ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಕಥಾಯಾನ

ಮೇರಿಯ ಮಕರಸಂಕ್ರಮಣ ವೇಣುಗೋಪಾಲ್ ಸ್ನಾನ ಮುಗಿಸಿ ಉದ್ದ ಕೂದಲಿಗೆ ಟವಲ್ ಸುತ್ತುಕಟ್ಟಿ ಕನ್ನಡಿಯ ಎದುರು ಬೆತ್ತಲೆ ನಿಂತವಳಿಗೆ ನವಯೌವನದ ಉಮ್ಮಸ್ಸೊಂದು ದೇಹದ ಪ್ರತಿ ಅಂಗಗಳಲ್ಲೂ ಹೊಮ್ಮಿದಂತೆ ಕಾಣುತಿತ್ತು. ಆ ಅನಿರೀಕ್ಷಿತ ಮಿಲನದ ಘಳಿಗೆಯನ್ನು ಮೆಲುಕು ಹಾಕುತ್ತ ನಿಂತುಬಿಟ್ಟಳು, ಕೆಲವು ವರ್ಷಗಳೇ ಕಳೆದಿದ್ದೋ ಗಂಡನ ಅಗಲಿಕೆಯ ನಂತರ ದೇಹ ಸುಖ ಕಂಡು.! ಅನಿರೀಕ್ಷಿತವೆಂಬಂತೆ ವಾರಪೂರ್ತಿ ಸುರಿದ ಇಳೆ ಮಳೆಯಾಟದೊಳಗೆ ಅವರಿಬ್ಬರ ರತಿಕಾಮದಾಟವೂ ಮುಗಿದಿತ್ತು..! ಅವನು ಎಂದಿನಂತೆ ಸಂಜೆಯ ನಾಲ್ಕು ಘಂಟೆಗೆ ಬರುತ್ತಿದ್ದವನು ಸ್ವಲ್ಪತಡವಾಗಿ ಬಂದಿದ್ದ..! ಮೊಗವೇಕೋ ಬಾಡಿದಂತಿತ್ತು.! ಹೊರಗೆ ಕಟ್ಟಿದ್ದ ‘ಮುನ್ನಿ’ ಯಾಕೋ ಇಂದು ಹುಚ್ಚು ಬಂದವಳಂತೆ ಬೊಗುಳುತ್ತಿದ್ದಳು.! ಎಷ್ಟು ಸಾಮಧಾನಿಸಿದರು ಬೊಗಳುವುದು ಮಾತ್ರ ನಿಲ್ಲಿಸಲಿಲ್ಲ.. ಆಗಸ ಪೂರ್ತಿಯಾಗಿ ಕಡುಕಂದು ಬಣ್ಣದ ಮೋಡಗಳಿಂದ ಅವಕುಂಠನವಾಗುತ್ತಿತ್ತು. ಮೋಡದ ಸಂಧುಗಳಲ್ಲಿ ಸಣ್ಣನೆಯ ಮಿಂಚುಗಳಿಂದ ಶುರುವಾದ ತಿಳಿಮಳೆ ಸಿಡಿಲಿಗೆ ತಿರುಗಿ ಜೋರಾಗಿ ಧರೆಗೆ ಎರಗುತ್ತಿತ್ತು. ಇವನು ಮಾತ್ರ ಸದ್ದಿಲ್ಲದೆ ಮೌನಕ್ಕೆ ಶರಣಾಗಿದ್ದ.! ಟೀ ತಂದುಕೊಟ್ಟೆ ಹೀರುತ್ತ ಗಾಢವಾದ ಯೋಚನೆಯಲ್ಲಿ ಮುಳುಗಿದ್ದ, ನಾನು ಅವನನ್ನೇ ನೋಡುತ್ತಾ ಕುಳಿತುಬಿಟ್ಟೆ ಹೊರಗಿನ ಚಳಿಯಿಂದ ಮೈ ಕಂಪಿಸುತ್ತಿತ್ತು.! ಇಂದೆಕೋ ಅವನ ಕಣ್ಣುಗಳು ಮಾದಕವಾಗಿ ಕಾಣುತ್ತಿತ್ತು, ನಾನೇ ಎದ್ದು ದಿನವೂ ಆಡುತ್ತಿದ್ದ ಚದುರಂಗದ ಬೋರ್ಡ್ ಅನ್ನು ಅವನ ಮುಂದಿಟ್ಟೆ..! ಏನು ಮಾತನಾಡದೆ ಆಟದ ಒಳಗಿಳಿದು ಮಗ್ನನಾದ.! ಈ ಮಳೆಯ ಚಳಿಗೆ ನನ್ನ ಭಾವನೆಗಳು ಸಣ್ಣಗೆ ಅರಳುತ್ತ ಅವನ ಉಸಿರಿನ ಬಿಸಿಗೆ ಬಿರಿದು ಕಟ್ಟದಾಚೆ ಮುಗುಚುವ ನೀರಿನಪಾತದಲ್ಲಿ ಉದುರಿ ಸತ್ತ ಹೂಗಳಂತೆ..! ಅವನ ಶುಭ್ರವಾದ ಕಡುಕಪ್ಪಿನ ಕಣ್ಣುಗಳ ನೋಟಕ್ಕೆ ನೋಟ ಬೆಸೆಯಾಲಾಗದೆ ಆಸೆಗಳು ಸಾಯುತ್ತಿದ್ದವು..! ಪ್ರತಿ ಬಾರಿಯ ಚದುರಂಗದ ನಡೆಯಲ್ಲಿ ನನ್ನ ಕಾಲಾಳು ಬಲಿಯಾದಾಗಲು ನಾನು ಅವನ ಕಂಗಳನ್ನು ನೋಡುತ್ತಿದ್ದೆ.! ಅವನು ಮಾತ್ರ ಆ ನೋಟದ ಸೆಳೆತಕ್ಕೆ ಸಿಗುತ್ತಿರಲಿಲ್ಲ, ಆಟವು ಕೊನೆಹಂತಕ್ಕೆ ತಲುಪಿತ್ತು.! ನಾನು ಕೂಡ..! ರಾಜನನ್ನು ಅಲುಗದಂತೆ ಕಟ್ಟಿಹಾಕಿ ‘ಚೆಕ್ಮೇಟ್’ ಹೇಳಿ ಮುಗುಳುನಗುತ್ತ ನನ್ನ ಮೊಗನೋಡಿದ. “ಹೌದು” ಆ ಘಳಿಗೆಯಲ್ಲಿ ಅವನನ್ನು ನನ್ನ ನೋಟದ ಸೆಳೆವಿನಲ್ಲಿ ಸಿಕ್ಕಿಸಿಕೊಂಡುಬಿಟ್ಟೆ; ನೋಟ ಕದಲದಂತೆ. ಅವನು ಸಣ್ಣಗೆ ಕಂಪಿಸಿದ್ದ.! ನನ್ನ ಎದೆಯ ಏರಿಳಿತ ಹೆಚ್ಚಾಗುತ್ತಿತ್ತು.! ಮಳೆಯ ಅಬ್ಬರವು ಹೆಚ್ಚಾಗುತ್ತಿತ್ತು.! ಮುನ್ನಿಯ ಬೊಗಳುವಿಕೆ ಕೂಡ ಹೆಚ್ಚಾಗುತ್ತಿತ್ತು.! ಕಂದರದ ಒಡಲಾಳದಿಂದ ಭಾರಿ ಸಿಡಿಲೊಂದು ಢಮ್ ಎಂದು ಭೂಮಿಗೆ ಅಪ್ಪಳಿಸಿತು. ಬೆಚ್ಚಿಹೋದೆ.! ಅವನ ಮಗುಲಿಗೆ ಬಂದು ಭುಜವಿಡಿದು ಕುಳಿತೆ, ಮತ್ತೊಂದು ಮೊಗದೊಂದು ಬಡಿಯುತ್ತಲಿವೆ..! ಅವನು ನನ್ನ ಬೆನ್ನ ಮೇಲೆ ಭಯ ನೀಗಿಸಲು ಕೈಇಟ್ಟ.! ಆ ಕೈಗಳನ್ನಿಡಿದು ತುಟಿಗೆ ಒತ್ತಿಹಿಡಿದೆ.! ಪ್ರತಿರೋಧಿಸುತ್ತಿದ್ದ ಇಷ್ಟು ವರ್ಷಗಳಿಂದ ಕಟ್ಟಿದ್ದ ಬಯಕೆ ಇಂದು ಬೋರ್ಗರೆದು ಸುರಿಯುತ್ತಿರುವ ಮಳೆಗೆ ತುಂಬಿ ಕೋಡಿಯೊಡೆದಿತ್ತು.! ಹೌದು ನನ್ನ ಬಯಕೆಯ ಪಾತಕ್ಕೆ ಸಿಕ್ಕಿ ಮಗುಚಿ ಬಿದ್ದು ತೋಯ್ದು ಹೋದ..! ನನ್ನ ಪ್ರತಿ ಮುತ್ತಿನಲ್ಲೂ ಕರಗಿ ಶರಣಾಗತನಾದ.! ಇಬ್ಬರೂ ಶೃಂಗಾರದ ಕಡಲೊಳಗೆ ಈಜುವ ಮೀನುಗಳಾಗಿದ್ದರೂ ಅವನ ಪ್ರತಿ ಸ್ಪರ್ಶದಲ್ಲೂ ಅವಳ ಹೆಣ್ಣತನದ ಆಸೆಯೆಲ್ಲ ಜಿನುಗಿ ನೀರಾಗಿ ಅವನ ಆಗಮನಕ್ಕೆ ಅಣಿಯಾಗಿ ಸುಖದ ತುತ್ತತುದಿಗೆ ತಲುಪಿದ್ದಳು.! ಇಬ್ಬರೂ ಮಳೆಯೊಳಗೆ ಬಿಸಿಯಾದ ಹನಿಗಳಾಗಿ ಕರಗಿ ಹೋಗಿದ್ದರು ಆಸೆಯೂ ಕೂಡ ಬೆವರಾಗಿ ಬಸಿದು ಇಂಗಿಹೋಗುತ್ತಿತ್ತು.! ವಾರಪೂರ್ತಿ ಅಖಂಡ ಕಾಮದೊಳೊಗೆ ಮುಳುಗಿ ವಿಧ ವಿಧವಾಗಿ ಈಜಿದ್ದರು.! ಈ ಅಖಂಡ ಮಿಲನದಿಂದ ಅವಳ ಕಾಮದಸಿವು ಇಂಗಿತ್ತ…!? ಅಥವಾ ಅವನ ನಿರ್ಮಲ ಪ್ರೇಮವೂ ಸತ್ತು ಅವಳ ಕಾಮದಸಿವಿಗೆ ಆಹಾರವಾಗಿತ್ತ..!? ಇಲ್ಲಾ ಪ್ರೇಮವೂ ಕೊನೆಯ ಹಂತ ತಲುಪಿ ಮಿಲನವಾಗಿ ಅವಳಲ್ಲಿ ಕರಗಿತ್ತ..!? ಹತ್ತು ವರುಷಗಳ ಹಿಂದೆ ರಂಗನಾಥಗುಡಿಯ ಹೊರಭಾಗದ ಒಂಟಿ ಅರಳಿಮರದ ಕೆಳಗೆ ಜನಿವಾರವಾಕಿದ್ದ ಈ ಸತ್ಯ ಕುಳಿತಿದ್ದ, ವಸಂತನ ಹಾವಳಿಗೆ ಬದಲಾಗುತ್ತ ಹಚ್ಚ ತಿಳಿಹಸಿರಿನಿಂದ ಚಿಗುರೊಡೆಯುತ್ತಿರುವ ಅರಳಿಮರ ಹಿಂಬದಿಗಿತ್ತು, ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಬದಲಾಗಿದ್ದ ಸೂರ್ಯ ಎದುರಿಗಿದ್ದ ರೇಖಾಳಿಂದ ಬದಲಾಗಿದ್ದ ಈ ಮೇರಿ ಅವನ ಪಕ್ಕದಲ್ಲೇ ಕುಳಿತ್ತಿದ್ದಳು, ಬದಲಾವಣೆ ಈ ಜಗದ ನಿಯಮ ಹೊಸದೊಂದು ಹುರುಪಿನೊಂದಿಗೆ ಹೊಸತನ ಆಗಮಿಸಲೇ ಬೇಕು, ಹಾಗೆ ಆಗಮನವಾಗಿದ್ದು ಕೂಡ ನಿರ್ಗಮಿಸಲೇ ಬೇಕು.! ಇದು ಕೂಡ ಜಗದ ನಿಯಮವೇ.! ಆದರೆ ಅಂದು ನನಗೆ ತಿಳಿಯಲೇ ಇಲ್ಲ.! ಅವನು ಮೌನವಾಗಿ ಕುಳಿತಿದ್ದ ಸಣ್ಣಗೆ ಗಾಳಿ ಬೀಸಿದರು ಸತ್ತುಬಿದ್ದ ಎಲೆಗಳ ಜೂರ್ಗುಟ್ಟುವ ಶಬ್ದಮಾತ್ರ ಕೇಳುತ್ತಿತ್ತು..! ಇದೆ ಎಲೆಗಳು ಚಿಗುರೊಡೆದು ಬೆಳೆದು ಬಲಿಯುವಾಗ ಮೌನವಾಗಿರುತ್ತವೆ ಆದರೆ ಸತ್ತು ಬಿದ್ದಿರುವಾಗ ಸದ್ದುಮಾಡುತ್ತಿವೇ.! ಮನುಷ್ಯಮಾತ್ರ ಇದರ ತದ್ವಿರುದ್ಧ..! ನಾನೇ ಆ ಮೌನ ಒಡೆದು ‘ಸತ್ಯ’ ಎಂದೇ ಅವನು ಮಾತನಾಡಲಿಲ್ಲ.! ಮತ್ತೊಮ್ಮೆ ಏರುಧನಿಯಲ್ಲಿ ‘ಹೇ ಸತ್ಯ’ ಎಂದೇ ‘ಹೂ’ ಎಂದ.. ಆದರೆ ನನ್ನೆಡೆಗೆ ತಿರುಗಲಿಲ್ಲ ನನ್ನ ಸಂಭ್ರಮಕ್ಕೆ ಅಷ್ಟೇ ಸಾಕಿತ್ತು.! ನನ್ನ ಮದುವೆಯ ಬೆಳವಣಿಗೆಯನ್ನೆಲ್ಲ ಮತ್ತು ಹುಡುಗನ ಬಗ್ಗೆ ಗೊತ್ತಿದ್ದಷ್ಟು.! ನಾನು ಸೃಷ್ಟಿಸಿಕೊಂಡಿದಷ್ಟು.! ಇಲ್ಲದಷ್ಟು.! ಇರುವುದಕ್ಕಿಷ್ಟು.! ಸೇರಿಸಿ ಅವನು ಕರುಬುವಂತೆ ಗುಣಗಾನ ಮಾಡಿ ಹೇಳುತ್ತಿದ್ದೆ, ಅವನ ಮುಖದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ, ಶಿಲುಬೆ ಏರಿದ ಏಸುವಿನಂತಿತ್ತು.! ನಾನು ನಿರುತ್ಸಾಹಳಾದೆ, ಸಿಕ್ಕಾಗಲೆಲ್ಲ ನನ್ನ ಧರ್ಮದ ಬಗ್ಗೆ ಹೀಯಾಳಿಸುವ ಮಾತನಾಡುತ್ತಿದ್ದ.! ಎಲ್ಲಾ ಧರ್ಮಗಳ ಲೋಪಗಳನ್ನೆಲ್ಲ ತೆಗಳಿ ಉಗಿಯುತ್ತಿದ್ದ.! ತನ್ನ ಧರ್ಮವೇ ಮೇಲೆಂದು ಎಂದು ಹೇಳಿದವನಲ್ಲ.! ಮನುಷ್ಯನ ಸುಖ ಜೀವನಕ್ಕೆ ಈ ಧರ್ಮಗಳೇ ಬೇಲಿ ಎನ್ನುತ್ತಿದ್ದ.! ಅವನು ಹೇಳುವುದು ಸರಿ ಎನಿಸಿದರೂ ಸೋಲುವಂತ ಹೆಣ್ಣು ನಾನಾಗಿರಲಿಲ್ಲ; ಪ್ರತಿವಾದಿಸುತ್ತಿದ್ದೆ. ವಿತಂಡವಾದಕ್ಕಿಳಿಯುತ್ತಿದ್ದೆ.! ನಂತರ ಇಬ್ಬರು ಜಗಳವಾಡಿ ಸುಮ್ಮನಾಗುತ್ತಿದ್ದೆವು.. ಇಂದು ನಾನು ಅಷ್ಟು ಮಾತನಾಡಿದರು ಪ್ರತಿಮಾತನಾಡಲಿಲ್ಲ, ನಿರ್ಲಿಪ್ತತತೆಯಿಲ್ಲದ್ದಿದ್ದರು ಅವನು ಗೊಂದಲದಲ್ಲಿದ್ದ, ‘ಏನು ಹೇಳು ಸತ್ಯ ಏತಕ್ಕಾಗಿ ಈಗಿದ್ದಿಯ ಮಾತನಾಡು’ ಎಂದೇ ಮುಖ ನೋಡಿದ. ಎದ್ದು ನಿಂತ. ಅವನು ಕೇಳುವ ಪ್ರಶ್ನೆಗಳಿಗೆಲ್ಲ ನನ್ನಿಂದ ಆಗಲೇ ಉತ್ತರ ಸಿಕ್ಕಿವೆಂಬಂತೆ! ನಾಳೆಯಿಂದ ನಾನು ಊರಿನಲ್ಲಿ ಇರುವುದಿಲ್ಲವೆಂದ. ಎಷ್ಟು ದಿನ ಸತ್ಯ.? ‘ಗೊತ್ತಿಲ್ಲ’ ‘ಎಲ್ಲಿಗೆ ಹೋಗುತ್ತಿಯ.? ‘ನಿನಗೆ ಬೇಡದ ವಿಷಯ’, ಧನಿಯಲ್ಲಿ ತಿರಸ್ಕಾರವಿತ್ತು. ‘ನನ್ನ ಮದುವೆಗಾದರು ಬರುತ್ತಿಯ ತಾನೇ’ ಎಂದೆ. ಅವನು ಮಾತನಾಡಲಿಲ್ಲ… ಆ ಮೌನ ಅವನ ಮಾತಿಗಿಂತ ಕಠಿಣವಾಗಿತ್ತು . ಹಾಗೆ ಹೊರಟುಹೋದ. ಮೌನದಲ್ಲಿ ಮುಳುಗಿದ ಸೂರ್ಯನಂತೆ ಗುಡಿಯ ಒಳಗೆ ಸಂಕ್ರಮಣ ಪೂಜೆಯ ಘಂಟವಾದ್ಯಗಳು ಮೊಳಗಿದ್ದವು, ಸಂಕ್ರಮಣದ ಸೂರ್ಯಕೂಡ ಎದುರಿನ ಚಿಕ್ಕ ಬೆಟ್ಟದ ಕೆಳಗೆ ಮುಳುಗಿದ್ದರು ಅವನ ಇರುವಿಕೆಯ ಬೆಳಕು ಮಾತ್ರ ಮೋಡಗಳಿಂದ ಗೆರೆ ಗೆರೆಯಾಗಿ ಸೀಳಿ ಪ್ರಕಾಶಿಸುತ್ತಿತ್ತು.. ಅವಳು ಸ್ವಲ್ಪ ಸಮಯ ಅಲ್ಲೇ ನಿಂತು ಸೂರ್ಯ ಮುಳುಗಿದ ದಿಕ್ಕಿನೆಡೆಗೆ ಹೊರಟುಹೋದಳು.. ಇಬ್ಬರ ಬದುಕಿಗೂ ವಸಂತನ ಆಗಮನವಾಗಿತ್ತು ಅವಳು ಚಿಗುರೆಲೆಯ ಹುರುಪಿನಲ್ಲಿದ್ದಳು.! ಅವನು ಉದುರಿಬಿದ್ದ ಎಲೆಯಂತಿದ್ದ..! ಮದುವೆಯ ಹಿಂದಿನ ದಿನಕೂಡ ಅರಳಿಮರದ ಬಳಿ ಬಂದು ಹೋಗಿದ್ದಳು ಬೃಹದಾಕಾರದ ದೈತ್ಯಮರ ಮಾತ್ರ ಹಸಿರೋದ್ದು ನಿಂತಿತ್ತು..! ಸತ್ಯ ಕಾಣಲಿಲ್ಲ.! ಅವನೆದೆಯ ಕಗ್ಗತ್ತಲ ಕಮರಿಯೊಳಗೆ ದಾರಿ ತಪ್ಪಿದವನಂತೆ ಅಲೆಯುತ್ತಿದ್ದ ಕಿರುಚುತ್ತಿದ್ದ ಅಳುತ್ತಿದ ಸುತ್ತಲೂ ನೋಡುತ್ತಿದ್ದ ಗವ್ವೆನುವಷ್ಟು ಅಂಧಕಾರ ಬೆಳಕಿಲ್ಲ.! ಸೂರ್ಯನಿಲ್ಲ.! ಚಂದ್ರನಿಲ್ಲ..! ಚುಕ್ಕಿಗಳಿಲ್ಲ.! ತಂಪಾದ ಗಾಳಿಯೂ ಇಲ್ಲ..! ಆ ಗಾಢಾಂಧಕಾರದಲ್ಲಿ ಸತ್ಯ ಸಣ್ಣಗೆ ಜರ್ಜರಿತನಾಗಿ ನಲುಗುತಿದ್ದ.! ಇದ್ದ ಊರೆಕೋ ನರಕವಾಗುತ್ತಿತ್ತು ಆ ಮರ ಮುಂದಿನ ದೇವಸ್ಥಾನ ಇಬ್ಬರು ನೆಡೆದ ಹಾದಿಗಳು.. ಮರಕೋತಿ ಆಡುತ್ತಿದ್ದ ಜಾಗ, ಮಾವಿನ ಹಣ್ಣು ಕದ್ದು ತಿನ್ನುವಾಗ ಸಿಕ್ಕಿಬಿದ್ಧ ತೋಟಗಳು ಎಲ್ಲವೂ ಈಗ ಅವನಿಗೆ ನರಕದ ರಾಯಭಾರಿಗಳಗಿದ್ದವು ಊರುಬಿಟ್ಟವನೆ, ಅಕ್ಕನ ಮನೆಯ ಮಹಡಿಸೇರಿ ಮಲಗಿಬಿಟ್ಟ ಸತ್ಯನ ಆ ಮಹಡಿಯ ಮನೆಗೂ ಮನಕ್ಕೂ ಸೂತಕ ಬಂದು ಒಳಹೊಕ್ಕಿ ಮಲಗಿ ಬಿಟ್ಟಿದೆ ಎಚ್ಚರವಾದಗ ಸಾವಾಗಬಹುದು….. ಕುಡಿದ ಅಮಲಿನಲ್ಲಿ ರಾತ್ರಿ ಹಗಲುಗಳ ಪರಿವಿಲ್ಲದಂತೆ ನಶೆಯಲ್ಲಿ ಮುಳುಗಿ ಮೌನವಾಗಿ ಹಳೆಯದನ್ನೆಲ್ಲ ಕ್ಷಣಕಾಲ ಮರೆತು ಮತ್ತೊಮ್ಮೆ ದೈತ್ಯಕಾರವಾಗಿ ಸೃಷ್ಟಿಸಿಕೊಂಡು ಮನದ ಒಳಗೂ ಹೊರಗೂ ಕಾದಾಡುತ್ತಿದಾನೆ.. ಆತ ಮನೆಯ ಹೊರಗಿನ ಬೆಳಕನ್ನು ಕಾಣುವುದು ಕೂಡ ವಾರಕೊಮ್ಮೆ ಅಷ್ಟೇ..! ತನ್ನ ಬಳಿ ಇದ್ದ ತುಂಬಿದ ಬಾಟಲುಗಳು ಖಾಲಿಯಾದಗ ಮಾತ್ರ ಮಹಡಿಯ ಒಂದೊಂದೇ ಮೆಟ್ಟಿಲುಗಳನ್ನ ತಡವರಿಸಿಕೊಂಡಿಳಿದು ಗೇಟಿನ ಬಾಗಿಲು ತೆಗೆಯುವ ಸದ್ದಿಗೆ ತನ್ನ ಅಕ್ಕನ ಬೈಗುಳ ಕೇಳುತ್ತವೆ ಆದರೆ ಅವು ಅವನ ಒಳ ತಾಕುವುದಿಲ್ಲ, ಆತುರ ಆತುರದಲ್ಲೇ ನೆಡೆದು ಬೇಕಾದಷ್ಟನ್ನು ತಂದು ಮಹಡಿ ಹತ್ತಿ ಬಾಗಿಲು ಮುಚ್ಚಿ ಕುಳಿತು ಬಿಡುತ್ತಾನೆ..! ಊಟ ತಿಂಡಿಗಳು ಅಕ್ಕನ ಮನೆಯಿಂದಲೇ ಮೆಟ್ಟಿಲನತ್ತಿ ಬರುತ್ತವೆ.. ಕೆಲವು ಬಾರಿ ಖಾಲಿಯಾಗುತ್ತದೆ ಕೆಲವೊಮ್ಮೆ ಹಾಗೆ ಒಣಗಿಯೋ ಹಳಸಿಯೋ ವಾಪಸಿಳಿದು ಕಸದ ಬುಟ್ಟಿ ಸೇರುತ್ತವೆ. ಇತ್ತ ಮೇರಿಯ ಸಂಸಾರದ ಸಂತೋಷದ ದಿನಗಳೆಲ್ಲ ಮುಗಿದ್ದುಹೋಗಿದ್ದೊ, ಸೂತಕವು ಇವಳ ಮನೆಯ ಬಾಗಿಲನ್ನು ಬಂದು ಬಡಿಯಿತು ಅವಳ ಗಂಡನೆಂಬ ಜೀವ ಸತ್ತುಬಿತ್ತು.. (ಸಾವಿಗೆ ಸಾವಿರ ಕಾರಣಗಳು ಇರುತ್ತವೆ.ಇಲ್ಲಿ ಈ ಸಾವಿಗೆ ಕಾರಣದ ಅವಶ್ಯಕತೆ ಇಲ್ಲ ಹೆಸಲಿಲ್ಲದ ಪಾತ್ರ ಸಾಯಬೇಕು) ಇವಳು ಕೂಡ ಕೆಲವು ತಿಂಗಳುಗಳು ನಲುಗಿದ್ದಳು ಆದರೆ ಸೋಲುವ ಹೆಣ್ಣಲ್ಲ ಬದುಕಿನ ಸವಾಲುಗಳನ್ನೇ ತುಳಿದು ನೆಡೆಯುತ್ತಿದಳು. ಇಂದಿಗೂ ಅವಳನ್ನು ಸೆಣಸಿ ಸೋಲಿಸಿ ಕಣ್ಣೀರಿಡಿಸುವ ಕೊರತೆಯೆಂದರೆ ಮಕ್ಕಳದ್ದು ಮಾತ್ರ. ಭಾನುವಾರದಂದು ಚರ್ಚೆಗೆ ಬರುವ ಮಕ್ಕಳೊಂದಿಗೆ ಆಟವಾಡಿ ನಲಿಯುತ್ತ ಆ ಕೊರತೆಯನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದಾಳೇ. ಇಲ್ಲದನೆಲ್ಲ ತನ್ನೊಳಗೆ ಸೃಷ್ಟಿಸಿಕೊಂಡು ಬದುಕುತ್ತಿದ್ದಾಳೆ, ಹೀಗೆ ಇಬ್ಬರ ದಿನಗಳು ಕಳೆಯುತ್ತಿವೆ…..(ಈ ಕಥೆಯಲ್ಲಿ ಇಬ್ಬರೂ ಮತ್ತೊಮ್ಮೆ ಭೇಟಿಯಾಗಬೇಕು ಆಗಾಗಿ ಇಬ್ಬರನ್ನು ಒಂದೇ ರಸ್ತೆಗೆತಂದುಬಿಟ್ಟೆ) ಮೇರಿಗೆ ತನ್ನ ಸತ್ಯನ ದರ್ಶನವಾಯಿತು ಆದರೆ ಸತ್ಯ ಅವಳನ್ನು ಗಮನಿಸಲಿಲ್ಲ ಅವನು ಹಾಗೆ ನೆಡೆದ ಹಿಂಬಾಲಿಸಿದಳು ಮಹಡಿ ಹತ್ತಿ ಒಳಹೋದ ಸಲ್ಪ ಸಮಯಕಾದಳು ಮತ್ತೆ ಹೊರಬರಲಿಲ್ಲ ಅವಳು ಕೂಡ ಮಹಡಿ ಹತ್ತಿ ಬಾಗಿಲು ತೆರೆದು ಒಳ ಹೋದಳು. ಸಿಗರೇಟಿನ ಗಾಟು ಎಣ್ಣೆಯ ಕಮಟುಮಿಶ್ರಿತವಾಸನೆ ರಪ್ಪೆಂದು ಮೂಗಿಗೆ ಬಡಿಯಿತು, ಹಗಲು ರಾತ್ರಿಗಳ ವ್ಯತ್ಯಾಸವಿಲ್ಲದ ಮನೆಯೊಳಗೆ ನಿಂತ ಗೋಡೆಗಳು.! ಮೌನವಾಗಿ ಬಿಗಿದುನಿಂತ ಕಿಟಕಿಗಳು.! ಚಾವಣಿಗೂ ಗೋಡೆಗಳ ಮೂಲೆಗೂ ಸೇರಿಸಿ ಎಣೆದ ಜೇಡರ ಬಲೆಯೊಳಗೆ ಸತ್ತ ಹುಳಗಳು.! ನೆಲದ ಮೇಲೆಲ್ಲ ಬಿದ್ದ ಸಿಗರೇಟಿನ ಫಿಲ್ಟರಗಳು.! ಕದದಮೂಲೆಯಲ್ಲಿದ್ದ ಖಲಿಬಾಟಲ್ಗಳು.! ಗಾಢಮೌನದೊಳಗೆ ಅಲಲ್ಲಿ ತೂತುಬಿದ್ದ ಬನಿಯನ್ ಮತ್ತು ಲುಂಗಿ ತೊಟ್ಟು ದಿಂಬನ್ನೂರಗಿ ಕುಡಿಯುತ್ತ ಕುಳಿತ್ತಿದ್ದ ಸತ್ಯ.! ಕೃಷವಾದ ದೇಹ ವಯಸ್ಸಿಗಿಂತ ಹೆಚ್ಚಾಗಿ ಕಾಂತಿಗುಂದಿದ ಚರ್ಮ.! ಅಡ್ಡದಿಡ್ಡಿ ಬೆಳೆದ ಗಡ್ಡ ಮೀಸೆಗಳು.! ಅವನ ಕಣ್ಣಗಳಲ್ಲಿ ಜೀವಚೈತನ್ಯದ ಬೆಳಕಿಲ್ಲ ಶವವೊಂದು ಕುಡಿಯುತ್ತಿದ್ದಂತಿತ್ತು..! ಇಬ್ಬರ ನೋಟಗಳು ಸಂಧಿಸಿದವು ಕುಶೋಲೋಪರಿಯ ಅಗತ್ಯವಿರಲಿಲ್ಲ.! ಇಬ್ಬರ ಕಣ್ಣುಗಳಲ್ಲೂ ಸಿಕ್ಕ ಸಂತೋಷವಿರಲಿಲ್ಲ.! ಕೆಲವೇ ಕ್ಷಣಗಳಲ್ಲಿ ಮೌನ ಮನೆಕಟ್ಟಿತ್ತು ಮಾತಿನ ಪೆಟ್ಟು ಬೇಕಿತ್ತು ಮೌನ ಒಡೆಯಲು.! ಅವನೇ ಆ ಮೌನ ಒಡೆದ ಮಾತಿಗಿಳಿದ.! ಮತ್ತಿನಲ್ಲಿದ್ದ.! “ಈ ಕಾಲವೇ ಹೀಗೆ ಹಳೆಯದೆಲ್ಲ ಕಳೆದುಹೋಗಿದ್ದರು ಸಾಕ್ಷಿಗಳನ್ನು ಮಾತ್ರ ನಿಲ್ಲಿಸಿ ಹೋಗುತ್ತವೆ ನಿನ್ನ ಜೊತೆ ಕಳೆದ ಬಾಲ್ಯದ ದಿನಗಳು ಯೌವನದ ಕ್ಷಣಗಳನೆಲ್ಲ ಸಾಯಿಸಬೇಕೆಂದು ಈ ಅಮಲಿಗೆ ದಾಸನಾಗಿಬಿಟ್ಟೆ.! ಅಮಲು ಹೆಚ್ಚಾದಗಳಲೇಲ್ಲ ನೀ ನನ್ನೊಳಗೆ ಇರುವಂತೆ ಮುದ್ದಿಸಿದಂತೆ ತಾಯಿತನದ ಸುಖ ನೀಡಿದಂತೆ ಅನಿಸುತ್ತದೆ ರೇಖಾ..! ಈ ಅಮಲು ಎಷ್ಟು ನೆಮ್ಮದಿಕೊಡುತ್ತದೆ ಗೊತ್ತಾ..! ಆ ಯೌವನದ ದಿನಗಳಲ್ಲಿ ನಾನು ನಿನ್ನ ಹತ್ತಿರಕ್ಕೆ ಬರಲು ಪ್ರತಿ ಹೆಜ್ಜೆ ಮುಂದಿಟ್ಟಗಾಲು ನೀನು ಮಾತ್ರ ಅದರ ಹತ್ತುಪಟ್ಟು ದೂರವಾಗುತ್ತಿದ್ದೆ.! ನಾನು ಈ ಧರ್ಮವೆಂಬ ಮುಳ್ಳುಪೊದೆಗಳ ದಾಟಿ ಪ್ರೀತಿಯ ಬೋರೆಮೇಲೆ ಬಂದುನಿಂತು ನೀನಗಾಗಿ ಕನವರಿಸಿದೆ ನೀನು ಮಾತ್ರ ಆ ಧರ್ಮಗಳ ಬೇಲಿಯಿಂದಾಚೆ ಬರಲೇ ಇಲ್ಲಾ..! ಮೂಲಕ್ರಿಶ್ಚಿಯನ್ನರು ಪಾಲಿಸದಷ್ಟು ನಿನ್ನ ಧರ್ಮನಿಷ್ಠೆಗಳು ಅತಿರೇಖವಾಗಿದ್ದವು ರೇಖಾ..! ನೀನು ನಿನ್ನ ಧರ್ಮದ ಹೆಸರಿನಲ್ಲಿ ಕೃತಕಗೋಡೆಯೊಂದನ್ನು

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ರಾಮರಾಯರು ಜಿ. ಹರೀಶ್ ಬೇದ್ರೆ  ರಾಮರಾಯರು ರಾಮರಾವ್ ಹಾಗೂ ಸುಲೋಚನ ರವರಿಗೆ ಮೂರು ಹೆಣ್ಣು, ಒಂದು ಗಂಡು ಮಗು. ಹೆಣ್ಣುಮಕ್ಕಳೇ ಹಿರಿಯರು, ಮಗ ಕೊನೆಯವನು. ರಾಯರು ಅತ್ಯಂತ ನೇರ ನುಡಿಯ ವ್ಯಕ್ತಿ. ಸರಿ ಇದ್ದರೆ ಸರಿ, ತಪ್ಪಾಗಿದ್ದರೆ ಅವರು ಎಷ್ಟೇ ದೊಡ್ಡ ವ್ಯಕ್ತಿ ಆಗಿದ್ದರು ಮುಲಾಜು ನೋಡದೆ ತಪ್ಪನ್ನು ಹೇಳಿ ನೀರಿಳಿಸುತ್ತಿದ್ದರು. ರಾಯರದು ಖಾಸಗಿಯವರ ಬಳಿ ಕೆಲಸ, ಆದಾಯ ಕಡಿಮೆ. ಆದರೂ ನಾಲ್ಕು ಮಕ್ಕಳನ್ನು ಚೆನ್ನಾಗಿಯೇ ಓದಿಸಿದ್ದರು.  ಮೂರನೆಯವಳ  ಮದುವೆಯಾಗಲಿಕ್ಕೂ  ಇವರ ಆರೋಗ್ಯ ಕೈಕೊಟ್ಟು ಮನೆಯಲ್ಲೇ ಉಳಿದರು. ಮಗನ ಓದು ಆಗಷ್ಟೇ ಮುಗಿದಿದ್ದು, ಕೆಲಸಕ್ಕೆ ಪ್ರಯತ್ನಿಸುತ್ತಿದ್ದ. ಸ್ಥಳೀಯವಾಗಿ ಅಂದುಕೊಂಡ ಒಳ್ಳೆಯ ಕೆಲಸ ಸಿಗದೆ ಬೆಂಗಳೂರಿಗೆ ಹೋದ.  ಹೊಸದಾಗಿ ಕೆಲಸಕ್ಕೆ ಸೇರಿದ್ದರಿಂದ ತಿಂಗಳಿಗೊ, ಎರಡು ತಿಂಗಳಿಗೊ ಒಮ್ಮೆ ಬಂದು ಹೋಗುತ್ತಿದ್ದ. ರಾಮರಾಯರು ಸದಾ ನಾಲ್ಕು ಜನರ ನಡುವೆ ಇದ್ದು ಕೆಲಸ ಮಾಡುತ್ತಿದ್ದವರು, ಈಗ ಎಲ್ಲಾ ಬಿಟ್ಟು ಮನೆಯಲ್ಲೇ ಇರಬೇಕು ಎಂದರೆ ಬಹಳ ಕಷ್ಟವಾಗುತ್ತಿತ್ತು.  ಹೊರಗಡೆ ಹೋದರೂ, ಸುಮ್ಮನೆ ಹರಟೆ ಹೊಡೆದು ಕಾಲ  ಕಳೆಯುವ ಅಭ್ಯಾಸ ಇರದ ಅವರಿಗೆ ಅಲ್ಲಿರಲು ಸಾಧ್ಯವಾಗದೆ ಮನೆಗೆ ಮರಳಿ ಬರುತ್ತಿದ್ದರು.  ಒಂದು ಕಡೆ ಅನಾರೋಗ್ಯ ಜೊತೆಗೆ ಕೆಲಸವಿಲ್ಲದೆ ಹೆಂಡತಿ ಮುಖ ನೋಡಿಕೊಂಡು ಮನೆಯಲ್ಲಿರುವುದು ಅಸಾಧ್ಯವಾಯಿತು. ಇದೇ ಚಿಂತೆಯಲ್ಲಿ ಬಿ.ಪಿ.ಯ ಜೊತೆ ಶುಗರ್ ಸಮಸ್ಯೆಯೂ ಆರಂಭವಾಯಿತು. ಅವರು ಯಾವಾಗ ಯಾವ ವಿಷಯಕ್ಕೆ ಸಿಟ್ಟಾಗುತ್ತಾರೆ, ಯಾವುದಕ್ಕೆ ಸುಮ್ಮನಿರುತ್ತಾರೆ ಎನ್ನುವುದು ಸುಲೋಚನರವರಿಗೆ ತಿಳಿಯದಾಯಿತು.  ಮೊದಲೇ ಮಿತಭಾಷಿಯಾದ ಅವರು ಮತ್ತಷ್ಟು ಮೌನಕ್ಕೆ ಶರಣಾದರು.ಅದೊಂದು ದಿನ ಸಂಜೆ ಇದ್ದಕ್ಕಿದ್ದಂತೆ ರಾಮರಾಯರು ಮನೆಯಲ್ಲೇ ಕುಸಿದು ಬಿದ್ದರು. ತಕ್ಷಣವೇ ಸುಲೋಚನಾ ಪಕ್ಕದ ಮನೆಯವರು ಸಹಾಯದಿಂದ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಪರೀಕ್ಷೆ ಮಾಡಿದ ವೈದ್ಯರು, ಬಿ.ಪಿ. ಹಾಗೂ ಶುಗರ್ ಎರಡೂ ಹೆಚ್ಚಾಗಿದೆ, ಒಂದೆರೆಡು ದಿನ ಇಲ್ಲೇ ಇರಲೆಂದರು.  ವಿಚಾರ ತಿಳಿದ ಮಕ್ಕಳು ತಂದೆಯನ್ನು ನೋಡಲು ಒಂದೇ ಉಸಿರಿಗೆ ಇದ್ದ ಊರುಗಳಿಂದ ಓಡಿ ಬಂದರು. ಇದಾದ ಮೇಲೆ ತಮ್ಮದೇ ಅಸಡ್ಡೆಯಿಂದ ರಾಯರು ವರುಷದಲ್ಲಿ ಹಲವು ಬಾರಿ ಆಸ್ಪತ್ರೆಗೆ ಸೇರಿದರು. ಇದರಿಂದ ಬೇಸತ್ತ ಮಗ, ಹಗಲೆಲ್ಲ ರಜ ಹಾಕಿ ಊರಿಗೆ ಬರಲು ಸಾಧ್ಯವಿಲ್ಲ ಎಂದು ಬಲವಂತವಾಗಿ ತಂದೆ ತಾಯಿ ಇಬ್ಬರನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ. ಅವನಿಗೆ ಬರುವ ಸಂಬಳಕ್ಕೆ ತಕ್ಕಂತಹ ಸಣ್ಣ ಮನೆಯೊಂದನ್ನು ಅಪಾರ್ಟ್ಮೆಂಟ್ ಒಂದರಲ್ಲಿ ಬಾಡಿಗೆಗೆ ತೆಗೆದುಕೊಂಡಿದ್ದ.    ಅವನು ಬೆಳಿಗ್ಗೆ ಎಂಟು ಗಂಟೆಗೆ ಮನೆ ಬಿಟ್ಟರೆ ಮತ್ತೆ ಸೇರುತ್ತಿದ್ದದ್ದು ರಾತ್ರಿ ಎಂಟು ಗಂಟೆಗೆ. ಅಲ್ಲಿಯವರೆಗೆ ಗಂಡ ಹೆಂಡತಿ ಇಬ್ಬರೇ ಮನೆಯಲ್ಲಿ ಇರಬೇಕಿತ್ತು. ಇದು ರಾಮರಾಯರಿಗೆ ಮತ್ತಷ್ಟು ವಿಚಲಿತರಾಗುವಂತೆ ಮಾಡಿತ್ತು. ಊರಲ್ಲಾದರೆ, ಮನೆಯ ಮುಂಬಾಗಿಲಿಗೆ ಬಂದು ನಿಂತರೆ ಸಾಕು, ಹೋಗಿ ಬರುವ ಪರಿಚಿತರು ಮುಗುಳ್ನಕ್ಕು, ಅದು ಇದು ಮಾತನಾಡುತ್ತಾ ಮುಂದೆ ಸಾಗುತ್ತಿದ್ದರು. ಇಷ್ಟಕ್ಕೆ ಅವರಿಗೆ ಎಷ್ಟೋ ಹಿತವೆನಿಸಿಸುತ್ತಿತ್ತು. ಆದರೆ ಇಲ್ಲಿ ಮನೆಗಳು ನೂರಿದ್ದರೂ ಎಲ್ಲಾ ಅಪರಿಚಿತರು. ಅದೇಷ್ಟೋ ದಿನಗಳ ನಂತರ ಒಂದಿಬ್ಬರು ಪರಸ್ಪರ ಮಾತನಾಡಿಸುವಂತಾಗಿದ್ದರು. ಅದೂ ಹೆಸರಿಗೆ ಮಾತ್ರ ಅನ್ನುವಂತಿತ್ತು. ಹಾಗಾಗಿ ಹೊತ್ತು ಹೋಗದೆ ರಾಮರಾಯರು, ತಾವು ಊರಿಗೆ ಹಿಂದಿರುಗುವುದಾಗಿ ಹೇಳುತ್ತಿದ್ದರು. ಆದರೆ ಅಲ್ಲಿ ಇವರನ್ನು ನೋಡಿಕೊಳ್ಳುವವರು ಯಾರೂ ಇಲ್ಲದೆ ಎಲ್ಲಾ ಜವಾಬ್ದಾರಿಯನ್ನು ತಾಯಿಯ ಮೇಲೆ ಹಾಕಲು ಮನಸ್ಸು ಒಪ್ಪದೆ ಮಗ ಬೇಡ ಅನ್ನುತ್ತಿದ್ದ. ಒಂದು ದಿನ ರಾಯರು ಹಟ ಮಾಡಿದಾಗ ಕಡ್ಡಿ ಮುರಿದಂತೆ ಎಲ್ಲಿಗೂ ಕಳಿಸುವುದಿಲ್ಲ ಎಂದು ಸ್ವಲ್ಪ ಒರಟಾಗಿಯೇ ಹೇಳಿದ.  ಇದು ಮೊದಲೇ ಕುಗ್ಗಿ ಹೋಗಿದ್ದ ರಾಮರಾಯರು ಮತ್ತಷ್ಟು ಕುಗ್ಗುವಂತೆ ಮಾಡಿತು. ಬರಬರುತ್ತಾ ಅವರ ನಡವಳಿಕೆಯಲ್ಲಿ ಏರುಪೇರಾಗತೊಡಗಿತು. ಒಮ್ಮೊಮ್ಮೆ ಏನಾದರು ಬಡಬಡಿಸಿದರೆ ಮತ್ತೆ ಕೆಲವೊಮ್ಮೆ ದಿನಗಟ್ಟಲೆ ಒಂದೇ ಒಂದು ಪದವನ್ನು ಆಡದೆ ಎಲ್ಲೋ ನೋಡುತ್ತ ಮೈಮರೆತು ಕುಳಿತುಬಿಡುತ್ತಿದ್ದರು. ಊಟ ತಿಂಡಿಯ ಪರಿವೆಯೂ ಇರುತ್ತಿರಲಿಲ್ಲ, ಒಂದು ಎರಡು ಇದ್ದ ಜಾಗದಲ್ಲೇ ಆಗಿರುತ್ತಿತ್ತು. ಇದನ್ನು ನೋಡಿ ಮಗ, ಹಲವಾರು ಡಾಕ್ಟರುಗಳಿಗೆ ತೋರಿಸಿದರೂ ಏನೂ ಉಪಯೋಗವಾಗಲಿಲ್ಲ.   ಈ ಪರಿಸ್ಥಿತಿಯಲ್ಲಿ ತಂದೆಯನ್ನು ಅಮ್ಮನೊಂದಿಗೆ ಊರಿಗೆ ಕಳಿಸಲು ಸಾಧ್ಯವಿಲ್ಲ. ಹಾಗೊಮ್ಮೆ ಕಳೀಸಲೇ ಬೇಕೆಂದರೆ ತಾನೂ ಅವರೊಂದಿಗೆ ಹೋಗಬೇಕು. ಆದರೆ ಕೈಯಲ್ಲಿರುವ ಕೆಲಸ ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ಮಗನೂ ತುಂಬಾ ಒದ್ದಾಡುತ್ತಿದ್ದ. ಗಂಡ ಹಾಗೂ ಮಗನ ಪರಿಸ್ಥಿತಿ ಅರ್ಥವಾದರೂ ಸುಲೋಚನಾ ಏನೂ ಮಾಡುವಂತಿರಲಿಲ್ಲ.  ಹೊತ್ತು ಹೊತ್ತಿಗೆ ಸರಿಯಾಗಿ ಗಂಡನ ಬೇಕು ಬೇಡಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದರು. ಆದಷ್ಟು  ಅವರ ಒದ್ದಾಟ ಮಗನಿಗೆ ತಿಳಿಯದಿರಲೆಂದು ಕಷ್ಟ ಪಡುತ್ತಿದ್ದರು. ತೀರಾ ಅನಿವಾರ್ಯ ಎಂದಾಗ ಮಾತ್ರ ಮಗನ ಗಮನಕ್ಕೆ ತರುತ್ತಿದ್ದರು. ಮಗನಿಗೆ ಎಲ್ಲವೂ ಅರ್ಥವಾಗುತ್ತಿತ್ತು ಆದರೆ ತನಗೆ ಗೊತ್ತಿದೆ ಎಂದು ತೋರಿಸಿಕೊಂಡರೆ ಅಮ್ಮ ಮತ್ತಷ್ಟು ನೊಂದುಕೊಳ್ಳಬಹುದೆಂದು ತಾನು ಆರಾಮಾವಾಗಿ ಇರುವಂತೆ ನಡೆದು‌ಕೊಳ್ಳುತ್ತಿದ್ದ. ಅಲ್ಲದೆ ಅಪ್ಪನಿಗಾಗಿ ಊರಿಗೆ ಹಿಂದಿರುಗಬೇಕೆಂದು ಅಲ್ಲಿ ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿದ್ದ. ಅದೊಂದು ದಿನ ಮನೆಯ ಎಲ್ಲಾ ಹೆಣ್ಣುಮಕ್ಕಳು ತಮ್ಮ ಗಂಡ, ಮಕ್ಕಳೊಂದಿಗೆ ಅಪ್ಪನನ್ನು ನೋಡಲು ಬೆಂಗಳೂರರಿಗೆ ಬಂದರು. ಅವರು ರಾಮರಾಯರಿಗೆ ಎಷ್ಟೇ ಮಾತನಾಡಿಸಿದರೂ ಒಂದೇ ಒಂದು ಮಾತನ್ನೂ ಆಡಲಿಲ್ಲ. ಅವರನ್ನು ಗುರುತೂ ಹಿಡಿಯಲಿಲ್ಲ. ರಾಮರಾಯರಿಗೆ, ಮಗ ಹಾಗೂ ಹೆಂಡತಿಯ ಹೊರತಾಗಿ ಎಲ್ಲರೂ ನೆನಪು ಅಳಿಸಿಹೋಗಿತ್ತು. ಇದು ಸುಲೋಚನಾ ಮತ್ತು ಮಗನ ಗಮನಕ್ಕೆ ಬಂದೇ ಇರಲಿಲ್ಲ.  ಇದು ತಿಳಿದೊಡನೆ ಕುಸಿಯುವ ಸರದಿ ಮಗನದಾಯಿತು. ಮನೆಗೆ ಬಂದ ಹೆಣ್ಣುಮಕ್ಕಳು , ಕೆಲಸಕ್ಕೆ ಕಾಯದೆ ತಕ್ಷಣ ಅಪ್ಪನನ್ನು ಅವರ ಆಸೆಯಂತೆ ಊರಿಗೆ ಕರೆದುಕೊಂಡು ಹೋಗು. ನಿನಗೆ ಕೆಲಸ ಸಿಗುವ ವರೆಗೂ ನಾವು ಸಹಾಯ ಮಾಡುತ್ತೇವೆ ಎಂದು ತಮ್ಮನಿಗೆ ಹೇಳಿದರು. ಇದು ಅವನಿಗೂ ಸರಿ ಎನಿಸಿ,  ಕೆಲಸಕ್ಕೆ ರಾಜಿನಾಮೆ ಕೊಟ್ಟು ಹೊರಡುಸುವುದಾಗಿ ಹೇಳಿದ.  ಹೇಳಿದಂತೆ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿದ. ಆದರೆ ಅಲ್ಲಿನ ನಿಯಮಗಳ ಪ್ರಕಾರ ಅವನು ಒಂದು ತಿಂಗಳ ನಂತರವಷ್ಟೇ ತನ್ನ ಕೆಲಸದಿಂದ ಬಿಡುಗಡೆ ಹೊಂದಬೇಕಾಗಿತ್ತು.    ಅಷ್ಟರೊಳಗೆ ಊರಲ್ಲಿ ಇರಲು ಬೇಕಾದ ವ್ಯವಸ್ಥೆಗಳನ್ನು ಮಾಡಿ ಕೊಳ್ಳತೊಡಗಿದ. ಇದ್ದ ಕೆಲಸದಿಂದ ಬಿಡುಗಡೆ ಆಗಲು ಎರಡು ದಿನ ಬಾಕಿ ಇರುವಾಗ ಅದೃಷ್ಟ ಎನ್ನುವಂತೆ ಊರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಕರೆ ಬಂತು. ಇದು ತಾಯಿ ಮಗ ಇಬ್ಬರಿಗೂ ತುಂಬಾ ಸಮಾಧಾನ ತಂದಿತ್ತು. ಕೊನೆಯ ದಿನದ ಕೆಲಸ ಮುಗಿಸಿ ಮಾರನೇ ದಿನವೇ ಊರಿಗೆ  ಹೋಗುವುದೆಂದು ಮನೆಯ ಎಲ್ಲಾ ವಸ್ತುಗಳನ್ನು ಗಂಟು ಕಟ್ಟಿ, ಅದನ್ನು ಸಾಗಿಸಲು ಬೇಕಾದ ಲಾರಿಯನ್ನು ಗೊತ್ತು ಮಾಡಿದ್ದ.  ಹಿಂದಿನ ದಿನ ರಾತ್ರಿ ಪಕ್ಕದ ಮನೆಯವರು ಕೊಟ್ಟಿದ್ದನ್ನೇ ಮೂವರು ಊಟ ಮಾಡಿ, ನಾಳೆಯಿಂದ ಸ್ವಂತ ಊರಲ್ಲಿ ವಾಸವೆಂದು ಸಂತೋಷದಿಂದ ಬಹಳ ಹೊತ್ತು ತಾಯಿ ಮಗ ಮಾತನಾಡುತ್ತಿದ್ದರು. ರಾಮರಾಯರು ಏನೊಂದೂ ಮಾತನಾಡದಿದ್ದರೂ ಅವರ ಮುಖದಲ್ಲಿ ಹಿಂದೆಂದೂ ಕಾಣದ ತೇಜಸ್ಸು ಕಾಣುತ್ತಿತ್ತು.  ತಾಯಿ ಮಗ ಮಾತನಾಡುತ್ತಾ ಯಾವಾಗ ಮಲಗಿದರು ಅವರಿಗೇ ಗೊತ್ತಿಲ್ಲ. ಬೆಳಿಗ್ಗೆ ಯಾರೋ ಜೋರಾಗಿ ಬಾಗಿಲು ಬಡಿದಾಗಲೇ ಅವರಿಗೆ ಎಚ್ಚರವಾಗಿದ್ದು. ಇಬ್ಬರೂ ಲಾರಿಯವನು ಬಂದಿರಬೇಕೆಂದು ದಡಬಡಾಯಿಸಿ ಎದ್ದು  ಬಾಗಿಲು ತೆರೆದರು.  ಅಲ್ಲಿ ಮೇಲಿನ ಮನೆಯವರು ಇವರಿಗೆ ಕುಡಿಯಲು ಕಾಫಿಯನ್ನು ತಂದಿದ್ದರು. ಅವರೊಂದಿಗೆ ನಾಲ್ಕು ಮಾತನಾಡಿ ಒಳಬಂದ ಸುಲೋಚನಾ, ರಾಮರಾಯರು ಕಾಫಿ ಕುಡಿಯಲೆಂದು ಎಬ್ಬಿಸತೊಡಗಿದರು. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಹೆದರಿಕೆಯಾಗಿ ಮಗನನ್ನು ಕೂಗಿದಾಗ, ಅವನೂ ಓಡೋಡಿ ಬಂದು ತಂದೆಯನ್ನು ಎಬ್ಬಿಸಲು ಎಷ್ಟೇ ಪ್ರಯತ್ನ ಪಟ್ಟರೂ ರಾಮರಾಯರು ಏಳಲೇ ಇಲ್ಲ. ರಾತ್ರಿ ಅವರ ಮುಖದಲ್ಲಿ ಕಂಡ ತೇಜಸ್ಸು ಈಗಲೂ ಹಾಗೇ  ಇತ್ತು………. *********

ಕಥಾಯಾನ Read Post »

ಕಥಾಗುಚ್ಛ

ಕಥಾಗುಚ್ಛ

ಒಂದು ಸಾವಿನ ಸುತ್ತಾ ವೇಣುಗೋಪಾಲ್ ಕೆಲಸ ಮುಗಿದು ಮನೆಗೆ ಬರುವ ಹೊತ್ತಿಗೆ ರಾತ್ರಿ ಎಂಟು ಗಂಟೆಯಾಗಿತ್ತು. ಬಟ್ಟೆ ಬದಲಿಸಿ ಮುಖ ತೊಳೆದು, ಫ್ರಿಡ್ಜ್ನಲ್ಲಿದ್ದ ಎರಡು ಮೊಟ್ಟೆಗಳನ್ನ ತೆಗೆದುಕೊಂಡು ಬೆಳಗ್ಗಿನ ತಂಗಳಿಗೆ ಎಗ್ರೈಸ್ ಮಾಡಲು ಈರುಳ್ಳಿ ಕತ್ತರಿಸುತ್ತಿದ್ದೆ ಫೋನ್ ರಿಂಗಣಿಸಿತು ಅಪ್ಪನ ಫೋನ್ ಹಲೋ ಹೇಳಣ್ಣ.? ಎಲ್ಲಿದ್ದಿಲಾ.? ಇವಾಗ ಬಂದೆ ಮನೆಗೆ ಏನು ಹೇಳು.? ಮಾಗಡಿ ನಿಮ್ಮತ್ತೆ ಮಗ ಕೆರೆಗೆ ಬಿದ್ದನಂತೆ.. ಪೊಲೀಸೆರೆಲ್ಲ ಬಂದು ಹುಡುಕಿದರೂ ಸಿಕ್ಕಿಲ್ಲವಂತೆ ಅಲ್ಲಿ ಯಾರು ಇರೋದು ಕಾಣೆ..!? ಹೋಗು ಅದೇನ್ ವಿಚಾರಿಸು ಒಂದೇ ಸಮನೆ ಅಳುತ್ತ ಕುತ್ತಿದ್ದಾಳೆ..! ಯಾರು..? ಕಿರಣನ ಅರುಣನ..? ಇನ್ಯಾರು ಆ ತರ್ಲೆ ನನ್ನ ಮಗ ಕಿರಣ ಇರ್ತಾನೆ..! ಹಾಸನದಿಂದ ಯಾರು ಬಂದಿಲ್ವಾ..? ನಿಮ್ಮ ಚಿಕ್ಕಪ್ಪ ಹೊರ್ಟಿರ್ಬೇಕು ನೀನು ಹೋಗವತ್ತಿಗೆ ಬಂದಿರ್ತಾನೆ ಹೋಗು ಮೊದ್ಲು.. ಅದೇನು ವಿಚಾರಿಸು.. ಆಯ್ತು ಅಂತ call cut ಮಾಡಿ ಇದ್ದ ತಂಗಳನ್ನೇ ಬಿಸಿ ಮಾಡಿ ತಿನ್ನುವಷ್ಟರಲ್ಲಿ ಒಂಬತ್ತು ಗಂಟೆಯಾಗಿತ್ತು.. ಅತ್ತೆಯ ವಿಚಾರಿಸಲು call ಮಾಡ್ದೇ ಮೊಬೈಲ್ ಸ್ವಿಚ್ ಆಫ್ ಆಗಿತ್ತು.! ಹಾಗೆ ಹೋಗುವುದು ಬೇಡವೋ ಎಂಬ ಯೋಚನೆಯಲ್ಲಿ ಇನ್ನು ಹದಿನೈದು ನಿಮಿಷ ಕಳೆದೆ.. ಯಾಕೋ ಮನಸ್ಸು ಇಲ್ಲೇ ಇರಲು ಬಿಡಲಿಲ್ಲ ಲೈಟ್ ಆಫ್ ಮಾಡಿ ಲಾಕ್ ಹಾಕಿ ಮೆಟ್ಟಿಲು ಇಳಿದು ಕಾರನ್ನ ಪಾರ್ಕಿಂಗ್ನಿಂದ ತೆಗೆದು ಹೊರಟೆ. ಸುಂಕದಕಟ್ಟೆ ಬಿಡುವ ಹೊತ್ತಿಗೆ ಹತ್ತುಗಂಟೆ ದಾಟಿತ್ತು.. ಮಾಗಡಿಯಿಂದ ಐದು ಕಿಲೋಮೀಟರ್ ಇರುವ ತೂಬಿನಕೆರೆ ಅದೇ ಊರಿನ ಕೆರೆಯಲ್ಲೇ ಬಿದ್ದಿರ್ಬೇಕು..! ಶವ ಸಿಕ್ಕಿದಿಯೋ ಇಲ್ವೋ ಗೊತ್ತಿಲ್ಲಾ.? ಅರುಣನಿಗೊಮ್ಮೆ ಫೋನ್ ಹಾಯಿಸಿದೆ ಅವನ ಫೋನ್ ಕೂಡ ಸ್ವಿಚ್ ಆಫ್..! ನಲವತ್ತು ಕಿಲೋಮೀಟರ್ ಪಯಣ.. ಆ ರಾತ್ರಿಯ ಚಿಕ್ಕ ರಸ್ತೆ.. ಎದುರಿಗೆ ಅತ್ತೆಯ ಜೀವನ ಕಣ್ಣು ಮುಂದೆ ಬಂದು ಹೋಗುತ್ತಿದೆ. ಗಂಗಾತ್ತೆ ನನ್ನ ಸೋದರತ್ತೆಯೇನು ಅಲ್ಲ..! ನನ್ನಜ್ಜಿಯ ತಂಗಿಯ ಮಗಳು.. ಮಕ್ಕಳು ಚಿಕ್ಕವರಿದ್ದಾಗಲೇ ಗಂಡನನ್ನು ಕಳೆದುಕೊಂಡವಳು ಆ ಕಷ್ಟದಲ್ಲೂ ಒಂದುದಿನವೂ ತವರುಮನೆಗೆ ಹೋಗಿ ಕುಳಿತವಳಲ್ಲ ಅಣ್ಣ ಎಷ್ಟೇ ಕರೆದರು ನೆಂಟರಂತೆ ಹಬ್ಬಕ್ಕೆ ಹೋಗಿಬರುತ್ತುದ್ದವಳು.! ಎರಡು ಅವಳಿ ಮಕ್ಕಳು ಸ್ವಲ್ಪ ವ್ಯತ್ಯಾಸವಿದ್ದರು ಹೊಸಬರಿಗೆ ಇಬ್ಬರು ಒಂದೇರೀತಿಯಾಗಿ ಕಾಣುತ್ತಿದ್ದರು.! ಕಿರಣ ಇತ್ತೀಚೆಗೆ ಮಾಗಡಿಯ ಗ್ಯಾಂಗ್ವಾರ್ನಲ್ಲಿ ಸಿಕ್ಕಿ ಇಪ್ಪತ್ತೆರಡನೆ ವಯಸ್ಸಿಗೆ ಪೊಲೀಸ್ ಸ್ಟೇಷನ್ನು ಜೈಲ್ ಮೆಟ್ಟಿಲು ಹತ್ತಿ ಬಂದಿದ್ದ.! ಅರುಣ ತುಂಬಾ ಸೈಲೆಂಟ್ ಹುಡುಗ ಫೋಟೋ ಗ್ರಾಫರ್ ಕೆಲಸ ಮಾಡುತ್ತಿದ್ದ. ಗಂಡ ಸತ್ತ ನಂತರ ಇವೆರಡು ಮಕ್ಕಳನ್ನ ಸಾಕುವುದಕ್ಕೆ ಅದೆಷ್ಟು ಕಷ್ಟ ಪಟ್ಟಿದ್ದಳೋ ಆ ದೇವರಿಗೆ ಗೊತ್ತು ಅಂಗನವಾಡಿಯ ಕೆಲಸದ ನಂತರ ಅವರಿವರ ಮನೆಯಲ್ಲಿ ಮುಸುರೆ ತಿಕ್ಕಿ ಬಟ್ಟೆ ಹೊಗೆದು ತಾನು ತಿನ್ನುವುದು ಒಂದೊತ್ತು ಕಡಿಮೆಯಾದರೂ ಅವರನ್ನ ಖಾಲಿಯೊಟ್ಟೆಯಲ್ಲಿಟ್ಟವಳಲ್ಲ.! ತೇವಳುತ್ತಿದ್ದ ಮಕ್ಕಳನ್ನ ತನ್ನೆತ್ತರಕ್ಕೆ ಬೆಳೆಸಿದ್ದಳು.. ಆಕೆ ಮೇಲೆ ನನಗೆ ತುಂಬಾ ಅನುಕಂಪ ಯಾಕೆ ಗೊತ್ತೇ..!? ಆಕೆ ಹುಟ್ಟುಕುಂಟಿ ಇಷ್ಟೆಲ್ಲ ತನ್ನ ದೇಹದ ವೈಪಲ್ಯ ಬದುಕಿನ ವೈಫಲ್ಯದಲ್ಲೂ ಆಕೆಯ ಆಗಾದ ಎತ್ತರದ ಮನಸ್ಥಿತಿ ಅದೆಷ್ಟು ಗಟ್ಟಿಯಾಗಿತ್ತು ಅವಳು ಬದುಕನ್ನು ಕಟ್ಟಿಕೊಂಡ ಅವಳ ವಾಸ್ತವ ದೃಢ ನಿರ್ಧಾರಗಳು ಅದೆಷ್ಟು ಗಟ್ಟಿಯಾಗಿರಬೇಡ.! ಇನ್ನೇನು ಸುಖವಾಗಿರ ಬೇಕು ಅನ್ನುವಷ್ಟುರಲ್ಲಿ ಇನ್ನೊಂದು ಆಘಾತ.! ಯಾಕೋ ಗೊತ್ತಿಲ್ಲ ಆ ದೇವರು ಆಕೆಯ ಹಣೆಯಲ್ಲಿ ಸುಖವನ್ನ ಬರೆದಿಲ್ಲವೋ.. ಇಲ್ಲಾ ಅವಳು ಬದುಕನ್ನ ಗೆದ್ದರೀತಿಗೆ ದೇವರು ಸೋತು ಜಿದ್ದಿಗಿಳಿದ್ದಿದ್ದಾನೋ..!? ಅನಿಸುತ್ತಿದೆ.. ಕಾರು ಮಾಗಡಿ ಕೋಟೆಯ ಎದುರಿನ ರಸ್ತೆಗೆ ತಿರುಗಿತು ಬಲಭಾಗಕ್ಕೆ ಸಣ್ಣ ಕೆರೆಬಿಟ್ಟೋಡನೆಯೇ ಮಗ್ಗುಲಿಗೆ ಒಂದು ಸಣ್ಣ ಹಳ್ಳಿ ಅದನ್ನ ದಾಟಿ ಮುಂದೆ ಹೋಗುತ್ತಿದೆ ವಿದ್ಯುತ್ ಬೇಳಕಿಲ್ಲದ ಗುಂಡಿ ತುಂಬಿರುವ ರಸ್ತೆಗಳು ಎಡಭಾಗಕ್ಕೆ ಹೊಲದ ಸಾಲು ಬಲಭಾಗಕ್ಕೆ ಬಂಡೆ ಗುಡ್ಡ ಹಾಗೆ ಅಲ್ಲಲ್ಲಿ ಬೆಳೆದಿದ್ದ ದೊಡ್ಡಮರಗಳು ಗುಚ್ಚಿಗಳ ಸಾಲು..! ಕುಲುಕುತ್ತ ಹೋಗುತ್ತಿದ್ದ ಕಾರಿನ ಎದುರಿಗೆ ಹುಡುಗನೊಬ್ಬ ನೆಡೆದು ಹೋಗುತ್ತಿದ್ದಾನೆ ಸಮಯ ಹನ್ನೊಂದು ಇಪ್ಪತ್ತು. ಇಷ್ಟುಹೊತ್ತಿನಲ್ಲಿ ಯಾರಿರಬಹುದೆಂದು ಅವನ ಪಕ್ಕಕ್ಕೆ ಹೋಗಿ ಗಾಡಿ ನಿಲ್ಲಿಸಿ ನೋಡಿದರೆ ಅರುಣ.! ಅವನನ್ನ ಕೂರಿಸಿಕೊಂಡು ಮಾತನಾಡಲು ಮನಸ್ಸಿಲ್ಲದೆ ಗಾಡಿ ಸ್ಟಾರ್ಟ್ ಮಾಡಿ ಮುಂದೆ ಗುಂಡಿಗಳ ನೋಡುತ್ತಾ ಎರಡನೇ ಗೇರಿನಲ್ಲೇ ಡ್ರೈವ್ ಮಾಡುತ್ತಿದ್ದೆ.. ಅವನೇ ಇಷ್ಟೋತ್ತಿನಲ್ಲಿ ನಮ್ಮೂರಕಡೆ ಹೊರಟಿದ್ದಿಯಲ್ಲ ಅಣ್ಣ ಏನು ಸಮಾಚಾರ ಅಂದ..! ತಿರುಗಿ ಅವನನ್ನೇ ನೋಡುತ್ತಾ ನಿನ್ನ ಮೊಬೈಲ್ ಏನು ಆಯ್ತು ಅಂದೆ.? ಬಸ್ನಲ್ಲಿ ಕದ್ದುಬಿಟ್ರು ಅಣ್ಣ.. ಇಸ್ಟು ಹೊತ್ತಿನವರೆಗೂ ಏನು ಮಾಡ್ತಿದ್ದೆ..? ಫೋನ್ ಇಲ್ಲದೆ ಪರದಾಡಿ. ಕೆಲಸ ಮುಗಿಸಿಕೊಂಡು ಬರುತ್ತಿದ್ದೀನಿ.! ಇವನಿಗೆ ಕಿರಣ ಸತ್ತಿರುವ ವಿಚಾರ ಗೊತ್ತಿಲ್ಲ.. ಹೇಳೋದು ಬೇಡ ಅನಿಸಿ ಸುಮ್ಮನಾದೆ ಅವನೇ ಮತ್ತೆ ಮಾತಿಗಿಳಿದ ಅಣ್ಣಾ ಈ ರೋಡ್ನಲ್ಲಿ ಈ ಟೈಂ ನಲ್ಲಿ ಬರೋಕೆ ಹೋಗ್ಬೇಡಿ ಅಣ್ಣ ಜಾಗ ಸರಿ ಇಲ್ಲಾ.. ಅಂದ..! ನಗುತ್ತ ನೀನು ಬರ್ತಿದ್ದಿಯಲ್ಲೋ ಅಂದೆ. ನಾನು ಹಳಬ ಓಡಾಡಿ ಅಭ್ಯಾಸವಿದೆ ಇವತ್ತು ನಾನು ಬಂದಿದ್ದಕ್ಕೆ ಸರಿಹೋಯ್ತು.. ಇಲ್ಲಾ ಅಂದ್ರೆ ಕಷ್ಟ ಆಗ್ತಿತ್ತು ಅಂದ..! ನಗುತ್ತಲೇ ಸುಮ್ಮನಾದೆ ಊರು ಹತ್ತಿರವಾಗುತ್ತಿದೆ ಆ ಊರಿನಲ್ಲೂ ವಿದ್ಯುತ್ ಬೆಳಕಿಲ್ಲ ಮನೆಯೊಳಗೆ ಉರಿಯುತ್ತಿದ್ದದ್ದು ಚರ್ಚ್ ಲೈಟ್ಗಳು ಮಾತ್ರ.. ಮತ್ತೆ ಅವನತ್ತ ತಿರುಗಿದೆ ಅವನ ಕೈನಲ್ಲಿ ಟ್ಯಾಟು #GK ಅಂತ ಡಿಸೈನ್ ಆಗಿ ಟ್ಯಾಟು ಹಾಕಿದ್ದ ಏನು ಇದು ಅಂದೆ ಗಂಗಮ್ಮ ಕಿರಣ ಅಂದ..! ಆ ಮಾತು ಕೇಳಿ ಗಂಟಲು ಬಿಗಿಯಾಯ್ತು.. ಕಣ್ಣುಗಳು ನೀರು ತುಂಬುತ್ತಿದೇ ಭಾವನೆಗಳ ತೊಳಲಾಟವಾಗುತ್ತಿದೆ.. ಅಣ್ಣಾ ಇಲ್ಲೇ ನಿಲ್ಲಸಿ ಕಾರು ಒಳಗೆ ಬರೋಕೆ ಆಗಲ್ಲ ಬಂದ್ರೆ ವಾಪಸ್ ತಿರುಗಿಸೋದು ಕಷ್ಟ ಅಂತ ಹೇಳಿ ಎದುರಿಗೆ ಖಾಲಿ ಜಾಗದಲ್ಲಿ ಹಾಕುವುದಕ್ಕೆ ಹೇಳಿ ಹೊರಟುಹೋದ.. ನಾನು ಗಾಡಿಯನ್ನ ಪಾರ್ಕ್ ಮಾಡಿ ಬೇಕಂತಲೇ ಸ್ವಲ್ಪ ಸಮಯ ಬಿಟ್ಟು ಹೋದೆ.. ಇನ್ನು ಶವ ಸಿಕ್ಕಿರಲಿಲ್ಲ ಅರುಣ ಮೂಲೆಯಲ್ಲಿ ಕುಳಿತಿದ್ದ ಅತ್ತೆ ಅತ್ತು ಅತ್ತು ಸುಸ್ತಾಗಿ ಕುಸಿದು ಕುಳಿತ್ತಿದ್ದಳು ಹಾಸನದ ಚಿಕ್ಕಪ್ಪ ಆಗಲೇ ಬಂದಿದ್ದರು ಸ್ವಲ್ಪ ಹೊತ್ತು ಹಾಗೆ ಮೌನ ಅತ್ತೆ ಕತ್ತೆತ್ತಿ ನೋಡಿದಳು ಸಣ್ಣ ಬೆಳಕಲ್ಲೇ ಮುಖ ಗುರುತು ಹಿಡಿದವಳೇ ಅಳಲು ಶುರುವಾದಳು ಸ್ವಲ್ಪ ಹೊತ್ತು ಸಮಾಧಾನದ ಮಾತುಗಳನ್ನಾಡಿ ಹೊರ ಬಂದೆ ಚಿಕ್ಕಪನು ಹೊರ ಬಂದರು.. ‘ಬಾಡಿ ಸಿಕ್ಕಿಲ್ಲ ಕಾಣೋ.. ಬೆಳಗ್ಗೆ ಬಂದು ಹುಡುಕ್ಕುತ್ತಾರಂತೆ.! ಬೆಳಗ್ಗೆ ಊರಿನಿಂದ ಸಂಬಂಧಿಕರು ಬರ್ತಾರೆ ನೋಡೋಣ ಏನು ಮಾಡಬೇಕು ಅಂತ ಮುಂದಿನದ್ದು ಯೋಚನೆ ಬೆಳಗ್ಗೆ ಮಾಡೋಣ’.. ಅಂದ್ರು ‘ಯಾಕೆ ಸತ್ತ ಅಂತ ಗೊತ್ತಿಲ್ವ.?’ ‘ಇಲ್ಲಾ ಪಾಪ’ ಮುಂದೆ ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಅನಿಸಿ ಮತ್ತೆ ಏನನ್ನು ಮಾತನಾಡದೆ ಸುಮ್ಮನೆ ಹೊರಗೆ ಕುಳಿತೆ.. ಒಳಗೆ ಬಾ ಅಂದ್ರು ಇಲ್ಲಾ ಕಾರಲ್ಲಿ ಇರ್ತೀನಿ ಅಂತ ಹೋಗಿ ಸ್ವಲ್ಪ ಹೊತ್ತು ಮಲಗಿದೆ. ಬೆಳಕ್ಕಾಗಿ ಉರಿನವರೆಲ್ಲ ಕೆರೆಯ ಬಳಿ ಹೋಗುತ್ತಿದ್ದರು ಹಾಗೆ ನಾನು ಹೊರಟೆ ಹಿಂದೆಯೇ ಪೊಲೀಸ್ ಗಾಡಿ ಬಂತು ನೇರ ಕೆರೆಯ ಬಳಿ ಹೋದೆ ವಿಶಾಲವಾದ ದೊಡ್ಡ ಕೆರೆ ಈ ವರ್ಷದ ಮಳೆಗೆ ತುಂಬಿದೇ ಒಂದು ಮಗ್ಗುಲಿಗೆ ಸಣ್ಣ ಸಣ್ಣ ಗುಡ್ಡಗಕಿದ್ದವು.. ಇಷ್ಟು ದೊಡ್ಡ ಕೆರೆಯಲ್ಲಿ ಹುಡುಕುವುದು ಕಷ್ಟ ಇದೆ ಕಣ್ರಿ ಅಂತ ಪೊಲೀಸ್ ನವರು ಮಾತನಾಡಿಕೊಳ್ಳುತ್ತಿದ್ದರು.! ತೆಪ್ಪದಲ್ಲಿ ಸ್ಥಳೀಯ ಈಜುಗಾರರು ಹುಡುಕಲು ಇಳಿದರು.. ಮಧ್ಯಾಹ್ನ ಮೂರರವೊತ್ತಿಗೆ ಶವ ಸಿಕ್ಕಿತು ಜುಟ್ಟು ಹಿಡಿದುಕೊಂಡು ಒಬ್ಬ ಎಳೆದುಕೊಂಡು ಬಂದ..! ದಡಕ್ಕೆ ತಂದು ಮಲಗಿಸುವ ಹೊತ್ತಿಗೆ ಅಲ್ಲೇ ಕುಳಿತ್ತಿದ್ದ ಅತ್ತೆ ಅವರ ಜೊತೆಯಲ್ಲಿದ್ದ ಅರುಣ ಕಿರುಚ್ಚುತ್ತ ಅಳುತ್ತಿದ್ದಾರೆ.. ಸಂಬಂಧಿಕರು ಕೂಡ ಅವನ ಗೆಳೆಯರು ಎಲ್ಲರೂ ಸುತ್ತ ನಿಂತು ಬಿಟ್ಟರೂ.. ಸ್ವಲ್ಪ ಹೊತ್ತಿನ ನಂತರ ಪೊಲೀಸ್ನೊಬ್ಬ ಎಲ್ಲರನ್ನು ದೂರ ಹೋಗುವಂತೆ ಹೇಳಿ ಪೋಸ್ಟ್ ಬರ್ಟಮ್ ಗೆ ಮಾಗಡಿದೆ ತೆಗೆದುಕೊಂಡು ಹೋಗಬೇಕೆಂದು ಹೇಳಿದ ಚಿಕ್ಕಪ್ಪ ಮತ್ತು ಅತ್ತೆಯ ಬಳಿ ಸಹಿ ತೆಗೆದುಕೊಳ್ಳುತ್ತಿದ್ದ. ಇದನ್ನೆಲ್ಲ ದೂರದಿಂದಲೇ ನೋಡುತ್ತಾ ನಿಂತಿದ್ದೆ ಚಿಕ್ಕಪ್ಪ ಸುತ್ತ ತಿರುಗಿ ನೋಡಿ ನನ್ನನ್ನು ಕರೆದರು ನಾನು ಹೊರಟೆ ಗಾಡಿತೆಗಿ ಮಾಗಡಿಗೆ ಹೋಗಿ ಬರೋಣ ಅಂತ ಹೇಳಿ ಗಾಡಿ ಬಳಿ ಹೊರಟರು.! ಆಂಬ್ಯುಲೆನ್ಸ್ ಶವವವನ್ನು ಹೊತ್ತು ವೇಗವಾಗಿ ಹೊರಟು ಹೋಯ್ತು ಹಿಂದೆ ನಮ್ಮ ಕಾರು ಜೊತೆಗೆ ಅಲ್ಲಿನ ಮುಖಂಡರು ಮಾಗಡಿ ಸರಕಾರಿ ಆಸ್ಪತ್ರೆಯ ಬಂದು ನಿಂತೆವು ಒಳ ಹೋದವರೆ ಡಾಕ್ಟರ್ ಗೆ ಸ್ವಲ್ಪ ದುಡ್ಡುಕೊಟ್ಟು ಬೇಗ ಪೋಸ್ಟ್ ಬರ್ಟಮ್ ಮಾಡಿಸವ ಆತುರದಲ್ಲಿದ್ದರು. ನಾನು ಶವದ ಬಳಿ ನಿಂತೆ ಕೈ ಕಾಲುಗಳು ಸೆಳೆತುಕೊಂಡಿದ್ದವೇನೋ ಮುರಿದು ನೇರ ಮಾಡಿದ್ದರು.. ಆ ಕೈಗಳನ್ನೊಮ್ಮೆ ನೋಡಿದೆ..! ರಾತ್ರಿ ಅರುಣನ ಕೈಯಲ್ಲಿದ್ದ #GK ಟ್ಯಾಟು ನನಗೆ ಕಾನ್ಫ್ಯೂಸ್ ಆಗೋಕೆ ಶುರುವಾಯ್ತು..! ಶವ ಸಿಕ್ಕ ಮೇಲೆ ಅತ್ತೆ ಕೂಡ #ಅರುಣ ಅಂತ ಕಿರುಚುತ್ತಿದ್ದಳು.. ಈಗ ಸತ್ತವನು ಅರುಣ ಎಂದ ಮೇಲೆ ರಾತ್ರಿ ಸಿಕ್ಕವನು ಅರುಣ..! ಮನಸ್ಸು ಗೊಂದಲದಲ್ಲಿ ಸಿಕ್ಕಿಬಿತ್ತು.! ಡಾಕ್ಟರ್ ಬಂದು ಶವಗಾರದೊಳಗೆ ಹೋದರು ಜೊತೆಗೆ ಇಬ್ಬರೂ ಹೆಣ ಕುಯ್ಯುವವರು ಖಾಕಿ ಬಟ್ಟೆ ಹಾಕಿದ್ದವರ ಬಾಯಲ್ಲಿ ಆಗಲೇ ಎಣ್ಣೆಯ ಕಮಟು ರಾಚುತ್ತಿತ್ತು.. ಸ್ವಲ್ಪ ಸಮಯದ ನಂತರ ಮುಖ ಕಾಣುವಂತೆ ಮಾತ್ರ ಬಿಟ್ಟು ಪೂರ್ತಿ ಪ್ಯಾಕ್ ಮಾಡಿದ ದೇಹ ಹೊರಗೆ ಬಂತು.. ಅವರಿಬ್ಬರು ಸಹಾಯಕರಿಗೂ ಚಿಕ್ಕಪ್ಪ ಕೊಟ್ಟಿದ್ದ ಎರಡು ಸಾವಿರದ ಒಂದು ನೋಟುಕೊಟ್ಟೆ..! “ಪ್ರೀತಿ ಪ್ರೇಮ ಯಾಕೆ ಬೇಕು ಈ ಹುಡುಗರಿಗೆ ಅವ್ವ ಅಪ್ಪನ್ನ ಚನ್ನಾಗಿ ನೋಡ್ಕೊಂಡು ಅವರ ಯಣಕ್ಕೆ ಬೆಂಕಿ ಇಕ್ರೋ ಅಂದ್ರೆ ಇವೇ ಸಾಯ್ಬರದ ವಯಸ್ಸಲ್ಲಿ ಸಾಯ್ತಾವೇ.. ಅಂತ ಕಣ್ಣೀರು ತುಂಬುಕೊಂಡು ಹೋರಾಟ ಹೋದ” ಮಾಜರ್ ಮಾಡ್ತಿದ್ದ ಪೊಲೀಸ್ ನವರು ಸಾಕ್ಷಿಗೆ ಸಹಿ ಹಾಕಲು ಕರೆದರು ಸತ್ತವನು ಅರುಣ ಅಂತ ಸ್ಪಷ್ಟವಾಗಿ ಬರೆದಿತ್ತು ಸಹಿ ಹಾಕಿದೆ ಸತ್ತವನ ಯಾರು ಎಂಬ ಗೊಂದಲ ಸ್ಪಷ್ಟವಾಗಿತ್ತು.. ಪ್ಯಾಕ್ ಆದ ಶವ ಮತ್ತೆ ತುಬಿನಕೆರೆಯತ್ತ ಆಂಬ್ಯುಲೆಸ್ನಲ್ಲಿ ಹೊರಟಿತು.. ನಾವು ಹೊರಟೆವು ಊರು ಮುಟ್ಟುವ ಹೊತ್ತಿಗೆ ಚಿತೆಯೊಂದು ಅಣಿಯಾಗಿತ್ತು.! ಅತ್ತು ಸುಸ್ತಾಗಿದ್ದವರೆಲ್ಲ ಹೂವು ಹಾಕಿ ಹೋಗುತ್ತಿದ್ದರು.. ಕೆಲವರು ಊರಿಗೆ ಹೋಗುವ ಗಡಿಬಿಡಿಯಲ್ಲಿದ್ದರು ಅನಿಸುತ್ತದೆ.. ಬೇಗನೆ ಚಿತೆಯ ಮೇಲೆ ಮಲಗಿಸಿ ಕಿರಣನ ಕೈಯಲ್ಲಿ ಕೊಳ್ಳಿಕೊಟ್ಟುರು ಅವನು ಕಿರುಚುತ್ತಲೇ ಇದ್ದ ಅವನು ಕೈಯಲ್ಲಿ ಕೊಳ್ಳಿ ಹಿಡಿದಾಗ ಅವನ ಕೈಯನ್ನೊಮ್ಮೆ ಗಮನಿಸಿದೆ ಬೋಡು ಕೈಗಳು ಯಾವುದೇ ಟ್ಯಾಟು ಇರಲಿಲ್ಲ..! ಎಲ್ಲರನ್ನು ಮಾಗಡಿಗೆ ಬಿಟ್ಟು ಬಂದೇ ಅತ್ತೆ ಸುದಾರಿಸಿಕೊಂಡಿದ್ದಳು ಬಲವಂತ ಮಾಡಿ ಊಟ ಮಾಡಿಸುತ್ತಿದ್ದರು.. ಕಿರಣ ಕೂಡ ಊಟ ಮಾಡುತ್ತಿದ್ದ. ನೆನ್ನೆ ನಿನ್ನ ಮೊಬೈಲ್ ಏನಾಗಿತ್ತು ಎಂದೇ..? ಬಸ್ನಲ್ಲಿ ಯಾರೋ ಕದ್ದು ಬಿಟ್ಟರು.. ಎಷ್ಟು ಗಂಟೆಗೆ ಬಂದೆ ..? ಏಳು ಗಂಟೆಯಾಗಿತ್ತು ಮಾಗಡಿಗೆ ಬಂದೆ ಫ್ರೆಂಡ್ ಸಿಕ್ಕಿ ಹೇಳಿ ಕರೆದುಕೊಂಡು ಬಂದ..! ಮತ್ತೆ ಮಾತನಾಡಲು ಏನು ಇರಲಿಲ್ಲ.. ನೀನಾದ್ರು ಅತ್ತೆನ ಚನ್ನಾಗಿ ನೋಡ್ಕೋ.. ಎಂದು ಹೇಳಿ ಹೊರ ಬಂದೆ ಚಿಕ್ಕಪ್ಪ ಮಾತಿಗೆ ಕುಳಿತರೂ ಹುಡ್ಗಿಗೋಸ್ಕರ ಸತ್ತವನೆ ದರಿದ್ರ ನನ್ನ ಮಗ ಕರೆದುಕೊಂಡು ಬಂದಿದ್ರೆ ಮದ್ವೆ ಮಾಡೋಲ್ಲ ಅಂದಿರೋಳ ಅವರಮ್ಮ.. ಪ್ರಾಣ ಕಳೆದುಕೊಳ್ಳೋದು ಏನಿತ್ತು.. ಇವಕ್ಕೆಲ್ಲ ಅವರಮ್ಮ ಕಷ್ಟಬಿದ್ದು ಸಾಕಿದ್ದು ನೆನಪಿಗೆ ಬರೋಲ್ವ… ನಾನು ಸುಮ್ಮನೆ ಕುಳಿತ್ತಿದ್ದೆ..! ರಾತ್ರಿ ಹತ್ತುಗಂಟೆಯ ಹೊತ್ತಿಗೆ ಹೊರಟೆ ಅದೇ ಗುಂಡಿಗಳಿರುವ ದಾರಿ ಬೆಂಗಳೂರು ನಲವತ್ತು ಕಿಲೋಮೀಟರ್.. ಮಾಗಡಿ ಐದು ಕಿಲೋಮೀಟರ್ ಅದೇ ಎರಡನೇ ಗೇರ್ನಲ್ಲಿ ಗಾಡಿ ನಿಧಾನವಾಗಿ ಚಲಿಸುತ್ತಿದೆ

ಕಥಾಗುಚ್ಛ Read Post »

ಕಥಾಗುಚ್ಛ

ಕಥಾಗುಚ್ಛ

ನನ್ನ ಅಪ್ಪ ಹೇಡಿಯಾಗಿಬಿಟ್ಟಿದ್ದ..! ವೇಣುಗೋಪಾಲ್ ನನ್ನ ಅಪ್ಪ ಹೇಡಿಯಾಗಿಬಿಟ್ಟಿದ್ದ..! ಬಡತನವನ್ನೇ ಬುನಾದಿಯಾಗಿ ಮೆಟ್ಟಿ ಸಿರಿತನದ  ಒಂದೊಂದು ಇಟ್ಟಿಗೆಯನ್ನು ಹೆಕ್ಕಿತಂದು ಬೆವರರಿಸಿ ನೆಮ್ಮದಿಯ ಬದುಕನ್ನು ಕಟ್ಟಿಕೊಡುತ್ತಿದ್ದ ಅಪ್ಪ ಹೇಡಿಯಾಗಿಬಿಟ್ಟಿದ್ದ..! ನಾ ಕಂಡ ಅಪ್ಪ ಹೀಗಿರಲಿಲ್ಲ.! ಉರಿಯುವ ಸೂರ್ಯನಂತೆ ಎಂತಹ ಕಷ್ಟಗಳ ಮೋಡಗಳನ್ನ ಕರಗಿಸಿ ಬಿಡುತ್ತಿದ್ದ.. ಅವನ ಪ್ರೀತಿಯು ಅಷ್ಟೇ ಆಗತಾನೆ ಕರೆದ ಹಾಲಿನಂತಹ ಸಿಹಿ ನಿಷ್ಕಲ್ಮಶವಾದ ತ್ಯಾಗವೆತ್ತ ಸಾಕಾರಮೂರ್ತಿ.. ಅಮ್ಮನ ಪ್ರಿತೆಯೇ ಕಾಣದ ನನಗೆ ಅವನ ಬೆಚ್ಚನೆಯ ತೋಳುಗಳೇ ಎಲ್ಲವೂ ಆಗಿತ್ತು ಮರಿಗುಬ್ಬಿಗೆ ಗೂಡಿನಂತೆ..! ಅವನಿಗೂ ಅಷ್ಟೇ ನಾನೆಂದರೆ ಪ್ರೀತಿ ನಾನೆಂದರೆ ಅಮ್ಮನ ಪ್ರತಿರೂಪು.! ನಾನೆಂದರೆ ಅಮ್ಮನ ನೆನಪು.! ನಾನೆಂದರೆ ಅವನ ಮೊಗದ ನಗು.! ನಾನೆಂದರೆ ಅವನ ತೋಳುಗಳಲ್ಲಿನ ಬಲ.!  ನಾನೆಂದರೆ ಅವನ ಬಲಿಷ್ಠ ತೋಳುಗಳನ್ನೇ ಸುತ್ತಿಕೊಂಡು ಬೆಳೆಯುತ್ತಿರುವ ಬಳ್ಳಿ..! ನಾನೆಂದರೆ ಅವನಿಗೆ ಜೀವ…! ಅಮ್ಮನಿಲ್ಲದ ನನಗೆ ಅಮ್ಮನಾಗಿದವನು.! ಸಂಬಂಧಿಗಳೆಲ್ಲ ಇನ್ನೊಂದು ಮದುವೆಗೆ ಒತ್ತಾಯಿಸಿದರು ಒಪ್ಪದೆ  ತನ್ನ ಯೌವನದ ದಿನಗಳನ್ನ ನನ್ನ ನಗುವಿಗಾಗಿ ತೆಯುತ್ತಿದ್ದ.. ಹೀಗೆ ದಿನಗಳು ಕಳೆಯುತ್ತಿತ್ತು ನನ್ನ ಮನಸ್ಸಿನಲ್ಲಿ ಅಪ್ಪನ ಅಭಿಮಾನದ ಪುತ್ತಳಿಯೊಂದು ಮುಗಿಲೆತ್ತರಕ್ಕೆ ಬೆಳೆದು ನಿಂತಿತ್ತು..! ನಾನು ಕೂಡ ಅವನ ಹೆಗಲಮೀರಿ ಬೆಳೆದು ನಿಂತಿದ್ದೆ..! ನನ್ನೂರಿಗೆ ಬರ ಬಡಿದು ಹಲವು ವರ್ಷಗಳು ಕಳೆದಿದ್ದೋ… ಹನಿ ಕಾಣದ ಹಳ್ಳಿಗೆ ಕಳೆದ ಎರಡು ದಿನಗಳಿಂದ ಮಳೆಯು ಬಿಡುವಿಲ್ಲದಂತೆ  ಸುರಿದು ರಾತ್ರಿಕೂಡ ತೊಯ್ದು ನಿಂತಿತ್ತು  ಭಾನುವಾರ ಬೆಳ್ಳಂಬೆಳಗ್ಗೆ ಸೂರ್ಯಕಿರಣಗಳು ಸೋನೆ ಮಳೆಯೊಡನೆ ಸರಸಕ್ಕಿಳಿದಿದ್ದೋ.. ನೀಲಿ ಆಕಾಶದಲ್ಲಿ ರಾತ್ರಿಯೆಲ್ಲಾ ಮಳೆಯಾಗಿ ಕರಗಿದ ಕಂದುಮೋಡಗಳೆಲ್ಲ ಅಲ್ಲಲ್ಲಿ ಸಣ್ಣಗೆ ಚದುರಿ ಹರಡಿದ್ದೋ.. ನೆಂದು ತೇವವಾಗಿದ್ದ ರಸ್ತೆಗಳು ಹೊಲದ ಕಿದ್ದಾರೆಯಲ್ಲಿ ತುಂಬಿ ನಿಂತಿದ್ದ ನೀರು..  ಬತ್ತಿದ್ದ ಹಳ್ಳಗಳೆಲ್ಲ ತುಂಬಿನಿಂತಿವೆ ಹಳ್ಳದ ಬದಿಗಿದ್ದ ಬಿದಿರುಮಳೆಗಳು ಹೊಂಗೆಮರಗಳೆಲ್ಲ ಹೊಸ ಹುರುಪಿನಿಂದ ಕಂಗಳಿಸುತ್ತಿವೆ. ಕಂಗಳಿಗೆ ರಸದೌತಣ  ನೀಡುವ ಪ್ರಕೃತಿಯೊಂದಿಗೆ ವಾರದ ರೂಢಿಯಂತೆ ಅಪ್ಪನೋಡನೆ ಬಿಳೆಕಲ್ಲು ಬೆಟ್ಟವತ್ತಿ ಊರ ಸುತ್ತಲಿನ ಹೊಲ ತೋಟ ಕೆರೆಗಳನ್ನೆಲ್ಲ ನೋಡುತ್ತಾ ಸಣ್ಣಗೆ ಹರಿಯುವ ಜರಿಗಳಲ್ಲಿ ಕಾಲಿಟ್ಟು ನೆಗೆದು ಸಣ್ಣ ಮಗುವಿನಂತೆ ಆಟವಾಡುತ್ತಾ  ನೆಡೆಯುತ್ತಿದ್ದೆ  ನನ್ನ ಜೊತೆಗಿದ್ದ ಅಪ್ಪ ಮಾತ್ರ ಪ್ರಕೃತಿ ಸೊಬಗು  ಸವಿಯದೆ..! ತನಗೆ ಸಂಬಂಧವಿಲ್ಲದಂತೆ ಮೌನಿಯಾಗಿದ್ದ ಕಡಿದಾದ ಆ ಬಂಡೆಯನ್ನು ನಿಧಾನವಾಗಿ ಏರುತ್ತ ಬರುತ್ತಿದ್ದವನು.. ಹರಿ ಜಾಗ್ರತೆ ಬಿದ್ದಿಯಾ..!  ಎಂದು ಹೇಳುತ್ತಿದ್ದಂತೆಯೇ ಬಾರೆಯ ಇಳಿಜಾರಿನಲ್ಲಿ ಜಾರಿ ಎರಡೂರುಳು ಬಿದ್ದೆ  ಕೈ ಹಿಡಿದು ಎತ್ತಿ. ಹರಿ ಈ ಹಳ್ಳಿ ಜೀವನವೇ ಹೀಗೆ.!  ಹೊಲ ಗದ್ದೆ ತೋಟ ಈ ಹಳ್ಳಿ ಇಲ್ಲಿನ ಜೀವನದ ಆಸೆಗಳನ್ನೆಲ್ಲ ಬಿಟ್ಟುಬಿಡು.. ಈ ಜೀವನ ನೋಡುವುದಕ್ಕೆ ಈ ಪ್ರಕೃತಿಯಷ್ಟೇ ಸುಂದರ ಅನಿಸುತ್ತದೆ  ಆದರೆ ಕಾಲುಜಾರಿಬಿದ್ದರಂತೂ ಮೇಲೆ ಹೇಳಲಾರದಷ್ಟು ಪ್ರಪಾತಕ್ಕೆ ತಳ್ಳಿ ಬಿಡುತ್ತದೆ..! ಯಾರು ಕೈಹಿಡಿದು ಎತ್ತಲಾರದಷ್ಟು ಕೆಳಕ್ಕೆ.! ಕಗ್ಗತ್ತಲಿಗೆ..! ನಿನಗೆ ಅತ್ತಿಬರಬೇಕೆಂಬ ಹಂಬಲವಿದ್ದರು ಕತ್ತಲು ನಿನ್ನ ಇರುವಿಕೆಯನ್ನೇ ನುಂಗುವಷ್ಟು ಆಳಕ್ಕೆ ನೂಕಿಬಿಡುತ್ತದೆ..! ಈ ವ್ಯವಸಾಯವೇ ಹೀಗೆ ಮಳೆಯೊಂದಿಗೆ ಬಿಸಿಲಿನೋದಿಂಗೆ ಬರದೊಂದಿಗೆ ಮನುಷ್ಯನ ದೂರಸೆಗಳೊಂದಿಗೆ ಸರಕಾರದ ನಿರಾಸಕ್ತಿಯೊಂದಿಗೆ ಇಡೀ ಪ್ರಕೃತಿಯೊಂದಿಗೆ ಆಡುವ ಜೂಜು ..! ಇದನ್ನೆಲ್ಲ ಎದುರಿಸಿ ಜಯಿಸಿದರಷ್ಟೇ ನಿನಗೆ ಉಳಿಗಾಲ.. ಸೋತರಂತೂ ಇದೆ ಪ್ರಕೃತಿಯ ಒಡಲಾಳಕ್ಕೆ ಕಸವಾಗಿ ಕೊಳೆತು ಹೋಗುತ್ತಿಯ ಹರಿ..! ಈ ವರ್ಷ ನಿನ್ನ ಇಂಜಿನಿಯರಿಂಗ್ ಮುಗಿದ ನಂತರ ಇಲ್ಲಿ ಬಂದು ನೆಲೆಸುವುದ ಬಿಟ್ಟು  ಬೆಂಗಳೂರಿನಲ್ಲಿ  ಕೆಲಸವಿಡಿದು ಬದುಕ ಕಟ್ಟಿಕೊಂಡುಬಿಡು ಹರಿ. ಅಪ್ಪನ ಈ ಮಾತುಗಳು ನನ್ನ ಕನಸ್ಸಿಗೆ ತಣ್ಣೀರೆರೆಚ್ಚಿದ್ದವು.. ಅಪ್ಪ ಇಲ್ಲಿ ಈ ಜಮೀನನ್ನೆಲ್ಲ ಬಿಟ್ಟು  ನಾನು ಅಲ್ಲಿದ್ದು ಗಳಿಸುವುದಾದರು ಏನು.? ಹತ್ತಿರದ ಹಾಸನದಲ್ಲಿ ಸಣ್ಣ ನೌಕರಿಹಿಡಿಯುತ್ತೇನೆ ನಿನ್ನೊಂದಿಗೆ ನಾನು ಇಲ್ಲೇ ಇದ್ದು ಎಲ್ಲವನ್ನು ನೋಡಿಕೊಂಡು ಆರಾಮಾಗಿ ಇದ್ದುಬಿಡೋಣ..! ಇಲ್ಲಾ  ಹರಿ ನೀನು ಬೆಂಗಳೂರಿನಲ್ಲೇ ಇರಬೇಕು ಒಂದು ಒಳ್ಳೆಯ ಕೆಲಸವಿಡಿದು ಕೂಡಿಟ್ಟ ಹಣದಲ್ಲಿ ಇಲ್ಲಿ  ಉಳಿದದ್ದನ್ನೆಲ್ಲ ಮಾರಿ ಬಂದ ಹಣದಲ್ಲಿ ಸ್ವಂತಕ್ಕೊಂದು ಮನೆಮಾಡಿಕೊಂಡು ನೆಮ್ಮದಿಯಿಂದ ಇದ್ದುಬಿಡು..! ಅಪ್ಪ ಮತ್ತೆ ನೀನು ಬರುವುದಿಲ್ಲವೇ.!? ಬರುತ್ತೇನೆ ಹರಿ ನಿಜಕ್ಕೂ ಬರುತ್ತೇನೆ ನನ್ನ ಸೋಲುಗಳನ್ನೆಲ್ಲ ಮರೆತು ನಿನ್ನ ಗೆಲುವಿನ ಹೆಗಲ ಮೇಲೆ ಮಗುವಾಗಿ ನಿನ್ನ ಜೋತೆಗಿರಲು ಬಂದೆ ಬರುತ್ತೇನೆ ಹರಿ.. ಹೀಗೆ ಹೇಳಿ ಮನೆಗೆ ಬಂದು ಒಂದು ಖಾಲಿ ವಿಷದ ಬಾಟಲಿಯನ್ನು ಮಗ್ಗುಲಲ್ಲಿಟ್ಟು ನಿದ್ರೆಗೆ ಜಾರಿದ್ದ ಎಂದಿನಂತೆ ಸಂಜೆಗೆ ಎಚ್ಚರವಾಗುವ ನಿದ್ರೆಗಲ್ಲ..!  ಹಸಿವು ಬಾಯರಿಕೆಗಳೆನ್ನದ ರಾತ್ರಿ ಹಗಲೆನ್ನದ ಬಾಯಿತುಂಬ ಮತ್ತೆ “ಹರಿ” ಎಂದು ಕೂಗದ ಚಿರನಿದ್ರೆಗೆ ಜಾರಿಬಿಟ್ಟಿದ್ದ..! ಹೌದು ಅವನು ಬೆಳಗ್ಗೆ ನನ್ನೊಂದಿಗೆ ಆಡಿದ ಪ್ರತಿಮಾತು ಒಡೆದ ಅರ್ಥಗಳೆಲ್ಲ ನನ್ನೆದೆಗೆ ಇರಿಯುತ್ತಿದ್ದೋ..! ನಿಜಕ್ಕೂ ಅಪ್ಪ ಸಾವಿನ ನಿರ್ಧಾರವನ್ನು ಮೊದಲೇ ಮಾಡಿಬಿಟ್ಟಿದ್ದನೆ.!?  ಈ ಕೃಷಿ ಈ ನಾಲ್ಕೈದು ವರ್ಷದ ಬರ ನನ್ನ ಓದಿನ ಖರ್ಚು ಇವೆಲ್ಲವೂ ಅವನನ್ನ ಸಾಲಗಾರನಾಗಿಸಿತ್ತ.? ಅವನ ಮುಗಿಲೆತ್ತರದ ಪ್ರತಿಮೆಯೊಂದು ಅವನ ದೇಹವ ದಹಿಸುತ್ತಿರುವ ಚಿತೆಯ ತಾಪಕ್ಕೆ ನನ್ನ ಕಣ್ಗಳ ಹನಿಗಳ ಕೋಪಕ್ಕೆ ಕರಗುತ್ತಿತ್ತು…! ನನ್ನಪ್ಪ ಹೆಗಲೆತ್ತರದ ಮಗನಿದ್ದರೂ ಸಾಲಕ್ಕೆದರಿಯೋ..? ನನ್ನ ಸಂತೋಷಕ್ಕೆದರಿಯೋ..? ಅಪ್ಪ ಹೇಡಿಯಾಗಿಬಿಟ್ಟಿದ್ದ..! *********

ಕಥಾಗುಚ್ಛ Read Post »

ಕಥಾಗುಚ್ಛ

ಕಥಾಗುಚ್ಛ

ಒಂದೇ ಮನಸ್ಸಿನಿಂದ ಹರೀಶ್ ಬೇದ್ರೆ ಕೈಮುಗಿದು ಕೇಳ್ತಿನಿ, ದಯವಿಟ್ಟು ಇದೊಂದು ವಿಚಾರದಲ್ಲಿ ನನ್ನ ಇಷ್ಟದಂತೆ ನಡೆಯಲು ಬಿಡು. ಚಿಕ್ಕ ಹುಡುಗಿ ಇರುವಾಗಿನಿಂದ ಈಗಿನವರೆಗೂ ನೀನು ಹೇಳಿದ್ದನ್ನೇ ಕೇಳಿರುವೆ. ಇದು ನನ್ನ ಭವಿಷ್ಯದ ಪ್ರಶ್ನೆ.  ನೀನು ಏನೇನೋ ಹೇಳಿ ನನ್ನ ಇಷ್ಟದ ವಿರುದ್ಧ ನಡೆದುಕೊಳ್ಳುವಂತೆ ಮಾಡಬೇಡ… ಆಯ್ತು, ನಾನು ಇಲ್ಲಿಯವರೆಗೆ ಏನೇ ಹೇಳಿದ್ದರೂ ಅದು ನಿನ್ನ ಒಳ್ಳೆಯದಕ್ಕಾಗಿ ತಾನೇ…?ಹೌದು, ಅದಕ್ಕೆ ನಾನು ನಿನ್ನ ಮಾತು ಕೇಳಿದೆ. ಆದರೆ ಇದೊಂದು ವಿಚಾರಕ್ಕೆ ನನ್ನ ಇಷ್ಟದಂತೆ ಬಿಡು. ಅದು ಹೇಗೆ ಸಾಧ್ಯ , ಹೊರಗೆ ನಿನ್ನನ್ನು ನೋಡಲು ಬಂದಿದ್ದಾರೆ.ಅವರಿಗೆ ನಾನೇನೂ ಬರಲು ಹೇಳಿಲ್ಲ.ನಿನ್ನ ಈ ಮಾತು ಕೇಳಿದರೆ ಬಂದವರಿಗೆ ಬೇಜಾರಾಗುತ್ತೆ.ಹಾಗಂತ ಮನಸ್ಸಿನ ವಿರುದ್ಧ ಹೋಗಬೇಕಾ…?ಯಾರು ಹೇಳಿದ್ದು ಹಾಗೆ ಮಾಡು ಅಂತ..ಈಗ ನೀನೇ ಹೇಳುತ್ತಿರುವೆಯಲ್ಲ… ನಾನು ಹೇಳೋದನ್ನ ಸರಿಯಾಗಿ ಅರ್ಥ ಮಾಡಿಕೊ, ನಿನಗೆ ತಿಳಿಯುತ್ತೆ.ಏನೂ, ಮನಸ್ಸಲ್ಲಿ ನೀನೇ ಇದ್ದರೂ ಅದನ್ನು ಹಾಗೇ ಮುಚ್ಚಿಟ್ಟುಕೊಂಡು,  ಈಗ ನೋಡಲು ಬಂದವನನ್ನು ಒಪ್ಪಿಕೊಳ್ಳಬೇಕಾ? ಖಂಡಿತಾ ಒಪ್ಪಿಕೊ, ಏಕೆಂದರೆ ಜನ್ಮ ಕೊಟ್ಟು ಸಾಕಿ ಬೆಳೆಸಿದ ತಂದೆ ತಾಯಿ ಯಾವತ್ತೂ ಮಕ್ಕಳ ಹಿತವನ್ನೇ ಬಯಸುತ್ತಾರೆ. ಅವರಿಗಲ್ಲದೇ ಮತ್ಯಾರಿಗೆ  ನಿನ್ನ ಒಳಿತು ಕೆಡುಕು ತಿಳಿಯುತ್ತೆ ಹೇಳು.  ಅವರಿಗೆ ನೋವು ಕೊಟ್ಟರೆ ನಿನಗೆ ಒಳ್ಳೆಯದಾಗುತ್ತಾ…ನಾನೇನಾದರೂ ಅವರಿಗೆ ಗಂಡು ನೋಡಲು ಹೇಳಿದ್ದೇನೆ, ನನಗೆ ಕೇಳದೆ ಅವರು ಹುಡುಗನನ್ನು ಮನೆಗೆ ಕರೆದರೆ ನಾನೇನು ಮಾಡಲಿ? ಹೆಣ್ಣು ವಯಸ್ಸಿಗೆ ಬಂದ ಮೇಲೆ ಎಲ್ಲಾ ತಂದೆತಾಯಿ ಏನು ಮಾಡುತ್ತಾರೋ ಇವರು ಅದನ್ನೇ ಮಾಡಿದ್ದಾರೆ,  ಅಷ್ಟೇ..ಇವತ್ತು ನೀನು ಏನೇ ಹೇಳಿದರೂ ನಿನ್ನ ಮಾತನ್ನು ಕೇಳುವುದಿಲ್ಲ. ಮನಸ್ಸು ಒಬ್ಬರಿಗೆ, ಮದುವೆ ಮತ್ತೊಬ್ಬರೊಂದಿಗೆ ಸಾಧ್ಯವೇ ಇಲ್ಲ.  ಹುಚ್ಚಿ ಹಾಗೆ ಮಾತನಾಡಬೇಡ, ಸುಮ್ಮನೆ ಹೋಗಿ ಬಂದವರಿಗೆ ಕಾಫಿ ತಿಂಡಿ ಕೊಟ್ಟು ಹುಡುಗನನ್ನು ನೋಡು.ಈ ಮಾತು ಹೇಳಲು ನನ್ನನ್ನು ಅಂದು ಕಾಪಾಡಿದ್ದ?ಯಾವಾಗ? ನಾನು  ಆಯಾ ತಪ್ಪಿ ನೀರಲ್ಲಿ ಬಿದ್ದಾಗ.ನಿನ್ನ ಜಾಗದಲ್ಲಿ ಯಾರೇ ಇದ್ದಿದ್ದರೂ ನಾನು ಅದನ್ನೇ ಮಾಡುತ್ತಿದ್ದೆ.  ಅದಕ್ಕೂ ಇದಕ್ಕೂ ಸಂಬಂಧವಿಲ್ಲ.ಹೌದಾ, ಹಾಗಾದರೆ ನಾನು ಪಿ.ಯು. ಓದುವಾಗ  ನನ್ನನ್ನು ಇಷ್ಟಪಟ್ಟು ಹೂ ಕೊಟ್ಟ ಹುಡುಗನನ್ನು ಬೇಡ ಎಂದು ಒಪ್ಪಿಸಿದೆ ಏಕೆ? ಅವನು ಸರಿ ಇರಲಿಲ್ಲ ಅದಕ್ಕೆ.ಅವನು ಸರಿಯಿರಲಿಲ್ಲ ಅಂದರೆ ನಿನಗೇನು ತೊಂದರೆ ಆಗುತ್ತಿತ್ತು? ನನಗೇನೂ ಆಗುತ್ತಿರಲಿಲ್ಲ ಆದರೆ ನಿನಗೆ ತೊಂದರೆ ಆಗುತ್ತಿತ್ತು, ಅದಕ್ಕೆ ಒಪ್ಪಬೇಡ ಅಂದೆ. ಅದು ನನಗೆ ತಾನೇ, ನೀನು ಸುಮ್ಮನೆ ಇರಬೇಕಿತ್ತು.ಗೊತ್ತಿದ್ದೂ ಹೇಗೆ ಸುಮ್ಮನಿರಲಿ…ಹಾಗಿದ್ದರೆ ಈಗ ಬಂದ ಹುಡುಗ ಸರಿ ಇದ್ದಾನಾ?ಹೌದು, ಅದಕ್ಕೆ ಒಪ್ಪಿಕೊ ಅಂದಿದ್ದು.ನಿನಗೆ ಹೇಗೆ ಗೊತ್ತು?ನನಗೆ ಗೊತ್ತು, ಅದಕ್ಕೆ ಹೇಳುತ್ತಿರುವೆ ಸುಮ್ಮನೆ ನನ್ನ ಮಾತನ್ನು ಕೇಳು.ಹೌದೌದು, ನಿನಗೆ ಏನು ಗೊತ್ತಿಲ್ಲ ಹೇಳು?  ಎಷ್ಟೆಂದರೂ ನೀನು ಜಗವ ಕಾಯುವ ಪರಮಾತ್ಮ ಅಲ್ಲವೇ.  ದೇವರು ಮನುಷ್ಯಳೊಂದಿಗೆ ಮದುವೆ ಆಗುವುದು ಹೇಗೆ ಸಾಧ್ಯ. ಹಾಗೇನಾದರೂ ಆಗಿಬಿಟ್ಟರೆ ದೇವಕುಲದ ಮರ್ಯಾದೆಗೆ ಕುಂದುಂಟಾಗುತ್ತದೆ ಅಲ್ಲವೇ….? ನೋಡು…ಏನೂ ನೋಡುವುದು..?   ಸುಖ ದುಃಖ, ಬೇಸರ ಇನ್ನೊಂದು ಮತ್ತೊಂದು ಏನೇ ಇರಲಿ, ಅಪ್ಪ ಅಮ್ಮ, ಗೆಳೆಯರು, ಯಾರೆಂದರೇ ಯಾರ ಬಳಿಯೂ ಹೇಳಿಕೊಳ್ಳದೆ ಕೇವಲ ನಿನ್ನನೇ ನಂಬಿ, ನಿನ್ನ ಬಳಿ ಮಾತ್ರ ಕೇಳುತ್ತಿದ್ದೆ. ಆಗ ನಿನಗೆ, ನಾನು ಕೇವಲ ಮನುಷ್ಯಳಾಗಿ ಕಾಣಲಿಲ್ಲ. ಪ್ರತಿಯೊಂದನ್ನೂ ನಗುನಗುತ್ತಾ ಕೇಳಿದೆ, ಸಮಾಧಾನ ಮಾಡಿದೆ, ಪ್ರೀತಿಯಿಂದ ಸ್ಪಂದಿಸಿದೆ.  ಈಗ..………ನನ್ನ ಅಣುಅಣುವಿನಲ್ಲೂ ನೀನೇ ತುಂಬಿರುವೆ, ಪ್ರತಿದಿನ ಪ್ರತಿಕ್ಷಣ ನಿನ್ನನೇ ನಂಬಿರುವೆ. ಇದ್ದರೂ ನಿನಗಾಗಿ, ಹೋದರೂ ನಿನಗಾಗಿ ಎಂದು ನಿನ್ನನ್ನೇ ಆರಾಧಿಸಿ, ಪೂಜಿಸಿ ಬದುಕುತ್ತಿರುವ ನನಗೆ ಅನ್ಯರೊಂದಿಗೆ ಮದುವೆ ಆಗಲು ಹೇಳುವೆಯ?ಎಲ್ಲಾ ಗೊತ್ತು ಎನ್ನುವ ನಿನಗೆ, ನನ್ನೊಳಗಿನ ಪ್ರೀತಿ ಕಾಣಲಿಲ್ಲವೇ? ಅದು ಚಿಗುರೊಡೆದು ಹೆಮ್ಮರವಾಗಲು ಏಕೆ ಬಿಟ್ಟೆ?  ಇಲ್ಲಿಯವರೆಗೆ ಏಕೆ ಬಿಟ್ಟೆ ಹೇಳು?  ನಾನೆಲ್ಲಿ ನಿನಗೆ, ನಿನ್ನ ಪ್ರೀತಿ ಕಾಣಲಿಲ್ಲ ಎಂದು ಹೇಳಿದೆ.  ಇನ್ನೂ ಮುಂದೆಯೂ, ಮದುವೆಯ ನಂತರವೂ ಹೀಗೇ ಇರಬಹುದಲ್ಲ.ಅದು ಹೇಗೆ ಸಾಧ್ಯ? ಅಸಾಧ್ಯದ ಮಾತು. ಏಕೆ ಸಾಧ್ಯವಿಲ್ಲ ಹೇಳು.ನೀನು ಬಿಡಪ್ಪ ದೇವರು, ನಿನಗೆ ಎಲ್ಲಾ ಸಾಧ್ಯ. ಆದರೆ ನನ್ನಿಂದ ಖಂಡಿತಾ ಸಾಧ್ಯವಿಲ್ಲ.ಹೋಗಿ ಹುಡುಗನ ನೋಡು.ನಿನ್ನ ಹೊರತು ಬೇರೆ ಯಾರೂ ಬೇಡ ಎನ್ನುವಾಗ ಅವನನ್ನು ಏಕೆ ನೋಡಲಿ? ಒಮ್ಮೆ ನೋಡುಇಲ್ಲ ನೋಡುವುದಿಲ್ಲ.ನನಗೊಸ್ಕರಖಂಡಿತಾ ಇಲ್ಲ, ಬೇಕೆಂದರೆ ಸಾಯಲು ಹೇಳು ಸಂತೋಷವಾಗಿ ಹಾಗೇ ಮಾಡುವೆ.ನಿನ್ನ ಪ್ರಾಣ ತೆಗೆದುಕೊಂಡು ನಾನೇನು ಮಾಡಲಿ, ನಿಜವಾಗಿಯೂ ನಿನಗೆ, ನನ್ನ ಮೇಲೆ ಪ್ರೀತಿ ಇದ್ದರೆ ಹೋಗಿ ಹುಡುಗನನ್ನು ನೋಡು. ನೋಡಿದ ಮೇಲೂ ನಿನಗೆ ಅವನು ಬೇಡವೆನಿಸಿದರೆ ನಾನು ಮತ್ತೆಂದಿಗೂ ಮದುವೆಯ ಬಗ್ಗೆ ಮಾತನಾಡಲಾರೆ.ಇದೆಂತಹ ಮಾತು, ಏಕೆ ನನ್ನನ್ನು ಪರೀಕ್ಷೆ ಮಾಡುವೆ.ನನಗಾಗಿ ಒಮ್ಮೆ ನೋಡು.ಸರಿ ಕೇವಲ ಬಂದ ಹುಡುಗನನ್ನು ನೋಡಿ ಬರಬೇಕು ಅಷ್ಟೇ ತಾನೇ, ಹೋಗಿಬರುವೆ. ನೀನು ನಿನ್ನ ಮಾತನ್ನು ಉಳಿಸಿಕೊಳ್ಳಬೇಕು.ಆಗಲಿ, ಈಗ ಅಪ್ಪ ಅಮ್ಮ ನಿನಗಾಗಿ ಕಾಯುತ್ತಿದ್ದಾರೆ ಹೋಗಿ ಬಾ…                           ——*—–ಹುಡುಗನನ್ನು ನೋಡಿದೆಯಾ?………ನಿನಗೆ ಕೇಳಿದ್ದು, ಹುಡುಗನನ್ನು ನೋಡಿದೆಯಾ?ಹೂಂ…..ಮತ್ತೆ?ಏನು ಹೇಳಲಿ, ತಿಳಿಯುತ್ತಿಲ್ಲ…ಏಕೆ?ನನ್ನನ್ನು ನೋಡಲು ಬಂದಿರುವುದು ನೀನೇನೋ ಅಥವಾ ನಿನ್ನ ಪ್ರತಿರೂಪವೋ….ಮುಂದೆ..,.?ತಿಳಿಯುತ್ತಿಲ್ಲ…,ಹೋಗಿ ಅಪ್ಪ ಅಮ್ಮನಿಗೆ ಒಂದೇ ಮನಸ್ಸಿನಿಂದ ಹೇಳು…,..,.

ಕಥಾಗುಚ್ಛ Read Post »

ಕಥಾಗುಚ್ಛ

ಕಥಾಯಾನ

ತ್ರಿಶಂಕು ಟಿ.ಎಸ್.ಶ್ರವಣಕುಮಾರಿ ತ್ರಿಶಂಕು ಹಪ್ಪಳ ಒತ್ತುತ್ತಿದ್ದ ಸೀತಮ್ಮ, ಬಟ್ಟಲಿಗೆ ಮುಚ್ಚಿದ್ದ ಒದ್ದೆ ಬಟ್ಟೆಯನ್ನು ಸರಿಸಿ ಉಳಿದ ಉರುಳಿಗಳ ಲೆಕ್ಕ ಹಾಕಿದರು. ಇನ್ನು ಹದಿನೈದು ಉಂಡೆಗಳಿವೆ. ಬೆಳಗ್ಗೆಯೇ ಮಹಡಿಯ ಮೇಲೆ ಹಪ್ಪಳ ಒಣಗಿ ಹಾಕಲು ಸವರಿಸುತ್ತಿದ್ದುದನ್ನು ನೋಡಿದ್ದ ಧೀರಜನ ಫ್ರೆಂಡ್ಸ್ “ಅಜ್ಜಿ ನಾವೆಲ್ಲಾ ಶಾಲೆಯಿಂದ ಬಂದಮೇಲೆ ತಿನ್ನಕ್ಕೆ ಹಪ್ಪಳದ ಹಿಟ್ಟು ಕೊಡಬೇಕು” ಅಂತ ತಾಕೀತು ಮಾಡಿ ಹೋಗಿದ್ದರು. ಧೀರಜ್ ಅಮೆರಿಕಕ್ಕೆ ಹೋದಮೇಲೆ ಈ ಮಕ್ಕಳು ಮನೆಗೆ ಬರುವುದೂ ಅಪರೂಪವೇ. ಯಾವಾಗಾದರೂ ಒಮ್ಮೊಮ್ಮೆ ಇಂಥದೇನಾದರು ಇದ್ದಾಗಷ್ಟೆ ಬರುತ್ತಾರೆ. ಪಾಪ ಅವರಾದರೂ ಯಾಕೆ ಬರುತ್ತಾರೆ? ಮುದುಕರೊಂದಿಗೆ ಆಡಲು ಸಾಧ್ಯವೇ? ಅವನಿದ್ದಾಗಾದರೆ ಮಲಗುವ ಹೊತ್ತು, ಶಾಲೆಗೆ ಹೋಗುವ ಸಮಯ ಬಿಟ್ಟರೆ ಮಿಕ್ಕಷ್ಟು ಹೊತ್ತೂ ನಮ್ಮ ಮನೆಯಲ್ಲೇ ಠಿಕಾಣಿ. ಧೀರಜನೇ ಇವರಿಗೆಲ್ಲಾ ಇಂತಹ ರುಚಿಯನ್ನು ಕಲಿಸಿರೋದು. ಮೊಮ್ಮಗನ ನೆನಪು ಬಂದ ತಕ್ಷಣ ಮುಖದ ಮೇಲೆ ತಂತಾನೇ ಒಂದು ಮುಗುಳ್ನಗು ಮೂಡಿತು. ʻಸರಿ, ಆ ಮಕ್ಕಳು ಶಾಲೆಯಿಂದ ಬಂದ ಮೇಲೆ ಒಬ್ಬೊಬ್ಬರೂ ಎರಡೂ, ಮೂರೋ ಉರುಳಿಯನ್ನು ತಿನ್ನುವುದಾದರೆ ಇಷ್ಟು ಸರಿಹೋಗುತ್ತದೆ. ಇನ್ನು ನಿಲ್ಲಿಸೋಣʼ ಎಂದುಕೊಳ್ಳುತ್ತಾ ಗಂಡನನ್ನು ಕರೆದರು. “ಇದಿಷ್ಟು ಹಪ್ಪಳ ಒಣಗಿ ಹಾಕಿ ಬಂದುಬಿಡಿ. ಅಲ್ಲಿಗೆ ಆಯ್ತು”. ಪೇಪರ್ ಓದುತ್ತಿದ್ದ ರಾಮಣ್ಣನವರು ಪಕ್ಕಕ್ಕಿಟ್ಟು ಎದ್ದರು. ಎರಡು ಮೂರು ಗಂಟೆಗಳ ಕಾಲ ಒಟ್ಟಿಗೆ ಕೂತಿದ್ದು, ಸೀತಮ್ಮನವರಿಗೆ ತಕ್ಷಣ ಎದ್ದು ನಿಲ್ಲಲಿಕ್ಕೆ ಆಗಲಿಲ್ಲ. ಸಾವರಿಸಿಕೊಳ್ಳುತ್ತಿರುವಾಗ ತಡೆಯಲಾಗದೇ ರಾಮಣ್ಣನವರು ಅಂದರು. “ಅದಕ್ಕೇ ಹೇಳಿದ್ದು. ಅಡಿಗರ ಅಂಗಡಿಯಿಂದ ತಂದಿಡ್ತೀನಿ. ತೊಂದರೆ ತೊಗೋಬೇಡ ಅಂತ. ನನ್ನ ಮಾತೆಲ್ಲಿ ಕೇಳ್ತಿ ನೀನು” ಲಟ್ಟಿಸಿದ ಹಪ್ಪಳದ ತಟ್ಟೆಯನ್ನು ಹಿಡಿದುಕೊಂಡು ಮೆಟ್ಟಿಲ ಕಡೆ ನಡೆಯುತ್ತಾ. “ಅಂಗಡಿಯಿಂದ ತಂದರೆ ಮನೇಲಿ ಮಾಡಿದ ಹಾಗೆ ಆಗುತ್ತೇನೂ. ಆ ಮಗೂ ಫೋನ್ ಮಾಡಿದಾಗೆಲ್ಲಾ ಕೇಳತ್ತೆ. ಅಜ್ಜಿ ಹಪ್ಪಳ ಮಾಡಿದೀ ತಾನೆ, ಉಪ್ಪಿನಕಾಯಿ ಹಾಕಿದೀ ತಾನೆ, ನಾ ಬರ್ತಾ ಇದೀನಿ. ನಂಗೆಲ್ಲಾ ಬೇಕು ಅಂತ. ಏನೋ ಈ ವರ್ಷಕ್ಕೆ ಇಷ್ಟಾಯ್ತು” ಎನ್ನುತ್ತಾ ಸೀತಮ್ಮ ಸೀರೆ ಕೊಡವಿಕೊಂಡು, ಲಟ್ಟಣಿಗೆ, ಮಣೆ, ಎಲ್ಲವನ್ನೂ ಒಂದೊಂದಾಗಿ ಅಡುಗೆ ಮನೆಗೆ ತೆಗೆದುಕೊಂಡು ಹೋಗಿ ಇಟ್ಟರು. ಆಗಲೇ ಹನ್ನೆರಡು ಘಂಟೆಯಾಗಿರಬೇಕು. ತಣ್ಣಗೆ ಏನಾದರೂ ಕುಡಿಯೋಣವೆನ್ನಿಸಿ, ಕಡೆದು ಇರಿಸಿದ್ದ ಮಜ್ಜಿಗೆಯನ್ನು ಎರಡು ಲೋಟಕ್ಕೆ ಬಗ್ಗಿಸಿಕೊಂಡು ಪಡಸಾಲೆಗೆ ಬಂದರು. “ಎಷ್ಟಾಯ್ತು ಅಂತ ಎಣಿಸಿದ್ರಾ” ಕೆಳಗೆ ಬಂದ ಗಂಡನ ಕೈಯಲ್ಲಿ ಮಜ್ಜಿಗೆಯ ಲೋಟವನ್ನಿಡುತ್ತಾ ಕೇಳಿದ್ರು. “ಆಗ್ಲೇ ಎಣಿಸಿದಾಗ ಎಂಭತ್ತೈದು ಆಗಿತ್ತು. ಈಗ ಎಷ್ಟಿತ್ತು” ಅಂದರು. “ಸರಿ ಹತ್ತಿರ ಹತ್ತಿರ ನೂರು ಆಗಿರತ್ತೆ ಬಿಡಿ” ಅನ್ನುತ್ತಾ ಮಜ್ಜಿಗೆಯ ಲೋಟವನ್ನು ಹಿಡಿದುಕೊಂಡು ಅಲ್ಲೇ ಸೋಫಾದ ಮೇಲೆ ಕುಳಿತವರು, “ದಿನಕ್ಕೆ ಇನ್ನೂರು, ಮುನ್ನೂರು ಹಪ್ಪಳ ಸಲೀಸಾಗಿ ಮಾಡ್ತಾ ಇದ್ದೆ. ಈಗ ನೂರು ಮಾಡೋಷ್ಟರಲ್ಲೇ ಸೋತು ಹೋಗೋ ಹಾಗಿದೆ” ನಿಟ್ಟುಸಿರು ಬಿಟ್ಟರು. “ಇನ್ನೇನು ಒಂದು ವಾರದಿಂದ ಒಂದೇ ಸಮ ಸಂಡಿಗೆ, ಉಪ್ಪಿನಕಾಯಿ, ಬಾಳಕ ಅಂತ ಏನೇನೋ ಮಾಡ್ಕೊಂಡು ಕುಣೀತಿದೀಯ. ವಯಸ್ಸು ಹಿಂದ್ಹೋಗತ್ತಾ? ಇನ್ನೇನೂ ಹಚ್ಚಿಕೊಳ್ಳಕ್ಕೆ ಹೋಗ್ಬೇಡ. ಇವತ್ತಾಗಲೇ ಗುರುವಾರ. ಭಾನುವಾರ ಅವರೆಲ್ಲಾ ಬಂದೇ ಬಿಡ್ತಾರೆ. ಇನ್ನೆರಡು ದಿನ ಸ್ವಲ್ಪ ಸುಧಾರಿಸ್ಕೋ. ಈಗ ಬೇಕಾದ್ರೆ ನಾನೇ ಅಡುಗೆ ಮಾಡ್ತೀನಿ” ಅಕ್ಕರೆಯಿಂದ ನುಡಿದರು. “ಬೆಳಗ್ಗೇನೇ ಕುಕ್ಕರ್ ಇಟ್ಟಾಗಿದೆ. ಸಾರಿಗೊಂದು ಕೂಡಿಟ್ರೆ ಆಯ್ತು. ಊಟಕ್ಕೆ ಕೂತುಕೊಳ್ಳೋಕೆ ಮುಂಚೆ ಮಾಡಿದ್ತಾಯ್ತು ಬಿಡಿ” ಎನ್ನುತ್ತಾ ಮಜ್ಜಿಗೆಯ ಲೋಟ ಕೆಳಗಿಟ್ಟು ಅಲ್ಲೇ ಸೋಫಾದಲ್ಲಿ ಹಿಂದಕ್ಕೆ ಒರಗಿದರು. “ಸರಿ. ನೀನು ಸ್ವಲ್ಪ ಸುಧಾರಿಸ್ಕೋ. ನಾನು ಹೋಗಿ ಎಲೆಕ್ಟ್ರಿಸಿಟಿ ಬಿಲ್ಲು ಕಟ್ಟಿ ಬರ್ತೀ ನಿ” ಎನ್ನುತ್ತಾ ಮೇಲಕ್ಕೆದ್ದರು. “ಹೊರಗಡೆ ಏನು ಬೆಳದಿಂಗಳೇ? ಈ ಸುಡುಸುಡು ಬಿಸಿಲಲ್ಲಿ ಹೊರಗೆ ಹೊರಟಿದೀರಲ್ಲ, ನಾಳೆ ಹೋದ್ರಾಯ್ತು ಬಿಡಿ” ಎಂದರೂ “ಇಲ್ಲ ನಾಳೆ ಗುಡ್ ಫ್ರೈಡೆ ರಜ. ಇನ್ನು ಶನಿವಾರವೊಂದೇ ಉಳಿಯೋದು. ಆಗ್ಲಿಲ್ಲ ಅಂದ್ರೆ ಕಷ್ಟ. ಭಾನುವಾರ ಅವರೆಲ್ಲಾ ಬಂದು ಬಿಟ್ರೆ, ಆಮೇಲೆ ಹೋಗೋಕಾಗೋದೇ ಇಲ್ಲ” ಎನ್ನುತ್ತಾ ಕೊಡೆ ಹಿಡಿದುಕೊಂಡು ಹೊರಟೇ ಬಿಟ್ಟರು ರಾಮಣ್ಣನವರು. ʻಸುಮ್ನೆ ನನ್ನ ಕಕ್ಕುಲಾತೀಗೆ ಹೇಳಬೇಕಷ್ಟೇ. ಅವರಿಗನ್ನಿಸಿದ್ದನ್ನೇ ಮಾಡೋದುʼ ಎಂದುಕೊಳ್ಳುತ್ತಾ “ಸರಿ ಬಾಗಿಲೆಳೆದುಕೊಂಡು ಹೋಗಿ; ಕೀ ನಿಮ್ಮ ಹತ್ರ ಇದೆ ತಾನೇ” ಎನ್ನುತ್ತಾ ಹಾಗೆಯೇ ಕಣ್ಣು ಮುಚ್ಚಿಕೊಂಡು ಒರಗಿಕೊಂಡರು ಸುಧಾರಿಸಿಕೊಳ್ಳಲೆಂಬಂತೆ….. ಅತ್ತೆಯಿದ್ದಾಗ ಇಬ್ಬರೂ ಸೇರಿ ಅದೆಷ್ಟು ಹಪ್ಪಳ ಸಂಡಿಗೆ ಮಾಡುತ್ತಿದ್ದದ್ದು… ಶಿವರಾತ್ರಿ ಕಳೆಯಿತೆಂದರೆ ಸಾಕು ಇದೇ ಕೆಲಸ. ಇದ್ದದ್ದು ಶಿವಮೊಗ್ಗದ ಹತ್ತಿರದ ಊರಗಡೂರಿನಲ್ಲಿ. ದೊಡ್ಡ ಮನೆ, ಅಡಿಕೆ ತೋಟ, ಮನೆಯ ತುಂಬಾ ಹತ್ತಾರು ಆಳು ಕಾಳು, ಕೊಟ್ಟಿಗೆಯ ತುಂಬಾ ದನ ಕರುಗಳು. ಕೆಲಸ ಒಂದೇ ಎರಡೇ. ಮದುವೆಯಾದ ಹೊಸತರಲ್ಲಿ ಅಷ್ಟು ದೊಡ್ಡ ಮನೆಯ ನೆಲವನ್ನೆಲ್ಲಾ ಸಗಣಿ ಹಾಕಿ ಸಾರಿಸಬೇಕಿತ್ತು. ಆಮೇಲಾಮೇಲೆ ಗಾರೆ ಮಾಡಿಸಿದ ಮೇಲೆ ಆ ದೊಡ್ಡ ಕೆಲಸ ತಪ್ಪಿತ್ತು. ರಾಶಿ ರಾಶಿ ಕೆಲಸ – ಆದರೆ ಅದೆಷ್ಟು ಹುರುಪು, ಉತ್ಸಾಹ! ಮಾವನವರಿಗೆ ಮೂವರು ಗಂಡು ಮಕ್ಕಳು, ಹೆಣ್ಣು ಮಕ್ಕಳಿರಲಿಲ್ಲ. ಇವರೇ ಕಡೆಯವರು. ತಾನು ಮದುವೆಯಾಗಿ ಮನೆಗೆ ಬರುವಾಗ ಎಲ್ಲರ ಜವಾಬ್ದಾರಿಯೂ ಕಳೆದಿತ್ತು. ದೊಡ್ಡ ಮಗ ಇಂಜಿನಿಯರಾಗಿ ಪಿ.ಡಬ್ಲು.ಡಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಊರೂರು ಅಲೆಯುತ್ತಿದ್ದು, ಮಕ್ಕಳಿಗೆ ಓದಲಿಕ್ಕೆ ಅನುಕೂಲವೆಂದು ಬೆಂಗಳೂರಿನಲ್ಲಿ ಮನೆಮಾಡಿ ತಮ್ಮ ಸಂಸಾರವನ್ನು ಅಲ್ಲೇ ಸ್ಥಾಪಿಸಿದ್ದರು. ಎರಡನೆಯವರು ಅಡ್ವೋಕೇಟು. ಅವರ ಮಾವನವರು ಚಿತ್ರದುರ್ಗದಲ್ಲಿ ಅದೇ ಕೆಲಸ ಮಾಡುತ್ತಿದ್ದವರು. ನಮ್ಮ ಮಾವನವರಿಗೂ ಮೊದಲಿಂದಲೇ ಗೆಳೆಯರಂತೆ. ಅವರ ಬಳಿಯೇ ಜೂನಿಯರ್ ಆಗಿ ಕೆಲಸ ಮಾಡಲು ಮಗನನ್ನು ಕಳಿಸಿಕೊಟ್ಟಿದ್ದರು. ಕಡೆಗೆ ಅವರ ಒಬ್ಬಳೇ ಮಗಳನ್ನೇ ಮದುವೆಯಾಗಿ ಅದಾಗಲೇ ಚೆನ್ನಾಗಿ ಕುದುರಿಕೊಂಡಿದ್ದ ಕೆಲಸವನ್ನು ಮುಂದುವರೆಸಿಕೊಂಡು ಅಲ್ಲೇ ಮನೆ ಹೂಡಿಕೊಂಡರು. ಇವರು ಓದಿದ್ದು ಶಿವಮೊಗ್ಗೆಯ ಕಾಮರ್ಸ್ ಕಾಲೇಜಿನಲ್ಲಿ ಬಿ. ಕಾಂ. ಮದುವೆಯಾಗುವಾಗ ಅಂತಹ ಕೆಲಸವೇನೂ ಇರಲಿಲ್ಲ. ಸುಮ್ಮನೆ ಹೊತ್ತು ಕಳೆಯುವುದಕ್ಕೆ ಎಲ್. ಐ. ಸಿ. ಏಜೆಂಟರಾಗಿದ್ದರು. ಅನುಕೂಲವಾದ ಮನೆಯಾದ್ದರಿಂದ ತನ್ನ ತವರು ಮನೆಯವರೂ ಇವರ ಕೆಲಸದ ಬಗ್ಗೆ ಅಷ್ಟೇನೂ ಚಿಂತಿಸಿರಲಿಲ್ಲ. ಆದರೆ ಇವರ ಮನಸ್ಸಿನಲ್ಲಿ ತಾನೂ ಅಣ್ಣಂದಿರ ಹಾಗೆ ದುಡಿಯಬೇಕು ಎಂದು ಆಶೆಯಿತ್ತೋ ಏನೋ – ಯಾವ ಯಾವುದೋ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದರು. ನಾನು ಮದುವೆಯಾಗಿ ಬಂದು ಒಂದಾರು ತಿಂಗಳಾಗಿತ್ತೇನೋ. ಬ್ಯಾಂಕಲ್ಲಿ ಕೆಲಸ ಸಿಕ್ಕೇ ಬಿಟ್ಟಿತು. ಮೊದಲ ಕೆಲಸ ಹುಬ್ಬಳ್ಳಿಯಲ್ಲಿ. ಇವರಿಗದೆಷ್ಟು ಸಂತೋಷವೋ… “ನಿನ್ನ ಕಾಲ್ಗುಣದಿಂದ ನನಗೆ ಈ ಕೆಲಸ ಸಿಕ್ಕಿದ್ದು. ನಾನು ಹೋಗಿ ಕೆಲಸಕ್ಕೆ ಸೇರಿಕೊಂಡು ಆದಷ್ಟು ಬೇಗಲೇ ಮನೆ ಮಾಡಿ ನಿನ್ನನ್ನೂ ಕರೆಸಿಕೊಳ್ಳುತ್ತೇನೆ. ಅಲ್ಲಿಯವರೆಗೆ ಇಲ್ಲೇ ಅಪ್ಪ ಅಮ್ಮನ ಜೊತೆಯಲ್ಲೇ ಇರು” ಎನ್ನುತ್ತಾ ಹೊರಟೇ ಬಿಟ್ಟರಲ್ಲ. ಅತ್ತೆ ಮಾವಂದಿರೂ ಸಂತೋಷವಾಗೇ ಕಳಿಸಿಕೊಟ್ಟರು. ತನಗೋ ಒಬ್ಬಳೇ ಇರುವುದಕ್ಕೆ ಬೇಸರ, ಆದರೆ ವಿಧಿಯಿಲ್ಲ. ಇನ್ನು ಸ್ವಲ್ಪವೇ ದಿನವಲ್ಲವಾ ಎನ್ನುವ ಸಮಾಧಾನ. ರಾಶಿ ರಾಶಿ ಕೆಲಸದಲ್ಲಿ ಹೊತ್ತು ಹೇಗೋ ಹೋಗುತ್ತಿತ್ತು. ಅತ್ತೆಗೂ ನನ್ನ ಬೇಸರ ಅರ್ಥವಾಗುತ್ತಿತ್ತೇನೋ. ಆದಷ್ಟೂ ನನ್ನ ಜೊತೆಯೇ ಕಾಲ ಕಳೆಯುತ್ತಿದ್ದರು. ಕೆಲಸಕ್ಕೆ ಸೇರಿದ ಹೊಸದಾದ್ದರಿಂದ ಇವರಿಗೆ ಅಷ್ಟು ರಜೆಯೂ ಸಿಕ್ಕುತ್ತಿರಲಿಲ್ಲ. ಅಪರೂಪಕ್ಕೊಂದೊಂದು ಭೇಟಿ. ಒಂದಾರು ತಿಂಗಳು ಕಳೆದಿತ್ತೇನೋ. ಅಂತೂ ಒಂದು ಮನೆ ಮಾಡಿಕೊಂಡು ನನ್ನನ್ನು ಕರೆದುಕೊಂಡು ಹೋಗಲು ಬಂದರು. ಹೊಸ ಸಂಸಾರ ಹೂಡಿಕೊಡಲು ಅತ್ತೆಯೂ ಜೊತೆಗೆ ಬಂದರು. ಯಾಕೋ ಬಂದ ಎರಡು ದಿನಕ್ಕೇ ಅವರಿಗೆ ಹುಶಾರು ತಪ್ಪಿತು. ಹೊಸ ಜಾಗ. ಅವರಿಗೆ ಸರಿ ಹೊಂದಲೇ ಇಲ್ಲ. ವಾಪಸ್ಸು ಊರಿಗೆ ಹೊರಟೇ ಬಿಟ್ಟರು. ವಾರದ ಕೊನೆಯಲ್ಲಿ ಇಬ್ಬರೂ ಅವರನ್ನು ಊರಿಗೆ ಬಿಡಲಿಕ್ಕೆ ಬಂದದ್ದಾಯಿತು. ಜ್ವರ ಹೆಚ್ಚಾಗುತ್ತಾ ಹೋಯಿತು. ಡಾಕ್ಟರು ಮಲೇರಿಯಾ ಅಂದರು. ಸರಿ, ಇವರೊಬ್ಬರೇ ಹುಬ್ಬಳ್ಳಿಗೆ ವಾಪಸ್ಸು ಹೋದರು. ತಾನು ಅತ್ತೆಯ ಶುಶ್ರೂಷೆಗೆ ನಿಂತೆ. ಬರೀ ಒಂದು ವಾರವಷ್ಟೇ. ಇವರು ಮತ್ತೆ ಊರಿಗೆ ಬರುವಂತಾಯಿತು ಸತ್ತ ಅಮ್ಮನನ್ನು ನೋಡಲು…. ಎಲ್ಲ ಕರ್ಮಾಂತರಗಳೂ ಮುಗಿದವು. ಎಲ್ಲರೂ ಹೊರಟು ನಿಂತರು. `ಅಪ್ಪನಿಗೇನು ಮಾಡುವುದು?’ ಎಲ್ಲರ ಮುಂದಿದ್ದ ಪ್ರಶ್ನೆ. ಯಾರು ಬೇಕಾದರೂ ಅವರನ್ನು ಕರೆದುಕೊಂಡು ಹೋಗಲು ತಯ್ಯಾರಿದ್ದರು. ಆದರೆ ಅವರು ಬರುವರೆ? ಬೆಕ್ಕಿಗೆ ಗಂಟೆ ಕಟ್ಟುವ ಪ್ರಶ್ನೆ. ಮಾವನವರಿಗೂ ಇದು ಅರ್ಥವಾಯಿತೇನೋ. ಮಧ್ಯಾನ್ಹ ಊಟ ಮುಗಿದ ನಂತರ ಅವರೇ ಮಕ್ಕಳೆಲ್ಲರಿಗೂ ಹೇಳಿದರು. “ಇನ್ನೆಷ್ಟು ದಿನ ನೀವಿಲ್ಲಿ ಇರಕ್ಕಾಗತ್ತೆ ಕೆಲಸ ಬಿಟ್ಟು. ನಿಮ್ಮ ಪಾಡಿಗೆ ಹೊರಡಿ”. “ಹಾಗಲ್ಲ, ಹೀಗೆ ನಿಮ್ಮೊಬ್ಬರನ್ನೇ ಬಿಟ್ಟು..” ದೊಡ್ಡವರು ಕೇಳಿದರು. “ನೀವೂ ನಮ್ಮ ಜೊತೆಗೇ ಬಂದರೆ ನಮಗೂ ಸಮಾಧಾನವಾಗತ್ತೆ” ಎಲ್ಲ ಮಕ್ಕಳೂ ಹೇಳಿದರು. “ಅದು ಸಾಧ್ಯವಾಗದ ಮಾತು. ಇದು ನಾನು ಹುಟ್ಟಿದಾಗಿಂದ ಇರುವ ಮನೆ. ನಾನು ಸಾಯುವವರೆಗೂ ಇದೇ ನನ್ನ ಮನೆ. ನಿಮ್ಮ ನಿಮ್ಮ ಜೀವನ ನಿಮ್ಮದು. ನೀವು ಹೊರಡಿ” ಎಂದರು ಮುಂದಿನ ಮಾತಿಗೆ ಅವಕಾಶವಿಲ್ಲವೆಂಬಂತೆ. ಯಾರಿಗೂ ಸಮಾಧಾನವಿಲ್ಲ. ಈ ವಯಸ್ಸಲ್ಲಿ ಅಪ್ಪ ಒಬ್ಬರನ್ನೇ ಬಿಟ್ಟು. ಹಾಗಂತ ತಾವು ಇಲ್ಲಿ ಬಂದಿರುವುದೂ ಸಾಧ್ಯವಿಲ್ಲ. ಏನು ಮಾಡುವುದು. ಆಗ ಇವರೆಂದರು – “ಈ ಕೆಲಸ ನನಗೆ ಸಿಕ್ಕುತ್ತೆ ಅಂತ ಅಂದುಕೊಂಡಿರಲಿಲ್ಲ. ಈಗಲೂ ಏನೂ ಪರವಾಗಿಲ್ಲ. ನಾನು ಇಲ್ಲೇ ಅಪ್ಪನ ಜೊತೆಗೇ ಇರ್ತೀನಿ. ಇಲ್ಲಿ ಎಲ್.ಐ.ಸಿ. ಏಜೆನ್ಸೀನೋ, ಇನ್ನೊಂದು ಏನು ಸಾಧ್ಯವೋ ಅದನ್ನೇ ಮಾಡ್ತೀನಿ. ನೀವು ಹೊರಡಿ. ನಿಮ್ಮದಾಗಲೇ ಬೇರು ಬಿಟ್ಟ ಸಂಸಾರ. ನಾನು ಈಗ ತಾನೇ ಕಣ್ಣು ಬಿಡ್ತಿದೀನಿ”. ಬೇರೆ ಇನ್ನೇನಾದರೂ ಹೇಳಲೂ ಯಾರಿಗೂ ಯಾವ ಉಪಾಯವೂ ಇಲ್ಲ. ನಮ್ಮ ಹುಬ್ಬಳ್ಳಿಯ ಸಂಸಾರ ಬರೀ ಒಂದು ವಾರದ್ದಾಯಿತು. ಎಲ್ಲರನ್ನೂ ಕಳಿಸಿಕೊಟ್ಟು ಜಗಲಿಯಲ್ಲಿ ನೋಡುತ್ತಾ ನಿಂತಿದ್ದ ಇವರ ಹೆಗಲ ಮೇಲೆ ಮಾವನವರು ಬಂದು ಕೈಯಿಟ್ಟರು. ಇವರು ತಿರುಗಿ ನೋಡುವಾಗ ಅವರಿಂದ ಏನನ್ನೂ ಹೇಳಲಾಗಲಿಲ್ಲ… ಸುಮ್ಮನೆ ತಮ್ಮ ಶಲ್ಯದ ತುದಿಯಿಂದ ಕಣ್ಣೊರಸಿಕೊಂಡರು….. ಅಪ್ಪನನ್ನು ಬಳಸಿ ಹಿಡಿದುಕೊಂಡು ಮನೆಯೊಳಗೆ ಬಂದರು… ಏಕೋ ಆ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಥಟ್ಟನೆ ಕಣ್ಣು ಬಿಟ್ಟು ನೋಡಿದರೆ ಆಗಲೇ ಘಂಟೆ ಒಂದೂವರೆ. ಇವರೇನು ಇಷ್ಟು ಹೊತ್ತಾದರೂ ಬರಲಿಲ್ಲ. ಬಾಗಿಲು ತೆರೆದು ಮೆಟ್ಟಿಲ ಕಡೆ ನೋಡಿದರು ಸೀತಮ್ಮ. ಎಲ್ಲೋ ಕೆಳಗಡೆ ಶ್ರೀನಿವಾಸರ ಹತ್ತಿರ ಮಾತಾಡುವ ಶಬ್ದ ಕೇಳಿಸುತ್ತಿದೆ. ಇನ್ನೇನು ಮೇಲೆ ಬಂದಾರು. ಅಷ್ಟರಲ್ಲಿ ಸಾರು ಕೂಡಿಡೋಣ ಎಂದು ಅಡುಗೆ ಮನೆಗೆ ಹೊರಟರು. ಬರೀ ಸಾರಾಯಿತಲ್ಲ ಎಂದುಕೊಂಡು ಸ್ವಲ್ಪ ಸಂಡಿಗೆಯಾದರೂ ಕರೆಯಲೇ ಅಂದುಕೊಂಡವರು, ಇಲ್ಲ ಅದನ್ನು ಧೀರಜನೇ ಮೊದಲು ರುಚಿ ನೋಡಬೇಕು ಎಂದುಕೊಂಡು ಜಾಡಿಯಲ್ಲಿದ್ದ ಉಪ್ಪಿನಕಾಯನ್ನು ಸ್ವಲ್ಪ ತೆಗೆದು ಒಗ್ಗರಣೆ ಹಾಕಿದರು. ತಟ್ಟೆ ಹಾಕುವಷ್ಟರಲ್ಲಿ ರಾಮಣ್ಣನವರೂ ಒಳಗೆ ಬಂದಿದ್ದರು. ಊಟಕ್ಕೆ ಕುಳಿತಾಗ ಕೇಳಿದರು “ಯಾಕಿಷ್ಟು ಹೊತ್ತಾಯಿತು” “ಹಾಗೇ ಬ್ಯಾಂಕಿಗೂ ಹೋಗಿ ಬಂದೆ. ಪಾಸ್ ಬುಕ್ಕನ್ನು ತುಂಬಿಸಿಕೊಂಡು ಬಂದೆ. ವಿಪರೀತ ರಷ್ಷು. ಏನು ಮಾಡೋದು. ಶಂಕರ ಬಂದರೆ ಅವನಿಗೆ ನೋಡಲು ಬೇಕಲ್ಲ” ಎನ್ನುತ್ತಾ ತಟ್ಟೆಗೆ ಕೈಯಿಟ್ಟರು. ಊಟವಾದ ಬಳಿಕ ನಿದ್ರೆ ಬರುತ್ತೋ ಇಲ್ಲವೋ ಅಂತೂ ಒಂದು ಗಂಟೆ ಹೊತ್ತು ಸ್ವಲ್ಪ ಉರುಳಿಕೊಳ್ಳುವ ಅಭ್ಯಾಸ. ಈದಿನ ಎಷ್ಟು ಆಯಾಸವಾಗಿದ್ದರೂ ಸೀತಮ್ಮನಿಗೆ ನಿದ್ರೆ ಬರುತ್ತಿಲ್ಲ. ಏನೋ ಹಳೆಯ ನೆನಪುಗಳು ಬಾಧಿಸುತ್ತಲೇ ಇವೆ… ತಮ್ಮ ಸಂಸಾರ ಊರಗಡೂರಿನಲ್ಲೇ ಮುಂದುವರೆದಾಗ ಸ್ವಲ್ಪ ಬೇಸರವಾದರೂ, ಮಾವನವರೊಬ್ಬರನ್ನೇ ಬಿಟ್ಟು ಹೋಗುವ ಮನಸ್ಸಂತೂ ಆಗಲಿಲ್ಲ. ಗೇಣಿದಾರರ ಗಲಾಟೆಯಲ್ಲಿ ಇದ್ದ ಜಮೀನೆಲ್ಲಾ ಹೋಯಿತು. ಉಳಿದದ್ದು ನಾಲ್ಕೆಕರೆ ತೋಟ ಮತ್ತು ಊರಗಲದ ಮನೆ ಮಾತ್ರ. ದೊಡ್ಡವರಿಬ್ಬರೂ ತಮ್ಮೆಲ್ಲಾ ಪಾಲನ್ನೂ ಇವರಿಗೇ ಬಿಟ್ಟುಕೊಟ್ಟರು. ಹುಟ್ಟಿದ್ದು ಒಬ್ಬನೇ

ಕಥಾಯಾನ Read Post »

ಕಥಾಗುಚ್ಛ

ಉಯ್ಯಾಲೆ

ಟಿ.ಎಸ್.ಶ್ರವಣಕುಮಾರಿ ಉಯ್ಯಾಲೆ ಉಯ್ಯಾಲೆ ಈಗಾರು ತಿಂಗಳಿನಿಂದಲೂ ಸೀತಕ್ಕನಿಗೆ ಅಷ್ಟು ಅರಾಮಿಲ್ಲ. ದಿನಕ್ಕೊಂದೊಂದು ತೊಂದರೆ. ಡಾಕ್ಟರಿಗೆ ತೋರಿಸಿಯೂ ಏನೂ ಪ್ರಯೋಜನವಾಗಿಲ್ಲ. ಅವರ ಪ್ರಕಾರ ವಯಸ್ಸಾಗಿರುವುದನ್ನು ಬಿಟ್ಟರೆ ಬೇರೇನೂ ಇಲ್ಲ. ಆದರೆ ಸೀತಕ್ಕನಿಗೆ ಮಾತ್ರಾ ದಿನದಿಂದ ದಿನಕ್ಕೆ ನಿತ್ರಾಣ. ಐವತ್ತು ಜನ ಬಂದರೂ ಹೆದರದೆ ಅಡುಗೆ ಮಾಡುತ್ತಿದ್ದವಳಿಗೆ ಈಗ ಐದು ಜನಕ್ಕೂ ಮಾಡಲೂ ಸಾದ್ಯವಾಗದಂತಾಗಿದೆ. ಈಗೊಂದು ತಿಂಗಳಿನಿಂದಂತೂ ಪೂರಾ ಹಾಸಿಗೆ ಹಿಡಿದು ಬಿಟ್ಟಿದ್ದಾಳೆ. ಶಾಮಿ, ಸರಳನೂ ತಮ್ಮ ಕೈಲಾದ್ದೆಲ್ಲಾ ಮಾಡುತ್ತಿದ್ದಾರೆ. ಸೀತಕ್ಕನಿಗೋ, ಹುಶಾರು ತಪ್ಪಿದಾಗಿನಿಂದಾಗಲೂ ಮಕ್ಕಳಿಗಾಗಿ ಹಂಬಲಿಸುವಂತಾಗಿದೆ. ಅವರೇನು ಹತ್ತಿರ ವಿದ್ದಾರೆಯೆ? ಶಾಲಿನಿಯಿರುವುದು ಡೆಲ್ಲಿಯಲ್ಲಾದರೆ, ರಾಜು ಇರುವುದು ಕಲ್ಕತ್ತೆಯಲ್ಲಿ. ಇರುವುದರಲ್ಲಿ ವಿಮಲ ಹತ್ತಿರದ ಬೆಂಗಳೂರಿನಲ್ಲಿದ್ದಾಳೆ. ಈ ನಡುವೆ ಒಬ್ಬಳೇ ತಿಂಗಳಿಗೋ, ಹದಿನೈದು ದಿನಕ್ಕೋ ಒಂದು ಸಲ ಬಂದು ಹೋಗುತ್ತಾಳೆ. ಎಲ್ಲ ಮೊಮ್ಮಕ್ಕಳಿಗೂ ಶಾಲೆ, ಕಾಲೇಜು. ಈಗಿನ ಕಾಲಕ್ಕೆ ರಜ ಹಾಕಿಸಿ ಕರೆದುಕೊಂಡು ಬರಲು ಸಾಧ್ಯವೇ?! ಮೊಮ್ಮಕ್ಕಳ ಮುಖಗಳಂತೂ ಮರೆತೇ ಹೋದಂತಾಗಿದೆ. ಬಾಣಂತನ ಮುಗಿಸಿಕೊಂಡು ಹೋದ ಮೇಲೆ ಎರಡೋ ಮೂರೋ ಸಲ ಬಂದಿದ್ದರೆ ಹೆಚ್ಹೆಚ್ಚು. ಸಧ್ಯ! ಎಲ್ಲೋ ಸುಖವಾಗಿದ್ದಾರಲ್ಲ; ನಾನೂ ಹೆಚ್ಚಾಗಿ ಬಯಸಬಾರದು ಎಂದು ಸಮಾಧಾನ ತಂದುಕೊAಡಿದ್ದಳು ಸೀತಕ್ಕ. ಆದರೂ ದೇಹ ನಿತ್ರಾಣವಾದಾಗ ತನ್ನವರನ್ನು ಬಯಸುವುದು ತಪ್ಪೆ?! ಯಾರು ಯಾರೋ ನೆಂಟರು, ಪರಿಚಿತರು, ಸ್ನೇಹಿತರು ಈ ಒಂದು ತಿಂಗಳಲ್ಲಿ ಬಂದು ನೋಡಿಕೊಂಡು ಹೋಗಿದ್ದಾರೆ. ರಾಜು, ಶಾಲಿನಿ ಮಾತ್ರ ಕಂಡಿಲ್ಲ. ಈಗೆರಡು ದಿನಗಳಿಂದಂತೂ ಪೂರಾ ಹಾಸಿಗೆಗೇ ಅಂಟಿಕೊಂಡಿದ್ದಾಳೆ. ಕಣ್ಣು ಬಿಡಲೂ ಸುಸ್ತಾಗುತ್ತಿದೆ. ಮಾತಾಡಲೂ ಸಾಧ್ಯವಾಗುತ್ತಿಲ್ಲ. ಉಸಿರಾಡುವುದನ್ನು ಬಿಟ್ಟರೆ ಅವಳು ಜೀವಂತವಾಗಿರುವುದು ಗೊತ್ತೇ ಆಗುತ್ತಿಲ್ಲ. ಮನಸ್ಸು ಸ್ವಲ್ಪ ಹೊತ್ತು ಎಚ್ಚರವಾಗಿರುತ್ತೆ, ಕೆಲವುಸಲ ಒಂದಕ್ಕೊಂದಕ್ಕೆ ಎಳೆ ತಪ್ಪುತ್ತಿರುತ್ತದೆ, ಮತ್ತೆ ಸ್ವಲ್ಪ ಹೊತ್ತು ಏನೋ ಮಂಪರು.. ಅರೆಜ್ಞಾನದ ಸ್ಥಿತಿ… ಎಲ್ಲೋ ಶಾಲಿನಿಯ ದನಿ ಕೇಳಿದಂತಾಯಿತು ಸೀತಕ್ಕನಿಗೆ… ಹೌದೋ ಅಲ್ಲವೋ… ಹೌದು ಅವಳದ್ದೇ ದನಿ… ಅವಳೇ… ಈಗ ಬಂದಳೇನೋ ಊರಿನಿಂದ.. ಜೊತೆಗೆ ಗೋಪಾಲನೂ ಬಂದಿದ್ದಾನೇನೋ.. ಮಕ್ಕಳು? ಏನವರ ಹೆಸರು?? ಇಲ್ಲ.. ನೆನಪಾಗುತ್ತಿಲ್ಲ… ಮೆದುಳಲ್ಲೆಲ್ಲಾ ಬರೀ ಕತ್ತಲೆ… ಏನೂ ನೆನಪಾಗುತ್ತಿಲ್ಲ… ಇವಳಿಗೆ ಎರಡೂ ಗಂಡು ಮಕ್ಕಳೇನಾ? ಅಥವಾ ಎರಡೂ ಹೆಣ್ಣೇನಾ.. ಅಥವಾ ಒಂದು ಗಂಡು ಒಂದು ಹೆಣ್ಣಾ… ಅಥವಾ ಒಂದೇ ಮಗುವಾ.. ಏಕೋ ತಲೆಯೆಲ್ಲಾ ಖಾಲಿಯಾದಂತೆನಿಸಿತು.. ಕಣ್ಣು ಬಿಡಬೇಕೆಂದುಕೊಂಡರೂ ಬಿಡಲಾಗುತ್ತಿಲ್ಲ… ಅಷ್ಟೇ ಶಾಮಿ ಎಲ್ಲೋ ಕರೆಸಿಕೊಂಡಿರಬೇಕು.. ಇವತ್ತೋ.., ನಾಳೆಯೋ.. ಒಂದು ಸಲ ನೋಡಲು ಬಂದುಬಿಡೂಂತ… ಎಲ್ಲೋ ಅವಳ ದನಿ ಕೇಳುತ್ತಿದೆ ಆದರೆ ಯಾವ ಮಾತೂ ಅರ್ಥವಾಗುತ್ತಿಲ್ಲ.. ಹಾಗಾದರೆ ಅವಳು ಈ ಕೋಣೆಯಲ್ಲಿ ಮಾತಾಡುತ್ತಿಲ್ಲ; ಇನ್ನೂ ಹೊರಗೇ ಎಲ್ಲೋ ಇದ್ದಾಳೆ. ಇದರ ಮಧ್ಯೆ ಈ ಜೋಕಾಲಿಯ ಜೀಕ್ ಜೀಕ್ ಸದ್ದು ಬೇರೆ.. ಬೆಳಗಾಗೆದ್ದು ಯಾರು ಆಡುತ್ತಿದ್ದಾರೆ……? ಯಾರಿರಬಹುದು……?? ಬಾಗಿಲ ಹತ್ತಿರ ಶಾಮಿ ಮಾತಾಡಿದಂತಾಯಿತು.. ಓ ಚೇತನಾ ಇವತ್ತು ರಜವೇನೋ, ಬೆಳಗ್ಗೇನೇ ಆಡಕ್ಕೆ ಬಂದು ಬಿಟ್ಟಿದೀಯ.. ಅಪ್ಪ ಅಮ್ಮ ಆಫೀಸಿಗೆ ಹೋಗಿದ್ದಾರ? ಕಾಲು ಬೇರೆ ನೆಲಕ್ಕೆ ಸಿಗಲ್ಲ ನಿಂಗೆ ಮೀಟಿಕೊಳ್ಳಕ್ಕೆ, ಸರಿ ಕೂತ್ಕೊ ತೂಗಿ ಕೊಡ್ತೀನಿ’. ನಾಲ್ಕಾರು ಬಾರಿ ತೂಗಿದ ಸದ್ದು. ಅಷ್ಟರಲ್ಲಿ ಶಾಲಿನಿಯ ಮಾತು ಕೇಳಿತು – “ಯಾರೋ ಇವನು?” “ಅದೇ ಔಟ್ ಹೌಸಿನಲ್ಲದ್ದಾರಲ್ಲ ಅವರ ಮಗ. ಒಂದೇ ಮಗು, ಇವತ್ತು ಇವನಿಗೆ ರಜ, ಇವನ ಅಪ್ಪ ಅಮ್ಮನಿಗೆ ಆಫೀಸು. ಹೊತ್ತು ಹೋಗಲ್ಲ. ಉಯ್ಯಾಲೆ ಆಡಕ್ಕೆ ಅಂತ ಬರ್ತಿರ್ತಾನೆ’ ಶಾಮಿ ಹೇಳಿದನೇನೋ… ಎಲ್ಲೋ ಗುಹೆಯಲ್ಲಿ ಮಾತಾಡಿದ ಹಾಗೆ ಕೇಳುತ್ತಿದೆ… “ಸರಿ ಅಮ್ಮನ್ನ ನೋಡೋಣ ಹೇಗಿದಾಳೋ” ಕೋಣೆಯೊಳಗೆ ಬಂದಳು ಶಾಲಿನಿ. ಇಲ್ಲೇ ಮಂಚದ ಪಕ್ಕದಲ್ಲೇ ನಿಂತ ಹಾಗಿದೆ.. ಆದರೆ ಕಣ್ಣು ಮಾತ್ರ ಬಿಡಲಾಗುತ್ತಿಲ್ಲ “ಅಮ್ಮಾ..” ಶಾಲಿನಿ ಕರೆದಳೇನೋ.ಏನೇನೋ ಮಾತಾಡಬೇಕು… ಹೇಗಿದೀಯ ಅಂತ ಕೇಳಬೇಕು… ಮಕ್ಕಳು ಬರಲಿಲ್ವಾಂತ ಕೇಳಬೇಕು… ಅವಳ ಅತ್ತೆ, ಮಾವ ಚೆನ್ನಾಗಿದ್ದಾರಾಂತ ಕೇಳಬೇಕು… ಅಂದ ಹಾಗೆ ಅವರ ಅತ್ತೆ, ಮಾವ ಇದಾರೋ ಇಲ್ಲಾ …’ ಇಲ್ಲ… ನೆನಪಾಗುತ್ತಿಲ್ಲ… ಬಾಯಿ ಹೊರಳುತ್ತಲೇ ಇಲ್ಲ… ಸ್ವಲ್ಪ ತುಟಿಯಲುಗಿತೇನೋ ಅಷ್ಟೆ.. “ಕೇಳಿಸುತ್ತೋ ಇಲ್ಲವೋ” ಗೋಪಾಲನ ದನಿ. “ಏನೋ ಗೊತ್ತಾಗುತ್ತಿಲ್ಲ; ಎರಡು ದಿನದಿಂದ ಹೀಗೆ… ಹತ್ತಿರ ನಿಂತು ಜೋರಾಗಿ ಸ್ವಲ್ಪ ಹೊತ್ತು ಮಾತಾಡಿದರೆ ತುಟಿ ಸ್ವಲ್ಪ ಅಲಗತ್ತೆ; ಕೇಳಿಸಿದೆಯೇನೋ ಅಂತ ಅನ್ಕೋತೀವಿ” ಶಾಮಿಯೇನೋ ಹೇಳಿದ್ದು… ಅಳುತ್ತಿರುವ ಸದ್ದು.. ಶಾಲಿನಿಯೇನೋ.. ಮಗಳಲ್ಲವೇ.. “ಏನೋ ಅಮ್ಮಾಂತ ಬಂದರೆ ಎರಡು ಮಾತಾಡಕ್ಕೂ ಇಲ್ವೇನೋ” “ಸಮಾಧಾನ ಮಾಡ್ಕೊಳೇ. ಏನು ಮಾಡಕ್ಕಾಗತ್ತೆ. ಇಷ್ಟು ವರ್ಷ ನಮ್ಮ ಜೊತೆ ಚೆನ್ನಾಗಿದ್ರಲ್ಲ ಅದೇ ಪುಣ್ಯ ಅಂತ ಅನ್ಕೋಬೇಕು.. ಅಲ್ವೇ ಗೋಪಾಲ್” ಶಾಮಿ ಅಂದ. “ಅಷ್ಟಲ್ಲದೇ, ಏನೋ ಈಗ್ಲೇ ಬರಕ್ಕಾಯ್ತಲ್ಲ ಅಂತ ಸಮಾಧಾನ ಮಾಡ್ಕೋಬೇಕು ಅಷ್ಟೆ” ಅಳಿಯನ ಮಾತೇನೋ. ಮೂಗಿನ ಸೊರಬರ ಇನ್ನೂ ಕೇಳುತ್ತಾ ಇತ್ತು. “ಅಳಬೇಡ್ವೇ ಬಿದ್ದು ಹೋಗೋ ಮರಕ್ಕೆ ಯಾಕೆ ಇಷ್ಟು ಹಂಬಲಿಸ್ತೀಯ” ಮಗಳ ಬೆನ್ನು ನೇವರಿಸಿ ಹೇಳಬೇಕು ಸೀತಕ್ಕನಿಗೆ.. ಕೈ ಬಿದ್ದು ಹೋಗಿದೆಯಲ್ಲ… “ರಾತ್ರಿಯೆಲ್ಲಾ ಪ್ರಯಾಣ ಮಾಡಿ ಬಂದಿದೀರಿ; ಬನ್ನಿ ಸ್ವಲ್ಪ ತಿಂಡಿ ತಿಂದು ಸುಧಾರಿಸಿಕೊಳ್ತೀರಂತೆ” ಸರಳನ ದನಿ. ಶಾಮಿಯೂ ಜೊತೆಗೂಡಿದ “ಹೌದ್ಹೌದು, ಬನ್ನಿ ಮೊದಲು ತಿಂಡಿ ತಿಂದು ಬಿಡಿ; ಯಾವ ಗಳಿಗೇನೋ, ರಶ್ಮಿ, ರಾಜೀವಂಗೆ ಕೊಟ್ಯಾ” ಶಾಮಿ ಹೊರನಡೆದ. ಹ್ಞಾಂ ಇವಳ ಮಕ್ಕಳು ರಶ್ಮಿ, ರಾಜೀವ.. ರಶ್ಮಿ ದೊಡ್ಡೋಳೋ, ರಾಜೀವಾನೋ.. ರಶ್ಮೀನೇ ಇರಬೇಕು… ಇಲ್ಲವೇನೋ… ರಾಜೀವನೇ ಇರಬೇಕು… ಯಾಕೋ ಮತ್ತೆ ಕಲಸು ಮೇಲೋಗರವಾಯಿತು.. ಸರಿ ಯಾರೋ ಒಬ್ಬರು.. ವಿಮಲನಿಗೆ ಎರಡೂ ಗಂಡು ಮಕ್ಕಳೇನಾ… ಇರಬೇಕು.. ಏನವರ ಹೆಸರು… “ಓ ಯಾರೂ ತೂಗೋವ್ರಿಲ್ವೇನೋ ಕೂತ್ಕೋ ತೂಕ್ಕೊಡ್ತೀನಿ” ಶಾಲಿನಿ ಹೇಳಿದ್ದು ಕೇಳಿತುಜೀಕ್ ಜೀಕ್… ಸದ್ದು “ತಿಂಡಿ ತೊಗೊಳ್ಳಿ ಬನ್ನಿ” ಮತ್ತೆ ಸರಳ ಕೂಗಿದಳು “ಬಂದೇ” ಶಾಲಿನಿ ಹೊರಟಳೇನೋ ಎರಡು ನಿಮಿಷ ಉಯ್ಯಾಲೆ ತೂಗಿಕೊಂಡು ನಿಂತೇ ಹೋಯಿತೇನೋ.. ಮತ್ತೆ ಮಂಪರು…. “ಓ ಹೋ ಹೋ ರಾಜಣ್ಣಾ ಬಾ ಬಾ, ಟ್ರೇನಿಗೆ ಬಂದ್ಯಾ, ಸದ್ಯ ದೀಪೂನೂ ಕರಕೊಂಡು ಬಂದ್ಯಲ್ಲ. ಒಳ್ಳೇದಾಯ್ತು. ಏನಮ್ಮಾ ದೀಪೂ ಅಜ್ಜಿ ಮನೇಗೆ ಬಂದು ಎಷ್ಟು ವರ್ಷ ಆಗಿತ್ತು ಅಂತೂ ಬಂದ್ಯಲ್ಲಾ… ಅತ್ಗೇ ಬನ್ನಿ ಕೈಕಾಲು ತೊಳೀರಿ. ಲೋ ಪ್ರಕಾಶ ದೊಡ್ಡಪ್ಪನ ಸೂಟ್ಕೇಸು ತೊಗೊಂಡು ಹೋಗಿ ಒಳಗಿಡು” ಶಾಮಿ ಒಂದೇ ಸಮ ಹೇಳ್ತಾನೇ ಇದ್ದ. “ಓ ಶಾಲಿನೀನು ಬಂದು ಬಿಟ್ಟಿದಾಳೆ…! ಯಾವಾಗ ಬಂದೆ” ಕಮಲನ ದನಿಯೇನೋ. “ಬೆಳಗ್ಗೆ ಬಂದ್ವಿ. ಹ್ಞೂ ಮಕ್ಕಳೂ ಬಂದಿದಾರೆ; ಅವಸರದಲ್ಲಿ ಹೊರಟಿದ್ದಲ್ಲಾ… ಕೂರಕ್ಕೇ ಸರಿಯಾಗಿ ಜಾಗ ಇರಲಿಲ್ಲ; ಇನ್ನ ಮಲಗೋದೆಲ್ಲಿ ಬಂತು ಅವಕ್ಕೆ ನಿದ್ರೆ ಕೆಟ್ಟು ರೂಡಿಯಿಲ್ಲ. ತಿಂಡಿ ತಿಂದು ಮಲಗಿದಾರೆ” ಶಾಲಿನಿ ಹೇಳುತ್ತಿದ್ದಳು “ಇನ್ನೇನು ವಿಮಲಾನೂ ಬರ‍್ತಾಳೇಂತ ಕಾಣತ್ತೆ. ಬೆಳಗ್ಗೆದ್ದು ಹೊರಟಿದಾರೆ ಅವರೆಲ್ಲಾ” ಶಾಮನ ದನಿಯಿರಬೇಕು… “ನೀನ್ಯಾರೋ ಮರಿ” ಕಮಲ ಕೇಳುತ್ತಿದ್ದಾಳೇನೋ. “ಉಯ್ಯಾಲೆ ಆಡ್ಬೇಕಾ. ಕೂತ್ಕೋ” ಮತ್ತೆ ಉಯ್ಯಾಲೆ ಜೀಕುವ ಸದ್ದು… ಕಿವಿಯಲ್ಲಿ ಗುಯ್ಯೆನ್ನುವ ಸದ್ದು… ಯಾರೋ ಪಕ್ಕದಲ್ಲಿ ಬಂದು ನಿಂತ ಹಾಗಿದೆ… ಸರಳಾನೇ ಇರಬೇಕು.. ಬಾಯಿಯ ಹತ್ತಿರ ತಣ್ಣಗಾಗುತ್ತಿದೆ. ಜ್ಯೂಸು ಕುಡಿಸುತ್ತಿದ್ದಾಳೇನೋ. ಮೆತ್ತಗೆ ಬಾಯಿ ಬಿಡಿಸುತ್ತಿದ್ದಾಳೇನೋ.. “ಇಷ್ಟೇನಾ ಆಹಾರ..” ವಿಮಲನೇ…? ಇರಬೇಕು. ಓ ಅವಳೂ ಬಂದಳೇನೋ.. “ಇಷ್ಟು ಹೋಗೋದೇ ಕಷ್ಟ ಆಗಿ ಬಿಟ್ಟಿದೆ ಎರಡು ದಿನದಿಂದ.. ತುಂಬಾ ಪ್ರಯತ್ನ ಪಟ್ಟರೆ ಎರಡು ಮೂರು ಚಮಚ ಅಷ್ಟೆ” ಸರಳ ಅಂದಳು. “ಸ್ವಲ್ಪ ತಿಳಿ ಗಂಜಿ ಕುಡಿಸಿದ್ರೆ” ಯಾರದೋ ಸಲಹೆಯೇನೋ. “ಎರಡು ದಿನದಿಂದ ಅದೂ ಹೋಗ್ತಾ ಇಲ್ಲ” “ಎಳನೀರಾದ್ರೆ” ಯಾರಿದು… “ತರಿಸಿ ನೋಡೋಣವಾ” ಇನ್ಯಾರದೋ ದನಿ. ಯಾರ ದನಿಯೂ ಗುರ್ತು ಸಿಗುತ್ತಿಲ್ಲ. ಅಂತೂ ಎಲ್ಲರೂ ಇಲ್ಲೇ ಸೇರಿಕೊಂಡಿರಬೇಕು. ಹಾಲಿನಲ್ಲಿ `ಜೀಕ್ ಜೀಕ್’ ಉಯ್ಯಾಲೆಯ ಶಬ್ದ. ಜೊತೆಯಲ್ಲೇ ನಾಲ್ಕೈದು ಮಕ್ಕಳು ಸೇರಿರುವ ಹಾಗಿದೆ. ಮೊಮ್ಮಕ್ಕಳೆಲ್ಲಾ ಸೇರಿದ್ದಾರೇನೋ. ಅವರ‍್ಯಾರೂ ಒಳಗೆ ಬಂದ ಹಾಗಿಲ್ಲ. ಅವರಿಗೆ ಅಜ್ಜಿಯ ಹಂಬಲ ಅಷ್ಟೊಂದಿಲ್ಲ. ಯಾರದೋ ಮಾತು… “ಇವನು ಪುಟ್ಟ ಹುಡುಗ ಅಲ್ವಾ; ನಾವೆಲ್ಲಾ ಒಬ್ಬರಾದ ಮೇಲೆ ಒಬ್ಬರು ಇವನನ್ನ ತೂಗೋಣ” “ಏ ಗಲಾಟೆ ಮಾಡಬೇಡ್ರೋ” ಯಾರದೋ ದೊಡ್ಡವರ ದನಿ.. ಗುರುತು ಸಿಗುತ್ತಿಲ್ಲ.. “ಓ ಆಡ್ಕೊಳ್ಳಿ ಬಿಡು ಅವುತಾನೇ ಏನು ಮಾಡ್ಬೇಕು. ಅಮ್ಮನಿಗಂತೂ ಈ ಕಡೆ ಜ್ಞಾನವೇ ಇಲ್ಲ” “ಅದೂ ಸರೀನ್ನು” ಯಾರು ಯಾರು ಮಾತಾಡ್ತಿದಾರೋ ಒಂದೂ ಗೊತ್ತಾಗುತ್ತಾ ಇಲ್ಲ… ಮತ್ತೆ ಕಿವಿಯಲ್ಲಿ ಗುಯ್ ಗುಡುತ್ತಿದೆ… ದ್ವನಿಯೆಲ್ಲಾ ಅಸ್ಪಷ್ಟ…. ಏನೂ ಕೇಳುತ್ತಿಲ್ಲ…… ಯಾರೋ ಕೈ ಮುಟ್ಟಿದ ಹಾಗೆ…ಡಾಕ್ಟರೇನೋ… “ಹೇಗಿದಾರೆ…” ಡಾಕ್ಟರೇನು ಹೇಳಿದರೋ.. ಬರೀ ಸನ್ನೆಯಲ್ಲಿ ಹೇಳಿರಬೇಕೇನೋ.. ಎದೆಯ ಮೇಲೆ…. ಸ್ಟೆತಾಸ್ಕೋಪಿರಬೇಕು.. ಕಣ್ಣು ಬಿಡಿಸುತ್ತಿದ್ದಾರೆ. ರೆಪ್ಪೆ ಬಿಟ್ಟುಕೊಂಡಿತೇನೋ ಆದರೆ ಏನೂ ಕಾಣುತ್ತಿಲ್ಲವಲ್ಲ.. “ಅಷ್ಟೇ.. ಕಾಯಬೇಕು.. ಎಮರ್ಜನ್ಸಿ ಇದ್ದರೆ ಫೋನು ಮಾಡಿ.. ಸಂಜೆಯ ತನಕ ಮನೆಯಲ್ಲೇ ರ‍್ತೇನೆ.” “ಸರಿ ಡಾಕ್ಟ್ರೇ’ ಯಾರ ದನಿ…. ರಾಜನದೇ?! ಎಲ್ಲೋ ಮಾತಾಡಿದ ಹಾಗೆ ಕೇಳುತ್ತಿದೆ. “ಇನ್ನೂ ಯಾರಾದ್ರೂ ಬರೋವ್ರು ಇದಾರಾ. ಅವರ ಅಕ್ಕ, ತಂಗಿ, ಅಣ್ಣ, ತಮ್ಮ… ಯಾರಾದ್ರೂ…” ಕೇಳಿದ್ದು ಡಾಕ್ಟರೇ? “ಅವರಕ್ಕಾನೂ ಹಾಸಿಗೆ ಹಿಡಿದಿದಾರೆ ಬರೋ ಸ್ಥಿತಿಯಲ್ಲಿ ಇಲ್ಲ. ಅವರ ತಮ್ಮ ಹೋಗಿ ಎರಡು ವರ್ಷವಾಯ್ತು. ನಾವು ಮಕ್ಕಳೆಲ್ಲಾ ಇದೀವಿ” ಶಾಮನೇ ಮಾತಾಡಿದ್ದು?! ಯಾರೋ ಗೊತ್ತಾಗುತ್ತಿಲ್ಲವಲ್ಲ.,, ಸರಸೀನೂ ಹಾಸಿಗೆ ಹಿಡಿದಿದಾಳ್ಯೇ? ನಂಗಿಂತ ಎರಡು ವರ್ಷಕ್ಕೆ ದೊಡ್ಡೋಳೇನೋ. ಅವಳಿಗೇನಾಗಿದ್ಯೋ… ನಂಗೇನಾಗಿದೆ?….. ಹೋಗೋ ಕಾಲ ಬಂದಿದೆ ಅಷ್ಟೆ… ಶಂಕರ ನನಗಿಂತಾ ಐದು ವರ್ಷಕ್ಕೆ ಚಿಕ್ಕೋನು. ಹೋಗಿ ಆಗ್ಲೇ ಎರಡು ವರ್ಷವಾಯ್ತೇನೋ… ಎಷ್ಟು ವರ್ಷವಾಯ್ತೋ… ಹಾಲಲ್ಲಿನ್ನೂ ಮಕ್ಕಳು ಆಡುತ್ತಲೇ ಇದ್ದಾರೆ ಅಂತ ಕಾಣುತ್ತೆ. ಗಲಾಟೆ ಕೇಳುತ್ತಿದೆ…. “ಎಲ್ರೂ ಊಟ ಮಾಡಿ ಬಿಡೋಣ.. ಏನಾದ್ರೂ ಹೆಚ್ಚು ಕಮ್ಮಿಯಾದ್ರೆ…” ರಾಜನೇನೋ.. ಅವನು ಮುಂಚಿಂದಲೂ ಹಾಗೇ… ಹಸಿವು ತಡೆಯಲ್ಲ. “ಹೆಚ್ಚು ಕಮ್ಮಿಯಾದ್ರೆ ಎಲ್ಲಾ ಮುಗಿಯೋ ತಂಕ ಅವನು ಊಟ ಮಾಡೋ ಹಾಗಿಲ್ಲವಲ್ಲ…” ಯಾರು ಹೇಳಿದ್ದೋ…? ಎಲ್ಲ ನಿಶ್ಯಬ್ದ… `ಜೀಕ್ ಜೀಕ್’ ಮಾತ್ರಾ ಕೇಳುತ್ತಿದೆ. ಆ ಹುಡುಗ ಮಾತ್ರಾ ಇನ್ನೂ ಆಡುತ್ತಾ ಇದ್ದಾನೇನೋ.. ಯಾರು ತೂಗುತ್ತಿದ್ದಾರೋ… “ಚೇತನಾ ಊಟ ಮಾಡಿದ್ಯೇನಪ್ಪ” ಯಾರೋ ಕೇಳ್ತಾ ಇದಾರೆ “ಇರಲಿ ಉಯ್ಯಾಲೆ ಮೇಲೆ ಕೂತ್ಕೊಂಡೇ ಇದನ್ನ ತಿನ್ನು” ಏನು ಕೊಟ್ಟರೋ… ಅಂತೂ ಉಯ್ಯಾಲೆಯ ಸದ್ದಂತೂ ನಿಂತಿಲ್ಲ…. “ಶಾಮಾ ಇಲ್ಲಿ ಬಾ” “ಏನು ರಾಜಣ್ಣ” ಇಲ್ಲೇ ಎಲ್ಲೋ ಪಕ್ಕದಲ್ಲೇ ಕೂತಿದ್ದಾರೆ. “ಒಂದಷ್ಟು ದುಡ್ಡು ಮನೇಲಿಟ್ಟಿದಿ ತಾನೆ?” “ಒಂದೈದು ಸಾವ್ರ ಇದೆ. ಬೇಕೂಂದ್ರೆ ಎಟಿಎಂ ನಿಂದ ತರಬೋದಲ್ಲ…” “ಹಾಗಾದ್ರೆ ಸರಿ. ಹೇಗಾದ್ರೂ ಆಗ್ಲಿ. ನಾಳೆಯಿಂದ ಒಬ್ಬ ಅಡುಗೆಯವ್ರಿಗೆ ಹೇಳ್ಬಿಡು. ಮನೆ ತುಂಬಾ ಜನ ಇದಾರೆ”. “ಇವತ್ತೇ ಬರಬೇಕಿತ್ತು. ಅವರ ಮನೇಲಿ ಏನೋ ಹೆಚ್ಚು ಗಟ್ಲೆಯಂತೆ. ನಾಳೆಯಿಂದ ಬರ‍್ತಾರೆ”. “ಆಮೇಲೆ ಇನ್ನೊಂದು ವಿಷಯ. ರಾಮಾಜೋಯಿಸರು ಊರಲ್ಲೇ ಇದ್ದಾರೆ ತಾನೆ. ಆಮೇಲೆ ಆ ಹೊತ್ತಲ್ಲಿ ಎಡವಟ್ಟಾದೀತು”. “ಬೆಳಗ್ಗೆ ಪ್ರಕಾಶನ್ನ ಕಳಿಸಿದ್ದೆ ಅವರ ಮನೆ ಹತ್ರ. ಊರಲ್ಲಿಲ್ಲ, ಮಧ್ಯಾನ್ಹದ ಮೇಲೆ ಬರ‍್ತಾರೆ’ ಅಂದರಂತೆ. ಹೇಗೂ ಇರ‍್ಲಿ ಅಂತ ತಿಪ್ಪಾ ಶಾಸ್ತ್ರಿಗಳ ಮನೆಗೂ ಕಳಿಸಿದ್ದೆ. ಅವರಂತೂ ಇದಾರೆ.” “ನೋಡು ಇವನ್ನೆಲ್ಲಾ ಮೊದಲೇ ವ್ಯವಸ್ಥೆ ಮಾಡಿಕೊಂಡುಬಿಡಬೇಕು. ಆಮೇಲೆ ಒದ್ದಾಡೋ ಹಾಗಾಗ್ಬಾರ‍್ದು ಅಷ್ಟೆ”. ಎಷ್ಟು ಸ್ಪಷ್ಟವಾಗಿ ಕೇಳುತ್ತಿದೆ… “ಮತ್ತೆ ಆಮೇಲೆ ಇನ್ನೊಂದು ವಿಷಯ…..” ಇಲ್ಲಾ… ಇನ್ನೇನೂ ಸರಿಯಾಗಿ ಕೇಳಿಸುತ್ತಿಲ್ಲ… ಪಕ್ಕದಲ್ಲೇ ಇದಾರೋ ಇಲ್ಲ ಎದ್ದು ಹೋದರೋ….. ಇರಬಹುದೇನೋ… ಅಸ್ಪಷ್ಟವಾಗಿ ಏನೇನೋ

ಉಯ್ಯಾಲೆ Read Post »

ಕಥಾಗುಚ್ಛ

ಯಾರೂ ಓದದೆಯೇ ಹೋದ ಕತೆ…

ಟಿ.ಎಸ್.ಶ್ರವಣ ಕುಮಾರಿ ಯಾರೂ ಓದದೆಯೇ ಹೋದ ಕತೆ… ಇದೋ ಅತ್ಯಂತ ಜನನಿಬಿಡವಾದ ಮಾರುಕಟ್ಟೆ ಪ್ರದೇಶ. ಈ ಮಾರುಕಟ್ಟೆ ಸಂಕೀರ್ಣ ಮತ್ತು ಅದರ ಸುತ್ತಮುತ್ತಲಿನ ಅಂಗಡಿಗಳಲ್ಲಿ ಮಾರದ, ಸಿಗದ ವಸ್ತುವೇ ಇಲ್ಲ ಎಂದುಕೊಳ್ಳಿ.  ಸಣ್ಣ ಪುಟ್ಟ ಸಾಸುವೆ, ಪಿನ್ನು ಇಂತಹ ವಸ್ತುಗಳನ್ನು ಮಾರುವ ಅಂಗಡಿಗಳಿಂದ ಹಿಡಿದು ಕಾರು, ರಿಯಲ್ ಎಸ್ಟೇಟ್ ಏಜೆನ್ಸಿಯಂತ ದೊಡ್ಡ ವಹಿವಾಟುಗಳೂ ಇಲ್ಲಿವೆ. ಇವೆಲ್ಲವೂ ಇಲ್ಲಿದೆ ಎಂದ ಮೇಲೆ ಇವನ್ನೆಲ್ಲಾ ಮಾರುವವರು, ಕೊಳ್ಳುವ ಗಿರಾಕಿಗಳು, ಸರಕನ್ನು ಹೊರುವ ಹಮಾಲಿಗಳು, ಸಾಗಿಸುವ ಚಾಲಕರು, ವ್ಯವಹಾರವನ್ನು ಕುದುರಿಸುವ ದಲ್ಲಾಳಿಗಳು, ಪಾರ್ಕಿಂಗ್ ಕಾಸು ವಸೂಲಿ ಮಾಡುವ ಹುಡುಗರು, ಇವೆಲ್ಲ ವ್ಯವಹಾರಗಳನ್ನು ನೋಡಿ ಮಜಾ ತೆಗೆದುಕೊಳ್ಳುವ, ಅಂದಿನ ನಾಷ್ಟ, ಊಟ, ಬೀಡಿ, ಸಿಗರೇಟು, ಸೇಂದಿ, ಖರ್ಚಿಗೊಂದಿಷ್ಟು ಕಾಸು ಇವನ್ನೆಲ್ಲಾ ಕಂಡವರ ದುಡ್ಡಿನಲ್ಲಿ ಗಿಟ್ಟಿಸುವ ಉಡಾಫೆ ಮಂದಿಗಳೂ ಸಾಕಷ್ಟು ಇದ್ದಾರೆ. ಅಂತೆಯೇ ಮಾರುಕಟ್ಟೆಯ ಸುತ್ತಲೂ ಬೀದಿಯ ಇಕ್ಕೆಲಗಳಲ್ಲೂ ಬುಟ್ಟಿ ವ್ಯಾಪಾರಸ್ತರೋ, ತಳ್ಳು ಗಾಡಿಯವರೋ ತಂತಮ್ಮ ಸರಕನ್ನು ಮುಂಜಾವಿನಿಂದ ಸರಿ ರಾತ್ರಿಯವರೆಗೂ ಮಾರುತ್ತಾ ತಮ್ಮ ದಿನದ ಸಂಪಾದನೆ ಎಣಿಸುತ್ತಿರುತ್ತಾರೆ.ಅಲ್ಲಿ, ಇಲ್ಲಿ ಗಿರಾಕಿಗಳಿಗೆ ಗಾಳ ಹಾಕುತ್ತಾ ನಿಲ್ಲುವ ವೈಯಾರಿಗಳು, ಇವರನ್ನೇ ಹುಡುಕುತ್ತಾ ಬರುವ ರಸಿಕ ಮಹಾಶಯರೂ ಇಬ್ಬರ ನಡುವಿನ ತಲೆಹಿಡುಕರೂ ಅಲ್ಲಿಲ್ಲಿ ಕಾಣ ಸಿಗುತ್ತಾರೆ.ಇಷ್ಟೆಲ್ಲದರ ಮದ್ಯೆಯೇ ಸಮಾಜದಲ್ಲಿ ಮರ್ಯಾದಸ್ತರೆಂದು ಗುರುತಿಸಿಕೊಂಡಿರುವ ಬಹಳಷ್ಟು ಜನರೂ ಯಾವುದೋ ಒಂದಲ್ಲ ಒಂದು ವ್ಯವಹಾರಕ್ಕೆ ಇಲ್ಲಿಗೆ ಬರುತ್ತಿರುತ್ತಾರೆ.ಇಷ್ಟೆಲ್ಲವೂ ಇದ್ದ ಮೇಲೆ ಪೋಲೀಸರ ಮೇಲ್ವಿಚಾರಣೆ? ಅವರೂ ಇದ್ದಾರೆ.ಇಷ್ಟೆಲ್ಲವನ್ನೂ ಏಕೆ ಹೇಳುತ್ತಿದ್ದೇನೆಂದರೆ ಇದು ಇಡೀ ಜಗತ್ತಿನ ಮಾರುಕಟ್ಟೆಯ ಒಂದು ಸಣ್ಣ ಸ್ವರೂಪವೆಂದು ಹೇಳುವುದಕ್ಕಷ್ಟೆ ಮತ್ತು ನನ್ನ ಈ ಕತೆ ಈ ಮಾರುಕಟ್ಟೆಯ ಬದಿಯ ಫುಟ್ ಪಾತೊಂದರಲ್ಲಿ ಬಿದ್ದಿದ್ದಕ್ಕೆ. ಆ ಕತೆ ಮಾರುಕಟ್ಟೆಯ ಮುಂಬಾಗದ ಮೂಲೆಯಲ್ಲಿ ಫುಟ್ ಪಾತ್ ವ್ಯಾಪಾರಸ್ತರ ಹಿಂಬಾಗದಲ್ಲಿ ಗೋಡೆಯ ಪಕ್ಕದಲ್ಲಿ ಪ್ರಾಯಶಃ ಬೆಳಗಿನಿಂದಲೇ ಬಿದ್ದಿತ್ತೇನೋ, ಅದನ್ನು ಗಮನಿಸಿದರ‍್ಯಾರು? ಬೆಳಗಿನ ಹೋಲ್ ಸೇಲ್ ವ್ಯಾಪಾರದಲ್ಲಿ ಕೊಂಡ ಸರಕನ್ನೋ, ಬೇರೇನೇನೋ ಸರಕುಗಳನ್ನೋ ತುಂಡು ವ್ಯಾಪಾರಸ್ತರು ಎಂದಿನಂತೆ ತಮ್ಮ ತಮ್ಮ ಅನಧಿಕೃತವಾದ ಅಧಿಕೃತ ಜಾಗಗಳಲ್ಲಿ ಹರಡಿಕೊಂಡು ಕುಳಿತುಕೊಂಡರು. ಅಂತವರಲ್ಲೊಬ್ಬ ಹೆಂಗಸುತನ್ನ ಊಟದ ಡಬ್ಬಿ, ಛತ್ರಿ, ಬಟ್ಟೆಯ ಗಂಟು, ಕಂಕುಳಲ್ಲಿದ್ದ, ಓಡಾಡುತ್ತಿದ್ದ ಚಿಳ್ಳೆ ಪಿಳ್ಳೆಗಳಿಗೆ ಜಾಗ ಮಾಡಲು ಹೋದಾಗ ಅನಾಥವಾಗಿ ಬಿದ್ದಿದ್ದ ಈ ಕತೆಯು ಕಾಣಿಸಿತು.`ರಾತ್ರಿ ಕುಡಿದಿದ್ದು ಇನ್ನೂ ಇಳ್ದಿಲ್ಲಾನ್ನೋಂಗದೆ’ ಎನ್ನುತ್ತಾ ಆ ಹೆಂಗಸು ಅದನ್ನು ಪಕ್ಕಕ್ಕೆ ಒತ್ತರಿಸಿ ತನ್ನ ಬಿಡಾರಕ್ಕೆ ಜಾಗ ಮಾಡಿಕೊಂಡಳು. ಪಕ್ಕಕ್ಕೆ ದೂಡಿದಾಗ ಅದಕ್ಕೇನಾದರೂ ನೋವಾಯಿತೇನೋ… ನರಳಿತೇನೋ… ಯಾರಿಗೇನೂ ಕೇಳಲಿಲ್ಲ ಬಿಡಿ. ʻಅದ್ರ ತಂಟೇಗೋಗ್ಬೇಡಿ. ಅಸಿವಾದ್ರೆ ಕವರ‍್ನಾಗೆ ಬನ್ನದೆ, ಡಬ್ಬೀನಾಗೆ ರೊಟ್ಟಿಯಿದೆ, ತಿನ್ಕೊಳಿʼ ಎಂದು ತನ್ನ ಮರಿಗಳಿಗೆ ಹೇಳುತ್ತಾ ತನ್ನ ವಹಿವಾಟಿನ ಜಾಗಕ್ಕೆ ಪ್ಲಾಸ್ಟಿಕ್ ಶೀಟ್ ಹರಡಿ ಒಂದೊಂದೇ ತರಕಾರಿಯನ್ನು ಅದರ ಮೇಲೆ ಜೋಡಿಸಿಕೊಳ್ಳುತ್ತಾ ಹೋದಳು. ಸ್ವಲ್ಪ ಹೊತ್ತು ಸುಮ್ಮನಿದ್ದ ಮಕ್ಕಳು ʻಅವ್ವಾ ಅದೇನವ್ವಾʼ ಎಂದು ಬೆರಳು ತೋರುತ್ತಾ ಕೇಳಿದವು ʻಮುಚ್ಕೊಂಡು ಸುಮ್ಕೆ ಕೂರಕ್ ಬರಾಕಿಲ್ವಾ.  ಏನ್ ಕತೆಯೋ ಏನ್ ಸುಡುಗಾಡೋ…ಇಲ್ಲಿ ಬಂದ್ ಬಿದ್ದದೆʼ ಎಂದು ಪಿಳ್ಳೆಗಳ ಮೇಲೆ ಒಂದು ಆವಾಜ್ ಹಾಕಿ ತನ್ನ ಕೆಲಸ ಮುಂದುವರಿಸಿದಳು.  ಅವೂ ಕುತೂಹಲದಿಂದ ಹಿಂದೆ ಮುಂದೆ ಅಕ್ಕ ಪಕ್ಕ ಎಲ್ಲಾ ನೋಡಿದವು ಅವಕ್ಕಂತೂ ಅದನ್ನು ಓದಲು ಬರಲಿಲ್ಲ… ಜಾಗರೂಕತೆಯಿಂದ ಅದರ ಮೇಲೆ ಬೀಳದಂತೆ ಅವು ತಮ್ಮ ಪಾಡಿಗೆ ತಾವು ಆಡಿಕೊಳ್ಳತೊಡಗಿದವು… ಹನ್ನೊಂದು ಗಂಟೆಯಾಗುತ್ತಾ ಬಂದಂತೆ ಆ ಜಾಗದ ಮುಂದಿನ ವಾರಸುದಾರ ತನ್ನ ಸರಕುಗಳೊಂದಿಗೆ ಹಾಜರಾದ. “ಯಕ್ಕೋ ನಿಂಟೈಮಾಯ್ತು. ಉಳ್ದಿರೋವೆಲ್ಲಾ ಎತ್ಕೋ. ನಂಜಾಗ ಬಿಡು” ಎನ್ನುತ್ತಾ ದೊಡ್ಡ ದೊಡ್ಡ ಎರಡು ಮೂಟೆಗಳನ್ನಿಳಿಸಿದ. “ವಸಿ ತಡ್ಯಣ್ಣೋ, ಎಲ್ಲಾ ಬ್ಯಾರೆ ಬ್ಯಾರೆ ಕವರ‍್ನಾಗೆ ಮಡಿಕ್ಕೊಂತಿನಿ. ಬೆರ‍್ತೋದ್ರೆ ಬ್ಯಾರೆ ಮಾಡೋದು ಕಸ್ಟ ಎನ್ನುತ್ತಾ ತುಂಬತೊಡಗಿದಳು. “ಉಳ್ದಿರೋವೆಲ್ಲಾ ಏನ್ ಮಾಡ್ತೀಯೆ? ಮನೇಗೆ ಉಪಯೋಗಿಸ್ಕತೀಯ? ಇಲ್ಲಾ ಬೀದೀಲ್ ಮಾರ‍್ಕೊಂಡು ಓಯ್ತೀಯಾ ಎಂದ. “ಇಷ್ಟ್ ತಿನ್ನೋಕಾಯ್ತದಾ? ವಸಿ ಮಡೀಕೊಂಡು ಉಳ್ದವನ್ನ ಮನೇತ್ರ ಮೆಸ್ಸು, ಕ್ಯಾಂಟೀನು ಅವೆ. ಅವ್ರಿಗೆ ಸುರೀತೀನಿ”.  “ಸರಿ, ಬೇಬೇಗ್ ಮಗ್ಸು” ಎನ್ನುತ್ತಾ ಒಂದು ಮೂಟೆಯನ್ನು ಹಿಂದಿಡಲು ನೋಡಿದಾಗ ಈ ಕತೆ ಕಾಣಬೇಕೆ?! “ಯಾವ್ದಕ್ಕೋ ಇದು ಇಲ್ಬಿದ್ದದೆ” ಎನ್ನುತ್ತಾ ಹಿಂದೆ ಹೋಗಿ ಅದನ್ನು ಪರಿಶೀಲಿಸಿದ. ಏನೂ ಅರ್ಥವಾಗಲಿಲ್ಲ. ಅಷ್ಟರಲ್ಲಿ ಆ ಹೆಂಗಸು ಜಾಗವನ್ನು ಖಾಲಿ ಮಾಡಿ “ಯಾವ್ದೋ ನಾಕಾಣೆ, ಬೆಳ್ಗಿಂದ ಅಂಗೇ ಬಿದ್ದದೆ… ತೊಗೋಣ್ಣೋ ನಿಂಜಾಗ. ಇದು ಮಡಿಕ್ಕೋ” ಎನ್ನುತ್ತಾ ಒಂದು ಕವರಿನಲ್ಲಿ ಹಾಕಿದ್ದ ಒಂದಿಷ್ಟು ತರಕಾರಿಯನ್ನು ಅವನಿಗೆ ಕೊಟ್ಟು ತನ್ನ ಗಂಟುಮೂಟೆಯನ್ನು ಕಟ್ಟಿಕೊಂಡು ಪಿಳ್ಳೆಗಳನ್ನು ಕಟ್ಟಿಕೊಂಡು ಹೊರಟಳು.ಇನ್ನು ತನ್ನ ವ್ಯಾಪಾರಕ್ಕೆ ತಡವಾಗುತ್ತದೆ ಎಂದುಕೊಳ್ಳುತ್ತಾ ಅವನೂ ಅದನ್ನು ಮತ್ತಷ್ಟು ಒತ್ತರಿಸಿ ತನ್ನ ಒಂದು ಮೂಟೆಯನ್ನು ಅಲ್ಲಿಟ್ಟ. ಮುಂದಿನ ಜಾಗದಲ್ಲಿ ತನ್ನ ಚಾಪೆಯನ್ನು ಹಾಸಿ ತನ್ನ ಸರಕಾದ ಚಡ್ಡಿ, ಬನೀನು, ಟೀಷರ್ಟು, ಟ್ರಾಕ್ ಪ್ಯಾಂಟು, ಮಕ್ಕಳ ಚಿಕ್ಕ ಪುಟ್ಟ ಉಡುಪುಗಳು ಮುಂತಾದವುಗಳಿಗೆ ಜಾಗಮಾಡಿಕೊಂಡು ತನ್ನ ಸರಕಿನ ಜಾಹೀರಾತನ್ನು ತಾನೇ ಕೂಗತೊಡಗಿದ. ಫುಟ್ಪಾತಿನುದ್ದಕ್ಕೂ, ಶೂ, ಚಪ್ಪಲಿಗಳು, ಪ್ಲಾಸ್ಟಿಕ್ ಸಾಮಾನು, ಆಟಿಕೆಗಳು, ಬಟ್ಟೆ, ಸೀರೆಗಳು, ಪೆಟಿಕೋಟ್, ಬ್ರಾ, ಪ್ಯಾಂಟೀಸ್‌ಗಳು, ತಿಂಡಿ ಸರಕುಗಳು ಇಂಥದೆನ್ನುವಂತಿಲ್ಲ ಎಲ್ಲ ಗೂಡುಗಳು ತಲೆಯೆತ್ತತೊಡಗಿದವು. ಪಕ್ಕದ ಬೀದಿಯಲ್ಲಿ ತಲಗಟ್ಟಮ್ಮನ ಜಾತ್ರೆ ಬೇರೆ. ಬಿಸಿಲಿನ ಚುರುಕಿನೊಂದಿಗೆ ವ್ಯಾಪಾರವೂ ಕುದುರಿಕೊಳ್ಳತೊಡಗಿತು. ಅದೆಷ್ಟು ಜನ ಆ ಫುಟ್ ಪಾತಿನ ಮೇಲೆ ಓಡಾಡಿದರೋ ಲೆಕ್ಕವಿಟ್ಟರ‍್ಯಾರು.ಕೆಲವರ ಕಣ್ಣಿಗಾದರೂ ಇದು ಬೀಳದೇ ಇರಲು ಸಾಧ್ಯವೇ?! ಬಿದ್ದೇ ಬಿತ್ತು.  ಒಬ್ಬಿಬ್ಬರು ಏನಿರಬಹುದು ಇದು…  ಯಾಕೆ ಇಲ್ಲಿ ಬಿದ್ದಿದೆ… ಎಂದುಕೊಂಡರು. ಆದರೆ ಅವರಿಗೆ ಇದನ್ನು ನೋಡಿ ಓದಲು ವ್ಯವಧಾನವೆಲ್ಲಿದೆ? ನಾಳೆಯ ಹೊತ್ತಿಗೆ ಇಡೀ ಜಗತ್ತೇ ಮುಳುಗಿಹೋಗುವುದೇನೋ?  ಅಷ್ಟರೊಳಗೆ ತಾನು ಮಾಡಿ ಮುಗಿಸಬೇಕಾದ ಕೆಲಸ ಒಂದು ಜನ್ಮಕ್ಕಾಗುವಷ್ಟಿದೆ! ಅಂತಹುದರಲ್ಲಿ ಯಾವುದೋ ಬಿಸಾಡಿಹೋದ ಈ ಕತೆಯನ್ನು ನೋಡುತ್ತಾ ಕೂಡುವುದೇ?! ಮೊದಲು ಇಲ್ಲಿನ ಕೆಲಸ ಮುಗಿಸಿ ಓಡಬೇಕು ಮುಂದಿನ ಕೆಲಸದ ಕಡೆಗೆ… ಎಲ್ಲರೂ ಓಡುವವರೆ… ಕತೆಗೋ ಇದ್ಯಾವುದರ ಪರಿವೆಯೂ ಇಲ್ಲ. ಬಿದ್ದುಕೊಂಡಿದೆ ತನ್ನ ಪಾಡಿಗೆ ತಾನು. ನೋಡಿಕೊಂಡೂ ಓಡುತ್ತಿರುವವರು ಓಡುತ್ತಿದ್ದಾರೆ ತಂತಮ್ಮ ಪಾಡಿಗೆ…  ಮಧ್ಯಾನ್ಹದ ಹೊತ್ತಿಗೆ ಅಲ್ಲೇ ಮೂಲೆಯ ತಳ್ಳುಗಾಡಿಯವನಿಂದ ಪಲಾವನ್ನು ಕೊಂಡು ತಿಂದು ನೀರು ಕುಡಿಯಲೆಂದು ಹಿಂದಿನ ಮೂಟೆಯ ಬಳಿ ಇಟ್ಟಿದ್ದ ನೀರಿನ ಬಾಟಲಿಗೆ ಕೈ ಹಾಕಿದವನಿಗೆ ಮತ್ತೆ ಇದರಮೇಲೆ ಬಿಸಿಲು ಬೀಳುತ್ತಿದ್ದುದು ಕಾಣಿಸಿತು. ಏನು ಸುಡುಗಾಡೋ ಎಂದುಕೊಳ್ಳುತ್ತಾ ಒಂದಷ್ಟು ನೆರಳಿನೆಡೆಗೆ ನೂಕಿದ. ಅಷ್ಟರಲ್ಲಿ ಯಾರೋ ಗಿರಾಕಿ ಕರೆಯುತ್ತಿದ್ದರು. “ಬಂದೇ.ಡಜನ್ನಿಗೆ ನೂರೈವತ್ತು ಕಣಕ್ಕ.  ಈ ಕೈ ಟವಲು ನೋಡಿ. ಬಟ್ಟೆ ಎಂಗದೆ.  ಇದಾದ್ರೆ ಇನ್ನೂರೈವತ್ತು ಆಗತ್ತೆ…” ತನ್ನದೇ ಕತೆಯಲ್ಲಿ ಮುಳುಗಿಹೋದ… ಮುಂದಿನ ಪಾಳಿಯವನು ಬಂದು ಜಾಗಕ್ಕೆ ತಕರಾರು ಮಾಡಿದಾಗಲೇ ಅವನಿಗೆ ಸಮಯವಾದದ್ದು ತಿಳಿದದ್ದು.  “ಓ… ಎದ್ದೆ ಕಣಣ್ಣೋ”  ಎನ್ನುತ್ತಾ ತನ್ನ ಬಿಡಾರವನ್ನು ಖಾಲಿ ಮಾಡತೊಡಗಿದ.  “ಎಂಗಾಯ್ತು ಇವತ್ತು ವ್ಯವಾರ”  ಮುಂದಿನವನು ತನ್ನ ಕಂತೆಯನ್ನು ಬಿಚ್ಚುತ್ತಾ ಕೇಳಿದ.  “ಪರ‍್ವಾಗಿಲ್ಲ ಕಣಾ. ತಲಗಟ್ಟಮ್ಮನ್ ಜಾತ್ರೆ ಅಲ್ವಾ.  ವಸಿ ಜನಾ ಜಾಸ್ತೀನೇ ದಿನಕ್ಕಿಂತ.”  “ಸೇಂದೀಗ್ ನಾಕ್ ಕಾಸು ಜಾಸ್ತಿ ಸಿಗ್ತೂನ್ನು” “ಇಲ್ ಕಣಣ್ಣೋ ಚಿಕ್ಮಗೀಗೆ ರವಷ್ಟು ಉಸಾರಿಲ್ಲ. ಎಂತೆಂತದೋ ಟೆಸ್ಟುಗಳಂತೆ ಬರ‍್ಕೊಟ್ಟವ್ರೆ. ನಾಳೀಕೆ ಕರ‍್ಕೊಂಡೋಗ್ಬೇಕು. ಅದಿಕ್ಕೊಂದೀಷ್ಟು ಅಗುರಾಯ್ತು ಅಷ್ಟೇಯ” ಅನ್ನುತ್ತಾ ತನ್ನೆರಡೂ ಮೂಟೆಗಳನ್ನು ಎತ್ತಿಕೊಳ್ಳುವಾಗ ಮತ್ತೊಮ್ಮೆ ಮುಖ ತೋರಿದ ಕತೆಗೆ ಮುಖದಿರುವಿ ನಡೆದ. ಆ ಸಂಕೀರ್ಣದಲ್ಲೇ ಇದ್ದ ಸಬ್ ರಿಜಿಸ್ತ್ರಾರ್ ಆಫೀಸಿನ ಮುಂದೆ ಆ ಬ್ರೋಕರ್ ಮದ್ಯಾನ್ಹ 3 ಘಂಟೆಯಿಂದಲೇ ಕಾಯುತ್ತಿದ್ದ. ಕ್ಷಣಕ್ಕೊಮ್ಮೆ ಮೊಬೈಲನ್ನು ಹಿಡಿದು “ಎಲ್ಲಿದೀರ? ಬೇಗಬನ್ನಿ. ಇಲ್ದಿದ್ರೆ ಇವತ್ತು ಕೆಲ್ಸ ಆಗಲ್ಲ. ಸಾಹೇಬ್ರು ಮುಂದಿನವಾರ ಟೂರ‍್ನಲ್ಲಿರ‍್ತಾರೆ. ನಿಮ್ಗೇ ತೊಂದ್ರೆ” ಎಂದು ಅವಸರಿಸುತ್ತಿದ್ದ.  “ಹಾ… ಸರಿ ಸರಿ ಬೇಗ್ಬನ್ನಿ… ಇಲ್ಲೇ ಮುಂದುಗಡೆ ಫುಟ್ಪಾತ್ ಅಂಗಡಿಗ್ಳು ಇದಾವಲ್ಲ ಅಲ್ಲೇ ಎರಡನೇ ಕಂಬದ ಹತ್ರ ನಿಂತುಕೊಂಡಿದೀನಿ” ಬರುವವರಿಗೆ ಸುಳಿವುಗಳನ್ನು ಕೊಡುತ್ತಿದ್ದ. ನೋಡುನೋಡುತ್ತಲೇ ನಾಲ್ಕು ಗಂಟೆಯಾಗಿ ಹೋಯ್ತು. ‘ಇವ್ರ ಕಮಿಷನ್ ನೆಚ್ಕೊಂಡು ನಾಳೇ ತಿರುಪತೀಗೆ ಕರಕೊಂಡು ಹೋಗ್ತೀನಿ ಅಂದಿದೀನಿ. ಈವಯ್ಯಾ ಏನಾದ್ರೂ ಕೈಕೊಟ್ರೆ ಮನೇನಲ್ಲಿ ಗೋವಿಂದಾ… ಗೋವಿಂದಾ’ ಎಂದುಕೊಳ್ಳುತ್ತಾ ಬಾಯಲ್ಲಿ ಬಂದ ಎಂಜಲನ್ನು ಉಗಿಯಲು ಕಟ್ಟೆಯ ಪಕ್ಕಕ್ಕೆ ಹೋದರೆ ಅಲ್ಲಿ ಬಿದ್ದಿದ್ದ ಕತೆ ಕಾಣಬೇಕೆ! ‘ಅಯ್ಯೋ ನನ್ಮಗಂದ್ ಇದ್ಯಾವುದಿದು’ ಎನ್ನುತ್ತಾ ಅದರೆಡೆಗೆ ಬಗ್ಗಿದ. ಅಷ್ಟರಲ್ಲಿ ಫೋನ್ ಬಡಕೊಳ್ಳಬೇಕೆ… ಒಂದೇ ಸಲ ನೆಟ್ಟಗಾಗಿ “ಬಂದೇ ಸಾರ್ ಬಂದೇ. ಇಲ್ಲೇ ಇದೀನಿ…”ಎನ್ನುತ್ತಾ ತಾನು ಸೂಚಿಸಿದ್ದ ಜಾಗದೆಡೆಗೆ ಓಡಿದ. ಮುಂದಿನವನು ತನ್ನ ಸರಕನ್ನೆಲ್ಲಾ ಮುಂದೆ ಜೋಡಿಸಿಕೊಳ್ಳುತ್ತಾ ಹೋದ. ಅಷ್ಟರಲ್ಲೇ ವ್ಯಾಪಾರ ಶುರುವಾಗಿದ್ದರಿಂದ ಎಷ್ಟೋ ಹೊತ್ತು ಹಿಂತಿರುಗಿ ನೋಡಲಾಗಲಿಲ್ಲ. ಬಳೆ, ರಿಬ್ಬನ್ನು, ಪೌಡರ್, ಸೆಂಟು, ಬಾಚಣಿಕೆ… ಒಂದೇ ಎರಡೇ. ಹೆಣ್ಣು ಮಕ್ಕಳು ಮುಗಿಬೀಳುವ ಎಲ್ಲಾ ಸಾಮಾನುಗಳೂ ಅವನ ಸರಕಲ್ಲಿತ್ತು.  ವಯಸ್ಸಿನ ಹೆಣ್ಣುಮಕ್ಕಳು ಮುಂದೆ ವ್ಯಾಪಾರಕ್ಕೆ ನಿಂತಿದ್ದಾಗ, ನಗನಗ್ತಾ ಚೌಕಾಸಿ ಮಾಡುತ್ತಿದ್ದಾಗ ಹೊತ್ತು ಓಡಿದ್ದು ಗೊತ್ತಾಗಲು ಸಾಧ್ಯವೇ.  ಹೇಳಿ ಕೇಳಿ ಜಾತ್ರೆಗೆ ಬಂದಿದ್ದ ಪೋರಿಯರು. ವ್ಯಾಪಾರ ಭರ್ಜರಿಯಾಗೇ ಸಾಗಿತ್ತು. ಮದ್ಯದಲ್ಲೊಮ್ಮೆ ವಂದಕ್ಕೆ ಹೋಗಿಬರುವಾ ಅನ್ನಿಸಿದ್ದಕ್ಕೆ ಪಕ್ಕದಲ್ಲಿದ್ದೋನನ್ನ ಸ್ವಲ್ಪ ಹೊತ್ತು ಅಂಗಡಿ ನೋಡಿಕೊಳ್ಳಕ್ಕೆ ಹೇಳಿ ಎದ್ದು ಹೋದವನಿಗೆ ಬಂದು ಕೂರುವಾಗ ಇದು ಕಣ್ಣಿಗೆ ಬಿತ್ತು.  ಹತ್ತಿರ ಹೋಗಿ ನೋಡಿದ… ಏನೂ ಅರ್ಥವಾಗದೆ  “ಯಾವಾಗಿಂದ ಬಿದ್ದದೆ?” ಪಕ್ಕದವನನ್ನು ಕೇಳಿದ. ”ಯಾವಾಗಿಂದ ಬಿದ್ದದೋ ಕಂಡರ‍್ಯಾರು? ನಾನೂ ಆಗ್ಲೇ ಎದ್ದೋಗಿದ್ದಾಗ ನೋಡ್ದಿ. ಏನೂ ತಿಳೀನಿಲ್ಲ. ಯಾವ್ದೋ ಬ್ಯಾವರ್ಸಿ; ಬದ್ಕೈತೋ, ಸತ್ತೈತೋ… ನಮ್ನಮ್ ಕತೆ ನೋಡ್ಕೊಂಡು ಹೋದ್ರೆ ಸಾಲ್ದಾ. ದಿನಕ್ಕಿಂತಾವೆಷ್ತೋ ಕಂಡೋರ‍್ಯಾರು” ಎಂದು ತನ್ನ ಸರಕಿನ ಜಾಹೀರಾತನ್ನು ಕೂಗುತ್ತಾ ಮಾತಿಗೆ ವಿರಾಮ ಹಾಕಿದ. ಅಷ್ಟು ಹೊತ್ತಿಗೆ ಇವ್ನ ಮುಂದೂ ಗಿರಾಕಿಗಳು ಬಂದಿದ್ದರಿಂದ ಈ ವಿಷಯ ಮರೆತು ತನ್ನ ವ್ಯಾಪಾರದಲ್ಲಿ ತಲ್ಲೀನನಾದ. ಈಗದು ಕತ್ತಲಲ್ಲಿ ಮಲಗಿತ್ತು. ಮುಂದಿನ ಬೀದಿಯ ದೀಪದ ಬೆಳಕು ಅದನ್ನು ತಲುಪುತ್ತಾ ಇರಲಿಲ್ಲ. ಆ ದೀಪದ ಕಂಬದ ಬಳಿ ತನ್ನ ಮಾಮೂಲಿ ಗಿರಾಕಿಗೆ ಕಾಯುತ್ತಾ ನಿಂತಿದ್ದವಳಿಗೆ ಎಷ್ಟು ಹೊತ್ತಾದರೂ ಬಾರದ್ದರಿಂದ ಕೋಪವುಕ್ಕುತ್ತಾ ಇತ್ತು. ಸುಮ್ಮನಿರಲಾಗದೇ ಈ ವ್ಯಾಪಾರಿ “ಏನವ್ವಾ ಇನ್ನೂ ಅಕ್ಕಿ ಬಂದಂಗಿಲ್ಲ” ಎನ್ನುತ್ತಾ ಮಾತಿಗೆಳೆದ. ಮೊದಲೇ ಕೋಪದಲ್ಲಿದ್ದವಳು “ಸುಮ್ ಕುಂತ್ಕೊಂಡು ನಿನ್ನ ಕ್ಯಾಮೆ ನೋಡ್ಕಾ” ಎನ್ನುತ್ತಾ ಮುಖದಿರುವಿದಳು. ಅವಳ ಕೋಪ ಕಂಡು ಖುಷಿಯಾಗಿ ಇವನು ಕಿಸಕ್ಕೆಂದು ನಕ್ಕ. ತಿರುಗಿಸಿ ಏನಾದರೂ ಅನ್ನುತ್ತಿದ್ದಳೇನೋ ನಮ್ಮ ಪುಣ್ಯ ಬಿಡಿ ಅವಳ ಮಾತುಗಳನ್ನು ಕೇಳಿಸಿಕೊಳ್ಳುವ ಭಾಗ್ಯ ನಮಗಿಲ್ಲ – ಅಷ್ಟರಲ್ಲಿ ಯಾವುದೋ ಹೊಸ ಮಿಕ ಅವಳ ಬಲೆಗೆ ಬಿದ್ದಿತ್ತು.  ವ್ಯವಹಾರ ಕುದುರಿಸಲು ಅವಳು ಆ ಕತೆ ಬಿದ್ದಿದ್ದ ಕತ್ತಲೆಯ ಕಡೆಗೆ ಅವನನ್ನು ಸನ್ನೆ ಮಾಡಿ ಕರೆದಳು. ಇನ್ನೇನು ಅದನ್ನೇ ಎಡುವುವವಳಿದ್ದಳು “ಥತ್ ಸೂಳೇಮಗಂದು” ಎಂದು ಝಾಡಿಸಿ ಒದ್ದು ಜಾಗಮಾಡಿಕೊಂಡಳು. “ಏನದು?” ಎಂದ ಹೊಸ ಮಿಕ.  “ದರಬೇಸಿ ನನ್‌ಮಗಂದು… ಅದನ್ ಅತ್ತಾಗ್ ಬಿಡು” ಎನ್ನುತ್ತಾ ವ್ಯವಹಾರ ಕುದುರಿದ ತಕ್ಷಣ ಅವರಿಬ್ಬರೂ ಆ ಕತ್ತಲಲ್ಲೇ ಎಲ್ಲೋ ಕರಗಿಹೋದರು. ರಾತ್ರಿ ಹತ್ತಾಗುತ್ತಾ ಬಂದಿತ್ತು. ಅಲ್ಲಿ ವ್ಯಾಪಾರ ಮಾಡುತ್ತಾ ಕುಳಿತಿದ್ದವರೆಲ್ಲಾ ತಂತಮ್ಮ ಸರಕನ್ನು ಎತ್ತಿಡತೊಡಗಿದರು. ಜಾತ್ರೆಯ ದಿನವಾದ್ದರಿಂದ ಅವರಿಗೆ ನಾಲ್ಕು ಕಾಸು ಹೆಚ್ಚಾಗಿಯೇ ಸಂಪಾದನೆಯಾಗಿತ್ತು.  ಕಟ್ಟಿಕೊಂಡ ಸರಕನ್ನು ಬೆನ್ನ ಮೇಲೆ ಹೊತ್ತು ಸಿಟಿಬಸ್ಸಿನ ಕಡೆಗೋ, ಅಥವಾ ಸ್ಟ್ಯಾಂಡಿನಲ್ಲಿ ನಿಲ್ಲಿಸಿದ್ದ ತಮ್ಮ ವಾಹನಗಳಿಗೆ ಕಟ್ಟಿಕೊಂಡೋ ಹೊರಡುವ ತಯಾರಿ ಮಾಡಿಕೊಂಡರು. ಇದರ ಮುಂದಿದ್ದವನೂ ತನ್ನ ಗಂಟುಮೂಟೆ ತಯಾರಿಸಿ ಇಟ್ಟುಕೊಂಡು ಗೆಳೆಯನಿಗಾಗಿ ಕಾಯುತ್ತಿದ್ದ. ಇಬ್ಬರೂ ಸೇರಿ ಆಟೋದಲ್ಲಿ ಹಾಕಿಕೊಂಡು ಹೋಗುವ ಮಾತಾಡಿಕೊಂಡಿದ್ದರು. ಆಗ ಅವನಿಗೆ ಹಿಂದೆ ಬಿದ್ದಿದ್ದ ಅದರ ಜ್ಞಾಪಕ ಬಂತು. ʻಏನಾಗಿದ್ಯೋ ನೋಡುಮಾʼ ಎಂದುಕೊಳ್ಳುತ್ತಾ ಅದರ ಹತ್ತಿರ ಹೋದ. ಇನ್ನೂ ಉಸಿರಾಡ್ತಾ ಇದೆಯೇನೋ ಅನ್ನಿಸ್ತು.  ಬಗ್ಗಿ ಇನ್ನೇನು ಮುಟ್ಟಬೇಕು, ಅಷ್ಟರಲ್ಲಿ ಆಟೋ ಮಾಡಿಕೊಂಡು ಬಂದಿದ್ದ ಗೆಳೆಯ “ಬೇಗ ಬಾ.. ಒತ್ತಾಗೈತೆ ಅಲ್ಲೇನ್ ನೋಡ್ತಾ ನಿಂತಿದೀಯ.. ಬಿರೀನ್ ಬಾ.. ಮನೇ ಅತ್ರ ರಾತ್ರಿ ನಾಟ್ಕ ಆಡ್ತಾವ್ರೆ. ನೋಡಾಕ್ ಓಗ್ಬೇಕು” ಎಂದು ಅವಸರಿಸಿದ. “ಬಂದೇ ಇರು; ಇದೇನ್ ಬದ್ಕಿದ್ಯೋ ಸತ್ತಿದ್ಯೋ ನೋಡುಮಾ ಅನ್ಕಂಡಿ. ಬದ್ಕಿದ್ರೆ ನಾ ಏನ್ಮಾಡೇನು… ಸತ್ತಿದ್ರೆ ಏನ್ಮಾಡೇನು.  ಎಲ್ಲಾ ಒಂದೇ.. ಅಂದಂಗೆ ಯಾವ್ ನಾಟ್ಕಾ ಅಂದಿ” ಎನ್ನುತ್ತಾ ತನ್ನ ಗಂಟು ಮೂಟೆಗೆ ಆಟೋದಲ್ಲಿ ಜಾಗಮಾಡಿಕೊಂಡು, ಹಸ್ತವಿಡುವಷ್ಟು ಉಳಿದ ಜಾಗದಲ್ಲಿ ಕುಂಡಿಯೂರಿಕೊಂಡು ಕುಳಿತ. ಆಟೋ ಬರ‍್ರನೆ ಹೋಗುವುದರಲ್ಲಿ ಅವರು ಮುಂದೇನು ಮಾತಾಡಿಕೊಂಡರೋ ಕೇಳಲಿಲ್ಲ. ಬೆಳಗಿನಿಂದ ಗಿಜಿಗಿಜಿಗುಡುತ್ತಿದ್ದ ವಾಣಿಜ್ಯ ಸಂಕೀರ್ಣ ನಿಧಾನವಾಗಿ ನಿರ್ಜನವಾಗುತ್ತಿತ್ತು. ಎಲ್ಲ ಅಂಗಡಿ ಮುಂಗಟ್ಟುಗಳೂ ಬಾಗಿಲನ್ನು ಜಡಿದುಕೊಂಡವು.ವಾಹನ ನಿಲ್ದಾಣದಲ್ಲಿದ್ದ ವಾಹನಗಳೆಲ್ಲಾ ಖಾಲಿಯಾದವು. ಸಿಟಿಬಸ್ಸಿನ ಕಂಡಕ್ಟರ್ “ಲಾಸ್ಟ್ ಟ್ರಿಪ್, ಲಾಸ್ಟ್ ಟ್ರಿಪ್. ಬೇಗ ಬೇಗ ಹತ್ತಿಕೊಳ್ಳಿ” ಎಂದು ಅಳಿದುಳಿದವರನ್ನು ಹತ್ತಿಸಿಕೊಳ್ಳತೊಡಗಿದ. ಪಕ್ಕದ ಬೀದಿಯ ಜಾತ್ರೆಯ ಸಂಭ್ರಮವೂ ಮುಗಿದು ತಲಗಟ್ಟಮ್ಮ ತನ್ನ ದೇಗುಲದಲ್ಲಿ ಬಂದಿಯಾಗಿ, ಸುಸ್ತಾಗಿ, ಕುಳಿತಲ್ಲೇ ನಿದ್ದೆಮಾಡತೊಡಗಿದಳು. ದಿನವಿಡೀ ಕಾಯೊಡೆದು, ಮಂಗಳಾರತಿ ಮಾಡಿ, ತಾಯಿತ ಕಟ್ಟಿ, ಭಂಡಾರ ಬಳಿದಿದ್ದ ಅಯ್ಯ ಮೈಯೆಲ್ಲಾ ಮುರಿದು ಹೋಗುವಷ್ಟು ಬಸವಳಿದಿದ್ದು, ಅಂದಿನ ಸಂಪಾದನೆಯನ್ನು ಕೈಚೀಲಕ್ಕೆ ತುರುಕಿಕೊಂಡು, ಬಾಗಿಲಿಗೆ ಬೀಗ ಜಡಿದು ಮನೆಯ ಕಡೆಗೆ ನಡೆದ. ಮಾರುಕಟ್ಟೆ ಬಳಸಿಕೊಂಡು ಹಿಂದಿನ ಬೀದಿಗೆ ಹೋದರೆ ಅವನ ಮನೆ. ಬಸ್ಸಿನ ದಾರಿಯಲ್ಲ; ಆಟೋದವರು ಬರುವುದಿಲ್ಲ. ಹೇಗೋ ಕಷ್ಟಪಟ್ಟುಕೊಂಡು ಬರುತ್ತಿರುವಾಗ ಕತ್ತಲಲ್ಲಿ ಕಾಣದೇ ಆ ಕತೆಯನ್ನು ಎಡವಿ ಅದರ ಮೇಲೇ ಬಿದ್ದುಬಿಟ್ಟ. ಪ್ರಾಣವೇ ಹೋದಷ್ಟು ಭಯವಾಗಿ “ಅಮ್ಮಾ ತಲಗಟ್ಟಮ್ಮಾ” ಎಂದು ಕಿರಿಚಿಕೊಂಡ. ಹತ್ತಿರದಲ್ಲಿ ಯಾರೂ ಓಡಾಡುತ್ತಿರಲಿಲ್ಲವಾದ್ದರಿಂದ ಯಾರಿಗೂ ಅವನ ಕೂಗು ಕೇಳಲಿಲ್ಲ. ಎದ್ದು ಕುಳಿತುಕೊಂಡು ಅಲುಗಾಡಿಸಿ ನೋಡಿದ. ಇನ್ನೂ ಸಣ್ಣಗೆ ಉಸಿರಾಡುತ್ತಿತ್ತು. ‘ಸಧ್ಯ ನಾನು ಬಿದ್ದು ಜೀವ ಹೋಗಲಿಲ್ಲವಲ್ಲ’ ಎಂದು ಸಮಾಧಾನಿಸಿಕೊಂಡು ಎದ್ದು ನಿಂತ. ಕೆಳಗೆ ಬಿದ್ದಿದ್ದ ತನ್ನ ಕೈಚೀಲವನ್ನು ಹೆಕ್ಕಿಕೊಂಡು ಮತ್ತೊಮ್ಮೆ ಅದರ ಕಡೆಗೆ ನೋಡಿದ. ‘ತಾನು

ಯಾರೂ ಓದದೆಯೇ ಹೋದ ಕತೆ… Read Post »

ಕಥಾಗುಚ್ಛ

ಕಥಾಗುಚ್ಛ

ವಿಧಿ! ಆರ್.ಸುನೀಲ್ ತರೀಕೆರೆ ರಂಗಪ್ಪನ ಮನೆ ಮುಂದೆ ಬೆಂಕಿ ಬಿದ್ದ ಸುದ್ದಿ ಊರಲ್ಲೆಲ್ಲಾ ಐದೇ ನಿಮಿಷಕ್ಕೆ ಹರಡಿಹೋಯಿತು.ಆ ಸುದ್ದಿ ನನ್ನ ಕಿವಿಗೂ ಬಿದ್ದ ಕ್ಷಣದಿಂದ ಮನಸ್ಸು ವ್ಯಾಕುಲಗೊಳ್ಳತೊಡಗಿತು.ಛೇ..ಅಂತೂ ಇಂತೂ ರಂಗಪ್ಪ ಹೋಗ್ನಿಟ್ಟ.! ಬದುಕಿದ್ದಾಗ ಅವನು ಪಟ್ಟ ಪಾಡು ನೆನೆಸಿಕೊಂಡು ಸಅಯ್ಯೋ ಅಂತ ಒಂದು ಕಡೆ ಅನ್ನಿಸತೊಡಗಿದರೆ ಮತ್ತೊಂದು ಕಡೆ ಬಿಡು ಅವನು ಹೋದದ್ದು ಒಳ್ಳೆಯದೇ ಆಯಿತು ಇಲ್ಲದಿದ್ದರೆ ಪಾಪ ಇನ್ನೂ ನೋವು ಅನುಭವಿಸುತ್ತಿದ್ದ.ಏನ್ ಈಗಾಗ್ಲೇ ಕಮ್ಮೀ ನೋವು ಅನುಭವಿಸಿದ್ದಾನಾ ಅವ್ನು..?!ಇಷ್ಟು ದಿನ ಅವ್ನು ಬದುಕಿದ್ದೂ ಸತ್ತಂಗೆ ತಾನೇ ಇದ್ದದ್ದು.ದಿನಾ ಬೆಳಗಾದ್ರೆ ಒಂದಲ್ಲ ಒಂದು ಗೋಳು ನೋವು ರಗಳೆ ಅವ್ನಿಗೆ ಇದ್ದೇ ಇತ್ತು ಪಾಪ.!ಅಂತ ಮನಸ್ಸು ಅವನ ಬಗ್ಗೆ ಇನ್ನಿಲ್ಲದಂತೆ ಮರುಗತೊಡಗಿತು. ರಂಗಪ್ಪ ತೀರಾ ಬಡವನೇನೂ ಆಗರ‍್ಲಿಲ್ಲ.ಇದ್ದ ಎರಡೆಕೆರೆ ಜಮೀನಿನಲ್ಲೇ ಅಡಿಕೆ ಗಿಡಕೆ ಬೆಳೆದುಕೊಂಡು ಅದರಲ್ಲೇ ತನಗೊಂದು ಸ್ವಂತದ ಸೂರು ಅಂತ ಮಾಡಿಕೊಂಡಿದ್ದ.ಹೆAಡ್ತಿ ಬೇರೆ ಸತ್ತು ಎಷ್ಟೋ ವರ್ಷ ಆಗಿತ್ತು.ಇದ್ದ ಒಬ್ಬ ಮಗನ ಮದ್ವೆ ಮಾಡಿ ಹೆಂಗೋ ಅಂತ ಒಂತ ಒಂದು ನೆಮ್ಮದಿಯ ಜೀವ್ನ ಮಾಡ್ತಿದ್ದ.ಮೊದ್ಲು ಮೊದ್ಲು ಎಲ್ಲಾ ಚೆನ್ನಾಗೇ ಇತ್ತು.ರಂಗಪ್ಪನ್ನೂ ಕೂಡ ಚೆನ್ನಾಗೇ ನೋದ್ಕೋತಿದ್ರು.ಆದ್ರೆ ಬರ್ತಾ ಬರ್ತಾ ರಂಗಪ್ಪನ ಮಗ ಸೊಸೆಗೆ ರೋಟದಿಂದ ಬರ್ತಿದ್ದ ಆದಾಯದ ಮೇಲೆ ಕಣ್ಣು ಬಿತ್ತು. ಮೊದ್ಲಿನಿಂದ್ಲೂ ಉಢಾಳನಾಗಿ ಬೆಳೆದಿದ್ದ ರಂಗಪ್ಪನ ಮಗ ಮಲ್ಲ ಯಾವ ಕೆಲ್ಸ ಕಾರ್ಯಾನೂ ಮಾಡ್ದೆ ಅಪ್ಪನ ದುಡ್ನಾಗೆ ಮಜಾ ಮಾಡ್ಕೊಂಡು ತಿರುಗ್ತಾ ಇದ್ದ.ಇಸ್ಪೀಟು ಹೆಂಡ ಜೊತೆಗೆ ಅದೂ ಇದೂ ಅಂತ ಸ್ವಲ್ಪ ಶೋಕೀನೂ ಕೂಡ ಜಾಸ್ತೀನೇ ಇತ್ತು.ಅವೆಲ್ಲಾ ಇತ್ತೀಚಿಗಂತೂ ತುಸು ಮಿತಿ ಮೀರಿ ಹೋಗಿದ್ವು.ಇಂತವ್ನಿಗೆ ಒಂದು ಮದ್ವೆ ಅಂತ ಮಾಡಿಬಿಟ್ರೆ ಸರಿಹೋಗ್ತಾನೆ ಅಂತ ಲೆಕ್ಕ ಹಾಕಿದ್ದ ರಂಗಪ್ಪನ ಎಣಿಕೆ ತಪ್ಪಾಗಿ ಹೋಗಿತ್ತು.ಅವ್ನಿಗೆ ಮದ್ವೆ ಮಾಡಿದ ತಕ್ಷಣ ತೋಟದ ವ್ಯವಹಾರವೆಲ್ಲಾ ಅವ್ನಿಗೆ ಸೊಸೆಗೆ ವಹಿಸ್ಬಿಟ್ಟು ತಾನು ಆರಾಮಾಗಿ ಮೊಮ್ಮಕ್ಕಳನ್ನ ಆಟ ಆಡಿಸ್ತಾ ಕಾಲ ಕಳೀಬಹುದು ಅಂತ ಅಂದುಕೊAಡಿದ್ದ ರಂಗಪ್ಪ ಮಲ್ಲ ನಾಯಿ ಬಾಲ ಡೊಂಕು ಎಂಬAತೆ ಮದ್ವೆ ಆದ್ಮೇಲೆ ಕೂಡ ಸರಿ ಹೋಗದ್ದು ಕಂಡು ಒಳಗೊಳಗೆ ಸ್ಯಾನೇ ನೋವು ಅನುಭವಿಸ್ತಿದ್ದ. ಇತ್ತ ತಾನು ಮದ್ವೆ ಆದ್ರೂ ಕೂಡ ಅಪ್ಪ ಯಾವ ವ್ಯವಹಾರಾನೂ ಕೊಡ್ತಾ ಇಲ್ವಲ್ಲಾ ಅಂತ ಮಲ್ಲ ಕೂಡ ಒಳಗೊಳಗೇ ಕುದ್ದು ಹೋಗ್ತಿದ್ದ.ಇಂಥಾ ಬೇಜವಾಬ್ದಾರಿ ಮಗನಿಗೆ ವ್ಯವಹಾರ ಕೊಟ್ರೆ ಆಸ್ತಿಯೆಲ್ಲಾ ನುಂಗಿ ನೀರು ಕುಡಿದಾನೂ ಅಂತ ರಂಗಪ್ಪ ಹೆದರಿದ್ರೆ ಅತ್ತ ಮಲ್ಲ ತಾನು ಮದ್ವೆ ಆದ್ರೂ ಕೂಡ ಖರ್ಚಿಗೆ ಕಾಸು ಬೇಕು ಅಂದ್ರೆ ಅಪ್ಪನ ಮುಂದೆಯೇ ಕೈ ಒಡ್ಡಬೇಕಲ್ಲಾ ಅನ್ನೋ ಅಸಹನೆಯಿಂದ ವಿಲವಿಲ ಒದ್ದಾಡ್ತಿದ್ದ.ಮಗ ನೋಡಿದ್ರೆ ಹಿಂಗೆ ಸೊಸೆನಾದ್ರೂ ಅವ್ನಿಗೆ ಬುದ್ದಿ ಹೇಳಿ ಸರಿ ದಾರಿಗೆ ತರಬಹುದು ಅನ್ನೋ ಎಲ್ಲೋ ಒಂದು ಸಣ್ಣ ಭರವಸೆ ಕೂಡ ಸೊಸೆ ಮದುವೆಯಾಗಿ ಬಂದ ಹೊಸತರಲ್ಲೇ ಸುಳ್ಳು ಮಾಡಿದ್ಳು.ಇರೋ ಇರಡೆಕೆರೆ ಜಮೀನಿನಲ್ಲೇ ಮೂರ್ನಾಲ್ಕು ಲಕ್ಷ ಆದಾಯ ಬರೋದು ನೋಡಿ ಸೊಸೆಯ ಕಣ್ಣು ಕೂಡ ಕುಕ್ಕುತ್ತಿತ್ತು.ಒಮ್ಮೊಮ್ಮೆ ಮಗನಿಗಿಂತ ಮೊದಲು ಇವಳೇ ದುಡ್ಡಿಗಾಗಿ ಜಗಳ ಕಾಯೋಕೆ ಮುಂದೆ ನಿಂತ್ಕೋತಿದ್ಲು.ಆದಷ್ಟು ಬೇಗ ಈ ವ್ಯವಹಾರನೆಲ್ಲಾ ತಾನೇ ವಹಿಸ್ಕೊಂಡ್ರೆ ತನಗೆ ಬೇಕಾದ ಒಡವೆ ವಸ್ತç ಮಾಡ್ಕೊಂಡು ಜಮ್ಮಂತ ರಾಣೀಯಂಗೆ ಮೆರೀಬಹ್ದು ಅಂತ ಕನಸು ಕಾಣ್ತಾ ತನ್ನ ಗಂಡನಿಗೇ ಇಲ್ಲಸಲ್ಲದ್ದು ಹೇಳಿಕೊಟ್ಟು ತನ್ನಪ್ಪನ ವಿರುದ್ಧವೇ ಯುದ್ಧಕ್ಕೆ ನಿಲ್ಸಿಬಿಡ್ತಿದ್ಳು.ಒಟ್ನಲ್ಲಿ ರಂಗಪ್ಪನ ಸ್ಥಿತಿ ಮನೆಯಲ್ಲಿ ಬಿಸಿ ತುಪ್ಪದ ಹಾಗೆ ಇತ್ತ ನುಂಗೋಕೂ ಆಗ್ದೆ ಉಗುಳೋಕೂ ಆಗ್ದೆ ಇರೋ ತರ ಅಯೋಮಯವಾಗಿಬಿಟಟಿತ್ತು. ದಿನಾ ಈ ಗೋಳು ರಗಳೆ ಯಾಕೆ ಆಕಡೆ ಹಾಳಾಗಿ ಹೋಗ್ಲಿ ಅಂತ ಆ ತೋಟವನ್ನ ಮನೆಯನ್ನ ಅವ್ರ ಹೆಸ್ರಿಗೇ ಮಾಡಿಬಿಡೋಣ ಇಲ್ಲದಿದ್ರೆ ಒಂದಲ್ಲಾ ಒಂದು ದಿನ ಇವು ಆಸ್ತಿ ಹಣದ ಆಸೆಗೆ ತನ್ನನ್ನ ಕೊಲ್ಲೋಕೂ ಹೇಸಲ್ಲಾ ಅಂತ ಯೋಚಿಸಿದ ರಂಗಪ್ಪ ಹೀಗೆ ಭಂಗ ಪಡೆದಾಗ್ಲೆಲ್ಲಾ ನನ್ನ ಹತ್ರ ಬಂದು ತನ್ನ ಗೋಳು ತೋಡ್ಕೊಂಡಾಗ “ಹಂಗೆಲ್ಲಾದ್ರೂ ಮಾಡ್ಬಿಟ್ಟಿಯೋ ರಂಗಪ್ಪ..ನೀನಿನ್ನೂ ಚೆನ್ನಾಗಿರೋವಾಗ್ಲೇ ಹಿಂಗೆಲ್ಲಾ ರ‍್ಕೊಟ್ಟು ಬಿಟ್ರೆ ಆಮೇಲೆ ಆ ಆಸ್ತೀನೂ ಇರಲ್ಲ ನೀನೂ ಇರಲ್ಲ ನಿನ್ನ ಭಿಕ್ಷೆ ಬೇಡೋ ಹಾಗೆ ಮಾಡಿಬಿಟ್ಟಾರು ಹುಶಾರೂ ಇನ್ನೂ ಸ್ವಲ್ಪ ದಿನ ಹೋಗ್ಲಿ ಆಮೇಲೆ ಬೇಕಾದ್ರೆ ಒಂದು ನಿರ್ಧಾರಕ್ಕೆ ಬರ್ತಿಯಂತೆ..!”ಅAತ ಏನೋ ಹೇಳಿ ಅವ್ನಿಗೆ ಸಮಾಧಾನ ಮಾಡುವ ಜೊತೆಗೆ ಸ್ವಲ್ಪ ಎಚ್ಚರಿಕೆಯ ಮಾತನ್ನೂ ಹೇಳ್ತಾ ಇದ್ದೆ.ಆದ್ರೆ ನನ್ನ ಮನಸ್ಸಿನ ಮೂಲೆಯಲ್ಲಿ ಎಲ್ಲೋ ಒಂದು ಕಡೆ ಆ ಹಾಳಾದವ್ರು ರಂಗಪ್ಪನಿಗೆ ಏನೋ ಒಂದು ಗತಿ ಕಾಣ್ಸೇ ಕಾಣಿಸ್ತಾರೆ ಅಂತ ಒಂದು ಸಣ್ಣ ಅನುಮಾನ ಮಾತ್ರ ಕಾಡ್ತಾನೇ ಇತ್ತು. ಇದನ್ನೆಲ್ಲಾ ನೋಡಿ ಬೇಸತ್ತು ಹೋಗಿ ನಾನೇ ಒಮ್ಮೆ ಮಲ್ಲನತ್ರ ಯಾಕಪ್ಪಾ ಹಿಂಗೆಲ್ಲಾ ಮಾಡ್ತೀರಾ ಒಂದಲ್ಲ ಒಂದು ದಿನ ಈ ತೋಟ ಮನೆಯೆಲ್ಲಾ ನಿಂಗೇ ತಾನೆ ಬರೋದು.ನೀವು ಕೊಡೋ ಕಾಟಕ್ಕೆ ಪಾಪ ನಿಮ್ಮಪ್ಪ ದಿನಾ ಕೊರಗ್ತಾ ಇದಾನೆ ಅಂತ ಬುದ್ದಿ ಹೇಳೋಕೆ ಹೋದ್ರೆ ನನಗೆ ಅವರಪ್ಪನ ತರ ವಯಸ್ಸಾಗಿದೆ ಅವನ ಹಾಗೆ ನಾನೂ ಒಬ್ಬ ಹಿರೀ ಮನುಷ್ಯ ಅಂತಾನೂ ನೋಡ್ದೆ ನಂಗೇ ಬಾಯಿಗೆ ಬಂದAಗೆ ಮಾತಾಡಿ ನಿಮಗ್ಯಾಕ್ರೀ ನಮ್ಮನೆ ಉಸಾಬರಿ ನಿಮ್ಮ ಕೆಲಸ ನೀವು ನೋಡ್ಕೊಳ್ಳಿ ಅಂತ ದಬಾಯಿಸಿ ಹೋಗಿದ್ದ.ಇವ್ನೇ ಹಿಂಗೆ ಇನ್ನು ರಂಗಪ್ಪನ ಬಾಯಿಂದ ಅವ್ನ ಸೊಸೆಯ ಗುಣಗಾನ ಕೇಳಿದ್ದ ನನಗೆ ಅಪ್ಪಿತಪ್ಪಿಯೂ ಅವಳ ಹತ್ರ ಮಾತಾಡೋ ಧೈರ್ಯ ಕೂಡ ಬರಲಿಲ್ಲ. ಅಲ್ಲಾ ಹೆಂಗೂ ರಂಗಪ್ಪನಿಗೆ ಒಬ್ನೇ ಮಗ.ಅಕಸ್ಮಾತ್ ರಂಗಪ್ಪ ಏನಾದ್ರೂ ತೀರಿಹೋದ್ರೂ ಆ ಆಸ್ತಿಯೆಲ್ಲಾ ಅವ್ನಿಗೇ ತಾನೆ ಬರೋದು ಸುಮ್ನೆ ಯಾಕೆ ಜಗಳ ಆಡಿ ಎಲ್ರೂ ನೆಮ್ಮದಿ ಹಾಳು ಮಾಡ್ಕೋತಾರೆ ಅಂತ ಅನ್ನಿಸಿದರೂ ಮಲ್ಲ ನಂಗೆ ಮಾಮೂಲಿ ಮನುಷ್ಯನ ತರ ಕಾಣಲಿಲ್ಲ.ಹೌದು ಕುಡಿದ ಅಂದ್ರೆ ಅವ್ನು ಮನುಷ್ಯನಾಗೇ ಇರ್ತಿರ್ಲಿಲ್ಲ.ಆ ನಶೆಯಾಗೆ ತಾನು ಏನು ಮಾಡ್ತಿದ್ದೀನೆಂಬ ಪರಿವೆಯೂ ಅವ್ನಿಗೆ ಇರ್ತಿರ್ಲಿಲ್ಲ.ಶುದ್ಧ ತಲೆ ಕೆಟ್ಟೋನಂಗೆ ಆಡ್ತಿದ್ದ. ಹಿಂಗೆ ದಿನಾ ಜಗಳ ನೋವು ಭಯ ಇವುಗಳಿಂದಲೇ ಕಾಲ ದೂಡುತ್ತಿದ್ದ ರಂಗಪ್ಪ ಅಂತೂ ಇವತ್ತು ಹೋಗ್ಬಿಟ್ಟ.ಪಾಪ ಏನ್ ಅವ್ನೇ ಅಚಾನಕ್ಕಾಗಿ ಸತ್ನೋ ಇಲ್ಲಾ ಮಗ ಸೊಸೆ ಸೇರಿ ಇಬ್ರೂ ಅವ್ನನ್ನ ಹೊಡೆದಾಕುದ್ರೋ ..?!ಏನೋ ಹಾಳಾಗೋಗ್ಲಿ ಬಿಡು ರಂಗಪ್ಪ ಇದ್ದಾಗಂತೂ ಜೀವನದಾಗೆ ನೆಮ್ಮದಿ ಕಾಣ್ಲಿಲ್ಲ.ಸತ್ತ ಮೇಲಾದ್ರೂ ನೆಮ್ಮದಿ ಸಿಕ್ತಲ್ಲಾ ಅಂತ ಮನಸ್ಸಿನಾಗೇ ಅಂದ್ಕೊAಡು ಕೊನೇ ಸಲ ಅವನ ಮುಖನಾದ್ರೂ ನೋಡ್ಕೊಂಡು ಬರೋಣ ಅಂತ ಅವನ ಮನೆ ಕಡೆ ಭಾರವಾದ ಮನಸ್ಸಿನಿಂದ ಹೆಜ್ಜೆ ಹಾಕತೊಡಗಿದೆ. ಆಗ್ಲೇ ಅವನ ಮನೆ ಮುಂದೆ ದೊಡ್ಡದಾಗಿ ಶಾಮಿಯಾನ ಹೊಡೆದಿತ್ತು.ನಾಲ್ಕೆöÊದು ಸೌಧೆ ತುಂಡುಗಳು ಸಣ್ಣಗೆ ಉರಿಯುತ್ತಿದ್ದವು.ಆಗಲೇ ತುಂಬಾ ಜನಗಳೂ ಕೂಡ ಸೇರಿದಂಗಿತ್ತು.ಇವನ್ನೆಲ್ಲಾ ದೂರದಿಂದಲೇ ನೋಡುತ್ತಲೇ ಅವನ ಮನೆಗೆ ಹತ್ತಿರ ಹತ್ತಿರವಾದಂತೆ ಹೃದಯದೊಳಗೆ ದುಃಖವೂ ಹೆಚ್ಚಾಯಿತು.ಕಣ್ಣು ತನಗರಿವಾಗದಂತೆ ತೇವವಾಗತೊಳ್ಳತೊಡಗಿದವು.ನಿಧಾನವಾಗಿ ಭೂಜದ ಮೇಲಿದ್ದ ಟವೆಲ್ಲಿನಿಂದ ಮುಖದ ಬೆವರನ್ನು ಒರೆಸಿಕೊಳ್ಳುತ್ತಾ ಅವನ ಮನೆಯ ಮುಂದಿನ ಜಗುಲಿಯ ಹತ್ತಿರ ಬಂದAತೇ ಅಲ್ಲಿ ಕೂತಿದ್ದವನನ್ನು ನೋಡಿ ಒಮ್ಮೆಲೆ ಹೌಹಾರಿದಂತಾಯ್ತು.ಕಣ್ಣುಗಳನ್ನು ದೊಡ್ಡದಾಗಿ ಬಿಡುತ್ತಾ ಇದೇನು ಆಶ್ಚರ್ಯವೆಂಬAತೆ ನೋಡಿದೆ.ಅಲ್ಲಿ ಕೂತಿದ್ದವನು ಅಕ್ಷರಶಃ ರಂಗಪ್ಪನೇ ಆಗಿದ್ದ.ಮತ್ತೊಮ್ಮೆ ಕಣ್ಣುಜ್ಜಿಕೊಂಡು ಅವನೇ ಹೌದೋ ಅಲ್ಲವೋ ಎಂಬAತೆ ನೋಡಿದೆ.ಅದರಲ್ಲಿ ಯಾವುದೇ ಅನುಮಾನವಿಲ್ಲ ಅವನು ರಂಗಪ್ಪನೇ ಆಗಿದ್ದ.!ಹಾಗಾದ್ರೆ ಸತ್ತೋನು ರಂಗಪ್ಪ ಅಪ್ಪ..ಹಾಗಾದ್ರೇ ಮತ್ಯಾರು..ಮಲ್ಲನಾ..ಸೊಸೆಯಾ..?! ಮತ್ತೆ ಸಾವಕಾಶದಿಂದ ಗಾಬರಿ ದುಗುಡದಿಂದ ರಂಗಪ್ಪನ ಪಕ್ಕದಲ್ಲಿ ಹೋಗಿ ಕೂತೆ.ಅವನಿಗೆ ಕಣ್ಣಲ್ಲೇ ಸಂಜ್ಙೆ ಮಾಡುತ್ತಾ ಇವೆಲ್ಲಾ ಏನು..?ಸತ್ತದ್ದು ಯಾರು..?!ಎಂಬAತೆ ಕೇಳಿದೆ.ಅದಕ್ಕವನಿಗೆ ದುಃಖ ಒಮ್ಮಳಿಸಿ ಬಂತು.ಬಿಕ್ಕುತ್ತಲೇ “ಏನAತ ಹೇಳಲಿ ಮಂಜಣ್ಣ..ನಿನ್ನೆ ರಾತ್ರಿ ಮಗ ಸೊಸೆ ಇಬ್ರೂ ಯಾರಿಗೂ ಗೊತ್ತಾಗ್ದಂಗೆ ತೋಟಕ್ಕೆ ಹೋಗವ್ರೆ ಅಡಿಕೆ ಗೊನೆ ಕದಿಯೋಕೆ.ಅಂತಾ ಕತ್ಲಾಗೆ ಮರ ಹತ್ತಿದವ್ನು ಗೊನೆ ಕೊಯ್ದು ಇಳಿಯೋ ರಭಸದಾಗೆ ಆಯಾ ತಪ್ಪಿ ಕೆಳಗೆ ಬಿದ್ದವ್ನೆ.ಬಿದ್ದ ತಕ್ಷಣಕ್ಕೆ ಜೀವ ಅಲ್ಲೇ ಹೋಗ್ಬಿಟ್ಟೆöÊತೆ.ಇದನ್ನು ನೋಡಿ ಗಾಬರಿಯಾದ ಸೊಸೆ ಗಂಡನ ಅವಸ್ಥೆ ನೋಡಿ ಯಾರನ್ನಾದ್ರೂ ರ‍್ಕೊಂಡು ಬರೋಣ ಅಂತ ಓಡೋಡಿ ಬಂದ್ಳೆ ಕತ್ಲಾಗೆ ಗೊತ್ತಾಗ್ದೆ ತೋಟದ ಬಾವಿಯಾಗೆ ಬಿದ್ದವ್ಳೆ.ಅವ್ಳೂ ಅಲ್ಲೇ ಶಿವನ ಪಾದ ಸೇರವ್ಳೆ…ಅಯ್ಯೋ ವಿಧಿಯೇ..?!ಅಂತ ಅಳುತ್ತಾ ತಲೆ ಮೇಲೆ ಕೈಹೊತ್ತು ಕೂತು ಬಿಟ್ಟ ರಂಗಪ್ಪ. ವಿಷಯ ಕೇಳಿ ನನಗೆ ಗರ ಬಡಿದಂತಾಯ್ತು.ಒAದು ಕ್ಷಣ ಮನದಲ್ಲಿ ಏನೇನೋ ಯೋಚನೆಗಳು ರಂಗಪ್ಪನ ಮನೆಯ ಚಿತ್ರಣ ಮಗ ಸೊಸೆ ಎಲ್ಲಾ ದೃಶ್ಯದಂತೆ ಹಾದುಹೋದವು.ಯಾರು ರಂಗಪ್ಪ ಸಾಯಲಿ ಅಂತ ದಿನಾ ಕಾಯ್ತಾ ಇದ್ರೋ ಅವರೇ ಸತ್ತು ಹೆಣವಾಗಿ ಮಲಗಿದ್ರು.ಅವರು ಕೊಡೋ ಕಾಟಾನ ತಡೀಲರ‍್ದೆ ಎಂದೋ ಶಿವನ ಪಾದಕ್ಕೆ ಸೇರಬೇಕಿದ್ದ ರಂಗಪ್ಪ ಅವರ ಹೆಣದ ಮುಂದೆನೇ ಜೀವಂತ ಕೂತಿದ್ದ.ಆ ದೇವ್ರು ಯರ‍್ಯಾರ ಹಣೆಬರಹದಲ್ಲಿ ಏನೇನು ಬರೆದವ್ನೋ..ದೇವ್ರೇ ಏನಪ್ಪಾ ನಿನ್ನ ಲೀಲೆ ಅಂದು ಮನಸ್ಸಿನಲ್ಲೇ ಗೊಣಗಿಕೊಳ್ಳುತ್ತಾ ರಂಗಪ್ಪನಿಗೆ ಸಮಾಧಾನ ಪಡಿಸಿ ಮುಂದಿನ ಕೆಲಸಕ್ಕೆ ಅಣಿಯಾದೆ. ಕಿರುಪರಿಚಯ: ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ನೌಕರಿ ಹಾಗೂ ವಾಸ.ಹಲವಾರು ಕಥೆ,ಕವನ,ಲೇಖನ ಬರೆದಿರುವ ಇವರ ನೆಚ್ಚಿನ ಸಾಹಿತ್ಯ ಪ್ರಕಾರ ಹನಿಗವನ ಹಾಗೂ ಚುಟುಕುಗಳು.

ಕಥಾಗುಚ್ಛ Read Post »

ಕಥಾಗುಚ್ಛ

ಕಥಾಗುಚ್ಛ

ಜೀವನವೆಂದರೆ ಹೀಗೇನೆ ಟಿ.ಎಸ್.ಶ್ರವಣಕುಮಾರಿ ಪುಟ್ಟ ದೀಪೂಗೆ ಇವತ್ತು ಶಾಲೆಯಿಂದ ಬರುವಾಗಲೇ ಎರಡು ರೆಕ್ಕೆ ಹುಟ್ಟಿಕೊಂಡು ಬಿಟ್ಟಿತ್ತು. ಯಾವಾಗಲೂ ತನ್ನನ್ನು ಎರಡನೆಯ ಸ್ಥಾನಕ್ಕೆ ತಳ್ಳುತ್ತಿದ್ದ ಪುನೀತನನ್ನು ಅವನು ಎರಡನೆಯ ಸ್ಥಾನಕ್ಕೆ ಕಳಿಸಿ ತಾನು ಅವನ ಜಾಗದಲ್ಲಿ ಹೆಮ್ಮೆಯಿಂದ ನಿಂತಿದ್ದ. ಟೀಚರ್ ಮಾರ್ಕ್ಸ್ ಕಾರ್ಡ್ ಕೊಡೋವಾಗ ಪುನೀತನ ಮುಖ ನೋಡ್ಬೇಕಿತ್ತು. `ತಾನೇ ಫಸ್ಟ್ ಬರೋದು ಅನ್ನೋ ಜಂಭ… ಬೀಗ್ತಾ ಎಲ್ಲರ ಕಡೆ ನೋಡ್ತಾ ಇದ್ದ. ಆದರೆ ತನ್ನ ಹೆಸರು ಹೇಳಿದ ತಕ್ಷಣ ಅವನ ಮುಖ ಹೇಗಾಗಿ ಹೋಯಿತು…. ಹಾ! ಹಾ! ಹಾಗೇ ಆಗಬೇಕು ಅವನಿಗೆ. ಇನ್ನು ಯಾವತ್ತೂ ನಾನು ಈ ಜಾಗ ಬಿಟ್ಟು ಕೊಡಬಾರದು. ಅಪ್ಪ ಹೇಳಿದ್ದು ನಿಜ.. ಫಸ್ಟ್ ಬರೋದ್ರ ಖುಷೀನೇ ಬೇರೆ…. ಹೀಗೇ ಉತ್ಸಾಹದ ಕುದುರೆಯ ಬೆನ್ನೇರಿ ಗಾಳಿಯಲ್ಲಿ ತೇಲುತ್ತಾ ಬಂದಂತೆ ಮನೆಗೆ ಬಂದ. ಬಾಗಿಲ ಹತ್ತಿರ ಬರುತ್ತಿರುವಾಗಲೇ ಕೂಗಿಕೊಂಡ ಅಮ್ಮಾ ಇವತ್ತು ಏನು ಸ್ಪೆಷಲ್ ಹೇಳು ನೋಡೋಣ’’.ಏನು ಸ್ಪೆಷಲ್ಲೂ? ಯಾರ್ದಾ ದ್ರೂ ಹುಟ್ಟಿದ ಹಬ್ಬ ಇತ್ತಾ? ಕ್ಯಾಡ್ಬರೀಸ್ ಚಾಕಲೇಟ್ ಕೊಟ್ರಾ?’’ ಕೇಳಿದಳು ಸುಮಿತ್ರ. ಹೋಗಮ್ಮ ಅದಲ್ಲ. ಕೇಳಿದ್ರೆ ನೀನೇ ಕೊಡಿಸಲ್ವಾ ಚಾಕಲೇಟ್‌ನ. ಇನ್ನೂ ಬೇರೆ ಏನೋ ಬೇಗ ಹೇಳು’’. ಈಗ ಅವನ ಮುಖವನ್ನು ಸರಿಯಾಗಿ ಗಮನಿಸಿದಳು – ಕಣ್ಣು ಹೊಳೆಯುತ್ತಿದೆ, ಮುಖದಲ್ಲಿ ಸಂತೋಷವನ್ನು ಬಚ್ಚಿಡಲು ಅವನಿಂದ ಸಾಧ್ಯವೇ ಆಗುತ್ತಿಲ್ಲ… ಸರಿ ಹಾಗಾದ್ರೆ. ನೀನು ಯಾವುದೋ ಸ್ಪರ್ಧೇಲಿ ಬಹುಮಾನ ತೊಗೊಂಡಿದೀಯ.. ಎಷ್ಟನೇ ಬಹುಮಾನ’’ ಅವನ ಕೆನ್ನೆ ಹಿಂಡುತ್ತಾ ಕೇಳಿದಳು. ಉತ್ತರ ಅರ್ದ ಸರಿ ಅರ್ದ ಸರಿ ಅಲ್ಲ’’ ಅವನು ಜಾಣತನವಾಗಿ ನುಡಿದ.ಹಾಗಂದರೇನೋ’’ ಅರ್ಥವಾಗದವಳಂತೆ ಅವನ ಮುಖವನ್ನೇ ನೋಡಿದಳು. ಈಗ ಬಾಯ್ಬಿಟ್ಟ ಜಾಣ ಈ ಸಲ ನಾನೇ ಕ್ಲಾಸಿಗೆ ಫಸ್ಟ್ ಗೊತ್ತಾ. ಪುನೀತಂಗೆ ನನಗಿಂತ ಐದು ಮಾರ್ಕು ಕಮ್ಮಿ. ಅಪ್ಪ ಯಾವಾಗ್ಲೂ ಹೇಳ್ತಿದ್ರಲ್ಲಾ `ನೀನು ಫಸ್ಟ್ ಬಂದ್ರೇನೇ ನಾನು ಮಾರ್ಕ್ಸ್ ಕಾರ್ಡ್ಗೆ ಸೈನ್ ಮಾಡೋದು. ಇಲ್ದೇ ಇದ್ರೆ ಅಮ್ಮನ ಕೈಲೇ ಮಾಡಿಸ್ಕೊಂಡು ಹೋಗೂಂತ. ಈ ಸಲ ನೋಡು ನಾನು ಅವರ ಕೈಲೇ ಹಾಕಿಸ್ಕೊಂಡು ಹೋಗ್ತೀನಿ. ಇಲ್ನೋಡು’’ ಏನೋ ರಾಜ್ಯ ಗೆದ್ದು ಬಂದವರ ಹೆಮ್ಮೆಯಿಂದ ಬ್ಯಾಗಿನಿಂದ ಹುಷಾರಾಗಿ ಮಾರ್ಕ್ಸ್ ಕಾರ್ಡನ್ನು ತೆಗೆದು ಅಮ್ಮನಿಗೆ ತೋರಿಸುತ್ತಾ ಫಸ್ಟ್ ಎಂದು ಬರೆದಿದ್ದರ ಮೇಲೆ ಮುದ್ದಾಗಿ ಬೆರಳಿಡುತ್ತಾ ಹೇಳಿದ.ಆಯ್ತಾಯ್ತು. ಈಗ ಷೂ ಬಿಚ್ಚಿ, ಯೂನಿಫಾರಂ ಬದಲಾಯಿಸಿಕೊಂಡು ಕೈಕಾಲು ತೊಳೆದುಕೊಂಡು ಬಾ. ತಿಂಡಿ ತಿಂದು ಹಾಲು ಕುಡೀವಂತೆ. ಅಪ್ಪನಿಗೂ ಇವತ್ತು ತುಂಬಾ ಖುಷಿಯಾಗತ್ತೆ’’ ಎನ್ನುತ್ತಾ ಅವನ ಬ್ಯಾಗನ್ನು ತೆಗೆದುಕೊಂಡು ಒಳಗೆ ಹೋದಳು. ತಿಂಡಿ ತಿನ್ನುವಾಗಲೂ ಅವನಿನ್ನೂ ತನ್ನ ಸಾಧನೆಯ ಗುಂಗಿನಿಂದ ಹೊರಗೆ ಬಂದಿರಲಿಲ್ಲ. ಅಮ್ಮ…, ಅಪ್ಪನಿಗೆ ಇವತ್ತು ತುಂಬಾ ಖುಷಿಯಾಗತ್ತೆ ಅಲ್ವಾ? ನನ್ನ ಅವರ ತೊಡೆ ಮೇಲೆ ಕೂರಿಸಿಕೊಂಡು ಮುದ್ದು ಮಾಡ್ತಾರೆ. ನಾನು ಅವರ ಹತ್ರ ಒಂದು ಟೆಂಪ್ಟೇಷನ್ ಚಾಕೊಲೇಟ್ ತೆಗೆಸಿಕೊಳ್ಳುತ್ತೀನಿ. ಖಂಡಿತಾ ಕೊಡಿಸ್ತಾರೆ ಅಲ್ವಾ’’ ಅವನ ಮಾತಿನ ಪ್ರವಾಹ ನಿಲ್ಲುತ್ತಲೇ ಇಲ್ಲ.ಹ್ಞೂಂ. ಸರಿ. ಅವರು ಬಂದ ಮೇಲೆ ಖಂಡಿತಾ ಕೊಡಿಸ್ತಾರೆ. ಈಗ ನಿನ್ನ ಫ್ರೆಂಡ್ಸ್ ಕಾಯ್ತಿರ್ತಾ ರೆ. ಆಟ ಆಡಕ್ಕೆ ಹೋಗು’’ ಎಂದಳು. ಅಪ್ಪನ ಹತ್ತಿರಾ ಏನೋ ಚಾಕೊಲೇಟ್ ಕೊಡಿಸ್ಕೋತೀನಿ. ನೀನು ನಂಗೆ ಏನು ಮಾಡ್ಕೊಡ್ತೀಯ’’ಹೇಳು ಏನು ಮಾಡ್ಕೊಡ್ಲಿ?’’ ಜಾಮೂನು ಮಾಡ್ತೀಯಾ? ರಾತ್ರಿ ಊಟದ ಜೊತೆ ತಿನ್ನೋಣ’’ಆಯ್ತು ಹಾಗೇ ಮಾಡೋಣ’’ ಇನ್ನೂ ಅವನ ಉತ್ಸಾಹ ಕಮ್ಮಿಯಾಗಿಲ್ಲ ನೋಡು ನಾನೇನ್ಮಾಡ್ತೀನಿ ಗೊತ್ತಾ. ಪ್ರತಿಸಲದ ಹಾಗೆ ಸುಮ್ಮನೆ ಮಾರ್ಕ್ಸ್ ಕಾರ್ಡ್ ಇಟ್ಟುಕೊಂಡು ನಿಂತರ್ತೀ್ನಿ. ಅಪ್ಪ `ಮತ್ತೆ ಅದೇ ತಾನೇ ನಾನು ಸೈನ್ ಮಾಡಲ್ಲ ಹೋಗು; ಅಮ್ಮನ ಹತ್ರ ಮಾಡಿಸ್ಕೋ’ ಅಂತಾರೆ. ಆಗ ನೀನು ಹೇಳ್ಬೇಕು. ಇಲ್ಲಾ ಈಸಲ ಫಸ್ಟ್ ಬಂದಿದಾನೇಂತ. ಆಗ ಅವರಿಗೆ ಎಷ್ಟು ಖುಷಿಯಾಗತ್ತೆ…’’ ಅವನು ರಂಗ ಸಜ್ಜಿಕೆಯನ್ನು ಮಾಡತೊಡಗಿದ.ಹಾಗೇ ಆಗ್ಲಿ. ಈಗ ಆಡಕ್ಕೆ ಹೋಗು. ನಾನೂ ಜಾಮೂನು ಮಾಡಿ ಇಡ್ತೀನಿ. ಫ್ರೆಂಡ್ಸ್ ಕಾಯ್ತಿದಾರೆ’’ ಎನ್ನುತ್ತಾ ಅವನನ್ನು ಕಳಿಸಿ ಜಾಮೂನು ಮಾಡಲು ಒಳಗೆ ಹೋದಳು. ದೀಪು ಇವತ್ತು ಎಷ್ಟು ಖುಷಿಯಾಗಿದಾನೆ. ಸಧ್ಯ ಅವರಪ್ಪನಿಗೆ ಇವತ್ತಾದರೂ ಸಮಾಧಾನವಾಗತ್ತೆ. ಪ್ರತಿಸಲ ಇವನು ಮಾರ್ಕ್ಸ್ ಕಾರ್ಡ್ ತಂದಾಗಲೂ ಇವರದ್ದು ಒಂದೇ ತಕರಾರು. “ಇನ್ನೂ ಒಂದು ನಾಲ್ಕೈದು ಮಾರ್ಕ್ ಹೆಚ್ಚಿಗೆ ತೊಗೊಳ್ಳೋಕೆ ಏನು ಧಾಡಿ. ಏನು ಕಮ್ಮಿ ಮಾಡಿದೀವಿ ನಿಂಗೆ. ಶ್ರದ್ಧೆಯಿಂದ ನೀನು ಓದಿದ್ರೆ ಬರಲೇಬೇಕು. ನೀನು ಶುದ್ಧ ಸೋಂಭೇರಿ. ಹೀಗೇ ಓದ್ತಾ ಇದ್ರೆ ನೀನು ಖಂಡಿತಾ ಉದ್ಧಾರ ಆಗಲ್ಲ…. ನಾನು ಮಾತ್ರ ಇದಕ್ಕೆ ಸೈನ್ ಮಾಡಲ್ಲ. ನೀನು ಯಾವತ್ತು ಕ್ಲಾಸಿಗೆ ಫಸ್ಟ್ ಬರ್ತೀ ಯೋ ಆ ಮಾರ್ಕ್ಸ್ ಕಾರ್ಡ್ಗೇ ನಾನು ಸೈನ್ ಹಾಕೋದು. ಅಲ್ಲಿಯವರೆಗೆ ನಿಮ್ಮಮ್ಮನ ಹತ್ರಾನೇ ಹಾಕಿಸ್ಕೊಂಡು ಹೋಗು’’ ರಾಮ ರಾಮಾ ಅವರ ಕೋಪ ಬೇಗ ತಣ್ಣಗಾಗುತ್ತಲೇ ಇರಲಿಲ್ಲ. ಅವರ ಸಿಟ್ಟಿಗೆ ಇನ್ನೊಂದು ಕಾರಣ ಕ್ಲಾಸಿಗೆ ಫಸ್ಟ್ ಬರುತ್ತಿದ್ದ ಪುನೀತನ ಅಪ್ಪ ದುರಾದೃಷ್ಟವಶಾತ್ ಆಫೀಸಿನಲ್ಲಿ ಇವರ ಕೈಕೆಳಗಿನ ನೌಕರ. ಅವನ ಮುಂದೆ ತನ್ನ ಪ್ರತಿಷ್ಠೆಗೆ ಕುಂದೆಂಬ ಭಾವ ಬೇರೆ. ಅವನಾದರೂ ಸುಮ್ಮನಿರಬಾರದೆ. ಪ್ರತಿಸಲವೂ `ಮಾರ್ಕ್ಸ್ ಕಾರ್ಡ್ ನೋಡಿದ್ರಾ ಸಾರ್’ ಅಂತ ಸಹಜವಾಗೋ, ವ್ಯಂಗ್ಯವಾಗೋ ಅಂತೂ ಕೇಳುತ್ತಾನೆ. ಇವರಿಗೆ ಮೈಯೆಲ್ಲಾ ಉರಿದುಹೋಗುತ್ತೆ. ಮನೆಗೆ ಬಂದ ಮೇಲೆ ಅದರ ಮೊದಲ ಪರಿಣಾಮ ಅವನ ಮೇಲೆ; ಆಮೇಲೆ ನನ್ನ ಮೇಲೆ. “ನಿನ್ನ ಮುದ್ದಿಂದಾನೇ ಅವ್ನು ಹಾಳಾಗಿ ಹೋಗ್ತಿರೋದು. ನೀನು ಅವನಿಗೆ ಶಿಸ್ತು, ಶ್ರದ್ಧೆ ಕಲಿಸಲ್ಲ. ನೀನೇ ಅವನ ಮೊದಲ ಹಿತಶತ್ರು…’’ ಹೀಗೆಲ್ಲಾ ಆಪಾದನೆ. ಎಷ್ಟೋ ಸಲ ಹೇಳಿದ್ದೇನೆ ಅವನ ವಯಸ್ಸೆಷ್ಟು? ಅವನಿಗೆ ಎಷ್ಟು ಸಾಧ್ಯವೋ ಅಷ್ಟು ಓದುತ್ತಾನೆ. ಅವನ ಮೇಲೆ ಯಾವುದನ್ನೂ ಅಷ್ಟೊಂದು ಬಲವಂತವಾಗಿ ಹೇರಬೇಡಿ. ಅವನೇನೂ ಫೇಲಾಗುತ್ತಿಲ್ಲವಲ್ಲ. ಸೆಕೆಂಡ್ ಬರುವುದೂ ಅಷ್ಟೊಂದು ಸುಲುಭವೇನಲ್ಲ. ಅಲ್ಲದೆ ಇಷ್ಟು ಚಿಕ್ಕ ಮಕ್ಕಳಲ್ಲಿ ಅಷ್ಟೊಂದು ಸ್ಪರ್ಧಾ ಮನೋಭಾವ ಬೆಳೆಸುವುದು ಒಳ್ಳೆಯದಲ್ಲ’’ ಈ ಮಾತುಗಳನ್ನು ದೀಪು ಎದುರಿನಲ್ಲಿ ಇಲ್ಲದಾಗ ಪ್ರತಿಸಲವೆನ್ನುವಂತೆ ಹೇಳಿದ್ದೇನೆ. ಅವರಿಗೆ ಇಂತಹ ಮಾತುಗಳನ್ನು ಕೇಳಿದಾಗ ಇನ್ನೂ ಅಷ್ಟು ಕೋಪ ಜಾಸ್ತಿಯಾಗುತ್ತದೆ.ನೀನು ಈ ಮನೋಭಾವ ಇಟ್ಟುಕೊಂಡು ಬೆಳೆಸ್ತಾ ಇರೋದ್ರಿಂದಲೇ ಅವನು ಮೇಲೆ ಬರ್ತಾ ಇಲ್ಲ. ನೀನೇ ಅವನ ಓದಿಗೆ ಮೊದಲ ಶತ್ರು. ಪುನೀತನಿಗೆ ಸಾಧ್ಯವಾಗೋದು ಇವನಿಗ್ಯಾಕೆ ಆಗ್ತಿಲ್ಲ? ಅಲ್ಲಿಯವರೆಗೆ ಹೋದವನು ಒಂದು ನಾಲ್ಕೈದು ಮಾರ್ಕಿನಲ್ಲಿ ಎಡವುತ್ತಾನೆಂದರೆ ಅವನಲ್ಲಿ ಮುಂದೆ ಬರಬೇಕೆಂಬ ಹಟವಿಲ್ಲ. ಅಥವಾ ಅದನ್ನು ಪಡೆದುಕೊಳ್ಳುವ ನೈಪುಣ್ಯತೆ, ಚಾಕಚಕ್ಯತೆ, ಛಲ ಇಲ್ಲ. ಈಗಿನಿಂದ ಅದನ್ನು ಸರಿಪಡಿಸಿಕೊಳ್ಳದೇ ಹೋದರೆ, ಜೀವನದಲ್ಲಿ ಹೇಗೆ ಮುಂದೆ ಬರ್ತಾನೆ?’’ ಅವರು ಹೇಳುವುದೇನೋ ಸರಿ. ಆದರೆ ಇವನು ಇನ್ನೂ ಚಿಕ್ಕವನು ಎನ್ನುವ ಭಾವನೆ ನನ್ನಲ್ಲಿ. ತಂದೆಯಾಗಿ ನನ್ನ ಮಗ ಮುಂದಿರಬೇಕೆಂದು ನನಗೆ ಆಸೆ ಇರೋಲ್ವೆ ಎನ್ನುವ ಧೋರಣೆ ಇವರಲ್ಲಿ. ಸರಿ ಎಷ್ಟು ಮಾತಾಡಿದರೂ ಇದು ಮುಗಿಯದ ಚರ್ಚೆ ಎನ್ನುವುದು ನನಗರ್ಥವಾಗಿ ಹೋಗಿದೆ. ಆದರೂ ಪ್ರತಿಸಲ ಅವನ ಮಾರ್ಕ್ಸ್ ಕಾರ್ಡ್ ಬಂದಾಗ ಇದರ ಪುನರಾವರ್ತನೆಯೇ. ಸಧ್ಯ ಈಸಲ ಅದಕ್ಕೆ ಅವಕಾಶವಿಲ್ಲವಲ್ಲ ದೇವರೇ ಎಂದುಕೊಳ್ಳುತ್ತಾ ಸುಮಿತ್ರ ಮನದಲ್ಲಿಯೇ ದೇವರಿಗೆ ಕೈಮುಗಿದು ಜಾಮೂನನ್ನು ಮಾಡತೊಡಗಿದಳು. ಅಮ್ಮ ಅಪ್ಪ ಇನ್ನೂ ಬರಲಿಲ್ವಾ’’ ಆರೂವರೆಗೆ ಎರಡೆರಡು ಮೆಟ್ಟಿಲನ್ನು ಒಟ್ಟೊಟ್ಟಿಗೆ ಹಾರುತ್ತಾ ಬಂದ ದೀಪು ಕೇಳಿದ.ಇಷ್ಟು ಬೇಗ ಯಾವತ್ತು ಬಂದರ್ತಾನರೆ. ಅವರು ಬರೋದು ಏಳೂವರೆಯಾಗುತ್ತೆ. ಅಲ್ಲಿಯವರೆಗೆ ಕೈಕಾಲು ಮುಖ ತೊಳೆದುಕೊಂಡು ದೇವರಿಗೆ ನಮಸ್ಕಾರ ಮಾಡಿ ಓದ್ತಾ ಕೂತುಕೋ ಹೋಗು’’ ಎನ್ನುತ್ತಾ ಕೈಲಿದ್ದ ಕೆಲಸವನ್ನು ಮುಂದುವರಿಸಿದಳು. `ಇವತ್ತು ಒಂದರ್ಧ ಘಂಟೆ ಕಂಪ್ಯೂಟರ್ ಆಡ್ಕೋತೀನಿ. ಅಪ್ಪ ಹೇಳಿದ್ರಲ್ವಾ ಕ್ಲಾಸಿಗೆ ಫಸ್ಟ್ ಬಂದ್ರೆ ಆಮೇಲೆ ಕಂಪ್ಯೂಟರಿನಲ್ಲಿ ಆಡಕ್ಕೆ ಬಿಡ್ತೀನಿ ಅಂತ. ಇವತ್ತು ಬಂದಿದೀನಲ್ಲ’’ ಆಸೆಯ ಕಂಗಳಿಂದ ನೋಡಿದ. ಅವನ ಮಾತು ಕೇಳಿ ನಗು ಬಂತುಸರಿ ಆಡ್ಕೋ ಹೋಗು ತುಂಬಾ ಹೊತ್ತು ಬೇಡ. ಒಂದರ್ಧ ಘಂಟೆ ಆಡಿ ಆಮೇಲೆ ಓದ್ಕೋ ಬೇಕು’ ಎನ್ನುತ್ತಾ ಪಾಸ್ ವರ್ಡ್ ಹಾಕಿ ಬಂದಳು. `ಸರಿ ಸರಿ’ ಅನ್ನುತ್ತಾ ಅವನು ಆಡಲು ಶುರುಮಾಡಿ ಅದರಲ್ಲೇ ಮುಳುಗಿ ಹೋದ. ಸುಮಿತ್ರೆಯೂ ಅಡುಗೆಮನೆಯ ಕೆಲಸದಲ್ಲೇ ಮಗ್ನಳಾಗಿ ಹೋದಳು. ಕಾಲಿಂಗ್ ಬೆಲ್ ಸದ್ದಿನಿಂದಲೇ ಅದು ರಮೇಶನದೆಂದು ಅರ್ಥವಾಗಿ ಹೋಯಿತು ಸುಮಿತ್ರೆಗೆ. ಓ! ಆಗಲೇ ಕತ್ತಲಾಗಿ ಹೋಗಿದೆ ಅಂದುಕೊಂಡು ಪಡಸಾಲೆ, ವರಾಂಡದ ದೀಪವನ್ನು ಹಾಕಿ ಬಾಗಿಲು ತೆರೆದಳು. ಬರುವಾಗಲೇ `ಎಲ್ಲಿ ಅವನು? ಏನ್ಮಾಡ್ತಾ ಇದಾನೆ?’ ಬುಸುಗುಡುತ್ತಲೇ ಬಂದ ರಮೇಶ. ಅಪ್ಪನ ದನಿ ಕೇಳುತ್ತಲೇ ಬ್ಯಾಗಿನಿಂದ ಮಾರ್ಕ್ಸ್ ಕಾರ್ಡ್ ತೆಗೆದುಕೊಂಡು ದೀಪು ಹೊರಗೆಬಂದ. ಅಷ್ಟರಲ್ಲಿ ಅವನು ಕಂಪ್ಯೂಟರ್‌ನಲ್ಲಿ ಆಡ್ತಾ ಇದಾನೆ’’ ಸುಮಿತ್ರೆ ಮೆತ್ತಗೆ ಹೇಳುತ್ತಿದ್ದಳು. ಅವನ ಕೋಪಕ್ಕೆ ಇನ್ನಷ್ಟು ತುಪ್ಪ ಸುರಿದಂತಾಯಿತು.ಯಾರವನಿಗೆ ಕಂಪ್ಯೂಟರ್ ಪಾಸ್ ವರ್ಡ್ ಹಾಕಿ ಕೊಟ್ಟೋರು. ಒಂದು ಶಿಸ್ತು ಇಲ್ಲ, ಶ್ರದ್ಧೆ ಇಲ್ಲ. ಯಾವಾಗ ನೋಡಿದರೂ ಆಟ, ಆಟ, ಆಟ. ನೀನೂ ಅವನಿಗೆ ತಕ್ಕ ಹಾಗೆ ಕುಣೀತೀಯಾ.’’ ಕಿರುಚಿದ ಸಿಟ್ಟಿನಿಂದ. ದೀಪುವಿಗೆ ಹಿಂದೆ ಮುಂದೆ ಅರ್ಥವಾಗದೇ ಬೆಪ್ಪಾಗಿ ನಿಂತಿದ್ದ. ಅವನನ್ನು ನೋಡುತ್ತಲೇ ಮತ್ತಷ್ಟು ಕೆರಳಿದ ರಮೇಶ ಬೆನ್ನಿಗೊಂದು ಗುದ್ದಿದ. ಎಷ್ಟು ಸಲ ಹೇಳಿದೀನಿ ನಿಂಗೆ. ಸಾಯಂಕಾಲ ಏಳು ಘಂಟೆ ಆಗತ್ಲೂವೆ ಮನೆ ಮುಂದಿನ ದೀಪ ಹಾಕಬೇಕು. ನಾನು ಬರುವ ಹೊತ್ತಿಗೆ ಓದ್ತಾ ಕೂತಿರಬೇಕು ಅಂತ. ನೀನೇನ್ಮಾಡಿದೀಯ. ಆಟ ಆಡಿಕೊಂಡು ಬಂದು ಬ್ಯಾಟು ಬಾಲನ್ನು ಎಸೆದಿದೀಯ. ವರಾಂಡ ತುಂಬ ಬೂಟಿನ ಮಣ್ಣು… ಹಾಕಿದೀಯ ದೀಪ ಇವತ್ತು? ಹೇಳಿದ ಮಾತಿಗೆ ಒಂದಿಷ್ಟಾದರೂ ಬೆಲೆಯಿದೆಯಾ? ಜೀವನದಲ್ಲಿ ಶ್ರದ್ಧೆ ಇರಬೇಕು, ಶಿಸ್ತು ಇರಬೇಕು. ಇಲ್ದಿದ್ರೆ ಹಾಳಾಗಿ ಹೋಗ್ತೀಯ. ನಮ್ಮ ನಮ್ಮ ಕೆಲಸಾನ ಅಚ್ಚುಕಟ್ಟಾಗಿ ಮಾಡಿಕೊಂಡ್ರೆ ಮಾತ್ರ ಜೀವನದಲ್ಲಿ ಮುಂದೆ ಬರೋಕೆ ಸಾಧ್ಯ. ಇಲ್ದಿದ್ರೆ ಎಲ್ಲಾದರೂ ತಾಪೇದಾರಿ ಮಾಡ್ಕೊಂಡು ಜೀವನ ಮಾಡ್ಬೇಕು…’’ ಅವನ ಮಾತನ್ನು ತಡೆಯುತ್ತಾ ಸುಮಿತ್ರ ಹೇಳಿದಳುಸ್ವಲ್ಪ ಇಲ್ಲಿ ಕೇಳಿ ಇವತ್ತು ಏನಾಯ್ತೂಂದ್ರೆ….’’ ನೀನು ಬಾಯ್ಮುಚ್ಚು. ನಿನ್ನಿಂದಾನೇ ಅವನು ಕೆಟ್ಟು ಕುಲಗೆಟ್ಟು ಕೆರ ಹಿಡಿದು ಹೋಗಿರೋದು. ನಿನ್ನ ಪ್ರತಿಯೊಂದು ತಪ್ಪಿಗೂ ನಿನ್ನ ಹತ್ರ ಒಂದೊಂದು ಕಾರಣ ಇರತ್ತೆ; ಹಾಗೇ ಅವನ ತಪ್ಪಿಗೂ. ತಪ್ಪಿಗೆ ಕಾರಣ ಕೊಡೋದನ್ನ ಅವನಿಗೆ ಕಲಿಸಬೇಡ. ಅದನ್ನ ತಿದ್ದುಕೊಂಡು ಮುಂದೆ ಬರೋದಕ್ಕೆ ಅವನಿಗೆ ಅವಕಾಶ ಕೊಡು. ಮೊದಲು ನೀನು ಶಿಸ್ತು ಕಲಿ. ಆಗ ನಿನ್ನ ಮಗ ತಾನೇ ಕಲೀತಾನೆ.’’ಹಾಗಲ್ಲ ನಾನು ಹೇಳೋ ಒಂದು ಮಾತನ್ನ ನೀವು ಕೇಳಿ. ಅಮೇಲೆ ಕೂಗಾಡ್ತೀರಂತೆ’’ ಅವನಿಗೆ ಇನ್ನಷ್ಟು ರೇಗಿ ಹೋಯಿತು. “ಏನು? ಏನದು ಅಂತ ಮಾತು. ನಾನು ಎಷ್ಟು ಸಲ ನಿಂಗೆ ಹೇಳಿಲ್ಲ. ಅವನು ಕ್ಲಾಸಿನಲ್ಲಿ ಫಸ್ಟ್ ಬರೋತಂಕ ಕಂಪ್ಯೂಟರ್ ಮುಟ್ಟಕೂಡದು ಅಂತ. ನೀನು ಯಾಕೆ ಅವನಿಗೆ ಆಡಕ್ಕೆ ಹಾಕಿಕೊಟ್ಟಿದ್ದು? ತಾಯಿ, ಮಗ ಇಬ್ಬರೂ ಒಂದೇ. ನಿಮ್ಮಿಬ್ಬರ ದೃಷ್ಠೀಲಿ ನಾನೊಬ್ಬ ವಿಲನ್. ಈಗ ನಿಮಗೆ ನಾನು ಹೇಳೋದು ಅರ್ಥ ಆಗಲ್ಲ. ಬೈಯೋವ್ರು ಒಳಿತಿಗೆ ಬೈತಾರೆ ಅಂತ’’. ಸಿಡಿಮಿಡಿಗುಟ್ಟುತ್ತಲೇ ಬಟ್ಟೆ ಬದಲಾಯಿಸಲು ರೂಮಿಗೆ ಹೋದ ಮಾತನ್ನು ಅಲ್ಲಿಗೆ ಮುಗಿಸುವಂತೆ. ದೀಪೂ ಆಡಬೇಕೆಂದಿದ್ದ ನಾಟಕ ನಿಜರೂಪದಲ್ಲೇ ನಡೆದು ಹೋಗಿತ್ತು. ಆದರೆ ಅಂತ್ಯ ಮಾತ್ರ ಬದಲಾಗಿತ್ತು. ಬೆನ್ನಿಗೆ ಗುದ್ದಿದಾಗ ಕೈಯಲ್ಲಿದ್ದ ಮಾರ್ಕ್ಸ್ ಕಾರ್ಡ್ ಮೂಲೆಗೆ ಹೋಗಿ ಬಿದ್ದಿತ್ತು. ಕಟ್ಟಿಕೊಂಡಿದ್ದ ರೆಕ್ಕೆಗಳು ಅವನ ಕಣ್ಣ ಮುಂದೆಯೇ ಮುರಿದು ಬಿದ್ದಿದ್ದವು.

ಕಥಾಗುಚ್ಛ Read Post »

You cannot copy content of this page

Scroll to Top