ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಪ್ರಸ್ತುತ

ಅಂಕಣ ಸಂಗಾತಿ ಪ್ರಸ್ತುತ ಆಚರಣೆ ಅರ್ಥಪೂರ್ಣವಾಗಿರಲಿ ಆಚರಣೆ ಅರ್ಥಪೂರ್ಣವಾಗಿರಲಿ ಇನ್ನೇನು ಬಹುತೇಕ ಈ ಸಲದ ಪ೦ಚವಾಣಿ ತಲುಪಿದ ಒಂದೆರಡು ದಿನಗಳಲ್ಲೆ ನಾಗರ ಪಂಚಮಿ ಬ೦ದೇ ಬಿಡ್ತು , ಈ ಮಾಸದಲ್ಲಿ ಎಲ್ಲಾ ಹೆಣ್ಣುಮಕ್ಕಳು ಅತ್ಯಂತ ಸಡಗರದಿಂದ ಒಂದಾಗಿ ನಾಗರಕಲ್ಲು ಅರಸಿಕೊ೦ಡು  ಹೋಗಿ ಅಳ್ಳಿಟ್ಟು, ಎಳ್ಳು ಚಿಗಳಿ ,ತಂಬಿಟ್ಟು , ಸಜ್ಜಿ ರೊಟ್ಟಿ . ಕಡ್ಲೆ ಕಾಳು , ಅಳ್ಳು ಎಲ್ಲವನ್ನೂ ಮಕ್ಕಳು ಮುಟ್ಟದಂತೆ  ಶುಧ್ಧಿಯಿಂದ ಮಾಡಿಕೊಂಡು ತಲೆ ಸ್ನಾನ ಮಾಡಿ ಹೊಸ ಸೀರೆ ಉಟ್ಟುಕೊಂಡು ಮಕ್ಕಳೊಂದಿಗೆ ಹೋಗಿ ಆ ಕಲ್ಲಿಗೆ ತಣಿ ಎರೆದು ಪೂಜೆ ಮಾಡಿ ಎಲ್ಲಾ ಸಿಹಿ ಖಾದ್ತಗಳ ನೈವೇದ್ತ ಮಾಡುತ್ತಾರೆ . ನೊತರ ಕೊಬ್ಬರಿ ಬಟ್ಟಲಲ್ಲಿ ಹಾಲು ಹಾಕಿಕೊಂಡು ಆಕಲ್ಲಿ ಎರೆಯುತ್ತಾ …ಅಮ್ಮನ ಪಾಲು , ಅಪ್ಪನ ಪಾಲು , ಗುರುವಿನ ಪಾಲು , ಎಂದು ಇದ್ದವರ , ಇಲ್ಲದವರ ಪಾಲು ಎಲ್ಲರ ಪಲು ಎಂದು ಹಾಕುತ್ತೀರಲ್ಲವೇ ? ಅಲ್ಲಿ ನೋಡಿ ಗೆಳತಿಯರೇ …ಕಲ್ಲು ನೆನೆದು ಕೆಳಗೆ ಹರಿದು , ನೀವು ಎರೆದ ಹಾಲು ಮಣ್ಣಿನ ಪಾಲಾಗುತ್ತಿದೆ . ಹೌದು ತಾನೆ ? ನಿಜ ಹೇಳಿ ನೀವು ಎರೆದ ಹಾಲು ಯಾರ ಪಾಲಾಯಿತೂ ?         ಅಲ್ಲಿ ಹಳ್ಳಿಗಳಲ್ಲಿ ಹಾಲಿಲ್ಲದೆ ಕೊಳ್ಳಲಾಗದೆ(ಹಳ್ಳಿಗಳಲ್ಲಿ ಹೈನು ಬಹಳ ಅನ್ನೊದು ಆ ಕಾಲ ಈಗೆಲ್ಲ ತುಂಬ ಕಡಿಮೆ) ಕರಿ (ಕಪ್ಪು) ಚಹ ಕುಡಿಯುವ ಜನರಿದ್ದಾರೆ ಅಲ್ಲಿ ಮಗುವಿಗೆ ಅನ್ನ ಕಲೆಸಲು ಹಾಲಿಲ್ಲದೆ ಕಣ್ಣೀರಿಡುವ ಅಮ್ಮಂದಿರಿದ್ದಾರೆ ,ನಿಮ್ಮ ಊರ ಆಸ್ಪತ್ರ‍್ರೆಯಲ್ಲೇ ಹಾಲು ಕಾಣದ ರೋಗಿಗಳಿದ್ದಾರೆ, ಅಂತಹದರಲ್ಲಿ ನಾವು ಹೀಗೆ ಈತರ ಹಾಲು ಎರೆಯುವ, ಅಂತಹ ಆಚರಣೆಯ ನೆವದಲ್ಲಿ ಹಾಲು ಮಣ್ಣಿಗೆ ಚೆಲ್ಲುವುದು ಸರಿಯೆ ?         ಹೌದು ಇದು ಹಿಂದಿನಿಂದ ಬಂದ ಸಂಪ್ರದಾಯ ಪದ್ದತಿ ಆದರೆ ಇಂದು ನಾವು ವಿಜ್ಞಾನ ಯುಗದಲ್ಲಿದ್ದು ಒಂಚೂರು ವೈಜ್ಞಾನಿವಾಗಿ ಯೋಚಿಸದಿದ್ದರೆ ನಾವು ಮುಂದುವರೆದವರೆAದು ಹೇಳೀಕೊಳ್ಳಲು ನಾಚಿಕೆ ಎನಿಸುವುದಿಲ್ಲವೇ ? ಒಂದೆ ಸಾರಿ ತಿರುಗಿ ನೋಡಿ ಅಲ್ಲಿ ನೀವು ಎರೆದ,ಹರಿದ ಹಾಲು ನೆಕ್ಕಿ ನೀವಿತ್ತ ಆ ರುಚಿಯಾದ ಪೌಷ್ಠಿಕವಾದ ಖಾದ್ಯವನ್ನು ನಾಯಿಗಳು ತಿಂದು ಮತ್ತೆ ಹಾಲು ಹಾಕಲು ಬರುವ ಪೆದ್ದು ಹೆಂಗಸರ ದಾರಿ ನೋಡುತ್ತಿವೆ ಅಲ್ಲವೇ ? ಈಗ ಎನು ಅನಿಸುತ್ತೆ ? ನೀವು ಮಾಡಿದ್ದೆ ಸರಿ ಅಂತಾನ ?  ಅಥವಾ ಛೇ! ಅಂತಾನ ? ಹಾಲು ಹಾಕದಿದ್ದರೆ ಏನಾಗುತ್ತೋ ? ಹಾವು ಕಾಡುತ್ತೋ ?, ಕಚ್ಚುತ್‌ತೋ ? ಅನ್ನೊ, ಭಯ ಹಿಂದಿನಿAದ ಬಂದ ಪದ್ದತಿ ಹೇಗೆ ಬಿಡುವುದು ವರ್ಷಕ್ಕೋಮ್ಮೆ ಹಾಲು ಹಾಕಿದರೆನಾಯಿತು ?  ಅನಿಸಿದರೆ ನೀವು ಮೂರ್ತಿಯಾಗದ ಕಲ್ಲು ಅಂತಾಯ್ತು.                            ಕಲ್ಲ ನಾಗರ ಕಂಡರೆ                                   ಹಾಲನೆರೆ ಎಂಬರಯ್ಯ                                   ದಿಟದ ನಾಗರ ಕಂಡರೆ                                   ಕೊಲ್ಲು ಕೊಲ್ಲೆಂಬರಯ್ಯ…..          ಬಸವಣ್ಣನವರು ಆಕಾಲಕ್ಕೆ ಅಂದರೆ ೯೦೦ವರ್ಷಗಳ ಹಿಂದೆಯೇ ಈ ಮೂಢ ನಂಬಿಕೆಯನ್ನು ತಡೆಯಲು ಯತ್ನಿಸಿದರೂ ಇಂದಿಗೂ ಆ ಮೌಢ್ಯತೆಯಿಂದ ಹೊರ ಬಂದಿಲ್ಲ ಎನ್ನುವುದು ವಿಷಾದನೀಯ         ಹೌದು ಹಾಲು ನೆಕ್ಕಿ ಎಲ್ಲಾ ನೈವೆದ್ಯ ತಿನ್ನುವ ನಾಯಿಗೆ ಹಾವು ಏನೂ ಮಾಡುವುದಿಲ್ಲ ಯಾಕೆ ?                                 ಹಸಿದವರಿಗೆ ಅನ್ನವಿಕ್ಕಿ                                 ಅವರುಂಡು ತೇಗಿಬಿಟ್ಟ                                 ತೃಪ್ತಿ ನಿಮ್ಮ ಕಾವುದು                                 ಏನು ಕೊಟ್ಟರೆಸಿಕ್ಕಿತು ಆ                                 ಹಾರೈಕೆ ಹೇಳು ಗುರುದೇವ            ಹಸಿದವರಿಗೆ ಅನ್ನ ಕೊಡಿ ಬಂದವರಿಗೆ ನೀರು ಕೊಡಿ ಅವರು ತಿಂದು ಕುಡಿದು ತೃಪ್ತಿಗೊಂಡು ಖುಷಿಯಾಗಿ’ ಒಳ್ಳೆಯದಾಗಲಿ ನನ್ನವ್ವ’ ಎನ್ನುವ ಆ ಮನಸು ಅದೇನು ಕೊಟ್ಟರೆ ಸಿಕ್ಕೀತು ಹೇಳಿ…ಆ ಕೊಡುವ ಖುಷಿಗೆ ಸಾಟಿಯೆ ಇಲ್ಲ. ಆ ಧನ್ಯತಾ ಭಾವವೇ ಆರೋಗ್ಯ .    ಇದೊಂದೆ ಅಲ್ಲ ನಾವು ಮಾಡುವ ಎಲ್ಲಾ ಆಚರಣೆಗಳೂ ಅರ್ಥಪೂರ್ಣವಾಗಿರಬೇಕು ಮುಂದೆ ಬರುವ ದಸರಾ ಹಬ್ಬ……                                                                                                                                                                                                                                                                                                                                                                                                                                                                                                                                                                                     ಅವಾಗ ಬಹುತೇಕ ಹೆಣ್ಣು ಮಕ್ಕಳು ನಸುಕಿನಲ್ಲೆ ಎದ್ದು , ಹತ್ತು ದಿನಗಳು ಬನ್ನಿ ಗಿಡಕ್ಕೆ ಪೂಜೆ ಮಡಿ ದಿನಾಲು ಒಂದು ಸಹಿ ಅಡುಗೆ ನೈವೇದ್ಯ ಮಾಡಿ ,ಆ ಗಿಡದ ಕೆಳಗಿಟ್ಟು ನಾಲ್ಕೆöÊದು ಸುತ್ತು ಹಾಕಿ  ಏನೋ ಒಂದು ಶಾಂತಿ ಹೊಂದಿದ ಭಾವದಲ್ಲಿ ಬರುತ್ತಾರೆ . ಅವರಿನ್ನು ಮನೆ ಮುಟ್ಟಿರುವುದಿಲ್ಲ ನಾಯಿ ಹಂದಿಗಳು ಆ ಸಿಹಿ ತಿಂದು ಉಚ್ಚೆ  ಮಾಡಿ ಮರುದಿನದ ನಸುಕಿಗಾಗಿ ಕಾಯುತ್ತವೆ . ಏನಿದೆಲ್ಲಾ ?        ಒಂದು ವಿಚಾರ , ಬನ್ನಿ ಗಿಡದ ಕೆಳಗೆ ಪಾಂಡವರು ತಮ್ಮ ಆಯುಧಗಳನ್ನು ಅಡಗಿಸಿಟಿದ್ದ್ಟರೆಂದು ಪ್ರತೀತಿ , ಅದಕ್ಕೆ ಅದನ್ನು ಪೂಜಿಸಿ ತಮ್ಮ ಆಯುಧಗಳನ್ನು  ಇಷ್ಟು ದಿನ ಕಾಯ್ದದಕ್ಕೆ ಕೃತಜ್ಞತೆ ತೋರಿರಬಹುದು . ನಸುಕಿನಲ್ಲಿ ಒಳ್ಳೆ ಶುಧ್ಧ ವಾತಾವರಣದಲ್ಲಿ ಗಿಡ ಸುತ್ತುವದರಿಂದ ಶುಧ್ಧ ಆಮ್ಲಜನಕ ದೊರೆತು ಆರೋಗ್ಯ ಸುದಾರಿಸುವುದು . ಸುತ್ತುವ ನಡಿಗೆಯಿಂದ ವ್ಯಾಯಾಮ ವಾಗುವುದು . ಬೇಗ ಏಳುವ ಅಭ್ಯಾಸವಾಗುವುದು . ಮೌನವಾಗಿ ಬಂದು ಹೋಗುವುದರಿಂದ ಶಕ್ತಿ ಸಂಗ್ರಹವಾಗುವುದು . ಈ ವ್ರತದ ಅನುಕೂಲತೆಗಳು ಇದ್ದಾವು .        ಇದು ಹೋಗ್ಲಿ ಬಿಡಿ , ಕೊನೆಯ ದಿನ ಅಂದರೆ ವಿಜಯದಶಮಿಯ ಹತ್ತನೆಯ ದಿನ ಬಹುತೇಕರು ಬನ್ನಿಗಿಡಕ್ಕೆ ಸೀರೆ ಉಡಿಸಿ ಪೂಜಿಸಿ ವ್ರತ ಸಂಪನ್ನಗೊಳಿಸುತ್ತಾರೆ . ಇದೆಂತಹ ಮೌಢ್ಯ ? ಕಳೆದ ವರ್ಷ ಉಡಿಸಿದ ಸೀರೆ ಬಿಸಿಲು ಗಾಳಿ ಮಳೆಗೆ ಸುಟ್ಟು ಸವೆದು ಹರಿದು ಹಾಳಾಗಿದೆ . ಮತ್ತೆ ಈಗ ಹೊಸ ಸೀರೆ . ಮನೆಯಲ್ಲಿ ಅತ್ತೆ ಅಥವಾ ಅಮ್ಮ ಹರಿದ ಸೀರೆ ಕಾಲಿಗೆ ತೊಡರಿ ಎಡವಿದ್ದು ಕಾಣುವುದಿಲ್ಲ , ತಲೆಯ ಮೇಲೆ ಸೆರಗು ಹರಿದು ಬಿಳಿ ತಲೆ ನಗುವುದು ಕಾಣುವುದುಲ್ಲವೇ ? ಅದು ಬಿಡಿ ಎಲ್ಲಾ ಸರಿ ಇದೆ . ಮನೆಗೆ ಹಾಲು ತರುವ ಅಜ್ಜಿ ಯ ಹರಿದ ಸೀರೆ , ಅವಳ ಜೊತೆ ಬರುವ ಆ ಹುಡಿಗಿಯ ಹರಿದ ಅಂಗಿ ಕಾಣುವುದಿಲ್ಲವೇ ? ಅವರಲ್ಲಿ ಒಬ್ಬರಿಗೆ  ಆ ಬಟ್ಟಿ ಕೊಟ್ಟರೆ …? ಅನುಕೂಲವಾಗುತ್ತಲ್ಲವಾ ?  ಗೆಳತಿಯರೇ ನಾನು ವೇದಾಂತ ಹೇಳುತಿಲ್ಲ ಸತ್ಯ ಅನಾವರಣಗೊಳಿದೆ ಅಷ್ಟೆ ,          ಬದಲಾಗೋಣ ಗೆಳತಿಯರೇ …ಸರಿ ತಪ್ಪುಗಳ ಪರಾಮರ್ಶಿಸಿ ನಡೆಯೋಣ . ಏನಂತೀರಿ ?                              ಕಲ್ಲು ದೇವರೂ ದೇವರಲ್ಲ                               ಮಣ್ಣು ದೇವರು ದೇವರಲ್ಲ                               ಮರ ದೇವರು ದೇವರಲ್ಲ …..                               ತನ್ನ ತಾನರಿದು ತಾನಾರೆಂದು ತಿಳಿದೊಡೆ                              ತಾನೆ ದೇವ ಅಪ್ರಮಾಣ ಕೂಡಲ ಸಂಗಮದೇವ .                                                   ನಿಂಗಮ್ಮ ಭಾವಿಕಟ್ಟಿ                                                            . ನಿಂಗಮ್ಮ ಭಾವಿಕಟ್ಟಿ ಅವರು ಪಂಚ ವಾಣಿ ಪತ್ರಿಕೆಯಲ್ಲಿ ಅಂಕಣ ಬರಹಗಾರ್ತಿ. ‘ಕುಶಲೋಪರಿ’ ‘ಹಾರೈಕೆ’ ಅವರ ಕವನ ಸಂಕಲನಗಳು ‘ವಚನ ಸಂಭ್ರಮ ಆಧುನಿಕ ವಚನಗಳು’ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಹೈಕುಗಳು, ಹನಿಗಳನ್ನು ಮನಮುಟ್ಟುವಂತೆ ಕಟ್ಟುವ ಲೇಖಕಿ ಬಾಗಲಕೋಟೆ ಜಿಲ್ಲೆಯ ಹುನಗುಂದದವರು. ಓದು, ಬರಹ, ಪ್ರವಾಸ ಅವರ ಹವ್ಯಾಸಗಳಾಗಿದ್ದು ಅವರಿಗೆ ‘ಕಾವ್ಯಶ್ರೀ’ ‘ರಾಜ್ಯೋತ್ಸವ ಪ್ರಶಸ್ತಿ’ ‘ಆಜೂರ್’ ಪ್ರಶಸ್ತಿಗಳು ಅರಸಿ ಬಂದಿವೆ  ಆಕಾಶವಾಣಿಯಲ್ಲಿ ಅವರ ಚಿಂತನ ಸಂದರ್ಶನಗಳು ಮೂಡಿಬಂದಿವೆ.

Read Post »

ಅಂಕಣ ಸಂಗಾತಿ, ಪ್ರಸ್ತುತ

ಅಂಕಣ ಸಂಗಾತಿ ಪ್ರಸ್ತುತ ಪರೋಪಕಾರದ ಜೊತೆಗೆ. ದಾನ ,ದಯೆ , ಕ್ಷಮೆಗಳಂತೆ ಪರೋಪಕಾರವೂ ಒಂದು ದೈವೀಗುಣ . ಮತ್ತು ಅಪರೂಪದ ಗುಣ . ಇದು ಅನುವಂಶೀಯವೂ ಹೌದು ,ಅನುಕರಣೀಯವೂ ಹೌದು . ಹಾಗಂತ ತನ್ನ ಮನೆ ಸಂಬಂಧಗಳ ಕಡೆಗಣಿಸಿ (ಬದಿಗೊತ್ತಿ )ಇತರರಿಗೆ ಉಪಕಾರ ಮಾಡುವುದು ಅತಿರೇಕವೆನಿಸೀತು . ಹಿರಿಯರು ಹೇಳಿಲ್ಲವೇ ?“ ಮನೆ ಗೆದ್ದು ಮಾರು ಗೆದೆ ಅಂತ”. ತನ್ನ ಮಗುವ ಎತ್ತಿ ಆಡಿಸಿ ಮುದ್ದು ಮಾಡಲು ಸಮಯವಿಲ್ಲ, ಮಕ್ಕಳ ಕಲ್ಯಾಣ , ಅಭಿವೃದ್ಧಿ ಮಾಡುತ್ತಾ ಮಕ್ಕಳು ಮಮತೆ , ಸ್ವಾತಂತ್ರ್ಯ ಬಾಂಧವ್ಯಗಳ ಬಗೆಗೆ ಭಾಷಣ ಮಾಡುವುದು ದೌರ್ಭಾಗ್ಯ. ವಿಪರ್ಯಾಸ ಕೂಡ ಹೌದು. ಒಂದು ಕಡೆ ವಿವೇಕಾನಂದರು ಹೇಳುತ್ತಾರೆ “ನಮ್ಮೊಡನೆ ನಾವು ದಿನಕ್ಕೊಮ್ಮೆಯಾದರೂ ಮಾತನಾಡಿಕೊಳ್ಳದಿದ್ದರೆ ಒಬ್ಬ ಅತ್ಯುತ್ತಮ ಸ್ನೇಹಿತನೊಂದಿಗೆ ಕಳೆಯುವ ಸಮಯವನ್ನು ಕಳೆದುಕೊಂಡಂತೆ “ ನಾವು ಇನ್ನೊಬ್ಬರ ಮಾತು ಕೇಳುತ್ತೇವೆ , ನೋವು ಕೇಳುತ್ತೇವೆ ಮರುಗುತ್ತೇವೆ ಮನೆಯೊಳಗಿನ ಮನಸಿನ ಮಾತುಗಳು ಹೊರಬರಲಾಗದೇ (ಅದೆಷ್ಟೋ) ಒಳಗೇ ಕರಗಿ  ಹೋಗುವುದುʼ ಪರೋಪಕಾರಿʼಗಳಿಗೆ ಗೊತ್ತೇ ಆಗುವುದಿಲ್ಲ . ಲೋಕದಾ ಡೊಂಕು ನೀವೇಕೆ ತಿದ್ದುವಿರಿ ನಿಮ್ಮನಿಮ್ಮತನುವಸಂತೈಸಿಕೊಳ್ಳಿ ನಿಮ್ಮನಿಮ್ಮಮನವಸಂತೈಸಿಕೊಳ್ಳಿ ನೆರೆಮನೆಯದುಃಖಕೆಅಳುವವರಮೆಚ್ಚ ನಮ್ಮಕೂಡಲಸಂಗಮದೇವ ಇಲ್ಲಿ ಸ್ವಾರ್ಥದ ಮಾತೇ ಬರುವುದಿಲ್ಲ ಎಲ್ಲರೂ ತಮ್ಮನೆ , ತಮ್ಮವರು ತಮ್ಮ ಪರಿಸರ ಎಂದು ಒಂದಿಷ್ಟು ಸಮಯ ಕೊಟ್ಟರೆ ಸಮಾಜ ( ಲೋಕ) ತಾನಾಗೇ ಉದ್ಧಾರವಾಗುವುದು ಎಂಬುದಾಗಿದೆ . ಚುನಾವಣೆಯಂತಹ ಸಂದರ್ಭದಲ್ಲಿ ತಮಗೆ ಬೇಕಾದ ಅಭ್ಯರ್ಥಿಗಳಿಗಾಗಿ ಹಗಲು ರಾತ್ರಿ ಚಿಂತಿಸಿ , ಓಡಾಡಿ   ಗೆಲ್ಲಿಸಿ ಹಾರಾಡುವ ಕಾರ್ಯಕರ್ತರು ತಮ್ಮ ದಾಂಪತ್ಯ ಸಂಬಂಧವನ್ನು ಹಗುರಾಗಿ         ಕಡೆಗಣಿಸಿ ಸೋಲಿನತ್ತವಾಲುತ್ತಿರುವುದು ಗಮನಕ್ಕೆ ಬರುವುದಿಲ್ಲ. “ಅವರೊಂದಿಗೂ ಓಡು ನಿನ್ನವರೊಂದಿಗೇ ಇರು” ಸಾಧಕರಾರೂ ಸನ್ಯಾಸಿಗಳಾಗಿಯೇ ಸಾಧಿಸಿಲ್ಲ .ಸಂಸಾರದಲ್ಲಿದ್ದುಕೊಂಡೇ ಬಸವಣ್ಣವರುʼವಿಶ್ವಗುರುʼವಾಗಿದ್ದು , ʼನಿಜವಾದ ಸರಸ್ವತಿʼ ಮೊಟ್ಟಮೊದಲ ಶಿಕ್ಷಕಿ ʼಸಾವಿತ್ರಿಬಾಪುಲೆʼ ಪತಿಯಂದಿಗಿದ್ದುಕೊಂಡೇ ಮುನ್ನಡೆದುದಲಿ ಶಿಕ಼್ಷಕಿಯಾದರು .  ಹಿರಿಯರ ಹಾರೈಕೆ , ಸಂಗಾತಿಯ ಬೆಂಬಲ ಬಂಧುಗಳ ಧೈರ್ಯ ನಿಮ್ಮ ಸಾಧನೆಗೆ ಜೊತೆಯಾಗಿ ಸಮಾಜ ಸೇವೆ ಅರ್ಥಪೂರ್ಣವಾದೀತು . ಹಿಂದಿನ ಕಾಲದಲ್ಲಿ ಬಹುತೇಕ ಎಲ್ಲ ಸಾಧಕ ಋಷಿಮುನಿಗಳೂ  ಸಂಸಾರಸ್ಥರೇ ಆಗಿದ್ದು ಗಮನಿಸಬೇಕಾದ ಅಂಶ. ಪ್ರಾಣಿ ಪ್ರಪಂಚದಲ್ಲು ಕೂಡ ಇದೇ ಸಿದ್ಧಾಂತವಿದೆ . ತನ್ನ ಮರಿಗಳಿಗೆ ರೆಕ್ಕೆಬಲಿತು ಹಾರಲು ಬರುವವರೆಗೂ ತಾನೇ ಗುಟುಕು ತಂದು ತಿನಿಸುತ್ತವೆ . ತಾನಿಟ್ಟ ಮೊಟ್ಟೆಗಳ ಪೋಷಣೆಗೆ ಅಷ್ಟು ದೂರದಿಂದ ಬಂದು ಕಾವು ಕೊಟ್ಟು ಮರಿಮಾಡಿ ಪೋಷಿಸುವ ಆಮೆ, ಈ ಕರ್ತವ್ಯಗಳ ಯಾರು ಹೇಳಿ ಕೊಟ್ಟರೀ ಪ್ರಾಣಿಕುಲಕೆ ? ತನ್ನ ಮರಿಗಳೊ0ದಿಗೆ ಚಿನ್ನಾಟವಾಡುತ್ತಾ ನೀರೆರೆಚಿಕೊಳ್ತಾ ಮೂಕ ಭಾಷೆಯಲ್ಲೇ ಎಲ್ಲವನ್ನೂ ಕಲಿಸುತ್ತ ಸಮಯ ಕಳೆಯುವ ಆನೆ , ಜಿಂಕೆ ಚಿರತೆಗಳು ತನ್ನಂದಿಗೇ ತಬ್ಬಿ ಹಿಡಿದು ಅಷ್ಟು ದೂರ ಜಿಗಿದು ಆಹಾರ ಹುಡುಕಿ  ಹಸಿವ ತಣಿಸುವ ಪಾಠ ಕಲಿಸುವ ಮಂಗಗಳು . ಓಹ್‌ !ಎಲ್ಲ ಜೀವಿಗಳು ತನ್ನ ಮರಿ ಮೊಟ್ಟೆ, ತನ್ನದೇ ಒಂದು ಗೂಡು ಮಾಡಿಕೊಂಡು ಜೀವಿಸುವ ಪರಿ ಮಾನವನಿಗೆ ಉಚಿತ ಪಾಠ . ಅಮ್ಮ ಮದರ್‌ ತೆರೆಸಾ ಹೇಳಿದರು “ಅನ್ನ ಸಿಗದೇ ಕೊರಗುವವರಿಗಿಂತ , ಪ್ರೀತಿ ಸಿಗದೇ ಕೊರಗಿ ಸತ್ತವರೇ ಹೆಚ್ಚು . “  ವರಕವಿ ದ ರಾ   ಬೇಂದ್ರೆ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅವರನ್ನು ಮಾತ್ರ ಆಹ್ವಾನಿಸಲಾಗಿತ್ತಂತೆ. ನನ್ನ ಪ್ರಶಸ್ತಿಯ ಕಂಡು ಹರುಷಪಡುವ ನನ್ನವರಿರದ  ಆ ಕಾರ್ಯಕ್ರಮಕ್ಕೆ ನಾನು ಬರಲಾರೆ “ಎಂದರಂತೆ . ಆಮೇಲೆ ಮನೆಯವರೆಲ್ಲರಿಗೂ ಬರಲು ಅವಕಾಶ ಮಾಡಿಕೊಡಲಾಯಿತು .      ನಮ್ಮವರಿಗೆ ನಾವು ಕೊಡಬಹುದಾದ ʼಉಡುಗೊರʼ ಎಂದರೆ ಒಂದಿಷ್ಟು ಸಮಯ . ಇದು ಸಾಧ್ಯವಾಗುವುದಾದರೆ ಯಾಕೆ ಕೊಡಲಾಗದು ? ಮನಸುಗಳಡೆಯುವ ಮುನ್ನ, ಕತ್ತಲಾವರಿಸುವ ಮುನ್ನ ಕಣ್‌  ತೆರೆದು ನೋಡು ನಿನ್ನೊಂದಿಗಿರುವವರನ್ನು ,  ನಿನಗಾಗಿ ಮಿಡಿಯುವ ಹೃದಯಗಳನ್ನು , ನೀನೆದ್ದರೆ ಚಪ್ಪಾಳಿಸಿ ಹರ್ಷಿಸಿ ಹಾರೈಸುವವರನ್ನು. ನಿಂಗಮ್ಮಭಾವಿಕಟ್ಟಿ ನಿಂಗಮ್ಮ ಭಾವಿಕಟ್ಟಿ ಅವರು ಪಂಚ ವಾಣಿ ಪತ್ರಿಕೆಯಲ್ಲಿ ಅಂಕಣ ಬರಹಗಾರ್ತಿ. ‘ಕುಶಲೋಪರಿ’ ‘ಹಾರೈಕೆ’ ಅವರ ಕವನ ಸಂಕಲನಗಳು ‘ವಚನ ಸಂಭ್ರಮ ಆಧುನಿಕ ವಚನಗಳು’ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಹೈಕುಗಳು, ಹನಿಗಳನ್ನು ಮನಮುಟ್ಟುವಂತೆ ಕಟ್ಟುವ ಲೇಖಕಿ ಬಾಗಲಕೋಟೆ ಜಿಲ್ಲೆಯ ಹುನಗುಂದದವರು. ಓದು, ಬರಹ, ಪ್ರವಾಸ ಅವರ ಹವ್ಯಾಸಗಳಾಗಿದ್ದು ಅವರಿಗೆ ‘ಕಾವ್ಯಶ್ರೀ’ ‘ರಾಜ್ಯೋತ್ಸವ ಪ್ರಶಸ್ತಿ’ ‘ಆಜೂರ್’ ಪ್ರಶಸ್ತಿಗಳು ಅರಸಿ ಬಂದಿವೆ  ಆಕಾಶವಾಣಿಯಲ್ಲಿ ಅವರ ಚಿಂತನ ಸಂದರ್ಶನಗಳು ಮೂಡಿಬಂದಿವೆ.

Read Post »

ಅಂಕಣ ಸಂಗಾತಿ, ಪ್ರಸ್ತುತ

ಸೆಲೆಬ್ರೆಟಿಗಳು ಮತ್ತು…

ಅಂಕಣ ಸಂಗಾತಿ ಪ್ರಸ್ತುತ ಸೆಲೆಬ್ರೆಟಿಗಳು ಮತ್ತು… ಆಕೆಗೆ ರವಿ ಬೆಳೆಗೆರೆ ರೈಟಿಂಗ್ ಸ್ಟೆöÊಲ್ ಇಷ್ಟ . ಅವನಿಗೆ ಪುನೀತ್ ಫೈಟಿಂಗ್ ಇಷ್ಟ. ಹೀಗೆ ಒಬ್ಬೊಬ್ಬರಿಗೆ (ಒಬ್ಬೊಬ್ಬರು) ಒಂದೊಂದು ಮಾಡೆಲ್ (ಆದರ್ಶ/ಮಾದರಿ)ಯಾಗಿರುತ್ತಾರೆ . ಮಾತು , ನಗು , ವ್ಯಕ್ತಿತ್ವ, ಬದುಕು ಹೀಗೆ, ಹ್ಞಾಂ! ಈಗ ನನಗೊಂದು ಮಾತು ನೆನಪಾಗುತ್ತಿದೆ ,”ಕನಸು ಕಾಣಲುಧೈರ್ಯ ಬೇಕು .”    ಮೊನ್ನೆ ನಿರಾಣಿ ಸರ್ ಟಿ ವಿ ಸಂದರ್ಶನದಲ್ಲಿ ಹೇಳಿದ್ರು. “ ನಾನು ಕುಟುಂಬದವರೊಂದಿಗೆಒಮ್ಮೆ ಮೈಸೂರುದಸರೆಗೆ ಹೋಗಿದ್ದೆ . ಆಗ ದಸರೆಯನ್ನು ನಾಡಹಬ್ಬವಾಗಿಆಚರಣೆಗೆತಂದ ನಾಲ್ವಡಿಕೃಷ್ಣರಾಜಒಡೆಯರಕಾರ್ಯ ಕ್ಷೇತ್ರಗಳ ಬಗ್ಗೆ ಒಮ್ಮೆಅವಲೋಕಿಸುತ್ತಾ ನಾನೂ ಯಾಕ್‌ಅವರಂತಾಗಬಾರದು ? ಎನಿಸಿ ಅಂದಿನಿಂದಲೇಅವರನ್ನ ಮಾಡೆಲ್ ಆಗಿ ಮಾಡಿಕೊಂಡು ಮುಂದೆ ಆ ಒಡೆಯರುತಮ್ಮನ್ನು ತೊಡಗಿಸಿಕೊಂಡ ಕ್ಷೇತ್ರಗಳಲ್ಲೆ ನಾವೂ ತೊಡಗಿಸಿಕೊಂಡು ಇಂದುರಾಜ್ಯದಲ್ಲೇ ಸಕ್ಕರೆಉತ್ಪಾದನೆಯಲ್ಲಿ ಮೂರನೆಯ ಸ್ಥಾನದಲ್ಲಿರುವುದು .” ಎಂದು ಹೇಳುತ್ತಿವಾಗ ಅವರ ಬಗ್ಗೆ ಹೆಮ್ಮೆ ಎನಿಸಿತು .    ಹಾಗೆ ಕೆಲವರುಚಿತ್ರನಟರನ್ನು , ಕೆಲವರುಕ್ರಿಕೆಟ್‌ತಾರೆಯರನ್ನು , ರಿಚರ್ಡ ಬ್ರಾನ್ಸನ್ ನಂತಹಅದ್ಭುತ ಸಾಹಸಿಗರನ್ನು , ಸಾಹಿತಿಗಳನ್ನು ,ರಾಜಕಾರಣಿಗಳನ್ನು ತಮ್ಮ ಮಾಡೆಲ್ ಆಗಿ ಹೊಂದಿರುತ್ತಾರೆಅಥವಾಅಭಿಮಾನಿಯಾಗಿಆರಾಧಿಸುತ್ತಾರೆ . ಇದುಅತಿಯಾಗಿತಮ್ಮ ನೆಚ್ಚಿನತಾರೆಯರುಅನಿರೀಕ್ಷಿತ ನಿಧನರಾದಾಗ ಆ ನೋವನ್ನು ಭರಿಸಲಾಗದೇಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿವೆ . ನಿಷ್ಟಾವಂತರಾಜಕಾರಣಿ ಮಾನ್ಯ ಶ್ರೀವೈ ಎಸ್‌ರಾಜಶೇಖರರೆಡ್ಡಿ ಹೆಲಿಕ್ಯಾಪ್ಟರ್‌ಅಪಘಾತದಲ್ಲಿ ಅಸು ನೀಗಿದಾಗ ಎಷ್ಟೋ ಜನಆತ್ಮಹತ್ಯೆ ಮಾಡಿಕೊಂಡಿದ್ದು ವರದಿಯಾಗಿತ್ತು .ಆದರೆಅಭಿಮಾನಅತಿರೇಕ ಒಳ್ಳೆಯದಲ್ಲ .  ಈಗ ಮಾಡೆಲ್ ಗಳ ಬಗ್ಗೆ ಒಂದಿಷ್ಟು … ಯಾವುದೇಕ್ಷೇತ್ರದಲ್ಲಿ ಮಿಂಚಿದವರು ಸೆಲೆಬ್ರೆಟಿ ಎನಿಸಿಕೊಳ್ಳುತ್ತಾರೆ .ಅಂಥವರಜವಾಬ್ದಾರಿದೊಡ್ಡದು .ತಮ್ಮನ್ನುಅದೆಷ್ಟೋಜನ (ಫಾಲೋರ‍್ಸ್) ಅನುಕರಿಸುತ್ತಿದ್ದಾರೆಎಂಬುದರ ಪರಿಜ್ಞಾನದಜೊತೆಗೆತಮ್ಮಜೀವನ ಶೈಲಿಯನ್ನು ಹೋದಿರಬೇಕಾಗುತ್ತದೆ . ಒಬ್ಬ ನಾಯಕನನ್ನುದೇವರಂತೆ ನೋಡುವಜನರುಆತನ ವೈಯಕ್ತಿಕ ಬದುಕನ್ನುಅವಲೋಕಿಸುತ್ತಿರುತ್ತಾರೆ. ಆತನ ಬದುಕಿನ ಕಲಹ ವ್ಯಾಜ್ಯಗಳೊಂದಿಗೆ ಕೂಡ ಅಭಿಮಾನಿಗಳುಆತನನ್ನುತೂಕಿಸುತ್ತಾರೆ .ಪರದೆಯ ಮೇಲಿನ ನಾಯಕತನ್ನ ಬದುಕಿನಲ್ಲಿ ವಿಲನ್ ಆದಾಗ ಅಭಿಮಾನಿಗಳಿಗೆ ಭ್ರಮ ನಿರಸನವಾಗಿ ಯಾವುದು ಸತ್ಯ ? ಪರದೆಯ ಮೇಲಿನದಾ? ವೈಯಕ್ತಿಕವಾ? ದ್ವಂದ್ವವೆನಿಸಿ ನಾಯಕ ವಿಲನ್ ಆಗುತ್ತಾನೆ .    ಈ ಲೇಖನದಉದ್ದೇಶ ಹೇಳಿಬಿಡುತ್ತೇನೆ . ೧೪/೬/೨೦೨೦ ರಂದು ಪ್ರಸಿದ್ಧ ಕ್ರಿಕೆಟಿಗ ಎಂ, ಎಸ್‌ಧೋನಿ ಅವರಕ್ರಿಕೆಟ್ ಬದುಕನ್ನುತೆರೆಮೇಲೆಕಣ್ಣಿಗೆಕಟ್ಟುವಂತೆ ಮನಸ್ಸಿಗೆ ನಾಟುವಂತೆ ಅಭಿನಯಿಸಿದ , ೩೪ ರ ಪ್ರಾಯದ ಮುದ್ದು ಮುಖದ ನಾಯಕ ಸುಶಾಂತ್ ಸಿಂಗ್ ರಜಪೂತ್ ೧೬ ಕಿಂತಲೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಆತ್ಮಹತ್ಯೆಗೆ ಶರಣಾಗಿದ್ದುಅವರಕೋಟ್ಯಂತರ ಅಭಿಮಾನಿಗಳಿಗೆ ದೊಡ್ಡ ಶಾಕ್‌ಆಯ್ತು . ಒಬ್ಬ ಮೀನುಗಾರನಿಗೆಎಲ್ಲಾ ವಿದ್ಯೆಗಳು ತಿಳಿದಿದ್ದು ಆಪತ್ಕಾಲದಲ್ಲಿಈಜುವುದೇ ತಿಳಿಯದಿದ್ದರೆ ? ಹಾಗೆ ತೆರೆ ಮೇಲೆ ಎಂತಹ ಪಾತ್ರಗಳಿಗೂ ಜೀವ ತುಂಬ ಬಲ್ಲ ಒಬ್ಬ ನಾಯಕತನ್ನ ಬದುಕಿನ ಸಮಸ್ಯೆಗಳನ್ನು ಎದುರುಸುವಲಿ ್ಲ(ಅದೇನೇಇರಲಿ) ಸೋತಿದ್ದು ವಿಷಾದನೀಯ . ಅದೆಷ್ಟು ಅಭಿಮಾನಿಗಳಿಗೆ ಮಾದರಿಯಾದ ಶಶಾಂತ್ ಹೀಗೆ ಮಾಡಿಕೊಂಡಿದ್ದು ಅದೆಷ್ಟು ಸರಿ ?“ ಯಾರಿಗಿಲ್ಲ ಪರದಾಟ? “ಒಬ್ಬೊಬ್ಬರಿಗೆಒಂದೊAದೊ ಸಮಸ್ಯೆ.ಕೆಲವು ತಾವಾಗೇ ಬಂದರೆ ಕೆಲವನ್ನು ನಾವಾಗೇ ಮೈಮೇಲೆ ಎಳೆದುಕೊಂಡಿರುತ್ತೇವೆ ಅದು ಬೇರೆ.ಯಾವುದಕ್ಕೂ “ಈಸಬೇಕು ಇದ್ದುಜೈಸಬೇಕು” ತಾರೆಯರಷ್ಟೇಅಲ್ಲಅಪ್ಪಅಮ್ಮಂದಿರೂ ಮಕ್ಕಳಿಗೆ ಒಳ್ಳೆಯ ಮಾಡೆಲ್‌ಆಗಿರುತ್ತಾರೆ. ಆಗಿರಬೇಕು . ಹಾಗಿರುವಾಗಅವರಿಗೆತಮ್ಮ ನೈತಿಕಜವಾಬ್ದಾರಿಗೊತ್ತಿರಬೇಕು .ಬಿಡೋಕಾಗ್ತಿಲ್ಲಎಂದುಗುಟಕಾಚೀಟನ್ನು ಮಕ್ಕಳ ಕೈಲಿ ತರಿಸಿಕೊಂಡರೆ ಅಪ್ಪನಗೌರವ ಕೆಳಗಿಳಿಯುತ್ತದೆ. ಈಗ ಕರೋನದ ಸಂದರ್ಭದಲ್ಲಿ ಮಾಸ್ಕ್ ಹಾಕಿಕೊಂಡೇ ಹೊರಗೆಹೋಗು .ತುಂಬಾಜನ ಸೇರುವಲ್ಲಿಆದಷ್ಟುದೂರವಿರು .ಎಂದು ಕಾಳಜಿ ,ಪ್ರೀತಿಯಿಂದ ಹೇಳುವ ಅಪ್ಪತಾನೇದೂರದೂರಿಗೆ ಮಾಸ್ಕ್ ಹಾಕದೇ ಮದುವೆ , ಬರ್ಥಡೇ ಪಾರ್ಟಿಗಳಲ್ಲಿ ಭಾಗವಹಿಸಿದಾಗ ಮಕ್ಕಳಿಗೆ ಹೇಳುವ ಮಾತುತೂಕ ಕಳೆದುಕೊಳ್ಳುತ್ತದೆ. ನಡೆ ನುಡಿಗಳಲ್ಲಿ ಒಕ್ಕಟ್ಟಿರಬೇಕಲ್ಲವೇ?    ಸೆಲೆಬ್ರೆಟಿಗಳನ್ನು ಫಾಲೋ ಮಾಡುತ್ತಾ ನಮ್ಮನ್ನೇ ನಾವು ಮರೆತರೆ ಹೇಗೆ ? ನಮ್ಮತನದಿಂದ ನಾವು ಇತರರಿಗೆ ಮಾಡೆಲ್‌ಗಳಾಗಬಹುದಲ್ಲವೆ ? ಅವರನನುಕರಿಸುವುದು ಸಾಕು , ನಿನ್ನನುಸರಿವಂತೆ ಬದುಕು .                                                            ನಿಂಗಮ್ಮ ಭಾವಿಕಟ್ಟಿ ನಿಂಗಮ್ಮ ಭಾವಿಕಟ್ಟಿ ಅವರು ಪಂಚ ವಾಣಿ ಪತ್ರಿಕೆಯಲ್ಲಿ ಅಂಕಣ ಬರಹಗಾರ್ತಿ. ‘ಕುಶಲೋಪರಿ’ ‘ಹಾರೈಕೆ’ ಅವರ ಕವನ ಸಂಕಲನಗಳು ‘ವಚನ ಸಂಭ್ರಮ ಆಧುನಿಕ ವಚನಗಳು’ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಹೈಕುಗಳು, ಹನಿಗಳನ್ನು ಮನಮುಟ್ಟುವಂತೆ ಕಟ್ಟುವ ಲೇಖಕಿ ಬಾಗಲಕೋಟೆ ಜಿಲ್ಲೆಯ ಹುನಗುಂದದವರು. ಓದು, ಬರಹ, ಪ್ರವಾಸ ಅವರ ಹವ್ಯಾಸಗಳಾಗಿದ್ದು ಅವರಿಗೆ ‘ಕಾವ್ಯಶ್ರೀ’ ‘ರಾಜ್ಯೋತ್ಸವ ಪ್ರಶಸ್ತಿ’ ‘ಆಜೂರ್’ ಪ್ರಶಸ್ತಿಗಳು ಅರಸಿ ಬಂದಿವೆ  ಆಕಾಶವಾಣಿಯಲ್ಲಿ ಅವರ ಚಿಂತನ ಸಂದರ್ಶನಗಳು ಮೂಡಿಬಂದಿವೆ.

ಸೆಲೆಬ್ರೆಟಿಗಳು ಮತ್ತು… Read Post »

You cannot copy content of this page

Scroll to Top