆಕ್ರಮಣಕೆತುತ್ತಾದವರುಹೋರಾಡುತ್ತ ವೀರಮರಣ ಅಪ್ಪಿದವರುಕೋಟಿಚನ್ನಯ್ಯ ಜನಪರ ಕಾರ್ಯದಿಂದಲೆ ದೈವತ್ವವನುಏರಿದವರಿವರುಅಭಿನವನ ಗಝಲಿನಲಿ ಮೆರೆದವರುಕೋಟಿ ಚನ್ನಯ್ಯ
ಗಜಲ್ ನಯನ. ಜಿ. ಎಸ್ ನೋವುಗಳ ಕಾವಿನಲಿ ಬೆಂದು ಬಳಲದಿರು ಕರೆಯುತಿದೆ ಬಾಳಿನ ರಹದಾರಿವ್ಯಥೆಗಳೊಳು ಸಿಲುಕುತ ನಿತ್ಯ ಕುಗ್ಗದಿರು ಆದರಿಸುತಿದೆ ಬಾಳಿನ ರಹದಾರಿ ! ಉಳಿವು ಅಳಿವುಗಳು ಸೃಷ್ಟಿಯ ನಿಯಮ ಅರಿತು ಬದುಕು ಉತ್ಸಾಹದಿನಿರಾಸೆಗಳ ಗುಂಗಿನಲಿ ಮುಳುಗದಿರು ಸೆಳೆಯುತಿದೆ ಬಾಳಿನ ರಹದಾರಿ ! ಎಡೆಬಿಡದೆ ಸುರಿಸಿದ ಶ್ರಮದ ಬೆವರನು ಹಾಳು ಗೆಡವದಿರು ಮನವೇಪ್ರತಿಫಲವು ಇರಲು ನೊಂದು ದೂರ ತಳ್ಳದಿರು ಸಾಗುತಿದೆ ಬಾಳಿನ ರಹದಾರಿ ! ಬುದ್ಧಿ ಜೀವಿಯು ಮನುಜ ಎಂಬುದ ಅರಿತು ತಿಳಿ ಸ್ಥಿತಿ ಗತಿಯ ಸೂಕ್ಷ್ಮದಿಭವಿಷ್ಯವಿದೆ ಬದುಕಿನಲಿ ನಿರ್ಲಕ್ಷಿಸದಿರು ಹೆಜ್ಜೆಯಿಡುತಿದೆ ಬಾಳಿನ ರಹದಾರಿ ! ಕಂಬನಿಗಳ ಭಾವವ ಕಂಡು ಮರುಗಿ ಮೌನವಾಗಿಹಳು ಇಂದು ‘ನಯನ’ದೃಢನಿರ್ಧಾರದ ದಿಟ್ಟತನದಿ ಮಂಕಾಗದಿರು ಓಡುತಿದೆ ಬಾಳಿನ ರಹದಾರಿ !!
ಗಜಲ್ ರಾಹುಲ ಮರಳಿ ಮನಸಿನ ಹಿಡಿತ ತಪ್ಪಿ ಭಾವನೆಗಳ ಬರವಾಗಿದೆ ಸಾಕಿಹೃದಯದಿ ಭಾವನೆಗಳಿಲ್ಲದೆ ಮನಸಿಗೆ ಘಾಸಿಯಾಗಿದೆ ಸಾಕಿ ಬೇಕು ಬೇಕೆಂಬ ಹಪಹಪಿಯಲಿ ಇದ್ದ ವೈಭವ ಅನುಭವಿಸುತಿಲ್ಲಸಾಕು ಎಂಬ ತೃಪ್ತಿ ಸುಖದ ಸುಪತ್ತಿಗೆಯಾಗಿದೆ ಸಾಕಿ ಅನ್ಯರ ಕಷ್ಟ ನೋಡುತಿರೆ ಕರಳು ಚುರ್ ಎನ್ನುವುದುಎನ್ನ ಹೃದಯ ಕಿವುಚಿದರೂ ಕೇಳವರಿಲ್ಲದಂತಾಗಿದೆ ಸಾಕಿ ಕೊಂಚ ಮದಿರೆ ದೊರೆತರೆ ನಶೆಯಲಿ ಹಾಯಾಗಿರಬಹುದುಮನದ ತುಮುಲಗಳನು ಹೊರಹಾಕಲು ಕಾವ್ಯ ರಚಿಸಬೇಕಾಗಿದೆ ಸಾಕಿ ಪ್ರೀತಿ ಪ್ರೇಮ ಸ್ನೇಹಗಳೆಂಬ ಸಂಬಂಧಗಳನು ಮನ ನಂಬಿದೆಜೀವಕವಿ ನೋವಿಂದ ಬಳಲಿದರೂ ಉಸಿರಾಡುವಂತಾಗಿದೆ ಸಾಕಿ
ಗಝಲ್ ತೂತು ಬಿದ್ದ ಹಚ್ಚಡದಲ್ಲಿ ಒದ್ದಾಡುತಿದೆದೇವನಿಟ್ಟ ಕನಸುಕಾದ ಹೆಂಚಿನ ರೊಟ್ಟಿಯಂತೆ ಸುಡುತಿದೆದೇವನಿಟ್ಟ ಕನಸು ನಿಗಿನಿಗಿ ಕೆಂಡವಾಗಿ ಮನವು ಕಂಪನೆಕಾಯ್ದು ಹೋಯಿತೇಬನದ ಸುಮದ ಆಸೆಯ ಕಮರಿಸುತಿದೆದೇವನಿಟ್ಟ ಕನಸು ತುತ್ತು ಕೂಳಿಗೂ ನಾನಾ ಬಗೆಯಲಿವೇಷ ತೊಡಿಸಿತೆಢಂಢಂಯೆಂದು ವಾದ್ಯ ಬಾರಿಸುತಿದೆದೇವನಿಟ್ಟ ಕನಸು ಶಾಪಗ್ರಸ್ತ ಅಹಲ್ಯೆಯಂತೆ ಹೃದಯಮುಕ್ತಿ ಬೇಡುತಿದೆಬಡತನದ ಬಾಣಲೆಯಲಿ ಬೇಯುತಿದೆದೇವನಿಟ್ಟ ಕನಸು ಸನ್ಯಾಸಿಯಂತೆ ಸನ್ಮಾರ್ಗ ಅರಸುತಿದೆಅಭಿನವನ ಕಾವ್ಯವಿದೂಷಕನ ತೆರದಿ ಹಾಸ್ಯ ಮಾಡುತಿದೆದೇವನಿಟ್ಟ ಕನಸು ಶಂಕರಾನಂದ ಹೆಬ್ಬಾಳ
ಗಜಲ್ ನಯನ. ಜಿ. ಎಸ್ ನಗುತಿಹ ಕಂಗಳ ಹಿಂದಿಹುದು ಕಡು ನೋವುಗಳು ಬಲ್ಲವರು ಯಾರುಅರಳು ತುಟಿಗಳೊಡಲಿನ ನೊಂದ ಮಾತುಗಳ ಆಲಿಸುವವರು ಯಾರು ! ನಕ್ಕಾಗ ನಗುತ , ನೊಂದಾಗ ಮೌನದಿ ಅತ್ತು ದಣಿಯುತ್ತಿದೆ ಮನಸ್ಸುಮನವ ಹಿಂಡುತಿದೆ ವ್ಯಂಗ್ಯಗಳ ಹಿಂಸೆ ಇದ ಅಳೆಯುವವರು ಯಾರು ! ನಿಶೆಯ ನಶೆಗೂ ಮರೀಚಿಕೆ ಆದಂತಿದೆ ಸುಖ ಸ್ವಪ್ನಗಳ ಸಿಹಿಯಾದ ನಶೆನೀರವ ಕ್ಷಣಗಳನೂ ಭೀತಿಗೊಳಿಸುತಿದೆ ಅಳಲು ಅರಿಯುವವರು ಯಾರು ! ಆಶೆಗಳ ಕನಸು ಹುಸಿಯಾಗುತಿದೆ ಕಪಟಿಗರ ಕ್ರೌರ್ಯದಿ ನಲುಗಿ ಕೊರಗಿಮನದ ತುಮುಲಗಳು ತಾರಕಕ್ಕೇರಿದೆ ಅರಿತು ಸಂತೈಸುವವರು ಯಾರು ! ಬಾಳ್ವೆಯು ಕಂಡಂತಿಲ್ಲ , ಬುಡಮೇಲಾದೀತು ಕನಸುಗಳು ಎಚ್ಚರ ‘ನಯನ’ಬಣ್ಣ ಬಣ್ಣದ ಬೂಟಾಟಿಕೆಯ ಜನರಿಹರು ಜೊತೆ ಬರುವವರು ಯಾರು !
You cannot copy content of this page