ಅಂಕಣ ಬರಹ ಮೆಹಬೂಬ್ ಮುಲ್ತಾನಿ ಪರಿಚಯ: ಮೆಹಬೂಬ್ ಮುಲ್ತಾನಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕ್ಕನದಿಕೊಪ್ಪ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಕಾಲಿನ ಓದು ಬರಹ ವೇದಿಕೆ ಕಟ್ಟಿಕೊಂಡು ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಹಿಂದಿ,ಉರ್ದು, ಮರಾಠಿ, ಆಂಗ್ಲ ಭಾಷೆಯ ಸಾಹಿತ್ಯ ಅನುವಾದ, ವಿಶೇಷವಾಗಿ ಕವಿತೆಗಳ ಅನುವಾದ ಇವರ ಇಷ್ಟದ ಕೆಲಸ. ಕವಿತೆ ಬರೆಯಲು ಪ್ರಾರಂಭಿಸಿದ್ದಾರೆ. ತುಂಬಾ ಜೀವನ ಪ್ರೀತಿಯ ಮನುಷ್ಯ ನಮ್ಮ ಮೆಹಬೂಬ್ ಮುಲ್ತಾನಿ ಈ ವಾರದ ಮುಖಾಮುಖಿಯಲ್ಲಿ ಕವಿ ಮೆಹಬೂಬ್ ಮುಲ್ತಾನಿಯನ್ನು ಮಾತಾಡಿಸಿದ್ದಾರೆನಾಗರಾಜ ಹರಪನಹಳ್ಳಿ ” ನನ್ನ ಕವಿತೆಯ ವಸ್ತು ಪ್ರೀತಿ ಮತ್ತು ಧರ್ಮ “ “ ದೇವರು -ಧರ್ಮದಲ್ಲಿ ನನಗೆ ಅಷ್ಟಾಗಿ ನಂಬಿಕೆಯಿಲ್ಲ “ ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಕವಿತೆ ಯಾಕೆ ಬರೆಯುತ್ತೇನೆ ಎನ್ನುವುದಕ್ಕೆ ನಿರ್ದಿಷ್ಟ ಉತ್ತರ ಹೇಳಲಾಗದು. ಮನಸ್ಸಿನ ಬೇಗುದಿ ಹೊರಹಾಕಲು ನಾನು ಕವಿತೆಯ ಮೊರೆ ಹೋಗುತ್ತೇನೆ. ಕವಿತೆ ಹುಟ್ಟುವ ಕ್ಷಣ ಯಾವುದು ? ನಿರ್ದಿಷ್ಟ ಸಮಯ ಅಂತೆನೂ ಇಲ್ಲ .ಯಾವುದೋ ಒಂದು ಕ್ಷಣದಲ್ಲಿ ಹೊಳೆದ ಸಾಲುಗಳು ಆಗಾಗ ಕವಿತೆಯ ರೂಪ ತಾಳುತ್ತವೆ ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಪ್ರೀತಿ ಮತ್ತು ಧರ್ಮ ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಹಾ..ಬಾಲ್ಯಕ್ಕೆ ಅಷ್ಟು ಅವಕಾಶವಿಲ್ಲ , ಹರೆಯ ಕವಿತೆಗಳಲ್ಲಿ ಆವರಿಸಿದೆ. ಪ್ರಸ್ತುತ ರಾಜಕೀಯಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ತಲ್ಲಣದ ದಿನಗಳಿವು. ಕಾಯಬೇಕಾದವರೆ ಕೊಲ್ಲುವವರಾಗಿರುವ ಸನ್ನಿವೇಶ ಇದೆ. ಸಮಚಿತ್ತದಿಂದ ಇರುವುದು ಈ ಕ್ಷಣದ ಅವಶ್ಯಕತೆ. ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಇವೆರಡರಲ್ಲೂ ನನಗೆ ಅಷ್ಟಾಗಿ ನಂಬಿಕೆಯಿಲ್ಲ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಸಾಂಸ್ಕೃತಿಕ ವಾತಾವರಣ ಹದೆಗೆಟ್ಟಿದೆ. ಇಸಂಗಳು ಸಾಂಸ್ಕೃತಿಕ ಲೋಕವನ್ನು ಆಳುತ್ತಿವೆ. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಇದು ಸಾಹಿತ್ಯದ ಎಲ್ಲರಿಗೂ ತಿಳಿದಿರು ವಿಷಯ. ಬಾಲ ಬಡಿಯುವವರು ಮುಂದಿದ್ದಾರೆ. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಅತೃಪ್ತಿ ಇದೆ ಅಷ್ಟೇ.. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಬೇರೆ ಬೇರೆ ದೇಶದ,ಭಾಷೆಯ ಭಿನ್ನ ಸಂವೇದನೆಯ ಸಾಹಿತ್ಯಿಕ ಕೃತಿಗಳನ್ನು ಅನುವಾದಿಸುವುದು.. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ? ಕನ್ನಡದಲ್ಲಿ ಎಚ್ ಎಸ್ ಶಿವಪ್ರಕಾಶ ನನ್ನಿಷ್ಟದ ಕವಿ.ಆಂಗ್ಲಭಾಷೆಯಲ್ಲಿ ರೈನರ್ ಮಾರಿಯಾ ರಿಲ್ಕ ನನ್ನ ಪ್ರೀತಿಯ ಕವಿ . ಈಚೆಗೆ ಓದಿದ ಕೃತಿಗಳಾವವು? ಕೆಂಪು ಮುಡಿಯ ಹೆಣ್ಣು, ಪದ ಕುಸಿಯೆ ನೆಲವಿಲ್ಲ, ಬದುಕು ಮಾಯೆಯ ಆಟ, ಚಿಲಿ ಕೆ ಜಂಗಲೊಸೆ( ಹಿಂದಿ), ಖುಷಿಯೊಂಕೆ ಗುಪ್ತಚರ ( ಹಿಂದಿ), ನಿಮಗೆ ಇಷ್ಟವಾದ ಕೆಲಸ ಯಾವುದು? ಶಿಕ್ಷಕ ವೃತ್ತಿ ನಿಮಗೆ ಇಷ್ಟವಾದ ಸ್ಥಳ ಯಾವುದು ? ನಮ್ಮ ಮನೆ ಮತ್ತು ಶಾಲೆ ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ ಸಿನಿಮಾ ಯಾವುದು? ಮಿಲನ( ಕನ್ನಡ), ರಬ್ ನೇ ಬನಾ ದಿ ಜೋಡಿ( ಹಿಂದಿ) ನೀವು ಮರೆಯಲಾರದ ಘಟನೆ ಯಾವುದು? ಒಮ್ಮೆ ನಮ್ಮ ಮೇಲೆ ಹೆಜ್ಜೆನು ದಾಳಿ ಮಾಡಿದವು. ಇನ್ನೆನೂ ಸಾಯುತ್ತೇವೆ ಎನ್ನುವಾಗ ಭಾಷೆ,ಜಾತಿ, ಧರ್ಮಗಳನ್ನು ಮೀರಿದ ಮಾನವೀಯ ವ್ಯಕ್ತಿ ಯೊಬ್ಬ ನಮಗೆ ಸಹಾಯ ಮಾಡಿದ. ಅವತ್ತು ನನಗೆ ಪ್ರೀತಿ ಮತ್ತು ಮಾನವೀಯತೆಯ ಅವಶ್ಯಕತೆ ಎಷ್ಟಿದೆ ಎನ್ನುವ ಅರಿವು ಮೂಡಿತು. ಇದು ನನ್ನ ಜೀವನದ ಮರೆಯಲಾರದ ಘಟನೆ. ************************************************** ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಅಂಕಣ ಬರಹ ಡಾ ಶ್ರೀಧರ್ ಗೌಡ ಉಪ್ಪಿನ ಗಣಪತಿ ಲೇಖಕರ ಪರಿಚಯ : ಡಾ ಶ್ರೀಧರ್ ಗೌಡ ಉಪ್ಪಿನ ಗಣಪತಿ ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ.ಸಾಹಿತ್ಯ ಬರಹ ಹವ್ಯಾಸ.“ಕಡಲಿಗರ ಸಂಸ್ಕೃತಿ” ಸಂಶೋಧನ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರ್ ಪ್ರದಾನ ಮಾಡಿದೆ. ಡಾಕ್ಟರ್ ಸೈಯದ್ ಜಮೀರುಲ್ಲಾ ಷರೀಫ್ ಮಾರ್ಗದರ್ಶಕರು.ಸಂಶೋಧನಾ ಮಹಾಪ್ರಬಂಧ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಕುಮಟಾತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆಮೂರು ತಾಲೂಕು ಸಾಹಿತ್ಯ ಸಮ್ಮೇಳನ ಸಂಘಟನೆಪ್ರತಿ ತಾಲ್ಲೂಕು ಸಾಹಿತ್ಯ ಸಮ್ಮೇಳನವನ್ನು ಎರಡು ದಿನಗಳ ಕಾಲ ಸಂಘಟಿಸಿ ದ್ದು ಹೆಗ್ಗಳಿಕೆ ಇವರದ್ದು.ಎರಡು ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟಿಸಿದ್ದಾರೆ. ಕಳೆದ ವರ್ಷ ಅವರು ಕರ್ತವ್ಯ ನಿರ್ವಹಿಸುವ ಶಾಲೆಯ ಇನ್ಸ್ಪೈರ್ ಅವಾರ್ಡ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಿ ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಆ ಕಾರ್ಯಕ್ರಮಕ್ಕೆ ಈ ವರ್ಷ ಭಾಗವಹಿಸಲಿದ್ದಾರೆ.2019 20 ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.“ಹಾಲಕ್ಕಿ ರಾಕು” ಕಥಾಸಂಕಲನ ಅಚ್ಚಿನಲ್ಲಿದೆ. ಡಾ.ಶ್ರೀಧರ ಗೌಡ ಅವರ ಜೊತೆ ಮುಖಾಮುಖಿ ” ಮನಸ್ಸಿನ ತುಮುಲತೆ ಸಾಕ್ಷಿಕರಿಸಲು ಕವಿತೆಗೆ ಮೊರೆ “ ಕವಿತೆಗಳನ್ನು ಏಕೆ ಬರೆಯುವಿರಿ? ನನ್ನ ಮನಸ್ಸಿನ ತುಮುಲತೆ, ದುಗುಡುತೆ ಗಳನ್ನು ಸಾಕ್ಷಿ ಕರಿಸಲು ಕವಿತೆಗಳಿಗೆ ಮೋರೆ ಹೋಗಿ , ಕವಿತೆ ಬರೆಯುತ್ತಿದ್ದೇನೆ. ಕವಿತೆ ಹುಟ್ಟುವ ಕ್ಷಣ ಯಾವುದು ? ಕವಿತೆ ಹುಟ್ಟಲ್ಲ ಇಂತಹದ್ದೆ ಸಮಯ ಅಂತಿಲ್ಲ.ಒಂದು ಘಟನೆ ಮತ್ತೆ ಮತ್ತೆ ಮನಸ್ಸನ್ನು ಕಾಡುತ್ತಿದ್ದಾಗ ಅದರ ತೀವ್ರತೆಯನ್ನು ಹತ್ತಿಕ್ಕಲಾಗದೆ ಅಸಹಾಯಕ ಸ್ಥಿತಿಗೆ ತಲುಪಿದಾಗ ಅದರಿಂದ ಪರಿಹಾರ ಕಂಡುಕೊಳ್ಳಲು ಹೊಸ ಹೊಸ ಆಲೋಚನೆಗಳಿಂದ ಹೊರಬರುವ ಸಂದರ್ಭದಲ್ಲಿ ಕವಿತೆ ಹುಟ್ಟುತ್ತ ದೇ. ಕೆಲವೊಮ್ಮೆ ಬೈಕ್ ರೈಡಿಂಗ್ ಮಾಡುವಾಗಲು ಕವಿತೆ ಹುಟ್ಟಿದ್ದು ಇದೆ. ಕವಿತೆಯ ವಸ್ತು ಏನು? ಪದೇ ಪದೇ ಕಾಡುವ ವಿಷಯ ಯಾವುದು? ನನ್ನ ಕವಿತೆಗಳಲ್ಲಿ ವಸ್ತು ನನ್ನ ಸುತ್ತಲ ಪರಿಸರ. ನಮ್ಮ ಜನಾಂಗ .ನನ್ನನ್ನು ಮತ್ತೆ ಮತ್ತೆ ಕಾಡುವ ವಿಷಯವೇನೆಂದರೆ ,ಬಾಲ್ಯ ಕಳೆದು ಹರೆಯಕ್ಕೆ ಕಾಲಿಟ್ಟ ಯುವಜನತೆ ಹೆತ್ತು ಹೊತ್ತು ಸಾಕಿದ ತಂದೆತಾಯಿಗಳನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಅವರ ಆಸ್ತಿಗೆ ಮಾತ್ರ, ವಾರಸುದಾರರಾಗಿ ರುವ ಸಂಗತಿ ನಿಮ್ಮ ಕವಿತೆಗಳಲ್ಲಿ ಬಾಲ್ಯ ಹರೆಯ ಇಣುಕಿದೆಯೇ ? ನನ್ನ ಕವಿತೆಗಳಲ್ಲಿ ಬಾಲ್ಯ ಹರೆಯ ಎರಡರ ಜೊತೆ ಮುಪ್ಪು ಕೂಡ ಇಣುಕಿದೆ. ಪ್ರಸ್ತುತ ರಾಜಕೀಯ ಸನ್ನಿವೇಶಕ್ಕೆ ನಿಮ್ಮ ಪ್ರತಿಕ್ರಿಯೆ ಏನು? ಪ್ರಸ್ತುತ ಸಂದರ್ಭದ ರಾಜಕೀಯ ಸನ್ನಿವೇಶಗಳು ನ್ಯಾಯಾಂಗ ಮತ್ತು ಕಾರ್ಯಾಂಗ ವನ್ನು ಮೀರಿ ಪ್ರಾಮುಖ್ಯತೆ ಪಡೆದು ಕೊಂಡಂತೆ ಭಾಸವಾಗುತ್ತದೆ. ಧರ್ಮ ಮತ್ತು ದೇವರ ವಿಷಯದಲ್ಲಿ ನಿಮ್ಮ ನಿಲುವೇನು? ಜಾತಿಗೊಂದು ಧರ್ಮ ವಾಗದೆ ಮನುಷ್ಯ-ಮನುಷ್ಯರ ನಡುವಿನ ಧರ್ಮ ಒಂದಾಗಬೇಕು.ಪ್ರಕೃತಿಯಲ್ಲಿ ಅಗೋಚರವಾಗಿರುವ ಅತೀಂದ್ರಿಯವಾದ ಒಂದು ಶಕ್ತಿ ಇದೆ ಎಂದು ಭಾವಿಸಿ ಕೊಳ್ಳುವುದಾದರೆ, ಅದನ್ನು ದೇವರು ಎಂಬ ಮೂರ್ತ ಸ್ವರೂಪದಲ್ಲಿ ನೋಡಬಹುದು. ದೇವರ ಕಲ್ಪನೆ ಅವರವರ ಭಾವಕ್ಕೆ ಬಿಟ್ಟದ್ದು. ಆದಾಗ್ಯೂ ದೇವರು ಎಂಬ ಭಾವನೆ ನಮ್ಮ ಒಳಗೆ ಒಂದಿಷ್ಟು ಭಕ್ತಿಯನ್ನು ಹುಟ್ಟಿಸುತ್ತದೆ ಭಕ್ತಿ ಮನಸ್ಸಿನ ಏಕಾಗ್ರತೆ ಯಾಗುತ್ತದೆ.ಅದು ಸಂಸ್ಕಾರದ ಮೂಲವಾಗುತ್ತದೆ. ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಹೇಗಿದೆ ? ಸಂಸ್ಕೃತಿಯ ಕುರುಹುಗಳು ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸುತ್ತದೆ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಕೇವಲ ಮನರಂಜನೆಗೆ ಸೀಮಿತಗೊಳಿಸುತ್ತಿರುವುದು ವಿಷಾದನೀಯ.ಮೈಸೂರು ದಸರಾ ಹಂಪಿ ಉತ್ಸವ ಅವೆಲ್ಲ ಬಿಡಿ ,ಕರಾವಳಿ ಉತ್ಸವದಲ್ಲಿ ಕೂಡ ಜನಾಂಗಿಕ ವಾಗಿರುವ ಕಲೆ ಸಂಪ್ರದಾಯಗಳು ಮುಖ್ಯವಾಹಿನಿಯಿಂದ ದೂರ ಸರಿಸಲು ಪಟ್ಟಿರುತ್ತದೆ. ಉದಾಹರಣೆಗೆ ಹಾಲಕ್ಕಿಗಳ ಸುಗ್ಗಿ ಕುಣಿತ ತಾರ್ಲೆ ಕುಣಿತ ಗುಮಟೆ ಪಾಂಗ್ ಮರಗಾಲ ಕುಣಿತ ಇತ್ಯಾದಿ ಸಾಂಸ್ಕೃತಿಕ ಕುರುಹುಗಳಿಗೆ ಜಾಗವಿಲ್ಲ.ಸಂಸ್ಕೃತಿಕ ಸಂಜೆ ಎಂದರೆ ಸಿನಿಮಾನಟರನ್ನು ರಾಜ್ಯ ರಾಷ್ಟ್ರ ಮಟ್ಟದ ಗಾಯಕರನ್ನು ಕರೆಯಿಸಿ ಕುಣಿಸುವುದು ಹಾಡಿಸುವುದು ಎಂಬ ಕಲ್ಪನೆ ಆಯೋಜಕ ರಿಗೂ ಬಂದಿರುವುದು ದುರಂತ. ಸಾಹಿತ್ಯದ ರಾಜಕೀಯ ಹೇಗಿದೆ? ನಿಮ್ಮ ಪ್ರತಿಕ್ರಿಯೆ ಏನು? ಸಾಹಿತ್ಯದಲ್ಲಿ ಪ್ರತ್ಯೇಕತೆ ಬೇಕು, ಆದರೆ ಸಾಹಿತಿಗಳ ನಡುವೆ ಅಲ್ಲ. ಸಾಹಿತ್ಯದಲ್ಲಿ ವಲಯದ ರಾಜಕಾರಣ ಅಂದರೆ ಅಚ್ಚರಿ ಪಡಬೇಕಾದ ದಿನಗಳು ಇದ್ದವು. ಅಂದರೆ ಸಾಹಿತ್ಯದಲ್ಲಿ ರಾಜಕಾರಣವೇ ಅದು ಹೇಗೆ ಎಂದು ಪ್ರಶ್ನಿಸುತ್ತಿದ್ದರು.ಆದರೆ ಇವತ್ತು ರಾಜಕೀಯದ ರಾಜಕಾರಣ ಗಿಂತಲೂ , ಸಾಹಿತ್ಯದ ರಾಜಕಾರಣದಲ್ಲಿ ಹೆಚ್ಚು ರಾಡಿ ತುಂಬಿಕೊಂಡಿದೆ. ಚುನಾವಣೆಗಳು ಬಂದಾಗ ಅವರವರ ವ್ಯಕ್ತಿಗೆ ಅವರ ಇಷ್ಟಕ್ಕೆ ಸಂಬಂಧಪಟ್ಟಂತೆ ಬೆಂಬಲ ನೀಡುವುದು ಸಹಜ ಗುಣ. ಆದರೆ ಅದನ್ನೇ ನೆಪ ಮಾಡಿಕೊಂಡು ಚುನಾವಣೆಯಲ್ಲಿ ನಮ್ಮ ವಿರುದ್ಧ ಮಾಡಿದವರು ಎಂದು ಭಾವಿಸಿ ಅಂತರ ಕಾಯ್ದುಕೊಳ್ಳುವುದು ಸಾಹಿತ್ಯದ ಬೆಳವಣಿಗೆ ಯಂತೂ ಅಲ್ಲ.ಸಾಹಿತ್ಯ ವಲಯ ಒಂದಿಷ್ಟು ಚುರುಕುತನದಿಂದ ಕೆಲಸ ಮಾಡುತ್ತಿರುವುದು ಸಂತೋಷದ ವಿಷಯ. ದೇಶದ ಚಲನೆಯ ಬಗ್ಗೆ ಏನನಿಸುತ್ತದೆ ? ಈ ದೇಶದ ಚಲನ ಶೀಲ ವಾಗಿರದೆ , ಎಲ್ಲೋ ಒಂದು ಕಡೆ ಕೇಂದ್ರೀಕೃತವಾಗಿ ನಿಂತುಬಿಟ್ಟಿದೆ ಎಂಬ ಭಾವನೆ ಬರುತ್ತಿದೆ. ಬಹುಶಃ ಚುನಾವಣೆಗಳು ನಡೆಯದಿದ್ದರೆ ಪ್ರಜಾಪ್ರಭುತ್ವ ಮರೆತು ಮತ್ತೆ ವ್ಯಕ್ತಿ ಆಧಾರಿತ ಸರ್ಕಾರದಲ್ಲಿ ನಾವಿದ್ದೆವು ಎಂಬ ಭಾವನೆ ಬಂದರು ಅಚ್ಚರಿಯಿಲ್ಲ. ನಿಮ್ಮ ಮುಂದಿನ ಕನಸೇನು? ಈ ನೆಲ ಮಣ್ಣಿನ ಸಂಸ್ಕೃತಿಯ ಬೆವರಿನ ಹೊದಿಕೆ ಹೊದ್ದುಕೊಂಡಿರುವ ನಮ್ಮ ಜನಾಂಗದ ಕುರಿತು ಒಂದು ಅದ್ಭುತ ಕೃತಿ ಹೊರತರಬೇಕು ಎಂಬ ಕನಸಿದೆ. ನಿಮ್ಮ ಇಷ್ಟದ ಲೇಖಕರು ಯಾರು? ಕನ್ನಡದಲ್ಲಿ ಕುವೆಂಪು ,ಭೈರಪ್ಪ, ದೇವನೂರು ಮಹದೇವ ಮತ್ತು ಸೈಯದ್ ಜಮೀರುಲ್ಲಾ ಷರೀಫ್.ಇಂಗ್ಲಿಷ್ ಕವಿಗಳ ಬಗ್ಗೆ ಅಷ್ಟೊಂದು ಆಳವಾದ ಅಧ್ಯಯನ ನನ್ನಿಂದ ನಡೆದಿಲ್ಲ. ಷೇಕ್ಸ್ ಪಿಯರ್ ನನ್ನಿಷ್ಟದ ಕವಿ ಅವರ Mid summer Night ನನ್ನನ್ನು ಬಹಳ ಕಾಡಿದ ಕೃತಿ. ಈಚೆಗೆ ಓದಿದ ಕೃತಿಗಳಾವವು? ಶಾಮಿಯಾನ ಕವಿ ಇದು ಡಾಕ್ಟರ್ ಸೈಯದ್ ಜಮೀರುಲ್ಲಾ ಷರೀಫ್ ಅವರ ಸಮಗ್ರ ಸಾಹಿತ್ಯದ ಕೃತಿ . ಡಾ. ಸುರೇಶ ನಾಯಕ್ ಸಂಪಾದಕತ್ವದಲ್ಲಿ ಮೂಡಿಬಂದಿದೆ.“ಹುಡುಕಿ ಕೊಡುವಿರಾ ಕಾಣೆಯಾಗಿರುವ ದರ್ಜೆಯವನ ಹೊಲಿಯಲು ಬೇಕಾಗಿದೆ ಕೇಸರಿ ಬಿಳಿ ಹಸಿರು ಕೆಂಪು ಗುಲಾಬಿ ಬಣ್ಣದ ತುಂಡು ಬಟ್ಟೆಗಳ ಶಾಮಿಯಾನ “ಮನುಷ್ಯ-ಮನುಷ್ಯರ ನಡುವಿನ ಸಂಬಂಧವನ್ನು ಕವಿ ಶರೀಫರು ಮಾರ್ಮಿಕವಾಗಿ ಚಿತ್ರಿಸಿದ್ದು ಭಟ್ಕಳದಲ್ಲಿ ಕೋಮುದಳ್ಳುರಿ ಹೊತ್ತಿ ಉರಿಯುತ್ತಿದ್ದ ಸಂದರ್ಭದಲ್ಲಿ. ಸಾಹಿತ್ಯದಿಂದ ಸೌಹಾರ್ದತೆ ಸಾಧಿಸಿದ ಸಾಲುಗಳು. ನಿಮಗೆ ಇಷ್ಟದ ಕೆಲಸ ಯಾವುದು? ನನಗೆ ಇಷ್ಟವಾದ ಕೆಲಸ ತರಗತಿಯಲ್ಲಿ ಪಾಠ ಬೋಧನೆ. ಇಷ್ಟದ ಸ್ಥಳ ಯಾವುದು ? ನನಗೆ ಇಷ್ಟವಾದ ಸ್ಥಳ ನನ್ನೂರು ಉಪ್ಪಿನ ಗಣಪತಿ. ನಿಮ್ಮ ಇಷ್ಟದ ಸಿನಿಮಾ ಯಾವುದು? ನನ್ನ ಇಷ್ಟವಾದ ಸಿನಿಮಾ ಶಂಕರ್ ನಾಗ ಅಭಿನಯದ ಮೂಗನ ಸೇಡು ನಿಮ್ಮ ಜೀವನದಲ್ಲಿ ಮರೆಯಲಾಗದ ಘಟನೆ ಯಾವುದು ? ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ನೇಮಕಗೊಂಡ ಹೊನ್ನಾವರದ ಜನ್ನ ಕಡಕಲ್ ಶಾಲೆ ಹುಡುಕಲು ಹರಸಾಹಸ ಪಟ್ಟಿದ್ದು ಎಂದು ಮರೆಯದ ಘಟನೆಯಾಗಿಇಂದಿಗೂ ಉಳಿದುಕೊಂಡಿದೆ. ಅಂತಿಮವಾಗಿ ನಿಮಗೆ ಏನು ಹೇಳಬೇಕು ಅನ್ಸತದ ? ಇಂದು ಸಾಹಿತ್ಯ ವ್ಯಾಪಾರವಾಗುತ್ತಿದೆ ಎಂಬ ಭಾವನೆ ಎಲ್ಲೆಡೆ ಭಾಸವಾಗು ತ್ತಿದೆ . ಶಾಲೆಯಲ್ಲೂ ಕೂಡ ಅಂಕಗಳಿಗೆ ಸೀಮಿತವಾಗಿ ಪಠ್ಯವನ್ನು ಸಿದ್ಧಪಡಿಸಿರುವುದು ಸಾಹಿತ್ಯದ ಬೆಳವಣಿಗೆ ಯಂತೂ ಅಲ್ಲಾ. ಮಕ್ಕಳ ಬೌದ್ಧಿಕ ಬೆಳವಣಿಗೆ ವಾಕ್ ಚಾತುರ್ಯಕ್ಕೆ ವಿಷಯ ವಿಶ್ಲೇಷಣೆಗೆ ಪಠ್ಯದಲ್ಲಿ ಅವಕಾಶಗಳು ತುಂಬಾನೇ ಕಡಿಮೆ.ಕುವೆಂಪು ಬೇಂದ್ರೆ ಕಾರ್ನಾಡ್ ಕಂಬಾರ್ ಮಾಸ್ತಿ ಕಾರಂತ ಸೇರಿದಂತೆ ನಾಡಿನ ಸಾಹಿತಿಗಳ ಸಾಹಿತ್ಯದ ಚರ್ಚೆ ವಿಮರ್ಶೆಗಳಿಗೆ ಪಠ್ಯ ದಲ್ಲಿ ಅವಕಾಶ ನೀಡಬೇಕು.ಸಾಹಿತ್ಯದ ವಿಚಾರ ಕಮ್ಮಟಗಳು ಹೆಚ್ಚೆಚ್ಚು ಪ್ರತಿ ಗ್ರಾಮಮಟ್ಟದಿಂದ ನಡೆಯಬೇಕು. ಕರ್ನಾಟಕ ಸಾಹಿತ್ಯ ಅಕಾಡೆಮಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಕನ್ನಡಪರ ಸಂಘಟನೆಗಳು ಒಂದೆಡೆ ಸೇರಿ ಕನ್ನಡ ಸಾಹಿತ್ಯದ ಕುರಿತು ಚರ್ಚೆ ವಿಮರ್ಶೆ ನಡೆಸಿ ಸಾಹಿತ್ಯ ಕುರಿತು ಆಸಕ್ತಿ ಮೂಡುವಂತೆ ಮಾಡಬೇಕು.******************* ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂಕಣ ಬರಹ ಒಮ್ಮೊಮ್ಮೆ ಪಾತ್ರೆ ತಿಕ್ಕುವಾಗಲೂ ಕವಿತೆಯ ಹೊಳಹುಗಾಣುತ್ತದೆ ಹೇಮಲತಾ ವಸ್ತ್ರದ. ಪರಿಚಯ: ಎಂಎ, ಎಂಇಡಿ, ಪಿಜಿ ಡಿಪ್ಲೋಮಾ ಇನ್ ಇಂಗ್ಲಿಷ್. ವಿಜಯಪುರ ಗ್ರಾಮೀಣ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿದ್ದಾರೆ. ಊರು: ಸಿಂದಗಿ. ಜಿಲ್ಲೆ: ವಿಜಯಪುರ. ಕೃತಿಗಳು: ಅವ್ವನಿಗೊಂದು ಪತ್ರ (ಕವನಸಂಕಲನ). ಪೃಥ್ವಿಯೊಡಲು(ಕಥಾಸಂಕಲನ)(ಅಚ್ಚಿನಲ್ಲಿದೆ). ಗಜಲ್ ಸಂಕಲನಅಚ್ಚಿನಲ್ಲಿದೆ. ಅಕ್ಕನಾಗಮ್ಮ (ನಾಟಕ)(ಅಚ್ಚಿನಲ್ಲಿ) ಶೈಕ್ಷಣಿಕ, ಸಾಹಿತ್ಯಕ ಲೇಖನಗಳು. ಮಕ್ಕಳ ಕಥೆಗಳು, ಕವನಗಳು. ಕ್ರೀಯಾಸಂಶೋದನೆ (ಬಾಲಕಾರ್ಮಿಕಪದ್ಧತಿ). ಗುಲ್ಬರ್ಗಾ ವಿಶ್ವವಿದ್ಯಾಲಯ ದ ಎಂಎ ಮೂರನೇ ಸೆಮ್ (ಆಧುನಿಕ ಕಾವ್ಯ ಸಂಗ್ರಹ-೨೦೧೨) ಗೆ ಕನ್ನಡಗಜಲ್ಗಳು, ಕವನಗಳು ಪಠ್ಯವಾಗಿವೆ. ಪ್ರಜಾವಾಣಿ, ಮಯೂರ, ವಿಜಯಕರ್ನಾಟಕ ಇತ್ಯಾದಿ ಪತ್ರಿಕೆಗಳಲ್ಲಿ ಕವನ, ಗಜಲುಗಳು ಮತ್ತು ಲೇಖನಗಳು ಪ್ರಕಟವಾಗಿವೆ. ಚಂದನ ದೂರದರ್ಶನದ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಅಕ್ಕಮಹಾದೇವಿ ವಿ.ವಿ, ಗುಲ್ಬರ್ಗ ವಿ.ವಿ, ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು ಇತ್ಯಾದಿಗಳಲ್ಲಿ ಉಪನ್ಯಾಸ. ವಿಜಯಪುರ ಆಕಾಶವಾಣಿಯಲ್ಲಿ ಚಿಂತನಗಳ ಪ್ರಸಾರ. ಕಥೆ, ಕವನಗಳ ಪ್ರಸಾರವಾಗಿವೆ. ಸಂದ ಗೌರವಗಳು : ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ (2018). ಹಾಗೂ ಶಿಕ್ಷಣ ಕ್ಷೇತ್ರದ ‘ಗುರುಶ್ರೇಷ್ಠ ‘ ಪುರಸ್ಕಾರ.(2017) ಸಂದರ್ಶನ: ಧಮಿನಿಸಲ್ಪಟ್ಟ ಎಲ್ಲದಕ್ಕೂ ದನಿಯಾಗುವ ಹಂಬಲ ನನ್ನ ಕವಿತೆಗೆ ನೀವು ಕವಿತೆಗಳನ್ನು ಯಾಕೆ ಬರೆಯುವಿರಿ? ಬರೆದಾದ ಮೇಲಿನ ನನ್ನ ತುಡಿತ ಕಡಿಮೆಯಗುವುದಕ್ಕೆ. ಸಿಗುವ ತೃಪ್ತಿ, ಸಮಾಧಾನಕ್ಕೆ,. ಕಿಂಚಿತ್ ಆದರೂ ಸಮಾಜದ ಋಣ ತೀರಿಸಬಹುದು(ಭ್ರಮೆ) ಎಂಬುದಕ್ಕೆ. ಮುಖ್ಯವಾಗಿ ದಮನಿಸಲ್ಪಟ್ಟ ಎಲ್ಲದಕ್ಕೂsss ದನಿಯಾಗುವ ಹಂಬಲಕ್ಕೆ ಬರೆಯುತ್ತೇನೆ. ಕವಿತೆ ಹುಟ್ಟುವ ಕ್ಷಣ ಯಾವುದು? ಇಂಥಹದ್ದೆ ಕ್ಷಣ ಎನ್ನಲಾಗದು. ಒಮ್ಮೊಮ್ಮೆ ಪಾತ್ರೆ ತಿಕ್ಕುವಾಗಲೂ ಹೊಳಹುಗಾಣುತ್ತದೆ. ನಿಮ್ಮ ಕವಿತೆಗಳಲ್ಲಿ ಪದೇ ಪದೇ ಕಾಡುವ ವಿಷಯ ಯಾವುದು? ಕವಿತೆಗಳ ವಸ್ತು ಯಾವುದು? ಬದುಕಿನ ಎಲ್ಲ ಮೂರ್ತ ಮತ್ತು ಅಮೂರ್ತಗಳು. ಸ್ವಲ್ಪ ಹೆಚ್ಚು ಅನ್ನುವಂತಿರುವುದು ಸ್ತ್ರೀ ಸಂವೇದನೆಗಳ ಅಭಿವ್ಯಕ್ತಿ. ಗೊತ್ತಿದ್ದೂ ಏನೂ ಮಾಡಲಾಗದ ಅಸಹಾಯಕತೆ, ನೋವಿಗೆ ತುತ್ತಾದ ಜೀವಗಳ ಕಣ್ಣೋಟ ತುಂಬ ಕಾಡುತ್ತವೆ. ಕವಿತೆಗಳಲ್ಲಿ ಬಾಲ್ಯ,ಹರೆಯ ಇಣುಕಿದೆಯಾ? ಇಣುಕಿದೆ. ಬಾಲ್ಯ ಮತ್ತು ಹರೆಯದ ಪ್ರಭಾವವೇ ಅಂತಹದ್ದು. ಪ್ರಸ್ತುತ ರಾಜಕೀಯ ಸನ್ನಿವೇಶಕ್ಕೆ ಕವಿಯಾಗಿ ಹೇಗೆ ಪ್ರತಿಕ್ರಿಯಿಸುವಿರಿ? ಸ್ವಾರ್ಥ, ದುರಾಸೆ ಮತ್ತು ನಿರ್ಲಜ್ಯ ರಾಜಕಾರಣವಿಂದು ವಿಜ್ರಂಭಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ವ್ಯಕ್ತಿ ಪೂಜೆ ಯಾವತ್ತಿಗೂ ಅಪಾಯಕಾರಿಯೇ. ಇದರಿಂದ ದೋಷಗಳು ಕಾಣಿಸದೇ ಹೋಗುತ್ತವೆ. ರಾಷ್ಟ್ರದ ಬೆಳವಣಿಗೆಗಾಗಿ ಮೌಲ್ಯಯುತ ದೂರಾಲೋಚನೆಗಳಿರುವ ಯೋಜನೆಗಳು ಮತ್ತು ಪ್ರಾಮಾಣಿಕ ಪ್ರಯತ್ನದ ಕೊರತೆ ಕಾಣುತ್ತಿದೆ. ಬರಿ ಕಲ್ಯಾಣ ಯೋಜನೆಗಳಿಂದ ಬಲಿಷ್ಠ ರಾಷ್ಟ್ರ ಕಟ್ಟಲಾಗದು. ಪ್ರಸ್ತುತ ರಾಜಕೀಯ ವ್ಯವಸ್ಥೆಯೆ ಅಪಮೌಲ್ಯಗೊಂಡಿದೆ. ದೇವರು ಧರ್ಮದ ಬಗ್ಗೆ ನಿಮ್ಮ ನಿಲುವೇನು? ಶರಣ ಧರ್ಮ ನನ್ನದು. ಜಾತಿಯಲ್ಲಿ ನಂಬಿಕೆಯಿಲ್ಲ. ಮೂರ್ತ ಕಲ್ಪನೆಗಳಲ್ಲ ನನ್ನ ದೇವರು. ಮಾನವೀಯತೆಯ ಸಾಕಾರವನ್ನು ದೇವರೆನ್ನಬಹುದೇನೊ. ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಹೇಗಿದೆ? ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಪರವಾಗಿಲ್ಲ ಅನಿಸುವಂತಿದೆ ಅಷ್ಟೆ. ತಾರತಮ್ಯದ ಕಸ ತೆಗೆಯಬೇಕಿದೆ. ಸಾಂಸ್ಕೃತಿಕ ಶ್ರೀಮಂತಿಕೆ ಕರಗಿದೆ. ಸಾಹಿತ್ಯದ ರಾಜಕೀಯದ ಬಗ್ಗೆ ನಿಮಗೆ ಏನನಿಸುತ್ತದೆ? ರಾಜಕಾರಣದಲ್ಲಿ ಸಾಹಿತ್ಯ ಇರಬೇಕೆ ವಿನಾ ಸಾಹಿತ್ಯದಲ್ಲಿ ರಾಜಕಾರಣವಿರಬಾರದು. ಸಾಹಿತಿ ಮಾತ್ರ ಮುನ್ನೆಲೆಗೆ ಬರುತ್ತಾನೆ. ಸಾಹಿತ್ಯ ದಿವಾಳಿಯಾಗುತ್ತದೆ. ಇಂದು ಸಾಹಿತ್ಯ ವಲಯದ ರಾಜಕಾರಣದ ಕುರಿತು ವಿಷಾದವಿದೆ. ದೇಶದ ಚಲನೆಯ ಬಗ್ಗೆ ನಿಮಗೇನನಿಸುತ್ತಿದೆ? ನಿಜಕ್ಕೂ ದೇಶದ ಚಲನೆ ಹಿಮ್ಮುಖವಾಗಿದೆ ಎನಿಸುತ್ತಿದೆ. ಬಂಡವಾಳಶಾಹಿ ಗಹಗಹಿಸುತ್ತಿದೆ. ಅಸಹಿಷ್ಣುತೆ ಎಲ್ಲ ವಲಯಗಳಲ್ಲಿ ಹೆಚ್ಚಾಗಿದೆ. ಇಂಥ ಮನಸ್ಥಿತಿ ದೇಶಕ್ಕೆ ಮಾರಕ. ಸಾಮಾನ್ಯರ ಬದುಕು ಅಸಹನೀಯವಾಗಿದೆ. ವ್ಯವಸ್ಥೆ ಹದಗೆಟ್ಟಿದೆ.ಅಶನ ವಸನಕ್ಕೂ ಪರದಾಡುವಂತಾಗಿದೆ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ಮನಸ್ಸುಗಳನ್ನು ಕಟ್ಟುವ ಕೃತಿ ರಚಿಸಬೇಕು ಎಂಬ ಕನಸಿದೆ. ಕನ್ನಡ ಇಂಗ್ಲಿಷ್ ಭಾಷೆಯಲ್ಲಿ ನಿಮ್ಮ ಇಷ್ಟದ ಕವಿಗಳಾರು? ಕನ್ನಡದಲ್ಲಿ ಕವಿಯಾಗಿ ಜಿ ಎಸ್ ಎಸ್, ನಿಸಾರ್ ಅಹಮ್ಮದ ಅವರು ಇಷ್ಟ. ಸಾಹಿತಿಯಾಗಿ ಶಿವರಾಮ ಕಾರಂತ, ಪೂರ್ಣಚಂದ್ರ ತೇಜಸ್ವಿ, ತ್ರಿವೇಣಿ, ಕೊಡಗಿನ ಗೌರಮ್ಮ ಇಷ್ಟ. ಶರ್ಲಾಕ್ ಹೋಮ್, ಟಾಲ್ಸ್ಟಾಯ್, ಕೀಟ್ಸ್ ಇಷ್ಟ. ರವೀಂದ್ರನಾಥ ಟ್ಯಾಗೋರ, ಗಾಲಿಬ್, ರೂಮಿ, ಕಮಲಾದಾಸ ಅವರ ಸಾಹಿತ್ಯ ಹೆಚ್ಚು ಆಕರ್ಷಿಸುತ್ತದೆ. ನೀವು ಓದಿದ ಪುಸ್ತಕಗಳಾವವು? ಅಮೇರಿಕಾದ ಕಪ್ಪುಗುಲಾಮ ಫ್ರೆಡೆರಿಕ್ ಡಗ್ಲಾಸ್ ನ ಆತ್ಮಕಥೆ ಕಪ್ಪುಕುಲುಮೆ, ಅಮೃತ ನೆನಪುಗಳು ಮತ್ತು ಸಿಂಗಾರೆವ್ವ ಮತ್ತು ಅರಮನೆ ಇನ್ನೊಮ್ಮೆ ಓದಿದೆ. ನಿಮಗೆ ಇಷ್ಟದ ಕೆಲಸ ಯಾವುದು? ಕಲಿಸುವುದು ಮತ್ತು ಕೃಷಿಯಲ್ಲಿ ತೊಡಗುವುದು. ನಿಮ್ಮ ಇಷ್ಟದ ಸ್ಥಳಯಾವುದು ? ಸಮುದ್ರ ಮತ್ತು ಹೊಲದಲ್ಲಿರುವ ಪುಟ್ಟಮನೆ. ನಿಮ್ಮ ಇಷ್ಟದ ಸಿಮಿಮಾ ಯಾವುದು? ಬೆಟ್ಟದ ಜೀವ, ಕರಾಟೆ ಕಿಡ್ ಮರೆಯಲಾಗದ ಘಟನೆಯಾವುದು ? ಅವ್ವ ಮತ್ತು ಪತಿಯ ಸಾವು. ************************************************************************ ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂಕಣ ಬರಹ ಕವಿತೆ ಅನಂತ ಮೌನಗಳ ಶಬ್ದ ಸಾಗರ ರಂಜಾನ್ ಹೆಬಸೂರು.ಹುಬ್ಬಳ್ಳಿ ಕವಿತೆಗಳನ್ನು ಯಾಕೆ ಬರೆಯುವಿರಿ? ಕವಿತೆ ಅಥವಾ ಕಾವ್ಯ ನಮ್ಮೊಳಗಿನ ಒತ್ತಡಗಳನ್ನು ಕಳೆದುಕೊಳ್ಳುವ ಒಂದು ಮಾಧ್ಯಮ ನನ್ನೊಳಗೆ ಒಡಮೂಡುವ ಸೂಕ್ಷ್ಮ ಗ್ರಹಿಕೆಯ ಸಂವೇದನಗಳು , ಒತ್ತಡಗಳು ಸಂಕಟಗಳನ್ನು , ವರ್ತಮಾನದ ತಲ್ಲಣಗಳಿಗೆ ಅನುಸಂಧಾನವಾಗಿಸುವುದು ಮುಖಾಮುಖಿಯಾಗುವುದಕ್ಕೆ ಕಾವ್ಯ ಬರೆಯುತ್ತವೆ ಒಳಗಿನ ಕತ್ತಲೆಗೆ ಬೆಳಕು ಸುರಿಯಲಿಕ್ಕೆ,ಮನುಷ್ಯ ಬದುಕಿನ ಶೋಧಕ್ಕೆ,ಕಾಡುವ ಘಟನೆಗಳಿಗೆ ಚಿತ್ರಗಳಿಗೆ, ನೋವಿಗೆ,ಸಂಕಟಕ್ಕೆ,ತಲ್ಲಣಕ್ಕೆ,ಮಿಡಿಯುವ ಕರುಳಿಗೆ,ಅವಮಾನ ನೋವು,ಹತಾಶೆ,ಕ್ರೋಧ,ಅವ್ಯಕ್ತ ಭಾವಗಳ ಅಕ್ಷರಗಳಿಗೆ ಕಾವ್ಯ ಮಾಧ್ಯಮ ವಾಗುತ್ತದೆ . ಕಾವ್ಯ ಕಾರ್ಯ ಕಾರಣವಿಲ್ಲದೆ ಹುಟ್ಟುವುದಲ್ಲ ಅನುಭವ ಘನೀಕರಣ ಗೊಂಡು ತನ್ನೊಳಗೆ ಹುಟ್ಟಿಸಿಕೊಳ್ಳುತ್ತದೆ ; ಬರೆಸಿಕೊಳ್ಳುತ್ತದೆ.ನನ್ನೊಳಗೆ ಮನೋಗತವಾಗಿ ಹುದುಗಿ ಹದವಾಗಿ ಮೆದುವಾಗಿ ಕಾವ್ಯವಾಗುತ್ತದೆ. ಕವಿತೆ ಹುಟ್ಟುವ ಕ್ಷಣ ಯಾವುದು? ಸವಿತಾ ನಾಗಭೂಷಣ ಅವರ ಕವಿತೆಯಂತೆ ಕವಿತೆ ಎಂದರೆ ” ಚಪಾತಿ ಹಿಟ್ಟಿನಂತೆ ಮಡಚಿದರೆ ಚಿಕ್ಕದಾಗುತ್ತದೆ ಲಟ್ಟಿಸಿದರೆ ಅಗಲವಾಗುತ್ತದೆ. ಕೆ.ಎಸ್ ನರಸಿಂಹಸ್ವಾಮಿ ಅವರ ಕವಿತೆಯಂತೆ ಅನುಭವದಾಳ ಕೈ ಹಿಡಿದಾಗ ಒಂದು ಕವಿತೆಯಂತೆ. ಒಟ್ಟಿನಲ್ಲಿ ಕಾವ್ಯ ನನ್ನಂತರಂಗದ ಕತ್ತಲಿಗೆ ಪ್ರತಿಬಿಂಬದ ಬೆಳಕಾಗಿ ಕಾವ್ಯ ವಿದೆ . ಅದು ಕಾಡಿದಾಗ ಮಿಡಿದಾಗ ಕಾವ್ಯ ಸ್ಪುರಣೆಯಾಗುತ್ತದೆ. ಅದೊಂದು ನಿರಾಳವಾಗಿಸುವ ಪ್ರಕ್ರಿಯೆ . ಅದು ದೀರ್ಘ ಕಾಡುವಿಕೆಯ ನಂತರ ಅದೊಂದು ಅನಂತ ಮೌನಗಳ ಶಬ್ದ ಸಾಗರ. ಕವಿತೆ ಅದು ಒಮ್ಮೆ ಲೆ ಮೂಕನಿಗೆ ಬಾಯಿ ಬಂದಂಗೆ ಕಂಬಾರನ ಕುಲುಮೆಯಲಿ ಸುಟ್ಟು ಹದವಾಗಿ ಮೆದುವಾದ ಕ್ಷಣ ,ಭೂತ ವರ್ತಮಾನ ಗಮಿಸಿ ಭವಿತವ್ಯಕ್ಕೆ ದಾರಿ ತೋರುವ ಮಂತ್ರಗಳು. ಹದಗೊಂಡಾಗ ಎದೆ ತೆರೆದ ಮಾತುಗಳು. ನಿಮ್ಮ ಕಾವ್ಯದ ವಸ್ತು ಏನು? ಕಾಡುವ ವಿಷಯ ಯಾವುದು? ಪರಕೀಯತೆ, ಅನಾಥ ಪ್ರಜ್ಞೆ, ಲೋಕದ ಸಂಕಟಗಳು, ಏಕಾಂತ ಲೋಕಾಂತವಾದ ವರ್ತಮಾನದ ತಲ್ಲಣಗಳು,ಆತಂಕಗಳು ನನ್ನ ಕಾವ್ಯದಲ್ಲಿ ಕಾಡುವ ವಿಷಯ ಪ್ರತಿ ಕಾವ್ಯವು ಹಾಗೆ ಮಾಗಿದಂತೆ ಅನುಭವಿಸಿದಂತೆ ಅದರ ಫಲ. ವಯೋಸಹಜವಾಗಿ ಹುಟ್ಟುವ ಆನುಭವ ಆಕಾಂಕ್ಷೆ ಗಳು, ಕನಸುಗಳು, ಆಲೋಚನೆ ಗಳು, ಮನೋಭಾವ ಗಳು ನಮ್ಮ ಕಾವ್ಯವಾಗುತ್ತದೆ.ಹಾಗೆ ಯೇ ವಯೋ ಸಹಜ ಪ್ರೀತಿ ಪ್ರೇಮ, ವಿರಹ ದುಃಖ,ಸಂತೋಷ, ಹುಡುಗಾಟಿಕೆ,ಬಾಲ್ಯ ಕಳೆದ ಕ್ಷಣಗಳು ,ಹರೆಯದ ಕಾಮನೆ,ಪ್ರೀತಿ ಎಲ್ಲವೂ ನನ್ನ ಕಾವ್ಯಗಳಲ್ಲಿ ಪಡಿಮೂಡಿವೆ ಹಾಗೆಯೆ ಎಲ್ಲ ಕವಿಗಳಲ್ಲೂ ಸಹಜವೂ ಹೌದು. ನಿಮ್ಮಕಾವ್ಯದಲ್ಲಿ ಬಾಲ್ಯ,ಹರೆಯ ಇಣುಕಿದೆಯಾ? ಹರೆಯದ ಪ್ರೇಮ ಕಾವ್ಯ ಹುಟ್ಟುವ ತಲಕಾವೇರಿ ಬಾಲ್ಯದ ಹುಡುಗಾಟ . ಹರೆಯದ ಚೆಲ್ಲಾಟ ಕಾವ್ಯವಾಗಿ ಅನುಭವವಾಗಿ ಅನುಭಾವವಾಗಿ ವಯಸ್ಸು ಮಾಗಿದಂತೆ ಕಾವ್ಯ ಗಂಭೀರತೆಯ ಸ್ವರೂಪ ಪಡೆದುಕೊಳ್ಳುತ್ತದೆ. ಒಂದು ತೊರೆ ಹರಿದು ನದಿಯಾಗಿ ಸಾಗರದಂತೆ ಹರಡುವ ಪ್ರಕ್ರಿಯೆ. ಪ್ರಸ್ತುತ ರಾಜಕೀಯ ಸಂದರ್ಭಕ್ಕೆ ನಿಮ್ಮ ಪ್ರತಿಕ್ರಿಯೆ ಏನು? ರಾಜಕೀಯ ಜ್ಞಾನ ಇಲ್ಲವೆನ್ನುವವನು ಈ ದೇಶದ ಅನಕ್ಷರಸ್ಥ. ರಾಜಕೀಯವೆನ್ನುವುದು ನಮ್ಮ ಕಲ್ಯಾಣಗೋಸ್ಕರ ನಾವೆ ಮಾಡಿಕೊಂಡ ಒಂದು ಜನಸೇವಕರ ಗುಂಪು .ಆದರೆ ಲಾಭಕೋರತನವೇ ಈ ಸನ್ನಿವೇಶದ ಪ್ರಧಾನ ಅಂಶವಾಗಿದೆ .ಬಂಡವಾಳ ಶಾಹಿಗಳ ಕಪಿಮುಷ್ಠಿಯಲ್ಲಿ ಸಿಕ್ಕು ಖಾಸಗೀಕರಣದ ಗುಲಾಮತನಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳುವ ನೆಲೆಗೆ ಸಾಗುತ್ತಿದೆ.ಜನಕಲ್ಯಾಣದ ಅಂಶಗಳನ್ನು ಕ್ರೋಢೀಕರಿಸಿ ಕೊಂಡು ಅಭಿವೃದ್ಧಿ ಪಥದತ್ತ ರಾಜಕಾರಣ ಸಾಗಬೇಕಿದೆ ದೇವರು, ಧರ್ಮದ ಬಗ್ಗೆ ನಿಮ್ಮ ನಿಲುವೇನು? ದೇವರು ಧರ್ಮ ಅಪ್ರಸ್ತುತ ವೆನಿಸುವ ದುರಿತ ಕರೋನಾ ಕಾಲದಲ್ಲಿ ಇದ್ದೇವೆ. ಆದರೆ ಅದರ ನಂಬಿಕೆಯ ಜೀವಾಲಳವೂ ಇನ್ನೂ ನಮ್ಮನ್ನು ಬದುಕಿಸುತ್ತೀವೆ. ಕ್ರೂರತೆಯ ಕಾಲದಲ್ಲೂ ಧರ್ಮ ದೇವರು ನಮ್ಮನ್ನು ರಕ್ಷಿಸುತ್ತವೆ ಅನ್ನುವ ನಂಬಿಕೆಯ ನ್ನು ಬಲವಾಗಿ ನಂಬಿಕೊಂಡದ್ದು ನಮ್ಮ ಭಾರತೀಯ ಪರಂಪರೆ ಆದರೆ ನಮ್ಮ ಹಿರಿಯರು ಧರ್ಮ ಮತ್ತು ದೇವರ ಪರಿಕಲ್ಪನೆಯನ್ನು ಹಿರಿದಾರ್ಥದಲ್ಲಿ ನಂಬಿಕೊಂಡು ಬಂದಿದ್ದರು ಆದರೆ ನಮ್ಮ ವಿಶ್ವಕುಟುಂಬತ್ವವನ್ನು ಸೀಮಿತಗೊಳಿಸಿ ಆಲೋಚಿಸುತ್ತಿದ್ದೇವೆ ಆ ದಿಕ್ಕಿನಲ್ಲಿ ಚಿಂತಿಸುತ್ತಿದ್ದೇವೆ ವಿಶಾಲಾರ್ಥದಲ್ಲಿ ಧರ್ಮ ದೇವರ ಪರಿಕಲ್ಪನೆ ಇಂದು ಇಲ್ಲದಾಗಿ ಜಗತ್ತು ಅದಃಪತನದತ್ತ ಸಾಗುತ್ತಿದೆ. ಧರ್ಮ ಮನುಷ್ಯನ ದೃಷ್ಟಿ ಕೋನವನ್ನು ಬದಲಿಸಬೇಕಿದೆ ಎಲ್ಲರೂ ಬದುಕುವ ಮನುಜಮತವನ್ನು ಪ್ರೇರಿಪಿಸುವ ವಾತಾವರಣ ನಿರ್ಮಾಣವಾಗಬೇಕಿದೆ ಮೂರ್ತ ಅಮೂರ್ತ ಗಳ ಕಲ್ಪನೆ ಇಟ್ಟುಕೊಂಡು ದೇವರು ಧರ್ಮ ನಮ್ಮ ಕೈಯೊಳಗಿನ ಯಂತ್ರಗಳಾಗಿ ಮಾರ್ಪಟ್ಟಿವೆ ಬಸವಣ್ಣ ಹೇಳಿದಂತೆ ” ದಯವಿಲ್ಲದ ಧರ್ಮ ಅದಾವುದಯ್ಯ ದಯವೇ ಬೇಕು ಸಕಲ ಪ್ರಾಣೆಗಳಲ್ಲಿ” ಅನ್ನುವ ವಚನದಂತೆ “ದಯೆ ಧರ್ಮದ ಮೂಲಾಧಾರ ವಾಗಬೇಕು. ದೇವರು ಅಂತರಂಗದ ಶಕ್ತಿಯಾಗಬೇಕು ಅದು ಮನುಷ್ಯನ ಕಲ್ಯಾಣ ಬಯಸಬೇಕು ಸಕಲ ಜೀವರಾಶಿಗಳಿಗೆ ಒಳಿತು ಬಯಸಬೇಕು ಧರ್ಮ ಮಿತಿಗಳಿಂದ ತುಂಬಿ ಮನುಷ್ಯ ನ ಅಧಃಪತನಕ್ಕೆ ಹಾದಿಯಾಗಬಾರದು ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಮೊಹಮ್ಮದ್ ದರ್ವೇಶಿ ಹೇಳಿದಂತೆ ಕಾವ್ಯ ಚರಿತ್ರೆಯನ್ನ ಬದಲಿಸುತ್ತದೋ ಇಲ್ಲವೋ ಗೊತ್ತಿಲ್ಲ ಕವಿತೆ ವರ್ತಮಾನವನ್ನ ಬದಲಿಸುತ್ತದೋ ಇಲ್ಲವೋ ಗೊತ್ತಿಲ್ಲ ಆದರೆ ಅದು ಕವಿಯನ್ನ ಮಾತ್ರ ಬದಲಾಯಿಸುತ್ತದೆ ಎನ್ನುವಂತೆ ಜಿಎಸ್ ಶಿವರುದ್ರಪ್ಪ ಅವರು ಹೇಳಿದಂತೆ ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೆ ಕಾವ್ಯ ಎಂದರೆ ಕಾವ್ಯ ನನ್ನನ್ನು ಮೊದಲು. ನಂತರ ತನ್ನ ಸುತ್ತಲಿನ ಸಮಾಜವನ್ನು ಒಂದಿಷ್ಟು ಎಚ್ಚರ ವಿವರಿಸಲು ಈ ಎಚ್ಚರಿಕೆ ಅನೇಕ ಮಾಧ್ಯಮಗಳಿದ್ದರೂ ಕಾವ್ಯ ಅದರಲ್ಲೊಂದು ಕೊಳದ ತಳ ಗೊಡೆ ಗೆದ್ದಾಗ ಅದು ತಿಳಿಯಾಗಲು ಕಾವ್ಯದ ಕೆರೆಯೂ ತಿಳಿಗೆ ಕಾರಣವಾಗುತ್ತವೆ .ಸಾಹಿತ್ಯದಿಂದ ಎಲ್ಲವೂ ಬದಲಾವಣೆಯಾಗುತ್ತದೆ ಎಂದು ಕನಸು ಕಂಡವರಲ್ಲ ಅದು ಬದಲಾವಣೆಗೆ ಪ್ರಖರ ಆಯುಧ ಎನ್ನುವುದರಲ್ಲಿ ಸಂಶಯವಿಲ್ಲ ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಕವಿ ಸಾಹಿತಿ ಯಾರು? ಆಂಗ್ಲಭಾಷೆ ಗಿಂತಲೂ ಹೆಚ್ಚು ಕನ್ನಡದಲ್ಲಿ ಅನೇಕ ಕವಿಗಳು ನಮ್ಮನ್ನು ಕಾಡಿದ್ದಾರೆ ಬೇಂದ್ರೆ. ಮತ್ತು ಕುವೆಂಪು. ಸು. ರಂ .ಎಕ್ಕುಂಡಿ .ಸತೀಶ್ ಕುಲಕರ್ಣಿ . ದೇವನೂರ ಮಹಾದೇವ. ಕಾರ್ನಾಡ, ಸಿದ್ಧಲಿಂಗಯ್ಯ. ಎಚ್ ,ಎಸ್, ಶಿವಪ್ರಕಾಶ್. ಕೆ. ಷರೀಫಾ, ಬಾನು ಮುಷ್ತಾಕ್ ಇವರೆಲ್ಲರೂ ನನ್ನ ಇಷ್ಟದ ಕವಿಗಳು. ಇತ್ತೀಚೆಗೆ ಓದಿದ ಕೃತಿಗಳು ಯಾವವು? ಲಂಕೇಶರ ಅಕ್ಷರ ಹೊಸ ಕಾವ್ಯ. ನೀಲು ಕವಿತೆಗಳು, ಚನ್ನಪ್ಪ ಅಂಗಡಿಯವರ ಸ್ತೋಮ ಕಥಾಸಂಕಲನ. ಕಿರಸೂರ ಗಿರಿಯಪ್ಪ ಅವರ ಅಲೆ ನದಿ , ಎಸ್. ಮಕಾಂದಾರ್ ಅವರ ಅಕ್ಕಡಿ ಸಾಲು ಇತ್ತೀಚೆಗೆ ನಾನು ಓದಿದ ಸಂಕಲನಗಳು. ನಿಮಗೆ ಇಷ್ಟವಾದ ಕೆಲಸ ಯಾವುದು? ನನಗೆ ಇಷ್ಟವಾದ ಕೆಲಸ ಮಕ್ಕಳ ಜೊತೆ ಆಟ ಆಡುವುದು ಪಾಠ ಮಾಡುವುದು. ನಿಮಗೆ ಇಷ್ಟವಾದ ಸ್ಥಳ ಯಾವುದು? ಕಡಲತೀರ ,ದಟ್ಟ ಪ್ರಕೃತಿಯ ಮಡಿಲು, ಅಸೀಮ ಬಯಲು ಇಷ್ಟವಾದ ಸಿನಿಮಾ ಯಾವುದು ? ನನಗೆ ಇಷ್ಟವಾದ ಸಿನಿಮಾ ಮಯೂರ ಹುಲಿಯ ಹಾಲಿನ ಮೇವು ಮೈ ಅಟೋಗ್ರಾಫ್ ಮುಂಗಾರು ಮಳೆ ನೀವು ಮರೆಯಲಾಗದ ಘಟನೆ ಯಾವುದು? ಅವಳ ನೆನಪುಗಳು, ವಿಕೃತಗೊಂಡ ಸಮಾಜದ ಕಹಿ ಘಟನೆಗಳು, ಸದಾ ಕಾಡುವ ಸಂಕಟಗಳ ಸಂವೇದನೆಗಳು. *************************************** ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂಕಣ ಬರಹ ಕತೆಗಾರ್ತಿ ಆಶಾ ಜಗದೀಶ್ಮುಖಾಮುಖಿಯಲ್ಲಿ “ಹೆಣ್ಣು ನನ್ನ ಬರಹದ ಮೂಲ ಕಾಳಜಿ” ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಉತ್ತರ: ಕವಿತೆಯನ್ನು ನಾನು ಬರೆಯುತ್ತೇನೆ ಎನ್ನುವುದು ತಪ್ಪಾಗುತ್ತದೆ. ಕವಿತೆಗಳೇ ನನ್ನಿಂದ ಬರೆಸಿಕೊಳ್ಳುತ್ತವೆ ಎನ್ನುವುದು ಸರಿ. ನನ್ನೊಳಗೆ ಅಂತಹುದೊಂದು ತೀವ್ರತೆಯನ್ನು ಇಟ್ಟುಕೊಳ್ಳದೆ ಬರೆಯುವುದು ನನಗೆ ಕಷ್ಟ. ಕವಿತೆ ಹುಟ್ಟುವ ಕ್ಷಣ ಯಾವುದು ? ಉತ್ತರ: ಯಾವ ಕ್ಷಣವಾದರೂ ಸರಿ ಅದು ನನ್ನನ್ನು ಕಾಡಬೇಕು. ಸತಾಯಿಸಬೇಕು. ಇನ್ನು ಬರೆಯದೆ ಉಳಿಯಲಾರೆ ಅನ್ನಿಸುವಂತೆ ಮಾಡಬೇಕು. ಆಗ ಮಾತ್ರ ಕವಿತೆ ಹುಟ್ಟುತ್ತದೆ. ಹಾಗಾಗಿ ಕವಿತೆಯ ರಚನೆಯಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳುವುದು ಕಷ್ಟಸಾಧ್ಯ. ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಉತ್ತರ: ವಸ್ತು ಇಂಥದ್ದೇ ಇರಬೇಕು ಅಂತೇನೂ ಇಲ್ಲ ನನಗೆ. ಸುತ್ತಲಿನ ಆಗುಹೋಗುಗಳೆಲ್ಲಕ್ಕೂ ಸೂಕ್ಷ್ಮವಾಗಿ ಸ್ಪಂದಿಸುವವಳು ನಾನು. ಯಾರದೋ ಸಾವು ಮತ್ಯಾರದೋ ಕಷ್ಟ ಎಲ್ಲವೂ ನನ್ನನ್ನು ಅಳಿಸುತ್ತವೆ. ಒಂದು ಆರ್ಟ್ ಮೂವಿ ಚಾಲು ಆಯಿತೆಂದರೆ ನನ್ನ ಕಣ್ಣೀರು ಕೋಡಿ ಬೀಳುವುದು ಗ್ಯಾರೆಂಟಿ ಎಂದು ಮೊದಲೇ ಹೇಳಿಬಿಡಬಹುದು. ಮತ್ತೆ ಅದರ ಬಗ್ಗೆ ನನಗೆ ಮುಜುಗರವಿಲ್ಲ. ಇನ್ಫ್ಯಾಕ್ಟ್ ಎಷ್ಟೋ ಹೊತ್ತು ಅಥವಾ ಕೆಲ ದಿನಗಳೂ ಅದೇ ಹ್ಯಾಂಗೋವರಿನಲ್ಲಿ ಇರಲು ಬಯಸ್ತೇನೆ ನಾನು. ಆಗ ನನ್ನಲ್ಲಿ ಕವಿತೆಯೊಂದು ಮೊಳಕೆಯೊಡೆಯಬಹುದು. ನೋವು, ಸಂತೋಷ, ಸಿಟ್ಟು, ಅಸಹನೆ, ಕೋಪ….. ಇತ್ಯಾದಿ ಯಾವ ಭಾವವೇ ಆಗಿರಲಿ ಅದರ ಶಿಖರ ಮುಟ್ಟುವ ತೀವ್ರತೆ ನನ್ನನ್ನಾವರಿಸಿದಾಗ ನನ್ನೊಳಗೆ ಕವಿತೆ ಮೊಟ್ಟೆ ಇಡುತ್ತದೆ. ಮತ್ತೆ ಕವಿಯಾದವನು ಅಂತರಂಗದ ದನಿಯಾಗುತ್ತಲೇ ಬಹಿರಂಗದ ಕಿವಿಯಾಗಲೂ ಬೇಕಿರುತ್ತದೆ. ಹಾಗಾಗಿ ಅವನ ಕಾವ್ಯ ಅದೆರಡರಿಂದಲೂ ಪ್ರಭಾವಿಸಲ್ಪಟ್ಟಿರುತ್ತದೆ. ಅದಕ್ಕೆ ನಾನೂ ಹೊರತಲ್ಲ. ಹೆಣ್ಣು ನನ್ನ ಬರಹದ ಮೂಲ ಕಾಳಜಿ ಕಾರಣ ಹೆಣ್ಣು ಹೊರಗಿನಿಂದಷ್ಟೇ ಅಲ್ಲ ಒಳಗಿನಿಂದಲೂ ಹೆಚ್ಚು ಗೊತ್ತಿರುವ ಕಾರಣ ಇರಬಹುದು. ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಉತ್ತರ: ಖಂಡಿತಾ. ಬಾಲ್ಯದ ನೆನಪುಗಳಿಲ್ಲದೇ ನಮ್ಮ ಯಾವ ಪ್ರಕಾರದ ಬರಹವೂ ಸಂಪೂರ್ಣವಾಗಲಿಕ್ಕೇ ಸಾಧ್ಯವಿಲ್ಲ ಎನಿಸುವಷ್ಟು ಅದು ನಮ್ಮ ಬರಹಗಳಲ್ಲಿ ಹಾಸು ಹೊಕ್ಕು. ಇನ್ನು ಹರೆಯ ಎನ್ನುವುದು ಕಲ್ಲನ್ನೂ ಕವಿಯನ್ನಾಗಿಸಿಬಿಡುವ ಕಾಲ. ಅದಕ್ಕೆ ಯಾರೂ ಹೊರತಾಗಲು ಸಾಧ್ಯವಿಲ್ಲ. ಇದೇ ಹಂತದಲ್ಲಿಯೇ ನಮ್ಮ ದೇಹ ಮತ್ತೊಂದು ಹಂತದ ಬೇಳವಣಿಗೆಯನ್ನು ಪಡೆದುಕೊಳ್ಳುತ್ತದೆ. ಹಾರ್ಮೋನುಗಳ ವ್ಯತ್ಯಯ ವೈಪರಿತ್ಯ ನಮ್ಮ ಭಾವಕೋಶವನ್ನು ನಾನಾಥರದ ಪರೀಕ್ಷೆಗೆ ಒಳಗಾಗುವಂತೆ ಮಾಡುತ್ತದೆ. ಇವೆಲ್ಲವೂ ಒಂದಿಡೀ ಬದುಕಿಗೆ ಅಗತ್ಯವಿರುವ ಅನುಭವಗಳು. ನಾವವನ್ನು ಅಗತ್ಯವಾಗಿ ಕಟ್ಟಿಟ್ಟುಕೊಳ್ಳಲೇ ಬೇಕು. ಅದು ಪ್ರೇಮ ಮತ್ತು ಕಾಮದ ಭಾವಗಳು ಬಲಗೊಳ್ಳುವ ಕಾಲವೂ ಹೌದು. ಪ್ರೇಮ ಮತ್ತು ಕಾಮ ನಮ್ಮನ್ನು ಅತ್ಯಂತ ತೀವ್ರವಾಗಿ ತಲ್ಲಣಿಸುವಂತೆ ಕಾಡಬಲ್ಲ ಭಾವಗಳು. ಕವಿಯಾದವನಿಗೆ ಅವು ವರದಾನವೇ ಸರಿ. ಮತ್ತೆ ಪ್ರತಿಯೊಬ್ಬರೂ ಅವಕ್ಕೆ ಈಡಾಗದೇ ಪಾರಾಗುವುದು ಸಾಧ್ಯವಿಲ್ಲ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಉತ್ತರ : ಹಿಂದಿನಿಂದಲೂ ರಾಜಕೀಯದ ಅಂಗಳದಲ್ಲಿಯೇ ಸಾಹಿತ್ಯ ಪೋಷಣೆ ಪಡೆದು ಬೆಳೆದು ಬಂದಿರುವುದನ್ನು ಕಾಣಬಹುದು. ರಾಜಾಶ್ರಯವಿಲ್ಲದೇ ಕವಿಗಳು ಕಾವ್ಯವನ್ನಷ್ಟೇ ನಂಬಿ ಬದುಕುವ ಸ್ಥಿತಿ ಆಗ ಇರುತ್ತಿರಲಿಲ್ಲ. ಅದರ ನಡುವೆಯೂ ಯಾವ ಆರ್ಥಿಕ ಸಹಾಯವಿಲ್ಲದೆಯೂ ಬರೆದ ಕೆಲವರು ಸಿಗುತ್ತಾರೆ. ಆದರೆ ತಮ್ಮ ಜೀವಿತಾವಧಿಯಲ್ಲಿ ಅವರಿಗೆ ಸಿಗಬೇಕಾದ ಮಾನ ಮನ್ನಣೆ ಸಿಗದೆ ಹೋಗಿರುವುದು ಕಂಡುಬರುತ್ತದೆ. ಇದು ರಾಜಾಶ್ರಯದ ಬೆಂಬಲವಿಲ್ಲದ್ದು ಕಾರಣ ಎನ್ನುವುದೂ ತಿಳಿದುಬರುತ್ತದೆ. ಆದರೆ ಈಗ ಹಾಗಿಲ್ಲ. ಬಹಳಷ್ಟು ಬರಹಗಾರರು ಆರ್ಥಿಕವಾಗಿ ಸ್ವತಂತ್ರರಿದ್ದಾರೆ ಮತ್ತು ಮುಖ್ಯವಾಗಿ ಬರಹವನ್ನೇ ನಂಬಿ ಬದುಕುತ್ತಿಲ್ಲ. ಇದು ಒಂದು ರೀತಿಯಲ್ಲಿ ಒಳ್ಳೆಯದೇ ಆಗಿದೆ. ಇಲ್ಲಿ ಸಾಹಿತ್ಯವನ್ನು ಪ್ರೀತಿಯಿಂದ ಓದುವ ಮತ್ತು ಬರೆಯುವ ಕಾರಣಕ್ಕಾಗಿ ಸಾಹಿತ್ಯವನ್ನು ಆಯ್ಕೆ ಮಾಡಿಕೊಳ್ಳುವುದು ಸಾಧ್ಯವಾಗಿದೆ. ಈಗ ಆಮಿಷಗಳಿಲ್ಲ, ಹೊಗಳು ಭಟ್ಟಂಗಿಗಳಾಗುವ ಅವಶ್ಯಕತೆ ಅಥವಾ ಅನಿವಾರ್ಯತೆ ಯಾರಿಗೂ ಇಲ್ಲ. ಆದರೆ ಇಂದಿನ ರಾಜಕೀಯ ಪ್ರಭಾವವೇ ಬೇರೆ. ಮತ್ತದು ಸಾಹಿತ್ಯದ ಮಟ್ಟಿಗೆ ಪೂರಕವಾಗಿದೆ ಅಂತನ್ನಿಸುವುದಿಲ್ಲ ನನಗೆ. ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಉತ್ತರ : ಧರ್ಮ ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುವ ಮಾರ್ಗ. ದೇವರು ಎಂದರೆ ನಾವು ತಪ್ಪು ಮಾಡದಂತೆ ಸದಾ ನಮ್ಮನ್ನು ಎಚ್ಚರಿಸುವ ಅರಿವು. ಇದು ನನ್ನ ಸರಳ ನಂಬಿಕೆ. ದೇವರನ್ನು ನಾನು ನಂಬುವುದು ಹೀಗೆ. ತೋರಿಕೆಗೆ ದೇವರ ಮುಂದೆ ಕೂತು ಭಜನೆ ಮಾಡುವುದು ನನ್ನಿಂದ ಸಾಧ್ಯವಿಲ್ಲ. ಹಸಿದವನನ್ನ “ಮುಂದೆ ಹೋಗು…” ಎಂದು ಹೇಳಿ ದೇವರ ಮುಂದೆ ನೈವೇದ್ಯಕ್ಕಿಡುವುದು ನನ್ನಿಂದಾಗದ ಕೆಲಸ. ಮನಸ್ಸು ಶುದ್ಧಾವಗಲ್ಲದೆ ಸ್ನಾನ ಮಾಡಿರುವೆ ಎನ್ನುವ ಕಾರಣಕ್ಕೆ ದೇವರ ಎದುರು ಕೂರುವುದು ನನ್ನಿಂದ ಸಾಧ್ಯವಿಲ್ಲ. ದೇವರ ಭಾವಚಿತ್ರವೇ ಒಂದು ಅಗ್ನಿದಿವ್ಯವಿದ್ದಂತೆ. ಅದರ ಕಣ್ಣಿಗೆ ಕಣ್ಣು ಸೇರಿಸಲು ನಿಜಾಯಿತಿ, ಪ್ರಾಮಾಣಿಕತೆ ಮತ್ತು ಆತ್ಮಸಾಕ್ಷಿಗೆ ನಿಯತ್ತಾಗಿರಬೇಕು. ಹಾಗಿಲ್ಲದೇ ಹೋಗಿ ಕೂತು ಕಣ್ಣುತಪ್ಪಿಸಿ ಕೂತು ಎದ್ದುಬರುವುದು ನನಗಂತೂ ಕಷ್ಟ. ನಾನು ಆಸ್ತಿಕಳು. ಆದರೆ ನನ್ನನ್ನು ಹತ್ತಿರದಿಂದ ನೋಡುವವರು ನಾಸ್ತಿಕಳೆಂದು ತಿಳಿಯಬಹುದು. ಕಾರಣ ಅವರ ನಂಬಿಕೆಗೂ ನನ್ನ ನಂಬಿಕೆಗೂ ಸಾಕಷ್ಟು ವ್ಯತ್ಯಾಸವಿದೆ. ನನ್ನ ದೇವರಿಗೊಂದು ಹೆಸರಿರಬೇಕು ಎಂದು ನಾನು ಬಯಸುವುದಿಲ್ಲ. ನನ್ನ ದೇವರಿಗೆ ಜಾತಿ, ಧರ್ಮದ ಹಂಗಿಲ್ಲ. ಅದೊಂದು ಶಕ್ತಿ, ಅದೊಂದು ಬೆಳಕು… ಹಚ್ಚಿಟ್ಟ ದೀಪದ ಜ್ಯೋತಿಯೇ ದೇವರು. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಉತ್ತರ: ಇವತ್ತಿನ ಸಾಂಸ್ಕೃತಿಕ ಪ್ರಪಂಚ ಜಾಗತಿಕ ಮಟ್ಟದಲ್ಲಿ ವೈವೀಧ್ಯಮಯ ಅವಕಾಶಗಳನ್ನು ನಮಗೆ ಮಾಡಿಕೊಡುತ್ತಿದೆ. ಇವತ್ತು ಬರಹಗಾರನಿಗೆ ಸಾಕಷ್ಟು ಸ್ಪೂರ್ತಿ ಇದೆ ಬರೆಯಲಿಕ್ಕೆ. ಯಾವುದೇ ಒತ್ತಡವಿಲ್ಲ. ಆದರೆ ಆಧುನಿಕತೆಯ ವೇಗ ಅವನಲ್ಲಿ ವಿಚಿತ್ರ ಧಾವಂತವನ್ನು ಸೃಷ್ಟಿಸುತ್ತಿದೆ. ಎಲ್ಲವೂ ಇನ್ಸ್ಟಂಟ್ ಆಗುತ್ತಿರುವ ಈ ಹೊತ್ತಿನಲ್ಲಿ ಇನ್ಸ್ಟಂಟ್ ಹೆಸರು, ಪ್ರಸಿದ್ಧಿ, ಗುರುತಿಗಾಗಿ ಅರೆಬೆಂದ ಪದಾರ್ಥವನ್ನು ಬಡಿಸುವ ತರಾತುರಿಯೂ ಬೆಳೆಯುತ್ತಿದೆ. ಸ್ವಾರ್ಥ, ಅಸಹನೆ, ಮೇಲರಿಮೆ, ಕೀಳರಿಮೆ… ಮುಂತಾದ ಕಾರಣಕ್ಕೆ ತಮ್ಮ ಜಾಗಟೆಯನ್ನು ತಾವೇ ಹೊಡೆದುಕೊಳ್ಳುವುದು ಹೆಚ್ಚಾಗುತ್ತಿದೆ. ಅದರಿಂದ ಪಾರಾಗಿ ಬರೆಯಬೇಕಾಗಿರುವುದು ಸಧ್ಯದ ತುರ್ತು. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಉತ್ತರ: ಸಾಂಸ್ಕೃತಿಕ ಕ್ಷೇತ್ರದ ಒಳಗಿನ ರಾಜಕಾರಣ ಭಯ ಹುಟ್ಟಿಸುತ್ತದೆ. ಅರಣ್ಯದ ಯಾವ ಮರವೂ ಒಂದನ್ನೊಂದು ತುಳಿದು ಬೆಳೆಯುವುದಿಲ್ಲ. ಅಲ್ಲಿ ಒಂದು ಸಣ್ಣ ಪೊದೆ ಹೇಗೆ ಸ್ವತಂತ್ರವಾಗಿ ಹಬ್ಬಿ ಬೆಳೆಯುತ್ತದೋ ಹಾಗೆಯೇ ತೇಗ, ಹೊನ್ನೆ, ದೇವದಾರುವಿನಂತಹ ಮರಗಳೂ ಬೆಳೆಯುತ್ತವೆ. ಅಲ್ಲಿನ ಪ್ರತಿಯೊಂದು ಪ್ರಾಣಿಯೂ ಸ್ವಾಭಾವಿಕ ಆಹಾರ ಸರಪಣಿಯನ್ನು ಅನುಸರಿಸಿ ತಮ್ಮ ಬದುಕನ್ನು ತಾವು ಸಾಗಿಸುತ್ತವೆ. ಹಾಗೆ ಬೆಳೆಯಬೇಕು ನಾವು. ಆದರೆ ಇಲ್ಲಿ ಹಾಗಾಗುವುದಿಲ್ಲ. ನಕಾರಾತ್ಮಕ ಬಾಹ್ಯ ಪ್ರೇರಣೆಗಳು, ಪ್ರಭಾವಗಳು ನಮ್ಮನ್ನು ಹಾದಿ ತಪ್ಪಿಸುತ್ತವೆ. ಅವುಗಳಿಂದ ಪಾರಾಗಿ ಬರಹವನ್ನು ಮಾಡಬೇಕಾದ ಸವಾಲು ನಮ್ಮ ಮುಂದಿದೆ. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉತ್ತರ: ಸಧ್ಯದ ಕರೋನಾ ಪರಿಸ್ಥಿತಿಯಲ್ಲಿ ಯಾವುದನ್ನೂ ಅರ್ಥೈಸುವುದು, ನಿರ್ಧರಿಸುವುದು ಅಷ್ಟು ಸುಲಭವಿಲ್ಲ. ಆದರೂ ವಿಶ್ವದ ಮುಂದೆ ಭಾರತದ ಚಲನೆ ಆಶಾದಾಯಕವೆನಿಸುತ್ತಿದೆ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಉತ್ತರ: ಖಂಡಿತ ನನಗೆ ಕನಸುಗಳಿಲ್ಲ. ಬರೆಯುವುದು ನನ್ನ ಜರೂರತ್ತು. ಯಾರನ್ನೂ ಮೆಚ್ಚಿಸಲಿಕ್ಕಲ್ಲ. ಯಾರಾದರೂ ಹೊಗಳಿದರೆ ನನಗೆ ವಿಪರೀತ ಮುಜುಗರವಾಗುತ್ತದೆ. ಇನ್ನೊಂದೇ ಒಂದು ಮಾತನ್ನೂ ಕೇಳಿಸಿಕೊಳ್ಳಲು ಸಾಧ್ಯವಿಲ್ಲ ನನ್ನಿಂದ ಎನ್ನಿಸುವಷ್ಟು. ನಾನು ನನ್ನ ತುಡಿತ, ತುಮುಲ, ಒಳ ಒತ್ತಡವನ್ನ ತಡೆಯಲಾಗದೆ ಬರೆದದ್ದನ್ನು ಸೌಜನ್ಯದಿಂದ ಓದಿ ಪ್ರೀತಿಸುವವರ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವವಿರುತ್ತದೆ. ಅವರು ನಿಜವಾಗಲೂ ಹೊಗಳಿಕೆಗೆ ಅರ್ಹರು. ಇನ್ನು ಇದುವರೆಗೂ ನಾನೇನು ಬರೆದಿರುವೆನೋ ಅದೆಲ್ಲ ನಾನು ಕನಸುಕಟ್ಟಿ ಬರೆದದ್ದಲ್ಲ. ಹಾಗಾಗಿ ಇನ್ನು ಮುಂದೆಯೂ ಅದು ಹಾಗೇ ನಡೆದುಕೊಂಡು ಹೋಗುತ್ತದೆ. ನನಗೆ ನಿರೀಕ್ಷೆಗಳು ಕಡಿಮೆ. ಹಾಗಾಗಿ ನೋವೂ ಕಡಿಮೆ. ಯಾರಾದರೂ ನ್ಯಾಯವಾಗಿ ಟೀಕಿಸಿದರೆ ಖುಷಿಯಾಗುತ್ತದೆ. ಮತ್ತು ಅನಗತ್ಯ ಟೀಕೆಗಳನ್ನು ತಳ್ಳಿಹಾಕಿ ಮುನ್ನಡೆಯುವುದೂ ಗೊತ್ತು. ನೆನ್ನೆ ನಾಳೆಗಳಿಗಿಂತ ವರ್ತಮಾನದಲ್ಲಿ ಬದುಕುವವಳು ನಾನು. ಈ ಕ್ಷಣ ನಾನೇನು ಮಾಡುತ್ತಿರುತ್ತೇನೋ ಅದನ್ನು ನೂರು ಪ್ರತಿಶತ ನನ್ನ ಸಾಮರ್ಥ್ಯ ಸುರಿದು ಚೊಕ್ಕವಾಗಿ ಮಾಡಿ ಮುಗಿಸಬೇಕು, ಅಷ್ಟೇ ನನ್ನ ಗುರಿಯಾಗಿರುತ್ತದೆ. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ? ಉತ್ತರ: ಒಬ್ಬರೇ ಅಂತ ಹೇಳುವುದು ಕಷ್ಟ. ಬಹಳಷ್ಟು ಮಂದಿ ಇದ್ದಾರೆ. ಓ.ಹೆನ್ರಿ, ಎಮಿಲಿ ಡಿಕಿನ್ಸನ್, ಶೇಕ್ಸ್‌ಪಿಯರ್, ವಿಲಿಯಮ್ ಬ್ಲೇಕ್, ಕೀಟ್ಸ್, ಮಾಯಾ ಏಂಜೆಲೋ… ಮುಂತಾದವರು. ಮತ್ತೆ ಭಾರತೀಯ ಇಂಗ್ಲೀಷ್ ಬರಹಗಾರರಲ್ಲಿ ಅರವಿಂದ್ ಅಡಿಗ, ಚೇತನ್ ಭಗತ್, ಕಮಲಾದಾಸ್, ಎ.ಕೆ.ರಾಮಾನುಜನ್, ರಸ್ಕಿನ್ ಬಾಂಡ್… ಮತ್ತು ಹೆಸರಿಸಲಾದಷ್ಟು ಮಂದಿ ಒಂದೇ ಒಂದು ಕವಿತೆ, ಒಂದೇ ಒಂದು ಕತೆ ಅಥವಾ ಒಂದೇ ಒಂದು ಬರಹವಾಗಿ ನನ್ನ ಓದಿಗೆ ದಕ್ಕಿ ನನ್ನ ಅರಿವನ್ನು ವಿಸ್ತರಿಸಿರುತ್ತಾರೆ. ಅವರೆಲ್ಲರೂ ನನಗೆ ಇಷ್ಟವೇ. ಮತ್ತೆ ಕನ್ನಡದಲ್ಲಿ ನನ್ನನ್ನು ಬಹಳ ಕಾಡಿದವರೆಂದರೆ ಕುವೆಂಪು ತೇಜಸ್ವಿ, ಅನಂತಮೂರ್ತಿ, ಕುಂ. ವೀರಭದ್ರಪ್ಪ, ಜಯಂತ್ ಕಾಯ್ಕಿಣಿ….. ಇವರೆಲ್ಲ ಈಗಲೂ ನನ್ನನ್ನು ಕಾಡುವವರೇ. ಇತ್ತೀಚೆಗೆ ಬರೆಯುತ್ತಿರುವ ಬಹಳಷ್ಟು ಮಂದಿ ಬರಹಗಾರರು ತಮ್ಮ ಗಟ್ಟಿ ಬರಹದಿಂದಾಗಿ ನನಗೆ ಬಹಳ ಇಷ್ಟ. ಈಚೆಗೆ ಓದಿದ ಕೃತಿಗಳಾವವು? ಉತ್ತರ: ಇತ್ತೀಚೆಗೆ ಆಲ್ಕೆಮಿಸ್ಟ್ (poulo coelho) ಓದಿದೆ. ಬಹಳ ಇಷ್ಟವಾಯ್ತು. ಈ ಕಾದಂಬರಿಯ ಮೊದಲಲ್ಲಿ ಒಂದು ಸಣ್ಣ ಕತೆ ಬರುತ್ತದೆ. ಅಲ್ಲೊಬ್ಬ ಸಣ್ಣ ವಯಸ್ಸಿನ ಹುಡುಗನಿರುತ್ತಾನೆ. ಅವನು ಬಹಳ ಸುಂದರವಾಗಿರುತ್ತಾನೆ. ಪ್ರತಿನಿತ್ಯ ಅವನೊಂದು ತಿಳಿಗೊಳಕ್ಕೆ ಬರುತ್ತಿರುತ್ತಾನೆ. ಅದರಲ್ಲಿ ತನ್ನ ಪ್ರತಿಬಿಂಬ ನೋಡಿಕೊಂಡು ಖುಷಿಪಡುತ್ತಿರುತ್ತಾನೆ. ಆದರೆ ಅದೊಂದು ದಿನ ಅವ ಅದೇ ಕೊಳದಲ್ಲಿ ಜಾರಿ ಬಿದ್ದು ಸತ್ತು ಹೋಗುತ್ತಾನೆ. ಕೊಳ ದುಃಖಿತವಾಗುತ್ತದೆ. ಅವನು ಬಿದ್ದ ಜಾಗದಲ್ಲಿ ಸುಂದರವಾದ ಕಮಲವೊಂದು ಹುಟ್ಟಿ ಅರಳುತ್ತದೆ. ಒಮ್ಮೆ ಅತ್ತ ಹೋಗುತ್ತಿದ್ದ ದೇವತೆಗಳು ಕೊಳವನ್ನು ಕೇಳುತ್ತಾರೆ, “ನಿನಗೀಗ ದುಃಖವಾಗುತ್ತಿರಬಹುದಲ್ಲವಾ, ಅವ ಅದೆಷ್ಟು ಸುಂದರವಾಗಿದ್ದ, ಪ್ರತಿನಿತ್ಯ ನಿನ್ನ ಸಮತಲದ ಮೇಲೆ ಬಹಳ ಹತ್ತಿರದಿಂದ ತನ್ನ ಮುಖದ ಪ್ರತಿಬಿಂಬವನ್ನು ನೋಡಿಕೊಂಡು ಆನಂದಿಸುತ್ತಿದ್ದ ” ಎಂದು ಕೇಳುತ್ತಾರೆ. ಆಗ ಕೊಳ “ಹುಡುಗ ಸುಂದರನಿದ್ದನಾ? ನಿಜಕ್ಕೂ ನನಗೆ ಗೊತ್ತಿಲ್ಲ. ಅವನು ಪ್ರತಿಬಾರಿ ಕಣ್ಣರಳಿಸಿ ಬಹಳ ಹತ್ತಿರದಿಂದ ನನ್ನನ್ನು ನೋಡುವಾಗ ನಾನು ಅವನ ಕಣ್ಣಲ್ಲಿ ನನ್ನದೇ ಸೌಂದರ್ಯವನ್ನು ಕಂಡು ಬೆರಗಾಗುತ್ತಿದ್ದೆ. ಈಗ ಅದು ಸಾಧ್ಯವಾಗುತ್ತಿಲ್ಲ, ಅದು ನನ್ನ ನೋವು” ಎನ್ನುತ್ತದೆ. ಈ ಕತೆ ಅದೆಷ್ಟು ನನ್ನನ್ನು ಕಾಡಿತೆಂದರೆ, ಹೌದಲ್ಲವಾ ನಾವು ಯಾವ ಮಟ್ಟಿಗೆ ತಯಾರಾಗಿದ್ದೇವೆ ಎಂದರೆ ನಮಗೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದನ್ನು ಬಿಟ್ಟು ಬೇರೆ ಏನೂ ಗೊತ್ತಿಲ್ಲ. ಬೇಕಾಗೂ ಇಲ್ಲ. ನಿಮಗೆ ಇಷ್ಟವಾದ ಕೆಲಸ ಯಾವುದು? ಉತ್ತರ: ಹಾಡುವುದು, ಬಣ್ಣಗಳ ಜೊತೆ ಆಟ ಆಡುವುದು, ಚಿತ್ರ ಬರೆಯುವುದು, ಕ್ರಾಫ್ಟ್ ಮಾಡುವುದು, ಸುಮ್ಮನೆ ಗೊತ್ತು ಗುರಿ ಇಲ್ಲದೇ ಓದುತ್ತಾ ಕೂರುವುದು, ಮಕ್ಕಳೊಂದಿಗೆ ಬೆರೆಯುವುದು, ಅವರಿಗೆ ಏನಾದರೂ ಕಲಿಸುವುದು, ಅವರಲ್ಲಿ ಸ್ಪೂರ್ತಿ ತುಂಬುವುದು…. ಹೀಗೆ ಒಟ್ಟಿನಲ್ಲಿ ಸುಮ್ಮನೆ ಕೂರಲಿಕ್ಕಂತೂ ನನಗೆ ಸಾಧ್ಯವಿಲ್ಲ. ಏನಾದರೂ ಸರಿ ಮಾಡುತ್ತಲೇ ಇರಬೇಕು ನಾನು. ಜೊತೆಗೆ ಕೌಟುಂಬಿಕ ಜವಾಬ್ದಾರಿಗಳಂತೂ ಇದ್ದೇ ಇರುತ್ತವೆ. ನಿಮಗೆ ಇಷ್ಟವಾದ ಸ್ಥಳ ಯಾವುದು ? ಉತ್ತರ: ಸಮುದ್ರ ತೀರ ಮತ್ತು ದಟ್ಟ ಕಾಡು. ನಾನು ಹುಟ್ಟಿ ಬೆಳೆದದ್ದು ಮಲೆನಾಡಿನಲ್ಲಿ. ಚಿಕ್ಕಂದಿನ ಟ್ರಿಪ್ಪುಗಳಲ್ಲಿ ಬಹಳಷ್ಟು
ಅಂಕಣ ಬರಹ ಪದೇ ಪದೇ ಕಾಡೋದು ಮನುಷ್ಯನ ವೈರುಧ್ಯಗಳು, ಸಂಬಂಧಗಳು. ಸಾಮಾಜಿಕ ತಲ್ಲಣ ತವಕಗಳು” ಮಮತಾ ಅರಸೀಕೆರೆ ಪರಿಚಯ :ಮಮತಾ ಅರಸಿಕೆರೆ ಕವಯಿತ್ರಿ. ವೃತ್ತಿಯಿಂದ ಶಿಕ್ಷಕಿ. ಚಿಕ್ಕಮಗಳೂರಿನ ಬೆಳವಾಡಿ ಅಪ್ಪನ ಊರು. ತುಮಕೂರು ಅವರ ತಾಯಿಯ ತವರು. ಶಿಕ್ಷಣ ಪಡೆದದ್ದೆಲ್ಲವೂ ಜಾವಗಲ್ ನಲ್ಲಿ. ಶಿಕ್ಷಕ ವೃತ್ತಿಯಲ್ಲಿದ್ದು, ಎಂ.ಎ.ಬಿಎಡ್ ಪಡೆದವರು. ವೃತ್ತಿಯಿಂದ ಶಿಕ್ಷಣ ಇಲಾಖೆಯಲ್ಲಿ ಈಗ ಸಿಆರ್‌ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂರು ಕೃತಿಗಳು ಪ್ರಕಟವಾಗಿವೆ. ಕಾವ್ಯ, ಅನುವಾದ ಹಾಗೂ ಮಕ್ಕಳ ೩ ನಾಟಕಗಳು ಎಂಬ ಕೃತಿಗಳನ್ನು ಹೊರ ತಂದಿರುವ ಇವರ ಆಸಕ್ತಿಯ ಕ್ಷೇತ್ರಗಳು ವಿಜ್ಞಾನ, ರಂಗಭೂಮಿ, ಸಂಘಟನೆ, ಸಾಹಿತ್ಯ ಕ್ಷೇತ್ರ. ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಇವರ ಕವಿತೆ, ಬರಹಗಳು ಪ್ರಕಟವಾಗಿವೆ ಮುಖಾಮುಖಿಯಲ್ಲಿ ಕವಯಿತ್ರಿ ಮಮತಾ ಅರಸಿಕೆರೆ, ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಕವಿ ಅನ್ನುವಾಗ ನನಗೆ ಕೆಲವೊಮ್ಮೆ ಸಂಕೋಚವಾಗುತ್ತದೆ. ಬರೆದದ್ದು ಕವಿತೆಗಳಾ? ಅಂತ ಮುಟ್ಟಿ ನೋಡಿಕೊಳ್ಳುವ ಹಾಗೆ. ಆಲೋಚನೆಗಳು ಹಾಳೆಗಿಳಿದಾಗ ಪದ್ಯದ ರೂಪವಾಗುತ್ತದಷ್ಟೆ. ಕವಿತೆ ಹುಟ್ಟುವ ಘಳಿಗೆ ಯಾವುದು ? ಕವಿತೆ ಹುಟ್ಟುವ ಸಂದರ್ಭ ಇಂತಿಷ್ಟೆ ಅಂತಿಲ್ಲ. ಸದಾ ಕವಿತೆಯ ಗುಂಗು ನನಗೆ. ಸಮಯಾ ಸಮಯದ ಹಂಗಿಲ್ಲದೆ ಫಳಕ್ಕನೆ ಹೊಳೆವ ಸಾಲುಗಳನ್ನ ಜೋಡಿಸೋದು. ನಂತರ ಧ್ಯಾನಿಸಿ ಸುಧಾರಿಸೋದು. ಬರೆದ ನಂತರ ನೋವೋ ನಲಿವೋ ಜೊತೆಯಾಗುತ್ತದೆ. ಇತ್ತೀಚೆಗೆ ಉದ್ದೇಶಪೂರ್ವಕವಾಗಿ ಬರೆಸಿಕೊಳ್ಳುತ್ತಿವೆ . ನಿಮ್ಮ ಕವಿತೆಗಳ ವಸ್ತು ಏನು ? ಹೆಚ್ಚಾಗಿ ಕಾಡುವ ಸಂಗತಿಯಾವವು ? ಈ ಪ್ರಶ್ನೆಗೆ ಉತ್ತರ ಕ್ಲೀಷೆಯಾಗುತ್ತದೇನೋ, ಆದರೂ ಸಾಮಾಜಿಕ ವಿಷಯಗಳೇ ಕವಿತೆಯ ವಸ್ತು. ಆಯಾ ಕಾಲಘಟ್ಟಕ್ಕೆ ತಕ್ಕಂತೆ ಸ್ಪಂದಿಸಿ ಬರೆಯಬೇಕು ಅನ್ನುವ ಅರಿವು ಒಮ್ಮೆ ಮೂಡಿದರೆ ಆ ಜಾಡಿನಿಂದ ತಪ್ಪಿಸಿಕೊಳ್ಳುವುದು ಕಷ್ಟ. ಆ ನಂತರವೂ ವಸ್ತು ವೈವಿಧ್ಯ ಇದ್ದೇ ಇರುತ್ತದೆ, ಪದೇ ಪದೇ ಕಾಡೋದು ಮನುಷ್ಯನ ವೈರುಧ್ಯಗಳು, ಸಂಬಂಧಗಳು. ಸಾಮಾಜಿಕ ತಲ್ಲಣ ತವಕಗಳು. ನಿಮ್ಮ ಕವಿತೆಗಳಲ್ಲಿ ಬಾಲ್ಯ ಇಣುಕಿದೆಯೇ ? ತಮಾಷೆ ಅಂದರೆ ಬಾಲ್ಯದಲ್ಲಿ ಪ್ರೌಢಳಂತೆ, ಪ್ರೌಢಳಾದಾಗ ಬಾಲ್ಯದ ಕುರಿತು ಆಲೋಚನೆ ಹೆಚ್ಚು ಕಾಡತೊಡಗಿದ್ದು. ಅವಧಿಯ ಹಂಗಿಲ್ಲ, ಈ ಎರಡೂ ವಿಷಯಗಳು ಪದ್ಯಗಳಲ್ಲಿ ಕಾಣಿಸಿಕೊಂಡಿದೆ. ಶಿಸ್ತಿಲ್ಲ ನನಗೆ!! ಇವತ್ತಿನ ರಾಜಕಾರಣದ ಬಗ್ಗೆ ನಿಮಗೆ ಏನನಿಸುತ್ತದೆ ? ಬಹಳ ದಿನಗಳವರೆಗೆ ರಾಜಕೀಯ ಅರ್ಥವೇ ಆಗುತ್ತಿರಲಿಲ್ಲ. ಸಿಕ್ಕಾಪಟ್ಟೆ ಪಾರದರ್ಶಕ ಆಲೋಚನೆ ನನ್ನದು. ನಂತರದ ದಿನಗಳಲ್ಲಿ ನಿಜದ ಅರಿವಾದಂತೆ ದಂಗಾದೆ. ನಡೆನುಡಿಗೆ ತಾಳಮೇಳವೇ ಇಲ್ಲ. ಆದರ್ಶವೆಂದು ಓದುವ ವಿಚಾರಗಳಿಗೂ ಸಾಮಾಜಿಕ ವ್ಯವಸ್ಥೆಗೂ ಸಂಪೂರ್ಣ ಕೊಂಡಿಕಳಚಿದ ವಾತಾವರಣ. ಹೆಚ್ಚು ಹೇಳದಿರಲು ನನ್ನದೇ ಕಾರಣಗಳಿವೆ. ಇಲ್ಲವೆಂದರೆ ಆ ವಿಷಯವೇ ಪೇಜುಗಟ್ಟಲೇ ತುಂಬೀತು! ಧರ್ಮ, ದೇವರ ಬಗ್ಗೆ ನಿಮ್ಮ ಅನಿಸಿಕೆಗಳೇನು? ಧರ್ಮ, ದೇವರು ವೈಯಕ್ತಿಕ ನಂಬಿಕೆಗಳು ಎಂಬುದು ಸರ್ವೇಸಾಧಾರಣ ವಿಷಯ. ಪ್ರಾಮಾಣಿಕತೆ ಪ್ರದರ್ಶಿಸಬೇಕೆಂದರೆ , ಕೆಲವು ದಿನಗಳ ಕಾಲ ದೇವರ ವಿಷಯಕ್ಕೆ ಶ್ರದ್ಧಾಳು ನಾನು. ಧರ್ಮದ ಬಗ್ಗೆ ಅಲ್ಲ. ಕಾಲಕ್ರಮೇಣ ಜಾಗೃತಿಯ ಮಿಂಚು ಹರಿಸಿದ್ದು ನನ್ನ ಮೇಷ್ಟ್ರು ದೇವರ ಹೆಸರಿನ ಸಮೂಹ ಸನ್ನಿಯ ಮೂಲಕ ಜರುಗುವ ಎಷ್ಟೊಂದು ಅವಘಡಗಳು, ಮೋಸಗಳ ಪರಿಚಯವಾಗುತ್ತಾ ದಿಗ್ಭ್ರಮೆಯಾಯಿತು. ಈ ಸಂಚುಗಳನ್ನು ವಿರೋಧಿಸಿದರೆ ಕೋಪಗೊಳ್ಳುವ ಹಿತಾಸಕ್ತಿಗಳು ದೇವರು ಧರ್ಮಗಳ ಮುಖವಾಡಗಳನ್ನು ಪುರಸ್ಕರಿಸುವುದು, ಮಾನ್ಯತೆ ದಕ್ಕಿಸುವ ಬಗ್ಗೆ ಸೋಜಿಗ ನನಗೆ. ಇನ್ನುಳಿದಂತೆ ದೇವರ ನಾಮಧೇಯದ ಮೂಲಕ ಆಯೋಜನೆಗೊಳ್ಳುವ ಸತ್ಕಾರ್ಯಗಳ ಬಗ್ಗೆ ಸಕಾರಾತ್ಮಕವಾಗಿ ಪರಿಶೀಲನೆ ನಡೆಸಬೇಕಿದೆ. ಇವತ್ತಿನ ಸಾಂಸ್ಕೃತಿಕ ವಾತಾವರಣದ ಬಗ್ಗೆ ಏನನಿಸುತ್ತದೆ ? ಸಾಂಸ್ಕತಿಕ ವಾತಾವರಣದ ಅಲೆಗಳು ಹೆಚ್ಚಾಗುತ್ತಿದೆ. ಎಲ್ಲಾ ಬಗೆಯ ಕ್ಷೇತ್ರಗಳೂ ಈಗ ಬಹಳಷ್ಟು ಬ್ಯುಜಿಯಾಗಿವೆ. ವರ್ಷಕ್ಕೆ ಒಂದೊ ಎರಡೋ ಸಂಖ್ಯೆಯಲ್ಲಿ ಊರಿಗೊಂದರಂತೆ ಜರುಗುತ್ತಿದ್ದ ಕಾರ್ಯಕ್ರಮಗಳು, ವಾರಕ್ಕೊಂದಾದರೂ ಕಾಣಿಸಿಕೊಳ್ಳುತ್ತಿವೆ, ಅದರದ್ದೇ ಆಯಾಮಗಳನ್ನು ಹೊತ್ತು. ಗುಣಮಟ್ಟ, ಹಿನ್ನೆಲೆ, ಅವುಗಳ ಹಿಂದಿನ ಕಾರಣಗಳು ಬಹಳಷ್ಟಿರಬಹುದು. ಆದರೆ ಶುದ್ಧತೆಯ ಪ್ರಮಾಣವನ್ನ ಕಾಪಾಡಿಕೊಳ್ಳಬೇಕೆನಿಸುತ್ತದೆ. ಹೀಗೆ ಹೇಳಿದರೆ ಶುದ್ಧತೆಯ ಮಾಪಕವೇನು ಅಂತ ಕೇಳಿಯಾರು! ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಈ ಪ್ರಶ್ನೆ ಯಾವತ್ತಿನದೂ ಆಗಿದೆ. ಮುಂದೆಯೂ ಇರುತ್ತದೆ. ಈ ವಲಯದೊಳಗೆ ಸಿಲುಕದಿರುವವರೇ ಕಡಿಮೆ! ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ ? ಚಲನೆಯ ಬಗ್ಗೆ ಕಾಳಜಿಯಿದೆ ಹಾಗಾಗಿ ಖಂಡಿತಾ ಆತಂಕವಿದೆ. ಕಾತುರವಿದೆ. ಕಾಲ ಕಾಲಕ್ಕೆ ಈ ಬಗ್ಗೆ ಸಾಹಿತ್ಯ ರಚನೆಯಾಗಿದೆ. ಉಗ್ರ ಹಾಗೂ ಸೌಮ್ಯ ಪ್ರತಿಕ್ರಿಯೆಗಳೆರಡೂ ಕಾಣಿಸಿಕೊಂಡಿವೆ. ಸದ್ಯಕ್ಕಂತೂ ಚಲನೆಯ ಮಾದರಿ ಆಶಾದಾಯಕವಾಗಿಲ್ಲ. ಹಿಮ್ಮಖವಲ್ಲದ ಮುಂಚಲನೆ ಮುಖ್ಯವಾಗಬೇಕು. ಆದರೆ ಭರವಸೆ ಕಳೆದುಕೊಂಡಿಲ್ಲ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಆಸಕ್ತಿ ನನಗೆ. ಸಂಘಟನೆಯಲ್ಲಿ ತೊಡಗಿ ಸಾಹಿತ್ಯ ಹಿಂದುಳಿದಿದೆ. ಆದರೆ ಸಂಘಟನಾತ್ಮಕ ಕೆಲಸ ಬಹಳ ಮುಖ್ಯವೆನಿಸುತ್ತದೆ ಆಗಾಗ್ಗೆ. ಬಹಳಷ್ಟು ಬರೆಯಬೇಕೆಂಬ ಅಪಾರ ಸಾಮಗ್ರಿ ಜೊತೆಗಿದೆ. ಸೋಮಾರಿತನ ಜತೆಗೂಡಿ ಹಿನ್ನೆಡೆಯಾಗ್ತಿದೆ! ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ,ಕಾಡಿದ ಬರಹಗಾರರು ಯಾರು ? ಸಹಜವಾಗಿಯೇ ವಿಶ್ವಮಾನವತೆಯನ್ನು ಬೋಧಿಸಿದ ಕುವೆಂಪು ನಂತರ ಕಾರಂತರು ಇಷ್ಟವಾಗುತ್ತಾರೆ. ಕನ್ನಡದ ಬಹಳಷ್ಟು ಹಿರಿಯ ಲೇಖಕರನ್ನ ಓದಿದ್ದೇನೆ. ಮಾನವತೆ ಹಾಗೂ ಜೀವಪರವಾಗಿ ಬರೆಯುವ ಎಲ್ಲ ಲೇಖಕರು ಆಪ್ತವಾಗುತ್ತಾರೆ. ಆಂಗ್ಲ ಲೇಖಕರಲ್ಲಿ ನೆರೂಡ, ಚಾರ್ಲ್ಸ್ ಬುಕೋವ್‌ಸ್ಕಿ, ಇನ್ನು ಹಿಂದಿಯಲ್ಲಿ ಪ್ರೇಮ್‌ಚಂದ್ ಇಷ್ಟ, ಈಚೆಗೆ ಓದಿದ ಕೃತಿಗಳಾವವು ? ಇಲ್ಲೀವರೆಗೂ ಕೊಂಡ ಪುಸ್ತಕಗಳ ಸಂಖ್ಯೆಗಿಂತ ಕಳೆದ ಆರು ತಿಂಗಳಲ್ಲಿ ತರಿಸಿಕೊಂಡ ಪುಸ್ತಕಗಳ ಸಂಖ್ಯೆ ಅಧಿಕ. ಕೊಡುಗೆಯಾಗಿ ಬಂದವೂ ಹೆಚ್ಚು, ಓದಿದ ಪುಸ್ತಕಗಳ ಪಟ್ಟಿ ಕೊಂಚ ಉದ್ದ ಇದೆ! ನಿಮಗೆ ಇಷ್ಟವಾದ ಕೆಲಸ ಯಾವುದು ? ಇಷ್ಟವಾದ ಕೆಲಸ ಪ್ರಯಾಣ ಮಾಡುವುದು. ತಿರುಗಾಟವೆಂದರೆ ನೆಚ್ಚು ನಿಮಗೆ ಇಷ್ಟವಾದ ಸ್ಥಳಯಾವುದು ? ನಿರ್ದಿಷ್ಟವಾಗಿ ಹೇಳಬೇಕೆಂದರೆ ಇಷ್ಟವಾದ ಸ್ಥಳ ಸಾಬರಮತಿ ಆಶ್ರಮ. ಒಮ್ಮೆ ಭೇಟಿಯಿತ್ತಿದ್ದೆ. ಪ್ರಕೃತಿ ಮೈದುಂಬಿರುವ ಯಾವುದೇ ಸ್ಥಳ ಮತ್ತು ಮರಳುಗಾಡು ಸದಾ ಕುತೂಹಲಕ್ಕೆ ಕಾರಣವಾಗುತ್ತವೆ ನಿಮ್ಮ ಪ್ರೀತಿಯ ಸಿನಿಮಾ ಯಾವುದು? ಇಷ್ಟಪಟ್ಟ ಸಿನಿಮಾಗಳಾವವು ? ಕಲಾತ್ಮಕ ಸಿನೆಮಾಗಳು ಇಷ್ಟ. ದಕ್ಷಿಣ ಭಾರತದ ಭಾಷೆಗಳ ಸಿನೆಮಾ, ಬೆಂಗಾಲಿ, ಮರಾಠಿಗಳ ಆಯ್ದ ಸಿನೆಮಾ ನೋಡ್ತೇನೆ. ಇರಾನಿಯನ್ ಮೂವಿಸ್ ಇಷ್ಟಪಟ್ಟು ವೀಕ್ಷಿಸ್ತೇನೆ ನೀವು ಮರೆಯಲಾರದ ಘಟನೆ ಯಾವುದು ? ಮುಖ್ಯಪ್ರವಾಹಕ್ಕೆ ವಿರುದ್ಧವಾಗಿ ಈಜುವವರ ಬದುಕಲ್ಲಿ ಮರೆಯಲಾರದ ಅನೇಕ ಘಟನೆಗಳು ಸಂಭವಿಸುತ್ತವೆ. ಹಾಗೇ ನಾನೂ ಹೊರತಾಗಿಲ್ಲ. ಕಹಿ ಸಿಹಿ ಘಟನೆಗಳ ಒಟ್ಟು ಮೊತ್ತ ನನ್ನ ಬದುಕು. ಆಕಸ್ಮಿಕಗಳಿಗೆ ಲೆಕ್ಕವಿಲ್ಲ. ಹಾಗಂತ ವಿಶೇಷ ವ್ಯಕ್ತಿತ್ವ ನನ್ನದಲ್ಲ. ಸರಳ ಸಾಮಾನ್ಯಳಾದರೂ ಸಂದರ್ಭಗಳ ಕಾರಣಕ್ಕೆ ಸಹಜವಾಗಿ ನಾನೆಂದೂ ಬದುಕಲೇ ಇಲ್ಲ ಅನಿಸತ್ತೆ. ಹಾಗಾಗಿ ಸ್ಮರಣೀಯ ಸಂಗತಿಗಳು ಪ್ರಸಂಗಗಳು ಜರುಗುತ್ತಲೇ ಇರುತ್ತವೆ. ಹೇಳಲೇ ಬೇಕಾದ ಸಂಗತಿಗಳಾವವು ? ಸಂಘಟನಾತ್ಮಕವಾಗಿ ತೊಡಗಿಕೊಂಡವರ ಬಳಿ ನೂರಾರು ವಿಷಯಗಳಿರುತ್ತವೆ! ಸದ್ಯಕ್ಕೆ ಇಷ್ಟೇ ಹೆಚ್ಚಾಯಿತು. ನಾನೊಬ್ಬಳು ಸಾಮಾನ್ಯ ವ್ಯಕ್ತಿ. ಹೀಗೆ ನೀವು ಪ್ರಶ್ನೆಗಳ ಮುಖಾಂತರ ಸಂದರ್ಶನ ಅಂದಾಗ ಮುಜುಗರವಾಯಿತು. ವಿಶ್ವಾಸಕ್ಕೆ ಶರಣು. ತುಂಬು ವಿನಯ ಹಾಗೂ ನಮ್ರವಾಗಿ ಧನ್ಯವಾದಗಳು. ತುಂಬಾ ಪ್ರೀತಿ ************************************************************* ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕವಿತೆ ಹುಟ್ಟುವುದು ಎರಡೇ ಕಾರಣಕ್ಕೆ ನೋವು ಬಿಕ್ಕಲಿಕ್ಕೆ,ನಲಿವು ಹಂಚಲಿಕ್ಕೆ ವಿಭಾ ಪುರೋಹಿತ ಮುಖಾಮುಖಿ ೧. ಕತೆ, ಕವಿತೆಗಳನ್ನ ಏಕೆ ಬರೆಯುತ್ತೀರಿ ? ಕೆಲವು ಕಾಡುವ ವಿಷಯಗಳು ತನ್ನಷ್ಟಕ್ಕೆ ತಾನೇ ಬರೆಸಿಕೊಂಡುಬಿಡುತ್ತವೆ. ಮನದಲ್ಲಿ ಚಿಮ್ಮಿಬಂದ ತೀವ್ರ ಭಾವನೆಗಳ ಅಲೆಗಳನ್ನು ಅಕ್ಷರಗಳಲ್ಲಿ ಹಿಡಿದಿಡುವ ಕ್ರಿಯೆಯೇ ಕವಿತೆಗಳಾಗಿವೆ. ಹೀಗೇ ಹರಿದುಬಂದ ಪ್ರಬಲ , ಸಂವೇದನೆಗಳ ಕಂತೆಗಳು ಪದಗಳೊಂದಿಗೆ ಬೆಸೆದು ಕವನಗಳಾಗಿವೆ ಜೀವನದ ಅದೇ ರುಟೀನ್ ಕೆಲಸಕ್ಕೆ ಹೋಗುವದು,ಅಡುಗೆ,ಮನೆ,ಮಕ್ಕಳು ಅಂತ ಇದರಲ್ಲೇ ಮುಳುಗಿರುತ್ತೇವೆ. ಈ ಯಾಂತ್ರಿಕತೆಯಿಂದ ಹೊರಬರಲು ಚೂರು ಚಿನಕುರುಳಿಯಂತೆ ಸಹಾಯವಾಗುತ್ತದೆ ನನ್ನ ಬರವಣಿಗೆ. ಮನಸ್ಸು ಗೆಲುವಾಗಿರುತ್ತದೆ,ಬದುಕು ಕಳೆಕಟ್ಟಿದಂತಾಗುತ್ತದೆ. ವರಕವಿ ಬೇಂದ್ರೆಯವರು ಹೇಳಿದಂತೆ- ರಸವೇ ಜೀವನ , ವಿರಸ ಮರಣ, ಸಮರಸವೇ ಜೀವನ ಎಂತಾದರೆ ಕವನ ರಚನೆಯ ಗೀಳು ಜೀವನದಲ್ಲಿ ನನಗೆ ರಸವನ್ನು ತುಂಬಿವೆ. ೨. ಕತೆ, ಕವಿತೆ ಹುಟ್ಟುವ ಕ್ಷಣ ಯಾವದು ? ಹಿರಿಯರು ಹೇಳಿದಂತೆ ಕವಿತೆ ಹುಟ್ಟುವುದು ಎರಡೇ ಕಾರಣಕ್ಕೆ ನೋವು ಬಿಕ್ಕಲಿಕ್ಕೆ,ನಲಿವು ಹಂಚಲಿಕ್ಕೆ. ನನಗೂ ಸಹ ಈ ಎರಡೂ ಸಮಯದಲ್ಲಿ ಕವಿತೆಗಳು ಹುಟ್ಟುತ್ತವೆ. ಹಾಗೂ ಯಾರಾದರು ಅಸಹಾಯಕರನ್ನು ನೋಡಿದಾಗ ಅವರ ಪರಿಸ್ಥಿತಿಗೆ ಕಿವಿಯಾದಾಗ ಭಾವಲೋಕದಲ್ಲಿ ತೇಲಿ ನಾನೇ ಅವರ ಸ್ಥಿತಿಯಲ್ಲಿದ್ದೇನೆ ಎಂದು ( ಪರಕಾಯ ಪ್ರವೇಶ ಎನ್ನಬಹುದು) ಮನ ಕಂಬನಿಮಿಡಿಯುತ್ತದೆ, ಕವಿತೆ, ಕತೆ ಹುಟ್ಟುತ್ತದೆ. ಕೆಲವು ಕವಿತೆಗಳು ಮಿಂಚಿನ ಹಾಗೆ ಬಂದು ಬರೆಸಿಕೊಳ್ಳುತ್ತವೆ. ಇನ್ನೂ ಕೆಲವು ಒಂದೆರಡು ದಿನ ಮನಸ್ಸಿನಲ್ಲಿ,ಬುದ್ಧಿಯಲ್ಲಿ ಮಂಥನ ಚಿಂತನಗೊಂಡು ಕವಿತೆಗಳ ನವನೀತ ರೂಪುಗೊಳ್ಳುತ್ತದೆ. ಎಷ್ಟೋಸಲ ಹೆಣ್ಣಿನ ಸಂವೇದನೆಗಳಿಗೆ ಪ್ರತಿವಾದಿಯಾಗಿ ನಿಲ್ಲುವ ಘಟನೆಗಳು ಎದುರಾದಾಗ ಕವಿತೆಗಳು ಸೃಷ್ಟಿಯಾಗಿದ್ದಿವೆ. ಎದೆತುಂಬ ಒಲವು ತುಳುಕುವಾಗ ,ನಿಸರ್ಗ ರಮ್ಯತೆಯನ್ನು ಕಂಡಾಗ,ಅಂತಃಕರಣ ಒಳಹರಿವನ್ನು ಅನುಭವಿಸಿದಾಗ ಅನೇಕ ರಚನೆಗಳು ಜನ್ಮತಳಿದಿವೆ. ೩. ನಿಮ್ಮ ಕತೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಸ್ವೇದನೆಯೇ ಹೆಚ್ಚಾಗಿ ಕಂಡುಬರುತ್ತದೆ. ಸಾಮಾಜಿಕ ವ್ಯವಸ್ಥೆ, ಅಸಮಾನತೆ,ಮನುಷ್ಯನ ಹಣದ ಮೋಹ ಇವೆಲ್ಲವು ವಿಷಯವಾಗುತ್ತವೆ. ಹೆಣ್ಣಿನ ಅನಾದರ,ಅಗೌರವ ನನ್ನನ್ನು ತಲ್ಲಣಗೊಳಿಸುತ್ತವೆ. ಸದಾ ಕಾಡುವ ಪಾತ್ರಗಳು ದ್ರೌಪದಿ,ಭಾನುಮತಿ,ಕುಂತಿ….. ಇತ್ಯಾದಿ. ಪ್ರಸ್ತುತವಾಗಿ ಕಾಡುವದೇನೆಂದರೆ ದೊಡ್ಡ ದೊಡ್ಡ ನಗರಗಳಲ್ಲಿ ಹೆಚ್ಚಿನ ಶಿಕ್ಷಣ ಪಡೆದು ಉನ್ನತ ಹುದ್ದೆಯನ್ನು ಅಲಂಕರಿಸಿರುವ ಹೆಣ್ಣು ಗಂಡಿಗೆ ಸರಿಸಮನಾಗಿ ದುಡಿಯುತ್ತಿದ್ದಾಗಲೂ ವಿವಿಧ ರೀತಿಯ ಸಂಕಟಗಳನ್ನು ಅನುಭವಿಸುವದು. ಮಾನಸಿಕವಾಗಿಯೂ ದೈಹಿಕವಾಗಿಯೂ ಅವಳ ಗೋಳು ಹೇಳತೀರದ್ದು. ಇದು ಒಂದು ಮುಖವಾದರೆ ಇನ್ನೊಂದು ಕಡೆ ಅನಕ್ಷರಸ್ಥರ ಗೋಳು , ಮನೆಗೆಲಸ ಮಾಡುವವರು, ಗಾರೆ ಕೆಲಸದವರು ವಿದ್ಯೆಗಳಿಸಿಲ್ಲವೆಂದು ಈ ಸಂಕಷ್ಟಗಳು ಎದುರಾಗಿವೆ ಎಂದು ಗೊಣಗುತ್ತಾ ಇರುತ್ತಾರೆ. ವ್ಯತ್ಯಾಸ ಕಂಡುಬರುವದಿಲ್ಲ ಇಬ್ಬರೂ ನೋವಿಗೆ ಮೈ ಒಡ್ಡಿಕೊಂಡೇ ದುಡಿಯುತ್ತಾರೆ. ೪. ಕತೆ, ಕವಿತೆಗಳಲ್ಲಿ ಬಾಲ್ಯ ಹರೆಯ ಇಣುಕಿದೆಯೆ ? ಖಂಡಿತವಾಗಿಯೂ ಇಣುಕಿದೆ. ಬಾಲ್ಯದ ಊರು,ಕಲಿತ ಶಾಲೆ, ಅಜ್ಜಅಜ್ಜಿ, ಗೆಳೆಯರು ಜೀವಮಾನವಿಡೀ ಮರೆಯಲಾರದ ನೆನಪಿನ ಜಾದೂಪೆಟ್ಟಿಗೆಗಳು : ತೆಗೆದರೆ ಒಂದೊಂದಾಗಿ ಹೊರಬಂದು ಹೃನ್ಮನಗಳನ್ನು ತಣಿಸುತ್ತವೆ. ಬಾಲ್ಯ ಎಲ್ಲರ ಜೀವನದ ಅದ್ಭುತ ಘಟ್ಟ. ಓ…. ಆ ಸುಂದರ ನೆನಪುಗಳ ಸೆಳೆತ ಮನಸ್ಸಿನ ಶೂನ್ಯತೆ,ಖಿನ್ನತೆಯ ಭಾವಗಳಿಂದ ಬಡಿದೆಬ್ಬಿಸಿ ಸಂತಸ ತುಂಬುತ್ತವೆ. ಕ್ಯಾಮರಾ ಕಣ್ಣಲ್ಲಿ ಚಿತ್ರಗಳು ಶಾಶ್ವತವಾದಂತೆ ಈ ಸುಂದರ ನೆನಪುಗಳ ತೊರೆಗಳನ್ನು ನನ್ನ ಹೃದಯದಲ್ಲಿ ಹಾಗೂ ಆತ್ಮದಲ್ಲಿ ಸೆರೆಹಿಡಿದು ಅವುಗಳಿಗೆ ಅಮರತ್ವವನ್ನು ನೀಡಿದ ಹಲವಾರು ಕವಿತೆಗಳಿವೆ. “ಹುಚ್ಚು ಖೋಡಿ ಈ ವಯಸು ಅದು ಹದಿನಾರರ ವಯಸು” ಎಂದು ಹಾಡಿದ ಹಿರಿಯಕವಿಯ ಸಾಲುಗಳಂತೆ ನನ್ನ ಕವಿತೆಗಳು ಕೆಲವು ಸಾಕ್ಷಿಯಾಗಿವೆ. ೫. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ಪ್ರತಿಕ್ರಿಯೆ ಏನು ? ಮೊದಲಿನಿಂದಲೂ ರಾಜಕೀಯ ನನಗೆ ನಿರಾಸಕ್ತಿಯ ವಿಷಯ. ರಾಜಕೀಯ ದೊಂಬರಾಟವನ್ನು ನಿರ್ಭಿಡೆಯಿಂದ ಬಯಲಿಗೆಳೆಯುವ ಅನೇಕ ಬರಹಗಳು ತಂಡೊಪತಂಡವಾಗಿ ಬರುತ್ತವೆ. ಆದರೂ ಇದು ಯಾವಾಗಲೂ ಹಗ್ಗಜಗ್ಗಾಟದ ಮೈದಾನವೇ ಸರಿ.ಲೋಕಕಲ್ಯಾಣಾರ್ಥವಾಗಿ ಸೇವೆ ಮಾಡುವವರು ಈಗ ವಿರಳ. ದೇಶಭಕ್ತಿಯನ್ನು ಬಹಿರಂಗವಾಗಿ ಪ್ರದರ್ಶನ ಮಾಡುತ್ತಾ ಅಂತರಂಗದಲ್ಲಿ ಸ್ವಾರ್ಥವೇ ತುಂಬಿಕೊಂಡಿರುವರು ಹೆಚ್ಚಾಗಿದ್ದಾರೆ. ಅಪರೂಪಕ್ಕೆ ಒಂದಿಬ್ಬರು ನಿಜವಾದ ದೇಶಸೇವಕರಿದ್ದರೂ ಅವರ ಸುತ್ತ ಕಾಲೆಳೆಯುವ ಅಮೂರ್ತ ಕೈಗಳು ಬೇಕಾದಷ್ಟು ಇರುತ್ತವೆ. ಪಕ್ಷಾತೀತವಾದ ಅಪ್ಪಟ ಸೇವಾಮನೋಭಾವವುಳ್ಳ ನೇತಾರರು ಇಂದಿನ ಅಗತ್ಯ. ೬. ಧರ್ಮ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ವಿಶ್ವದ ಸಕಲ ಚರಾಚರಗಳ ಚಲನೆಗೆ ಯಾವುದೋ ಒಂದು ಶಕ್ತಿ ಕಾರಣ . ಆ ಆಮೂರ್ತ ಅವ್ಯಕ್ತ ಅನನ್ಯ ಶಕ್ತಿಯೇ ದೇವರು ಎಂದು ನನ್ನ ಭಾವನೆ.ಶಕ್ತಿ ನಿರಂತರ ಹಾಗೇ ದೇವರು ನಿರಂತರ. ವಿಗ್ರಹ ಆರಾಧನೆಯಲ್ಲಿ ನಂಬಿಕೆಯಿಲ್ಲ.ಮೌಢ್ಯ ಆಚರಣೆಗಳಿಗೆ ವಿರೋಧವಿದೆ. ಪ್ರೇಮ,ಜ್ಞಾನ,ಧ್ಯಾನ ಇವುಗಳ ತ್ರಿವೇಣಿಸಂಗಮವೇ ಧರ್ಮ. ಭಾರತೀಯತೆಯೇ ಶ್ರೇಷ್ಠ ಧರ್ಮ. ೭. ಪ್ರಸ್ತುತ ಸಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನೆನಿಸುತ್ತದೆ ? ನಾವು ಹಿಂತಿರುಗಿ ನಡೆದು ಬಂದ ದಾರಿಯನ್ನು ಅವಲೋಕಿಸಿದಾಗ ನಮ್ಮ ಗಮನಕ್ಕೆ ಬರುವ ವಿಷಯವೆಂದರೆ ನಮ್ಮ ಪರಂಪರೆಯಲ್ಲಿ ಹಾಗೂ ಸಮಷ್ಟಿಪ್ರಜ್ಞೆಯಲ್ಲಿ ಅನೇಕ ಪುರಾತನ ವಿಚಾರಗಳು ಪದ್ಧತಿಗಳು ನಡೆ-ನುಡಿಗಳು ತಾವೇ ತಾವಾಗಿ ಕಳಚಿ ಹೋಗಿವೆ. ಹಲವು ಹೊಸತತ್ವಗಳು ಅಸ್ತಿತ್ವಕ್ಕೆ ಬಂದಿವೆ. ” ಬದಲಾವಣೆ ಪ್ರಕೃತಿಯ ನಿಯಮ” ಅಲ್ಲವೆ ? ಇಂದು ವಿಜ್ಞಾನದ ಪ್ರಗತಿಯಿಂದಾಗಿ ಜಗತ್ತೆಲ್ಲವೂ ಒಂದಾಗುತ್ತಿರುವ ಹಾಗೂ ಜಾಗತೀಕರಣದ ನೂತನ ಬಿರುಗಾಳಿ ಬೀಸುತ್ತಿರುವಾಗ ಹೊಸ ಚಿಂತನ,ಹೊಸ ಜೀವನಶೈಲಿ,ಹೊಸ ಆಲೋಚನೆಗಳು ನಮ್ಮ ಬದುಕಿನಲ್ಲಿ ಹೊಸ ಸವಾಲುಗಳನ್ನು ಹುಟ್ಟಿಸುತ್ತವೆ. ಹೊಸತನದ ತೆರೆಗಳ ಅಬ್ಬರ ! ಜಾಗರೂಕತೆಯಿಂದ ಯಾವ ತತ್ವವನ್ನು ಸ್ವೀಕರಿಸಬೇಕು ? ಎಂಬ ಪ್ರಶ್ನೆಗೆ ಉತ್ತರ ಹುಡುಕುವಾಗ ಮಹಾಮಾರಿ ಕೊರೋನಾ ಕಲಿಸಿದ ಪಾಠವನ್ನು ಮರೆಯುವಂತಿಲ್ಲ. ಪ್ರಜ್ಞಾಪೂರ್ವಕವಾಗಿ ಚಿಂತನ ಮಂಥನ ಮಾಡಿ ಹೊಸತತ್ವದಲ್ಲಿ ಯಾವುದು ಸತ್ವಹೀನವೋ ಅದನ್ನು ಬದಿಗೊತ್ತಿ ಪುಷ್ಟಿಯಿರುವ ತತ್ವಗಳನ್ನು ಮಾತ್ರ ಆಯ್ದುಕೊಳ್ಳಬೇಕಿದೆ. ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು, ಒಲವು ಹಾಗೂ ಗೌರವವಿದೆ. ೮. ಸಾಹಿತ್ಯವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಸುವಿರಿ ? ಇದರ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಪಂಥ ರಾಜಕೀಯವಿದೆ ಎಂದು ಆಗಾಗ ಕೇಳಿಬರುತ್ತದೆ. ಸಾಹಿತ್ಯದ ಅಂತಃಸತ್ವವನ್ನರಿತು ಮತಿವಂತರಾಗಿ ವರ್ತಿಸಬೇಕಾಗಿದೆ. ೯. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತದೆ ? ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ದೇಶದ ಚಲನೆ ಅವ್ಯಾಹತ. ಪಾರದರ್ಶಕತೆ ಮತ್ತು ದೂರದೃಷ್ಟಿ ಹೊಂದಿರುವ ಸಮರ್ಥ ಆಡಳಿತಗಾರರಾದರೆ ದೇಶ ಸುಗಮವಾಗಿ ನಡೆಯಬಲ್ಲದು.ಇಲ್ಲವಾದರೆ ದೇಶದ ಪ್ರಜೆಗಳು ದುರ್ಗಮ ಸ್ಥಿತಿ ಅನುಭವಿಸಬೇಕಾಗುವದು. ೧೦. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಸತ್ವಯುತವಾದ , ಕಾಲಾತೀತವಾಗಿ ನಿಲ್ಲುವ ಸಾಹಿತ್ಯ ಸೃಷ್ಟಿಯಡೆಗೆ ತುಡಿತವಿದೆ. ಎಲ್ಲ ಹಿರಿಯ ಸಾಹಿತಿಗಳ ಅಧ್ಯಯನ,ಹೊಸತಲೆಮಾರಿನ ಪ್ರಯೋಗಶೀಲತೆಯನ್ನು ಮನಸಲ್ಲಿಟ್ಟುಕೊಂಡು ನಮ್ಮತನವನ್ನು ಉಳಿಸಿಕೊಳ್ಳುತ್ತ ಮುಂದುವರಿಯಬೇಕಿದೆ. ಶೋಷಿತರಿಗೆ ದನಿಯಾಗುವ , ಸ್ತ್ರಿ ಸಂವೇದನೆ , ಸ್ತ್ರೀ ಪರ ಚಿಂತನೆಗೆ ಮೆಟ್ಟಿಲಾಗುವ ದಾರಿಯತ್ತ ಸಾಗಬೇಕಿದೆ. ೧೧. ನೆಚ್ಚಿನ ಕನ್ನಡದ ಹಾಗೂ ಆಂಗ್ಲ ಸಾಹಿತಿಗಳಾರು ? ಇಷ್ಟದಕವಿ ಜಿ.ಎಸ್. ಶಿವರುದ್ರಪ್ಪ ಇನ್ನೂ ಹಲವಾರು ಸಾಹಿತಿಗಳು ಜಯಂತ ಕಾಯ್ಕಿಣಿ, ಚೆನ್ನವೀರ ಕಣವಿ ಕವಯಿತ್ರಿಯರು ವೈದೇಹಿ,ಲಲಿತಾ ಸಿದ್ಧಬಸವಯ್ಯಾ ,ಮಾಲತಿ ಪಟ್ಟಣಶೆಟ್ಟಿ ಆಂಗ್ಲ ಸಾಹಿತಿಗಳೆಂದರೆ ಜಾನ್ ಕೀಟ್ಸ ಮತ್ತು ಟಿ.ಎಸ್.ಎಲಿಯಟ್ ೧೨. ಇತ್ತೀಚೆಗೆ ಓದಿದ ಕೃತಿಗಳಾವುವು ? ನಾರಾಯಣ.ಪಿ.ಭಟ್ಟ ಅವರ “ನೆನಪಿನ ಉಯ್ಯಾಲೆ” ನಾಗರೇಖಾ ಗಾವ್ಕರ್ ಅವರ ” ಆಂಗ್ಲ ಸಾಹಿತ್ಯ ಲೋಕ” ೧೩. ಇಷ್ಟವಾದ ಕೆಲಸ ಯಾವದು ? ಕನ್ನಡೇತರರಿಗೆ ಕನ್ನಡ ಕಲಿಸುವದು, ರಂಗೋಲಿ ಹಾಕುವದು ಮತ್ತು ಅಡುಗೆ ಮಾಡುವದು. ೧೪. ಇಷ್ಟವಾದ ಊರು ? ಧಾರವಾಡ ಎರಡು ಕಾರಣಗಳಿಂದ * ನನ್ನ ತವರುಮನೆ * ವರಕವಿ ಬೇಂದ್ರೆಯವರಂಥ ಮಹಾನ್ ಸಾಹಿತಿ ನೆಲೆಸಿದ್ದ ಊರು. ಹಾಗೂ ಕನ್ನಡ ಸಾರಸ್ವತಲೋಕಕ್ಕೆ ಧಾರವಾಡ ಹಲವಾರು ಮೇರು ಸಾಹಿತಿಗಳನ್ನ ನೀಡಿದಂತಹ ನೆಲ. ೧೫. ಇಷ್ಟವಾಗುವ ಸಿನಿಮಾಗಳು ಯಾವವು ? ಮಾಲ್ಗುಡಿ ಡೇಸ್, ಕವಿರತ್ನಕಾಳಿದಾಸ ಮತ್ತು ಫಸ್ರ‍್ಯಾಂಕ್ ರಾಜು ೧೬. ಮರೆಯಲಾರದ ಘಟನೆಗಳಾವವು ? * ಧಾರವಾಡದಲ್ಲಿ ನಡೆದ ೮೪ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸುವ ಸುಯೋಗ ಓದಗಿಬಂದಿತ್ತು. ಅಪ್ಪ,ಅಮ್ಮ ಇಬ್ಬರನ್ನೂ ಕರೆದುಕೊಂಡು ಹೋದೆ. ವಿಶಾಲವಾದ ಸಭಾಂಗಣದ ಆಸನದ ಮೇಲೆ ಕುಳಿತೆವು. ಕರ‍್ಯಕ್ರಮ ಇನ್ನೇನು ಶುರುವಾಗಬೇಕು ಕವಿಗೋಷ್ಠಿಯ ಅಧ್ಯಕ್ಷರು,ಅತಿಥಿಗಳು ಒಬ್ಬೊಬ್ಬರಾಗಿ ಆಗಮಿಸತೊಡಗಿದರು, ನಂತರ ಕವಿಗಳ ಹೆಸರುಗಳನ್ನು ವೇದಿಕೆಗೆ ಬರಬೇಕೆಂದು ಆಹ್ವಾನಿಸುತ್ತದ್ದರು,ಆಗ ವೇದಿಕೆಯ ಮೇಲೆ ನನ್ನ ಹೆಸರು ಕರೆದ ತಕ್ಷಣ ಅಪ್ಪನ ಕಣ್ಣಲ್ಲಿ ಆನಂದಬಾಷ್ಪಗಳು ದಳದಳನೇ ಇಳಿದುಬಂದವು. ಅಪ್ಪನ ಹೆಮ್ಮೆಯ ಭಾವ ಕಂಡು ನನ್ನ ಮತ್ತು ಅಮ್ಮನ ಕಣ್ಣುಗಳು ಆದ್ರಗೊಂಡಿದ್ದವು. ************************************************* ********************************************************** ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂಕಣ ಬರಹ ಒಂದು ಹೃದ್ಯ ಕಾವ್ಯ ರಂಗಮ್ಮಹೊದೇಕಲ್ ತುಮಕೂರು ಜಿಲ್ಲೆಯ ಹೊದೇಕಲ್ ಗ್ರಾಮದ ಪ್ರತಿಭೆ ರಂಗಮ್ಮ ಹೊದೇಕಲ್.ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ.ಸಾಹಿತ್ಯ,ಸಂಘಟನೆ ಆಸಕ್ತಿಯ ಕ್ಷೇತ್ರಗಳು.ಒಳದನಿ,ಜೀವಪ್ರೀತಿಯ ಹಾಡು ಕವನ ಸಂಕಲನಗಳ ನಂತರ ಇದೀಗ ‘ನೋವೂ ಒಂದು ಹೃದ್ಯ ಕಾವ್ಯ’ ಹನಿಗವಿತೆಗಳ ಸಂಕಲನ ಹಾಸನದ “ಇಷ್ಟ” ಪ್ರಕಾಶನದಿಂದ ಪ್ರಕಟವಾಗಿದೆ. ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಕವಿತೆ ಅವ್ಯಕ್ತಗಳ ಅಭಿವ್ಯಕ್ತಿ.ಆತ್ಮದ ಬೆಳಕು.ಮತ್ತು ಕವಿತೆ ಮಾತ್ರವೇ ಆತ್ಮದ ಸಂಗಾತ ಅನ್ನಿಸಿದ್ದಕ್ಕೆ! ಕವಿತೆ ಹುಟ್ಟುವ ಕ್ಷಣ ಯಾವುದು ? ಕರುಳು ಕಲಕುವ ಯಾವುದೇ ಸಂಕಟವೂ ನನ್ನೊಳಗೊಂದು ಸಾಲಾಗಿ ಹೊಳೆದು ಹೋಗುತ್ತದೆ!ದುಃಖಕ್ಕೆದಕ್ಕಿದಷ್ಟು ಕವಿತೆಗಳುಖುಷಿಗೆ ಅರಳುವುದೇ ಇಲ್ಲ! ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಮನುಷ್ಯ ಸಂಬಂಧಗಳು!ಸಂಬಂಧಗಳ ವ್ಯತ್ಯಯಗಳು.ಶಿಥಿಲಗೊಳ್ಳುತ್ತಿರುವ ಜೀವಪ್ರೀತಿ!ಸಹಜತೆಯಾಚೆಗೆ ನಾವೆಲ್ಲ ಬೆರ್ಚಪ್ಪಗಳಾಗುತ್ತಿರುವ ಆತಂಕ! ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಬಾಲ್ಯವೆಲ್ಲ ಅತ್ಯಂತದಾರಿದ್ರ್ಯದಲ್ಲೇ ಕಳೆದುಹೋಯ್ತು. ಹರೆಯ ಹರೆಯಕ್ಕೂ ಮೀರಿದ ಜವಾಬ್ದಾರಿಗಳನ್ನು ಹೆಗಲಿಗೇರಿಸಿತು.ಬಹುಶಃ ಇವೆಲ್ಲ ಎಂದಾದರೂ ಗದ್ಯ,ಪದ್ಯವಾಗುವ ನಿರೀಕ್ಷೆ ನನ್ನದೂ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ರಾಜಕಾರಣದ ಬಗ್ಗೆ ತೀರಾ ಆಸಕ್ತಿಗಳಿಲ್ಲದೇ ಹೋದರೂ ಬಿದ್ದವರ,ಸೋತವರ,ಕನಸ ಕೊಂದುಕೊಂಡವರ,ಇಲ್ಲದವರ ಬದುಕಿಗೆ ಹೊಸದೊಂದು ಬೆಳಕ ಕಾಣಿಸುವ ರಾಜಕಾರಣವೂ ಒಂದು ಕನಸೇನೋ ಅನ್ಸತ್ತೆ! ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಪ್ರೀತಿಯನ್ನ ಧರ್ಮ ಅಂತ ಭಾವಿಸುತ್ತೇನೆ! ಜೀವಪರ ನಿಲುವಿನ ಮನುಷ್ಯರೆಲ್ಲ ದೇವರ ಹಾಗೇ ಅಂದುಪ್ರತತೇನೆ !ಈಚಿನ ಈ ಪುಸ್ತಕದಲ್ಲಿ ತರತಮವಿರದೆಪರಿಮಳದ ಬೆಡಗಹರಡುವಹೂಧರ್ಮ ನನ್ನ ದಾರಿ !ಅಂತ ಬರ್ಕೊಂಡಿದ್ದೇನೆ ! ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ನಿಜವಾದ ಪ್ರತಿಭೆಗಳು ನೇಪಥ್ಯದಲ್ಲಿ ಉಳಿಯುತ್ತವನ್ನೋ ವಿಷಾದ ಇದೆ.ನೆಲದ ಸೊಗಡಿನ,ಅಪಾರ ಕನಸಿನ ಪ್ರತಿಭೆಗಳಿಗೆ ಸೂಕ್ತ ಅವಕಾಶಗಳು ಲಭ್ಯ ಆಗ್ಬೇಕು. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಸಾಹಿತ್ಯದಲ್ಲಿ ರಾಜಕಾರಣ ಏನ್ಮಾಡುತ್ತೆ ಅಂತ ಅಂದ್ಕೋತಿದ್ದೆ!ಊಹೂಂ ,ರಾಜಕಾರಣ ಈ ಅಕ್ಷರ ಲೋಕವನ್ನು ಬಿಡದ್ದಕ್ಕೆ ಖೇದವಿದೆ! ಯಾವಾವ ಕಾರಣಗಳಿಗೋ ಏನೇನೆಲ್ಲ ಘಟಿಸಿಬಿಡುವುದನ್ನು ಕಂಡು ಅಕ್ಷರ ಅರಿವಾ? ಅಹಂಕಾರವಾ? ಅನ್ನೋ ಪ್ರಶ್ನೆಗಳೂ ಕಾಡುತ್ವೆ. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಆತಂಕವಿದೆ! ಗಡಿಗಳೆಲ್ಲ ಗುಡಿಗಳಾಗಿ,ಎಲ್ಲ ಹೊಟ್ಟೆಗಳಿಗೂ ಅನ್ನ ಸಿಕ್ಕು, ಈ ನೆಲದ ಹೆಣ್ಣುಮಕ್ಕಳು ನಿರ್ಭಯವಾಗಿ ಬದುಕುವ ದಿನಗಳು ಬಂದಾವ ಅಂತ …… ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಕನಸ್ಸಂತ ಏನಿಲ್ಲ ಸರ್,ನಾನು ಬರೆದದ್ದು ಮತ್ತಾರದೋ ಭಾವಕೋಶ ಮೀಟಿ ,ಇನ್ನಾವುದೋ ಜೀವದ ನೋವ ನೀವಿ ಹೋದರೆ ಸಾಕು!‘ಕವಿತೆ ಚರಿತ್ರೆಯನ್ನ ಬದಲಾಯಿಸ್ತದೋ ಇಲ್ವೋ ಗೊತ್ತಿಲ್ಲ,ಆದರೆ ಕವಿಯನ್ನಂತೂ ಬದಲಾಯಿಸ್ತದನ್ನೋ ಮಾತಿದೆಯಲ್ಲ’ ನನ್ನ ಕವಿತೆ ನನ್ನನ್ನು ಮತ್ತೆ ಮತ್ತೆ ಮನುಷ್ಯಳಾಗಿಸಿದರೆ ಸಾಕು. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ? ಆಂಗ್ಲಭಾಷೆಯ ಓದು ಇಲ್ಲ.ಕನ್ನಡ ನನ್ನ ಅಮ್ಮನೂ,ಅನ್ನವೂ ಹೌದಾಗಿರುವುದರಿಂದ ಕನ್ನಡದ ಒಂದಿಷ್ಟು ಪುಸ್ತಕ ಗಳನ್ನು ಓದಿದ್ದೇನೆ.ಆರ್ದ್ರವಾಗಿ,ಚಿಂತನಾರ್ಹವಾಗಿ ಬರೆಯಬಲ್ಲ ಯಾವುದೇ ಕವಿಯ ಎರಡು ಸಾಲೂ ನನ್ನನ್ನು ತಟ್ಟುವ ಕಾರಣ ಇವರೇ ಅಂತ ಹೇಳಲಾರೆ.ಪರಂಪರೆಯ ಜೊತೆಗೆ ಇವತ್ತಿನ ಎಷ್ಟೋ ಕವಿಗಳೂ ಕೂಡ ನನಗಿಷ್ಟ. ಈಚೆಗೆ ಓದಿದ ಕೃತಿಗಳಾವವು? ಶಾಲಾ ಶಿಕ್ಷಕಿಯೂ ಆಗಿರುವ ಕಾರಣ ನಿರಾಳ ಓದಿಗೆ ಬಿಡುವಾಗದು.ಈ ದುರಿತ ಕಾಲದಲ್ಲಿ ಆತ್ಮೀಯರು ಕಳಿಸಿದ ಒಂದಷ್ಟು ಗದ್ಯ ಪದ್ಯ…ಆಗಾಗ ಬ್ರೆಕ್ಟ್,ಗಿಬ್ರಾನ್.ಹೀಗೆ ನಿಮಗೆ ಇಷ್ಟವಾದ ಕೆಲಸ ಯಾವುದು? ಟೀಚರ್ ಕೆಲ್ಸ!ಅದರ ಜೊತೆಗೆ ಕನ್ನಡವನ್ನು ಮುದ್ದಾಗಿ ಬರೆಯುವ ಪ್ರಯತ್ನ.ಹದಿನಾರು ವರ್ಷಗಳಿಂದ ಖ್ಯಾತ ಲೇಖಕಿ ಅಮ್ಮ ಡಾ.ಬಿ.ಸಿ ಶೈಲಾನಾಗರಾಜ್ ರವರ ಜೊತೆಗೆ , ಶೈನಾ ಅನ್ನುವ ಕೈ ಬರಹದ ಪತ್ರಿಕೆಯ ಕೈ ಬರಹ ನನ್ನ ಕೈಗಳದೇ!ಈ ಪತ್ರಿಕೆಯೇ ನಾಡಿಗೆ ನನ್ನನ್ನು ಪರಿಚಯಿಸಿದ್ದು.ಕವಿತೆ ಬರಿತೀನಿ ಅನ್ನೋದ್ಕಿಂತ ಕೈ ಬರಹ ಅನ್ನೊ ಮೂಲಕವೇ ಪ್ರೀತಿ ಗಳಿಸಿದ ಅದೃಷ್ಟ! ನಿಮಗೆ ಇಷ್ಟವಾದ ಸ್ಥಳ ಯಾವುದು ? ಸ್ಥಳ ನನ್ನೂರೇ ಸರ್! ಈ ಬೆಟ್ಟ,ಬಯಲು,ಏನೂ ಇರದ ದಿನಗಳಲ್ಲಿ ನಮ್ಮನ್ನು ಪೊರೆದ ಊರಿನ ‘ಮನುಷ್ಯರು’ !!ಆದರೂ ಮುರ್ಡೇಶ್ವರ ಹೆಚ್ಚು ನೆನಪಾಗುವ ಜಾಗ! ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ ಸಿನಿಮಾ ಯಾವುದು? ಅಬ್ಬರ ಇಲ್ಲದ,ಅತಿ ಅನ್ನಿಸದ,ನೋಡುತ್ತಲೇ ಭಾವುಕಳಾಗಿಸಿಬಿಡಬಹುದಾದ ,ಒಳಗಿಳಿಯುವ ಒಂದೇ ಸಾಲನ್ನಾದರೂ ಹಾಡಾಗಿಸಿಕೊಂಡ ಯಾವುದೇ ಸಿನೆಮಾ ಆಗ್ಬಹುದು ಸರ್. ನೀವು ಮರೆಯಲಾರದ ಘಟನೆ ಯಾವುದು? ಹತ್ತಿರದವರ ಸಾವು ನೋವುಗಳು.ವಿವರಿಸೋದು ಕಷ್ಟ ಸರ್. ಇನ್ನು ಕೆಲ ಹೇಳಲೇ ಬೇಕಾದ ಸಂಗತಿಗಳಿದ್ದರೂ ಹೇಳಿ…. ಅಣ್ಣನಂತಹ,ಗೆಳೆಯರಂತಹ ವೀರಲಿಂಗನ ಗೌಡರ ಅಕ್ಕರೆ ದೊಡ್ಡದು.ನಿಮ್ಮ ಜತೆಗಿನ ಇಷ್ಟು ಮಾತಿಗೆ ಅವರೇ ಕಾರಣರು.ಅವರ ಮಮಕಾರಕ್ಕೆ ನಿಮ್ಮ ಸಹೃದಯತೆಗೆ ವಂದನೆಗಳು ಸರ್.ಉಳಿದಂತೆ ‘ ನೋವೂ ಒಂದು ಹೃದ್ಯ ಕಾವ್ಯ’ ನನ್ನ ಇತ್ತೀಚಿನ ಪುಸ್ತಕ.ನಾಲ್ಕು ಸಾಲುಗಳ ಕವಿತೆಗಳು..ಕವಿತೆಗಳಂತಹ ಚಿತ್ರಗಳೂ ….ಪುಸ್ತಕ ದ ಪ್ರತಿ ಅಕ್ಷರವೂ ಕೈ ಬರಹದ್ದೇ ಅನ್ನುವುದು ವಿಶೇಷ. -************************************ ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂಕಣ ಬರಹ ಸಾಹಿತ್ಯಿಕ ರಾಜಕಾರಣ ಸಮಾಜಕ್ಕೆ ಅತೀ ಹೆಚ್ಚು ಅಪಾಯಕಾರಿ ಕೆ.ಬಿ.ವೀರಲಿಂಗನಗೌಡ್ರ ಪರಿಚಯ ಬಾಗಲಕೋಟ ಜಿಲ್ಲೆ, ಬಾದಾಮಿ ತಾಲೂಕಿನ ನಂದಿಕೇಶ್ವರ ಸ್ವಗ್ರಾಮ. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ(ಶಿರ್ಸಿ) ಪಟ್ಟಣದಲ್ಲಿ ಚಿತ್ರಕಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವೆ. ಪ್ರಕಟಿತ ಕೃತಿಗಳು ‘ಅರಿವಿನ ಹರಿಗೋಲು’ (ಕವನ ಸಂಕಲನ), ‘ಅವಳು ಮಳೆಯಾಗಲಿ’ (ಕಥಾ ಸಂಕಲನ), ಘಟಸರ್ಪ (ಸಾಮಾಜಿಕ ನಾಟಕ), ‘ಸಾವಿನಧ್ಯಾನ’ (ಲೇಖನಗಳ ಸಂಕಲನ), ‘ಮೌನ’ (ಸಂಪಾದಿತ) ಸಂದರ್ಶನ ಪ್ರಶ್ನೆ :ನೀವು ಚಿತ್ರ ಮತ್ತು ಕವಿತೆಗಳನ್ನು ಏಕೆ ಬರೆಯುತ್ತಿರಿ? ಉತ್ತರ :ನನ್ನೊಳಗೆ ನುಸುಳುವ ತುಮುಲಗಳನ್ನು ಹೊರಹಾಕಿ ಹಗುರಾಗುವುದಕ್ಕೆ. ಪ್ರಶ್ನೆ :ಚಿತ್ರ ಮತ್ತು ಕವಿತೆ ಹುಟ್ಟುವ ಕ್ಷಣ ಯಾವುದು? ಉತ್ತರ :ಒಂದು ನೋವು ತಿಂದಾಗ, ಇನ್ನೊಂದು ನೋವಿಗೆ ಕಾಲವೇ ಮುಲಾಮು ಸವರುವಾಗ. ಪ್ರಶ್ನೆ :ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು? ಉತ್ತರ :ನಿರ್ದಿಷ್ಟವಾದ ವಸ್ತು ವ್ಯಾಪ್ತಿ ಅಂದ್ರೆ ಅದೊಂದು ಚೌಕಟ್ಟು ಅನ್ಸತ್ತೆ, ಚೌಕಟ್ಟಿಗೆ ಸಿಲುಕದೆ ಮೆಲ್ಲಗೆ ಎಲ್ಲವ ದಾಟಿಕೊಂಡು ಅಲ್ಲಮರ ಬಯಲಿಗೆ ಹೋಗಲು ಕನವರಿಸುವೆ, ಬಯಲೇ ನನ್ನ ವಸ್ತು ಮತ್ತು ವ್ಯಾಪ್ತಿ. ಇನ್ನು ನನ್ನನ್ನು ಪದೇ ಪದೇ ಕಾಡುವ ವಿಷಯ ಅಂದ್ರೆ, ಚಾಡಿ ಕೇಳಲಷ್ಟೇ ತೆರೆದುಕೊಳ್ಳುವ ಕೆಲ ಹಾಳು ಕಿವಿಗಳಿಗೆ, ಜೀವಪ್ರೀತಿಯ ಹಾಡನ್ನು ಹೇಗೆ ತಾಗಿಸುವುದು! ಪ್ರಶ್ನೆ :ಕವಿತೆಗಳಲ್ಲಿ ಬಾಲ್ಯ ಹರೆಯ ಇಣುಕಿದೆಯೇ? ಉತ್ತರ :ಅನುಭವಿಸದೇ ಬರೆಯುವುದು ಬಾಲ್ಯ, ಅನುಭವಿಸಿ ಬರೆಯುವುದು ಹರೆಯ, ಅನುಭವ ಅನುಭಾವ ಆಗುವುದೇ ಮುಪ್ಪು ಅಥವಾ ಮುಕ್ತಿ ಅಂತಾ ಅಂದ್ಕೊತಿನಿ. ಪ್ರಶ್ನೆ :ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಉತ್ತರ :ಜಾತಿ ಧರ್ಮ ಮತ್ತು ಹಣಕ್ಕಾಗಿ ಅಮೂಲ್ಯವಾದ ಮತವನ್ನೇ ಮಾರಿಕೊಳ್ಳೊರು, ತೂರಿಕೊಳ್ಳೊರು, ಅಡ ಇಡೊವ್ರು ಇರೊವರ್ಗೂ ರಾಜಕೀಯ ಸನ್ನಿವೇಶ ಚೆನ್ನಾಗಿರಲ್ಲ.. ಪ್ರಶ್ನೆ :ಧರ್ಮ ದೇವರ ವಿಷಯದಲ್ಲಿ ನಿಮ್ಮ ನಿಲುವೇನು? ಉತ್ತರ : ಈ ಎರಡೂ ನಮ್ಮೊಳಗೆ ಮಾನವೀಯ ಪ್ರೀತಿ ತುಂಬಿ, ಚೂರು ದಾರಿ ತಪ್ಪಿದಾಗ ಎಡಬಿಡದೇ ಕಾಡಿ ನಿದ್ದೆಗೆಡಿಸಿ ಭಯ ಹುಟ್ಟಿಸಬೇಕಿತ್ತು, ಆದರೆ ಹಾಗಾಗದೇ ಸ್ವಾರ್ಥದ ಸರಕಾಗುತ್ತಿರುವುದರ ಕುರಿತು ತುಂಬಾ ಬೇಸರವಿದೆ. ಪ್ರಶ್ನೆ : ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಕುರಿತು ನಿಮಗೆ ಏನನ್ನಿಸುತ್ತಿದೆ? ಉತ್ತರ : ಮುಖಗಳಿಗಿಂತ ಮುಖವಾಡಗಳೇ ಹೆಚ್ಹೆಚ್ಚು ರಾಚುತ್ತಿವೆ ಅಂತಾ ಅನ್ನಸ್ತಿದೆ. ಪ್ರಶ್ನೆ : ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ಹೇಗೆ ಪ್ರತಿಕ್ರಿಯಿಸುವಿರಿ? ಉತ್ತರ : ನೇರ ರಾಜಕಾರಣಕ್ಕಿಂತ, ಸಾಹಿತ್ಯಿಕ ರಾಜಕಾರಣ ಸಮಾಜಕ್ಕೆ ಅತೀ ಹೆಚ್ಚು ಅಪಾಯಕಾರಿ. ಪ್ರಶ್ನೆ :ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತದೆ? ಉತ್ತರ :“ರಿಪೇರಿಯ ಹಂತವನ್ನೂ ಮೀರಿ ಹೋಗುತ್ತಿದೆ” ಎಂದ ಲಂಕೇಶ್‍ರ ಮಾತೇ ಹೇಳುತ್ತದೆ. ಪ್ರಶ್ನೆ :ನಿಮ್ಮ ಕನಸುಗಳೇನು? ಉತ್ತರ :ಬಯಲು ಸೀಮೆಯಲಿ ಕಾಡು ಬೆಳೆಸುವುದು, ಬೆಳೆಸಿದ ಆ ಕಾಡ ನೆರಳಲಿ ಕುಳಿತು ಸ್ನೇಹ ಪ್ರೀತಿ ಸೌಹಾರ್ದತೆಯ ಆಟ ಪಾಠ ಸಂವಾದ ನಡೆಸುವುದು. ಪ್ರಶ್ನೆ :ಕನ್ನಡ ಹಾಗೂ ಅನ್ಯ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು? ಉತ್ತರ : ಕನ್ನಡದ ಕುವೆಂಪು, ತೇಜಸ್ವಿ, ಲಂಕೇಶ್, ನಿಸ್ಸಾರಹ್ಮದ್, ದೇವನೂರು ಮಹಾದೇವ ತುಂಬಾ ಇಷ್ಟ, ಇನ್ನು ಚಾಲ್ರ್ಸಬಕೊವಸ್ಕಿ, ರೂಮಿ, ಬ್ರೆಕ್ಟ್, ಬೋದಿಲೇರ್ ಮತ್ತು ಗೀಬ್ರಾನ್‍ರ ಅನುವಾದಿತ ಬರಹಗಳು ಸಹ ಕನ್ನಡದಷ್ಟೇ ಇಷ್ಟವಾಗ್ತಾವೆ. ಪ್ರಶ್ನೆ :ಈಚೆಗೆ ಓದಿದ ಕೃತಿಗಳಾವವು? ಉತ್ತರ :‘ನೋವೂ ಒಂದು ಹೃದ್ಯ ಕಾವ್ಯ’ ರಂಗಮ್ಮ ಹೊದೇಕಲ್ಲರ ಕವನ ಸಂಕಲನ, ‘ಏಪ್ರಿಲ್ ಫೂಲ್’ ಹನುಮಂತ ಹಾಲಿಗೇರಿಯವರ ಕಥಾ ಸಂಕಲನ. ‘ದೀಪದ ಗಿಡ’ ಬಸೂ ದ್ವಿಪದಿಗಳು. ಪ್ರಶ್ನೆ :ನಿಮಗೆ ಇಷ್ಟವಾದ ಕೆಲಸ ಯಾವುದು? ಉತ್ತರ :ಮಕ್ಕಳಿಗೆ ಪಾಠ ಮಾಡುವುದು. ಪ್ರಶ್ನೆ :ಇಷ್ಟವಾದ ಸ್ಥಳ ಯಾವುದು? ಉತ್ತರ :ಬಯಲು ಪ್ರಶ್ನೆ :ತುಂಬಾ ಇಷ್ಟಪಡುವ ಸಿನಿಮಾ ಯಾವುದು? ಉತ್ತರ :ದಿಯಾ ಪ್ರಶ್ನೆ :ನೀವು ಮರೆಯಲಾರದ ಘಟನೆ ಯಾವುದು? ಉತ್ತರ :ಪ್ರಕಟಿತ ಕಥೆಗೆ ನೋಟಿಸ್ ಪಡೆದು, ಒಂದು ಬಡ್ತಿ ಕಳೆದುಕೊಂಡಿದ್ದು. ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮುಖಾಮುಖಿ ಈ ಜಗತ್ತಿನೊಂದಿಗೆ ನನ್ನ ಜಗತ್ತನ್ನ ಬೆಸೆಯುವ ತಂತು ಕವಿತೆ ಪರಿಚಯ ;ಚೈತ್ರಾ ಶಿವಯೋಗಿಮಠಮೂಲತಃ ಬಿಜಾಪುರದವರು. ಬೆಂಗಳೂರಿನ ನಿವಾಸಿ.ಎಂಟೆಕ್ ಪದವಿಯನ್ನು ವಿಟಿಯು ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್. ಕಾರ್ಯಕ್ರಮದ ನಿರೂಪಣೆ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ನನ್ನೊಂದಿಗೆ ನಾನು ಈ ಜಗತ್ತಿನೊಂದಿಗೆ ನನ್ನ ಜಗತ್ತನ್ನ ಬೆಸೆಯುವ ತಂತು ಕವಿತೆ. ತೀವ್ರವಾಗಿ ನನ್ನ ಮನಸ್ಸಿಗೆ ಅರ್ಥೈಸಬೇಕಾದರೆ ಅದನ್ನ ಪದಗಳಾಗಿಸಿ ನನ್ನ ಮನದಾಳಕಿಳಿಸಿಕೊಳ್ಳುತ್ತೇನೆ. ಮನೆಯನ್ನ ನಾವು ದಿನವೂ ಗುಡಿಸಿ ಶುಚಿ ಮಾಡಿದರೂ ಅದು ಮತ್ತೆ ಕಸ, ಧೂಳುಗಳಿಂದ ತುಂಬಿಕೊಳ್ಳುವುದು. ಅಂತೆಯೇ ನಮ್ಮ ಮನಸ್ಸು. ಸದ್ವಿಚಾರಗಳನ್ನ ಅದೆಷ್ಟು ಬಾರಿ ಮನಸ್ಸಿಗೆ ತಿಳಿಹೇಳಿದರೂ ಅರಿಷಡ್ವರ್ಗಗಳ ಪ್ರಭಾವ ವಲಯದಲ್ಲಿ ಸಿಲುಕಿ ಮತ್ತೆ ಕೆಡುಕಿಗೇ ತುಡಿಯುವುದು. ಕವಿತೆ, ನನ್ನ ಮನಸ್ಸಿಗೆ ನಾನೇ ಬುದ್ಧಿ ಹೇಳುವ ಮಾತುಗಳು. ಬಹುಶಃ ಇದೇ ತೊಳಲಾಟಗಳನ್ನ ಬಹುತೇಕ ಎಲ್ಲರೂ ಅನುಭವಿಸುತ್ತಾರೆ ಹಾಗಾಗಿ ನನ್ನ ಕವಿತೆಗಳು ಅವರನ್ನೂ ತಟ್ಟಿ ತಮ್ಮೊಂದಿಗೆ ತಾವು ಆಡಲಾರದ ಮಾತುಗಳನ್ನ ನನ್ನ ಕವಿತೆಗಳಲ್ಲಿ ಕಂಡರೆ ಸಾರ್ಥಕ ಭಾವ. ಕಾಣದ, ಅರಿಯದ ಯಾರಿಗೋ ಈ ಕವಿತೆಗಳು ಸಾಂತ್ವಾನವಾಗುವುವೇನೋ ಅನ್ನುವ ಆಶಾಭಾವ. ಓದಿದ ಮನಸ್ಸಿಗೆ ಅರೆಕ್ಷಣದ ಸಂತಸ, ನಿರಾಳತೆ ನೀಡಲಿ ಎನ್ನುವ ಸದುದ್ದೇಶ. ಈ ಜಗತ್ತಿನೊಂದಿಗೆ ನನ್ನ ಜಗತ್ತನ್ನ ಬೆಸೆಯುವ ತಂತು ಕವಿತೆ. ಕವಿತೆ ಹುಟ್ಟುವ ಕ್ಷಣ ಯಾವುದು ? ನಾನು ಸ್ವಭಾವತಃ ಬಹಿರ್ಮುಖಿ ಆದರೂ ನನ್ನೊಳಗೆ ಒಬ್ಬಳು ಸೂಕ್ಷ್ಮ ಅಂತರ್ಮುಖಿ ಅಡಗಿ ಕುಳಿತ್ತಿದ್ದಾಳೆ. ಅದೆಷ್ಟೋ ಸಲ ನನಗೆ ಉಮ್ಮಳಿಸಿ ಬರುವ ಅಳು, ಆಕ್ರೋಶ, ತಡೆಯಲಾರದಷ್ಟಾಗುವ ಖುಷಿ, ನನ್ನ ಸುತ್ತ ನಡೆಯುವ ಕೆಲವು ಘಟನೆಗಳಿಂದಾಗಿ ನನ್ನೊಳಗೇ ಹೇಳಿಕೊಳ್ಳಲಾಗದಂತಹ ತಳಮಳ. ಯಾರಿಗೆ ಹೇಳಲಿ ಎಂದು ಪರದಾಡುವಾಗಲೇ ಕವಿತೆ ಹುಟ್ಟುತ್ತದೆ. ಕೇವಲ ನನ್ನೊಳಗಿನ ನೋವು-ನಲಿವುಗಳಷ್ಟೇ ಅಲ್ಲದೆ ಸುತ್ತ ಮುತ್ತಲಿನವರ ನೋವು ನಲಿವುಗಳಿಗೆ ನನ್ನ ಸ್ಪಂದನೆಯಾದಾಗ ಹುಟ್ಟುವುದು ಕವಿತೆ. ಒಂದು ಘಟನೆ, ಒಬ್ಬ ವ್ಯಕ್ತಿ, ಒಂದು ಸಂಬಂಧ ತೀವ್ರವಾಗಿ ಕಾಡಿದಾಗ ಹುಟ್ಟುವುದು ಕವಿತೆ. ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ನಾನು ಹೆಚ್ಚಾಗಿ ಪ್ರಕೃತಿಯ ಕುರಿತಾಗೇ ಬರೆಯುವುದು. ಕಾಂಕ್ರೀಟ್ ಕಾಡಿನ ಏಕತಾನತೆ ಬೇಸರ ತರಿಸಿದಾಗೆಲ್ಲ ಒಂದು ಕಾಡಿಗಾದರೂ ಹೋಗಿ ಕುಳಿತುಬಿಡಬೇಕೆನ್ನುವ ಹಂಬಲ. ಹಸಿರು ನನ್ನನ್ನು ಹೆಚ್ಚು ಸೆಳೆಯುತ್ತದೆ. ಅಷ್ಟೇ ಅಲ್ಲದೆ ಪ್ರಸ್ತುತ ಕಾಲಮಾನದ ಕೆಲವು ಅಕ್ರಮಗಳು, ಮನುಷ್ಯರೇ ಮನುಷ್ಯರನ್ನ ಲೂಟಿ ಮಾಡುವುದು, ಈಗಿನ ವಿಷಮ ಸ್ಥಿತಿಯಲ್ಲಿನ ಮನಸ್ಥಿತಿಗಳು. ಮತ್ತು ಪದೆ ಪದೆ ಕಾಡುವುದು ಅಪ್ಪನ ನೆನಪುಗಳು. ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಬಾಲ್ಯ ಪ್ರತಿಯೊಬ್ಬರ ಜೀವನದಲ್ಲೂ ಬಹಳ ಅಪ್ಯಾಯಮಾನ. ಹಾಗೇ ನನಗೂ ಸಹ. ನನ್ನ ಬಾಲ್ಯವೆಂದರೆ ನನ್ನ ಅಪ್ಪಾಜಿ. ಅಪ್ಪನ ಕುರಿತು ಕೆಲವು ಕವನಗಳು ಬರೆದಿರುವೆ. ನನಗೆ ಭಾಷಾಭಿಮಾನ, ಓದು-ಬರಹದ ಬಗೆಗೆ ಒಲವು ಮೂಡಿಸಿದವರೇ ಅಪ್ಪಾಜಿ. ಇನ್ನು ಸಹಜವಾಗಿ ಪ್ರೀತಿ-ಪ್ರೇಮದ ಬಗೆಗೆಯೂ ಕವನಗಳನ್ನ ಬರೆದಿರುವೆ . ನೂರು ಭಾವಗಳಲ್ಲಿ ಒಲವಿನ ರಂಗು ತುಸು ಹೆಚ್ಚೇ ಆಗಿ ಕಾಣುವ ಹರೆಯದ ಪ್ರೀತಿಯ ನವಿರು ಭಾವನೆ ಮನಸ್ಸಿನಲ್ಲಿ ಪುಳಕ ಉಂಟುಮಾಡೋದರಲ್ಲಿ ಸಂದೇಹವೇ ಇಲ್ಲ! ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಆಳುವವರು ನಿಜವಾಗಿಯೂ ಆಳುವವರಲ್ಲದೆ ಅವರು ನಮ್ಮ ಪ್ರತಿನಿಧಿಗಳಾಗಿ ಸಂವಿಧಾನ ಬದ್ಧರಾಗಿ ನಡೆದುಕೊಳ್ಳುವುದು ಅತ್ಯವಶ್ಯಕ. ಆದರೆ ಈಗ? ಬರಿ ಪಕ್ಷ, ಅವರವರ ಸ್ವಂತ ಸಿದ್ಧಾಂತಗಳು, ಜಾತಿ ರಾಜಕಾರಣ, ಧರ್ಮದ ಹೆಸರಲ್ಲಿ ರಾಜಕೀಯ, ಹಣ, ಹೆಂಡ , ವಾಮ ಮಾರ್ಗಗಳೇ ಈಗಿನ ರಾಜಕೀಯದ ಸರಕುಗಳಾಗಿವೆ. ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಾದ ಭಾರತ ಕೇವಲ ಧರ್ಮದ ಹೆಸರಲ್ಲಿ ಗಲಭೆಗಳೇ, ಮತ್ತು ಅದರಿಂದ ಲಾಭ ಪಡೆಯುವ ರಾಜಕಾರಣಿಗಳೇ ಹೆಚ್ಚಾಗಿ ಹೋಗಿದ್ದಾರೆ. ಇವೆಲ್ಲ ಕಾರಣಗಳಿಂದಾಗಿ ರಾಜಕೀಯದ ಬಗ್ಗೆ ಬಹಳಷ್ಟು ಜಿಗುಪ್ಸೆ ಮತ್ತು ನೀರಸ ಮನೋಭಾವನೆ! ಆದರೂ ಸಣ್ಣ ಆಶಾಭಾವನೆ ಇನ್ನೂ ಇದೆ, ಈ ರಾಜಕೀಯ ಪರಿಸ್ಥಿತಿ ಸುಧಾರಣೆ ಆಗಲಿ ಅಂತ. ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ದಯವಿಲ್ಲದ ಧರ್ಮ ಅವುದಯ್ಯ? ಎಲ್ಲ ಧರ್ಮಗಳೂ ಹೇಳುವುದೂ ಇದನ್ನೇ. ನನಗೆ ಪ್ರತಿಯೊಂದು ಧರ್ಮದ ಬಗ್ಗೆಯೂ ಗೌರವವಿದೆ. ಒಂದು ಅಗೋಚರ ಶಕ್ತಿ ನಮ್ಮನ್ನೆಲ್ಲ ಕಾಯುತ್ತದೆಂಬ ಅಗಾಧ ನಂಬಿಕೆ ಇದೆ. ಆತ್ಮನೊಳಗೆ, ಪರಮಾತ್ಮ ಇದ್ದಾನೆ, ನಾವು ಮನಸಾರೆ ಪ್ರಬಲ ಇಚ್ಛೆಯಿಂದ ಒಳ್ಳೆಯದನ್ನು ಬೇಡಿಕೊಂಡರೆ ಖಂಡಿತವಾಗಿಯೂ ಜಗತ್ತಿನೆಲ್ಲ ಶಕ್ತಿ ಅದರೆಡೆಗೆ ಕೆಲಸ ಮಾಡಲು ಶುರುಮಾಡುತ್ತವೆ. ಅಂತೆಯೇ ಮೂಢನಂಬಿಕೆಗಳಲ್ಲಿ ಎಳ್ಳಷ್ಟು ಆಸಕ್ತಿ ಇಲ್ಲ. ದೇವರು ಖಂಡಿತವಾಗಿಯೂ ಇದ್ದಾಳೆ. ಅದು ನಮ್ಮ ತಂದೆ, ತಾಯಿ ರೂಪದಲ್ಲಿ, ಪ್ರಕೃತಿಯಲ್ಲಿ, ನಾವು ಮಾಡುವ ಒಳ್ಳೆಯ ಕೆಲಸಗಳಲ್ಲಿ, ಪ್ರೀತಿಯಲ್ಲಿ! ಈ ಜಗದ ಚೈತನ್ಯವೇ ದೇವರು ಎಂದರೆ ತಪ್ಪಾಗಲಾರದು. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಕೃತಕತೆ, ಅಸಹಜತೆ ಮತ್ತು ಅತಿಯಾದ ಸ್ವೇಚ್ಛೆಯೇ ಹೆಚ್ಚಾಗುತ್ತಿರುವುವೆಂಬ ಭಾವ. ಮಾತು, ಕೃತಿಗಳಲ್ಲಿನ ಅತಿಯಾದ ಸ್ವೇಚ್ಛೆಯೇ ಆಧುನಿಕತೆ ಎನ್ನುವಂತಾಗಿದೆ. ಹೊಸ ವಿಚಾರಗಳನ್ನ ಹುಟ್ಟು ಹಾಕುತ್ತ, ಹಳೆಯ ಒಳಿತುಗಳನ್ನ ಉಳಿಸಿಕೊಳ್ಳುತ್ತಾ ಸಾಗಬೇಕಾಗಿದೆ. ತೆರೆದ ಮನಸ್ಸು ಮತ್ತು ಹೃದಯವೈಶಾಲ್ಯತೆಗಳು ಬಹಳ ಕಡಿಮೆಯಾಗುತ್ತಿವೆಯೇನೋ. ನಮ್ಮ ನಿಲುವನ್ನ ಸ್ಪಷ್ಟವಾಗಿ ಹೇಳಲೂ ಹಿಂಜರಿಕೆ, ಕಾರಣ ನಮ್ಮನ್ನ ಒಂದು ಪಂಥಕ್ಕೆ ಸೀಮಿತ ಮಾಡಿಬಿಡುತ್ತಾರೆ. ಹಂಸ ಪಕ್ಷಿಯ ಹಾಗೆ ಎಲ್ಲದರಲ್ಲೂ ಒಳಿತನ್ನ ಮಾತ್ರ ತೆಗೆದುಕೊಂಡು ಕೆಡುಕನ್ನ ಬಿಡಬೇಕು. ಹಾಗೆಯೇ ಎಲ್ಲದಕ್ಕೂ ಈಗ ಹೋರಾಡಬೇಕಾದ ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಇದರಲ್ಲಿ ನನಗೆ ಅನುಭವವೂ ಕಡಿಮೆ. ಕಾರಣ ನಾನು ಯಾವುದೇ ಒಂದೇ ಗುಂಪಿಗೆ ಸೇರದೆ, ಒಳ್ಳೆಯ ಮತ್ತು ಹೊಸ ಹೊಳಹುಗಳು ಎಲ್ಲಿರಿತ್ತವೋ ಅಲ್ಲಿ ನನ್ನ ಒಲವಿರುತ್ತದೆ. ಆದರೂ ಒಟ್ಟಾರೆಯಾಗಿ ನೋಡಿದಾಗ ಎಡ-ಬಲಗಳೆಂದು ಒಬ್ಬರ ಮೇಲೊಬ್ಬರು ಕೆಸರೆರಚಾಡುವುದು ಬಿಟ್ಟು ಕನ್ನಡ ಭಾಷಾ ಪರಂಪರೆಯನ್ನ ಮುಂದುವರಿಸಿಕೊಂಡು ಹೋಗಲು ಒಗ್ಗೂಡುವುದು ಅತ್ಯವಶ್ಯಕ. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಬಹಳಷ್ಟು ಕೆಟ್ಟ ವಿಷಯಗಳನ್ನೇ ನಾವು ಕೇಳುತ್ತಿದ್ದರೂ, ನನ್ನ ಸುತ್ತಲು ಅಥವಾ ನನ್ನ ಸಂಪರ್ಕಕ್ಕೆ ಬಂದಿರುವ ಬಹಳಷ್ಟು ಯುವಮನಸ್ಸುಗಳು ಕನ್ನಡ ಭಾಷೆಯ ಒಲವು, ಬರಹ, ಸಂಚಾರ, ಸಹೃದಯಿತನವನ್ನ ತೋರುತ್ತಿದ್ದಾರೆ. ಇದು ಬಹಳಷ್ಟು ಆಶಾದಯಕ ಸಂಗತಿ ಮತ್ತು ಸಂತಸ, ಸಂತೃಪ್ತಿಯ ವಿಷಯ. ಈ ಯುವ ಚಿಗುರುಗಳಿಗೆ, ಹಿರಿಯ ಬೇರುಗಳು ತಮ್ಮ ಪ್ರೀತಿ, ಜ್ಞಾನವನ್ನ ಧಾರೆ ಎರೆದು ಕೈ ಹಿಡಿದು ನಡೆಸೋದು ಮತ್ತೊಂದು ಖುಷಿಯ ವಿಚಾರ. ಇಂತಹವರ ಸಂತತಿ ಹೆಚ್ಚಲಿ ಅನ್ನೋ ಆಶಯ. ತಾಂತ್ರಿಕ ಪ್ರಗತಿ, ಹೊಸ ಆವಿಷ್ಕಾರಗಳು ಕ್ಷಿಪ್ರಗತಿಯಲ್ಲಿದ್ದರೂ ಬಹಳಷ್ಟು ಸಾಮಾಜಿಕ ಸಮಸ್ಯೆಗಳು ಇನ್ನೂ ಉಳಿದುಕೊಂಡಿವೆ. ಅತ್ಯಾಚಾರ, ಕೊಲೆಗಳ ಸಂಖ್ಯೆ ಕಡಿಮೆಯೇ ಆಗುತ್ತಿಲ್ಲ. ಇವೆಲ್ಲ ಸಮಸ್ಯೆಗಳು ಬಗೆಹರೆಯಬೇಕೆಂದರೆ ಪ್ರತಿ ಒಬ್ಬ ವ್ಯಕ್ತಿ ಮೊದಲು ತಾನು ಸರಿಯಾಗಿ ಇರಬೇಕು. ಬಸವಣ್ಣ ಹೇಳಿದಂತೆ – “ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ”. ಅತೀ ವೇಗದ ಮುಮ್ಮುಖದ ಚಲನೆಯೊಂದಿಗೆ, ಪ್ರೀತಿ, ಪ್ರೇಮ ಅಂತಃಕರಣದ ಗುರುತ್ವಾಕರ್ಷಣೆ ನಮ್ಮನ್ನ ಹಿಡಿದಿಡಲಿ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ನನಗೆ ಎಷ್ಟು ಸಾಧ್ಯವೋ ಅಷ್ಟೂ ಓದಬೇಕೆಂಬ ಆಸೆ. “known is drop unknown is ocean” ಎನ್ನುವಂತೆ, ಓದುವ ಪುಸ್ತಕಗಳು ಇನ್ನೂ ಬಹಳಷ್ಟಿವೆ. ಜೊತೆಗೆ ಬಹಳಷ್ಟು ಬರೆಯುವ ಕನಸಿದೆ. ನಾನು ಬರೆದದ್ದೆಲ್ಲವೂ ಅತೀ ಸುಂದರ ಅನ್ನುವಂತೆ ಇರದಿರಬಹುದು, ಆದರೆ ಮೋನಚುಗೊಳಿಸುವ ಪ್ರಯತ್ನ ಸದಾ ಜಾರಿಯಲ್ಲಿರುವುದು. ಇತ್ತೀಚೆಗೆ ಆಂಗ್ಲ ಪದ್ಯಗಳನ್ನ ಕನ್ನಡಕ್ಕೆ ತರುವ ಗೀಳು ಹತ್ತಿದೆ. ಇದನ್ನ ಜಾರಿಯಲ್ಲಿಡುವ ಆಸೆ ಮತ್ತು ಪ್ರಯತ್ನ. ಹಾಗೆಯೇ ಕಥೆಗಳನ್ನು ಸಹ ಬರೆಯುವ ಹಂಬಲವಿದೆ. ಇಷ್ಟೇ ಸಾಹಿತ್ಯದ ಬಗ್ಗೆ ನನ್ನ ಸಧ್ಯದ ಕನಸುಗಳು. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ? ನಾನು ಬೆಳೆದ ಪರಿಸರ ಹೆಚ್ಚಾಗಿ ಶರಣರ ಸಂಸ್ಕೃತಿ ಮತ್ತು ವೈಚಾರಿಕತೆಯ ಪ್ರಭಾವದಲ್ಲಾದ್ದರಿಂದ ಸಹಜವಾಗಿ ಅಕ್ಕನ, ಅಣ್ಣನ ವಚನಗಳು ನನ್ನನ್ನು ಚಿಂತನೆಗೆ ಹಚ್ಚುವವು ಹಾಗೂ ಹೆಚ್ಚು ಆಪ್ತ ಎನಿಸುವಂತಹವು. ನನಗೆ ಕನ್ನಡದಲ್ಲಿ ಕಾಡುವ ಕವಿ ಕುವೆಂಪು.ಬೇಂದ್ರೆಯವರ ಪದ್ಯಗಳು . ಕಾರಂತರು, ಪೂರ್ಣಚಂದ್ರ ತೇಜಸ್ವಿ. ಆಂಗ್ಲದಲ್ಲಿ ಖಲೀಲ್ ಗಿಬ್ರಾನ್ ನ ಪದ್ಯಗಳು . ಈಚೆಗೆ ಓದಿದ ಕೃತಿಗಳಾವವು? ಇತ್ತೀಚೆಗೆ ಓದಿದ ಕೃತಿಗಳೆಂದರೆ: ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋ, ಇನ್ನೂ ಕವನ ಸಂಕಲನಗಳನ್ನ ಇಡಿಯಾಗಿ ಓದುವುದಕ್ಕಿಂತ ಬಿಡಿ ಬಿಡಿಯಾಗಿ ಓದುವುದೇ ಬಹಳ ಇಷ್ಟ. ಎಂ.ಆರ್ ಕಮಲ ಅವರ ನೆತ್ತರಲ್ಲಿ ನೆಂದ ಚಂದ್ರ, ಕುವೆಂಪುರವರ ಕೊಳಲು ಈ ಕವನ ಸಂಕಲನಗಳಿಂದ ಒಂದಷ್ಟು ಕವಿತೆಗಳನ್ನ ಆಗಾಗ ಓದುತ್ತಿದ್ದೇನೆ. ಓದುವ ಪಟ್ಟಿಯಲ್ಲಿ ಇನ್ನೂ ಬಹಳಷ್ಟು ಪುಸ್ತಕಗಳ ದೊಡ್ಡ ಪಟ್ಟಿಯೇ ಇದೆ. ನಿಮಗೆ ಇಷ್ಟವಾದ ಕೆಲಸ ಯಾವುದು? ಓದು ಬರಹಗಳೊಂದಿಗೆ, ನನಗೆ ಪತಿಯೊಂದಿಗೆ ಹೊಸ ಸ್ಥಳಗಳಿಗೆ ಭೇಟಿ ಕೊಡುವುದು, ಹಳೆಯ ವಾಸ್ತುಶಿಲ್ಪದ ಕಲಾಗುಡಿಗಳಿಗೆ ಹೋಗುವುದು, ಹಸಿರು, ಕಾಡು, ಬೆಟ್ಟ, ಝರಿಗಳಿಗೆ ಹೋಗಿ ಸುತ್ತಾಡಿ ಪ್ರಕೃತಿಯನ್ನ ಮನಸಾರೆ ಸವಿಯುವುದು. ಹಾಗೆಯೇ ನನ್ನ ಪುಟಾಣಿ ಮಗಳಿಗೆ ಪದ್ಯಗಳನ್ನ ಹೇಳಿಸುವುದು ಇಷ್ಟದ ಕೆಲಸದಲ್ಲೊಂದು! ನಿಮಗೆ ಇಷ್ಟವಾದ ಸ್ಥಳ ಯಾವುದು ? ಇಂತಹದೇ ಎಂದು ಕಡ್ಡಿ ಕೊರೆದು ಹೇಳುವುದು ಕಷ್ಟ. ಎಲ್ಲಿ ಪ್ರೀತಿ ಅಂತಃಕರಣ ತುಂಬಿರುವುದೋ, ಎಲ್ಲಿ ಅಮ್ಮ ಇರುವಳೋ, ಎಲ್ಲಿ ಹಸಿರಿರುವುದೋ ಆ ಸ್ಥಳಗಳೆಲ್ಲವೂ ಇಷ್ಟವೇ! ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ ಸಿನಿಮಾ ಯಾವುದು? ನನಗೆ ಬಹಳ ಇಷ್ಟವಾಗುವ ಸಿನಿಮಾಗಳು ಬಹಳಷ್ಟಿವೆ. ಡಾ.ರಾಜ್ ಕುಮಾರ್ ಅವರ ಎಲ್ಲ ಸಿನಿಮಾಗಳೂ ಇಷ್ಟವಾಗುತ್ತವೆ. ಅವರ ಸಿನಿಮಾಗಳಲ್ಲಿ ಮಾನವೀಯ ಮೌಲ್ಯಗಳು, ಪ್ರೀತಿ ಇಂತಹ ಅನೇಕ ಭಾವನಾತ್ಮಕ ಅಂಶಗಳೇ ಹೆಚ್ಚು. ಇತ್ತೀಚೆಗೆ ರಮೇಶ್ ಅರವಿಂದ್ ಅವರ ಶಿವಾಜಿ ಸುರತ್ಕಲ್ ಬಹಳಷ್ಟು ರೋಮಾಂಚನಕಾರಿ ತಿರುವುಗಳ ಚಿತ್ರ ಇಷ್ಟವಾಯ್ತು. ನೀವು ಮರೆಯಲಾರದ ಘಟನೆ ಯಾವುದು? ನನ್ನ ತಂದೆ ಅಕಾಲದಲ್ಲಿ ಇಹವನ್ನ ತ್ಯಜಿಸಿದ ಘಟನೆ ನಾನೆಂದಿಗೂ ಮರೆಯಲಾಗದ ಅತ್ಯಂತ ನೋವಿನ ಘಟನೆ. ಹಾಗೇ ನನ್ನ ಮಗಳು ಹುಟ್ಟಿದ ದಿನ ನಾನೆಂದಿಗೂ ಮರೆಯಲಾಗದ ಅತೀ ಸಂತಸದ ಕ್ಷಣ. ಹಾಗೆಯೇ ಶಾಲಾ ಕಾಲೇಜು ದಿನಗಳಲ್ಲಿ ಕ್ಲಾಸ್ ಬಿಟ್ಟು ಹೆಚ್ಚಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು ಬಹಳಷ್ಟು ನೆನಪನಲ್ಲಿರುತ್ತದೆ. ****************************************************** ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.




