ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ವ್ಯಕ್ತಿತ್ವ ವಿಕಸನ -ರೂಪ ಮಂಜುನಾಥ ಲೇಖನ

ಲೇಖನ ಸಂಗಾತಿ ವ್ಯಕ್ತಿತ್ವ ವಿಕಸನ ರೂಪ ಮಂಜುನಾಥ ಲೇಖನ ವ್ಯಕ್ತಿತ್ವ ವಿಕಸನ     ನನ್ನ ಅನುಭವದಲ್ಲಿ ಹೇಳುವುದಾದರೆ,ಈ ವ್ಯಕ್ತಿತ್ವ ವಿಕಾಸನವೆನ್ನುವುದು ಕೇವಲ ಕಲಿಕೆಯಿಂದ ಬರುವಂಥದ್ದಲ್ಲ.”ವಿಕಸನ”,ಎನ್ನುವ ಮಾತಿಗೆ ಅರ್ಥವೇನೆಂದರೆ,”ಹಂತಹಂತವಾಗಿ ತೆರೆದುಕೊಳ್ಳುವುದು”, ಎಂದಾಗುತ್ತದೆ.ಈ ವಿಷಯ ಚೆನ್ನಾಗಿ ಅರ್ಥವಾಗಬೇಕೆಂದರೆ, ಒಂದು ಹೂವನ್ನು ಗಮನಿಸಿ.ಮೊದಲಿಗೆ ಮೊಗ್ಗಾಗಿ ಇರುವುದು,ದಳಗಳನ್ನೇನಾದರೂ ಬಲವಂತವಾಗಿ ಬಿಡಿಸಿದರೆ, ಹಸಿಹಸಿಯಾದ ಅಪಕ್ವತೆಯ ಗಂಧ ಬೀರುತ್ತದೆ. ಅದೇ ಸೂರ್ಯನ ಕಿರಣಗಳ ಕಾಂತಿ ಮತ್ತು ಶಾಖದ ಸ್ಪರ್ಶದ ಹಿತಾನುಭವದಿಂದ ಹಂತಹಂತವಾಗಿ ಅರಳಿದೆಯಾದರೆ,ಒಂದೇ ಸಮನಾಗಿ ಸುಂದರವಾಗಿ ಅರಳಿ, ಸುಗಂಧವ ಪಸರಿಸುತ್ತಾ ಎಲ್ಲರಿಗೂ ಆನಂದಾನುಭವ ನೀಡಿ ತೃಪ್ತಿ ಪಡಿಸುತ್ತದೆ. ಅಂದರೆ, ಈ ವ್ಯಕ್ತಿತ್ವವೆನ್ನುವುದು ಹುಟ್ಟಿದೊಡನೆಯೇ ಜೊತೆಯಾಗಿ ಬರುವುದೇನಲ್ಲ.ಕೆಲವು ಸಂದರ್ಭಗಳಲ್ಲಿ ಸಮಾಜದ ಸ್ಥಿತಿ ಗತಿಗಳನ್ನು  ಪ್ರಯತ್ನಪೂರ್ವಕವಾಗಿ ಅರ್ಥಮಾಡಿಕೊಂಡು ಜೀವನದಲ್ಲಿ ಕೆಲವು ಸದ್ವಿಚಾರಗಳನ್ನ ನಮ್ಮ ಆತ್ಮೋನ್ನತಿಗೆ,ಶ್ರೇಯಸ್ಸಿಗೆ,ಯಶಸ್ಸಿಗೆ ಬೇಕಾದ ರೀತಿಯಲ್ಲಿ ಅನುಷ್ಠಾನಕ್ಕೆ ತಂದುಕೊಳ್ಳಬೇಕಾಗುತ್ತದೆ.ಬದಲಾವಣೆ ಬಯಸದೆ ಕೇವಲ ಶಾಲಾಕಾಲೇಜುಗಳಲ್ಲಿ ಕಲಿತ  ವಿದ್ಯೆಯೊಂದಿದ್ದ ಮಾತ್ರಕ್ಕೆ ಎಲ್ಲ ಸಮಯಗಳಲ್ಲೂ ಆ ವಿದ್ಯೆ ಕೆಲಸಕ್ಕೆ ಬಾರದು.ಅಪರಿಪಕ್ವತೆಯಿಂದ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಪ್ರಯೋಜನಕ್ಕಿಂತಲೂ ಪ್ರಮಾದವನ್ನೇ ಸೃಷ್ಟಿಸುತ್ತವೆ.ನನ್ನ ಭಾವನೆಯಲ್ಲಿ ವಿದ್ಯೆಯ ಜೊತೆಗೆ ವಿನಯವೂ ಇದ್ದಾಗ ಮಾತ್ರ ವ್ಯಕ್ತಿತ್ವಕ್ಕೆ ಭೂಷಣ.ಭೂಷಣದ ಜೊತೆಗೆ ವ್ಯಕ್ತಿತ್ವದ ವಿಕಸನವೂ ಆಗಬೇಕಾದರೆ, ಕೆಲವ ವಿಷಯಗಳನ್ನು ದಿನನಿತ್ಯ ಜೀವನದಲ್ಲಿ ಗಮನಿಸುತ್ತಾ, ದೃಢವಾಗಿ ಅನುಷ್ಠಾನಕ್ಕೆ ತರಬೇಕಾಗುತ್ತದೆ.         ವ್ಯಕ್ತಿತ್ವ ವಿಕಸನದಲ್ಲಿ ಮುಖ್ಯವಾಗಿ ಬೇಕಾಗಿರುವುದು,ದೇಹ ಹಾಗೂ ಮನಸ್ಸುಗಳ ಸ್ವಾಸ್ಥ್ಯ,ವಿಷಯ ಗ್ರಹಿಕೆ,ಸೂಕ್ತವಾಗಿ ಪ್ರತಿಕ್ರಯಿಸುವ ಪ್ರಜ್ಞೆ,ಆವೇಶದಲ್ಲಿ ಸಮತೋಲನ, ಹಾಗೂ ಸಮಯದ ಸದುಪಯೋಗ.ಮುಖ್ಯವಾದ ಇವೈದು ವಿಷಯಗಳನ್ನ ಯಾರು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವರೋ, ಹಾಗೆಂದು ಈ ಎಲ್ಲ ವಿಷಯಗಳಲ್ಲಿ ಸಂಪೂರ್ಣ ಹಿಡಿತ ಯಾರಿಗೂ ಒಮ್ಮೆಗೇ ಸಿದ್ದಿಸುವುದೂ ಸಾಧ್ಯವಿಲ್ಲ.ಜೀವನಾನುಭವಗಳು,ಪುಸ್ತಕಗಳು,ಸದ್ಗುರುಗಳ ಸಾಂಗತ್ಯವಲ್ಲದೆ ಕಲಿಯುವ ಯಾವ ಮಾರ್ಗವಿದ್ದರೂ, ಗುರುತಿಸಿ, ಶ್ರದ್ದೆಯಿಟ್ಟು ನಮ್ಮ ಅರಿವನ್ನು ಬೆಳೆಸಿಕೊಳ್ಳಬೇಕಾಗುತ್ತದೆ.            ಬಹಳ ಮುಖ್ಯವಾಗಿ ಹೇಳುವುದಾದರೆ,ನಮ್ಮ ವ್ಯಕ್ತಿತ್ವ ವಿಕಾಸನವಾಗಬೇಕಾದರೂ, ನಾವು ಮತ್ತೊಬ್ಬರ ವ್ಯಕ್ತಿತ್ವವನ್ನು ವಿಕಸಿಸುವ ಪ್ರಯತ್ನದಲ್ಲಿದ್ದೆವಾದರೂ, ನಮಗೆ ಮೊದಲಿಗೆ ಬೇಕಿರುವುದು ಆರೋಗ್ಯವಾದ ಶರೀರ.ದೇಹ ರೋಗಗಳ ಗೂಡಾದರೆ,ಏನು ತಾನೆ ಸಾಧಿಸಲು ಸಾಧ್ಯ?ಹಾಗೆಂದ ಮಾತ್ರಕ್ಕೆ ಏನೇ ದೇಹ ಸಹಕರಿಸದಿದ್ದರೂ ಧೃಢವಾದ ಮನಸ್ಸಿನಿಂದ ಸಾಧಿಸುವ ಕಾರ್ಯ ಸರ್ ಸ್ಟೀಫನ್ ಹಾಕಿನ್ಸ್ ರಂಥ ಅತೀ ವಿರಳ ಮಹಾತ್ಮರಿಂದ ಮಾತ್ರ ಸಾಧ್ಯ.ನಮ್ಮ ಮುಖದಲ್ಲಿ ಕಾಂತಿಯಿದ್ದರೆ, ದೇಡ ಸಧೃಡವಾಗಿದ್ದರೆ ನಮ್ಮ ಮಾತಿನಲ್ಲಿ ಕಿಮ್ಮತ್ತಿರುತ್ತದೆ. “ ಅಯ್ಯೋ, ಇವ್ರನ್ನ ನೋಡಿದರೇನೇ ಒಳ್ಳೆ ತುಸುಕುಲಾಂಟಿ ಥರ ಇದ್ದಾರೆ, ಇವ್ರೇನು ಇನ್ನೊಬ್ಬರನ್ನ ಇನ್‌ಸ್‌ಪೈರ್ ಮಾಡ್ತರೇ?”ಎಂದು ಮೂಗು ಮುರಿಯದೇ ಇರುವರೇ? ಹೌದ್ರೀ.ಇದು ಪ್ರೆಸೆಂಟೇಷನ್ ಯುಗ. ನಮ್ಮನ್ನ ನಾವು ಹೇಗೆ ಪ್ರೆಸೆಂಟ್ ಮಾಡಿಕೊಳ್ತೀವೋ, ಆಗಲೇ ಮುಕ್ಕಾಲು ಭಾಗ ಜನರು ಇನ್ಸ್‌ಪೈರ್ ಆಗಿಹೋಗ್ತಾರೆ.ಫಸ್ಟ್ ಇಂಪ್ರೆಸ್ಸಿಂಗ್ ಈಸ್ ಮೋಸ್ಟ್ ಇಂಪಾರ್ಟೆಂಟ್.ನಮ್ಮ ವಯಸ್ಸಿಗೆ ಬೇಕಾದ ವ್ಯಾಯಾಮ ದಿನ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು,ಕಟುಮಸ್ತಾಗಿದ್ದರೆ ಒಂದು ಗಂಟೆಯಾದರೂ ಸತತವಾಗಿ ನಿಂತು ಸಭೆಯಲ್ಲಿ ಜನರನ್ನು ಉತ್ತೇಜಿಸುವಂಥ ಮಾತುಗಳನ್ನಾಡಲು ಸಾಧ್ಯ. ಬದಲಿಗೆ ನಾವೇ, ಸಾವಾರಿಸಿಕೊಂಡು ಆಗಾಗ ನೀರು ಕುಡಿದರೆ,ಹಾಸ್ಯಾಸ್ಪದವಾಗುತ್ತೇವೆ.ಆದರಿಂದಲೇ ಆರೋಗ್ಯವೆನ್ನುವುದು ತ್ವರಿತದಲ್ಲಿ ಪಡೆದುಕೊಳ್ಳುವ ಸಾಧನವಲ್ಲ. ಅದಕ್ಕೆ ಎಲ್ಲಾ ಕಾಲದಲ್ಲೂ ಸತತವಾಗಿ ಪೋಷಣೆಬೇಕು.ಆಹಾರ ಸೇವಿಸುವುದರಲ್ಲೂ ಬಹಳ ಗಮನ ಬೇಕಾಗುತ್ತದೆ. ಏನು ಸಿಕ್ಕರದು, ಎಲ್ಲಿ ಸಿಕ್ಕರಲ್ಲಿ ಹಿಡಿತವಿಲ್ಲದೆ ತಿನ್ನುವ ಅಭ್ಯಾಸ ಕೂಡದು.ತಿಂದಿದ್ದನ್ನು ಅರಗಿಸುವ ಅಭ್ಯಾಸ ಇಟ್ಟುಕೊಳ್ಳಲೇಬೇಕು.ಆದಷ್ಟೂ ಸೂರ್ಯಕಿರಣಗಳಿಂದ ದೊರಕುವ ವಿಟಮಿನ್ ಡಿ, ಶುದ್ದ ಗಾಳಿ ಸೇವನೆ, ಪ್ರಾಣಾಯಾಮ ಹಾಗೂ ಧ್ಯಾನಗಳನ್ನು ಮಾಡುತ್ತಾ ದೇಹ ಹಾಗೂ ಮನಸುಗಳ ಸ್ವಾಸ್ಥತೆಯನ್ನು ಕಾಪಾಡಿಕೊಳ್ಳಬೇಕು.ಹಣ್ಣುತರಕಾರಿಗಳನ್ನು ಆದಷ್ಟೂ ಸಂಸ್ಕರಿಸದೇ ನೈಸರ್ಗಿಕವಾಗಿ ಅವು ದೊರಕಿದಂತೆಯೇ ತಿನ್ನುವ ಅಭ್ಯಾಸವಿದ್ದರೆ, ರೋಗಗಳಿಂದ ಬಲುದೂರ ಉಳಿಯುಲು ಸಾಧ್ಯ.ರೋಗನಿರೋಧಕ ಶಕ್ತಿ ನಮ್ಮಲ್ಲಿ ಬೆಳೆಯುತ್ತದೆ. ಸಮತೋಲನವಾದ ಆಹಾರ ಬಹು ಮುಖ್ಯ. ಕನಿಷ್ಟ ಪ್ರತಿದಿನ ಒಂದು ಗಂಟೆಯಾದರೂ ದೇಹವನ್ನು ದಂಡಿಸಿ ಬೆವರಬೇಕು. ಎಸಿ ಕಾರುಗಳಲ್ಲಿ ತಿರುಗುತ್ತಾ, ಎಸಿ ಛೇಂಬರುಗಳಲ್ಲಿ ಕೆಲಸ ಮಾಡುತ್ತಾ, ಕೆಲಸಮಯವೂ ಬಿಸಿಲನ್ನು ತಡೆಯದೆ ಹೋದರೆ,ಹಲವಾರು ಖಾಯಿಲೆಗಳನ್ನು ಹೊಂದಿ ನಿತ್ರಾಣನಾಗಿದ್ದರೆ,ಆ ವ್ಯಕ್ತಿ ಎಷ್ಟು ದೊಡ್ಡ ಪದವಿಯನ್ನು ಜೀವನದಲ್ಲಿ ಗಳಿಸಿದ್ದರೂ, ಎಷ್ಟು ಕೋಟಿ ಸಂಪಾದನೆ ಮಾಡಿದ್ದರೂ ಇನ್ನೊಬ್ಬರಿಗೆ ಮಾದರಿ ಆಗಲಾರ. ಹಾಗಿರುವವನು ಯಾರ ಮೇಲೂ ಪ್ರಭಾವ ಬೀರಲಾರ.ಆರೋಗ್ಯದ ದೇಹದೊಂದಿಗೆ ಮುಖದಲ್ಲಿ ಕಾಂತಿ,ವಿಶ್ವಾಸ, ಲವಲವಿಕೆ ಇದ್ದರೆ,ಯಾರಾನ್ನಾದರೂ ಆಯಸ್ಕಾಂತದಂತೆ ಸೆಳೆಯಬಹುದು.      ಇನ್ನು ಯಾರೊಡನೆ ಮಾತನಾಡಲು  ನಿಂತಾಗ ನಮ್ಮ ಮಾತುಗಳು ಸರಳವಾಗಿಯೂ ,ಮಧುರವಾಗಿಯೂ,ಆಕರ್ಷಕವಾಗಿರಬೇಕು.ಹಾಗೇ ಯಾರನ್ನಾಗಲೀ,ನಿಂದಿಸದೆ, ನೋಯಿಸದೆ, ಉದ್ರೇಕಿಸದೇ,ವಿಷಯವನ್ನು ಮನವರಿಕೆ ಮಾಡುವಂತಿರಬೇಕು.ಮತ್ತು ನಾವು ಯಾವ ವಿಷಯ ಮಾತನಾಡಲು ನಿಂತಿರುತ್ತೇವೆಯೋ, ಆ ವಿಷಯದ ಬಗ್ಗೆ ಸಾಕಷ್ಟು ಕೂಲಂಕುಷವಾದ ವಿವರ ತಿಳಿದಿರಬೇಕು. ಅಷ್ಟೇ ಆತ್ಮವಿಶ್ವಾಸದಿಂದ ಮಾತನಾಡಬೇಕು.ಹಾಗೆೇ ವಿಪರೀತವಾದ ಉತ್ಸಾಹದಿಂದ,ಆವೇಶದಿಂದ ಮಾತನಾಡುವುದೂ ಕೂಡದು. ಸ್ಥಿತಪ್ರಜ್ಞತೆ ಕಾಪಾಡಿಕೊಳ್ಳುವುದು ಬಹಳ ಅಗತ್ಯ. ಸುತ್ತಿ ಬಳಸಿ ಮಾತನಾಡದೇ, ಸಭೆಗೆ ನೇರವಾಗಿ ವಿಷಯವನ್ನು ಅರಿಕೆ ಮಾಡಿ ಸಮಯಕ್ಕೆ ನ್ಯಾಯ ಒದಗಿಸುವ ಛಾತಿ ಇರಬೇಕಾಗುತ್ತದೆ. ಪೂರ್ವಾಗ್ರಹ ಪೀಡಿತರಾಗದೇ,ಬಲಹೀನರಾಗದೇ, ಆಶಾವಾದಿಗಳಾಗಿ,ವಿಷಯವನ್ನು ಮಂಡನೆ ಮಾಡಬೇಕು.ಕೋಟಿ ಕೊಟ್ಟರೂ ಕೂಡಾ ಕಳೆದ ಒಂದು ಕ್ಷಣವನ್ನೂ ಹಿಂದಕ್ಕೆ ತರಲಾಗುವುದಿಲ್ಲ. ಅಂಥ ಅತ್ಯಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೆ,ಸಾರ್ಥಕ ಪಡಿಸಿಕೊಳ್ಳಬೇಕು.ಸಾಮಾನ್ಯರಿಗೂ ಸಾಧಕರಿಗೂ ಭಗವಂತ ನೀಡಿರುವುದು,ದಿನಕ್ಕೆ ಇಪ್ಪತ್ತು ನಾಲ್ಕು ಗಂಟೆಗಳೇ.ಆದರೆ,ಅದರ ಸದ್ಬಳಕೆ ನಮಗೆ ಬಿಟ್ಟ ವಿಷಯ.        ಹಾಗೇ, ಯಾವ ವ್ಯಕ್ತಿಯು ಬಲು ಧನಿಕನಾಗಿಯೋ,ಉನ್ನತ ಹುದ್ದೆಯ ಸಂಪಾದಿಸಿದವರೋ ಆಗಿದ್ದರೆ, ಅಂಥವರ ಸಾಂಗತ್ಯದಿಂದ ಮಾತ್ರಕ್ಕೆ ವ್ಯಕ್ತಿತ್ವ ವಿಕಸನ ಆಗದು.ಯಾವ ವ್ಯಕ್ತಿಯ ಸಂಪರ್ಕ, ಹಾಗೂ ಮಾರ್ಗದರ್ಶನದಲ್ಲಿ ನಮಗೆ ಮನಃಶಾಂತಿ ದೊರೆಯುವುದೋ,ಜೀವಿಸಲು ಸುಲಭ ಮಾರ್ಗಗಳು ಕಾಣುವುದೋ,ಯಾವ ಕ್ಲಿಷ್ಟಕರವಾದ ವಿಚಾರಕ್ಕೂ ಸ್ಪಷ್ಟವಾದ ಉತ್ತರ ದೊರಕುವುದೋ,ನಮಗೆ ಒಂದು ದಿಕ್ಕುತೋರುವ ಹಿರಿಯನಿದ್ದಾನೆ(ಕಿರಿಯರಾದರೂ, ಅನುಭವದಲ್ಲಿ ಹಿರಿತನವಿದ್ದರೆ, ತಪ್ಪಿಲ್ಲ)ಎನ್ನುವ ಭರವಸೆಯ ಭಾವನೆ ಮೂಡುವುದೋ, ಯಾರ ಸಹವಾಸದಲ್ಲಿ ನಮ್ಮ ವ್ಯಕ್ತಿತ್ವ ಊರ್ಧ್ವಮುಖಿಯಾಗಿ ತೆರೆದುಕೊಳ್ಳುತ್ತದೆ ಎನಿಸಿವುದೋ,ಅಂಥವರಿಂದ ಮಾತ್ರವೇ ನಮ್ಮಲ್ಲಿ ಸಕಾರಾತ್ಮಕ ಬದಲಾವಣೆಗಳಾಗಲು ಸಾಧ್ಯ.                        ವ್ಯಕ್ತಿತ್ವ ವಿಕಸನವೆನ್ನುವುದು ಒಬ್ಬ ವ್ಯಕ್ತಿಯ ಹಾರ್ಡ್ವೇರ್ ಮತ್ತು ಸಾಫ್‌ಟ್ವೇರ್ಗಳ ಸಮ್ಮಿಲನದಿಂದಾಗುವಂಥದ್ದು.ಗಳಿಸಿದ ವಿದ್ಯೆ,ಪದವಿಗಳು ಅವನ ಹಾರ್ಡ್‌ವೇರಾದರೆ, ಲೋಕಜ್ಞಾನ,ಚತುರ ನಿರ್ಧಾರಗಳು, ಸಕಾಲದಲ್ಲಿ ತೆಗೆದುಕೊಳ್ಳುವ ತೀರ್ಮಾನ,ಸಮಾಜದ ಬಗೆಗಿನ ಅಂತಃಕರಣ ಇವುಗಳು ಅವನ ಸಾಫ್‌ಟ್‌ವೇರ್.ವ್ಯಕ್ತಿಯು ಮುಖ್ಯವಾಗಿ ಐದು ರೀತಿಗಳಲ್ಲಿ ಆಲೋಚಿಸುತ್ತಾನೆ.ಒಂದು, ಸಕಾರಾತ್ಮಕ ಚಿಂತನೆ, ಎರಡು, ನಕಾರಾತ್ಮಕ ಚಿಂತನೆ, ಮೂರು,ವಿಷಕಾರೀ ಚಿಂತನೆ, ನಾಲ್ಕನೆಯದು,ವ್ಯರ್ಥ ಚಿಂತನೆ, ಐದನೆಯದು, ಕ್ರಿಯಾತ್ಮಕ ಚಿಂತನೆ.ವ್ಯಕ್ತಿತ್ವ ವಿಕಸನಕ್ಕೆ ಮೊದಲನೆಯ ಮತ್ತು ಕೊನೆಯ ಚಿಂತನೆ ಬಹಳ ಸಹಾಯಕಾರಿಯಾಗುತ್ತವೆ. ಬೈಬಲ್ ನಲ್ಲಿ ಹೇಳಿರುವಂತೆ, “As a man think, so he is”, ಅನ್ನುವಂತೆ,ನಮ್ಮ ಆಲೋಚನೆಗಳು, ನಮ್ಮ ಉದ್ದೇಶಗಳಲ್ಲಿ ಸ್ಪಷ್ಟತೆ ಇರಬೇಕು.ಜೊತೆಗೆ, “where the attention goes, there the energy flows”ಎನ್ನುವಂತೆ,ನಮ್ಮ ಶಕ್ತಿ ನಮ್ಮ ಗಮನದತ್ತಲೇ ಹರಿದು, ಗುರಿ ಮುಟ್ಟಲು ನೆರವಾಗುತ್ತದೆ.              ಒಳ್ಳೆಯ ಸಂಸ್ಕಾರಗಳು, ಆಲೋಚನೆಗಳನ್ನು ಹೊಂದಿ, ಸನ್ಮಾರ್ಗದತ್ತ ನಡೆದು ಜೀವನದ ಉನ್ನತಿಗಾಗಿ ಉತ್ತಮ ಗುಣಗಳನ್ನು ಅನುಷ್ಠಾನಕ್ಕೆ ತಂದುಕೊಳ್ಳಬೇಕು.ಸುಖಕ್ಕೆ ಹಿಗ್ಗದೆ ಕಷ್ಟಕ್ಕೆ ಕುಗ್ಗದೆ,ಎಸೆದರೆ ನೆಲಕ್ಕಂಟುವ ಮಣ್ಣಿನ ಮುದ್ದೆಯಾಗದೆ, ಪುಟಿದೇಳುವ ಚೆಂಡಿನಂತೆ ನಾವಿರಬೇಕು.ಒಂದು ವಿಷಯದಲ್ಲಿ ಸೋಲುಂಡರೆ ಧೃತಿಗೆಟ್ಟು ಕುಸಿಯದೆ,ಬೂದಿಯಿಂದ ಎದ್ದುಬರುವ ಫೀನಿಕ್ಸ್ ಪಕ್ಷಿಯಂತೆ ಮತ್ತೆ ಗರಿಗೆದರಿ ಹಾರುವುದನ್ನು ಕಲಿಯಬೇಕು.ಸಾಧಕರ ಜೀವನ“ Bed of roses”, ಆಗಿರುವುದಿಲ್ಲ. ಅವರ ಸತತ ಹೋರಾಟ,ಸೋಲೊಪ್ಪಿಕೊಳ್ಳದೆ ಮರುಯತ್ನ ಮಾಡುವ ಅಚಲ ನಿರ್ಧಾರ, ಸತತ ಪರಿಶ್ರಮ,ತಾಳ್ಮೆ,ವಿವೇಚನೆ, ಅವರನ್ನು ಎತ್ತರಕ್ಕೆ ನಿಲ್ಲಿಸುತ್ತದೆ.ಸಫಲರನ್ನಾಗಿ ಮಾಡುತ್ತದೆ.    ನಮ್ಮೆಲ್ಲರ ಅಭಿಮಾನದ ಹೆಮ್ಮೆಯ ಸಾಧಕರುಗಳಾದ ವಿಜ್ಞಾನಿ ಹಾಗೂ ಭಾರತದ ಮಾಜಿ ಅಧ್ಯಕ್ಷರಾದ,  ಅಬ್ದುಲ್ ಕಲಾಂರವರಾಗಲೀ,ನಮ್ಮ ಈಗಿನ ಜನಪರನಾಯಕ ಪ್ರಧಾವ ಮಂತ್ರಿ ನರೇಂದ್ರ ಮೋದಿಯವರಾಗಲೀ,ವರನಟ ಡಾ॥ ರಾಜ್‌ಕುಮಾರ್ ರವರಾಗಲೀ,ರಿಲಯನ್ಸ್ ಕಂಪನಿಯ ಯಶಸ್ವೀ ಪುರುಷ ಧೀರೂ ಭಾಯ್ ಅಂಬಾನಿಯವರಾಗಲೀ ಅತೀ ಸಾಮಾನ್ಯ ಕುಟುಂಬದಿಂದ ಬಂದವರೇ ಆದರೂ, ಅವರ ಕಾಯಕ ನಿಷ್ಠೆ ಅವರನ್ನಷ್ಟು ಎತ್ತರಕ್ಕೆ ಕೊಂಡೊಯ್ಯಿತು.ಜಗಜ್ಯೋತಿ  ಬಸವಣ್ಣನವರು ಹೇಳಿದಂತೆ ಈ ಮಹಾನುಭಾವರುಗಳು”ಕಾಯಕದಲ್ಲೇ ಕೈಲಾಸ”,ಕಂಡವರು.They were masters of their minds,not slaves.ನಮ್ಮ ಧ್ಯೇಯ, ಉದ್ದೇಶ, ಗುರಿಯನ್ನು ಮುಟ್ಟುವವರೆಗೂ ವಿಶ್ರಾಂತಿ ತೆಗೆದುಕೊಳ್ಳದೆ,ಸತತ ಪ್ರಯತ್ನ ಮಾಡುವ ಅಚಲ ಮನಸ್ಸಿರಬೇಕು.         ಬೀಗಿ ಬದುಕದೇ, ಬಾಗಿ ಬದುಕುವುದು ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಇನ್ನೊಂದು ಮಹಾ ಗುಣ.ಒಂದು ಗಜ, ಮಾವುತನ ಭರ್ಜಿಗೆ ಹೆದರಿ ಬಾಗಿ , ಅವನ ಮಾತನ್ನ ಕೇಳಿದೆಯಾದರೆ, ಭಗವಂತನ ಉತ್ಸವವನ್ನು ಹೊರುವ ಸೌಭಾಗ್ಯ ಅದರದಾಗುತ್ತದೆ.ಆದೇ ಆ ಗಜವು ಸೋಲದಿದ್ದರೆ ಸರಪಳಿಯಲ್ಲಿ ಬಿಗಿದು, ಬಂಧಿಯಾಗಿಸುತ್ತಾರೆ. ಆದರೂ ಬಾಗದಿದ್ದಾಗ ಅಡವಿಗೆ ಬಿಟ್ಟುಬರುತ್ತಾರೆ.ವಿನಯದಿಂದ ಜ್ಞಾನ ಸಂಪಾದನೆ ಮಾಡಿದಷ್ಟೂ ವ್ಯಕ್ತಿ ಮೇಲೇರಲು ಸಾಧ್ಯವಾಗುತ್ತದೆ.ನಾನತ್ವವೆಂಬ ಅಹಂ ಬೆಳೆಸಿಕೊಂಡರೆ,ಬೆಳವಣಿಗೆ ಅಸಾಧ್ಯ.ಹಿರಿಯರ, ಜ್ಞಾನಿಗಳ,ಸಹವಾಸದಲ್ಲಿ ಸೌಜನ್ಯದಿಂದ ವರ್ತಿಸಿ ಜ್ಞಾನ ಸಂಪಾದನೆ ಮಾಡಿಕೊಳ್ಳುವವನು ಎಲ್ಲರಿಂದಲೂ ಪೂಜನೀಯನಾಗುತ್ತಾನೆ. ಸರ್ವಜ್ಞ ಮಹಾಕವಿಯು ತಾನು ಹೇಗೆ  ಸರ್ವಜ್ಞನೆನಿಸಿಕೊಂಡೆ ಎಂದು ತಮ್ಮ ತ್ರಿಪದಿಯೊಂದರಲ್ಲಿ ಹೀಗೆ ಒಕ್ಕಣಿಸಿದ್ದಾರೆ…… ಸರ್ವಜ್ಞನೆಂಬುವನು ಗರ್ವದಿಂದಾವನೇ? ಸರ್ವರೊಳಗೊಂದು ನುಡಿಯ ಕಲಿತು, ವಿದ್ಯೆಯ ಪರ್ವತವೇ ಆದ ಸರ್ವಜ್ಞ. ಎಂದು ಮಹಾಕವಿಯು, ಎಷ್ಟು ವಿನಮ್ರಭಾವದಿಂದ,ಹೇಳಿಕೊಂಡಿರುವಲ್ಲಾ! ಅಂತೆಯೇ ಸಾಧಕರಿಗೆ ವಿಧೇಯತೆಯೂ ಒಂದು ಬಹು ಮುಖ್ಯವಾದ ಬೇಕಾದ ಗುಣ.           ವ್ಯಕ್ತಿತ್ವ ವಿಕಸನವೆನ್ನುವ ವಿಷಯವು ಇಷ್ಟಕ್ಕೆ ಮಾತ್ರವೇ ಮುಗಿಸುವಂತಹ ಪುಟ್ಟ ವಿಷಯವಲ್ಲ.ಅದರ ವ್ಯಾಪ್ತಿ ಬಹಳ ವಿಸ್ತಾರವಾದದ್ದು. ಆದರೂ ನಿಯಮxaxxxxxವಿರುವ ಪರಿಮಿತಿಯಲ್ಲಿ ಲೇಖನಿಸಿದ್ದೇನೆ.ಕನಿಷ್ಟ, ಇಲ್ಲಿ ತಿಳಿಸಿರುವಷ್ಟು ಗುಣಗಳನ್ನಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡೆವಾದರೆ,ನಮ್ಮ ವ್ಯಕ್ತಿತ್ವ ಸಾಕಷ್ಟು ವಿಕಸನವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ————————– . ರೂಪ ಮಂಜುನಾಥ

ವ್ಯಕ್ತಿತ್ವ ವಿಕಸನ -ರೂಪ ಮಂಜುನಾಥ ಲೇಖನ Read Post »

ಇತರೆ

ಭಾರತದ ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ; ಖಾದಿಯೇತರ ಬಟ್ಟೆಗೂ ಅಸ್ತು ವಿವಾದ

ಲೇಖನ ಸಂಗಾತಿ

ಭಾರತದ ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ:

ಖಾದಿಯೇತರ ಬಟ್ಟೆಗೂ ಅಸ್ತು ವಿವಾದ

ಡಾ. ಎಸ್.ಬಿ. ಬಸೆಟ್ಟಿ

ಭಾರತದ ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ; ಖಾದಿಯೇತರ ಬಟ್ಟೆಗೂ ಅಸ್ತು ವಿವಾದ Read Post »

ಇತರೆ

ಸಂಗೀತ ಒಂದು ಅಧ್ಬುತ ಶಕ್ತಿ ಡಾ.ಸುನಂದಾ ಬಿ.ಸಾಲವಾಡಗಿ

ವಿಶೇಷ ಲೇಖನ ಸಂಗೀತ ಒಂದು ಅಧ್ಬುತ ಶಕ್ತಿ ಡಾ.ಸುನಂದಾ ಬಿ.ಸಾಲವಾಡಗಿ ಸಂಗೀತ ಒಂದು ಅಧ್ಬುತ ಶಕ್ತಿ ನಮ್ಮ ಪುರಾತನ ಋಷಿ ಮುನಿಗಳು ಸಂಗೀತವನ್ನು “ಗಂಧರ್ವ ವಿದ್ಯೆ” ಎಂದೂ “ಸಂಗೀತ ಕಲೆ” ಎಂದೂ ಗುರುತಿಸಿದ್ದಾರೆ. ಸಂಗೀತದ ಮೂಲಕ ಅವರು ಲೌಕಿಕ ಮತ್ತು ಪಾರಮಾರ್ಥಿಕ ಜೀವನದ ಅರ್ಥವನ್ನು ಅರಿತು ಕೊಂಡಿದ್ದರು. ಸಂಗೀತದಲ್ಲಿಯ ಅಲೌಕಿಕ ಶಕ್ತಿಯನ್ನು ಗುರುತಿಸಿ, ತನ್ಮೂಲಕ ಶಿವ ಸಾಕ್ಷಾತ್ಕಾರವನ್ನು ಸಾಧಿಸಿದ್ದರು. ಈ ದೃಷ್ಟಿಯಲ್ಲಿ ಅವರಿಗೆ ಸಂಗೀತವು ನಾದಾಂತವೂ ಆಗಿತ್ತು. ವೇದಾಂತವೂ ಆಗಿತ್ತು. ಸಂಗೀತದಲ್ಲಿ ಅಧ್ಯಾತ್ಮಿಕ ರಸಾಭಿವ್ಯಕ್ತಿ ಮತ್ತು ರಸಾನುಭಾವಗಳೇ ಮೂಲವಾದ ಅಂಶಗಳಾಗಿದ್ದವು. ಅಲ್ಲದೆ ನಮ್ಮ ಪುರಾತನ ರಸಋಷಿಗಳಿಗೆ “ರಸ ಗ್ರಹಣಕ್ಕೆ ವ್ಯತಿರಿಕ್ತವಾಗಿ ಅಧ್ಯಾತ್ಮ ಅಥವಾ ದೈವೀ ಸಾಕ್ಷಾತ್ಕಾರವೇ ಸಂಗೀತದ ಚರವೋದ್ದೇಶವಾಗಿತ್ತು” ಎಂಬ ಮಾತು ಭಾರತೀಯ ಸಂಗೀತದ ಇತಿಹಾಸವನ್ನು ಅವಲೋಕಿಸಿದಾಗ ತಿಳಿದು ಬರುತ್ತದೆ. ಸಂಗೀತ ಕಲೆ, ಸ್ವರ, ಭಾವ, ಲಯ ಹಾಗೂ ಶೃತಿಗಳಿಂದ ಕೂಡಿದ ಧ್ವನಿ ಸಮನ್ವಯವಾಗಿದೆ. ಧ್ವನಿಯು ಮಾನವನ ದೈಹಿಕ ಬೌದ್ಧಿಕ ಹಾಗೂ ಮಾನಸಿಕ ಆರೋಗ್ಯದ ಸಮತೋಲನವನ್ನು ಕಾಯ್ದುಕೊಂಡು ಹೋಗುವಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಸೂಕ್ಷ್ಮತೆಯಿಂದ ನೋಡಿದಾಗ ಎಲ್ಲ ವಿದ್ಯೆ ಮತ್ತು ಕಲೆಗಳು ಈ ಜೀವ ಜಗತ್ತು ಮತ್ತು ದೇವರ ರಹಸ್ಯವನ್ನು ತಿಳಿದುಕೊಳ್ಳುವುದರಲ್ಲಿ ಪರ‍್ಯಾವಸಾನಗೊಳ್ಳುತ್ತವೆಂಬುದು ಅರಿವಿಗೆ ಬರುತ್ತದೆ. ವಿಜ್ಞಾನವು ವ್ಯಾಖ್ಯೆ ಅಥವಾ ಸೂತ್ರವನ್ನು ಸಮರ್ಥಿಸುತ್ತದೆ. ಸಂಗೀತವು ಕಲಾವಿದನ ರಚನಾತ್ಮಕ ಬುದ್ಧಿಯ ಒಂದು ಭಾಗವಾಗಿಯೂ ರಸಭಾವಾಭಿವ್ಯಕ್ತಿಯ ಒಂದು ಸಚೇತನ ಶಕ್ತಿಯಾಗಿದೆ. ಕಲೆಯು ಭಾವನಾ ಪ್ರಧಾನವಾಗಿರುತ್ತದೆ. ಮೊದಲನೆಯದಾಗಿ ಅದು ವಿಜ್ಞಾನಕ್ಕೆ ವ್ಯತಿರಿಕ್ತವಾಗಿ , ವ್ಯಕ್ತಿನಿಷ್ಠೆವಾಗಿ, ವ್ಯಕ್ತಿಯ ಅಥವಾ ಕಲಾವಿದನ ಸ್ವತಂತ್ರವಾದ ವ್ಯಕ್ತಿತ್ವದ ವಿಕಾಸವರ್ದನೆಗೆ ಅವಕಾಶವನ್ನು ಕಲ್ಪಿಸಿಕೊಡುವುದು, ಸಂಗೀತವು ಒಂದು ವಿಜ್ಞಾನವೇ ಆಗಿದೆ. ಆದರೆ, ಅದರ ಸಿದ್ದಿಗಾಗಿ, ವರ್ಷಗಳ ತಪಸ್ಸು ಅವಶ್ಯವಾಗಿದೆ. ಇಲ್ಲಿ ಕೆಲವು ಸಮಯದಿಂದ ವಿಜ್ಞಾನಿಗಳ ಧ್ಯಾನ ಸಂಗೀತದ ಕಡೆಗೆ ವಾಲುತ್ತಿದೆ. ಆದರೆ, ಸಂಗೀತದ ಕ್ರಿಯಾತ್ಮಕ ಜ್ಞಾನದ ಅಭಾವದಿಂದಾಗಿ ವಿಜ್ಞಾನಿಗಳ ಸಂಗೀತದ ಕಡೆಗೆ ಗಮನ ಕೊಡಲಾಗುತ್ತಿಲ್ಲ. ನಾದದ ವಿಲಕ್ಷಣ ಶಕ್ತಿ ಇನ್ನೂ ಅಪ್ರಕಟಿತವಾಗಿದೆ. ಯಾವಾಗ ಅದು ಪ್ರಕಟವಾಗುವುದೋ ಆಗ ಪ್ರತಿಯೊಬ್ಬರು ಸಂಗೀತವನ್ನು ವಿಜ್ಞಾನವೆಂದು ಸ್ವೀಕಾರಮಾಡುವರು. ಅಣು ಹಾಗು ಪರಮಾಣುವಿನ ಅಸ್ಥಿತ್ವ ಸಂಗೀತದ ಮುಂದೆ ನಗಣ್ಯವಾಗುವುದು. ನಮ್ಮ ಪುರಾತನ ಆಚಾರ್ಯ ಹಾಗೂ ಮಹಿರ್ಷಿಗಳು ಹೈಡ್ರೋಜನ ಬಾಂಬ ತಯಾರಿಸಿಲ್ಲ, ಆದರೆ ಧ್ವನಿ ವಿಜ್ಞಾನದ ಮೇಲೆ ವಿಚಾರ ಮಾಡಿದ್ದಾರೋ ಅದು ಈಗಲೂ ಮಹತ್ವವನ್ನು ಹೊಂದಿದೆ. ನಾದವೇ ಒಂದು ಶಕ್ತಿ ಎನ್ನುವ ವಿಚಾರ ಮಾಡುವ ಅನೇಕ ಗ್ರಂಥಗಳು ಈಗಲೂ ಉಪಲಬ್ದ ಇವೆ.  ಇಂಗ್ಲೆಡಿನ ಒಬ್ಬ ಮಹಿಳೆ ಏಲಿಯೆಸ್ ಸಂಗೀತದಿಂದ ದೂರದರ್ಶನದ ಗ್ಲಾಸ್‌ನ್ನು ಪುಡಿ ಮಾಡಿದ ಆಶ್ಚರ್ಯಕರವಾದ ಪ್ರದರ್ಶನವನ್ನು ನೀಡಿದ್ದರು. ಸ್ಟುಡಿಯೋದಲ್ಲಿ ನಾಲ್ಕು ಗಾಜಿನ ಗ್ಲಾಸಗಳನ್ನು ಇಡಲಾಗಿತ್ತು. ಅವುಗಳನ್ನು ಪುಡಿ ಪುಡಿ ಮಾಡಬೇಕಿತ್ತು. ಏಲಿಯಸ್ ಗಾಯನ ಪ್ರಾರಂಭ ಮಾಡಿದರು, ಸಾವಿರಾರು ಜನ ತಮ್ಮ ತಮ್ಮ ಮನೆಯಲ್ಲಿ ಕುಳಿತು ಈ ದೃಷ್ಯವನ್ನು ನೋಡುತ್ತಿದ್ದರು. ಆದರೆ ಏಲಿಯಸ್ ಸ್ಟುಡಿಯೋದಲ್ಲಿ ಇಡಲಾದ ಗ್ಲಾಸಗಳನ್ನು ಪುಡಿ ಪುಡಿ ಮಾಡಲಾಗಲಿಲ್ಲ. ನಂತರ ಒಬ್ಬ ಮಹಿಳೆ ದೂರದರ್ಶನಕ್ಕೆ ಪತ್ರ ಬರೆದು ಏಲಿಯಾಸ್ ಅವರ ಎತ್ತರದ ಸ್ವರಗಳಿಂದ ನಮ್ಮ ಮನೆಯ ನಾಲ್ಕು ಗ್ಲಾಸಗಳನ್ನು ಪುಡಿ ಮಾಡಿದ್ದಾರೆ ಎಂದು , ಇದಲ್ಲದೆ ಇನ್ನೂ ಅನೇಕ ಮನೆಯಲ್ಲಿ ಇದೇ ರೀತಿ ಏಲಿಯಾಸ್ ಗಾಯನದಿಂದಾಗಿ ಗ್ಲಾಸಗಳು ಒಡೆದು ಪುಡಿಯಾಗಿತ್ತು. ಸಂಗೀತಕ್ಕಿರುವ ಶಕ್ತಿಯೇ ಅಂತದ್ದು. ಅವರು ಮಾಡಿದ ಪ್ರಯೋಗ ಸ್ಟುಡಿಯೋದಲ್ಲಿ ಫಲಿಸಲಿಲ್ಲ. ಸ್ಟುಡಿಯೋದ ಕೋಣೆ ವಿಶೇಷ ಪ್ರಕಾರದಿಂದ ಮಾಡಲಾಗಿತ್ತು. ಆದ್ದರಿಂದ ಧ್ವನಿಯ ಪ್ರಭಾವ ಪೂರ್ಣರೂಪದಿಂದ ಗ್ಲಾಸ ಮೇಲೆ ಆಗಲಿಲ್ಲ. ಆದರೆ ಮನೆಯಲ್ಲಿ ಕುಳಿತು ಕೇಳುತ್ತಿದ್ದವರ ಮನೆಯ ಗ್ಲಾಸಗಳ ಮೇಲೆ ಪ್ರಭಾವ ಬೀರಿರುವುದು ಆಶ್ಚರ್ಯ ಹಾಗೂ ಸಂತೋಷದ ಸಂಗತಿ. ಭಾರತೀಯ ಸಂಗೀತ ಸಾಹಿತ್ಯದಲ್ಲಿ ತಾನಸೇನ ಅವರಿಗೆ ಸಂಬಂಧಿಸಿದಂತೆ ಅನೇಕ ಚಮತ್ಕಾರಿಕ ಘಟನೆಗಳು ಇವೆ. ಅದರಲ್ಲಿ ದೀಪಕರಾಗವನ್ನು  ಹಾಡಿ ದೀಪ ಬೆಳಗಿಸಿದ್ದಾಗಿರಬಹುದು, ಮೇಘರಾಗದಿಂದ ಮಳೆಯನ್ನು ತರಿಸಿದ್ದು, ಕೊಳಲನಾದದಿಂದ ಪಶು, ಪಕ್ಷಿಗಳು ತಲೆದೂಗಿದ್ದು, ಸಂಗೀತದಿಂದ ಸಮುದ್ರದ ಅಬ್ಬರದ ಅಲೆಗಳನ್ನು ಸಹ ಶಾಂತಗೊಳಿಸುವ ಶಕ್ತಿಯಿದೆ. ಅಲ್ಲದೆ ವಾಯುವಿನ ವೇಗವನ್ನು ಕಡಿಮೆಗೊಳಿಸುವ ಶಕ್ತಿ ಸಂಗಿತಕ್ಕಿದೆ. ಹೇಗೆ ಸಂಗೀತ ಭೌತಿಕ ತತ್ವಗಳನ್ನು   ಸಮನ್ವಯಗೊಳಿಸುತ್ತೋ      ಹಾಗೆ ಆಧ್ಯಾತ್ಮಿಕ     ತತ್ವಗಳನ್ನು ಸಮನ್ವಯಗೊಳಿಸುತ್ತದೆ. ಸ್ಥೂಲ ಹಾಗೂ ಸೂಕ್ಷ್ಮ ಎರಡೂ ಸೃಷ್ಠಿ, ಸಂಗೀತದ ಶಕ್ತಿಯ ಆಧಿನದಲ್ಲಿದೆ. ಈ ಸತ್ಯವನ್ನು ಸ್ಟೀವೆನ್‌ಸನ್ ಅವರು ಸಹ ಸ್ವೀಕಾರ ಮಾಡಿದ್ದಾರೆ. ಅವರು ತಮ್ಮ “ಪೈಸ ಪಾಯಿಪ್ಪ” ಎನ್ನುವ ಲೇಖನದಲ್ಲಿ ಪ್ರಕೃತಿ ದೇವನ ಕಲ್ಪನೆಯನ್ನು ಮಾಡಿದ್ದಾರೆ.  ದಕ್ಷಿಣದ “ಅನ್ನಮಲಾಯಿ” ವಿಶ್ವವಿದ್ಯಾಲಯದಲ್ಲಿ ಜೀವಶಾಸ್ತ್ರ ಕೆಲವು ವಿದ್ಯಾರ್ಥಿಗಳು ಸಂಗೀತ ಮೂಲಕ ಸಸ್ಯಗಳ ಮೇಲೆ ಅದ್ಭುತವಾದ ಸಂಶೋಧನೆಯನ್ನು ಮಾಡಿದ್ದಾರೆ. ಒಂದೆ ತರಹದ ಎರಡು ಗಿಡಗಳನ್ನು ತೆಗೆದುಕೊಂಡು, ಒಂದು ಗಿಡಕ್ಕೆ ಪ್ರತಿ ದಿನವು ಸಂಗೀತದ ಸ್ವರಗಳ ಮೂಲಕ ಗಿಡಗಳನ್ನು ಸಂರಕ್ಷಿಸಿದರು ಹಾಗೂ ಇನ್ನೊಂದು ಗಿಡಕ್ಕೆ ಪ್ರಕೃತಿದತ್ತವಾಗಿ ಬೆಳೆಯಲು ಬಿಟ್ಟರು. ಈ ಪ್ರಯೋಗವನ್ನು ಮಾಡಿದಾಗ ಸಂಗೀತದ ಸ್ವರಗಳನ್ನು ಆಲಿಸಿದಂತ ಗಿಡವು ೧೦ ಪಟ್ಟು ಚೆನ್ನಾಗಿ ಬೆಳೆದಿರುವುದು ಕಂಡು ಬಂದಿತು.  ಇಂದಿನ ದಿನಗಳಲ್ಲಿ ಕೆಲವರು ಪಶು-ಪಕ್ಷಿ ಹಾಗೂ ಹುಳು-ಹುಪ್ಪಟ್ಟಿಗಳ ಧ್ವನಿಯನ್ನು ಧ್ವನಿ ಮುದ್ರಿಸುತ್ತಿದ್ದಾರೆ. ಇದರಿಂದ ಅವರಿಗೆ ಸಂಗೀತ ಪ್ರಭಾವದ ಅನುಸಂಧಾನದಲ್ಲಿ ಸಹಾಯತೆ ಸಿಗುತ್ತದೆ. ಚೀನಾದ ಚಾಂಗಪೊ ಅವರು ಹುಳುಗಳ ಅನೇಕ ಧ್ವನಿ ಮುದ್ರಣ ಮಾಡಿದ್ದಾರೆ. ಅನೇಕ ಹುಳುಗಳು ಸಂಗೀತವನ್ನು ಬಹಳ ಪ್ರೇಮಿಸುತ್ತವೆ. ಹೀಗಾಗಿ ಸೊಳ್ಳೆಗಳು ಮಧುರವಾದ ಸಂಗೀತವನ್ನು ಕೇಳಲು ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತವೆಯಂತೆ.  ರಾಗ ಪದ್ಧತಿಯನ್ನು ಕುರಿತು ೯ ನೇ ಶತಮಾನದಲ್ಲಿ ಮತಂಗ ಮುನಿಯು ಹೀಗೆ ಹೇಳಿದ್ದಾರೆ ‘ರಾಗವು ಸುಮಧುರವಾದ ಧ್ವನಿಯ ಸಂಯೋಜನೆಯಾಗಿದ್ದು, ಮಾನವನ ಹೃದಯವನ್ನು ಪ್ರಪುಲ್ಲಿತವಾಗಿ ಮಾಡುವ ಶಕ್ತಿ ಹೊಂದಿದೆ. ಯಾವುದಾದರೂ ಒಂದು ರಾಗವನ್ನು ಪದೇ ಪದೇ ಶ್ರವಣ ಮಾಡುವುದರಿಂದ ನಿರ್ದಿಷ್ಟವಾದ ತರಂಗಗಳು ಉತ್ಪತ್ತಿಯಾಗಿ ರೋಗ ಪೀಡಿತ ನರಗಳಿಗೆ ಹಾಗೂ ಸ್ನಾಯುಗಳಿಗೆ ವಿಶೇಷ ಸಂವೇದನೆಯನ್ನು ನೀಡಿ ಅವುಗಳಲ್ಲಿ ಹೆಚ್ಚಿನ ರಕ್ತ ಪರಿಚಲನೆಯನ್ನು ಹಾಗೂ ಶಕ್ತಿಯನ್ನು ಉಂಟು ಮಾಡುತ್ತದೆ. ಹೀಗಾಗಿ, ಸಂಗೀತಕ್ಕೆ ರೋಗಗಳನ್ನು ಗುಣಪಡಿಸುವ ಅದ್ಭುತವಾದ ಶಕ್ತಿಯಿದೆ’.  ಪಾಶ್ವಿಮಾತ್ಯರಿಗೆ ಅನಾದಿ ಕಾಲದಿಂದಲೂ ಆರೋಗ್ಯ ಮತ್ತು ಸಂಗೀತದ ಮಧ್ಯೆ ಇರುವ ಸಂಬಂಧ ಎಂತದ್ದು ಎನ್ನುವ ತಿಳುವಳಿಕೆ ಇತ್ತು. ಉದಾಹರಣೆಗೆ : ಗ್ರೀಕರ ‘ಅಪೊಲೋ” ,ಸಂಗೀತ ಮತ್ತು ಕಲೆಗೆ ಮಾತ್ರವಲ್ಲ ಗುಣಪಡಿಸುವ ಕ್ರಿಯೆಗೆ ಆಧಿದೇವನಾಗಿರುವುದು.  ಸಂಗೀತದಿಂದ ಅನೇಕ ರೋಗಗಳು ಗುಣವಾಗುತ್ತಾ ಇದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಪ್ರತಿಯೊಬ್ಬ  ವೈದ್ಯರು ಸಂಗೀತ ಪ್ರೀಯರು ಅನೇಕ ವೈದ್ಯರು ತಮ್ಮ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಂಗೀತವನ್ನು ಕೇಳಿಸುತ್ತಾರೆ. ಪ್ರತಿಯೊಂದು ರಾಗಕ್ಕೂ ಒಂದೊಂದು ರೋಗ ಗುಣಪಡಿಸುವ ಶಕ್ತಿ ಇದೆ. ಸಾವೇರಿ ರಾಗವನ್ನು ಅರ್ಥೆಟಿಸ್‌ನಿಂದ ಬಳಲುವವರಿಗೆ ಕೇಳಿಸಿದ್ದಾದರೆ, ಹೆಚ್ಚಿನ ಪರಿಣಾಮ ಕಂಡು ಬರುತ್ತದೆ. ಮಧ್ಯಮಾವಲತಿಯು ಉತ್ತೇಜಿತ ಮನಸ್ಸನ್ನು ಶಾಂತಗೊಳಿಸುತ್ತದೆ. ಕಫ ದೋಷಕ್ಕೆ ಸಂಬಂಧಿಸಿದ ಖಾಯಿಲೆಗಳಾಗಿರುವ ಅಸ್ತಮಾ, ಕೆಮ್ಮು, ಶೀತ, ಕ್ಷಯರೋಗ ಮುಂತಾದ ಸಮಸ್ಯೆಗಳಿಗೆ ಭೈರವಿ ರಾಗವು ಅತ್ಯಂತ ಉಪಯುಕ್ತವಾಗಿದೆ. ಮಲ್ಹಾರ ರಾಗದಿಂದ ಸಿಟ್ಟು ಮತ್ತು ಒತ್ತಡಗಳು ದೂರಾದರೆ ಜೈಜೈವಂತಿ ಹಾಗೂ ಸೌರವ ರಾಗದಿಂದ ಮಾನಸಿಕ ರೋಗವನ್ನು ಕಡಿಮೆ ಮಾಡುತ್ತವೆ. ಶ್ರೀರಾಗದಿಂದ ಎಸಿಡಿಟಿ ಶಮನವಾಗುತ್ತದೆ. ಹಿಂಡೋಳ ರಾಗವನ್ನು ಆಲಿಸುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಅಲ್ಲದೆ ಈ ರಾಗವು ಯಕೃತ ಸಂಬಂಧಿ ಕಾಯಿಲೆಗಳಿಗೆ ಮದ್ದಾಗುತ್ತದೆ.  ಪಾಶ್ಚಿಮಾತ್ಯರದೇ ಆದ ಪೈಥಾಗೋರಸ್ ತತ್ವ ಶಾಸ್ತ್ರ ದರ್ಶನವು ಭಾರತೀಯ ಅನಾಹತನಾದ ಪರಿ ಕಲ್ಪನೆಯನ್ನು ಬಹು ಪಾಲು ಹೋಲುತ್ತದೆ. ಅರಿಸ್ಟಾಟಲ್ ಮತ್ತು ಪ್ಲೆಟೊನ ಬರಹಗಳಲ್ಲಿಯೂ ಸಂಗೀತ ಹಾಗೂ ಆರೋಗ್ಯದ ಸಂಬಂಧವನ್ನು ಚರ್ಚಿಸಲಾಗಿದೆ. ಇದಲ್ಲದೆ ಆಧುನಿಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಂಗೀತ ಚಿಕಿತ್ಸೆ ಖ್ಯಾತಿಯನ್ನು ಪಡೆದಿದೆ.  ಭಾರತೀಯ ಸಂಗೀತದಲ್ಲಿ ತತ್ವಶಾಸ್ತ್ರ ಮನೋಶಾಸ್ತ್ರ ಸೌಂದರ್ಯ ಶಾಸ್ತ್ರ ಎಲ್ಲವೂ ಸಮ್ಮಿಳಿತವಾಗಿದೆ.  ಭಾರತೀಯ ಸಂಗೀತದ ರಾಗಗಳು ಸಾಮಗಾನ ರೂಪದಲ್ಲಿದ್ದವು ಮೇಲೆ ಹೇಳಿದ್ದಂತೆ ಭಾರತದಲ್ಲಿ “ರಾಗ ಚಿಕಿತ್ಸೆ” ಎಂಬ ಹೆಸರಿನಲ್ಲಿ ಪ್ರಚಲಿತದಲ್ಲಿದೆ. ಚೆನೈನ ‘ನಾವ್ ಸೆಂಟ್’ ನಲ್ಲಿ ನಾದರೋಗವನ್ನು ಶಾಸ್ತಿಯವಾಗಿ, ಅಭ್ಯಶಿಸಲಾಗುತ್ತದೆ. ಸಂಗೀತವು ಮಾನವನ ದೇಹದ ಪ್ರತಿಯೊಂದು ಹಂತದ ಚೇತನಕ್ಕೆ ಸಂಚಲತೆಯನ್ನು ಉಂಟು ಮಾಡುತ್ತದೆ ಎನ್ನುವುದಕ್ಕೆ ನಾದಯೋಗದಲ್ಲಿಯ ಈ ಪರಿಕಲ್ಪನೆ ಹೆಚ್ಚು ಪರಿಣಾಮ ಬೀರುತ್ತದೆ.  ಇತ್ತೀಚಿನ ದಿನಗಳಲ್ಲಿ ಅನೇಕ ಆಸ್ಪತ್ರೆಗಳಲ್ಲಿ ಸಂಗೀತ ಚಿಕಿತ್ಸೆಯನ್ನು ಬಳಸಲಾಗುತ್ತಿದೆ. ದೆಹಲಿಯ ಅಪೊಲೊ ಆಸ್ಪತ್ರೆಯಲ್ಲಿ ಸಂಗೀತ ಚಿಕಿತ್ಸೆಯದೇ ಒಂದೇ ವಿಭಾಗವಿದ್ದು ಅಲ್ಲಿ ಅಧಿಕ ರಕ್ತದೊತ್ತಡ, ಉಗ್ಗು, ನೋವು, ಮೈಗ್ರೇನ, ತಲೆ ನೋವು, ಅರ್ಥಟಿಸ್ ಹೀಗೆ ಇನ್ನೂ ಅನೇಕ ಕಾಯಿಲೆಗಳಿಗೆ ಸಂಗೀತದ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.  ಒಮ್ಮೆ ಹಿಂಸಾಕಾರಕವಾದ ಸಿಂಹದ ಮೇಲೆ ಭಾರತೀಯ ಸಂಗೀತದ ಆಚಾರ್ಯ ಪಂಡಿತ ಓಂಕಾರನಾಥ ಠಾಕೂರ ಅವರು ಲಖನೌದ ಮೃಗಾಲಯದಲ್ಲಿ ಒಂದು ಪ್ರಯೋಗವನ್ನು ಮಾಡುತ್ತಾರೆ. ಸಿಂಹದ ಹತ್ತಿರ ಹೋದಾಗ ಆ ಸಿಂಹವು ಮುಖದಲ್ಲಿ ಹಿಂಸಾಕಾರಕ ಭಾವನೆಯಿತ್ತು, ಆದರೆ ಕೋಮಲ ಗಾಂಧಾರದ ವಿಶೇಷ ಪ್ರಯೋಗದ ಮೂಲಕ ಆ ಸಿಂಹದ ಕಣ್ಣಲ್ಲಿ ಕೆಲವೇ ಕ್ಷಣಗಳ ನಂತರ ಪರಿವರ್ತನೆ ಆಗ ತೊಡಗಿತು. ಅದರ ಕಣ್ಣಿನಲ್ಲಿ ವಾತ್ಸಲ್ಯಮಯವಾದ ಭಾವನೆ ಪ್ರಕಟವಾಗತೊಡಗಿತು. ಹೀಗೆ ಸಂಗೀತಕ್ಕಿರುವ ಅದ್ಭುತ ಶಕ್ತಿಯಿಂದ ಏನೆಲ್ಲ ಪವಾಡಗಳು ನಡೆಯುತ್ತಿವೆ, ನಡೆದಿವೆ.  ಸಂಗೀತವು ಅನೇಕ ರೋಗಗಳನ್ನು ಶಮನ ಮಾಡುವಲ್ಲಿ, ಮನಸ್ಸಿನ ಅಹ್ಲಾದತೆಗೆ, ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸಲು, ಒತ್ತಡ ದೂರ ಮಾಡುವಲ್ಲಿ, ನೋವನ್ನು ಉಪಶಮನ ಮಾಡುವಲ್ಲಿ, ನೆನಪಿನ ಶಕ್ತಿಯನ್ನು ವೃದ್ಧಿಸುವಲ್ಲಿ ಸಹಾಯಕಾರಿಯಾಗಿದೆ. ಸಂಗೀತದ ಬೆಳಗಿನ ರಾಗಗಳು ದಿನವಿಡೀ ಉಲ್ಲಾಸದಿಂದ ಇರಲು ಸಹಾಯ ಮಾಡಿದರೆ, ಸಾಯಂಕಾಲದ ರಾಗಗಳು ದಿನದ ಬಳಲಿಕೆಯನ್ನು ನಿವಾರಿಸಿ ಮನಸ್ಸನ್ನು ಪ್ರಫುಲ್ಲಗೊಳಿಸುತ್ತವೆ. ಉತ್ತಮ ಸಂಗೀತದಿಂದ ಗರ್ಭದಲ್ಲಿರುವ ಮಗುವಿನ ಭಾವನೆಗಳಿಗೆ ಸ್ಪಂದಿಸಿ, ಆರೋಗ್ಯಯುತ ಬೆಳವಣಿಗೆಗೆ ಸಹಕರಿಸುತ್ತದೆ. ಒಟ್ಟಿನಲ್ಲಿ ಸಂಗೀತದಲ್ಲಿ ಅದ್ಭುತವಾದ ಶಕ್ತಿ ಇದೆ ಎನ್ನುವುದು ನೂರಕ್ಕೆ ನೂರು ಸತ್ಯ. ಇಹಪರಗಳಲ್ಲಿ ಜೀವನ ಸಾರ್ಥಕ ಮಾಡಿಕೊಳ್ಳುವ ಸಾಧನಾ ಮಾರ್ಗಗಳಲ್ಲಿ ಶ್ರೇಷ್ಠತಮವಾದ ಸಂಗೀತ. ಭಾರತೀಯರ ಬದುಕು ಸಂಗೀತಮಯವಾಗಿದೆ. ಕಲೆಗಳಲ್ಲಿ ಅತಿ ಶ್ರೇಷ್ಟವಾದ, ದೈವದತ್ತವಾದ ಕಲೆ ಎಂದರೆ ಸಂಗೀತವೆಂದೆ ಹೇಳಬಹುದು. ಸಂಗೀತ ನಮ್ಮ ಮನಸ್ಸಿನ ಮೆಲೆ ನೇರವಾಗಿ ಹಾಗೂ ಆ ಕ್ಷಣದಲ್ಲೆ ಪರಿಣಾಮ ಬೀರುತ್ತದೆ. ಸಾಮಾನ್ಯ ಮಾನವರು ಸಹ ಹಾಡುಗಳನ್ನು ಮೆಲಕು ಹಾಕುತ್ತಾರೆ. ಗೋವುಗಳನ್ನು ಕಾಯುವ ಗೋಪಾಲಕರಿಂದ ಪಂಡಿತರವರೆಗೂ ಸಹ ಹಾಡುಗಳನ್ನು ಮೆಲುಕು ಹಾಕುತ್ತಾರೆ. ಯಾವುದಾದರೊಂದು ಒಳ್ಳೆಯ ಸಂಗೀತವನ್ನು ಕೇಳಿದಾಗ ಮನಸ್ಸು ಎಷ್ಟೆ ಮುನಿಸಿಕೊಂಡಿರಲಿ, ಆಳುತ್ತಿರಲು, ಖಿನ್ನತೆಯಿಂದ ಕೂಡಿರಲಿ, ಸಂಗೀತ ಮನಸ್ಸನ್ನು ಮುಟ್ಟಿ ಅಳು, ಮುನಿಸು, ಖಿನ್ನತೆಯನ್ನು ದೂರಮಾಡಿ ಸಂತೋಷ ಸಾಗರದಲ್ಲಿ ತೇಲಿಸುತ್ತದೆ. ಸಂಗೀತದಲ್ಲಿರುವ ಸಾಹಿತ್ಯ ನಮ್ಮನ್ನು ಚಿಂತೆಗಳಿಂದ ದೂರ ಮಾಡುತ್ತದೆ.  ಸಂಗೀತಗಾರರು ರಾಗಗಳನ್ನಾಗಲು, ಕೃತಿಗಳನ್ನಾಗಲಿ ಪ್ರಸ್ತುತ ಪಡಿಸುವಾಗ ಉಸಿರಾಟದಿಂದ ಪ್ರಾಣ ವಾಯು ಹೆಚ್ಚಾಗಿ, ರಕ್ತ ಪರಿಚಲನೆ ಸುಗಮವಾಗುತ್ತದೆ ಮತ್ತು ಪಚನ ಶಕ್ತಿಯೂ ಹೆಚ್ಚಾಗುತ್ತದೆ ಎನ್ನುತ್ತಾರೆ. ಸಂಶೋಧಕರು. ಅದರಲ್ಲೂ ಶಾಸ್ತ್ರೀಯ ಸಂಗೀತ ಪ್ರಸ್ತುತ ಪಡಿಸುವಾಗ ಗಾಯಕರು ಅಡಿನಾಭಿಯಿಂದ ಉಸಿರೆಳದುಕೊಂಡು ಹಾಡುವುದರಿಂದ ಉದರದ ಎಲ್ಲ ಅವಯವಗಳಿಗೂ ವ್ಯಾಯಾಮವಾಗುತ್ತದೆ. ಶಾಸ್ತ್ರೀಯ ಸಂಗೀತದಲ್ಲಿರುವ, ಸಾಹಿತ್ಯದಲ್ಲಿ ಭಗವಂತನ ವರ್ಣನೆ, ಭಕ್ತಿಯ ಪರಾಕಾಷ್ಠೆ ನಮ್ಮನ್ನು ಋಣಾತ್ಮಕ ಚಿಂತನೆಯತ್ತ ಕೊಂಡೊಯ್ಯುತ್ತದೆ. ಡಾ.ಸುನಂದಾ ಬಿ.ಸಾಲವಾಡಗಿ

ಸಂಗೀತ ಒಂದು ಅಧ್ಬುತ ಶಕ್ತಿ ಡಾ.ಸುನಂದಾ ಬಿ.ಸಾಲವಾಡಗಿ Read Post »

You cannot copy content of this page

Scroll to Top