ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ನೀನಾರಿಗಾದೆಯೋ

ಸಣ್ಣ ಕಥೆ ನೀನಾರಿಗಾದೆಯೋ ನಾಗರತ್ನ ಎಂ.ಜಿ. ಕಾವ್ ಕಾವ್ ಕಾವ್ ಒಂದೇ ಸಮನೇ ಅರಚುತ್ತಿದ್ದ ಕಾಗೆಗಳ ಕರ್ಕಶ ಕೂಗಿಗೆ ಬೆಳಗಿನ ಝಾವದ ನನ್ನ ಸಕ್ಕರೆ ನಿದ್ದೆಗೆ ಭಂಗ ಬಂತು. ಹೊದಿಕೆಯನ್ನು ಮತ್ತಷ್ಟು ಬಿಗಿಯಾಗಿ ಹೊದ್ದು ಕಿವಿ ಮುಚ್ಚಿ ಮಲಗಲು ಪ್ರಯತ್ನಿಸಿದೆ. ಕಾವ್.. ಕಾವ್…ಇಲ್ಲ ಮಲಗಲು ಬಿಡಲಿಲ್ಲ. ಛೇ ಏನು ಬಂತು ಈ ದರಿದ್ರ ಕಾಗೆಗಳಿಗೆ ಬೆಳ್ಳಂಬೆಳಿಗ್ಗೆ ರೋಗ..ಭಾನುವಾರದ ನಿದ್ದೆ ಹಾಳಾದ ಸಿಟ್ಟಿಗೆ ಹೊದಿಕೆ ಕಿತ್ತು ಬಿಸುಟು ಬಿರ ಬಿರ ಬಾಗಿಲಿಗೆ ಬಂದು ಚಿಲಕ ತೆಗೆದು ಅಂಗಳದಲ್ಲಿ ಕತ್ತು ಉದ್ದ ಮಾಡಿ ಇಣುಕಿದೆ.ಗಾಯಗೊಂಡ ಕಾಗೆಯೊಂದು ರೆಕ್ಕೆ ಬಡಿಯಲೂ ಶಕ್ತಿಯಿಲ್ಲದೇ ರಸ್ತೆಯಲ್ಲಿ ಬಿದ್ದಿತ್ತು. ಅದರ ಸುತ್ತ ನಿಂತ ಹತ್ತಾರು ಕಾಗೆಗಳು ಒಂದೇ ಸಮನೇ ಅರಚುತ್ತಿದ್ದವು. ಓ ಸರಿ ಇನ್ನು ಈ ಕಾಗೆ ಮತ್ತೆ ಏಳುವ ಹಾಗಾಗುವವರೆಗೂ ಇವುಗಳೆಲ್ಲ ಹೀಗೇ ಕಿರುಚುತ್ತವೆ. ಅತೀವ ಬೇಸರದಿಂದ ಕಾಲು ಝಾಡಿಸಿದೆ. ಇನ್ನು ಮಲಗಿದ ಹಾಗೇ..ಛೇ..ಒಂದು ಕಾಗೆಗಾಗಿ ಇಷ್ಟು ಅರಚಾಟವೇ? ಕೂದಲು ಕಿತ್ತುಕೊಳ್ಳುತ್ತ ಹಿಂದಿರುಗಿ ಹೋಗಲು ಹೊರಟವನಿಗೆ ಯಾಕೋ ಹಿಂದಿನ ರಾತ್ರಿ ನಡೆದ ಘಟನೆ ಕಣ್ಮುಂದೆ ಬಂದಂತಾಗಿ ಯಾರೋ ಕಪಾಳಕ್ಕೆ ಬೀಸಿ ಹೊಡೆದಂತಾಯಿತು. ಇದ್ದಕ್ಕಿದ್ದಂತೆ ಅವುಗಳ ಅರಚಾಟ ಆರ್ತನಾದದಂತೆ ಕೇಳಿಸಿತು. ಯಾರಾದರೂ ನಮ್ಮ ಮಿತ್ರನನ್ನು ಉಳಿಸಿ ಎಂದು ಬೇಡುತ್ತಿರುವಂತೆ…. ನನ್ನ ಮೇಲೆ ನನಗೇ ಅಸಹ್ಯ ಹುಟ್ಟಿ.. ಪಾಪ ಪ್ರಜ್ಞೆ ಕಾಡಿತು.ತಡ ರಾತ್ರಿ ಬೈಕ್ನಲ್ಲಿ ಮನೆಗೆ ಹಿಂದಿರುಗುವಾಗ ನಡು ರಸ್ತೆಯಲ್ಲಿ ಅತೀವವಾಗಿ ಗಾಯಗೊಂಡು ಬಿದ್ದಿದ್ದ ವ್ಯಕ್ತಿಯ ಕಡೆ ಕಣ್ಣು ಹೊರಳಿದರೂ ಕಂಡರೂ ಕಾಣದಂತೆ ಮತ್ತಷ್ತು ವೇಗವಾಗಿ ಗಾಡಿ ಓಡಿಸಿಕೊಂಡು ಬಂದು ಮನೆ ಸೇರಿದ್ದೆ..ನನಗೇಕೆ ಬೇಕು ಇಲ್ಲದ ಉಸಾಬರಿ ಎಂದು ಸಮರ್ಥಿಸಿಕೊಳ್ಳುತ್ತ…ನೆಮ್ಮದಿಯಾಗಿ ಮಲಗಿದ್ದೆ. ನನ್ನಂತೆಯೇ ಉಳಿದವರೂ ಒಮ್ಮೆ ನೋಡಿ ಚು ಚು ಎಂದು ಪೇಚಾಡಿಕೊಳ್ಳುತ್ತ ಮುಂದೆ ಸಾಗಿದರೇ ಹೊರತು ಯಾರೂ ಆ ವ್ಯಕ್ತಿಗೆ ಸಹಾಯ ಮಾಡುವ ಸೌಹಾರ್ದತೆ ತೋರಿಸಲಿಲ್ಲ. ಇದು ನಮ್ಮ ಇಂದಿನ ನಾಗರೀಕತೆ…ಯಾರನ್ನೂ ಅಂಟಿಸಿಕೊಳ್ಳದ ಮಾನವೀಯತೆ.ಇನ್ನೂ ಅರಚುತ್ತಲೇ ಇದ್ದ ಕಾಗೆಗಳು..ನಿಮಗಿಂತ ನಾವೇ ವಾಸಿ.. ಹೇ ಮನುಜ..ನೀನಾರಿಗಾದೆಯೋ…ಎಂದು ತಿವಿದಂತಾಯಿತು.

ನೀನಾರಿಗಾದೆಯೋ Read Post »

ಕಥಾಗುಚ್ಛ

ನಿರಾಕರಣ

ಕಥೆ ನಿರಾಕರಣ ಎಸ್.ನಾಗಶ್ರೀ ರಾಮಕ್ಕನವರು ಅವರ ರೇಷ್ಮೆಸೀರೆಗಳನ್ನೆಲ್ಲಾ ನೆಂಟರಿಷ್ಟರಿಗೆ, ಆಪ್ತರಿಗೆ ಹಂಚಿ ಇನ್ನು ಮೇಲೇನಿದ್ದರೂ ಹತ್ತಿ ಸೀರೆಯಷ್ಟೇ ಉಡುವುದೆಂಬ ನಿರ್ಧಾರ ಪ್ರಕಟಿಸಿದಾಗ ಅವರಿಗೆ ಎಪ್ಪತ್ತೈದಾಗಿತ್ತು. ಹಾಲಿಗೆ ಅರಿಶಿನ ಬೆರೆಸಿದಂತಹ ಮೈಬಣ್ಣ, ಕಡುಗಪ್ಪು ಕಣ್ಣು, ತುಸು ಉದ್ದವಾದ ಮೂಗು, ತುಂಬುದುಟಿ, ಪುಟ್ಟ ಚೆಂಡಿನ ಗಾತ್ರದ ತುರುಬಿನ ರಾಮಕ್ಕ ನೋಡಿದರೆ, ಮತ್ತೆ ತಿರುಗಿ ನೋಡಬೇಕೆನ್ನಿಸುವ ಲಕ್ಷಣವಂತೆ. ಮುತ್ತೈದೆಯಾಗಿದ್ದಾಗಿನ ಕಾಲದಲ್ಲಿ ಮಹಾಲಕ್ಷ್ಮಿಯೇ ಎಂದು ಜನ ಕೈಯೆತ್ತಿ ಮುಗಿಯುತ್ತಿದ್ದರಂತೆ. ಕರಿಮಣಿ ಸರ, ಕಾಲುಂಗುರ ತೆಗೆದರೂ ಚಿನ್ನದ ಸರ, ವಜ್ರದ ಮೂಗುತಿ, ಚಿನ್ನದ ಎರಡೆರಡು ಬಳೆ ಧರಿಸಿದ ರಾಮಕ್ಕನವರ ಪ್ರಭೆ ಇದ್ದ ಹಾಗೇ ಇತ್ತು. ಐವತ್ತನೆಯ ವಯಸ್ಸಿನಲ್ಲಿ ಗಂಡ ತೀರಿಕೊಂಡಾಗ ಬೆಳೆದ ಮಕ್ಕಳಿದ್ದರು. ಹೆಣ್ಣುಮಕ್ಕಳ ಮದುವೆಯಾಗಿತ್ತು. ಮೂರು ಗಂಡುಮಕ್ಕಳಿಗೆ ಮುತುವರ್ಜಿಯಿಂದ ಒಳ್ಳೆ ಕಡೆ ಹೆಣ್ಣು ತಂದು ಮದುವೆ ಮಾಡಿ, ಮೊಮ್ಮಕ್ಕಳನ್ನು ಲಾಲಿಸಿ, ಹೆಮ್ಮೆಯಿಂದ ಹರಸುವುದರಲ್ಲಿ ಕಾಲ ಮುಂದಕ್ಕೆ ಓಡಿದ್ದು ಸುಳ್ಳೆನಿಸುತ್ತಿತ್ತು.  ತನಗಿಂತ ಇಪ್ಪತ್ತು ವರ್ಷ ಹಿರಿಯನಾದ ಹುಡುಗನಿಗೆ ಮೂರನೆ ಹೆಂಡತಿಯಾಗಿ ರಮಾ ಮದುವೆಯಾಗಿ ಬಂದಾಗ, ಮನೆ ತುಂಬಾ ಅತ್ತೆ, ಮಾವ, ಓರಗಿತ್ತಿ, ಭಾವಂದಿರು, ಮೈದುನರು ಮತ್ತು ಅವರ ಮಕ್ಕಳು. ಇವರಿಗೆ ಮದುವೆಯಾಗಿ ಬಂದ ಹೆಂಡಿರಿಬ್ಬರೂ ಚೊಚ್ಚಲ ಹೆರಿಗೆಯಲ್ಲಿ ತೀರಿಕೊಂಡಿದ್ದರು. ತಾಯಿ ದಿಕ್ಕಿಲ್ಲದ ಮನೆಯ ಹಿರಿ ಹುಡುಗಿ ಅಂತ ಮಾವನವರು ಸ್ವಲ್ಪ ಹೆಚ್ಚೇ ಪ್ರೀತಿ ತೋರಿಸುತ್ತಿದ್ದರು. ಗಂಡನಿಗೆ ಹದಿನಾಲ್ಕರ ಎಳೆ ಹುಡುಗಿ ತನ್ನನ್ನು ನಂಬಿ ಬಂದಿದ್ದಾಳಲ್ಲ ಎಂಬ ಕನಿಕರ. ದುಡ್ಡಿಗೆ ಬಡತನವಿಲ್ಲದ ಮನೆ. ರೂಪವತಿ ಹೆಂಡತಿ. ಹೆಂಡತಿಗೆ ಇಷ್ಟವಾಗಬಹುದೆಂದು ತರತರದ ಸೀರೆ, ಕುಪ್ಪುಸದ ಬಟ್ಟೆ ತಂದು ತಂದು ಹಾಕುತ್ತಿದ್ದರು. ಮೈಮೇಲೆ ಒಂದು ಜೊತೆ , ದಂಡದ ಮೇಲೆ ಒಂದು ಜೊತೆ ಎಂದು ಎಣಿಸಿದಂತೆ ಬಟ್ಟೆಯಿದ್ದ ಅಮ್ಮನ ಮನೆಗಿಂತ ಈ ಮನೆ ಖುಷಿ ಕೊಡುತ್ತಿತ್ತು. ಅದೇ ಖುಷಿಯಲ್ಲೇ ಹದಿನಾರನೇ ವಯಸ್ಸಿನಲ್ಲಿ ಚೊಚ್ಚಲ ಬಸುರಿಯೆಂದು ತಿಳಿದಾಗ, ಅಪ್ಪನಿಗೆ ಆನಂದ. ಅತ್ತೆ ಮನೆಯಲ್ಲಿ ಆತಂಕ. ಪ್ರತಿದಿನ ಪೂಜೆ, ಹರಕೆಗಳ ಬಾಬತ್ತು. ಬಹಳ ಮುಗ್ಧ ಮನಸ್ಸಿನ ರಮಾಗೆ ಆನಂದ, ಆತಂಕಗಳಾವುದೂ ಅಷ್ಟಾಗಿ ತಟ್ಟದಿದ್ದರೂ, ಒಂದೊಮ್ಮೆ ತಾನೂ ಹೆರಿಗೆಯಲ್ಲಿ ಸತ್ತರೆ ಎಂಬ ಭಯ ಆಗಾಗ ಆವರಿಸುತ್ತಿತ್ತು. ಆದರೆ ಜೋತಿಷಿಯಾದ ಅಪ್ಪನೇ ಹೇಳುತ್ತಿದ್ದಂತೆ ದೀರ್ಘಾಯುಷ್ಯ ದ ಜಾತಕ ನನ್ನದು ಎಂಬ ಧೈರ್ಯ ಸಾಂತ್ವನ ನೀಡುತ್ತಿತ್ತು. ಅಂತೂ ಹೆರಿಗೆ ಸುಸೂತ್ರವಾಗಿ ಮಗು ಬಾಣಂತಿ ಮನೆಗೆ ಬಂದಾಗ ಎಲ್ಲರಿಗೂ ನೆಮ್ಮದಿಯ ನಿಟ್ಟುಸಿರು. ಬಹಳ ಮುದ್ದಿನಿಂದ ಮಗಳಿಗೆ ‘ಆನಂದಿ’ ಎಂದು ಕರೆದರು. ಹಿರಿಮಗಳಾದ್ದರಿಂದ ತಮ್ಮ, ತಂಗಿಯರ ಜವಾಬ್ದಾರಿಯೂ ಹೆಗಲೇರಿ ರಮಾ , ಎಲ್ಲರ ಬಾಯಲ್ಲೂ ರಮಕ್ಕ, ರಮಕ್ಕ ಅಂತ ಕರೆಸಿಕೊಳ್ತಾ ಕಡೆಗೆ ನಾಲಿಗೆ ಹೊರಳಿದಂತೆ ರಾಮಕ್ಕನಾದಳು. ರಮಾದೇವಿಯೆಂಬ ಹೆಸರು ಹದಿನಾರನೇ ವಯಸ್ಸಿಗೇ ಕಳಚಿಕೊಂಡಿತು. ಗಂಡ ಮಾತ್ರ ಆಗಾಗ ದೇವಿ…ದೇವಿ…ಎಂದುಸುರುತ್ತಾ ಹತ್ತಿರವಾದ ಕ್ಷಣಗಳು ಆಗೀಗ ನೆನಪಾಗಿ ಕಣ್ತುಂಬುವುದು.ತುಂಬಿದ ಸಂಸಾರದ ಕಟ್ಟುಪಾಡು, ತವರಿಗೆ ಆಸರೆಯಾಗಬೇಕಾದ ಅನಿವಾರ್ಯ, ತನ್ನ ಆರು ಮಕ್ಕಳ ಜವಾಬ್ದಾರಿ, ವಯಸ್ಸಿನಲ್ಲಿ ತುಂಬಾ ಹಿರಿಯನೆನನ್ನಿಸುವ ಗಂಡ ಇವುಗಳಲ್ಲಿ ಮುಳುಗೇಳುತ್ತಾ ರಾಮಕ್ಕ ವಯಸ್ಸಿಗೆ ಮೀರಿದ ಪ್ರಬುದ್ಧತೆ ಸಂಪಾದಿಸಿಕೊಂಡಿದ್ದಳು. ತೆರೆದ ಕಣ್ಣು, ಕಿವಿಗಳಿಂದ ಜಗತ್ತನ್ನು ನೋಡುತ್ತಲಿದ್ದರೆ ಸಾಕು. ಯಾವ ವಿದ್ಯಾಭ್ಯಾಸವೂ ನೀಡದಷ್ಟು ವಿವೇಕವನ್ನು ಜಗತ್ತು ಕಲಿಸುತ್ತದೆಂದು ನಂಬಿದ್ದಳು. ಅದರಂತೆಯೇ ರಕ್ತಗತವಾಗಿದ್ದ ಧೈರ್ಯ, ಏನಾದರೂ ಸಾಧಿಸಿಬಿಡುವ ಛಾತಿಯಿಂದಲೂ ಮನೆಯಲ್ಲಿ ಗೌರವ, ಪ್ರತ್ಯೇಕ ಸ್ಥಾನವನ್ನು ಗಳಿಸಿದ್ದ ಆಕೆಯ ಮಾತಿಗೆ ಎದುರಾಡುವರೇ ಇರಲಿಲ್ಲ. ಈಗಲೂ ಒಂದು ಬೀರು ಭರ್ತಿಯಿದ್ದ ಕಂಚಿ, ಬನಾರಸಿ, ಇಳಕಲ್, ಮೊಳಕಾಲ್ಮೂರು, ಮೈಸೂರ್ ಸಿಲ್ಕ್ ಸೀರೆಗಳನ್ನು ಎಲ್ಲರಿಗೂ ಹಂಚುತ್ತಿದ್ದರೂ ಯಾರೊಬ್ಬರೂ ಪ್ರಶ್ನಿಸಲಾಗಲಿಲ್ಲ. ಎಪ್ಪತ್ತು ಎಂಭತ್ತು ಸೀರೆಗಳು ಒಂದೊಂದೂ ಐದಾರು ಸಾವಿರಕ್ಕೆ ಕಮ್ಮಿ ಹೇಗಾದೀತು? ಅದರಲ್ಲೂ ಹಳೆ ಸೀರೆಗಳ ಅಂಚಿನಲ್ಲಿ ಬೆಳ್ಳಿ, ಬಂಗಾರವಿರದೆ ಇರುತ್ತದೆಯೇ? ಮನುಷ್ಯನಿಗೆ ಎಷ್ಟು ಆಸ್ತಿಪಾಸ್ತಿಯಿದ್ದರೂ ಹೆತ್ತವರ ಸ್ವತ್ತು ಪರರ ಪಾಲಾಗುವುದನ್ನು ನೋಡಿ ಸಹಿಸಲು ಸಾಧ್ಯವೇ? ರಾಮಕ್ಕನವರ ಈ ದಿಢೀರ್ ಬದಲಾವಣೆ ಅಷ್ಟು ಸುಲಭಕ್ಕೆ ಯಾರಿಗೂ ನಿಲುಕಲಿಲ್ಲ. ನಿನ್ನೆ ಮೊನ್ನೆಯವರೆಗೂ ಕುಟುಂಬದ ಸಮಾರಂಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ, ಕಡೆಗೆ ಒಂದು ಹೋಟೆಲ್ಗೆ ಹೋಗುವಾಗಲೂ ರೇಷ್ಮೆ ಸೀರೆ, ಅದಕ್ಕೊಪ್ಪುವ ರವಿಕೆ, ಎರಡೆಳೆ ಚಿನ್ನದ ಸರದ ಜೊತೆಗೆ ಮುತ್ತಿನ ಸರ, ಅಥವಾ ಹವಳದ ಸರ ತೊಟ್ಟು ಒಂದು ಬಗೆಯ ಗಾಂಭೀರ್ಯದಿಂದ ನಡೆದು ಬರುತ್ತಿದ್ದ ತಮ್ಮ ತಾಯಿ ಈಗ ಸಾದಾ ಸೀರೆ ಬಿಟ್ಟು ಮತ್ಯಾವುದೂ ಬೇಡವೆಂದಿದ್ದು ಗುಲ್ಲಾಗಿತ್ತು. ಮೂವರು ಸೊಸೆಯರು ತಮ್ಮಲ್ಲೂ ಸೀರೆಗಳ ರಾಶಿ ಹೊಂದಿದ್ದರೂ, ಅವರು ತಮ್ಮ ಮಕ್ಕಳ ಚೌಲ, ಉಪನಯನ, ಮದುವೆ, ಗೃಹಪ್ರವೇಶ ಇತ್ಯಾದಿಗಳಲ್ಲಿ ಪಾದಪೂಜೆಗೆಂದು ನಾಲ್ಕಾರು ಅಂಗಡಿ ಸುತ್ತಿ, ಸಾವಿರಾರು ರುಪಾಯಿ ಖರ್ಚು ಮಾಡಿ ತಂದ ಸೀರೆಗಳನ್ನು ಬೇಕೆಂದವರಿಗೆ ಕೊಟ್ಟುಬಿಡುತ್ತಿರುವುದು ಸರಿ ಕಂಡಿರಲಿಲ್ಲ. ಇನ್ನು ಕೆಲವು ಸೀರೆಗಳು ಕೊಡುವುದಾದರೆ ತಮಗೇ ಕೊಡಲಿ ಎನ್ನಿಸುವಷ್ಟು ಚೆಂದಿದ್ದವು. ಗಿಣಿಹಸುರಿಗೆ ಗಾಢನೀಲಿ ಅಂಚಿದ್ದ ಕಂಚಿ ಸೀರೆ, ನೇರಳೆ ಬಣ್ಣದ ಬನಾರಸಿ ಸೀರೆ, ಹತ್ತಾರು ಬಣ್ಣದ ಮೈಸೂರ್ ಸಿಲ್ಕ್ ಗಳ ಮೇಲೆ ಆಸೆಯಿಟ್ಟುಕೊಂಡಿದ್ದ ಸೊಸೆಯರು ಆಡಲೂ ಆಗದೆ , ಸುಮ್ಮನಿರಲೂ ಆಗದೆ ತಳಮಳಿಸುವಾಗಲೇ ರಾಮಕ್ಕನವರು ಸೊಸೆಯರು, ಹೆಣ್ಣುಮಕ್ಕಳು, ಮೊಮ್ಮಕ್ಕಳು ಎಲ್ಲರೂ ಒಂದು ಶನಿವಾರ ತಾವಿರುವಲ್ಲಿಗೆ ಬನ್ನಿರೆಂದು ಕರೆದರು. ಏನಿದ್ದರೂ ಫೋನಿನಲ್ಲಿ ವಾರಕ್ಕೊಂದೆರಡು ಸಲ ತಮ್ಮತಮ್ಮಲ್ಲೇ ಮಾತಾಡಿಕೊಂಡಿರುತ್ತಿದ್ದ ಸೊಸೆಯರು, ಹೆಣ್ಣು ಮಕ್ಕಳು ಒಟ್ಟಾಗಿ ಸೇರಿ ಆರುತಿಂಗಳ ಮೇಲೇ ಆಗಿತ್ತು. ಆನಂದಿ ತೀರಿಕೊಂಡಾಗ ತಿಥಿ, ವೈಕುಂಠ ಅಂತ ಹೋದ ಹದಿನೈದು ದಿನಗಳೊಳಗೆ ಜೊತೆಯಾಗಿ ಹೋಗಿ ಬಂದಿದ್ದಷ್ಟೇ. ಆಮೇಲೆ ಸಿಗುವ ಸಂದರ್ಭ ಒದಗಿಬರಲಿಲ್ಲ. ಮಾತು ಹೇಗೆ ತಿರುಗಿದರೂ ಆನಂದಿಯ ವಿಷಯಕ್ಕೇ ಬಂದು ನಿಂತು ನಿರ್ವಾತ ಕವಿಯುತ್ತಿತ್ತು. ಆ ಮುಜುಗರದಿಂದ ಪಾರಾಗಲೋ ಎಂಬಂತೆ ಮೇಲೆಮೇಲೆ ಕುಶಲ ಸಂಭಾಷಣೆ ನಡೆಸಿ ಫೋನಿಟ್ಟುಬಿಡುವ ದಾರಿ ಹಿತವಾಗಿತ್ತು. ಈಗ ಶುರುವಾದ ಸೀರೆ ವಿವಾದ ಮತ್ತು ರಾಮಕ್ಕನ ಕರೆ ಗಮನವನ್ನು ಬೇರೆಡೆಗೆ ಹೊರಳಿಸಿದ್ದು ಕೂಡ ಒಳಿತೇ ಆಯಿತು. ರಾಮಕ್ಕರ ಆರು ಮಕ್ಕಳ ಪೈಕಿ ಆನಂದಿಯೇ ವಿಭಿನ್ನ. ಮೌನಿ. ಧಾರಾಳಿ. ಆದರೆ ಸದಾ ಕೊರಗನ್ನು ಹಚ್ಚಿಕೊಂಡೇ ಬಾಳಿದ ಹೆಣ್ಣು. ಒಳ್ಳೆಯ ಗಂಡ, ಮುದ್ದಾದ ಮಕ್ಕಳು, ಸ್ವಂತ ಮನೆ, ಸ್ವಾತಂತ್ರ್ಯ ಎಲ್ಲ ಇದ್ದೂ ತಾನು ಕನಸಿದ್ದ ಬಾಳು ಇದಲ್ಲ ಎಂದು ನಿರಾಕರಣೆಯಲ್ಲೇ ದಿನದೂಡಿದಳು. ಅಮ್ಮನೊಂದಿಗೆ ಆಡಿದ ಕೆಲವೇ ಮಾತುಗಳಲ್ಲೂ ಅತೃಪ್ತಿಯ ಅಂಶಗಳಿದ್ದವೇ ಹೊರತು ಜೀವನಪ್ರೀತಿಯಲ್ಲ. ಆನಂದಿಯ ಮುಖದಲ್ಲಿ ನಗುವನ್ನು ಮೂಡಿಸಲು ರಾಮಕ್ಕ ಪಟ್ಟಪಾಡು ಒಂದೆರಡಲ್ಲ. ಅವಳಿಗಿಷ್ಟದ ತಿಂಡಿ, ಬಟ್ಟೆ, ಪ್ರವಾಸ, ನೆಮ್ಮದಿ ತರಬಹುದಾದ ಮಾತು, ಸಂಗೀತ, ಬೆಚ್ಚನೆ ತವರು ಎಲ್ಲವನ್ನೂ ಪ್ರಯತ್ನಿಸಿ ಕಡೆಗೆ ಮಾನಸಿಕ ವೈದ್ಯರ ಹತ್ತಿರವೂ ತೋರಿಸಿ , ಚಿಕಿತ್ಸೆಯಾಯಿತು. ಔಷಧಿಯ ಪ್ರಭಾವದಿಂದ ಸ್ವಲ್ಪ ಚೇತರಿಕೆ ಕಂಡಂತಾದರೂ ಮತ್ತೆ ಯಥಾಸ್ಥಿತಿಗೆ ಮರಳುತ್ತಿದ್ದ ಮಗಳು ಜೀವನದ ಸವಾಲಾಗಿದ್ದಳು.ಅವಳಿಗೆಂದು ಆಸೆಯಿಂದ ಕೊಂಡುಹೋದ ತಿಂಡಿ, ಹಣ್ಣು, ಬಟ್ಟೆ, ಒಡವೆ ಯಾವುದನ್ನೂ ಆಕೆ ತನಗಾಗಿ ಉಳಿಸಿಕೊಳ್ಳುತ್ತಲೇ ಇರಲಿಲ್ಲ. ಎಲ್ಲವನ್ನೂ ಹಂಚಿ, ತಾನು ಮಾತ್ರ ಹಿಡಿಯನ್ನ, ನಾಲ್ಕಾರು ಸಾದಾ ಸೀರೆ, ಮಂಕಾದ ರವಿಕೆಯಲ್ಲೇ ಜೀವನ ಸವೆಸಿಬಿಟ್ಟಳು. ಏಕೆಂದು ಘಟ್ಟಿಸಿ ಕೇಳುವಂತಿಲ್ಲ. ನನಗೇನು ರೂಪ, ವಿದ್ಯೆ, ಅಧಿಕಾರ ಇದೆಯೇ? ನಿನ್ನಂತೆ ಮೆರೆಯಲು… ಕೊಟ್ಟ ಮೇಲೆ ಅದು ನನ್ನದೆನ್ನುವ ಹಾಗಿದ್ರೆ ಕೊಡು. ಇಲ್ಲದಿದ್ದರೆ ತರುವ ಉಸಾಬರಿಯೇ ನಿನಗೆ ಬೇಡವೆನ್ನುತ್ತಿದ್ದಳು. ಸಮಾರಂಭಗಳಲ್ಲಿ ಉಳಿದವರೆಲ್ಲಾ ಮಿಂಚುತ್ತಿದ್ದರೆ, ತಾನೊಂದು ಮೂಲೆಯಲ್ಲಿ ಇವರಾರಿಗೂ ಸಂಬಂಧಿಸಿಯೇ ಇಲ್ಲವೆಂಬ ನಿರ್ಲಿಪ್ತ ಭಾವದಲ್ಲಿ ಕುಳಿತಿರುತ್ತಿದ್ದಳು. ನಾನು ಹಳೆಸೀರೆಯುಟ್ಟು ಬರುವುದು ನಿಮಗೆ ಇರುಸುಮುರುಸಾದೀತೆಂದು ಜನ ಸೇರುವಲ್ಲಿಗೆ ಬರುವುದನ್ನೇ ಬಿಟ್ಟಳು. ಒಂಟಿಯಾಗಿರುತ್ತ ಅದೇನನ್ನು ಧೇನಿಸುತ್ತಿದ್ದಳೋ? ಮಗಳೇ ಆದರೂ ರಾಮಕ್ಕನಿಗೆ ಅವಳ ಅಂತರಂಗವನ್ನು ಅರಿಯುವುದು ಅಸಾಧ್ಯ. ಉಳಿದೈದು ಮಕ್ಕಳಿಗೆ ಸೇರಿ ತೋರುವ ಕಾಳಜಿಗಿಂತ ಎರಡು ಪಟ್ಟು ಹೆಚ್ಚೇ ಕಾಳಜಿ ತೋರಿದರೂ, ಆನಂದಿಗೆ ಪ್ರಸನ್ನತೆಯಿರಲಿಲ್ಲ. ಇದ್ದಕ್ಕಿದ್ದಂತೆ ಹೃದಯ ಸ್ತಂಭನವುಂಟಾಗಿ ತೀರಿಕೊಂಡ ಆಕೆಯ ಸಾವು ರಾಮಕ್ಕನನ್ನು ಬಲವಾಗಿ ತಟ್ಟಿತ್ತು. ಐವತ್ತೊಂಭತ್ತು ಸಾಯುವ ವಯಸ್ಸೇ? ಎಪ್ಪತ್ತೈದರ ತನಗೇ ಈ ಬದುಕಿನ ಸವಿಯನ್ನು ಇನ್ನಷ್ಟು ಸವಿಯಬೇಕೆನ್ನಿಸುವಾಗ ನಿರಾಕರಣೆಯಲ್ಲೇ ಬದುಕು ದೂಡಿದ ಆಕೆ ಅನುಭವಿಸಿದ್ದಾದರೂ ಏನನ್ನು?   ಬದುಕಿನ ಹಂಬಲ ಅಪರೂಪವೇ? ತನ್ನನ್ನು ಈ ಬದುಕಿಗೆ ಕಟ್ಟಿಹಾಕಿರುವುದಾದರೂ ಏನು? ವಯಸ್ಸಾದಂತೆ ಮೋಹ ಕಳಚಿಕೊಳ್ಳಬೇಕೆನ್ನುತ್ತಾರೆ. ತನಗೇಕೆ ವೈರಾಗ್ಯ ಸೋಕಿಲ್ಲ? ಹೀಗೆ ನೂರಾರು ಪ್ರಶ್ನೆಗಳು ತಲೆತಿನ್ನುತ್ತಿತ್ತು. ಇದುವರೆಗೂ ಕೂಡಿಟ್ಟುಕೊಳ್ಳುವುದರಲ್ಲಿ, ಉಂಡುಟ್ಟು ಸಂಭ್ರಮಿಸುವುದರಲ್ಲಿ ಕಳೆದ ಕಾಲದ ಬಗ್ಗೆ ವಿಷಾದವಿಟ್ಟುಕೊಳ್ಳದೆ, ಮುಂದೆ ಸರಳವಾಗುತ್ತಾ ಸಾಗಲು ಪ್ರಯತ್ನಿಸಬೇಕೆನ್ನಿಸಿತು. ಆನಂದಿಯ ಸಾವು , ತನ್ನ ಮೊದಲ ಕರುಳಕೂಸಿನ ಅಗಲುವಿಕೆ ತನ್ನ ಬದುಕಿನ ಮತ್ತೊಂದು ತಿರುವು. ಉದಾರವಾಗಿ ಕೊಡುವುದರಲ್ಲಿ ತೃಪ್ತಿಯನ್ನು ಕಂಡಿದ್ದ, ಮೌನವಾಗಿ ಕಾರ್ಯ ಸಾಧಿಸುತ್ತಿದ್ದ ಮಗಳು ಬದುಕಿನ ಸವಾಲಾಗಿರಲಿಲ್ಲ. ಗುರುವಾಗಿದ್ದಳೆನ್ನಿಸಿ ಗಂಟಲುಬ್ಬಿ ಬಂದಿತು. ಅವಳಿದ್ದಷ್ಟು ದಿನವೂ ಅವಳಿಗೆ ಹೊರಗಿನಿಂದ ನೆಮ್ಮದಿಯನ್ನು ಹುಡುಕಿಕೊಡುವ ಸಕಲ ಸಾಹಸಗಳನ್ನು ಮಾಡಿದೆನೇ ಹೊರತು, ಅವಳಾಗಿಯೇ ಬದುಕನ್ನು ಅರ್ಥೈಸಿಕೊಳ್ಳಲು ಬಿಡಲೇ ಇಲ್ಲವೆನಿಸಿತು. ಅಥವಾ ಅವಳು ಕಂಡುಕೊಂಡಿದ್ದ ಅರ್ಥವನ್ನು ತನಗೆ ದಾಟಿಸದೆ ಹೊರಟಳೇನೋ ಎಂದು ವ್ಯಥೆಯಾಯಿತು. ತನಗೆಂದು ಏನನ್ನೂ ಶೇಖರಿಸದೆ, ಇರುವಾಗಲೇ ಎಲ್ಲವನ್ನೂ ಕೊಟ್ಟು ಹಾಯಾಗಿ ಹೊರಟುಬಿಟ್ಟ ಮಗಳು ಬಾಳಿ ಹೋದ ಪಾಠವನ್ನು ಕಲಿಯಲು ರಾಮಕ್ಕ ಮನಸ್ಸು ಮಾಡಿದ್ದಳು. ಮಕ್ಕಳು , ಸೊಸೆ, ಮೊಮ್ಮಕ್ಕಳೆಲ್ಲಾ ಸೇರಿ ಅಂದು ಹಬ್ಬದ ವಾತಾವರಣ ಮೂಡಿತ್ತು. ಹತ್ತು ಹದಿನೈದು ಸೀರೆಗಳನ್ನು ಅವರಿವರಿಗೆ ಕೊಟ್ಟಿದ್ದರು ಬಿಟ್ಟರೆ ಬಹುಪಾಲು ಸೀರೆಗಳು ಬೀರುವಿನಲ್ಲಿ ಭದ್ರವಾಗಿ ಕೂತಿದ್ದವು. ಬಂದವರಿಗೆಲ್ಲಾ ಅವರಿಗಿಷ್ಟದ ಸೀರೆ ಆಯ್ದುಕೊಳ್ಳುವಂತೆ ಸೂಚಿಸಿ, ಅವರ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಾ ಹೋದಂತೆ ಅತ್ಯಂತ ಸಂತೃಪ್ತ ಭಾವ ಮೈದುಂಬಿತ್ತು. ಬದುಕು ಮಗ್ಗುಲು‌ ಬದಲಿಸುತ್ತಿತ್ತು. ……..

ನಿರಾಕರಣ Read Post »

ಕಥಾಗುಚ್ಛ

ನಿರ್ಧಾರ

ದಿನಗಳೆದಂತೆ ಯೋಗಿಯೊಂದಿಗಿನ ಆತ್ಮೀಯತೆ ವಿನುತಳಲ್ಲಿ ಹೊಸ ಹುರುಪು ಮೂಡಿಸಿತ್ತು.ಯೋಗಿಯು ವಿನುತಳನ್ನು ಅನುರಾಗದ ಭಾವದಿಂದ ನೋಡುತಿದ್ದ.ಇಬ್ಬರಲ್ಲಿ ಮೂಡಿದ ಪ್ರೀತಿ ತೋರ್ಪಡಿಸದಿರಲು ಇಬ್ಬರು ಹೆಣಗುತಿದ್ದರು .ಆದರೆ ಇದರ ಅರಿವು ಮೋದಲಾದದ್ದು ಸುಮಿತ್ರಳಿಗೆ. ವಿನುತ ಜೀವನದಲ್ಲಿ ಮುಂದುವರೆಯುವದು ಸುಮಿತ್ರಳಿಗೆ ಖುಷಿಯ ವಿಷಯವಾಗಿತ್ತು.

ನಿರ್ಧಾರ Read Post »

ಕಥಾಗುಚ್ಛ

ಶಾಂಭವಿ, ಬಣ್ಣ, ಜಾತಿ ಮುಂತಾಗಿ..

ಸಣ್ಣಕಥೆ ಶಾಂಭವಿ, ಬಣ್ಣ, ಜಾತಿ ಮುಂತಾಗಿ.. ಡಾ. ಅರಕಲಗೂಡು ನೀಲಕಂಠ ಮೂರ್ತಿ –01– ಮೊಬೈಲ್  ವಾಟ್ಸ್ಯಾಪ್ ರಿಂಗಾದಾಗ ಸುಮಾರು ರಾತ್ರಿ ಹತ್ತು ಗಂಟೆಯ ಸಮಯ. ಊಟ ಮುಗಿಸಿ, ಪಾತ್ರೆ ತೊಳೆಯುವುದು ಇನ್ನೂ ಬಾಕಿ. ಅಷ್ಟರಲ್ಲಿ ಫೋನ್. ಉದ್ದ ರಿಂಗ್ ಆದಾಗಲೇ ಬಹುಶಃ ಇದು ಭಾರತದ್ದಲ್ಲ ಅನ್ನಿಸಿತು. ನಿರಂಜನ್ ತಮ್ಮ ಆಫೀಸಿನ ಫೈಲ್ ಹಿಡಿದು ಮಗ್ನರಾಗಿದ್ದರು. ಇಂತಹ ಫೋನ್ ಕಾಲ್ ಗಳು ಬರುವುದೇ ಅವರಿಗೆ. ಹಾಗಿದ್ದರೂ ಸುಮ್ಮನೆ ಫೈಲೊಳಗೇ ಇಳಿದಿದ್ದಾರೆ. ನಾನು ಕಿಚನ್ನಿನಲ್ಲಿದ್ದೇನೆ, ಹಾಲ್ನಲ್ಲಲ್ಲ, ಅಂತ ಅರಿತೂ ಸಹ. ಪಾಪು ಗಾಢ ನಿದ್ದೆಯಲ್ಲಿದ್ದಳು. ಯಾರಿರಬಹುದು? ಉದ್ದವಾದ ರಿಂಗ್ ಬೇರೆ. ವಿದೇಶದ್ದೇ ಅನ್ನಿಸಿತು. “ತಮ್ಮದೇ ಕಾಲ್, ಅವರೇ ಎದ್ದು ನೋಡಬಹುದು, ಆದರೂ ನೋಡು,ಅವರನ್ನ”, ಅನ್ನಿಸಿತು. ಕೊನೆಗೆ ನಾನೇ  ಓಡಿದೆ. ನನ್ನದೇ  ಫೋನ್. ನನಗೆ ಈ ಫೋನಿನ, ಆ ಫೋನಿನ ಅಂತ  ‘ಕರೆಯ ರಿಂಗ್’ ಗಳನ್ನು ಕೇಳಿ ಗುರುತು ಹೀಡಿಯೋದು ಸ್ವಲ್ಪ ಕಷ್ಟವೇ. ಆದರೆ, ಈಗ ಆಶ್ಚರ್ಯ ಕಾದಿತ್ತು. ನನಗೆ ವಾಸ್ತವವಾಗಿ ವಿದೇಶೀ ಫೋನ್ ಬಂದದ್ದೇ ಇಲ್ಲ – ಶಾಂಭವಿ  ಹೋದ ಹೊಸದರಲ್ಲಿ ಮಾಡಿದ್ದು ಬಿಟ್ಟು. ಅವಳಲ್ಲದೆ ನನ್ನವರು ಅಂತ ವಿದೇಶದಲ್ಲಿ ಯಾರಿದ್ದಾರೆ? ಶಾಂಭವಿ! ಹೌದು, ಶಾಂಭವಿಯ ಫೋನ್, ಅಮೇರಿಕಾದಿಂದ! ನನ್ನ ಖುಷಿ ನಾನೇ ಅಮೇರಿಕಕ್ಕೆ ಒಮ್ಮೆಲೇ ಹಾರಿದಂತೆ. ನನ್ನ ಆತ್ಮೀಯ  ಗೆಳತಿಯಿಂದ. ಅವಳೂ ಅರ್ಜೆಂಟ್ನಲ್ಲಿದ್ದಳು, ಅನ್ನಿಸಿತು; ಆತುರಾತುರವಾಗೇ  ಮಾತು ಮುಗಿಸಿಬಿಟ್ಟಳು. ಮೂರ್ನಾಲ್ಕು ನಿಮಿಷಗಳು ಅಷ್ಟೇ. ಆದರೆ, ಮುಖ್ಯ ಸುದ್ದಿಯೆಂದರೆ, ಅವಳು ನಾಳೆಯೇ ಅಲ್ಲಿಂದ ಹೊರಟು  ರಜೆಗೆ ಬರುವವಳಿದ್ದಾಳೆ! ಇಷ್ಟು ತಿರುಳು…ಶಾಂಭವಿ  ನನ್ನ ಆಪ್ತ ಗೆಳತಿ. ಅವಳು ಮತ್ತು ವೈಶಾಲಿ ಇಬ್ಬರೇ ನನ್ನ ಆತ್ಮೀಯ ಗೆಳತಿಯರು . ಶಾಂಭವಿ  ನಿಜಕ್ಕೂ ಗಿಣಿಯೇ. ಅದೂ ಬಿಳೀ ಗಿಣಿ! ನಮ್ಮ ಕಾಲೇಜಿನಲ್ಲಿ ಅವಳಷ್ಟು ಬೆಳ್ಳಗಿದ್ದವರು, ಎಲ್ಲ ಕ್ಲಾಸ್ ನವರನ್ನೂ ಸೇರಿಸಿ ಹುಡುಕಿದರೂ, ಸಿಗುವುದೇ, ಬಹುಶಃ ಒಂದಿಬ್ಬರು. ಹಾಗಾಗಿ ಅವಳು ನಮ್ಮ ಬಿಳಿ ಗಿಣಿ. ಅಂದಾಕ್ಷಣ,  ಖಂಡಿತ ಗಿಣಿ ಮೂತಿಯವಳಂತೂ ಅಲ್ಲ!ಶಾಂಭವಿ ನನ್ನ ಆಪ್ತ ಗೆಳತಿ, ಆದುದರಿಂದ, ಈ ಹೊಗಳಿಕೆ, ಅಂತೇನೂ ಅಲ್ಲ. ಅವಳು ನೈಜ ಶ್ವೇತದ ಗೊಂಬೆ. ಕೇವಲ ಬಿಳಿ ಬಣ್ಣ ಮಾತ್ರವಲ್ಲ, ಸುಂದರಿಯೂ ಹೌದು! ಸಿನಿಮಾ ನಟಿಯರೂ ನಾಚುವಷ್ಟು! ಇಡೀ ಕಾಲೇಜೇನು, ಕಾಲೇಜಿನ ಪ್ರತಿ ಇಟ್ಟಿಗೆಯೂ, ಬಹುಶಃ ಅವಳ ಮೇಲೆ ಕಣ್ಣಿಟ್ಟಿತ್ತು ಅಂದರೆ ಅತಿಶಯವಲ್ಲ! ಹೌದು, ಇದೂ ವಾಸ್ತವ – ಸುಂದರಿಯರೆಲ್ಲರೂ ನಟಿಯರಾಗಿಲ್ಲ; ನಟನೆಯಲ್ಲಿ ಸಾಕಷ್ಟು  ನುರಿತಿದ್ದರೂ ಸಹ! ಹಲ್ಲು ಮತ್ತು ಕಡ್ಲೆ ಕಥೆ…ಬದುಕಿನ ಕಟು ಸತ್ಯ! ಅಷ್ಟೇ ಅಲ್ಲ; ಶಾಂಭವಿ ಇಂಟೆಲಿಜಂಟ್ ಕೂಡ. ವೆರಿ ಮಚ್! ಬ್ರಹ್ಮದೇವ ಎಲ್ಲರಿಗೂ ಇಂಥ ತಥಾಸ್ತು ಹೇಳುವುದು ಅಸಾಮಾನ್ಯ.ವೈಶಾಲಿ ಕೂಡ ಬಹಳ ಬುದ್ಧಿವಂತೆ. ಅವಳೂ ಸಹ ನನಗಿಂತ ಚೆನ್ನಾಗಿದ್ದಳು. ಹಾಗಾದರೆ, ನಾನು? ಅದನ್ನ ಅವರಿಬ್ಬರಲ್ಲಿ ಯಾರೋ ಒಬ್ಬರಾದರೂ ಹೇಳಬೇಕು ಅಲ್ಲವೇ-“ಲೇ,ನೀರಜ, ನೀನೂ ಚೆನ್ನಾಗಿದ್ದೀಯ” ಅಂತ… ನಾವು ಮೂವರು ಕೂಡ ಈಗ, ನಮ್ಮ ನಮ್ಮ  ಮದುವೆಯ ನಂತರ ಬೇರೆ ಬೇರೆ ದಿಕ್ಕು. ವೈಶಾಲಿ ಬೆಳಗಾವಿಯಲ್ಲಿ, ಶಾಂಭವಿ ಅಮೆರಿಕದ ಫ್ಲಾರಿಡದಲ್ಲಿ ಮತ್ತು ನಾನು ಬೆಂಗಳೂರಿನ  ಮಲ್ಲೇಶ್ವರದ ಹತ್ತಿರ.  ಶಾಂಭವಿಯ ಪತಿ ಬೆಂಗಳೂರಲ್ಲೇ ಸೆಟ್ಲಾಗುವ ಐಡಿಯಾದಿಂದ ಅಲ್ಲೇ ಕೋರಮಂಗಲದ ಹತ್ತಿರ ಮನೆ ಮತ್ತು ಸಾಕಷ್ಟು ಇತರ ಆಸ್ತಿ ಮಾಡಿಟ್ಟಿದ್ದಾರೆ. ನಾವು ಮೂವರು ಇಷ್ಟೊಂದು ಗಾಢ ಸ್ನೇಹಿತರು, ನಿಜ. ಆದರೂ ಸಹ, ‘ಎಲ್ಲರ ಬಗ್ಗೆ ಯಾರಿಗೂ ಅಥವಾ ಎಲ್ಲರಿಗೂ, ಒಬ್ಬೊಬ್ಬರ ವೈಯಕ್ತಿಕವಾದ ಸಂಪೂರ್ಣ ಅರಿವಿರುವುದಿಲ್ಲ’ ಅನ್ನುವುದೂ ಅಷ್ಟೇ ಸತ್ಯ! ಹಾಗೆಯೇ ಶಾಂಭವಿಯ ವಿಷಯದಲ್ಲೂ, ಅವಳ ಆತ್ಮೀಯ ಗೆಳೆತಿಯಾದ ನೀರಜ, ಅಂದರೆ ನನಗೂ ಸಹ ಸಂಪೂರ್ಣ ಮಾಹಿತಿ ಇರಲಿಲ್ಲ ಅಂತ ಅನ್ನಿಸುತ್ತೆ…ಅದೂ ಸಹ ಶಾಂಭವಿಯ ಮದುವೆಯ ನಂತರದ ಬದುಕಿನ ಬಗ್ಗೆ. ಕಾರಣ ಮದುವೆಯ ಹೊಸ್ತಿಲಿನಿಂದಲೇ ಅನ್ನಿಸುವಂತೆ, ಅವಳು ತರಾತುರಿಯಿಂದ ಗಂಡನ ಜೊತೆ ಅಮೆರಿಕದ ವಿಮಾನ ಏರಿಬಿಟ್ಟಿದ್ದಳು. ಆಮೇಲೆ ಕಷ್ಟ-ಸುಖ ಅಂತಿರಲಿ, ಹೆಚ್ಚು ಫೋನ್ ಕೂಡ ಇಲ್ಲ. ವಾಟ್ಸ್ಯಾಪ್ ಇನ್ನೂ ಉಗಮ ಆಗದಿದ್ದ ಕಾಲದಲ್ಲಿ, ಫೋನಿನಲ್ಲಿ, ಅದೂ ಅಷ್ಟು ದೂರದ ಕರೆಗಳಲ್ಲಿ ಏನೇನು ಅಂತ ಮಾತಾಡಲು ಸಾಧ್ಯ? ಅವಳ ಅಪ್ಪ ಅಮ್ಮ ನನ್ನ ಜೊತೆ ಸಲಿಗೆಯಿಂದ ಇದ್ದರೂ, ಸುಮಾರು ಬಾರಿ ಫೋನ್ ಮಾಡಿದ್ದರೂ ಸಹ, ಎಲ್ಲ ರೀತಿಯ ವಿಚಾರ ವಿನಿಮಯ ಅವರೊಂದಿಗೆ ನನಗೆ ಸಾಧ್ಯವೇ? ಅವರೇನು ನನ್ನ ಓರಗೆಯವರೇ? ಶಾಂಭವಿಯ ಮದುವೆ,  ನನ್ನ ಮತ್ತು ವೈಶಾಲಿಯ ಮದುವೆಯಾಗಿ ಬರೋಬ್ಬರಿ ಎರಡೂವರೆ ವರ್ಷದ ನಂತರ, ಆದದ್ದು. ಅದಕ್ಕೆ ಕಾರಣವೂ, ಇಲ್ಲದಿಲ್ಲ. ನನಗೆ ಗೊತ್ತಿರುವುದು ಅಷ್ಟಿಷ್ಟು ಮಾತ್ರ;  ಶಾಂಭವಿ ಮಧ್ಯೆಮಧ್ಯೆ ಹೇಳುತ್ತಿದ್ದಷ್ಟು. ನಮ್ಮ ಎಜುಕೇಷನ್ ಮುಗಿದ ಮೇಲಂತೂ, ನಾನು ಮಲ್ಲೇಶ್ವರದಲ್ಲಿ, ಅವಳು ಕೆಂಗೇರಿಯಲ್ಲಿ; ಆಗಾಗ ಫೋನ್ ಕರೆ ಬಿಟ್ಟು, ಪರಸ್ಪರ ಹೋಗೋದು ಬರೋದು ಅಂತಲೂ ಇರಲಿಲ್ಲ. ಇನ್ನೆಲ್ಲಿಯ ವಿಚಾರ ವಿನಿಮಯ? ಮದುವೆಯ ನಂತರ ಅಂತೂ ಏನೇನು ಗೊತ್ತಿಲ್ಲ. ಪೂರ್ತಿ ಮಾಹಿತಿಯಂತೂ ಇಲ್ಲವೇ ಇಲ್ಲ. ಹಾಗಾಗಿ, ಅದರ ಬಗೆಗೆ….. –02– ನಾವೀಗ ಬೆಂಗಳೂರು ನಗರದ ಹೊರವಲಯದಲ್ಲಿ ವಾಸವಿದ್ದೇವೆ – ಕೆಂಗೇರಿಯಲ್ಲಿ. ನಾನು ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ರಿಟೈರ್ ಆಗಿ, ಸರಿ ಸುಮಾರು ಹತ್ತು ವರ್ಷಗಳೇ ಸಂದಿವೆ. ನನ್ನದು ಅಂತರ್ಜಾತೀಯ ವಿವಾಹ. ನಾನಾಗ ಲೆಕ್ಚರರ್ ಆಗಿದ್ದಾಗಿನಿಂದ ನನ್ನ ಪ್ರೇಮಕಥಾ ಪ್ರಸಂಗ ಆರಂಭ. ನನಗೆ ಡೆಪ್ಯೂಟೇಶನ್ ಮೇಲೆ ಚಿತ್ರದುರ್ಗಕ್ಕೆ ಎರಡು ತಿಂಗಳ ಕಾಲ ಕಳಿಸಿದ್ದರು. ಆಗ ಒಂದು ದಿನ ಲೈಬ್ರರಿಯಲ್ಲಿ ಯಾವುದೋ ಪುಸ್ತಕದ ಶಿಕಾರಿಯಲ್ಲಿ ಬಿಜಿಯಾಗಿದ್ದಾಗ, ಬಹುಶಃ ನನ್ನ ಕಷ್ಟ ನೋಡಲಾರದೆ ಇವಳು, ಪ್ರಭ – (ಹೌದು, ಈಗಿನ ಈ ಇವಳು, ಪ್ರಭ; ಆಗ ಇವಳಾಗಿರಲಿಲ್ಲ ಅಥವಾ ಪ್ರಭ ಕೂಡ ಆಗಿರಲಿಲ್ಲ; ಬದಲಿಗೆ, ಅವಳು ಮತ್ತು ಪ್ರಭಾಮಣಿ ಆಗಿದ್ದಾಗಿನ ಕಾಲ), – ತಾನೆ ಖುದ್ದು ಬಂದು, “ಎನಿ ಹೆಲ್ಪ್ ನೀಡೆಡ್” ಅಂತ ಕೇಳಿದ್ದಳು, ಕೇಳಿ ಒಂದು ಹೊಸ ಅಧ್ಯಾಯದ ಆರಂಭಕ್ಕೆ ಕಾರಣವಾಗಿ ಆಶ್ಚರ್ಯ ಮೂಡಿಸಿದ್ದಳು! ಹಾಗೆ ಪರಿಚಯವಾಗಿ, ಅಲ್ಲಿದ್ದ ಆ ಎರಡು ತಿಂಗಳ ಅವಧಿಯಲ್ಲಿ, ಅದು ಪ್ರೀತಿ- ಪ್ರೇಮ ಅಂತಲೂ ತಿರುವು ಪಡೆದು, ‘ನಮ್ಮ ಕಥೆ ನಾವೇ ದಿಗ್ಧರ್ಶಿಸಿಕೊಂಡ  ಹಾಗೆ’ ಡೆಪ್ಯೂಟೇಶನ್ ಮುಗಿಸಿ ವಾಪಸ್ ಆದ ಎರಡು ವರ್ಷಗಳ ನಂತರ ತಾಳಿ ಅಂತ ಭದ್ರ ಬಿಗಿದದ್ದು! ನಮ್ಮ ಆ ಬೆಚ್ಚನೆಯ ಭಾವನಾ ಬದುಕಿನ, ಕೆಚ್ಚಿನ ಸಮಯದಲ್ಲಿ, (ಮತ್ತು ಆಮೇಲೆ ಹಾಗೂ ಈಗ ಕೂಡ, ಅಥವ ಎಂದೆಂದಿಗೂ-ಬಹುಶಃ ನಾವು ಬದುಕಿರುವವರೆಗೂ) ನಮ್ಮ ಬಗ್ಗೆ ಯಾರು ಯಾರು ಏನೇನು ಕಥೆ ಹೆಣೆದಿದ್ದಾರೆ, ಏನೇನು ಹಿಂದೆಮುಂದೆ, ಸುತ್ತ ಮುತ್ತ ತಿವಿದು ತಿವಿದು ಅಣಕಿಸಿದ್ದಾರೆ, ಅದೆಲ್ಲ ಆಗಲೂ ನಮಗೆ ಮುಖ್ಯವಾಗಿರಲಿಲ್ಲ, ಹಾಗೂ ಈಗಲೂ ಇಲ್ಲ! ಆದರೆ…ನನ್ನ ಪ್ರೀತಿಯ ಅಪ್ಪ ಅಮ್ಮ? ಅವರಾದರೂ, ನನ್ನ ‘ಭುಜದೊಡನೆ ಭುಜವಾಗಿ’ ನಿಂತಿದ್ದರೆ, ಆ ದಿನಗಳಲ್ಲಿ, ಆನಂದ ಹಾಗೂ ಹಿಂಸೆಗಳ ದ್ವಂದ್ವ ಪರಿಸ್ಥಿತಿಯ ಆ ದಿನಗಳಲ್ಲಿ, ಮುಖ್ಯವಾಗಿ ಮದುವೆಯಾದ ತಕ್ಷಣದ ಕಾಲದಲ್ಲಿ, “ನಾವಿರುವೆವು ನಿಮ್ಮೊಂದಿಗೆ” ಅಂದಿದ್ದರೆ, ಅಷ್ಟಕ್ಕೇ ನಾನು ‘ಕೆಚ್ಚೆದೆಯಾಗಿರುತ್ತಿದ್ದೆ’! … ಆದರದು ಹಾಗಾಗಲೇ ಇಲ್ಲ. ಎಣಿಕೆಯೇ ಬೇರೆ, ನಡೆಯುವುದೇ ಬೇರೆ…! ಹಾಗಂತ ನಾನು ಹೇಡಿಯಾದೆ ಅಂತಲೂ ಅಲ್ಲ. ಹಾಗಾದರೆ ನನ್ನ ಹೆತ್ತವರನ್ನು ನಾನು ದೂಷಿಸಬಹುದೇ? ಅಕಸ್ಮಾತ್ ನಾನೇ ಅವರ ಸ್ಥಾನದಲ್ಲಿ ಇದ್ದಿದ್ದರೆ; ಆಗ ನನ್ನ ಯೋಚನೆಗಳು ಯಾವ ಕೋನದತ್ತ ತಿರುಗುತ್ತಿದ್ದವು? ಮೇಲಾಗಿ,  ಮನೆಗೆ ನಾನೇ ಹಿರಿಯನಾಗಿದ್ದೆ; ಆದರೆ ನನ್ನ ನಂತರ ಹೆಣ್ಣು ಮಕ್ಕಳು ಅಂತಲೂ ಇರಲಿಲ್ಲ. ಇದ್ದವರಿಬ್ಬರೂ ಅವಳಿ ತಮ್ಮಂದಿರು. ಈ ದಿಕ್ಕಿನಲ್ಲಿ ಯೋಚಿಸುವುದೂ ಸಹ ತಪ್ಪಾಗಿ, ನನ್ನ ಮೂತಿ ನೇರಕ್ಕೆ ನನ್ನದೇ ಮಾತಾದಂತೆ,  ಆಗಬಿಡಬಹುದು ಅಲ್ಲವೇ? ಹೌದು, ಜಾತಿ! ಹ್ಞೂ, ಜಾತಿ ಅನ್ನುವುದು  ಎಷ್ಟು ಕಠೋರ. ಇದು ಯಾವ ಬೇತಾಳ-ಸೃಷ್ಟಿ ಅನ್ನಿಸಿಬಿಡುತ್ತದೆ! ಕನಿಷ್ಠ ವಿಷಮ ಘಳಿಗೆಗಳಲ್ಲಿ… ನನ್ನ ಮೊದಲ ಮಗಳು, ಶಕುಂತಲ ಹುಟ್ಟಿದ ನಂತರ, ಏಳು ವರ್ಷಗಳು ಮಕ್ಕಳೇ ಆಗಿರಲಿಲ್ಲ. ವಾಸ್ತವವಾಗಿ, ನಮ್ಮಿಬ್ಬರಿಗೇ ಬೇಡ ಅನ್ನಿಸಿ, ಒಂದೇ ಸಾಕು, ಅವಳನ್ನೇ ಚೆನ್ನಾಗಿ ಸಾಕಿ ಸಲಹಿ, ಉತ್ತಮ ವಿದ್ಯಾವಂತಳನ್ನಾಗಿ ಬೆಳೆಸಿದರಾಯಿತು, ಅಂದುಕೊಂಡು ಸುಮ್ಮನಿದ್ದೆವು. ಶಕ್ಕುವಿನ  (ಶಕುಂತಲೆಯನ್ನು ನಾವು ಕರೆಯುವ ಹ್ರಸ್ವ ಹೆಸರು), ಆರನೇ ಹುಟ್ಟು ಹಬ್ಬದ ನಂತರ, ಅಥವಾ ಅಷ್ಟರಲ್ಲಿ, ಇದ್ದಕ್ಕಿದ್ದಂತೆ ಪ್ರಭಾಳಿಗೆ, ಇನ್ನೊಂದು  ಮಗು, ಗಂಡುಮಗು, ಬೇಕೆಂಬ ಹೆಬ್ಬಯಕೆ ಉಂಟಾಗಿ, ಮತ್ತು ತನ್ನ ಮೊದಲ ಮಗಳು ಮದುವೆಯಾಗಿ ಗಂಡನ ಮನೆ ಸೇರಿದ ಮೇಲೆ, ಈ ನಮ್ಮ ಮನೆ ಭಣಗುಡುವುದಲ್ಲ, ಅನ್ನುವ ಭ್ರಮೆ ಅಥವಾ ಭಯ ಕಾಡಲು ಆರಂಭಿಸಿ, ಹಠ ಹಿಡಿದ ಕಾರಣ ಬಂದವಳೇ ಈ ನಮ್ಮ ಶಾಂಭವಿ! ಪ್ರಭಾಳ ದುರದೃಷ್ಟ, ಗಂಡಾಗಲೇ ಇಲ್ಲ! ನಮ್ಮ ಶಕುಂತಲೆಯ ಮದುವೆ ಬಹಳವೇ ಕೆಟ್ಟಕಾಲದಂತೆ ಕಾಡಿ, ನಮ್ಮನ್ನು ಹಿಂಸಿಸಿ ಹಿಂಡಿಬಿಟ್ಟಿತ್ತು. ಯಾರು ಬಂದರೂ, ಹುಡುಗಿ ಒಪ್ಪಿಗೆಯಾಗಿದೆ, ತೀರ್ಮಾನ ಮಾಡಿ ತಿಳಿಸುವೆವು ಅಂತ ಹೇಳಿ ಹೋಗುತ್ತಿದ್ದರು; ಕ್ರಮೇಣ ಬ್ರೋಕರ್ ಮೂಲಕವೋ, ಇನ್ನಾರದೋ, ಅಥವ ಇನ್ನಾವುದೋ  ಮುಖಾಂತರವೋ, ಈಗಲೇ ಮದುವೆ ಮಾಡಲ್ಲ ಅಂತಲೋ, ಬೇರೊಂದು ಕಾರಣವನ್ನೋ, ಅಥವಾ  ಕಾರಣವೇ ಇಲ್ಲದ ಕಾರಣವೊಂದನ್ನು  ತೂರಿ, ನಿರ್ಗಮಿಸುತ್ತಿದ್ದರು. ಸತ್ಯ ಅಂದರೆ ನಮ್ಮಿಬ್ಬರ ಅಂತರ್ಜಾತಿ ಅಡ್ಡಲಾಗಿ ನಿಂತ  ಮುಳ್ಳು ಅಂತ ನಮಗೆ ಅರಿವಂತೂ ಆಗಿಬಿಡುತ್ತಿತ್ತು; ಈ ತೆರನಾದ   ಅನುಭವಗಳು ವಿಪುಲವಾಗಿ  ನಮ್ಮಿಬ್ಬರನ್ನೂ ಹೈರಾಣಾಗಿಸಿದ್ದವು.. ಅಂತಹ ಸಂದರ್ಭಗಳಲ್ಲಿ ಪ್ರಭ ಬೆಡ್ ರೂಮಿನಲ್ಲಿ  ಬಳ್ಳಗಟ್ಟಲೆ ಕಣ್ಣೀರು ಹರಿಸಿದ್ದಳು. ಕೊನೆಗೆ, “ಯಾವುದೇ ಕಾರ್ಯ ಆಗುವ ಹಾಗಿದ್ದರೆ, ಯಾವ ಪ್ರಚೋದನೆ ಇಲ್ಲದೆಯೂ, ಆಗಿಯೇ ತೀರುತ್ತದೆ, ಆ ಸುವರ್ಣ ಸಮಯಕ್ಕೆ ಸರಿಯಾಗಿ”, ಅನ್ನುವಂತೆ ನಮ್ಮ ಪಾಲಿನ ಭಗವಂತ ಒಮ್ಮೆ ಕಣ್ತೆರೆದೇಬಿಟ್ಟ! ನನ್ನ ಹಳೆಯ ಕೊಲೀಗ್ ಒಬ್ಬರ ಮೂಲಕ…ಅವರ ಆಪ್ತರ ಮಗ, ಫಿಸಿಕ್ಸ್ ಲೆಕ್ಚರರ್, ಶಶಾಂಕ್ ಎಂಬೊಬ್ಬರು ಒಪ್ಪಿ ಮದುವೆ ಅಂತ ಆಯಿತು! ಶಕುಂತಲೆಯ ರೂಪ ಕೂಡ ತೆಗೆದುಹಾಕುವ ಹಾಗೇನಿರಲಿಲ್ಲ. ಶಾಂಭವಿಯಷ್ಟು ಬಣ್ಣ ಮತ್ತು ಸೌಂದರ್ಯ  ಇಲ್ಲದಿದ್ದರೂ ಸಹ. ಆದರೂ ಸಹ, ನಮ್ಮ ಶಾಂಭವಿ ಬಹಳವೇ ರೂಪವಂತೆ ಆಗಿದ್ದುದರಿಂದ, ಯಾರೇ ಶಕುಂತಲೆಯನ್ನು ನೋಡಲು ಬಂದಾಗ, ಶಾಂಭವಿಯನ್ನು ಹೊರಗೆ ಏಲ್ಲಾದರೂ ಕಳಿಸಿ, ಅವಳು ಕಾಲೇಜಿಗೆ ಹೋಗಿದ್ದಾಳೆ, ಎಂದು ಕೇಳಿದವರಿಗೆ ಸುಳ್ಳು ಹೇಳುತ್ತಿದ್ದೆವು. ಇಷ್ಟಕ್ಕೂ ಈ ಜಾತಿ! ಜಾತಿ ಯಾರ ಅಪ್ಪನ ಮನೆ ಸ್ವತ್ತು, ಅಲ್ಲವೇ…! ನನ್ನ ಅಳಿಯ, ಶಶಾಂಕ್ ಕೂಡ, ಅಂತರ್ಜಾತೀಯ ತಾಯಿತಂದೆಯ ಮಗನೇ ಆಗಿದ್ದರು. ಅದೇ ನಮಗೆ ವರಪ್ರದಾಯವಾದದ್ದು! ಆಗ ನನಗೆ ಅನಿಸಿದ್ದು ಹೀಗೆ ಮತ್ತು ಇಷ್ಟು: ನಾನು ಮತ್ತು ಪ್ರಭಾಮಣಿ ಮಾತ್ರ ಈ ಪರಿಸ್ಥಿತಿಯ “ಯಜ್ಞಪಶು”ಗಳಾಗಿರಲಿಲ್ಲ”, ಬದಲಿಗೆ ನಮ್ಮಂಥಹವರು ಈ ಜಗತ್ತಿನಲ್ಲಿ, ಕನಿಷ್ಠ ನನ್ನ ಸುತ್ತಮುತ್ತಲಿನ ಜಗತ್ತಿನಲ್ಲಿ, ಅನೇಕ- ರಿದ್ದಾರೆ ಅನ್ನಿಸಿ ಸಮಾಧಾನ ಆಗಿತ್ತು! “ಅಯ್ಯಾ, ಗೆದ್ದುಬಿಟ್ಟೆಕಣೋ, ಮನೋಹರ!” ಅಂದುಕೊಂಡು ಸಮಾಧಾನ ಪಟ್ಟಿಕೊಂಡು , ಪ್ರಭಾಳಿಗೂ ಬೆನ್ನು ತಟ್ಟಿದ್ದೆ…ಆದರೆ, ಇನ್ನೂ ಮುಂದೆ ಮುಂದೆ ಬೃಹತ್ತಾಗಿ, ಬೆನ್ನುಫಣಿಯ ಹಾಗೆ ಅದೇ ಸಾಂಕ್ರಾಮಿಕ, ಅವಳ ತಂಗಿಯ ಮೂಲಕ, ಶಾಂಭವಿಯ ಮದುವೆ ಮೂಲಕ, ಕಾಡಬಹುದು ಅನ್ನಿಸಿರಲಿಲ್ಲ… ನಮ್ಮಪ್ಪ ಅಮ್ಮನಿಗೆ ನನ್ನ ನಂತರ ಹುಟ್ಟಿದ್ದು ನನ್ನ ಇಬ್ಬರು ತಮ್ಮಂದಿರು, ಅವಳಿ ಎಂದು ಆಗಲೇ ಹೇಳಿದ್ದೇನೆ. ಆದರೂ, ಅಷ್ಟಕ್ಕೇ ಅವರಿಗೆ ನನ್ನ ಅಂತರ್ಜಾತಿ ವಿವಾಹದ ‘ಭಯಂಕರ ಭೂತ’ ಹೊಕ್ಕಂತೆ ಜಿಗುಪ್ಸೆ ಕಾಡತೊಡಗಿ,  ನನ್ನನ್ನು ದೂರ

ಶಾಂಭವಿ, ಬಣ್ಣ, ಜಾತಿ ಮುಂತಾಗಿ.. Read Post »

ಕಥಾಗುಚ್ಛ

ಜೂನಿಯರ್ಸ್

ತಾಯಿಯ ಅನಾರೋಗ್ಯದ ಆತಂಕ, ಅನುಭವೀ ಗುಮಾಸ್ತರ ಅಮಾನುಷ ವರ್ತನೆಯಿ೦ದ ರೋಷಗೊಂಡ ನಾನು ಬದಲು ಮಾತನಾಡದೆ ಅರ್ಜಿಯನ್ನು ಅವರ ಮುಂದಿಟ್ಟು ನಿರ್ಗಮಿಸಬೇಕೆನ್ನುವಾಗ ಇಲಾಖೆಯಲ್ಲಿ ೧೫ ವರ್ಷ ಹಳಬರಾದ ಮಹಿಳೆಯೊಬ್ಬರು ರಜಾ ಅರ್ಜಿಯೊಂದಿಗೆ ಹಾಜರಾದರು. ಅವರನ್ನು ಕಂಡ ಕೂಡಲೇ ನಾಟಕೀಯ ವಾಗಿ ನಗುತ್ತ “ಏನ್ ಮೇಡಂ ಏನಾಗಬೇಕಿತ್ತು’ ಎಂದು ವಿನೀತನಾಗಿ ಕೇಳಿದ ಅವರನ್ನು ನೋಡಿ ಈಗ ತಾನೇ ಮಾನವೀಯತೆ ಇಲ್ಲದ ಗುರುಗುಟ್ಟಿದ ಮನುಷ್ಯ ಈತನೇನ ಅನ್ನಿಸಿತು.

ಜೂನಿಯರ್ಸ್ Read Post »

ಕಥಾಗುಚ್ಛ

ಇಳಿ ಸಂಜೆ

ಕಲ್ಲ ಬೆಂಚಿನ ಮೇಲೆ ಕೂತು ಪಾರ್ಕ್ ನಲ್ಲಿ ಆಡುತ್ತಿದ್ದ ಮಕ್ಕಳತ್ತ ನೋಡುತ್ತಿದ್ದರು. ಆ ಮಕ್ಕಳು ತಮ್ಮ ಅಜ್ಜ – ಅಜ್ಜಿಯರೊಂದಿಗೆ ಅಲ್ಲಿಗೆ ಬರುತ್ತಿದ್ದರು. ಅವರೆಲ್ಲರ ಇಳಿ ವಯಸ್ಸಿಗೆ ಮೊಮ್ಮಕ್ಕಳು ಮುಲಾಮುಗಳಾದರೆ, ನನಗೆ ಪಾರ್ವತಿ-ಪಾರ್ವತಿಗೆ ನಾನು ಔಷಧಿ ಎಂದುಕೊಂಡು ತಣ್ಣಗೆ ನಕ್ಕರು ರಾಯರು.

ಇಳಿ ಸಂಜೆ Read Post »

ಕಥಾಗುಚ್ಛ

“ತುಂಡು ಭೂಮಿ ಮತ್ತು ಬುದ್ಧ”

ಶ್ಯಾಮೇಗೌಡರು ಮನೆಯ ಚಾವಡಿ ತಲುಪಿದಾಗ ಅವರ ದೊಡ್ಡ ಮೊಮ್ಮಗ ಶಾಲೆಯ ಪಠ್ಯಪುಸ್ತಕ ಹಿಡಿದುಕೊಂಡು ಬುದ್ಧನ ಬೋಧನೆಗಳನ್ನು ಜೋರಾಗಿ ಉರುಹೊಡೆಯುತ್ತಿದ್ದ- “ಇತರರನ್ನು ಕ್ಷಮಿಸಬೇಕಾದದ್ದು ಅವರು ಕ್ಷಮೆಗೆ ಅರ್ಹರೆಂಬ ಕಾರಣಕ್ಕಾಗಿ ಅಲ್ಲ; ನೀವು ಶಾಂತಿಗೆ ಅರ್ಹರೆಂಬ ಕಾರಣಕ್ಕಾಗಿ…..”

“ತುಂಡು ಭೂಮಿ ಮತ್ತು ಬುದ್ಧ” Read Post »

ಕಥಾಗುಚ್ಛ

ಸಭೆಯಿಂದ ಹೊರಹೋಗುತ್ತಿದ್ದ ಹೆಂಗಸರಿಬ್ಬರು ” ಗಂಡ, ಮನೆ,ಮಕ್ಕಳು, ಸಂಸಾರ ಅಂತ ಕಟ್ಟಿಕೊಂಡು ನಮ್ಮ ಹಾಗೆ ಏಗುವವರಿಗೆ ಕಥೆಕವಿತೆ ಬರೆಯುವ ಪುರುಸೊತ್ತಾದ್ರೂ ಎಲ್ಲಿರುತ್ತೆ? ಬಣ್ಣದ ಬೀಸಣಿಕೆಯಂತೆ ಬಳುಕುತ್ತಾ, ಅತ್ತೆ ಮಾವನಿಗೆ ಮನೆ ಚಾಕರಿ ಹಚ್ಚಿ ಝಂ ಅಂತ ಓಡಾಡಿಕೊಂಡಿರೋವ್ರು ಒಂದಲ್ಲ ನೂರು ಪುಸ್ತಕ ಬರೀತಾರೆ…

Read Post »

ಕಥಾಗುಚ್ಛ

ಚೇರ್ಮನ್ ಸೋಮಯ್ಯ

ಯಾರು ಏನೇ ಹೇಳಲಿ ಸೋಮಯ್ಯ ಪಕ್ಷಾತೀತ ರಾಜಕಾರಣಿ. ಅವನಿಗೆ ಪಕ್ಷರಾಜಕಾರಣದಲ್ಲಿ ನಂಬಿಕೆ ಇಲ್ಲ. ಯಾವುದೋ ಪಕ್ಷದವರು ಸೇರಿಸಿಕೊಂಡರೆ ನಂಬಿಕೆ ಬರುತ್ತಿತ್ತೋ ಏನೋ. ಪಾಪ ಇವನದೇನು ತಪ್ಪು. ಇವನ ಮೇಲೆ ವಿಶ್ವಾಸ ಇಡುವ ಅರ್ಹತೆ ಯಾವ ಪಕ್ಷದವರಿಗಿದೆ? ಮತ್ತೊಂದು, ಇವನಿಂದ ಆಗುವ ಲಾಭವಾದರೂ ಏನು?

ಚೇರ್ಮನ್ ಸೋಮಯ್ಯ Read Post »

You cannot copy content of this page

Scroll to Top