Category: ವಾರ್ಷಿಕ ವಿಶೇಷ

  • ಸಂಗಾತಿಯೊಡನೆ ನನ್ನ ಪಯಣ

    ಸಂಗಾತಿಯೊಡನೆ ನನ್ನ ಪಯಣ

    ಸಂಗಾತಿಯ ಇಬ್ಬರು ಲೇಖಕರುಬರೆದ ಅನಿಸಿಕೆಗಳು ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಮಹತ್ವ ಪ್ರತ್ಯೇಕವಾಗಿ ಉಲ್ಲೇಖಿಸುವ ಅವಶ್ಯಕತೆಯೇ ಇಲ್ಲ . ಮೊದಲಿನಿಂದ ಪ್ರಸಾರ ಮಾಧ್ಯಮ ಎಂದರೆ ಪತ್ರಿಕೆ ಮತ್ತು ಆಕಾಶವಾಣಿ. ಈಗ ದೂರದರ್ಶನ ಹಾಗೂ ಅಂತರ್ಜಾಲಗಳು ಈ ಪರಿಧಿಗೆ ಸೇರಿವೆ.  ದಿನಪತ್ರಿಕೆ ಓದದೇ ಬೆಳಗು ಆರಂಭವಿಲ್ಲ  ಎಂಬಂಥ ಕಾಲ ಹೋಗಿ ಎಲ್ಲವನ್ನೂ ದೃಶ್ಯ ಮಾಧ್ಯಮಗಳಲ್ಲಿ ಕಂಡುಕೊಳ್ಳುವ ಈ ಯುಗದಲ್ಲಿ ಮುದ್ರಿತ ಓದಿನ ಪತ್ರಿಕೆ, ನಿಯತ ಕಾಲಿಕೆಗಳು ತಮ್ಮ ಮೊದಲಿನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ.  ಈ ಪ್ರಚಲಿತ ವಿದ್ಯಮಾನದಲ್ಲಿ ಸುದ್ದಿ ತಿಳಿಯಲು ದಿನಪತ್ರಿಕೆಯೇ ಬೇಕೆಂದೇನಿಲ್ಲ. …

  • Untitled post 13121

    ಜಾಲತಾಣಗಳಿಂದ ಮಹಿಳೆಯರಿಗೆ ಹೆಚ್ಚಿದ ಅವಕಾಶ ಮಾಲಾ ಅಕ್ಕಿಶೆಟ್ಟಿ   ಎಲ್ಲೋ ಇದ್ದವರನ್ನು ಇಲ್ಲೇ ಇದ್ದಾರೆನ್ನುವಂತೆ ಮಾಡುವ ಮೋಡಿ ಈ ಜಾಲತಾಣಗಳಿಗಿದೆ. ಹಳೆಯ ಕಾಲವೇ ಕಣ್ಮರೆಯಾಗಿ, ಆಧುನಿಕದ ಹೊಸತಿಗೆ ತುಸು ಜಾಸ್ತಿನೇ ಹೊಂದಿಕೊಂಡ ಮನುಷ್ಯ, ಅನುಕೂಲಕ್ಕಾಗಿ ತನಗೆ ಬೇಕಾದ್ದನ್ನೆಲ್ಲಾ ಬಳಸಿಕೊಂಡು ಜಗತ್ತನ್ನು ಸಮೀಪದಿಂದಲೇ ಆನಂದಿಸುತ್ತಿದ್ದಾನೆ. ಹೊಸದರ ಅಳವಡಿಕೆ ಖುಷಿ ನೀಡಿದೆ. ಏಕಕಾಲದಲ್ಲೇ ಆಗುತ್ತಿರುವ ಹೊಸ ಹೊಸ ಆ್ಯಪ್ ಗಳ ಆವಿಷ್ಕಾರ ಹಾಗೂ ಇಂಟರ್ನೆಟ್ ಸೌಲಭ್ಯ ಎಲ್ಲರಿಗೂ ಅವುಗಳ ಉಪಯೋಗಕ್ಕೆ ಮಾಯಾ ಕೊಂಡಿಯನ್ನು ನಿರ್ಮಿಸಿದೆ.         …

  • Untitled post 12910

    ನಮ್ಮ ಕವಿ ಸ್ಮಿತಾ ಅಮೃತರಾಜ್ ಕವಿಪರಿಚಯ–ಸಂದರ್ಶನ–ಕವಿತೆಗಳು ಪರಿಚಯ ಸ್ಮಿತಾ, ಕವಿ, ಲೇಖಕಿ, ಅಂಕಣಕಾರ್ತಿ, ಇವೆಲ್ಲಕ್ಕಿಂತ ಹೆಚ್ಚಾಗಿ ಅಪಾರ ಮಾನವೀಯ ಅಂತಃಕರಣದ, ಎಲ್ಲದರಲ್ಲೂ,ಎಲ್ಲರಲ್ಲೂ ಒಳಿತನ್ನೇ ಕಾಣುವ ಮೃದು ಹೃದಯಿ. “ಪ್ರಪಂಚ ಬಹಳ ಕೆಟ್ಟದು”ಅನ್ನುವ  ಸಿನಿಕತನ ನನ್ನನ್ನು ಕಾಡಿದಾಗೆಲ್ಲ ಅದಕ್ಕೆ ಅಪವಾದವೆಂಬಂತೆ ನನ್ನ ಮನಸ್ಸಿಗೆ ಬರುವ ನನ್ನ ಜೀವದ ಗೆಳತಿ ಸ್ಮಿತಾ ಬಗ್ಗೆ ಹೇಳಿದಷ್ಟು ಕಡಿಮೆಯೇ. ಸ್ಮಿತಾ ಅವರ  ಜನ್ಮಸ್ಥಳ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ . ಜನನ 8 ನೆ ಜನವರಿ 1978,   ತಂದೆ ಶ್ರೀಯುತ.ವೆಂಕಟ್ರಮಣ ಪಳಂಗಾಯ…

  • ಒಂದು ಲೋಟ ಗಂಜಿ

    ಒಂದು ಲೋಟ ಗಂಜಿ

    ಕಥೆ ಒಂದು ಲೋಟ ಗಂಜಿ ಟಿ.ಎಸ್.ಶ್ರವಣಕುಮಾರಿ ಶುರುವಾಗಿದ್ದು ಹೀಗೆ… ಸಾವಿತ್ರಿಯ ಮಗಳು ಜಯಲಕ್ಷ್ಮಿ ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಯನ್ನು ಸೇರಿ ಎರಡು ದಿನವಾಗಿತ್ತು. ಹೆದರುವಂತದೇನಲ್ಲ, ಚೊಚ್ಚಲ ಹೆರಿಗೆ. ಆದರೆ ಸ್ವಲ್ಪವೇನೂ, ಸ್ವಲ್ಪ ಜಾಸ್ತಿಯೇ ನೋವು ತಿನ್ನುತ್ತಿದ್ದರೂ ಇನ್ನೂ ಹೆರಿಗೆಯಾಗಿರಲಿಲ್ಲ. ಸಾವಿತ್ರಿ, ಮೊನ್ನೆ ಬೆಳಗ್ಗೆ ಬಂದಿದ್ದವಳು ರಾತ್ರಿಯೆಲ್ಲಾ ಆಸ್ಪತ್ರೆಯ ಕಾರಿಡಾರಿನಲ್ಲೇ ತೂಕಡಿಸುತ್ತಾ ಕಾಯುತ್ತಾ ಕುಳಿತಿದ್ದಳು. ಆಸ್ಪತ್ರೆಗೆ ಮನೆ ಸ್ವಲ್ಪ ದೂರವೇ. ಗಂಡನಿಗೆ ಆಗುಂಬೆಯ ಟೋಲ್ಗೇಟಿನಲ್ಲಿ ಕೆಲಸ. ಬರುವುದು ವಾರಕ್ಕೊಂದು ಬಾರಿಯೇ. ನಿನ್ನೆ ಮತ್ತು ಇಂದು ಬೆಳಗ್ಗೆ ಒಂದು ಘಳಿಗೆ ಮನೆಗೆ…

  • ಡಾ.ಕಾತ್ಯಾಯಿನಿ ಕುಂಜಿಬೆಟ್ಟುಕವಿತೆಗಳು

    ಡಾ.ಕಾತ್ಯಾಯಿನಿ ಕುಂಜಿಬೆಟ್ಟುಕವಿತೆಗಳು

    ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಕವಿತೆಗಳು ಏಕಾಂತ ನೇಸರ ಮೋಡಗಳ ಹಾಸಿಗೆಯಿಂದ ಎದ್ದುಮೈಮುರಿಯುತ್ತಆಕಾಶದಗಲಕ್ಕೆ ಬಾಯಿ ಆಕಳಿಸುತ್ತಬೆಳಕು ಮೈಯಲ್ಲಿ ನಿಲ್ಲುತ್ತಾನೆತುಂಬಿದ ಬೆಳಕಿನ ಅಕ್ಷಯ ಕೊಡಅವನ ಕಾಯಬೆಳಕು ಹರಿಸುತ್ತಲೇ ಇರುತ್ತಾನೆಸಂಜೆಯವರೆಗೂ…ಮಾತಿಲ್ಲಬರೀ ಮೌನ! ಹೂವುಗಳು ಅರಳುತ್ತವೆಕೆಂಪು ನೀಲಿ ಹಳದಿತುಟಿ ಎಸಳುಗಳಲ್ಲಿ ಬೆಳಕು ಹೀರುತ್ತಮೌನವಾಗಿ ಕಂಪು ಬೀರುತ್ತಜೇನುಗಳು ಮಕರಂಧ ಹೀರಿ ಮಧು ಸಂಗ್ರಹಿಸುತ್ತವೆಮೌನವಾಗಿ ಬೀಜಗಳಲ್ಲಿ ಮೊಳಕೆಯ ತಲೆ ಬೆಳೆದುತೆನೆತೆನೆಗಳಲ್ಲಿ ಹಾಲು ಉಕ್ಕಿಸುತ್ತವೆಇರುವೆಗಳು ಸಾಲು ಸಾಲು ಸರದಿಯಲ್ಲಿಸೂರ್ಯನನ್ನೇ ಹೊತ್ತು ಸಾಗುತ್ತವೆಮೌನವಾಗಿ ಈ ಎರಡು ಕಾಲ ಜೀವಿಗಳಿಗೆ ಮಾತ್ರ ಬರಿದೇಮೂರು ಕಾಲಗಳ ಮಾತು ಮಾತು ಮಾತುಬಾಯಿ ಬ್ರಹ್ಮಾಂಡ!ಎಲ್ಲಿದೆ ಏಕಾಂತ?ಮಾರುದ್ದ…

  • Untitled post 12905

    ವಾರ್ಷಿಕೋತ್ಸವದ ವಿಶೇಷ ಲೇಖನವಾರ್ಷಿಕೋತ್ಸವದ ವಿಶೇಷ ಲೇಖನ ಅನುವಾದಕರ ಮುಂದಿರುವ ಸವಾಲುಗಳು ಪಾರ್ವತಿ ಜಿ.ಐತಾಳ್ ಅನುವಾದ ಅಥವಾ ಭಾಷಾಂತರವೆಂದರೆ ಭಾಷೆಯನ್ನು ಬದಲಾಯಿಸುವ ಕ್ರಿಯೆ ಎಂಬುದು ಸಾಮಾನ್ಯರ ಅಭಿಪ್ರಾಯ. ಇದು ಎರಡು ಭಾಷೆಗಳ ನಡುವೆ ಅನುವಾದಕ/ಕಿಯ ಮೂಲಕ ನಡೆಯುವ ಸಂವಹನ. ಇದಕ್ಕೆ ಮುಖ್ಯವಾಗಿ ಬೇಕಾದುದು ಎರಡು ಭಾಷೆಗಳ ಜ್ಞಾನ. ಯಾವ ಭಾಷೆಯಿಂದ ನಾವು ಅನುವಾದ ಮಾಡುತ್ತಿದ್ದೇವೋ ಅದನ್ನು ಮೂಲ ಭಾಷೆಯೆಂದೂ ಯಾವ ಭಾಷೆಗೆ ಮಾಡುತ್ತಿದ್ದೇವೋ ಅದನ್ನು ಉದ್ದಿಷ್ಟ ಭಾಷೆಯೆಂದೂ ಕರೆಯುತ್ತೇವೆ. ಅನುವಾದಕನಿ/ಕಿಗೆ ತನ್ನ ಮಾತೃಭಾಷೆ ಅಥವಾ ಶಿಕ್ಷಣ ಮಾಧ್ಯಮದ ಭಾಷೆ…

  • Untitled post 13027

    ದೀಪ್ತಿ ಭದ್ರಾವತಿ ಕವಿತೆಗಳು ಲೂಟಿಯಾದವರು ಅಗೋ ಸಿಕ್ಕಿಯೇಬಿಟ್ಟ ನಿನ್ನೆಯಷ್ಟೇ ಎಷ್ಟೆಲ್ಲ ಜನರ ಉಸಿರು ಕದ್ದು ನಡೆದವ ಇಂದಿಲ್ಲಿ ಆಸ್ಪತ್ರೆಯ ಕಲ್ಲು ಬೆಂಚಿನ ಮೇಲೆ ಸದ್ದಿಲ್ಲದೆ ಮಲಗಿದ್ದಾನೆ ಸೂರೆ ಹೋದವರು ಸೂರು ಹಾರುವಂತೆ ಕಿರುಚುತ್ತಿದ್ದರೂ ಗಮನಿಸದೆ ತನ್ನದೇ ಕನಸಲೋಕದಲ್ಲಿ ಹಾಯಾಗಿ ಕನಸುಕಾಣುತ್ತಿದ್ದಾನೆ ಲೂಟಿಯಾದವರು ಇದೀಗ ಇಲ್ಲಿ ಒಳಗಡೆಗೆ ನುಗ್ಗಲಿದ್ದಾರೆ ಎಬ್ಬಿಸಿ ಇವನನ್ನು ಬೀದಿಗೆಳೆದು ತಂದು ಆರೋಪಪಟ್ಟಿಯ ಸಿದ್ದವಾಗಿಸಿ ಕಂಬಕ್ಕೆ ಕಟ್ಟಿ ಥಳಿಸಲಿದ್ದಾರೆ “ಆಳಿಗೊಂದು ಕಲ್ಲು, ತಲೆಗೊಂದು ಮಾತು” ಕನ್ನ ಹಾಕುವುದೆ ಕಾಯಕ ಎಂದುಕೊಂಡವನಿಗೆ ಯಾವುದೂ ಹೊಸತಲ್ಲ ಪ್ರತಿ ಬಾರಿ…

  • ಚರ್ಚೆ- ಮುದ್ರಣ ಮಾಧ್ಯಮ ಮತ್ತು ಸಾಹಿತ್ಯೋಪಾಸನೆ

    ಚರ್ಚೆ- ಮುದ್ರಣ ಮಾಧ್ಯಮ ಮತ್ತು ಸಾಹಿತ್ಯೋಪಾಸನೆ

    ಚರ್ಚೆ- ಮುದ್ರಣ ಮಾಧ್ಯಮ ಮತ್ತು ಸಾಹಿತ್ಯೋಪಾಸನೆ ಡಿ.ಎಸ್.ರಾಮಸ್ವಾಮಿ ಸಾಹಿತ್ಯವನ್ನು ಮುದ್ರಣ ಮಾಧ್ಯಮ ನಿರ್ಲಕ್ಷಿಸುತ್ತಿದೆ ಎಂದು ಸಂಗಾತಿಯ ಸಂಪಾದಕರು ಅಲವತ್ತುಕೊಂಡಿದ್ದಾರೆ. ಪ್ರತಿ ಭಾನುವಾರ ಎಲ್ಲ ಪತ್ರಿಕೆಗಳ ಪುರವಣಿಗಳನ್ನು ಹರಡಿಕೊಂಡು ಓದುತ್ತಿದ್ದ ಅನುಭೂತಿ ಈ ಕೋವಿಡ್ ನೆವದಿಂದಾಗಿ ಇಲ್ಲವಾದದ್ದು ನೆನಪಾಗಿ ಸಂಗಾತಿಯ ಸಂಪಾದಕರ ಆರೋಪ ಸರಿ ಅನ್ನಿಸಿತು ಕೂಡ. ಆದರೆ ಸ್ವಲ್ಪ ಕಾಲ ಯೋಚಿಸಿದ ಮೇಲೆ ಆ ಅಭಿಪ್ರಾಯ ತಾತ್ಕಾಲಿಕ ಅನ್ನಿಸುತ್ತಿದೆ. ಓದುಗರೇ ಇಲ್ಲದೆ ಪ್ರಸರಣವೇ ಇಲ್ಲದೆ ಪತ್ರಿಕೆಗಳೇ ಮುಚ್ಚುತ್ತಿರುವ ಕಾಲದಲ್ಲಿ ಸಾಹಿತ್ಯ ಸಂಸ್ಕೃತಿ ಅಂತೆಲ್ಲ ಕೇಳುವುದು ಹೊಟ್ಟೆ ಹಸಿದು…

  • ಅವಳೇ ಕಾರಣ…

    ಅವಳೇ ಕಾರಣ…

    ಲಹರಿ ಅವಳೇ ಕಾರಣ… ಸ್ಮಿತಾ ಭಟ್ ಏನೇ ಹೇಳಿ ಮಕ್ಕಳನ್ನು ಸಂಭಾಳಿಸುವ ವಿಷಯದಲ್ಲಿ ತಾಯಿಗೇ ಹೆಚ್ಚಿನ ಪ್ರಶಸ್ತಿಗಳು ಸಲ್ಲಬೇಕು.ಎಲ್ಲದಕ್ಕೂ ಅಮ್ಮಾ ಎಂದೇ ಕೂಗುವ ಕಂದಮ್ಮಗಳನ್ನು ತೃಪ್ತಿ ಪಡಿಸುವುದು ಸುಲಭದ ವಿಷಯವಂತೂ ಅಲ್ಲ. ಏಕ ಕಾಲದಲ್ಲಿ ನೂರು ಮಕ್ಕಳನ್ನು ಗಾಂಧಾರಿ ಹೇಗೆ ಸಂಭಾಳಿಸಿದಳೋ ಎಂದು, ಒಂದೇ ಮಗುವಿನ ತಾಯಿಯಾದ ನನಗೆ ಸದಾ ಕಾಡುವ ಸಂಗತಿ. “ಅಯ್ಯೋ ನಮ್ಮ ಕಾಲದಲ್ಲಿ ಹೀಗಿರಲಿಲ್ಲಪ್ಪ” ಈಗಿನ ಕಾಲದ ಮಕ್ಳೇ ಹಾಗೋ, ಪಾಲಕರೇ ಹಾಗೋ ಅನ್ನುವ, ಅವಕಾಶ ವಂಚಿತರಾಗದಂತೆ ಹಿರಿಯರಾಡುವ ಮಾತುಗಳು ನೇರ ತಾಕುವುದು…

You cannot copy content of this page