ಸಂಕ್ರಾಂತಿ ಕಾವ್ಯ ಸುಗ್ಗಿ ಖುಷಿ ಬೆಳೆಯಬಹುದು. ತಮ್ಮಣ್ಣ ಬೀಗಾರ ಅದೆಲ್ಲೋ ಕಾಣಿಸಿದಬಣ್ಣದ ಚಂಡಿನಂತಹುದೊಂದು ಟಿವಿಯಲ್ಲಿ ಕಾಣಿಸಿತುಮತ್ತೆ ಮತ್ತೆ ಕಾಣುತ್ತ ಜಗತ್ತನ್ನೇ ಆವರಿಸಿತುಜನರೆಲ್ಲ… ದಿಕ್ಕೆಟ್ಟು ಓಡತೊಡಗಿದರುಚಂಡು ಚಂಡಲ್ಲ… ಉದ್ಯೋಗವನ್ನು ಉಂಡುಹಾಕಿತುಯಾರು ಯಾರನ್ನೋ ಹಿಡಿದು ಬಡಿದು ಆಸ್ಪತ್ರೆ ಸೇರಿಸಿತುಮತ್ತೆ ಅದರದ್ದೇ ಸುದ್ದಿ ಹಾಗೂ ಲದ್ದಿವಿಮಾನ ನಿಲ್ಲಿಸಿ ರೈಲು ಬಂಧಿಸಿಬರಿಗಾಲಲ್ಲಿ ಓಡಿಸಿತು… ಜನರನ್ನು ಪೀಡಿಸಿತುಯಾರು ಯಾರೋ ಈ ಚಂಡನ್ನು ಹಿಡಿದುಗೋಲು ಹೊಡೆದರುಕೆಲವರು ಬಹುಮಾನ ಪಡೆದರು… ಇನ್ನೂ ಕೆಲವರುರೂಪಾಂತರಿಸಿ ಮಾರಿದರು… ಕರಾಳ ಚಿತ್ರ ಬರೆಸಿನಾಲ್ಕು ದಾರಿಯಲ್ಲಿ ನೆಟ್ಟು ಹೆದರಿಸಿದರುಬರಬರುತ್ತ ಚಂಡು ಸಹಜವಾಯಿತುಆದರೆ ಬದುಕು ಸಹಜವಾಗಲಿಲ್ಲಕೆಲವರ ಹೊಟ್ಟೆಯಲ್ಲಿ ಚಂಡು ಆಡುತ್ತಲೇ ಇದೆಈಗ ಅದಕ್ಕೆ ಸೂಜಿ ಚುಚ್ಚಿಪುಸ್ಸ್‍ಗೊಳಿಸಿ ಆಟ ನಿಲ್ಲಿಸುತ್ತಾರಂತೆಮತ್ತೆ ಸಂಕ್ರಾಂತಿಯ ಬಣ್ಣದ ಕಾಳಿನಂತೆಸವಿಮಾತು ಕೇಳುತ್ತಿದೆಸಕ್ಕರೆ ಕಾಳು ಕರಗಿದಂತೆ ಕಷ್ಟ ಕರಗಬಹುದುಅಥವಾ ಸವಿಮಾತೂ ಕರಗಬಹುದುಹಬ್ಬದ ಪ್ರೀತಿಯ ಬೆಸುಗೆ ನಮ್ಮಲ್ಲಿ ಇದ್ದರೆ…ಖುಷಿ ಬೆಳೆಯಬಹುದು.
ಸಂಕ್ರಾಂತಿ ಕಾವ್ಯ ಸುಗ್ಗಿ ಕತ್ತಲೆಯನ್ನು ಹಿಂಜಿ ಪಡೆದ ಬೆಳಕು ಹೇಮಾ ಸದಾನಂದ್ ಅಮೀನ್ ಕಣ್ಣೆದುರು ಹಾದುಹೋಗುವ ಚಿತ್ರಗಳನ್ನುದಂಗಾಗಿ ನೋಡುತ್ತಿದ್ದಂತೆ ಎಲ್ಲವೂಹೊಸದಾಗಿ ಕಾಣಿಸಿಕೊಳ್ಳುವವುಅಪರಿಚಿತ ನಗರದ ಸಂತೆಯಲ್ಲಿಮಾರಾಟದ ಸರಕುಗಳಾಗಿ ಹರಾಜಿಗೆಕಾದು ಕುಳಿತ ವಸ್ತುಗಳಲ್ಲಿಒಂದಿಷ್ಟು ಭಾವನೆಗಳೂ ತಿಳಿಯದಂತೆಮಾರಿ ಹೋಗುವುದು ಸಾಂತ್ವನದ ಕ್ಷಣದಲ್ಲಿ ಹೊಸ ಪರಿಚಯಜೀವವೀಣೆ ತಳಿದು ಮಿಡಿದ ತಂತಿಯಲೆಕ್ಕ ತಪ್ಪಿಹೋದರೂ ಸೋಜಿಗವಲ್ಲ‘ ಸಬ್ ಚಲ್ತಾ ಹೈ’ ಎಂಬ ದನಿಯಲಿಕರಗಿದ ಮೌನ ಆಗಾಗ ಮಿಸುಕಾಡಿದರೂಮಾತಿನ ಚೌಕಟ್ಟಿನಾಚೆ ಸ್ತಬ್ದವಾಗುವಲಾಲಿ ಹಾಡುಗಳನ್ನು ನೀವೂ ಕೇಳಿರಬಹುದು ಇದು ನಶೆ, ಇದ್ದುದ್ದನ್ನು ಮರೆತುಇಲ್ಲದರ ಹಿಂದೆ ಧಾವಿಸುವ ಮತ್ತುತೊದಲು ಹೆಜ್ಜೆಗಳನ್ನಿಡುತ್ತಾ ಕಂಪನದ ಕೈಗಳಿಂದಕತ್ತಲೆಯನು ಬಿಡಿ ಬಿಡಿಯಾಗಿ ಹಿಂಜಿಬೆಳಕಿನ ರೂಪ ಕೊಡುವ ಹುಚ್ಚು ಹಠದಲಿಗೆದ್ದವರು ಸೋತವರು ಒಂದೇ ಗ್ರಹದಒಂದೇ ಮನೆಯ ಜೀವಿಗಳೆಂದರೆ ,ನಿಮಗೂ ಆಶ್ಚರ್ಯವಾದಿತು!
ಸಂಕ್ರಾಂತಿ ಕಾವ್ಯ ಸುಗ್ಗಿ ಕಾಲನ ಬೆನ್ನೇರಿ ರೇಷ್ಮಾ ನಾಯ್ಕ ಕಾಲ ಎಂದರೆ ಶೂನ್ಯವಲ್ಲಅದು ಮಾನವನಆಸೆ ಆಕಾಂಕ್ಷೆಗಳ ಆಗರ. ಇದೋ ನೋಡು ಚಕ್ರದಂತೆವರುಷ ವರುಷ ಮೇಲಕ್ಕೇರುತ್ತಲೇತೀಕ್ಷ್ಣ ಕಣ್ಣಿಗೂಮಣ್ಣೆರೆಚಿ ಮಾಯ. ಒಮ್ಮೆಲೆ ಓಡಲಾರದೇಇಂದು ನಾನು, ನಾಳೆ ನೀನುಹುಟ್ಟು ಸಾವುಗಳಹಗಲು-ರಾತ್ರಿಯಆಟವಾಡುತ್ತದೆ. ಭೂತ , ಸೂರ್ಯನಿಂದಾಚಿನನೆರಳು..ವರ್ತಮಾನ, ಶ್ರಾವಣ ಹಬ್ಬಗಳಹೂರಣ..ಭವಿಷ್ಯ , ಮಿಂಚಿನಂಚಿನದಿಗಂತ. ನೂರು ಆಸೆಗಳೆಂಬಬಾನಕ್ಕಿಗಳು ರೆಕ್ಕೆಬೀಸಿ ಕರೆದಿವೆಮತ್ತದೇ ಪಯಣಕ್ಕೆ . ದೂರ ಸನಿಹಗಳು.,ಹಳತು ಹೊಸತುಗಳ.,ಕಾಲನ ಬೆನ್ನೇರಿ ಸರಿಯುತ್ತಿವೆ..ಕೈಗೆ ಸಿಕ್ಕು ಸಿಗದಂತೆಬೂರಲದ ಅರಳೆಯಂತೆ. ಹನ್ನೆರಡು ಅಂಕಿಗಳು.. ಗಂಟೆ, ನಿಮಿಷ , ಸೆಕೆಂಡುಗಳು..ಸಂಕ್ರಮಣದ ಹರಿವಿನತ್ತಸಾಗುವವು,ಜೀವದ ರಭಸದಬಂಡಿಯನೇರಿ. ನವ ವಸಂತಕ್ಕೆಹೊಸ ಭರವಸೆಯರಕ್ಷೆಯನಿಕ್ಕಿ ,ತೂಕಾಟ ತೇಕಾಟನೀಗದ ಜಂಜಾಟಕ್ಕೆನಿಶಬ್ಧದ ಬಾಗಿಲಿಕ್ಕಿ.
ಸಂಕ್ರಾಂತಿ ಕಾವ್ಯ ಸುಗ್ಗಿ ಬಂಜರು ತೊರೆಯಲಿ ರೇಶ್ಮಾಗುಳೇದಗುಡ್ಡಾಕರ್ ಮತ್ತೆ ಮತ್ತೆ ನೋಡಲುಏನಿದೆ ಇಲ್ಲಿ ಸಾಕಷ್ಟು ಬಂಜರುನೆಲದ ಬರಿದಾಗದೆಜೀವನದ ಭಾಗವೇ ಆಗುತ್ತಿದೆ …???ಹೊಸ ಹೊಸ ಮುಖವಾಡಗಳುಎದುರಾಗಿವೆ ತಮ್ಮ ಸ್ವರೂಪ ಬದಲಿಸಿಸ್ನೇಹ ಬೇಡುತ್ತವೆ ಕಳ್ಳ ಮನಸ್ಸಿನೊಂದಿಗೆ ..! ಮಾಡಿ ಗುಡ್ಡಹಾಕುವಷ್ಟು ವಾಸ್ತವ ಇದ್ದರುಕಾಣದ ಭವಿಷ್ಯದ ಕನಸು ಬೇಡ ಎಂದರುಕಾಡುವದು …..ಇರುವದೆಲ್ಲವ ಬಿಟ್ಟು ….. ನಡೆದಂತೆಆದರೆ ಸಾದ್ಯವಿಲ್ಲ ಅಲ್ಲವೇ ?ತಟ್ಟನೆ ಎಳೆಯುವದು ಸಾಂಧರ್ಭಿಕ ಬದುಕುಸಾಕು ನಿಲ್ಲಿಸು ನಿನ್ನ ತಲ್ಲಣವ ಎಂದು … ನೀರಿನಲ್ಲಿ ಬಣ್ಣಬಿಡುವ ಬಟ್ಟೆಯಂತೆಬಂಧ ಬದಲಾದಾಗಹುಡುಕಾಟ ಏತಕ್ಕೆ ? ಬಣ್ಣಕ್ಕೊಬಂಧಕ್ಕೊ ?ಮತ್ತದೆ ನೆನಪು , ಆಗಾಗ ಈಬದುಕಿಗೆ ಬೇಕು ಸುಂದರ ಮರೆವು !ಮಿಥ್ಯ ಅರಿಯಲುಮನವ ಗಟ್ಟಿ ಮಾಡಲು …. ದಿನಗಳು ಉರುಳುವವು ರಭಸವಾಗಿಹರಿದು ನದಿಯಂತೆಮತ್ತೆ ನೋಡ ನೊಡುತ್ತಲೆ ಹೊಸವಸಂತನ ಆಗಮನ ಆತ್ಮೀಯತೆಇದ್ದರೆ ವರ್ಷಗಳು ಕಾಪಿಡುತ್ತವೆಎದೆಯೊಳಗೆ ಬೆಚ್ಚಗೆ …..ಹೃದಯ ಕಲ್ಲಾಗಿ ಉಳಿದರೆದಿನದರ್ಶಿಕೆ ತೆಪ್ಪಗೆ ಒಂದೊಂದೆಮೂಲೆ ಸೇರುತ್ತದೆ ನಗುತ್ತಾ …..!ಮಾನವನ ಬರಗಾಲಕ್ಕೆ . ********************************************************
ಸಂಕ್ರಾಂತಿ ಕಾವ್ಯ ಸುಗ್ಗಿ ಹೊಸ ವರುಷ ಅಕ್ಷತಾ ಜಗದೀಶ ಹೊಸ ವರುಷದ ಮೊದಲ ಹಬ್ಬಅದೇನೋ ಉಲ್ಲಾಸಹೊಸದೊಂದು ಚೈತನ್ಯಹೊಸ ಉಡುಗೆ ಉಟ್ಟುಮುಡಿ ತುಂಬ ಹೂ ಮುಡಿದುಸಖಿಯರೊಡನೆ ಕೂಡಿಕೊಂಡುಎಳ್ಳು ಬೆಲ್ಲ ಹಂಚುವ ಹಬ್ಬಬಂದಿದೆ ನೋಡು ಸಂಕ್ರಾಂತಿಹಬ್ಬ….. ಅಂಗಳದ ತುಂಬ ರಂಗವಲ್ಲಿ ಬಿಡಿಸಿಬಾನಂಗಳದಲ್ಲಿ ಗಾಳಿಪಟ ಹಾರಿಸಿಎತ್ತುಗಳಿಗೆ ಬಣ್ಣ ಹಚ್ಚಿಕಿಚ್ಚು ಹಾಯಿಸುವ ಹಬ್ಬಮರಳಿ ಬಂದಿದೆ ಸಂಕ್ರಾಂತಿ ಹಬ್ಬ.. ದಕ್ಷಿಣದಿಂದ ಉತ್ತರಾಭಿಮುಖವಾಗಿ ಸೂರ್ಯಪಥ ಬದಲಿಸುವ ಮುಹೂರ್ತವೇಮಕರ ಸಂಕ್ರಾಂತಿಈ ಕ್ಷಣವದು ರೈತನ ಮೊಗದಲ್ಲಿಮೂಡಿಸಿದೆ ಸುಗ್ಗಿ ಹಬ್ಬದಕಾಂತಿ.. ಧಾನ್ಯ ಸಿರಿಯನ್ನು ಬರಮಾಡಿಕೊಂಡುಎಳ್ಳು ಬೆಲ್ಲದ ಸವಿಯ ಉಂಡುಹೊಸ ಪಥದ ಕಡೆಗೆ ಸಾಗಲಿನಮ್ಮ ಪಯಣಬಾಳಲಿ ಮೂಡಲಿ ನಲಿವಿನಚರಣ..ಆಹಾ! ಸುಗ್ಗಿ ಸಂಭ್ರಮದ ಹಬ್ಬಮರಳಿ ಬಂದಿದೆ ಸಂಕ್ರಾಂತಿ ಹಬ್ಬ… **********************************
ಸಂಕ್ರಾಂತಿ ಕಾವ್ಯ ಸುಗ್ಗಿ ಹುಡುಕಾಟ ಮಾಲತಿ ಶಶಿಧರ್ ನಾವು ಬಂದದ್ದಾರೂ ಯಾವಾಗ?ಹುಡುಗಿಯರ ಜಡೆ ಎಳೆದುಬೈಯಿಸಿಕೊಳ್ಳುತ್ತಿದ್ದ ತರಗತಿಯಿಂದ ಇಲ್ಲಿಗೆಮಿಸ್ಸಿನ ಬೆನ್ನಿಗೆ ರಾಕೆಟ್ ಬಿಟ್ಟುಕಿವಿ ಹಿಂಡಿಸಿಕೊಂಡ ಕಾರಿಡಾರ್ನಿಂದ ಇಲ್ಲಿಗೆ.. ನಾವು ಮರೆತದ್ದಾದರೂ ಯಾವಾಗ?ಉಗುರುಗಳ ಮೇಲೆ ಬಿಳಿ ಚುಕ್ಕಿ ಇಟ್ಟುಪುರ್ರೆಂದು ಹಾರಿ ಹೋಗುತ್ತಿದ್ದ ಬೆಳ್ಳಕ್ಕಿಗಳಹಿಡಿದು ಬೆಂಕಿಪೊಟ್ಟಣದಲಿ ಬಂಧಿಸುತ್ತಿದ್ದಮಿಂಚುಹುಳಗಳ ನಾವು ಬೆಳೆದದ್ದಾದರೂ ಯಾವಾಗ?ನಮ್ಮ ಕನಸುಗಳು ಚಿಕ್ಕದಾಗಲು ಬಿಡುತ್ತಾಮನಸುಗಳಿಗೆ ಮಾತಿನಲೇ ಬೆಂಕಿ ಇಡುತ್ತಾ ಒಂದೇ ಒಂದು ಬಾರಿ ಹತ್ತಾರು ವರ್ಷ ಹಳೆಯಕ್ಯಾಲೆಂಡರ್ ತೆಗೆದುಬಾಲ್ಯದಾಟವನ್ನೇ ಆಡದ ದಿನಾಂಕದ ಮೇಲೆಬೆರಳಿಡುವ ಆಟವಾಡೋಣವೇ??ಹೊಚ್ಚ ಹೊಸ ಕ್ಯಾಲೆಂಡರ್ ತೆಗೆದುಮನಸ್ಸು ಬಿಚ್ಚಿ ನಕ್ಕ ದಿನವಹುಡುಕುವ ಆಟವಾಡೋಣವೇ?? ***************************************
ಕಾಫಿಯಾನ ಗಝಲ್
ಕಾಫಿಯಾನ ಗಝಲ್ ಜಬೀವುಲ್ಲಾ ಎಂ. ಅಸದ್ ಇರುಳಲ್ಲಿ ಹಚ್ಚಿಟ್ಟ ದೀಪಗಳ ಬೆಳಗು ಹಗಲಲ್ಲಿ ಮಾಯವಾಗಿದೆಹೃದಯದಲ್ಲಿ ಹುದುಗಿದ್ದ ಪ್ರೇಮದ ಬೀಜ ಈಗ ಮೊಳಕೆಯಾಗಿದೆ ಕಾಣದ ಭರವಸೆಯ ಕರಪಿಡಿದು ನಡೆದಿರುವೆ ಸುಮ್ಮನೆ ಎಲ್ಲಿಗೋನೆನಪಿನಾಗಸ ಗುಡುಗಿ ಧೋಗುಟ್ಟಿ ಸುರಿದು ಮನಸ್ಸು ಹಸಿಯಾಗಿದೆ ಹೃದಯದ ಹಾದಿಯಲ್ಲಿದೆ ನಿನ್ನ ಹೆಜ್ಜೆ ಗುರುತುಗಳ ಕಾಡುವ ಸದ್ದುಮದ್ದಿಲ್ಲದ ಮನದ ನೋವಿಗೆ ಕಣ್ಣ ಕಂಬನಿ ಸಾಂತ್ವನವಾಗಿದೆ ನಶ್ವರದ ಬಾಳಿದು ಸಾರ್ಥಕವಾಗಿಸಬೇಕು ಶಾಶ್ವತೆಯ ಅರಸದಿರುಮುಂಜಾವಿಗೆ ಅರಳಿ ಘಮಘಮಿಸಿದ ಸುಮ ಸಂಜೆಗೆ ಸಾವಾಗಿದೆ ಕಾಣದ ಕಿಚ್ಚು ಹುಚ್ಚೆದ್ದು ಹಬ್ಬಿ ಸುಡುತ್ತಿಹುದು ಸಂಬಂಧಗಳನ್ನುಒಡಲ ಕಾವು ಜೀವದ ಹಾಡಾಗಿ ಕಲ್ಲು ಕರಗುವ ಸಮಯವಾಗಿದೆ ಚಿಗುರುವ ಲತೆಗೆ ಬಳಸಿ ಹಬ್ಬಲು ಮರವೊಂದು ಅಸರೆ ಬೇಕಿದೆಯಮುನಲೆಗಳ ಮೇಲೆ ನಾವೆಯೊಂದು ತೇಲುವ ಶವವಾಗಿದೆ ನನ್ನ ನಿನ್ನ ನಡುವಿನ ಮೌನ ಅಲಾಪಗೊಂಡು ಕಡಲಾಗಿ ಮೊರೆಯುತ್ತಿದೆಅಸದ್ ಹೆಪ್ಪುಗಟ್ಟಿದ ನೋವು ತಾಜ್ ಮಹಾಲಿನ ದಟ್ಟ ನೆರಳಾಗಿದೆ
ಪುಟತಿರುಗಿಸುವ ಮುನ್ನ
ಕವಿತೆ ಪುಟತಿರುಗಿಸುವ ಮುನ್ನ ನೂತನದೋಶೆಟ್ಟಿ ಅವನಿಗೆ ಗೊತ್ತುಇದುಕೊನೆಯಿರದ ನಾಳೆಯೆಂದುದಿನವೂ ಓಕುಳಿಯಾಡುತ್ತ ಬರುತ್ತಾನೆಕಾಮನಬಿಲ್ಲನ್ನು ಗುರುತಿಗಿರಿಸಿ ತೆರಳುತ್ತಾನೆಎಂದಾದರೂ ಒಂಟಿಯಾಗಿಸುತ್ತಾನೆಯೇ? ಚಂದ್ರತಾರೆಯರನ್ನು ಕಳಿಸುತ್ತಾನೆಕತ್ತಲೆಗೆ ಹೊಳಪ ತುಂಬಲುಕಾಯಿಸುತ್ತಾನೆ ಪ್ರೇಮಿಯಂತೆವಿರಹವಿರದ ಬಂಧುರದಿಂದ ಗಿಡ, ಮರ, ಹಕ್ಕಿಗಳಿಂದ ಕಲಿಸುತ್ತಾನೆನಲಿವು, ನೋವು, ಹಸಿವು, ನಿದ್ದೆಪ್ರೇಮ, ಸ್ನೇಹಎಂಥ ಮಾಯಗಾರನೋ ನೀನುಏನು ಕನಸುಗಾರ ! ಕಳೆದ ದಿನಗಳ ನೆನಪಿಸದೆಪಡೆಯಲುಕನವರಿಸದೆಕೊಡುವ ನಿರಂತರತೆಯಲ್ಲಿಧನ್ಯನಾಗುತ್ತೀಯಲ್ಲ ! ನಾವು ಕಲಿತದ್ದಾದರೂ ಏನು!ದಿನಗಳ ಲೆಕ್ಕ,ಕೊಡುವ ಕೊಂಬ ಸಂಚು !ವರುಷ ವರುಷಗಳ ಹಪಹಪಿ ಮತ್ತೆ ನಾಳೆ ಬಂದೇ ಬರುತ್ತಾನೆಅದೇ ಬೆಳಕು, ಬಣ್ಣ, ಅಂದ ಹೊಸತೆಂಬ ಪರದೆಯನ್ನುಕಣ್ಣಿಗಂಟಿಸಿಕೊಂಡುನೋಡುವ ನಾವುಪುಟತಿರುಗಿಸುತ್ತೇವೆಭ್ರಮೆಯಲ್ಲಿ. ————————-
ಪುಟತಿರುಗಿಸುವ ಮುನ್ನ Read Post »
ಅಂದಿಗೂ- ಇಂದಿಗೂ
ಕವಿತೆ ಅಂದಿಗೂ- ಇಂದಿಗೂ ನಾಗರೇಖಾ ಗಾಂವಕರ ನಾನು ಹುಟ್ಟಿದಾಗ ಇದೆಲ್ಲ ಇರಲೇ ಇಲ್ಲ,ಬಣ್ಣಬಣ್ಣದ ಅಂಗಿ ತೊಟ್ಟು,ಕೇಕು ಚಾಕಲೇಟುಗಳ ಹಂಚಿರಲೇ ಇಲ್ಲ. ಅಡಿಯಿಡಲು ಕಲಿತಂತೆ ಕೋಳ್ಗಂಬಕ್ಕೆ ಕಟ್ಟಿದಕಾಲಕುಣಿಕೆ ಬಿಚ್ಚಿ ಹೊರಗಡಿಯಿಟ್ಟಾಗಚೂಪುಕಲ್ಲೊಂದು ಕಾಲ ಬಗೆದಾಗಕಲ್ಲಿಗೆ ಎರಡೇಟು ಬಿಗಿದುಮತ್ತೆ ನಡೆದಾಗ ನನಗೆಭಯವಾಗಿರಲಿಲ್ಲ, ನೋವೂ.. ಅಮ್ಮನ ಕೈ ತೊಟ್ಟಿಲತೂಗಲೇ ಇಲ್ಲ.ಜೋಗುಳವ ಅವಳಿಗೆಂದೂಹಾಡಲಾಗಲೇ ಇಲ್ಲ,ಹಗಳಿರುಳು ದುಡಿದ ಮೈ ಹಾಸಿಗೆಕಂಡಾಗ ಬಿದ್ದದ್ದು, ಮರುದಿನ ಎದ್ದದ್ದು,ಮತ್ತೆ ಬಗಲಿಗೇರಿದ್ದು,ಅದೇ ಹರಕು ಬುಟ್ಟಿ, ಅದರಲ್ಲೆರಡು ರೊಟ್ಟಿತುತ್ತಿನ ಚೀಲ ತುಂಬಬೇಕಿತ್ತಲ್ಲಮತ್ತೆ ಗದ್ದೆ ಹಾಳೆಯ ಮೇಲೆ ಕಟ್ಟಿಟ್ಟಹುಲ್ಲಿನ ಹೊರೆ ಅವಳಿಗಾಗೇಕಾದಿರುತ್ತಿತ್ತಲ್ಲ,ಆದರವಳ ಪ್ರೀತಿಯ ಬೆಚ್ಚನೆಯ ನೆರಳುಸದಾ ನನ್ನ ತಡುವುತ್ತಲೇ ಇತ್ತಲ್ಲಾ.. ನಾ ದೊಡ್ಡವಳಾದಾಗ, ಎದೆ ಮೂಡಿ ನಕ್ಕಾಗಕೆನೆಮೊಸರು, ಬೆಲ್ಲ ಕೊಬ್ಬರಿ ಸಿಕ್ಕಲೇ ಇಲ್ಲ,ಕಣ್ಣು ಕಿಸಿದು ನೋಡುವ ಗಂಡುಗಳುನಮ್ಮ ಸುತ್ತಲೂ ಇರಲೇಇಲ್ಲ.ಅಣ್ಣಂದಿರು ಮಾವಂದಿರು ಎಂದೂಬಂಧಕ್ಕೆ ಹೊರತಾಗಿ ನಡೆದುಕೊಳ್ಳಲೇ ಇಲ್ಲ.ಪ್ರೀತಿಯ ಹಂಚುವುದರಲ್ಲಿಜಿಪುಣತೆ ಇರಲಿಲ್ಲ. ಗದ್ದೆ ಕೆಲಸದ ಹೆಣ್ಣಾಳುಮೇಲುದರಿ ಬಿಚ್ಚಿ ಸೊಂಟಕ್ಕೆ ಸುತ್ತಿ,ಮೀನಖಂಡದವರೆಗೂ ಸೀರೆ ಎತ್ತಿ ದುಡಿವಾಗಅವಳಂದವ ಯಾರೂ ಕದ್ದುನೋಡುತ್ತಿರಲಿಲ್ಲ ಕಾಣಬಾರದ್ದಕಾಣುವ ಕಣ್ಣುಗಳು ಇರಲೇ ಇಲ್ಲ. ಇಂದಿಗೆ ….ಹೀಗೆಲ್ಲ ಇತ್ತೆಂದರೆ ನಂಬಲಾಗುವುದೇ ಇಲ್ಲ









