ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಡುವೆ ಸುಳಿಯುವ ಆತ್ಮ!

ಕವಿತೆ ನಡುವೆ ಸುಳಿಯುವ ಆತ್ಮ! ನಡುವೆ ಸುಳಿಯುವ ಆತ್ಮಗಂಡೂ ಅಲ್ಲ ಹೆಣ್ಣೂ ಅಲ್ಲ!ಜೇಡರ ದಾಸಿಮಯ್ಯ ನೆನಪಾದ…ಗೋಡೆಯಲ್ಲಿದ್ದ ಗೌಳಿಹಲ್ಲಿ ಲೊಚಲೊಚ ಲೊಚ್ಚಲೊಚಗುಟ್ಟಿತುಪಚಪಚ ಪಚ್ಚ ಕಾಯಿ ಕಡೆಯುತ್ತಿದ್ದ ಬೋಳಜ್ಜಿಥತ್! ಅಪಶಕುನ! ಎಂದಳು.ಹೊಟ್ಟೆಗಂಟಿಕೊಂಡ ಬಿಳಿ ಮೊಟ್ಟೆಯನ್ನು ಹೊತ್ತಹೆಣ್ಣು ಜೇಡವುಗೋಡೆಯ ಮೇಲಿಂದವರಹಾವತಾರ ಕ್ಯಾಲೆಂಡರಿನ ಭೂಮಂಡಲದಮರೆಗೆ ಸರಿಯಿತು! ದಾಸಿಮಯ್ಯನ ಈ ವಚನ ಕಂಠಪಾಠ ಅವನಿಗೆ!ಪ್ರತಿ ಭಾಷಣದಲ್ಲೂ ಸ್ತ್ರೀ… ಸ್ತ್ರೀ… ಎಂದು ಸಂವೇದನೆಯಇಸ್ತ್ರೀ ಸೀರೆಸೀರೆಗಳಿಗೆ ಜೋರಲ್ಲೇ ಎಳೆಯುತ್ತಿರುತ್ತಾನೆವೇದಿಕೆಯಲ್ಲಿ!ಮನೆಯಲ್ಲಿ ‘ನಸ್ತ್ರೀ ಸ್ವಾತಂತ್ರ್ಯಂ ಅರ್ಹತಿ!’ಇಸ್ತ್ರಿಯೇ ಇಲ್ಲದ ಹರಕು ಸೀರೆಯಲ್ಲಿಬಾಯಿ ಮುಚ್ಚಿಕೊಂಡೇ ಹೆಂಡತಿಯೋಜನಗಂಧಿಯರ ಮೀನು ಹೂವು ಮೂರಿಗಂಧ ಬೆರೆತುಬೆಂತರಾದಅವನ ಶರ್ಟ್ ಪ್ಯಾಂಟು ಬನಿಯನ್ನು ನಿಕ್ಕರನ್ನುಅವನೇ ಎಂಬಂತೆಬಟ್ಟೆಯೊಗೆಯುವ ಕಲ್ಲಿಗೆ ರಪರಪನೆ ಬಡಿದುಕೈ ಕಾಲುಗಳಲ್ಲಿ ಹಿಡಿದುಕರುಳನ್ನು ಹಿಂಡಿ ಹಿಪ್ಪೆ ಮಾಡಿನೇಲೆಹಗ್ಗದಲ್ಲಿ ಸುಡುಸುಡುವ ಸೂರ್ಯನಡಿಯಲ್ಲಿಒಣಗಲು ಹಾಕಿಉರಿಯುತ್ತ ಬೆವರಲ್ಲಿ ಮೀಯುತ್ತಾಳೆತಾನೇ ಒಣಗಿ!ಸ್ತ್ರೀಪರ ಭಾಷಣಗಾರನ ಹೆಂಡತಿ ಇವಳು! ಲಕ್ಕಿ!ಎಂದು ಬೆಟ್ಟು ತೋರಿದಾಗನಡು ಸಂತೆಯಲ್ಲೇ ಬತ್ತಲಾದವಳಂತೆಓಡಿ ಬರುತ್ತಾಳೆ ಅವಳು! ಅವಲಕ್ಕಿ ಕಟ್ಟನ್ನು ಎದೆಗೊತ್ತಿಕೊಂಡೇ! ಕಡ್ಡಿಗಳು ಮುರಿದುಬೆನ್ನುಮೂಳೆ ಬಾಗಿ ಸುಕ್ಕು ತೊಗಲು ಬಟ್ಟೆ ಹರಿದು ಅವನುಮುಲ್ಲೆಗೆ ಬಿಸಾಕಿರುವ ಕೊಡೆಯ ಪಳೆಯುಳಿಕೆಯಂತಹ ಅಮ್ಮಗಂಡನಿಗೆ ತೆರೆದುಕೊಳ್ಳದೆಗಾಳಿಯಲ್ಲಿ ಆಕಾಶಕ್ಕೆ ತಿರುವುಮುರುವಾಗಿಗರಿಬಿಚ್ಚಿ ಹಾರಿದ ‘ಸಿರಿ’ ಭೂತದ ಕ್ಷಣಗಳನ್ನುಮೆಲುಕು ಹಾಕುತ್ತ ತನ್ನಸೊಸೆಯು ಕರಿಮಣಿ ಹರಿದು ಹಿಡಿಸೂಡಿಗೆ ಕಟ್ಟುವಗಳಿಗೆಗಾಗಿ ಮೈಯೆಲ್ಲ ಕಣ್ಣಾಗಿ ಕುಳಿತಿದ್ದಾಳೆ!ಗಂಡು ಪ್ರಾಣಿಯ ತಲೆತುದಿ ಕಂಡರೆ ಸಾಕು…ಈ ಹಳೇಕೊಡೆಯು ನಾಗರಹಾವಾಗಿ ಸುಯುಂಪಿಭುಸುಗುಟ್ಟುತ್ತದೆ ಮಲಗಿದಲ್ಲೇ ಹೆಡೆ ಅರಳಿಸಿ! ಕೈಗೆ ಮೈಕ ಸಿಕ್ಕಿದರೆ ಸಾಕು ಅದಕ್ಕೇಹೆಬ್ಬಾವಿನಂತೆ ಸುತ್ತಿಕೊಂಡು ಸ್ತ್ರೀಯರನ್ನೇ ನುಂಗುವಂತೆ ನೋಡುತ್ತಎಂಜಲು ಮಾತುಗಳನ್ನು ಕಕ್ಕುವ ಈ ಮಾರಾಯಕರಿಮಣಿ ಎಂಬ ಉರುಳು ಕಟ್ಟಿತವರಿನ ಹಟ್ಟಿಯನ್ನು ಬಿಟ್ಟು ಬರಲಾರೆ ಎಂದುಕಣ್ಣೀರಿಡುತ್ತಿದ್ದ ಎಳೆ ಪ್ರಾಯದ ಕನ್ನೆಯನ್ನು ಹೆಂಡತಿಯೆಂದುಎಳೆದುಕೊಂಡೇ ಬಂದು… ಅವಳುನಿತ್ಯದಂತೆ ಅಳದಿದ್ದರೆ… ಸಂಶಯದಲ್ಲೇ ಅಳೆದು ಅಳೆದುಅವಳು ಹೆತ್ತ ಹೆಣ್ಣು ಕೂಸಲ್ಲಿ ಯಾರ್ಯಾರದ್ದೋಕಣ್ಣು ಮೂಗನ್ನು ಹುಡುಕುತ್ತಾನೆ! ಭಾಷಣ ಕೇಳಿ…ಅಬ್ಬಾ… ಹೆಣ್ಣುಹೃದಯವೇ! ಅಂದುಕೊಂಡುಅವನಲ್ಲಿ ನೀನು ಅಣ್ಣನೋ ತಮ್ಮನೋ ಗೆಳೆಯನೋಅಂದುಕೊಂಡು…ಸೆಕ್ಸ್ ಒಂದನ್ನು ಬಿಟ್ಟುಹೆಣ್ಣುದೇಹದ ಮುಟ್ಟು ಮಾಸಿಕ ಬಸಿರು ಬಾಣಂತನಮಲಮೂತ್ರ ನೆತ್ತರು ಸತ್ತರು… ಲಂಗು ಪುಸ್ಕುಕಷ್ಟ ಸುಖ ಮಾತಾಡಿ ನೋಡಂತೆ ಹಗಲು!ಆ ಅವನಿಗೆ ಮೈಲಿಗೆಯಾಗಿಬಿಡುತ್ತದೆಒಂದು ಕೆಜಿ ಹುಣಸೆಹುಳಿ ಕಿವುಚಿದ ಮುಖದಲ್ಲೇಆಕಾಶದಿಂದ ದೇವರ ಮೂಗಿಂದಲೇಉದುರಿದ ದೇವಪಾರಿಜಾತದಂತೆಮೈಗೆ ಅತ್ತರು ಬಳಿದುಕೊಳ್ಳುತ್ತಾನೆಮನಸ್ಸು ಕೊಳೆತು ನುಸಿ ಹಾರುತ್ತಿರುತ್ತದೆ!ಆ ರಾತ್ರಿಯೇ ತೀರ್ಥದಲ್ಲಿ ಮಿಂದುನಿನಗೆ ಸೆಕ್ಸ್ ಮೆಸ್ಸೇಜ್ ಕಳುಹಿಸಿಹಾಸಿಗೆಗೆ ಬರುತ್ತೀಯ? ಅನ್ನುತ್ತಾನೆ…ನೀನು ಥೂ! ಅನ್ನುತ್ತೀಯ… ಅವನ ಮುಖಕ್ಕೇಉಗುಳುವ ಧೈರ್ಯ ಸಾಲದೆ!ನಿನ್ನ ಉಗುಳು ನಿನ್ನ ಮುಖಕ್ಕೇ ಬೀಳುವ ಭಯದಲ್ಲಿ!ಅವನ ಬಾರ್ ಗೆಳೆಯರು ಬರೋಬ್ಬರಿ ನಗುವಲ್ಲಿತೇಲಿ ಮುಳುಗಿ ಕೊಚ್ಚಿಕೊಂಡು ಹೋಗುತ್ತಿರುತ್ತಾರೆಅದುವರೆಗೂ ಅವರು ನೋಡಿಯೇ ಇರದನಿನ್ನ ಅಂಗಾಂಗಗಳ ವರ್ಣನೆಯಲ್ಲೇನಿನಗೆ ಆಕಾರ ಕೊಡುತ್ತ…ಬಟ್ಟೆ ತೊಡಿಸಿ ಒಂದೊಂದ್ಶಾಗಿ ಬಿಚ್ಚುತ್ತ…ತಥ್! ಹಗುರವಾಗಲು ಅವಳಲ್ಲಿ ಹೇಳಿಯೇಬಿಟ್ಟಿಯಾ?ಎಲ್ಲ ಹೇಳಿಬಿಟ್ಟೆಯಾ? ಸರಿ, ಅನುಭವಿಸು ಇನ್ನು!ಕಿವಿಗಳಿಗೆರಡು ಹೂ ಸಿಕ್ಕಿಸಿಕೊಂಡ ಆ ಮಡಿಬೆಕ್ಕುಮಿಡಿನಾಗಿಣಿಯಂತೆ“ಮಿಡಿ ಧರಿಸಿಕೊಂಡವರು ಮಡಿವಂತರಲ್ಲ…ಇಡಿಧರಿಸಲಿಕ್ಕೇನು ಧಾಡಿ? ಅವನನ್ನು ಬುಟ್ಟಿಗೆ ಹಾಕಿಕೊಳ್ಳಲುನೋಡಿ ಸೋತು… ಅಪಪ್ರಚಾರ ಮಾಡುತ್ತಿದ್ದಾಳೆ ಈ ಹಡಬೆ!”ಎಂದು ಗೋಡೆಗೋಡೆಗಳಿಗೂ ಇಲ್ಲದ್ದನ್ನು ಉಸುರಿಬಿಲ ಸೇರಿ ಭುಸುಗುಡುತ್ತಿರುತ್ತಾಳೆ…ಥೇಟ್ ಧಾರವಾಹಿಯ ನೀಲಿ ರೆಪ್ಪೆಯಮೀಡಿಯಾಳ ಹಾಗೆ!ಒಳಗೊಳಗೇ ಸಂಚು ಮಾಡುವ ಗುಳ್ಳೆನರಿಯಂತೆಮುಖ ತೋರಿಸದೆ ಓಡಾಡುತ್ತಾಳೆ!ಪ್ಚ್ ಪ್ಚ್!ತನ್ನ ಬಲೆಯಲ್ಲಿತಾನೇ ಸಿಕ್ಕಿಹಾಕಿಕೊಂಡ ಜೇಡನಂತೆ…ತನ್ನ ಮಾನಕ್ಕೆ ತಾನೇ ಬಟ್ಟೆ ಹೆಣೆಯುತ್ತ ಹೆಣೆಯುತ್ತನೆತ್ತರ ಕೊನೆಯ ಬಿಂದು ಕಾಲಿಯಾಗುವವರೆಗೂದೇಹವನ್ನು ಮಡಿಬಲೆಗೇ ಸುತ್ತಿಕೊಳ್ಳುತ್ತ ಸುತ್ತಿಕೊಳ್ಳುತ್ತಅವಳು ಈಗ ಈಗ ಸತ್ತಳು! ಮುಚ್ಚಿದ ಬಾಗಿಲೊಳಗೆಸೀರೆ ಸೆರಗಿನ ಅಂಚಿಗೆ ಬೆಂಕಿ ಭಗ್ಗೆಂದು ಹಿಡಿದುಕೆಂಪು ಕೆಂಪು ಗೆಣಸಿನಂತೆ ಭಗಭಗ ಮೈ ಬೇಯುವಾಗಲೂಕಿಟಕಿಯಿಂದ… “ ಸೀರೆ ಕಿತ್ತು ಬಿಸಾಡು! “ಎಂದು ಅರಚುವ ಗಂಡಸರಮುಂದೆಸೀರೆ ಕಳಚಿ ಎಸೆದು ಬತ್ತಲಾಗಿ ಜೀವ ಉಳಿಸಿಕೊಳ್ಳಲು ನಾಚಿ! ಛೆ!ಆತ್ಮಕ್ಕಂಟಿಕೊಂಡ ಹೆಣ್ಣುಮೈಯನ್ನು ಕಳಚಿ ಎಸೆಯಲಾಗದ ಸಂಕಟಕ್ಕೆಸುಟ್ಟು ಬೂದಿಯಾಗಿಬಿಟ್ಟಳು! ಗಂಡುಸಂತೆಯಲ್ಲಿ ಬಣ್ಣಬಣ್ಣದ ಶೀಲ ತುಂಬಿಕೊಂಡಉರುಟು ಚೌಕ ಆಯತ ತ್ರಿಕೋನ… ಆಕಾರ ಆಕಾರಗಳ ಹೆಣ್ಜುಕುಪ್ಪಿಬಾಟಲಿಗಳು ಮಾನದಲ್ಲೇ ಹರಾಜಾಗುತ್ತಿರುತ್ತವೆಮಾನ ಕಳಕೊಂಡು ಬೇಲಿಯ ಅಂಚಲ್ಲೇ ಒಡೆದುಖಾಲಿ ಬಿದ್ದಿರುತ್ತವೆ!ಅಡುಗೆ ಮನೆಯಲ್ಲಿ ಬೋಳಜ್ಜಿನಿರಾಕಾರದ ಹಿಟ್ಟನ್ನು ನಾದಿ ನಾದಿಆಕಾರದ ರೊಟ್ಟಿ ಕಾಯಿಸುತ್ತಹಿಟ್ಟಿನ ಮುದ್ದೆಯಂತೆ ಒಲೆ ಮುಂದೆಕಾಯುತ್ತಿರುತ್ತಾಳೆ ಅಜ್ಜನನ್ನು! ಅಜ್ಜ ನೆಟ್ಟ ಆಲದಮರದ ಬೇರಿಗೆಒಂದು ಹೂವಿಟ್ಟು ಅರಶಿನ ಕುಂಕುಮ ಬಳಿದುಊದುಬತ್ತಿಕಡ್ಡಿ ಹಚ್ಚಿ ದಿನಾ ನೂರ ಎಂಟು ಸುತ್ತು ಹಾಕದಿದ್ದರೆಮದುವೆಯಾಗುವುದಿಲ್ಲ ಮಕ್ಕಳಾಗುವುದಿಲ್ಲಬಂಜೆಗೊಡ್ಡಾಗುತ್ತಿ ಎಂದು ಸಹ್ಸ್ರನಾಮಾರ್ಚನೆ ಮಾಡುಮಾಡುತ್ತಲೇಸತಿ ಹೋದ ಆ ಅಜ್ಜಿಯ ನೆನಪಲ್ಲೇ ಉದ್ದಲಂಗದ ಮಗಳುಜೀವಮಾನವಿಡೀ ಮರಕ್ಕೆ ಸುತ್ತು ಹೊಡೆಯುತ್ತಲೇ ಇರುತ್ತಾಳೆಕುಪ್ಪಸದ ಬೆನ್ನು ಹೊಕ್ಕಳು ಹೊಟ್ಟೆಯ ಚರ್ಮಸುಕ್ಕಾಗಿಮೊಲೆಗಳು ಜೋತುಬೀಳುವವರೆಗೂಮೆದುಳನ್ನೇ ಕೊಂಬಚೇಳು ಕಚ್ಚಿಹಿಡಿದಾಗದೇವರಕಿಂಡಿಗೆ ಹಣೆ ಚಚ್ಚಿಕೊಳ್ಳುತ್ತಾಳೆ ಆಗ…ಜೇಡರ ದಾಸಿಮಯ್ಯ ಹೇಳಿದಗಂಡೂ ಅಲ್ಲದ ಹೆಣ್ಣೂ ಅಲ್ಲದ ಆತ್ಮವನ್ನುದೇವರು ಹುಡುಕಲು ಹೊರಡಬೇಕೆಂದುಕೊಳ್ಳುತ್ತಾನೆಶರ್ಟ್ ತೊಡಲೇ ಸೀರೆ ಉಡಲೇ!ಎಂದು ಕನ್ನಡಿಯ ಮುಂದೆ ಬತ್ತಲೆ ನಿಂತುತಲೆ ಕೆರೆದುಕೊಳ್ಳುತ್ತ! ********************************** ಕಾತ್ಯಾಯಿನಿ ಕುಂಜಿಬೆಟ್ಟು

ನಡುವೆ ಸುಳಿಯುವ ಆತ್ಮ! Read Post »

ಕಾವ್ಯಯಾನ

ನೆನಪಾಗುತ್ತಾರೆ

ಕವಿತೆ ನೆನಪಾಗುತ್ತಾರೆ ಡಾ.ಯ.ಮಾ.ಯಾಕೊಳ್ಳಿ ನೆನಪಾಗುತ್ತಾರೆಈ ಇವರುಬಿಸಿಲು ತಾವುಂಡು ಬೆಳದಿಂಗಳಬೆಳೆಯ ಬೆಳೆದವರುಕತ್ತಲೆಯ ಗಾಡಾಂಧಕಾರದೊಳಗೆಯುಬೆಳಕು ಪಂಜನು ಹಿಡಿದುಬೆಳಗ ಹಂಚಿದವರು ಕರುಣೆ ಪ್ರೀತಿ‌ ಮಾತ್ರಇಲ್ಲಿ ಬದುಕ ಉಳಿಸಬಹುದುಎಂದು‌ ಬಲವಾಗಿ ನಂಬಿಅದರ ಬೀಜವನೆ ಬಿತ್ತಿದವರುಅಂಗುಲಿಮಾಲನ ಕ್ರೂರ ಎದೆಯೊಳಗುಪ್ರೀತಿ ಅರಳಿಸಬಹುದೆಂದುತಿಳಿದವರು ವಸ್ತ್ರ ವಡವೆ ಅಧಿಕಾರ ಅಂತಸ್ತುಎಲ್ಲವನು ಧಿಕ್ಕರಿಸಿಮನುಷ್ಯತ್ವಕ್ಕಿಂತ‌ ಮಿಗಿಲಾದುದಿಲ್ಲವೆಂದವರು ನುಡಿಯಹದನ ಕಿಂತ ನಡೆಯ ಬೆಳಕಹರಡಿದವರು ನಮ್ಮ ನಡುವೆ ಎಲ್ಕವೂನಿಂತಂತೆನಿಸಿರುವಾಗಮುಚ್ಚಿದ ಬೀಗವ ತಗೆಯವಕೊಂಡಿಯಂತಿವರುಮತ್ತೆ‌ ಮತ್ತೆ ನೆನಪಾಗುತ್ತಾರೆ ಬಂಧಗಳನು ಒಗ್ಗೂಡಿಸುವಮಂತ್ರದಂಡದಂತೆ!ಮರೆಯದೆ ಹೋಗಬೇಕಿದೆಅಲ್ಲಿಗೆರಾಜ್ಯ ಬಿಟ್ಟವರ,ತುಂಡು‌ಬಟ್ಟೆ ತೊಟ್ಟವರಎಲ್ಲ ನಮ್ಮವನೆಂದವರಅಕ್ಷರದ ಬಲವಿಡಿದುಸಮಾನತೆಯಹೊತ್ತಗೆಯನಿತ್ತವರ ಬಳಿಗೆ…ಮತ್ತೆ‌ಮತ್ತೆ ನೆನಪಾಗುವಅವರದೆ ಆಸರೆಗೆ *************************** ಡಾ.ವೈ.ಎಂ.ಯಾಕೊಳ್ಳಿ

ನೆನಪಾಗುತ್ತಾರೆ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ರತ್ನ ರಾಯಮಲ್ಲ . ಬದಲಾಗುವ ಋತುಮಾನಗಳಲ್ಲಿ ನೀನೇ ನನ್ನ ವಸಂತನಿನಗಾಗಿ ಮನೆ-ಮಠಗಳನ್ನು ತೊರೆದ ನಾನೇ ನಿನ್ನ ಸಂತ ಶಶಿಗೂ ಬೆಳದಿಂಗಳನು ನೀಡಿರುವ ಚಂದ್ರಮುಖಿ ನೀನುಹೃದಯದಿ ನಿನಗಾಗಿ ಪಾರಿಜಾತ ಹೂ ನೆಟ್ಟ ಹೃದಯವಂತ ನೀನು ಇಲ್ಲದ ಕತ್ತಲೆ ವೈರಿಯಾಗಿ ಕಾಡುತ್ತಿದೆ ಅನುದಿನವೂನಿನಗಾಗಿ ಪ್ರೇಮದ ಕಂದೀಲು ಹಿಡಿದು ಕುಳಿತಿರುವ ಗುಣವಂತ ವಿರಹವನ್ನೇ ಹಾಸಿ ಹೊದ್ದುಕೊಂಡು ಮಲಗಿರುವೆ ನೆನಪಿನಲ್ಲಿನಿನಗಾಗಿ ಸರಸದ ಪಲ್ಲಂಗ ಹಾಕಿರುವೆನು ಪ್ರೀತಿಯ ಸಿರಿವಂತ ನಿನಗೋಸ್ಕರ ಹಗಲನ್ನು ತಡೆದು ನಿಲ್ಲಿಸುತಿರುವನು ಈ ಮಲ್ಲಿಆಗಸದ ತಾರೆಗಳನ್ನು ನಿನ್ನ ಮುಡಿಗಾಗಿ ಹೆಣೆದ ಕಲಾವಂತ ****************************

ಗಝಲ್ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಎ . ಹೇಮಗಂಗಾ ಕಲ್ಲುಮುಳ್ಳುಗಳ ಹಾದಿಯಲ್ಲಿ ನಡೆಯುತ್ತಲೇ ಇದ್ದೇನೆ ನಾನೇಕೆ ಹೀಗೆಕಷ್ಟ ಕಾರ್ಪಣ್ಯಗಳಲ್ಲಿ ಮುಳುಗುತ್ತಲೇ ಇದ್ದೇನೆ ನಾನೇಕೆ ಹೀಗೆ ಮೇಲೇರಬೇಕೆಂದರೂ ಕಾಲು ಹಿಡಿದು ಜಗ್ಗುವವರೇ ಹೆಚ್ಚುನಿತ್ಯ ಬೆನ್ನಿಗೆ ಇರಿಸಿಕೊಳ್ಳುತ್ತಲೇ ಇದ್ದೇನೆ ನಾನೇಕೆ ಹೀಗೆ ಮೋಡಿ ಮಾತುಗಳಿಗೆ ಮರುಳಾದರೂ ಎಚ್ಚೆತ್ತುಕೊಳ್ಳಲಿಲ್ಲಕುಹಕಿಗಳ ನೋಟಕೆ ಗುರಿಯಾಗುತ್ತಲೇ ಇದ್ದೇನೆ ನಾನೇಕೆ ಹೀಗೆ ಬೆಳ್ಳಗಿರುವುದೆಲ್ಲಾ ಹಾಲೆಂಬ ನಂಬಿಕೆ ಹೆಜ್ಜೆಹೆಜ್ಜೆಗೂ ಹುಸಿಯಾಗಿದೆವಂಚನೆಯ ಹಾಲಾಹಲವ ಕುಡಿಯುತ್ತಲೇ ಇದ್ದೇನೆ ನಾನೇಕೆ ಹೀಗೆ ಬೇಲಿಯೇ ಎದ್ದು ಹೊಲ ಮೇಯುವ ಕಾಲ ಇದಲ್ಲವೇ ಹೇಮತಿದ್ದಲಾಗದ ನನ್ನ ನಾನು ಹಳಿಯುತ್ತಲೇ ಇದ್ದೇನೆ ನಾನೇಕೆ ಹೀಗೆ ************************

ಗಝಲ್ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ರೇಷ್ಮಾ ಕಂದಕೂರ ಮಾತು ಮೌನಗಳ ನಡುವಿನ ಸಮರಕೆ ಕೊನೆಯಿಲ್ಲಸಹನೆಯ ಹೆಸರಿಗೆ ಕಿಂಚಿತ್ತೂ ಬೆಲೆಯಿಲ್ಲ ರೋಗಗ್ರಸ್ತ ಮನಸಿಗೆ ಉಪಶಮನದ ಅವಶ್ಯಕತೆ ಇದೆಚಿಗುರೊಡೆದೆ ಬಾಂಧವ್ಯಕೆ ಸಹಕಾದರ ಬಳುವಳಿಯಿಲ್ಲ ಜಗದ ಜಂಜಡಕೆ ನಿತ್ಯ ರಂಗುರಂಗಿನ ಆಟಉದ್ವೇಗ ವಿಷಾದದ ನಡುವಿನ ಪ್ರಸ್ತಾವನೆಗೆ ಕೊನೆಯಿಲ್ಲ ಬಡಿವಾರದಿ ಊಹಾಪೋಹಗಳು ತುಂಬಿ ತುಳುಕಿವೆಹಮ್ಮಿನ ಕೋಟೆಯಲಿ ಮೆರೆದವರಿಗೆ ಉಳಿಗಾಲವಿಲ್ಲ ಅಂಗಲಾಚಿ ಬೇಡುತಿದೆ ಭಿನ್ನತೆಗೆ ವಿರಮಿಸೆಂದು ರೇಷಿಮೆ ಮನಒಳಗಣ್ಣು ತೆರೆಯದೆ ನಿರ್ಣಯಿಸಿದರೆ ಕೊಡಲಿ ಏಟಿಗೆ ಕೊನೆಯಿ *****************************

ಗಝಲ್ Read Post »

ಕಾವ್ಯಯಾನ

ಹಗಲಲಿ ಅರಳದ ವಿರಹಿಣಿ

ಕವಿತೆ ಹಗಲಲಿ ಅರಳದ ವಿರಹಿಣಿ ಅನಿತಾ ಪಿ. ಪೂಜಾರಿ ತಾಕೋಡೆ ಅಂದು…ಹಿಂದೆಂದೂ ಮೂಡದ ಒಲವೊಂದು ಅನುವಾದಾಗಅವನ ಹಿರಿತನವನು ಮರೆತುನನ್ನ ಮಗುತನವನೇ ಪೊರೆದುಇತಿ ಮಿತಿಯ ರೇಖೆಗಳಿಂದ ಮುಕ್ತವಾಗಿಹಕ್ಕಿಹಾಡನು ಮನಬಿಚ್ಚಿ ಹಾಡಿದಾಗಲೆಲ್ಲಅವನು ಕೇಳುತ್ತಿದ್ದುದೊಂದೇ ನಿತ್ಯ ದಗದಗಿಸುತ್ತಲೇ ಊರೂರು ಸುತ್ತುವಮುಟ್ಟಿದರೆ ಮುನಿದು ಬಿಡುವಕಟು ಮನಸ್ಸಿನ ಸೂರ್ಯ ನಾನುಎಲೇ ಮುದ್ದು ಪಾರಿಜಾತವೇನಾನೆಂದರೆ ನಿನಗ್ಯಾಕೆ ಇಷ್ಟೊಂದು ಪ್ರೀತಿ ಆಗ…ನನ್ನಾಲಯದಲ್ಲಿ ಅವನು ಇನ್ನಷ್ಟು ಪ್ರಕಾಶವಾಗುತ್ತಿದ್ದಬೆಳ್ಳನೆ ಹೊಳಪು ಕೇಸರಿ ಕದಪಿನಲಿ ರಂಗು ಮೂಡಿಅವನಿರುವಿನಲಿ ಇನಿತಿನಿತಾಗಿ ಕರಗುತ್ತಲೇನಾನೆಂದಿಗೂ ನಿನ್ನವಳೆನ್ನುತಿದ್ದೆ ಅವನೂ ಸುಮ್ಮನಿರುತಿರಲಿಲ್ಲನನ್ನ ಇತಿಹಾಸವನೇ ಬಯಲಿಗೆಳೆಯುತಿದ್ದಸುರಭಿ ವಾರಿಣಿಯರ ಸಾಲಿನವಳುಕ್ಷೀರ ಸಮುದ್ರದೊಳವಿರ್ಭವಿಸಿದಪಂಚವೃಕ್ಷಗಳಲಿ ನೀನೋರ್ವಳುಇಂದ್ರನ ನಂದನವನದಲ್ಲಿ ಪಲ್ಲವಿಸಿದವಳುಸತ್ಯಭಾಮೆಯೊಲವಿಗೆ ಕೃಷ್ಣ ನ ಜೊತೆ ಬಂದವಳುನಿನಗ್ಯಾಕೆ ನನ್ನ ಸಾಂಗತ್ಯ ಬಯಕೆ? ವಾದ ವಿವಾದಗಳ ನಡುವೆ ಪ್ರೀತಿ ನಿಜವಾಗಿದ್ದು ಸುಳ್ಳಲ್ಲನನಗೂ ಅವನಿಗೂ ಬಾನು ಭುವಿಯಷ್ಟೇ ಅಂತರವಿದ್ದರೂಕ್ಷಣಕ್ಷಣಕೂ ನನ್ನ ಸನ್ನಿಧಿಯಲ್ಲೇ ಇರುತಿದ್ದನಲ್ಲಾ… | ಕೆಲವೊಮ್ಮೆ ಕಪ್ಪು ಮೋಡ ಕವಿದುಪರಿಛಾಯೆಯ ಲವಲೇಶವಿಲ್ಲದೆಹೇಳದೇ ಕೇಳದೇ ಏಕಾಏಕಿ ಮರೆಯಾದಾಗಕಾಯುವಿಕೆ ಅಸಹನೀಯವಾಗಿಅವನ ಓರಗೆಯವರಲ್ಲಿ ವಿಚಾರ ಮಾಡಿದ್ದುಂಟುಅವನ ಕ್ಷೇಮದ ಸುದ್ದಿ ತಿಳಿಯಲು ಹುಚ್ಚಳಾಗಿದ್ದುಂಟು ನಿತ್ಯ ಹೊಸದಾಗಿ ಅರಳುವ ನಾನುಒಂದೊಂದು ನೆಪ ಹೇಳಿ ಇಲ್ಲವಾಗುವ ಅವನುಮತ್ತೆ ಬಂದು ಹೇಳುವ ಕಥೆ ವ್ಯಥೆಗಳುಬಾಗುವಿಕೆಯಿಲ್ಲದೆ ಕ್ಷೀಣವಾಗುತಿಹ ಭಾವಾನುರಾಗಗಳುಹೀಗೆಯೇ ನಡೆದಿತ್ತು ವರ್ಷಾನುವರ್ಷ ಅದೇ ವಿರಹದ ಸುಳಿಯಲ್ಲಿ ನಲುಗಿನಾನೀಗ ಹಗಲಲಿ ಎಂದೂ ಅರಳದ ವಿರಹಿಣಿ ಯಾರೂ ಸುಳಿಯದ ಕಪ್ಪಿರುಳಿನಲಿಮೊಗ್ಗು ಮನಸು ಹದವಾಗಿ ಒಡೆದುನೆಲದ ಮೇಲುರುಳಿ ಹಗುರಾಗುತ್ತೇನೆಅವ ಬರುವ ವೇಳೆಯಲಿಅದೇನೋ ನೆನೆದು ಬಿದ್ದಲ್ಲೇ ನಗುತ್ತೇನೆ.ನಮ್ಮೀರ್ವರ ಮಾತಿರದ ಮೌನಕೆಒಳಗೊಳಗೆ ಸುಡುವ ಝಳದಲಿ ತೆಳುವಾಗುತ್ತೇನೆ ಅವನೂ ಹಾಗೆಯೇ ಕಂಡೂ ಕಾಣದಂತೆಮೂಡಣದಿಂದ ಪಡುವಣಕ್ಕೆ ತಿರುಗುತ್ತಲೇ ಇರುತ್ತಾನೆನಾನೂ ನೋಡು ನೋಡುತ್ತಲೇನೆಲದ ಗುಣವನು ಒಪ್ಪಿಕೊಳ್ಳುತ್ತೇನೆಬರುವ ನಾಳೆಯಲಿ ಮತ್ತೆ ಗೆಲುವಾಗಲು ***************************.

ಹಗಲಲಿ ಅರಳದ ವಿರಹಿಣಿ Read Post »

ಕಾವ್ಯಯಾನ

ಎಲ್ಲಾ ಹೆಣ್ಣು ಹೆಣ್ಣು ಹೆಣ್ಣು

ಕವಿತೆ ಎಲ್ಲಾ ಹೆಣ್ಣು ಹೆಣ್ಣು ಹೆಣ್ಣು ಸುಧಾ ಹಡಿನಬಾಳ ಹೇ ದುರುಳ ವಿಕೃತ ಕಾಮಿಗಳೆನಿಮ್ಮ ದಾಹ, ಕ್ರೌರ್ಯಕೆ ಕೊನೆಯಿಲ್ಲವೇನು? ನೀವು ಪೂಜಿಸುವ ಜಗನ್ಮಾತೆ ಹೆಣ್ಣುನಿಮ್ಮ ಹೆತ್ತ ಜನ್ಮದಾತೆ ಹೆಣ್ಣುನಿಮ್ಮ ಪೊರೆವ ಭೂಮಿತಾಯಿ ಹೆಣ್ಣುನಿಮ್ಮ ಮನೆ ಬೆಳಗುವ ಮಡದಿ ಹೆಣ್ಣುಮನೆತುಂಬ ಕಿಲ ಕಿಲ ಗೆಜ್ಜೆನಾದ ಹೆಣ್ಣುಎಲ್ಲಾ ಹೆಣ್ಣು ಹೆಣ್ಣು ಹೆಣ್ಣುಆದರೂ ಅನ್ಯ ಹೆಣ್ಣಿನ ಮೇಲೇಕೆ ನಿಮ್ಮ ಕಣ್ಣು? ಒಮ್ಮೆ ಯೋಚಿಸಿ ಕಲ್ಪಿಸಿಕೊಳ್ಳಿನಿಮಗೂ ಒಬ್ಬ ಹೆಣ್ಣು ಮಗಳಿದ್ದುಅವಳ ಮೇಲೂ ಇಂತದೆ ಭಯಾನಕದೌರ್ಜನ್ಯ, ಕ್ರೌರ್ಯ ನಡೆದರೆಸಹಿಸಲಾದೀತೇ ಊಹಿಸಿಕೊಳ್ಳಲಾದೀತೇ? ಎಲ್ಲಾ ಹೆಣ್ಣು ಮನೆಯ ಮಕ್ಕಳಂತಲ್ಲವೆ?ಸಾಕು ನಿಲಿಸಿ ನಿಮ್ಮ ವಿಲಾಸೀ ಪೌರುಷವತಣಿಸಿಕೊಳ್ಳಿ ಮಡದಿಯಿಂದಲೇ ನಿಮ್ಮ ದಾಹವಬದುಕಲು ಬಿಡಿ ಹೆಣ್ಣು ಸಂಕುಲವಉಳಿಸಿ ಗೌರವಿಸಿ ಅವರ ಸ್ವಾತಂತ್ರ್ಯವ *****************************

ಎಲ್ಲಾ ಹೆಣ್ಣು ಹೆಣ್ಣು ಹೆಣ್ಣು Read Post »

ಕಾವ್ಯಯಾನ

ಕಳೆದವರು

ಕವಿತೆ ಕಳೆದವರು ಅಬ್ಳಿ ಹೆಗಡೆ. ಕಳೆದವರು ನಾವುಕಳೆದವರು.ಉಳಿದಿಹ ಗಳಿಕೆಯನಿತ್ಯವೂ ಎಣಿಸುತ್ತಬೆಳೆಸಲಾಗದ್ದಕ್ಕೆಅಳುವವರು.ಘಾಢಕತ್ತಲಿನಲ್ಲಿಕಪ್ಪುಪಟ್ಟಿಯು ಕಣ್ಗೆಎಲ್ಲೆಲ್ಲೊ ಗುದ್ದುತ್ತಒದ್ದಾಡುವವರು.ಚೆಲುವ ನಂದನದಲ್ಲಿಎಂದೆಂದೂ ನಿಂತಿದ್ದುಕಣ್ಣಹಸಿವಿಂಗದಲೆಸಾಯುವವರು.ಪ್ರೀತಿಯಮ್ರತದ ಕಲಶಎದೆ ನೆಲದಿ ಹೂತಿಟ್ಟುಪ್ರೀತಿಯಾ ಬರದಲ್ಲೆಬದುಕಿ ಸತ್ತವರು.ದೀಪವಾರಿದ ಕೋಣೆಕತ್ತಲಲೆ ಕುಳಿತಿದ್ದುಕಪ್ಪು ಶಾಯಲಿ ಬೆಳಕಗೆರೆಯೆಳೆವರು.ನಡೆವ ಹಾದಿಯ ಬದಿಗೆಆಲದ ನೆರಳಿದ್ದೂಬಿಸಿಲಲ್ಲೆ ಮಲಗಿದ್ದುದಣಿವ ಕಳೆವವರು.ತನ್ನೊಳಗೇ ಅನಂತಶಾಂತಿಯ ಕಡಲಿದ್ದುಶಾಂತಿಯ ಹುಡುಕುತ್ತಸಂತೆಯಾದವರು.ಕಳೆದವರು ನಾವುಕಳೆದವರು.ಎಷ್ಟುಕಳೆದರೂ ಸ್ವಲ್ಪಉಳಿದವರು. **********************

ಕಳೆದವರು Read Post »

ಕಾವ್ಯಯಾನ

ಏಕಾಂತ… ಮೌನ…

ಕವಿತೆ ಏಕಾಂತ… ಮೌನ… ಡಾ.ಕಾತ್ಯಾಯಿನಿ ಕುಂಜಿಬೆಟ್ಟು ನಿನ್ನೆ ಆಗಸದಲ್ಲಿಇರುಳಿನ ಹೊಕ್ಕುಳಲ್ಲಿಅರಳಿದ್ದ ಹೂವು ಇಂದು ಬಾಡುತ್ತಿದೆ ಅದರ ಎಸಳುಗಳನ್ನುನಾಳೆ ಭೂಮಿಯಲ್ಲಿ ಹುಡುಕಬೇಕು… ಹುಣ್ಣಿಮೆ – ಅಮಾವಾಸ್ಯೆಗಳನಡುವೆ ಮನವನ್ನು ಸವರಿಕೊಂಡುಕರಗಿ ಹೋದ ಪರಿಮಳವನ್ನುಗಾಳಿಯಲ್ಲಿ ಅರಸಬೇಕುದೀಪ ಹುಡುಕುವ ಕುರುಡನಂತೆ ನಿನ್ನೆ ಚಂದಿರ ನನ್ನ ಕೈಯಏಕತಾರಿಯಾಗಿದ್ದನಾಳೆ ನಾನೇ ಬೆಂಕಿ ಉರಿವ ಮಡಕೆಯಾಗುತ್ತೇನೆ ಅವನ ಕೈಯಲ್ಲಿ.ನಾಳಿದ್ದು…!ಉಳಿಯುವುದು ಬರೇಏಕಾಂತ… ಮೌನ… ***************************

ಏಕಾಂತ… ಮೌನ… Read Post »

ಕಾವ್ಯಯಾನ

ಜೀವನ ಜಲಧಿ

ಕವಿತೆ ಜೀವನ ಜಲಧಿ ವೃತ್ಯಾನುಪ್ರಾಸ ಕವನ ಶುಭಲಕ್ಷ್ಮಿ ಆರ್ ನಾಯಕ ಜೀವನವು ಜಂಜಡದ ಜಟಿಲ ಜಲಧಿಸಹನೆ ಸದಾಚಾರದಿ ಸಾಗು ಸಮಚಿತ್ತದಿಹೂವಂಥ ಹೊಂಗನಸ ಹೊತ್ತು ಹೃದಯದಿಮನಕೆ ಮಾಧುರ್ಯವೀವ ಮಾತೃ ಮಮತೆಯಲಿ// ಸುಖದುಃಖಗಳ ಸುಮನದಿ ಸ್ವೀಕರಿಸಿ ಸಾಗಲಿಬದುಕಿನ ಬವಣೆಗಳ ಬೇಗುದಿಯ ಬದಿಗಿಡುತನಮ್ರತೆಯಲಿ ನಗುನಗುತ ನಲುಮೆಯ ನೀಡುತಸನ್ನಡತೆಯಲಿ ಸಮಾಜಕ್ಕೆ ಸಂದೇಶ ಸಾರುತ// ಅತ್ಯಾಚಾರ ಅನಾಚಾರ ಅಂಧಕಾರವ ಅಳಿಸುವಹೆಣ್ಣುಗಳ ಹಿಂಸಿಸುವ ಹಮ್ಮೀರರ ಹತ್ತಿಕ್ಕುವಕಪಟ ಕಾಮಗಳಿಗೆ ಕಡಿವಾಣವ ಕಟ್ಟುವಮೋಸದ ಮಾಯೆಗೆ ಮದ್ದರೆದು ಮಣಿಸುವ// ನೋವು ನಲಿವುಗಳಿಗೆ ನಗುತ ನಮಿಸುವಬದುಕು ಬರಡಾದರೂ ಭರವಸೆಯಲಿ ಬದುಕುವಆತ್ಮವಿಶ್ವಾಸ ಆಶಾಭಾವದಲಿ ಆಡುತ ಆನಂದಿಸುವತಾಮಸವ ತೊಲಗಿಸಿ ತನ್ನರಿವಲಿ ತೇಲುವ// ****************************

ಜೀವನ ಜಲಧಿ Read Post »

You cannot copy content of this page

Scroll to Top