ಆಂಡ್ರಾಯ್ಡ್. ಡೋ.ನಾ.ವೆಂಕಟೇಶಆಂಡ್ರಾಯ್ಡ್
ಆಂಡ್ರಾಯ್ಡ್. ಡೋ.ನಾ.ವೆಂಕಟೇಶಆಂಡ್ರಾಯ್ಡ್ ಈಗ ಈ ಆಂಡ್ರಾಯ್ಡ್ ಬಂದ ಮೇಲೆ ಅಕ್ಷರಗಳೇ ಹಾಳಾಗಿ ಹೋದ್ವು !ಜನರ ಕಣ್ಣಲ್ಲಿ ನನ್ನಕ್ಷರಗಳು ಹಾಳಾದಂತೆ ನಾ ನಿಜ್ವಾದ ಡಾಕ್ಟ್ರಾದೆ, ಬಹಳ ತಿಳಿದವನಾದೆ,ಮತ್ತುಬಹಳಸೋಮಾರಿಯಾದೆ! ಈ ಆಂಡ್ರಾಯ್ಡ್ಬಂದ ಮೇಲೆನನ್ನ ಜೀವನದಲ್ಲಿ ಪ್ರಪಂಚವೇ ಸಂಕೀರ್ಣವಾಯಿತು. ವೈದ್ಯಕೀಯ ಸಾಹಿತ್ಯದ ಜೊತೆ ಜೊತೆ ವೈದ್ಯಕೀಯ ವಿಜ್ಞಾನ, ಮತ್ತು ಇತರೇ ವಿಜ್ಞಾನಗಳ ಪ್ರಾಕಾರ ಕೈಬೆರಳಲ್ಲೆ ಅರಳ ತೊಡಗಿದುವು! ಮರೆತು ಹೋಗಿದ್ದ ಸಾಹಿತ್ಯ ದಿಗ್ಗಜಗಳು ಹೊಳೆಯ ತೊಡಗಿದರು .ಆಗಿ ಹೋದ ಕಲೆಗಳು ಪುನಃ ಪುನಃ ಮನಸಲ್ಲಿ ಮೊಳೆಯ ತೊಡಗಿದುವು .ಕನಸಲ್ಲಿ ದಷ್ಟ ಪುಷ್ಟವೂ ಆಗ ತೊಡಗಿದುವು. ನನ್ನ ಮೊಮ್ಮಕ್ಕಳು ಹೊಸ ಹೊಸ ಆಟಗಳಲ್ಲಿ ನಿಷ್ಣಾತರಾದರು. ನನ್ನ ಬಾಲ್ಯದ ಎಲ್ಲಾ ಆಟಗಳಿಗೂ ತಿಲಾಂಜಲಿ ಯಿಟ್ಟರು. ಮತ್ತೆ ಈ ಆಂಡ್ರಾಯ್ಡ್ ಬಂದಂದಿನಿಂದ ಇಂದಿನ ತನಕದ ಘಟನೆಗಳ ಚಿತ್ರ ಅಂತ ರ್ಜಾಲದಲ್ಲಿ ದಾಖಲಾದವು .ಆಂಡ್ರಾಯ್ಡ್ ಬಂದಮೇಲೆ ನನ್ನ ರೋಗಿಗಳು ನಿರರ್ಗಳವಾಗಿ ನನ್ನ (ನಿದ್ರೆ ಕೆಡಿಸಿದರು.) ಸಂಪರ್ಕಕ್ಕೆ ಬಂದರು. ಈ ಫೋನ್ ಬಂದ ಮೇಲೆ ಕೈಲೆಕಾಸಿದ್ರೆ ಸಾಕು.ಕೊಳ್ಳುವ ಕ್ರಿಯೆ ಚಿಟಿಕೆ ಹೊಡಿದಷ್ಟೆ ಸಕ್ರಿಯವಾಯಿತು(ಬ್ಯಾಂಕ್ ಬ್ಯಾಲೆನ್ಸ್ ಸಪೂರವಾಯಿತು) ಪಟ್ಟಿ ಉದ್ದ. ದುರ್ಗಣಗಳೂ ಮೊಳೆತಿವೆ. ಇರಲಿ ನಿಗಾ ನಿನಗಿಂತ ಕಿರಿಯ ಇದ ಉಪಯೋಗಿಸುವಲ್ಲಿ.ಇರಲಿ ನಿಗಾ ಪ್ರಪಂಚದವ್ಯವಹಾರಗಳಲ್ಲಿ .ತಿಳಿದಷ್ಟೂ ತಿಳಿಯ ಬೇಕಾದ್ದು ಬಹಳಿರುವ ,ಬದುಕಿದಷ್ಟೂ ಸಾವಿಗೆ ಹತ್ತಿರವಾಗುವ ಬದುಕಿನ ಬವಣೆಯ ತಿಳಿದಷ್ಟೂ ಅಸಹಾಯಕನಾಗುವ ಪರಿಯಲ್ಲಿ! ಡಾ.ಡೋ.ನಾ.ವೆಂಕಟೇಶ
ಆಂಡ್ರಾಯ್ಡ್. ಡೋ.ನಾ.ವೆಂಕಟೇಶಆಂಡ್ರಾಯ್ಡ್ Read Post »








