ಒಂದು ಜೀವನ ಸಾಲದು ( ಆತ್ಮ ಕಥೆ) ಒಂದು ಜೀವನ ಸಾಲದು ( ಆತ್ಮ ಕಥೆ)ಮೂಲ : ಕುಲದೀಪ್ ನಯ್ಯರ್ಅನುವಾದ : ಆರ್. ಪೂರ್ಣಿಮಾಪ್ರ : ನವಕರ್ನಾಟಕ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ :೨೦೧೮ಬೆಲೆ :ರೂ.೪೪೬ಪುಟಗಳು : ೫೯೨ ಇದು ಪ್ರಸಿದ್ಧ ಪತ್ರಕರ್ತ ಕುಲದೀಪ ನಯ್ಯರ್ ಅವರ ಆತ್ಮಕಥೆಯ ಅನುವಾದ. ಸಾಕಷ್ಟು ದೀರ್ಘವಾಗಿರುವ ಈ ಕೃತಿಸ್ವಾತಂತ್ರ್ಯೋತ್ತರ. ಭಾರತದಲ್ಲಿ ಘಟಿಸಿದ ಅನೇಕ ದುಃಖಕರ ಘಟನೆಗಳನ್ನು ನಿರೂಪಿಸುತ್ತದೆ. ಹಾಗೆಯೇ ಸ್ವಾತಂತ್ರ್ಯ ಪೂರ್ವದಲ್ಲಿ ದೇಶವನ್ನು ವಿಭಜನೆಯತ್ತ ಕೊಂಡೊಯ್ದ ರಾಜಕೀಯ ಸನ್ನಿವೇಶಗಳನ್ನು ಕುರಿತೂ ಹೇಳುತ್ತದೆ. ಸಾಮಾನ್ಯ ಆತ್ಮಕಥೆಯಲ್ಲಿರುವಂತೆ ಇಲ್ಲಿ ನಿರೂಪಕನ ಅಂತರಂಗದ ನೋಟವಿಲ್ಲ. ಇದು ಪೂರ್ತಿಯಾಗಿ ಬಹಿರಂಗದ ಘಟನೆಗಳ ಚಿತ್ರಣ. ಚರಿತ್ರೆಯ ಘಟನೆಗಳನ್ನು ಆಧರಿಸಿದ್ದು. ಆದ್ದರಿಂದ ಇಂದು ಪ್ರತಿಯೊಬ್ಬ ಭಾರತೀಯನೂ ಓದಲೇ ಬೇಕಾದ ಅತ್ಯಂತ ಪ್ರಸ್ತುತವಾದ ಸಮಕಾಲೀನ ಚರಿತ್ರಕೋಶವಿದು. ಸಿಯಾಲ್ ಕೋಟ್‌ನಲ್ಲಿ ಜನಿಸಿದ ಕುಲದೀಪ ನಯ್ಯರ್ ಮೊದಲು ವಕೀಲರಾಗ ಬಯಸಿದ್ದು, ದೇಶವಿಭಜನೆಯ ನಂತರ ಭಾರತಕ್ಕೆ ಬಂದ ಬಗೆ, ದಾರಿಯುದ್ದಕ್ಕೂ ಧರ್ಮಾಂಧರಿಂದಾದ ನರಮೇಧವನ್ನು ಕಂಡದ್ದು, ಮುಂದೆ ತಾನು ಶಾಂತಿಗಾಗಿ ಶ್ರಮಿಸಬೇಕೆಂದು ನಿರ್ಧರಿಸಿದ್ದು, ಸಿಯಾಲ್ ಕೋಟನ್ನು ಬಿಟ್ಟು ಬಂದಾಗ ತಾನೊಂದು ವೈರಿ ದೇಶವನ್ನು ಬಿಟ್ಟು ಬರುತ್ತಿದ್ದೇನೆ ಎಂದು ಸ್ವಲ್ಪವೂ ಅನ್ನಿಸದಿದ್ದದ್ದು, ದೆಹಲಿಯಲ್ಲಿ ಒಂದು ಉರ್ದು ಪತ್ರಿಕೆಯಲ್ಲಿ ವರದಿಗಾರರಾಗಿ ಸೇರಿದ್ದು, ಗಾಂಧೀಜಿಯವರ ಹತ್ಯೆಯ ಕರಾಳ ಘಟನೆಯಿಂದ ಆಘಾತಗೊಂಡದ್ದು, ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಸೇರಿಕೊಂಡದ್ದು, ಲಾಲ್ ಬಹಾದ್ದೂರ ಶಾಸ್ತ್ರಿಯವರ ಮಾಧ್ಯಮ ಸಲಹೆಗಾರರಾಗಿದ್ದು, ಪಾಕಿಸ್ಥಾನದೊಂದಿಗೆ ಶಾಂತಿ ಒಪ್ಪಂದಕ್ಕಾಗಿ ಶಾಸ್ತ್ರಿಯ ವರೊಂದಿಗೆ ರಷ್ಯಾದ ತಾಷ್ಕೆಂಟಿಗೆ ಹೋಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಇಂದಿರಾಗಾಂಧಿಯವರ ಸರ್ವಾಧಿಕಾರವನ್ನು ವಿರೋಧಿಸಿದ್ದು, ಸದಾ ವಾಕ್ ಸ್ವಾತöತ್ರ್ಯ ಮತ್ತು ಅಭಿಪ್ರಾಯ ಸ್ವಾತಂತ್ರ್ಯಗಳಿ ಗಾಗಿ ಹೋರಾಡಿದ್ದು, ಗಾಂಧಿವಾದಿಯಾಗಿ ರೈತರು, ದಲಿತರು , ಸ್ತ್ರೀಯರು ಮತ್ತು ಸಮಾಜದ ದಮನಿತ ವರ್ಗದವರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡಿದ್ದು- ಹೀಗೆ ತಮ್ಮ ವೈಯಕ್ತಿಕ ಬದುಕಿನೊಂದಿಗೆ ಬೆಸೆದುಕೊಂಡಿದ್ದ ನೂರಾರು ಸಾಮಾಜಿಕ ಹಾಗೂ ರಾಜಕೀಯ ಸಂಗತಿಗಳನ್ನು ಇಲ್ಲಿ ನಿರೂಪಿಸುತ್ತಾರೆ. ಆರ್.ಪೂರ್ಣಿಮಾ ಅವರ ಅನುವಾದದ ಭಾಷೆ ಸುಂದರವೂ ಸುಲಲಿತವೂ ಆಗಿದೆ. ಬಹಳ ದೀರ್ಘವಾದ ಒಂದು ಕಥನವಾದರೂ ಅನುವಾದಕಿ ಎಲ್ಲೂ ತಾಳ್ಮೆ ಕಳೆದುಕೊಳ್ಳದೆ ಏಕಪ್ರಕಾರದ ಸಮತೋಲನವನ್ನು ಕಾಯ್ದುಕೊಂಡದ್ದು ಅವರ ಅಪಾರ ಪರಿಶ್ರಮ-ಪ್ರತಿಭೆಗಳಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಮುದ್ರಣದ ಗುಣಮಟ್ಟ, ರಕ್ಷಾಪುಟ, ಬಳಸಿದ ಕಾಗದ-ಹೀಗೆ ಎಲ್ಲ ದೃಷ್ಟಿಯಿಂದಲೂ ಪುಸ್ತಕದ ಬಾಹ್ಯ ನೋಟ ನೋಡುಗರ ಗಮನ ಸೆಳೆಯುತ್ತದೆ. ******************************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಅನುವಾದಕ್ಕಾಗಿ ಸದಾ ಇಂಗ್ಲಿಷ್ ಕ್ಲಾಸಿಕ್‌ಗಳನ್ನೇ ಆರಿಸಿಕೊಳ್ಳುವ ಶ್ಯಾಮಲಾ ಮಾಧವ ಅವರು ಸಾರ್ವಕಾಲಿಕ ಪ್ರಸ್ತುತಿಯುಳ್ಳ ಮೇರಿ ಷೆಲ್ಲಿಯ ‘ಫ್ರಾಂಕಿನ್‌ಸ್ಟೈನ್’ ಎಂಬ ಅದ್ಭುತ ವಸ್ತುವುಳ್ಳ ಕಾದಂಬರಿಯನ್ನು ಅನುವಾದಿಸಿದ್ದಾರೆ
ಅಂಕಣ ಬರಹ ಕನಸಿನೂರಿನ ಕಿಟ್ಟಣ್ಣ ಕನಸಿನೂರಿನ ಕಿಟ್ಟಣ್ಣ ( ಮಕ್ಕಳ ಕಾದಂಬರಿ)ಮಲೆಯಾಳ ಮೂಲ : ಇ.ಪಿ.ಪವಿತ್ರನ್ ಕನ್ನಡಕ್ಕೆ : ಕೆ.ಪ್ರಭಾಕರನ್: ದೇಸಿ ಪುಸ್ತಕಪ್ರಕಟಣೆಯ ವರ್ಷ :೨೦೧೫ಬೆಲೆ :ರೂ.೮೦ಪುಟಗಳು :೧೩೮ ಕನ್ನಡದಲ್ಲಿ ಅತಿ ವಿರಳವೆಂದು ಹೇಳಬಹುದಾದ ಮಕ್ಕಳ ಕಾದಂಬರಿ ಪ್ರಕಾರಕ್ಕೆ ಕೊಡುಗೆಯಾಗಿ ಈ ಕಾದಂಬರಿ ಅನುವಾದವಾಗಿ ಬಂದಿದೆ ಎನ್ನಬಹುದು. ಶೀರ್ಷಿಕೆಯೇ ಸೂಚಿಸುವಂತೆ ಕಿಟ್ಟಣ್ಣ ಈ ಕಥೆಯ ನಾಯಕ. ಕನಸಿನೂರು ಎಂಬ ಪುಟ್ಟ ಹಳ್ಳಿಯ ಮಧ್ಯಮ ವರ್ಗದ ಜಮೀನ್ದಾರಿ ಕುಟುಂಬವೊಂದರಲ್ಲಿ ಪುರಾಣದ ಕೃಷ್ಣನಂತೆ ಜಡಿಮಳೆಯ ಆರ್ಭಟದ ನಡುವೆ ಹುಟ್ಟುವ ಕಿಟ್ಟಣ್ಣ ಮುಂದೆ ಉದ್ದಕ್ಕೂ ಪವಾಡಗಳನ್ನು ಸೃಷ್ಟಿಸುತ್ತ ಹೋಗುತ್ತಾನೆ. ಕಿಟ್ಟಣ್ಣನ ಬುದ್ಧಿಶಕ್ತಿ, ಅವನ ನಿಸರ್ಗ ಪ್ರೇಮ, ನಿಸರ್ಗದೊಂದಿಗಿನ ಅವನ ವಿಚಿತ್ರ ಒಡನಾಟ, ಅವನ ಸಾಹಸಗಳು, ಅವನ ಬದುಕಿನಲ್ಲಾಗುವ ಆಕಸ್ಮಿಕ ತಿರುವುಗಳು ಮತ್ತು ಆಶ್ಚರ್ಯಕರ ಬೆಳವಣಿಗೆಗಳು ಇಡೀ ಕಾದಂಬರಿಯ ಕಥಾನಕದ ಕವಲುಗಳಾಗಿ ಟಿಸಿಲೊಡೆಯುತ್ತ ಹೋಗುತ್ತವೆ. ಮಕ್ಕಳನ್ನು ಖುಷಿ ಪಡಿಸಲು ಬೇಕಾಗುವ ಎಲ್ಲ ಸರಕುಗಳೂ ಇಲ್ಲಿವೆ. ಮಕ್ಕಳ ಕುತೂಹಲವನ್ನು ಹೆಜ್ಜೆ ಹೆಜ್ಜೆಗೂ ಹೆಚ್ಚಿಸುವಂತಹ ನೂರಾರು ಘಟನೆಗಳಿಂದ ಕಾದಂಬರಿ ತುಂಬಿದೆ. ನಂಬಲಸಾಧ್ಯವಾದ ನೂರಾರು ಅಚ್ಚರಿಗಳು ಇದೊಂದು ಕನಸಿನ ಕಂತೆಯೇನೋ ಎಂಬ ಭಾವನೆಯನ್ನು ಹುಟ್ಟಿಸುತ್ತವೆ. ಹಳ್ಳಿಯ ಹಸಿರು ನಿಸರ್ಗ, ಪ್ರಾಣಿ-ಪಕ್ಷಿಗಳ ಓಡಾಟ, ದಟ್ಟ ಕಾಡಿನ ರುದ್ರ ರಮಣೀಯ ದೃಶ್ಯಗಳು ಮತ್ತು ಅತಿಯಾಗಿ ತಿಂದರೂ ಅರಗಿಸಿಕೊಳ್ಳುವ ದೈತ್ಯನಾಗಿ ಬೆಳೆಯುವ ಕಿಟ್ಟಣ್ಣನ ಪರಿ ಕಾದಂಬರಿಗೆ ಫ್ಯಾಂಟಸಿಯ ಸ್ಪರ್ಶವನ್ನು ಕೊಟ್ಟಿವೆ. ಆದರೆ ದೇವಸ್ಥಾನದಿಂದ ಕಳವಾಗುವ ಗಣಪತಿ ವಿಗ್ರಹವು ಕಾಡಿನ ಭಯಾನಕತೆಯೊಳಗೆ ಬಯಲಾಗುವ ಮೂಲಕ ಪತ್ತೆಯಾಗುವ ಕಳ್ಳರ ಜಾಲ ಹಾಗೂ ಆ ಬಗ್ಗೆ ಮುಂದುವರಿಯುವ ಕಾರ್ಯಾಚರಣೆಗಳು , ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿಗಳು ನಮ್ಮನ್ನು ಕನಸಿನೂರಿನಿಂದ ವಾಸ್ತವ ಪ್ರಪಂಚಕ್ಕೆ ತರುತ್ತವೆ. ಒಟ್ಟಿನಲ್ಲಿ ಈಗಾಗಲೇ ಮಕ್ಕಳ ಮನಸ್ಸನ್ನು ಬಹುವಾಗಿ ಸೆಳೆದಿರುವ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ಯ ಇನ್ನೊಂದು ಮುಖವೇ ‘ಕನಸಿನೂರಿನ ಕಿಟ್ಟಣ್ಣ’ ಎನ್ನಬಹುದು. ಇಂದು ಮಕ್ಕಳಿಗೆ ಖುಷಿ ಕೊಡುವ, ಮಕ್ಕಳ ಮನಸ್ಸನ್ನು ತೆರೆದಿಡುವ, ಮಕ್ಕಳ ಕಲ್ಪನಾಶಕ್ತಿಯನ್ನು ಬೆಳೆಸುವ, ಅವರಲ್ಲಿ ಧೈರ್ಯವನ್ನೂ ಸಾಹಸ ಪ್ರವೃತ್ತಿಯನ್ನೂ ಪ್ರೋತ್ಸಾಹಿಸುವ ಸಾಹಿತ್ಯವನ್ನು ನಾವು ಮಕ್ಕಳಿಗೆ ಕೊಡ ಬೇಕಾಗಿದೆ. ಈ ನಿಟ್ಟಿನಲ್ಲಿ ‘ಕನಸಿನೂರಿನ ಕಿಟ್ಟಣ್ಣ’ ಒಂದು ಒಳ್ಳೆಯ ಸೇರ್ಪಡೆ. ಈಗಾಗಲೇ ಮಲೆಯಾಳದಿಂದ ಆರಕ್ಕೂ ಹೆಚ್ಚು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವ ಪ್ರಭಾಕರನ್ ಈ ಕೃತಿಯನ್ನು ಸರಳ ಸುಂದರ ಭಾಷೆಯಲ್ಲಿ ಅನುವಾದಿಸಿದ್ದಾರೆ. ******************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಪಿಂಜರ್ ಶೋಷಣೆಗೊಳಗಾಗಿ ಅಸ್ಥಿಪಂಜರಗಳಾಗುವ ಹೆಣ್ಣುಮಕ್ಕಳ ಕಥೆ ಅಮೃತಾ ಪ್ರೀತಮ್ ಪಿಂಜರ್ಮೂಲ : ಅಮೃತಾ ಪ್ರೀತಮ್ಕನ್ನಡಕ್ಕೆ : ಎಲ್.ಸಿ.ಸುಮಿತ್ರಾಪ್ರ : ಅಂಕಿತ ಪುಸ್ತಕಪ್ರ.ವರ್ಷ :೨೦೦೬ಬೆಲೆ : ರೂ.೬೦ಪುಟಗಳು : ೧೦೪ ದೇಶ ವಿಭಜನೆಯ ಕಾಲದಲ್ಲಿ ಶೋಷಣೆಗೊಳಗಾದ ಅಮಾಯಕ ಹೆಣ್ಣು ಮಕ್ಕಳ ಕರುಣ ಕಥೆಯಿದು. ಪೂರೋ ಎನ್ನುವವಳು ಇಲ್ಲಿ ಕಥಾ ನಾಯಕಿ. ತನ್ನ ಇಬ್ಬರು ಸಹೋದರಿಯರು ಮತ್ತು ಒಬ್ಬ ಸಹೋದರನಿರುವ ಒಂದು ಸುಖಿ ಕುಟುಂಬದಲ್ಲಿ ಹಾಯಾಗಿ ಬೆಳೆದ ಹುಡುಗಿ ಪೂರೊ. ಸೌಮ್ಯ ಸ್ವಭಾವದವಳೂ ವಿಧೇಯಳೂ ಆದ ಅವಳು ತಾಯಿ ತಂದೆಯರ ಮುದ್ದಿನ ಮಗಳು. ತಾಯ್ತಂದೆಯರು ಅವಳಿಗಾಗಿ ನೋಡಿಟ್ಟ ರಾಮಚಂದನನ್ನು ಮದುವೆಯಾಗುವ ಕನಸು ಕಾಣುತ್ತಿರುತ್ತಾಳೆ. ಅಷ್ಟರಲ್ಲಿ ಸಂಭವಿಸುತ್ತದೆ ಆ ದುರ್ಘಟನೆ. ಪೂರೋಳ ಮಾವನಿಂದಾದ ಒಂದು ಅನ್ಯಾಯಕ್ಕೆ ಪ್ರತೀಕಾರವಾಗಿ ಒಂದು ಮುಸ್ಲಿಂ ಕುಟುಂಬವು ರಷೀದನೆಂಬ ಅವರ ಯುವಕನನ್ನು ಪೂರೋಳನ್ನು ಬಲಾತ್ಕಾರವಾಗಿ ಎತ್ತಿ ಹಾಕಿಕೊಂಡು ಬರಲು ನಿರ್ಬಂಧಿಸುತ್ತದೆ. ಇಲ್ಲಿಂದಾಚೆ ಅವಳ ಜೀವನ ಸೂತ್ರ ಕಡಿದ ಗಾಳಿಪಟವಾಗುತ್ತದೆ. ರಷೀದನು ಅವಳ ಮೇಲೆ ಲೈಂಗಿಕ ಅತ್ಯಾಚಾರ ಮಾಡುವುದಿಲ್ಲವಾದರೂ ಪೂರೋ ಮಾನಸಿಕ ಹಿಂಸೆ ಅನುಭವಿಸುತ್ತಾಳೆ. ಪೂರೋ ಹೇಗೋ ಒದ್ದಾಡಿ ರಷೀದನ ಬಂಧನದಿಂದ ತಪ್ಪಿಸಿಕೊಂಡು ತನ್ನ ಮನೆಗೆ ಓಡಿ ಬರುತ್ತಾಳೆ. ಆದರೆ ಇಲ್ಲಿ ಅವಳಿಗೆ ಮತ್ತೊಂದು ಆಘಾತ ಕಾದಿರುತ್ತದೆ. ಬೇರೊಂದು ಧರ್ಮದವರಿಂದ ಒಯ್ಯಲ್ಪಟ್ಟು ಅವರ ಜತೆಗೆ ಕೆಲವು ದಿನಗಳನ್ನು ಕಳೆದವಳ ಪಾವಿತ್ರ್ಯವನ್ನು ಶಂಕಿಸಿ ಅವಳ ತಂದೆ ಅವಳನ್ನು ಸ್ವೀಕರಿಸುವುದಿಲ್ಲ. ತನ್ನ ಮಾನವನ್ನು ಕಳೆದುಕೊಂಡ ಅವಳಿಗೆ ಇನ್ನು ಮದುವೆಯೂ ಆಗಲಾರದೆಂದು ತಂದೆ ಅವಳನ್ನು ತಿರಸ್ಕರಿಸುತ್ತಾನೆ. ಬೇರೆ ದಾರಿ ಕಾಣದೆ ಅವಳು ರಷೀದನ ಜತೆಗೆ ಜೀವಿಸಲು ತಿರುಗಿ ಹೋಗುತ್ತಾಳೆ. ರಷೀದ ತಾನು ಮಾಡಿದ ತಪ್ಪಿಗಾಗಿ ಪಶ್ಚಾತ್ತಾಪ ಪಡುತ್ತಾನೆ. ಆದ್ದರಿಂದ ಪ್ರಾಯಶ್ಚಿತ್ತವಾಗಿ ಅವಳನ್ನು ಸ್ವೀಕರಿಸಿ ಅವಳಿಗೊಂದು ಬದುಕು ಕೊಡಲು ಸಿದ್ಧನಾಗುತ್ತಾನೆ. ಆದರೆ ಅವಳ ಹೆಸರನ್ನು ಮಾತ್ರ ಹಮೀದಾ ಎಂದು ಬದಲಾಯಿಸುತ್ತಾನೆ. ಹೀಗೆ ಪೂರೋ ತನ್ನ ಅಸ್ಮಿತೆಯನ್ನೇ ಕಳೆದುಕೊಂಡು ಬದುಕ ಬೇಕಾಗುತ್ತದೆ. ಸ್ವಾಭಿಮಾನಿಯೂ ಸಂವೇದನಾಶೀಲೆಯೂ ಆದ ಪೂರೋಗೆ ಇದು ಅಸಹನೀಯವೆನ್ನಿಸುತ್ತದೆ. ಪೂರೋಳ ಹಾಗೆಯೇ ಪಿತೃ ಸಂಸ್ಕೃತಿಯ ಅಸಮಾನ ಧೋರಣೆಯಿಂದಾಗಿ ಸ್ಥಾನ ಭ್ರಷ್ಟರಾಗಿ ಬೇರೆ ಬೇರೆ ರೀತಿಯಿಂದ ಅನ್ಯಾಯಕ್ಕೊಳಗಾದ ಲಾಜೋ, ಟಾರೋ ಮತ್ತು ಕಮ್ಮೋ ಎಂಬ ಇನ್ನು ಮೂವರು ಹೆಣ್ಣುಮಕ್ಕಳೂ ಈ ಕಾದಂಬರಿಯಲ್ಲಿದ್ದಾರೆ.ಹೆಣ್ಣಿನ ಬೆತ್ತಲೆ ಮೆರವಣಿಗೆ, ಲೈಂಗಿಕ ದೌರ್ಜನ್ಯಗಳಂತಹ ಕ್ರೌರ್ಯ ಪ್ರದರ್ಶನದ ಚಿತ್ರಣಗಳೂ ಇಲ್ಲಿವೆ. ಹೆಣ್ಣು ಗಂಡಿನ ಆಕ್ರಮಣಕ್ಕೊಳಗಾಗಿ ಅವನಿಂದ ಇಷ್ಟ ಬಂದಂತೆ ಬಳಸಲ್ಪಡಬಹುದೆನ್ನುವ ಸಮಾಜದ ಅಮಾನವೀಯ ನಿಲುವನ್ನು ಇಲ್ಲಿ ಪರೋಕ್ಷವಾಗಿ ಖಂಡಿಸಲಾಗಿದೆ. ಸಂಸ್ಕೃತಿ, ಧರ್ಮ ಹಾಗೂ ಸಾಮಾಜಿಕ ನಿಯಮಗಳನ್ನು ಕಾಪಾಡಿಕೊಳ್ಳುವ ನೆಪದಲ್ಲಿ ಸ್ತೀ ಯರಿಗೆ ನೀಡುವ ದೈಹಿಕ ಹಾಗೂ ಮಾನಸಿಕ ಹಿಂಸೆಗಳನ್ನು, ಆ ಯಾತನೆಗಳನ್ನು ಸಹಿಸಲಾರದೆ ಒದ್ದಾಡುತ್ತ ಅಸಹಾಯಕರಾಗುವ ಸ್ತ್ರೀ ಯರ ದಾರುಣ ಪರಿಸ್ಥಿತಿಯನ್ನೂ ಈ ಕಾದಂಬರಿ ಯಥಾವತ್ತಾಗಿ ಸ್ವಲ್ಪವೂ ಉತ್ಪ್ರೇ.ಕ್ಷೆಯಿಲ್ಲದೆ ಚಿತ್ರಿಸುತ್ತದೆ.ದೇಶ ವಿಭಜನೆಯ ಕಾಲದಲ್ಲಿ ನಡೆದ ಪೂರೋಳಂತಹ ಸಾವಿರಾರು ಹೆಣ್ಣುಮಕ್ಕಳು ಅನುಭವಿಸಿದ ನರಕ ಯಾತನೆ ಇಲ್ಲಿ ಭೀಭತ್ಸ ರೂಪವನ್ನು ತಾಳಿದೆ. ಕನ್ನಡ ಅನುವಾದದ ಭಾಷಾ ಶೈಲಿ ತುಂಬಾ ಸುಂದರವಾಗಿದ್ದು ಒಂದೇ ಓಟಕ್ಕೆ ಓದಿಸಿಕೊಂಡು ಹೋಗುತ್ತದೆ.. ************************************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಅಂಕಣ ಬರಹ ಜ್ಞಾನಪಾನ ಭಕ್ತಿ ಜ್ಞಾನಗಳನ್ನು ಪ್ರೇರಿಸುವ ಕೃತಿ ಕೃತಿಯ ಹೆಸರು : ಜ್ಞಾನಪಾನಪ್ರಕಾಶಕರು : ಶ್ರೀ ಅಯ್ಯಪ್ಪ ಭಕ್ತ ಸಭಾ , ಚೆನ್ನೈಪ್ರಕಟಣಾ ವರ್ಷ : ೨೦೨೦ಪುಟಗಳು : ೩೨ ಹದಿನಾರನೆಯ ಶತಮಾನದಲ್ಲಿ ಭಾರತದಾದ್ಯಂತ ನಡೆದ ಭಕ್ತಿ ಚಳುವಳಿಯ ಸಂದರ್ಭದಲ್ಲಿ ಮಲೆಯಾಳ ಭಕ್ತಿ ಕಾವ್ಯ ರಚನೆ ಮಾಡಿದವರಲ್ಲಿ ಪ್ರಮುಖರು ಪೂಂದಾನಂ ನಂಬೂದಿರಿ. ಕನ್ನಡದಲ್ಲಿ ರಚನೆಯಾದ ದಾಸ ಸಾಹಿತ್ಯದಷ್ಟು ವ್ಯಾಪಕವಾದ ವಸ್ತು ವೈವಿಧ್ಯಗಳಿಲ್ಲದಿದ್ದರೂ ಮಲೆಯಾಳದಲ್ಲಿ ಪೂಂದಾನಂ, ಚೆರುಶ್ಶೇರಿ ನಂಬೂದಿರಿ, ತುಂಜತ್ತ್ ಎಳುತ್ತಚ್ಛನ್, ನಾರಾಯಣ ಭಟ್ಟಾತಿರಿಪ್ಪಾಡ್ ಮೊದಲಾದ ಭಕ್ತಿ ಕವಿಗಳು ಬಹಳಷ್ಟು ಜೀವನಮೌಲ್ಯಗಳುಳ್ಳ ದೈವಭಕ್ತಿ ಪ್ರೇರಕ ಕಾವ್ಯವನ್ನು ರಚಿಸಿದ್ದಾರೆ. ‘ಜ್ಞಾನಪಾನ'(ಪಾನ ಅಂದರೆ ಮಣ್ಣಿನಿಂದ ಮಾಡಿದ ಒಂದು ಅಲತೆಯ ಪಾತ್ರ) ಗುರುವಾಯೂರಪ್ಪನನ್ನು ಸಂಬೋಧಿಸಿ ಬರೆದ ಭಕ್ತಿ ಕಾವ್ಯ. ಮಹಾಕೃಷ್ಣ ಭಕ್ತರಾದ ಪೂಂದಾನಂ ತಮ್ಮ ಎಳೆಯ ಮಗುವಿನ ಅಕಾಲ ಮರಣದ ಸಹಿಸಲಾರದ ದುಃಖವನ್ನು ಈ ಕಾವ್ಯದ ಮೂಲಕ ಯೋಗವಿಶೇಷವಾಗಿ ಪರಿವರ್ತಿಸುತ್ತಾರೆ. ಮಲೆಯಾಳದ ಭಗವದ್ಗೀತೆಯೆಂದೇ ಪ್ರಾಮುಖ್ಯ ಪಡೆದ ಈ ಕಾವ್ಯದಲ್ಲಿ ಪಾನ ಎಂಬ ಹೆಸರಿನ ಛಂದಸ್ಸಿನಲ್ಲಿ ಬರೆದ ೩೬೫ ಸಾಲುಗಳಿವೆ. ಇದು ಒಂದು ದಾರ್ಶನಿಕ ಕಾವ್ಯ. ತನ್ನ ಸಾಹಿತ್ಯಕ ಗುಣ, ಸರಳ ಪದಪುಂಜಗಳು, ತಾತ್ವಿಕ ಶಕ್ತಿ ಹಾಗೂ ಆಳವಾದ ಭಕ್ತಿಯ ಗುಣಗಳನ್ನೂ ಈ ಕಾವ್ಯದಲ್ಲಿ ನಾವು ಕಾಣಬಹುದು. ಉದ್ದಕ್ಕೂ ವಿರುದ್ಧ ಪ್ರತಿಮೆಗಳನ್ನು ಬಳಸುವ ಮೂಲಕ ಕೃಷ್ಣನ ಬ್ರಹ್ಮಾಂಡ ಕೃತ್ಯಗಳನ್ನು ವ್ಯಯ ಕರ್ಮಜಾಲದಿಂದ ಮೇಲೆತ್ತುವ ಕೆಲಸವನ್ನು ಇಲ್ಲಿ ಕವಿ ಮಾಡಿದ್ದಾರೆ. ಕವಿ ತನ್ನ ದುಃಖಾನುಭವವನ್ನು ಭಕ್ತಿಸೌಧದ ನಿರ್ಮಾಣಕ್ಕಾಗಿ ಬಳಸಿ ಎಲ್ಲರಿಗಾಗಿ ಅದನ್ನು ಸದಾಕಾಲವೂ ತೆರೆದಿಟ್ಟಿದ್ದಾರೆ. ಉಣ್ಣಿಕೃಷ್ಣನ್ ಮನಸ್ಸಿಲ್ ಕಳಿಕ್ಕುಂಬೋಳ್ ಉಣ್ಣಿಗಳ್ ಮಟ್ಟು ವೇಣಮೋ ಮಕ್ಕಳಾಯ್’ ( ಬಾಲ ಕೃಷ್ಣನು ಮನದಿ ಆಟವಾಡುತ್ತಿರಲು/ ಎಳೆಯ ಮಕ್ಕಳು ನಮಗೆ ಬೇರೆ ಬೇಕೆ? (ಪುಟ ೨೬)ಎನ್ನುವ ಸಾಲುಗಳು ಕವಿಯ ದುಖದ ಅಗಾಧತೆಯನ್ನೂ ದೃಢವಾದ ಕೃಷ್ಣಭಕ್ತಿಯನ್ನೂ ಪ್ರಕಟಿಸುತ್ತವೆ. ಈ ಭರತಖಂಡದ ಪುಣ್ಯ ಭೂಮಿಯಲ್ಲಿ ಜನ್ಮತಳೆದ ನಾವು ಪುಣ್ಯವಂತರೆಂದೂ ಈ ಜನ್ಮವನ್ನು ನಾವು ಸತ್ಕಾರ್ಯಗಳಿಗಾಗಿ ವಿನಿಯೋಗಿಸ ಬೇಕೆಂದೂ ಪೂಂದಾನಂ ಇಲ್ಲಿ ಹೇಳುತ್ತಾರೆ. ಕೇವಲ ಲೌಕಿಕ ಸುಖ ಭೋಗಗಳಿಗಾಗಿ ಹೆಣಗಾಡುವುದು ನಮ್ಮ ಜೀವನದ ಧ್ಯೇಯವಾಗಬಾರದು. ದೇವರ ಸಹಸ್ರನಾಮಗಳಲ್ಲಿ ಯಾವುದಾದರೊಂದನ್ನು ಆಯ್ದುಕೊಂಡು ಅಂತರಂಗದ ಭಕ್ತಿಯಿಂದ ನಿರಂತರವಾಗಿ ನಾಮಸ್ಮರಣೆ ಮಾಡುತ್ತ ಮೋಕ್ಷಪ್ರಾಪ್ತಿಗಾಗಿ ಪ್ರಯತ್ನಿಸುವುದೇ ನಮ್ಮ ಏಕಧ್ಯೇಯವಾಗಿರಬೆಕು ಎಂದೂ ಹೇಳುತ್ತಾರೆ. ‘ಜ್ಞಾನಪಾನ’ ಕೃತಿಯ ಭಾಷಾ ಸರಳವಾಗಿದ್ದರೂ ಅದು ಶ್ರಿಮದ್ಭಾಗವತ, ಭಜಗೋವಿಂದಂ,, ವಿವೇಕಚೂಡಾಮಣಿ ಮತ್ತು ನಾರಾಯಣೀಯಂ ಎಂಬ ಮಹತ್ವದ ಕೃತಿಗಳ ಎಲ್ಲ ಸತ್ವಗಳನ್ನು ಒಳಗೊಂಡಿದೆ. ಪೂಂದಾನಂ ಅನ್ನುವುದು ಕವಿಯ ಹೆಸರಲ್ಲ.ಅದು ಅವರ ಮನೆತನದ ಹೆಸರು. ‘ಪೂಂದಾನಂ ಇಲ್ಲಂ’ ಇರುವುದು ಈಗಿನ ಮಲಪ್ಪುರಂ ಜಿಲ್ಲೆಯ ಪೆರಿಂದಲ್ಮಣ್ಣದಿಂದ ೮ ಕಿ.ಮೀ.ದೂರದಲ್ಲಿ. ಕಾಸರಗೋಡಿನಲ್ಲಿರುವ ಹಿರಿಯ ಅನುವಾದಕರಾದ ಎ.ನರಸಿಂಹ ಭಟ್ ಕನ್ನಡಕ್ಕೆ ಮೂಲದ ಸೌಂದರ್ಯವನ್ನು ಮತ್ತು ಕಾವ್ಯಾತ್ಮಕತೆಯನ್ನು ಉಳಿಸಿಕೊಂಡು ಬಹಳ ಸುಂದರವಾಗಿ ಅನುವಾದಿಸಿದ್ದಾರೆ. ಉದಾಹರಣೆಯಾಗಿ ಪೂಂದಾನಂ ಅವರು ಸಮಾಜದ ವಿವಿಧ ವರ್ಗಳ ಜನರನ್ನು ಚಿತ್ರಿಸುವ ಕೆಲವು ಸಾಲುಗಳ ಅನುವಾದ : ಸ್ಥಾನಮಾನಕ್ಕಾಗಿ ಬೈದಾಡಿ ಬಡಿದಾಡಿ/ ಮಾನವೆಲ್ಲವ ಕಳೆದು ಬದುಕುವರು ಕೆಲವರು/ ಮದಮತ್ಸರಾದಿಗಳ ಮನದಲ್ಲಿ ಮುದ್ರಿಸುತ/ಮತಿಹೀನರಾಗಿ ಬದುಕುವರು ಕೆಲವೆಉ/ ಕಾಮಮೋಹಿತರಾಗಿ ಕಾಮಾಕ್ಷಿಯರ ಸೇರಿ/ಕಾಮಕೇಳಿಯಲಿ ಕಾಲ ಕಳೆಯುವರು ಕೆಲವೆರು/ದೇವಾಲಯಗಳಲ್ಲಿ ಸೇವೆಗಾಗಿಯೆ ಸೇರಿ/ ವೇಷಧಾರಿಗಳಂತೆ ಬದುಕುವರು ಕೆಲವರು.. ಓದುಗರ ಅನುಕೂಲಕ್ಕಾಗಿ ಅನುವಾದಕರು ಮೂಲ ಕೃತಿಯ ಸಾಲುಗಳನ್ನು ಬಲ ಬದಿಯ ಪುಟಗಳಲ್ಲೂ ಅನುವಾದವನ್ನು ಎಡಬದಿಯ ಪುಟಗಳಲ್ಲೂ ನೀಡಿದ್ದಾರೆ. *********************************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಜುಮ್ಮಾ- ಕಥಾ ಸಂಕಲನ ಜುಮ್ಮಾ- ಕಥಾ ಸಂಕಲನತೆಲುಗು ಮೂಲ: ವೇಂಪಲ್ಲಿ ಶರೀಫ್ಕನ್ನಡಕ್ಕೆ:ಸೃಜನ್ಪ್ರ : ನವಕರ್ನಾಟಕ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೭೫ಪುಟಗಳು : ೯೬ ಮುಸ್ಲಿಂ ಸಂವೇದನೆಗಳಿಗೆ ಧ್ವನಿ ನೀಡುವ ಮತ್ತು ಓದುಗರ ಮನಮಿಡಿಯುವಂತೆ ಮಾಡುವ ೧೩ ಹೃದಯಸ್ಪರ್ಶಿ ಕಥೆಗಳ ಸಂಕಲನವಿದು. ಮುಖ್ಯವಾಗಿ ಗ್ರಾಮೀಣ ತಳ ಸಮುದಾಯದವರ ಕುರಿತಾದ ಕಥೆಗಳು ಇಲ್ಲಿವೆ. ಬದುಕಿನಲ್ಲಿ ಸುಖವೆಂದರೇನೆಂದೇ ತಿಳಿಯದ ಅಸ್ತಿತ್ವಕ್ಕಾಗಿ ಹೆಣಗಾಡುವ ಮಂದಿ ಇಲ್ಲಿದ್ದಾರೆ. ಲೇಖಕರಾದ ವೇಂಪಲ್ಲಿ ಶರೀಫ್ ತಮ್ಮ ಸುತ್ತಮುತ್ತ ತಾವು ಕಂಡ ಜಗತ್ತನ್ನು ಸ್ವಲ್ಪವೂ ಉತ್ಪ್ರೇಕ್ಷೆಯಿಲ್ಲದೆ ನಿರುದ್ವಿಗ್ನತೆಯಿಂದ ದಾಖಲಿಸುತ್ತಾ ಹೋಗುತ್ತಾರೆ. ತಮ್ಮ ಅನುಭವಗಳನ್ನು ತಾರ್ಕಿಕ ವಿಶ್ಲೇಷಣೆಗೆ ಒಳಪಡಿಸಿ ನಿರೂಪಿಸುತ್ತ ಹೋಗುತ್ತಾರೆ. ಇಲ್ಲಿನ ಪ್ರತಿಯೊಂದು ಕಥೆಯೂ ದಮನಿತರ ಹದಗೆಟ್ಟ ಬದುಕು ಮತ್ತು ವ್ಯವಸ್ಥೆಯ ಹುಳುಕನ್ನು ಪ್ರತಿಫಲಿಸುತ್ತ ಓದುಗರ ಕಣ್ಣುಗಳನ್ನು ಹನಿಗೂಡಿಸುತ್ತವೆ. ದುಃಖವು ಈ ಕಥೆಗಳ ಸ್ಥಾಯೀಭಾವ. ‘ಪರದೆ’ ಅನ್ನುವ ಕಥೆಯಲ್ಲಿ ಪರದೆ ಅನ್ನುವುದು ಧಾರ್ಮಿಕತೆಯ ದ್ಯೋತಕವಾದರೂ ಅದು ಹೇಗೆ ಮನುಷ್ಯ ಸಂಬಂಧಗಳ ನಡುವೆ ಗೋಡೆ ನಿರ್ಮಿಸುತ್ತದೆ ಮತ್ತು ಬದುಕನ್ನು ಹೇಗೆ ಕೃತಕಗೊಳಿಸುತ್ತದೆ ಎನ್ನುವ ಸತ್ಯವನ್ನು ಕಥೆ ಬಯಲಿಗೆಳೆಯುತ್ತದೆ. ‘ಜುಮ್ಮಾ’ ಎಂಬ ಕಥೆಯಲ್ಲಿ ಧಾರ್ಮಿಕ ಶ್ರದ್ಧೆಯ ಹೆಸರಿನಲ್ಲಿ ಶುಕ್ರವಾರ ನಮಾಜು ಮಾಡಲು ಮಸೀದಿಗೆ ಹೋಗಲೇ ಬೇಕೆಂದು ಒತ್ತಾಯಿಸುವ ಅಮ್ಮ ಕೊನೆಯಲ್ಲಿ ಅಷ್ಟು ಭವ್ಯವಾದ ಮಸೀದಿಯೊಳಗೆ ಸ್ಫೋಟ ಸಂಭವಿಸಿದ ಸುದ್ದಿ ಕೇಳಿ ತನ್ನ ನಂಬಿಕೆಯಿಂದಲೇ ಕಳಚಿಕೊಳ್ಳುವುದು ಬದುಕು ಹೇಗೆ ಮತೀಯ ನಂಬಿಕೆಗಿಂತ ದೊಡ್ಡದು ಅನ್ನುವ ಸತ್ಯವನ್ನು ನಿರೂಪಿಸುತ್ತದೆ. ‘ಜೀಪು ಬಂತು’ ಎಂಬ ಕಥೆ ಬಡತನದ ಕುರಿತಾದದ್ದು. ಜೀವನೋಪಾಯಕ್ಕಾಗಿ ಹೊಲದಲ್ಲಿ ಬೆವರು ಸುರಿಸುವ ರೈತ ಮಳೆಯಿಲ್ಲದೆ ಅಸಹಾಯಕನಾಗಿ ಬೋರ್ ಹಾಕಿಸಿದರೆ ವಿದ್ಯುತ್ ಇಲಾಖೆಯ ಅಧಿಕಾರಿಗಳು ಬಂದು ಹಣ ಕಟ್ಟಲಿಲ್ಲವೆಂದು ಅವನ ಜತೆಗೆ ನಿರ್ದಯವಾಗಿ ನಡೆದುಕೊಳ್ಳುವುದು ಅಧಿಕಾರಶಾಹಿಯ ಕ್ರೌರ್ಯವನ್ನು ಬಿಂಬಿಸುತ್ತದೆ. ‘ಪಚ್ಚೆ ರಂಗೋಲಿ’ ಕಥಾನಾಯಕನ ಅಕ್ಕ ಹಿಂದೂ ಸಂಸ್ಕೃತಿಯಾದ ರಂಗೋಲಿಯ ಮೇಲಿನ ಪ್ರೀತಿಯಿಂದಾಗಿ ತನ್ನ ಕಣ್ಣುಗಳನ್ನೇ ಕಳೆದುಕೊಳ್ಳುವ ಮಟ್ಟಕ್ಕೆ ಹೋಗುವುದು, ಮುಂದೆ ತನ್ನ ಆ ಆಸೆಯನ್ನು ಮೆಹಂದಿ ವಿನ್ಯಾಸದ ಮೂಲಕ ಪೂರೈಸಿಕೊಳ್ಳುವುದು-ಚಿಕ್ಕ ಚಿಕ್ಕ ವಿಷಯಗಳೂ ಹೇಗೆ ಧಾರ್ಮಿಕ ಸಂಘರ್ಷಗಳಿಗೆ ಕಾರಣವಾಗುತ್ತವೆ ಎಂಬುದನ್ನು ಹೇಳುತ್ತದೆ. ಹೀಗೆ ಇಲ್ಲಿನ ಎಲ್ಲ ಕಥೆಗಳೂ ಮತೀಯ ಪೂರ್ವಾಗ್ರಹದಿಂದ ಮುಕ್ತವಾದ ಸೌಹಾರ್ದದ ಆಶಯವನ್ನು ವ್ಯಕ್ತಪಡಿಸುತ್ತಾನೆ. ಮೂಲಕಥೆಗಳ ವಸ್ತು, ಭಾಷೆ, ನಿರೂಪಣಾ ತಂತ್ರ ಎಲ್ಲವೂ ಸೊಗಸಾಗಿವೆ. ಅನುವಾದದ ಶೈಲಿ ಬಹಳ ಸುಂದರವಾಗಿದೆ. ************************************************ ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಶತಮಾನದ ಕವಿ ಯೇಟ್ಸ್
ಅಂಕಣ ಬರಹ ಶತಮಾನದ ಕವಿ ಯೇಟ್ಸ್ ಅನುವಾದ :ಡಾ. ಯು.ಆರ್.ಅನಂತಮೂರ್ತಿಪ್ರ : ಅಭಿನವ ಪ್ರಕಾಶನಪ್ರಕಟಣೆಯ ವರ್ಷ : ೨೦೦೮ಬೆಲೆ : ರೂ.೭೫ಪುಟಗಳು : ೧೨೮ ಜಗತ್ಪ್ರಸಿದ್ಧ ಇಂಗ್ಲಿಷ್ ಕವಿ ಡಬ್ಲಿಯೂ.ಬಿ.ಯೇಟ್ಸ್ನ ಮಹ ತ್ವದ ೧೭ ಕವನಗಳ ಅನುವಾದ ಈ ಸಂಕಲನದಲ್ಲಿದೆ. ಜೊತೆಗೆ ಕವಿ-ಕಾವ್ಯ ಪರಿಚಯ,ಪ್ರವೇಶಿಕೆ ಮತ್ತು ವಿಶ್ಲೇಷ ಣೆಗಳೂ ಇವೆ. ಕಾವ್ಯ ರಚನೆಯ ಹಿಂದಿನ ಶ್ರಮ ಮತ್ತು ಗಂಡು-ಹೆಣ್ಣು ಪರಸ್ಪರ ತಮ್ಮೊಳಗೆ ಹುಟ್ಟಿಕೊಳ್ಳುವ ಪ್ರೀತಿ ಯನ್ನು ತೆರೆದು ಹೇಳಿಕೊಳ್ಳಲು ಪಡುವ ಒದ್ದಾಟಗಳ ಕುರಿ ತು ‘ಆದಮ್ಮಿನ ಶಾಪ’ ಹೇಳಿದರೆ,ಮುಂದಿನ ಕವನ. ‘ಓ ಬಹುಕಾಲ ಪ್ರೀತಿಸಬೇಡ’ ಪ್ರೀತಿಯ ಬಗೆಗೇ ಇದೆ. ‘ಈಸ್ಟರ್ ೧೯೧೬’ ಐರ್ಲ್ಯಾಂಡಿನ ಸ್ವಾತಂತ್ರ್ಯ ಹೋರಾಟದ ಲ್ಲಿ ಅಸುನೀಗಿದ ಹುತಾತ್ಮರ ಕುರಿತು ಸಾಂದರ್ಭಿಕವಾಗಿ ಬರೆದ ಕವನವಾದರೂ ಯೇಟ್ಸನ ರಾಜಕೀಯ ಚಿಂತನೆ, ಕಲಾತ್ಮಕ ದೃಷ್ಟಿಕೋನ,ಮತ್ತು ವೈಯಕ್ತಿಕ ಭಾವನಾತ್ಮಕ ಬೆಸುಗೆಗಳ ಸುಂದರ ಬೆಸುಗೆ ಇಲ್ಲಿದೆ. ಬದುಕಿನ ಅಗ್ನಿ ದಿವ್ಯ ದಲ್ಲಿ ಸುಟ್ಟು ಪುಟಗೊಳ್ಳುವ ಕವಿಯ ಆಸೆಯನ್ನು ‘ಬೈಝಾಂಟಿಯಮ್ಮಿಗೆ ಯಾನ’ ವ್ಯಕ್ತ ಪಡಿಸು ತ್ತದೆ.ಕವಿಯ ದೃಷ್ಟಿಯಲ್ಲಿ ದೇಹವೆಂದರೆ ಮದದಿಂದ ಕೊ ಬ್ಬುವ,ಆದರೆ ಮುದಿತನದಲ್ಲಿ ಬೆದರುಗೊಂಬೆಯಂತೆ ಸು ಕ್ಕಿ ಸೊರಗುವ ಪಶು.ಇಲ್ಲಿ ಕವಿ ಜೈವಿಕವಾದ ಹಾಡುವ ಶಕ್ತಿ ಎಂದೆಂದಿಗೂ ಸೊರಗದೆ ಉಳಿಯುವ ಬಂಗಾರದ ಪಕ್ಷಿ ಯಾಗಲು ಪ್ರಯತ್ನಿಸುತ್ತಾನೆ. ‘ಜೀವ-ಆತ್ಮರ ನಡುವೆ ಸಂವಾದ’ ಎಂಬ ಕವನವೂ ದೇಹ ಮತ್ತು ಆತ್ಮಗಳ ನಡುವಣ ದ್ವಂದ್ವ-ತಾಕಲಾಟಗಳ ಕುರಿತು ಚರ್ಚಿಸುತ್ತದೆ. ಇಲ್ಲಿ ದೇಹಕ್ಕೆ ಎದುರಾಗಿ ನಿಲ್ಲುವ ಆತ್ಮದ ಮಾತು ತಾತ್ವಿಕವಾದದ್ದು.ಆದರೆ ಕೊನೆಯಲ್ಲಿ ಕವಿ ಜೀವ ಪರವಾಗಿ ಮಾತನಾಡುತ್ತಾನೆ.ಎಲ್ಲ ಸಂಕೋಚಗಳನ್ನು ಗಾ ಳಿಗೆ ಚೆಲ್ಲಿ ಮುಕ್ತನಾದ ಜೀವಿಯಷ್ಟೇ ಶುಭ್ರನಾಗುತ್ತಾನೆ. ವೃದ್ಧಾಪ್ಯದಲ್ಲಿ ವೈರಾಗ್ಯದತ್ತ ವಾಲಿದ್ದ ಯೇಟ್ಸ್ ಕೊನೆಗಾಲ ದಲ್ಲಿ ಕಾಮವನ್ನು ಹತ್ತಿಕ್ಕಲಾಗದೆ ಬರೆದ ‘ಹುಚ್ಚು ಕವನ’ ಗಳಲ್ಲಿ ಒಂದಾದ ‘ಮರುಳಿ ಜೇನ್ ಪಾದ್ರಿಗೆ’ ಕಾಮವನ್ನು ಮುಕ್ತವಾಗಿ ಅನುಭವಿಸಿದ ಓರ್ವ ವೇಶ್ಯೆ ಕಾಮವನ್ನು ಬಲವಂತವಾಗಿ ಹತ್ತಿಕ್ಕಿಕೊಂಡು ಬದುಕಿದ ಒಬ್ಬ ಬಿಷಪ್ಪನಿ ಗೆ ಹಾಕುವ ಸವಾಲುಗಳ ಮೂಲಕ ಕವಿ ಕಂಡುಕೊಂಡ ಸತ್ಯಗಳನ್ನು ಬಯಲು ಮಾಡುತ್ತದೆ. ಹೀಗೆ ದೇಶ-ಕಾಲಗಳ ಪರಿಮಿತಿಗಳನ್ನು ಮೀರಿ ಮಹತ್ವ ಪಡೆದ ಕವನಗಳನ್ನು ಈ ಸಂಕಲನ ಸೇರಿಸಿಕೊಂಡಿದೆ. ಇವು ಅನುವಾದ ಅನ್ನುವುದಕ್ಕಿಂತಲೂ ಯೇಟ್ಸನ ಮೂಲ ಕವನಗಳ ಸ್ಫೂರ್ತಿ ಪಡೆದು ಬರೆದ ಸ್ವತಂತ್ರ ಕವನಗಳಂತಿ ವೆ.ಹಲವು ಪದಗಳು,ಪದಪುಂಜಗಳು,ಕೆಲವೊಮ್ಮೆ ಪೂ ರ್ತಿ ಸಾಲುಗಳೇ ತಮ್ಮ ಸ್ವರೂಪದಲ್ಲಿ ಮೂಲಕ್ಕಿಂತ ಭಿನ್ನ ವಾಗಿ ನಿಲ್ಲುವುದು ಸ್ಪಷ್ಟವಾಗಿ ಕಾಣುತ್ತದೆ. ‘ಆಫ್ಟರ್ ಲಾಂ ಗ್ ಸೈಲೆನ್ಸ್’, ‘ಅ ಡಯಲಾಗ್ ಆಫ್ ದ ಸೆಲ್ಫ್ ಅಂಡ್ ಸೋಲ್’ ‘ದ ಚಾಯಿಸ್’ ಮೊದಲಾದ ಕವನಗಳಲ್ಲಿ ಇದಕ್ಕೆ ನಿದರ್ಶನಗಳನ್ನು ಕಾಣಬಹುದು. ************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಎ.ಕೆ.ರಾಮಾನುಜನ್ ಅವರ ಆಯ್ದ ಪ್ರಬಂಧಗಳು ಎ.ಕೆ.ರಾಮಾನುಜನ್ ಅವರ ಆಯ್ದ ಪ್ರಬಂಧಗಳು ಅನುವಾದ : ಓ.ಎಲ್. ನಾಗಭೂಷಣÀ ಸ್ವಾಮಿ ಅನುವಾದ : ಓ.ಎಲ್. ನಾಗಭೂಷಣÀ ಸ್ವಾಮಿ ಪ್ರ: ಮನೋಹರ ಗ್ರಂಥಮಾಲಾ ಪ್ರ.ವರ್ಷ :೨೦೧೨ ಬೆಲೆ : ರೂ.೨೦೦.೦೦ ಪುಟಗಳು: ೩೫೦ ಕನ್ನಡದವರೇ ಆಗಿದ್ದರೂ ಇಂಗ್ಲಿಷ್‌ನಲ್ಲೇ ತಮ್ಮ ಪ್ರಮುಖ ಸಾಹಿತ್ಯ ಕೃತಿಗಳನ್ನು ರಚಿಸಿದ ಎ.ಕೆ.ರಾಮಾನುಜನ್ ಅವರು ಸಾಹಿತ್ಯ, ಭಾಷೆ, ಸಂಸ್ಕೃತಿ ಚಿಂತನೆ, ತೌಲನಿಕ ಅಧ್ಯಯನ ಮೊದಲಾದ ಹಲವಾರು ಮಹತ್ವದ ವಿಚಾರಗಳ ಕುರಿತಾಗಿ ಬರೆದ ಪ್ರಬಂಧಗಳನ್ನು ಓ.ಎಲ್. ನಾಗಭೂಷಣ ಸ್ವಾಮಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತೀಯ ಚಿಂತನಾಕ್ರಮ, ಮುನ್ನೂರು ರಾಮಾಯಣ : ಐದು ನಿದರ್ಶನಗಳು, ಭಾಷಾಂತರದ ಕುರಿತು ಮೂರು ಚಿಂತನೆಗಳು, ಮಹಾಭಾರತದಲ್ಲಿ ಪುನರುಕ್ತಿ ಎಂಬ ಪ್ರಬಂಧಗಳು ಭಾರತೀಯ ಸಾಹಿತ್ಯಗಳ ಬಹುಮುಖತೆಯನ್ನುಹಾಗೂ ಬಹುಪಠ್ಯಗಳ ಲಭ್ಯತೆಯನ್ನುತಿಳಿಸುತ್ತವೆ. ‘ಅಲ್ಲಮ ಕವಿತೆ ಯಾಕೆ ಒಗಟಲ್ಲ’ ಎಂಬ ಪ್ರಬಂಧವು ಅಲ್ಲಮನ ಅನುಭಾವಿ ಕವಿತೆಗಳ ಕುರಿತು ಚರ್ಚಿಸುತ್ತದೆ. ಮಹಾದೇವಿಯಕ್ಕ, ಬಂಗಾಳಿ ಭಕ್ತಿ ಕವಿ ಗೋವಿಂದ ದಾಸ, ಇಂಗ್ಲಿಷಿನ ಜಾನ್ ಡನ್ ಕವಿಯ ಹೋಲಿ ಸಾನೆಟ್ಸ್ ಸರಣಿಯ ೧೪ನೆಯ ಕವಿತೆ, ಮತ್ತು ಜಾರ್ಜ್ ಹರ್ಬರ್ಟ್ ಕವಿಯ ‘ಲವ್’ಎಂಬ ನಾಲ್ಕು ಕವಿತೆಗಳ ಮೂಲಕ ‘ಭಕ್ತಿ ವೈವಿಧ್ಯ’ಎಂಬ ಪ್ರಬಂಧದಲ್ಲಿ ಭಕ್ತಿಕಾವ್ಯದ ಕುರಿತಾದ ಚರ್ಚೆ ಮಾಡುತ್ತಾರೆ. ‘ಹೂಬಿಡುವ ಮರ’ ಎಂಬ ಒಂದು ಕಥೆಯ ಮೂಲಕ ಹೆಣ್ಣು ಕೇಂದ್ರಿತ ಕಥೆಗಳ ಕೆಲವು ಲಕ್ಷಣಗಳನ್ನು ಚರ್ಚಿಸುತ್ತಾರೆ. ಭಾರತೀಯ ಮಹಾಕಾವ್ಯಗಳ ಕಥೆಗಳಿಗಿಂತ ಭಿನ್ನವಾದ ಸಂಸ್ಕೃತಿಯು ಕಲ್ಪಿಸಿರುವ ಪರ್ಯಾಯ ಸಾಧ್ಯತೆಗಳನ್ನು ಒಳಗೊಂಡಿರುವ ಹೆಂಗಸರ ಕಥೆಗಳನ್ನು ತಮ್ಮ ಕ್ಷೇತ್ರಕಾರ್ಯದ ಟಿಪ್ಪಣಿಗಳಿಂದ ಆಯ್ದು ಹೇಳುತ್ತಾರೆ. ತಮ್ಮ ಬಾಲ್ಯದಲ್ಲಿ ಅಡುಗೆ ಮನೆಯಲ್ಲಿ ಅಜ್ಜಿ, ಅತ್ತೆ, ಅಡುಗೆಯವರ ಬಾಯಿಂದ ಕೇಳಿದ ಕಥೆಗಳನ್ನೂ ಅವರ ದನಿಗಳನ್ನೂ ಕುರಿತು ‘ಕತೆ ಹೇಳುವುದು’ ಅನ್ನುವ ಪ್ರಬಂಧದಲ್ಲಿ ನಿರೂಪಿಸುತ್ತಾರೆ. ‘ಕನ್ನಡ ಜಾನಪದದ ಎರಡು ವಲಯಗಳು’ಎಂಬ ಪ್ರಬಂಧದಲ್ಲಿ ಕನ್ನಡ ಜಾನಪದದ ಪ್ರಕಾರ ಮತ್ತು ವ್ಯವಸ್ಥೆ, ಖಾಸಗಿ ಮತ್ತು ಸಾರ್ವಜನಿಕ ಕತೆಗಳು, ಕಥೆಗಾರರು, ಅಜ್ಜಿಕತೆ ಮತ್ತು ಪುರಾಣ, ಜಾನಪದ ಪುರಾಣ ಮತ್ತು ಪ್ರಾಚೀನ ಪುರಾಣಗಳು, ಗ್ರಾಮದೇವತೆ, ಎರಡು ಬಗೆಯ ಭಾರತೀಯ ದೇವತೆಗಳು, ಆಚರಣೆ ಮತ್ತು ರಂಗಭೂಮಿಗಳ ಕುರಿತಾದ ವಿಸ್ತಾರವಾದ ವಿವರಣೆಗಳಿವೆ. ‘ಸ್ಪೀಕಿಂಗ್ ಆಫ್ ಶಿವ’ ಅನ್ನುವ ಕೊನೆಯ ಪ್ರಬಂಧದಲ್ಲಿ ವೀರಶೈವ ಧಾರ್ಮಿಕ ಚಳುವಳಿಯ ರೂವಾರಿ ಬಸವಣ್ಣನ ‘ಉಳ್ಳವರು ಶಿವಾಲಯವ ಮಾಡುವರು’ ಎಂಬ ವಚನವನ್ನೆತ್ತಿಕೊಂಡು ಪ್ರತಿರೋಧ ಚಳುವಳಿಯ ಆಶಯ ಹಾಗೂ ವೈರುಧ್ಯಗಳ ಕುರಿತಾದ ಚರ್ಚೆಯಿದೆ. ರಾಮಾನುಜನ್ ಅವರ ಸುದೃಢ ಸಹಜ ಮತ್ತು ಸುಲಲಿತವಾದ ಇಂಗ್ಲಿಷ್ ಬರವಣಿಗೆಯಿಂದ ಅಷ್ಟೇ ಸಶಕ್ತವಾಗಿ ಅನುವಾದವೂ ಬಂದಿದೆ. ರಾಮಾನುಜನ್ ಅವರ ಚಿಂತನೆಗಳು ಇಂದಿನ ಕನ್ನಡದ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವಾದವುಗಳು. ಸಾಹಿತ್ಯ-ಸಂಸ್ಕೃತಿಯ ವಿದ್ಯಾರ್ಥಿಗಳು ಓದಲೇ ಬೇಕಾದವುಗಳು. ಹೊಸ ತಲೆಮಾರಿನ ಕನ್ನಡದ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಿದ ಈ ಕೃತಿ ಬಹಳ ಉಪಯುಕ್ತ. , *************************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಡಾ.ಪಾರ್ವತಿ ಜಿ.ಐತಾಳ್ ಅವರು ಪ್ರತಿ ಮಂಗಳವಾರ ಮತ್ತು ಶುಕ್ರವಾರ ಈ ಅಂಕಣದಲ್ಲಿ ಅನ್ಯವಾಷೆಗಳಿಂದ ಕನ್ನಡಕ್ಕೆಅನುವಾದಗೊಂಡ ಕೃತಿಗಳ ಓದಿಗೆ ಪೂರಕವಾಗಿ ಅವುಗಳ ಪರಿಚಯ ಮಾಡಿಕೊಡಲಿದ್ದಾರೆ ಕೊಸಿಮೊ ಕೊಸಿಮೊ ( ಕಾದಂಬರಿ)ಮೂಲ : ಇಟಾಲೋ ಕಾಲ್ವಿನೊಕನ್ನಡಕ್ಕೆ : ಕೆ.ಪಿ.ಸುರೇಶಪ್ರ : ಅಭಿನವಪ್ರಕಟಣೆಯ ವರ್ಷ : ೨೦೦೮ಬೆಲೆ : ರೂ.೧೦೦ ಪುಟಗಳು : ೨೧೬ ಜಗತ್ಪ್ರಸಿದ್ದ ಲೇಖಕ ಇಟಾಲೋ ಕಾಲ್ವಿನೋ ಅವರ ಕಾದಂಬರಿಯ ಇಂಗ್ಲಿಷ್ ಅನುವಾದ ‘ದಿ ಬ್ಯಾರನ್ ಇನ್ ದ ಟ್ರೀಸ್’ ಇದನ್ನು ಸುರೇಶ್ ಅವರು ‘ಕೊಸಿಮೋ’ಎಂಬ ಅದರ ನಾಯಕನ ಹೆಸರಿನ ಶೀರ್ಷಿಕೆಯಿಂದ ಅನುವಾದಿಸಿದ್ದಾರೆ. ಬಹಳ ವಿಶಿಷ್ಟವಾದ ಒಂದು ಕಥಾವಸ್ತುವನ್ನು ಹೊಂದಿದ ಕಾದಂಬರಿಯಿದು. ಮಹಾ ಛಲವಾದಿ ಕೊಸಿಮೊ ತನ್ನ ಹನ್ನೆರಡನೆಯ ವಯಸ್ಸಿನಲ್ಲೇ ಯಾವುದೋ ಕಾರಣಕ್ಕೆ ತಂದೆಯ ಮೇಲೆ ಮುನಿಸಿಕೊಂಡು ಮರವೇರಿ ಕುಳಿತು, ಇನ್ನು ಮುಂದೆ ಎಂದಿಗೂ ನೆಲದ ಮೇಲೆ ಕಾಲಿಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದವನು ಕೊನೆಯ ತನಕವೂ ತನ್ನ ಮಾತನ್ನು ಉಳಿಸಿಕೊಳ್ಳುತ್ತಾನೆ. ಮನುಷ್ಯನೊಬ್ಬ ನೆಲದ ವ್ಯವಹಾರಗಳನ್ನು ಪೂರ್ತಿಯಾಗಿ ಬಿಟ್ಟು ಮರದ ಮೇಲೆಯೇ, ನಿಸರ್ಗದ ಒಂದು ಅವಿಭಾಜ್ಯ ಅಂಗವಾಗಿ ಹೇಗೆ ಯಶಸ್ವಿಯಾಗಿ ಬದುಕಲು ಸಾಧ್ಯವೆಂಬುದನ್ನು ಈ ಕಥೆ ತೋರಿಸಿ ಕೊಡುತ್ತದೆ. ಕೊಸಿಮೊ ಹುಟ್ಟಿದ್ದು ಪ್ರತಿಷ್ಠಿತ ಜಮೀನ್ದಾರಿ ಕುಟುಂಬದಲ್ಲಿ. ಅಧಿಕಾರ-ಪ್ರತಿಷ್ಠೆಗಳೇ ಮುಖ್ಯವೆಂದು ತಿಳಿದುಕೊಂಡ ತಂದೆಯ ಅಹಂಕಾರವನ್ನು ಮೆಟ್ಟಿ ಮೇಲೇರಿ ನಿಂತು, ಬಡವರ ಬಂಧುವಾಗಿ, ಅಸಹಾಯಕರಿಗೆ ಸಹಾಯ ಮಾಡುತ್ತ ಆಕಾಶದೆತ್ತರಕ್ಕೆ ಬೆಳೆಯುವ ಕೊಸಿಮೋನ ಬದುಕಿನ ಕಥೆ ಬಹಳ ರೋಮಾಂಚಕ. ಮರದ ಮೇಲಿನ ಮನುಷ್ಯನೆಂದು ಇಡಿಯ ಭೂಖಂಡದಲ್ಲಿ ಪ್ರಸಿದ್ಧಿ ಪಡೆಯುವ ಕೊಸಿಮೊ ಎಂದರೆ ಆತನ ತಮ್ಮ ( ಈ ಕಥೆಯ ನಿರೂಪಕ) ನಿಗೂ ಎಲ್ಲಿಲ್ಲದ ಹೆಮ್ಮೆ. ತಮ್ಮನ ಸಹಾಯದಿಂದ ಮರದ ಮೇಲಿನ ಬದುಕಿಗೆ ಎಲ್ಲ ಸೌಕರ್ಯಗಳನ್ನು ಮಾಡಿಕೊಳ್ಳುವ ಕೊಸಿಮೊ ಮರದಿಂದ ಮರಕ್ಕೆ ಕೋತಿಯಂತೆ ಹಾರುತ್ತ, ನೇತಾಡುತ್ತ ಸರಾಗವಾಗಿ ಓಡಾಡುತ್ತ, ದೂರಗಳನ್ನು ಕ್ರಮಿಸಲು ಕಲಿಯುವುದೇ ಒಂದು ಸೋಜಿಗ. ನೆಲವನ್ನು ಮುಟ್ಟಲು ಬಂದೂಕು-ಕಠಾರಿಗಳನ್ನು ಹಿಡಿದು ಯುದ್ಧವನ್ನೂ ಮಾಡಬಲ್ಲ, ಎದುರಾಳಿಗಳನ್ನು ಕಾಳಗದಲ್ಲಿ ಸೋಲಿಸ ಬಲ್ಲ ಆತನ ಧೈರ್ಯ-ಸಾಹಸ-ಸಾಮರ್ಥ್ಯಗಳು ಬೆರಗು ಹುಟ್ಟಿಸುತ್ತವೆ. ಆತನಿಂದ ಆಕರ್ಷಿತರಾಗುವ ಅನೇಕ ಹೆಣ್ಣುಮಕ್ಕಳೊಂದಿಗೆ ಪ್ರಣಯದ ಅನುಭವಗಳನ್ನೂ ಕೊಸಿಮೊ ಪಡೆಯುತ್ತಾನೆ. ಸಂಸಾರ ಸುಖವೊಂದನ್ನು ಬಿಟ್ಟರೆ ನೆಲದ ಮೇಲಿನ ಮನುಷ್ಯರಷ್ಟೇ ಸುಖ ಪಡೆದು, ಮಾತ್ರವಲ್ಲ, ಸಾಮಾನ್ಯ ಮನುಷ್ಯರಿಗಿಂತ ಹೆಚ್ಚಿನ ಸಾಧನೆಗಳನ್ನು ಅವನು ಮಾಡುತ್ತಾನೆ. ಒಂದಾದ ನಂತರ ಇನ್ನೊಂದರಂತೆ ವಿವಿಧ ವಿಷಯಗಳಿಗೆ ಸಂಬಂಧ ಪಟ್ಟ ಪುಸ್ತಕಗಳನ್ನೂಓದುವ ಕೊಸಿಮೊ ಮಹಾಜ್ಞಾನಿಯೂ ಆಗುತ್ತಾನೆ. ತನ್ನ ಓದಿನ ಹುಚ್ಚನ್ನು ಕುಪ್ರಸಿದ್ಧನಾದ ಒಬ್ಬ ದರೋಡೆಕೋರನಿಗೂ ಅಂಟಿಸಿ ಅವನನ್ನೊಬ್ಬ ಒಳ್ಳೆಯ ವ್ಯಕ್ತಿಯನ್ನಾಗಿ ಪರಿವರ್ತಿಸುತ್ತಾನೆ. ಆದರ್ಶ ರಾಜ್ಯವೆನಿಸಿದ ಯುಟೋಪಿಯಾವನ್ನು ಪುನರ್ನಿರ್ಮಿಸುವ ಪ್ರಯತ್ನವನ್ನು ಇಟಾಲೋ ಕಾಲ್ವಿನೋ ಇಲ್ಲಿ ಮಾಡುತ್ತಾರೆ. ಆದ್ಯಕಾಲದ ಇಂಗ್ಲಿಷ್ ಕಾದಂಬರಿಕಾರರಾದ ರಿಚರ್ಡ್ಸನ್ ಮತ್ತು ಫೀಲ್ಡಿಂಗರ ನೈತಿಕತೆ ಮೇಲೆ ಒತ್ತುನೀಡುವ ಕಾದಂಬರಿಗಳ ನಾಜೂಕಾದ ಅಣಕವೂ ಇಲ್ಲಿದೆ. ಒಟ್ಟಿನಲ್ಲಿ ಕೊಸಿಮೊನ ಕಥೆ ಒಂದು ರೀತಿಯ ಫ್ಯಾಂಟಸಿ ಶೈಲಿಯಲ್ಲಿ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಕೆ.ಪಿ.ಸುರೇಶ ಅವರು ಕಾದಂಬರಿಯನ್ನು ಬಹಳ ಸುಂದರವಾಗಿ ಅನುವಾದಿಸಿದ್ದಾರೆ. ಅವರ ಭಾಷಾ ಶೈಲಿ, ವಾಕ್ಯ ಸರಣಿ, ಪದಬಳಕೆಗಳಲ್ಲಿ ಕನ್ನಡದ ಸಹಜತೆ ಬಹಳ ಆಪ್ಯಾಯಮಾನವಾಗಿ ಮೂಡಿ ಬಂದಿದೆ. ********************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಸೆರೆಹಕ್ಕಿ ಹಾಡುವುದು ಏಕೆಂದು ಬಲ್ಲೆ ಇಂಗ್ಲಿಷ್ ಮೂಲ : ಮಾಯಾ ಏಂಜೆಲೋ ಕನ್ನಡಕ್ಕೆ : ಎಂ.ಆರ್.ಕಮಲ‘ಐ ನೋ ವೈ ದ ಕೇಜ್ಡ್ ಬರ್ಡ್ ಸಿಂಗ್ಸ್’ ಎಂಬ ಮೂಲ ಶೀರ್ಷಿಕೆಯನ್ನು ‘ಸೆರೆಹಕ್ಕಿ ಹಾಡುವುದು ಏಕೆಂದು ಬಲ್ಲೆ’ ಎಂಬ ಸುಂದರ ಶೀರ್ಷಿಕೆಯೊಂದಿಗೆ ಅನುವಾದಿಸಿದ್ದಾರೆ.ಇದು ಜಗತ್ಪ್ರಸಿದ್ಧ ಕಪ್ಪು ಲೇಖಕಿ ಮಾಯಾ ಎಂಜೆಲೋ ಅವರ ಆರು ಆತ್ಮಕತೆಗಳಲ್ಲಿ ಮೊದಲನೆಯದು. ಆಕೆ ತನ್ನ ಮೂರನೆಯ ವಯಸ್ಸಿನಿಂದ ಹದಿನೇಳು ವರ್ಷ ವಯಸ್ಸಿನ ವಳಾಗುವ ತನಕ ತನ್ನ ಅಣ್ಣ ಮತ್ತು ತಂದೆಯ ತಾಯಿ ಅಜ್ಜಿಯ ಜತೆಗೆ ವಾಸಿಸಿದಳು.ತಾನು ಅನುಭವಿಸಿದ್ದ ಕಷ್ಟ- ನಿಷ್ಠುರಗಳನ್ನೂ ನೋವು-ಸಂಕಟಗಳನ್ನೂ ಆಕೆ ಇಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಕಪ್ಪು ಜನಾಂಗಕ್ಕೆ ಸೇರಿದ ಮಾಯಾ ಎಂಜೆಲೋ ದಕ್ಷಿಣ ಮತ್ತು ಉತ್ತರ ಅಮೆರಿಕಾಗಳಲ್ಲಿ ಬಿಳಿಯರ ವರ್ಣದ್ವೇಷ ಮತ್ತು ಅಮಾನುಷ ವರ್ತನೆಗಳನ್ನು ಮತ್ತು ಅವರಿಂದ ಶೋಷನೆಗೊಳಗಾದ ಕರಿಯರು ತಮ್ಮ ಸ್ವಾಭಿಮಾನ ಹಾಗೂ ಸ್ವಪ್ರಯತ್ನಗಳಿಂದ ಮೇಲೆ ಬರಲು ಪ್ರಯತ್ನಿಸಿದ್ದ ರ ಬಗ್ಗೆ ಬರೆಯುತ್ತಾರೆ.ಮೂರು ವರ್ಷದ ಹುಡುಗಿಯಾಗಿ ದ್ದಾಗಲೇ ತನ್ನ ನಾಲ್ಕು ವರ್ಷ ವಯಸ್ಸಿನ ಅಣ್ಣ ಬೈಲಿಯ ಜತೆಗೆ ತಾಯಿ-ತಂದೆಯರಿಂದ ಬೇರ್ಪಟ್ಟು ಆಕೆ ಅಜ್ಜಿಯ ಮನೆಯಲ್ಲಿಯೇ ಬೆಳೆಯುತ್ತಾರೆ.ಅಜ್ಜಿಯ ಧೈರ್ಯ- ಸ್ಥೈ ರ್ಯ, ಶಿಸ್ತು-ಸ್ವಾಭಿಮಾನಗಳನ್ನು ತಾನೂ ರೂಢಿಸಿಕೊಳ್ಳು ತ್ತಾಳೆ.ಇಡೀ ಹಳ್ಳಿಯಲ್ಲಿ ತನ್ನ ಸ್ವತಂತ್ರ ಮನೋಭಾವಕ್ಕೆ ಹೆಸರಾದ ಅಜ್ಜಿಯ ಬಗ್ಗೆ ಅವಳಿಗೆ ಅಪಾರ ಮೆಚ್ಚುಗೆಯಿ ದೆ.ಆದರೆ ಆಕೆಯ ಎಂಟನೇ ವಯಸ್ಸಿನಲ್ಲಿ ಒಮ್ಮೆ ಆಕೆಯ ಅಮ್ಮ ಆಕೆಯನ್ನು ತಾನು ವಾಸವಾಗಿರುವವ ಸಾನ್ ಫ್ರಾನ್ಸಿಸ್ಕೋ ನಗರಕ್ಕೆ ಕರೆತಂದು ಇಟ್ಟುಕೊಳ್ಳುತ್ತಾಳೆ. ಆದರೆ ಅಮ್ಮನ ಗೆಳೆಯನೊಬ್ಬ ಆಕೆಯ ಮೇಲೆ ಲೈಂಗಿಕ ಅತ್ಯಾಚಾರ ಮಾಡಿದಾಗ ಅವಳ ಮಾವಂದಿರು ಅವನನ್ನು ಕೊಲೆ ಮಾಡುತ್ತಾರೆ. ಈ ಎಲ್ಲ ದುರ್ಘಟನೆಗಳಿಂದ ಆಕೆ ಯ ಮನಸ್ಸಿಗೆ ಆದ ಘೋರ ಆಘಾತವು ಆಕೆಯನ್ನು ಅಕ್ಷ ರಶಃ ಮೂಕಿಯನ್ನಾಗಿಸುತ್ತದೆ. ಮುಂದಿನ ಐದು ವರ್ಷಗಳ ತನಕ ಮೂಕಿಯಾಗಿಯೇ ಇದ್ದ ಆಕೆಗೆ ಮಿಸೆಸ್. ಫ್ಲವರ್ ಎಂಬ ಸ್ನೇಹಮಯಿ ಮಹಿಳೆ ಯ ಪ್ರೋತ್ಸಾಹದಿಂದ ಮಾತು ಬರುತ್ತದೆ. ಆ ಮಹಿಳೆಯ ಮೂಲಕವೇ ಮಾಯಾ ನೃತ್ಯ-ನಾಟಕ, ಶಿಕ್ಷಣ ಮೊದಲಾದ ವಿಷಯಗಳನ್ನು ಕಲಿತು ಬದುಕಿನಲ್ಲಿ ಯಶಸ್ಸು ಸಾಧಿಸು ತ್ತಾಳೆ. ಮಾತ್ರವಲ್ಲದೆ ಕಾವ್ಯಪ್ರಿಯತೆಯನ್ನೂ ರೂಢಿಸಿಕೊಂ ಡು ಕಾವ್ಯರಚನೆ ಮಾಡುತ್ತಾಳೆ.ಮಾಯಾ ಜನಾಂಗ ದ್ವೇಷ ವನ್ನು ವಿರೋಧಿಸಿ ಅನೇಕ ಕವನಗಳನ್ನು ಬರೆಯುತ್ತಾಳೆ. ತಾನು ತೀವ್ರವಾದ ಹಲ್ಲು ನೋವಿನಿಂದ ಬಳಲುತ್ತಿರುವಾ ಗಲೂ ಚಿಕಿತ್ಸೆ ಮಾಡಲೊಪ್ಪದ ಒಬ್ಬ ಬಿಳಿಯ ದಂತವೈದ್ಯ ನ ಕ್ರೌರ್ಯ ಮತ್ತು ಕೃತಘ್ನತೆಯನ್ನು ಆಕೆ ತನ್ನ ಆತ್ಮಕಥೆ ಯಲ್ಲಿ ದಾಖಲಿಸುತ್ತಾಳೆ. ಈ ಕೃತಿಯಲ್ಲಿ ಇದೇ ಧ್ವನಿಯನ್ನು ಹೊಂದಿದ ಅನೇಕ ಕವನಗಳೂ ಇವೆ. ಅಲ್ಲದೆ ಮಾಯಾ ಅವರ ವೈಯಕ್ತಿಕ ನಿಲುವುಗಳನ್ನು ಬಿಂಬಿಸುವ ನಾಲ್ಕು ಅರ್ಥಪೂರ್ಣ ಸಂದರ್ಶನಗಳೂ ಇವೆ. ಸಂದರ್ಶನಗಳಲ್ಲಿ ಜನಾಂಗದ್ವೇಷ ರಹಿತವಾದ ಒಂದು ಹೊಸ ಸಮಾಜದ ನಿರ್ಮಾಣಕ್ಕಾಗಿ ಕರೆಯಿದೆ. ಮೂಲತಃ ಕವಿಯಾದ ಎಂ.ಆರ್.ಕಮಲ ಅವರ ಅನುವಾದದ ಭಾಷೆ ಕಾವ್ಯಾತ್ಮಕವಾಗಿದ್ದು ಬಹಳ ಪರಿಣಾಮಕಾರಿಯಾಗಿದೆ. ******************************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ







