ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಅದೆ ಕೂಗು

ಕವಿತೆ ಅದೆ ಕೂಗು ಶಂಕರಾನಂದ ಹೆಬ್ಬಾಳ ಮತ್ತೆ ಮತ್ತೆ ಅದೆ ಕೂಗುಕೇಳಿದರೆ ಮೈಜುಂ ಎನ್ನುವ ಕ್ರೌರ್ಯಧಿಕ್ಕಾರವಿರಲಿ ನಿಮ್ಮ ಪುರುಷತ್ವಕ್ಕೆಅಬಲೆಯ ಮೇಲೆ ಪೌರುಷತೋರಿಸಿದ ನಾಚಿಕಗೇಡಿನ ಜನ್ಮ…..!! ಬಾಪುವಿನ ಕನಸು ನನಸಾಗಲಿಲ್ಲಒಡಲ ದಳ್ಳುರಿಯು ಹತ್ತಿ ಉರಿದಿದೆನಿಗಿ ನಿಗಿ ಕೆಂಡದಂತೆ…ಆರ್ತನಾದವ ಕೇಳುವರಿಲ್ಲದೆಕೇಳಿದರು ಮಂಗನಂತೆಕೈ ಬಾಯಿ ಕಣ್ಣು ಮುಚ್ಚಿಕುಳಿತಿದ್ದೆವೆ ಹೇಡಿಯಂತೆ……!! ನಿನ್ನ ದೇಹಕ್ಕೆ ಆಸೆ ಪಟ್ಟವರಿಗೆದಫನ್ ಮಾಡಬೇಕುಕಾಮುಕರ ಕೈಕತ್ತರಿಸಿನಾಯಿನರಿಗಳಿಗೆ ಹಾಕಬೇಕುಸತ್ತವಳು ನೀನಲ್ಲ….!! ಮತ್ತೆ ಮತ್ತೆ ಕೇಳುತಿದೆಅಮಾಯಕ ಹೆಣ್ಣುಮಕ್ಕಳಮೇಲಿನ ದೌರ್ಜನ್ಯದ ಕೂಗು..ನರಕದ ಹುಳುವಾಗಿ ಬಳಲಿದಮನುಜನ ಸಹವಾಸ ಸಾಕು….!! **************************

ಅದೆ ಕೂಗು Read Post »

ಕಾವ್ಯಯಾನ

ಅರೆನಗ್ನ ಕನಸು

ಕವಿತೆ ಅರೆನಗ್ನ ಕನಸು ಕಾವ್ಯ ಎಸ್. ನಿನ್ನ ಅರೆ ಬೆಳಕಿನ ಇಬ್ಬನಿಯ ಮನೆಯಲ್ಲಿ ನಾ ಒದ್ದೆಯಾಗಿ ಒಣಗುತ್ತಿರುವಾಗ ಕೋಲ್ಮಿಂಚಂತೆ ನೀ ಹೊಕ್ಕೆ ಚಳಿಯನ್ನು ತಬ್ಬಲಿಯಾಗಿ ಹೊದ್ದಿದ್ದ ನನಗೆ ಕಣ್ಣುಗಳಿಂದ ಬಿಟ್ಟ ಇರುವೆ ಮೈಯೆಲ್ಲಾ ಸುತ್ತುತ್ತಿದೆ ನಿನ್ನ ಎದುರಿನ ಅಂತರದಲ್ಲಿ ನಾ ಮುದುಡಿದರೆ ತುಟಿಯಂಚಿನ ಮೊಗ್ಗಿನ ತಾವರೆಯು ಮುಡಿಯಲ್ಲಿ ಬಿಸಿ ಉಸಿರಿನ ತಾಪಕ್ಕೆ ಹಬ್ಬಿ ಚುಂಬನದ ಅಂಬರಕ್ಕೆ ಅರಳಿದ ಕೊಡೆಯಾಯಿತು ನಿನ್ನ ಕೆಮ್ಮಣ್ಣು ತುಟಿಯಲ್ಲಿ ನನ್ನ ರೂಪು ಬಿತ್ತಿದಾಗ ನನ್ನೊಳಗೆ ನವಿಲುಗಳು ಗುಂಪುಗಟ್ಟಿ ನೃತ್ಯವಾಡಿದ್ದವು ಹಿಡಿದೆಳೆದ ಒರಟು ರಭಸದ ಬಿಗಿತಕ್ಕೆ ಕೆನ್ನೆಯ ಗುಳಿಯ ಕಚಗುಳಿಯಲ್ಲಿ ನಗುವ ಕಂದಮ್ಮನಾಗಿದ್ದೆ ಅಡ್ಡಾ ದಿಡ್ಡಿನ ಹಾಸು ಹೊಕ್ಕಳ್ಳಲ್ಲಿ ಮಲಗಿದ ನನಗೆ ಮತ್ತದೇ ಇರುವೆ ಮತ್ತೆ ತೆವಳಿದಾಗ ಮೈಯೆಲ್ಲಾ ಕಾದ ಬಾಣಲೆ ಎಣ್ಣೆಯಲ್ಲಿ ಅದ್ದಿದಂತಾಗಿ ಮೀನಾಕಾರದ ಕಣ್ಣು ಬಿಟ್ಟಾಗ ಬವಣೆ ಯಮರಾಯನ ಕುಣಿಕೆ ಪಾಶಕ್ಕೆ ಬೆವೆತು ನೀರಿನ ಹೊಳೆಯಲ್ಲಿ ಈಜಾಡಿ ಮುಳುಗಿದ್ದೆ. *************************

ಅರೆನಗ್ನ ಕನಸು Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಎ.ಹೇಮಗಂಗಾ ನಿನ್ನ ಮನ ಪರಿತಾಪದಿ ಬೇಯುವ ಮೊದಲು ಮರಳಿಬಿಡು ನನ್ನೆಡೆಗೆಅಂತರಾಳದಿ ಕಹಿಭಾವ ಬೇರೂರುವ ಮೊದಲು ಮರಳಿಬಿಡು ನನ್ನೆಡೆಗೆ ಬಾಳದೋಣಿ ಮುನ್ನಡೆಸಲು ಹುಟ್ಟು ಹಾಕಬೇಕಿತ್ತು ಜೊತೆ ಸೇರಿಕಾಲದ ಕಡಲಲಿ ಮುಳುಗುವ ಮೊದಲು ಮರಳಿಬಿಡು ನನ್ನೆಡೆಗೆ ಹೃದಯ ನಿನಗಾಗಿ ಮಿಡಿಯುವುದನ್ನು ಈ ಕ್ಷಣಕ್ಕೂ ನಿಲ್ಲಿಸಿಲ್ಲಅಂತರದ ಕಂದಕ ಆಳವಾಗುವ ಮೊದಲು ಮರಳಿಬಿಡು ನನ್ನೆಡೆಗೆ ಅರಳಿದೊಲವ ಹೂವ ಬಿಸುಟು ನಡೆದ ನಿನ್ನ ನಡೆ ಸರಿಯೇ ಹೇಳುಕಣ್ಣೆದುರೇ ಮಣ್ಣಲಿ ಮಣ್ಣಾಗುವ ಮೊದಲು ಮರಳಿಬಿಡು ನನ್ನೆಡೆಗೆ ಪ್ರೀತಿಸುಧೆಯ ಉಂಡ ಜೀವ ವಿಷವ ಉಣಿಸಬಹುದೇ ಹೇಮ?ಕೊನೆ ಉಸಿರು ದೇಹ ತೊರೆವ ಮೊದಲು ಮರಳಿಬಿಡು ನನ್ನೆಡೆಗೆ **********************

ಗಝಲ್ Read Post »

ಕಾವ್ಯಯಾನ

ಕಂಸ…!

ಕವಿತೆ ಕಂಸ…! ಡಾ. ಅರಕಲಗೂಡು ನೀಲಕಂಠ ಮೂರ್ತಿ ಪ್ರಸ್ತಾವನೆ: ಒಬ್ಬ ದುರಾತ್ಮನ ಕ್ರೂರ ಮನಸ್ಸಿಗೆ ಅತ್ಯಂತ ಹೇಯವಾಗಿ ಬಲಿಯಾದ ಆ ಎಳೆಯ ಕಂದಮ್ಮನ ಆತ್ಮಕ್ಕೆ ಶಾಂತಿ ಕೋರಿ…ಈ ಕವನ ನನ್ನ ನಮನ! ಹಸುಳೆಯೊಂದು ಅಸುನೀಗಿದೆಒಂದು ಪೊದೆಯೊಳಗೆಅನಾಥಬೆತ್ತಲೆ –ಬೀಭತ್ಸ ಕೊಲೆಗೆ…!ಒಂದೇ ಒಂದು ದಿನವೋಒಂದು ವಾರವೋವಯಸು ಎಷ್ಟಾದರೇನು ಪಾತಕಕ್ಕೆ! ಅಚಾನಕ್ಕಾಗಿ ತಾನೆ ಅಂಬೆಗಾಲಿನಲಿನಡೆದಿರಬಹುದೇ ಪೊದೆಯೆಡೆಗೆಆ ಹಸುಳೆ?ಅಥವಾ…?ಪೊದೆಯೇನು ಬಯಲೇನುಏನಾದರೇನು ಅಸುರರೋಷಕ್ಕೆ! ಬಹುಶಃವಿಷದ ಹಾವೂ ಕೂಡ ಮರುಗಿಮುಟ್ಟದೆಭುಸುಗುಡದೆಹರಿದು ಹೋಗಿರಬಹುದು ಸುಮ್ಮನೆನಿಶಬ್ದ! ಆದರೀತ ಹಾಗಿರಲಿಲ್ಲ…ಕುದಿವ ಎಣ್ಣೆಯ ಕೊಪ್ಪರಿಗೆಯಿಂದಲೇ ನೇರಎದ್ದು ಬಂದಿದ್ದವನು!ಆ ಆಯುಧವೋ –ಒಂದೇ ಒಂದು ತುಕ್ಕಾದಪುಟ್ಟ ಸ್ಕ್ರೂಡ್ರೈವರ್ –ಅದೂ ಕೂಡ ಹೆಚ್ಚುಎನಿಸುವಂಥ ಹಸುಗೂಸು!ಒಂದೇ ಎರಡೇ…ನೂರು ಬಾರಿನೂರಾರು ಬಾರಿಚುಚ್ಚಿ ಚುಚ್ಚಿ ಮೆರೆದಿದ್ದಾನೆಹೊಸದೊಂದು ಪ್ರಯೋಗ…! ಎಂಥ ಪ್ರಾಚೀನಲಿಪಿಯೋ ಏನೋಇನ್ನೂ ಅಳಿಸಲಾಗದಹೆಣ್ಣ ಹಣೆಬರೆಹ! ಅಳಲೂ ಆಗದಆಗತಾನೆ ಕಣ್ಣು ತೆರೆದ ಹಸುಳೆಆ ಹೆಣ್ಣು!ಹೇಗೆಲ್ಲ ಕೂಗಿ ಕೂಗಿ ಚೀರಿರಬಹುದುತನಗೆ ಆಗಿನ್ನೂ ಅರಿವಿರದಆ ಹೊಚ್ಚ ಹೊಸ ನೋವಿಗೆಆ ಭಯಾನಕ ಬಾಣ ಬತ್ತಳಿಕೆ…ಗಳಿಗೆ! ***********************

ಕಂಸ…! Read Post »

ಕಾವ್ಯಯಾನ

ರೈತನ ಮಗ ನಾ

ಕವಿತೆ ರೈತನ ಮಗ ನಾ ಚಂದ್ರು.ಪಿ.ಹಾಸನ ನಾನೊಬ್ಬ ನಿಮ್ಮೆಲ್ಲರ ಅಚ್ಚ ಕನ್ನಡಿಗಹಳ್ಳಿಯ ಸೀದಾ ಸಾದಾದ ಹುಡುಗಸಿಂಪಲ್ಲಾಗೈತೆ ರೀ ನನ್ನ ಲೈಫ್ ಸ್ಟೈಲುನೋವಾದ್ರೂ ಕೊಡ್ತೀನೊಂದು ಸ್ಮೈಲು ಯಾವಾಗ್ಲು ನಾನಾಗಿರ್ತೀನಿ ಮೌನಿಒಮ್ಮೊಮ್ಮೆ ಹಿಡಿತಿರ್ತೀನಿ ಲೇಖನಿಬರೆಯೋಕ್ ಕುಂತ್ರೆ ಹುಚ್ಚನಂಗಾಗ್ತೀನಿಸುಮ್ ಸುಮ್ನೆ ತೋಚಿದ್ದು ಗೀಚ್ತೀರ್ತೀನಿ ಏನೇನೋ ಹುಚ್ಚ್ ಹುಚ್ಚಾಸೆ ಇಟ್ಕೊಂಡುಸುಮ್ನಿರ್ತೀನಿ ತಲೆ ತುಂಬಾ ಕೆಡ್ಸ್ಕೊಂಡುಅಣುಕಿಸಿದವರ ಮನಸ್ನಲ್ಲೇ ಬೈಕೊಂಡುಉತ್ತರಿಸೋಕ್ಕೆ ಸಮ್ಯಾನ್ನ ಕಾಯ್ಕೊಂಡು ಹಳ್ಳಿಯ ಸೊಗಡಲ್ಲಿ ದಿಲ್ಲೀಯಾ ಕಾಣ್ತೀನಿಕೊಳ್ಳೀಯಾ ಹಿಡಿದಾದ್ರೂ ಗುರಿ ಮುಟ್ತೀನಿಸೋತೆಜ್ಜೇಗಳೊಂದೇ ಮೆಟ್ಲಾಗುಸ್ಕೊಂಡುಸಾಗ್ತೀನಿ ಎದ್ಯಾಗೊಂದ ಛಲವಿಟ್ಕೊಂಡು ದೇಸಕ್ಕೆ ಅನ್ನ ಕೊಡೋ ರೈತಾನ ಮಗಾನಾಮೋಸಕ್ತಲೆಕೊಡೋದಿಲ್ರೀ ಜಾಯ್ಮಾನಾನಂಜಿಲ್ದಾ ವಂಶ್ದಲ್ಲಿ ಹುಟ್ಟಿದ ಕೂಸು ನಾಪ್ರೀತಿ ಸಂಬಂಧಕ್ಕ ಪ್ರಾಣಾನಾ ಕೊಡ್ತೀನಾ ಹಸನಾದ ಕಾಲಬರೋದ್ಯಾರೂ ತಿಳಿದಿಲ್ರೀಹುಟ್ಸೀದ ಸಿವನು ಸಟ್ಗೆ ಹುಲ್ಮೈಸೋದಿಲ್ರೀಕಾಲದ್ಮುಂದೇ ನಾವೆಲ್ಲ ಯಾವ್ಯಾವ್ಲೆಕ್ಕಾರೀಒಳ್ಳೇದ್ಮನಸ್ನಾಗಿಟ್ಕೊಂಡ್ ಜೀವ್ನಾನ್ಸಾಗ್ಸ್ರೀ **********************************

ರೈತನ ಮಗ ನಾ Read Post »

ಕಾವ್ಯಯಾನ

ನೆರಳು-ಬೆಳಕು

ಕವಿತೆ ನೆರಳು-ಬೆಳಕು ಕಾತ್ಯಾಯಿನಿ ಕುಂಜಿಬೆಟ್ಟು ಕಣ್ಣುಗಳಿಂದ ಉದುರುವನಕ್ಷತ್ರಗಳನ್ನುಆಕಾಶಕ್ಕೆ ಸಿಕ್ಕಿಸುತ್ತಿರುವಶಾಂತ ಇರುಳು… ಮರ ಗಿಡ ಬಳ್ಳಿಗಳುತಮ್ಮ ನೆರಳನು ಬಿಟ್ಟುಲೋಕ ಸಂಚಾರಕೆಹೊರಡುತ್ತವೆ ಕಡಲು ಭೋಗ೯ರೆಯುತಮರಳ ತೀರಕೆನೊರೆನೊರೆ ಹಾಲುಣಿಸುತ್ತನೆರಳಾಗಿಬಿಡುತ್ತದೆ ಹಕ್ಕಿಗಳು ಬೆಳಕು ರೆಕ್ಕೆಗಳನ್ನುಬಿಚ್ಚಿ ಹಾರುತ್ತ ಹಾರುತ್ತಕಪ್ಪು ನೆರಳುಗಳಾಗಿಚುಕ್ಕಿಗಳಾಗಿ ಮರೆಯಾಗುತ್ತವೆ ಈ ದೇಹದಿಂದ ಬೆಳಕೊಂದುಲೋಕ ಸಂಚಾರಕೆ ಹೊರಟಾಗನೆರಳು ನಿದ್ರಿಸುತ್ತದೆಮುಂಜಾನೆ ಮತ್ತೆ ಅದು ಮರಳಿನನ್ನನ್ನು ಪ್ರವೇಶಿಸುವವರೆಗೂ…ಒಂದು ದಿನ ಸಂಚಾರದಲ್ಲೇ ಮೈಮರೆತ ಅದುನನ್ನನ್ನೇ ಮರೆತುಬಿಡಬಹುದುನಾನು ಅದರ ನೆನಪಲ್ಲೇ ಇರುವಾಗಇನ್ನಾರದ್ದೋ ನೆರಳು ಕೊಳ್ಳಿ ಹಿಡಿದುಬೆಳಕು ಹಚ್ಚುವೆನೆಂದು ಬೆಂಕಿ ಹಚ್ಚಬಹುದು ಇರುಳಲ್ಲಿ ಸೂಯ೯ನ ನೆರಳುನಿದ್ರಿಸುತ್ತದೆಭೂಮಿಯ ನೆರಳು ತನ್ನನ್ನು ಭೂಮಿ ಅಂದುಕೊಂಡುನಿದ್ದೆಯಲ್ಲೇ ನೆರಳನ್ನೇ ಸೂಯ೯ನೆಂದು ಭ್ರಮಿಸಿಸುತ್ತುತ್ತಲೇ ಇರುತ್ತದೆ.. ಭೂಮಿಯ ಒಳಗೆ ನಾನೂ ಕೂಡನನ್ನ ನೆರಳನ್ನು ನಾನೇ ಎಂದುಕೊಂಡುಹಾಯಾಗಿ ಹಾಡನ್ನು ಹಾಡುತ್ತಿರುತ್ತೇನೆದೂರದಲ್ಲಿದ್ದರೂನೀನು ಕೇಳುತ್ತಿರುತ್ತಿ ಎಂಬಭ್ರಮೆಯಲ್ಲಿ ನಿನ್ನ ನೆರಳು ನಿನ್ನನ್ನೇ ಹುಡುಕುತ್ತಿರುತ್ತದೆನನ್ನದೇ ಬೆಳಕಲ್ಲಿ… ನಕ್ಷತ್ರಗಳಲ್ಲಿ. ********************************

ನೆರಳು-ಬೆಳಕು Read Post »

ಕಾವ್ಯಯಾನ

ನಿನ್ನ ಮೋಹಕೆ

ಕವಿತೆ ನಿನ್ನ ಮೋಹಕೆ ರೇಷ್ಮಾ ಕಂದಕೂರು ನಿನ್ನ ಮೋಹದ ಅರವಳಿಕೆಮೈಮನವ ಮರೆತ ಹಾಗಿದೆಭಾವೋನ್ಮಾದದ ಬೆಸುಗೆಗೆಬಾಚಿ ತಬ್ಬುವ ಇಳೆಯ ಪ್ರೀತಿಯಂತೆ ಸಾಚಾತನಕೆ ಪರಚಿದ ಗಾಯಮಾಸದ ಕಲೆಯ ಸ್ಥಿತಿಬೆಡಗು ಬಿನ್ನಾಣದ ರಿಂಗಣಲಗ್ಗೆ ಹಾಕುವ ನೆರೆಯ ಹಾವಳಿ ಕಣ್ಣ ಹೊಂಬೆಳಕಿನ ಕಿಡಿಹೊತ್ತಿಸಿದೆ ಅನುರಾಗದ ದೀಪ್ತಿಮೌನಕೂ ಕಸಿವಿಸಿಯಾದಂತೆಆಸರೆಯ ಒಡಲಲಿ ತವಕ ಅನುದಿನವು ಬೇಯುತಿದೆಸಹಚರಕೆ ಹಪಹಪಿಸಿದೆ ಕಂಗೆಟ್ಟುಇರುಳ ಬಾನ ತುಂಬಾ ನಗೆಯ ನಕ್ಷತ್ರಚೆಲುವಿನ ಚೈತ್ರಕೂ ಮರುಹುಟ್ಟು ವಿಸ್ಮಿತ ಪ್ರತಿಯ ಸ್ವರೂಪಸ್ವಪ್ನದಿ ಕಾಡಿದೆ ಬೆಂಬಿಡದೆಜ್ವಾಲಾಮುಖಿಯ ಆವೇಗದ ಸಂಚಾರಬೆರಗಿನ ಜಾಡು ಅನವರತ. ****************

ನಿನ್ನ ಮೋಹಕೆ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಅಮೃತ ಎಂ ಡಿ ನೋವಲ್ಲೂ ನಲಿವಿನ ಟಾನಿಕಿನ ಗುಟುಕುಂಟು ಗಾಲಿಬ್ಬದುಕೆಲ್ಲವು ಹಗದ ಮೇಲೆ ನಡೆದ ಕುರುಹುಂಟು ಗಾಲಿಬ್ ಹೇಳತಿರದ ಬೇಗೆಯೋದು ಸಜೀವ ದಹನ ಮಾಡಿದೆನಗುವಿನ ಮುಖವಾಡ ಧರಿಸಿ ಜೀವಿಸಿದ್ದುಂಟು ಗಾಲಿಬ್ ನನ್ನೊಳಗಿನ ಸಾಮರ್ಥ್ಯವನ್ನೆಲ್ಲಾ ಈ ಪ್ರೀತಿಯು ಕೊಂದಿದೆಗೈರುಹಾಜರಿಯಲ್ಲೂ ನಿರ್ಲಿಪ್ತ ಹಾಜರಿಯುಂಟು ಗಾಲಿಬ್ ನನ್ನರಸ ಮಧುಶಾಲೆಯಲ್ಲೇ ಜೀವನಪೂರ್ತಿ ಕಳೆದುಬಿಟ್ಟಬಾಳ ನೊಗಕ್ಕೆ ಹೆಗಲ್ಕೊಟ್ಟು ಹೈರಾಣಾಗಿದ್ದುಂಟು ಗಾಲಿಬ್ ಅಮ್ಮುವಿನ ನಸೀಬು ಬ್ರಹ್ಮಂಗು ಕಾರುಣ್ಯ ಪರಿಚಯಿಸಿದೆಅನುಗಾಲದ ಹೋರಾಟವು ಚಿರನಿದ್ರೆಯಲ್ಲುಂಟು ಗಾಲಿಬ್ *****************************************

ಗಝಲ್ Read Post »

ಕಾವ್ಯಯಾನ

“ಶಾವಾ”ತ್ಮ ಪದಗಳು

ಕವಿತೆ “ಶಾವಾ”ತ್ಮ ಪದಗ ಬಸಿರಿನುಸಿರು ಶಾಂತಿ ವಾಸು ಫಲವತ್ತಾದ ಮುಷ್ಟಿ ಮಣ್ಣು ಬೇಕೆಂದೆ….ಧಾರಿಣಿ, ಹುಟ್ಟಿಸಿ ನೋಡೆಂದಳು…. ನಿರ್ಮಲಾತಿನಿರ್ಮಲ ಜಲ ನೀಡೆಂದೆ….ಧರಿತ್ರಿ, ಹುಟ್ಟಿಸಿ ನೋಡೆಂದಳು…. ತಣಿಸುವ ಮಳೆ ಕಾಣದಾಗಿದೆಯೆಂದೆ…ಇಳೆ, ಹುಟ್ಟಿಸಲಾರೆಯಾ?? ಕೇಳಿದಳು…. ಮಳೆಯ ಎಳೆತರುವ ಕಾನನ ಕೊಚ್ಚಿಹೋಗಿದೆಯೆಂದೆ…ಭೂಮಿಜೆ, ಹುಟ್ಟಿಸಿ ಸಾಕಾಯಿತೇ ಪ್ರಶ್ನಿಸಿದಳು…. ಪ್ರಾಣಿ ಪಕ್ಷಿಗಳು, ಒಂದೊಂದೇ ಅಳಿಯುತ್ತಿವೆಯೆಂದೆ….ಅವನಿ, ಹುಟ್ಟಿಸು ನೋಡೋಣ ಸವಾಲೆಸೆದಳು…. ಮುಂದಿನ ಪರಂಪರೆಗೇನು ಉತ್ತರಿಸಲಿ??? ಎಂದೆ…ಭೂಮಿತಾಯಿ, ಸಕಲವ ಹುಟ್ಟಿಸುವ ಮೊದಲು, ಉಸಿರ “ಪ್ರಕೃತಿ”ಯಲ್ಲಡಗಿಸುವ ಬಸುರಾಗೆಂದಳು *****************************************************************

“ಶಾವಾ”ತ್ಮ ಪದಗಳು Read Post »

ಕಾವ್ಯಯಾನ

ನಿನ್ನಿರುವು..

ಕವಿತೆ ನಿನ್ನಿರುವು.. ವೀಣಾ ಪಿ. ನೀನಂದುನನ್ನಮುಡಿಗಿಟ್ಟುಕೊಳಲೆಂದುನಿನ್ನೊಲವಿನಉದ್ಯಾನದಿಂದೆನ್ನಕೈಗಿತ್ತಗುಲಾಬಿಯನುನಾನುಎದೆಗೊತ್ತಿಹೊತ್ತಿಗೆಯಲಿಅವಿತಿಟ್ಟುದಶ ವಸಂತಗಳುರುಳಿನಮ್ಮಿಬ್ಬರ ನಡುವೆತಲುಪಲಾಗದಭುವಿ-ಬಾನಿನಂತರವುಹರವಿಯೂಮಾಸಿಲ್ಲಅದೇಸಮ್ಮೋಹನದೊಲವುಸವಿಪ್ರೇಮ ಪ್ರೇರಣೆಯಕಡುಕೆಂಪಿನಿರುವುಅರಳಲೆಳಸಿಯೂಅರಳದುಳಿದಮೊಗ್ಗಿನಲಿಅಂದಿನಂತೆಯೇ ಇಂದೂ..ನನ್ನ ನವಿರುಭಾವದಾಂತರ್ಯದಲಿನಿನ್ನಿರುವಿನಂತೆ..!! *******************************

ನಿನ್ನಿರುವು.. Read Post »

You cannot copy content of this page

Scroll to Top