ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಆರೋಗ್ಯ

ಆರೋಗ್ಯ ಅರಿವು

ಆಗಾಗ್ಗೆ ಹಿಂತಿರುಗಿ ನೋಡಬೇಕು… ಡಾ ವಿಜಯಲಕ್ಷ್ಮಿ ( ರಮಾ) ಪುರೋಹಿತ “ಆಗಾಗ್ಗೆ ಹಿಂತಿರುಗಿ ನೋಡಬೇಕುಭವಿಷ್ಯದ ಹಾದಿಯಲ್ಲಿ ಸಾಗುತ್ತ. ಆರೋಗ್ಯದ ಸಂರಕ್ಷಣೆ ಪ್ರತಿಯೊಬ್ಬ ಮನುಷ್ಯನ ಮಹದಾಸೆ ಏನಾದರೂ ಸಾಧಿಸಬೇಕೆಂಬ ಉತ್ಕಟ ಬಯಕೆ ಇದ್ದೇ ಇರುತ್ತದೆ.ಅದು ಸಂತೋಷಕರ ಸಂಗತಿಯೇ.ಈ ಕಾಲದಲ್ಲಿಯ ಜೀವನ ಆನಂದಮಯ ಹಾಗೂ ತೃಪ್ತಿಕರವಾಗಿರದೇ ಎಲ್ಲೊ ಕಳೆದುಕೊಂಡಹಾಗೆ,ಏನೊ ಹುಡುಕುತ್ತಿರುವ ಹಾಗೆ ಬಹಳ ಜನರನ್ನು ಕಾಣುತ್ತೇವೆ.ಯಾವದರಲ್ಲಿಯೂ ಸಮಧಾನ ಇಲ್ಲ.ಇನ್ನು ಕೆಲವರಿಗಂತೂ ಭಯವೇ ಜೀವನದಲ್ಲಿ ಆವರಿ ಸಿದೆ.ಚಿಕ್ಕವರಿಗೆ ಶಾಲಾ,ಕಾಲೇಜಿನಲ್ಲಿ ಅಂಕಗಳಿಸುವ ತುಡಿತವಿದ್ದರೆ,ಯುವಕರಿಗೆ ಜೀವನೋಪಾಯದ ಚಿಂತೆ  ವಯಸ್ಕರಿಗೆ ಅನಾರೋಗ್ಯದ ಛಾಯೆ ಅಷ್ಟೇ ಅಲ್ಲದೇ ತಪ್ಪಿಸಲಾಗದ ಮರಣ ಹತ್ತಿರವಾದಂತೆ ಅವರದೇ ಬೇರೆ ದುಗುಡ,ಆತಂಕ.ಹೀಗಾಗಿ ದೊರಕಿರುವ ಆಯುಷ್ಯದಲ್ಲಿ ಮನುಷ್ಯನಿಗೆ ಕ್ರಮಬದ್ಧವಾಗಿ,ಶಿಸ್ತಿನ ಜೀವನ ಶೈಲಿ ಇದ್ದರೆ ಒಳ್ಳೆಯ ಆರೊಗ್ಯ ಲಭಿಸಿ ಅಂದು ಕೊಂಡ ಸಾಧನೆ ಸಾಧ್ಯ. ಶರೀರ ಮಾಧ್ಯಂ ಖಲು ಧರ್ಮ ಸಾಧನಂ !! ಸಾಧನೆ ಮಾಡಬೇಕಿದ್ದರೆ ಆರೋಗ್ಯಕರ ಶರೀರದ ಅತ್ಯವ ಶ್ಯಕತೆ ಇರುತ್ತದೆ.ಒಟ್ಟಿನಲ್ಲಿ ರೋಗ ರಹಿತವಾಗಿರುವದೆಂದ ರೆ,ಮಾನಸಿಕ ಹಾಗೂ ದೈಹಿಕಸ್ವಾಸ್ಥ್ಯಕಾಪಾಡಿಕೊಳ್ಳುವು ದು.ಹಾಗಾದರೆ ಅನಾರೋಗ್ಯ ಇರದೇ ಆರೋಗ್ಯ ಭಾಗ್ಯ ದೊರಕುವ ಬಗೆಯನ್ನು ತಿಳಿಯಲು ಪ್ರಯತ್ನ ಮಾಡೋಣ ಔಷಧಿಗಳ ಬಳಕೆ ತೀರಾ ಅವಶ್ಯಕವಾದಾಗ ಮಾಡಬೇಕು. ಅದನ್ನು ಉಪೇಕ್ಷಿಸುವಂತಿಲ್ಲ. ಆದರೆ ಯಾವ ಔಷಧಗಳು ಅಡ್ಡಪರಿಣಾಮ ಬೀರುವದಿಲ್ಲವೋ ಅವು ಹೆಚ್ಚು ಸೂಕ್ತ. “ಧರ್ಮಾರ್ಥಕಾಮ ಮೋಕ್ಷಾಣಾಮಾರೋಗ್ಯಂಮೂಲ ಮುತ್ತಮಂ! ರೋಗಾಸ್ತಸ್ಯಾಪಹರ್ತಾರ: ಶ್ರೆಯಸೋ   ಜೀವಿತ ಸ್ಯಚ!!”. ನಮ್ಮ ಭಾರತೀಯ ಸಂಸ್ಕ್ರತಿಯಲ್ಲಿವಪ್ರತಿ ಮನುಷ್ಯನ ಮೂಲ ಉದ್ದೇಶ ಧರ್ಮ,ಅರ್ಥ,ಕಾಮ ಮತ್ತು ಮೋಕ್ಷವ ನ್ನುಪಡೆಯುವದು.ಈ ನಾಲ್ಕು ಮನುಷ್ಯನ ವಶವಾಗಬೇ ಕಾದರೆ ಎಲ್ಲಕ್ಕಿಂತ ಅತಿ ಮುಖ್ಯವಾಗಿ ಬೇಕಾಗಿರುವದು ಒಳ್ಳೆಯ ಆರೋಗ್ಯ.ಅನಾರೋಗ್ಯ ವ್ಯಕ್ತಿಗೆ ಧರ್ಮಕರ್ಮ ಗಳಾಗಲೀ ಸಾಧಿಸುವದಿಲ್ಲ ಹಾಗೂ ಅರ್ಥವ್ಯವಸ್ಥೆಯೂ ದೊರಕುವದಿಲ್ಲ.ಜೀವನದ ಸುಖ ಸಂತೋಷಗಳಿಂದ ಅವನು ದೂರವೇ ಉಳಿಯಬೇಕಾಗುತ್ತದೆ.ಮೋಕ್ಷವಂತು ದೂರವೇ ಉಳಿಯಿತು.ಜೀವನದಲ್ಲಿ ಆರೋಗ್ಯ ಒಂದು ಕಡೆಯಾದರೆ ಉಳಿದೆಲ್ಲಸುಖ,ಸಂಪತ್ತು,ಧನ,ಕೀರ್ತಿ,ಬಲು ದ್ದಿ ಮಟ್ಟ,ಜನಮನ್ನಣೆ ಇತ್ಯಾದಿಗಳೆಲ್ಲವೂ ಇನ್ನೊಂದು ಕಡೆ ತೂಗುತ್ತವೆ.”ಆರೋಗ್ಯವಂತ ಬಡವನ ಬಾಳು  ಸಿರಿವಂತ ರೋಗಿಯ ಅಳು” ಇವೆರಡರಲ್ಲಿ ಆರೋಗ್ವಂತನ ಬಾಳೇ ಶ್ರೇಷ್ಠ.ಅನಾದಿ ಕಾಲದಿಂದಲೂ ಭಾರತೀಯರಿಗೆ ಆರೋಗ್ಯ ದ ಕಾಳಜಿ,ಅರಿವು,ಪಾಲಿಸುವ ಸದಭಿರುಚಿ ಇದ್ದೇ ಇತ್ತು. ಅವೆಲ್ಲ ಜೀವನದ ಅವಿಭಾಜ್ಯ ಅಂಗಗಳಾಗಿಯೂ ಇತ್ತು. ಅದಕ್ಕಾಗಿಯೇ,”ಸ್ವಾಸ್ಥಸ್ಯಸ್ವಾಸ್ಥ್ಯರಕ್ಷಣಂ!ಆತುರಸ್ಯವಿಕಾರಪ್ರಶಮನ!!ಎಂದುಹೇಳಿದ್ದಾರೆ.ಅಂದರೆ:: ಆರೋಗ್ಯವಂತನ ಆರೋಗ್ಯ ನನ್ನು ಕಾಪಾಡಿ ಕೊಂಡು ಹೋಗುವದು ಹಾಗೂ ರೋಗ ಬಂದಾಗ ಅದನ್ನು ಶಮನಗೊಳಿಸುವದು ಎಂದರ್ಥ‌. ಆದರೆ ಇಂದಿನ ದಿನಗಳಲ್ಲಿ ಎಲ್ಲರ ಮನೋಭಿಲಾಷೆಗಳು ಶೀಘ್ರಹಣ ಮಾಡುವದು, ಹೆಚ್ಚು ಹಣ ಮಾಡುವದು ಇತ್ಯಾದಿ ಕ್ಷುಲ್ಲಕ ಆಮಿಷಗಳಿಗೆ ಬಿದ್ದು ಆರೋಗ್ಯದ ಪರಿವೆ ಇಲ್ಲದೆ ನಿತ್ಯ ನರಕ ಅನುಭವಿಸುತ್ತಾರೆ.ಅಷ್ಟೇ ಅಲ್ಲದೆ ಬೇ ಗ ಗುಣವಾಗಬೇಕು,ಯಾರಿಗೂ ರಜೆ ಇಲ್ಲ,ಮತ್ತೆ ಮಾರನೆ ದಿನ ಎಂದಿನಂತೆ ಕೆಲಸಗಳಿಗೆ ಹಾಜರಾಗಬೇಕೆಂಬ ಅನಿ ವಾರ್ಯತೆಯೂ ಇರುವದರಿಂದ ತಮ್ಮ ದೇಹದ ಮಾತನ್ನ ಆಲಿಸುವ ಸಹನೆ,ವೇಳೆ ಯಾರಲ್ಲಿಯೂ ಇಲ್ಲ.ಆತುರದ ಮನಸ್ಸಿನಲ್ಲಿ ಯಾವ ಔಷಧಿ ಸೂಕ್ತ ಅಂತ ಯೋಚಿಸದೇ, ಆದರ ಅಡ್ಡಪರಿಣಾಮಗಳನ್ನು ತಿಳಿಯದೇ ಸಧ್ಯಕ್ಕೆ ಆರಾ ಮ ಆದರೆ ಆಯಿತು ಅನ್ನುವ ಮನೋಭಾವದಲ್ಲಿ ನಾವೆಲ್ಲ ಇದ್ದೆವೆ. ಈಗಂತೂ ಔಷಧಿಗಳ ಜಾಹಿರಾತುಗಳು ಸಹಜನ ರನ್ನು ತಪ್ಪು ದಾರಿಗೆಳೆಯುತ್ತವೆ. ರೋಗ ಬಂದಾಗ ಔಷಧೋಪಚಾರ ಇರಲಿ ಆದರೆ ರೋಗ ಬಾರದಂತೆ ನಮ್ಮ ಹಿಂದಿನವರು ನಡೆದುಕೊಂಡು ಬಂದ ದಾರಿ ಅವರ ತಿಳುವಳಿಕೆ,ಜಾಣ್ಮೆ,ಮೈಬಗ್ಬಿಸಿ ದುಡಿಯುವ ದು,ಹಿತ,ಮಿತ ಮಾತು,ಆಹಾರ ಸೇವನೆ,ನಿದ್ದೆ,ಕಾಯಿಲೆಗೆ ತುತ್ತಾಗದಂತೆ ಅವರು ತೆಗೆಳ್ಳುತಿದ್ದ ಮುಂಜಾಗ್ರತೆ ಎಲ್ಲವ ನ್ನೂ ಅವಲೋಕಿಸಿದಾಗ ನಾವು ಸುಶಿಕ್ಷಿತರು ಎನ್ನಿಸಿಕೊಳ್ಳು ವವರು ಖಂಡಿತ ನಮ್ಮನ್ನು ನಾವೇ ಅರಿಯಬೇಕಾಗಿದೆ. ಕೆಲವರಂತೂ ಆಹಾರಕ್ಕಿಂತ ಔಷಧಿಯ ಮೇಲೆಯೇ ಅವ ಲಂಬಿತರಾಗಿದ್ದು ಅವರ ಹಣಕಾಸಿನ ಖರ್ಚು,ಔಷಧಿಯ ಬೇಡದ ಪರಿಣಾಮಗಳು ಇತ್ಯಾದಿಯಿಂದ ಮನುಷ್ಯ ಖಿನ್ನ ತೆಯನ್ನು ಹೊಂದುತ್ತಾನೆ. ಭಗವಾನ ಧನ್ವಂತರಿ ಆಯುವೇ ೯ದ ಶಾಸ್ತ್ರದಲ್ಲಿ ಹೇಳಿದಂತೆ “ಸಮದೋಷ:ಸಮಾಗ್ನಿಷ್ಚಸಮಧಾತುಮಲಕ್ರಿಯಾ: ! ಪ್ರಸನ್ನಾತ್ಮೇಂದ್ರಿಯಮನ: ಸ್ವಸ್ಥಇತ್ಯಭಿದಿಯತೆ!! ಅರ್ಥ:: ಯಾವ ಮನುಷ್ಯನ ದೋಷ (ವಾತ, ಪಿತ್ತ,ಹಾಗೂ ಕಫ ೩ ದೋಷಗಳು) ಸಮಸ್ಥಿತಿಯಲ್ಲಿದ್ದು,ಅಂದರೆ ಹೆಚ್ಚು ಕಡಿಮೆ ಆಗದೇ,ಯಾರ ಅಗ್ನಿ (ಜೀರ್ಣಶಕ್ಕ್ತಿ),(digestive         fire) ಶರೀರದ ಧಾತುಗಳು (bodytissues) ಅಂದರೆ ರಸ ( lymphatic fluid) ,ರಕ್ತ( blood),ಮಾಂಸ (mu scle),ಮೇದ(lipids),ಅಸ್ಥಿ(bone),ಮಜ್ಜಾ(bonema rrow) ಹಾಗೂ ಶುಕ್ರ(sperm/ovum) ಎಲ್ಲವೂ,ಅಷ್ಟೇ ಅಲ್ಲದೇ ಮಲನಿರ್ಹರಣ ಅಂಗಗಳೂ ಕೂಡ ಸರಿಯಾಗಿ ಕಾರ್ಯನಿರ್ವಹಿಸಿದರೆ ಮತ್ತುಆತ್ಮ,ಇಂದ್ರಿಯಗಳನ್ನೂ ಹಾಗೂ ಮನಸ್ಸು ಪ್ರಸನ್ನವಾಗಿಟ್ಟು ಕೊಂಡ ವ್ಯಕ್ತಿ ಮಾತ್ರ ನಿರೋಗಿ,ಆರೋಗ್ಯವಂತ ಸ್ವಸ್ಥ ಅನಿಸಿಕೊಳ್ಳಲು ಸಾಧ್ಯ. ಆಗ ಮಾತ್ರ ಅವನ ಅವಳ ಸಾಧನೆ ಪೂರ್ಣಗೊಳ್ಳುವದರ ಲ್ಲಿ ಸಫಲತೆಯನ್ನು ಕಾಣುತ್ತಾನೆ. ಒಂದು ನೆನಪಿರಲಿ  ಆರೋಗ್ಯ ಎಂದರೆ ಬರೀದೇಹ ಸಾಸ್ಥ್ಯವಷ್ಟೇ ಅಲ್ಲ,ಮನ ಸ್ಸಿನ ಆರೋಗ್ಯವೂ ಅಷ್ಟೇ ಪ್ರಾಮುಖ್ಯ ತೆಯನ್ನು ಪಡೆದಿದೆ.”ಇಂದಿನ ನಮ್ಮ ಆಹಾರ ವಿಹಾರ ನಾಳೆಯ ಗುಣಮಟ್ಟದಬದುಕು.” ************

ಆರೋಗ್ಯ ಅರಿವು Read Post »

ಅಂಕಣ ಸಂಗಾತಿ

ಗಾಳೇರ ಬಾತ್

ಗಾಳೇರ ಬಾತ್-06 ಆ ದಿನಗಳ ದಸರಾ…… ಆ ದಿನಗಳ ದಸರಾ……         ದಸರಾ ಹಬ್ಬಕ್ಕೆ ನಮ್ಮ ಕಡೆಯ ಹಳ್ಳಿಗಳಲ್ಲಿ  ಮಾರ್ನಮಿ ಹಬ್ಬ ಅಂತ ಕರೀತಾರೆ. ಮಾರ್ನಮಿ ಹಬ್ಬ ಅಂದ್ರೆ ಸಾಕು, ನಮಗೆ ಎಲ್ಲಿಲ್ಲದ ಖುಷಿ, ಎಲ್ಲಿಲ್ಲದ ಆನಂದ. ಯಾಕಂದ್ರೆ ಈ ಹಬ್ಬಕ್ಕೆ ನಮಗೆಲ್ಲಾ ಹೊಸಬಟ್ಟೆಗಳು! ಆ ಬಟ್ಟೆಗಳನ್ನ ನೆನಸಿಕೊಂಡ್ರೆ ಇವತ್ತಿಗೂ ನಗು ತಡಿಯೋಕೆ ಆಗಲ್ಲ ಕಣ್ರಿ. ಆಗ ನಮಗೆ ಚಡ್ಡಿ ಮತ್ತೆ ಅಂಗಿ, ಆಗಿನ ಚಡ್ಡಿಗಳನ್ನ ಇವತ್ತಿನ ಬರ್ಮುಡಾ ಗಳಿಗೆ ಹೋಲಿಸಬಹುದು ನೋಡ್ರಿ. ಯಾಕಪ್ಪಾ ಇಷ್ಟು ದೊಡ್ಡದು ಅಂತ ಕೇಳೋಕೆ ಹೋಗಬೇಡ್ರಿ ; ಯಾಕೆಂದ್ರೆ ಬೆಳೆ ಮಕ್ಕಳು ನೋಡು ನೋಡುತ ಮಾರುದ್ದ ಬೆಳಿತಾರ ದೊಡ್ಡವಾದ್ರಾ ಒಂದನಾಲ್ಕು ವರ್ಷ ಹಾಕೊಬಹುದಂತ future plan ನಮ್ಮ ಹೆತ್ತವರದು .        ನಿನ್ನೆ ನಾನು, ಒಬ್ಳು ಫೇಸ್ಬುಕ್ ಫ್ರೆಂಡ್ ದೀಪ ಅಂತ; ಅವ್ಳಿಗೆ ಕಾಲ್ ಮಾಡಿದೆ. “ಹಾಯ್ ಮೇಡಂ ಹಬ್ಬ ಜೋರ”. ಆ ಕಡೆಯಿಂದ “ಹಾಯ್ ಸರ್ ಹೇಗಿದ್ದೀರಾ, ಯಾವ ಹಬ್ಬ! ಅಷ್ಟೇನಿಲ್ಲ ಬಿಡಿ ಮಾಮೂಲಿ ಇದ್ದಿದೇ”. ಮತ್ತೆ ನಾನು “ಯಾಕ್ ಮೇಡಂ ಮೈಸೂರಿಗೆ ಹೋಗ್ಲಿಲ್ವಾ ದಸರಾಕ್ಕೆ” ಆ ಕಡೆಯಿಂದ “ಹೇ ಏನು ದಸರಾ ನಾ, ಏನೋ ಬಿಡ್ರಿ, ಈ ಟೈಮಲ್ಲಿ ಮೈಸೂರು ನೋಡೋಕಾಗುತ್ತಾ, ಫುಲ್ ಜನ ಇರುತ್ತೆರಿ, ಇವಾಗ್ ಏನಾದ್ರೂ ಹೋದರೆ, ಮೈಕೈ ನೋವು ಮಾಡಿಕೊಂಡು ಸುಸ್ತಾಗಿ ಬರಬೇಕಾಗುತ್ತೆ, ಅಷ್ಟೇ ಕಥೆ”. ಈ ಮಾತುಗಳನ್ನು ಕೇಳಿ ನನಗೆ ಏನು ಹೇಳಬೇಕು ಅಂತ ತೋಚದೆ ನನ್ನ ಮುಖಕ್ಕೆ ನಾನೇ ಹೊಡಕಂಡಂಗಾಯಿತು. ಅದು ಕ್ಷಣ ಮಾತ್ರಕ್ಕೆ ನೋಡ್ರಿ ಯಾಕಂದ್ರಾ ನಾನು ಪಕ್ಕಾ village boy ಅಂತ ನಿಮಗೆ ಹೇಳೋ ಅವಶ್ಯಕತೆ ಇಲ್ಲ ಅನ್ಕೊಂಡಿನಿ. ಪಾಪ ಇದು ಅವರ ತಪ್ಪಲ್ಲ. ಬೃಹತ್ ಬೆಂಗಳೂರಿನ ತಪ್ಪು. ಮತ್ತೆ ನಾನು ಹೇಳಿದೆ “ನೋಡಿ ಮೇಡಂ, ಮೈಕೈ ನೋವು ಮಾಡಿಕೊಂಡು ನೋಡದರಲ್ಲಿ ಇರುವಂತ ಮಜ, ಮತ್ಯಾವುದರಲ್ಲಿಲ್ಲ ರೀ. ” ಅದಕ್ಕ ಆ ಕಡೆಯಿಂದ “ಹೇ ಬಿಡ್ರಿ ದಸರಾ ನೋಡಾಕ ಮೈಸೂರಿಗೆನಾ ಹೋಗಬೇಕಾ. ಇಲ್ಲೇ ಟಿ.ವಿಯಲ್ಲಿ ಅಲ್ಲಿಗಿಂತ ಚೆನ್ನಾಗಿ ಕಾಣ್ತಾದ, ಎನ್ನಬೇಕಾ! ಆಯಾಮ್ಮ” ಇದನ್ನ ಕೇಳಿ ನಂಗೆ ತಲೆ ತಿರುಗಿ ಬಿಳೋದೊಂದೆ ಬಾಕಿ ಇತ್ತು. ಯಪ್ಪ ಉಸ್ಸಾ ಅಂತ ಪೋನ್ ಇಟ್ಟು ನನ್ ಗೆಳೆಯನೊಬ್ಬನಿಗೆ ಪೋನ್ ಮಾಡಿದೆ.           “ಏನೋ ಮಗ, ಊರಿಗೆ ಬರಲೇನೋ. ನಮ್ಮ  old ಡೌವ್ ಗಳೆಲ್ಲಾ ಬಂದಾರ; ಬಾರಲೇ ಎನ್ನಬೇಕಾ ಬಡ್ಡಿ ಮಗಾ”. Old ಡೌವ್ ಗಳು ಅಂದ ತಕ್ಷಣ ನಂಗೆ ಇವತ್ತಿಗೂ ನೆನಪಿಗೆ ಬರೋದಂದ್ರೆ; ಸರ್ಕಾರದವರು ಕೊಡತಿದ್ದ ಕಡು ನೀಲಿ, ತಿಳಿ ನೀಲಿ, ಲಂಗ ಮೇಲೊಂದಿಷ್ಟು ಅಂಗಿ ಅಂತ ಚೋಲಿ ಹಾಕೊಂಡು ನಮ್ಮ ಜೊತೆ ಎಮ್ಮಿಕರಗಳನ್ನ ಮೇಯಿಸೋಕೆ ಎರಡು ಜಡೆ ಇಳಿಬಿಟ್ಟು ಬರೋ ಹಳ್ಳಿ ಹುಡುಗಿರು. ಮತ್ತೆ “ಲೇ ಮೂಗ ಮಾತಾಡಲೇ ಆ ರೆಡ್ ಇಂಕ್ ನೆನಪಾದ್ಲ್ ಅನ್ನಬೇಕಾ”. ಯಪ್ಪ ಇದೇನೋ ಮಾತಡತಾನೋ ಇವನೌನ್; ಬಿಟ್ರೆ  ಪ್ರೈಮರಿ ಸ್ಕೂಲಲಿ ಓದಿರೋ ಹುಡುಗಿರನೆಲ್ಲಾ ನನ್ ಕೊಳ್ಳಿಗೆ ಕಟ್ಟಾಂಗ್ ಇದಾನ ಅನಿಸಿತು. ಆದ್ರೆ ಅವನೇನೋ ಕಟ್ಟಬಹುದು, ಕಟ್ಕೋಳಾಕೆ ಹುಡುಗಿರು ಬೇಕಲ್ಲ. ಎಲ್ರೂ ಕರಿಮಣಿ ಕಟ್ಕೋಂಡು; ಕೈಯಲ್ಲೊಂದು ಬ್ಯಾಗ್, ಕುಂಕಳದಲ್ಲೊಂದು ಮಗು. ಹೀಗೆ ನಮ್ಮ ಹಳ್ಳಿ ಹುಗಿಯರ ಬದುಕಿನ ಬಣ್ಣವೇ ಬದಲಾಗಿತ್ತು. ಅಷ್ಟ್ರಲ್ಲಿ ನೋ ಹೊರಗಡೆ ಶಬ್ದ!  ಹೋಗಿ ನೋಡಿದ್ರೆ ಬಡ್ಡಿ ಮಗಂದು ಬೆಕ್ಕು ಇಲಿ ತಿನ್ನಾಕ ಓಡಾಡುತ್ತಿತ್ತು. ಆ ನನ್ ಗೆಳೆಯಗ ಮತ್ತೆ phone ಮಾಡೋ ಗೋಜಿಗೆ ಹೋಗಲಿಲ್ಲ.        ನಾನು ದಸರಾ ಬಗ್ಗೆ ಹೇಳ್ತಾ ಇದ್ದೆ ಅಲ್ವಾ! ಹೌದು ನಮ್ಮ ಹಳ್ಳಿಗಳ ದಸರಾವನ್ನು ನೋಡೋದೇ ಒಂದು ಚಂದ. ಚಂದಚಂದದ ಲಂಗ ದಾವಣಿ ಹಾಕಿಕೊಂಡು ಹಳ್ಳಿ ಹುಡುಗೇರು, ಎದುರುಗಡೆ ಮನೆ ಹುಡುಗರು ನೋಡಲಿ ಅಂತ ಹಲ್ಲಕಿಸ್ಕಂಡು ನಿಂತಾಗ ಹಿಂದಿನಿಂದ ಅವರಜ್ಜ ಬಂದು “ಏ ಇಲ್ಲೇನು ಮಾಡ್ತೀಯಾ,  ಯಾಕ ಹಲ್ಲುಕಿಸಗೊಂಡ ನಿಂತೀಯಾ! ಅವನಿಗೆ ಹೇಳಿದೆ ಹೆಣ್ಮಕ್ಕಳಿಗೆ ಜಾಸ್ತಿ ಕಲಿಸೋದು ಬೇಡಂತ; ಎಲ್ಲಿ ಕೇಳ್ತಾನ, ನನ್ನ ಮಾತು, ಬಿದ್ದಾಡದೋನು”, ಅಂತ ಎಚ್ಚರಿಸೋ ಅರವತ್ತು ದಾಟಿದ ಮುದಕರು ಸಹ ನನ್ನ ಹಳೆ ಡವ್ ಬಂದಿರಬಹುದಾ ಅಂತ ಕುತೂಹಲ ಕೆರಳಿಸೋ ದಸರಾ ಕಣ್ರೀ ಇದು. ನನಗೆ ಇನ್ನೂ ಸರಿಯಾಗಿ ನೆನಪಿದೆ; ನಮ್ಮ ಮನೆಯಲ್ಲಿ ಆಗ ನವಣೆ ಅನ್ನ ಮಾಡ್ತದ್ವಿ. ಅದು ನಮ್ಮ ದೈನಂದಿನ ಆಹಾರ ಆಗಿತ್ತು. ನೆಲ್ಲಕ್ಕಿ ಅನ್ನ ಮಾಡೊದು, ಹಬ್ಬ ಹರಿದಿನಗಳಲ್ಲಿ ಮಾತ್ರ. ಅದು ಸೋಸೈಟಿಯಲ್ಲಿ ಕೊಡೋ ನೆಲ್ಲಕ್ಕಿ, ಅದರಲ್ಲಿ ಬಹುಪಾಲು ಶಾಲಿ ಹುಡುಗರಿಗೆ ಕೊಡೋ ಅಕ್ಕಿನೇ ಹಬ್ಬಕ್ಕೆ ಶೇಖರಣೆ ಮಾಡಿಡತಿದ್ರು ಮನಿಗೆ ಹಿರೆ ತಲೆ ಅನಿಸಿಕೊಂಡ  ಅಜ್ಜಿಗಳು. ನೆಲ್ಲಕ್ಕಿ ಅನ್ನ, ಗೋದಿ ಹುಗ್ಗಿ, ಆಕಳ ತುಪ್ಪ, ಜೊತೆಗೆ ಒಲೆಯಲ್ಲಿ ಹಾಕಿ ಸುಟ್ಟ ಹಪ್ಪಳ. ಮನೆಯ ಎಲ್ಲಾ ಗಂಡಸರು, ಮಕ್ಕಳಿಗೆ ಉಣ್ಣಾಕ ನೀಡಿ. ಅಡುಗೆ ಹೇಗಿದೇನೋ ಏನೋ! ಅಂತ ಸೆರಗನ್ನ ತಲೆ ತುಂಬಾ ಹೊದ್ಕೊಂಡು, ಆಕಾಶವೇ ನೆಲದ ಮೇಲೆ ಬಿದ್ದಿರೋ ತರ ನಮ್ಮ ಹಳ್ಳಿ ಸೊಸೆಯಂದಿಯರ ಮಾರಿಗಳನ್ ನೋಡೋದೆ ಒಂದು ಚೆಂದ.         ಇನ್ನೂ ದಸರಾದಲ್ಲಿ ಆಯುಧಪೂಜೆಯನ್ನುವುದು. ಇಂದಿಗೂ ಹಳ್ಳಿಗಳಲ್ಲಿ ವಿಶೇಷ ಸ್ಥಾನಮಾನವನ್ನು ಪಡೆದುಕೊಂಡಿದೆಂದರೆ ತಪ್ಪಾಗಲಾರದು. ಮನೆಯಲ್ಲಿರುವ ಎಲ್ಲಾ ಆಯುಧಗಳು ಬೆಳಕಿಗೆ ಬರುತ್ತವೆ. ಅಜ್ಜ ಹಂದಿ ಓಡಿಸಲೆಂದು ತಂದಿದ್ದ ಭರ್ಚಿ, ಅಪ್ಪನ ಗಳೆಸಮಾನುಗಳು, ಕುಡುಗೋಲು, ಕುರ್ಚಿಗಿ, ಚಾಕು, ಚೂರಿ, ಒಳಕಲ್ಲು, ಬೀಸೋ ಕಲ್ಲು, ಗುಂಡಕಲ್ಲು, ಇವೆಲ್ಲವೂ ದಸರಾ ದಿನ ದೇವರಾಗಿ ಹೊಸ ರೂಪ ಪಡೆದು ಕೊಂಡಿರುತ್ತವೆ. ಇನ್ನೂ ನಮ್ಮಜ್ಜಿ ಪೂಜೆ ಹೇಳೋದೆ ಒಂದು ಚೆಂದ ಕಣ್ರೀ. ವರ್ಷಗಟ್ಟಲೆ ಮನೆಯ ಮೂಲೆಯೊಂದರಲ್ಲಿ ನೇತಾಡುತ್ತಾ ಜಾಡು ಮೆತ್ತಿ, ಕಪ್ಪು ಹಿಡಿದಿದ್ದ ಮಣ್ಣಿನ ಕುಡಿಕೆಯನ್ನು ತೊಳೆದು,  ಬಳಿದು , ಸಿಂಗರಿಸಿ ಅದಕ್ಕೆ, ಊರಿನ ಕರಿಯಮ್ಮ ದೇವಿ ಅಂತ ಬಿರುದು ನೀಡಿ. ಸಿಹಿ ಪದಾರ್ಥದ ಹೆಡೆ ಇಟ್ಟು. ನಂತರ ಅದನ್ನು ಹುಡಿಯಲ್ಲಿ ತುಂಬಿಕೊಂಡು; ಕರಿಯಮ್ಮ ನಿನ್ನಾಲಿಕೆಗೆ ಉಧೋ ಉಧೋ ಎಂದು ದೇವರ ಕೇಲ್ನ್ ನಮ್ಮೂರ ಹಳೆ ಬಾವಿಗೆ ಕಳಿಸಿ ಬರಲಿಕ್ಕೆ ಹೊರಡುವುದು. ಇಂತಹ ಎಷ್ಟೊಂದು ವಿಸ್ಮಯ ಆಚರಣೆಗಳು ಹಳ್ಳಿಯಲ್ಲಿ ಈಗಲೂ ಲಭ್ಯ.        ನಮ್ಮೂರ ದಸರಾ ಅಂದರೆ, ಬನ್ನಿ ಮುಡಿಯುವುದು ಹೇಳದೇ ಇದ್ರೇ ಹಬ್ಬ ಪೂರ್ತಿಯಾಗಲ್ಲ. ಏಕೆಂದರೆ ಬನ್ನಿಗೂ ಇವತ್ತಿಗೂ ಪವಿತ್ರವಾದ ಸ್ಥಾನವಿದೆ. ಅಂತ ಬನ್ನಿಯನ್ನು ಹಿರಿಯರು ಕಿರಿಯರು ವಿನಿಮಯ ಮಾಡಿಕೊಂಡು. ಕಿರಿಯರು ಹಿರಿಯರ ಕಾಲಿಗೆ ನಮಸ್ಕರಿಸಿದಾಗ, ಹಿರಿಯರು ಅದಕ್ಕೆ ಪ್ರತಿ ಬನ್ನಿ ನೀಡಿ. “ಬನ್ನಿ ತಗೊಂಡು ಬಂಗಾರದಂಗ ಇರು” ಎನ್ನುವ ಆರ್ಶೀವಾದ. ಇನ್ನೂ ಎಷ್ಟೆಷ್ಟೋ ಸಂಗತಿಗಳು, ಆಚರಣೆಗಳು ಈ ಹಬ್ಬ ನಮ್ಮ ಹಳ್ಳಿಯ ವಾತಾವರಣವನ್ನು ಇನ್ನು ಹಿಡಿದಿಟ್ಟುಕೊಂಡಿದೆ. ಹೀಗೆ ನನ್ನ ಆ ದಿನಗಳ ದಸರಾ ಆಚರಣೆಗಳನ್ನು ನೆನಪಿಸಿಕೊಂಡರೆ ಇಂದಿಗೂ ಮೈಯ್ಯಲ್ಲಿ ರೋಮಾಂಚನವಾಗುತ್ತದೆ. ಈ ನನ್ನ ಬರವಣಿಗೆ ನಿಮಗೆ ಮೆಚ್ಚುಗೆಯಾದರೆ ನನ್ನ ಈ ಲೇಖನಕ್ಕೆ ಹೊಸ ಕಳೆ ಎಂದು ಭಾವಿಸುವೆ. ******************** ಮೂಗಪ್ಪ ಗಾಳೇರ

ಗಾಳೇರ ಬಾತ್ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಶಾಂತಾದೇವಿ ಕಣವಿ ಚೆನ್ನವೀರ ಕಣವಿಯವರ ಪತ್ನಿ ಶಾಂತಾದೇವಿ ಕಣವಿಯವರ ಸಾಹಿತ್ಯಕ ಕೊಡುಗೆಯೂ..! ಅಲ್ಲದೇ ಇವರಂತೆ ಸಾಹಿತ್ಯಕ್ಕೆ ಕೊಡುಗೆ ನೀಡಿದ ಸಾಹಿತ್ಯಕ ದಂಪತಿಗಳೂ..!! ಶಾಂತಾದೇವಿ ಕಣವಿ ಅವರು ಈಗ ತೀರಿದ್ದಾರೆ. ಅವರಿಗೆ ಗೌರವ ನಮನ ಸಲ್ಲಿಸುತ್ತಾ ಅವರಂತೆಯೇ ಇತರ ಸಾಹಿತ್ಯಕ ದಂಪತಿಗಳ ಬಗೆಗೂ ನೋಡೋಣ. ಅವರು ಹೀಗಿದ್ದಾರೆ ನೋಡಿ. ಶಾಂತಾದೇವಿ ಕಣವಿ, ಅವರು ಜನಿಸಿದ್ದು1933ರ ಜನೆವರಿ 17 ರಂದು ವಿಜಾಪುರದಲ್ಲಿ. ತಂದೆಯವರು ಸಿದ್ದಬಸಪ್ಪ ಗಿಡ್ನವರ, ತಾಯಿಯವರು ಭಾಗೀರಥಿ ದೇವಿ. ಇಂತಹ ಶಾಂತಾದೇವಿ ಕಣವಿಯವರ ಪ್ರಕಟಿತ ಕೃತಿಗಳು– ಸಂಜೆ ಮಲ್ಲಿಗೆ (ಕವನ ಸಂಕಲನ), ಬಯಲು ಆಲಯ, ನಿಜಗುಣ ಶಿವಯೋಗಿ (ಜೀವನ ಚರಿತ್ರೆ), ಮರು ವಿಚಾರ (ಹರಟೆ), ಜಾತ್ರೆ ಮುಗಿದಿತ್ತು (ಸಣ್ಣಕತೆ), ಅಜಗಜಾಂತರ (ಲಲಿತ ಪ್ರಬಂಧ), ಕಳಚಿ ಬಿದ್ದ ಪಂಜರ, ಪ್ರಶಾಂತ (ಸಂಪಾದನೆ) ನೀಲಿಮಾ ತೀರ (ಸಣ್ಣಕತೆ) ಗಾಂಧಿ ಮಗಳು, ಇನ್ನೊಂದು ಸಂಪುಟ. ಹೀಗೆಯೇ ಶಾಂತಾದೇವಿ ಕಣವಿ ಅವರ ಸಾಹಿತ್ಯ ಸಾರವಾಗಿದೆ. ಶಾಂತಾದೇವಿ ಕಣವಿ ಅವರಿಗೆ ಬಯಲು ಆಲಯ ಕೃತಿಗೆ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (1987) ಹಾಗೂ 2009ರ ರಾಜ್ಯ ಸರ್ಕಾರದ ದಾನ ಚಿಂತಾಮಣಿ ಪ್ರಶಸ್ತಿಗಳೂ ಸಂದಿದೆ. ಇದು ಶಾಂತಾದೇವಿ ಕಣವಿಯವರು ತಮ್ಮ ಪತಿಯ ಜೊತೆ ಜೋತೆಗೆ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ. ಹೀಗೆಯೇ ಶಾಂತಾದೇವಿ ಕಣವಿಯವರಂತೆ ಸಾಹಿತ್ಯಕ ಬರಹಗಾರಿಕೆಯಲ್ಲಿ ತೊಡಗಿಕೊಂಡವರು ಸಾಕಷ್ಟು ಜನ ಸಾಹಿತ್ಯಕ ದಂಪತಿಗಳು ಇದ್ದಾರೆ. ಅವರ ಬಗೆಗೂ ತುಸು ಗಮನ ಹರಿಸೋಣ. ಇಂದಿನ ಸಾಹಿತ್ಯ ಕ್ಷೇತ್ರದಲ್ಲಿ ಕಮಲಾ ಹಂಪನಾ, ಮಾಲತಿ ನಾಡಿಗ್‌, ಗಾಯತ್ರಿ ನಾವಡ,‌ ಉಷಾ ನವರತ್ನಾರಾಂ ಮುಂತಾದ ಹಲವಾರು ದಂಪತಿಗಳು ಸಾಹಿತ್ಯಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ. ಈ ಮಹಿಳೆಯರಿಗೆ ಶೈಕ್ಷಣಿಕ ಶಿಸ್ತಿನ ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆಯುವ ಅವಕಾಶಗಳು ಸುಲಭವಾಗಿ ದೊರೆತಿದ್ದು ಸಾಹಿತ್ಯ ರಚನೆಯಲ್ಲಿಯೂ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ. ಆದರೆ ಹಿಂದಿನ ತಲೆಮಾರಿನ ದಂಪತಿ ಲೇಖಕರುಗಳಾದ ಶಾರದಾ ಗೋಕಾಕ್‌, ಶಾಂತಾದೇವಿ ಮಾಳವಾಡ, ಶಾಂತಾದೇವಿ ಕಣವಿ ಇವರುಗಳಿಗೆ ಅಂದಿನ ಪರಿಸ್ಥಿತಿಯಿಂದ ವಿದ್ಯಾಭ್ಯಾಸದಿಂದ ವಂಚಿತರಾದುದಷ್ಟೇ ಅಲ್ಲದೆ ಪ್ರೌಢಾವಸ್ಥೆ. ತಲುಪುವ ಮೊದಲೇ ವಿವಾಹ ಬಂಧನಕ್ಕೊಳಗಾಗಿ ವಿದ್ಯೆ ಕಲಿಯುವ ಅವಕಾಶಗಳು ಕಮರಿ ಹೋಗಿದ್ದರೂ, ಪತಿಗೃಹ ಸೇರಿದ ನಂತರ ಪತಿಯಿಂದ ಅಥವಾ ಮನೆಯವರಿಂದ ದೊರೆತ ಸಹಕಾರ, ಸಹಾನುಭೂತಿಯಿಂದ ವಿದ್ಯೆ ಕಲಿತು ಸಾಹಿತ್ಯ ಕೃಷಿ ರಚಿಸಿದ್ದಷ್ಟೇ ಅಲ್ಲದೇ ಪತಿಯ ಯಶಸ್ಸಿನ ರೂವಾರಿಯಾಗಿಯೂ ದುಡಿದಿದ್ದಾರೆ. ಶಾರದಾ ಗೋಕಾಕರು ಓದಿದ್ದು ಆರನೆಯ ತರಗತಿಯವರೆಗಾದರೆ ಶಾಂತಾದೇವಿ ಮಾಳವಾಡರು ಪತಿಗೃಹ ಸೇರಿದ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಕವಿ, ಕಾವಾ, ಜಾಣ ಮುಂತಾದ ಪರೀಕ್ಷೆಗಳನ್ನೂ ಪಾಸು ಮಾಡಿದ್ದಲ್ಲದೇ ಉಪಾಧ್ಯಾಯರ ಸಹಾಯದಿಂದ ಹಿಂದಿ, ಇಂಗ್ಲಿಷ್‌ ಭಾಷೆಯನ್ನು ಮನೆಯಲ್ಲಿಯೇ ಪಾಠ ಹೇಳಿಸಿಕೊಂಡು ಕಲಿತವರು. ಇವರಿಬ್ಬರಿಗಿಂತ ಸ್ವಲ್ಪ ಸುಧಾರಿಸಿದವರೆಂದರೆ ಶಾಂತಾದೇವಿ ಕಣವಿಯವರು. ಮೆಟ್ರಿಕ್ಯುಲೇಷನ್‌ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಪತಿ ಗೃಹ ಸೇರಿದ್ದರಿಂದ ಓದು ಮುಂದುವರೆಸಲಾಗಲಿಲ್ಲ. ಕಣವಿಯವರು ಕವಿಯಾಗಿ ಪ್ರಸಿದ್ಧರಾಗಿದ್ದರೆ ಶಾಂತಾದೇವಿ ಕಣವಿಯವರು ಪತಿಯ ಪ್ರೋತ್ಸಾಹದಿಂದ ಸಾಹಿತ್ಯವನ್ನೂ ಅಭ್ಯಸಿಸಿ ಕತೆಗಾರ್ತಿಯಾಗಿ ರೂಪಗೊಂಡು ಎಂಟು ಕಥಾಸಂಕಲನಗಳಲ್ಲದೆ ಪ್ರಬಂಧ, ಮಕ್ಕಳ ಪುಸ್ತಕಗಳನ್ನೂ ರಚಿಸಿದ್ದಾರೆ. ಶಾಂತಾದೇವಿ ಮಾಳವಾಡರು ರಚಿಸಿದ ಕೃತಿಗಳು ವೈವಿಧ್ಯತೆಯಿಂದ ಕೂಡಿದೆ. ಕಾದಂಬರಿ, ಜೀವನ ಚರಿತ್ರೆಗಳು, ವಚನ ಸಾಹಿತ್ಯ ಕೃತಿಗಳಲ್ಲದೆ ಹಲವಾರು ಸೃಜನ ಶೀಲ ಕೃತಿಗಳನ್ನು ರಚಿಸಿದ್ದು ಒಟ್ಟು ೪೦ ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಸ.ಸ. ಮಾಳವಾಡರ ಆಕಸ್ಮಿಕ ನಿಧನದಿಂದ ಧೃತಿಗೆಟ್ಟರೂ, ಮನಸ್ಸನ್ನೂ ಸ್ಥಿಮಿತಕ್ಕೆ ತಂದುಕೊಂಡು ಮಾಳವಾಡರು ಪ್ರಾರಂಭಿಸಿದ್ದ ಆತ್ಮ ಚರಿತ್ರೆ ‘ದಾರಿ ಸಾಗಿದೆ’ ಕೃತಿಯನ್ನೂ’ ಶಾಂತಾದೇವಿ ಮಾಳವಾಡರೇ ಬರೆದು ಪೂರ್ಣಗೊಳಿಸಿದರು. ಅನುರೂಪ ದಾಂಪತ್ಯದ ಶಾರದಾ ಗೋಕಾಕರು ಹುಟ್ಟಿದ್ದು ಧಾರವಾಡದಲ್ಲಿ. ೧೯೧೬ ರ ಜುಲೈ ೩೧ ರಂದು. ತಂದೆ ಬಳವಂತರಾವ್‌ ಬೆಟ್ಟದೂರು, ತಾಯಿ ಕಮಲಾಬಾಯಿ. ಓದಿದ್ದು ಮಾಧ್ಯಮಿಕ ಶಾಲೆಯವರೆಗಾದರೂ ಸಾಹಿತ್ಯಾಸಕ್ತಿಯನ್ನೂ ಬೆಳೆಸಿಕೊಂಡವರು. ಗೋಕಾಕರ ಯಶಸ್ಸಿಗೆ ಶಾರದಾ ಗೋಕಾಕರ ಪಾತ್ರವೂ ಬಹುದೊಡ್ಡದೆ. ಗೋಕಾಕರ ಷಷ್ಟ್ಯಬ್ದಿ ಸಂದರ್ಭದಲ್ಲಿ ಶಾರದಾ ಗೋಕಾಕರು ಬರೆದ ಕವನ ಸಂಕಲನ ‘ಸುಮಂಗಲಾಕ್ಷತೆ’ಯು ಪ್ರಕಟಗೊಂಡಿದ್ದು (೧೯೬೯) ಅದರಲ್ಲಿ ೩೭ ಕವನಗಳಿವೆ. “ಶ್ರೀ ವಿನಾಯಕರ ಷಷ್ಟ್ಯಬ್ದಿಪೂರ್ತಿಯ ಸುಮಂಗಲ ಸಮಾರಂಭದಲ್ಲಿ ನನ್ನ ಕೆಲವು ಸುಮಂಗಲಾಕ್ಷತೆಯನ್ನು ಅರ್ಪಿಸಲು ಸಾಧ್ಯವಾದುದಕ್ಕೆ ಭಗವಂತನಿಗೆ ಕೃತಜ್ಞತೆಯ ಪ್ರಣಾಮಗಳನರ್ಪಿಸುತ್ತಿದ್ದೇನೆ. ನನ್ನ ಒಳ ಜೀವನದಲ್ಲಿ ಹೊಳೆದ ಚಿತ್ರಗಳ ಶಬ್ದ ರೂಪಗಳನ್ನೂ ಕವನಗಳನ್ನಾಗಿಸಿ ಜನತೆಯ ಮುಂದಿಟ್ಟಿದ್ದೇನೆ” ಎಂದು ವಿನಮ್ರರಾಗಿ ನುಡಿದಿದ್ದರು. ಗೋಕಾಕರು ತಮ್ಮ ಕವನ ಸಂಗ್ರಹ ಸಿಮ್ಲಾ ಸಿಂಫನಿಗೆ (೧೯೭೩) ತಮ್ಮ ಮಡದಿ ಶಾರದಾರವರನ್ನೂ ಸಹಲೇಖಕಿಯಾಗಿಸಿಕೊಂಡಿದ್ದರು. ಆ ಸಂಗ್ರಹದ ಒಂದು ಭಾಗದಲ್ಲಿ ಶಾರದಾ ಗೋಕಾಕರ ರಚನೆಗಳಿವೆ. ಬಾ ಎಂದು ಕರೆದಾವ ಸೋಬಾನ ಹಾಡ್ಯಾವ ಸಿಮ್ಲಾದ ಹಕ್ಕಿ…ಎಂದು ಸಿಮ್ಲಾ ನಿಸರ್ಗದ ಸೊಬಗಿಗೆ ಮಾರು ಹೋಗಿ ರಚಿಸಿದ ಕವನ ಇದಾಗಿದೆ. ಶಾರದಾ ಗೋಕಾಕರ ಮತ್ತೊಂದು ಬಹು ಮುಖ್ಯ ಕೃತಿ ಎಂದರೆ ‘ಒಲವೇ ನಮ್ಮ ಬದುಕು’ (೧೯೭೭). ಮರಾಠಿಯಲ್ಲಿ ಪ್ರಕಟವಾಗಿದ್ದ ಮರಾಠಿ ಸಾಹಿತಿ ವಾಮನ ತಿಲಕರ ಪತ್ನಿ ಲಕ್ಷ್ಮೀಬಾಯಿ ತಿಲಕರು ಬರೆದ ‘ಸ್ಮೃತಿ ಚಿತ್ರಗಳ’ ಕೃತಿಯಲ್ಲಿ ವಾಮನ ತಿಲಕರ ವ್ಯಕ್ತಿತ್ವದ ಚಿತ್ರಣವಿರುವುದನ್ನೂ ಓದಿದ ಶಾರದಾ ಗೋಕಾಕರು ಇದರಿಂದ ಪ್ರೇರಿತರಾಗಿ ಬರೆದ ಆತ್ಮಕಥೆ ‘ಒಲವೇ ನಮ್ಮ ಬದುಕು’. ಮದುವೆಯಾದಂದಿನಿಂದ ಬೆಂಗಳೂರಿಗೆ ಬಂದು ನೆಲೆಸುವಾಗಿನ ದಾಂಪತ್ಯ ಕತೆಯ ನಿರೂಪಣೆಯದಾಗಿದೆ. ಮೂರು ಕೃತಿಗಳಲ್ಲೂ ಶಾರದಾ ಗೋಕಾಕರು ಗೋಕಾಕರ ವ್ಯಕ್ತಿತ್ವವನ್ನು ಹಿಡಿದಿಟ್ಟು, ಗೋಕಾಕರ ಬದುಕನ್ನೂ ಅರ್ಥಮಾಡಿಕೊಳ್ಳಲು ಸಹಾಯಕವಾಗುವಂತಹ ಕೃತಿ ರಚಿಸಿದ್ದರು. ಗೋಕಾಕರು ಶಾರದಾರವರಿಗೆ ಬರೆದ ಪತ್ರಗಳನ್ನೂ ‘ಜೀವನ’ ಪತ್ರಿಕೆಯಲ್ಲಿ ‘ವನಮಾಲಿಯ ಒಲವಿನೋಲೆಗಳು’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದು ನಂತರ ‘ಜೀವನ ಪಾಠಗಳು’ ಎಂಬ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದ್ದು ಶಾರದಾರವರ ವ್ಯಕ್ತಿತ್ವವನ್ನು ಪರಿಚಯಿಸಿದ್ದರು. ಹೀಗೆ ಗೋಕಾಕರು ಮತ್ತು ಶಾರದಾ ಗೋಕಾಕರ ಬದುಕನ್ನರಿಯಲು ಈ ಗ್ರಂಥಗಳು ಸಹಾಯಕವಾಗಿವೆ. ಹೀಗೆ ಸಾಹಿತ್ಯಕ ದಂಪತಿಗಳ ಸಾಹಿತ್ಯ ಕೊಡುಗೆ‌ ಅಪಾರ. ******* ಕೆ.ಶಿವು. ಲಕ್ಕಣ್ಣವರ

ಸ್ವಾತ್ಮಗತ Read Post »

ಅಂಕಣ ಸಂಗಾತಿ

ಗಾಳೇರ್ ಬಾತ್

ಗಾಳೇರ್ ಬಾತ್-05 ಬಿ.ಸಿ.ಎಮ್ hostelನಲ್ಲಿ ಅಡ್ಡ ಹೆಸರುಗಳು……. ಇವತ್ತು ನಾನೇನಾದರೂ ಒಂದೆರಡು ಅಕ್ಷರ ಬರೆದು ನಿಮಗೆ ಓದ್ಲಿಕ್ ಹಚ್ಚಿನಂದ್ರ ಆಯಪ್ಪನ ಋಣನ ನಾನ್ಯಾವತ್ತೂ ಮರೆಯೋ ಆಗಿಲ್ಲ. ನಾನಷ್ಟೇ ಅಲ್ಲ! ಎಷ್ಟೋ ಬಡ ವಿದ್ಯಾರ್ಥಿಗಳಿಗೆ ದೇವರಾಜ ಅರಸರು ನನ್ನಂತ ಆರಕ್ಕೇರದ ಮೂರಕ್ಕಿಳಿಯದ ಕುಟುಂಬದ ಮಕ್ಕಳಿಗೆ ತಂದೆತಾಯಿ ಎಲ್ಲವನ್ನೂ ಆಗಿಬಿಟ್ಟಿದ್ದ. ಇಂತಹ ದೇವರಾಜ ಅರಸುರವರ ಸ್ಥಾಪಿಸಿದ ಬಿಸಿಎಂ ಹಾಸ್ಟೆಲ್ನಲ್ಲಿ ನನ್ನ ಪ್ರೌಢಶಿಕ್ಷಣ ಮುಗಿಸಿದೆ.       ಆ ವಯಸ್ಸಿನಲ್ಲಿ  ಅಲವಾರು ಸ್ವಾರಸ್ಯಕರ ಘಟನೆಗಳು, ವಿಚಿತ್ರವಾದ ಸಂಗತಿಗಳು ನಡೆದಿದ್ದವು. ಅವು ನನಗಷ್ಟೇ ಅಲ್ಲ ಬಿಡ್ರಿ; ನೀವು ಅಂತ ಹಾಸ್ಟೆಲ್ ಅನುಭವ ಪಡೆದಿದ್ದರೆ ನಿಮಗೂ ಕೂಡ ನಡೆದಿರಬಹುದೆನೋ! ಇರ್ಲಿ ನನ್ನ ಅನುಭವ ಒಂಚೂರು ಕೇಳಿಬಿಡಿ. ನಾನೊಂತರ ಓದಿನಲ್ಲಿ weak or strong ಅಂತ ಇವತ್ತಿಗೂ ನಂಗೆ ಕಂಡುಹಿಡಿಲಿಕ್ಕೆ ಆಗಿಲ್ಲ. ನಾನು weak ಅಂದ್ರೆ ನೀವು ನಂಬಂಗಿಲ್ಲ, strong ಅಂದ್ರೆ ನನ್ ಮನಸ್ಸು ಒಪ್ಪಂಗಿಲ್ಲ! ಅದೇನೇ ಇರ್ಲಿ ಬಿಡಿ. ಇವಾಗ ನಿಮಗೆ ಏನು ಹೇಳಬೇಕು ಅನ್ನಕೊಂಡಿದ್ನೋ ಅದನ್ನ ಹೇಳ್ತೀನಿ ಕೇಳಿಬಿಡಿ.      ನಾನು ಆಗ ಸುಮಾರು ಎಂಟನೇ ತರಗತಿ ಓದುತ್ತಿದ್ದೆ. ಆಗ ನಾವು ಹಾಸ್ಟೆಲ್ನಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳು ಎಂಟು ಜನ ಇದ್ದೀವಿ. ಇನ್ನೋಬ್ಬ  ಇದ್ದ ಅವನ್ ಸೇರಿಸಿದ್ರೆ ಒಂಬತ್ತು ಆಗ್ತೀವಿ. ಆ ಇನ್ನೋಬ್ಬನ ಹೆಸರು ಜ್ಯೋತಿ ಅಂತ. ಅವನು ಹಾಸ್ಟೆಲ್ ಗೆ ಯಾವಾಗ ಬರ್ತಿದ್ನೋ ಯಾವಾಗ ಹೋಗುತಿದ್ನೋ ನಮ್ಮಪ್ಪನಾಣೆಗೂ ನನಗೆ ಸರಿಯಾಗಿ ಗೊತ್ತಿರಲಿಲ್ಲ. ಉಳಿದವರಲ್ಲಿ ಧರ್ಮ ಅಂತ ಇವನಿಗೆ ನಮ್ಮ ಹೊಟ್ಟಿ ಡುಮ್ಮ ಅಂತ ಹೆಸರಿಟ್ಟದ್ದ. ಆ ಹೊಟ್ಟಿ ಯಾರಪ್ಪ ಅಂತ ಅಂತೀರಾ ಇವತ್ತು ಅವನು C.A study ಮಾಡಕ್ಕೆ ಚೆನ್ನೈನಲ್ಲಿ ಇದಾನ ಇವನ ನಿಜ ಹೆಸರು ಗವಿ ಅಂತ ಕರಿಯದೆ ಇದ್ದರೆ ಈ ಲೇಖನ ಓದಿದ್ರೆ ಅವನ ಮನಸ್ಸೂ ಮತ್ತೆ ನನ್ನ ಮೇಲೆ ಮುನಿಸಿಕೊಳ್ಳದೆ ಇರಲಾರದು. ಧರ್ಮ ಇವನಿಗೆ ಹೊಟ್ಟಿ ಅಂತ ಹೆಸರಿಟ್ಟಕ ಇವನು ಧರ್ಮಗ ಡುಮ್ಮ ಅಂತ ಕರಿತಿದ್ದ. ಇನ್ನೂ ಪೀಪಿ ಇದೇನಪ್ಪಾ ಯಂತ ಹೆಸರು ಅಂತೀರಾ!  ಅವತ್ತೇನೋ ಹಾಸ್ಟೆಲ್ ನಲ್ಲಿ ಪಾಯಿಸ ಮಾಡಿದ್ರು ಗಣೇಶ ಹೊಟ್ಟೆತುಂಬಾ ಕುಡಿದಿದ್ದ ಅನಿಸುತ್ತೇ toilet ಗೆ ಹೋಗಿರಲಿಲ್ಲ ಅನಿಸುತ್ತೆ. ಎಲ್ಲರೂಗೂ ಕೇಳಿಸುವಂತೆ ಹೂಸು ಬಿಟ್ಟಾಗ; ಲೇ ಗಣೇಶ ಏನ್ಲೇ ಇದು ಅಂತ ಕೇಳಿದ್ರೆ, ದೇವರು ಕೊಟ್ಟ ಪಿಪಿ ಅಂದಬಿಟ್ಟ. ಅಷ್ಟೇ ಸಾಕಿತ್ತು ನಮಗೆ ಅಂದಿನಿಂದ ಗಣೇಶನ ಹೆಸರು ಪಿಪಿ ಆಗ್ಬಿಡ್ತು.  ಇನ್ನು ಡಾಬಾ ಮತ್ತೆ ಬಡಗಿ. ಇವರ ಅಡ್ಡ ಹೆಸರೇ ಸೂಚಿಸುವಂತೆ ಡಾಬಾ ರ ಅಪ್ಪ ಹಗರಿಬೊಮ್ಮನಹಳ್ಳಿಯಲ್ಲಿ ಸಣ್ಣದೊಂದು ಹೋಟಲ್ ಇಟ್ಕೊಂಡಿದ್ದ. ಇದಕ್ಕೆ ಬಡಗಿ ಚಿರಂಜೀವಿಗೆ ಡಾಬಾ ಅಂತ ಗಂಗ ಕರಿತಿದ್ದ. ಇದಕ್ಕೆ ಸಿಟ್ಟಿಗೆದ್ದ ಡಾಬಾ ಗಂಗನಿಗೆ ಬಡಿಗಿ ಎನ್ನಲಿಕ್ಕತಿದ. ಇನ್ನೂ  ಪಿಲ್ಲ ! ಇದೆಂತಹ ಹೆಸರು ಅಂತೀರಾ ಈ ಹೆಸರಿನ ಒಡೆಯ ಪ್ರಕಾಶ್ ಅವನದು ಮೂಲತಹ ಪಿಲಮನಹಳ್ಳಿ ಅನ್ನೋ ಊರಿನವನು ಶಾಟ್ ಕಟ್ ಲಿ ಪಿಲ್ ಅಂತ ಕರಿತಿದ್ವಿ. ಇನ್ನೂ ಉಳಿದಿದ್ದು ನಾನು ಮತ್ತು ಪ್ರಭು. ನಂಗೆ ಇವಾಗಲೂ ದೇವರು ಕೊಟ್ಟ ಬಳುವಳಿ ಎನ್ನಬಹುದು. ಅದೇನಪ್ಪಾ ಅಂತೀರಾ ನನ್ ತಲೆ ಸ್ವಲ್ಪ ಶೇಕ್ ಆಗ್ತಿತ್ತು ಇದನ್ನೇ investment ಮಾಡಿಕೊಂಡ ನನ್ನ ಸ್ನೇಹಿತರು ತೂಗ ಅಂತ ಹೆಸರಿಟ್ಟರು ಇಷ್ಟೇಲ್ಲಾ ಹೇಳಿದಮೇಲೆ ಪ್ರಭುಂದು ಒಂದು ಹೇಳಬೇಕು ಅದ್ರೆ ಏನು ಮಾಡೋದು ಅವನ್ ಹೆಸರು ಅವನ ಲವರ್ ಇಂದನೇ ಕರಿತಿದ್ವಿ ಈಗ ಆ ಹೆಸರು ಹೇಳೋದು ಸೂಕ್ತ ಅಲ್ಲ ಅನಿಸುತ್ತದೆ ಯಾಕಂದ್ರೆ ಈಗ ಅವಗಿಂತರ ಲವ್ ಇಲ್ಲ. ಅವಳೆಲ್ಲೋ ಅವನೆಲ್ಲೋ! ನಮಗ್ಯಾಕೆ ಬಿಡ್ರಿ. ನಮ್ಮ ಹೆಸರುಗಳು ನಿಮಗೆ Happy ತಂದಕೊಟ್ರೆ ನನ್ನ ಬರಹಕ್ಕೂ ಶಕ್ತಿ ಬಂದಂತೆ ಅಲ್ವಾ! ****** ಮೂಗಪ್ಪ ಗಾಳೇರ ,,

ಗಾಳೇರ್ ಬಾತ್ Read Post »

ಅಂಕಣ ಸಂಗಾತಿ

ಗಾಳೇರ್ ಬಾತ್

ಗಾಳೇರ್ ಬಾತ್-04 Clinicಲ್ಲಿ ಸಿಕ್ಕ ಕಮಲ ಆಂಟಿ ನೋಡಿ ಆಶ್ಚರ್ಯವಾಗಿತ್ತು………. ಆ ತಿಂಗಳಲ್ಲಿ ಬೆಂಗಳೂರಿನಲ್ಲಿ ವಿಪರೀತ ಮಳೆ ಬೀಳುತ್ತಿತ್ತು. ನಾನು ಕೆಲಸಕ್ಕೆ ನಡೆದುಕೊಂಡೆ ಹೋಗಬೇಕಾಗಿದ್ದರಿಂದ ಹಲವು ಬಾರಿ ಭಾರಿ ಮಳೆಗೆ ತೋಯಿಸಿಕೊಂಡಿದ್ದರ ಪರಿಣಾಮವಾಗಿ ನನಗೆ ಮೂಗಿನಲ್ಲಿ ಸಿಂಬಳ ಬರಲಿಕ್ಕೆ ಶುರುವಾಗಿತ್ತು. I mean ನೆಗಡಿ ಆಗಿತ್ತು ಅಂತ ನಿಮ್ಮ ಮಾತಿನಲ್ಲಿ ತಿಳಿಯಬಹುದು.       ನೀವು ತಿಳಿದಾಗೆ, ನಾನು ಬರಿ ನೆಗಡಿಗೆಲ್ಲಾ ತಲೆ ಕೆಡಿಸಿಕೊಳ್ಳುವ ಮನುಷ್ಯನಲ್ಲ! ಯಾವಾಗಲೂ ಅತ್ಯಂತ ಚುರುಕುತನದಿಂದ ಬೆಂಗಳೂರು ನಗರವನ್ನೇ ಸುತ್ತುತ್ತಿದ್ದ ನನ್ನ ಕಾಲುಗಳು ಯಾಕೋ ಸುಸ್ತಾದಂತೆ ಕಾಣುತ್ತಿದ್ದವು. ಏನಾದರೂಂದು ಗೀಚೂತಿದ್ದ  ನನ್ನ ಕೈಗಳು ಜಡತ್ವವಾಗಿದ್ದವು! ತಲೆಯು ಭೂಮಿ ಸುತ್ತಿದಂತೆ ಸುತ್ತುತ್ತಿತ್ತು, ಕಣ್ಣುಗಳು ಮುಂಜಾನೆಯ ಮಂಜು ನೋಡಿದಂತೆ ಪ್ರತಿ ವಸ್ತುವನ್ನು ತೀಕ್ಷ್ಣವಾಗಿ ನೋಡುತ್ತಿದ್ದವು. ಏಡ್ಸ್ ರೋಗವು ನಾನು ಮೇಲೆ ಹೇಳಿದ ಎಲ್ಲಾ ಲಕ್ಷಣಗಳು ಹೊಂದಿರುತ್ತವೆ ಎಂದು ಎಲ್ಲೋ ಓದಿದ್ದ ನೆನಪುಗಳೇ ನನ್ನ hospital ಗೆ ದೂಡಿಕೊಂಡು ಹೋಗುವಂತೆ ಮಾಡಿದ್ದವು. ಅದಲ್ಲದೆ ನಾನು ಕೆಲವು ತಿಂಗಳ ಹಿಂದೆ ಸುಜಾತ ಅಂಟಿ ಮನೆಗೆ ಹೋದಾಗ ಅಲ್ಲಿ ಆಕೆಯ ಗಂಡನ ಕಾಯಿಲೆಯ ವೈರಸ್ ನನಗೆ ತಗುಲಿತಾ! ಎಂದು ಭಯಭೀತನಾಗಿದ್ದೆ. ಅದಾದ ನಂತರವೇ ನನಗೆ ಗೊತ್ತಾಗಿದ್ದು. ಏಡ್ಸ್ ಅಂಟು ರೋಗ ಅಲ್ಲ. ಏಡ್ಸ್ ರೋಗಿ ಜೊತೆ ಒಂದೆ ತಟ್ಟೆಯಲ್ಲಿ ಉಂಡರು ಆ ಖಾಯಿಲೆ ನಮಗೆ ಅಂಟಿ ಕೊಳ್ಳುವುದಿಲ್ಲ ಎಂದು ಗೊತ್ತಾಗಿದ್ದು. ಏನೇ ಆಗಲಿ ನಾನು ಖಾಲಿ ನೆಗಡಿಗೆನೆ hospitalಗೆ ಹೋದ್ನಾ…..! ಅಂತ ಇವತ್ತಿಗೂ ನನ್ನ ಮೇಲೆ ನನಗೆನೆ ನಾಚಿಕೆ ಆಗುತ್ತೆ. ಇಂತಹ ಸಿಲ್ಲಿ ವಿಚಾರಗಳನ್ನು ನೆನಪಿಸಿ ಕೊಂಡಾಗ ಯಾರು ಇಲ್ಲದ ಸ್ಥಳದಲ್ಲಿ ಹಾಗಾಗ ಒಬ್ಬನೆ ನಕ್ಕು ಸುಮ್ಮನಾಗಿ ಬಿಡುತ್ತೇನೆ.      Doctor ಹತ್ರ ತೋರಿಸಿಕೊಂಡು ಹೊರಗಡೆ ಬರುತ್ತಿರುವಾಗ ಅಲ್ಲೇ ಒಂದು ಮೂಲೆಯಲ್ಲಿ ಇದ್ದ medical shop ನ ಹತ್ತಿರ ಕಮಲ ಆಂಟಿ ಎದುರಿಗೆ ಸಿಕ್ಕಳು. ನನ್ನ ನೋಡಿದವಳೇ “ಏನು ಗಾಳೇರ ಇಲ್ಲಿ” ಎಂದಾಗ. ನನ್ನ ಆಶ್ಚರ್ಯದಾಯಕ ವಿಚಾರಗಳೆನ್ನೆಲ್ಲಾ ಅನಿವಾರ್ಯವಾಗಿ ಬದಿಗೊತ್ತಿ ಅವಳ ಜೊತೆ ಮಾತಿಗಿಳಿದೆ.”ಆ ಅಂಟಿ ಸ್ವಲ್ಪ ಆರಾಮಿರಲಿಲ್ಲ, doctor ಕಾಣೋಣ ಅಂತ ಬಂದೆ”. ಆಗೆ ಹೇಳುವಾಗ ನಾನು ಅವಳ ಕೈಯಲ್ಲಿ ಇದ್ದ x-ray card ನೋಡಿ ಮತ್ತೆ ಅವಳ ಹಿಂದಿನ ಚರಿತ್ರೆಯ ಬಗ್ಗೆ ಜಾರಿದೆ.      ಕಮಲಾ ಅಂಟಿ ನೋಡಲು ಅಷ್ಟೇನು ಬಣ್ಣ ಇರಲಿಲ್ಲ. ಸರಿಸುಮಾರು ಮೂವತ್ತೈದರ ಆಜುಬಾಜಿನ ಕಪ್ಪು ಸುಂದರಿ ಕಮಲ ಆಂಟಿ,  ಸಾಧಾರಣ ಎತ್ತರ ಹೊಂದಿದ್ದ ಅವಳ ದೇಹ… ಮೈಕಟ್ಟು ಮಾತ್ರ ಎಂತಾ ಬ್ರಹ್ಮಚಾರಿಯನ್ನದಾರು ತನ್ನತ್ತಾ ಸೆಳೆದುಕೊಳ್ಳುವ ಆಕರ್ಷಕ ಮೈಮಾಟ ಹೊಂದಿದ್ದಳು. ಒಂದು ರೀತಿಯಲ್ಲಿ ಪುರಾಣದ ಕತೆಯಲ್ಲಿ ಹೇಳಿದಂತೆ ಹೇಳುವುದಾದರೆ ಗಜನಿಂಬೆ ಎಂದು ಕರೆಯಬಹುದು. ಇಂತ ಕಮಲಾ ಅಂಟಿಗೆ ಸೋತವರೆಷ್ಟೋ ಲೆಕ್ಕವೇ ಇಲ್ಲ. ಪಟ್ಟಿ ಮಾಡಿದರೆ ಪ್ರಕಾಶ, ಮಹೇಶ, ನಂದೀಶ್, ಬಸವ, ಚೆನ್ನ, ಒಬ್ರ… ಇಬ್ರಾ…..!     ಆದ್ರೆ ಈ ಅಂಟಿ ಅವರ್ಯಾರಿಗೂ ಸೆರಗು ಹಾಸಿರಲಿಲ್ಲ ಎನ್ನುವುದು ನನ್ನ ಸ್ನೇಹಿತರು ಆಗಾಗ ಹೇಳುತ್ತಿದ್ದರು. ಗಂಡನಲ್ಲದ ಪರಪುರುಷನ ಜೊತೆ ಇವಳ ಸಂಬಂಧ ಇದೆ ಎಂದು ತಿಳಿದಾಗ, ಕಮಲಾ ಆಂಟಿಯ ಹಿಂದೆ ಸಾಲು ಸಾಲು ಹುಡುಗರು ನಾವು ಒಂದು ಕೈ ನೋಡೋಣ ಅಂತ ಎಷ್ಟು try ಮಾಡಿದರು ಆಂಟಿ ಅವರ್ಯಾರಿಗೂ ಕ್ಯಾರೇ ಅಂದಿರಲಿಲ್ಲ. ಆದರೆ ನಾಗರಾಜನಿಗೆ ಮಾತ್ರ ಎಲ್ಲಿಲ್ಲದ ಸಲುಗೆ ತೋರಿಸಿದ್ದಳಂತೆ. ಅವನ ಜೊತೆ park, film, mall ಅಷ್ಟೇ ಅಲ್ಲದೆ ನಂದಿ ಬೆಟ್ಟಕ್ಕೂ ಕೂಡ ಒಂಟಿಯಾಗಿ ಹೋಗುತ್ತಾಳೆ ಎಂದು ನನ್ನ ಗೆಳೆಯರು ಹೇಳುತ್ತಿದ್ದಾಗ; ನಾನು ಕುತೂಹಲದಿಂದ “ಅಲ್ಲ ಗುರು, ಕಮಲಾ ಆಂಟಿಗೆ ಮದುವೆ ಆಗಿಲ್ವಾ……” ಅಂದೆ. ಅಷ್ಟಂದದ್ದೆ ತಡ ಗೆಳೆಯನೊಬ್ಬ “ಮದುವೆ ಆಗಿದೆ ಗಾಳೇರ, ಆಂಟಿ ಕೊರಳಲ್ಲಿ ತಾಳಿ ಇದೆಪಾ…..” ನಾನು ಮತ್ತೆ ಕೂತುಹಲ ತಡೆಯದೆ “ಅವಳ ಗಂಡ ಯಾರು ಗುರು, ಇಂತಹ ಸುಂದರವಾದ ಚೆಲುವೆಯನ್ನು ಇನ್ನೊಬ್ಬರ ಜೊತೆಗೆ ಬಿಟ್ಟಿದನಲ್ಲ” ಅಂದೇ ಬಿಟ್ಟೆ. ಆಗ ಗೆಳೆಯನೊಬ್ಬ “ಇಲ್ಲ ಗಾಳೇರ ಅವಳು ಗಂಡನ ಜೊತೆನೆ ಇದಾಳೆ, ಅವಳ ಗಂಡನಿಗೂ ಗೊತ್ತು ಅಂಟಿ ನಾಗರಾಜ ಆಗಾಗ ಒಟ್ಟಿಗೆ ಇರೋದು, ಆದ್ರೂ ಅವಯ್ಯ ಅಂಟಿಗೆ ಏನು ಹೇಳಲ್ಲ” ಅಂದಾಗ ನಾನು “ಬಿಡಪ್ಪ ನಮಗ್ಯಾಕೆ ಕಂಡವರ ಸುದ್ದಿ ಅಂತ” ಗೆಳೆಯರ ಆ ವಿಚಾರ ಗೋಷ್ಠಿಯಿಂದ ತಪ್ಪಿಸಿಕೊಂಡು ಬಂದಿದ್ದೆ.        ನಾನು ಹೀಗೆ ಆಂಟಿಯ ಹಿಂದಿನ ಎಲ್ಲ ಘಟನೆಗಳನ್ನು ನೆನಪಿಸಿಕೊಳ್ಳುತ್ತಿರುವಾಗ, ಆಂಟಿ ಒಮ್ಮೆ ಜೋರಾಗಿ “hello ಗಾಳೇರ ಇದಿಯಾ” ಎಂದಾಗ ವಾಸ್ತವ ಲೋಕಕ್ಕೆ ಮರಳಿದೆ. ಅಲ್ಲೇ ಪಕ್ಕದಲ್ಲಿ ಒಂದು ಚಿಕ್ಕ ಹೋಟೆಲ್ ಇತ್ತು. ಅಲ್ಲಿ ಕಾಫಿ ಕುಡಿಯೋಣ ಎಂದು ಆಂಟಿ ನನ್ನ ಕರೆದುಕೊಂಡು ಹೋದಳು. ಆಂಟಿ ನನ್ನ ಪಕ್ಕದಲ್ಲಿಯೇ ನನ್ನ ಮೈಗೆ ಅಂಟಿಕೊಂಡು ಕೂತಾಗ ನನ್ನ ಮನಸ್ಸಿನಲ್ಲಿ ಹರೆಯದ ಹುಡುಗರ ಯೋಚನೆಗಳು ಬರತೊಡಗಿದವು. ಆದರೂ ಅವುಗಳನ್ನೆಲ್ಲ ನಿಯಂತ್ರಿಸಿಕೊಂಡೆ ಕೂತೆ. ನಾನು ನಿರೀಕ್ಷಿಸಿದಂತೆ ಆಂಟಿ ನನ್ನ ಅತ್ತಿರ ಅನುಚಿತವಾಗಿ ವರ್ತಿಸಲಿಲ್ಲ. ಯಾವುದೋ ಗಾಢವಾದ ಚಿಂತೆಯಲ್ಲಿ ಇದ್ದಳು. ನಾನೇ ಮುಂದಾಗಿ “ಆಂಟಿ ನೀವು ಯಾಕೆ hospitalಗೆ ಬಂದಿದ್ದೀರಿ, ಕೈಯಲ್ಲಿರುವುದು x ray report ಏನದು” ಎಂದೆ.ಆಗ ಅವಳು ಹೇಳಿದ ಮಾತು ನನಗೆ ಆಶ್ಚರ್ಯವಾಯಿತು “ಇದು ನನ್ನದಲ್ಲ ಗಾಳೇರ ನಾಗರಾಜನದು, ಪಾಪ ಅವನಿಗೆ brain tumor, ಅದು ಈಗ ಕೊನೆಯ ಅಂತದಲ್ಲಿದೆ” ಎಂದಾಗ ನನಗೆ ಏನು ಮಾತಾಡಬೇಕೆಂದು ತಿಳಿಯದೆ “ಅಂಟಿ ನೀವು ನಾಗರಾಜನ್ನಾ……” ಎಂದು ಮಾತು ಅರ್ಧಕ್ಕೆ ನಿಲ್ಲಿಸಿದಾಗ, ಆಂಟಿಯೇ ಮಾತು ಮುಂದುವರಿಸಿ “ಹೌದು ಗಾಳೇರ ನಾಗರಾಜನೊಂದಿಗೆ ನಾನು ಸಂಬಂಧ ಬೆಳಿಸಿದ್ದೀನಿ” ಎಂದು ನನ್ನ ಕೈ ಹಿಡಿದುಕೊಂಡಳು. ನನಗೆ ಅವಳು ಕೈ ಹಿಡಿದುಕೊಂಡಿದ್ದು ಅಸಹ್ಯವಾದರೂ ತೋರಿಸಿಕೊಳ್ಳದೆ ಅವಳಿಂದ ನನ್ನ ಕೈ ಬಿಡಿಸಿಕೊಂಡು “ಆಂಟಿ ನಿಮಗೆ ಗಂಡ ಇದ್ದಾನಲ್ಲ. ನೀವು ಮಾಡುತ್ತಿರುವುದು ತಪ್ಪಲ್ವಾ” ಎಂದೆ. ಅವಳು ನನ್ನ  ಮಾತಿಗೆ ಮರುಉತ್ತರಿಸದೇ ಕಾಫಿ ಕುಡಿದು ಸೀದಾ ಹೊರಟುಹೋದಳು.     ನಾನು ಇವಳ್ಯಾಕಪ್ಪ ಹೊರಟುಹೋದಳು ನಾನು ಇವಳಿಗೆ ಹೇಳಿದ್ದು ತಪ್ಪಾಯ್ತಾ! ಅಂತ ಅವಳು ಹೋದ ದಿಕ್ಕಿನ ಕಡೆ ಹೋದೆ. ರಸ್ತೆಯ ಬದಿಯಲ್ಲಿ ಒಂದು ಕಲ್ಲು ಬೆಂಚಿನ ಮೇಲೆ ಕುಳಿತಿದ್ದ ಅವಳನ್ನು ನೋಡಿ ಮತ್ತೆ ಅವಳ ಪಕ್ಕದಲ್ಲಿ ಕೂತು “sorry aunty” ಅಂದೆ. ಆಗ ಅವಳು “ನೋಡು ಗಾಳೇರ ನನ್ನ ಗಂಡ ನನ್ನನ್ನು ತುಂಬಾ ಆತ್ಮೀಯವಾಗಿ ಪ್ರೀತಿಸುತ್ತಾನೆ ನಾನು ಕೂಡ ಅಷ್ಟೇ ನನ್ನ ಗಂಡನನ್ನು ಪ್ರೀತಿಸುತ್ತೇನೆ” ಅಂದಾಗ ನಾನು ಅವಳ ಮುಂದಿನ ಮಾತಿಗೂ ಕಾಯದೆ “ಮತ್ತೆ ಈ ನಾಗರಾಜ ಯಾಕೆ ” ಎಂದು ಬಿಟ್ಟೆ. ಆಗ ಆಂಟಿ “ಗಾಳೇರ ನಾಗರಾಜ ನನಗೆ ಹೀಗೆ ಆರು ತಿಂಗಳ ಕೆಳಗೆ ಸಿಕ್ಕ. ಅವನು ಸಿಕ್ಕ ಪರಿಸ್ಥಿತಿ ನಿಜಕ್ಕೂ ನನಗೆ ಇವಾಗ್ಲೂ ನೆನಪಿದೆ. ಅದೊಂದು ದಿನ ರಸ್ತೆಯಲ್ಲಿ ಪ್ರಜ್ಞೆತಪ್ಪಿ ಬಿದ್ದ ನಾಗರಾಜನನ್ನು hospitalಗೆ ಕರೆದೊಯ್ದಿದ್ದೆ. ಆವಾಗಲೇ ನನಗೆ ಗೊತ್ತಾಗಿದ್ದು ಅವನಿಗೆ brain tumor ಇರುವುದು. ಈ ವಿಷಯ ನನಗೆ ತಿಳಿದ ಮೇಲೆ ಅವನ ಸಂಬಂಧಿಕರನ್ನು ಗೆ ಹುಡುಕಲು ಪ್ರಯತ್ನಿಸಿದಾಗ ಅವನೊಬ್ಬ ಅನಾಥ ಎಂದು ತಿಳಿಯಿತು. ಅವನಿಗೆ treatment ಕೊಟ್ಟ doctor ನಾಗರಾಜ ಬದುಕುವುದು ತುಂಬಾ ವಿರಳ ಅವನು ಬದುಕುವಷ್ಟು ಕಾಲ ಅವನಿಗೆ ಸುಖವಾಗಿ ನೋಡಿಕೊಳ್ಳಿ ಎಂದಿದ್ದರು. ಹಾಗಾಗಿ ನಾನು ಅವನಿಗೆ ಎಲ್ಲಾ ವಿಚಾರದಲ್ಲಿ ಸಹಾಯ ಮಾಡುತ್ತಿದ್ದೆ. ಅವನ ದಿನನಿತ್ಯದ ಚಲನವಲನ ಗಳನ್ನೆಲ್ಲ ಗಮನಿಸಿದಾಗ ಅವನಿಗೂ ಸಹ ಹುಡುಗಿಯರ ಹುಚ್ಚು ಇರುವುದು ಕಂಡು ಬಂತು. ಆದರೆ ಅವನಿಗೆ ಯಾವ ಹುಡುಗಿಯರು ಬೀಳದಿದ್ದಾಗ ನನಗೆ ಅಯ್ಯೋ ಅನಿಸಿ ಅವನಿಗೆ ಸೆರಗಾಸಿ ಅವನ ಆಸೆಗಳನ್ನು ನನ್ನ ಗಂಡನಿಗೂ ಕೂಡ ಗೊತ್ತಾಗದಾಗೆ ಈಡೇರಿಸಿದೆ. ಆದರೆ ಸಮಾಜ ಎಷ್ಟೊಂದು ವಿಶಾಲ ಅಲ್ವಾ! ನಾವು ಎಷ್ಟೇ ಗೌಪ್ಯತೆ ಕಾಪಾಡಿದರು ಅದು ಹೊಗೆಯಾಡಿ ಬಿಡುತ್ತದೆ. ಹೀಗೆ ಹೊಗೆಯಾಡಿದಾಗ ನನ್ನನ್ನು ತಪ್ಪು ತಿಳಿದುಕೊಂಡು ಈಗಲೂ ಸಹ ನನಗೆ ಹುಡುಗರು ಒಂದು ರೀತಿಯಲ್ಲಿ ನೋಡುತ್ತಿರುತ್ತಾರೆ” ಎಂದು ಹೀಗೆ ಹೇಳುತ್ತಾ ನನ್ನ ಕೈಯನ್ನು ಹಿಡಿದುಕೊಂಡು “ಗಾಳೇರ ನಾನು ಮಾಡಿದ್ದು ತಪ್ಪಾ ಅಂತ ಕೇಳಿದಾಗ” ನನಗೆ ಮಾತೆ ಬರದಾಯಿತು.        ಹೀಗೆ ಸ್ವಲ್ಪ ದಿನ ಕಳೆದ ನಂತರ ಈ ವಿಚಾರವನ್ನು ನಾನು ಗಂಭೀರವಾಗಿ ತೆಗೆದುಕೊಂಡು ನನ್ನ ಹಲವಾರು ಗೆಳೆಯರೊಂದಿಗೆ ನಾಗರಾಜ್ ವಿಳಾಸವನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದ್ದೆ. ಈ ವಿಷಯ ಅವರ ಮನೆಯವರಿಗೆ ತಿಳಿಸಿದಾಗ ನಾಗರಾಜನೂ ಕೂಡ ನನ್ನಂತೆ ಊರು ಬಿಟ್ಟ ಬಂದವನೆಂದು ತಿಳಿಯಿತು. ಅವರ ಮನೆಯವರು ಬಂದು ಅವನನ್ನು ಕರೆದುಕೊಂಡು ಹೋದರು. ನಾನು ಒಂದೆರಡು ತಿಂಗಳ ನಂತರ ಆ ಕಂಪನಿಯಲ್ಲಿ ಕೆಲಸ ಬಿಟ್ಟಿದ್ದೆ. ಅದಾದ ನಂತರ ನನಗೆ ಯಾರ ಸಂಪರ್ಕವೂ ಇರಲಿಲ್ಲ. ಒಂದು ದಿನ ಮೆಜೆಸ್ಟಿಕ್ ನಲ್ಲಿ ಬಸ್ಸಿಗಾಗಿ ಕಾಯುತ್ತಿರುವಾಗ ಅಚನಕ್ಕಾಗಿ ಕಮಲ ಆಂಟಿ ಸಿಕ್ಕಾಗ ನಾಗರಾಜ್ ಸತ್ತನೆಂದು ತಿಳಿದಾಗ ನಾಗರಾಜನ ಸಾವು ನನ್ನ ಕಾಡದೆ ಆಂಟಿ ಮಾಡಿದ ಆ ತ್ಯಾಗ ಇವತ್ತಿಗೂ ಕೂಡ ನನ್ನ ಕಾಡುತ್ತಿರುತ್ತದೆ. ಮತ್ತೆ ಆಂಟಿ ಒಳ್ಳೆಯವಳು ಅವಳ ಜೊತೆ ಒಳ್ಳೆಯ ಸ್ನೇಹ ಬೆಳೆಸಿಕೊಳ್ಳಬೇಕೆಂದು ಅವಳ ದೂರವಾಣಿಸಂಖ್ಯೆ ಇಸಿದುಕೊಂಡೆ. ಒಂದೆರಡು ತಿಂಗಳು ಸಂಪರ್ಕದಲ್ಲಿದ್ದ ಆಂಟಿ ನಂತರ ಇವತ್ತಿಗೂ ಅವಳು not reachable.ಆದರೆ ಅವಳ ಸಹಾಯ ನನ್ನ ಮನಸ್ಸಿಗೆ ಯಾವಾಗಲೂ reachable. ******** ಮೂಗಪ್ಪ ಗಾಳೇರ್

ಗಾಳೇರ್ ಬಾತ್ Read Post »

ಅಂಕಣ ಸಂಗಾತಿ

ಗಾಳೇರ್ ಬಾತ್

ಗಾಳೇರ್ ಬಾತ್ -03 ಬದುಕು ಏನೆಲ್ಲಾ ಮಾಡಿಸುತ್ತದೆ…….. ಇವನೌನ್ ಇವನೇನು ಬರಿತಾನ ಅಂತೀರಲಾ….. ನಿಜ ಕಣ್ರೀ ನಾನು ಬೇರೆ ಏನು ಬರೆಯುವುದಿಲ್ಲ! ನಮ್ಮ-ನಿಮ್ಮ ನಡುವೆ ನಡೆಯುವ ದಿನ ನಿತ್ಯದ ಘಟನೆಗಳೇ ನನ್ನ ಬರವಣಿಗೆಗಳಿಗೆ ಶೃಂಗಾರ.          ಆಗ ತಾನೆ ನಾನು duty ಮುಗಿಸಿಕೊಂಡು restroom ನಲ್ಲಿ ಏನೋ ಯೋಚಿಸುತ್ತ ಕೂತಿದ್ದೆ. Duty ನಾ.. ಯಾವ duty….  ಅಂತ ಜಾಸ್ತಿ ತಲೆ ಕೆಡಿಸ್ಕೋಬೇಡಿ. ಅದೇ ನಾನು ಮಾಡ್ತಿದ್ನಲ್ಲ housekeeping ಕೆಲಸ. ಹೀಗೆ ಕೂತಿರಬೇಕಾದ್ರೆ ಪ್ರಕಾಶ ಎಲ್ಲಿಂದ ಬಂದ್ನೋ ಗೊತ್ತೆ ಆಗಲಿಲ್ಲ. ಬಂದವನೇ “ಮಗ ಸುಜಾತಾ ಆಂಟಿ ಮತ್ತು ಮಹೇಶ್ ಇಬ್ರೂ ರಜೆ ಹಾಕಿದರೋ” ಅಂತೇಳಿ ಪೆಚ್ಚುಮೋರೆ ಹಾಕಿಕೊಂಡಿದ್ದ. ನಾನು ಈ ಮಾತಿಗೆ ಜಾಸ್ತಿ ತಲೆಕೆಡಿಸಿಕೊಳ್ಳದೆ “ಹೌದಾ….!” ಅಂತ ಹೇಳಿ ಸುಮ್ಮನೆ ಆದೆ. ಅಷ್ಟಕ್ಕೇ ಬಿಡದೆ ಮಹೇಶ “ಗುರು ಸುಜಾತಾ ಆಂಟಿ ಸರಿ ಇಲ್ಲ ಗುರು” ಅಂದಾಗ ನನ್ನ ಕುತೂಹಲ ಹೆಚ್ಚಾಯಿತು. “ಯಾಕೆ ಪ್ರಕಾಶ ಏನಾಯ್ತು, ಸುಜಾತ ಆಂಟಿ ನಿನಗೇನು ಮಾಡಿದ್ಲು”. ಆಗ ಪ್ರಕಾಶ “ಗುರು ನಾನು ಮೂರು ತಿಂಗಳಿಂದ ಆಂಟಿನ love ಮಾಡ್ತಾಯಿದೀನಿ ಕಣೋ. ಅವಳು ಕೂಡ ನಂಜೊತೆ Park, film, Mall ಅಂತ ಸುತ್ತಿದಾಳೆ, ಹಣ ಕೂಡ ತುಂಬಾ ಕೊಟ್ಟಿದ್ದೇನೆ ಮಗ, ಇವತ್ತು ನೋಡಿದ್ರೆ ಮಹೇಶನ ಜೊತೆ filmಗೆ ಹೋಗಿದ್ದಾಳಂತೆ” ಅಂತ ಬೇಜಾರು ಮಾಡ್ಕೊಂಡ. ಹೀಗೆ ಬೇಜಾರು ಮಾಡಿಕೊಂಡಿದ್ದ ಪ್ರಕಾಶನನ್ನು ನಾನು ಸಮಾಧಾನ ಪಡಿಸಲು “ಗುರು ಹೆಣ್ಣು-ಹೊನ್ನು-ಮಣ್ಣು ಈ ಮೂರರ ಹಿಂದೆ ಯಾವತ್ತೂ ಹೋಗಬಾರದು” ಅಂತ ಹೇಳಿದೆ. ಆಗ ಅವನು “ಹೌದು ಗುರು… ನೀನು ಹೇಳಿದ್ದು ನಿಜ! ನೀನು ಬಿಡಪ್ಪ gentleman” ಅಂತ ಹೇಳಿ ಹೊರಟು ಹೋದ.         ಅವನೇನು ಹೊರಟು ಹೋದ! ಆದರೆ ನನಗೆ ಸುಜಾತ ಆಂಟಿಯ ಬಗ್ಗೆ ತಿಳಿದುಕೊಳ್ಳಲು ತುಂಬಾ ಕುತೂಹಲ ಹುಟ್ಟಿತು. ಹಾಗೋ ಹೀಗೋ ಹೇಗೋ ಮಾಡಿ ಸುಜಾತಾ ಆಂಟಿಯ ಬಗ್ಗೆ information ಕಲೆ ಹಾಕಿದಾಗ ತಿಳಿತು. ಅವಳು ಹೀಗೆ ಹತ್ತು ವರ್ಷದ ಕೆಳಗೆ ಮಂಡ್ಯದ ಯಾವುದೋ ಹಳ್ಳಿಯಿಂದ ತನ್ನ ಗಂಡನೊಂದಿಗೆ ದುಡಿಯಲು ಬೆಂಗಳೂರಿಗೆ ಬಂದಳೆಂದು. ಮೂವತ್ತೈದು ರಿಂದ ನಲವತ್ತು ವಯಸ್ಸಿನ ಆಜುಬಾಜಿನವಳಾದ ಅಂಟಿ ನೋಡಲು ತುಂಬಾ ಅಪ್ಸರೆಯಂತೆ ಕಾಣುತ್ತಿದ್ದಳು. ಎರಡು ಮಕ್ಕಳ ತಾಯಿಯಾದರೂ ಸಹ ಅವಳ ಅಂದದ ಕಡಲೆನೂ ಕಪ್ಪಗಿರಲಿಲ್ಲ. ಯಾವುದೇ ವಯಸ್ಸಿನ ಹುಡುಗರಾಗಲಿ ವಯಸ್ಕರರಾಗಲಿ ಅವಳು ನೋಡುವ ನೋಟಕ್ಕೆ ಅವಳ ಬಲೆಗೆ ಬೀಳುವುದರಲ್ಲಿ ಅನುಮಾನವಿಲ್ಲ. ಆದರೆ ಸುಜಾತಾ ಆಂಟಿ ಮಾತ್ರ ಯಾವತ್ತೂ ನನ್ನ ಆ ರೀತಿ ನೋಡಿರಲಿಲ್ಲ. ನನ್ನಷ್ಟೇ ಅಲ್ಲ ನನ್ನಂತೆ ಸೌಜನ್ಯವಾಗಿ ವರ್ತಿಸುವ ಯಾವುದೇ ಯುವಕರನ್ನು ಕೂಡ ಅವಳು ತನ್ನ ಕಡೆ ಸೆಳೆಯುತ್ತಿರಲಿಲ್ಲ. ಕಾಮಲೆ ತುಂಬಿದ ಪಡ್ಡೆ ಹುಡುಗರನ್ನು ಮಾತ್ರ ಅವಳು ತನ್ನ ಬಲೆಗೆ ಬೀಳಿಸಿ ಕೊಳ್ಳುತ್ತಿರುವುದು ದಿನಗಳೆದಂತೆ ಗೊತ್ತಾಯ್ತು. Sex ಎನ್ನುವುದು ಮೂಲಭೂತ ಅಲ್ಲದಿದ್ದರೂ ಸಹ. ಅದು ಸಹಜವಾಗಿಯೇ ಮನುಷ್ಯನಲ್ಲಿ ಮೂಲಭೂತ ವಸ್ತುವಿನಂತೆ ಬೆರೆತು ಬಿಡುತ್ತದೆ. ಇದಕ್ಕೆ ಯಾವೊಬ್ಬ ಹೆಣ್ಣು ಮತ್ತು ಗಂಡು ಕೂಡ ಹೊರತಾಗಿಲ್ಲ.         ನಾನು ಒಂದು ದಿನ housekeeping ಕೆಲಸ ಮುಗಿಸಿಕೊಂಡು ಶಾಂತಿನಗರದ ಯಾವುದೋ ಗಲ್ಲಿಯಲ್ಲಿ ಒಂಟಿಯಾಗಿ ಸಾಗುತ್ತಿರಬೇಕಾದರೆ. ಯಾವುದೋ ಚಿಕ್ಕ ಅಡ್ಡ ರಸ್ತೆಯಲ್ಲಿ ಸಿಕ್ಕ ಸುಜಾತ ಅಂಟಿ “ಏನು ಗಾಳೇರ ಇಲ್ಲಿ”. ಎಂದಾಗ ಅವಳ ಜೊತೆ ಮಾತಿಗಿಳಿಯಲು ನನಗೆ ಒಂತರ ಇರಿಸು ಮುರಿಸು ಉಂಟಾದರು ಮಾತಿಗಿಳಿಯದೆ ಬೇರೆ ಮಾರ್ಗವಿಲ್ಲ ಎಂದು “ಆಗೆ ಆಂಟಿ ಸುಮ್ಮನೆ ಬೆಂಗಳೂರನ್ನು ಸುತ್ತೋಣವೆಂದು ಬಂದೆ”. “ಹೌದಾ….. ಇಲ್ಲೇ ನಮ್ಮ ಮನೆ, ಬಾ ಮನೆಗೆ ಹೋಗೋಣ” ಎಂದಾಗ ನನಗೆ ಮಾತು ಬರದಾಯಿತು. ಯಾಕೆಂದರೆ ನನ್ನ ಮನಸ್ಸಿನಲ್ಲಿ ಅವಳೊಬ್ಬ ವೇಶ್ಯೆ ಎಂಬ ಪಟ್ಟ ಕಟ್ಟಿಕೊಂಡಿತ್ತು. ಯಪ್ಪಾ ಸೂಳೆ ಮನೆಗೆ ಹೋಗುವುದಾ! ಎಂದು ಮನಸ್ಸಿನಲ್ಲಿ ಭಯ ಶುರುವಾಯಿತು. ತಕ್ಷಣ ಅವಳು ನನ್ನ ಯೋಚನೆಯನ್ನು ಅರ್ಥಮಾಡಿಕೊಂಡವಳಂತೆ “ಪ್ರಕಾಶ ಮತ್ತು ಮಹೇಶ ಅವರು ನನ್ನ ಜೊತೆ ಮಾತನಾಡುವುದು ಬಿಟ್ಟು ತುಂಬಾ ದಿನಗಳಾಗಿವೆ ಅವರು ನಮ್ಮ ಮನೆಗೆ ಈಗ ಬರುವುದಿಲ್ಲ. ನೀನು ಬಂದಿದ್ದು ಯಾರು ನೋಡುವುದಿಲ್ಲ ಯೋಚಿಸಬೇಡ ಬಾ ಗಾಳೇರ” ಎಂದು ನನ್ನ ಕೈಯನ್ನು ಹಿಡಿದುಕೊಂಡಾಗ ಅವಳ ಕಣ್ಣಲ್ಲಿ ಕಾಮದ ಭಾವ ತುಂಬಿದೆ ಎಂದು ನನಗೆ ಅನಿಸಲಿಲ್ಲ. ಯಾವಾಗಲೂ ಅಪ್ಸರೆ ಕಣ್ಣುಗಳಂತೆ ಕಾಣುತ್ತಿದ್ದ ಅವಳ ಕಣ್ಣುಗಳು. ಮಮತೆಯ ತುಂಬಿದ ಮಡಿಲಿನ ತಾಯಿ ಹೃದಯದಂತೆ ಶಾಂತವಾಗಿದ್ದವು. ಅವಳು ಸ್ಪರ್ಶಿಸಿದಾಗ ರೋಮಾಂಚನಗೊಳ್ಳಬೇಕಿದ್ದ ದೇಹ ಜಡವಾಗಿತ್ತು. ಹೀಗೆ ನನ್ನಲ್ಲಾದ ಬದಲಾವಣೆಗಳನ್ನು ಅರಿತ ಮೇಲೆ ಅವಳ ಹಿಂದೆ ಹೊರಟೆ.      ಹಲವಾರು ಯುವಕರೊಂದಿಗೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದ  ಸುಜಾತ ಅಂಟಿ ಅದೆಷ್ಟು ದುಡ್ಡು ಮಾಡಿರಬಹುದು. ಅವಳ ಮನೆ ಹೇಗೆಲ್ಲಾ ಐಶಾರಾಮಿ ಹೊಂದಿರಬಹುದು! ಎಂದು ಮನಸ್ಸಿನಲ್ಲಿ ಏನೇನೋ ವಿಚಾರಗಳನ್ನು ಮಾಡುತ್ತಾ ಅವಳ ಹಿಂದೆ ಹೋದೆ. ಅದೊಂದು ದೊಡ್ಡ ಚರಂಡಿ ಸರಿಸುಮಾರು ಬೆಂಗಳೂರಿನ ಮುಕ್ಕಾಲು ಏರಿಯಾದ wastewater ಆ ಚರಂಡಿಯಲ್ಲಿ ಹರಿಯುತ್ತಿತ್ತು. ಅದರ ಪಕ್ಕ ಸಾಲಾದ ಮನೆಗಳು. ಆ ಮನೆಗಳಿಗೆಲ್ಲಾ ಒಂದೇ toilet. ಆ ಮನೆಗಳ ಚಾವಣಿಗಳನ್ನ ಸಿಮೆಂಟಿನ ತಗಡುಗಳಿಂದ ಹೊದಿಸಲಾಗಿತ್ತು. ಅದರಲ್ಲಿ ಸುಜಾತ ಆಂಟಿದು ಒಂದು. ಅದು ಸ್ವಂತದ್ದಲ್ಲ ಬಾಡಿಗೆಯ ಮನೆ. ” ಬಾ ಗಾಳೇರ ಒಳಗೆ” ಎಂದಾಗ “ಹಾ ಅಂಟಿ” ಎಂದು ಆಚೆ ಈಚೆ ನೋಡುತ್ತಾ ಒಳಗಡೆ ಕಾಲಿಟ್ಟೆ. ಎರಡು ಕೋಣೆಗಳನ್ನು ಹೊಂದಿದ ಆ ಮನೆಯಲ್ಲಿ hall ಮತ್ತು kitchen ಬೇರೆ ಬೇರೆ ಆಗಿರಲಿಲ್ಲ. ಎರಡು ಚಿಕ್ಕ ಹೆಣ್ಣು ಮಕ್ಕಳು ಓದುತ್ತ ಕುಳಿತಿದ್ದವು. ಆ ಮಕ್ಕಳ ಹೋಲಿಕೆ ಸುಜಾತ ಅಂಟಿ ತರ ಇದ್ದುದರಿಂದ ಅಂಟಿಯ ಮಕ್ಕಳಿರಬಹುದು ಅನಿಸಿತು. ಇನ್ನೊಂದು ಮೂಲೆಯಲ್ಲಿ ರಗ್ಗು ಒದ್ದು ಕೊಂಡು ಮಲಗಿದ ವೆಕ್ತಿ ಅಂಟಿಯ ವಯಸ್ಸಾದ ತಂದೆ ಇರಬಹುದೆಂದು ಅಂದು ಕೊಂಡೆ. ಅಲ್ಲೇ ಪಕ್ಕದಲ್ಲಿ ಒಂದು ಮಂಚ. ಅದನ್ನು mostly ಆಂಟಿ ಬೆಂಗಳೂರಿಗೆ ಬಂದ ಹೊಸತನದರಲ್ಲಿ ತಂದಿರಬಹುದೆನಿಸುತ್ತಿತ್ತು. ಯಾಕೆಂದರೆ ಆ ಮಂಚ ತಗ್ಗು-ದಿಮ್ಮಿ ಇಂದ ಕೂಡಿತ್ತು. ಅದರ ಮೇಲೆ ಹಳೆಯದಾದ ಕೌದಿ. ಅದನ್ನು ನೋಡಿದ ತಕ್ಷಣ ನನಗೆ ಪ್ರಕಾಶ ಮತ್ತು ಮಹೇಶ ಅಷ್ಟೇ ಅಲ್ಲದೆ ಇನ್ನೂ ಎಷ್ಟೋ ಯುವಕರು ಈ ಮಂಚದ ಮೇಲೆ ಹತ್ತಿ ಇಳಿದಿದ್ದಾರೋ….. ಎಂದು ಯೋಚಿಸುತ್ತಾ ಕುಳಿತಿರಬೇಕಾದರೆ. ಆಂಟಿ ಒಳಗಿನಿಂದ “ಗಾಳೇರ ಟೀ ಕುಡಿತೀರಾ…..” ಎಂದಾಗ ವಾಸ್ತವಕ್ಕೆ ಮರಳಿದೆ.        ಮೂಲೆಯಲ್ಲಿ ರಗ್ಗನ್ನು ಒದ್ದು ಕೊಂಡು ಮಲಗಿದ್ದ ವೆಕ್ತಿ. “ಏನೇ ಸುಜಿ ಔಷಧಿ ತಂದೆಯಾ” ಎಂದಾಗ ನನಗೆ ಆಶ್ಚರ್ಯವಾಯಿತು. ಅಲ್ಲಿವರೆಗೆ ಸುಜಾತಳ ತಂದೆ ಎಂದುಕೊಂಡಿದ್ದ ನಾನು ಆ ವ್ಯಕ್ತಿ ಆಂಟಿಯನ್ನು ಸುಜಿ ಅಂದಾಗ ಓ ಇವರು ಆಂಟಿಯಾ ಗಂಡ ಇರಬೇಕೆಂದುಕೊಂಡೆ. ಆಗ ಆಂಟಿ “ಹಾ ತಂದಿದ್ದೀನಿ ಇರು ವಸಿ ಕೊಡ್ತೀನಿ” ಎಂದಳು. ಆಗ ನನ್ನ ಮನಸ್ಸಿನಲ್ಲಿ ಮತ್ತೆ ಯೋಚನೆಗಳ ಲಹರಿಯೇ ತೇಲಿದವು. ಓ ಆಂಟಿಯ ಗಂಡ ರೋಗಿಷ್ಟನದ್ದರಿಂದ ಆಂಟಿ ತನ್ನ ದೇಹದ ಆಸೆ ತಾಳಲಾಗದೆ ಯುವಕರಿಗೆ ಬಲೆ ಬೀಸುತ್ತಿದ್ದಾಳೆಂದು ಯೋಚಿಸುತ್ತಿರುವಾಗಲೇ…..ಅಂಟಿ “ಏನು ಗಾಳೇರ… ಏನು ಯೋಚಿಸ್ತಾ ಇದ್ದೀಯ. ಅವರು ನಮ್ಮ ಯಜಮಾನ್ರು. ನಾನು ಅವರನ್ನು ಹೀಗೆ ಇಪ್ಪತ್ತು ವರ್ಷಗಳ ಕೆಳಗೆ ಲವ್ ಮಾಡಿ ಮದುವೆಯಾಗಿ ಹಳ್ಳಿ ಬಿಟ್ಟು ಬೆಂಗಳೂರು ಸೇರಿಕೊಂಡೆವು. ಆಗ ನಮಗೆ ಹುಟ್ಟಿದ್ದೇ ಈ ಎರಡು ಹೆಣ್ಣು ಮಕ್ಕಳು. ನನ್ನ ಗಂಡ ಎಂತಹ ಕಾಯಿಲೆಯಿಂದ ಬಳಲುತ್ತಿದ್ದರೂ ಕೂಡ ನನಗೆ ಸಮಯಕ್ಕೆ ಸರಿಯಾಗಿ ಊಟ ಆಯಿತಾ ಎಂದು ಕೇಳದೆ ಇರಲಾರ. ಅಷ್ಟೊಂದು ಪ್ರೀತಿ ನನ್ನ ಗಂಡನಿಗೆ…..” ಎಂದು ನಿಟ್ಟುಸಿರು ಬಿಟ್ಟಳು. “ಆಗಿದ್ದರೆ ಪ್ರಕಾಶ ಮತ್ತು ಮಹೇಶನನ್ನೂ…..” ಎಂದು ಮಾತನ್ನು ತೊದಲಿಸಿದಾಗ; ಅಂಟಿ “ಗಾಳೇರ ಇಲ್ಲಿ ನೋಡು ನನ್ನ ಗಂಡನಿಗೆ ಏಡ್ಸ್ ರೋಗ, ಇದಕ್ಕೆ ಕಾರಣ ಏನು ಗೊತ್ತಾ ನಾನು ಇವರನ್ನು ಮದುವೆ ಆಗುವುದಕ್ಕಿಂತ ಮುಂಚೆ ಇವರು ಅದೆಷ್ಟು ಮಹಿಳೆಯರೊಂದಿಗೆ ಸಂಬಂಧವನ್ನು ಇಟ್ಟುಕೊಂಡಿದ್ದರು ಗೊತ್ತಿಲ್ಲ. ಅದರ ಪ್ರತಿಫಲವೇ ಈ ರೋಗ. ಆದರೆ ಮದುವೆಯಾದ ಮೇಲೆ ನನ್ನ ಬಿಟ್ಟು ಬೇರೆ ಯಾರನ್ನೂ ಕೂಡ ಕಣ್ಣೆತ್ತಿ ನೋಡಿಲ್ಲ. ಏನು ಪ್ರಯೋಜನ! ಮಿಂಚಿ ಹೋದ ಕಾಲ ಮತ್ತೆ ಬರುವುದೆ. ಅದಕ್ಕೆ ಪ್ರಕಾಶ ಮತ್ತು ಮಹೇಶ ಇನ್ನೂ ಏನು ಅರಿಯದ ಯುವಕರು ಇವಾಗಲೇ ಹಲವಾರು ಹುಡುಗಿಯರ ಹಿಂದೆ ಬಿದ್ದರೆ ನನ್ನ ಗಂಡನಂತೆ ಮೂಲೆಯಲ್ಲಿ ಮಲಗುತ್ತಾರೆ ಅವರ ಹೆಂಡತಿಯರು ನನ್ನಂತೆ ರೋಗಿಷ್ಟ ಗಂಡನನ್ನು ಕಟ್ಟಿಕೊಂಡು ದಿನನಿತ್ಯ ಕಣ್ಣೀರು ಹಾಕಬಾರದೆಂದು ಅವರನ್ನು ನನ್ನತ್ತಾ ಸೆಳೆದುಕೊಂಡು. ಮತ್ತೆ ಹೆಣ್ಣಿನ ಬಗ್ಗೆ ಜಿಗುಪ್ಸೆ ಬರುವಂತೆ ಮಾಡಿದೆ. ಈಗ ನೋಡು ಅವರು ಯಾವ ಹೆಣ್ಣನ್ನು ಸಹ ನೋಡುವುದಿಲ್ಲ. ಇದಕ್ಕೆ ನಾನು ಅವರಿಂದ ಪ್ರತಿಫಲವಾಗಿ ದುಡ್ಡನ್ನು ಪಡೆದುಕೊಂಡು ನನ್ನ ಗಂಡನಿಗೆ ಔಷಧಿ ತರುತ್ತಿದ್ದೆ” ಎನ್ನುವ ಮಾತುಗಳನ್ನು ಕೇಳಿದ ನನಗೆ ಕಣ್ಣಂಚಿನಲ್ಲಿ ನೀರು ತಾನಾಗಿಯೇ ಹರಿಯಿತು. ಅಷ್ಟರಲ್ಲಿ ಪಕ್ಕದಲ್ಲಿ ಕುಳಿತ ಮಕ್ಕಳು “ಅಮ್ಮ ಈ homework ಹೇಳಿ ಕೊಡಮ್ಮ” ಎಂದಾಗ; ಅಂಟಿ “ನಾನು ಅಡುಗೆ ಮಾಡಬೇಕು ಇವತ್ತು ಅಣ್ಣ ಹೇಳಿಕೊಡತಾನೆ ಅಂತ ನನ್ನ ಕಡೆ ತೋರಿಸಿದಾಗ” ನನ್ನ ಮನಸ್ಸು ಶಾಂತತೆಯ ಕಡಲಿಗೆ ಜಾರಿತು. ******** ಮೂಗಪ್ಪ ಗಾಳೇರ

ಗಾಳೇರ್ ಬಾತ್ Read Post »

ಅಂಕಣ ಸಂಗಾತಿ

ಗಾಳೇರ್ ಬಾತ್

ಗಾಳೇರ್ ಬಾತ್-02 Housekeeping ನ ಆ ದಿನಗಳು.…….         ಈ ಲೇಖನದ ತಲೆಬರಹ ಓದಿದರೆ ನಿಮಗೆ ಆಶ್ಚರ್ಯವಾಗಬಹುದು. ಓದಿದವರಿಗೆ ಅಷ್ಟೇಕೆ ಕೇಳಿದವರಿಗೂ ಕೂಡ ವಿಚಿತ್ರ ಅನಿಸುತ್ತದೆ. ಯಾಕೆಂದರೆ ನನ್ನ life ಯೇ ಒಂತರಾ ವಿಚಿತ್ರ. ನಾನೇನೋ ಅವತ್ತು ಟೂರ್ ಪೀಸ್ ಗಾಗಿ ಬಂದು ಬೆಂಗಳೂರು ಸೇರ್ಕೊಂಡ್ ಬಿಟ್ಟೆ. ಸೇರ್ಕೊಂಡ್ ಅನಂತರದಲ್ಲಿ hotel ನಲ್ಲಿ cleaner ಆಗಿ ಕೆಲಸ ನಿರ್ವಹಿಸಿದೆ. ಆ hotel ಮಾಲೀಕ ಸರಿಯಾಗಿ ಸಂಬಳ ಕೊಡುವುದಿಲ್ಲ ಎಂದು ತಿಳಿದ ಮೇಲೆ ಅನಿವಾರ್ಯವಾಗಿ ದುಡಿದ ಶ್ರಮ ಅಲ್ಲಿಯೇ ಬಿಟ್ಟು house keeping ಕೆಲಸಕ್ಕೆ ಸೇರಿದೆ. ನಿಜ ನನ್ನಂತೆ ಊರು ಬಿಟ್ಟು ಬೆಂಗಳೂರು ಸೇರಿದ ಎಷ್ಟೋ ಯುವಕರು ಮೊದಲು ಕೆಲಸ ಗಿಟ್ಟಿಸಿಕೊಳ್ಳುವುದು ಬಹುತೇಕ ಹೋಟೆಲ್ಗಳಲ್ಲೇ! ಯಾಕೆಂದರೆ ಅಂತವರಿಗೆ ಬೆಂಗಳೂರು ಅಪರಿಚಿತ. ಎಲ್ಲಿ ವಸತಿ, ಎಲ್ಲಿ ನೀರು, ಎಲ್ಲಿ ಗಾಳಿ, ಎಲ್ಲಿ ಬಟ್ಟೆ ? ಇಷ್ಟೆಲ್ಲಾ ಕೊರತೆಗಳ ನಡುವೆ ಊರು ಬಿಟ್ಟು ಬಂದವರಿಗೆ ಬದುಕು ಕಟ್ಟಿಕೊಳ್ಳಲು ಹೋಟೆಲ್ಗಳೇ ಸೂಕ್ತ. ನಮ್ಮಂತ ಅಮಾಯಕರನ್ನೇ ಬಂಡವಾಳ  ಮಾಡಿಕೊಳ್ಳುವ ಕೆಲವೊಂದು ಹೋಟೆಲ್ ಮಾಲೀಕರು ಸಂಬಳ ಕೊಡದೆ ವಂಚಿಸಿದಾಗ ಅನಿವಾರ್ಯವಾಗಿ ಬೇರೆ ಉದ್ಯೋಗಗಳತ್ತ ಚಿತ್ತಾ ಅರಿಸಬೇಕಾಗುತ್ತದೆ. ಹಾಗೆಯೇ ನಾನು ಕೂಡ.         ಅದೊಂದು big company. ಆ company ಹೆಸರು ನಾನು ಹೇಳುವುದಿಲ್ಲ. ಆದರೆ ಅದು ಬೆಂಗಳೂರಿನ ಮಧ್ಯಭಾಗದಲ್ಲಿರುವ ಶಾಂತಿನಗರದ ಅಂಚಿನಲ್ಲಿದೆ. ಅಲ್ಲಿಯೇ ನಾನು housekeeping  ದಿನಗಳನ್ನು ಕಳೆದಿದ್ದು. ನನಗೆ ಎಲ್ಲಾ ಹೊಸತು. ಒಂದು ರೀತಿಯ ವಿಚಿತ್ರ ಜನ. ಲೇ ಮಾವ, ಲೇ ಬಾವಾ ಎನ್ನುತ್ತಲೇ ಬೆಳೆದ ನನಗೆ “ಏನು ಗುರು ಏನು ಸಮಾಚಾರ” ಎನ್ನುವ ಮಾತುಗಳು ಅಷ್ಟೇ ವಿಸ್ಮಯವಾಗಿ ಕಾಡುತ್ತಿದ್ದವು. “ಸೂಳೇಮಗ”, “ಬೊಳಿಮಗ” ಎಂದು ಬಯ್ಯೂವ ನಮ್ಮ ಹಳ್ಳಿಯ ಭಾಷೆ ಕಾಮಿಡಿಗೂ ಸೈ ಜಗಳಕ್ಕೂ ಸೈ. ಆದರೇ ಬೆಂಗಳೂರಿನ “ಅವನಮ್ಮನ್” ಎನ್ನುವ ಶಬ್ದ ಜಗಳಕ್ಕೆ ಮಾತ್ರ ಸೀಮಿತವಾಗಿದ್ದು ನನಗೆ ಒಂಥರಾ ಭಾಷೆಯ ಗಮ್ಮತ್ತು ರುಚಿಸುತ್ತಿತ್ತು. ಹಾಗೋ ಹೀಗೋ ಹೇಗೋ ಮಾಡಿ ಕಂಪನಿಯಲ್ಲಿ housekeeping ಕೆಲಸವನ್ನು ಗಿಟ್ಟಿಸಿಕೊಂಡೆ. ನನಗೆ ಆಗ ಪರಿಚಿತರಾಗಿದ್ದು ತುಂಬ ಜನ ಸ್ನೇಹಿತರು. ಆದರೆ ಅವರೆಲ್ಲಾ ಈಗ ಸರಿಯಾಗಿ ನೆನಪಿಲ್ಲ. ಅಲ್ಲಿ ನಡೆದ ಘಟನೆಗಳು ಮಾತ್ರ ನನ್ನ ಮೆದುಳಿನಲ್ಲಿ ಅಳಿಸದೆ print ಆಗಿಬಿಟ್ಟಿವೆ. ಕೆಲಸಕ್ಕೇನೂ ಸೇರಿದೆ. ಕಂಪನಿಯವರು ವಸತಿಯನ್ನು ಕೊಟ್ಟಿದ್ದರು. ಆ ವಸತಿಯ ಬಂಗಲೆ ಹೇಗಿತ್ತೆಂದರೆ? ನನಗೂ ಈಗಲೂ ಕೂಡ ಪದಗಳು ಸಿಗುತ್ತಿಲ್ಲ. ಆ ಬಂಗಲೆಯನ್ನು ವರ್ಣಿಸಲು. ಬೆಂಗಳೂರಿನ ದೊಡ್ಡ ಚರಂಡಿ ಅದು. ಅದೆಷ್ಟೋ ಜನರ ನೋವುಗಳನ್ನು ತನ್ನ ಒಡಲಲ್ಲಿ  ತುಂಬಿಕೊಂಡು, ಅದೆಷ್ಟೋ ಜನರ ಮಲಿನವನ್ನು ತನ್ನ ಕೈಯಲ್ಲಿಟ್ಟುಕೊಂಡು ಹರಿಯುತ್ತಿತ್ತೆಂದರೆ ನನಗೂ ಈಗಲೂ ಕೂಡ ಆಶ್ಚರ್ಯ ವಾಗುತ್ತದೆ. ತುಂಬಾ ಶಾಂತತೆಯ ಸ್ವಭಾವ. ಸಮುದ್ರದಂತೆ ಭೋರ್ಗರೆಯುವುದಿಲ್ಲ. ನದಿಯಂತೆ ಕುಣಿಯುವುದಿಲ್ಲ. ತನ್ನ ಪಾಡಿಗೆ ತಾನು ಹೊರಟರೆ ನೋಡುವ ಜನರೆಲ್ಲ ಮೂಗಿನ ಮೇಲೆ ಕೈ ಇಟ್ಟು ಕೊಳ್ಳಬೇಕು. ಅಂತಹ ನಡಿಗೆ ಆ ಚರಂಡಿಯದ್ದು.         ಅದರ ಪಕ್ಕದಲ್ಲಿಯೇ ನಮ್ಮ ಬಂಗಲೆ. ಬಂಗಲೆ ಎಂದರೆ ಸಾಮಾನ್ಯವಾಗಿ ಹತ್ತಾರು ಜನ. ಹೌದು ನಾವು ಕೂಡ ಅಲ್ಲಿ ಹತ್ತಾರು ಹುಡುಗರು ವಾಸಿಸುತ್ತಿದ್ದೆವು. ಆದರೆ ನಮ್ಮ ಬಂಗಲೆ ಗಾತ್ರದಲ್ಲಿ ಅಷ್ಟೊಂದು ವಿಶಾಲ ವಾಗಿರಲಿಲ್ಲ. ಆದರೆ ಅದರ ಮನಸ್ಸು ಮಾತ್ರ ತುಂಬಾ ದೊಡ್ಡದು. ಯಾಕೆಂದರೆ ಅಲ್ಲಿ ವಾಸಿಸುತ್ತಿದ್ದ ನಾವು ಬೇರೆ ಬೇರೆ ರಾಜ್ಯ, ಬೇರೆ ಬೇರೆ ಜಿಲ್ಲೇ, ಬೇರೆ ಬೇರೆ ಜಾತಿ, ಬೇರೆ ಬೇರೆ ಧರ್ಮದ ಹುಡುಗರು ಇದ್ದೆವು. ಯಾರನ್ನೂ ಕೂಡ ಪ್ರತ್ಯೇಕವಾಗಿ ನೋಡುತ್ತಿರಲಿಲ್ಲ. ಎಲ್ಲರನ್ನೂ ಒಂದೇ ಸಮವಾಗಿ ಕಾಣುವ ಆ ಬಂಗಲೆ ನಮಗೆ ಮೂಲಭೂತ ಸೌಕರ್ಯಗಳು ನೀಡಿದ್ದು ತುಂಬಾ ಕಡಿಮೆ. ಅದಕ್ಕಾಗಿಯೇ ನಾವು ಆ ದಿನ ಐಕ್ಯತೆಯಿಂದ ಇದ್ದೇವು ಅನಿಸುತ್ತದೆ. ವಸತಿ ಏನೋ ಕೊಟ್ಟಿದ್ದರು, ಆದರೆ ಊಟದ ವ್ಯವಸ್ಥೆ ನಾವೇ ಮಾಡಿಕೊಳ್ಳಬೇಕಿತ್ತು. ಬಿಡಿಗಾಸೂ ಇಲ್ಲದ ನನಗೆ ತಿಂಗಳ ಸಂಬಳ ಸಿಗುವರಿಗೂ ಹೇಗೆ ಹೊಟ್ಟೆಯನ್ನು ಸಂಭಾಳಿಸುವುದು ಎನ್ನುವ ಚಿಂತೆಯಲ್ಲಿದ್ದೆ. ನನಗೆ ತುಂಬಾ ಆತ್ಮೀಯರಾದ ಸ್ನೇಹಿತರು ಒಂದೆರಡು ದಿನ ಊಟದ ವ್ಯವಸ್ಥೆಯನ್ನು ನೋಡಿಕೊಂಡರು. ಅವರು ಕೂಡ ಎಷ್ಟು ದಿವಸ ನೋಡಿಕೊಂಡಾರು? ಹೀಗೆ ಆ ಒಂದು ದಿನ ಕೆಲಸ ಮುಗಿಸಿ ಕಂಪನಿಯ  main gate ನಲ್ಲಿ ಕುಳಿತಿದ್ದೆ. ನನ್ನ ಸಪ್ಪೆ ಮುಖ ನೋಡಿದ security guard ಒಬ್ಬರು ನನ್ನ ವಿಚಾರಿಸಿದಾಗ ಊಟಕ್ಕೆ ನನ್ನ ಹತ್ತಿರ ಹಣ ಇಲ್ಲ ಎಂದು ತಿಳಿಸಿದೆ. ಆಗ ಅವರು ಕಂಪನಿಗೆ ಬಂದ materialsನ ಖಾಲಿ ಬಾಕ್ಸ್ ಅಲ್ಲಿ ಬಿದ್ದಿರುವುದಾಗಿ ತೋರಿಸಿ, ಅವುಗಳನ್ನು ಗುಜರಿಗೆ ಹಾಕು. ಅದರಲ್ಲಿ ಬಂದಂತ ದುಡ್ಡು 50:50 ಎಂದರು. ನನ್ನ ಪಾಲಿಗೆ ಆ ದಿನದಿಂದ ಅವರು ದೇವರಾಗಿದ್ದರು. ನಾನು ಕೆಲಸ ಮುಗಿದ ನಂತರ ಪ್ರತಿದಿನ ರಟ್ಟಿನ ಬಾಕ್ಸ್ ಅನ್ನು ಗುಜರಿಗೆ ಹಾಕಿ ಬಂದ ಹಣದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ. ಒಂದೊಂದು ಸಾರಿ ರಟ್ಟಿನ ಬಾಕ್ಸ್ ಕಡಿಮೆ ಇದ್ದಾಗ ಐದೋ ಹತ್ತೋ ರೂಪಾಯಿ ಬರುವುದು. ಆಗ ನಾನು ಬಿಸ್ಕೆಟ್ ತಿಂದು ಜೀವನ ನಡೆಸಿದ್ದುಂಟು. ಅದೇನೇ ಇರಲಿ ಬಿಡಿ ಇವತ್ತಿಗೂ ಕೂಡ ನಮ್ಮ ಭಾರತ ದೇಶದಲ್ಲಿ ಹಾಗೆ ಬದುಕುವರು ಉಂಟು ಎಂದು ಕೇಳಿದಾಗ ನನಗೆ ಆಶ್ಚರ್ಯವಾಗುವುದಿಲ್ಲ. ಏಕೆಂದರೆ ನಾನು ಕೂಡ ಒಂದಾನೊಂದು ಕಾಲದಲ್ಲಿ ಆಗೆ ಬದುಕಿದ್ದೆ. ಹಾಗಾಗಿ ನನಗೆ ಇದು ಕೌತುಕ ಎನಿಸುವುದಿಲ್ಲ ಎಂದು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇಂತಹ ಹಸಿವಿನ ಕುರಿತು ಸರ್ಕಾರದ ಕಣ್ಣು ತೆರೆಸಬೇಕು ಎಂಬ ಹಂಬಲ ಇವಾಗಲು ಕೂಡ ಇದೆ.        ಹೇಗೋ ಮಾಡಿ ಮೊದಲ ತಿಂಗಳು ಮುಗಿಯಿತು. ಕೈಗೆ ಸಂಬಳ ಬಂದಿತ್ತು. ಮುಖದಲ್ಲಿ ಸ್ವಲ್ಪ ಮಂದಹಾಸ. Company ಯಲ್ಲಿಯೇ ಪರಿಚಿತರಾದ ಸ್ನೇಹಿತರ ಜೊತೆ ಸಂತೋಷದಿಂದ ದಿನ ಕಳೆಯುತ್ತಿದ್ದೆ. ನನಗೂ ಆಗಲೂ ಕೂಡ ಕವಿತೆ ಬರೆಯುವ ಹುಚ್ಚಿತ್ತು. ದೊಡ್ಡ ದೊಡ್ಡ ಕವಿತೆ ಅಲ್ಲದಿದ್ದರೂ ಚಿಕ್ಕ ಚಿಕ್ಕ ಸಾಲುಗಳನ್ನು ಬರೆಯುತ್ತಾ ಎಲ್ಲರನ್ನೂ impression ಮಾಡುತ್ತಿದ್ದೆ. ಆಗ  companyಯಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳು ಮತ್ತು ಹುಡುಗರು ನನ್ನ ತುಂಬಾ ಇಷ್ಟ ಪಡುತ್ತಿದ್ದರು. ಆಗ ನನಗೆ ಪರಿಚಿತವಾದ ಕೆಲವೊಂದು ಹುಡುಗಿಯರೆಂದರೆ ಶಾಂತಿ, ಆಶಾ, ಜ್ಯೋತಿ ಇವರೆಲ್ಲಾ ಇನ್ನೂ ಹರೆಯದ ಹುಡುಗಿಯರು. ಕಮಲ, ಸುಜಾತ ಇವರು ಮದುವೆಯಾದ ಆಂಟಿಯರು. ಇವರನ್ನೇ ನಾನು ಯಾಕೆ ಇಲ್ಲಿ ಹೇಳುತ್ತೇನೆ ಎಂದರೆ ಇವರದ್ದೆಲ್ಲಾ ಒಂದೊಂದು ಕಥೆ ಉಂಟು.            ನಮ್ಮ ಬಂಗಲೆಯಲ್ಲಿದ್ದಿದ್ದು ನಾವೆಲ್ಲ  bachelors. ನಾವ್ಯಾರು ಅಡುಗೆ ಮಾಡಿಕೊಳ್ಳುತ್ತಿರಲಿಲ್ಲ. ಅಡುಗೆ ಮಾಡಿಕೊಳ್ಳಲು ಆ ಬಂಗಲೆಯಲ್ಲಿ ಅಡುಗೆಮನೆಯ ವ್ಯವಸ್ಥೆಯೇ ಇರಲಿಲ್ಲ. ಸರಿಯಾಗಿ bathroom ಮತ್ತು toilet ಇಲ್ಲದ ಬಂಗಲೆಯಲ್ಲಿ ಅಡುಗೆಮನೆ ಎಂಬುದು ಕನಸಿನ ಮಾತೇ ಎಂದೇ ಹೇಳಬಹುದು. ಇನ್ನೂ ಮಳೆಗಾಲ ಬಂತೆಂದರೆ ಸಾಕು ಮಳೆರಾಯ ನಮ್ಮನ್ನೆಲ್ಲ ಮುತ್ತಿಕ್ಕಿಬಿಡುತ್ತಿದ್ದ.‌ ಅಂತದ್ರಲ್ಲಿ ನಾವು ಎಲ್ಲಿಂದ ಅಡುಗೆ ಮಾಡಿಕೊಳ್ಳುವುದು? ಹಾಗಾಗಿ ನಮ್ಮ ದಿನನಿತ್ಯದ ಊಟ ಹೋಟೆಲ್ಗಳಲ್ಲಿಯೇ ಸಾಗುತ್ತಿತ್ತು. ಇಲ್ಲ ಕಂಪನಿ ಕೊಡುವ pocket ಆಹಾರದಲ್ಲಿಯೇ ಮುಗಿದುಬಿಡುತ್ತಿತ್ತು. ಇದೆಲ್ಲದರ ನಡುವೆ ಆಶಾ ಮತ್ತೆ ಜ್ಯೋತಿ ಎಂಬ ಹುಡುಗಿಯರು ಒಂದು business ಶುರು ಮಾಡಿಕೊಂಡಿದ್ದರು. Business ಅಂದ ತಕ್ಷಣ ನಿಮ್ಮ mindನಲ್ಲಿ ಏನೇನೋ ವಿಚಾರಗಳು ಓಡಾಡುವುದು ಬೇಡ. ಯಾಕಂದ್ರೆ ನೀವು ತಿಳಿದುಕೊಂಡಿರತಕ್ಕಂತ business ಅಂತದ್ದೇನಿಲ್ಲ.        ಕೆಲಸದ ಮಧ್ಯೆ tifin ಗೆಂದು ಬಿಡುವು ವಿರುತ್ತದೆ. ಆ ಕಂಪನಿಯ building ತುಂಬಾ ದೊಡ್ಡದು. ಅದರ ಕೆಳಗಿನ ಅಂತಸ್ತಿನಲ್ಲಿ ಸಾವಿರಾರು vehicles ಗಳನ್ನು parking ಮಾಡಿರುತ್ತಾರೆ. ಆ parking ಸ್ಥಳದಲ್ಲಿ ನಾವು ಊಟ ಮತ್ತು ತಿಂಡಿ ಮುಗಿಸುತ್ತಿದ್ದೆವು. ಅಷ್ಟೇ ಏಕೆ ಒಮ್ಮೊಮ್ಮೆ ನಮ್ಮ ಜೊತೆಗೆ ಕೆಲಸ ಮಾಡತಕ್ಕಂತ ladies ಮತ್ತು ಹುಡುಗಿಯರು, vehicle ಗಳ ಮರೆಯಲ್ಲಿ ತಮ್ಮ ಬಟ್ಟೆಗಳನ್ನು ಬದಲಿಸಿ uniform ತೊಟ್ಟು ಕೊಂಡಿದ್ದುಂಟು. ಕನಿಷ್ಠ ಬಟ್ಟೆ ಬದಲಿಸಲು room ಇಲ್ಲದ ನಾವುಗಳು ಕೂಡ ಆ ಒಂದು  big company employees ಎಂದೇಳಿ ಕೊಳ್ಳುವುದಷ್ಟೇ ನಮಗೆ ಹೆಮ್ಮೆ. ಅದಕ್ಕೇನೇ ಇರಬೇಕು ಕಾರ್ಮಿಕರ ಸಂಘಗಳು ಹುಟ್ಟಿಕೊಂಡಿದ್ದು ಅನಿಸುತ್ತದೆ.       ಅದೊಂದು ದಿನ. ತಿಂಡಿ ತಿನ್ನುವ ಸಮಯ. ಕೆಲವು ಹುಡುಗರು ತಿಂಡಿ ತಿನ್ನಲು ಹೊರಗಡೆ ಹೋಗಿದ್ದರು. ಕೆಲವರು parking ಸ್ಥಳದಲ್ಲಿಯೇ ತಿಂಡಿ ತಿನ್ನುತ್ತಿದ್ದರು. ನನಗೆ ಹಸಿವನ್ನು ತಡೆದುಕೊಳ್ಳಲು ಆಗುತ್ತಿರಲಿಲ್ಲ. ನನ್ನ ಜೇಬಿನಲ್ಲಿ ದುಡ್ಡಿಲ್ಲ. ಏನು ಮಾಡುವುದೆಂದು ಯೋಚಿಸುತ್ತಾ….  ಪ್ರಕಾಶನೂ ಕೂಡ ನನ್ನ ಆಗೇ ನಿನ್ನೆ ದುಡ್ಡಿಲ್ಲ ಎಂದು ಹೇಳಿದ್ದ. ಹಾಗಿದ್ದರೆ ಅವನು ಈ ದಿನ ತಿಂಡಿಗೆ ಏನು ಮಾಡುವನು! ಎಂದು ಇಬ್ಬರೂ ಸೇರಿ ಯಾರ ಹತ್ತಿರ ನಾದರೂ ಸಾಲ ಕೇಳೋಣ ಎಂದುಕೊಂಡು  parking ಸ್ಥಳಕ್ಕೆ ಬಂದೆ. ಅಲ್ಲಿ ನೋಡಿದರೆ ಆಶಾ ಮತ್ತು ಪ್ರಕಾಶ ತುಂಬಾ ಸಲಿಗೆಯಿಂದ ಒಬ್ಬರ ಪಕ್ಕದಲ್ಲಿ ಒಬ್ಬರು ಕುಳಿತು ಏನೇನೋ ಮಾತನಾಡುತ್ತಾ ಆಗಾಗ ಕಿಲಕಿಲನೆ ನಗುತ್ತ ತಿಂಡಿ ತಿನ್ನುತ್ತಿದ್ದರು. ಇದನ್ನು ಕಂಡ ನನಗೆ ಅವರ ಪಕ್ಕ ಹೋಗಿ ಮಾತನಾಡಿಸಬೇಕೆಂದು ಅನಿಸಲಿಲ್ಲ. ಪಾಪ ಅವನೋ ಎಲ್ಲಿಂದಲೋ ನನ್ನ ಆಗೆ ಬಂದ ಬಡಪಾಯಿ. ಅವನಾದರೂ ಸುಖವಾಗಿ ತಿನ್ನಲಿ ಎಂದು ಮನಸ್ಸು ಹೇಳುತ್ತಿದ್ದರೆ. ನನ್ನ ತಲೆ ಏನೇನೋ ಯೋಚಿಸುತ್ತಿತ್ತು. ಇದು ಹೀಗೆಯೇ ಪ್ರತಿದಿನ ನಡೆಯುತ್ತಲೇ ಇತ್ತು.         ಮತ್ತೊಂದು ದಿನ.  ನಾನು ಆಶಾ ಮತ್ತು ಪ್ರಕಾಶ ತಿಂಡಿ ತಿನ್ನುವುದನ್ನು ನೋಡುತ್ತ ಕುಳಿತಿದ್ದೆ. ಆ ದಿನ ಪ್ರಕಾಶ ತಿಂಡಿಯನ್ನು ತಿಂದು ಬೇಗನೇ ಹೊರಟು ಹೋದ. ಸ್ವಲ್ಪ  ಹೊತ್ತಿನ ನಂತರ  ಆಶಾಳ ಹತ್ತಿರ ಪ್ರಭು ಕೂಡ ಬಂದು ಕುಳಿತ. ನಾನು ಇವನ್ಯಾಕಪ್ಪಾ ಇವಳ ಹತ್ತಿರ ಹೋದನೆಂದು ಯೋಚಿಸುತ್ತಿರುವಾಗಲೇ ಆಶಾ ತನ್ನ bagನಿಂದ tifin box ಅನ್ನು ತೆಗೆದು ಅವನ ಕೈಗೆ ಕೊಟ್ಟಳು. ಅವನು ಕೂಡ ನಗುನಗುತ್ತಲೇ boxನ್ನು ಬಿಚ್ಚುತ್ತಾ ತಿಂಡಿಯನ್ನು ತಿಂದು ಹೊರಟುಹೋದ. ಸ್ವಲ್ಪ ಹೊತ್ತಿನ ನಂತರ ಆಶಾಳೂ ಕೂಡ ಅಲ್ಲಿಂದ ಹೊರಟು ಹೋದಳು. ನನ್ನ maind ನಲ್ಲಿ ಲೆಕ್ಕಾಚಾರಗಳು ತುಂಬಾ ನಡೆಯಲಿಕ್ಕೆ ಶುರುವಿಟ್ಟುಕೊಂಡವು. ನಾನು ಈ ಮೊದಲು mostly ಪ್ರಕಾಶ ಮತ್ತು ಆಶಾ love ಮಾಡುತ್ತಿರಬಹುದೇನೋ! ಅದಕ್ಕಾಗಿಯೇ ಆಶಾ ಪ್ರಕಾಶನಿಗೆ ಪ್ರತಿದಿನ ತಿಂಡಿ ತಂದುಕೊಡುತ್ತಿದ್ದಳು ಎಂದುಕೊಂಡಿದ್ದೆ. ಆದರೆ ಇವತ್ತು ಪ್ರಭುವಿಗೂ ಕೂಡ ತಿಂಡಿ ಕೊಟ್ಟಿದ್ದರಿಂದ ನನ್ನ ಮನಸ್ಸಿನಲ್ಲಿ ಅವಳ ಬಗ್ಗೆ ಬೇರೆನೆ ಯೋಜನೆಗಳು ಶುರುವಾದವು. ಇವಳೇನು ದ್ರೌಪದಿನ ಇಬ್ಬಿಬ್ಬರನ್ನು love ಮಾಡುತ್ತಿದ್ದಾಳೆ. ಯಪ್ಪಾ ಶಿವನೇ ಇಂಥವರನ್ನೆಲ್ಲ ಆ ದೇವರೇ ಕಾಪಾಡಬೇಕು. ಎಂದು ಯೋಚಿಸುತ್ತಾ ಕುಳಿತಿದ್ದೆ. ಅಷ್ಟರಲ್ಲಿ ಪ್ರಕಾಶ ಬಂದು;   “ಏನೋ ಗಾಳೇರ ಯಾಕೆ ಇಲ್ಲಿ ಕೂತಿದೀಯ, ಟಿಫಿನ್ ಆಯ್ತಾ” ಎಂದಾಗ ನನಗೆ ತಡೆದುಕೊಳ್ಳಲಾಗದೆ,     “ನನಗೆಲ್ಲಿಂದ ಟಿಫಿನಪ್ಪ, ನಿಮಗೇನು ನಿಮ್ಮ ಹುಡುಗಿ ಆಶಾ ಇದ್ದಾಳೆ. ಮನೆಯಿಂದ ನಿಮಗೆ ಬೇಕುಬೇಕಾದದ್ದು ತಂದು ಮಾಡಿಕೊಡುತ್ತಾಳೆ. ಸೌಜನ್ಯಕ್ಕಾದರೂ ಒಂದು ಮಾತು ಕರೆಯುವುದಿಲ್ಲ ಲೋ ಪ್ರಕಾಶ” ಎಂದುಬಿಟ್ಟೆ.      “ಹೇ ಅವಳೇನು ಪುಕ್ಸಟ್ಟೆ ಕೊಡಲ್ಲಪ್ಪ….. ಟಿಫಿನ್ ಗಾಗಿ ತಿಂಗಳ ಸಂಬಳ ಆದಮೇಲೆ ಒಂದು ಟಿಫಿನ್ ಗೆ ಮೂವತ್ತು ರೂಪಾಯಿ ಅಂತ ಲೆಕ್ಕ ಹಾಕಿಕೊಂಡು ಇಸ್ಕೋತಾಳೆ ನಿನಗೆ ಬೇಕಿದ್ರೆ ಹೇಳು ನಾಳೆಯಿಂದ ಇನ್ನೊಂದು box extra ತರಲಿಕ್ಕೆ ಹೇಳತೀನಿ” ಅಂತ ನನ್ನ ಉತ್ತರಕ್ಕೂ ಕಾಯದೆ ಹೊರಟು ಹೋದ.      ನಾನು ಆಶಾ

ಗಾಳೇರ್ ಬಾತ್ Read Post »

ಅಂಕಣ ಸಂಗಾತಿ

ಗಾಳೇರ್ ಬಾತ್

ಅಂಕಣ ಗಾಳೇರ ಬಾತ್-01 ಮೊದಲ ಬಾರಿ ರಾಜಧಾನಿಗೆ….. ಇವತ್ತಿನ ನನ್ನ present situation ನೋಡಿದರೆ ರಾಜಧಾನಿಯ ನನ್ನ ಮೊದಲ ಭೇಟಿ, ಹೀಗೆ ಇತ್ತು ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಅದು ಅಷ್ಟೊಂದು ಭಯಾನಕರೂ ಅಲ್ಲ. ಅದು ಅಷ್ಟೊಂದು ಆನಂದಮಯನೂ ಅಲ್ಲ. ಅದೊಂತರ ವಿಶಿಷ್ಟವಾದ ಬೇಟಿ ಎನ್ನಬಹುದು. ಆದರೆ ಈ ತರದ ಬೇಟಿ ಯಾವ ಮಕ್ಕಳಿಗೂ ಆಗಬಾರದು ಎನ್ನುವುದು ನನ್ನ ಈ ಲೇಖನದ ಆಕಾಂಕ್ಷೆ ಆಗಿದೆ. ನನ್ನ ನೆನಪಿನ ಬುತ್ತಿ ಬಿಚ್ಚಿ ಒಮ್ಮೆ ಹೊರಳಿ ನೋಡಿದಾಗ, ಬೆಂಗಳೂರಿನ ಬೇಟಿ ಏಕೋ ನಿಮ್ಮೆದುರಿಗೆ ಹಂಚಿಕೊಳ್ಳಬೇಕೆನಿಸಿತು. ನಾನು ಆಗ ಸರಿಯಾಗಿ ಪಿಯುಸಿಯನ್ನು ಓದುತ್ತಿದ್ದೆ. ಅದು ಹರಪನಹಳ್ಳಿಯ ಉಜ್ಜೈನಿ ಶ್ರೀ ಜಗದ್ಗುರು ಮಹಾವಿದ್ಯಾಲಯದಲ್ಲಿ. ಕಾಲೇಜಿನಲ್ಲಿ ಬೆರಳು ಮಾಡಿ ತೋರಿಸುವ ವಿದ್ಯಾವಂತರ ಪಟ್ಟಿಯಲ್ಲಿ ನಾನು ಕೂಡ ಒಬ್ಬನು ಎಂದು ಅಂದುಕೊಂಡಿರಲಿಲ್ಲ. ಎಲ್ಲಾ ಗೆಳೆಯರು, ಲೆಕ್ಚರ್ ರು ನಿರ್ಧರಿಸಿ ಆ ಪಟ್ಟ ಕಟ್ಟಿ ಬಿಡುತ್ತಿದ್ದರು. ಇಂದಿಗೂ ಕೂಡ ನನಗೆ ಆ ಪಟ್ಟ ಕಟ್ಟುತ್ತಿದ್ದಾರೆ; ನಾನು ಆ ಪಟ್ಟಕ್ಕೆ ಯೋಗ್ಯನಲ್ಲ ಎಂದು ನನ್ನ ಮನಸ್ಸು ಮಾತ್ರ ಹೇಳುತ್ತದೆ. ಇದನ್ನು ಕೇಳುವವರ್ಯಾರು? ಇರ್ಲಿ ಬಿಡಿ; ವಿಚಾರಕ್ಕೆ ಬರುತೀನಿ. ನಾನು ಆಗ ಪಿಯುಸಿ ಓದುತ್ತಿರುವಾಗ ನಮ್ಮ ಕಾಲೇಜಿನಲ್ಲಿ ಶೈಕ್ಷಣಿಕ ಪ್ರವಾಸ ಏರ್ಪಡಿಸಿದ್ದರು. ನಾನು ಪ್ರವಾಸಕ್ಕೆ ಹೋಗಲು ನನ್ನ ತಂದೆ ತಾಯಿಯನ್ನು ಕೇಳಲು ಊರಿಗೆ ಹೋದೆ. ಊರಿಗೆ ಹೋಗಿ ನನ್ನ ತಂದೆಗೆ ಕೇಳಿದೆ! “ಅಪ್ಪ ಕಾಲೇಜಿನಲ್ಲಿ ಟೂರ್ ಕರ್ಕೊಂಡು ಹೋಗ್ತಿದ್ದಾರೆ, ನಾನು ಹೋಗ್ತೀನಿ ಅಂತ”. ಆಗ ನಮ್ಮ ತಂದೆ ನಮ್ಮ ಮಾವನಿಗೆ ಕೇಳಿದ. ನನ್ನ ಮಾವ ಎಂದರೆ ನಮ್ಮ ಸೋದರತ್ತೆಯ ಗಂಡ. ಅವರು ಪ್ರೈಮರಿ ಸ್ಕೂಲ್ ಟೀಚರ್. ಅವರಾಡಿದ ಆ ಮಾತು ನನ್ನ ಅಪ್ಪನಿಗೆ ಮತ್ತು ಅವರಿಗೆ ಇಂದಿಗೆ ಅದು ನೆನಪಿದೆಯೋ ಇಲ್ಲವೋ ಗೊತ್ತಿಲ್ಲ! ಆದರೆ ಆ ಮಾತು ನನ್ನ life ನಲ್ಲಿ ಇಂದಿಗೂ ಪ್ರತಿಧ್ವನಿಸುತ್ತಲೇ ಇರುತ್ತದೆ. ಅದೇನಪ್ಪಾ ಅಂತ ಕೇಳ್ತೀರಾ! ಕೇಳಿ ಪರವಾಗಿಲ್ಲ ,ಏಕೆಂದರೆ ಈ ಮಾತು ನೀವು ಮುಂದೆ ನಿಮ್ಮ ಮಕ್ಕಳಿಗೆ ಯಾವತ್ತು ಹೇಳಬಾರದೆಂದು ನಾನು ಈ ಲೇಖನ ಬರೆಯುತ್ತಿದ್ದೇನೆ. ನನ್ನ ಅಪ್ಪ “ಏನ್ ಮಾವ, ಮೂಗ ಕಾಲೇಜಲ್ಲಿ ಟೂರ್ ಗೆ ಹೋಗುತ್ತಾನಂತೆ ಕಳಿಸಬೇಕಾ!” ಆಗ ನನ್ನ ಮಾವ “ಹಾಗೇನಿಲ್ಲ ಮಾರಾಯ, ನಾವೆಲ್ಲಾ ಕಾಲೇಜಲ್ಲಿ ಟೂರ್ ಹೋಗಿ ಮೇಷ್ಟ್ರಾಗಿ ವೇನು? ಮುಂದಿನ ವರ್ಷ ಹೋದ್ರೆ ನಡೆಯುತ್ತೆದೆ ತಗೋ”. ನಮ್ಮ ಹಗರಿಬೊಮ್ಮನಹಳ್ಳಿ ಪಟ್ಟಣ ಬಿಟ್ಟರೆ ಬೇರೆ ಯಾವ ಚಿಕ್ಕ ಹಳ್ಳಿಗೂ ಪ್ರಯಾಣ ಬೆಳೆಸದ ನನ್ನಪ್ಪನಿಗೆ ಈ ಮಾತು ಸಾಕಿತ್ತೇನು. “ಬೇಡಪ ಮುಂದಿನ ವರ್ಷ ಹೋಗಬಹುದಂತೆಲ್ಲಾ, ಈ ವರ್ಷ ಹೋದ್ರೆ ಮುಂದಿನ ವರ್ಷನೂ ಹೋಗಬೇಕಂತಿಲ್ಲ ! ಅದಲ್ಲದೆ ಟೂರ್ ಏನು compulsory ಅಲ್ವಂತೆಲ್ಲಾ!” ಎಂದಾಗ ನನ್ನ ಕನಸಿಗೆ ಒಂದು ಗಳಿಗೆ ಬೆಂಕಿ ಇಟ್ಟಂಗಾಯಿತು. ಸುಧಾರಿಸಿಕೊಂಡು ಹರಪನಹಳ್ಳಿಗೆ ಬಂದು ರೂಮ್ ಲಿ ಯೋಚಿಸುತ್ತಾ ಕೂತಿದ್ದೆ.ಆಗ ನನಗೆ ನೆನಪಿಗೆ ಬಂದಿದ್ದು ನನ್ನ ಗೆಳೆಯನೊಬ್ಬ ಬೆಂಗಳೂರಿನಲ್ಲಿ ಇದ್ದಿದ್ದು, ಅವನು ಯಾವುದೋ ಹೋಟೆಲಿನಲ್ಲಿ ಕೆಲಸ ಮಾಡುತ್ತಾನೆ ಎಂದು ಕೇಳಲು ಪಟ್ಟಿದ್ದೆ. ಹಾಗೋ ಹೀಗೂ ಮಾಡಿ ಅವನ ನಂಬರನ್ನು collect ಮಾಡಿ ಅವನಿಗೆ ಫೋನಾಯಿಸಿದೆ. “ಮಗಾ, ಕಾಲೇಜಲ್ಲಿ ಟೂರ್ ಕರ್ಕೊಂಡು ಹೋಗ್ತಾರೆ ಕಣೋ, ಮನೆಯಲ್ಲಿ ಟೂರ್ ಗೆ ಕಳಿಸ್ತಾ ಇಲ್ಲ. 15days ಕೆಲಸ ಇದ್ರೆ ನೋಡು. ನನಗೆ ಟೂರ್ಗೆ ದುಡ್ಡು ಬೇಕಿದೆ” ಈ ಮಾತಿಗೆ ಸ್ಪಂದಿಸಿದ ನನ್ನ ಗೆಳೆಯ ಆಯ್ತು ಬಾ ಎಂದು ಹೇಳಿದ. ಆಗ ನಾನು ಬೆಂಗಳೂರಿಗೆ ಹೋಗಲು ನನ್ನ ಹತ್ತಿರ ಹಣವಿರಲಿಲ್ಲ. ಹೇಗೆ ಆರೆಂಜ್ ಮಾಡುವುದು ಎಂದು ಚಿಂತಿತನಾದ ನನಗೆ ಆಗ ತೋಚಿದ್ದು. ನನ್ನಪ್ಪ ಕೊಡಿಸಿದ ಟ್ರಂಕ್ ಮತ್ತು ಪುಸ್ತಕ! ಇವುಗಳನ್ನು ಗುಜುರಿಗೆ ಹಾಕಿದರೆ ಬೆಂಗಳೂರಿಗೆ ಹೋಗಲು ಟ್ರೈನ್ ಚಾರ್ಜ್ ಆಗುತ್ತದೆ ಎಂದು ಎನಿಸಿದೆ. ಟ್ರಂಕನ್ನು ಕಲ್ಲಿನಿಂದ ಕುಟ್ಟಿ ನುಜ್ಜುಗುಜ್ಜು ಮಾಡಿ ಗುಜರಿಗೆ ಹಾಕಿದೆ. ಅದರಿಂದ ಸಿಕ್ಕಿದ್ದು ಕೇವಲ 58 ರೂಪಾಯಿ. ಅದನ್ನು ಕಿಸೆಯಲ್ಲಿಟ್ಟುಕೊಂಡು, ಬಸ್ಸಿಗೆ ಹೋದರೆ ಬಸ್ ಚಾರ್ಜ್ ಜಾಸ್ತಿಯಾಗುತ್ತದೆ ಎಂದು ಲಾರಿಗೆ ಹತ್ತಿದೆ. ಹರಪನಹಳ್ಳಿಯಿಂದ ಹರಿಹರಕ್ಕೆ ಆಗ ನಾನು ಲಾರಿಗೆ ಕೊಟ್ಟಿದ್ದು ಹತ್ತು ರೂಪಾಯಿ, ಘಟನೆ ಇಂದಿಗೂ ನನ್ನ ಬದುಕಿನಲ್ಲಿ ಅಚ್ಚಳಿಯದೆ ಉಳಿದಿದೆ. ಇನ್ನು ಉಳಿದಿದ್ದು 48 ರೂಪಾಯಿ. ಆಗಲೇ ಅಷ್ಟು ಹೊತ್ತಿಗೆ ಸೂರ್ಯ ನೆತ್ತಿಯ ಮೇಲಿಂದ ಕೆಳಗಿಳಿಯುತ್ತಿದ್ದ. ನನ್ನ ಹೊಟ್ಟೆ ಹಸಿವಿನಿಂದ ವಿಲವಿಲ ಅನ್ನುತ್ತಿತ್ತು. ಕೈಯಲ್ಲಿದ್ದ ಬಿಡಿಗಾಸು ಟ್ರೈನ್ ಚಾರ್ಜ್ ಗಿತ್ತು. ಹಸಿವು ಯಾವುದನ್ನು ಕೇಳುವುದಿಲ್ಲ. ಆದ್ದರಿಂದ ಅಲ್ಲೇ ಪುಟ್ಬಾತ್ ಅಲ್ಲಿದ್ದ, ಒಂದು ಎಗ್ ರೈಸ್ ಅಂಗಡಿಯಲ್ಲಿ ಆಪರೇಟ್ ತಿಂದೆ. ಇನ್ನು ಉಳಿದಿದ್ದು 38 ರೂಪಾಯಿ. ಇನ್ನು ನನಗೆ ಸರಿಯಾಗಿ ನೆನಪಿದೆ ಆಗ ಹರಿಹರ ದಿಂದ ಬೆಂಗಳೂರಿಗೆ 47 ರೂಪಾಯಿ ಟ್ರೈನ್ ಟಿಕೆಟ್ ಇತ್ತು. ನನ್ನಲ್ಲಿದ್ದ 38ರೂಪಾಯಿ. ಏನ್ ಮಾಡುವುದು ಎಂದು ನನ್ನ ಸ್ನೇಹಿತನಿಗೆ ಫೋನ್ ಹಚ್ಚಿದೆ. ಅವನು ಒಂದು ಬಿಟ್ಟಿ ಸಲಹೆ ನೀಡಿದ. “ಮಗ ಜನರಲ್ ಬೋಗಿಯೊಳಗೆ ಹತ್ತಿಗೋ, ಅಲ್ಲಿ ಯಾರೂ ಬರೋದಿಲ್ಲ ಚೆಕ್ ಮಾಡಲಿಕ್ಕೆ” ಈ ಮಾತೊಂದೇ ಸಾಕಾಗಿತ್ತು ನನಗೆ. ನಾನು ಅಲ್ಲಿಯವರೆಗೂ ಟ್ರೈನನ್ನು ಯಾವತ್ತೂ ನೋಡಿರಲಿಲ್ಲ. ಬೆಂಗಳೂರು ಯಾವ ಇದೆ ದಿಕ್ಕಿಗೆ ಬರುತ್ತದೆ ಎಂಬ ಊಹೆಯೂ ಕೂಡ ನನಗಿರಲಿಲ್ಲ. ಕಿಕ್ಕಿರಿದ ಜನ, ಇಷ್ಟೊಂದು ಜನ ನಾನು ನೋಡಿದ್ದು ನಮ್ಮ ಊರಿನ ಜಾತ್ರೆಯಲ್ಲಿ. ನನಗೆ ಆಶ್ಚರ್ಯ ಕುತೂಹಲ ಎರಡು ಆಗುತ್ತಿತ್ತು. ಏಕೆಂದರೆ ನಾನು ಅಲ್ಲಿವರೆಗೆ ನೋಡಿದ್ದು ರೈಲನ್ನು ಪೇಪರ್ನಲ್ಲಿ ಟಿವಿಯಲ್ಲಿ. ಈಗ ಸ್ವತಃ ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದೇನೆ ಎಂಬ ರೋಮಾಂಚನ ನನ್ನದಾಗಿರಲಿಲ್ಲ. ಯಾಕೆಂದರೆ ನನ್ನ ಪ್ರಯಾಣದ ಸ್ಥಿತಿ ಕಂಡರೆ ನಿಮಗೆ ತಿಳಿಯದೆ ಇರದು. ರಾತ್ರಿ ಸರಿಯಾಗಿ 9:30 ಗಡಿಯನ್ನು ದಾಟಿ ಗಡಿಯಾರ ಮುನ್ನುಗ್ಗುತ್ತಿತ್ತು. ಯಾರೋ ಒಬ್ಬರು ಬೆಂಗಳೂರಿಗೆ ಹೊರಡಲು ಟಿಕೆಟ್ ತಗೊಂಡರು. ನಾನು ಆಗ ಇವರ ಹಿಂದೆ ಹೋದರೆ ನಾನು ಬೆಂಗಳೂರು ತಲುಪಬಹುದು ಎಂದು ಅವರು ಹೋದ ಕಡೆಯಲ್ಲೆಲ್ಲ ಹೋಗುತ್ತಿದ್ದೆ. ಅವರಿಗೆ ಯಾವುದೇ ರೀತಿಯ ಅನುಮಾನ ಬರದಹಾಗೆ ಅವರ ಹಿಂದೆ ಹಿಂದೆಯೇ ಸುತ್ತುತ್ತಿದ್ದೆ. ಕೊನೆಗೆ ರೈಲುಗಾಡಿ ಬಂದಾಗ ಅವರು ಹತ್ತಿದ ಬೋಗಿಯಲ್ಲಿ ಹತ್ತಿ ಗೆಳೆಯ ಹೇಳಿದಾಗೆ ಸೀಟಿನ ಅಡಿಯಲ್ಲಿ ಮಲಗಿದೆ. ರೈಲು ಯಾವಾಗ ಮತ್ತೆ ಚೆಲುವಾಯಿತೋ, ಯಾವ ಯಾವ ಪಟ್ಟಣಗಳನ್ನು ಹಾದುಹೋಯಿತೋ ಒಂದು ತಿಳಿಯಲಿಲ್ಲ. ಅಷ್ಟೊಂದು ಜನಗಳ ಮಧ್ಯೆ ಅದು ಯಾವಾಗ ನಿದ್ರೆ ದೇವತೆ ಆಕ್ರಮಿಸಿದ್ದಳೋ ಗೊತ್ತೆ ಆಗಲಿಲ್ಲ. ಪುನಃ ಕಣ್ಣು ತೆರೆಯುವಷ್ಟರಲ್ಲಿ ಜನಗಳು ತಾನು ಮುಂದು ನಾನು ಮುಂದು ಎಂದು ನುಗ್ಗುತ್ತ ಕೆಳಗಿಳಿಯುತಿದ್ದರು. ಯಾರನ್ನೋ ಕೇಳಿದೆ ಇದು ಬೆಂಗಳೂರಾ ಸರ್ ಅಂತ. ಹೌದಪ್ಪ ನೀನು ಎಲ್ಲಿ ಹೋಗಬೇಕು ಅಂತ ಕೇಳಿದರು. ಆಗ ನನಗೆ ನೆನಪಾಗಿದ್ದು ನನ್ನ ಗೆಳೆಯ . ಅವನಿಗೆ ಫೋನ್ ಮಾಡಲು ಬರೆದಿಟ್ಟು ಕೊಂಡ ಅವನ‌ ನಂಬರನ್ನು ಕಿಸೆಯಲ್ಲಿ ಹುಡುಕಿದೆ. ಅದು ನಾನು ಮಲಗಿದ ಬೋಗಿಯಲ್ಲಿಯೇ ಉದುರಿ ಹೋಗಿದ್ದು ನನಗೆ ಗೊತ್ತೇ ಆಗಲಿಲ್ಲ. ಆಗ ನನಗೆ ದಿಕ್ಕೇ ತೋಚದಾಯ್ತು. ಎಲ್ಲರೂ ಇಳಿದ ಅದೇ ಜಾಗದಲ್ಲಿ ನಾನು ಇಳಿದೆ. ಚಿಕ್ಕ ಪಟ್ಟಣವನ್ನು ನೋಡದ ನಾನು ಬೃಹತ್ ಬೆಂಗಳೂರು ನಗರವನ್ನು ನೋಡಿ ನಿಬ್ಬೆರಗಾಗಿದ್ದೆ. ಎಲ್ಲಿ ನೋಡಿದರೂ ಕಿಕ್ಕಿರಿದ ಜನ. ಆದರೆ ಒಬ್ಬರಿಗೊಬ್ಬರು ಸಂಬಂಧವಿಲ್ಲದಂತೆ ಓಡಾಡುತ್ತಿದ್ದಾರೆ. ಈಗಲೂ ಹಾಗೇನೇ ಓಡಾಡುತ್ತಿದ್ದಾರೆ, ಯಾಕೆ ಹೀಗೆ ಓಡಾಡುತ್ತಿದ್ದಾರೆ ಎನ್ನುವುದು ಈಗಲೂ ಕೂಡ ನನಗೆ ಬೆಂಗಳೂರಿನ ಜನರ ಬದುಕು ಒಗಟಾಗಿ ಉಳಿದಿದೆ. ಕಿಸೆಯಲ್ಲಿ ಕೈ ಹಾಕಿದೆ. 38 ರೂಪಾಯಿ ಇತ್ತು. ನನಗೆ ಆ ವಯಸ್ಸಿನಲ್ಲಿ newspaper ಓದುವುದು ಒಂದು ಚಟವಾಗಿ ಬಿಟ್ಟಿತ್ತು. ಎರಡು ರೂಪಾಯಿ ಕೊಟ್ಟು ಪ್ರಜಾವಾಣಿ ಪತ್ರಿಕೆ ತೆಗೆದುಕೊಂಡು. ಸಿಕ್ಕಸಿಕ್ಕ ಬೆಂಗಳೂರಿನ ದಾರಿಯುದ್ದಕ್ಕೂ ನಡೆದುಕೊಂಡು ಹೋದೆ. ಅಲ್ಲಲ್ಲಿ ಸಿಗುವ ಪಾರ್ಕುಗಳಲ್ಲಿ ಸ್ವಲ್ಪ ಸ್ವಲ್ಪ ವಿಶ್ರಾಂತಿ ಮಾಡಿ ಪೇಪರ್ ಅಲ್ಲಿರುವ ವಿಚಾರಗಳನ್ನು ಓದುತ್ತಾ ಟೈಮ್ ಪಾಸು ಮಾಡಿದೆ. ಉಳಿದ ದುಡ್ಡಲ್ಲಿ ಆ ದಿನದ ನನ್ನ ಊಟ-ಉಪಚಾರ ವಾಯಿತು. ಇನ್ನು ಕೈಯಲ್ಲಿ ಕಾಸಿಲ್ಲ. ಮಲಗಲು ಮನೆಯಿಲ್ಲ. ನನಗೆ ಆಗಿನ್ನೂ 16 ವರ್ಷ. ಬೆಂಗಳೂರಿನಲ್ಲಿ ನೆಂಟರಿಲ್ಲ, ಗೆಳೆಯರಿಲ್ಲ. ಸೂರ್ಯ ನೋಡಿದರೆ ಆಗಲೇ ಮನೆ ಸೇರಿದ್ದ. ಏನು ಮಾಡುವುದೆಂದು ತೋಚದೆ ಪುನಃ ರೈಲ್ವೆ ಸ್ಟೇಷನ್ ಹತ್ತಿರ ಬಂದೆ. ಮತ್ತೆ ಊರಿಗೆ ಹೋಗೋಣ ಎಂದರೆ ಟ್ರೈನ್ ಆಗಲೇ ಹೊರಟಾಗಿತ್ತು. ಆ ರಾತ್ರಿ ಹೇಗೆ ಕಳೆಯುವುದೆಂದು ನಾನು ಚಿಂತಿಸುತ್ತಾ ಕಂಡಕಂಡ ಒಂಟಿ ಬೆಂಚಿನ ಮೇಲೆ ಕೂತು ಕಾಲಹರಣ ಮಾಡಿದೆ. ರಾತ್ರಿ ಹನ್ನೆರಡರ ಸಮಯ ಪೊಲೀಸ್ ಪೇದೆಯೊಬ್ಬ ಇಲ್ಲಿ ಏನು ಮಾಡುತ್ತಿದ್ದೀಯಾ ಹೊರಡು ಎಂದು ತನ್ನ ಲಾಟಿಯಾ ರುಚಿಯನ್ನು ತೋರಿಸಿದ. ಆ ಕತ್ತಲೆಯಲ್ಲಿ ಪುನಃ ಬೇರೊಂದು ದಾರಿ ಹಿಡಿದು ಸಾಗಿದೆ. ಅದೊಂದು ಯಾವುದೋ ಸರ್ಕಾರಿ ಬಂಗಲೆ, ಅಲ್ಲಿ ಒಂದು ದೊಡ್ಡದಾದ ಕಾಂಪೌಂಡ್. ಆ ಕಾಂಪೌಂಡ್ ಒಳಗೆ ಹಾರಿ, ಕಾಂಪೌಂಡ್ ಬದಿಯಲ್ಲೇ ಸೊಳ್ಳೆಗಳ ಜೊತೆಗೆ ನನ್ನ ಆ ದಿನದ ಬೆಂಗಳೂರಿನ ರಾತ್ರಿ ಕಳೆದೆ. ಆಗಲಿಲ್ಲ ನಡೆದು ನಡೆದು ಸುಸ್ತಾಗಿದ್ದರಿಂದ, ಅದು ಯಾವಾಗ ನಿದ್ರೆ ದೇವತೆ ಬಂದು ಆಕ್ರಮಿಸಿಕೊಂಡಳೋ ಗೊತ್ತೇ ಹಗಲಿಲ್ಲ. ಕಣ್ಣು ತೆರೆದು ನೋಡಿದಾಗ ಬೆಳಕರಿದಿತ್ತು. ಎದ್ದು ಕಣ್ಣುಜ್ಜಿಕೊಂಡು ಕಾಂಪೌಂಡ್ ಮೇಲೆ ಹತ್ತಿ ಕೂತೆ. ಏನು ಮಾಡುವುದೆಂದು ತೋಚದೆ ಇದ್ದಾಗ, ಒಬ್ಬ ಬ್ರೋಕರ್ ಬಂದು ಹೋಟೆಲಲ್ಲಿ ಕೆಲ್ಸ ಇದೆ ಕೆಲಸಕ್ಕೆ ಬರ್ತೀಯಾ ಎಂದು ಕೇಳಿದಾಗ ನನಗೆ ಆಗ ಆದ ಆನಂದ ಅಷ್ಟಿಷ್ಟಲ್ಲ. ಹಸಿವನ್ನು ತಾಳದೆ ನಾನು ಅವನ ಹಿಂದೆ ಹೆಜ್ಜೆ ಇಟ್ಟೆ………. ಇಷ್ಟಾದ ಮೇಲೆ ನಾನು ದುಡಿದುಕೊಂಡು ಕಾಲೇಜಿಗೆ ಹೋಗಿ ಟೂರ್ ಹೋಗಿದ್ದೇನೆಂದು ಭಾವಿಸಿದ್ದರೇ ಅದು ನಿಮ್ಮ ತಪ್ಪು ಕಲ್ಪನೆ. ಮುಂದೇನಾಯಿತು ಎಂದು ನನ್ನ ಇನ್ನೊಂದು ಲೇಖನದಲ್ಲಿ ಹೇಳುತ್ತೇನೆ. ಈ ಲೇಖನ ನಿಮಗೆ ಅರ್ಥವಾದಲ್ಲಿ ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ನಂಬಿರುವೆ. ********* ಮೂಗಪ್ಪ ಗಾಳೇರ

ಗಾಳೇರ್ ಬಾತ್ Read Post »

ಅಂಕಣ ಸಂಗಾತಿ

ಗಝಲ್ ಲೋಕ

ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ. ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ ಗಝಲ್ ಲೋಕ ಏಳನೇ ಅದ್ಯಾಯ ಕನ್ನಡ ಗಜಲ್ ಅಲ್ಲಿ ಉರ್ದು ಪದ ಬಳಕೆ ಕೆಲವೊಂದು ಗಜಲಗಳನ್ನು ಓದಿರುತ್ತೀರಿ… ಅವು ಹೇಗಿರುತ್ತವೆ ಎಂದರೆ ಮೊಹಬ್ಬತ್ತ, ಗೋರಿ, ಜಿಂದಾ,ಜಿಂದಗಿ, ಇಷ್ಕ, ಅವಾಜ್, ಪಿರ್, ಮುದ್ದಾಮ, ಖುದಾ, ಹಕಿಕತ್ ಮೊದಲಾದ ಉರ್ದು ಪದಗಳು ಆ ಕನ್ನಡದ ಗಜಲ್ ಅಲ್ಲಿ ಅಲ್ಲಲ್ಲಿ ನುಸುಳಿರುತ್ತವೆ. ಹೀಗೆ ಉರ್ದು ಮಿಶ್ರಿತ ಗಜಲ್ ಬರೀತಾ ಇದ್ದಿದ್ದು ಆರಂಭದಲ್ಲಿ ಒಬ್ಬರೇ ಖ್ಯಾತ ಗಜಲಕಾರರು. ಈಗ ನೋಡಿದರೆ ಅದೇ ರೀತಿಯ ಗಜಲ್ ಬರೆಯುತ್ತಿರುವವರು ನಮಗೆ ಹತ್ತು ಹನ್ನೆರಡು ಜನ ಸಿಗತಾರೆ, ಈ ಸಂಖ್ಯೆ ಇನ್ನೂ ಹೆಚ್ಚಾದರೂ ಸಹ ಹೆಚ್ಚಾಗಬಹುದು ಮತ್ತು ಅವರಲ್ಲಿ ಬಹುತೇಕರು ಇತ್ತೀಚೆಗೆ ಗಜಲ್ ಬರೆಯಲು ಆರಂಭಿಸಿದವರೇ ಆಗಿದ್ದಾರೆ. ಹಾಗಾದರೆ ಕನ್ನಡ ಗಜಲ್ ಅಲ್ಲಿ ಕೆಲವು ಉರ್ದು ಪದಗಳ ಬಳಕೆ ಸೂಕ್ತವೇ ಎಂಬುದು ತುಂಬಾ ಉದಯೋನ್ಮುಖ ಬರಹಗಾರರ ಪ್ರಶ್ನೆ ಆಗಿದೆ. ಈ ವಿಷಯದ ಉತ್ತರ ಮತ್ತು ಸಾಹಿತ್ಯದಲ್ಲಿ ಹೀಗೆ ಅನ್ಯಭಾಷೆಯ ಪದ ಬಳಕೆಯ ಅರಿವಿದ್ದೂ ನನಗೆ ಆ ಸ್ಪಷ್ಟವಾಗಿದ್ದರೂ ಇದನ್ನು ಹಲವಾರು ಖ್ಯಾತ ಗಜಲಕಾರರ ಬಳಿ ಪ್ರಶ್ನಿಸಿ ಚರ್ಚಿಸಿ ಅವರ ಅಭಿಪ್ರಾಯವನ್ನು ಸಹ ತಿಳಿದು ಸಂತಸವಾಯಿತು ಮತ್ತು ಅದೇ ಸಮಯಕ್ಕೆ ಇಂತಹ ಪದ ಬಳಕೆಯ ಬಗ್ಗೆಯೂ ಸಹ ತುಂಬಾ ಬರಹಗಾರರು ತಮ್ಮ ಬೇಜಾರನ್ನು ವ್ಯಕ್ತಪಡಿಸಿದರು. ಅದೊಂದು ವಿಭಿನ್ನ ಪ್ರಯೋಗವೇ? ಇದರ ವಿಷಯ ಇಷ್ಟೇ, ಇಂತಹ ಬೆಳವಣಿಗೆಗೆ ಕಾರಣ ಏನೆಂದರೆ ಮೊದಮೊದಲು ಹಾಗೆ ಗಜಲ್ ಬರೆಯುತ್ತಿದ್ದ ಆ ಖ್ಯಾತನಾಮರ ಗಜಲ್ ಓದುತ್ತಿದ್ದ ಬರಹಗಾರರು ಓದುತ್ತಾ ಹೋದಂತೆ ಅಂತಹ ಪದ ಬಳಕೆಯ ಕಡೆ ಶುರುವಾದ ಕುತೂಹಲ ಆಕರ್ಷಣೆಯಾಗಿ ಮಾರ್ಪಾಟ್ಟು ಏನೋ ಒಂಥರಾ ಚೆನ್ನಾಗಿ ಇದೆ ಅಲ್ವಾ, ವಿಭಿನ್ನ ಪ್ರಯೋಗ ಎಂದೆನಿಸಿ ನಾವು ಯಾಕೆ ಹಾಗೆ ಬರೆಯಬಾರದು ಅಂದುಕೊಂಡು ಬರೆಯತೊಡಗಿದ್ದಾರೆ. ಇನ್ನೂ ಕೆಲವರು ಹಾಗೆ ಉರ್ದು ಪದಗಳನ್ನು ಬಳಸುವುದೇ ಗಜಲ್ ಎಂದು ಮತ್ತು ಅದೇ ಅದರ ಲಕ್ಷಣ, ಹಾಗೆ ಬರೆಯುವುದೇ ಶ್ರೇಷ್ಠ ಎನ್ನುವ ಭ್ರಮೆಗೊಳಗಾಗಿದ್ದಾರೆ. ಇದಕ್ಕಾಗಿ ಹಿಂದಿ, ಉರ್ದು ಬಾರದಿದ್ದರೂ ಸಹ ಎಲ್ಲೆಲ್ಲಿಂದಲೋ ಯಾವುದೋ ಪದಗಳನ್ನು ಹೆಕ್ಕಿ ತಂದು ಅಲ್ಲಿ ಒಂದು ಕನ್ನಡ ಪದದ ಬದಲಾಗಿ ಇದನ್ನು ತೂರಿಸಿ ಬಿಡುತ್ತಾರೆ. ಹೀಗೆ ಮಾಡಿದ ತಕ್ಷಣ ಆ ಗಜಲ್ ತನ್ನ ಕಾವ್ಯಾತ್ಮಕ ಗುಣಗಳನ್ನು ಕಳೆದುಕೊಳ್ಳುತ್ತದೆ ಎನ್ನುವುದೇ ಅವರಿಗೆ ಗೊತ್ತಿರುವುದಿಲ್ಲ. ಇಂತಹ ಪದಗಳನ್ನು ತೂರಿಸಿರುವುದಲ್ಲದೆ ಆ ಉರ್ದು ಪದಗಳ ಅರ್ಥವನ್ನು ಗಜಲನ ಕೊನೆಯಲ್ಲಿ ಕೆಲವರು ನೀಡಿರುತ್ತಾರೆ. ಅಲ್ಲಿಗೆ ಈ ವಿಷಯ ಸ್ಪಷ್ಟವಾಗುತ್ತೆ ಶಿವಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ ಅಭಾಸವಾಗುವ ಅಸಂಗತ ಪದಗಳನ್ನು ತುರುಕಿಸಲಾಗಿದೆ ಎನ್ನುವುದೇ ಅಲ್ಲಿ ಪರೋಕ್ಷ ವಿವರಣೆ ಆಗಿರುತ್ತದೆ. ಹಾಗಿದ್ದರೆ ಈ ತರಹ ಬಳಸುವುದು ಸರಿಯಾದ ಕ್ರಮ ಅಲ್ಲವೇ ಎನ್ನುವ ನಿಮ್ಮ ಪ್ರಶ್ನೆಗೆ ಹೌದು, ಅದು ಖಂಡಿತ ಸಲ್ಲದು ಎನ್ನುವುದೇ ಸಾಹಿತ್ಯದ ಅಂತಿಮ ಉತ್ತರವಾಗಿರುತ್ತದೆ. ಯಾವುದೇ ಭಾಷೆಯ ಯಾವುದೇ ಪ್ರಕಾರದ ಸಾಹಿತ್ಯವನ್ನು ತಗೊಳ್ಳಿ, ಅದು ಸದಾ ತನ್ನ ಭಾಷೆಗೆ ನಿಷ್ಠವಾಗಿರುತ್ತದೆ. ಉರ್ದು ಖವ್ವಾಲಿಗಳಲ್ಲಿ ಇಂಗ್ಲೀಷ್ ಪದಗಳು ಕಂಡು ಬರತಾವಾ, ಖಂಡಿತ ಇಲ್ಲ… ಅಂತೆಯೇ ಹಿಂದಿ ಗಜಲ್ ಅಲ್ಲಿ ತೆಲುಗು ಪದಗಳು ಬರತಾವಾ, ಸಾಧ್ಯವೇ ಇಲ್ಲ… ತಮಿಳು ಕಾವ್ಯದಲ್ಲಿ ಮರಾಠಿ ಪದಗಳು ಸ್ಥಳ ಆಕ್ರಮಿಸಿಕೊಳ್ಳುತ್ತಾವಾ???? ಖಂಡಿತ ಇವು ಯಾವುವು ಎಂದಿಗೂ ಸಾಧ್ಯ ಇಲ್ಲದ ಅಂಶಗಳು. ಯಾವುದೇ ಭಾಷೆಯ ಯಾವುದೇ ಸಾಹಿತ್ಯ ಪ್ರಕಾರವು ಇದನ್ನು ಒಪ್ಪುವುದಿಲ್ಲ. ಒಂದು ವೇಳೆ ಹಾಗಾದರೆ ಅದು ಆ ಸಾಹಿತ್ಯಕ್ಕೆ ಕೊಂಚ ಧಕ್ಕೆಯಾಗದಂತೆ ಮತ್ತು ಆ ಮೂಲಕ ತಡಬಡಾಯಿಸಿದಂತೆ ಅರ್ಥ. ಕಮರ್ಷಿಯಲ್ ಆದ ಚಿತ್ರ ಗೀತೆಗಳಲ್ಲಿ ಯಾವಾಗಲೋ ಎಂದೋ ಯಾವುದರಲ್ಲೋ ಒಮ್ಮೆ ಪ್ರಾಸಕ್ಕೋಸರವೋ ಅಥವಾ ಜನಪ್ರಿಯ ನುಡಿಗಟ್ಟು ಎಂತಲೋ ಬಳಸಬಹುದು. ಅದು ವಾಣಿಜ್ಯತ್ಮಾಕವಾಗಿ ಆ ಸೀಮಿತ ಹಾಡಿನ ಮಟ್ಟಿಗೆ ಮಾತ್ರ ಸರಿ ಎಂದರೂ ಅಷ್ಟು ತಕ್ಕುದಾದಲ್ಲ ಎಂದೇ ಹೇಳಬಹುದು ಪರಿಣಾಮಕಾರಿ ಬಳಕೆ ಯಾವುದು? ಇನ್ನೂ ಹೀಗೆ ಉರ್ದು ಬಳಕೆಯ ಕುರಿತು ಹೇಳುವುದಾದರೆ ಮೊಘಲರ ಕಾಲಘಟ್ಟದಲ್ಲಿ ಅವರ ಆಳ್ವಿಕೆಯ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಉರ್ದು ಜನ ಸಾಮಾನ್ಯರ ಭಾಷೆಯಾಗಿತ್ತೇನೋ ಎನ್ನುವುದು ಸರಿ ಅಷ್ಟೇ. ಆದರೆ ಇಂದು ಉರ್ದು ಎನ್ನುವುದು ಯಾವುದೋ ಪ್ರದೇಶದ ಅಥವಾ ಯಾವುದೋ ಊರಿನ ಹಾಗೂ ಹತ್ತು ಹಲವಾರು ಸಾಮಾನ್ಯ ಜನರು ಆಡುವ ಭಾಷೆಯಾಗಿ ಉಳಿದಿಲ್ಲ. ಅದು ಇಂದು ಒಂದು ಸಮುದಾಯದ ಜನರು ಮಾತ್ರ ಆಡುವ ಭಾಷೆಯಾಗಿ ಮಾತ್ರ ಭಾರತದಲ್ಲಿ ಪ್ರಚಲಿತದಲ್ಲಿದೆ. ಆದ್ದರಿಂದ ಹೀಗೆ ಒಂದು ಪಂಥ, ಮತದ ಭಾಷೆಯನ್ನು ಇನ್ನೊಂದು ಭಾಷೆಯಲ್ಲಿ ಬಳಸುವುದರಿಂದ ಅದನ್ನು ನೋಡುವ ದೃಷ್ಟಿಕೋನವು ಸಹ ಸಾಕಷ್ಟು ಜನರಲ್ಲಿ ಬದಲಾಗುತ್ತದೆ ಮತ್ತು ತನ್ನ ವಿಶಾಲ ವ್ಯಾಪ್ತಿಯನ್ನು ಮೀರಿ ಧೀರ್ಘವಧಿಯಲ್ಲಿ ಸಂಕುಚಿತಗೊಳ್ಳುತ್ತಾ ಹೋಗುತ್ತದೆ. ಸಾಹಿತ್ಯಕ್ಕೆ ಇಂತಹ ಬೇಧ ಎಂದೂ ಸಹ ಸಲ್ಲದು. ಅದಕ್ಕೆ ಅಂತಹ ತಡೆಗೋಡೆ ಹಾಕಕೂಡದು. ಆದ್ದರಿಂದ ಯಾರೋ ಬರೆದ ಹಾಗೆ ಇನ್ನೂ ಯಾರೋ ಅದನ್ನು ಹಿಂದೂ ಮುಂದೂ ನೋಡದೆ ಅನುಸರಿಸುವುದು ತರವಲ್ಲ. ಇಂತಹ ಮಿಶ್ರಿತ ಬರಹಗಳು ಆರಂಭದಲ್ಲಿ ಒಂದಿಷ್ಟು ಪರಿಣಾಮಕಾರಿ ಎನಿಸುವುದಾದರೂ ಅದರ ಪ್ರಭಾವ ಓದುಗರ ಮೇಲೆ ಬಹು ಬೇಗ ಕುಂದಿ ಹೋಗಿ ಬಿಡುತ್ತದೆ. ಭಾಷೆ ಎನ್ನುವ ಸಂವಹನ ಅದರ ವೈಶಾಲ್ಯತೆಯ ಮನೋಭಾವದಲ್ಲಿ ಉತ್ತಮ ಬಳಕೆ, ವಿಧಾನ ಮತ್ತು ತಂತ್ರಗಳನ್ನು ಆ ಒಂದು ಸಾಹಿತ್ಯದಲ್ಲಿ ಅಳವಡಿಸಿಕೊಂಡಿದ್ದರೆ ಅದು ಮನಸ್ಸು ಮುಟ್ಟಲು ಸರಳವಾಗಿರುತ್ತದೆ. ಭಾಷೆಯ ಚತುರತೆಯೊಂದಿಗೆ ಭಾವನೆಗಳ ಚಕಮಕಿಯಾದಾಗಲೇ ಅದರ ಹರಿವು ಸಹ ಸರಾಗವಾಗಿ ಮುಂದುವರಿಯಲು ಅನುಕೂಲ. ಸಾಹಿತ್ಯದ ಧ್ವನಿ ಕೇವಲ ಕನ್ನಡ ಭಾಷೆ ಅಂತಹ ಏನಲ್ಲ, ಅದು ಯಾವುದೇ ಭಾಷೆಯಾದರೂ ಸರಿ ಅದು ಸಾಹಿತ್ಯದ ಧ್ವನಿಯನ್ನು ಕ್ಷೀಣಿಸುವ, ಮೂಲ ಭಾಷೆಯನ್ನೆ ಕುಗ್ಗಿಸುವ ಬರಹವಾಗಿರಬಾರದು. ಒಂದು ಭಾಷೆ ಕೇವಲ ಅದು ಸಂವಹನ ಮಾಧ್ಯಮ ಮಾತ್ರ ಆಗಿರುವುದಿಲ್ಲ. ಪ್ರತಿ ಭಾಷೆಯು ತನ್ನ ಭಾಷೆಯಲ್ಲಿ ತನ್ನದೇ ಆದ ನೆಲ, ಜಲ, ಸಂಸ್ಕೃತಿ, ಸೊಗಡು, ಆಚರಣೆ, ಸಾಮಾಜಿಕ ಶಿಷ್ಟಾಚಾರ, ಕಟ್ಟುಪಾಡುಗಳು, ಆಚಾರ ವಿಚಾರ, ಆಹಾರ, ಜೀವನ ಕ್ರಮ, ಮಾನವೀಯ ಮೌಲ್ಯಗಳೂ ಇತರೆ ಮೊದಲಾದ ಬಹುಮುಖ್ಯ ಲಕ್ಷಣಗಳನ್ನು ಒಳಗೊಂಡು ಸಂಪದ್ಬರಿತವಾಗಿರುತ್ತದೆ. ಜೊತೆಗೆ ಒಂದನ್ನೊಂದು ಅವಲಂಬಿಸಿ ಪ್ರತಿಯೊಂದು ಅದರೊಂದಿಗೆ ತಳುಕು ಹಾಕಿಕೊಂಡು ರಾಗ ತಾಳ ಮೇಳಗಳು ಕೂಡಿಕೊಂಡು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವ ಸಂಪರ್ಕ ಸೇತುವೆಯು ಆಗಿರುತ್ತದೆ. ಆದ್ದರಿಂದ ಆಕ್ರಮಣ ಕನ್ನಡದಂತಹ ವಿಶಾಲ ನುಡಿಗೆ ಮಾರಕವಲ್ಲದಿದ್ದರೂ ಇಲ್ಲಿನ ಸೊಗಡು ಅಂತಹ ಅನ್ಯಭಾಷೆಗಳಿಗೆ ಕಾಣಲು ಸಾಧ್ಯವಿರದ ಕಾರಣ ನಮ್ಮದು ಎನ್ನುವುದು ಸಹಜವಾಗಿಯೇ ಅರಗಿಸಿಕೊಳ್ಳಲು ಆಗಲಾರದಂತದ್ದು. ತಾಯ್ನಾಡಿಯ ಪ್ರೇರಣೆಯೇ ಬೇರೆ ತರಹ ಇರುತ್ತೆ. ಇತರೆ ಯಾವುದೇ ನುಡಿಯ ವರ್ತನೆ ಎಂದಿಗೂ ಅದರ ಮುಂದೆ ಕಳೆಗುಂದುವ ಅಂಶವೇ ಆಗಿದೆ. ಅಂತೆಯೇ ಗಜಲನ ಅಭಿವ್ಯಕ್ತಿ ಸೂಕ್ಷ್ಮ ಸಂವೇದನೆಶೀಲತೆ ಮತ್ತು ಸೃಜನಾತ್ಮಕ ಲಕ್ಷಣಗಳನ್ನು ಹೊಂದಲು ಕನ್ನಡ ಗಜಲಗಳ ಪ್ರತಿ ಪದವೂ ಕಡ್ಡಾಯವಾಗಿ ಕನ್ನಡದಲ್ಲಿಯೇ ಇರಬೇಕು ಒಂದು ಪದಕ್ಕೆ ಅದೇ ಅರ್ಥವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಟ್ಟಿ ಕೊಡಬಲ್ಲಂತಹ ಐವತ್ತು ಬೇರೆ ಬೇರೆ ಪದಗಳು ಕನ್ನಡದಲ್ಲಿ ಇವೆ. ಇಷ್ಟು ವಿಸ್ತಾರವಾದ ಶಬ್ದ ಸಂಪತ್ತು ಇನ್ನೊಂದು ಭಾಷೆಯಲ್ಲಿ ಖಂಡಿತವಾಗಿಯೂ ಕಂಡು ಬರುವುದಿಲ್ಲ. ಆದ್ದರಿಂದ ಅಂತಹ ಅನಿವಾರ್ಯವೇ ಉದ್ಭವ ಆಗದ ಕಾರಣ ಕನ್ನಡ ಗಜಲಗಳು ಕನ್ನಡ ಗಜಲ್ ಎಂದೆನಿಸಿಕೊಳ್ಳಲು ಅದರ ಪ್ರತಿ ಪದವೂ ಸಹ ಕನ್ನಡಮಯವೇ ಆಗಿರಬೇಕು. ******** ಬಸವರಾಜ ಕಾಸೆ

ಗಝಲ್ ಲೋಕ Read Post »

ಅಂಕಣ ಸಂಗಾತಿ

ಗಝಲ್ ಲೋಕ

ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ. ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ ಗಝಲ್ ಲೋಕ ಆರನೇ ಅದ್ಯಾಯ ಈ ಸಂಭಾಷಣೆ ಹತ್ತಾರು ಗಜಲ್ ಸಂಕಲನ ಹೊರ ತಂದಿರುವ ಒಬ್ಬರು ಖ್ಯಾತ ಗಜಲಕಾರರು ಮತ್ತು ಇನ್ನೊಬ್ಬರು ಅಷ್ಟಿಷ್ಟು ಹೆಸರು ಮಾಡುತ್ತಿರುವ ಗಜಲ್ ನಿಪುಣರ ನಡುವೆ ಒಮ್ಮೆ ನಡೆದ ಸಂಭಾಷಣೆ… “ಏನು ಸರ್ ಇದು ಗಜಲ್ ಅಂತೀರಾ, ಆದರೆ ಕಾಫಿಯಾ ರಧೀಪ್ ಏನು ಇಲ್ಲ… ಅದು ಹೇಗೆ ಇದು ಗಜಲ್ ಆಗುತ್ತೆ” “ಅದು ಹಾಗೆ ಗಜಲ್ ಆಗುತ್ತದೆ, ನನ್ನದು ಒಂಥರಾ ಮುಕ್ತ ಗಜಲ್” “ಅದು ಯಾವುದು ಸರ್ ಮುಕ್ತ ಗಜಲ್, ಹಾಗೂ ಒಂದು ವಿಧ ಇದೀಯಾ??? ಆದರೆ ನನ್ನ ಇಷ್ಟು ವರ್ಷಗಳ ಅಧ್ಯಯನದಲ್ಲಿ ಅಂತಹ ಒಂದು ವಿಧ ನಾನು ಕೇಳೇ ಇಲ್ವಲ್ಲ” “ಇರಬಹುದು, ಇಲ್ಲದೆಯೂ ಇರಬಹುದು… ಇದೊಂದು ತರಹ ನನ್ನ ವಿಶೇಷ ಗಜಲ್” “ಏನು ಸರ್ ಅಡ್ಡ ಗೋಡೆ ಮೇಲೆ ದೀಪ ಇಡೋದು ಅಂದರೆ ಇದೇನಾ…!!! ಗಜಲ್ ನಿಯಮ ಗುಣಲಕ್ಷಣಗಳು ಪಾಲನೆಯಾಗದ ಬರಹಕ್ಕೆ ವಿಶೇಷ ಮುಕ್ತ ಗಜಲ್ ಅಂತೀರಿ” “ಇದನ್ನು ಯಾರಿಗಾದರೂ ಹೊಸಬರಿಗೆ ಹೇಳಿ, ನನ್ನ ಅಂತಹ ದೊಡ್ಡ ಗಜಲಕಾರರಿಗೆ ಕೇಳುವ ಮಾತು ಇದಲ್ಲ” “ಅಂದರೆ ಜನಪ್ರಿಯರಾದ ಕೂಡಲೇ ನಿಯಮವೆಲ್ಲಾ ಗಾಳಿಗೆ ತೂರಿ ಹೇಗೆ ಬರೆದರೂ ನಡಿದೀತು ಎನ್ನುವುದು ನಿಮ್ಮ ನೀತಿನಾ?” “ನಿಮಗೆ ಹಾಗೆ ಅನಿಸಿದರೆ ಹಾಗೆ ಅಂದುಕೊಳ್ಳಿ ಪರವಾಗಿಲ್ಲ… ನಾನು ಅಷ್ಟು ಎಲ್ಲಾ ಇಲ್ಲದೇನೇ ಈ ಮಟ್ಟಕ್ಕೆ ಬೆಳೆದಿಲ್ಲ, ಎಷ್ಟೆಲ್ಲಾ ನನ್ನ ಅಭಿಮಾನಿಗಳು ಎದ್ದು ಬಿದ್ದು ಓದಿ ವಾವ್ ಸೂಪರ್ ಅಂತ ಇರಲಿಲ್ಲ” “ಖ್ಯಾತರಾದ ಮೇಲೆ ನೀವು ಮಾಡಿದೆಲ್ಲಾ ಸರಿ, ಬರೆದಿದ್ದು ಎಲ್ಲಾ ಸೂಪರ್ ಎನ್ನುವವರು ಇದ್ದದ್ದೇ ಬಿಡಿ” “ಓದುಗರಿಗೆ ಮುಖ್ಯ ಅದರ ವಿಷಯ ವಸ್ತು ಮತ್ತು ಅದನ್ನು ನಾವು ಭಾವಗಳಲ್ಲಿ ಅದ್ದಿ ತೆಗೆದು ಪ್ರಸ್ತುತಪಡಿಸುವ ರೀತಿ ಮಾತ್ರ… ಇವೆಲ್ಲಾ ನಿಮಗೆ ಗೊತ್ತಾಗಲ್ಲ, ಸುಮ್ಮನೆ ಎದ್ದು ಹೋಗಿ ತಲೆ ತಿನ್ನೋದು ಬಿಟ್ಟು” “ಓದುಗರಿಗೆ ಏನು ಮುಖ್ಯ ಅನ್ನುವ ನಿಮ್ಮ ಮಾತು ಸರಿ, ಆದರೆ ಓದುಗರಿಗೆ ನಿಯಮಗಳ ಬಗ್ಗೆ ಗೊತ್ತಿರಲ್ಲ… ಆದ್ದರಿಂದ ನೀವು ಗಜಲ್ ಅಂತ ಹಾದಿ ತಪ್ಪಿಸುವ ಬದಲು ಕವನ ಅಥವಾ ಪದ್ಯದ ಪ್ರಕಾರ ಅಂತ ಹೇಳಿ” “ನೋಡಪಾ ನಾನು ನಿಯಮಗಳನ್ನು ಒಪ್ಪಿಕೊಳ್ಳಲ್ಲ, ಆದರೆ ಲಕ್ಷಣಗಳನ್ನು ಮಾತ್ರ ಅನುಸರಿಸುವೆ… ಆದ್ದರಿಂದ ಗಜಲ್ ಚೌಕಟ್ಟು ಮತ್ತು ದ್ವಿಪದಿ ಅಲ್ಲೇ ಇದೆ ಅಲ್ವಾ” “ಹಾಗಾದರೆ ಅದು ದ್ವಿಪದಿಗಳು ಅಂತ ಹೇಳಿಕೊಳ್ಳಿ… ಉರ್ದುನಿಂದ ಬಂದ ಪರ್ಧಗೂ ಕೂಡ ಅಷ್ಟೇ ಪ್ರಾಮುಖ್ಯತೆ ಇದೆ. ಸಾಹಿತ್ಯದ ಎಲ್ಲಾ ಪ್ರಕಾರಗಳು ಒಂದಕ್ಕಿಂತ ಒಂದು ಉತ್ತಮವಾದುದೇ… ಇನ್ನೂ ನೀವು ಹೇಳುವ ಚೌಕಟ್ಟಿನಲ್ಲಿಯೇ ಪರ್ಧ ಕೂಡ ಬರುತ್ತೆ. ಅಷ್ಟು ಇದ್ದ ಮಾತ್ರಕ್ಕೆ ಅದು ಗಜಲ್ ಆದೀತೆ “ “ನೋಡಿ ನನಗೆ ಇಂತಹ ಪ್ರಶ್ನೆಗಳು ಇಷ್ಟ ಆಗಲ್ಲ, ಪಿತ್ತ ನೆತ್ತಿಗೇರಿಸಬೇಡಿ. ನಿಮಗೆ ಕವನ ಎನಿಸಿದರೆ ಕವನ, ಪರ್ಧ ಎನಿಸಿದರೆ ಪರ್ಧ ಅಂತಾನೇ ಅಂದುಕೊಳ್ಳಿ. ಅದರಿಂದ ನನಗೇನು ತೊಂದರೆ ಇಲ್ಲ” “ಏನು ಸರ್ ಹೀಗೆ ಹೇಳತೀರಾ, ನಿಮ್ಮನ್ನೇ ಅನುಸರಿಸುವ ನೂರಾರು ಹೊಸ ಗಜಲಕಾರರ ಕಥೆ ಹೇಗೆ” “ಅವೆಲ್ಲವೂ ನನಗೆ ಬೇಕಿಲ್ಲ, ಇನ್ನೂ ಬರತೀನಿ” ಈ ಸಂಭಾಷಣೆ ಕೇಳಿದ ನಂತರ ನಿಮಗೆ ಗೊತ್ತಾಗಿರುತ್ತೆ ಕೆಲವು ವಿಷಯಗಳು ಆದ್ದರಿಂದ ಇದನ್ನು ವಿವರಿಸುವ ಗೋಜಿಗೆ ಹೋಗುವುದಿಲ್ಲ. ಯಾರನ್ನೇ ಒಬ್ಬರನ್ನು ಅನುಸರಿಸುವ ಬದಲು ಹತ್ತಾರು ಬೇರೆ ಬೇರೆ ಬರಹಗಾರರು ಬರೆದ ಕೃತಿಗಳ ಸತತ ಅಧ್ಯಯನ ಮಾತ್ರ ಯಾವುದೇ ಒಂದು ಸಾಹಿತ್ಯದ ಪ್ರಕಾರದ ಬಗ್ಗೆ ತಿಳಿದುಕೊಳ್ಳಲು ಅತಿ ಉಪಯುಕ್ತ. ಹೆಚ್ಚಿನ ಖ್ಯಾತನಾಮರು ಯಾರು ಆ ಬಗ್ಗೆ ಉಚಿತವಾಗಿ ತಿಳಿಸಿ ಕೊಡುವ ಕೆಲಸ ಮಾಡುವುದಿಲ್ಲ. ಪ್ರಸ್ತುತ ಹೆಚ್ಚಿನವರು ಯಾವುದಾದರೂ ಒಂದು ರೀತಿಯ ಪ್ರತಿಫಲ ಅಪೇಕ್ಷೆಯಲ್ಲಿ ಇರುವುದು ಬಹು ಬೇಸರಕರ ಸಂಗತಿ. ತನ್ನ ಹೊಸ ಪುಸ್ತಕಕ್ಕೆ ಮುನ್ನುಡಿ ಬರೆದು ಕೊಡಿ ಸರ್ ಎಂದು ಹೋದ ಒಬ್ಬ ಉದಯನ್ಮೋಖ ಬರಹಗಾರನಿಗೆ ಒಬ್ಬ ದೊಡ್ಡ ಸಾಹಿತಿ ಕೇಳಿದ್ದು ಕೇವಲ ಹತ್ತು ಸಾವಿರ ಗೌರವಧನ ಮಾತ್ರ. ಒಂದು ಉತ್ತಮ ಗಜಲ್ ರೂಪಗೊಳ್ಳಲು ವಿಷಯ ವಸ್ತು ಮತ್ತು ಪ್ರಸ್ತುತಪಡಿಸುವ ರೀತಿಯೊಂದಿಗೆ ಅದರ ನಿಯಮಗಳು ಅಷ್ಟೇ ಮುಖ್ಯವಾಗಿರುತ್ತವೆ. ಯಾವುದೇ ಬರಹವಾದರೂ ಅದು ಖಂಡಿತವಾಗಿಯೂ ಆಯಾ ಸಾಹಿತ್ಯ ಪ್ರಕಾರದ ಗುಣಲಕ್ಷಣಗಳಿಗೆ ನಿಷ್ಠೆಯಿಂದ ಕೂಡಿದ್ದು ಅದಕ್ಕೆ ಬದ್ಧವಾಗಿ ಇರಬೇಕು. ಆ ಕ್ಷಣಕ್ಕೆ ಮತ್ತು ಕೆಲವರಿಗೆ ಚೆನ್ನಾಗಿ ಇದೆ ಎನಿಸಿದರೂ ದೀರ್ಘಕಾಲದಲ್ಲಿ ನಿಷ್ಠವಾಗಿರದ ಬರಹ ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತದೆ. ಸಾಹಿತ್ಯದ ಯಾವುದೇ ವಿಧ ತೆಗೆದುಕೊಂಡರೂ ಸಹ ಪ್ರತಿಯೊಂದು ತನ್ನದೇ ಆದ ಲಕ್ಷಣಗಳನ್ನು ಹೊಂದಿದ್ದೂ ಅದರಿಂದಲೇ ಅದು ಇತರೆ ವಿಧಗಳಿಗಿಂತ ಪ್ರತ್ಯೇಕವಾಗಿ ತನ್ನನ್ನು ತಾನು ಗುರುತಿಸಿಕೊಂಡು ಅಸ್ತಿತ್ವ ಪಡೆದು ವಿಶೇಷ ಎನಿಸಿಕೊಳ್ಳುತ್ತದೆ, ಅಂತೆಯೇ ಗಜಲ್ ಸಹ… ******** ಬಸವರಾಜ ಕಾಸೆ

ಗಝಲ್ ಲೋಕ Read Post »

You cannot copy content of this page

Scroll to Top