ಅಷ್ಟೇ ಸಾಕು.
ಕವಿತೆ ಅಷ್ಟೇ ಸಾಕು. ಅಬ್ಳಿ,ಹೆಗಡೆ ಈ…ನೀರವದೊಳಗೂಸಂತೆಯ ಗಿಜಿ,ಗಿಜಿ.ಈ ರೌರವದೊಳಗೂಏನಾದರೊಂದು ಖುಷಿ,ಸಂಭ್ರಮ ನನ್ನೊಟ್ಟಿಗೆ.ಒಂಟಿತನದ ನಂಟುಬಾದಿಸುವದಿಲ್ಲ ನನ್ನ ನನ್ನೊಟ್ಟಿಗಿನ ಸಂಜೆಬಂಜೆಯಾದರೂ..ಹಗಲ ನಗು ಮಾಸಿದರೂ,ಹಿಂಬಾಲಿಸಲೊಂದುನೆರಳು,ನೋಡಿಕೊಳ್ಳಲೊಂದುಕನ್ನಡಿ,ಇಷ್ಟಿದ್ದರೂ ಸಾಕು,ನನಗೆನಾ ಒಂಟಿಯೆನಿಸುವದಿಲ್ಲ ಸಾಲದ್ದಕ್ಕೆ……ಸಾವಿನಮನೆಯ ನಿಶ್ಶಬ್ಧಕತ್ತಲಲ್ಲಿ ಹಚ್ಚಿಟ್ಟ-ಮಿಣುಕು ದೀಪವೊಂದಿದೆಯಲ್ಲ ಮಸ್ತಕದಲ್ಲಿನೆನಪಿನ ಪುಸ್ತಕತೆರೆದೋದಲು.ಅಷ್ಟೇ ಸಾಕು,ನಾಒಂಟಿಯೆನಿಸುವದಿಲ್ಲ. ಹೊತ್ತಿನ ಹೊತ್ತಿಗೆಯಲ್ಲಿರಾಶಿ,ರಾಶಿ,ಸಂಭ್ರಮಗಳನೆನಪಿನ ಚಿತ್ತಾರಗಳಿವೆ,ಚಿತ್ತವನು ಸಂತೈಲು.ಬಾಲ್ಯದಲ್ಲಿ…..ಮರಿ-ಹಾಕಲಿಟ್ಟ ನವಿಲುಗರಿ,ಮರದ ಟೊಂಗೆಯಲ್ಲಿಸಿಕ್ಕಿಬಿದ್ದ ದಾರ ಹರಿದಬಣ್ಣದ ಗಾಳಿಪಟ,ಬದುಕಿನೆಲ್ಲ ಮೊದಲುಗಳಸವಿ,ಸವಿ ನೆನಪು,ಇದ್ದೇ ಇವೆಯಲ್ಲ..ನನ್ನೊಟ್ಟಿಗೆ..!ಅಸಹ್ಯದ ಕ಼ಣಗಳನ್ನೂಸಹ್ಯವಾಗಿಸಲು.ಒಂಟಿತನ ನೀಗಿಸಲು. ಯಾವುದಿಲ್ಲವಾದರೂಕೊನೇಪಕ಼ ನನ್ನೊಳಗಿನ‘ನಾನಂತೂ’….ಇದ್ದೇ ಇದೆಯಲ್ಲ,ನನ್ನೊಟ್ಟಿಗೆ.ಅಷ್ಟೇ ಸಾಕು ಬದುಕಿಗೆ. **********









