ಒಂದು ಸಾಂದರ್ಭಿಕ ಚಿತ್ರ
ಕವಿತೆ ಒಂದು ಸಾಂದರ್ಭಿಕ ಚಿತ್ರ ಬಸವರಾಜ ಹೂಗಾರ ಕರಿಕಲ್ಲಿನ ಮೇಲೆಚಂದದ ನಾಮಫಲಕಚಿಕ್ಕ ಗೇಟುಎರಡು ಕುರ್ಚಿ ಹಾಕುವಷ್ಟೇ ವರಾಂಡಇಣುಕಿ ನೋಡಿದರೆದೊಡ್ಡ ಪಡಸಾಲೆಎರಡು ಕೋಣೆಗಳ ಮಧ್ಯೆಅಂಗೈಯಗಲದ ದೇವರಮನೆ.ಬಾಡಿಗೆ ಮನೆಯಲಿಇದ್ದೂ ಇದ್ದೂ ಸಾಕಾಗಿಸಾಕಿಷ್ಟು ನಮಗೆಎನ್ನುವಷ್ಟಿತ್ತು ಮನೆ. ರಸ್ತೆಯಲ್ಲಿ ಹೋಗುವಾಗಆ ಮನೆ ಈ ಮನೆಬಣ್ಣ ಬಣ್ಣದ ಮನೆಗಳನೂರು ನೋಟ ಆಸೆ ಕನಸುಗಳಗಿಲಕಿ ಹಳವಂಡಎಚ್ಚರಾದವನಿಗೆ ಲೋಕ ಸುಂದರ. ಎಲ್ಲ ಮನೆಗಳೂ ಚಂದಕಂಡವರ ಮನೆ ಸಿಟೌಟಿನಲಿಪೇಪರ್ ಓದುವವನು ನಾನೊಬ್ಬನೆ !ಹತ್ತುವಾಗ ಇಳಿಯುವಾಗಹೆಚ್ಚು ಕಂಡದ್ದು ಈ ಚಿಕ್ಕ ಮನೆಗಂಡ ವ್ಯಾಪಾರಿ ಹೆಂಡತಿ ಸಂಸಾರಿಕಂಪೌಂಡಿನಂಗಳದಲಿಗೆಜ್ಜೆ ಗಿಲಕಿಯ ಹೆಜ್ಜೆವೂರುವ ಮಗು. ಈ ಊರಲ್ಲೇ ಇದ್ದುಬಿಡಿತೆಗೆದುಕೊಳ್ಳಿ ಮನೆ ಇಲ್ಲ ಕಟ್ಟಿಸಿಸೈಟಾದರೂ ಇರಲಿದಿನಕ್ಕಿಷ್ಟು ಹಿತಚಿಂತಕರಮಾತಿನ ಏಣಿಗೆಹತ್ತವವನಿಗಿರಬೇಕು ತಾಕತ್ತು. ರೂಮು ಖಾಲಿ ಮಾಡಿದೆ ಒಂದು ದಿನದಾಟಿ ತಿರುವಿನಲಿ ಹೊರಟೆಎದುರಿಗೆ ಬಂದಳು ಕೆಲಸದಾಕೆಮಾರುತ್ತಾರಂತೆ ಆ ಮನೆಕೇಳಿದೆನು ಸುಮ್ಮನೆ ಎಷ್ಟಂತೆ?ಕೋಟಿ ಒಂದೂವರೆಯಂತೆ. ತಿರುತಿರುಗಿ ಅದೇ ಕನಸುಅಲ್ಲಿದ್ದೆ ನಾನು ಅದೇ ಮನೆಯಲ್ಲಿ !ರಸ್ತೆಯಲಿ ರವಿವಾರ ಹೊರಟಿದ್ದೆಮನೆ ಮುಂದೆಅರೆ !ಒಡೆದು ಹಾಕಿದ್ದಾರೆ ಇಡೀ ಮನೆಖಾಲಿ ಸೈಟಿನಲ್ಲಿ ಬಿದ್ದಕೆಂಪು ಕಲ್ಲಿನ ಚೂರುಗಳುಒಡೆದವರಿಬ್ಬರ ಕೇಳಿದೆಯಾಕೆ ಒಡೆಯಲಾಯಿತು ಮನೆ ?ಒಡೆಯುವುದಷ್ಟೇ ನಮ್ಮ ಕೆಲಸಒಡೆ ಎಂದರು ಒಡೆದೆವು. ಒಡೆಯುವವರು ಕೂಲಿಯಾಳುಗಳುಒಡಿಸುವವರ ಅಂಗೈ ರಕುತದಲಿಎಷ್ಟು ಮನೆಗಳು ಕರಗಿದವೋಒಡೆಯುತ್ತಲೇ ಇದ್ದಾರೆ ಇನ್ನೂ…. ********************************************
ಒಂದು ಸಾಂದರ್ಭಿಕ ಚಿತ್ರ Read Post »









