ಒಲವ ಹಣತೆ
ಕಾವ್ಯಯಾನ ಒಲವ ಹಣತೆ ಭಾರತಿ ಕೇ ನಲವಡೆ ಅವಳು ಸುಂದರ ಮನಸಿನ ನಗುವ ಹೂವು ನನಗೆಬಂದಂಳೆಂದರೆ ಬೆಳದಿಂಗಳ ಬಾಲೆ ಧರೆಗಿಳಿದಂತೆ ಮನಕೆಕನಸು ಯಾರಿಗೂ ಕೇಡು ಬಯಸದ ಮುಗುದೆದಿನಪೂರ್ಣವಾಗದು ಅವಳನು ನೋಡದೆ ಸದಾ// ಬಿರಿದ ಸುಮದಂತೆ ಹುಸಿಮುನಿಸಿನಲೂ ಅಮೃತಧಾರೆಒಲವ ತುಂಬುವ ಮುಂಗಾರು ಮಳೆಯ ಪುಳಕದಂತೆಸರಳ ನಡೆಯ ನೀಳಜಡೆಯ ಕೃಷ್ಣಸುಂದರಿ ನೀನುನೊಂದವರಿಗೆ ಸಾಂತ್ವನದ ಹೊಳೆಯ ಹರಿಸುತ// ಇಂದೇಕೋ ಅವಳ ಮನೆ ಮುಂದೆ ರಾಶಿ ಜನರ ಸಾಲುಕದ್ದು ನೋಡುವ ನಾನು ಬಳಿ ಸಾಗಿದರೆ ಉಸಿರು ಕಟ್ಟಿದ ದೃಶ್ಯಕೊರೋನಾ ಮಾರಿಗೆ ಬಲಿಯಾದ ತಂದೆಯ ಸೇವೆಗೆತಾನೆ ಮೊದಲು ಬಲಿಯಾದಳು ಕೋಮಲೆಹೃದಯ ಕರಗಿದ ಸಮಯವದು ಕಂಬನಿಯಾಗಿ ಹರಿದಿತ್ತು// ನಿತ್ಯ ಹಸಿರಾದ ಮನವಿಂದು ಮರುಭೂಮಿಯಾಗಿದೆ ಗೆಳತಿಒಲವ ಹಣತೆ ಪ್ರೀತಿ ತೈಲವಿಲ್ಲದೆ ನಂದಿದೆ ಇಂದುಹೇಗೆ ಬದುಕಲಿ ಪ್ರಿಯೆ ನೀನಿಲ್ಲದ ಈ ಲೋಕದಲಿ ನಾನುನಿನ್ನ ಚಿರನೆನಪೆ ಸಾಕು ನನ್ನ ಬದುಕಿಗೆ ಚೈತನ್ಯ ******************************************************









