ಅನುವಾದ ಸಂಗಾತಿ
ಹೆಚ್ಚೆಂದರೇನು ಮಾಡಿಯೇನು? ಕನ್ನಡ ಮೂಲ:ಶೋಭಾ ನಾಯ್ಕ .ಹಿರೇಕೈ ಕಂಡ್ರಾಜಿ. ಇಂಗ್ಲೀಷಿಗೆ:ಸಮತಾ ಆರ್. ಹೆಚ್ಚೆಂದರೇನು ಮಾಡಿಯೇನು? ಅವರಂತೆ ತಣ್ಣೀರಲ್ಲಿ ಮಿಂದುನಲವತ್ತೆಂಟನೆಯ ದಿನದವ್ರತ ಮುಗಿಸಿ,ಆ ಕೋಟೆ ಕೊತ್ತಲಗಳ ದಾಟಿಬೆಟ್ಟವೇರಿ ಗುಡ್ಡವಿಳಿದು, ಕಣ್ಗಾವಲ ತಪ್ಪಿಸಿನಿನ್ನ ಬಳಿ ನಡೆದೇ….ಬಂದೆನೆಂದು ಇಟ್ಟುಕೋಹೆಚ್ಚೆಂದರೆ ನಾನಲ್ಲಿಏನು ಮಾಡಿಯೇನು? ‘ಬಾಲಕನಾಗಿಹೆ ಅಯ್ಯಪ್ಪ’ ಈಹಾಡು ಹಾಡು ಕೇಳಿ ಕೇಳಿಇತ್ತೀಚೆಗೆ ನಿನ್ನ ಹಳೆಯದೊಂದುಪಟ ನೋಡಿದ ಮೇಲೆನನ್ನ ಮಗನಿಗೂ..ನಿನಗೂ..ಯಾವ ಪರಕ್ಕೂ ..ಉಳಿದಿಲ್ಲ ನೋಡು ಎಷ್ಟೋ ವರ್ಷ ನಿಂತೇ ಇರುವೆಬಾ ಮಲಗಿಕೋ ಎಂದುಮಡಿಲ ಚೆಲ್ಲಿನನ್ನ ಮುಟ್ಟಿನ ಕಥೆಯನಡೆಯುತ್ತಿರುವ ಒಳ ಯುದ್ಧಗಳ ವ್ಯಥೆಯನಿನಗೆ ಹೇಳಿಯೇನು ಹುಲಿ ಹಾಲನುಂಡ ನಿನಗೆತಾಯ ಹಾಲ ರುಚಿ ನೋಡುಹುಳಿಯಾಗಿದೆಯೇನೋ ..ಎನ್ನುತ್ತಲೇತೇಗಿಸಲು ಬೆನ್ನ ನೀವಿಯೇನು ದೃಷ್ಟಿ ತೆಗೆದು ನಟಿಗೆ ಮುರಿದುಎದೆಗೊತ್ತಿಕೊಂಡು,ತೆಹಣೆಗೊಂದು ಮುತ್ತಿಕ್ಕಿಥೇಟ್ ನನ್ನ ಮಗನಂತೆ ಎನ್ನುತ್ತಹದಿನೆಂಟನೆಯ ಕೊನೆಯ ಮೆಟ್ಟಿಲ ಕೆಳಗಿಳಿದ ಮೇಲೂ….ಮತ್ತೊಮ್ಮೆ ಮುಗುದೊಮ್ಮೆ ನಿನ್ನತಿರುತಿರುಗಿ ನೋಡಿಯೇನು ಈಗ ಹೇಳುನನ್ನ ಮುಟ್ಟು ನಿನಗೆ ಮೈಲಿಗೆಯೇನು? What else can I do… I may ,Just like themDipping in cold waterCompleting forty eightDays of abstinence,Crossing those fortressesClimbing up and down the hillocksEscaping all the surveillanceCome trekking to you..But what else can I do there… “You are still a child oh Aiyappa”Listening to this hymn over and overagain and again,later seeingAn old pic of yoursSee,there is no difference leftbetween you and my son. I may ,Ask you to rest in my lapAs you are standing still, since ages,Then I may tell you the stories ofMy menstruation painAnd internal conflicts. I may ,Breast feed the oneWho has tasted the tiger’s milkDoubting, it has turned sourI will massage your backAnd make you burp. I may,After cracking my knucklesTo rid you off all the ill omen,Hugging and kissing you on forehead, Descend the eighteen steps,But will still turn and turnAnd keep on looking at you.. Now tell me,Does my menstruation defile you? *********************************************************









