ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ
ಅಂತರಾಷ್ಟ್ರೀಯ ಶಾಂತಿ ದಿನ
ಕುಸುಮ ಮಂಜುನಾಥ್
ಎಲ್ಲರೂ ಒಮ್ಮನಸಿನಿಂದ ಲಂಚ ಕೊಡುವುದೇ ಇಲ್ಲ ಎಂದು ಸಂಕಲ್ಪ ಮಾಡಿ ನಿಂತರೆ ಒಂದಷ್ಟು ಕಾಲ ಸಮಸ್ಯೆಯಾಗಬಹುದು. ಆದರೆ ಭ್ರಷ್ಟಿಗಳು ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲೇಬೆಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಯಾವುದೇ ಬದಲಾವಣೆ ಸಾಮಾನ್ಯ ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಸಾಧ್ಯ.
ಹಂದೆಯ ಕೈಯಲ್ಲಿನ ವಜ್ರಾಯುಧ Read Post »
ಕೃಷಿ ರಂಗದ ಸಮಸ್ಯೆಗಳಿಗೆ ಪರಿಹಾರವಿರುವುದು ವಿಕೆಂದ್ರೀಕೃತ ಅರ್ಥ ನೀತಿಯಲ್ಲಿ ; ಸಹಕಾರಿ ತತ್ವದಲ್ಲಿ. ಬೇಸಾಯ, ಉತ್ಪಾದನೆ , ಸಂಗ್ರಹಣೆ ಮತ್ತು ಮಾರಾಟ ವ್ಯವಸ್ಥೆಯನ್ನು ಸಹಕಾರಿ ರಂಗದಲ್ಲೇ ಕೈಗೊಳ್ಳುವುದು. ಕೃಷಿ ಪೂರಕ ಮತ್ತು ಕೃಷಿ ಆಧಾರಿತ ಉದ್ದಿಮೆಗಳನ್ನು ಗ್ರಾಮೀಣ ಭಾಗದಲ್ಲಿ ಪ್ರಾರಂಭಿಸಲು ಪ್ರೋತ್ಸಾಹ ನೀಡುವುದರಿಂದ. ಕೇಂದ್ರೀಕೃತ ಅರ್ಥವ್ಯವಸ್ಥೆಯಾದ ಬಂಡವಾಳವಾದಿ ನೀತಿಯನ್ನು ಕೈಬಿಡದೇ ರೈತರ ಬದುಕನ್ನು ಹಸನಾಗಿಸಲು ಸಾಧ್ಯವಾಗದು
ಕೇಂದ್ರ ಕೃಷಿ ಕಾಯ್ದೆ ರೈತರಿಗೆ ಮಾರಕ ಹೇಗೆ? Read Post »
ಚಿಂತನೆ ಹೀಗೊಂದು ಚಿಂತನೆ. ಗೋನವಾರ ಕಿಶನ್ ರಾವ್ “What is wonderful about great literature is that it transforms the man who reads it towards the condition of the man who wrote, and brings to birth in us also the creative impulse. ~E.M. Forster“ ಬೆಳಗಾಗೆದ್ದು ಕೈಯಲ್ಲಿ ಕಾಫಿ ಕಪ್ಪು ಹಿಡಿದು, ಅಂದಿನ ದಿನ ಪತ್ರಿಕೆ, ತಿರುವಿ ಹಾಕುತ್ತಿದ್ದೇವೆ ಎಂದು ಭಾವಿಸಿಕೊಳ್ಳಿ. ಪುಟ ತಿರುವುತ್ತ ಹೋಗುತ್ತೀದ್ದೀರಿ,ಅಲ್ಲೊಂದು ಕೊಲೆ,ಇಲ್ಲೊಂದು ಸಾವು,ಮಗದೊಂದು ಪುಟದಲ್ಲಿ ಅಪಘಾತ. ಎಲ್ಲದಕ್ಕೂ ನಿರ್ಲಿಪ್ತ ಭಾವ.ಪತ್ರಿಕೆ ಪಕ್ಕಕ್ಕಿಟ್ಟು ಮೊಬೈಲ್ ಕೈಗೆತ್ತಿಗೊಳ್ಳುವಿರಿ ಸಾಮಾಜಿಕ ಜಾಲತಾಣದಲ್ಲಿ ಒಂದು ಸಂದೇಶ. ಶ್ರೀ……….. ಯವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.ಅನೇಕರ ಮರು ಸಂದೇಶಗಳು.ನೀವು ಸಹ ಒಂದು ಓಂ ಶಾಂತಿ ಎಂದು ಟಂಕಿಸಿ ಮುಂದೆ ಸಾಗುವಿರಿ.ಅಲ್ಲಿಯೂ ನಿರ್ಲಿಪ್ತ ಮನೋಭಾವ ! ಯೋಚಿಸಿ ನೋಡಿ. ಒಂದು ಸಾವಿನ ಸುದ್ದಿ ಮೂರು ವಿಧದ ಪರಿಣಾಮ ಬೀರುತ್ತದೆ ಅಲ್ಲವೆ ? ಸದರಿ ಶ್ರೀ ಯವರ ನಿಧನಕ್ಕೆ ನೇರ ಪರಿಣಾಮ ಹೊಂದಿದವರು ಅವರ ಹತ್ತಿರದ ದೂರದ ಸಂಬಂಧಿಕರು.ಎರಡನೆಯವರು ಆಪ್ತವಲಯ.ಅವರು ಸಾಧ್ಯವಾದರೆ, ದಹನ ಕಾರ್ಯದಲ್ಲಿ ಭಾಗಿಗಳಾಗುವರು. ಅನಾನುಕೂಲ, ಅನಾರೋಗ್ಯದಂತಹ ಬಲವಾದ ಕಾರಣಗಳಿದ್ದರೆ,ದೂರವಾಣಿಗಳ ಮುಖಾಂತರ ಸಂಪರ್ಕಿಸಿ ಸಂತಾಪ ಸೂಚಿಸುವರು.ಈ ಮೂರರನ್ನು ಮೀರಿದವರಿರುತ್ತಾರೆ.ಏನೂ, ಸಂಬಂಧವಿಲ್ಲದವರು. ಪ್ರಪಂಚದ ಒಳಿತು-ಕೆಡುಕುಗಳ ಗೋಜು ಅವರಿಗೆ ಬೇಕಿಲ್ಲ.ತಮ್ಮ ಪಾಡಿಗೆ ತಾವು ಒಂದು ಗುಡ್ ಮಾರ್ನಿಂಗ್, ಗುಡ್ ಇವನಿಂಗ್ ಸಂದೇಶ ಹಾಕುತ್ತ ಹೋಗುತ್ತಿರುತ್ತಾರೆ.ವಿಚಿತ್ರ ಅಲ್ಲವೇ ಯಾಕೆ ಹೀಗೆ ? ಶ್ರೀ ಯವರ ಹೃದಯಾಘಾತದಿಂದ ದಿಂದ ಅವರ ಸಂಬಂಧಿಕರಿಗೆ ಮಾತ್ರ ಕೆಟ್ಟ ಸುದ್ದಿ. ಉಳಿದ ಕೆಲವರಿಗೆ ಅದು ಸುದ್ದಿಯೇ ಅಲ್ಲ.ನಗರದ ಯಾವುದೇ ವಿಸ್ತರಣೆಯಲ್ಲಿ ಉಂಟಾದ ಸಾವಿನ ಸುದ್ದಿ ನಮ್ಮಲ್ಲಿ ಅನೇಕರನ್ನು ನಿರ್ಭಾವುಕರನ್ನಾಗಿ ಮಾಡಬಲ್ಲದು. ಮನಸ್ಸಿಗೆ ಆಪ್ತವಾದ ಕೃತಿಗಳನ್ನು ಕುರಿತು ಯೋಚಿಸುವಾಗ, ಉದಾಹರಣೆಗೆ ಮಹಾಭಾರತ,ರಾಮಾಯಣ ಕಾವ್ಯಗಳಲ್ಲಿ, ಕುಂತಿ ಬೀರಿದ ಪ್ರಭಾವ ಮಾದ್ರಿ ಬೀರಲಿಲ್ಲ. ಸೀತೆ, ದ್ರೌಪದಿ, ಪ್ರಾಮುಖ್ಯರಾದಷ್ಟು ಊರ್ಮಿಳೆ, ಮಾಂಡವಿ,ಶೃತಕೀರ್ತಿ ಆಗಿಯೇ ಇಲ್ಲ. ಊರ್ಮಿಳೆಯ ಹೆಸರು ಅಲ್ಲಿ ಇಲ್ಲಿ ಒಂದಷ್ಟು ಚರ್ಚಿತವಾಗಿದ್ದರೆ, ಮಾಂಡವಿ ಶೃತಕೀರ್ತಿ ಹೆಸರು ಬಹಳಷ್ಟು ಜನ ಕೇಳಿಯೂ ಇರಲಿಕ್ಕಿಲ್ಲ. ಅಭಿಮನ್ಯುವಿನ ಸಾವಿನಷ್ಟು ಘಟೋತ್ಕಚನ ಸಾವು ಕಾಡಿಲ್ಲ. ಉಪಕಾರ್ ಚಿತ್ರದ ನಾಯಕ ಮನೋಜ ಕುಮಾರನ ಮೇಲೆ ತೋರಿದ ಪ್ರೀತಿ ಅನುಕಂಪ ನಮ್ಮ ಊರಿನ ರೈತನ ಮೇಲೆ ತೋರಿದ್ದೇವೆಯೇ ? ಉಹೂಂ! ಸಂದೇಹಗಳ ಸರ ಮಾಲೆ !! ಬೇಂದ್ರೆಯವರ ಕವಿತೆ ‘ರಾಮಾಯಣ’ದ ಈ ಸಾಲುಗಳನ್ನು ನೋಡಿ. ಲಕ್ಷ್ಮಣನಿಗೆ ವನವಾಸವು,ಉರ್ಮಿಳೆ ಕುರುಡುಗಳೆದ ಕ್ಷಣಕ್ಷಣಾ | ಬರಲಿಲ್ಲವು ಲೆಕ್ಕಕ್ಕೆ ವರುಷಗಳು ಹದಿನಾಲ್ಕು ಭಣಭಣಾ| ಭರತನು ಕಣ್ಣಿಗೆ ಕಾಣುವ ಅಳತೆಯೊಳಿದ್ದನು ತಾ ದಿನದಿನಾ| ತಪವು ಭರತಗೂ ಮಾಂಡವಿಗೂ ತಪ, ವಿರಹವೇ ಪಾರಾಯಣಾ | ಶತೃಘ್ನನು ಅರಮನೆಯೊಳಗಿದ್ದರೂ ಶೃತಕೀರ್ತಿಗೂ ರಣರಣಾ | ರಾಮನ ವಿರಹವು ಸೀತಾವಿರಹವು ತುಂಬಿದೆ ರಾಮಾಯಣಾ || ಸಣ್ಣವರತ್ತರೆ ಎಣಿಕೆಗೆ ಬಾರದು ಅಯ್ಯೋ ನಾರಾಯಣಾ || ಸಾಹಿತ್ಯ ಸಂಜೀವಿನಿ ಎಂದರೆ, ಬೇಂದ್ರೆ. ನಮ್ಮೆಲ್ಲರ ಪ್ರತಿ ಸಂದೇಹಗಳಿಗೆ, ಬೇಂದ್ರೆಯವರಲ್ಲಿ ಅವರ ಕವಿತೆಗಳಲ್ಲಿ ಮದ್ದಿದೆ.ಅದು ಬೇಂದ್ರೆ ತಾಕತ್ತು! ಸಾಹಿತ್ಯದ ತಾಕತ್ತು.ನಮ್ಮ ನೋವಿನ ಸಂಗತಿಗಳು ನಮಗೆ ಯಾವಾಗಾದರೂ ಸುಖವಾಗಿ-ಸುಂದರವಾಗಿ ಕಂಡಿವೆಯಾ ? ಅಥವಾ ಅವುಗಳನ್ನು ನಾವು, ಸುಖಿಸಿದ ನೆನಪಿದೆಯೇ ? ಇಲ್ಲವೆಂದಾದಲ್ಲಿ ಭಾರತದ ‘ದ್ರೌಪದಿ’,ರಾಮಾಯಣದ ‘ಸೀತೆ’,ಭಾಗವತದ ‘ಕಯಾದು’ ನಮಗೆ ಯಾಕೆ ಹತ್ತಿರವಾಗುತ್ತಾರೆ. ಈ ಕತೆಗಳು ಸಾಹಿತ್ಯಿಕವಾಗಿ ಸುಂದರ ಎನಿಸಿಕೊಂಡು ಓದಿಸಿಕೊಂಡು ಹೋಗುತ್ತವೆಯೇ ? ಯಾಕಿದ್ದೀತು? ಅದು ಸಾಹಿತ್ಯಕ್ಕಿರುವ ಸಶಕ್ತ ಪದಜಾಲ.ಮತ್ತದರಲ್ಲಿ ಅಡಕವಾಗಿರುವ ಸತ್ಯ.ಸ್ಪಷ್ಟವಾಯಿತಲ್ಲ ! ಒಂದು ಕೃತಿ ಅದು ಗದ್ಯ ಪದ್ಯ ವಿಮರ್ಶೆ ನಾಟಕ ಏನೇ ಆಗಿರಲಿ.ನಮ್ಮನ್ನು ಸೆಳೆಯುವ ಶಕ್ತಿ ಆ ಸತ್ಯಕ್ಕಿದೆ. ಅದೇ ಸಾಹಿತ್ಯದ ಕಾಣ್ಕೆ ಮತ್ತು ಅದರಲ್ಲಿರುವ ನೈಜತೆಗೆ ಹತ್ತಿರವಿರುವ ಪಾತ್ರ, ಪರಿಸರ,ಕಟ್ಟಿಕೊಡುವ ಕಲೆ,ಹಿಡಿದಿಟ್ಟ ಭಾಷೆ. ನೈಜತೆ ಅಥವಾ ನಾವು ಕರೆಯುವ ನಿರ್ಮಲಾಂತಃಕರಣ ಮತ್ತು ಅಷ್ಟೇ ಶುದ್ಧವಾದ ಮನಕ್ಕೆ ನೀಡುವ ಪ್ರೀತಿ. ಈ ರೀತಿಯ ಪ್ರೀತಿಗೆ ಸಮಾನವಾದದ್ದು ಏನಾದರೂ ಇದ್ದೀತೆ ?ಖಂಡಿತ ಇರಲಾರದು.ಒಬ್ಬ ಲೇಖಕ ಬರೆಯುತ್ತಿರುವುದು ನೈಜತೆಯಿಂದ ಕೂಡಿಲ್ಲ ಎಂದು ಓದುಗನ ಅರಿವಿಗೆ ಬಂತೆಂದು ತಿಳಿಯಿರಿ ಅದು ನಮ್ಮ ನೆನಪಿನಿಂದ ಮಾಯ. ಅದು ಆ ಕೃತಿಯ ಮತ್ತು ಆ ಲೇಕಖನ ಸೋಲು ಹೌದು. ಒಂದು ಪುಸ್ತಕ ಓದುತ್ತಿದ್ದೇವೆ.ಅದರ ಚೌಕಟ್ಟು, ವಸ್ತು, ಪಾತ್ರಗಳು ನಮ್ಮನ್ನು ವಿಸ್ಮಯ ಲೋಕಕ್ಕೆ ಕೊಂಡೊಯ್ಯುತ್ತ ತನ್ಮಯತೆ ಮೂಡಿಸಿದರೆ ಅ ಪುಸ್ತಕ ಯಶಸ್ಸು ಕಾಣಬಲ್ಲದು. ನಾಲ್ಕು ಜನರ ಬಾಯಲ್ಲಿ ಅದರ ಮಾತು ಬರಬಹುದು ಚರ್ಚೆಗೆ ಒಳಗಾಗಬಹುದು. ವಿಮರ್ಶಕ ಅದನ್ನು ತನ್ನ ಲೇಖನಗಳಲ್ಲಿ ಮಾದರಿ ಪುಸ್ತಕವಾಗಿ ಬಳಸಬಹುದು. ಎಲ್ಲದಕ್ಕೂ ಮೀರಿ ಒಳ್ಳೆಯ ಮಾರುಕಟ್ಟೆ ಪಡೆಯಬಹುದು. ಒಂದು ವೇಳೆ ಅದೇ ಪುಸ್ತಕದ ಪಾತ್ರಗಳ ಮಿತಿಯನ್ನು ದಾಟಿ ಲೇಖಕನೇ ಮಾತಾಡಿದ್ದರೆ ಅಂತಹ ಕೃತಿಗಳು ಅಪಮೌಲ್ಯ ಹೊಂದುತ್ತವೆ. ಇಲ್ಲಿ ಯಾವುದೇ ಒಬ್ಬ ಬರಹಗಾರ/ಕವಿ ಹೇಳುತ್ತಿರುವುದು ಸ್ವಯಂ ಅವನವೇ ಆಗಿರಬೇಕೆ ? ಅವನ ಕಲ್ಪನೆ, ಪ್ರಯತ್ನಗಳಿಗೆ ಬೆಲೆ ಇಲ್ಲವೇ ? ಅದು ಹಾಗಲ್ಲ . ಅಂತಹ ಕಲ್ಪನೆಯಲ್ಲೂ ಪ್ರಾಮಾಣಿಕತನ ಇದ್ದಾಗಲೇ ಸೃಜನಶೀಲತೆ ಗರಿಗೆದರಲು ಸಾಧ್ಯ. ಇಲ್ಲವಾದರೆ, ಅದು ಒಂದು ರೂಪಾಯಿಗೆ ಒಂದು ಆನೆಯ ಕಥೆ ! ಅಷ್ಟೆ !! ಓದು,ಸಿನೆಮಾ ಧಾರಾವಾಹಿ ಇನ್ನಾವುದೇ ಕಲೆ ಮತ್ತೊಂದು ಏನೇ ಆಗಿರಲಿ ಆನಂದ, ಸಾಮಾನ್ಯ ಜ್ಞಾನ ಅಥವಾ ಏನೋ ಒಂದು ಸಾಹಿತ್ಯಿಕ ಸಂವೇದನೆ ಒದಗಿಸಬೇಕು. ಕಾವ್ಯಕಲೆಯ ಸದ್ಯ ಪ್ರಯೋಜನ ಕವಿ ಸಹೃದಯರಿಬ್ಬರಿಗೂ ಏಕಕಾಲಕ್ಕೆ ಉಂಟಾಗಬೇಕು ಹಾಗಾದಾಗ ಮಾತ್ರವೇ ಸೌಂದರ್ಯದ ಅನುಭೂತಿ ಮತ್ತು ಸಾಹಿತ್ಯದ ಕೊನೆಯ ಮಜಲನ್ನು ತಲುಪಿದ ತೃಪ್ತಿ. ಇವೆಲ್ಲ ಒಂದು ಕೃತಿ/ಲೇಖಕನಿಂದ ಸಿಗದೇ ಹೋದಾಗ, ಅದು ಸಾರಸ್ವತ ವಲಯದಲ್ಲಿ ಕಳೆದು ಹೋಗುತ್ತದೆ. ಒಂದು ಕೃತಿಯಲ್ಲಿರುವ ಒಂದು ಪಾತ್ರ ನಮ್ಮನ್ನು ಚಿಂತನೆಗೆ ಒಳಪಡಿಸುತ್ತದೆ ಅದರಲ್ಲಿ ನಾವೂ ಒಂದು ಪಾತ್ರವಾಗಿ ಹೋಗುತ್ತೇವೆ. ಯಾವುದೋ ದೃಶ್ಯ/ಪ್ಯಾರಾ ನಮ್ಮ ಕಣ್ಣನ್ನು ಹನಿಗೂಡಿಸುವ ತಾಕತ್ತು ಹೊಂದಿರುತ್ತದೆ.ಜೀವಂತವಿರುವ ಮತ್ತು ಸನಿಹದ ಸಂಪರ್ಕ ಇರುವ ಸ್ನೇಹಿತನಿಗಿಂತ, ಕಾರಂತರ ಚೋಮ, ಅನಂತಮೂರ್ತಿಯವರ ಪ್ರಾಣೇಶಾಚಾರ್, ತ್ರಿವೇಣಿ ಯವರ ಕಾವೇರಿ ನಮಗೆ ಬಹಳ ಹತ್ತಿರವಾಗುತ್ತಾರೆ.ಇದು ಹೇಗೆ ?ಒಂದು ಅನಿಸಿಕೆಯ ಪ್ರಕಾರ ನಮ್ಮ ಮನಸ್ಸು ಇದಕ್ಕೆ ಕಾರಣ.ಕಾಲ್ಪನಿಕ ಪಾತ್ರಗಳು,ನಮ್ಮೊಂದಿಗೆ, ಯಾವುದೇ ರೀತಿಯ ಪೈಪೋಟಿಗೆ ಇಳಿಯಲಾರವು ಎನ್ನುವ ಧೈರ್ಯ.ಇನ್ನೂ ಒಂದು ವಿಶಿಷ್ಟ ಲಕ್ಷಣ ಎಂದರೆ ಆ ಪಾತ್ರ ನಾವೂ ಆಗುವ ಸದವಕಾಶ ಇಲ್ಲಿದೆ.ಕನಿಷ್ಠ ಕೆಲವು ಸಮಯವಾದರೂ ನಮ್ಮನ್ನು ನಮ್ಮಿಂದ ದೂರ ಕರೆದೊಯ್ಯುವ ತಾಕತ್ತು ಇರುವುದು.ಇದು ಒಂದು ರೀತಿಯ ಬಯಲು ಆಲಯದೊಳಗೋ ಆಲಯವು ಬಯಲೋಳಗೋ ಎನ್ನುವ ಉಭಯ ರೀತಿಯ ಲೋಕ. ಬದುಕಿನ ಲಕ್ಷಣ.ಸಾಹಿತ್ಯ ಕಲಿಸುವ ಬದುಕು,ಬದುಕು ಕಲಿಸುವ ವಿದ್ಯೆ . ಫ್ಲೋರಿಡಾ ದೇಶದ ಭೌಗೋಳಿಕ ಸಂಗತಿಗಳಿಗಿಂತ, ಅಟ್ಲಾಂಟಿಕ್ ಸಾಗರದ ತೀರ ಪ್ರದೇಶಕ್ಕಿಂತ ಅದನ್ನು ನೋಡಲು ಹೋಗುವ ದಾರಿಯಲ್ಲಿ ಕಂಡ ವಿಶಾಲವಾದ ನದಿ ಮತ್ತು ಅದಕ್ಕಿರುವ ಹೆಸರಾದ ‘ಇಂಡಿಯಾ ರಿವರ’ ಬೋರ್ಡ್ ಓದಿದಾಗ ಧಿಡೀರನೆ ಇಡೀ ಅಮೆರಿಕ ನಮ್ಮದಾಗಿಬಿಡುತ್ತದೆ. ಶ್ರೀಲಂಕಾದ ಮೇಲೆ ಟಿಪ್ಪಣಿ ಬರೆಯಿರಿ ಎಂದಾಗ, ಅದರ ರಾಜಧಾನಿ ಯಾವುದು? ಅಲ್ಲಿಯ ಜನಸಂಖ್ಯೆ ಎಷ್ಟು ? ಅಲ್ಲಿಯ ಉಷ್ಣತಾಮಾನಕ್ಕಿಂತ ಸೇತುಕಟ್ಟಿ ಶ್ರೀಲಂಕೆಗೆ ಹೋದ ರಾಮಾಯಣದಿಂದಾಗಿ ಶ್ರೀಲಂಕಾ ನಮ್ಮದಾಗಿಬಿಡುತ್ತದೆ. ಇದನ್ನು ನಮಗೆ ಲಿಸುವುದು,ಬಾಹ್ಯ ಸಂಗತಿಗಳಲ್ಲ ಭಾವನಾ ಪ್ರಪಂಚ. ಅದು ಸಾಹಿತ್ಯ ಎಂದೇ ಧೃಡವಾದ ನಂಬಿಕೆ. ನಂಬಿಕೆ ಹುಸಿಯಾಗಲಾರದು ಎನ್ನುವುದು ಸಹ ನಂಬಿಕೆಯೇ. ಎಲ್ಲ ನಂಬಬೇಕು ಎನ್ನುವ ಹಟವೂ ಸಲ್ಲ. ನಂಬದಿರ್ದನು ತಂದೆ ನಂಬಿದನು ಪ್ರಹ್ಲಾದ ನಂಬಿಯೂ ನಂಬದಿರುವ ಇಬ್ಬಂದಿ ನೀನು ಕಂಬದಿನೋ, ಬಿಂಬದಿನೋ ಮೋಕ್ಷ ಅವರಿಂಗಾಯ್ತು. ಸಿಂಬಳದ ನೊಣ ನೀನು – ಮಂಕುತಿಮ್ಮ. *************************************************************** ಪರಾಮರ್ಶನ ಸೂಚಿ. ವಿನಯ :- ಬೇಂದ್ರೆಯವರ ಆಯ್ದ ಕವನಗಳು. ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ
ಡಾ.ಬಿ.ಆರ್.ಅಂಬೇಡ್ಕರ್ ರ ಕೊನೆಯ ಸಂದೇಶ..! ಕೆ.ಶಿವು.ಲಕ್ಕಣ್ಣವರ ‘ಮಹಾನಾಯಕ’ ಡಾ.ಬಿ.ಆರ್.ಅಂಬೇಡ್ಕರ್ ರ ಕೊನೆಯ ಸಂದೇಶ..! ಡಿ. 6 ದೇಶದ ಮಹಾನಾಯಕ ಅಂಬೇಡ್ಕರ್ ಅವರನ್ನು ಕಳೆದುಕೊಂಡ ದಿನ. ಅವರ ಕೊನೆಯ ಸಂದೇಶವನ್ನು ಪ್ರತಿಯೊಬ್ಬರು ತಿಳಿಯಬೇಕು ಅಂದು ಡಿಸೆಂಬರ್ 6, 1956. ಇಡೀ ಭಾರತದಲ್ಲಿ ಕಣ್ಣೀರ ಕೋಡಿ ಹರಿದ ದಿನ. ಕತ್ತಲಲ್ಲಿದ್ದ ಭಾರತಕ್ಕೆ ಬೆಳಕಿನ ಕಿರಣ ನೀಡಿ, ವಿಶ್ವವೇ ಬೆರಗಾಗುವಂತೆ ಮಾಡಿದ್ದ, ಆಧುನಿಕ ಭಾರತದ ನಿರ್ಮಾತೃ, ಸಂವಿಧಾನ ಶಿಲ್ಪಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಿಬ್ಬಾಣ ಹೊಂದಿದ ದಿನ. ಭಾರತದ ಕಣ್ತೆರೆಸಿ, ಸಮಾನತೆಯ ಬೀಜ ಬಿತ್ತಿ ಹೋದ ಆ ಮಹಾನಾಯಕನ ಹೋರಾಟದ ಫಲವನ್ನು ಇಡೀ ಭಾರತವೇ ಇಂದು ಉಣ್ಣುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ರವರು 14ನೇ ಏಪ್ರಿಲ್, 1891 ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ ನಲ್ಲಿ ಹುಟ್ಟಿದರು. ಈ ದೇಶವನ್ನು ಉತ್ತಮ ದಾರಿಗೆ ಕೊಂಡೊಯ್ಯಲೆಂದೇ ಅವರು ಈ ಭಾರತದಲ್ಲಿ ಜನಿಸಿದರು ಎಂದೇ ಹೇಳಬಹುದು. ಅಂಬೇಡ್ಕರ್ ಅವರು ಭಾರತದಲ್ಲಿ ಜನಿಸದೇ ಇರುತ್ತಿದ್ದರೆ, ಇಂದು ಭಾರತದ ಪರಿಸ್ಥಿತಿ ಏನಾಗಿರುತ್ತಿತ್ತು ಎನ್ನುವುದನ್ನು ಯೋಚಿಸಲೂ ಸಾಧ್ಯವಾಗುತ್ತಿರಲಿಲ್ಲ. ಭಾರತದ ಬೀದಿಗಳಲ್ಲಿ ಚಿನ್ನ, ರತ್ನ, ವಜ್ರ ವೈಢೂರ್ಯಗಳನ್ನು ಮಾರಾಟ ಮಾಡಲಾಗುತ್ತಿತ್ತು ಎನ್ನುವ ಇತಿಹಾತಿಹಾಸವನ್ನು ನಾವು ಓದಿದ್ದೇವೆ. ಆದರೆ, ಅದೇ ಭಾರತದಲ್ಲಿ ಮನುಷ್ಯನನ್ನು ಮನುಷ್ಯನಂತೆ ಕಾಣಲಾಗುತ್ತಿರಲಿಲ್ಲ ಎನ್ನುವ ಸತ್ಯವನ್ನೂ ನಾವು ಒಪ್ಪಿಕೊಂಡಿದ್ದೇವೆ. ಇಂದು ಭಾರತದಲ್ಲಿ ಇಷ್ಟರ ಮಟ್ಟಿಗೆ ಸಮಾನತೆ, ನೆಮ್ಮದಿ ಇದೆ ಎಂದರೆ, ಅಂಬೇಡ್ಕರ್ ಅವರು ನೀಡಿದ ಪವಿತ್ರ ಸಂವಿಧಾನದಿಂದ ಮಾತ್ರವೇ ಅದು ಸಾಧ್ಯವಾಗಿದೆ. ಎಲ್ಲ ನಾಯಕರು ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ ಸಿಗಬೇಕೆಂದು ಹೋರಾಟ ಮಾಡಿದರೆ, ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದೊಳಗೆ ಜನರು ಸ್ವತಂತ್ರವಾಗಿ ಬದುಕಬೇಕು ಎಂದು ಕನಸು ಕಂಡರು ಅದಕ್ಕಾಗಿ ಹೋರಾಟ ಮಾಡಿದರು. ಜಾತಿವಾದಿಗಳು, ಮನುವಾದಿಗಳ ನೂರಾರು ಸಂಚನ್ನು ಮುರಿದು, ಪವಿತ್ರವಾದ ಸಂವಿಧಾನವನ್ನು ಈ ದೇಶಕ್ಕೆ ಅರ್ಪಿಸಿದರು. ಭಾರತವು ಎರಡು ಹೋಳಾಗಿ ಭಾರತ-ಪಾಕಿಸ್ತಾನವಾದಾಗ ಅಂಬೇಡ್ಕರ್ ಅವರು ಕೂಡ, ನಮಗೂ ಪ್ರತ್ಯೇಕ ರಾಷ್ಟ್ರ ಬೇಕು ಎಂದು ಹೋರಾಡಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಯಾಕೆಂದರೆ, ಅಂಬೇಡ್ಕರ್ ಅವರಂತಹ ರಾಷ್ಟ್ರವಾದಿ ಇಂದಿಗೂ ಯಾರೂ ಇಲ್ಲ. ಮುಂದೆಯೂ ಬರಲು ಸಾಧ್ಯವಿಲ್ಲ ಅಂಬೇಡ್ಕರ್ ಅವರು ಅಪ್ಪಟ ದೇಶಪ್ರೇಮಿಯಾಗಿದ್ದರು. ಅವರು ರಾಷ್ಟ್ರದ ಬಗ್ಗೆ ಏನು ಹೇಳುತ್ತಿದ್ದರೆಂದರೆ, “ನಾನು ಮೊದಲನೆಯದಾಗಿ ಮತ್ತು ಕೊನೆಯದಾಗಿಯೂ ಇಂಡಿಯನ್”(ಭಾರತೀಯ). ಡಿಸೆಂಬರ್ 6 ಭಾರತ ದೇಶಕ್ಕೆ ದುಃಖದ ದಿನ. ಇಡೀ ಜಗ್ಗತ್ತು ಕಂಡಿರದ ಮಹಾಮಾನವತಾವಾದಿ, ಹೋರಾಟಗಾರ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊನೆಯ ದಿನಗಳ ಬಗ್ಗೆ Last few years of Dr. Ambedkar ಎಂಬ ಕೃತಿಯಲ್ಲಿ ಅವರ ಆಪ್ತ ಕಾರ್ಯದರ್ಶಿ ನಾನಕ್ ಚಂದ್ ರತ್ತು ಅವರು ಬರೆದಿದ್ದಾರೆ. ನಾನಕ್ ಚಂದ್ ರತ್ತು ಅವರಿಗೆ ಆ ದಿನ ಎಂದೂ ಮರೆಯದ ದಿನವಾಗಿತ್ತು. ಅಂದು 1956ರ ಜುಲೈ 31ರ ಮಂಗಳವಾರ. ಸಮಯ 5:30ರ ವೇಳೆಗೆ ನಾನಕ್ ಚಂದ್ ಕೆಲವು ಪತ್ರಗಳನ್ನು ಹೊಂದಿಸಿಡುತ್ತಿದ್ದರು. ಆ ಸಮಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಸ್ವಸ್ಥರಾದರು. ಅದನ್ನು ಗಮನಿಸಿದ ರತ್ತು, ಅಂಬೇಡ್ಕರ್ ಅವರನ್ನು ವಿಚಾರಿಸಿದ ಬಳಿಕ, ಹೀಗೆ ಕೇಳಿದರು. “ ಸರ್… ನೀವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಖಿನ್ನತೆಗೆ ಒಳಗಾಗುತ್ತಿದ್ದೀರಿ, ಅದು ಯಾಕೆ ಎಂದು ನನಗೆ ತಿಳಿಯಬೇಕು ಎಂದು ಕೇಳುತ್ತಾರೆ. ಅಂದು ಬಾಬಾ ಸಾಹೇಬರು ನೀಡಿರುವ ಉತ್ತರವನ್ನು ಇಂದು ಅವರ ಸಮುದಾಯ ಗಂಭೀರವಾಗಿ ತೆಗೆದುಕೊಂಡಿದ್ದರೆ, ಬಹುಶಃ ಇಂದಿಗೂ ದಲಿತ ಸಮುದಾಯ ಹಿಂದಿನ ಅದೇ ಸ್ಥಿತಿಯಲ್ಲಿ ಇರುತ್ತಿರಲಿಲ್ಲವೋ ಏನೋ… ನಾನಕ್ ಚಂದ್ ರತ್ತು ಅವರ ಪ್ರಶ್ನೆಗೆ ಉತ್ತರಿಸಲು ಆರಂಭಿಸಿದ ಅಂಬೇಡ್ಕರರು, ನಾನು ಬದುಕಿರುವಾಗಲೇ ನನ್ನ ಜೀವನದ ಗುರಿಯನ್ನು ಮುಟ್ಟಲು ಸಾಧ್ಯವಾಗಲಿಲ್ಲ. ನನ್ನ ಜನರು ದೇಶದ ಆಳುವ ವರ್ಗವಾಗಬೇಕು ಎಂದು ನಾನು ಬಯಸಿದ್ದೆ. ರಾಜಕೀಯ ಅಧಿಕಾರವನ್ನು ಸಮಾನತೆಯ ಆಧಾರದಲ್ಲಿ ಹಂಚಿಕೊಳ್ಳಬೇಕು ಎಂದು ನಾನು ಬಯಸಿದ್ದೆ. ಆದರೆ ಅದರ ಸಾಧ್ಯತೆಗಳು ನನಗೆ ಗೋಚರಿಸುತ್ತಿಲ್ಲ. ನಾನೇ ಏನಾದರೂ ಮಾಡುತ್ತೇನೆ ಎಂದು ಮುಂದುವರಿಯ ಬೇಕೆಂದುಕೊಂಡರೆ, ನನ್ನನ್ನು ಅನಾರೋಗ್ಯ ಬಾಧಿಸುತ್ತಿದೆ. ಈ ಅನಾರೋಗ್ಯದ ಕಾರಣದಿಂದಾಗಿ ನಾನು ನಿಶ್ಯಕ್ತನಾಗಿದ್ದೇನೆ. ನಾನು ಈವರೆಗೆ ಏನೆಲ್ಲ ಸಾಧಿಸಿದ್ದೇನೋ ಅದರ ಫಲವನ್ನು ಪಡೆದ ನನ್ನವರು ಕೆಲವೇ ಮಂದಿ ಅನುಭವಿಸುತ್ತಿದ್ದಾರೆ. ಶಿಕ್ಷಣ ಪಡೆದವರು ವಂಚನೆ ಮಾಡಿಕೊಂಡು ಅಯೋಗ್ಯರಾಗಿದ್ದಾರೆ. ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನೇ ಸಾಧಿಸಿಕೊಂಡ ಇವರು ನನ್ನ ನಿರೀಕ್ಷೆಗಳನ್ನು ಸುಳ್ಳು ಮಾಡಿದ್ದಾರೆ. ಮೀಸಲಾತಿ ಪಡೆದುಕೊಂಡು ಸರ್ಕಾರಿ ಕೆಲಸ ಪಡೆದವರು ತಮ್ಮ ಸ್ವಾರ್ಥ ಸಾಧನೆಯನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸಮುದಾಯದ ಸೇವೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಹಳ್ಳಿಗಳಲ್ಲಿ ಇನ್ನೂ ಜನರು ಶೋಷಣೆಯನ್ನು ಅನುಭವಿಸುತ್ತಿದ್ದಾರೆ. ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದಾರೆ. ಈ ರೀತಿಯಾಗಿರುವ ಅನಕ್ಷರಸ್ಥ ವಿಶಾಲ ಜನಸಮುದಾಯದತ್ತ ಗಮನಹರಿಸಬೇಕು ಎಂದು ನಾನು ಯೋಚಿಸುತ್ತಿದೆ. ಆದರೆ, ನನಗೆ ಇರುವುದು ಇನ್ನು ಕೆಲವೇ ದಿನಗಳು ಎಂದು ಬಾಬಾ ಸಾಹೇಬರು ನೋವು ಪಟ್ಟರು. ಅಂಬೇಡ್ಕರ್ ಅವರ ನೋವು ಇಂದಿಗೂ ನಿಜವೇ ಆಗಿದೆ ಅಲ್ಲವೇ? ಬಹಳಷ್ಟು ದಲಿತರು ಇಂದಿಗೂ ಉತ್ತಮ ಸ್ಥಿತಿವಂತರಾಗಿ ತಾವು, ತಮ್ಮ ಸಂಬಂಧಿಕರು ಎಂದೇ ನೋಡುತ್ತಿದ್ದಾರೆ. ತಮ್ಮ ಸಮುದಾಯದ ಒಂದಿಷ್ಟು ಮಕ್ಕಳನ್ನು ದತ್ತುಪಡೆದು ಅವರ ಶಿಕ್ಷಣಕ್ಕೆ ನೆರವು ನೀಡುವ ನೌಕರರು ಎಂದು ಎಷ್ಟು ಜನ ಇದ್ದಾರೆ ಎಂದು ಕೇಳಿದರೆ, ಕೇವಲ ಬೆರಳೆಣಿಕೆಯ ನೌಕರರು ಮಾತ್ರವೇ ಸಿಗುತ್ತಾರೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ಸಹಾಯ ಮಾಡುವ ನೌಕರರು ಎಷ್ಟು ಜನರಿದ್ದಾರೆ ಎಂದು ಯೋಚಿಸಿದರೆ, ಅಲ್ಲಿಯೂ ಕೇವಲ ಬೆರಳೆಣಿಕೆಯ ಜನರು ಸಿಗುತ್ತಾರೆ. ಸಮರ್ಥರು ಕೈಕಟ್ಟಿ ಕುಳಿತಿದ್ದರೆ, ಸಾಧಾರಣ ಸ್ಥಿತಿವಂತರು ಇಂದು ಸಮಾಜ ಸುಧಾರಣೆ ಮಾಡಬೇಕು ಎಂದು ಹೊರಟಿದ್ದಾರೆ. ಆದರೆ ಅವರಲ್ಲಿ ಶಕ್ತಿ ಇಲ್ಲ. ಇಂತಹ ಸ್ಥಿತಿಯಲ್ಲಿ ಇಂದು ಸಮುದಾಯ ಅಧೋಗತಿಯತ್ತ ಪ್ರಯಾಣಿಸುತ್ತಿದೆ. ಅಂಬೇಡ್ಕರ್ ಅವರು ಇಂತಹ ದುಸ್ಥಿತಿಯನ್ನು ನೆನೆದು ಅಂದು ಕಣ್ಣೀರು ಹಾಕಿದ್ದರು. ತನ್ನ ಸಮುದಾಯ ಆಳುವ ವರ್ಗವಾಗಬೇಕು. ಎಷ್ಟೋ ವರ್ಷಗಳಿಂದ ಭಾರತದಲ್ಲಿ ಪ್ರಾಣಿಗಳಿಗಿಂತಲೂ ಕೀಳಾಗಿ ನಡೆಸಲಾಗಿದ್ದ ಅಸ್ಪೃಶ್ಯ ಸಮುದಾಯವನ್ನು ಮೇಲೆತ್ತಬೇಕು, ಅವರು ಸ್ವಾಭಿಮಾನದಿಂದ ಬದುಕುವಂತಾಗಬೇಕು. ಅವರು ಸ್ವಾಭಿಮಾನದಿಂದ ಬದುಕುವಂತಾಗಬೇಕಾದರೆ ಅವರು ಆಳುವ ವರ್ಗವಾಗಬೇಕು ಎಂದು ಅವರು ನಿರೀಕ್ಷಿಸಿದ್ದರು. ಆದರೆ, ಸಮುದಾಯದಲ್ಲಿ ಅಭಿವೃದ್ಧಿ ಹೊಂದಿದವರು ಅವರ ಸ್ವಾರ್ಥವನ್ನು ಇಂದಿಗೂ ನೋಡುತ್ತಿದ್ದಾರೆಯೇ ಹೊರತು, ಸಮುದಾಯದ ಅಭಿವೃದ್ಧಿಗೆ ಅವರಿಂದ ಯಾವುದೇ ಸಹಾಯವೂ ಸಿಗುತ್ತಿಲ್ಲ. ಹೀಗಾಗಿಯೇ ಇಂದಿಗೂ ಈ ಸಮುದಾಯದ ಬಡವರು ಶೈಕ್ಷಣಿಕ ರಾಜಕೀಯವಾಗಿ ಮೇಲೆ ಬರಲಾಗದೇ ತನ್ನ ಸಮುದಾಯದ ಒಳಗೆಯೇ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ. ಅಂಬೇಡ್ಕರ್ ಅವರು ತಮ್ಮ ಮನಸ್ಸಿನಲ್ಲಿದ್ದ ನೋವನ್ನು ರತ್ತು ಬಳಿಯಲ್ಲಿ ಹೇಳುತ್ತಾ, “ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್”, “ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ”, ಹಿಂದೂ ಧರ್ಮದ ಒಗಟುಗಳು ಎನ್ನುವ ನನ್ನ ಎಲ್ಲಾ ಕೃತಿಗಳನ್ನು ಜೀವಿತಾವಧಿಯಲ್ಲಿಯೇ ಪ್ರಕಟಿಸಬೇಕು ಎಂದು ನಾನು ಬಯಸಿದ್ದೆ. ಆದರೆ ಅವುಗಳನ್ನು ಹೊರತರಲೂ ನನ್ನಿಂದ ಸಾಧ್ಯವಾಗುತ್ತಿಲ್ಲವಲ್ಲ, ಅದು ಮುಂದೆಂದಾದರೂ ಪ್ರಕಟವಾಗಬಹುದು ಎಂದು ನಾನು ಅಂದುಕೊಂಡರೂ ಆ ಸಾಧ್ಯತೆಗಳು ನನಗೆ ಕಾಣುತ್ತಿಲ್ಲ. ನನ್ನ ಚಳುವಳಿಯನ್ನು ಶೋಷಿತ ಸಮುದಾಯದಿಂದ ಬಂದು ಯಾರಾದರೂ ಮುನ್ನಡೆಸುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ. ಆದರೆ ಅಂತಹವರು ಯಾರೂ ನನಗೆ ಈ ಸಂದರ್ಭದಲ್ಲಿ ಕಾಣುತ್ತಿಲ್ಲ. ನಾನು ಯಾರ ಮೇಲೆ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆನೋ, ಅವರು ಈ ಜವಾಬ್ದಾರಿಯ ಬಗ್ಗೆ ಗಮನ ಹರಿಸುತ್ತಿಲ್ಲ. ಅವರು ನಾಯಕತ್ವಕ್ಕಾಗಿ, ಅಧಿಕಾರಕ್ಕಾಗಿ ತಮ್ಮಲೇ ಹೋರಾಡುತ್ತಿದ್ದಾರೆ. ನನ್ನ ದೇಶದ ಜನತೆಗೆ ಸೇವೆ ಸಲ್ಲಿಸುವ ಆಸೆ ನನಗೆ ಇನ್ನೂ ಇದೆ. ಪೂರ್ವಾಗ್ರಹ ಪೀಡಿತ ಜಾತಿ ಎಂಬ ರೋಗವನ್ನು ಅಂಟಿಸಿಕೊಂಡಿರುವ ಜನರೇ ಇಲ್ಲಿ ತುಂಬಿದ್ದಾರೆ. ಈ ದೇಶದಲ್ಲಿ ನನ್ನಂತಹವರು ಜನಿಸುವುದು ಮಹಾಪಾಪ. ಹಾಗೆಯೇ ಈಗಿರುವ ವ್ಯವಸ್ಥೆಯಲ್ಲಿ ದೇಶಕ್ಕೆ ಸಂಬಂಧಪಟ್ಟಂತೆ ಯಾರಾದರೊಬ್ಬರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಮಂಡಿಸುವುದು ತುಂಬಾ ಕಷ್ಟ. ಏಕೆಂದರೆ ಇಲ್ಲಿಯ ಜನರು ಈ ದೇಶದ ಪ್ರಧಾನಿ(ನೆಹರು)ಗೆ ಒಗ್ಗದಂತಹ ಯಾವುದೇ ವಿಚಾರಗಳನ್ನು ಕೇಳುವ ತಾಳ್ಮೆಯನ್ನು ಹೊಂದಿಲ್ಲ. ಈ ದೇಶ ಇನ್ನೆಲ್ಲಿಗೆ ಹೋಗಿ ಮುಳುಗುತ್ತದೆಯೋ ಎಂದು ಅವರು ಸಂಕಟ ಅನುಭವಿಸುತ್ತಾರೆ. ಅಂಬೇಡ್ಕರ್ ಅವರ ಧ್ವನಿಯಲ್ಲಿ ಕಂಪನ ಆರಂಭವಾಗುತ್ತದೆ “ಧೈರ್ಯ ತಂದುಕೋ ರತ್ತು, ನೀನು ಎದೆಗುಂದ ಬೇಡ, ಜೀವನ ಯಾವಗಲಾದರೂ ಕೊನೆಗೊಳ್ಳಲೇ ಬೇಕು. ನನ್ನ ಜನರಿಗೆ ಹೇಳು ನಾನು ಇಲ್ಲಿಯವರೆಗೆ ಏನನ್ನು ಸಾಧಿಸಿದ್ದೇನೋ, ಅದನ್ನು ನನ್ನ ಶತ್ರುಗಳ ವಿರುದ್ಧ ಹೋರಾಡುತ್ತಾ, ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ, ನಿರಂತರವಾಗಿ ನೋವುಗಳ ಸರಮಾಲೆಯನ್ನೇ ಅನುಭವಿಸುತ್ತಾ ಸಾಧಿಸಿದ್ದೇನೆ. ಈ ವಿಮೋಚನ ರಥವನ್ನು ಈಗ ಅದು ಎಲ್ಲಿದೆಯೋ ಅಲ್ಲಿಯವರೆಗೆ ತಂದಿದ್ದೇನೆ. ಏನೇ ಆದರೂ ಈ ರಥ ಮುನ್ನಡೆಯಲೇ ಬೇಕು. ರಥವನ್ನು ಮುನ್ನಡೆಸಲು ಸಾಧ್ಯವಾಗದಿದ್ದರೆ. ಅದು ಎಲ್ಲಿದೆಯೋ ಅಲ್ಲಿಯೇ ಇರಲು ಬಿಡಿ. ಯಾವುದೇ ಕಾರಣಕ್ಕೂ ಅದನ್ನು ಹಿಂದಕ್ಕೆ ಸರಿಯಲು ಬಿಡಬೇಡಿ ಇದು ನನ್ನ ಕೊನೆಯ ಸಂದೇಶ, ಇದನ್ನು ನನ್ನ ಜನರಿಗೆ ತಲುಪಿಸು ಎಂದು ಹೇಳುತ್ತಾರೆ. ಇದು ಅಂಬೇಡ್ಕರರ ಕೊನೆಯ ಮಾತುಗಳು. ಅಂದು ರತ್ತು ಜೊತೆಗೆ ಇಷ್ಟೆಲ್ಲ ಮಾತುಗಳನ್ನಾಡಿದ್ದ, ಡಾ.ಬಿ.ಆರ್.ಅಂಬೇಡ್ಕರ್ ಅವರು ನಿದ್ದೆಗೆ ಜಾರಿದ್ದರು. ಮರುದಿನ ಅಂಬೇಡ್ಕರ್ ಅವರು ಎದ್ದೇಳಲೇ ಇಲ್ಲ. ಅಂಬೇಡ್ಕರ್ ಅವರು ನಿಧನರಾಗಿದ್ದರು. ಇಡೀ ದೇಶವೇ ಸ್ತಬ್ಧವಾಗಿತ್ತು. ಅಂಬೇಡ್ಕರ್ ಅವರ ಕಾಲಿಗೆ ಅಡ್ಡವಾಗುತ್ತ, ಪ್ರತಿನಿತ್ಯ ತೊಂದರೆ ಕೊಡುತ್ತಿದ್ದ ದೊಡ್ಡ ದೊಡ್ಡ ನಾಯಕರು ಎನಿಸಿಕೊಂಡಿದ್ದವರೆಲ್ಲರೂ ಆ ದಿನ ಕಣ್ಣೀರು ಹಾಕಿದರು. ಅಂಬೇಡ್ಕರ್ ಎಂದರೆ ಅವರೊಂದು ವ್ಯಕ್ತಿಯಾಗಿರಲಿಲ್ಲ, ಅವರು ಈ ದೇಶದ ಶಕ್ತಿಯಾಗಿದ್ದರು. ಅದು ಅಂದಿಗೂ ಇಂದಿಗೂ ಎಂದೆಂದಿಗೂ…. # ಈ ಕೃತಿಯನ್ನು ನಾನಕ್ ಚಂದ್ ರತ್ತು ಅವರು ಬರೆದಿದ್ದಾರೆ… *********************************************************
ಡಾ.ಬಿ.ಆರ್.ಅಂಬೇಡ್ಕರ್ ರ ಕೊನೆಯ ಸಂದೇಶ..! Read Post »
ಲೇಖನ ಪಾಠವಷ್ಟೇ ಅಲ್ಲ, ಆಟವೂ ಬದಲಾಗಿದೆ ಅಕ್ಷತಾ ರಾಜ್ ಪೆರ್ಲ “ಆಂಟೀ ಸ್ವಲ್ಪ ನಿಲ್ಲಿ” ಗೇಟಿನ ಬಳಿಯೇ ಪುಟಾಣಿಯೊಬ್ಬಳು ನಿಲ್ಲಿಸಿದಾಗ “ಯಾಕೆ?” ಕೇಳಿದೆ. “ನಿಮ್ದು ಬಿಸಿ ನೋಡ್ಲಿಕ್ಕಿದೆ” ಮುದ್ದಾಗಿ ಹೇಳುತ್ತಾ ಪಟಾಕಿ ಸಿಡಿಸುವ ಪಿಸ್ತೂಲೊಂದನ್ನು ನನ್ನ ಹಣೆಗೆ ತೋರಿಸಿದಳು. “ಬಿಸಿ ಇದ್ರೆ ಏನ್ಮಾಡ್ತೀಯಾ?” ಮತ್ತೆ ಕೇಳಿದೆ. “ಅಲ್ಲಿಗೆ ಹಾಕ್ತೇನೆ” ಅವಳು ತೋರಿಸಿದ ದಿಕ್ಕಿನತ್ತ ನೋಡಿದೆ, ಆಗಷ್ಟೇ ತನ್ನ ಮರಿಗಳೊಡನೆ ಸೇರಿಕೊಂಡ ಕೋಳಿಗೂಡು ಕಂಡಿತು. ಮನದಲ್ಲೇ ನಗುತ್ತಾ “ಅದ್ಯಾಕೆ ಹಾಗೆ?ನನ್ನ ಅಲ್ಲೇ ಯಾಕೆ ಹಾಕ್ಬೇಕು?” ಗಲ್ಲ ಚಿವುಟಿ ಪ್ರಶ್ನಿಸಿದೆ. “ಟಿ.ವಿ, ಪೇಪರ್ ಎಲ್ಲ ಏನೂ ನೋಡಲ್ವಾ! ಅಮ್ಮ ಈ ಆಂಟಿಗೆ ಏನೂ ಗೊತ್ತಿಲ್ಲ” ಸರ್ಟಿಫಿಕೇಟ್ ಕೊಟ್ಟೇ ಬಿಟ್ಟಳು ಪೋರಿ. “ಹೌದು ಇದೆಲ್ಲ ಎಲ್ಲಿ ಕಲಿತೆ ನೀನು” ಪುನಹ ಕೇಳಿದಾಗ “ಈಗ ಎಲ್ಲಾ ಕಡೆ ಮಾಡ್ತಾರೆ ಹೀಗೆ, ನನ್ನ ಮನೆಗೂ ಬರಬೇಕಾದರೆ ಟೆಸ್ಟು ಮಾಡಿಸ್ಬೇಕು” ಎಂದವಳೇ ಪಿಸ್ತೂಲನ್ನು ಕೆಳಗಿಳಿಸಿ ಪಕ್ಕದಲ್ಲಿದ್ದ ಪುಟ್ಟತಮ್ಮನಲ್ಲಿ “ನಾಲ್ಕು” ಹೇಳಿದಾಗ ಆತ ಪುಟ್ಟ ಚೀಟಿಯಲ್ಲಿ ಬರೆದು ನನ್ನ ಕೈಗಿತ್ತು ಸಾಬೂನು ನೀರನ್ನು ಪಿಚಕಾರಿಯಲ್ಲಿ ಸಿಡಿಸಿ ಗೇಟು ತೆರೆದ. “ಹ್ಞೂಂ, ಈಗ ಹೋಗ್ಬಹುದಾ ಒಳಗೆ?” ಕೇಳಿದಾಗ “ಹೋಗ್ಬಹುದು, ಹತ್ತು ಬಂದ್ರೆ ಮಾತ್ರ ಅಲ್ಲಿಗೆ” ಕೋಳಿ ಗೂಡು ತೋರಿಸಿದಾಗ “ಓಹೋ ಇವರ ಲೆಕ್ಕದಲ್ಲಿ ನಾಲ್ಕಾದರೆ ನಾರ್ಮಲ್, ಹತ್ತಾದರೆ ಅಬ್ನಾರ್ಮಲ್” ನನಗೆ ನಾನೇ ಹೇಳಿಕೊಳ್ಳುತ್ತಿರುವಾಗ “ಬಂದ್ರಾ! ನಿಮ್ಮನ್ನೂ ಕಾಡಿಸಿದ್ವಾ ಈ ಮಕ್ಳು? ಈಗ ಇದೇ ಆಟ ಇವುಗಳಿಗೆ….ಯಾರು ಬಂದ್ರೂ ಥರ್ಮಲ್ ಸ್ಕ್ಯಾನ್, ಮೊನ್ನೆ ತೆಂಗಿನಕಾಯಿ ಕೊಯ್ಯೋಕೆ ಬಂದ ಶಂಕ್ರನನ್ನು ಕೋಳಿಗೂಡಿಗೆ ಹಾಕ್ತೇವೆ ಅಂಥ ಎಳ್ಕೊಂಡು ಹೋಗಿದ್ದಾರೆ, ಶಾಲೆ ಆದ್ರೂ ಶುರು ಆಗ್ಬಾರ್ದಾ!” ಗೆಳತಿ ಗೊಣಗುತ್ತಾ ನನ್ನನ್ನು ಒಳಕರೆದೊಯ್ದಾಗ ಪುಟಾಣಿಗಳೂ ಓಡುತ್ತಾ ಬಂದು ಸೋಫಾದಲ್ಲಿ ಕುಳಿತರು. ಅದ್ಯಾಕೋ ಈ ಮಕ್ಕಳ ಆಟ ಕಂಡಾಗ ಬಾಲ್ಯ ನೆನಪಾಯಿತು. ಮನೆ ತುಂಬಾ ಮಕ್ಕಳಿದ್ದ ಕಾಲದಲ್ಲಿ ಹೀಗೆ ಇತ್ತಲ್ಲವೇ ನಮ್ಮ ಬಾಲ್ಯ? ಅಪ್ಪ ಅಮ್ಮನ ಕಣ್ಗಾವಲಿರಲಿಲ್ಲ, ‘ಅಲ್ಲಿ ಹೋದರೆ ಬೀಳುವೆ, ಇಲ್ಲಿ ಬಂದರೆ ಅಳುವೆ” ಎಂಬ ಮುಂಜಾಗರೂಕತೆಯಿರಲಿಲ್ಲ. ಮರ ಹತ್ತುವಾಗಲೂ, ನೀರಿನೊಳಗೆ ಬೀಳುವಾಗಲೂ ಸಿಕ್ಕ ಕೈಗಳು ನಮ್ಮ ಕೈಗಳಿಗಿಂತ ತುಸುವೇ ನೀಳವಾಗಿದ್ದವು ಅಷ್ಟೇ! ಅಡುಗೆಮನೆಯಿಂದ ಉಮೇದುಗೊಂಡು ಯಾವುದೋ ಮರದ ಕೆಳಗೆ ಹಾಕುತ್ತಿದ್ದ ಒಲೆಯಲ್ಲಿ ಅದೆಷ್ಟು ವಿಧದ ಅಡುಗೆಗಳು ತಯಾರಾಗುತ್ತಿದ್ದವೆಂದರೆ ಮುಂದೆ ಅಡುಗೆಯ ಬಗೆಗಿನ ಆಸಕ್ತಿಗೆ ಅದೂ ಒಂದು ಪಾಠವಾಗುವಷ್ಟು ! ಅಪ್ಪನೊಡನೆ ಹೋಗುತ್ತಿದ್ದ ಆ ದಿನಸಿ ಅಂಗಡಿಯಿಂದ ಪಡಸಾಲೆಯಲ್ಲಿ ತಲೆಯೆತ್ತಿದ ಗೂಡಂಗಡಿಗೆ ಎಣ್ಣೆಯ ಹಳೆಯ ಶೀಶೆಯೋ ಅಥವಾ ತೂತು ಮಂಡಗೆಯೋ ಭರಣಿಯಾಗಿ ಅದ್ಯಾವಾಗಲೋ ಅಪ್ಪ ಕೊಟ್ಟ ಚಿಲ್ಲರೆಕಾಸಿನಲ್ಲಿ ಕೊಂಡ ಕಟ್ಲೀಸುತುಂಡು ಅದರಲ್ಲಿ ತುಂಬಿಕೊಳ್ಳುತ್ತಿತ್ತು. ಆಗಿನ ಕೆಲವು ಗೆಳೆಯರು ಇಂದು ಯಶಸ್ವಿ ವ್ಯಾಪಾರಿಗಳಾಗಲು ಈ ಪಡಸಾಲೆ ಗೂಡಂಗಡಿ ಬಹುಮುಖ್ಯ ಭೂಮಿಕೆ. ಸುರೇಶ ಮಾಸ್ತರರ ದಪ್ಪ ಕನ್ನಡಕ ಎಷ್ಟರ ಮಟ್ಟಿಗೆ ಆಕರ್ಷಿಸಿತ್ತೆಂದರೆ ಹುಣಸೇಮರದ ಕೆಳಗೆ ಅಮ್ಮನ ಹಳೆಯ ಸೀರೆ ಮದೆ ಕಟ್ಟಿ ಆಡುತ್ತಿದ್ದ ಶಾಲೆಯಾಟಕ್ಕೆ ಅಜ್ಜನ ದಪ್ಪ ಕನ್ನಡಕ ಮೇಸ್ತರಾಗಿ ನಿಂತ ದಿನಗಳು ಇಂದಿಗೂ ಟೀಚರ್ ಎಂದರೆ ಇಂತಹುದೇ ಗಾಂಭೀರ್ಯ ಬೇಕೆನ್ನುವಷ್ಟು ಛಾಪು ಮೂಡಿಸಿದ್ದು ಹೌದು. ಇವೆಲ್ಲವೂ ಒಳಾಂಗಣ ಆಟಗಳ ಪಟ್ಟಿಗೆ ಸೇರಿದರೆ ಹೊರಾಂಗಣ ಆಟಗಳ ರುಚಿಯೇ ಬೇರೆ ರೀತಿಯದ್ದು. ಲಗೋರಿಯಾಟದಲ್ಲಿ ಬೀಳುತ್ತಿದ್ದ ಚೆಂಡಿನ ಪೆಟ್ಟು, ಕಣ್ಣಾಮುಚ್ಚಾಲೆಯಲ್ಲಿ ಅವಿತು ಕುಳಿತುಕೊಳ್ಳುತ್ತಿದ್ದ ಗಲ್ಲಿಯ ಮೂಲೆಮೂಲೆಗಳು, ಕಬ್ಬಡ್ಡಿ – ಖೋಖೋ, ಮುಟ್ಟಾಟಗಳಲ್ಲಿ ಬಿದ್ದ ಗಾಯಕ್ಕೆ ಯಾವುದೋ ಕಾಡುಸೊಪ್ಪನ್ನು ಅರೆದು ಕಟ್ಟುತ್ತಿದ್ದ ಬ್ಯಾಂಡೇಜ್ ಇಂದು ನೆನಪಾದಾಗ ಅನ್ನಿಸುವುದಿದೆ ಬಹುಶಃ ಸ್ವರಕ್ಷಣಾ ಪದ್ಧತಿ ಅದಾಗಿದ್ದಿರಬಹುದೇನೋ ! ಚಕ್ರವೇ ಇರದ ಬಸ್ಸಿನ ಚಾಲಕ, ನಿರ್ವಾಹಕನಲ್ಲೂ ಬದುಕಿನ ಬಂಡಿಯನ್ನು ನಾನು ಮುನ್ನಡೆಸಬಲ್ಲೆಯೆಂಬ ಆತ್ಮವಿಶ್ವಾಸ ಇದ್ದಂತಿತ್ತು. ವಿಭಿನ್ನ ವ್ಯಕ್ತಿತ್ವಗಳನ್ನು ಆವಾಹಿಸಿಕೊಂಡು ಆಡುತ್ತಿದ್ದ ಆ ಆಟಗಳು ಆಟವಷ್ಟೇ ಆಗಿರದೆ ಪ್ರತಿನಿತ್ಯದ ಕಲಿಯುವಿಕೆಯ ಒಬ್ಬ ಪ್ರತಿನಿಧಿಯಾಗಿ ನಿಲ್ಲುತ್ತಿದ್ದ. ಇಲ್ಲಿ ಕೌಟುಂಬಿಕ ಸಂಬಂಧದ ಜೊತೆಗೆ ಸಮಾಜದೊಳಗೆ ನಾವು ಹೇಗೆ ಗುರುತಿಸಿಕೊಳ್ಳಬೇಕು ಹಾಗೂ ಸಮಾಜದಲ್ಲಿ ನಾವೇನು? ಎಂಬ ನೈತಿಕ ಪಾಠವೂ ಸಿಗುತ್ತಿತ್ತು. ಆಟದಿಂದ ದೂರ ಉಳಿದುಬಿಟ್ಟರೆ ‘ಬೆಕ್ಕಿನ ಬಿಡಾರ ಬೇರೆ” ಎಂದೂ ಆಟದಲ್ಲಿ ಮೂಗೇಟಾದರೆ ಅಥವಾ ಸೋತೆನೆಂದು ಅತ್ತರೆ ‘ಅಳುಮುಂಜಿ’ಯೆಂದು ಕರೆಯುತ್ತಾರೆಂಬ ಅಂಜಿಕೆಯ ಒಳಗೆ ಹೊಸ ನಾಯಕ ಹುಟ್ಟುತ್ತಿದ್ದುದು ನಮ್ಮ ಅರಿವಿಗೆ ಬಾರದ್ದು. ಅಂದು ಆಟವಾಡಲು ಸಮಯ ಬೇಕಾದಷ್ಟು ಇತ್ತೇ ಎಂಬುದನ್ನು ಪ್ರಶ್ನಿಸಿದರೆ ಸಿಗುವ ಉತ್ತರ ‘ಅಪ್ಪನೊಡನೆ ಗೊಬ್ಬರ ಹೊರಲು ಹೆಗಲು ಕೊಟ್ಟದ್ದು, ಅಮ್ಮ ಕಟ್ಟುತ್ತಿದ್ದ ಬೀಡಿಗೆ ಸುರುಟುತ್ತಿದ್ದ ನೂಲು ಅಥವಾ ಶಾಲೆಯ ಪುಸ್ತಕಗಳಿಗಾಗಿ ಮಾಡುತ್ತಿದ್ದ ಅಂದಿನ ಕಾಲದ ಪಾರ್ಟ್ಟೈಮ್ ಕೆಲಸಗಳು’. ಆದುದರಿಂದ ಅಂದು ಆಡುತ್ತಿದ್ದ ಯಾವುದೇ ಆಟಗಳಾದರೂ ಅದು ಸಮಯ ಕಳೆಯಲು ಆಡುವಂತಹದ್ದಾಗಿರಲಿಲ್ಲ; ಬದಲಾಗಿ ದಣಿದ ದೇಹಗಳಿಗೆ ಚೈತನ್ಯ ತುಂಬುವಂತಹದ್ದಾಗಿತ್ತು. ಆ ಕಾರಣಕ್ಕಾಗಿಯೇ ಅಂದಿನ ಬಹುತೇಕ ಆಟಗಳು ಒಬ್ಬನೇ ಆಡುವ ಆಟವಾಗಿರದೆ ಅಲ್ಲೊಂದು ಸಂಘ ಅನಿವಾರ್ಯವಾಗಿತ್ತು. ಲಗೋರಿಯ ಪಲ್ಲೆಯನ್ನು ನುಣುಪಾಗಿಸುವವನು ಒಬ್ಬನಾದರೆ, ಸಮಗಾತ್ರದ ಕಲ್ಲುಗಳನ್ನು ಆಯ್ಕೆ ಮಾಡುವವನೊಬ್ಬ, ಗೆರೆಯೆಳೆದು ಕೋಟೆ ಕಟ್ಟುವವನೊಬ್ಬ, ಉರುಳಿಸುವವನು ಇನ್ನೊಬ್ಬ! ಬಿದ್ದೆದ್ದರೂ, ಅತ್ತು ನಕ್ಕರೂ, ಗುದ್ದಾಡಿ ಬಡಿದಾಡಿಕೊಂಡರೂ ನಡೆದುದು ದೊಡ್ಡವರ ತನಕ ಹೋಗಲೇಬಾರದೆಂಬ ಅಲಿಖಿತ ಒಪ್ಪಂದದ ಸಣ್ಣವರ ಆಟದಲ್ಲಿ ನಾವು ನೀವೆಲ್ಲರೂ ‘ಮಕ್ಕಳ ಸಮಾಜ’ದ ಅಧಿನಾಯಕರಾಗಿದ್ದವರು. ಡಿಜಿಟಲ್ ಬಾಲ್ಯ ‘ಆಡಿ ಬಾ ನನ ಕಂದ ಅಂಗಾಲ ತೊಳೆದೇನ’ ಎಂಬಲ್ಲಿAದ ‘ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು’ ಎಂಬ ಕಾಲಘಟ್ಟಕ್ಕೆ ಬಂದು ನಿಂತಾಗ ಮನೆಯಿಂದ ಮಗು ಹೊರಗೆ ಕಾಲಿಟ್ಟರೆ ಕಾಲಿಗೆಲ್ಲಿ ಮಣ್ಣು ಮೆತ್ತಿಸಿಕೊಳ್ಳುವುದೋ ! ನೆರೆಹೊರೆಯ ಮಕ್ಕಳೊಂದಿಗೆ ಆಟವಾಡಿ ಬಿದ್ದರೆ ಮಗು ನೋವೆಲ್ಲಿ ತಡೆದುಕೊಂಡೀತು ಎಂಬ ಭಯ, ಜೊತೆಯಲ್ಲಿ ನಾವಿಲ್ಲದಿದ್ದರೆ ಮಗು ಹೇಗೆ ಸಂಭಾಳಿಸಿಕೊಂಡೀತು? ಎಂಬ ಅತಿಯಾದ ಜಾಗರೂಕತೆ ಕರೆದೊಯ್ದಿದ್ದು ಡಿಜಿಟಲ್ ಬಾಲ್ಯದತ್ತ. ಯಂತ್ರಯುಗಕ್ಕೆ ವಿಭಕ್ತ ಕುಟುಂಬ ಅನಿವಾರ್ಯ ಎಂಬ ಸ್ಥಿತಿಗೆ ತಲುಪಿದಾಗ ಅಜ್ಜನ ಕೋಲೆಲ್ಲಿ? ಅಜ್ಜಿಯ ಕತೆಯೆಲ್ಲಿ? ಅತ್ತಾಗೊಂದು ಕಾರ್ಟೂನ್, ನಕ್ಕಾಗೊಂದು ಚಾಕ್ಲೇಟು ಎಂಬ ದಿನಗಳಲ್ಲಿ ಮರಕೋತಿಯಾಟ, ಪೆಪ್ರ್ಮೆಂಟು ಸವಿ ಸವಕಲು ನಾಣ್ಯವಾಗಿದ್ದೂ ಹೌದು. ಅಪ್ಪ ಅಮ್ಮ ಒಬ್ಬ ಮಗು ಹೀಗಿರುವ ಕಾಲದಲ್ಲಿ ಒತ್ತಡಗಳ ನಡುವೆ ಚೌಕಾಬಾರ, ಚೆನ್ನೆಯ ಮಣೆಗಳಿಗೆ ಜಾಗವಿಲ್ಲದಾದಾಗ ಆ ಸ್ಥಳವನ್ನು ಆಕ್ರಮಿಸಿಕೊಂಡಿದ್ದೇ ವೀಡಿಯೋ ಗೇಮ್ಸ್ಗಳು. ಇದು ಎಲ್ಲಿಯ ತನಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತ್ತೆಂದರೆ ಅಂತರ್ಜಾಲವೆಂಬ ಹೊಸಲೋಕ ತೆರೆದುಕೊಳ್ಳುವವರೆಗೆ, ನಂತರದ ಮಿಂಚಿನ ಬದಲಾವಣೆಗಳು ನಮ್ಮನ್ನು ಎಷ್ಟು ದೂರ ತಂದು ನಿಲ್ಲಿಸಿಬಿಟ್ಟಿತೆಂದರೆ ಮನೆಯವರಿಗೆ ಅಪರಿಚಿತರಾಗಿ ಲೋಕಕ್ಕೆ ಪರಿಚಿತರಾಗುವಷ್ಟು. ಇಷ್ಟು ರೂಪಾಂತರಗೊಂಡಾಗ ಆ ಆಟಗಳು ಉಳಿದೀತೇ? ದಣಿವಾರಿಸಿಕೊಳ್ಳಲು ಆಡುತ್ತಿದ್ದ ಆಟಗಳು ಮರೆಯಾಗಿ ಹೊತ್ತು ಕಳೆಯಲು ಬಹಳಷ್ಟು ಆಟಗಳು ಬಂದವು. ಸಮಯವಿಲ್ಲವೆಂದು ಹಲುಬುವ ಜೊತೆಗೆ ಆಟಕ್ಕೆಂದೇ ಸಮಯ ಮೀಸಲಿಡುವಂತಾಯಿತೆಂದರೆ ಅಭ್ಯಾಸ ಚಟವಾಗುವ ಎಲ್ಲಾ ಸೂಚನೆಗಳೂ ಸಿಕ್ಕಿಬಿಟ್ಟಿತ್ತು. ಆಟಗಳು ಗೇಮ್ಸ್ಗಳಾಯಿತು ಹಾಗೂ ಅದರದ್ದೇ ಜಗತ್ತಿನಲ್ಲಿ ಒಂದಿಷ್ಟು ಜಿದ್ದು ಮತ್ತು ಕ್ರೌರ್ಯಗಳು ಬುಸುಗುಡಲಾರಂಭಿಸಿ ಅವುಗಳಿಗೆ ಒಗ್ಗಿಹೋಗಿದ್ದೇವೆಂಬುದು ಸ್ಪಷ್ಟವಾಗಿದ್ದೇ ಕೆಲವೊಂದು ಗೇಮ್ಸ್ಗಳು ನಿಷೇಧಿಸಲ್ಪಟ್ಟಾಗ ಜಗತ್ತೇ ಮುಳುಗಿಹೋಯಿತೆನ್ನುವಷ್ಟು ಅತ್ತವರು ಸಾಕ್ಷಿಯಾದಾಗ, ಯಾಕೆ ಹೀಗೆ? ಅಂದಿನ ನಮ್ಮ ಬಾಲ್ಯದ ಆಟಗಳು ವಯಸ್ಸಿನ ಒಂದು ಹಂತಕ್ಕೆ ತಲುಪಿದಾಗ ತನ್ನಷ್ಟಕ್ಕೇ ನಿಂತು ಹೊಸತಕ್ಕೆ ಒಗ್ಗಿಕೊಳ್ಳುತ್ತಿತ್ತು ಮತ್ತು ಅವು ಬೇಕೇ ಬೇಕೆಂದು ಅನ್ನಿಸಿಯೇ ಇರಲಿಲ್ಲ. ಆದರೆ ಡಿಜಿಟಲ್ ಗೇಮ್ಸ್ಗಳು ಹಾಗಿವೆಯೇ! ‘ಹಳ್ಳಿಗೂ – ದಿಲ್ಲಿಗೂ ಎಲ್ಲಿಯ ದೂರ’ ಎನ್ನುವ ಜಮಾನದಲ್ಲಿ ಈ ಗೇಮ್ಗಳು ವಯಸ್ಸಿನ ಅಂತರವಿಲ್ಲದೆಯೇ ಪ್ರಿಯವಾಗುತ್ತಾ ಹೋಗುತ್ತದೆ ಬಿಟ್ಟಿರಲಾರದಷ್ಟು, ಅಲ್ಲಿ ತೆರೆದುಕೊಳ್ಳುವ ಲೋಕ ‘ಮಕ್ಕಳ ಸಮಾಜ’ ಎಂಬ ಕಾರಕವಾಗಿ ಅಲ್ಲ ‘ಚಟ’ ಎಂಬ ಮಾರಕವಾಗಿ ! ಮತ್ತೆ ಬರುತ್ತಿದೆ ಆಟಗಳು ಕಾಲ ಬಹಳಷ್ಟು ಪಾಠಗಳನ್ನು ಇತ್ತೀಚಿನಿಂದ ಕಲಿಸಲಾರಂಭಿಸಿದೆ. ನಮ್ಮ ಮನೆಯೊಳಗೆ ನಾವು ಬಂಧಿಯಾಗಿದ್ದಾಗ ಹಳೆಯದೆಲ್ಲವೂ ನೆನಪಾಗಲಾರಂಭಿಸಿದೆ. ಏನು ಪಡೆದುಕೊಂಡೆವು? ಏನನ್ನು ಕಳೆದುಕೊಂಡೆವು? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದೇ ಮೊದಲ ಉತ್ತರವಾಗಿ ಸಿಕ್ಕಿದ್ದು ಅದೇ ಆಟಗಳು. ಒಂದು ಕಾಲಕ್ಕೆ ಮಕ್ಕಳನ್ನು ಓಲೈಸಲು ಮೊಬೈಲ್ ಕೊಟ್ಟು ಕುಳ್ಳಿರಿಸುತ್ತಿದ್ದೆವು, ನಂತರ ಮಕ್ಕಳು ಅದಕ್ಕೆ ಸಮ್ಮೋಹಿತರಾಗುತ್ತಾರೆಯೆಂದು ತಿಳಿದೊಡನೆ ಮೊಬೈಲಿಗೂ ಟೈಮ್ ಟೇಬಲ್ ಮಾಡಿಕೊಟ್ಟೆವು. ಆದರೆ ಕಾಲಚಕ್ರ ! ಇವೆಲ್ಲವನ್ನೂ ಗಮನಿಸಿಕೊಂಡು ಮುನ್ನಡೆಯುತ್ತಿದೆ. ಮೊಬೈಲ್ ಹಿಡಿದರೆ ಮಕ್ಕಳು ಕೆಡುತ್ತಾರೆಂಬ ಆತಂಕದಲ್ಲಿದ್ದವರಿಗೆ ಈ ಕೋವಿಡ್ ಮಹಾಮಾರಿ ಕೊಟ್ಟ ಬಹುದೊಡ್ಡ ಶಿಕ್ಷೆ ‘ಆನ್ಲೈನ್ ಕ್ಲಾಸ್ಗಳು’. ಅಪ್ಪ ಅಮ್ಮನ ಮೊಬೈಲಿಗಾಗಿ ಹಠ ಮಾಡುತ್ತಿದ್ದ ಮಕ್ಕಳು ಇಂದು ಅವುಗಳೊಡನೆ ಕಲಿಯಬೇಕಾಗಿದೆ. ‘ಸಿಗದಿರುವುದಕ್ಕೆ ಆಸೆ ಹೆಚ್ಚು ಮತ್ತು ಬಳಿಯಿರುವುದಕ್ಕೆ ಬೆಲೆ ಕಡಿಮೆ’ ಎಂಬ ಮಾತಿನಂತೆ ಮೊಬೈಲ್ ಯಾವಾಗ ಮಕ್ಕಳ ಪಾಠದ ಒಂದು ಸಾಧನವಾಗಿ ಬಳಕೆಯಾಗತೊಡಗಿತೋ ಅಂದಿನಿಂದ ಮಕ್ಕಳು ಮೊಬೈಲಿನಿಂದಾಚೆಯ ಹೊಸ ಬೆಳಕನ್ನು ಹಂಬಲಿಸತೊಡಗಿದ್ದಾರೆ. ದಿನವಿಡೀ ಹೈರಾಣಾಗಿಸುವ ಆನ್ಲೈನ್ ಕ್ಲಾಸುಗಳಿಂದ ದಣಿದ ಜೀವಗಳಿಗೆ ಇಂದು ಮತ್ತೆ ಆಹ್ಲಾದ ಬೇಕಾಗಿದೆ; ಆ ಕಾರಣಕ್ಕಾಗಿ ತಾನು ನೋಡಿದ ವಿಷಯಗಳ ಬಗ್ಗೆ, ಅನುಭವಿಸಿದ ಅನುಭವಗಳ ಮೇಲೆ ಆಟಗಳ ಸ್ಕ್ರಿಪ್ಟ್ ಬರೆಯಲಾರಂಭಿಸಿದ್ದಾರೆಯೆಂದರೆ ನಾವೂ ಮಕ್ಕಳ ಈ ಅಭಿರುಚಿಗೆ ಒತ್ತಾಸೆಯಾಗಿ ನಿಲ್ಲುವುದು ಕರ್ತವ್ಯವಾಗುತ್ತದೆ. ಮತ್ತೆ ಮರೆಯಾಗುತ್ತಿರುವ ಆ ಆಟಗಳ ದಿನಗಳು ಮರಳುತ್ತಿದೆಯೇನೋ! ಅನ್ನಿಸಿದ್ದು ಈ ಮಕ್ಕಳನ್ನು ನೋಡಿದಾಗ. ಮಕ್ಕಳಿಗೆ ಈಗ ಮೊಬೈಲ್ ಆಟದ ವಸ್ತುವಾಗಿರದೆಯೇ ಬ್ಯಾಗ್ ತುಂಬಿಸಿಕೊಳ್ಳುತ್ತಿದ್ದ ಪುಸ್ತಕಗಳಾಗಿವೆ. ಎಲ್ಲೋ ನೋಡಿದ ಆ ಥರ್ಮಲ್ ಸ್ಕ್ಕಾನ್ ಅದೆಷ್ಟು ಸೂಕ್ಷ್ಮ ವಾಗಿ ಗಮನಿಸಿ ಟೆಂಪರೇಚರ್ ಹೆಚ್ಚಾಗಿದ್ದರೆ ಕ್ವಾರೆಂಟೈನ್ ಅನುಸರಿಸಬೇಕೆಂಬುದನ್ನು ಕೋಳಿಗೂಡಿನ ಮೂಲಕ ಹೇಳಿದಾಗ ಈ ಬುದ್ಧಿ ದೊಡ್ಡವರಿಗೆ ಸರಿಯಾಗಿ ಬಂದಿದ್ದರೆ ರೋಗವೊಂದು ಹೀಗೆ ಆಕ್ರಮಿಸಿಕೊಳ್ಳುತ್ತಿರಲಿಲ್ಲ ಅಂದುಕೊಳ್ಳುತ್ತಿರುವಾಗಲೇ “ಆಂಟೀ ಕೊರೊನಾ ಯಾವಾಗ ಹೋಗುತ್ತೆ? ಮತ್ತೆ ಎಚ್ಚರಿಸಿದಳು ಪೋರಿ. “ಯಾಕೆ?” ಕೇಳಿದಾಗ “ಶಾಲೆಗೆ ಕೊರೊನಾ ಬಂದಿದೆ, ಹೊಸ ಚೀಲ, ಛತ್ರಿ ಯಾವುದೂ ಇಲ್ಲ ಪುಟ್ಟತಮ್ಮ ಹೇಳಿದ. “ನಿಮ್ಮ ಶಾಲೆಗೆ ಮಾತ್ರ ಅಲ್ಲಪ್ಪಾ, ಲೋಕಕ್ಕೇ ಬಂದಿದೆ” ನುಡಿದೆ. “ಅದು ಗೊತ್ತಿಲ್ಲ, ನಮ್ಮ ಶಾಲೆಯಿಂದ ಹೋದ್ರೆ ಸಾಕು, ಪೋಲಿಸ್ ಮಾಮನಲ್ಲಿ ಹೇಳ್ಬೇಕು ಕೊರೊನಾ ಅರೆಸ್ಟ್ ಮಾಡ್ಲಿಕ್ಕೆ” ತುಂಟಿ ಮಾತು ಮುಗಿಸುವಷ್ಟರಲ್ಲಿ ಮತ್ತೆ ಗೇಟಿನ ಸದ್ದು ಕೇಳಿ “ಬಾರೋ ಚೆಕ್ ಮಾಡ್ಬೇಕು” ತಮ್ಮನನ್ನು ಎಳ್ಕೊಂಡು ಹೋದವಳನ್ನು ಕಂಡಾಗ ‘ಏನು ಮುದವಿದೆ ಈ ಬಾಲ್ಯಕ್ಕೆ! ಎಲ್ಲವನ್ನೂ ಒಪ್ಪಿಕೊಳ್ಳುವಷ್ಟು ಮತ್ತು ಪ್ರಶ್ನಿಸುವಷ್ಟು” ಅಂದುಕೊಂಡೆ ನನ್ನೊಳಗೆ. **********************************************************
ಪಾಠವಷ್ಟೇ ಅಲ್ಲ, ಆಟವೂ ಬದಲಾಗಿದೆ Read Post »
ಕನಕ ಜಯಂತಿಯ ವಿಶೇಷ ಲೇಖನ ಕನಕದಾಸ ಸಾಹಿತ್ಯದಲ್ಲಿ ಜಾತಿ ಪ್ರಶ್ನೆಯ ಆಯಾಮಗಳು ಡಾ.ಸುಜಾತಾ ಸಿ. ವಿಜಯಪುರ ಕನ್ನಡ ನಾಡು ಕಂಡ ಶ್ರೇಷ್ಠ ಭಕ್ತ ಕವಿ ದಾರ್ಶನಿಕ ಸಮಾಜ ಸುಧಾರಕ ಮಹಾಮಾನವತಾವಾದಿ ಕನಕದಾಸರು. ವರ್ಗ ವರ್ಣಗಳ ಸಂಘರ್ಷದಲ್ಲಿ ನಲುಗುತ್ತಿದ್ದ ಸಮಾಜವನ್ನು ತೆರೆದ ಹೃದಯ ಮತ್ತು ಮನಸ್ಸುಗಳಿಂದ ಕಂಡು ವರ್ಗ ವರ್ಣರಹಿತ ತಳಹದಿಯ ಮೇಲೆ ನಿರ್ಮಿಸಬೇಕೆಂಬ ಅವರ ಆಶಯವಾಗಿತ್ತು. ಇಹಲೋಕದ ಜಂಜಾಟಗಳಿಂದ ತತ್ತರಿಸಿದ ಮನುಕುಲಕ್ಕೆ, ವಿಶ್ವಮಾನವ ಸಮತಾವಾದದ ಸಿದ್ಧಾಂತವನ್ನು ಕೀರ್ತನೆಗಳ ಮೂಲಕ ಬೋಧಿಸಿದರು. ಆ ಕಾಲದ ಸಾಮಾಜಿಕ ವ್ಯವಸ್ಥೆಗೆ ಚಾತುರ್ವರ್ಣ ವ್ಯವಸ್ಥೆಯೇ ತಳಹದಿಯಾಗಿತ್ತು. ಕನಕದಾಸರು ಕೇವಲ ತಮ್ಮ ಸಾಹಿತ್ಯದಲ್ಲಿ ಜಾತಿಯನ್ನು ಕರಾಳತೆಯನ್ನು ಹೇಳಲಿಲ್ಲ ಬದಲಾಗಿ ಸ್ವತಃ ತಾವೂ ಅನುಭವಿಸಿದವರು.ವ್ಯಾಸರಾಯರು ತಮ್ಮ ಗರಡಿಯಲ್ಲಿ ಪ್ರವೇಶ ನಿರಾಕರಣೆ ಮಾಡುತ್ತಾರೆ. ಹಾಗೇ ಉಡುಪಿಯ ಶ್ರೀ ಕೃಷ್ಣನ ದೇವಾಲಯದಲ್ಲಿ ಕೀಳು ಕುಲದವರು ಎಂದು ಪ್ರವೇಶವನ್ನು ನಿಷೇಧಿಸಿದಾಗ ಅವರಿಗೆ ಭಕ್ತಿಮಾರ್ಗದಿಂದ ಕೃಷ್ಣನ ದರ್ಶನ ಕೂಡಾ ಆಗಬಹುದು ಎಂದು ತೋರಿಸಿಕೊಟ್ಟರು. ಕನಕನ ಕಿಂಡಿ ಕೇವಲ ಭಕ್ತಿಯ ಪರಾಕಾಷ್ಠೆಯ ಆಗದೇ ನಮ್ಮೆಲ್ಲರ ಎದುರಿಗಿದ್ದ ಜಾತಿಯ ಗೊಡೆಯನ್ನು ಒಡೆಯುವ ಕೆಲಸ ಮಾಡುತ್ತದೆ. ಋಗ್ವೇದದ ಪುರುಷಸೂಕ್ತಕ್ಕೆ ಸಂಬಂಧಿಸಿದ ವರ್ಣಸಿದ್ದಾಂತಕ್ಕೆ ಅನುಗುಣವಾಗಿ ವರ್ಗೀಕರಿಸಲಾಗಿತ್ತು. ಇವರ ಮೂಲ ಗುಣಕರ್ಮ ಭಾಗಶಃ ಆದರೂ ಕಾಲಾಂತರದಲ್ಲಿ ಮೇಲು-ಕೀಳುಗಳೆಂಬ ವೃತ್ತಿಪರ ಸಮಾಜವನ್ನು ನಿರ್ಮಾಣ ಮಾಡಲಿಕ್ಕೆ ಕಾರಣವಾದವು. ಇದನ್ನು ಕಂಡ ಕನಕದಾಸರು ಕುಲದ ವಿಚಾರವಾಗಿ ಹೀಗೆ ತಿಳಿಸಿದ್ದಾರೆ. ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನ್ನೇನಾದರೂ ಬಲ್ಲಿರಾ. ಎಂಬ ಮೇಲಿನ ವಿಚಾರಗಳು ನವಸಮಾಜ ನಿರ್ಮಾಣಕ್ಕೆ ಸಮಾನತೆಯನ್ನು ಸಾರಲು, ವರ್ಗ-ವರ್ಣ ವ್ಯವಸ್ಥೆಗೆ ಎದಿರೇಟು ನೀಡಿದ್ದು, ವಿಶ್ವಸಂದೇಶವನ್ನು ಸಾರಿವೆ ಎಂಬುದನ್ನು ಸರ್ವರೂ ಒಪ್ಪಿಕೊಳ್ಳಬೇಕಾದ ವಿಚಾರವಾಗಿದೆ. ಅಸಮಾನತೆಯನ ವಕ್ತಾರರನ್ನು ಪ್ರಶ್ನಿಸುವಾಗ ಅವರು ಬಳಸುವ ನಿದರ್ಶನಗಳೆಲ್ಲವೂ ದೇವರನ್ನು ಕೇಂದ್ರವಾಗಿಸಿಕೊಂಡಿದ್ದರಿಂದ ಒದಗಿದ ತಿಳುವಳಿಕೆ ಕೂಡಾ ಹೌದು ಎನ್ನುವುದನ್ನು ಮರೆಯುವಂತಿಲ್ಲ. ಅವರ ಮೌಖಿಕ ಸಾಹಿತ್ಯವು ಕೀರ್ತನೆ ಭಜನೆಗಳ ರೂಪಗಳಲ್ಲಿ ಸಮಾಜದ ಏರು ಪೇರುಗಳನ್ನು ಕರಿಯ-ಬಿಳಿಯ, ಸತ್ಯ-ಅಸತ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನವನ್ನು ಮಾಡಿವೆ. ಮತ್ತು ಸದಾಚಾರ ಮಾರ್ಗವನ್ನು ತೋರಿಸಿವೆ. ಸಾಮಾಜಿಕ ಆಂದೋಲನಗಳಲ್ಲಿ ಎಲ್ಲ ದಾಸರೂ ಭಾಗಿಗಳಾಗಿ ಸರ್ವರೂ ಒಪ್ಪಿಕೊಳ್ಳುವ ಜೀವನ ಮೌಲ್ಯಗಳನ್ನು ಜನರ ಹೃದಯಗಳಿಗೆ ಕೀರ್ತನೆಗಳ ಮೂಲಕ ತಲುಪುವಂತೆ ಮಾಡಿರುತ್ತಾರೆ. “ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ ಅಟ್ಟು ಉಣ್ಣದ ವಸ್ತುಗಳಿಲ್ಲವೊ ಗುಟ್ಟು ಕಾಣಿಸೆ ಬಂತು ಹಿರಿದೇನು ಕಿರಿದೇನು ನೆಟ್ಟನೆ ಸರ್ವಜ್ಞನ ನೆನೆಕಂಡ್ಯ ಮನುಜ” ನಮ್ಮ ಭೌತಿಕ ಕಾಯದ ಪಾಡುಗಳನ್ನು ಈ ಮಾತುಗಳು ವಿವರಿಸುತ್ತವೆ. ಭೂಮಿಯಲ್ಲಿಯ ಎಲ್ಲ ಜೀವಿಗಳ ಹುಟ್ಟು ಸಾವಿನಲ್ಲಿ ವ್ಯತ್ಯಾಸಗಳೇನೂ ಇರವು; ಆದರೆ ಈ ವಿದ್ಯಮಾನದ ನೆಲೆ ಬೆಲೆಗಳು ನಮಗೆ ತಿಳಿದಿದೆಯೇ? ಸೃಷ್ಟಿಯ ಹಿಂದಿರುವ ಗುಟ್ಟುಗಳ ಅರಿವು ನಮಗಿಲ್ಲ; ಜನನ ಮರಣ ಅದರ ನಡುವೆ, ಊಟ ಕೂಟಗಳ ಆಟದ ಪ್ರೇಕ್ಷಕರಷ್ಟೆ ನಾವು. ಹೀಗಿರುವಾಗ ಎಲ್ಲವನ್ನು ತಿಳಿದಿರುವ ಎಲ್ಲವನ್ನು ನಿಯಂತ್ರಿಸುವ ‘ಸರ್ವಜ್ಞ’ನನ್ನು ನಾವು ಮನನ ಮಾಡಿದರೆ ಆಗ ಸಹಜವಾಗಿಯೇ ನಮ್ಮ ಶ್ರೇಷ್ಠ ಕನಿಷ್ಟಗಳ ಸೀಮಿತ ಲೆಕ್ಕಾಚಾರ ಕೊನೆಯಾಗದಿದ್ದೀತೆ? ಕುಲವನ್ನು ನಿರಾಕರಿಸಲು ಕನಕದಾಸರಿಗೆ ಒದಗಿದ ಮೊದಲ ವಿಚಾರ ನಮ್ಮ ಗೋಚರ ಪ್ರಪಂಚಕ್ಕೆ ಸೇರಿದ ವಿವರಗಳು. ಜಲವೆ ಸಕಲ ಕುಲಕ್ಕೆ ತಾಯಿಯಲ್ಲವೆ ಆ ಜಲದ ಕುಲವನೇನಾದಾರೂ ಬಲ್ಲಿರಾ ಜಲದ ದೊಬ್ಬೂಳಿಯಂತೆ ಸ್ಥಿರವಲ್ಲ ಈ ದೇಹ ನೆಲೆಯನರಿತು ನೀ ಹರಿದು ನೆನೆ ಮನುಜ ಸೃಷ್ಟಿ ಕ್ರಮದಲ್ಲಿ ಯಾವುದು ಹುಟ್ಟಿತು ಎಂಬ ಎಣಿಕೆಯ ವಿನಿಕೆ ನಡೆಯುತ್ತಲೇ ಬಂದಿದೆ. ಈ ಎಣಿಕೆಯಲ್ಲಿ ಪರಿಣಾಮವಾದವೋ ವಿಕಾಸವಾದವೊ ಯಾವ ವಾದವೇ ಆಗಿರಲಿ, ಅದು ಯಾವುದೋ ಒಂದು ಮೂಲವಸ್ತುವಿಗೆ ಬಂದು ನಿಲ್ಲಲೇಬೇಕು. ಸೃಷ್ಟಿಯ ಮೂಲ ನೀರು ಎನ್ನುವುದು ಅಂಥದೊಂದು ಎಣಿಕೆ. ಇದನ್ನು ಒಪ್ಪೋಣ: ಹೀಗೆ ಒಪ್ಪಿದರೂ ಪ್ರಶ್ನಾಪರಂಪರೆ ಅಲ್ಲಿಗೆ ನಿಲ್ಲದು; ಆ ನೀರಿನ ಮೂಲ ಯಾವುದು? ಇದಕ್ಕೆ ಉತ್ತರವನ್ನು ಹೇಳಬಲ್ಲವರು ಯಾರು? ಕುಲದ ಘೋಷಣೆ, ತಾನೆ? ನಮ್ಮೆಲ್ಲರಿಗೂ ಮೂಲವಾಗಿರುವ ನೀರಿನ ಮೂಲವೇ ನಮಗೆ ಗೊತ್ತಿಲ್ಲ; ಹೀಗಾಗಿ ನಮ್ಮ ಕುಲಗಳ ಘೋಷಣೆಯಲ್ಲಿ ಎಷ್ಟು ಖಚಿತತೆ ಇದ್ದೀತು? ಕನಕದಾಸರು ಜಲವನ್ನು ‘ತಾಯಿ’ ಎಂದು ಕರೆದಿರುವುದು ಇಲ್ಲಿ ಧ್ವನಿ ಪೂರ್ಣವಾಗಿದೆ. ನಮ್ಮ ತಿಳಿಗೇಡಿತನದ ವಿಕೃತಬುದ್ಧಿಯು ಎಲ್ಲ ಕೊಳೆಯನ್ನು ತೊಳೆದು ಹಾಕಲು ನೀರೆಂಬ ತಾಯಿಯನ್ನು ಅವರು ಬಳಸಿಕೊಳ್ಳುತ್ತಿರುವುದು ಮನನೀಯವಾಗಿದೆ. ನೀರಿನ ಮೂಲವನ್ನು ಕಂಡು ಹಿಡಿಯಲಾಗಿದ್ದ ನಮ್ಮ ಮಂದಮತಿಗೆ ಆ ನೀರಿನ ಶರೀರವೇ ಇಂಥ ಹುಡುಕಾಟದ ಸಾಪೇಕ್ಷತನವನ್ನೂ ನಶ್ವರತೆಯನ್ನೂ ಪ್ರಕಟಿಸುತ್ತಿರುವ ದೃಕ್–ದೃಶ್ಯ ವಿವೇಕವಾಗಿದೆ ಎನ್ನುವುದನ್ನು ಅವರು ತಿಳಿಸಿಕೊಡುತ್ತಿದ್ದಾರೆ. “ಏನೆಂತೆಂದೊಲಿವೆ ನಿನ್ನವರಂತೆ ಕೇಡಬುದ್ದಿ ಎನ್ನೊಳಿಲ್ಲ ಗುಣಹೀನರಲ್ಲದೆ ದೀನರ ಪಾಲಿಪ ಬುದ್ದಿ ನಿನ್ನೊಳಿಲ್ಲ ತರಳ ಪ್ರಹ್ಲಾದನಂದದಿ ನಿನ್ನ ರೂಪವ ಕೆಡಿಸಲಿಲ್ಲ ನರನಂತೆ ಬಂಡಿಯ ಬೋಧನ ಮಾಡಿ ನಾ ಹೊಡೆಸಲಿಲ್ಲ ಆತ್ಮನಿವೇದನಾಭಕ್ತಿ” ಆತ್ಮನಿವೇದನವು ಎಲ್ಲದಕ್ಕಿಂತ ಹಿರಿದಾಗಿರುವುದು ಎಂದು ಕೀರ್ತನಾಚಾರ್ಯ ಬೇಲೂರು ಕೇಶವದಾಸರು ಹೇಳಿದ್ದಾರೆ. “ಉದಯಾಸ್ತಮಾನವೆಂಬ ಎರಡು ಕೊಳಗವ ಮಾಡಿ ಆಯುಷದ ರಾಸಿಯನು ಅಳೆಯಿರಯ್ಯಾ|| ಇದು ಕಾರಣ ಕಾಗಿನೆಲೆಯಾದಿಕೇಶವನ|| ಮುದದಿಂದ ನೆನೆನೆದು ಸುಖಿಯಾಗಿರಯ್ಯಾ ನಮ್ಮ ಜೀವನದ ಪೂರ್ತಿ ಕೃಷಿ ಮಾಡಿ ಒಟ್ಟು ಮಾಡಿದ ಧಾನ್ಯದ ರಾಶಿಯೆಂದರೆ ಅದು ನಮ್ಮ ಜೀವನವಲ್ಲದೆ ಬೇರಲ್ಲ. ಇದನ್ನು ಅಳೆಯುವ ಕೊಳಗ ಎಂದರೆ ಉದಯ ಅಸ್ತಮಾನ: ಎಂದರೆ ನಮ್ಮ ನಿತ್ಯದ ಬದುಕು. ನಾವು ಅಳೆಯ ಬೇಕಾದದ್ದು ನಾರಾಯಣ ಎಂಬ ಧಾನ್ಯವನ್ನು ನಮ್ಮ ಹೃದಯದಲ್ಲಿ ಎಷ್ಟು ಬೆಳೆದಿದ್ದೇವೆ ಎನ್ನುವದನ್ನು ‘ನೆನೆನೆನೆದು’ ಎನ್ನುವಾಗ ಅಳೆಯುವ ಪ್ರಕ್ರಿಯೆಯ ನಿರಂತರತೆಯನ್ನೆ ಅಭಿನಯಿಸಿದಂತಾಗುತ್ತದೆ. ಬೆಳೆ ಹೆಚ್ಚು ಬೆಳೆದಷ್ಟು ಕೃಷಿಕನಿಗೆ ಸಂತೋಷ; ಸುಖ; ಅಂತೆಯೇ ಆದಿಕೇಶವನನ್ನು ನೆನೆದಷ್ಟು ಖುಷಿಗೆ ಸಂತೋಷ; ಸುಖ ಅಂತರAಗದ ಕೃಷಿಕಾರನೇ ದಿಟನಾದ ಖುಷಿ ಎನ್ನುತ್ತಿದ್ದಾರೆ. ಮೇಲುನೋಟಕ್ಕೆ ಜೀವನದ ತತ್ವ ಸಾರವನ್ನು ಹೇಳುವ ಅವರ ಜನಪ್ರಿಯ ಕೀರ್ತನೆಯಾದ ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ ವೇದಶಾಸ್ತ್ರ ಪಂಚಾಂಗ ಓದಿಕೊಂಡು ಪರರಿಗೆ ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ಕೀರ್ತನೆಯೂ ಸಹ ಆಲಯವನ್ನು ಬಿಡಿಸಿಕೊಳ್ಳುವುದರ ಕಡೆಗಿನ ದಾಸರ ನಿರಾಕರಣೆಯ ಕಥನವನ್ನು ಹೇಳುತ್ತದೆ. “ಜಪವ ಮಾಡಿದರೇನು, ತಪವ ಮಾಡಿದರೇನು ಕಪಟ ಗುಣ ವಿಪರೀತ ಕಲುಷವಿದ್ದವರು” ಎಂದು ಯಾವ ನೇಮ,ಜಪ ತಪ ಮಾಡಿದರು ಫಲವಿಲ್ಲವೆಂದು ಹೇಳುತ್ತಲೇ “ನೇಮವಿಲ್ಲದ ಹೋಮವೇತಕಯ್ಯಾ” ಎಂದು ಢಾಂಬಿಕ ಭಕ್ತಿಯನ್ನು ಖಂಡಿಸುತ್ತಾರೆ. ಮೇಲ್ವರ್ಗದವರು ಜಾತಿಯನ್ನು ತಮ್ಮ ಹಿರಿಮೆಗೆ ಅಂತಸ್ತಿಗೆ ಅಸ್ತ್ರವಾಗಿ ಬಳಸಿಕೊಂಡರೆ, ಕನಕದಾಸರು ಜಾತಿಯ ಬಳಕೆ ಅಪಾಯವೆಂದು; ಮನುಷ್ಯಕುಲದ ಅನಿಷ್ಟವೆಂದು ವಿರೋಧಿಸಿದರು. ಆದರೆ ಜಾತಿಯ ಸಾಂಸ್ಕೃತಿಕ ಅಸ್ಮಿತೆಯನ್ನು ತಮ್ಮ ಕಾವ್ಯಗಳಲ್ಲಿ ಅಲ್ಲಲ್ಲಿ ಸ್ಪರ್ಶಿಸುವುದನ್ನು ಕೈಬಿಡಲಿಲ್ಲ. ಅವರು ಜಾತಿಯನ್ನು ಭೇದಿಸಿದ ರೀತಿ ಆಶ್ಚರ್ಯವೆನಿಸುತ್ತದೆ. ಕನಕದಾಸರನ್ನು ಸುತ್ತುವರಿದ ಕತೆಗಳು, ಐತಿಹ್ಯಗಳೂ ಈ ಮೂಲವನ್ನು ನೆನಪಿಸುತ್ತವೆ. ಹೀಗೆ ಹರಿದಾಸ ಸಾಹಿತ್ಯದಲ್ಲಿ ಮೊಟ್ಟ ಮೊದಲು ಹರಿದಾಸ ಕೀರ್ತನೆ ಎಂದು ಪ್ರಖ್ಯಾತಿಯಾದವರು ‘ಎಂತು ಮರುಳಾದೆ ನಾನೆಂತು ಮರುಳಾದೆ’, ಮತ್ತು ‘ಹರಿಯೇ ಇದು ಸರಿಯೇ!’ “ಚರಣ ಸೇವಕನಲ್ಲಿ ಕರುಣ ಬಾರದ್ಯಾಕೆ” ಎಂದು ತಮ್ಮ ಕೀರ್ತನೆಗಳಲ್ಲಿ ಹರಿಗೆನೇ ಪ್ರಶ್ನಿಸುತ್ತಾನೆ. ಶ್ರೀಪಾದರಾಜನದು ನರಹರಿತೀರ್ಥರ ನಂತರ ದಾಸಸಾಹಿತ್ಯವನ್ನು ಮುಂದುವರಿಸಿದ ಕೀರ್ತಿ ಇವರದಾಗಿದೆ. ‘ರಂಗವಿಠಲ’ ಎಂಬ ಅಂಕಿತನಾಮ ಅನೇಕ ದೇವರ ನಾಮಗಳನ್ನು ರಚಿಸಿದ್ದಾರೆ. ಆಧ್ಯಾತ್ಮ ಅನುರಾಗ ಮಹಿಮಾನ್ವಿತನಾಗಿ ಇತನು ಕಂಡು ಬರುತ್ತಾನೆ. ‘ಭಕ್ತಿ ಬೇಕು, ವಿರಕ್ತಿ ಬೇಕು, ಶಕ್ತಿ ಬೇಕು, ಮುಂದೆ ಮುಕ್ತಿ ಬಯಸುವಗೆ’ ಎಂಬುದು ಈತನ ಆಧ್ಯಾತ್ಮಕ ನಿಲುವಾಗಿದೆ. ವ್ಯಾಸರಾಯರು,ಶ್ರೀಪಾದರಾಜನ ಶಿಷ್ಯನಾದ ವ್ಯಾಸರಾಯನು ನ್ಯಾಯಾಂಮೃತ ತರ್ಕತಾಂಡವ, ತಾತ್ರ್ಯಚಂದ್ರಿಕಾ ಮೂರು ಸಂಸ್ಕೃತ ಗ್ರಂಥಗಳನ್ನು ರಚಿಸಿದ್ದಾನೆ. ಇವರ ಕೀರ್ತನೆಗಳ ಅಂಕಿತನಾಮ ಕೃಷ್ಣ, ಶ್ರೀಕೃಷ್ಣ, ಸಿರಿಕೃಷ್ಣ ವ್ಯಾಸರಾಯನಿಂದ ವ್ಯಾಸಪಥ, ದಾಸಪಥಗಳೆರಡು ಶ್ರೀಮಂತವಾದವು. ವಿಜಯದಾಸರು ಪ್ರಸನ್ನ ವೆಂಕಟದಾಸರ ಸಮಕಾಲೀನರು. ‘ಹಯವದನ ವಿಠಲ’ ಎಂಬ ಅಂಕಿತದಿಂದ ಅನೇಕ ಹಾಡುಗಳನ್ನು ರಚಿಸಿದ್ದಾರೆ. ಗೋಪಾಲದಾಸರು ‘ಗೋಪಾಲ ವಿಠಲ’ ಇವರ ಅಂಕಿತನಾಮ. ಜಗನ್ನಾಥದಾಸರು ‘ಜಗನ್ನಾಥ ವಿಠಲ’ ಎನ್ನುವ ಅಂಕಿತನಾಮವನ್ನು ಹೊಂದಿದ್ದಾರೆ. ಜಗನ್ನಾಥದಾಸರು ೨೦೦ ಕೀರ್ತನೆಗಳು ಲಭ್ಯವಾಗಿವೆ. ಕೀರ್ತನೆ, ಸುಳಾದಿಗಳನ್ನು ಮಾತ್ರವೇ ಅಲ್ಲದೆ ತ್ರಿಪದಿಯ ಛಂದಸ್ಸಿನಲ್ಲಿ ಭಕ್ತಿ ಭರಿತವಾದ ‘ತತ್ವಸುವಾಲಿಗಳನ್ನು’ ವಿಷ್ಣುಸ್ತುತಿರೂಪವಾದ ೨೭ ನುಡಿಗಳನ್ನು ಒಳಗೊಂಡ ತಂತ್ರಸಾರವನ್ನು ರಚಿಸಿದ್ದಾರೆ. ಹೀಗೆ ಒಟ್ಟಾರೆಯಾಗಿ ಪುರಂದರದಾಸರು ಹಾಗೂ ಕನಕದಾಸರ ವಿಚಾರಗಳು ದಾರ್ಶನಿಕ ಸಮಾಜವನ್ನು ಕಟ್ಟುವಲ್ಲಿ ಜೊತೆಗೆ ಸಾಮಾಜಿಕ ಕಾಳಜಿ, ಸಾಮಾಜಿಕ ನೈತಿಕ ಪ್ರಜ್ಞೆ, ಗುರುವಿನೊಂದಿಗೆ ಗೌರವದ ಮನೋಭಾವನೆ ಅಸ್ಪೃಶ್ಯತಾ ನಿವಾರಣೆ, ಮೌಢ್ಯತನದ ಖಂಡನೆ ಇದೆ. ಎಲ್ಲ ದಾಸರು ಭಕ್ತಿಯ ಕೀರ್ತನೆಗಳ ಮೂಲಕ ಸಮಾಜವನ್ನು ಎಚ್ಚರಿಸಿದ ದಾಸರಾಗಿದ್ದಾರೆ. **********************************************
ಕನಕದಾಸ ಸಾಹಿತ್ಯದಲ್ಲಿ ಜಾತಿ ಪ್ರಶ್ನೆಯ ಆಯಾಮಗಳು Read Post »
ಪ್ರಸ್ತುತ ಕರೋನ ಅಬ್ಬರದಲ್ಲಿ ಕುಸಲಾಳ ಮನಸ್ಸಿನ ಏಕಾಂತ ಹೊಯ್ದಾಟ..! ಕೆ.ಶಿವು.ಲಕ್ಕಣ್ಣವರ ಹೌದಾ.. ನಿಜಾನಾ.. ಇದು ಹೇಗೆ ಸಾಧ್ಯ..? ನಿಜಕ್ಕೂ ಕೊರೊನಾ ವೈರಸ್ ಹಿಂದಿರೋ ಕರಾಳ ಸತ್ಯ ಇದೇನಾ..? ಇಡೀ ಜಗತ್ತನ್ನೇ ಕಿರುಬೆರಳಲ್ಲಿ ಆಡಿಸ್ತಿರೋ ಕೊರೊನಾ ವೈರಸ್ ಹುಟ್ಟಿನ ಹಿಂದೆ ದೊಡ್ಡ ಷಡ್ಯಂತ್ರವೇ ಇದ್ಯಾ..? ಸೋಶಿಯಲ್ ಮೀಡಿಯಾದಲ್ಲಿ ಕಳೆದೊಂದು ವರ್ಷದಿಂದ ವೈರಲ್ ಆಗ್ತಿರೋ ಒಂದು ವಿಡಿಯೋನ ನೋಡಿದವರ ತಲೆಯಲ್ಲಿ ಇಷ್ಟೊಂದು ಪ್ರಶ್ನೆಗಳು ಹರಿಡಾದ್ತಿವೆ. ಕೊರೊನಾ ವೈರಸ್ ಕಾಣಿಸಿಕೊಂಡ ಆರಂಭದಲ್ಲಿ ಶುರುವಾಗಿದ್ದ ಚರ್ಚೆಯೊಂದಕ್ಕೆ ಈ ವಿಡಿಯೋದಿಂದ ಮತ್ತೆ ಪುಷ್ಟಿ ಪುಷ್ಟಿ ನೀಡುತ್ತಿದೆ. ಏನಿದು ವಿಡಿಯೋ..? ಜಗತ್ತು ತಲೆ ಕೆಡಿಸಿಕೊಂಡಿರೋದೇಕೆ..? ಇದು ಆ ಕುಸಲಾಳ ಮನದಾಳದಲ್ಲಿ ಹೀಗೆಯೇ ಆ ಒಂದು ರಾತ್ರಿಯಿಂದ ಪದೆಪದೇ ಮೇಲೇಳಿತ್ತಿರುವ ಪ್ರಶ್ನೆ. ಅದುವೇ ಎಪಿಸೋಡ್ 10. 2018ರಲ್ಲಿ ಪ್ರಸಾರವಾದ ವೆಬ್ ಸಿರೀಸ್ ಇದು. ಸದ್ಯ ಈ ಕಂಟೆಂಟ್ ಯುಎಸ್ಎ ಹಾಗೂ ಯುಕೆಗೆ ಮಾತ್ರ ಲಭ್ಯವಿದೆ. 10ನೇ ಎಪಿಸೋಡ್ನಲ್ಲಿ ಬರುವ ಕೆಲ ಸೀನ್ಗಳಲ್ಲಿ ಕೊರೊನಾ ವೈರಸ್ನ ಉಲ್ಲೇಖ ಇದೆ. ಈ ವೈರಸ್ ಬಗ್ಗೆ, ಅದ್ರ ಹುಟ್ಟಿನ ಬಗ್ಗೆ, ಅದರ ಲಕ್ಷಣಗಳ ಬಗ್ಗೆ ಸಂಭಾಷಣೆ ಇದೆ. ಇದು ಕುಸಲಾಳನ್ನು ಕಂಗೆಡುಸುತ್ತಲೇ ಇದೆ. ಆ ಒಂದು ಕುಸಲಾಳ ಮನಸ್ಸಿನ ನಾಟಕದ ಪಾತ್ರದಾರಿಗಳ ಸಂಭಾಷಣೆ ಕುಸಲಾಳ ಮನಸ್ಸಿನ ಮೇಲೆ ಗಾಯ ಮಾಡಿದವು. ಆ ಪಾತ್ರಧಾರಿಗಳ ಸಂಭಾಷಣೆಗಳು ಹೀಗಿವೆ ನೋಡಿ… ಸೀನ್ ನಂಬರ್ 1: ಪಾತ್ರಧಾರಿ 1 -ನಾವು ಇದರ ಬಗ್ಗೆ ಮತ್ತಷ್ಟು ಸಂಶೋಧನೆ ಮಾಡಬೇಕಿದೆ. ಪಾತ್ರಧಾರಿ 2 -ಆದ್ರೆ ಅದು ಕೊರೊನಾ ವೈರಸ್ ರೀತಿ ಕಾಣುತ್ತಿದೆ..! ಪಾತ್ರಧಾರಿ 1 -ಕೊರೊನಾ..? MERS? ಪಾತ್ರಧಾರಿ 2 -MERS, SARS ಇವು ಸಾಮಾನ್ಯ ಜ್ವರಗಳಾಗಿದ್ವು. ಅವೆಲ್ಲವೂ ಒಂದು ವಿಧಕ್ಕೆ ಸೇರಿದ ಜ್ವರಗಳು. ಅವುಗಳ ಜೀನ್ ಇನ್ಫರ್ಮೇಶನ್ ಕೂಡ ಒಂದೇ ಆಗಿತ್ತು. ಆದ್ರೆ ಕೊರೊನಾ ವೈರಸ್ ರೆಸ್ಪಿರೇಟರಿ ಸಿಸ್ಟಮ್( ಉಸಿರಾಟ)ಗೆ ಅಟ್ಯಾಕ್ ಮಾಡುತ್ತೆ. 2015ರಲ್ಲಿ MERS ಸಾಂಕ್ರಾಮಿಕ ಕಾಯಿಲೆ ಬಂದಾಗ ಅದರ ಮರಣ ಪ್ರಮಾಣ 20% ಇತ್ತು. ಪಾತ್ರಧಾರಿ 1 -ಆಯುಧವಾಗಿ ಬಳಸೋಕೆ ಅದು ಸಾಕಾಗ್ತಾ ಇರ್ಲಿಲ್ವಾ? ಪಾತ್ರಧಾರಿ 2 -ನಾನ್ ಹೇಳಿದ ಹಾಗೆ ಕೊರೊನಾ ರೂಪಾಂತರಗೊಂಡ ವೈರಸ್. ಸಾವಿನ ಪ್ರಮಾಣ ಹೆಚ್ಚಾಗುವಂತೆ ಯಾರೋ ಅದನ್ನ ತಿರುಚಿದ್ದಾರೆ. ಇದರ ಮರಣ ಪ್ರಮಾಣ 90%. ಪಾತ್ರಧಾರಿ 1 -90%..!!! ಪಾತ್ರಧಾರಿ 2 -ಕೊರೊನಾ ಬಗ್ಗೆ ಅದಕ್ಕಿಂತಲೂ ಗಂಭೀರ ವಿಚಾರ ಏನು ಅಂದ್ರೆ ಈ ಕೊರೊನಾ ವೈರಸ್ ಬೆಳೆಯೋದಕ್ಕೆ 2 ರಿಂದ 14 ದಿನಗಳ ಸಮಯ ತೆಗೆದುಕೊಳ್ಳುತ್ತೆ. ಈ ವೈರಸ್ ಕಾಣಿಸಿಕೊಂಡ 5 ನಿಮಿಷಗಳಲ್ಲಿ ನೇರ ಶ್ವಾಸಕೋಶಕ್ಕೆ ಅಟ್ಯಾಕ್ ಮಾಡುವಂತೆ ರೂಪಿಸಲಾಗಿದೆ. ಪಾತ್ರಧಾರಿ 1 -ಇದಕ್ಕೆ ಔಷಧ ಇಲ್ವಾ..? ಪಾತ್ರಧಾರಿ 2 -ಈ ಸಮಯದಲ್ಲಿ ಈ ವೈರಸ್ಗೆ ಯಾವುದೇ ರೀತಿಯ ವ್ಯಾಕ್ಸಿನ್ ಲಭ್ಯವಿಲ್ಲ. ಅದನ್ನ ಅಭಿವೃದ್ಧಿಪಡಿಸೋದು ಕೂಡ ತುಂಬಾ ಕಷ್ಟ. ಸೀನ್ ನಂಬರ್ 2: ಪಾತ್ರಧಾರಿ 3 -ಮನುಷ್ಯನೇ ರೂಪಿಸಿದ ವೈರಸ್..??? ಪಾತ್ರಧಾರಿ 4 -ಹೌದು. ಪಾತ್ರಧಾರಿ 3 -ಮರಣ ಪ್ರಮಾಣ..? ಪಾತ್ರಧಾರಿ 4 -90% ಪಾತ್ರಧಾರಿ 3 -ಅವ್ರು ಬಯೋಕೆಮಿಕಲ್ ಟೆರರಿಸ್ಟ್ ಅಟ್ಯಾಕ್ಗೆ ಪ್ಲ್ಯಾನ್ ಮಾಡ್ತಿದ್ದಾರೆ. ನಾವು ಸಮಯ ಮತ್ತು ಸ್ಥಳವನ್ನು ಫೈಂಡ್ ಔಟ್ ಮಾಡಬೇಕು. ಸೀನ್ ನಂಬರ್ 3: ಪಾತ್ರಧಾರಿ 5 -ನಾನು ಮನುಷ್ಯನ ದೇಹದ ಮೇಲಿನ ಟೆಸ್ಟ್ನ ಪೂರ್ತಿ ಮಾಡಿದ್ದೇನೆ. ಪಾತ್ರಧಾರಿ 6 -ಹೇಗಾಯ್ತು ಟೆಸ್ಟ್..? ಪಾತ್ರಧಾರಿ 5 -ನಾವು ಜೆನೆರಿಕ್ ಮೆಟೀರಿಯಲ್ನ ಯಶಸ್ವಿಯಾಗಿ ಆತನ ದೇಹಕ್ಕೆ ಇಂಜೆಕ್ಟ್ ಮಾಡಿದ್ವಿ. ಕೋರ್ಸ್ ಪ್ರಾಜೆಕ್ಟ್ನ ಸ್ಟಾರ್ಟ್ ಮಾಡೋಕೆ ಇದು ಸೂಕ್ತ ಸಮಯ. ಇವಿಷ್ಟು ಪಾತ್ರಧಾರಿಗಳ ನಡುವೆ ಬರುವ ಸಂಭಾಷಣೆ. ಸೌತ್ ಕೊರಿಯಾದ ಭದ್ರತಾ ಸಂಸ್ಥೆಯ (ಎನ್ಎಸ್ಎ – ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿ) ಏಜೆಂಟ್ ಒಬ್ಬನ ಸ್ನೇಹಿತ ನಿಗೂಢವಾಗಿ ಸಾವನ್ನಪ್ಪಿರ್ತಾನೆ. ಈ ವಿಚಾರದ ಬಗ್ಗೆ ಎನ್ಎಸ್ಎ ತನಿಖೆ ಆರಂಭ ಮಾಡಿದಾಗ ಶತ್ರುಗಳು ಕೊರೊನಾ ವೈರಸ್ನ ಬಯೋಕೆಮಿಕಲ್ ವೆಪನ್ ಆಗಿ ಬಳಸಿದ್ದಾರೆ ಅನ್ನೋದು ಬೆಳಕಿಗೆ ಬರುತ್ತೆ. ಇದು ಒಂದು ಕುಸಲಾಳ ಮನಸ್ಸಿನ ವೆಬ್ ಸಿರೀಸ್ನ ಆ ಎಪಿಸೋಡ್ನಲ್ಲಿ ಬರುವ ಸ್ಟೋರಿ. ಅಚ್ಚರಿಯ ವಿಷಯ ಏನು ಅಂದ್ರೆ ಚೀನಾದಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾಗಿದ್ದು 2019ರ ನವೆಂಬರ್ನಲ್ಲಿ. ಆದ್ರೆ ಈ ವೆಬ್ ಸಿರೀಸ್ ಪ್ರಸಾರವಾಗಿದ್ದು 2018ರಲ್ಲಿ ಇದು ಹೇಗೆ ಸಾಧ್ಯ? ಕೊರೊನಾ ವೈರಸ್ ಬಗೆಗಿನ ಭವಿಷ್ಯವಾಣಿಗಳು ಈ ಹಿಂದೆಯೇ ಕೆಲವು ಬಂದಿದ್ರೂ ಕೂಡ ಈ ವೆಬ್ ಸಿರೀಸ್ನಲ್ಲಿ ಹೇಳಿರುವ ಡೈಲಾಗ್ಗಳು ಕರಾರುವಕ್ಕಾಗಿವೆ. ಇದು ಯಾರದ್ದೋ ಷಡ್ಯಂತ್ರದ ಫಲ ಅನ್ನೋದನ್ನ ಸಿನಿಮಾ ಡೈಲಾಗ್ ಅಂದ್ರೂ ಕೊರೊನಾದ ಬಗ್ಗೆ ಹೇಳಿರೋ ಲಕ್ಷಣಗಳು 100ಕ್ಕೆ 100ರಷ್ಟು ಸತ್ಯ. ಇದು ಹೇಗೆ ಸಾಧ್ಯ..? ‘ಕೊರೊನಾ’ ಸೃಷ್ಟಿಸಿದ್ದೇ ಚೀನಾ ಅಂದಿದ್ರು ಹಲವರು..! ಕೊರೊನಾ ಕಾಣಿಸಿಕೊಂಡ ಆರಂಭದಲ್ಲಿ ಚೀನಾದವರೇ ಈ ವೈರಸ್ನ ತಮ್ಮ ಲ್ಯಾಬ್ನಲ್ಲಿ ರೂಪಿಸಿದ್ರು. ಜಗತ್ತಿನ ಮೇಲೆ ಇದ್ರ ಮೂಲಕ ದಾಳಿ ನಡೆಸೋಕೆ ಮುಂದಾಗಿದ್ರು. ಆದ್ರೆ ಬೈ ಮಿಸ್ಟೇಕ್ ಅಲ್ಲಿನ ಲ್ಯಾಬ್ನಿಂದಲೇ ವೈರಸ್ ಲೀಕ್ ಆಗಿದೆ ಅನ್ನೋ ವದಂತಿಗಳು ಹರಿದಾಡಿದ್ವು. ಅದ್ರ ಸತ್ಯಾಸತ್ಯತೆ ಯಾರಿಗೂ ಗೊತ್ತಿಲ್ಲ. ಆದ್ರೀಗ ವೆಬ್ಸಿರೀಸ್ನಲ್ಲಿ ತೋರಿಸಿರುವ ಷಡ್ಯಂತ್ರದ ಸೀನ್, ನಿಜಕ್ಕೂ ಹಾಗೆಯೇ ಆಗಿದ್ಯಾ ಅನ್ನೋ ಅನುಮಾನ ಹುಟ್ಟುಹಾಕಿದೆ. ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ಗೂ ಸೌತ್ ಕೊರಿಯಾದ ವೆಬ್ ಸಿರೀಸ್ಗೂ ಏನ್ ಸಂಬಂಧ..? ನೆಟ್ಫ್ಲಿಕ್ಸ್ನಲ್ಲಿ ಈ ಬಗ್ಗೆ ಸ್ಟೋರಿ ಬಂದಿದೆ ಅಂದ್ರೆ ಇದ್ರ ಬಗ್ಗೆ ಮೊದಲೇ ಅರಿವಿತ್ತು ಅಂತ ಅರ್ಥ. ಅದು ಗೊತ್ತಿದ್ದೂ ಮುಂಜಾಗ್ರತ ಕ್ರಮ ತೆಗೆದುಕೊಳ್ಳೋಕೆ ತಡವಾಗಿದ್ದು ಏಕೆ? ಇಡೀ ಚೀನಾಗೆ ಹಬ್ಬುವವರೆಗೂ ಯಾಕೆ ತಲೆಕೆಡಿಸಿಕೊಂಡಿರಲಿಲ್ಲ. ಇಡೀ ಜಗತ್ತಿಗೇ ವೈರಸ್ ಈಗ ಹರಡಿಬಿಟ್ಟಿದೆ. ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿದೆ. ಇದ್ರ ಹಿಂದೆ ನಿಜಕ್ಕೂ ಷಡ್ಯಂತ್ರ ಇದ್ದಿದ್ದು ಹೌದಾ ಅನ್ನೋ ಬಗ್ಗೆ ನೆಟ್ಟಿಗರು ಈಗ ತಲೆಕೆಡಿಸಿಕೊಳ್ತಿದ್ದಾರೆ. ಹೀಗೆಯೇ ಆ ಕುಸಲಾಳ ಏಕಾಂತ ಮನಸ್ಸಿನ ಅಲೆಗಳು ಏಳುತ್ತಲೇ ಇದ್ದವು. ಆ ಏಕಾಂತ ಮನಸ್ಸಿನ ತಾಕಲಾಟ ತಾಳಲಾರದೇ ಅವಳು ದಿಗ್ಗನೇ ಆ ಒಂದು ಬೆಡ್ ರೂಮಿನಿಂದ ಎದ್ದು ಹೊರ ಬಂದು ದೇವಾಲಯಕ್ಕೆ ಹೊರಡಲು ಅಣಿಯಾದಳು. ದೇವಾಲಯಕ್ಕೆ ಹೋಗಿ ಆ ದೇವರ ದರ್ಶನ ಪಡೆದುಕೊಂಡು ಮನಸ್ಸಿನಲ್ಲೇ ಆ ದೇವರನ್ನು ಬೇಡಿಕೊಂಡಳು ಅಯ್ಯೋ ದೇವರೇ ಈ ಕರೋನ ಸಂದರ್ಭದಲ್ಲಿ ನೀನೇ ಗತಿ ಈಗ ನಮಗೆ. ನಮ್ಮನ್ನು ಅಂದರೆ ಮಾನವರನ್ನು ನೀನೇ ಕಾಪಾಡಪಾ ಈಗ. ಹೀಗೆಯೇ ಆ ದೇವರನ್ನು ಬೇಡಿಕೊಳ್ಳುತ್ತಲೇ ಮಕ್ಕಳು ಮತ್ತು ಗಂಡನು ಆಫೀಸಿನಿಂದ ಮನೆಗೆ ಬರುವುದು ಸಮಯವಾಗಿದೆ ಎಂದು ದೇವಸ್ಥಾನದಿಂದ ಮನೆಗೆ ವಾಪಾಸಾದಳು ಕುಸಲಾಳು… *************************************
ಕರೋನ ಅಬ್ಬರದಲ್ಲಿ ಕುಸಲಾಳ ಮನಸ್ಸಿನ ಏಕಾಂತ ಹೊಯ್ದಾಟ..! Read Post »
ಲೇಖನ ಸಮಾಜ ಕಟ್ಟುವಲ್ಲಿ ಸಾಹಿತ್ಯದ ಪಾತ್ರ ಶಿವರಾಜ್ ಮೋತಿ ಸಮಾಜವೆಂದರೆ ಜನ,ಗುಂಪು ಎಂದರ್ಥವಾಗುತ್ತದೆ. ವಿಧವಿಧವಾದ ಜನ,ಅನೇಕ ಗುಂಪುಗಳು ಇರುತ್ತವೆ. ಆದರೆ ಇಂದಿನ ಸಮಾಜ ಮೂಲಭೂತವಾದಿ,ಡೊಂಗಿ ರಾಜಕಾರಣಿಗಳ ಕೈಗೆ ಸಿಕ್ಕು ವಿಲ-ವಿಲವಾಗಿ ಬಿದ್ದು ನರಳಾಡುತ್ತಿದೆ. ಸಮಾಜದಲ್ಲಿದ್ದ ನೂನ್ಯತೆಗಳನ್ನು ಸರಿಪಡಿಸಲು,ಸಮ ಸಮಾಜದ ಕನಸನ್ನು ಕಟ್ಟಲು ಹಲವಾರು ಮಾರ್ಗಗಳಿವೆ. ಅದರಲ್ಲೂ ವಿಶೇಷವಾಗಿ ಸಾಹಿತ್ಯವೂ ಒಂದು.ಸಾಹಿತ್ಯದಲ್ಲಿ ಹಲವಾರು ಪ್ರಕಾರಗಳು ಜನಪದ, ಜಾನಪದ,ಪುರಾಣ,ನಾಟಕ,ಕಲೆ, ಸಂಗೀತ ಮುಂತಾದವೆಲ್ಲವೂ ಒಂದಕ್ಕೊಂದು ಸಂಬಂಧವಿದ್ದೆ ಇದೆ. ಸಾಹಿತ್ಯದ ಮೂಲಕ ಸಮಾಜವನ್ನು ಕಟ್ಟಲು ಅನೇಕ ಮಹನೀಯರು,ಶ್ರಮಿಸಿದ್ದಾರೆ,ಶ್ರಮಿಸುತ್ತಿದ್ದಾರೆ ಕೂಡ ಹೌದು.ಸಾಹಿತ್ಯವು ಒಡೆದ ಮನಸ್ಸುಗಳನ್ನು ಕೂಡಿಸಬೇಕೇ ವಿನಹ ಛಿದ್ರ-ಛಿದ್ರ ಮಾಡಬಾರದು. ಜಾತಿ ಅಸ್ಪೃಶ್ಯತೆಯ ತೆಕ್ಕೆಗೆ ಸಿಲುಕಿ ನರಳಾಡಿದ ಜನಕ್ಕೆ,ಧ್ವನಿಯಿಲ್ಲದ ಸಮುದಾಯಕ್ಕೆ ಧ್ವನಿಯಾಗಲು,ತಬ್ಬಲಿಗಳ ಪರ, ಅಲೆಮಾರಿ, ಆದಿವಾಸಿ,ಬುಡಕಟ್ಟು ಜನರಿಗಾಗಿ ಹೋರಾಡಲು, ಶೋಷಣೆಗೆ ಒಳಪಟ್ಟವರನ್ನು ಕಿಚ್ಚೆಬ್ಬಿಸಿ,ಅವರಿಗಾಗುವ ಅನ್ಯಾಯದ ವಿರುದ್ಧ ಸಿಡಿದೇಳಲು ಎಬ್ಬಿಸಿ,ಅವರ ಜೊತೆಗೂಡಲು ಸಾಹಿತ್ಯದ ಮೂಲಕ ಸಾಧ್ಯ.ಇಂತಹ ಕೆಲಸ ಮಾಡುತ್ತಿರುವ ದೊಡ್ಡ ದೊಡ್ಡ ಕೆಲವೇ ಸಾಹಿತಿಗಳನ್ನೂ ಹಾಗೂ ಪ್ರಚಾರ ಪಡೆಯದೇ ಮಾಡುತ್ತಿರುವ ಸಣ್ಣ-ಸಣ್ಣ ಸಾಹಿತಿಗಳನ್ನನ್ನೂ, ಹೋರಾಟಗಾರರನ್ನು ನಾವು ಇಂದು ನೋಡಬಹುದು.. ಇನ್ನೂ ಕೆಲ ಸಾಹಿತಿಗಳಿದ್ದಾರೆ,ಹೆಣ್ಣು ಸಬಲೆಯಲ್ಲ, ಅಬಲೆಯೆನ್ನುವ ಹೆಣ್ಣನ್ನು ಶೋಷಿಸುವ ಕೀಳು ಮನಸ್ಥಿತಿಗಳು,ಶೋಷಿತರನ್ನು ಶೋಷಿತರನ್ನಾಗೆ ನೋಡಬಯಸುವ,ಜಾತಿಧರ್ಮಗಳ ನಡುವೆ ಜಗಳ ಹಚ್ಚುವ ಸಾಹಿತ್ಯ ಸೃಷ್ಟಿ ಮಾಡುವುದು, ಅನ್ಯಧರ್ಮೀಯರನ್ನು ಅನುಮಾನಸ್ಥವಾಗಿ ನೋಡುವ, ಇಲ್ಲ-ಸಲ್ಲದ ಇತಿಹಾಸ ಸೃಷ್ಟಿ ಮಾಡುವುದು, ಅದು ನಿಜವಾದರೂ ಇಂದಿನ ಪರಿಸ್ಥಿತಿಗೆ ಒಗ್ಗೂಡಿಸಿಕೊಂಡು ಬದಲಾವಣೆಯನ್ನು ತರಬಯಸದೇ, ಕೋಮುಸೌಹಾರ್ದತೆಯನ್ನು ಕಾಪಾಡಿಕೊಳ್ಳದೆ ಶಾಂತಿಗೆಡುವ ಕೆಲಸವೂ ನಡೆದಿದೆ.ಅದೂ ನಿಲ್ಲಲ್ಲಿ.. ಇಂದಿನ ಉದಯೋನ್ಮುಖ ಸಾಹಿತಿಗಳು,ಕವಿಗಳು ಅವನು,ಅವಳು ಎನ್ನದೇ ಅರ್ಥಾತ್ ಪ್ರೀತಿ-ಪ್ರೇಮದ ಬಗ್ಗೆ ಬರೆಯುವುದು ಅದರಲ್ಲೂ ಭಗ್ನಪ್ರೇಮಿಯಂತೆ ಕಲ್ಪಿಸಿ ಬರೆಯುವುದು ನೋಡಿದರೆ,ಇವರಿಗೆ ಅನ್ಯ ವಿಷಯಗಳೇ ಇಲ್ಲವೇ ಎನ್ನಿಸದೇ ಇರದು.ಆದರೂ ಇವರು ಅನ್ಯವಿಷಯಗಳು ನನಗ್ಯಾಕೆ,ನಾನು ಬರೆದರೆ ಏನಾದರೂ ಬದಲಾದಿತೇ ಎಂದು ಕೀಳು ಮನಸ್ಥಿತಿಯಿಂದಲೇ ಇದಾರೆ ವಿನಹ ದೊಡ್ಡತನದಿಂದಲ್ಲ. ಸಮಾಜದಲ್ಲಿ ಅನ್ಯಾಯವಾಗುತ್ತಿದ್ದರೂ ದೈಹಿಕವಾಗಿ ಎದುರಿಸದೇ ಆಗದಿರಬಹುದು,ಕಣ್ಣುಮುಂದೆ ಅನ್ಯಾಯ ನಡೆಯದೇ, ನಡೆದೂ ಇರಬಹುದು, ದೂರದೆಲ್ಲೋ ಅನ್ಯಾಯ ನಡೆದಿರಬಹುದು ನಮಗ್ಯಾಕೆನ್ನದೇ ಅದನ್ನು ಪ್ರತ್ಯಕ್ಷವಾಗಿ ವಿರೋಧಿಸದಾಗದಿದ್ರೂ ಸಾಹಿತ್ಯದ ಮೂಲಕ ವಿರೋಧಿಸುವುದು, ಪ್ರತಿರೋಧಿಸಬೇಕೇ ವಿನಹ ಮಂಕಾಗಿ ಕುರುಡಾಗುವುದಲ್ಲ,ಅನ್ಯಾಯವನ್ನು ವಿರೋಧಿಸುವ ಕೆಲಸವಾಗಬೇಕಿದೆ. ಪರಿಸರದ ಹಾನಿಯನ್ನು ತಡೆಗಟ್ಟಲು, ಪರಿಸರಾತ್ಮಕ, ಪ್ರಾಣಿ-ಪಕ್ಷಿಗಳ ರಕ್ಷಣೆ,ಅತ್ಯಾಚಾರದ ವಿರುದ್ಧ, ಜೀವವಿರೋಧಿ, ಮಹಿಳಾ ವಿರೋಧಿ,ಮಾನವ ವಿರೋಧಿ ಮುಂತಾದವುಗಳ ಕೆಲಸ ಸಾಹಿತಿಗಳಿಂದ ತಡೆಗಟ್ಟಲು ಆಗುತ್ತಿಲ್ಲ.ನಮ್ಮ ದೇಶ ಮಹಾನ್ ಧೀಮಂತ ಪುರುಷ-ಮಹಿಳೆ ಸಾಧಕ ಮಹಾತ್ಮರನ್ನು ನೀಡಿದೆ.ಅವರು ಸಮಾಜ ಕಟ್ಟಿದ ಪರಿಯನ್ನು ನಾವು ಅಳವಡಿಸಿಕೊಂಡು ಸಾಗಬೇಕಾಗಿದೆ.ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜವನ್ನು ಕಟ್ಟಲು ಸಾಹಿತ್ಯದ ಮೂಲಕ ಕೆಲಸಗಳು ಆಗುತ್ತಿಲ್ಲ,ಆಗಬೇಕಾಗಿದೆ. ಸರ್ಕಾರದ ನಡೆನುಡಿಗಳು,ಕಾಯ್ದೆಗಳು ಎಲ್ಲ ಕಾಲಕ್ಕೂ ಪ್ರಜಾಸತ್ತಾತ್ಮಕವಾಗಿ,ಪ್ರಜೆಗಳ ಹಿತರಕ್ಷಣೆಗಾಗಿಯೇ ಇರುತ್ತವೆ ಎಂದು ಹೇಳಲಾಗದು,ಕೆಲವೊಮ್ಮೆ ಸರಕಾರಗಳು ಗೊತ್ತಿದ್ದೂ,ಗೊತ್ತಿಲ್ಲದೆಯೂ ಪ್ರಜೆಗಳ ವಿರೋಧಿ ಕಾಯ್ದೆಯೂ ತರಬಹುದು.ಅವಾಗ ಸಾಹಿತಿಗಳಾದವರು ಖಡಾಖಂಡಿತವಾಗಿ ವಿರೋಧಿಸಬೇಕು. ರಾಜಕೀಯದ ಬಗ್ಗೆ ಬೇಡವೆಂದು ತಮ್ಮ ಅಭಿಪ್ರಾಯವನ್ನು ದಾಖಲಿಸದೇ ಹೋದರೆ ಎಲ್ಲ ಕಾಲಕ್ಕೂ ಬಾಯಿಮುಚ್ಚಿ ಮೂಕಪ್ರೇಕ್ಷರಾದರೆ ಅದೆಂತಹ ದೊಡ್ಡ ಬರಹಗಾರನಾದರೂ,ಅವರು ಸಾಹಿತಿಗಳಲ್ಲ,ಅವಕಾಶವಾದಿಗಳಾಗುತ್ತಾರೆ. ಮತ್ತೊಂದೆಡೆ ಓದದೇ ಬರೆಯಬಹುದು,ಆದರೂ ಓದಬೇಕು.ಸ್ವತಃ ತಾನೇ ಮತ್ತೊಬ್ಬರದನ್ನು ಓದದೇ, ನಮ್ಮ ಭವ್ಯ ಸಾಹಿತ್ಯದ ಇತಿಹಾಸವನ್ನೋದದೇ, ಹಿಂದಿನಿಂದ ನಡೆದುಕೊಂಡು ಬಂದ ಸಮಾಜದ ಬಗ್ಗೆ ಅವಲೋಕಿಸದೆ ನನ್ನದೇ ಓದಲಿ ಅಂತ ಅನ್ನಿಸಿದ್ದನ್ನು ಗೀಚುವವರನ್ನು ಹಾಗೂ ಖುಷಿಗಾಗಿ, ಆತ್ಮಸಂತೋಷಕ್ಕಾಗಿ ಬರೆಯುತ್ತೇನೆಂದರೆ ಅಭ್ಯಂತರವಿಲ್ಲ ಆದರೆ ಅದು ಸಾಹಿತ್ಯವಾಗಲಾರದು. ಅಂತ ಬರಹಗಳಿದ್ದರೆ ನಿಮಗೂ ನಿಮ್ಮ ಬರಹಕ್ಕೂ ನೆಲೆಯಿಲ್ಲದಾಗುತ್ತದೆ.. ಒಟ್ಟಾರೆಯಾಗಿ ಏನೇ ಆಗಲಿ,ಸಾಹಿತ್ಯದ ಮೂಲಕ ಸಮಾಜವನ್ನು ಕಟ್ಟುವ ಕೆಲಸಗಳು ಆಗಲಿ, ಸಾಹಿತ್ಯವನ್ನು ಉದ್ಯೋಗ ಮಾಡಿಕೊಂಡವರಿದ್ದಾರೆ, ಜೀವನಕ್ಕಾಗಿ ಸಾಹಿತ್ಯವನ್ನು ನೆಚ್ಚಿಕೊಂಡವರಿದ್ದಾರೆ. ಉದಯೋನ್ಮುಖರಾದ ನಾವುಗಳು ಸಮಾಜದ ಸಮಸ್ಯೆ,ರೋಧನೆಗಳಿಗೆ ಸ್ಪಂದಿಸಿ ಬರಹ, ಹೋರಾಟ, ಚಳುವಳಿಗಳ ಮೂಲಕ ಇನ್ನಾದರೂ ನಮ್ಮ ಲೇಖನಿಯ ವರಸೆ ಬದಲಿಸಿಕೊಂಡು ಸಾಧ್ಯವಾದಷ್ಟು ಜೀವವಿರೋಧಿಗೆ ಪ್ರತಿಧ್ವನಿಗಳಾಗೋಣ..!!! ******************************************************
ಸಮಾಜ ಕಟ್ಟುವಲ್ಲಿ ಸಾಹಿತ್ಯದ ಪಾತ್ರ Read Post »
ಲೇಖನ ಬರಗೂರರೆಂಬ ಬೆರಗು ಮಮತಾ ಅರಸೀಕೆರೆ ಪ್ರೊ.ಬರಗೂರು ರಾಮಚಂದ್ರಪ್ಪನವರ ಬಗ್ಗೆ ಬರೆಯುವುದೆಂದರೆ ಸಾಗರಕ್ಕೆ ಸೇರುವ ನದಿಗಳನ್ನು ಎಲ್ಲೋ ಕುಳಿತು ಎಣಿಸಿದಂತೆ.ಯಾವುದೇ ಉತ್ಪ್ರೇ ಕ್ಷೆಯಿಲ್ಲದ ಮಾತುಗಳಿವು ಎಂದು ಅವರನ್ನು ಸನಿಹದಿಂದ ಬಲ್ಲವರಿಗೆಲ್ಲಾ ಚಿರಪರಿಚಿತ.ಅವರ ಹತ್ತು ಹಲವು ಮಜಲುಗಳ ವೈವಿಧ್ಯ ಚಟುವಟಿಕೆಗಳನ್ನು ಸಾಮಾನ್ಯವಾಗಿ ಎಲ್ಲರೂ ಬಲ್ಲರು.ನಾನಿಲ್ಲಿ ಬರಗೂರು ಸರ್ ಬಗ್ಗೆ ಅಕಾಡೆಮಿಕ್ ಅಲ್ಲದ ಕೆಲವೇ ಸರಳ ಮಾತುಗಳಲ್ಲಿ ಬರೆಯಲು ಪ್ರಯತ್ನಪಡುವೆ. ಬರಗೂರರನ್ನ ಕಂಡಿದ್ದು ಪತ್ರಿಕೆಗಳಲ್ಲಿ ಅಂಕಣಗಳ ಮೂಲಕ.ಸಾಮಾನ್ಯವಾಗಿ ಆಯ್ದ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಲೇಖನ, ಅಂಕಣಗಳನ್ನು ತಪ್ಪದೇ ಓದುತ್ತಿದ್ದೆ.ಬಿ.ಆರ್.ಬರಹಗಳನ್ನು ಮೆಚ್ಚುತ್ತಿದ್ದೆ.ನಂತರ ಅಲ್ಲಿಲ್ಲಿ ಜರುಗುವ ಕಾರ್ಯಕ್ರಮಗಳಲ್ಲಿ ದೂರದಿಂದ ಗಮನಿಸಿ ಭಾಷಣಗಳನ್ನು ಆಲಿಸುತ್ತಿದ್ದೆ.ನನ್ನ ವೈಚಾರಿಕ ಗುರುಗಳು ಸ್ವಾಮಿಯವರು ಒಮ್ಮೆ ಬಿ.ಆರ್.ರನ್ನು ತಮ್ಮ ಗುರುಗಳೆಂದೂ, ತಮ್ಮ ಅಧ್ಯಯನದ ಸಲುವಾಗಿ ಅವರು ವಹಿಸುತ್ತಿದ್ದ ವಿಶೇಷ ಆಸಕ್ತಿಯನ್ನು, ಪ್ರೀತಿ ಕಾಳಜಿಯನ್ನೂ ವರ್ಣಿಸಿ ತುಂಬು ಮೆಚ್ಚುಗೆಯಿಂದ ಸ್ಮರಿಸುವಾಗ ಸರ್ ಬಗ್ಗೆ ಮತ್ತಷ್ಟು ಅಭಿಮಾನವಾಯ್ತು. ಸ್ವಾಮಿ ಗುರುಗಳ ದೃಷ್ಟಿಯಲ್ಲಿ ಬರಗೂರರಿಗೆ ವಿಶೇಷ ಸ್ಥಾನಮಾನ. ಅದೇ ಭಾವದ ಮುಂದುವರಿಕೆ ನನ್ನಲ್ಲೂ. ಬಿ.ಆರ್.ಸರ್ನ ತೀರಾ ಹತ್ತಿರದಿಂದ ಕಂಡದ್ದು ಶ್ರವಣಬೆಳಗೊಳದಲ್ಲಿ. ನಮ್ಮ ಪರಿಚಯದ ಸ್ನೇಹಿತರೊಬ್ಬರು ಶ್ರವಣಬೆಳಗೊಳದಲ್ಲಿ ಸಿನೆಮಾ ಶೂಟಿಂಗ್ ನೋಡಲು ಆಹ್ವಾನಿಸಿದ್ದರು.ಬರಗೂರರು ಸಿನೆಮಾ ನಿರ್ದೇಶಕರು. ಸ್ನೇಹಿತರೊಂದಿಗೆ ತೆರಳಿ, ಕೆಲವು ಹೊತ್ತು ಅಲ್ಲಿದ್ದು ಸರ್ನ ಕೂಡ ಕ್ಲುಪ್ತವಾಗಿ ಮಾತನಾಡಿಸಿ ವಾಪಸ್ ಬಂದ ನೆನಪು. ನಂತರ ಮಾತನಾಡಲು ಸಿಕ್ಕಿದ್ದು ತೀರಾ ಕಡಿಮೆ.ಒಂದೆರಡು ಕಾರ್ಯಕ್ರಮಗಳಲ್ಲಿ ಪರಿಚಯಿಸಿಕೊಂಡಾಗ ಆತ್ಮೀಯವಾಗಿಯೇ ಮಾತನಾಡಿಸಿದರು. ಸಾಂಸ್ಕೃತಿಕ ವಿಷಯಗಳಿಗಾಗಿ ಆಗಾಗ ನಾನು ಮೆಸೇಜ್ ಮಾಡಿದಾಗ ತಪ್ಪದೇ ಉತ್ತರಿಸುವರು.ಶಿಕ್ಷಣ ಇಲಾಖೆಯ ಸುಧಾರಣೆಗೆ ಸಂಬಂಧಿಸಿದಂತೆ ಕೆಲವು ಅಹವಾಲು ಹೊತ್ತು ಡಿ ಎಸ್ ಈ ಆರ್ ಟಿ ಗೆ ತೆರಳಿದ್ದಾಗ ಪುಸ್ತಕ ಕಮಿಟಿ ಅಧ್ಯಕ್ಷರಾಗಿದ್ದ ಅವರು ಸುಮಾರು ಅವಧಿಯ ಕಾಲ ನಮ್ಮೊಂದಿಗೆ ಮಾತನಾಡಿ ಸಹನೆಯಿಂದ ಆಲಿಸಿ ಸೂಕ್ತ ಪ್ರತಿಕ್ರಿಯೆ ನೀಡಿದಾಗ ಅವರ ಸರಳತೆ, ಸಹೃದಯತೆ ಕಾಳಜಿ ಬಗ್ಗೆ ಖುಷಿಯಾಗಿತ್ತು.ಕೆಲವು ದಿನಗಳ ನಂತರ ಡಿ.ಎಸ್.ಈ.ಆರ್.ಟಿಯಲ್ಲಿಯೇ ಒಂದು ಕಾರ್ಯಕ್ರಮ ಆಯೋಜಿಸಿ ಪಠ್ಯಪುಸ್ತಕಕ್ಕೆ ಸಂಬಂಧಿಸಿದಂತೆ, ಗ್ರಂಥಾಲಯ ಸುಧಾರಣೆ ಕುರಿತಂತೆ ಸಲಹೆ ಸೂಚನೆ ನೀಡಲು ಬರಹಗಾರ ಶಿಕ್ಷಕರನ್ನು ಆಹ್ವಾನಿಸಿದ್ದರು.ಪಠ್ಯಪುಸ್ತಕ ಕಮಿಟಿಯಲ್ಲಿ ಬರಹಗಾರರಿದ್ದರೆ ಅದರ ಸ್ವರೂಪ ಮತ್ತಷ್ಟು ಉತ್ತಮವಾಗುತ್ತಿತ್ತೇನೋ ಎಂದ ಅವರ ದೂರದರ್ಶಿತ್ವದ ಮಾತಿನ್ನೂ ನನಗೆ ನೆನಪಿದೆ. ಸಾಂಸ್ಕೃತಿಕ ನೀತಿಯ ವರದಿಯನ್ನು ಸಿದ್ದಪಡಿಸಿದ್ದು, ಅದರ ಜಾರಿಗೆ ಸಾಂಸ್ಕೃತಿಕ ವಲಯ ಒತ್ತಾಯಿಸುತ್ತಿದ್ದುದನ್ನು ಗಮನಿಸುತ್ತಿದ್ದೆ. ಮತ್ತು ಆ ಸಂಬಂಧ ಕೆಲವು ಸಂದೇಶ ಕಳಿಸಿದ್ದು ಬಿಟ್ಟರೆ ನಂತರ ಅವರ ಸಿನೆಮಾ ಆರಂಭವಾಗುವಾಗ ಮತ್ತೆ ಮೆಸೇಜ್ಗಳು. ಸಾಂಸ್ಕೃತಿಕ ವಲಯದ ಕೆಲವು ಅಸಂಬದ್ಧ ನಿರ್ಣಯಗಳಿಂದ ನಮಗೆ ಹತಾಶೆಯಾದಾಗ ಪುನಃ ಸಂಪರ್ಕ ಮಾಡಿದ್ದೆ.ತಡಮಾಡದೇ ಪ್ರತಿಕ್ರಿಯಿಸುತ್ತಿದ್ದ ಅವರ ಸಂವಹನ ಗುಣ ಭರವಸೆ ತುಂಬುತ್ತಿತ್ತು. ತೀರಾ ಇತ್ತೀಚೆಗೆ ಲಾಕ್ಡೌನ್ ಆರಂಭವಾದಾಗ ಎಲ್ಲರೂ ಭೀತಿಯಿಂದ ಗೃಹಬಂಧನದ ರುಚಿ ನೋಡುವಂತಾಯಿತು. ಏಕತಾನತೆ ಹಾಗೂ ಕ್ಲೇಷಗಳನ್ನು ತಾತ್ಕಾಲಿಕವಾಗಿ ಮರೆಸುವ ಸಾಧನವಾಗಿ ಬರಹ ನೆರವಿಗೆ ಬಂದು ಒಂದಷ್ಟು ಕವಿತೆ ಬರೆದು ಹಿರಿಯ ಲೇಖಕರಿಗೆ ಕಳಿಸುವಾಗ ಬಿ.ಆರ್.ಸರ್ ಗು ಕಳಿಸಿದೆ. ಸಕಾರಾತ್ಮಕ ಸ್ಪಂದನೆಯಿಂದ ಹುರಿಗೊಂಡೆ.ಅದೇ ವೇಳೆಗೆ ಕೋಲಾರದ ಗೆಳೆಯರ ಯೋಜನೆಯೊಂದಕ್ಕೆ ಬರಗೂರರನ್ನ ಯೂಟ್ಯೂಬ್ ಚಾನಲ್ ಗೆ ಮೌಖಿಕವಾಗಿ ಪರಿಚಯಿಸುವ ಸದಾವಕಾಶ ದಕ್ಕಿತು. ಆ ಸಂದರ್ಭದಲ್ಲಿ ಅವರ ಕುರಿತು ಮತ್ತಷ್ಟು ತಿಳಿಯುವ ಸಲುವಾಗಿ ಅಂತರ್ಜಾಲ ತಡಕಾಡುವಾಗ ದಕ್ಕಿದ್ದು ಅಪಾರ ಸಾಮಗ್ರಿ . ಅಲ್ಲಿಂದ ಶುರುವಾಯಿತು ನನ್ನ ಹುಡುಕುವಿಕೆ.ಅದೆಷ್ಟೊಂದು ದಾಖಲೆಗಳು.ಯೂಟೂಬ್ , ಪತ್ರಿಕೆ, ವಿಕಿಪಿಡಿಯಾದಲ್ಲೆಲ್ಲೆಲ್ಲಾ ಬಹಳಷ್ಟು ಮಾಹಿತಿಗಳು. ಓದುತ್ತಾ, ನೋಡುತ್ತಾ ಅವುಗಳಲ್ಲಿ ಕೆಲವು ತಪ್ಪಿಹೋದಾವೆಂದು ಎಚ್ಚರ ವಹಿಸುವಾಗ ಎಫ್.ಬಿ. ಪೇಜ್ ತೆರೆದು ಅಲ್ಲಿ ಸಂಗ್ರಹಿಸುತ್ತಾ ಹೋದೆ. ಅವರ ಸಾಮಾಜಿಕ ತುಡಿತ, ಸ್ಪಂದನೆ ಇಷ್ಟವಾಗುತ್ತ ಮತ್ತಷ್ಟು ಮಗದಷ್ಟು ಅಭಿಮಾನಿಯಾದೆ. ಸಮಾಜವನ್ನು,ತನ್ನ ಸುತ್ತಲಿನ ಪ್ರತೀ ಸಂದರ್ಭವನ್ನು ಕುರಿತು ಅವರ ಅಪೂರ್ವ ಒಳನೋಟವುಳ್ಳ ಗ್ರಹಿಕೆ, ಆ ಅರಿವಿನ ವಿಸ್ತಾರ, ಓದಿನ ವ್ಯಾಪ್ತಿ, ಮುಂದ್ಗಾಣಿಕೆ, ಮುಂದಾಲೋಚನೆ ದೂರದೃಷ್ಟಿಯ ಮಾತುಗಳು ನನಗೆ ಬೇರೆಯದೇ ವಿಶ್ವವನ್ನು ಮನಗಾಣಿಸತೊಡಗಿದವು. ಪ್ರತೀ ಕದಲಿಕೆಯನ್ನು ಅವರು ಕಾಣುವ ರೀತಿ, ವಿಮರ್ಶಿಸುವ ಪರಿ, ವಿಶಿಷ್ಟ ಆಯ್ಕೆ, ವಸ್ತು, ಘಟನೆ, ವಾತಾವರಣ, ಮೊದಲಾದವನ್ನ ಕಾಣಬೇಕಾದ ನೋಟದ ಪರಿಚಯ, ಮೊದಲಾದವುಗಳಲ್ಲಿ ಅವರಿಗೆ ಅವರೇ ಸಾಟಿ. ಸೂಕ್ಷ್ಮಾತಿಸೂಕ್ಷ್ಮ ಸ್ವಭಾವದ ಮೇಷ್ಟ್ರು ಎಳೆ ಗರಿಕೆಯ ಚಲನೆಯಲ್ಲೂ ಅದ್ಭುತವನ್ನು ಕಾಣಬಲ್ಲರು.ಕೂದಲು ಸೀಳಿದಂತಹ ಆಂತರಿಕ ಅವಲೋಕನದ ತಾಕತ್ತು ಅವರ ಅಗಾಧ ಶಕ್ತಿ.ಇಷ್ಟೆಲ್ಲ ವಿಷಯವನ್ನ ಅಂತರ್ಜಾಲದ ಮೂಲಕ ಮಾತ್ರ ಪಡೆದ ನನಗೆ ಅವರ ಶಿಷ್ಯ ವರ್ಗದವರ ಮೇಲೆ ಅಸೂಯೆಯಾಗಿದ್ದಂತೂ ಖರೆ.ಯುವ ಸಮುದಾಯವನ್ನು, ಯುವ ಪೀಳಿಗೆಯನ್ನು ಬಿ.ಆರ್.ಸರ್ ಪ್ರೋತ್ಸಾಹಿಸುವ ಪರಿಯ ಬಗ್ಗೆ ಅವರ ಆತ್ಮೀಯರಿಂದಲೇ ತಿಳಿಯಬೇಕು.ಅವರಿಂದ ಸಹಾಯ ಸಹಕಾರ ಪಡೆದಿರುವ ಅಪಾರ ಶಿಷ್ಯ ಬಳಗದ ದಂಡೇ ಇದೆ. ಯೂಟೂಬಿನಲ್ಲಿ ಅವರ ಹಾಗೂ ಅವರ ಪತ್ನಿಯವರ ಆತಿಥ್ಯ ಸತ್ಕಾರಗಳ ಬಗ್ಗೆ ತಿಳಿದು ಅಚ್ಚರಿಯಾಗಿತ್ತು. ಚಳುವಳಿ, ಸಂಘಟನೆ ಸಾಮಾಜಿಕವಾಗಿ ತೊಡಗಿಸಿಕೊಂಡವರಿಗೆ ಸೃಜನಾತ್ಮಕತೆ ಸಾಧ್ಯವಿಲ್ಲ ಎಂಬುದೊಂದು ಮಾತಿದೆ.ಅದನ್ನ ಸಾರಾಸಗಟಾಗಿ ಸುಳ್ಳು ಎಂದು ಪ್ರತಿಪಾದಿಸಿದವರು ಮೇಷ್ಟ್ರು.ಸಂವೇದನಾಶೀಲ ಬರಹಗಳ ಮೂಲಕ ಎಲ್ಲವನ್ನೂ ಸಮತೂಗಿಸಿ ತೋರಿಸಿದವರು. ಪದ್ಯಗಳ ಮೂಲಕವೂ ನವಿರುತನವನ್ನು ಸೊಗಸಾಗಿ ನಿರೂಪಿಸಿದವರು.ಒಂದು ವಿಷಯವನ್ನು ವಿಂಗಡಿಸಿ ವಿಶ್ಲೇಷಿಸುವುದರ ಮೂಲಕ ಆವಾಹಿಸಿಕೊಳ್ಳುವ ಮಾರ್ಗಗಳನ್ನು ಪರಿಚಯಿಸಿದವರು. ನಾಣೊಂದು ಪದ್ಯದಲ್ಲಿ ಕೊಂಚ ಸಂಘರ್ಷವನ್ನು ಅಡಕಗೊಳಿಸಿದಾಗ ‘ ಸಂವಹನ ಬೀದಿಯಲ್ಲಿ ನಿಂತು ಜಗಳವಾಡಿದಂತಿರಬಾರದು’ಎಂಬ ಮಾತಿನ ಮೂಲಕ ನಯವಾದ ಮಾತಿನ ಪೆಟ್ಟು ಕೊಟ್ಟು ತಿದ್ದಿದವರು.ಸಿನೆಮಾ ಮಾಧ್ಯಮದ ಮೂಲಕ ಅವರು ಸಾಧಿಸಿದ್ದು ಬಹಳ.ಕಲಾತ್ಮಕತೆ ಮೂಲಕ ಸದಭಿರುಚಿಯನ್ನು ಯಥೇಚ್ಚವಾಗಿ ಹಂಚಿದವರು. ಒಂದೊಂದು ಸಿನೆಮಾವು ಕ್ಲಾಸಿಕ್.ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರ ಸಾಕಷ್ಟು ಕೆಲಸಗಳು ಇಂದಿಗೂ ಜನಜನಿತ.ಅವರ ಕತೆಗಳು, ಕವನಗಳು, ಅಂಕಣ ಬರಹಗಳು, ಕಾದಂಬರಿಗಳನ್ನು ಓದುವಾಗಅವರ ಸಂಪೂರ್ಣ ನಿಲುವು ಖಚಿವಾಗುತ್ತದೆ.ಬದ್ಧತೆ, ತಲ್ಲೀನತೆಗೆ ಅವರೇ ಮಾದರಿ.ವಿವಿಧ ಕ್ಷೇತ್ರಗಳಲ್ಲಿ ವೈವಿಧ್ಯತೆಯನ್ನು ಕಾಣಿಸಿದ ಅವರು ತೊಡಗಿಕೊಳ್ಳದ ಕ್ಷೇತ್ರಗಳೇ ಇಲ್ಲವೆನ್ನುವಷ್ಟು ಸಾಧಿಸಿದವರು. ಸ್ವತಃ ಪ್ರಾಧ್ಯಾಪಕರಾಗಿದ್ದು, ಈಗಲೂ ಶೈಕ್ಷಣಿಕ ಸವಾಲುಗಳಿಗೆ ಸಕಾಲದಲ್ಲಿ ಧಾವಿಸಿ ನೀಡುವ ಸಲಹೆಗಳು, ರಾಜಕೀಯವಾಗಿ ಒದಗಿಸುವ ಮಾರ್ಗದರ್ಶನಗಳು ಮುತ್ಸದ್ದಿಯ ಅಸಾಧಾರಣಗುಣದವು. ಇಷ್ಟೆಲ್ಲಾ ಜ್ಞಾನ ದಕ್ಕಿದ್ದೂ ಕೂಡ ಪತ್ರಿಕೆ ಮತ್ತು ಅಂತರ್ಜಾಲದಲ್ಲಿಯೇ.ಇಷ್ಟೆಲ್ಲ ಹೇಳಲು ಅರ್ಹತೆಯಿದೆಯೋ ಇಲ್ಲವೋ, ಸಂಕೋಚ ಮುಜುಗರದಿಂದಲೇ ಹೇಳಬೇಕಾಯಿತು. ಗ್ರಾಮೀಣ ಹಿನ್ನೆಲೆಯಿಂದ ಬದುಕನ್ನು ರೂಪಿಸಿಕೊಂಡು, ಸತತ ಪ್ರಯತ್ನ ಹಾಗೂ ನಿರಂತರ ಬದ್ಧತೆಯ ಛಲದ ಮೂಲಕ ಅಸಾಮಾನ್ಯ ಚಿಂತಕರಾದ, ಸಾಂಸ್ಕೃತಿಕ ಚಾಲಕರಾದ ಬಿ.ಆರ್.ಮೇಷ್ಟು ಜನ್ಮದಿನ ಅಕ್ಟೋಬರ್ ತಿಂಗಳಿನಲ್ಲಿಯೇ ಬರುತ್ತದೆ. ಈ ಹಿಂದೆ ಅವರ ಬಳಗ ಏರ್ಪಡಿಸಿದ್ದ ‘ಬರಗೂರು-೭೦, ವಿಚಾರ ಸಂಕಿರಣ’ ದಲ್ಲಿ ಪಾಲ್ಗೊಂಡ ಖುಷಿ ನನ್ನದು.ಈಗಲೂ ಇದೇ ಅಕ್ಟೋಬರ್ ೨೯ ರಂದು ಬೆಳಗ್ಗೆ ಅವರ ಶಿಷ್ಯವರ್ಗ ರಾಷ್ಟ್ರೀಯ ವೆಬಿನಾರ್ ಆಯೋಜಿಸಿ ಗುರುಗಳ ಬಗ್ಗೆ ಹಿರಿಯ ಲೇಖಕರಿಂದ ಮಾತನಾಡಿಸಲಿದ್ದಾರೆ.ಶೀರ್ಷಿಕೆ- ನಮ್ಮ ಮೇಷ್ಟ್ರು, ನಮ್ಮ ಹೆಮ್ಮೆ. ಹೆಮ್ಮೆಯ ಸಂಗತಿಯೇ. ಬರಗೂರರ ಬಳಗ, ಅಭಿಮಾನಿಗಳು, ಅವರ ಅನುಯಾಯಿಗಳ ಸಂಖ್ಯೆ ಅಪಾರ. ಅವರ ಕುರಿತು ಅದೆಷ್ಟೋ ಪಿ.ಎಚ್.ಡಿ.ಗಳಾಗಿವೆ. ಬರಹಗಳು, ಲೇಖನಗಳು ಬಂದಿವೆ. ಆ ಮಟ್ಟಕ್ಕಲ್ಲದಿದರೂ ಕಿರು ಅಭಿಮಾನಿಯಾಗಿ ಅಕ್ಷರಗಳಲ್ಲಿ ಹಿಡಿಯಲು ಸಾಧ್ಯವಾಗದೆ ಕೆಲವೇ ಪದಗಳಲ್ಲಿ ಗ್ರಹಿಕೆಗೆ ದಕ್ಕಿದಂತೆ ದಾಖಲಿಸಲು ಯತ್ನಿಸಿರುವೆ. ************************************** ಫೋಟೊ ಆಲ್ಬಂ
You cannot copy content of this page