ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಲಹರಿ

ಒಲವಿನೋಲೆ..

ಒಲವಿನೋಲೆ.. ಜಯಶ್ರೀ.ಭ. ಭಂಡಾರಿ ಓ ಒಲವೇ ನೀ ಎಲ್ಲಿರುವೆ…. ನೀ ನನ್ನ ಹುಡುಕಿಕೊಂಡು ಬಂದು ಆಗಲೇ ೨ ವರ್ಷ ಕಳೆಯಿತು. ನೀ ಬಂದಾಗ ನನಗೆ ನಿನ್ನ ಮೇಲೆ ಅದ್ಯಾವ ಭಾವನೆ ಗಳೇ ಇರಲಿಲ್ಲ. ಈಗ ನಾನು ಈ ಭೂಮಂಡಲಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ.  ಪ್ರತಿಕ್ಷಣ ನಿನ್ನ ಬಿಟ್ಟರೆ ಹರಿದಾಡುವ ಗಾಳಿಗೂ ಜಾಗವಿಲ್ಲ. ನನ್ನ ಬಾಳಿನ ಕಗ್ಗತ್ತಲು ಬೆಳಗಲು ನೀನೇ ಬೇಕು. ಅತಿಯಾದ ಪ್ರೀತಿಯಲ್ಲಿ ನನ್ನ ನಾ ಮರೆತಿಹೆ.ನೀನಿಲ್ಲದ ಹೊತ್ತು ನೆನೆಯಲು ಸಾಧ್ಯವಿಲ್ಲ. ನಿನ್ನಲ್ಲಿ ಒಂದು ಕೆಟ್ಟ ಹಾಬಿ ಇದೆ.ಡ್ಯೂಟಿಯಲಿ ನಿರತನಾದರೆ ನನ್ನ ಮರೆತು ತನ್ಮಯನಾಗಿ ಬಿಡತಿ. ಅನೇಕ ಸಲ ಫೋನಾಯಿಸಿದರೂ ರಿಸಿವ್ ಮಾಡಲ್ಲ.  ನಾನು ಸಿಟ್ಟಿನಿಂದ ಮುಖ ಉಬ್ಬಿಸಿ ಕೂತರೆ ಸಂಜೆ ನೇರ ಬಂದವನೇ ಕೊರಳಿಗೆ ಬೆರಳಹಾರ ಹಾಕಿ ಕೆನ್ನೆ ಚುಂಬಿಸಿ  ನಿನ್ನ ಬೆವರು ಘಮಲಿನಲ್ಲಿ ಮೀಯಿಸಿ ಬುಟ್ಟಿಗೆ ಹಾಕಿಕೊಳ್ಳುವ ಕಲೆ ಕರಗತವಾಗಿದೆ. ಹೀಗಾಗಿ ನನ್ನ‌ ಸಿಟ್ಟು ಗಾಳಿಗಿಟ್ಪ ದೀಪದಂತೆ ಆಗುತ್ತದೆ. ಅಪ್ಪಾಜಿ ಪ್ಲೀಜ್ ಕ್ಷಮಿಸು ಅಂತ ನನ್ನ ಮುದ್ದು ಮಾಡುವಾಗ ನನಗೆ ಸಿಟ್ಟಿನಲ್ಲಿಯೇ ಒಲವು ಹೆಚ್ಚು ಲವಲವಿಕೆ ನೀಡುತ್ತದೆ. ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕದ ಚೆಲುವೆ ಎಂದು ರಾಗವಾಗಿ ಹಾಡುವ ನಿನ್ನ ದನಿಗೆ ಸೋತು ಶರಣಾಗಿ ಬಿಡುವೆ.      ನನಗೆ ಕೊಂಚ ಆರಾಮ ತಪ್ಪಿದರೂ ನಿನ್ನ ಜೀವ ಬಾಡಿ ಬಸವಳಿಯುತ್ತೆ.   ಅತಿಯಾದ ಕಾಳಜಿ ಮಾಡಿ ನನ್ನ ಆರಾಮ ಮಾಡುವೆ.  ಕಣ್ಣ ರೆಪ್ಪೆಯಂತೆ ಕಾಯುವ ನಿನ್ನ ಹೃದಯ ಅನುರಾಗಕೆ ಬಣ್ಣಿಸಲು ಪದಗಳೇ ಇಲ್ಲ ಗೆಳೆಯ. ಟೆಲಿಫೋನ್ ಗೆಳತಿ ನೀನಿಲ್ಲದೆ ಇರಲಾರೆ ಎಂದು ಛೇಡಿಸಿ ಕಾಡುವ ನೀ ಹಿಂಗ ಅಚಾನಕ್  ದೂರಾಗಿ ಹೋಗತಿ ಅಂದುಕೊಂಡಿರಲಿಲ್ಲ ಗೆಳೆಯಾ.. . ಯಾಕೆ ‌ದೂರಾದೆ ಏನಾಯ್ತು ನಿನ್ನ  ಒಲವು. ಬೊಗಸೆ ಕಂಗಳ ನಿನ್ನ ಗೆಳತಿಯನ್ನು ಮರೆಯಲು ನಾ ಮಾಡಿದ ತಪ್ಪಾದರೂ ಏನು? ನೀನಿಲ್ಲದೆ ಅರೆ ಜೀವವಾಗಿರುವೆ. ಚಂದ್ರನ ತಂಪು ಬಿಸಿಲಾಗಿದೆ.ಸುಳಿಯುವ  ಗಾಳಿಯಲೂ ನಿನ್ನನೇ ಹುಡುಕುವಂತಾಗಿದೆ. ನೀನಿಲ್ಲದೆ ಈ ಜನ್ಮದಲ್ಲಿ ನನಗೆ ಬದುಕುವ ಆಸೆಯಿಲ್ಲ. ನಿನ್ನ ಸಾನ್ನಿಧ್ಯ, ಆಲಿಂಗನ, ಬಿಸಿಯುಸಿರು ಆ ಮಿಂಚು ಕಂಗಳಲ್ಲಿ ವ್ಯಕ್ತವಾಗುವ ಮಾತು ಗಳಿಗೆ ಮೀರಿದ ಭಾವನೆಗಳನ್ನು ಹೆಂಗೆ ಮರೆಯಲಿ ದೇವರಂಥ ಗೆಳೆಯಾ… ವರ್ಷ ದ ಮೂರೂ ಕಾಲಗಳಲ್ಲಿಯೂ ಧೋ ….. ಎಂದು ಒಲವಿನ ಮಳೆ ಸುರಿಸುತ್ತಿದ್ದರೆ  ಈ ನಿನ್ನ ಗೆಳತಿ ಪುನೀತಳಾಗಿ ಅರಳುತ್ತಿದ್ದಳು. ಪ್ರೀತಿಯ ಅಮೃತಧಾರೆ ಉಣಿ‌ಸಿ ದೂರ ಹೋದೆ. ನೀ ಬರುವ ದಾರಿಯಲಿ ಕಂಗಳ ಹಾಸಿ ಕಾಯುತಿರುವ…..  ನಿನ್ನ ಕಪ್ಪು ಕಂಗಳ ಚೆಲುವೆ… ****************************************

ಒಲವಿನೋಲೆ.. Read Post »

ಆರೋಗ್ಯ, ಇತರೆ

ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಅನುಭವ ಆರೋಗ್ಯದ ಬಗ್ಗೆ ಕಾಳಜಿ ಇರಲಿ ಚಂದ್ರಮತಿ ಅದೊಂದು ಸಂಜೆ ! ಸಹಿಸಲಾರದ ವೇದನೆ ಆತಂಕ .ಬಲಹೀನ ತೋಳುಗಳು . ಏನಾಯ್ತು , ಹೇಗಾಯ್ತು ಮುಂದೆ ನಾನು  ಕೆಲಸ ಮಾಡೋದು ಹೇಗೆ  ಎಂದೆಲ್ಲ ಯೋಚಿಸ್ತಾ ಸಮಯ ವ್ಯರ್ಥಮಾಡಿ ಸಹಿಸಿಕೊಳ್ಳಲು ಅಸಾಧ್ಯ ವಾದಾಗ ಮೊರೆ ಹೋಗಿದ್ದು ಗೂಗಲ್ ಮಹಾಶಯನನ್ನು . ಅವನ ಸಲಹೆಯಂತೆ ಮನೆಯ ಸನಿಹದಲ್ಲೇ ಇರುವ ರೂಪೇಶ್ ಆರ್ಥೋಪೆಡಿಕ್ ಸೆಂಟರ್ಗೆ ಬೇಟಿ ಕೊಟ್ಟಾಗ ಅಲ್ಲಿಯ ಡಾ. ರೂಪೇಶ್ ಅವರು ಸರಳ ಮಾತು ಹಾಗೂ ಸೌಜನ್ಯತೆಯಿಂದ ಸರಿಯಾದ ಚಿಕಿತ್ಸೆ ಮಾಡಿಸ್ಕೊಂಡರೆ ಸರಿ ಹೋಗ್ತೀರ . ಚಿಂತೆ ಭಯವನ್ನೆಲ್ಲಾ ಬಿಟ್ಟು ಪಿಸಿಯೋತೆರಪಿ  ಹತ್ತು ಸೆಶನ್ ಮಾಡಿಸಿಕೊಳ್ಳಿ ಎಂದು ಧೈರ್ಯ ತುಂಬಿದಂತಹ ಪ್ರಾಮಾಣಿಕ ವೈದ್ಯರು. ಎಷ್ಟು ವಯಸ್ಸು ? ವಾವ್ ಹಾಗೆ ಕಾಣಸೋದೇ ಇಲ್ಲ ಎಷ್ಟು ಯಂಗ್ ಕಾಣ್ತಿದೀರ ಅದು ನಿಮಗೆ ಗೊತ್ತೇ ? ಅಂತ ಪ್ರೀತಿಯಿಂದ ಕೇಳಿದಾಗ ಮನಸ್ಸಿನಲ್ಲೇ ನಕ್ಕು  ‘ ರೋಗಿ ಬಯಸಿದ್ದು ಹಾಲು ಅನ್ನ ಡಾಕ್ಟರ್ ಕೇಳಿದ್ದು ಹಾಲು ಅನ್ನ ‘  ಅನ್ನೋ ಹಾಗೆ ಮೊದಲೇ ಸ್ವಲ್ಪ ಮಟ್ಟಿಗೆ ಆರೋಗ್ಯ ದ ಕಾಳಜಿ ಹಾಗೂ ಸೌಂದರ್ಯ ಪ್ರಜ್ಞೆ ಇರುವ ಹಾಗೂ ಅರ್ಧ ಶತಕ ಬಾರಿಸಿದ ನನಗೆ ಆ ನೋವಿನಲ್ಲೂ ಅವರ ಮಾತು ಹಿತವೆನಿಸಿ ಇದಕ್ಕಿಂತ ಹೆಚ್ಚು ರೋಗಿಗೆ ಇನ್ನೇನು ಬೇಕು ಅಂದುಕೊಂಡು ಹೌದಾ ! ಎಂದು ಅಚ್ಚರಿ ತೋರಿಸಿ ಧನ್ಯವಾದಗಳನ್ನು ತಿಳಿಸಿದೆ. ಮೃದು ಮಾತು ನಡತೆಯಿಂದಲೇ ಅರ್ಧ ನೋವು  ಕಡಿಮೆ ಮಾಡಿ ಗೆಳೆಯರಂತೆ ಚಿಕಿತ್ಸೆ ನೀಡಿದ್ದು ಭರವಸೆಯನ್ನು ತುಂಬಿದ್ದು ಫಿಸಿಯೋತೆರಪಿಷ್ಟ  ಮಿ.ಮಾನ್ತೇಷ್    ತುಂಬಾ  ಸರಳ ಹಾಗೂ ಪ್ರಾಮಾಣಿಕ ವ್ಯಕ್ತಿತ್ವ.  ‘ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ‘ ಅನ್ನೋ ಹಾಗೆ ವಯಸ್ಸು ಚಿಕ್ಕ ದಾದರೂ  ಪಿಸಿಯೋಥೆರಪಿಯಲ್ಲಿ ಹೆಚ್ಚಿನ ಅನುಭವವುಳ್ಳ ವ್ಯಕ್ತಿ .ಕೆಲವು ತಿಂಗಳುಗಳಿಂದ ನಿದ್ದೆಯನ್ನೇ ಕಾಣದ ನನಗೆ ಹಾಗೂ ಒಂದು ಚಿಕ್ಕ ವಸ್ತು ವನ್ನೂ ಹಿಡಿಯಲು ಸಾಧ್ಯವಾಗದ ಈ ನನ್ನ ತೋಳುಗಳಿಗೆ ಭರವಸೆಯಿಂದ ಸಾಂತ್ವನ ನೀಡಿದ ಪುಣ್ಯಾತ್ಮರು ಎಂದರೂ ಅತಿಶಯೋಕ್ತಿಯಾಗಲಿಕ್ಕಿಲ್ಲ. ಎರಡು ವರ್ಷಗಳ ಅವರ ವೃತ್ತಿಯಲ್ಲಿ 2000 ಕ್ಕೂ ಹೆಚ್ಚು ಮತ್ತು ಒಂದು ವರ್ಷ ಅವಧಿಯಲ್ಲಿ ಬೆಂಗಳೂರಿನಲ್ಲಿ 800ಕ್ಕೂ ಹೆಚ್ಚು  ವಿವಿಧ ತರಹದ ಆರ್ಥೋ ಗೆ ಸಂಬಂಧ ಪಟ್ಟಂತಹ ಎಲ್ಲಾ  ರೋಗಿಗಳಿಗೆ ಫಿಸಿಯೋತೆರಪಿ ನೀಡಿ ಗಣಮುಖಮಾಡಿದಂತಹ ಅದ್ಭುತ ಫಿಸಿಯೋಥೆರಪಿಷ್ಟ್.  ಏಕೆಂದರೆ ಯಾವುದೇ ರೀತಿಯ ನೋವು ಉಪಶಮನ ಔಷಧಿಗಳನ್ನು ಸಲಹೆ ನೀಡದೆ ಕೇವಲ ಫಿಸಿಯೋ ಮತ್ತು ಬ್ರೀಥಿಂಗ್ ವಿಥ್ ಮೆಲೋಡಿ ಮ್ಯೂಸಿಕ್,  ನೀಡಲ್ ಚಿಕಿತ್ಸೆ ಹೀಗೆ ಅನೇಕ   ಥೆರಪಿ  ಯಿಂದಲೇ ನನಗೆ ಕೇವಲ ಒಂದು ತಿಂಗಳಲ್ಲೇ  ಸಂಪೂರ್ಣ ಗುಣಮುಖಳನ್ನಾಗಿಸಿದ್ದು ನನಗೆ ಸರಿಯಾದ ಸಮಯಕ್ಕೆ ಸಿಕ್ಕ ರತ್ನ ಎಂಬುದು ನನ್ನ ಅಭಿಮತ.‘ ಯಾವುದೇ ರೋಗವಿರಲಿ ಆರಂಭದಲ್ಲೇ ಅದನ್ನು ಸರಿಯಾಗಿ ಗುರುತಿಸಿ ಚಿಕಿತ್ಸೆ ನೀಡುವಂತಹ ಇಂತಹ ವೈದ್ಯರುಗಳ ಅವಶ್ಯಕತೆಯಿದೆ ‘ದೇವರನ್ನು ನಾವು ಒಂದು ಒಳ್ಳೆಯ ವ್ಯಕ್ತಿ ಯಲ್ಲೇ ಕಾಣಬಹುದು . ಬೇರೆ ಕಡೆ ಹುಡುಕುವ ಅವಶ್ಯಕತೆ ಇಲ್ಲವೆಂದನಿಸಿತು.‘ ವೈದ್ಯಃ ನಾರಾಯಣೋ ರೂಪಃ ‘   ಅನ್ನೋ ಹಾಗೆ  ವೈದ್ಯರಲ್ಲೇ ದೇವರನ್ನು ಕಂಡ  ಕ್ಷಣ . ದಿನದಿಂದ ದಿನಕ್ಕೆ ನೋವು ಗುಣಮುಖವಾದಂತೆ ಅವರಲ್ಲಿ  ನಾರಾಯಣನ ರೂಪವನ್ನೇ ಕಂಡ ನಾನು ಅವರ ಶ್ರಮಕ್ಕೆ ಹಾಗೂ ಚಿಕಿತ್ಸೆಗೆ  ಚಿರ ಋಣಿಯಾಗಿರುತ್ತೇನೆ. ಆಪತ್ಕಾಲದ ಬಾಂಧವರೆಂದರೆ ಹೃದಯವಂತ ವೈದ್ಯರು. ಹೆಚ್ಚಾಗಿ ನಲವತ್ತರ ಹರೆಯದಲ್ಲಿ ಕಾಣಿಸಿಕೊಳ್ಳುವ ಫ್ರೋಜನ್ ಶೋಲ್ಡರ್ ಎಂಬ ದೈತ್ಯ ನೋವನ್ನು ನಿರ್ಲಕ್ಷಿಸ ಬಾರದು.  ಹಾಗೂ  ಪ್ರಾರಂಭದಲ್ಲೇ ಪರೀಕ್ಷಿಸಿ  ಚಿಕಿತ್ಸೆ ಮಾಡಿಸಿ ಕೊಳ್ಳಲೇ ಬೇಕು  ಮೂಢ ನಂಬಿಕೆಗೆ ಅವಕಾಶ ಕೊಡದೆ ಮೊದಲು ವೈದ್ಯಕೀಯ ತಪಾಸಣೆ ಮಾಡಿಸ ಬೇಕು ಅನ್ನೋ ಅರಿವು ಪ್ರತಿ ಯೊಬ್ಬರಲ್ಲೂ  ಬರಬೇಕು. ಮಿತಿ ಮೀರಿದ ಸಂದರ್ಭದಲ್ಲಿ ಭಗವಂತನೂ ಅಸಹಾಯಕನಾಗಿ ಬಿಡುತ್ತಾನೆ.ವಯಸ್ಸು ಯಾವುದೇ ಇರಲಿ ಇರುವಷ್ಟೂ ದಿನ ಆರೋಗ್ಯವಂತರಾಗೇ ಇದ್ದು ಚಟುವಟಿಕೆಯಿಂದ ಕ್ರಿಯಾಶೀಲರಾಗಿ ಜೀವನ ಪಯಣ ಮುಗಿಸ ಬೇಕು ಅನ್ನೋ ಮನೋಭಾವ ಎಲ್ಲರಲ್ಲೂ ಮೂಡಬೇಕು. ಅದರ ಜೊತೆ ದೇವರಂಥ ವೈದ್ಯರು ದೊರಕಬೇಕು. *************************************

ಆರೋಗ್ಯದ ಬಗ್ಗೆ ಕಾಳಜಿ ಇರಲಿ Read Post »

ಇತರೆ

ಲಂಕೇಶ್ ವಿಶೇಷ ಲಂಕೇಶ್ ಪತ್ರಿಕೆಯ ಪ್ರಭಾವ ಚಂದ್ರಪ್ರಭ  ಎಂಭತ್ತರ ದಶಕದ ದಿನಗಳವು. ನಾವೆಲ್ಲ ಮಾಧ್ಯಮಿಕ ಶಾಲಾ ಶಿಕ್ಷಣದ ಹಂತದಲ್ಲಿದ್ದ ಸಮಯ. ಅಪ್ಪನ ಪುಸ್ತಕ ಪ್ರೇಮದಿಂದಾಗಿ ಸಹಜವಾಗಿ ನಾವೆಲ್ಲ ಮಕ್ಕಳು ಆ ಪ್ರಭಾವಕ್ಕೆ ಒಳಗಾಗಿದ್ದ ಸಂದರ್ಭ. ಚಂದಮಾಮ,  ಸುಧಾ ಪತ್ರಿಕೆಗಳು ನಿಯಮಿತವಾಗಿ ಓದಿಗೆ ಸಿಗ್ತಿದ್ದುವು. ಜೊತೆಗೆ ನಿತ್ಯ ಸಂಗಾತಿ ಪ್ರಜಾವಾಣಿ. ಲಂಕೇಶ್ ಪತ್ರಿಕೆ ಎಂಬ ಹೊಸ ಪತ್ರಿಕೆಯೊಂದು ಮನೆ ಪ್ರವೇಶಿಸಿತು. ಅಷ್ಟೇ ಸಲೀಸಾಗಿ ಮನಸ್ಸನ್ನೂ ಪ್ರವೇಶಿಸಿತು. ಮುಖ್ಯವಾಗಿ ಜಾಹೀರಾತುಗಳೇ ಇಲ್ಲದ ಹೊಸ ವಿನ್ಯಾಸ, ಆಕರ್ಷಕ ಶೀರ್ಷಿಕೆಗಳು ಪತ್ರಿಕೆಯ ವೈಶಿಷ್ಟ್ಯವಾಗಿದ್ದವು. ಪುಂಡಲೀಕ ಸೇರ ರ ಹುಬ್ಬಳ್ಳೀಯಾಂವ ನಮ್ಮ ಅಚ್ಚುಮೆಚ್ಚಿನ ಅಂಕಣ.  ಅದೇ ರೀತಿ ಚಿತ್ರವಿಚಿತ್ರ ರೇಖಾಚಿತ್ರಗಳೊಂದಿಗೆ ಬರುತ್ತಿದ್ದ ನೀಲು ಕವಿತೆಗಳು ಅರ್ಥವಾಗದಿದ್ದರೂ ಮಜವಾಗಿ ತೋರುತ್ತಿದ್ದವು.  ಯಾವಾಗಲೂ ಪತ್ರಿಕೆಯ ಸಂಪಾದಕೀಯ ಓದಬೇಕು ಅಂತ ಹೇಳ್ತಿದ್ದ ಅಪ್ಪ ಟೀಕೆ ಟಿಪ್ಪಣಿ ಓದಲು ಹೇಳ್ತಿದ್ದರು. ರಾಜಕೀಯ ಸುದ್ದಿ, ವಿಮರ್ಶೆ, ವೈವಿಧ್ಯಮಯ ಅಂಕಣಗಳ ಪತ್ರಿಕೆ ಬಲು ಜನಪ್ರಿಯವಾಗಿ ಎಲ್ಲೆಲ್ಲೂ ಓದುಗ ವಲಯ ಸೃಷ್ಟಿಸಿಕೊಂಡಿತ್ತು. ತಮ್ಮ ವೈಶಿಷ್ಟ್ಯಪೂರ್ಣ ಲೇಖನಗಳಿಂದ ಪರಿಚಿತರಾದ ಲೇಖಕರಲ್ಲಿ ಪ್ರಮುಖವಾಗಿ ಪೂರ್ಣಚಂದ್ರ ತೇಜಸ್ವಿ, ಸಿ. ಎಸ್. ದ್ವಾರಕಾನಾಥ್, ಕೋಟಗಾನಹಳ್ಳಿ ರಾಮಯ್ಯ, ಶ್ರೀಕೃಷ್ಣ ಆಲನಹಳ್ಳಿ, ನಟರಾಜ್ ಹುಳಿಯಾರ್, ರವಿ ಬೆಳಗೆರೆ, ಅಬ್ದುಲ್ ರಶೀದ್, ವೈದೇಹಿ, ಬಾನು ಮುಷ್ತಾಕ, ಸಾರಾ ಅಬೂಬಕರ ಅಲ್ಲದೆ ಇನ್ನೂ ಅನೇಕರು. ಆಳುವ ಸರ್ಕಾರದ ಧೋರಣೆಗಳನ್ನು ನಿರ್ಭಿಡೆಯಿಂದ  ಕಟು ವಿಮರ್ಶೆಗೆ ಒಳಪಡಿಸುತ್ತಿದ್ದ ಪತ್ರಿಕೆ ನಿಜ ಅರ್ಥದಲ್ಲಿ ವಿರೋಧ ಪಕ್ಷದಂತೆ ಕೆಲಸ ಮಾಡತಿತ್ತು ಅಂತ ಈಗ ಸ್ಪಷ್ಟವಾಗಿ ಅರ್ಥವಾಗ್ತದೆ. ಆಗ ಗುಂಡೂರಾವ್, ಎಸ್. ಬಂಗಾರಪ್ಪ ಅಧಿಕಾರದಲ್ಲಿದ್ದ ಕಾಲ.  ಗುಂ  ಬಂ  ಎಂಬ ಹೃಸ್ವಗಳಿಂದ ಅವರನ್ನು ಸಂಭೋಧಿಸುತ್ತಿದ್ದುದು ಜನಮಾನಸದಲ್ಲಿ ಅಪಾರ ಮೆಚ್ಚುಗೆಗೂ ಸಂಚಲನಕ್ಕೂ ಪಾತ್ರವಾದ ಸಂಗತಿಯಾಗಿತ್ತು.  ಪಿ. ಲಂಕೇಶ್ ತಮ್ಮ ಪ್ರಖರ ಚಿಂತನ ಹಾಗೂ ನಿಷ್ಠುರ ನೋಟದಿಂದ ಸಾಹಿತ್ಯ, ರಾಜಕಾರಣ ಹಾಗೂ ಸಾಂಸ್ಕೃತಿಕ ಲೋಕವನ್ನು ಪ್ರಭಾವಿಸಿದವರು. ಯಾವುದೇ ಸಂಗತಿ,  ಸನ್ನಿವೇಶಗಳೊಂದಿಗೆ ರಾಜಿಯಾಗದೆ  ಹಲವರ ಕೆಂಗಣ್ಣಿಗೆ ಗುರಿಯಾದವರು. ಮುಲಾಜಿಲ್ಲದ ಖಡಾಖಂಡಿತ ತಮ್ಮ ಬರಹಗಳು ಹಾಗೂ ಖಚಿತ ನಿಲುವಿನಿಂದಾಗಿ ತಮ್ಮ ವಿರುದ್ಧ ದಾಖಲಾದ ಕಾನೂನು ಕ್ರಮಗಳಿಂದಾಗಿ ಊರೂರು ಸುತ್ತಿದವರು. ಹತ್ತಾರು ಯುವ ಬರಹಗಾರರ ಲೇಖನಿಗೆ ವೇದಿಕೆಯಾಗಿದ್ದು ಲಂಕೇಶ್ ಪತ್ರಿಕೆ. ಅವರೆಲ್ಲ ಈಗ ಕನ್ನಡ ಸಾಹಿತ್ಯದ ಮೇರುವಾಗಿರುವುದು ಕಣ್ಣೆದುರಿನ ಸತ್ಯ. ಪತ್ರಿಕೆಯ ಜೀವಾಳವಾಗಿದ್ದಂಥವು ಚಿಕ್ಕ ಚಿಕ್ಕ ವಾಕ್ಯಗಳ ಪರಿಣಾಮಕಾರಿ ಬರಹಗಳು. ಆಡಂಬರದ ವಿಲಾಸವಿಲ್ಲದ ವಸ್ತುನಿಷ್ಠ  ಬರವಣಿಗೆ ಹಾಗೂ ದಮನಿತರ, ಶೋಷಿತರ ದನಿಯೂ ಆಗಿ ಸಾವಧಾನವಾಗಿ ಹೊರಹೊಮ್ಮಿದ್ದು ಲಂಕೇಶ್ ಪತ್ರಿಕೆ. ಯಾವುದನ್ನು ವಿರೋಧಿಸಿ ಯಾರನ್ನು ಕುರಿತಾಗಿ ಪತ್ರಿಕೆ ಬರೆಯುತ್ತಿತ್ತೊ ಅವರೇ ಪತ್ರಿಕೆಗಾಗಿ ಅತಿ ಹೆಚ್ಚು ದಾರಿ ಕಾಯುತ್ತ ಇರತಿದ್ದರು ಎನ್ನುವುದು ಲಂಕೇಶ್ ಪತ್ರಿಕೆಯ ಹೆಗ್ಗಳಿಕೆ. ಅಧ್ಯಾಪಕ, ಕತೆಗಾರ, ಕವಿ, ಸಿನಿಮಾ ನಿರ್ಮಾಣ, ನಟನೆ – ಹೀಗೆ ಬಹುಮುಖ ಆಯಾಮಗಳ ಲಂಕೇಶ್ ವ್ಯಕ್ತಿಯಾಗಿ ಬಹುಜನರ ಆದರ್ಶವಾದವರು. ಲಂಕೇಶ್ ತರಹ ಬರೆಯಬೇಕು ಎಂಬ ಹಂಬಲ ಇರಿಸಿಕೊಂಡ ಒಂದು ತಲೆಮಾರನ್ನೇ ಗುರುತಿಸಬಹುದು. ದೃಢ ತಾತ್ವಿಕ ನಿಲುವು, ತಾನು ಪ್ರತಿಪಾದಿಸುವ ತತ್ವ ಸಿದ್ಧಾಂತ ಕುರಿತು ಬದ್ಧತೆ, ಒಂದು ಬಗೆಯ ಆಕ್ರಮಣಕಾರಿ ನಡೆ ಇವೆಲ್ಲವೂ ಲಂಕೇಶ್ ವ್ಯಕ್ತಿತ್ವದ ಹೆಗ್ಗುರುತು. ಲಂಕೇಶ್ ತರಹ ಬರೆಯುವುದು ಸಾಧ್ಯವಾಗಬಹುದು ಆದರೆ ಆ ತರಹ ಬದುಕುವುದು ಕರಕಷ್ಟ. ಎದುರು ಹಾಕಿಕೊಳ್ಳುವುದು ಎದೆಗಾರಿಕೆ,  ತಾನು ನಡೆದದ್ದೇ ದಾರಿ ಎಂಬ ನಿರಂಕುಶತ್ವ, ಪ್ರತಿಯೊಂದು ಕ್ಷಣವನ್ನು ಸಂಪೂರ್ಣವಾಗಿ ಬದುಕುವುದು, ಗಡಿಯಾರವೇ ಸುಸ್ತಾಗುವಂತೆ ದೈತ್ಯವಾಗಿ ಕೆಲಸ ಮಾಡುವುದು ಇವೆಲ್ಲ ಒಟ್ಟಿಗೇ ದಕ್ಕುವ ಸಂಗತಿಗಳಲ್ಲ. ಇನ್ನೂ ಬಹುಕಾಲ ಬಾಳಿ ಬದುಕಿ ತಲೆಮಾರುಗಳನ್ನು ರೂಪಿಸಬೇಕಿದ್ದ, ಪ್ರಭಾವಿಸಬೇಕಿದ್ದ ಲಂಕೇಶ್ ಹೇಳದೇ ಕೇಳದೇ ಹೊರಟು ಹೋಗಿದ್ದು ಕನ್ನಡ ನಾಡು ನುಡಿಗೆ ಅಷ್ಟೇ ಅಲ್ಲ ಇಡೀ ಸಮುದಾಯದ ನಷ್ಟ.  ಕೆಲವರು ಹಾಗಿರುತ್ತಾರೆ, ಈಗ ಅವರು ಬದುಕಿರಬೇಕಿತ್ತು ಎಂದು ನೆನಪಿಸಿಕೊಳ್ಳುವಂಥ ಧೀರರು. ಹಾಗೆ ಹೆಜ್ಜೆ ಹೆಜ್ಜೆಗೂ ನೆನಪಾಗುವ ವ್ಯಕ್ತಿ ಮತ್ತು ಶಕ್ತಿ ಲಂಕೇಶ್. ವರ್ಷಗಳುರುಳಿದರೂ ಮತ್ತೆ ಮತ್ತೆ ಕಾಡುವ, ಕಾಯುವ ನೆನಪಾಗಿ   ನಮ್ಮೊಟ್ಟಿಗಿರುವ ಲಂಕೇಶ್ ನೆನಪಿಗೊಂದು ಪುಟ್ಟ ಸಲಾಮು.

Read Post »

ಇತರೆ

ದತ್ತಿ ಪ್ರಶಸ್ತಿವಿಜೇತರು

ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪಡೆದ ಸಂಗಾತಿಯ ಬರಹಗಾರರು ವಿಶಾಲಾ ಆರಾಧ್ಯ ಕನ್ನಡ ಸಾಹಿತ್ಯ ಪರಿಷತ್ತಿನ‘ವಸುದೇವ ಭೂಪಾಲಂ’ ದತ್ತಿ ಪ್ರಶಸ್ತಿ ಬೊಂಬಾಯಿ ಮಿಠಾಯಿಮಕ್ಕಳ ಕವಿತೆಗಳು ವಿಭಾ ಪುರೋಹಿತ್ ರತ್ನಾಕರವರ್ಣಿ ಮುದ್ದಣ ಅನಾಮಿಕ ದತ್ತಿ ಪ್ರಶಸ್ತಿ. ಕಲ್ಲೆದೆ ಬಿರಿದಾಗ ( ಕವನಸಂಕಲನ ಹೆಸರು ಎನ್ ಆರ್ ರೂಪಶ್ರೀ ದತ್ತಿನಿಧಿ ಪ್ರಶಸ್ತಿಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿನಿಧಿ ಪ್ರಶಸ್ತಿ. ಪುಸ್ತಕದ ಹೆಸರುನಿನ್ನ ಪ್ರೀತಿಯ ನೆರಳಿನಲ್ಲಿ

ದತ್ತಿ ಪ್ರಶಸ್ತಿವಿಜೇತರು Read Post »

ಇತರೆ, ಲಹರಿ

ನಾದಬೇಕು …ನಾದ ಬೇಕು !!

ರಶ್ಮಿ ಬರೆಯುತ್ತಾರೆ
ಈಗ ಅಡಗಿ ಮಾಡೂದೆ ಒಂದು ಸಮಯ ನಿರ್ವಹಣೆಯ ತಂತ್ರ ಆಗಿ ಬದಲಾಗೇದ. ಅಡಗಿ ಮಾಡೋರಿಗೂ ವ್ಯವಧಾನ ಇಲ್ಲ. ಊಟ ಅಸ್ವಾದಿಸೋರಿಗೂ ಇಲ್ಲ. ಅಡಗಿ ಮಾಡೂದು ಬರೂದಿಲ್ಲ ಅಂತ ಹೇಳೂದೆ ನಾಜೂಕಿನ ಮಾತಾಗೇದ

ನಾದಬೇಕು …ನಾದ ಬೇಕು !! Read Post »

ಇತರೆ, ಪ್ರಬಂಧ

ಒಕ್ಕಲುತನ

ಇನ್ನ ಕಬ್ಬ ಸುಲದು ರಸಾ ಹೀರೂದು ನಮ್ ಜನಕ್ಕೆ ಭಾರೀ ಸಲೀಸು. ಒಂದ ಕೈಯಾಗ ಸೈಕಲ್ ಹಿಡದು ಮತ್ತೊಂದ ಕೈಯಾಗ ಕಬ್ಬ ತಿನಕೋತ ಹೋಗವರನ್ನ ನೀವು ಎಲ್ಲೆಲ್ಲೂ ನೋಡಬಹುದು.

ಒಕ್ಕಲುತನ Read Post »

ಇತರೆ, ಪ್ರಬಂಧ

ಪರಿವರ್ತನೆಗೆ ದಾರಿ ಯಾವುದಾದರೇನು?

ಲಲಿತ ಪ್ರಬಂಧ ಪರಿವರ್ತನೆಗೆ ದಾರಿ ಯಾವುದಾದರೇನು? ನಾಗರೇಖಾ ಗಾಂವಕರ್ ಹೊಸ ಸುತ್ತೋಲೆಯಂತೆ ಪದವಿ-ಪೂರ್ವ ಹಂತಕ್ಕೂ ಪ್ರಾರ್ಥನೆಯನ್ನು ಕಡ್ಡಾಯಗೊಳಿಸಿ ಇಲಾಖೆ ಆದೇಶ ಹೊರಡಿಸಿದ್ದು ಪಡ್ಡೆ ಹುಡುಗರಿಗೆ ಕೊಂಚವೂ ಇಷ್ಟವಿಲ್ಲ. ಆಗಾಗ ಆ ಬಗ್ಗೆ ತಕರಾರು ಮಾಡುವ ಗುಂಪು ಇದ್ದೇ ಇತ್ತು. ಆದರೂ ಪ್ರಾಚಾರ್ಯರು ಅದಕ್ಕೆಲ್ಲ ಅವಕಾಶ ಕೊಡದೆ ಕಡ್ಡಾಯ ಎಂದು ನೋಟೀಸು ತೆಗೆದು ಒತ್ತಡ ಹೇರಿದ್ದರು. ಹಾಗಾಗಿ  ವಿದ್ಯಾರ್ಥಿಗಳು  ಪ್ರಾರ್ಥನೆಗೆ ಹಾಜರಾಗುವುದು ಅನಿವಾರ್ಯವಾಗಿತ್ತು. ವಾಣಿಜ್ಯ ವಿಭಾಗದ ಆ ತರಗತಿಯಲ್ಲಿ ಇರುವುದು ಬರಿಯ ಇಪ್ಪತೆಂಟು ವಿದ್ಯಾರ್ಥಿಗಳು  ಮಾತ್ರ. ಉಳಿದೆಲ್ಲ ಮಕ್ಕಳು ಸಮಯಕ್ಕೆ ಸರಿಯಾಗಿ ಬಂದರೆ ಆ ಹುಡುಗ ಮಾತ್ರ ದಿನವೂ ತಡವಾಗಿಯೇ ಕಾಲೇಜಿಗೆ ಬರುತ್ತಿದ್ದ. ಕೈಯಲ್ಲಿ ಒಂದು ನೋಟ್ ಪುಸ್ತಕ ಬಿಟ್ಟರೆ ಬೇರೇನೂ ಇರುತ್ತಿರಲಿಲ್ಲ. ಹಾಕಿಕೊಂಡ ಯೂನಿಫಾರ್ಮ ಅಲ್ಲಲ್ಲಿ ಕೊಳೆ ಮೆತ್ತಿಕೊಂಡಂತೆ ಇದ್ದರೆ ಕೂದಲನ್ನು ವಿಕಾರ ಶೈಲಿಯಲ್ಲಿ ಕ್ರಾಪು ಹೊಡೆಸಿಕೊಂಡಿದ್ದ.ಆತ ಬರುವ ಗತ್ತು ಮಾತ್ರ ಥೇಟ್ ಹೀರೋ, ಬಹುಶಃ ಕನ್ನಡದ ದರ್ಶನ್ ಇಲ್ಲವೇ ಯಶ್ ಇವರ ನಡಿಗೆಯಿಂದ ಪ್ರಭಾವಿತನಾಗಿದ್ದಂತೆ ಇತ್ತು.                          ಪ್ರತಿದಿನ ಪ್ರಾರ್ಥನೆ ತಪ್ಪಿಸುವ, ತಡವಾಗಿ ಬರುವ ವಿದ್ಯಾರ್ಥಿಗಳನ್ನು ಹಿಡಿಯಲು ಕ್ಲಾಸರೂಮಿನ ಹೊರಗೆ ಉಪನ್ಯಾಸಕರ ದಂಡು ಕಾಯುತ್ತ ಕುಳಿತಿರುತ್ತಿದ್ದರು. ಆದರೂ ಈ ಹುಡುಗ ಮಾತ್ರ ನನಗಾರೂ ಸಮನಿಲ್ಲ, ಎಂಬ ಉಡಾಫೆಯಲ್ಲಿ ತಡವಾಗಿಯೇ  ಬರುತ್ತಿದ್ದ.. ಕನ್ನಡ ಉಪನ್ಯಾಸಕರಿಗೂ ಅವನಿಗೂ ಯಾವಾಗಲೂ ಎಣ್ಣೆ ಸೀಗೆಕಾಯಿ ಸಂಬಂಧ.ಎಂದಿನಂತೆ ಈತ ಕಂಡದ್ದೆ ತಡ, ಅವರು ಮಂಗಳೂರಿನ ಭಾಷಾ ಶೈಲಿಯಲಿ  “ ಏ ಹುಡುಗಾ, ಕಾಲೇಜು ಪ್ರಾರ್ಥನೆ ಎಷ್ಟಕ್ಕೋ? ಮತ್ತೀಗ ಎಷ್ಟು ಗಂಟೆ?  ನಿಂಗೆ ಮಂಡೆ ಗಿಂಡೆ ಉಂಟಾ? ನೀನೊಬ್ಬ ಸ್ಟೂಡೆಂಟಾ?” ಎಂದು ಗರಂ ಆಗಿ ಗುರಗುಟ್ಟಿದರು. “ಸರ್ ಸ್ನಾನ ಮಾಡಾಕ್ ಲೇಟ್ ಆಯ್ತ ರೀ, ನಮ್ಮವ್ವ ಬ್ಯಾಗ್ ಏಳಾಂಗಿಲ್ಲಾರೀ, ನೀರು ಕಾಯಿಸಿ ಒಲೆ ಹಚ್ಚಿ ನೀರು ಕಾಯುವರೆಗೂ ನಾನ್ ಎಳಾಂಗಿಲ್ಲಾರೀ,” ಎಂದ. ತೀರಾ ಸಲೀಸಾಗಿ ಸುಳ್ಳು ಹೇಳುತ್ತಿದ್ದಾನೆ ಎಂಬ ಗ್ರಹಿಕೆ ಬರುವಂತೆ  ನುಡಿಯುತ್ತಿದ್ದರೆ ಕನ್ನಡ ಶಿಕ್ಷಕರು ನಖಶಿಖಾಂತ ಉರಿಯತೊಡಗಿದರು.   ಇನ್ನು ಮುಂದೆ ಹೀಗೆ  ತಡಮಾಡುವುದಿಲ್ಲವೆಂದು ವಿನಂತಿಸಿ ಅಂತೂ ಆತ ತರಗತಿಗೆ ನಡೆದ.ಇಂಗ್ಲಿಷು ಅಷ್ಟಾಗಿ ಬರದ ಆತ ಸಂಸೃತ ಆಯ್ದುಕೊಂಡಿದ್ದ.ಮೊದಲ ತರಗತಿ ಸಂಸ್ಕೃತ. ಪಾಠ ಮಾಡಬಂದವರು ನಡುವಯಸ್ಸಿನ ಆದರೂ ನವ ಯುವಕನ ಪೋಸು ಕೊಡುತ್ತಿದ್ದ ಆರ್ ಕೆ. ಅವರ ಮುಂದಿನ ಹೆಸರನ್ನು ನಾನು ಹೇಳುವುದು ನೀವು ಕೇಳುವುದು ಬೇಡವೇ ಬೇಡ.ಆ ದಿನದ ಪಾಠದ ವಿಷಯ ಪಾಪ ಪುಣ್ಯ.   ಪಾಪ ಪುಣ್ಯಗಳ ಬಗ್ಗೆ ಉಪನ್ಯಾಸಕರು ದೀರ್ಘವಾಗಿ ಭಾಷಣ ಮಾಡತೊಡಗಿದರು.ವ್ಯಾಸರ  ಭಾರತವನ್ನು, ಹದಿನೆಂಟು ಪುರಾಣಗಳ ಆಧಾರಗಳನ್ನು ಉಲ್ಲೇಖಿಸಿ  “ಪರರಿಗೆ ಉಪಕಾರ ಮಾಡುವುದೇ ಪುಣ್ಯ,ಪರರ ಪೀಡನೆಯೇ ಪಾಪ” ಎನ್ನುತ್ತಿದ್ದರು. ತಟ್ಟನೆ  ಆ ವಿದ್ಯಾರ್ಥಿ ಎದ್ದು ಪ್ರಶ್ನಿಸಿದ “ಸರ್, ಸುಂದರವಾಗಿರುವ ಹುಡುಗಿಯರಿಗೆ ಹೆಚ್ಚು ಅಂಕ ನೀಡಿ, ಬುದ್ದಿವಂತ ಆದರೆ ತುಂಟ ಹುಡುಗರಿಗೆ ಕಡಿಮೆ ಅಂಕ ನೀಡುವುದು ಪಾಪವೋ? ಅಥವಾ ಪುಣ್ಯವೋ?” ಎಂದ.  ಉತ್ತರ ಕೊಡಲಾಗದ ಉಪನ್ಯಾಸಕರು ಬೆಸ್ತುಬಿದ್ದು ತಡಬಡಿಸತೊಡಗಿದರು. ಮತ್ತೆ ಉಪನ್ಯಾಸಕರು ಉಪನ್ಯಾಸ ನೀಡದೆ, “ಯಾಕೋ ಹನುಮ ಬೆಳ್ಳಂಬೆಳಿಗ್ಗೆ ಅಮಲೇರಿದಂಗೆ  ಬಡಬಡಿಸ್ತಿ.ಚಂದಾ ಗಿಂದ ತಗೊಂಡು ನನಗೇನಾಗಬೇಕು.ಪಾಠ ಸರ್ಯಾಗ ಕಲಿಯೂದ ಕಲಿ. ಬಡವ “ ಎಂದು ಗದರಿಸಿ“ಎಲ್ರೂ ಇಲ್ಲಿ ಕೇಳಿ, ಒಂದು ಸುಭಾಷಿತ ಕೊಡ್ತಿನಿ, ಬರ್ಕೋಳ್ಳಿ” ಎಂದು ಹೇಳಿ                            “ಮರ್ಕಟಸ್ಯ ಸುರಾಪಾನಂ                            ಮಧ್ಯೆ ವೃಶ್ಚಿಕ ದ್ವಂಶನಂ                            ತನ್ಮದ್ಯೆ ಭೂತಸಂಚಾರೋ                            ಯದ್ವಾತದ್ವಾ ಭವಿಷ್ಯತಿ”  ಎಂದು ಬರೆಸಿ ನಾಳೆ ಅದರ ಕನ್ನಡ ಅನುವಾದ ಉತ್ತರ  ಬರೆದು ತರುವಂತೆ ಹೇಳಿದರು.ಯಾರು ತರುವುದಿಲ್ಲವೋ ಅವರಿಗೆ ಇಂಟರ್ನಲ್  ಮಾರ್ಕ್ಸ ಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ನುಡಿದು ಹೊರನಡೆದರು. ಅದು ಇಂಟರ್ವೆಲ್. ಹನುಮ ಮತ್ತವನ ಗೆಳೆಯರು  ತಲೆಕೆರೆದು ಕೊಳ್ಳುತ್ತ ಅನುವಾದ  ಮಾಡತೊಡಗಿದರು. ಅಲ್ಲೆ ಒಬ್ಬ ಗೆಳೆಯ ಅಂದ “ಹನಮ್ಯಾ ಅವ್ರ ನಿಂಗ್ ಇದನ್ನ ಟೊಂಟಾಗ್ ಕೊಟ್ಟಾಂಗೈತಲೇ!.ಮರ್ಕಟ ಅಂದ್ರ ಮಂಗಾ ಅಲ್ಲೇನ್ಲೇ? ಮತ್ತ ನಿನ್ನ ಹೆಸರು ಹನುಮ, ಸರಿಯಾಯ್ತ ಮಗನೇ, ಸೇರಿಗೆ ಸವ್ವಾಸೇರು. ನೀ ಸ್ಟುಡೆಂಟಲೇ, ಅವ್ರು ಲೆಕ್ಚ್ರು. ನಿನ್ನ ಕೈಯಾಗ ಅವರನ್ನ  ಯಾಮಾರ್ಸೋದಕ್ಕ ಆಗಾಂಗಿಲಲೇ” ಎಂದ. ಎಳೆ ಪ್ರಾಯದ ಬಿಸಿರಕ್ತದ ಹನುಮನ ಬಡಕಲು ಶರೀರವೂ ಕೊತಕೊತ ಕುದಿಯಿತು. ಅವನೆಂದ “ ಹೌದಾ! ಹಾಗಾಂದ್ರೆ ನೋಡೆ ಬೀಡುವಾ. ನಾನ ಅದರ ಉತ್ತರ ಬರಿದೆ ಬರಿತೀನಿ. ಸರ್ ಯಾವಾಗ್ಲೂ ನೆನಪಿಡೋ ಹಾಂಗ ಬರಿತೀನಿ. ಈಗ್ಲೆ ಅದನ್ ಹೇಳಾಂಗಿಲ್ಲ, ಮಾಡೇ ತೋರಸ್ತೀನಿ. ನೋಡ್ಲೇ ” ಅಂದ.  ಆದರೂ ಅವನ ಮುಖ ಜೋತು ಬಿದ್ದಿತ್ತು. ತಾನು ಮಾಡುವುದು ಸರಿಯೋ? ತಪ್ಪೋ? ಡೋಲಾಯಮಾನ ಮನಸ್ಥಿತಿ. ಆದರೂ ಹುಡುಗರೆದುರಿಗೆ ತಾನು ಹೀರೋ ಆಗಬೇಕೆನ್ನುವ ಛಲ. ಇಷ್ಟಾಗಿಯೂ ಶಿಕ್ಷಕರ  ಅಂತಃಕರಣದ ಉದಾರೀಕರಣ ಬಲ್ಲವನಾಗಿದ್ದ. ತಾನಾದರೋ ಹಾಗೆ ಮಾಡಿದರೆ ಉಪನ್ಯಾಸಕರು ಮಹಾ ಏನು ಮಾಡಿಯಾರು? ಒಂದೆರಡು ಬೈದು ಬುದ್ದಿ ಹೇಳತಾರು,ಅಷ್ಟೇ ತಾನೆ? ನೋಡೆ ಬಿಡುವ ನನ್ನ ಜಿದ್ದು ಹೆಚ್ಚೋ ಆರ್.ಕೆ ಜಿದ್ದು ಹೆಚ್ಚೋ? ಎಂದುಕೊಳ್ಳುತ್ತ ಮಾರನೆ ದಿನ ತರಗತಿಗೆ ಕೊಂಚ ಮೊದಲೆ ಬಂದ. ಮೊದಲನೆ ತರಗತಿಯೇ ಸಂಸ್ಕೃತ. ಮೊದಲೆ ಕಾಲೇಜಿಗೆ ಬಂದ ಆತ ಮಾಡಿದ ಕೆಲಸವೆಂದರೆ ಬ್ಲಾಕ್ ಬೋರ್ಡನ್ನು ಚೆನ್ನಾಗಿ ಒರೆಸಿ, ಒಂದು ಮೂಲೆಯಿಂದ ಮಂಗನ ಆಗಮನದ ಚಿತ್ರ ಬಿಡಿಸಿದ. ಆದರೆ ಅದರ ಮೂತಿ ಮಾತ್ರ ತನ್ನ ಮುಖದಂತೆ ಬರೆದ.ಕೈಯಲ್ಲಿ ಬಾಟಲ್ ಹಿಡಿಸಿದ, ಮಂಗನ ಕೆಳಭಾಗದಲ್ಲಿ ಎಡನಿತಂಬಕ್ಕೆ  ಕಚ್ಚುತ್ತಿರುವ ಚೇಳೊಂದನ್ನು ಬಿಡಿಸಿದ.ಈಗ ಮತ್ತೊಂದು ಎರಡನೆಯ ಚಿತ್ರ ಬರೆದ ಮಂಗನ ದಶಾವತಾರದ ಚಿತ್ರ.ಅಮಲೇರಿದ ಮಂಗನ ಮುಖದ ಹನುಮನ ಮಂಗಚೇಷ್ಟೆಯ ಚಿತ್ರ, ಕೊನೆಯಲ್ಲಿ  ಮಂಗನಿಂದ ಬಚಾವಾಗಲು ಮರವೇರಿದ  ಉಪನ್ಯಾಸಕರ ಚಿತ್ರ ಬರೆದು ನಿರುಮ್ಮಳನಾದ. ಅಷ್ಟೇ ಅಲ್ಲ ಯಾರಾದರೂ ಅದನ್ನು ಅಳಿಸಬಹುದೆಂದು ತರಗತಿ ಬಿಟ್ಟು ಹೊರಬರದೆ ಕಾಯುತ್ತ ಕುಳಿತ. ಸಮಯವಾಗುತ್ತಲೇ  ತರಗತಿ ಭರ್ತಿಯಾಗತೊಡಗಿತು. ಹೆಣ್ಣು ಹುಡುಗಿಯರು ಕಣ್ಣು ಕಣ್ಣು ಬಿಟ್ಟು ಈ ಅದ್ಭುತ ಚಿತ್ರ ನೋಡಿ ವಿವರಿಸತೊಡಗಿದರು. ಈಗ ಅದಕ್ಕೆ ರೆಕ್ಕೆ ಪುಕ್ಕ ಎಲ್ಲ ಹುಟ್ಟಿಕೊಂಡವು.ಎಲ್ಲರ ಮುಂದೆ ಕಾಲರ್ ಎತ್ತಿ ಎತ್ತಿ ಹನುಮ ಭುಜ ಕುಣಿಸಿದ.ಪ್ರಾರ್ಥನೆಗೂ ಹೋಗದೆ  ಉಪನ್ಯಾಸಕರು ಬರುವವರೆಗೂ ಚಿತ್ರ ಕಾಯುತ್ತ  ಕುಳಿತ. ಕೈಯಲ್ಲೊಂದು ಹಾಜರಿ ಪುಸ್ತಕ ಮತ್ತೊಂದು ಪಠ್ಯ ಪುಸ್ತಕ ಹಿಡಿದು ಠಾಕುಠೀಕಾಗಿ ಬರುತ್ತಿರುವ ಉಪನ್ಯಾಸಕರಾದ ಆರ್. ಕೆ. ನ ನೋಡಿ ಹುಡುಗಿಯರು ಮುಸಿಮುಸಿ ನಕ್ಕರೆ, ಹನಮ್ಯಾ ಮತ್ತವನ ಕೋತಿ ದಂಡು ತಣ್ಣಗೆ ಕುಳಿತಿತ್ತು. ಹಾಜರಿ ಗಿಜರಿ ಮುಗಿಸಿ ಈಗ ಗುರುಗಳು ಬೋರ್ಡಿನ ಕಡೆ ತಿರುಗುತ್ತಲೂ ಆಶ್ಚರ್ಯ!! . ನಿನ್ನೆ ತಾವು ವಿದ್ಯಾರ್ಥಿಗಳಿಗೆ  ನೀಡಿದ ಸಮಸ್ಯೆ ಅವರಿಗೆ ನೆನಪಿರಲಿಲ್ಲ. ‘ಎಂಥದ್ಭುತ ! ಭಲೇ, ಚಿತ್ತ ಚಾಂಚಲ್ಯಕ್ಕೆ  ಎಂಥೊಳ್ಳೆ ಚಿತ್ರ. ಯಾರು ಬರೆದವರು?’ ಎಂದು ಕೇಳುತ್ತಲೂ ಮಕ್ಕಳಲ್ಲಾ ಹನುಮನ ಕಡೆ  ನೋಡುತ್ತಲೂ ಗುರುಗಳಿಗೆ ಆಶ್ಚರ್ಯ . .’ ಭಲೇ’ ಎಂದರು ಮನದಲ್ಲೇ. “ ಎಂಥ ಅದ್ಭುತ ಕಲೆಗಾರ! ನಿನ್ನೊಳಗೊಂದು ಈ ವ್ಯಕ್ತಿ ಇರುವುದು ನನಗೆ ತಿಳಿದಿರಲಿಲ್ಲ,ಹನುಮಾ, ನೀನೊಬ್ಬ ಶ್ರೇಷ್ಠ ಚಿತ್ರಗಾರ. ನಿನ್ನ ಸಾಮರ್ಥ್ಯದ ಅರಿವು ನಿನಗೆ ಇಲ್ಲ. ಇರಲಿ ಬಿಡು. ನಿನಗೊಬ್ಬರನ್ನು ಪರಿಚಯಿಸಿ ಕೊಡುತ್ತೇನೆ. ಅವರ ಹತ್ತಿರ ಸರಿಯಾಗಿ ಪ್ರಾಕ್ಟೀಸು ಮಾಡು. ಹಣದ ಬಗ್ಗೆ ಚಿಂತಿಸಬೇಡ. ಹೇಗಾದರೂ ಹೊಂದಿಸೋಣ. ನೀನು ಮುಂದೆ ಬಂದರೆ ಸಾಕು” ಎನ್ನುತ್ತಲೂ, ಇವೆಲ್ಲವನ್ನು ನಿರೀಕ್ಷಿಸದೆ, ಉಪನ್ಯಾಸಕರು ತನಗೆ ಛೀಮಾರಿ  ಹಾಕಿ ಹೊರಗೆ ಕಳುಹಿಸಬಹುದೆಂದು ಗ್ರಹಿಸಿದ್ದ ಆತನ ಲೆಕ್ಕಾಚಾರ ತಿರುವು ಮುರುವಾಗಿತ್ತು.ಹನುಮ ನಿಜಕ್ಕೂ ಈಗ ಮಂಗನಂತಾದ.ಕನಕ ಮಣಕ  ಆದಂಗಾದ.ಅದರ ಕಾರಣ ಹೇಳ ಹೊರಟ. ಆಗಲಿಲ್ಲ. ಕಣ್ಣಾಲಿಗಳು ತುಂಬಿಕೊಂಡವು. ಗುರುವಿನ ಮುಂದೆ ಗುಲಾಮನಾಗಬೇಕೆನಿಸಿತು. ಇವರಿಗೆ ತಾನು ಎಷ್ಟು ಸತಾಯಿಸಿದೆ. ಅರ್ಥವಾಗಲಿಲ್ಲವೇ? ಅಂದುಕೊಂಡ. ತಪ್ಪಾಯಿತೆಂದು ಅಂಗಲಾಚಬೇಕೆಂದು ಕೊಂಡ. ಯಾವುದನ್ನು ಮಾಡಲಾಗದೆ ಈಗ ಮುಸಿ ಮುಸಿ ಅಳತೊಡಗಿದ.  ಅವನೊಳಗಿನ ಅಂತಃ ಪ್ರಜ್ಞೆ ಎಚ್ಚರಗೊಂಡಿತ್ತು. ಎಲ್ಲವನ್ನೂ ಸಲೀಸಾಗಿ ತೆಗೆದುಕೊಂಡು ಬದುಕುತ್ತಿದ್ದ ಹುಡುಗನ ಮನೆ ಸ್ಥಿತಿ ತೀರ ಹದಗೆಟ್ಟಿದ್ದಾಗಿತ್ತು. ಅದನ್ನು ತನ್ನ ವಿಚಿತ್ರ ಶೈಲಿಗಳಿಂದ ನಡೆ ನುಡಿಗಳಿಂದ ಮರೆಯಲು ಬಯಸುತ್ತಿದ್ದ.  ಕಾಯಿಲೆಯಿಂದ ಹಾಸಿಗೆ ಹಿಡಿದ ತಾಯಿ, ಸದಾ ಕುಡಿದು ಬರುತ್ತಿದ್ದ ತಂದೆ, ಈ ಮಧ್ಯೆ ಒಡಹುಟ್ಟಿದ ಮುದ್ದು ತಂಗಿ, ಆಕೆಯ ಜವಾಬ್ದಾರಿ ಎಲ್ಲವನ್ನೂ ಎಳೆಯ ಪ್ರಾಯದ ಹುಡುಗ ಹೊತ್ತಿಕೊಂಡಿದ್ದ. ಬೆಳಿಗ್ಗೆ ತಡವಾಗುತ್ತಿದ್ದ ಕಾರಣ, ಮನೆಗುಡಿಸಿ, ನೀರು ತುಂಬಿ, ತಿಂಡಿ ಮಾಡಿ,ತಾಯಿಗೆ ತಂಗಿಗೆ ತಿಂಡಿ ಕೊಟ್ಟು, ತಾನು ಅರ್ಧಂಬರ್ಧ ತಿಂದು, ಬರುತ್ತಿದ್ದ ಆತ ಸುಮ್ಮನೆ ಸುಳ್ಳು ಹೇಳುತ್ತಿದ್ದ. ಕಾಲೇಜು ಸಮಯದ ನಂತರ ಅಂಗಡಿಯೊಂದರಲ್ಲಿ ಲೆಕ್ಕ ಪತ್ರ ಬರೆಯುವ ಕೆಲಸಕ್ಕೆ ಹೋಗುತ್ತಿದ್ದ ಆತ ಮನೆಯ ಖರ್ಚು ವೆಚ್ಚವನ್ನೆಲ್ಲಾ ತಾನೆ ನಿಭಾಯಿಸುತ್ತಿದ್ದ.ಕಾಲೇಜಿಗೆ ತಡವಾಗಿ ಬರುವುದಕ್ಕೆ ನಿಜ ಕಾರಣ ನೀಡಲು ಪ್ರಾಯದ ಜಂಭ ಅಡ್ಡಬರುತ್ತಿತ್ತು. ‘ತಾನೇಕೆ ಇನ್ನೊಬ್ಬರ ಎದುರಿಗೆ ತಲೆ ಬಾಗಿಸಲಿ? ಎಂಬ ಒಣ ಪ್ರತಿಷ್ಠೆ ಎಲ್ಲವೂ ಆತನಲ್ಲಿತ್ತು. ಆದರೀಗ ಹಾಗಾಗಲಿಲ್ಲ.ಒಂದು ಮನಸ್ಸು ಬೇಡ ಬೇಡವೆಂದರೂ ಮತ್ತೊಂದು ಮನಸ್ಸು  ತನ್ನ ಮನೆಯ ರಹಸ್ಯವನ್ನೆಲ್ಲಾ ಬಿಚ್ಚಿಟ್ಟಿತು ಮತ್ತು ತನ್ನ ಮಂಗಚೇಷ್ಟೇಯ ಆಲೋಚನೆಯನ್ನು ಹೊರಗೆಡುವಿದ.ಆತ ಹೀಗೆಂದ “ಸರ್, ಸರ್, ನನ್ನ ನೀವು ಕ್ಷಮಿಸಬೇಕ್ರೀ. ನಾನು ನಿಮಗೆ ಬುದ್ಧಿ ಕಲಿಸ್ತೀನಿ ಅಂತ ಹುಡುಗರತ್ರ ಹೇಳಕೊಂಡಿದ್ದೇರಿ..ನಂದೆಲ್ಲಾ ತಪ್ಪಾಗೈತ್ರಿ ಸರ್ ಹೊಟ್ಯಾಗ ಹಾಕ್ಕೊಳ್ರೀ, ಸರ್. ನನ್ನ ಗೆಳೇರಲ್ಲಾ ಅಂದ್ರು ಅಂತ ನಿಮಗಿಂತ ನಾನೆ ಬುದ್ಧಿವಂತ ಅಂತಾ ತೋರ್ಸಾಕ ಹೊಂಟಿದ್ದರ್ರೀ. ಈಗ ಗುರುತಾತ್ರೀ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಅಂತ ಶರೀಫರು ಯಾಕ್ ಹಾಡಿದ್ರೂ ಅಂತ”. ಎನ್ನುತ್ತ ಅವರ ಕಾಲಿಗೆ ಬಿದ್ದ.ಅಷ್ಟೊತ್ತಿಗೆ ಕನ್ನಡ ತರಗತಿ ಪ್ರಾರಂಭವಾಗುತ್ತಲೇ ಅವರೂ ಕ್ಲಾಸಿಗೆ ಬರಲು ಈ ದೃಶ್ಯ ಮನಕಲುಕಿತು. ಆವರೆಗೆ ಆತನ ಮೇಲಿದ್ದ ಕೋಪ,ಅಸಹನೆ ಮಾಯವಾಗಿ  ಕರುಣೆ ತುಂಬಿಕೊಂಡಿತು.ಹೆಣ್ಣು ಹುಡುಗಿಯರಂತೂ ಆತನನ್ನು ಅಭಿಮಾನದಿಂದ ನೋಡತೊಡಗಿದರು. ಈಗ ನಿಜಕ್ಕೂ ಆತ ಹೀರೋ ಆಗಿದ್ದ ಬರಿಯ ಹುಡುಗಿಯರ ಕಣ್ಣಲ್ಲಿ ಮಾತ್ರವಲ್ಲ. ಶಿಕ್ಷಕರು, ಉಳಿದ ಸಹಪಾಠಿಗಳ ದೃಷ್ಠಿಯಲ್ಲೂ ಹನುಮನಿಗೆ ಹನುಮನೇ ಸಾಟಿ ಎನಿಸಿಕೊಂಡುಬಿಟ್ಟ. ಅದರಲ್ಲಿ ಬಹಳ ಆನಂದ ಪಟ್ಟವರೆಂದರೆ ಕನ್ನಡ ಮೇಷ್ಟ್ರು ಸದಾ ಕನ್ನಡ ತರಗತಿಗೆ ಗೈರುಹಾಜರಾಗಿ ಗುಂಪು ಕಟ್ಟಿಕೊಂಡು ಉಂಡಾಡಿ ಗುಂಡನ ಹಾಗೆ ಕಾಲೇಜು ಕ್ಯಾಂಪಸ್ ಸುತ್ತುತ್ತ ಆಗಾಗ ವಿಕಾರವಾಗಿ ಅವರನ್ನು ಅಣುಕಿಸುವ ಆತನ ಆಟಕ್ಕೆ ಅವರ ಮನ ರೋಸಿ ಹೋಗಿತ್ತು. ಪಾಠಕ್ಕೆ ಬಾ ಎಂದು ಕರೆದರೂ”ಸರ್ ನಾನು ಕ್ಲಾಸಿಗ್ ಕೂರದಿದ್ರೂ ಪಾಸಾಗ್ತೀನಿ ನೋಡಿ.” ಎಂದು ಸವಾಲೆಸೆದು ಅವರ ಮುಖಭಂಗ ಮಾಡಿದ್ದ. ಆದರೆ ಈಗ ಅವರು ಅದನ್ನೆಲ್ಲ ಮರೆತು ಆತನ ಹರಸತೊಡಗಿದರು. ತಮ್ಮ ಹಳೆಯ ಕಾಲೇಜು ದಿನಗಳನ್ನು ನೆನಪಿಸಿಕೊಂಡು “ಆ ವಯಸ್ಸು ಮಾರಾಯ, ಈಗ ನಿಂಗೆ ಬೈದ್ರು ಒಂದಕಾಲಕ್ಕೆ ನಾವು ಸಾಕಷ್ಟು ಸೌಖ್ಯ ಕೊಟ್ಟಿದ್ದೆವು ನಮ್ಮ ಮಾಷ್ಟುçಗಳಿಗೆ” ಎನ್ನುತ್ತ ಆತನ ಬೆನ್ನು ತಟ್ಟಿದರು.                                                ಸತತ ಪರಿಶ್ರಮ ಪಟ್ಟು ಚೆನ್ನಾಗಿ ಓದಿದ. ಆ ವರ್ಷದ ಆದರ್ಶ ವಿದ್ಯಾರ್ಥಿ ಸ್ಥಾನವನ್ನು ಮಾತ್ರವಲ್ಲದೇ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಹೆಚ್ಚು ಅಂಕ ಗಳಿಸಿ ಎಲ್ಲರ ಮೆಚ್ಚುಗೆ ಗಳಿಸಿದ. “ಹುಡುಗಾಟದ ಹುಂಬತನದಲ್ಲೂ ಮುಗ್ಧ ಮನಸ್ಸಿರುವುದು” ಎಂಬುದಕ್ಕೆ ಸಾಕ್ಷಿಯೂ ಆದ.ತಪ್ಪು ನಡೆದಾಗ ಶಿಕ್ಷಿಸದೆ ಆ ತಪ್ಪಿನಲ್ಲೂ ಕೆಲವೊಮ್ಮೆ ಇರುವ ಒಪ್ಪನ್ನು ಒಡಮೂಡಿಸಿದ ಸಂಸ್ಕೃತ ಶಿಕ್ಷಕರ ಸುಸಂಸ್ಕೃತ ವರ್ತನೆ ಆತನ ಬದಲಾವಣೆಗೆ ದಾರಿಯಾಯಿತು.

ಪರಿವರ್ತನೆಗೆ ದಾರಿ ಯಾವುದಾದರೇನು? Read Post »

ಅಂಕಣ ಸಂಗಾತಿ, ಕಗ್ಗಗಳ ಲೋಕ

ಅಂಕಣ ಬರಹ ಕಗ್ಗಗಳ ಲೋಕ ಆದರಣೀಯ ಡಾII ಡಿ. ವಿ. ಗುಂಡಪ್ಪನವರು ರಚಿಸಿದ ‘ಮಂಕುತಿಮ್ಮನ ಕಗ್ಗ’ ಒಂದು ಮೇರುಕೃತಿ. ಅವರ ಒಂದೊಂದು ಮುಕ್ತಕವೂ ಕೂಡ ಸಾರ್ವಕಾಲಿಕ ಸತ್ಯ! ಜೀವನದಲ್ಲಿ ಎದುರಾಗುವ ಸಾವಿರಾರು ಪ್ರಶ್ನೆಗಳಿಗೆ ತತ್ವಶಾಸ್ತ್ರ,ಸ್ವಾನುಭವ ಮತ್ತು ಆಧ್ಯಾತ್ಮದ ಹಿನ್ನೆಲೆಯಲ್ಲಿ ಉತ್ತರ ನೀಡುವ ಕಗ್ಗಗಳು ಓದುಗರಿಗೆ ಆಪ್ತವಾಗಿ ಬಿಡುತ್ತವೆ. ಒಬ್ಬ ಸಾಮಾನ್ಯ ಮನುಷ್ಯನಂತೆ ಮೈತ್ರಿಭಾವದಿಂದ ಬರೆದ ಈ ಕಗ್ಗಗಳು ಅಸಂಖ್ಯ ಮಂದಿಗೆ ಸಾಂತ್ವನ ನೀಡುತ್ತವೆ. “ಎಲ್ಲದರಲ್ಲೂ, ಎಲ್ಲರಲ್ಲೂ ಒಳ್ಳೆಯದನ್ನೇ ಕಂಡು , ಜೀವನದ ಸೊಬಗನ್ನು ಸವಿಯಬೇಕು” ಎಂದು ದಾರಿತೋರುವ ದಿವ್ಯಚೇತನ ನಮ್ಮ ಗುಂಡಪ್ಪನವರು. ಹೊಸ ಪೀಳಿಗೆಯ ಓದುಗರಿಗೆ ಡಿ.ವಿ.ಜಿ.ಯವರ ಕಗ್ಗಗಳ ಪರಿಚಯಿಸುವುದು ನನ್ನೀ ಬರಹಗಳ ಉದ್ದೇಶವಾಗಿದೆ ಮುಕ್ತಕ- ೬೦೦ ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ I ಕುದುರೆ ನೀನ್ , ಅವನು ಪೇಳ್ದಂತೆ ಪಯಣಿಗರು II ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು I ಪದ ಕುಸಿಯೆ ನೆಲವಿಹುದು ಮಂಕುತಿಮ್ಮ II ಭಾವಾರ್ಥ : ನಮ್ಮ ಬದುಕೇ ಒಂದು ಜಟಕಾಬಂಡಿ. ಆ ಬಂಡಿಯನ್ನು ಎಳೆದುಕೊಂಡು ಹೋಗುವ ಕುದುರೆಗಳು ನಾವು. ಬಂಡಿಯನ್ನೆಳೆಯುವುದು ನಮ್ಮ ಕಾರ್ಯವೇ ಹೊರತು ದಾರಿಯನ್ನು ಆಯ್ಕೆ ಮಾಡುವ ಹಕ್ಕು ನಮಗಿಲ್ಲ. ಬಂಡಿಯ ಒಡೆಯನಾದ ವಿಧಿಯು ತೋರಿದ ಹಾದಿಯಲ್ಲೇ ನಾವು ನಡೆಯಬೇಕು. ಅದು ಸುಖದ ಹಾದಿಯೋ, ದುಃಖದ ಹಾದಿಯೋ – ನಾವದನ್ನು ಆಯ್ಕೆ ಮಾಡುವಂತಿಲ್ಲ. ಬಾಲ್ಯ, ಯೌವನಾವಸ್ಥೆಯಲ್ಲಿ ಓಡಿದ ಪಾದಗಳು ವೃದ್ಧಾಪ್ಯ ತಲುಪಿದಾಗ ಸೋತು ಹೋಗಿ ಕುಸಿದುಬಿದ್ದಾಗ , ಭೂಮಿಯ ಮೇಲೆ ದಹನವೋ ದಫನವೋ ಆಗುವಲ್ಲಿಗೆ ನಮ್ಮ ಬದುಕಿನ ಓಟ ಕೊನೆಗೊಳ್ಳುತ್ತದೆ. ಬದುಕೆಂದರೆ ಇಷ್ಟೇ!! ಮುಕ್ತಕ – ೬೬೧ ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ Iಫಲ ಮಾಗುವಂದು ತುತ್ತೂರಿ ದನಿಯಿಲ್ಲIIಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲIಹೊಲಿ ನಿನ್ನ ತುಟಿಗಳನು ಮಂಕುತಿಮ್ಮ ಭಾವಾರ್ಥ: ಅತೀ ಸೂಕ್ಷ್ಮವಾದ ಮೊಳಕೆಗೆ ಭೂಮಿಯ ಮಣ್ಣಿನ ಪದರವನ್ನು ಒಡೆದು ಹೊರಬರುವುದು ಸುಲಭದ ಮಾತಲ್ಲ. ಆದರೂ ಅದು ತಾನೊಂದು ದೊಡ್ಡ ಸಾಧನೆಯನ್ನು ಮಾಡುತ್ತಿದ್ದೇನೆಂದು ಕೂಗಿ ಹೇಳಲ್ಲ. ಮಧುರವಾದ ಸವಿಯನ್ನು ಕೊಡುವ ಫಲವು ತನ್ನ ಬಗ್ಗೆ ಕೊಚ್ಚಿಕೊಳ್ಳುವುದಿಲ್ಲ. ಸೌರವ್ಯೂಹಕ್ಕೆ ಒಡೆಯನಾದ ಸೂರ್ಯನು ಹಗಲು ಹೊತ್ತು ಬೆಳಕನ್ನು ನೀಡಿದರೆ, ರಾತ್ರಿ ಚಂದ್ರನು ತಂಪನ್ನೀಯುವನು. ಇವರು ಮೌನವಾಗಿ ತಮ್ಮ ಕಾಯಕವನ್ನು ಮಾಡುವರೇ ಹೊರತು ತಮ್ಮ ಹಿರಿತನದ ಬಗ್ಗೆ ಜಂಬ ಪಟ್ಟುಕೊಂಡಿಲ್ಲ. ಇವರೆಲ್ಲಾ ತಮ್ಮ ಪಾಡಿಗೆ ತಮ್ಮ ಕಾಯಕವನ್ನು ಮೌನವಾಗಿ ಮಾಡುತ್ತಿರುವಾಗ ನೀನ್ಯಾಕೆ ಅವರಂತೆ ಮೌನವಾಗಿರಬಾರದು ಎಂದು ಮನುಷ್ಯರನ್ನು ಪೂಜ್ಯ ಡಿ.ವಿ.ಜಿ ಯವರು ಕೇಳುತ್ತಾರೆ. ******************************** ವಾಣಿ ಸುರೇಶ್ ಕಾಮತ್ ವಾಣಿ ಸುರೇಶ್ ಕಾಮತ್ , ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಇವರು ಬೆಂಗಳೂರು ವಾಸಿ. ಓದು ಮತ್ತು ತೋಟಗಾರಿಕೆ ಇವರ ಹವ್ಯಾಸ.

Read Post »

ಇತರೆ, ಲಂಕೇಶ್ ವಿಶೇಷ

ಪಿ.ಲಂಕೇಶ್ ಎಂಬ ‘ಹುಳಿಮಾವಿನ ಮರ’..!

ಲಂಕೇಶ್ ವಿಶೇಷ ಪಿ.ಲಂಕೇಶ್ ಎಂಬ ‘ಹುಳಿಮಾವಿನ ಮರ’..! ಪಿ. ಲಂಕೇಶ್ ಅವರು ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿದೆ. ಕವಿಯಾಗಿ, ಕಥೆಗಾರನಾಗಿ, ಕಾದಂಬರಿಕಾರನಾಗಿ, ಅನುವಾದಕನಾಗಿ, ನಾಟಕಕಾರನಾಗಿ, ನಟನಾಗಿ, ಚಲನಚಿತ್ರ ನಿರ್ದೇಶಕನಾಗಿ, ವಾರಪತ್ರಿಕೆ ಲಂಕೇಶ್ ಸಂಪಾದಕನಾಗಿ, ಕೃಷಿಕನಾಗಿಯೂ ಪ್ರಸಿದ್ಧನಾಗಿ ಹೆಸರು ಮಾಡಿದವರು ಪಿ.ಲಂಕೇಶ್ ಅವರು. ಹೀಗೆಯೇ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು   ಪಿ.ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್‌ 8 ರಂದು ಜನಿಸಿದವರು. ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ಮೀಡಿಯಟ್‌ಗಳನ್ನು ಶಿವಮೊಗ್ಗದಲ್ಲಿ ಮುಗಿಸಿದರು. ಬೆಂಗಳೂರು ಸೆಂಟ್ರಲ್ ಕಾಲೇಜ್‌ನಲ್ಲಿ ಬಿ. ಎ. (ಆನರ್ಸ್), ಮೈಸೂರಿನಲ್ಲಿ ಎಂ.ಎ. (ಇಂಗ್ಲಿಷ್) ಅಧ್ಯಯನ ನಡೆಸಿ ಅವರು ಶಿವಮೊಗ್ಗದಲ್ಲಿ ಅಧ್ಯಾಪಕ ವೃತ್ತಿ ಆರಂಭ (1959) ಮಾಡಿದವರು. ಬೆಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಎರಡು ದಶಕಗಳ ಕಾಲ ಅಧ್ಯಾಪಕರಾಗಿದ್ದ ಪಿ.ಲಂಕೇಶ್ ರು ಸ್ವಯಂ ನಿವೃತ್ತಿ ಪಡೆದು ನಂತರ ಪತ್ರಿಕೋದ್ಯಮ ಪ್ರವೇಶಿಸಿದವರು. ‘ಲಂಕೇಶ್ ಪತ್ರಿಕೆ’ಯು ಪಿ.ಲಂಕೇಶ್ ಅವರ ಹರಿತ ಬರಹಗಳ ಮೂಲಕ ಕನ್ನಡ ಜಾಣ-ಜಾಣೆಯರಿಗೆಲ್ಲ ಪರಿಚಿತರಾದವರು. ವಿದ್ಯಾರ್ಥಿ ದೆಸೆಯಿಂದಲೂ ರಾಜಕೀಯದಲ್ಲಿ ಆಸಕ್ತಿ ತಳೆದಿದ್ದ ಲಂಕೇಶ್ ಅವರಿಗೆ ಸಮಾಜವಾದದತ್ತ ವಿಶೇಷ ಆಸಕ್ತಿ ಇತ್ತು. ಲೋಹಿಯಾರ ಸಮಾಜವಾದ ಪ್ರಭಾವಿತರಾಗಿದ್ದ ಪಿ.ಲಂಕೇಶ್ ರು ರಾಜಕೀಯ ಪ್ರವೇಶಿಸುವ ಬಯಕೆಯಿಂದ ‘ಪ್ರಗತಿ ರಂಗ’ ಆರಂಭಿಸಿದ್ದವರು. ’ಕೆರೆಯ ನೀರನು ಕೆರೆಗೆ ಚೆಲ್ಲಿ’, ‘ನಾನಲ್ಲ’, ‘ಉಮಾಪತಿಯ ಸ್ಕಾಲರ್ ಷಿಪ್ ಯಾತ್ರೆ’, ‘ಕಲ್ಲು ಕರಗುವ ಸಮಯ’, ’ಉಲ್ಲಂಘನೆ’, ’ಮಂಜು ಕವಿದ ಸಂಜೆ’ ಪಿ.ಲಂಕೇಶರ ಪ್ರಕಟಿತ ಕಥಾ ಸಂಕಲನಗಳು. ‘ವಾಮನ’ ಪಿ.ಲಂಕೇಶ್ ರ ಮೊದಲ ಕಥೆ. ವಾಮನದಿಂದಲೇ ವಿಮರ್ಶಕರ ಗಮನ ಸೆಳೆದರು ಪಿ.ಲಂಕೇಶ್. ಅವರ ಮತ್ತೊಂದು ಮಹತ್ವದ ಕಥೆ ‘ರೊಟ್ಟಿ’. ಇದೂ ಕೂಡ ಎಲ್ಲ ಸಾಹಿತ್ಯಾಭಿಸಿಗಳ ಆಕರ್ಷಕವಾಗಿತು. ‘ಬಿಚ್ಚು’, ‘ತಲೆಮಾರು’, ಪಿ.ಲಂಕೇಶ್ ರ ಕವನ ಸಂಕಲನಗಳು, ಗದ್ಯದ ವಿಚಿತ್ರ ಸೊಗಸನ್ನು ಪದ್ಯಗಳಿಗೆ ತೊಡಿಸಿ ಕಾವ್ಯ ಬರೆದ ಪಿ.ಲಂಕೇಶ್‌ ರ ‘ಅವ್ವ-1’, ‘ಅವ್ವ-2’, ‘ದೇಶಭಕ್ತ ಸೂಳೆಮಗನ ಗದ್ಯಗೀತೆ’ ಅತ್ಯುತ್ತಮ ಕವನಗಳು. ನವ್ಯಕಾವ್ಯದ ಪ್ರಾತಿನಿಧಿಕ ಸಂಕಲನ ‘ಅಕ್ಷರ ಹೊಸಕಾವ್ಯ’ವನ್ನು ಸಂಪಾದಿಸಿ ಪ್ರಕಟಿಸಿದ್ದವರು. ಫ್ರೆಂಚ್ ಕವಿ ಬೋದಿಲೇರನ್ ಕವಿತೆ ‘ಪಾಪದ ಹೂಗಳು’ ಲಂಕೇಶ್ ಅನುವಾದಿಸಿರುವ ಮಹತ್ವದ ಸಂಕಲನವಾಗಿದೆ ನಮಗೆಲ್ಲಾ. ‘ಟಿ. ಪ್ರಸನ್ನನ ಗೃಹಸ್ಥಾಶ್ರಮ’ ಲಂಕೇಶರ ಪ್ರಥಮ ನಾಟಕವಾಗಿದೆ. ‘ಏಳು ನಾಟಕ’, ‘ಸಂಕ್ರಾಂತಿ’, ‘ಗುಣಮುಖ’ ಪಿ.ಲಂಕೇಶ್ ರ ನಾಟಕ ಕೃತಿಗಳು. ‘ಈಡಿಪಸ್ ಮತ್ತು ಅಂತಿಗೊನೆ’ ಸಫೋಕ್ಷಿಸ್ ಮಹಾಕವಿಯ ಗ್ರೀಕ್ ನಾಟಕದ ಕನ್ನಡ ಅನುವಾದ ಪಿ.ಲಂಕೇಶ್ ರ ಬಹು ಪ್ರಸಿದ್ಧಿ ಪಡೆದಿವು. ಪಿ.ಲಂಕೇಶ್ ರು ರಂಗ ಪ್ರದರ್ಶನಕ್ಕಾಗಿ ‘ಪ್ರತಿಮಾ ನಾಟಕ ರಂಗ’ ಎಂಬ ನಾಟಕ ತಂಡ ಕಟ್ಟಿದ್ದವರು. ‘ಬಿರುಕು’, ‘ಮುಸ್ಸಂಜೆಯ ಕಥಾ ಪ್ರಸಂಗ’, ’ಅಕ್ಕ’ ಪಿ.ಲಂಕೇಶ್ ರ ಕಾದಂಬರಿಗಳು. ‘ಪ್ರಸ್ತುತ (ವಿಮರ್ಶೆ) ಹಾಗೂ ‘ಕಂಡದ್ದು ಕಂಡಹಾಗೆ’ ಲೇಖನಗಳ ಸಂಗ್ರಹ ಓದುಗರಿಗೆ ಬಹು ಆಕರ್ಷಕವಾದ ಬರಹಗಳು. ‘ಲಂಕೇಶ್ ಪತ್ರಿಕೆಯ ಸಂಪಾದಕೀಯ ‘ಟೀಕೆ-ಟಿಪ್ಪಣಿ’ಯಂತೂ ಬಹು ನಮಗಂತೂ ಬಹು ಉತ್ತೇಜನಕಾರಿಯಾದ ಬರಹಗಳು. ಹೀಗೆಯೇ ಇಂತಹ ಮೂರು ಸಂಪುಟಗಳು ಪ್ರಕಟ ಮಾಡಿದರು ಪಿ.ಲಂಕೇಶ್. ‘ಮರೆಯುವ ಮುನ್ನ’ದ ಐದು ಸಂಪುಟ, ’ಬಿಟ್ಟು ಹೋದ ಪುಟಗಳು’ ಮೂರು ಸಂಪುಟ ಪ್ರಕಟವಾಗಿವೆ. ‘ಪತ್ರಿಕೆ ಪ್ರಕಾಶನದ ಮೂಲಕ ಕನ್ನಡದ ಮಹತ್ವದ ಕೃತಿಗಳನ್ನೂ ಪಿ.ಲಂಕೇಶ್ ಪ್ರಕಟಿಸಿದ್ದಾರೆ. ಅದಕ್ಕೂ ಮುನ್ನ ‘ತರುಣ ಲೇಖಕರ ಪ್ರಕಾಶನ’ದಲ್ಲಿ ಮಿತ್ರರ ಅನೇಕ ಕೃತಿಗಳನ್ನೂ ಪ್ರಕಟಿಸಿದ್ದವರು ಪಿ.ಲಂಕೇಶ್ ಅವರು. ಇದಲ್ಲದೇ ಪಿ.ಲಂಕೇಶ್ ಅವರು ಚಲನಚಿತ್ರ ರಂಗದಲ್ಲೂ ಗಮನೀಯ ಸಾಧನೆ ಮಾಡಿದವರು. ‘ಸಂಸ್ಕಾರ’ ಚಿತ್ರದಲ್ಲಿ ನಾರಾಯಣಪ್ಪನ ಪಾತ್ರ ವಹಿಸಿದ್ದ ಅವರು ‘ಪಲ್ಲವಿ’ ಚಿತ್ರದ ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರಪ್ರಶಸ್ತಿ(1977) ಪಡೆದಿದ್ದವರು. ‘ಅನುರೂಪ’, ‘ಎಲ್ಲಿಂದಲೋ ಬಂದವರು’, ’ಖಂಡವಿದೆಕೊ ಮಾಂಸವಿದೆಕೊ’ ಅವರು ನಿರ್ದೇಶಿಸಿದ ಚಲನಚಿತ್ರಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿಯ ಪ್ರಶಸ್ತಿ ಗೌರವಗಳ ಜೊತೆಗೆ ‘ಕಲ್ಲು ಕರಗುವ ಸಮಯ’ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳೂ ಸಂದಿವೆಯಾದರೂ ಪಿ.ಲಂಕೇಶ್ ರ ಬರಹಕ್ಕೆ ಸಲ್ಲಬೇಕಾದ ಗೌರವ ಸಂದಿಲ್ಲ ಎಂಬುದೇ ಅವರ ಬರಹ ಅಭಿಮಾನಿಗಳ ಸೋಜಿಗದ ವಿಷಯ. ಇಂತಹ ಪಿ.ಲಂಕೇಶ್ ಅವರು 2000ರ ಜನವರಿ 25 ರಂದು ಅಸುನೀಗಿದರು. ಈ ಪ್ರಸಂಗವೊಂದು ಬರಹಗಾರಿಕೆಯ ಓದುಗರಿಗೆ ತುಂಬಲಾರದ ನಷ್ಟವಾಯಿತು. ಇಂತಿಷ್ಟು ಪಿ.ಲಂಕೇಶ್ ಕುರಿತ ಬರಹ ಮತ್ತು ಬದುಕು… ********************************************** ಕೆ.ಶಿವು.ಲಕ್ಕಣ್ಣವರ

ಪಿ.ಲಂಕೇಶ್ ಎಂಬ ‘ಹುಳಿಮಾವಿನ ಮರ’..! Read Post »

You cannot copy content of this page

Scroll to Top