ಪಾಲು
“ಅರೆ, ನಾನಿಲ್ಲವೆ. ಕೂಜಳ್ಳಿಯಲ್ಲಿ ನಾನು ನಿಲ್ಲುತ್ತೇನೆ. ಗಣೇಶ ನನ್ನ ಜೊತೆಯಲ್ಲಿಯೇ ಇಲ್ಲಿ ಇರುತ್ತಾನೆ. ಇಲ್ಲಿಯ ಆಸ್ತಿಯನ್ನು ಅವನ ಹೆಸರಿಗೇ ಬರೆದರಾಯಿತು ಆಮೇಲೆ. ಅವನು ಹಿರಿಯವನಲ್ಲವೇ?” ತಮ್ಮ ಇಲ್ಲಿಯ ತನಕದ ಅಸ್ಪಷ್ಟ ಅಭಿಪ್ರಾಯಕ್ಕೆ ಮೂರ್ತ ರೂಪ ಕೊಟ್ಟರು ಹೆಗಡೆಯವರು.
ಅಪ್ಪ ಅಮ್ಮ. ಕೋವಿಡ ಬಗ್ಗೆ ಅವರಿಗೆ ಹೇಳಿ ಅಪ್ಪನನ್ನು ಚಿತಾಗಾರಕ್ಕೆ ಬರದಂತೆ ತಡೆದಿದ್ದೆ. ನನಗೆ, ನಾನು ಮತ್ತು ನನ್ನ ಗಂಡ ಅಷ್ಟೆ ಪ್ರಪಂಚ, ಬೇರೇ ಯಾರೂ ಬೇಕಾಗಿಲ್ಲ ಎಂದು ನಾನು ಮೂರು ವರ್ಷಕ್ಕೆ ಮುಂಚೆ ಅವರ ಎದುರಿಗೆ ಹೇಳಿದ್ದ ವಾಕ್ಯಗಳು ಈಗ ನನ್ನ ಮನಸ್ಸಿಗೆ ಈಟಿ ತೆಗೆದುಕೊಂಡು ಚುಚ್ಚುತ್ತಿರುವಂತಿತ್ತು.
ಧೂಳೆಬ್ಬಿಸಿ ಹೋದ ಕಾರಿನ ಚಕ್ರದಡಿ ಸಿಕ್ಕಿ ನೆಲಕ್ಕಂಟಿದ ಗರುಕೆಗೆ ಅವನ ಕಣ್ಣ ಹನಿಯೇ ಜೀವದಾಯಿನಿ ಮಳೆಯಾಯ್ತು
ಹೊರ ಜಗಲಿಯ ಮೇಲೆ ಕೂತು ಹತ್ತಿ ಹೊಸೆದು ಬತ್ತಿ ಮಾಡುತಿದ್ದ ಗೋದಕ್ಕ ಬಾಯಿ ತುಂಬಾ ನಕ್ಕರು. ಒಂದೇ ಅಳತೆ, ಒಂದೇ ಬಿಗುವಾಗಿ ಹೊಸೆದ ಬತ್ತಿಯಲ್ಲೂ ಎಷ್ಟು ಶಿಸ್ತು. ಅಬ್ಬಾ ಈ ಹೆಂಗಸಿನ ಬತ್ತದ ಉತ್ಸಾಹಕ್ಕೆ ಆಶ್ಚರ್ಯವಾಯಿತು ನನಗೆ.
ಹಳ್ಳಿಗಳಲ್ಲಿ ದೊಡ್ಡಮನುಷ್ಯರ ಹತ್ತಿರ ಕಾಡುತೋಸು ಅಥವಾ ಡಬಲ್ ಬ್ಯಾರಲ್ ಬಂದೂಕು ಇರುವದು ಸಾಮಾನ್ಯವಾಗಿತ್ತು. ಅದನ್ನು ಇಟ್ಟುಕೊಳ್ಳಲು ಪರವಾನಗಿ ಪತ್ರದ ಅವಶ್ಯಕತೆ ಇದ್ದರೂ ‘ದೊಡ್ಡ ಮನುಷ್ಯರಿಗೆ’ ಪರವಾನಗಿ ಪತ್ರ ಪಡೆಯುವದು ಕಷ್ಟವಾಗಿರಲಿಲ್ಲ.
ಸಣ್ಣ ಕಥೆ ಅಪ್ಪಾಜಿ ನೀಡಿದ ನವಿಲು ಗರಿ ವೈಷ್ಣವಿ ಪುರಾಣಿಕ್ ಪುಸ್ತಕ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ನಮ್ಮ ಬಾಲ್ಯದ ದಿನಗಳಲ್ಲಿ ನಮ್ಮ ಮುದ್ದು ಕೋಣೆಯಲ್ಲಿ ಹಾಗೆ ತಮ್ಮ ದಿನನಿತ್ಯದಲ್ಲಿ ನಡೆಯುವ ಸಾವಿರಾರು ಘಟನೆಗಳನ್ನು ಒಂದು ಪುಸ್ತಕದಲ್ಲಿ ಬರೆಯುವ ಪರಿಪಾಠ ನನ್ನದು…. ಹೀಗೆ ಒಮ್ಮೆ ನಮ್ಮ ತೋಟದಲ್ಲಿ ಸುತ್ತಿಕೊಂಡು ಬರೋಣ ಎಂದು ಹೊರಟ ನನ್ನ ಮನಕ್ಕೆ ಅಲ್ಲಿ ಏನೋ ಒಂದು ರೀತಿಯಾದ ಹೊಳೆಯುವ ವಸ್ತು ಕಂಡಂತೆ ಆಯಿತು ಏನು ಇರಬಹುದು ಎಂದು ನೋಡುವಾಗ….. ನವಿಲುಗರಿ ಎಷ್ಟು ಸಂತೋಷ ಎಂದರೆ ಜೋರಾಗಿ ಹೋ ಎಂದಾಗ ಅಲ್ಲಿ ನೆರೆದಿದ್ದ ಸಾವಿರಾರು ಕೆಲಸಗಾರರು ನನ್ನ ಬಳಿ ಏನು ಆಯಿತು? ಎಂದು ಪ್ರಶ್ನೆ ಮಾಡಿದಾಗ ಇಲ್ಲಿ ನೋಡಿ ಎಂದಾಗ ಅವರು ನವಿಲು ಗರಿ ತೋರಿಸಿದಾಗ…. ನಮಗೆ ಕೋಡಿ ಅಮ್ಮ ಎಂದಾಗ ನಾನು ಕೊಡುವುದಿಲ್ಲ ಎಂದು ಅವರಿಂದ ತಪ್ಪಿಸಿಕೊಂಡು ಕೋಣೆಯ ಕದವನ್ನು ಹಾಕಿಕೊಂಡು ನನ್ನ ಪುಸ್ತಕದಲ್ಲಿ ಇಡುವಾಗ ಕೋಣೆಯ ಕದವನ್ನು ಬಟ್ಟಿದ ಹಾಗೆ ಆಯಿತು…… ಯಾರು ಎಂದು ನೋಡಿದಾಗ ನಮ್ಮ ಮುದ್ದು ಚೇತು ಎಂದರೆ ನಮ್ಮ ಮುದ್ದು ಬೆಕ್ಕು ಅಷ್ಟು ಜೋರಾಗಿ ಬತ್ತೀದೆಯಾ ಎನಿಸುವಾಗ ನಮ್ಮ ಮುದ್ದು ಅಪ್ಪಾಜಿ ಬಂದು ನನಗೆ ನಿನ್ನ ಗಣಕಯಂತ್ರ ಕೊಡುತ್ತೀಯಾ ನನಗೆ ಸಾಕಷ್ಟು ಕೆಲಸ ಇದೆ ಎಂದಾಗ ನೀವು ಎಲ್ಲೇ ಮಾಡುತ್ತೀರಾ ನಾನು ನಿಮಗೆ ಪಾನಕ ಮಾಡಿಕೊಂಡು ಬರುತ್ತೇನೆ ಎಂದಾಗ…….. ಅಗತ್ಯವಾಗಿ ಎಂದಾಗ ನಮ್ಮ ಚಿನ್ನು ನನ್ನ ಹಿಂದೆ ಬರುತ್ತಾ ಇದ್ದಿದನ್ನು ಕಂಡು ಬಾ ಎಂದು ಕರೆದುಕೊಂಡು ಹೋದಾಗ ನಮ್ಮ ಅಪ್ಪಾಜಿ ಇಷ್ಟು ಸುಂದರವಾಗಿ ಕೋಣೆಯನ್ನು ಇಟ್ಟುಕೊಂಡಿದ್ದಾಳೆ ಎಂದು ಹೇಳುವ ಹೊತ್ತಿಗೆ…….. ಆ ಪುಸ್ತಕ ಅವರ ಕಣ್ಣಿಗೆ ಬಿದ್ದಿದನ್ನು ಕಂಡು ಅದನ್ನು ತೆರೆಯಲು ಅವರಿಗೆ ನವಿಲುಗಿರಿ ಕಂಡು ಒಳ್ಳೇ ಹುಡುಗಿ ಎಂದು ನುಡಿಯುವ ಹೊತ್ತಿಗೆ ನಾನು ಪಾನಕ ತಂದು ಕೊಡುವಾಗ…… ಅಪ್ಪಾಜಿ ಅವರು ಪುಸ್ತಕ ತೆಗೆದುಕೊಂಡಿದ್ದನ್ನು ಗಮನಿಸಿದೆ ಅವರು ನನ್ನ ಬಳಿಯಲ್ಲಿ ಒಂದು ಇದೆ ಎಂದು ಕೊಟ್ಟಾಗ ಅದು ಇನ್ನೊಂದು ಮರಿ ಹಾಕಿದೆ ಎಂದಾಗ ಅಪ್ಪಾಜಿ ಅವರಿಗೆ ನಗು ಬಂದಿತು. ************
ಅಪ್ಪಾಜಿ ನೀಡಿದ ನವಿಲು ಗರಿ Read Post »
ಕಥೆ ಅಮ್ಮನೇಕೆ ದೇವರು? ರಾಘವೇಂದ್ರ ಈ ಹೊರಬೈಲು ತನ್ನ ಜೋಪಾನ ಮತ್ತು ಅತೀವ ಪ್ರೀತಿಯ ಹೊರತಾಗಿಯೂ ತನಗೇ ಗೊತ್ತಿಲ್ಲದೆ ಕಾಲು ಜಾರಿ, ಕೈತಪ್ಪಿ ಹೊರಟ ಮಗಳನ್ನು ತಿದ್ದಲು ಹೋಗಿ, ಅವಳಿಂದ “ಬೇರೆಯವರಿಗೆ ಸೆರಗು ಹಾಸಿ, ಭಂಡ ಬಾಳು ಬಾಳಿ, ನನ್ನನ್ನು ಸಾಕಿದವಳು” ಎನಿಸಿಕೊಂಡರೂ, ಬೇರೆ ಯಾರೇ ಆಗಿದ್ದರೂ ರಣಚಂಡಿಯಾಗುತ್ತಿದ್ದ ಆ ತಾಯಿ, ತೀರಾ ಚಿಕ್ಕ ವಯಸ್ಸಿನಲ್ಲಿಯೇ ಅಪ್ಪನನ್ನು ಕಳೆದುಕೊಂಡ ಹೆತ್ತ ಮಗಳ ಮೇಲಿನ ಕರುಳಿನ ಮಮಕಾರಕ್ಕೆ ಬರಸಿಡಿಲಿನಂತಹ ಅವಮಾನವನ್ನೂ ಸಹಿಸಿಕೊಂಡು, ಮಗಳನ್ನು ಕ್ಷಮಿಸಿದ್ದಳು. ಅಪ್ಪನಿಲ್ಲದ ಮಗಳಿಗೆ ತಾನೇ ಅಪ್ಪ-ಅಮ್ಮ ಎರಡೂ ಆಗಿ, ಜೋಪಾನವಾಗಿ ಸಾಕಲು ಆಕೆ ಹರಸಾಹಸಪಟ್ಟಿದ್ದಳು. ಗಂಡು ದಿಕ್ಕಿಲ್ಲದ ಮನೆಯ ಹೆಣ್ಣುಗಳನ್ನು ಹಂಬಲಿಸುವ ಹಸಿವೆಗಣ್ಣುಗಳಿಗೂ ಸೊಪ್ಪು ಹಾಕದೆ, ಬಗ್ಗದೆ, ಎಂಜಲಾಗದೆ, ಗಟ್ಟಿಗಿತ್ತಿಯ ಬಾಳು ನಡೆಸಿದ್ದಳು. ಅಮ್ಮನ ಪ್ರೀತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವಿದ ಮಗಳು, ತನ್ನ ಸ್ವೇಚ್ಛಾಚಾರಕ್ಕೆ ಅಮ್ಮನೇ ಅಡ್ಡಿಯೆಂದು, ತನಗಾಗಿ ಜೀವ ತೇಯ್ದವಳನ್ನು ತೊರೆದು, ಬಣ್ಣದ ಮಾತಿನಿಂದ ಮರುಳು ಮಾಡಿದವನೊಡನೆ ಏನೊಂದೂ ಯೋಚಿಸದೆ ಓಡಿದಳು. ತನ್ನ ತೃಷೆ ತೀರುತ್ತಿದ್ದಂತೆ, ಜೊತೆಗಿದ್ದವನು ಎಲ್ಲವನ್ನೂ ದೋಚಿಕೊಂಡು ಓಡಿ ಹೋದ. ತನ್ನದೆಲ್ಲವನ್ನೂ ಕಳೆದುಕೊಂಡು, ಆಘಾತದಿಂದ ಅಪಘಾತಕ್ಕೊಳಗಾಗಿ ಕಣ್ಣುಗಳನ್ನೂ ಕಳೆದುಕೊಂಡು ಅನಾಥಳಾಗಿ ಬಿದ್ದಿದ್ದಾಗ, ಸಹಾಯದ ಬದಲಿ ಹಸಿದ ನಾಯಿಗಳಂತೆ ಎರಗಲು ಬಂದವರೇ ಹೆಚ್ಚು. ಸುದ್ಧಿ ತಿಳಿದಿದ್ದೇ ಎದ್ದೆನೋ ಬಿದ್ದೆನೋ ಎಂದು ಓಡಿ ಬಂದು, ‘ಉದುರುವ ಎಲೆಗೆ ಮರದ ಹಂಗ್ಯಾಕೆಂದು’ ತನ್ನವೇ ಕಣ್ಣುಗಳನ್ನು ದಾನಮಾಡಿ, ಮಗಳಿಗೆ ಬೆಳಕು ನೀಡಿದ ತಾಯಿ ತಾನು ಕುರುಡಿಯಾಗಿ, ಮಗಳಿಗೆ ಭಾರವಾಗುವುದು ಬೇಡವೆಂದು, ದಿಕ್ಕು ಸಿಕ್ಕಿದೆಡೆ ನಡೆದಳು. *****************
ಕಥೆ ಸುಂದರ ರಾವಣ ವಿಶ್ವನಾಥ ಎನ್ ನೇರಳಕಟ್ಟೆ ಸಂಬಂಧಿಕರ ಮನೆಯಲ್ಲೊಂದು ಪೂಜೆ. ಪರಿಚಯಸ್ಥರಲ್ಲಿ ಮಾತನಾಡುತ್ತಾ ನಿಂತಿದ್ದೆ. “ತಗೋ ಮಾಣಿ ಹಲಸಿನ ಹಣ್ಣು” ಎನ್ನುವ ಮಾತಿನ ಜೊತೆಜೊತೆಗೇ ಬೆನ್ನ ಮೇಲೊಂದು ಗುದ್ದು. ಯಾರೆಂದು ತಿರುಗಿದರೆ ನಲುವತ್ತು- ನಲುವತ್ತೈದರ ಒಬ್ಬ ವ್ಯಕ್ತಿ. ಕಾಣುವಾಗಲೇ ವಿಕ್ಷಿಪ್ತ. ಹಲಸಿನ ಎರಡು ಸೊಳೆಗಳನ್ನು ಕೈಯ್ಯಲ್ಲಿ ಹಿಡಿದುಕೊಂಡು ವಿಚಿತ್ರವಾಗಿ, ಭಯ ಹುಟ್ಟಿಸುವಂತೆ ನಗುತ್ತಾ ನಿಂತಿದ್ದ. ಕೊಳಕಾದ ಹಲ್ಲು, ಮಣ್ಣು ಮೆತ್ತಿಕೊಂಡ ಕೈ, ಕೊಳಕು ಬಟ್ಟೆ. ಅವನು ಕೊಟ್ಟ ಹಣ್ಣು ತೆಗೆದುಕೊಳ್ಳುವುದು ಸರಿ ಕಾಣಲಿಲ್ಲ. ಹಾಗೆಂದು ತೆಗೆದುಕೊಳ್ಳದೇ ಹೋದರೆ ಎಲ್ಲರೆದುರು ಬೊಬ್ಬೆ ಹೊಡೆದರೆ ಎಂಬ ಭಯ ಕಾಡಿತು. ತೆಗೆದುಕೊಂಡು ಅವನಿಗೆ ಗೊತ್ತಾಗದಂತೆ ಪ್ಯಾಂಟಿನ ಜೇಬಿಗೆ ಸೇರಿಸಿದೆ. “ಎಮ್ಡಿ, ಬೇರೆಯವರಿಗೆ ಕಿರಿಕಿರಿ ಕೊಡುವುದಲ್ಲ, ಅಲ್ಲಿ ಹೋಗಿ ಸುಮ್ಮನೆ ಕುಳಿತುಕೊಳ್ಳಬೇಕು” ಎಂದು ಅಲ್ಲೇ ನಿಂತಿದ್ದವರೊಬ್ಬರು ಗದರಿದರು. ಸಪ್ಪೆಮುಖ ಮಾಡಿಕೊಂಡು ಮೂಲೆಯಲ್ಲಿ ಹೋಗಿ ನಿಂತುಕೊಂಡ. ಮರುಕ್ಷಣವೇ ಮತ್ತೆ ಹಲಸಿನ ಸೊಳೆ ತೆಗೆದುಕೊಳ್ಳಲು ಹೊರಟ. ಅಲ್ಲಿ ಮತ್ತೆ ಯಾರೋ ಗದರಿ ಕಳುಹಿಸಿದರು. ಸುತ್ತ ನಿಂತಿದ್ದ ಮಕ್ಕಳು ಬಾಯಿಗೆ ಕೈಯ್ಯಿಟ್ಟು ಮನಸ್ಸೋ ಇಚ್ಛೆ ನಕ್ಕರು. ಎಲ್ಲರೂ ಅವನನ್ನು ‘ಎಮ್ಡಿ’ ಎಂದು ಕರೆಯುತ್ತಾರೆ ಎನ್ನುವುದು ತಿಳಿಯಿತು. ತೋರುವಷ್ಟೇನೂ ಅಪಾಯಕಾರಿ ವ್ಯಕ್ತಿ ಅವನಲ್ಲ ಎನ್ನುವುದೂ ಸ್ಪಷ್ಟವಾಯಿತು. ಮನೆಗೆ ಹೋದ ಮೇಲೆ ಮಾಡುವುದಕ್ಕೆ ಏನೂ ಕೆಲಸ ಇಲ್ಲದ್ದರಿಂದ ಅವನ ಬಗ್ಗೆ ಅಮ್ಮನಲ್ಲಿ ಹೇಳಿಕೊಂಡು ಮನಸೋ ಇಚ್ಛೆ ನಗಾಡಿದೆ. ತತ್ತ್ವಶಾಸ್ತ್ರ, ಕಾವ್ಯಮೀಮಾಂಸೆ ಪುಸ್ತಕಗಳನ್ನೆಲ್ಲಾ ತಿಂದು ಮುಗಿಸಿದ್ದ ನನಗೆ ನಾಲ್ಕನೆಯ ತರಗತಿ ಓದಿದ್ದ ನನ್ನ ಅಮ್ಮ ಇನ್ನೊಬ್ಬರನ್ನು ಅಪಹಾಸ್ಯ ಮಾಡಬಾರದೆಂದು ಬುದ್ಧಿವಾದದ ಮಾತು ಹೇಳಿದ್ದರು. ನನ್ನ ನಗು ಮತ್ತೂ ನಿಲ್ಲದಿದ್ದಾಗ, “ಅವನು ತುಂಬಾ ಬುದ್ಧಿವಂತ ಆಗಿದ್ದ. ಏನೋ ಗ್ರಹಚಾರ ಕೆಟ್ಟು ಹೀಗಾಗಿದ್ದಾನೆ. ಏನು ಮಾಡುವುದು!” ಎಂಬ ವಿಷಾದದ ಮಾತನ್ನಾಡುತ್ತಾ ಅಡುಗೆ ಕೋಣೆಯೊಳಕ್ಕೆ ನಡೆದಿದ್ದರು. ಅಮ್ಮನಿಗೆ ಅವನ ಬಗ್ಗೆ ತಿಳಿದಿರುವ ಹಾಗಿದೆ ಎಂಬ ವಿಚಾರ ನನ್ನ ತಲೆಗೆ ಹೊಳೆದಾಗ ಆತನ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮೂಡಿತು. ಅಮ್ಮ ನನ್ನ ಕುತೂಹಲದ ಬುತ್ತಿಯನ್ನು ಖಾಲಿ ಮಾಡತೊಡಗಿದರು. *** ಹಿರಿಯರಿಂದ ಹಿಡಿದು ಮೊನ್ನೆ ಮೊನ್ನೆ ಹುಟ್ಟಿದ ಮಕ್ಕಳಿಂದಲೂ ಕೂಡ ಎಮ್ಡಿ ಎಂದು ಹೆಸರ್ಹಿಡಿದೇ ಕರೆಸಿಕೊಳ್ಳುವ ಇವನ ಪೂರ್ತಿ ಹೆಸರು ಮಹಾಬಲ ದಬ್ಬೆಕಟ್ಟೆ. ಶ್ರೀಮಂತ ಅವಿಭಕ್ತ ಕುಟುಂಬ. ದಬ್ಬೆಕಟ್ಟೆ ಮಹಾಲಿಂಗ ಭಟ್ಟರೆಂದರೆ ಊರಿಗೆಲ್ಲಾ ಬೇಕಾದವರು. ಅವರು ಮಹಾಬಲನ ತಂದೆ. ಇಂತಹ ಮಹಾಬಲ ಚಿಕ್ಕಂದಿನಿಂದಲೂ ಚುರುಕುಮತಿ. ಆದರೆ ತುಂಬಾ ಸಾಧು. ತಾನಾಯಿತು, ತನ್ನ ಕೆಲಸವಾಯಿತು ಎಂಬಂತಹ ಸ್ವಭಾವ. ಮಗ ಚೆನ್ನಾಗಿ ಓದಿ, ಡಾಕ್ಟರ್ ಇಲ್ಲವೇ ಇಂಜಿನಿಯರ್ ಆಗಬೇಕೆಂದು ಅವನಮ್ಮ ಲಕ್ಷೀಯಮ್ಮನ ಯೋಚನೆ. ತಾಯಿಯ ಇಚ್ಛೆಗೆ ತಕ್ಕವನೆಂಬಂತೆ ಈತನೂ ಇದ್ದ. ದ್ವಿತೀಯ ಪಿ. ಯು. ಸಿ. ಯನ್ನು ಉತ್ತಮ ಅಂಕಗಳೊಂದಿಗೆ ಮುಗಿಸಿದವನು ಇಂಜಿನಿಯರಿಂಗ್ ಮಾಡಲು ಬೆಂಗಳೂರು ಸೇರಿಕೊಂಡ. ಕೊನೆಯ ಪರೀಕ್ಷೆಯಷ್ಟೇ ಬಾಕಿ ಇತ್ತು. ಅದೇ ಸಮಯಕ್ಕೆ ಊರಿನಿಂದ ಫೋನು. ಫೋನು ಎತ್ತಿಕೊಂಡರೆ ತಮ್ಮ ಸದಾಶಿವನ ಆತಂಕದ ಧ್ವನಿ- “ತಂದೆಗೆ ಸೀರಿಯಸ್ಸಾಗಿದೆ. ಬೇಗ ಹೊರಟು ಬಾ.” ಸಾರಿಗೆ ಸೌಲಭ್ಯವೇ ಸರಿಯಾಗಿಲ್ಲದ ಸಮಯ ಅದು. ಬಸ್ಸು ಏಜೆಂಟರ ಕೈಕಾಲು ಹಿಡಿದು ಹೇಗೋ ಊರಿಗೆ ಬಂದು ತಲುಪಿದರೆ ತಂದೆ ಹೆಣವಾಗಿ ಒಂದು ಗಂಟೆ ಕಳೆದಿತ್ತು. ಊರಿಗೆ ಬಂದು ಹದಿನೈದು ದಿನಗಳು ಕಳೆದಿದ್ದವು. ಕೊನೆಯ ಪರೀಕ್ಷೆಗೆ ಹೋಗಲಾಗಿಲ್ಲ. ಆರೋಗ್ಯವಾಗಿಯೇ ಇದ್ದ ತಂದೆ ಇದ್ದಕ್ಕಿದ್ದ ಹಾಗೆ ಸಾವನ್ನಪ್ಪಿದ್ದಾರೆ. ಇದೇ ಚಿಂತೆಯನ್ನು ತಲೆ ತುಂಬಾ ಹೊತ್ತು ಈ ಮಹಾಬಲ ಅದೆಷ್ಟು ಸಮಯ ಕುಳಿತಿದ್ದನೋ ಗೊತ್ತಿಲ್ಲ. ಬಳಿ ಬಂದು ತಾಯಿ ತನ್ನನ್ನೇ ನೋಡುತ್ತ ಕುಳಿತದ್ದೂ ಈತನಿಗೆ ಗೊತ್ತಾಗಿರಲಿಲ್ಲ. “ಮಹಾಬಲ, ಇಲ್ಲಿಯ ಬಗೆಗೆ ತಲೆಕೆಡಿಸಿಕೊಂಡದ್ದು ಸಾಕು. ನೀನು ಬೆಂಗಳೂರಿಗೆ ಹೊರಡು. ಮತ್ತೆ ಪರೀಕ್ಷೆ ಬರೆದು, ಅಲ್ಲೇ ಎಲ್ಲಾದರೂ ಉದ್ಯೋಗ ಗಿಟ್ಟಿಸಿಕೊಂಡರೆ ಒಳ್ಳೆಯದು” ಅಮ್ಮನ ಮಾತಿನಲ್ಲಿ ಸಣ್ಣ ಆತಂಕ ಇದ್ದುದನ್ನು ಶೂನ್ಯ ಮನಸ್ಕನಾಗಿದ್ದ ಮಹಾಬಲನಿಗೆ ಗುರುತಿಸಲಾಗಲಿಲ್ಲ. “ಇಲ್ಲಾಮ್ಮ. ಈ ಸಂದರ್ಭದಲ್ಲಿ ನಾನು ಬೆಂಗಳೂರಿಗೆ ಹೋಗುವುದಂತೂ ಸಾಧ್ಯವಿಲ್ಲ, ಸರಿಯೂ ಅಲ್ಲ. ಸದಾಶಿವ ಪಿ. ಯು. ಸಿ. ಓದುತ್ತಿದ್ದಾನೆ. ಮನೆಯ ಇಡೀ ಜವಾಬ್ದಾರಿ ತೆಗೆದುಕೊಳ್ಳುವ ವಯಸ್ಸು ಅವನದಲ್ಲ. ಉಳಿದವನು ನಾನೇ. ಈಗ ಇಲ್ಲೇ ಉಳಿದುಕೊಂಡು ಮನೆ, ತೋಟ ನಿಭಾಯಿಸುತ್ತೇನೆ. ಮುಂದೆ ಏನಾದರೂ ವ್ಯವಸ್ಥೆ ಆದಾಗ ಪರೀಕ್ಷೆ, ಉದ್ಯೋಗ ಎಲ್ಲ ನೋಡಿಕೊಂಡರಾಯಿತು ಬಿಡು” ಮಹಾಬಲನ ಮಾತಿನಲ್ಲಿ ಖಚಿತತೆಯಿತ್ತು. “ಬೇಡ ಮಹಾಬಲ. ಇಲ್ಲಿನ ವ್ಯವಹಾರ ಎಲ್ಲ ನಾನೂ, ಸದಾಶಿವ ಹೇಗೋ ನಿಭಾಯಿಸುತ್ತೇವೆ. ನೀನು ಬೆಂಗಳೂರಿನಲ್ಲಿರುವುದೇ ಸರಿ” ಅಮ್ಮನ ಈ ಮಾತಿನಲ್ಲಿ ತನ್ನನ್ನು ಊರಿನಿಂದ ಸಾಗಹಾಕಬೇಕೆನ್ನುವ ಇಚ್ಛೆಯೇ ಬಲವಾಗಿ ಇದ್ದಂತೆ ಮಹಾಬಲನಿಗೆ ಅನ್ನಿಸಿತು. ಅದನ್ನೇ ಅಮ್ಮನಲ್ಲಿ ಹೇಳಿದ. “ಚಿಕ್ಕಪ್ಪನಿಂದ ನಿನಗೇನಾದರೂ ತೊಂದರೆಯಾದೀತು ಎಂಬ ಹೆದರಿಕೆ ಅಮ್ಮನಿಗೆ”, ಕಂಬಕ್ಕೆ ಒರಗಿ ಕುಳಿತು ಇವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಸದಾಶಿವ ನುಡಿದಿದ್ದ. ತಮ್ಮನ ಮಾತಿನ ಹಿನ್ನೆಲೆ ಮಹಾಬಲನಿಗೆ ಅರ್ಥವಾಗಲಿಲ್ಲ. ಆರು ವರ್ಷಗಳ ಹಿಂದೆ ದಬ್ಬೆಕಟ್ಟೆ ಮಹಾಲಿಂಗ ಭಟ್ಟರು ಹಾಗೂ ಅವರ ತಮ್ಮ ಕೇಶವ ಭಟ್ಟರ ಮಧ್ಯೆ ನಾಲ್ಕು ಎಕರೆ ಜಾಗವನ್ನು ಕೈವಶ ಮಾಡಿಕೊಳ್ಳುವುದಕ್ಕೆ ಜಗಳ ಶುರುವಾಗಿತ್ತು. ಇದು ಊರಿಗೆಲ್ಲಾ ತಿಳಿದಿದ್ದ ವಿಷಯವೇ. ‘ನನಗೆ ಸಲ್ಲಬೇಕಾದ ಭೂಮಿ ಅದಲ್ಲ’ ಎನ್ನುವ ಅರಿವಿದ್ದೂ ಕೋರ್ಟಿನ ಮೊರೆಹೋಗಿದ್ದರು ಕೇಶವ ಭಟ್ಟರು. ನ್ಯಾಯ ಗೆದ್ದಿತ್ತು. ಮಹಾಲಿಂಗ ಭಟ್ಟರಿಗೆ ಭೂಮಿ ದೊರೆತಿತ್ತು. ಅದಾದ ಬಳಿಕ ಅವರಿಬ್ಬರ ಮಧ್ಯೆ ಮಾತುಕತೆ ಇರಲಿಲ್ಲ. ಅದೊಂದು ದಿನ ರಸ್ತೆಯಲ್ಲಿ ಎದುರಾದ ತಮ್ಮನಲ್ಲಿ ಮಹಾಲಿಂಗ ಭಟ್ಟರು ಹಳೆಯ ದ್ವೇಷವನ್ನು ಮರೆತು ಮಾತನಾಡುವ ಪ್ರಯತ್ನ ನಡೆಸಿದ್ದರು. ಸುತ್ತಮುತ್ತ ಜನರಿದ್ದಾರೆ ಎನ್ನುವುದನ್ನೂ ನೋಡದೆ ರೇಗಾಡಿದ್ದರಂತೆ ಕೇಶವ ಭಟ್ಟರು. ಮನೆಗೆ ಬಂದು ಪತ್ನಿ, ಮಕ್ಕಳೆದುರು ವಿಷಯ ತಿಳಿಸುವಾಗ ಮಹಾಲಿಂಗ ಭಟ್ಟರ ಧ್ವನಿ ದೃಢತೆ ಕಳೆದುಕೊಂಡಿತ್ತು. ಅದೊಂದು ದಿನ ಜೋರು ಮಳೆಗೆ ‘ಒಂದೇ ಕೊಡೆಯಲ್ಲಿ ನಾವಿಬ್ಬರೂ ಸಾಗುವುದಂತೂ ಸಾಧ್ಯವಿಲ್ಲ’ ಎಂದು ಅಂದಾಜಿಸಿದ ಮಹಾಲಿಂಗ ಭಟ್ಟರು ಮತ್ತು ಮಹಾಬಲ ಪರಿಚಯದ ರುಕ್ಮಯ್ಯನ ಅಂಗಡಿ ಹೊಕ್ಕಿದ್ದರು. ಅದಾಗಲೇ ಅಂಗಡಿ ಹೊಕ್ಕು, ಬಾಯಿತುಂಬಾ ಬೀಡಾ ಜಗಿಯುತ್ತಾ ನಿಂತಿದ್ದ ಕೇಶವ ಭಟ್ಟರ ಕಾಲಿನ ಒಂದು ಬದಿಗೆ ಮಹಾಬಲನ ಕೈಯ್ಯಲ್ಲಿದ್ದ ಒದ್ದೆ ಕೊಡೆ ತಾಗಿತ್ತು. ಮೊದಲೇ ತೂಕಡಿಸುತ್ತಿದ್ದವನಿಗೆ ಹಾಸಿಗೆ ಹಾಸಿ ಕೊಟ್ಟಂತಾಯಿತು. ‘ಸಿಕ್ಕಿದ್ದೇ ಛಾನ್ಸ್’ ಎಂಬಂತೆ ಮಹಾಬಲನನ್ನೇ ದಿಟ್ಟಿಸುತ್ತಾ ಬೊಬ್ಬೆ ಹೊಡೆದಿದ್ದರು ಅವರು. ಇದಾದ ಬಳಿಕ ತಮ್ಮನ ಸುದ್ದಿಗೆ ಮಹಾಲಿಂಗ ಭಟ್ಟರು ಹೋದದ್ದೇ ಇಲ್ಲ. ತನಗೊಬ್ಬ ತಮ್ಮ ಇದ್ದಾನೆ ಎಂಬ ವಿಚಾರವನ್ನೇ ಮರೆತುಬಿಟ್ಟಿದ್ದರು. ಆದರೆ ಕೇಶವ ಭಟ್ಟರು ಮಾತ್ರ ಬೆನ್ನ ಹಿಂದಿನಿಂದ ಕತ್ತಿ ಮಸೆಯುವ ಜಾಯಮಾನ ಬಿಟ್ಟಿರಲಿಲ್ಲ. “ಮೋಸ ಮಾಡಿ ಕೇಸು ಗೆದ್ದಿದ್ದಾನೆ ಅವನು. ಹಣ ನೆಕ್ಕುವವರೆಲ್ಲಾ ಜಡ್ಜುಗಳೆನಿಸಿಕೊಂಡು ತೀರ್ಪು ಕೊಡುವವರಾದದ್ದಕ್ಕೇ ನಾನು ಸೋತದ್ದು. ನನಗೆ ಸಲ್ಲಬೇಕಾದ ಭೂಮಿ ಅದು. ದೈವಕ್ಕೆ ಇಟ್ಟಿದ್ದೇನೆ. ಅವನು ಉದ್ಧಾರ ಆಗುವುದಿಲ್ಲ” ಇಂತಹ ಮಾತುಗಳನ್ನು ಊರಲ್ಲಿ ಸಿಕ್ಕ ಸಿಕ್ಕವರಲ್ಲಿ ಹೇಳಿಕೊಂಡು ತಿರುಗಾಡತೊಡಗಿದ್ದರು. ಆದರೆ ಈಗ ತಮ್ಮ ಸದಾಶಿವ, ಚಿಕ್ಕಪ್ಪನ ಪ್ರಸ್ತಾಪ ಮಾಡಿದ್ದೇಕೆ? ಮಹಾಬಲನಲ್ಲಿ ಪ್ರಶ್ನೆಯೆದ್ದಿತ್ತು. ಉತ್ತರಕ್ಕಾಗಿ ತಮ್ಮನ ಮುಖ ನೋಡಿದ. ತಮ್ಮ ಎಲ್ಲವನ್ನೂ ವಿವರಿಸಿದ್ದು ಹೀಗೆ- ಕೇಶವ ಭಟ್ಟರು ಆ ದಿನ ಜಗಳಾಡುವುದಕ್ಕೆಂದೇ ಬಂದಂತೆ ಮಹಾಲಿಂಗ ಭಟ್ಟರ ಅಂಗಳಕ್ಕೆ ಬಂದಿದ್ದಾರೆ. ತನ್ನ ಮನೆಯ ಕೆಲಸದಾಳು ಚೋಮನಿಗೆ ಮಹಾಲಿಂಗ ಭಟ್ಟರು ಬೆಳಗ್ಗೆ ಬೈದ ವಿಚಾರವನ್ನು ನೆಪವಾಗಿಟ್ಟುಕೊಂಡು ಹೀನಾಮಾನ ಬೈದಿದ್ದಾರೆ. ಮಹಾಲಿಂಗ ಭಟ್ಟರಿಗೂ ಕೋಪ ನೆತ್ತಿಗೇರಿದೆ. ನಾಲಗೆ ಯಾವತ್ತಿಗಿಂತ ರಭಸವಾಗಿಯೇ ಓಡಾಡಿದೆ. ಇದನ್ನೇ ಕಾಯುತ್ತಿದ್ದವನಂತೆ ಕೇಶವ ಭಟ್ಟರು ಮುಂದೆ ಬಂದು ಮಹಾಲಿಂಗ ಭಟ್ಟರ ಎದೆಗೆ ಕೈಯ್ಯಿಟ್ಟು ತಳ್ಳಿದ್ದಾನೆ. ಆಯತಪ್ಪಿ ಬಿದ್ದ ಭಟ್ಟರ ಎದೆಗೆ ಅಂಗಳದ ಕಟ್ಟೆ ಬಲವಾಗಿಯೇ ಬಡಿದಿದೆ. ಆಸ್ಪತ್ರೆ ಸೇರಿ ಒಂದಷ್ಟು ಹೊತ್ತಿನಲ್ಲಿ ಪ್ರಾಣ ಹೋಗಿದೆ. ಈ ವಿಚಾರ ಲಕ್ಷೀಯಮ್ಮ ಮತ್ತು ಸದಾಶಿವನಿಗೆ ಬಿಟ್ಟರೆ ಊರಿನವರ್ಯಾರಿಗೂ ತಿಳಿದಿಲ್ಲ. *** “ಆ ಎಮ್ಡಿಯ ಕಥೆ ಹೇಳುತ್ತಿದ್ದೀಯಾ ಅವನಿಗೆ?” ಬಾಗಿಲಿನಾಚೆ ಚಪ್ಪಲಿ ಬಿಟ್ಟು, ಒಳಬರುತ್ತಿದ್ದ ಅಪ್ಪ ನಗುನಗುತ್ತಾ ಅಮ್ಮನಲ್ಲಿ ಪ್ರಶ್ನಿಸಿದ್ದರು. ಅಮ್ಮ ಹೌದು ಎಂಬಂತೆ ತಲೆಯಾಡಿಸಿದ್ದಕ್ಕೆ ಪ್ರತಿಯಾಗಿ ತನ್ನದೂ ಒಂದಿರಲಿ ಎಂಬಂತೆ ಅಪ್ಪ ಹೇಳತೊಡಗಿದರು- “ನಾವು ಮೊದಲು ಬಾಡಿಗೆ ಮನೆಯಲ್ಲಿದ್ದೆವಲ್ಲ, ಅಲ್ಲಿಗೊಮ್ಮೆ ಬಂದಿದ್ದ. ಆಗಲೇ ಅವನ ತಲೆ ಅರ್ಧ ಕೆಟ್ಟಿತ್ತು. ತಿಂಡಿ ಕೊಟ್ಟದ್ದಕ್ಕೆ ಕುಶಿಯಿಂದ ತಿಂದಿದ್ದ. ಪೇಪರ್‍ನಲ್ಲಿದ್ದ ಸಿನಿಮಾ ನಟಿಯರ ಫೋಟೋಗಳನ್ನೆಲ್ಲಾ ಒಂದೂ ಬಿಡದೆ ತನ್ನ ಹರಕು ಚೀಲಕ್ಕೆ ತುಂಬಿಸಿಕೊಂಡು ಹೊರಟಿದ್ದ. ಅವನಿಗದೊಂದು ಹುಚ್ಚು. ಸಿನಿಮಾ ನಟಿಯರ ಫೋಟೋ ಎಲ್ಲ ಕತ್ತರಿಸಿ ಇಟ್ಟುಕೊಳ್ಳುವ ಹುಚ್ಚು. ಹೊರಹೋಗುತ್ತಿದ್ದ ಅವನನ್ನು ನೋಡಿ, ಪಾಪದವನು ಎನಿಸಿ, ನನ್ನ ಹಳೆಯ ಎರಡು ಶೂಗಳನ್ನು ಅವನಿಗೆ ಕೊಟ್ಟು ಕಳುಹಿಸಿದ್ದೆ.” ಹೇಳಿ ಮುಗಿಸಿದ ಅಪ್ಪ ಸ್ನಾನದ ಕೋಣೆಯ ಕಡೆಗೆ ನಡೆದರು. ನನ್ನಲ್ಲಿನ ಕುತೂಹಲ ಹಾಗೇ ಇತ್ತು. “ಹಾಗಾದರೆ ಎಮ್ಡಿ ಅವನ ತಂದೆಯನ್ನು ಕೊಂದ ಚಿಕ್ಕಪ್ಪನಿಗೆ ಆಗ ಸರಿಯಾಗಿ ಬುದ್ಧಿ ಕಲಿಸಿರಬೇಕಲ್ಲಾ?” ಎಂದು ಅಮ್ಮನನ್ನು ಪ್ರಶ್ನಿಸಿದೆ. “ಅಂತಹ ಗುಣವೇ ಇಲ್ಲದವನು ಪಾಪ. ನಾನು ಆಗಲೇ ಹೇಳಿದನಲ್ಲ, ಸಾಧು ಮನುಷ್ಯ ಅಂತ. ಚಿಕ್ಕಪ್ಪನ ಸುದ್ದಿಗೇ ಹೋಗದೆ ಕೃಷಿ ಕೆಲಸ ನೋಡಿಕೊಂಡು ಉಳಿದುಬಿಟ್ಟ” ನಿಟ್ಟುಸಿರೊಂದು ಹೊರಬಂತು, ಅಮ್ಮನೊಳಗಿಂದ. ಬೆನ್ನಿಗೇ ನಾನು ಪ್ರಶ್ನಿಸಿದೆ- “ಹಾಗಾದರೆ ಅವನಿಗೆ ಹುಚ್ಚು ಹಿಡಿದದ್ದು ಹೇಗೆ?” “ಕೃಷಿ ಕೆಲಸ ನೋಡಿಕೊಂಡು ಇದ್ದನಂತೆ. ಅದೊಂದು ದಿನ ಕಾಲೇಜಿನಿಂದ ಮನೆ ಕಡೆಗೆ ನಡೆದುಕೊಂಡು ಬರುತ್ತಿದ್ದ ಇವನ ತಮ್ಮನಿಗೆ ಲಾರಿಯೊಂದು ಗುದ್ದಿ ಪರಾರಿಯಾಯ್ತಂತೆ. ಅವನು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ವಿಷಯ ತಿಳಿದ ಲಕ್ಷ್ಮೀಯಮ್ಮನಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಅವರೂ ಎರಡು ತಿಂಗಳು ಬದುಕಿದ್ದದ್ದಷ್ಟೆ. ಆಮೇಲೆ ಇಡೀ ಮನೆಯಲ್ಲಿ ಈ ಮಹಾಬಲ ಒಬ್ಬನೇ. ಆ ಸಂದರ್ಭದಲ್ಲಿಯೇ ಅವನ ಚಿಕ್ಕಪ್ಪ ಕೇಶವ ಭಟ್ಟರು ಹಳೇ ದ್ವೇಷ ಮರೆತು ಇವನಲ್ಲಿ ಮಾತನಾಡಿದರಂತೆ. ಅವರ ಮನೆಯಿಂದಲೇ ಆವಾಗಾವಾಗ ಊಟ, ತಿಂಡಿ ಎಲ್ಲ ತಂದು ಕೊಡುತ್ತಿದ್ದರಂತೆ. ಇವನಿಗೆ ಏನಾಯ್ತೋ ಏನೋ, ಇದೆಲ್ಲಾ ಆಗಿ ಮೂರ್ನಾಲ್ಕು ತಿಂಗಳುಗಳಲ್ಲಿಯೇ ವಿಚಿತ್ರವಾಗಿ ನಡೆದುಕೊಳ್ಳುವುದಕ್ಕೆ ಶುರು ಮಾಡಿದ್ದಾನೆ. ಅದೊಂದು ದಿನ ಊಟ ತಂದುಕೊಟ್ಟ ಚಿಕ್ಕಪ್ಪನ ಮುಖಕ್ಕೇ ಅದನ್ನು ಬಿಸಾಡಿದನಂತೆ. ಮತ್ತೆ ಅವರು ಅವನ ಮನೆಯ ಕಡೆಗೇ ಹೋಗಿಲ್ಲ. ಇವನು ಮನೆ ಬಿಟ್ಟು ಅಲೆದಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾನೆ. ಕೇಶವ ಭಟ್ಟರು ನಾಲ್ಕೆಕರೆ ಜಾಗದ ವಿಷಯಕ್ಕೆ ದೈವಕ್ಕೆ ಹೇಳಿಕೊಂಡಿದ್ದರಲ್ಲ, ಆ ಕಾರಣದಿಂದಲೇ ಮಹಾಲಿಂಗ ಭಟ್ಟರ ಕುಟುಂಬ ಹಾಳಾಗಿಹೋಯಿತು ಎಂದು ಎಲ್ಲರೂ ಹೇಳುತ್ತಾರೆ…” ಅಮ್ಮನಿಗೆ ಮತ್ತೂ ಹೇಳುವುದಕ್ಕಿತ್ತೇನೋ. ಆದರೆ ಸ್ನಾನದ ಕೋಣೆಯಿಂದ ಹೊರಬಂದ ಅಪ್ಪ, ಅಮ್ಮನ ಮಾತಿಗೆಡೆಕೊಡದೆ ನುಡಿದರು- “ನಿನಗೆ ಗೊತ್ತಿಲ್ಲ ಹಾಗಿದ್ದರೆ ಆ ಕಂತ್ರಿ ಕೇಶವ ಭಟ್ಟರ ಬುದ್ಧಿ. ನಿನಗೆ ಎಂದಲ್ಲ, ಊರಿನವರ್ಯಾರಿಗೂ ಗೊತ್ತಿಲ್ಲ. ಎಲ್ಲರಿಗೂ ಗೊತ್ತಿರುವುದು, ಹಳೆ ದ್ವೇಷ ಮರೆತು ಅಣ್ಣನ ಮಗನನ್ನು ಒಪ್ಪಿಕೊಂಡ ಕೇಶವ ಭಟ್ಟರು ಮಾತ್ರ. ಆದರೆ ಅವರಂಥ ಕುತಂತ್ರಿ ಇನ್ನೊಬ್ಬರಿಲ್ಲ. ಸದಾಶಿವ ಲಾರಿ ಗುದ್ದಿ ಸತ್ತದ್ದು, ಮಹಾಬಲ ಅರೆಹುಚ್ಚ ಆದದ್ದು ಎಲ್ಲದಕ್ಕೂ ಕಾರಣ ಅವರೇ. ಅದ್ಯಾವುದೋ ಅಲೋಪತಿ ಮಾತ್ರೆಯನ್ನು ಒಂದು ತಿಂಗಳು ಊಟದಲ್ಲಿ ತಿನ್ನಿಸಿದ್ದರಂತೆ, ಈ ಮಹಾಬಲನಿಗೆ. ತಲೆ ಕೆಡಿಸುವ ಮಾತ್ರೆಯಂತೆ ಅದು. ಮಂಗಳೂರಿನ ಯಾವುದೋ ವೈದ್ಯರಿಗೆ ಎರಡು ಪಟ್ಟು ಹಣ ಕೊಟ್ಟು ತಂದದ್ದಂತೆ. ಅವರ ಮನೆಯಲ್ಲಿ ಕೆಲಸಕ್ಕಿದ್ದನಲ್ಲ ತನಿಯ, ಅವನೇ ನನ್ನಲ್ಲಿ ಹೇಳಿದ್ದು. ಬಟ್ಟಲು ಬಿಸಾಕಿದ, ಹೊಡೆದ ಇದೆಲ್ಲಾ ಶುದ್ಧ ಸುಳ್ಳು.
ನಾಗಶ್ರೀ ಅವರ ‘ ಮುಕ್ತಿ ‘ ಕತೆ ತುಂಬಾ ಸಹನೆಯಿಂದ , ಜೀವನ ಪ್ರೀತಿಯಿಂದ ಬರೆದ ಕತೆ. ಮುಕ್ತಿ ಓದುವಾಗ ಮಾಸ್ತಿಯವರು ನೆನಪಾದರು. ನಾಗಶ್ರೀ ಕತೆ ಹೇಳುವ ಶೈಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ತರಹ. ಕುಟುಂಬ, ಜೀವನ ಪ್ರೀತಿಯ ಆಯಾಮಗಳು ಈ ಕತೆಯಲ್ಲಿವೆ.
ಕಥನ ಕಲೆ ನಾಗಶ್ರೀಗೆ ಸಿದ್ಧಿಸಿದೆ. ಯಾವ ವಸ್ತುವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದು ಕಲಾತ್ಮಕತೆ ದಕ್ಕಿದೆ ಎನ್ನುತ್ತಾರೆ ಸಹೃದಯಿ ನಾಗರಾಜ್ ಹರಪನಹಳ್ಳಿ.
ಈ ವಾರದ ಸಂಗಾತಿಗಾಗಿ ಈ ಕತೆಯನ್ನು ಆಯ್ಕೆ ಮಾಡಿಕೊಟ್ಟಿದ್ದಾರೆ…
You cannot copy content of this page