ಅನುವಾದ ಸಂಗಾತಿ
ಅಂಥ ಹೆಣ್ಣಲ್ಲ ನಾನು… ಮೂಲ: ಕಿಶ್ವರ್ ನಾಹಿದ್ ಕನ್ನಡಕ್ಕೆಚಂದದ್ರಪ್ರಭ .ಬಿ. ಅಂಥ ಹೆಣ್ಣಲ್ಲ ನಾನು… ಸಂತೆಯಲ್ಲಿ ನಿಂತು ನೀವು ಬಯಸುವುದನ್ನೇ ನಿಮಗೆ ಮಾರಾಟ ಮಾಡುವ ಅಂಥವಳು ನಾನಲ್ಲ ನೆನಪಿಟ್ಟುಕೊಳ್ಳಿ, ನೀವು ನಿಮ್ಮ ಕೈಯಾರೆ ನಿರ್ಮಿಸಿದ ಕಲ್ಲಿನ ಕೋಟೆಯ ನಡುವೆ ಸುಭದ್ರವಾಗಿ ಬಂಧಿಸಿಟ್ಟ ಅವಳು, ನಾನು ಕಲ್ಲ ಗೋಡೆಗಳು ನನ್ನ ಧ್ವನಿಯನ್ನು ಬಂಧಿಸಲಾರವು ಎಂಬ ಸತ್ಯವನು ನೀವು ಅರಿಯದೆ ಹೋದಿರಿ ರೂಢಿ ಸಂಪ್ರದಾಯದ ಹೆಸರಲ್ಲಿ ಏನೆಲ್ಲವನು ನೀವು ನುಚ್ಚು ನೂರು ಮಾಡಿದಿರೊ ಆ ಅವಳೇ ನಾನು ನೀವು ಅರಿಯಲು ವಿಫಲರಾದಿರಿ ಕತ್ತಲೆಯ ಗರ್ಭದಲ್ಲಿ ಬೆಳಕನ್ನು ಬಂಧಿಸಲಾಗದು ನೆನಪಿಟ್ಟುಕೊಳ್ಳಿ ಯಾರ ಮಡಿಲಿನ ನವಿರಾದ ಹೂ ದಳಗಳನ್ನು ಕಿತ್ತೆಸೆದು ಅಲ್ಲಿ ಮುಳ್ಳುಗಳನ್ನು ಪ್ರತಿಷ್ಠಾಪಿಸಿದಿರೊ ಆ ಅವಳೇ ನಾನು ನಿಮಗೆ ತಿಳಿದಿಲ್ಲದಿರಬಹುದು… ಆದರೆ ಸಂಕೋಲೆಗಳು ಪರಿಮಳವನ್ನು ಉಸಿರುಗಟ್ಟಿಸಿ ಹೊಸಕಲಾರವು ಶೀಲ ಚಾರಿತ್ರ್ಯಗಳ ಹೆಸರಿನಲ್ಲಿ ಮಾರಾಟದ ಸರಕಾಗಿಸಿದ ಆ ಅವಳು ನಾನಲ್ಲ ಅರಿಯಲು ಸೋತಿರಿ ನೀವು ಮಡುವಿನಲ್ಲಿ ಮುಳು ಮುಳುಗಿಸಿ ಉಸಿರುಗಟ್ಟಿಸಿ ನನ್ನ ಹೊಸಕಿದೆನೆಂದು ನೀವು ಬೀಗುವಾಗಲೂ ನೀರ ಮೇಲೆ ನಾ ನಡೆಯಬಲ್ಲೆ ಎಂಬುದನು ನನ್ನನ್ನು ಒಂದು ಹೊರೆಯೆಂದು ಬಗೆದು ಪೀಡೆ ತೊಲಗಿ ಹೋಗಲೆಂದು ಅವಸರಿಸಿ ಯಾರಿಗೊ ಕೊಟ್ಟು ಕೈ ತೊಳೆದುಕೊಂಡ ಆ ಅವಳು ನಾನು ಇನ್ನಾದರೂ ಅರಿಯಿರಿ ಬುದ್ದಿಗೂ ಭಾವಕೂ ಸಂಕೋಲೆ ತೊಡಿಸಿದ ದೇಶಕ್ಕೆ ಸ್ವಾತಂತ್ರ್ಯವೆಲ್ಲಿ? ಪ್ರಗತಿಯೆಲ್ಲಿ? ಯಾರ ಚೈತನ್ಯ ತಾಯ್ತನ ನಿಷ್ಠೆಗಳನ್ನು ಮಾರಾಟದ ಸರಕಾಗಿಸಿದಿರೊ ಆ ಅವಳು ನಾನು ನನಗೀಗ ಅರಳುವ ಸಮಯ ಜಾಹೀರಾತಿನ ಗೋಡೆಯ ಮೇಲೆ ಅರೆ ಬೆತ್ತಲೆ ಅರೆ ಪ್ರಜ್ಞಾವಸ್ಥೆಯಲ್ಲಿ ಮಾರಾಟಕ್ಕೆ ನಿಂತ ಆ ಅವಳೇ? ಅಲ್ಲ, ಅಲ್ಲಲ್ಲ.. ನಾನು ಅವಳಲ್ಲವೇ ಅಲ್ಲ ***** I Am Not That Woman I am not that woman Selling you socks and shoes! Remember me, I am the one you hid In your walls of stone, not knowing That my voice cannot be smothered by stones I am the one you crushed With the weight of custom and tradition Not knowing That light cannot be hidden in darkness. Remember me, I am the one whose lap You picked flowers And planted thorns and embers Not knowing That chains cannot smother my fragrance I’m not that woman Whom you bought and sold In the name of chastity Not knowing That I can walk on water When I am drowning I am the one you married off To get rid of a burden Not knowing That a nation of captive minds Cannot be free I am the commodity you traded in My chastity, my motherhood, my loyalty Now it is time for me to flower free. The woman on the post, half naked selling socks and shoes — No, no, I am not that woman.








