ನಿನ್ನ ಸೇರೋ ತವಕ ಪ್ಯಾರಿಸುತ ನಿನ್ನೂರು ದಾರಿಯು ಸವಿದಷ್ಟುದೂರಹವೆ ತುಂಬಿದ ಗಾಲಿಗಳು ಉರುಳಿದಷ್ಟುಮತ್ತಷ್ಟು ದೂರಉರುಳಿ ಹೊರಟ ಗಾಲಿಯಲ್ಲಿ ಹವೆಯಿತ್ತುನಿನ್ನ ನೆನೆದು ಬರುತ್ತಿರುವ ನನ್ನಲ್ಲಿ ಚಲವಿತ್ತುಪ್ರಯಾಸಗೊಂಡೆ,ಅನಾಯಾಸಗೊಂಡೆಕತ್ತಲು ಆವರಿಸಿದ ಕಪ್ಪು ಹೊಲದ ನಟ್ಟ ನಡುವೆಬೆಳೆದಿದ್ದ ಒಂಟಿ ಬೇವಿನಮರದಬುಡದಲ್ಲಿ ಮಗ್ಗಲು ಭುವಿಗೆ ಹೊಂದಿಸಿಮಲಗಿಕೊಂಡುನಿನ್ನ ಸೇರೋ ಕನಸು ಕಾಣುತ್ತಿದ್ದೆಕನಸನ್ನು ಭಗ್ನ ಮಾಡಿ,ಮತ್ತೆನಿನ್ನೂರು ದಾರಿ ಹಿಡಿಯಲುಪ್ರೇರೇಪಿಸಿದ್ದು ಅದೇ ಸೊಳ್ಳೆಅದು ನೀನೋ ಅಥವಾ ನಿಜವಾಗಿಯೂ ಸೊಳ್ಳೆಯೂತರ್ಕಕ್ಕೆ ಇಳಿಯುದಿಲ್ಲಅದು ಕಚ್ಚಿ ಹೋದ ಜಾಗದಲ್ಲಿ ನೀ ಕಚ್ಚಿದ ಹೋಲಿಕೆಯಿದೆದಾರಿಯುದ್ದಕ್ಕೂ ಮೈಲುಗಲ್ಲಿನ ಮೇಲೂ ನಿನ್ನದೇಸ್ವಾಗತಗೀತೆ,ಅದೆಷ್ಟು ಚಂದ ಅನ್ನುತ್ತಿಯಾ…?ನೋಡುತ್ತಾ,ಕೇಳುತ್ತಾ ಅಲ್ಲೇ ನಿಂತುಬಿಡಬೇಕುಇಲ್ಲ,ನಿನ್ನ ನೋಡುವ ತವಕದಿ ಓಡಿ ಬರಲೇ…?ಸೂರ್ಯ ನಿನ್ನ ಹಣೆಯ ಕುಂಕುಮವನ್ನು ಹೋಲುತ್ತಿದ್ದಗಾಳಿಯು ಸುಗಂಧ ಪುಷ್ಪ ಹೊತ್ತು ತರುತ್ತಿದ್ದಹಕ್ಕಿಗಳು ಮರಳಿ ಗೂಡಿನಡಿಗೆ ಸಾಗುತ್ತಿದ್ದಗಳಿಗೆಯಲಿ ನಮ್ಮಿಬ್ಬರ ದೇಹಗಳು ಒಟ್ಟುಗೂಡುತ್ತಿದ್ದವುಅಲ್ಲೊಂದಿಷ್ಟು ಪೋಲಿ ಸಂಜ್ಞೆಗಳು ಆಟ ಆಡುತ್ತಿದ್ದವುಭಾವನೆಗಳು ಕಟ್ಟಿಗೊಂಡ ಹಗ್ಗದಿಂದ ತಪ್ಪಿಸಿಕೊಂಡುಹಿಂಡು ಹಿಂಡಾಗಿ ಬರುತ್ತಿದ್ದವುಮತ್ತದೇ ಆಸೆಯಿಂದ ಸುಗಂಧಿ ಪರಿಮಳವನ್ನು ಬೆನ್ನುಬಿದ್ದುಸೂರ್ಯ ಕೆಂಪಾಗುವ,ಹಿತವಾಗುವಸಮಯಕ್ಕೆ ನಿನ್ನೂರಿಗೆ ಕಾಲಿರುಸುವೆನಿನ್ನೆಲ್ಲ ಸಮಯವನ್ನು ಕಾಯ್ದಿರುಸುವೆಯಾ…? *********************************