ಕವಿತೆ ನನ್ನಪ್ಪ ಕಾವ್ಯ ಎಸ್. ಹಂಗಿಲ್ಲದ ಅಪ್ಪನ ಗುಡಿಸಲಿನ ಅರಮನೆಯಲ್ಲಿನನ್ನಪ್ಪ ಮಲಗಿ ಏದುಸಿರು ಬಿಡುತ್ತಿದ್ದಮಂಚವಿಂದು ಒಂಟಿಕಾಲ ಕೊಕ್ಕರೆಯಾಗಿದೆಅಪ್ಪನ ಉಸಿರಂತೆ ಇಂದು ಸೊಳ್ಳೆಗಳು ಸುಯ್ಗುಡುತ್ತಿವೆಮೂಗಿಗೆ ಆಗಾಗ್ಗೆ ಬಡಿಯುತ್ತಿದ್ದ ಮೋಟು ಬೀಡಿಯಘಾಟು ಹೊಗೆಯ ರೂಪ ಕಳಚಿ, ಹೊಸಬಟ್ಟೆ ಧರಿಸಿಊರು ಸುತ್ತಲು ಹೋಗಿದೆ.ಚರ್ಮ ಸವೆದು ಸವಕಳಿಯಾಗಿ, ಜಗತ್ತಿಗೆ ಅನ್ನನೀಡುವನಾಡ ಬೆನ್ನೆಲುಬಿನ, ಅಸ್ಥಿಪಂಜರದ ಸಾಹುಕಾರ ನನ್ನಪ್ಪ.ಕೆನ್ನೀರ ಹನಿಗಳನ್ನು ಬೆವರಾಗಿಸಿ ಬಸಿದುಜಳಕ ಮಾಡಿ ನುಣುಪಾಗಿ ನರಳುತ್ತಿದ್ದ ನನ್ನಪ್ಪ.ಹೊಟ್ಟೆಯಲ್ಲಿ ಗಾಳಿಚೀಲ ಹೊಕ್ಕಿಸಿ ವಿಚಾರ -ಪ್ರಚಾರಗಳಬಾಗಿಲು ಕಿಟಕಿಗಳ ಕದ ಮುಚ್ಚಿ ಬಿಟ್ಟಿದ್ದ ನನ್ನಪ್ಪ.ತನ್ನ ಜಿಡ್ಡಿಲ್ಲದ ರಕ್ತದಿಂದ ಗುಳ್ಳೆನರಿಗಳನ್ನು ಕೊಬ್ಬಿಸಿಮಲಗಿಸಿ, ಹರಕು -ಮುರುಕಿನ ಧೋತರ ಪೇಟವಾಗಿಸಿಜೈ ಜವಾನ್, ಜೈ ಕಿಸಾನ್ ನಂತೆ ಮಿಂದೇಳುತ್ತಿದ್ದ ನನ್ನಪ್ಪ.ತಾಳ್ಮೆ -ಶಾಂತಿಗಳ ಸಸಿ ಬಿತ್ತಿ ಹೊತ್ತಿದ್ದ ಭಾವ ಮೂರ್ತಿ ನನ್ನಪ್ಪಅದೆಷ್ಟು ತಾಳ್ಮೆ ಅಪ್ಪನಿಗೆ..?ಜಿಗಣೆಗಳುಉಸಿರಾಡುತ್ತಿದ್ದದ್ದು ಅಪ್ಪನಿಂದ,ಅಪ್ಪನ ಮುದ್ದಿನ ರಕ್ತ ಬೀಜಾಸುರಗಳುಅಸಲಿಯೆಂದರೆ ಈಗೀಗ ಅವುಗಳಿಗೂ ಅಪ್ಪನಬತ್ತಿದ ದೇಹದ ಮೇಲೆ ವೈರಾಗ್ಯದ ಮುನಿಸುಎತ್ತುಗಳಂತೆ ನೇಗಿಲು ಹೊರುವ ಅಪ್ಪನಿಗೆಕಪಟ, ಕುಟಿಲ ಕುಯುಕ್ತಿಯ ತೇರು -ಬೇರಿನಅರ್ಬುತ ರೋಗಗಳ ಅರಿವಿಲ್ಲತನ್ನ ಛಲ -ಬಲದ ಬೇರು ಬತ್ತಿದ್ದರು ನಗುತ್ತಿದ್ದ,ಅಮಾವಾಸ್ಯೆಯ ಹೂವಂತೆಸಾಲವೆಂಬುದು ಅವನ ಜೇಬಿನಲ್ಲಿರುವ ತೂತುಗಳಹಾಹಾಕಾರದ ಹಾಲಿನ ಸಮಾಧಿಯಮೇಲೆ ತೂಗುತ್ತಿರುವ ನೇಣುಗತ್ತಿದಿನ ಅಂಗಳದಲ್ಲಿ ಬಣಗುಡುತ್ತಿದ್ದ ನನ್ನಪ್ಪಇಂದು ಯಾವ ದಾರಿ ಹಿಡಿದ್ದಿದ್ದಾನೋ?ತನ್ನ ಶ್ರಮದ ಭಾರದ ಫಲಗಳ ಹೊರಲಾರದೇಯಾವ ತಾಯಿ ನೆಟ್ಟ ಮರದ ರೆಂಬೆಗೆತನ್ನ ನೊಗದ ಕೊರಳ ಕೊಟ್ಟಿದ್ದಾನೋ?ನನ್ನಪ್ಪನಂತೆ ಅದೆಷ್ಟೋ ಅಪ್ಪಂದಿರಕರುಳ ರೋದನಕ್ಕೆ ಬಲಿಯಾಗಿದ್ದಾನೋ..?ಶೃಂಗರಿಸುತ್ತಿದ್ದ ಭೂತಾಯಿಯನ್ನೇ ಎಲ್ಲಿಹೊದ್ದು ನೆಮ್ಮದಿಯ ನಿದ್ದೆಯ ಕನಸು ಅರಸಿಅಂಗಾತ ಮಲಗಿರುವನೋ ತಿಳಿದಿಲ್ಲಆದರೆ ಅಪ್ಪ ಹೆಮ್ಮೆಯ ಬೀಜ ಬಿತ್ತಿದ್ದಾನೆಅದೀಗ ಮೊಳಕೆಯೊಡೆದು ನೆರಳಿನ ಅರಳಿ ಮರವಾಗಿದೆನಾನು ರೈತ ಪುತ್ರಿ, ಅನ್ನದಾತನ ಹೆಮ್ಮೆಯ ಜೀವ ಪುತ್ರಿ. *******************************************