ಕಟ್ಟುವೆವು ಗೂಡನು.
ಕಾವ್ಯ ಸಂಗಾತಿ ಕಟ್ಟುವೆವು ಗೂಡನು. ಸುರೇಶ ಮಲ್ಲಾಡದ.. ಪಕ್ಷಿರಾಜ ಹತ್ತಿರ ಬಂದನಿನಗಾಗಿ ನನ್ನ ಕೊಕ್ಕಿನೊಳುಒಣ ಹುಲ್ಕಡ್ಡಿಗಳ ಹೆಕ್ಕಿತಂದುಸುಂದರ ಗೂಡು ಹೆಣೆಯುವೆ..ನನ್ನ ಬಾಳಿಗೆ ಬೆಳಕಾಗಿ ಜೊತೆಗಿರೆಂದುಪರಿ ಪರಿಯಾಗಿ ನಿವೇದಿಸಿಕೊಂಡಿಹನು. ಪಕ್ಷಿ ಸಂಕುಲದೊಳು ದೈವದತ್ತಉತ್ತಮವಾದ ಒಡಂಬಡಿಕೆಯಿದೆ..ಮದುವೆಯಾದ ಮೇಲೆಮನೆ ಕಟ್ಟುವವರು ನಾವಲ್ಲ..ಸರಸ-ಸಲ್ಲಾಪಕೆ ಆಸ್ಪದವಿಲ್ಲ.. ಜೊತೆಯಾದೆವು..ನೀಲಿ ಆಗಸದೊಳು..ಸ್ವಚ್ಛಂದವಾಗಿ ವಿಹರಿಸಿದೆವುಬಿಳಿ ಮೋಡಗಳಿಗೆ..ಹಸಿರು ವನಗಳಿಗೆ..ನಮ್ಮ ಪ್ರೇಮ-ಪ್ರಣಯದಸವಿನೆನಪುಗಳ ಹಂಚಿಕೊಂಡೆವು. ಜೊತೆಯಾಗಿ..ಒಬ್ಬರಿಗೊಬ್ಬರು ಹೆಗಲಿರಿಸಿ..ನಮ್ಮ ಕನಸಿನ ಸುಂದರಗೂಡನ್ನು ಕಟ್ಟಿದೆವು..ಪ್ರಣಯದಾಟದೊಳು ತೇಲಾಡಿ ಸರಸ-ಸಲ್ಲಾಪದೆಡೆಗೆನಡೆದಿಹೆವು..ಇನ್ನೇನಿದ್ದರೂ ನಮ್ಮಕನಸಿನ ಗೂಡಿನೊಳುಪುಟ್ಟ-ಪುಟ್ಟ ಮರಿ ಪಕ್ಷಿಗಳಚಿಲಿಪಿಲಿ ಜೇಂಕಾರ…








