ಮಾಜಾನ್ ಮಸ್ಕಿ ಅವರ ಗಜಲ್
ಕಾವ್ಯ ಸಂಗಾತಿ ಮಾಜಾನ್ ಮಸ್ಕಿ ಗಜಲ್ ಬೆಳದಿಂಗಳ ನಗು ನೀನಾಗಿರುವೆಬದುಕಿನ ಬೆಳಗು ನೀನಾಗಿರುವೆ ಸಾವಿರಾರು ವೇದನೆ ತುಂಬಿವೆನಲಿವಿನ ಗುನುಗು ನೀನಾಗಿರುವೆ ಸುಂದರ ಕನಸಿನ ಹೂದೊಟದಲ್ಲಿಸುಗಂಧದ ಸೊಬಗು ನೀನಾಗಿರುವೆ ಹಚ್ಚ ಹಸಿರಿನ ಬದುಕು ಇದಲ್ಲವೇಪ್ರಕೃತಿಯ ಬೆರಗು ನೀನಾಗಿರುವೆ ಮಾಜಾಳ ಹೃದಯ ನೀಲಾಕಾಶದಂತೆನಕ್ಷತ್ರಗಳ ಮಿನುಗು ನೀನಾಗಿರುವೆ ಮಾಜಾನ್ ಮಸ್ಕಿ
ಮಾಜಾನ್ ಮಸ್ಕಿ ಅವರ ಗಜಲ್ Read Post »









