ಹೇ ದೇವಾ
ಹೇ ದೇವಾ ಗಂಗಾಧರ ಬಿ ಎಲ್ ನಿಟ್ಟೂರ್ ನಾನಾ ವಿಧದ ಶೃಂಗಾರವೈಭವದ ಅಲಂಕಾರಮನಬಂದಂತೆ ಜೈಕಾರಅಡ್ಡಬಂದವರಿಗೆ ಹೂಂಕಾರಅವ್ಯಾಹತ ಶವದ ಮೆರವಣಿಗೆಯುಗಯುಗಾಂತರ ದೈವ ಧರ್ಮದ ಸುಳಿಯಲಿಗಿರಕಿ ಮನುಷ್ಯತ್ವದ ನೆಲೆನಾಕ ನರಕಕೆ ನೈವೇದ್ಯ ಹಿಡಿದ ಗುತ್ತಿಗೆದಾರರ ಕಪಿಮುಷ್ಟಿಯಲಿನಿಜ ಬದುಕಿನ ಕಗ್ಗೊಲೆ ತನ್ನ ಬೇಲಿಯೊಳಗೆಎನಿತು ಮುಳ್ಳುಗಳು ಮಾನವಚುಚ್ಚಿದರೂ ರಕುತ ಹೀರಿದರೂಬೇಲಿಯೊಳಗೇ ಅರಳುವ ಭಾವ ಇದೇನು ಕುರಿಗಳ ಬಲಿಯೋಗಾವಿಲರ ಭಂಡತನವೋಸಾತ್ವಿಕರ ಮೌಢ್ಯದ ಕನ್ನಡಿಯೋಅಂತೂ ಲೋಕಕಿನ್ನೂನಿನ್ನಾಗಮನದ ನಿರೀಕ್ಷೆ ಹೇ ದೇವ ***************************









