ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಶಿಕ್ಷಣ

“ಕೆಲವೊಂದು ಸಲಹೆಗಳು:ಎಸ್‌ ಎಸ್‌ ಎಲ್‌ ಸಿ ವಿದ್ಯಾರ್ಥಿಗಳಿಗೆ” ವಾಣಿ ಶಿವಕುಮಾರ್

ಶಿಕ್ಷಣ ಸಂಗಾತಿ ವಾಣಿ ಶಿವಕುಮಾರ್ “ಕೆಲವೊಂದು ಸಲಹೆಗಳು: ಎಸ್‌ ಎಸ್‌ ಎಲ್‌ ಸಿ ವಿದ್ಯಾರ್ಥಿಗಳಿಗೆ”  pic̲:chat gpt/gemini ಇನ್ನೇನು ಕೆಲವೇ ದಿನಗಳಲ್ಲಿ ೧೦ ನೇ ತರಗತಿಯ ಪರೀಕ್ಷೆ ಶುರುವಾಗಲಿದೆ. ನಿಮ್ಮ ನಿಮ್ಮ ಶಾಲೆಗಳಲ್ಲಿ ಉತ್ತಮವಾದ ಸಿದ್ಧತೆ ಮಾಡಿಸಿರುವುದರ ಜೊತೆಗೆ ಆತ್ಮವಿಶ್ವಾಸವನ್ನೂ ಸಹ ಬಲಪಡಿಸಿರುತ್ತಾರೆ  ಹಲವಾರು ಮಾದರಿ ಪ್ರಶ್ನೆ ಪತ್ರಿಕೆಗೆ ಉತ್ತರ ನೀಡಿ ನಿಮ್ಮ ತಯಾರಿಕೆಗೆ ಮತ್ತಷ್ಟು ಪುಷ್ಟಿ ನೀಡಿರುತ್ತಾರೆ. ಊಟ, ನಿದ್ದೆ ಬಿಟ್ಟು ಓದಿ ಅಂತ ಯಾರೂ ಸಹ ಎಲ್ಲೂ ಉಲ್ಲೇಖಿಸಿಲ್ಲ ಓದಿನ ಜೊತೆ ನಿಮ್ಮ ಆರೋಗ್ಯದ ಕಡೆಗೂ ಗಮನವಿರಲಿ.  ಯಾರ ಅಂಕದ ಜೊತೆಗೂ ನಿಮ್ಮನ್ನು ನೀವು ಹೋಲಿಸಿಕೊಳ್ಳದಿರಿ ಪರೀಕ್ಷೆಯಿಂದ ಹೊರಬಂದ ಬಳಿಕ ಅನಗತ್ಯ ಚರ್ಚೆ ಬೇಡ, ಇದರಿಂದ ನೀವು ಗೊಂದಲಕ್ಕೊಳಗಾಗುವ ಸಾಧ್ಯತೆಯೇ ಹೆಚ್ಚು.  ಪೋಷಕರೇ ಮಕ್ಕಳ ಮೇಲೆ ಒತ್ತಡ ಹೇರಬೇಡಿ ಮೊದಲ ದಿನದಿಂದ ಅವರ ಓದು,ಬರಹ ಚಲನ ವಲನಗಳನ್ನು ಗಮನಿಸುತ್ತಾ ಬಂದಿರ್ತೀರ ಶೇಕಡಾ ೯೦ ೯೫ ಬರಲೇಬೇಕು ಅಂತ ತಾಕಿತು ಮಾಡಬೇಡಿ  ಎಷ್ಟೇ ಅಂಕ ಬಂದರೂ ಅವರು ನಮಗೆ ಮಕ್ಕಳೇ. ಎಲ್ಲಾ ಮಕ್ಕಳಲ್ಲಿಯೂ ವಿಶೇಷವಾದ ಕಲೆ ಇದ್ದೇ ಇರುತ್ತದೆ ಅದನ್ನು ಗುರುತಿಸಿ,ಪ್ರೋತ್ಸಾಹಿಸಿ, ಉತ್ತೇಜಿಸಿ. ಒಂದು ಹುದ್ದೆಯನ್ನು ಅಲಂಕರಿಸುವುದಕ್ಕೋಸ್ಕರ ಅಂಕಗಳು ಬೇಕು ಅಂಕಗಳು ಹೆಚ್ಚು ಕಡಿಮೆಯಾದರೂ ನಮ್ಮ ನಡವಳಿಕೆ, ಸಂಸ್ಕಾರ,ನಯ,ವಿನಯ ಅತಿ ಮುಖ್ಯವಾಗಿರುತ್ತದೆ  ಒಂದು ವೇಳೆ ಅಂಕಗಳು ಕಡಿಮೆ ಬಂದರೆ ಅಥವಾ ನಪಾಸ್ ಆದರೆ ದಯವಿಟ್ಟು ಕೆಟ್ಟ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಠಿಣ ಸಾಹಸಕ್ಕೆ ಕೈ ಹಾಕಬೇಡಿ. ಅರಳ ಬೇಕಿರುವ ಪ್ರತಿಭೆಗಳು ನೀವು ಅರಳುವ ಮುನ್ನವೇ ಬಾಡಿ ಹೋಗದಿರಿ  ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಈ ಮೂಲಕ ಆಲ್ ದ ಬೆಸ್ಟ್ ಹೇಳುವುದಕ್ಕೆ ಬಯಸುತ್ತೇನೆ. ಕಠಿಣ ಪರಿಶ್ರಮ,ಪೋಷಕರ ಆಶೀರ್ವಾದ,ದೇವರ ಅನುಗ್ರಹ ಸದಾ ಇರುತ್ತದೆ. ಯಶಸ್ಸು ನಿಮ್ಮದಾಗಲೆಂದು ಹಾರೈಸುತ್ತೇನೆ. ವಾಣಿ ಶಿವಕುಮಾರ್

“ಕೆಲವೊಂದು ಸಲಹೆಗಳು:ಎಸ್‌ ಎಸ್‌ ಎಲ್‌ ಸಿ ವಿದ್ಯಾರ್ಥಿಗಳಿಗೆ” ವಾಣಿ ಶಿವಕುಮಾರ್ Read Post »

ಇತರೆ, ಶಿಕ್ಷಣ

“ಶಿಕ್ಷಕರ ಪ್ರೀತಿ ಮಮತೆ ಕಾಳಜಿಗೆ ಬೆಲೆಯೇ ಇಲ್ಲವೇ?!” ವಿಶೇಷಬರಹ ಜಯಲಕ್ಷ್ಮಿ .ಕೆ

ಶಿಕ್ಷಣ ಸಂಗಾತಿ “ಕ್ಷಕರ ಪ್ರೀತಿ ಮಮತೆ ಕಾಳಜಿಗೆ ಬೆಲೆಯೇ ಇಲ್ಲವೇ?!” ವಿಶೇಷಬರಹ ಜಯಲಕ್ಷ್ಮಿ .ಕೆ ಜಯಲಕ್ಷ್ಮಿ .ಕೆ “ಶಿಕ್ಷಕರ ಪ್ರೀತಿ ಮಮತೆ ಕಾಳಜಿಗೆ ಬೆಲೆಯೇ ಇಲ್ಲವೇ?!” ಶಿಕ್ಷಕರ ಪ್ರೀತಿ ಮಮತೆ ಕಾಳಜಿಗೆ ಬೆಲೆಯೇ ಇಲ್ಲವೇ?!!! ಒಮ್ಮೆ ದಿನಸಿ ಅಂಗಡಿಗೆ ಹೋಗಿದ್ದೆ. ಆಗ ಸರಕಾರಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ನನ್ನ ಪರಿಚಿತರೊಬ್ಬರು ಅಲ್ಲಿಗೆ ಬಂದು ನಾಲ್ಕು ಪುಟ್ಟ ಬ್ರಷ್ ಗಳನ್ನು ಕೊಂಡುಕೊಂಡರು. ಆ ಶಿಕ್ಷಕಿಯ ಮಕ್ಕಳು ಪಿ ಯು ಸಿ ಯಲ್ಲಿ ಓದುತ್ತಿದ್ದ ಕಾರಣ ನಾನು ಕುತೂಹಲದಿಂದ ಮತ್ತು ಬ್ರಷ್ ನ ಸೈಜ್ ಅವರು ಗಮನಿಸಿಲ್ಲ ವೇನೋ ಎಂಬ ಕಾಳಜಿಯಿಂದ ” ಇಷ್ಟು ಸಣ್ಣ ಬ್ರಷ್ ಯಾರಿಗೆ ” ಎಂದು ಕೇಳಿದೆ. ಅದಕ್ಕವರು ” ನಮ್ಮ ಶಾಲೆಯಲ್ಲಿ 4-5 ಮಕ್ಕಳಿದ್ದಾರೆ, ಅವರು ಹಲ್ಲು ಉಜ್ಜದೇ ಶಾಲೆಗೆ ಬರುತ್ತಾರೆ. ಅವರಿಗೆ ಬ್ರಷ್ ಪೇಸ್ಟ್ ಕೊಟ್ಟು ಶಾಲೆಯಲ್ಲಿಯೇ ಹಲ್ಲುಜ್ಜಿಸುತ್ತೇವೆ. ” ಎಂದರು! ನನಗೆ ಅಚ್ಚರಿ ಎನಿಸಿ ಇನ್ನೂ ಒಂದಷ್ಟು ಹೊತ್ತು ಅವರ ಶಾಲಾ ಮಕ್ಕಳ ಬಗ್ಗೆ ಕೇಳುತ್ತಾ ನಿಂತೆ. ” ಅಯ್ಯೋ ಮೇಡಂ, ಹಲ್ಲು ಉಜ್ಜಿಸೋದು, ಕೈ -ಕಾಲು ತೊಳೆಸೋದು ಇಷ್ಟೇ ಅಲ್ಲ…ನಾವು ಸೋಪ್ ಕೊಟ್ಟು ಅವರ ಸ್ಕೂಲ್ ಬ್ಯಾಗ್ ನನ್ನೂ ತೊಳೆಸಿ ಒಣ ಹಾಕಿಸುತ್ತೇವೆ. ಮಕ್ಕಳು ಶಾಲೆಗೆ ದೀರ್ಘ ಕಾಲ ಗೈರು ಹಾಜರಾದರೆ ಅವರ ಮನೆ ಹುಡುಕಿಕೊಂಡು ಹೋಗುತ್ತೇವೆ.. ಮಕ್ಕಳ ತಂದೆ ತಾಯಿಯರಿಂದ ಬಾಯಿಗೆ ಬಂದಂತೆ ಬೈಸಿಕೊಳ್ಳುತ್ತೇವೆ. ಕೆಲವೊಮ್ಮೆಅಂಥ ಮಕ್ಕಳ ಮನೆ ಮಂದಿ ‘ ನಮ್ಮ ಮಕ್ಕಳನ್ನು ಕರೆದುಕೊಂಡು ಹೋಗಲು ನೀವು ಯಾರು? ” ಎಂದು ಶಿಕ್ಷಕರಾದ ನಮ್ಮನ್ನು ಓಡಿಸಿದ್ದೂ ಇದೆ ‘ ಎಂದರು. ಇಷ್ಟೆಲ್ಲಾ ಕಾಳಜಿ ತೋರುವ ಶಿಕ್ಷಕರು ಒಂದು ಏಟು ಕೊಟ್ಟರೆ ಮಾತ್ರ ತಕ್ಷಣ ಅದು ಸುದ್ದಿಯಾಗುತ್ತದೆ. ಶಿಕ್ಷಕರಿಗೆ “ರಾಕ್ಷಸ ” ಬಿರುದು ಪ್ರಾಪ್ತಿಯಾಗುತ್ತದೆ!! ಇದೇ ವರ್ಷ ಒಂದು ಸಂಘಟನೆಯ ವತಿಯಿಂದ ಸಮೂಹ ನೃತ್ಯ ಸ್ಪರ್ಧೆ ಆಯೋಜನೆಯಾಗಿತ್ತು. ಅಂದು ನೃತ್ಯ ಮಾಡಿದ ಮಕ್ಕಳು ಬಹುಮಾನ ವಿತರಣೆ ಆಗುವ ಮುನ್ನವೇ ಮನೆಗೆ ಹೋಗಿದ್ದರು. ಕಾರ್ಯಕ್ರಮ ಭಾನುವಾರ ಆಗಿದ್ದರೂ ನೃತ್ಯ ಕಲಿಸಿದ ಆ ಶಿಕ್ಷಕಿ ಮಕ್ಕಳನ್ನು ಕರೆ ತಂದು ಅವರಿಗೆ ಡ್ರೆಸ್ ಮಾಡಿಸಿ ( ಇಲ್ಲಿಯೂ ಡ್ರೆಸ್ ಜವಾಬ್ದಾರಿ ಕೂಡಾ ಶಿಕ್ಷಕರದ್ದೇ ) ಮತ್ತೆ ಸ್ಪರ್ಧೆ ಮುಗಿದ ಮೇಲೆ ಮನೆಗೆ ಹೋದರು. ಅವರ ಬಹುಮಾನಗಳನ್ನು ಸಂಚಾಲಕರ ಜಾಗ್ರತೆಯಿಂದ ತೆಗೆದು ಇರಿಸಿದ್ದರು. ಆ ನಂತರ ಒಂದು ರಾತ್ರಿ ಎಂಟು ಗಂಟೆಗೆ ಆ ಶಿಕ್ಷಕಿ ಮಕ್ಕಳ ಬಹುಮಾನ ಮತ್ತು ಪ್ರಶಂಸನಾ ಪತ್ರ ಸಂಗ್ರಹಿಸಿಕೊಂಡರು. ‘ ಶಾಲೆಯಿಂದ ಬರುವಾಗ ಬಸ್ ಸರಿಯಾಗಿ ಸಿಗದೆ ಇಷ್ಟು ಹೊತ್ತಾಯಿತು, ನಾಳೆ ಒಂದು ಸಭೆ ಇದೆ. ಅಲ್ಲಿ ಬಹುಮಾನ ಕೊಟ್ಟರೆ ಮಕ್ಕಳಿಗೆ ಖುಷಿಯಾಗುತ್ತದೆ ಎಂದು ಆಟೋ ಮಾಡಿಕೊಂಡು ಇಲ್ಲಿಗೆ ಬಂದೆ ” ಎಂದರು. ಮಕ್ಕಳ ಖುಷಿಗಾಗಿ ಶಿಕ್ಷಕರು ಪಾಠ -ಪ್ರವಚನ ಅಲ್ಲದೆ ಮಕ್ಕಳ ಎಷ್ಟೋ ಸೇವೆಗಳನ್ನು ಮುಕ್ತ ಮನಸಿನಿಂದ, ಮಕ್ಕಳ ಮೇಲಿನ ಪ್ರೀತಿಯಿಂದ ಮಾಡುತ್ತಾರೆ. ಅವು ಯಾವುವೂ ಬೆಳಕಿಗೆ ಬರುವುದಿಲ್ಲ.ಅದೇ ಶಿಕ್ಷಕಿ ಶಾಲೆಯ ಕೈ ತೋಟಕ್ಕೆ ಒಂದು ಬಕೆಟ್ ನೀರನ್ನು ಮಕ್ಕಳಲ್ಲಿ ತರಿಸಿ ಹಾಕಿದರೆ ಅದು ಮಹಾ ಅಪರಾಧವಾಗುತ್ತದೆ!!ಗುರುದೇವ ರವೀಂದ್ರನಾಥ ಟಾಗೋರ್ ರವರ ಶಿಕ್ಷಣದ ಪರಿಕಲ್ಪನೆಯಲ್ಲಿ ಕ್ರಿಯಾಶೀಲ ಚಟುವಟಿಕೆಗಳಿಗೆ ಮೊದಲ ಆದ್ಯತೆ. ಮಕ್ಕಳ ಪಾಲಿಗೆ” ಜೀವಂತ ಪ್ರಯೋಗಾಲಯಗಳು ” ಎನಿಸಿರುವ ಶಾಲಾ ಕೈತೋಟಗಳು ಅವರಲ್ಲಿ ಪರಿಸರ ಪ್ರೇಮ ಬೆಳೆಸುವ ಮೂಲ ತಾಣಗಳು. ಅಲ್ಲಿ ಗಿಡ ನೆಡುವ, ಗಿಡಗಳಿಗೆ ನೀರುಣಿಸುವ, ಕಳೆ ಗಿಡಗಳನ್ನು ಕೀಳುವುದೇ ಮೊದಲಾದ ಚಿಕ್ಕ-ಪುಟ್ಟ ಕೆಲಸಗಳನ್ನು ಮಾಡಿಸುವುದು ಖಂಡಿತ ಅಪರಾಧವಲ್ಲ. ಸಸಿಗಳ ಬಗ್ಗೆ ಅರಿವು ಪಡೆದುಕೊಳ್ಳಲು ಇದು ಸಹಕಾರಿ. ಇದರಿಂದ ಮಕ್ಕಳು ಚಿಕ್ಕ ಪುಟ್ಟ ಜವಾಬ್ದಾರಿ ಗಳನ್ನು ನಿಭಾಯಿಸುವುದನ್ನೂ ಕಲಿಯುತ್ತಾರೆ. ಇದು ಪರಿಸರ ವಿಜ್ಞಾನದ ಕಲಿಕೆಯೇ ಅಲ್ಲವೇ? ಅಲ್ಲದೆ ನೀರಿನ ಬಕೆಟ್ ಹಿಡಿದ ಮಾತ್ರಕ್ಕೆ ಮಕ್ಕಳ ಕೈ ಪೆನ್ನು ಹಿಡಿಯಲು ಆಗದಷ್ಟು ಒರಟಾ ಗುವುದೂ ಇಲ್ಲ ( ಸತತವಾಗಿ ಕೆಲಸ ಮಾಡಿಸುವುದಿಲ್ಲ ತಾನೇ)ನಾವು ಬಾಲ್ಯದಲ್ಲಿ ಸರಕಾರಿ ಶಾಲೆಯಲ್ಲಿ ಓದುತ್ತಿದ್ದಾಗ ಶಾಲಾ ಕೈತೋಟಕ್ಕೆ ನೀರು ಹಾಕುವುದರ ಜೊತೆಗೆ ಎಲ್ಲ ಕೆಲಸಗಳನ್ನು ಕೂಡಾ ಕ್ರಾಫ್ಟ್ ಫಿರೀಡ್ ಗಳಲ್ಲಿ ಬಹಳ ಖುಷಿಯಾಗಿಯೇ ಮಾಡುತ್ತಿದ್ದೆವು. ಯಾವ ಪೋಷಕರು ಕೂಡಾ ಅದು ತಪ್ಪು ಎಂದು ದೂರುತ್ತಿರಲಿಲ್ಲ. ಆದರೆ ಇಂದು ಮಕ್ಕಳಿಂದ ಯಾವುದೇ ಶಾಲಾ ಕೆಲಸ ಮಾಡಿಸುವುದು ಕೂಡಾ ಅಪರಾಧ ಎನಿಸುತ್ತಿದೆ. ಶಿಕ್ಷಕರು ಮಾಡುವ ಎಲ್ಲ ಕೆಲಸಗಳಲ್ಲೂ ತಪ್ಪನ್ನೇ ಹುಡುಕುವ ಮನೋಭಾವ ಬದಲಾಗಬೇಕಿದೆ.ಇಂದಿನ ದಿನ ಗಳಲ್ಲಿ ಶಾಲೆಯಲ್ಲಾಗಲೀ ಮನೆಗಳಲ್ಲಾಗಲೀ ಮಕ್ಕಳು ಓದುವುದು ಬಿಟ್ಟು ಕಲಿಕೆಗೆ ಪೂರಕವಾಗುವ , ಬೇರೆ ಯಾವುದೇ ಉಪಯುಕ್ತ ಕೆಲಸ ಗಳನ್ನು ಮಾಡುವುದಿಲ್ಲ.ಯಾವುದೇ ಸಾಮಾನ್ಯ ಜ್ಞಾನ ಸುಮ್ಮನೆ ಬರುವುದಿಲ್ಲ.ಅದಕ್ಕೇ ಇರಬೇಕು ಪಿಯುಸಿ ಗೆ ಬಂದರೂ ಬಹಳಷ್ಟು ಮಕ್ಕಳಿಗೆ 5 ಹೂಗಳ ಹೆಸರು, ಐದು ಹಣ್ಣುಗಳ ಹೆಸರು, ಗಿಡ ಮರಗಳ ಹೆಸರು ಯಾವುದೂ ಗೊತ್ತಿಲ್ಲ. ಕರು ಎನ್ನುವಲ್ಲಿ ದನದ ಮರಿ ಎನ್ನುವವರು ಪಿಯುಸಿಯಲ್ಲಿದ್ದಾರೆ. ಶಿಕ್ಷಕರ ಕೊರತೆ, ಮೂಲಭೂತ ಸೌಲಭ್ಯಗಳ ಅಭಾವ, ಭೋದನೇತರ ಕೆಲಸ ಕಾರ್ಯಗಳ ಹೊರೆ, ಮಕ್ಕಳ ಗೈರುಹಾಜರಿ,ಅವರನ್ನು ಮರಳಿ ಶಾಲೆಗೆ ಕರೆತರಬೇಕಾದ ಜವಾಬ್ದಾರಿ, ಆಡಳಿತಾತ್ಮಕ ಕೆಲಸ – ಕಾರ್ಯ ಗಳ ಒತ್ತಡದ ಇವೆಲ್ಲವುಗಳ ನಡುವೆಯೂ ಮಕ್ಕಳನ್ನು ಪ್ರೀತಿ ಮಮತೆಯಿಂದ ನೋಡಿಕೊಳ್ಳುವ ಅದೆಷ್ಟೋ ಶಿಕ್ಷಕ – ಶಿಕ್ಷಕಿಯರಿದ್ದಾರೆ. ಅವರನ್ನು ಶಾಘನೆಗೈಯದೆ ಎಲ್ಲಿಯೋ ಯಾರೋ ಒಬ್ಬ ಶಿಕ್ಷಕ ಎಲ್ಲಿಯೋ ಮಾಡಿದ ತಪ್ಪನ್ನು ಮತ್ತೆ ಮತ್ತೆ ಭಿತ್ತರಿಸುತ್ತಾ ಮಕ್ಕಳು ಶಾಲೆಯಲ್ಲಿ ಬಿದ್ದರೂ, ಎದ್ದರೂ ” ಶಿಕ್ಷಕರಿಗೆ ಜವಾಬ್ದಾರಿ ಇಲ್ಲ ” ಎಂದು ಶಿಕ್ಷಕ ಕುಲವನ್ನು ಜರೆಯುವುದು ಎಷ್ಟು ಸರಿ? ಅವರ ಪ್ರೀತಿ ಮಮತೆ ಕಾಳಜಿಗೆ ಬೆಲೆಯೇ ಇಲ್ಲವೇ? ಜಯಲಕ್ಷ್ಮಿ ಕೆ

“ಶಿಕ್ಷಕರ ಪ್ರೀತಿ ಮಮತೆ ಕಾಳಜಿಗೆ ಬೆಲೆಯೇ ಇಲ್ಲವೇ?!” ವಿಶೇಷಬರಹ ಜಯಲಕ್ಷ್ಮಿ .ಕೆ Read Post »

ಇತರೆ, ಶಿಕ್ಷಣ

“ಪರೀಕ್ಷೆಗಳು ಕೇವಲ ಅಂಕ ಗಳಿಸುವ ಸಾಧನವಲ್ಲ” ನಾಗರತ್ನ. ಹೆಚ್ ಗಂಗಾವತಿ

ವಿದ್ಯಾರ್ಥಿ ಸಂಗಾತಿ ನಾಗರತ್ನ. ಹೆಚ್ ಗಂಗಾವತಿ “ಪರೀಕ್ಷೆಗಳು ಕೇವಲ ಅಂಕ ಗಳಿಸುವ ಸಾಧನವಲ್ಲ” ಪರೀಕ್ಷೆಗಳು ವಿದ್ಯಾರ್ಥಿಗಳ ಜ್ಞಾನ ಕೌಶಲ್ಯ ಮತ್ತು ವಿಷಯದ ಆಳವಾದ ತಿಳುವಳಿಕೆಯನ್ನು ಅಳೆಯುವ ಪ್ರಮುಖ ಶೈಕ್ಷಣಿಕ ಮೌಲ್ಯಮಾಪನ ಸಾಧನವಾಗಿದೆ ಇವು ಶಿಸ್ತು ,ಸಮಯ, ನಿರ್ವಹಣೆ ಮತ್ತು ಕಠಿಣ ಪರಿಶ್ರಮವನ್ನು ಉತ್ತೇಜಿಸುತ್ತವೆ. ವೈಯಕ್ತಿಕ ಬೆಳವಣಿಗೆಗೆ ಮತ್ತು ಮುಂದಿನ ಹಂತದ ಶಿಕ್ಷಣದ ಅಗತ್ಯವಾದ ತಾರ್ಕಿಕ ಚಿಂತನೆಗಳನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತವೆ ಅಷ್ಟೇ ಅಲ್ಲದೆ ಇದು ಕಲಿಕೆಯ ಪ್ರಕ್ರಿಯೆ ಪ್ರಮುಖ ಭಾಗವಾಗಿದೆ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಪ್ರಮುಖ ಸಾಧನವಾಗಿದೆ. ಪರೀಕ್ಷೆಗಳು ವಿದ್ಯಾರ್ಥಿ ಒಂದು ನಿರ್ದಿಷ್ಟ ಅವಧಿಯಲ್ಲಿ ಎಷ್ಟು ವಿಷಯವನ್ನು ಕಲಿತಿದ್ದಾನೆ ಮತ್ತು ವಿಷಯವನ್ನು ಎಷ್ಟರಮಟ್ಟಿಗೆ ಅರ್ಥಮಾಡಿಕೊಂಡಿದ್ದಾನೆ ಎಂಬುದನ್ನು ನಿರ್ಣಯಿಸುವುದು ಹಾಗೂ ಕೇವಲ ಅಂಕ ಗಳಿಗಾಗಿ ಅಲ್ಲ ಬದಲಿಗೆ ವಿಷಯದ ಮೇಲಿನ ಹಿಡಿತವನ್ನು ಪರೀಕ್ಷಿಸುತ್ತದೆ. ಹಾಗೂ ಪರೀಕ್ಷೆಗಳು ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುವುದಷ್ಟೇ ಅಲ್ಲದೆ ಅವನ ಜ್ಞಾನವನ್ನು ಅಳೆಯುವಂತಹ ಒಂದು ಸಾಧನವು ಕೂಡ ಹೌದು. ಮತ್ತು ವಿದ್ಯಾರ್ಥಿಗೆ ಸಮಯವನ್ನು ಹಾಗೂ ಬರವಣಿಗೆ ಕೌಶಲ್ಯವನ್ನು ಯಾವ ರೀತಿ ಉಪಯೋಗ ಸುವಂತಹ ಕಲೆಯನ್ನ ಬಳಸುತ್ತದೆ ಮತ್ತು ಎಷ್ಟೇ ಸವಾಲುಗಳು ಇದ್ದರೂ ಸಹ ಪರೀಕ್ಷೆಯಲ್ಲಿ ಉತ್ತಮ ಬರೆಯಬೇಕು ಎಂಬ ಛಲವನ್ನ ಮೂಡಿಸುತ್ತದೆ. ಹಾಗೂ ವಿಷಯದ ಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ . ವೈಯಕ್ತಿಕ ಬೆಳವಣಿಗೆಗೆ ಮತ್ತು ಮುಂದಿನ ಹಂತದ ಶಿಕ್ಷಣಕ್ಕೆ ಅಗತ್ಯವಾದ ಜ್ಞಾನವನ್ನು ಬೆಳೆಸುತ್ತದೆ. ಕಲಿಕೆಯ ಗುಣಮಟ್ಟ ಮತ್ತು ವಿಷಯದ ಜ್ಞಾನದ ಮಟ್ಟವನ್ನು ಅರ್ಥ ಮಾಡಿಕೊಳ್ಳುವಲ್ಲಿ ಪರೀಕ್ಷೆಗಳು ಸಹಾಯ ಮಾಡುತ್ತವೆ. ಓದಲು ಮತ್ತು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸುವುದಷ್ಟೇ ಅಲ್ಲದೆ ಪ್ರೇರಣೆಯನ್ನು ಒದಗಿಸುತ್ತದೆ ಪರೀಕ್ಷೆಯು ಕೇವಲ ಅಂಕಗಳಿಗಾಗಿ ಅಲ್ಲ ಬದಲಾಗಿ ಜ್ಞಾನವನ್ನು ಅಭಿವೃದ್ಧಿಪಡಿಸುವ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಒಂದು ಪ್ರಕ್ರಿಯೆಯಾಗಿದೆ. ಹಾಗೂ ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವುದರಿಂದ ತಪ್ಪದೇ ಸಮಯಕ್ಕೆ ಸರಿಯಾಗಿ ಹಾಜರಾಗುವುದು ಅಷ್ಟೇ ಮುಖ್ಯವಾಗಿರುತ್ತದೆ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ ಹಾಗಾಗಿ ಪರೀಕ್ಷೆಗಳು ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದೆ ಹಾಗೂ ಪರೀಕ್ಷೆಗಳು ವಿದ್ಯಾರ್ಥಿಯ ಜೀವನದಲ್ಲಿ ಮಹತ್ವವಾದಗಳು *ಉದಾಹರಣೆಗೆ*ಶಿಕ್ಷಣ ಎಷ್ಟು ಮುಖ್ಯ ಎನ್ನುವುದನ್ನು ನೋಡುವುದಾದರೆ ಹೀಗೆ ಒಂದು ಊರಿನಲ್ಲಿ ಗಿರೀಶ ಮತ್ತು ಹರೀಶ್ ಎನ್ನುವ ಇಬ್ಬರು ಗೆಳೆಯರಿದ್ದರು.ಇಬ್ಬರೂ ಓದಿದಲ್ಲಿ ಅಷ್ಟೇ ಜಾಣನಿದ್ದರೂ ಕೂಡ ಗಿರೀಶನಿಗೆ ಅನಾರೋಗ್ಯದ ಕಾರಣದಿಂದ ಪರೀಕ್ಷೆಯಲ್ಲಿ ಹಾಜರಾಗದೆ ಹಿಂದುಳಿದ ತೊಡಗಿದ ಆಗ ಹರೀಶನು ಆತನಿಗೆ ಉತ್ತಮ ಅಂಕ ಗಳಿಸಲು ತನಗೆ ತಿಳಿದಂತಹ ಎಲ್ಲಾ ಸಲಹೆಗಳನ್ನು ನಿತ್ಯವೂ ಹೇಳುತ್ತಾ ಬಂದನು ಆಗ ಆತನು ಕೂಡ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಮತ್ತು ಅವರಿಬ್ಬರು ಕೂಡಿ ತಮ್ಮ ಗ್ರಾಮದಲ್ಲಿ ಇರುವಂತಹ ಅನಕ್ಷರಸ್ಥರನ್ನು ಸೇರಿಸಿನಿತ್ಯವೂ ಸಂಜೆ ಸಮಯದಲ್ಲಿ ಅವರುಗಳಿಗೆ ಉತ್ತಮ ಜ್ಞಾನವನ್ನು ನೀಡುತ್ತಾ ಬಂದರು ಆಗ ಊರಿಗೆ ಊರೇ ಸಾಕ್ಷರತಾ ಗ್ರಾಮವಾಗಿ ಪರಿವರ್ತನೆಗೊಂಡಿತು.ಅದಕ್ಕೆ ಹೇಳುವುದು *ವಿದ್ಯೆ ಕದಿಯಲಾರದ ಸಂಪತ್ತು*ಹೀಗೆ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಪರೀಕ್ಷೆಗಳು ಅವರ ಜೀವನವನ್ನೇ ಬದಲಾಯಿಸುವಂತಹ ಮಹತ್ವದ ಪಾತ್ರವನ್ನು ವಹಿಸುತ್ತವೆ ಹೀಗಾಗಿ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಕೇವಲ ಅಂಕಗಳಿಗಾಗಿ ಅಷ್ಟೇ ಅಲ್ಲದೆ ಜ್ಞಾನಕ್ಕಾಗಿ ಓದುವುದು ಅಷ್ಟೇ ಮುಖ್ಯ ಸಮಯವನ್ನು ವ್ಯರ್ಥ ಮಾಡದೆ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಪರೀಕ್ಷೆಗಳು ಪ್ರಮುಖ ಸಾಧನಗಳಾಗಿವೆ. ನಾಗರತ್ನ. ಹೆಚ್ ಗಂಗಾವತಿ

“ಪರೀಕ್ಷೆಗಳು ಕೇವಲ ಅಂಕ ಗಳಿಸುವ ಸಾಧನವಲ್ಲ” ನಾಗರತ್ನ. ಹೆಚ್ ಗಂಗಾವತಿ Read Post »

ಇತರೆ, ಶಿಕ್ಷಣ

ರಾಷ್ಟ್ರೀಯ ಶಿಕ್ಷಣ ದಿನ, ಗಾಯತ್ರಿ ಸುಂಕದ

ರಾಷ್ಟ್ರೀಯ ಶಿಕ್ಷಣ ದಿನ, ಗಾಯತ್ರಿ ಸುಂಕದ
ಸಮಾಜದಲ್ಲಿ ಶಿಕ್ಷಣದ ಮಹತ್ವವನ್ನೂ ತಿಳಿಸಲು ನಮ್ಮ ಸರ್ಕಾರ. ಪ್ರತಿ ವರ್ಷ ನವೆಂಬರ್ 11ರಂದು ರಾಷ್ಟ್ರೀಯ ಶಿಕ್ಷಣ ದಿನ ವನ್ನಾಗಿ ಆಚರಿಸಲಾಗುತ್ತದೆ.

ರಾಷ್ಟ್ರೀಯ ಶಿಕ್ಷಣ ದಿನ, ಗಾಯತ್ರಿ ಸುಂಕದ Read Post »

ಇತರೆ, ಶಿಕ್ಷಣ

“ಶಿಕ್ಷಣಕ್ಕೆ…. ಹೊಸ ವಾಖ್ಯಾನ” ವೀಣಾ ಹೇಮಂತ್ ಗೌಡ ಪಾಟೀಲ್

ಶಿಕ್ಷಣ ಸಂಗಾತಿ

ವೀಣಾ ಹೇಮಂತ್ ಗೌಡ ಪಾಟೀಲ್

“ಶಿಕ್ಷಣಕ್ಕೆ…. ಹೊಸ ವಾಖ್ಯಾನ”
ಅಂತಹ ಮಕ್ಕಳ ಭಾವನೆಗಳನ್ನು ಅವರು ಹೇಳದೆಯೇ ಅರಿತುಕೊಂಡು ಅವುಗಳಿಗೆ ಪರಿಹಾರ ಹುಡುಕುವುದು ಶಿಕ್ಷಕರಾದ ನಮ್ಮ ಕರ್ತವ್ಯ… ನೀನೇನಂತಿಯ? ಎಂದು ಹೇಳಿ ಆ ಬಾಲಕನ ಬೆನ್ನು ತಟ್ಟಿ ಪ್ರಶ್ನಾರ್ಥಕವಾಗಿ ನೋಡಿದರು.

“ಶಿಕ್ಷಣಕ್ಕೆ…. ಹೊಸ ವಾಖ್ಯಾನ” ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಇತರೆ, ಶಿಕ್ಷಣ

“ಸಾಕ್ಷರತೆಯಿಂದ ಸಮಾಜದ ಪ್ರಗತಿ” ನಾಗರತ್ನ ಹೆಚ್.ಗಂಗಾವತಿ ಅವರಿಂದ ʼಸಾಕ್ಷರತಾದಿನʼಕ್ಕೊಂದು ಬರಹ

ಅಕ್ಷರ ಸಂಗಾತಿ

ನಾಗರತ್ನ ಹೆಚ್.ಗಂಗಾವತಿ

“ಸಾಕ್ಷರತೆಯಿಂದ ಸಮಾಜದ ಪ್ರಗತಿ”
ಸಾಕ್ಷರತೆಯನ್ನುವುದು ಕೇವಲ ಶಿಕ್ಷಣದ ಒಂದು ಭಾಗವಲ್ಲ ಬದಲಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ಒಂದು ಪ್ರಮುಖ ಸಾಧನ ಇದು ಜನರ ಬದುಕನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ

“ಸಾಕ್ಷರತೆಯಿಂದ ಸಮಾಜದ ಪ್ರಗತಿ” ನಾಗರತ್ನ ಹೆಚ್.ಗಂಗಾವತಿ ಅವರಿಂದ ʼಸಾಕ್ಷರತಾದಿನʼಕ್ಕೊಂದು ಬರಹ Read Post »

ಇತರೆ, ಶಿಕ್ಷಣ

ಶಿಕ್ಷಣ ದಿನಾಚರಣೆಯ ವಿಶೇಷ-ವೀಣಾಹೇಮಂತ್‌ ಗೌಡಪಾಟೀಲ್

ಶಿಕ್ಷಕ ಸಂಗಾತಿ

ವೀಣಾಹೇಮಂತ್‌ ಗೌಡಪಾಟೀಲ್

ಶಿಕ್ಷಕರ ದಿನಾಚರಣೆ….. ಒಂದು ವಿಶ್ಲೇಷಣೆ

ಶಿಕ್ಷಣ ದಿನಾಚರಣೆಯ ವಿಶೇಷ-ವೀಣಾಹೇಮಂತ್‌ ಗೌಡಪಾಟೀಲ್ Read Post »

You cannot copy content of this page

Scroll to Top