ಮಳೆ
ಕವಿತೆ ಮಳೆ ಮಾಲತಿ ಶಶಿಧರ್ ಆಗಿಂದಲೂ ಮಳೆಯೆಂದರೆಎಲ್ಲಿಲ್ಲದ ಹುಚ್ಚುಬರುತ್ತಿದ್ದ ಹಾಗೆಮೈಮೇಲಿನ ಪ್ರಜ್ಞೆಕಳೆದುಕೊಂಡುತೋಳುಗಳ ಚಾಚಿನನ್ನುದ್ದ ಅಗಲಆಳಕ್ಕೆ ಇಳಿಸಿಕೊಳ್ಳುವಷ್ಟು ಈ ಮಳೆಯದ್ದೊಂತರತಕರಾರುಬಂದರೆ ಪ್ರವಾಹಬರದಿರೆ ಬರ ಉಕ್ಕಿದ ಪ್ರವಾಹಕ್ಕೆಸಿಕ್ಕಿದ ಕಾರಿನ ಟೈರ್ ನಂತೆ ತೇಲುವುದುಬರದಲ್ಲಿ ಬರಡು ನೆಲದಂತೆಬಿರುಕು ಬಿಡುವುದು ಹೃದಯ ಎಂದೋ ಒಂದು ದಿನಸಮಾಧಾನದಲಿ ಬಂದ ಮಳೆತುಟಿ ಕಟಿ, ಎದೆ ಬೆನ್ನುಹೊಟ್ಟೆ ಹೊಕ್ಕಳುಮೀನಖಂಡ ತೊಡೆಗಳನ್ನೆಲ್ಲಾಹಾಗೆ ಮೃದುವಾಗಿ ಸೋಕಿಹೊರಟುಬಿಡುತ್ತದೆ ಆಮೇಲೆ ಅದು ಬಾನು ನಾ ಭೂಮಿಆದರೂ ಸೆಳೆತಅಯಸ್ಕಾಂತ ದಗೆ ಚಳಿ ಯಾವುದರಲ್ಲೂಸಮಯ ಸರಿಯುವುದೇ ಇಲ್ಲಾಸದಾ ಅದಕ್ಕಾಗೇ ಕಾಯೋನನ್ನೆದೆಯ ಕೇರಿ ಕೇರಿಯಲ್ಲೂಅದರದ್ದೇ ಜಾತ್ರೆ.. ******************************









