ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಗಜಲ್ ವಿಶೇಷ

ಗಜಲ್ ಅಲ್ಲಾಗಿರಿರಾಜ್ ಕನಕಗಿರಿ. ಒಮ್ಮೆ ಯೋಚಿಸು ನೋಡು ಗಂಟು ಬಿದ್ದರೆ ಬಿಚ್ಚುವುದಿಲ್ಲ ಬದುಕು.ಒಮ್ಮೆ ಮನ‌ಸ್ಸಿಗೆ ಕೇಳಿ ನೋಡು ಮೈಗೆ ಮೈ ಉಂಡರೆ ಅಗಲುವುದಿಲ್ಲ ಬದುಕು. ಈ ಸುಖ ದುಃಖಗಳ ಆಟವೇ ಹೀಗೆ ಕಾಡಿಸಿ ಕೂಡಿಸಿ ಜೀವನ ಮುಗಿಸುತ್ತವೆ.ಒಮ್ಮೆ ಕನಸಿ ಕರೆದು ನೋಡು ಕತ್ತಲಿಗೂ ಸುಳಿವು ನೀಡುವುದಿಲ್ಲ ಬದುಕು. ದಿನಗಳು ಕಳೆದಂತೆ ಭಾರವಾಗುತ್ತದೆ ಜೀವನ ಸಾವಿನ ಎದುರು.ಒಮ್ಮೆ ಆತ್ಮ ಹೊರಗಿಟ್ಟು ನೋಡು ಹಗಲಿಗೆ ಅರ್ಥವಾಗುವುದಿಲ್ಲ ಬದುಕು. ಎಲ್ಲ ಸುಳ್ಳು ಮನೆ ಮಾತು ಬಂಧು ಬಳಗ ಮರಣ ಒಂದೇ ದಾಖಲೆ.ಒಮ್ಮೆ ಹೆಣವಾಗಿ ನೋಡು ಯಾರ ಹೆಗಲಿಗೂ ಭಯವಾಗುವುದಿಲ್ಲ ಬದುಕು. ಒಮ್ಮೆ ಯೋಚಿಸಿ ನೋಡು ಮನಸು ತಳುಕು ಬಿದ್ದ ಮೇಲೆ ಬಿಡುವುದಿಲ್ಲ ಬದುಕುಒಮ್ಮೆ “ಗಿರಿರಾಜ”ನ ಒಳಗೆ ಬಂದು ನೋಡು ಎದ್ದು ಹೋಗಲು ದಾರಿ ಬಿಡುವುದಿಲ್ಲ ಬದುಕು. ನೀವು ಮುಳ್ಳಿನ ಗಿಡ ನೆಟ್ಟು ಖುಷಿ ಪಡಬೇಡಿ.ಅಲ್ಲಿ ಒಂದು ಹೂ ಸುಗಂಧ ಬೀರುತ್ತದೆ ಮರೆಯಬೇಡಿ. ನೀವು ಪ್ರೇಮವನ್ನು ದೇಹದೊಡನೆ ಸೇರಿಸಿಕೊಂಡು ಸುಖ ಪಡಬೇಡಿ.ಅಲ್ಲಿ ಒಂದು ಆತ್ಮ ತೊಟ್ಟು ಪ್ರೀತಿ ಬಯಸುತ್ತದೆ ಮರೆಯಬೇಡಿ. ನೀವು ಶೃಂಗಾರವನ್ನು ಹೆಣ್ಣಿಗೆ ಮೀಸಲೆಂದು ಆಡಿಕೊಳ್ಳಬೇಡಿ.ಅಲ್ಲಿ ಒಂದೊಂದು ಕಣ್ಣುಗಳು ನಿಮ್ಮ ಮನಸ್ಸಿನೊಳಗೇ ಕದ್ದು ನೋಡುತ್ತವೆ ಮರೆಯಬೇಡಿ. ನೀವು ಪ್ರೇಮಿಯಾಗಲು ಹೋಗಿ ವಿರಹದ ಮಧುಶಾಲಾ ಸೇರಬೇಡಿ.ಅಲ್ಲಿ ಒಂದು ಮತ್ಲಾ ಸಾವಿರ ಗಜಲ್ ಆಗುತ್ತದೆ ಮರೆಯಬೇಡಿ. ನೀವು ಸಾವಿಗಂಜಿ ಬಯಲ ಮುಂದೆ ಕಥೆ ಕಟ್ಟಬೇಡಿ.ಅಲ್ಲಿ ಒಂದು ಜೀವ “ಗಿರಿರಾಜ”ನಿಗಾಗಿ ಮುಪ್ಪಾಗಿ ಹೆಪ್ಪಾಗಿ ಉಪ್ಪಾಗುತ್ತದೆ ಮರೆಯಬೇಡಿ. ***********************************

Read Post »

ಇತರೆ, ಗಜಲ್ ವಿಶೇಷ

ಗಜಲ್ ಶಶಿಕಾಂತೆ ತಂಗಾಳಿಗೆ ಮೈ ಮರಗಟ್ಟಿ ನಿನ್ನ ನೆನಪು ಅತಿಯಾಗುತಿದೆ ನೀ ಬಳಿ ಬರಲಾರೆಯಾನಿನ್ನ ತೋಳೊಳಗೆ ಬಿಗಿಯಾಗಿ ಬಂಧಿಸಿ ಮಧುಚಂದ್ರದ ಸುಖ ನೀಡಲಾರೆಯಾ. ನನ್ನ ನಿನ್ನ ಹೃದಯಗಳು ಒಂದಾದಾಗ ಆದ ಅನುಭವದ ಬಯಕೆ ಆಗುತಿದೆನಮ್ಮೊಲವ ಬಗ್ಗೆ ನಾ ಕಂಡ ಕನಸುಗಳನು ನನಸು ಮಾಡಲಾರೆಯಾ ನಿನ್ನನ್ನಪ್ಪಿ ಎದೆಗೊರಗಿ ದೊರೆ ಎನ್ನುವಾಗ ಅದೇನೋ ಸಂತಸ ನನ್ನೊಳಗೆನೀ ಬಂದು ಕುರುಳ ಸವರಿ ರಾಣಿ ಎಂದು ಮನಸ್ಪೂರ್ತಿಯಾಗಿ ಕರೆಯಲಾರೆಯಾ. ಪ್ರೇಮ ಕಾನನದೊಳಗೆ ನಿನ್ನೊಡನೆ ಕೈಕೈ ಬೆಸೆದು ವಿಹರಿಸುವ ಹುಚ್ಚು ಆಸೆನೀನಿದ್ದರೆ ಅದೆಷ್ಟು ಸೊಗಸು,ನನ್ನ ಬೇಸರ,ಒಂಟಿತನವ ನೀಗಲಾರೆಯಾ ಇರುಳು ಶಶಿಯ ಬೆಳಕಲ್ಲಿ ಮನಸೊಳಗೇ ನಿನ್ನೊಡನೆ ಮೌನ ಸಂಭಾಷಣೆ ನನ್ನದುಮನದೊಳಗೆ ಸೇರಿಕೊಂಡು ನಿದಿರೆ ಕದ್ದವನು ತನುವ ತಂಪಾಗಿಸಲಾರೆಯಾ ಅಧರಗಳಲಿ ಜಿನುಗುವ ಮಧು ಹೀರಬೇಕಲ್ಲವೆ ಅನುಮತಿ ನೀಡು ಸಖಿಹೃದಯ ವೀಣೆಯಲಿ ಪ್ರೇಮರಾಗ ನುಡಿಸಬೇಕಲ್ಲವೆ ಅನುಮತಿ ನೀಡು ಸಖಿ ಮಿಂಚಿನಂತೆ ಹೊಳೆವ ಕಣ್ಣ ಕಾಂತಿ ಅಯಸ್ಕಾಂತದಂತೆ ಎಳೆಯುತಿದೆ ನನ್ನನುನನ್ನ ನಿನ್ನ ಸ್ನೇಹಸಲಿಗೆಗೆ ಕಣ್ಣುಗಳು ಸೇರಬೇಕಲ್ಲವೆ ಅನುಮತಿ ನೀಡು ಸಖಿ ಮದ್ದು ಮುದ್ದೆಂದು ಮಾತಾಡುವ ನಿನ್ನ ರೀತಿ ಚಂದ ಮರೆಯಲುಂಟೇ ಅದನುನನ್ನೆದೆಗೊರಗಿಸಿಕೊಂಡು ನಿನ್ನ ಹೆಸರನಲ್ಲಿ ಕೇಳಿಸಬೇಕಲ್ಲವೆ ಅನುಮತಿ ನೀಡು ಸಖಿ ಹಾಲಲಿ ಮಿಂದು ಬಂದಂತೆ ಮೃದುವಾದ ತನುವಿನೊಡತಿ ನೀನು ಸದಾ ಷೋಡಶಿಕಿಬೊಟ್ಟೆಯಲ್ಲಿ ಮುತ್ತಿನ ಚಿತ್ತಾರ ಬಿಡಿಸಬೇಕಲ್ಲವೆ ಅನುಮತಿ ನೀಡು ಸಖಿ ನಮ್ಮ ಸರಸವ ಮೋಡದ ಮರೆಯಿಂದ ನೋಡುವ ಶಶಿಗಿಲ್ಲದ ನಾಚಿಕೆ ನಿನಗೇತಕೆಕನಸಲಿ ಕಾಣುತ್ತಿದ್ದ ನಮ್ಮಾಸೆ ತೀರಿಸಿ ಕೊಳ್ಳಬೇಕಲ್ಲವೆ ಅನುಮತಿ ನೀಡು ಸಖಿ ******************************************

Read Post »

ಇತರೆ, ಗಜಲ್ ವಿಶೇಷ

ಗಜಲ್ ರತ್ನರಾಯ ಮಲ್ಲ ಎಣ್ಣೆ, ಬತ್ತಿಗಳು ಬಜಾರಿನಲ್ಲಿ ಬಿಕರಿಯಾಗುತ್ತಿವೆ ಗಾಲಿಬ್ದೀಪ ಹಚ್ಚುವ ಮನಸ್ಸುಗಳು ಮರೆಯಾಗುತ್ತಿವೆ ಗಾಲಿಬ್ . ನಮ್ಮ ಮನೆಗಳು ಕಂಗೊಳಿಸುತ್ತಿವೆ ಬಣ್ಣ ಬಣ್ಣದ ಬೆಳಕಿನಲ್ಲಿಮನಗಳು ಕತ್ತಲೆಯ ಗೂಡಾಗಿ ಕೊಳೆಯಾಗುತ್ತಿವೆ ಗಾಲಿಬ್ ಬುದ್ಧಿವಂತಿಕೆಯ ನೆರಳಲ್ಲಿ ಗುಲಾಮಿಯು ಚಿಗುರೊಡೆಯುತಿದೆಭವ್ಯ ಚಿಂತನೆಯ ಆಪ್ತ ಕನಸುಗಳು ಪರಾರಿಯಾಗುತ್ತಿವೆ ಗಾಲಿಬ್ ಆಡಂಬರದ ಆಲಯವೇ ಈ ಸಮಾಜವನ್ನು ನಿಯಂತ್ರಿಸುತಿದೆಸಂತೃಪ್ತಿ-ಸರಳತೆಯ ದಿನಗಳು ಮರಿಚೀಕೆಯಾಗುತ್ತಿವೆ ಗಾಲಿಬ್ ‘ಮಲ್ಲಿ’ ಯ ಮನವು ಆರದ ಬೆಳಕಿಗಾಗಿ ಕನವರಿಸುತಿದೆ ಇಂದುಪರಸ್ಪರ ಪ್ರೀತಿಸುವ ಹೃದಯಗಳು ಒಂಟಿಯಾಗುತ್ತಿವೆ ಗಾಲಿಬ್.. ನಿನ್ನೊಂದಿಗೆ ಮಾತನಾಡುತ ಮಸಣವನ್ನು ಚುಂಬಿಸುವ ಆಸೆನಿನ್ನಯ ಹೆಗಲ ಮೇಲೆ ಅರೆ ಘಳಿಗೆಯಾದರೂ ಮಲಗುವ ಆಸೆ ಸ್ಮಶಾನಕ್ಕೂ ಭವ್ಯವಾದ ಪರಂಪರೆಯಿದೆ ನಮ್ಮ ಈ ನಾಡಿನಲ್ಲಿನನ್ನ ನೋಡುವ ನಿನ್ನ ಕಂಗಳಲ್ಲಿ ಸಂತೋಷವನ್ನು ಅರಸುವ ಆಸೆ ನಾನು ತಲೆ ಇಡುವ ನೆಲವು ಸಮತಟ್ಟಾಗಿದೆ ನಿನ್ನಯ ದೆಸೆಯಿಂದಪ್ರೇಮಗೀತೆಯನ್ನು ಕೇಳದ ಕಿವಿಗಳಿಗೆ ‌ಚರಮಗೀತೆ ಆಲಿಸುವ ಆಸೆ ಮಣ್ಣಿನ ಹೆಂಟೆಗಳನ್ನು ಎಸೆಯದೆ ನನ್ನೆದೆಯ ಮೇಲೆ ಜೋಡಿಸುಮಣ್ಣು ಮುಚ್ಚುವವರೆಗೆ ನಿನ್ನ ಸಾಂಗತ್ಯದ ಸವಿ ಪಡೆಯುವ ಆಸೆ ದಪ್ಪ ಕಲ್ಲುಗಳಿಂದ ‘ಮಲ್ಲಿ’ ಗೆ ಗೋರಿ ಕಟ್ಟಬೇಡ ನೋವಾಗುವುದುಸಸಿಯನ್ನಾದರೂ ನೆಡು ನೆರಳಲ್ಲಿ ನಿನ್ನ ನೆನೆಸುತ್ತ ಜೀವಿಸುವ ಆಸೆ *************************************

Read Post »

ಇತರೆ, ಗಜಲ್ ವಿಶೇಷ

ಗಜಲ್ ತೇಜಾವತಿ ಹೆಚ್.ಡಿ. ಅನುಭವಿಸುವಿಯಾದರೆ ನನ್ನೆಲ್ಲಾ ನೋವುಗಳೂ ನಿನ್ನರಸಿ ಬಳಿಬರುವವು ಸಖದೂಷಿಸುವಿಯಾದರೆ ನನ್ನೊಲವಿನ ಕ್ಷಣಗಳೂ ನಿನ್ನನ್ನು ತೊರೆದೋಡುವವವು ಸಖ ರಕ್ಷಿಸುವಿಯಾದರೆ ನಿನ್ನ ತೋಳ್ತೆಕ್ಕೆಯಲಿ ಅಲುಗಾಡದೆ ಸ್ತಬ್ಧವಾಗಿರುವೆನುಭಕ್ಷಿಸುವಿಯಾದರೆ ನನ್ನಿರುವಿಕೆಯ ಸುಳಿವುಗಳೂ ಹಿಂಬಾಲಿಸದಿರುವವು ಸಖ ಪೂಜಿಸುವೆಯಾದರೆ ಪಯಣದುದ್ದಕ್ಕೂ ನಿನ್ನಡಿಗಳಿಗೆ ಮೆಟ್ಟಿಲಾಗಿ ನಿಲ್ಲುವೆನುಧಿಕ್ಕರಿಸುವಿಯಾದರೆ ನನ್ನಡಿಯ ಧೂಳು ಕಣಗಳೂ ಸೋಕದಿರುವವು ಸಖ ಗೌರವಿಸುವಿಯಾದರೆ ಮನದ ಮೂಲೆಯಾದರೂ ಸಾಕು ಅಸ್ತಿತ್ವಕ್ಕೆಅವಮಾನಿಸುವಿಯಾದರೆ ನೆನಪುಗಳು ಹೃದಯದಿಂದಲೇ ಬೇರುಸಹಿತ ಕಿತ್ತೊಗೆಯುವವು ಸಖ ಪ್ರೇಮಿಸುವಿಯಾದರೆ ನೂರು ದಿನದ ಬದುಕು ಮೂರೇ ಕ್ಷಣವಾದರೂ ತೃಪ್ತಿ ‘ತೇಜ’ದ್ವೇಷಿಸುವಿಯಾದರೆ ಸಹಸ್ರ ವರ್ಷಗಳೂ ಕೂಡ ಸಂಕೋಲೆಯ ತೊಡಿಸುವವು ಸಖ ನಯವಾದ ಹಂಗಿನ ಮಾತು ಕಿವಿಯ ಪೊಟರೆಯ ಹರಿಯುತಿದೆ ಸಾಕಿದ್ವೇಷಭರಿತ ನೋಟದ ಈಟಿ ಹೃದಯದ ಗೂಡನು ಇರಿಯುತಿದೆ ಸಾಕಿ ನಾಲಿಗೆ ತುದಿಯಲ್ಲಿನ ವ್ಯಂಗ್ಯ ನುಡಿಗಳು ಬೆಂಕಿಯ ಕಿಡಿಗಳಾಗಿವೆ ಈಗತಣ್ಣನೆಯ ಹಿಮವು ತನ್ನ ಗುಣವ ತೊರೆದು ಬಿಸಿಯೇರುತಿದೆ ಸಾಕಿ ಮಮಕಾರದ ಮಾಯೆ ಸರಿತಪ್ಪುಗಳ ದಾರಿಯನ್ನೇ ಕತ್ತಲಾಗಿಸಿದೆದೀಪ ತಾನುರಿದು ಬೆಳಕನೂಡುತ್ತಾ ಛಾಯೆಯಲಿ ಮರೆಯಾಗುತಿದೆ ಸಾಕಿ ಸಂಬಂಧದ ಬೇರುಗಳ ನಂಬಿಕೆಗಳು ಮಣ್ಣು ಪಾಲಾಗಿವೆ ಇಂದುಸಮಯಸಾಧಕತನ ಚಳಿಗೆ ತನ್ನ ಮೈ ಕಾಯಿಸುತಿದೆ ಸಾಕಿ ತುಟಿಯಂಚಿನ ಅಣುಕು ನಗೆ ಮುಖವಾಡದ ರಹಸ್ಯವನ್ನು ತೆರೆದಿಡುತ್ತಿದೆ ಇಲ್ಲಿಉಸಿರಾಡುತ್ತಿರುವ ದುರ್ಗಂಧ ಮನಸ್ಸಿನ ಕೋಣೆಯನ್ನು ಮಲಿನಗೊಳಿಸುತಿದೆ ಸಾಕಿ ತುಂಬಿರುವ ಸಿರಿಸಂಪತ್ತಿನಲ್ಲೂ ಏಕಾಂಗಿಭಾವ ಇಣುಕಿ ನೋಡುತ್ತಿದೆ ‘ತೇಜ’ಹತ್ತಲು ನೆರವಾದ ಏಣಿ ಗೆದ್ದಲಿಡಿದು ಭೂಮಿಯೊಳಗೆ ಲೀನವಾಗುತಿದೆ ಸಾಕಿ ****************************************

Read Post »

ಇತರೆ, ಗಜಲ್ ವಿಶೇಷ

ಗಜಲ್ ಪ್ರತಿಮಾ ಕೋಮಾರ ವೈಷಮ್ಯದ ಮನಸುಗಳ ಪ್ರೀತಿಯ ಮಾತಿನಿಂದ ಸೆಳೆಯಬೇಕು ನಾವುಒಡೆದ ಕನಸುಗಳ ಬೆಳಕಿನ ದೀಪವಿಟ್ಟು ಹೊಸೆಯಬೇಕು ನಾವು ತಾಳ್ಮೆಯಿಲ್ಲದ ಬದುಕು ಸರಿಯ ದಡ ಸೇರುವುದೇ?ವೃಕ್ಷದ ಫಲ ಹಣ್ಣಾಗಿ ಮಾಗುವವರೆಗೆ ಕಾಯಬೇಕು ನಾವು ಸುಖ ದುಃಖಗಳು ಎಲ್ಲರ ಜೀವನದ ಇಬ್ಬದಿಗಳುನೋವ ಕಂಗಳ ಸಾಂತ್ವನದ ಹಾಡಿನಿಂದ ನಗಿಸಬೇಕು ನಾವು ಸಾಧನೆಯ ಹಾದಿಯಲಿ ಮಲ್ಲಿಗೆಯ ಹಾಸಿರದು ಎಂದಿಗೂಎಡರು ತೊಡರುಗಳನ್ನು ಹಠದಿಂದ ಮೀರಿ ಜಯಿಸಬೇಕು ನಾವು ಹುಟ್ಟಿದ ಎಲ್ಲಾ ಜೀವಿಗಳು ಬಾಳ ಸವೆಸಿ ಹೋಗುವುವುಬಾಡಿದ “ಪ್ರತಿ “ಬದುಕ ಮಾಣಿಕ್ಯವಾಗಿಸಲು ಪ್ರಯತ್ನಿಸಬೇಕು ನಾವು ಶೂನ್ಯ ಹೃದಯವ ಹದವಾಗಿ ಪ್ರೀತಿಯೆರೆದು ತುಂಬಿಸುವವ ನೀನುಪಕ್ಕಕ್ಕಿಟ್ಟ ಕನಸುಗಳ ಹೊಸದಾಗಿ ಹೊಸೆದು ಬಿತ್ತುವವ ನೀನು ಧರೆಗೆ ಬಿದ್ದ ಬೀಜ ಮೊಳೆಯಲು ತೇವ ಬೇಕಲ್ಲವೇ?ಕೊನರಿದ ಆಸೆಗಳಿಗೆ ಉದಕವೆರದು ಚಿಗುರಿಸುವವ ನೀನು ಕಾವು ಹೆಚ್ಚಾದಂತೆ ಚಿಮ್ಮುವ ಚಿಲುಮೆಯು ಕೂಡಾ ಬತ್ತುವುದುಬದುಕ ಬಡಿದಾಟದಲ್ಲಿ ಭರವಸೆಯೆರೆದು ಬೇರಿಳಿಸುವವ ನೀನು ನಂಬಿಕೆಯೇ ನಾಶವಾದರೆ ನಡೆಗೆಲ್ಲಿಹುದು ಗತ್ತುಪ್ರತಿ ಹೆಜ್ಜೆಗೂ   ಧೈಯ೯ ತುಂಬಿ ನೇಹವೆರದು ನಡೆಸುವವನು ನೀನು ಹೃದಯಗಿಡಕಿ ತೆರೆದಿದ್ದರೆ ತಾನೇ ಗಾಳಿ,ಬೆಳಕು,ಗಂಧಮುಚ್ಚಿದ ಕವಾಟವ ಹಗುರಾಗಿ ಸರಿಸಿ ಚೈತನ್ಯವೆರೆದು ಬದುಕಿಸುವವ ನೀನು ***********************************

Read Post »

ಇತರೆ, ಗಜಲ್ ವಿಶೇಷ

ಗಜಲ್ ಸ್ಮಿತಾ ಭಟ್ ಎದೆಯ ಮಾತುಗಳು ಮೊರೆಯುತ್ತಿದೆ ನನಗೂ ನಿನಗೂ/ಅಂತರಂಗದ ಆಹ್ವಾನ ಹಿತನೀಡುತ್ತಿದೆ ನನಗೂ ನಿನಗೂ/ ಕಣ್ಣ ಗೊಳದಲಿ ನೂರಾರು ಕನಸುಗಳ ಚಲನವಲನನಭವ ತೋರಿಸಿ ಹಗುರಾಗಬೇಕಿದೆ ನನಗೂ ನಿನಗೂ/ ಆತುಕೊಂಡೇ ಬದುಕುವ ಹಂಬಲ ಕೆರಳುತ್ತದೆ ಕೆಲವೊಮ್ಮೆಸಾಕೆಂದು ಸರಿಸದೆ ಒಳಗೊಳ್ಳುವುದಿದೆ ನನಗೂ ನಿನಗೂ/ ಮೋಹದ ಸೆಳೆತಕೆ ಮನಸೋತ ವಾಂಛೆಯಲ್ಲವಿದು ಗೆಳೆಯಾಈಗಷ್ಟೇ ಹನಿಯಾಗಿದ್ದೇನೆ ಕಡಲಾಗುವುದಿದೆ ನನಗೂ ನಿನಗೂ/ ಪಯಣದ ತಿರುವುಗಳಿಗೆ ಹೆಸರಲಿಗೆಯ ಹಂಗೇಕೆ ದೊರೆಯೇಮರೆಯದೇ ಸರಿ ದಾರಿಯಲಿ ಕೂಡುವುದಿದೆ ನನಗೂ ನಿನಗೂ/ ಮೌನವಾಗಿದ್ದೇ ಮುನ್ನುಡಿ ಬರೆದಾಗಿದೆ ಬದುಕಿಗೆ ಓದಿ ಬಿಡುಇಲ್ಲಬಿಡು ಮಾತಾಗಿ ಮನಕದಡುವ ಇರಾದೆ ನನಗೂ ನಿನಗೂ/ ನಿಶ್ಚಿತವಾಗಿದೆ ಕಾಯಲೇಬೇಕೆಂಬ ತಪನೆ “ಮಾದವಾ”ಕೊಸರದಿರು ಜನ್ಮ ಜನ್ಮದ ಬೆಸುಗೆಯಿದೆ ನನಗೂ ನಿನಗೂ/ ನಿನ್ನ ಅಸಹನೆಯ ಒಂದು ತುಣುಕು ಸಾಕು ಬದುಕು ಸಾಕೆನಿಸಲು/ನಿನ್ನ ಒಲವಿನ ಒಂದು ಬಿಂದು ಸಾಕು ಕನಸು ತುಂಬಿಕೊಳ್ಳಲು/ ಪ್ರತಿ ಚಣವೂ ನಗುವೇ ಸ್ಪುರಿಸಬೇಕೆಂಬುದು ಅತಿಯಾಯಿತೇನುನಿನ್ನ ಇರುವಿಕೆಯ ಒಂದು ಛಾಯೆ ಸಾಕು ನಡೆದು ಸಾಗಲು/ ಮನವೇಕೆ ಸದಾ ತಹತಹಿಸುತ್ತದೆ ನಿನ್ನ ಅನುಪಸ್ಥಿತಿಯಲ್ಲಿಕಳೆದು ಹೋಗುವ ಒಂದು ಮಾತು ಸಾಕು ಮನಸು ಒಡೆಯಲು/ ಮುಗಿಲಿಗೆ ಹಗ್ಗ ಕಟ್ಟಿ ಜೀಕುವ ಹುಚ್ಚು ಸಾಹಸವೇಕೆ ಬೇಕುಭರವಸೆಯಲಿ ಚಾಚಿದ ಮರದ ಒಂದು ರೆಂಬೆ ಸಾಕು ಗೂಡು ಕಟ್ಟಲು/ ಅಂತರಂಗದ ಗಾಯಕ್ಕೆ ಒಲವ ಸವರುತ್ತಿರು “ಮಾಧವ”ನಿನ್ನದೊಂದು ಕುಡಿನೋಟ ಸಾಕು ಮೌನ ಮುರಿಯಲು/ *********************************

Read Post »

ಇತರೆ, ಗಜಲ್ ವಿಶೇಷ

ಗಜಲ್ ಪ್ರಭಾವತಿ ಎಸ್ ದೇಸಾಯಿ ವಿರಹದುರಿಗೆ ಜೀವವು ಪತಂಗದಂತೆ ಸುಟ್ಟು ಶವವಾಗಲಿ ರಾತ್ರಿಕಂಡ ಕನಸ ಹೂ ದಳಗಳು ಉದುರಿ ಉಸಿರು ಸಮಾಧಿಯಾಗಲಿ ರಾತ್ರಿ ಎದೆಭಾರವಾಗಿದೆ ನೆನಪಿನ ಗಂಟು ಹೊತ್ತು ಬಂಡಿ ಸಾಗಲಿ ರಾತ್ರಿಬದುಕು ಹಗುರಾಗಲು ಬೆಂದು ಉರಿವ ದೇಹಕೆ ತಂಬೆಳಕಾಗಲಿ ರಾತ್ರಿ ದಣಿದ ಕಣ್ಣ ರೆಪ್ಪೆಗಳು ನಿಂತು ನಿದ್ದೆಗೆ ಬೇಲಿಯಾಗಲಿ ರಾತ್ರಿಮಧುರ ಗಳಿಗೆಗಳ ಕಾಯುವ ಹೃದಯಗಳು ಒಲಿದು ಒಂದಾಗಲಿ ರಾತ್ರಿ ಮನದಾಳದಲ್ಲಿ ಎದ್ದ ಪ್ರಶ್ನೆಗಳಿಗೆ ಉತ್ತರವಾಗಲಿ ರಾತ್ರಿನೊಂದ ಜೀವಿಗಳಿಗೆ ಜಗದ ಎಲ್ಲ ಸುಖವು ಅನುಭವವಾಗಲಿ ರಾತ್ರಿ ಅಗಲಿಕೆ ನೋವು ಹೊದ್ದ ಮೌನ ಸರಿಯಲು ತಂಗಾಳಿಯಾಗಲಿ ರಾತ್ರಿಅಲೆವ ಜೋಗಿಗೆ ಚಂದಿರ”ಪ್ರಭೆ”ಮುಗಿಲ ಪಲ್ಲಂಗವಾಗಲಿ ರಾತ್ರಿ ಉಸಿರು ಉಸಿರಲಿ ಬೆರೆಸಿ ನಾದ ಹೊರಡಿಸಿದವನೆ ಎಲ್ಲಿ ಮರೆಯಾದೆಒಲಿದ ಹೃದಯ ವೀಣೆ ಮೀಟಿ ಭಾವತುಂಬಿದವನೆ ಎಲ್ಲಿ ಮರೆಯಾದೆ ಯಮುನೆಯ ಅಲೆಗಳು ಎದೆ ಉಸಿರಾಟ ಏರಿಳಿತ ಎಣಿಸುತಿವೆ ನೋಡುವಿರಹ ತಾಪದಲಿ ಮನ ಕಮಲ ಬಾಡಿಸಿದವನೆ ಎಲ್ಲಿ ಮರೆಯಾದೆ ಯುಗ ಯುಗಗಳಿಂದ ರಾಧೆ ಯಂತೆ ಆರಾಧಿಸುತಿರುವೆ ನಿನ್ನನ್ನುಜನುಮ ಜನುಮದ ಪ್ರೀತಿ ಬೆಸುಗೆ ಕಳಚಿದವನೆ ಎಲ್ಲಿ ಮರೆಯಾದೆ ಅನುರಾಗದ ಎಳೆ ಎಳೆಯಿಂದ ಹೆಣೆದ ಒಲವಿನ ಶಾಲು ಹೊದ್ದಿರುವೆಪ್ರೇಮಿಗಳನು ಜನ ದೂರುವಂತೆ ಮಾಡಿದವನೆ ಎಲ್ಲಿ ಮರೆಯಾದೆ ಪ್ರೇಮದ ಹಣತೆ ಬತ್ತಿ ಕ್ಷೀಣಿಸದಂತೆ ಕಾಯಬೇಕು ಬಾಳಿನಲಿಒಲವ ತೈಲ ಹಾಕದೆ “ಪ್ರಭೆ” ನಂದಿಸಿದವನೆ ಎಲ್ಲಿ ಮರೆಯಾದೆ **************************

Read Post »

ಇತರೆ, ಗಜಲ್ ವಿಶೇಷ

ಗಜಲ್ ಮದುಶಾಲೆಯ ಹೊಸ್ತಿಲಲ್ಲಿ…

ವಿಶೇಷ ಲೇಖನ ಗಜಲ್ ಮದುಶಾಲೆಯ ಹೊಸ್ತಿಲಲ್ಲಿ… ಡಾ. ಮಲ್ಲಿನಾಥ ಎಸ್. ತಳವಾರ        ಪ್ರೀತಿಯೇ ಈ ಜಗದ ಸುಂದರ ಬುನಾದಿ. ಎಲ್ಲ ಚಟುವಟಿಕೆಗಳಿಗೆ ಹೃದಯ ಬಡಿತದ ಪಿಸುಮಾತೆ ಕಾರಣ. ಸ್ಪರ್ಶಕ್ಕೂ ಎಟುಕದ ಅನುಭವಗಳೆಲ್ಲವನ್ನು ಕಟ್ಟಿಕೊಡುವುದೆ ಸಾಹಿತ್ಯ. ಆ ಸಾಹಿತ್ಯದ ಸಸಿಗೆ ನಮ್ಮ ಭಾವನೆಗಳೆ ವರ್ಷಧಾರೆ..!! ಭಾವಗಳ ಸಂಗಮವೇ ಆ ಅಕ್ಷರ ಅಕ್ಷಯ ಪಾತ್ರೆ. ಸುಂದರ ಸಮಾಜದ ಪ್ರತಿಬಿಂಬವನ್ನು ಪ್ರತಿನಿಧಿಸುವ ದರ್ಪಣವೇ‌ ಈ ಅಕ್ಷರ ಲೋಕ..!! ಇದೊಂದು ಭಾವನೆಗಳ ಕಲ್ಪನಾತ್ಮಕ ಪರಪಂಚ. ಇದು ಕ್ರಿಯಾಶೀಲತೆ, ಭಾಷೆ, ವರ್ಣಗಳು ಮತ್ತು ಛಂದಸ್ಸಿನ ಸುಂದರ ಆಪ್ತವಾದ ಹೊದಿಕೆಯನ್ನು ಹೊಂದಿರುತ್ತದೆ. ಇದು ಸಮಾಜದ ಹಿತವನ್ನು ಕಾಪಾಡುವ ಪರಂ ಜ್ಯೋತಿ. ಈ ಹೊಂಗಿರಣದಿಂದ ಯಾವ ವಿಷಯವೂ ಹೊರತಾಗಿ ಉಳಿದಿಲ್ಲ, ಉಳಿಯಲು ಸಾಧ್ಯವೂ ಇಲ್ಲ. ಅನನ್ಯ ಪಂಚೇಂದ್ರಿಯಗಳ ಅನುಪಮ ಅನುಭವವನ್ನು ಉಣಬಡಿಸುವ ಭಾಷೆಯ ಸಾಂಗತ್ಯದಲ್ಲಿ ಹೆಜ್ಜೆ ಹಾಕುವ ಸಾಹಿತ್ಯಕ್ಕೆ ಯಾವುದೆ ನಿರ್ದಿಷ್ಟವಾದ ಭಾಷೆಯ, ಗಡಿಯ ಸೀಮೆಯಿಲ್ಲ. ನಮ್ಮ ಕನ್ನಡದ ಅರ್ವಾಚೀನ ಸಾಹಿತ್ಯದ ಉದ್ಯಾನದಲ್ಲೊಮ್ಮೆ ವಿಹರಿಸಿದಾಗ ಸಂಸ್ಕೃತ ಭಾಷೆಯ, ಸಂಸ್ಕೃತ ಸಾಹಿತ್ಯದ ದಟ್ಟ ಪ್ರಭಾವ ಅಂದು ಇರುವುದನ್ನು ಗಮನಿಸಬಹುದು. ಮುಂದೆ ೧೨ನೇ ಶತಮಾನದಲ್ಲಿ ಶಿವಶರಣರ ಕಾಲಘಟ್ಟದಲ್ಲಿ ಪಾದರಸದಂತಹ ಸಾಹಿತ್ಯ ರೂಪ ‘ವಚನ’ ವು ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಸಾರಸ್ವತ ಲೋಕದಲ್ಲಿ ಸಂಚಲನವನ್ನು ಸೃಷ್ಟಿಸಿತು..ತಿರುವಿನ ಆ ಕಾಲ ಗರ್ಭದಲ್ಲಿ ನವ್ಯ, ಆಧುನಿಕ ಕನ್ನಡಕ್ಕೆ ಪಾಶ್ಚಿಮಾತ್ಯ ಸಾಹಿತ್ಯವೇ ನಂದಾದೀಪವಾಯಿತು. ಈ ನೆಲೆಯಲ್ಲಿ ಚಿಂತನೆ ಮಾಡಿದಾಗ ಸಾಹಿತ್ಯವು ನಿರಂತರವಾಗಿ ಚಲಿಸುತ್ತಿರುತ್ತದೆ ಎಂದೆನಿಸದೆ ಇರದು.         ಈ ಹಿನ್ನೆಲೆಯಲ್ಲಿ ‘ಗಜಲ್’ ಕಾವ್ಯ ಪ್ರಕಾರವು ಮನವನ್ನು ಮೆದುವಾಗಿ ಸ್ಪರ್ಶಿಸುತ್ತದೆ. ಈ ಕಾರಣಕ್ಕಾಗಿಯೇ ಗಜಲ್ ನ ಅರ್ಥ, ಹುಟ್ಟು, ಛಂದೋಲಕ್ಷಣಗಳು, ವೈವಿಧ್ಯತೆಗಳು ಹಾಗೂ ಅದರ ಪ್ರಕಾರಗಳ ಕುರಿತು ಅರಿಯುವುದು ತುಂಬಾ ಮುಖ್ಯ. ಈ ಗಜಲ್ ಶಬ್ಧದ ಇತಿಹಾಸವು ನಮ್ಮನ್ನು ದಕ್ಷಿಣ ಏಷ್ಯಾದ ಅರಬ್ ನ ಸುಂದರ ಮರಭೂಮಿಯತ್ತ ಕರೆದೊಯ್ಯುತ್ತದೆ. ‘ಗಜಲ್’ ಪದ ಮೂಡಿ ಬಂದದ್ದು ಅರೆಬಿಕ್ ಭಾಷೆಯಿಂದ. ಈ ಪದದ ನಿಷ್ಪತ್ತಿ ಕುರಿತು ಹೀಗೆ ಹೇಳಲಾಗಿದೆ. ಗಜಲುನ್, ಗಜಾಲ್, ಗಿಜಾಲ್ ಪದಗಳಿಂದ ಬಂದಿರಬಹುದು ಎನ್ನಲಾಗುತ್ತಿದೆ. ‘ಗಜಲುನ್’ ಎಂದರೆ ಮೋಹಕ ಸನ್ನೆಗಳಿಂದ ಹೆಂಗಸರೊಡನೆ ಮಾತನಾಡುವುದು ಎಂದು. ‘ಗಜಾಲ್’ ಎಂದರೆ ಹೆಣ್ಣಿಗೆ ಹೋಲಿಸಿ ಇಡುವ ಹೆಸರು ಅಥವಾ ಜಿಂಕೆ ಕಣ್ಣಿನ ಆಕರ್ಷಕ ತೀಕ್ಷ್ಣ ಬುದ್ಧಿಯ ಹೆಣ್ಣು. ‘ಗಿಜಾಲ್’ ಎಂದರೆ ಜಿಂಕೆ. ಈ ಹಿನ್ನೆಲೆಯಲ್ಲಿ “ಜಿಂಕೆ ಅನುಭವಿಸುವ ಆರ್ತನಾದ ಬೇಟೆಗಾರನಿಂದ ತಪ್ಪಿಸಿಕೊಂಡು ಸ್ವತಂತ್ರವಾಗುವ ನೋವೆ” ಗಜಲ್ ನ ಮೂಲ ಎಂಬ ೭ನೆ ಶತಮಾನದ ಗಜಲ್ ತಜ್ಞ ಶಮ್ಸ್ ಕೈಸ್ ರಾಜಿ ಯವರ ಹೇಳಿಕೆಯನ್ನು ಸ್ಮರಿಸಬಹುದು. ಇದರೊಂದಿಗೆ ಡಾ. ಅಬ್ದುರಶೀದ್ ಎ. ಶೇಖ್ ರವರು ತಮ್ಮ ಗಜಲ್ ಸೌಂದರ್ಯ ಮೀಮಾಂಸೆ ಯಲ್ಲಿ ದಾಖಲಿಸಿರುವುದನ್ನು ಇಲ್ಲಿ ಗಮನಿಸುವುದು ಸೂಕ್ತ. ಗಜಲ್ ಎನ್ನುವುದು ಮುಗಾಜೆಲಾತ, ತಗಜ್ಜುಲ್ ಪದಗಳಿಂದ ಬಂದಿದೆ ಎಂದು ಹೇಳಿದ್ದಾರೆ. ಈ ಪದಪುಂಜಗಳ ಅರ್ಥ ಪ್ರೇಮಿಗಳ ಮಾತುಕತೆ, ಸರಸ-ಸಲ್ಲಾಪ, ಹೆಂಗಸರ ಕುರಿತು ಮಾತು…. ಎಂದೆಲ್ಲಾ ಅರ್ಥೈಸಲಾಗುತ್ತಿದೆ. ಕ್ರೌಂಚ ಹಕ್ಕಿಗಳ ವಿಹ್ವಲತೆ, ದೀನ ನೋವು, ಆರ್ತನಾದವು ಮಹಾಕಾವ್ಯ ‘ರಾಮಾಯಣ’ ದ ಉದಯಕ್ಕೆ ಕಾರಣವಾಗಿರುವುದನ್ನು ಇಲ್ಲಿ ಮೆಲುಕು ಹಾಕಬಹುದು. ಈ ಅರ್ಥದಲ್ಲಿ ಕರುಣಾರಸ ತುಂಬಿದ ಮಧುಬಟ್ಟಲೆ ಈ ಬರಹದ ಸ್ಥಾಯೀ ರೂಪ. ಇದು ಸಾಹಿತ್ಯ ರೂಪವಾಗಿ ಬೆಳೆದು ಬಂದದ್ದು ಮಾತ್ರ ಇರಾನಿನ ಪರ್ಷಿಯನ್ ಭಾಷೆಯಲ್ಲಿ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಅರಬರು ಇರಾನ್ ದೇಶವನ್ನು ಹಲವು ವರ್ಷಗಳ ಕಾಲ ಆಳಿದರು. ಇದರಿಂದ ಸಹಜವಾಗಿಯೇ ಅರಬರ ಭಾಷೆ, ಕಾವ್ಯಗಳ ಪ್ರಭಾವ ಇರಾನರ ಮೇಲೆ ಆಯಿತು. ಪರ್ಷಿಯನ್ ಭಾಷೆಯ ಪ್ರಕಾರ ‘ಗಜಲ್’ ಎಂದರೆ ಭಾವಗೀತೆ, ಪ್ರೇಮಗೀತೆ, ಹಾಡು, ಪ್ರಗಾಥ ಎಂದಾಗುತ್ತದೆ. ನಂತರ ಮೂಲವಾಗಿ ಸುಂದರವಾಗಿ ಇರುವ ಉರ್ದುವಿನಲ್ಲಿ ಹಾಲು-ಜೇನಿನ ಸಂಗಮದಂತೆ ತನ್ನ ಪಾರುಪತ್ಯವನ್ನು ಸ್ಥಾಪಿಸಿರುವುದು ಇವಾಗ ಇತಿಹಾಸ..!!      ಇಂತಹ ಗಜಲ್ ನ ವಿಕಾಸ ತುಂಬಾನೆ ಕುತೂಹಲಕಾರಿಯಾಗಿದೆ.  ಅರಬ್ ನ ೬ ನೇ ಶತಮಾನದ ಅರಬ್ಬಿ ಪದ್ಯ “ಕಸೀದ” ದಿಂದ ಇದು ಹುಟ್ಟಿರಬಹುದು ಎಂದು ಕೆಲವರು ಹೇಳಿದರೆ, ಪಾಕಿಸ್ತಾನದ ಕವಿ, ವಿಮರ್ಶಕ ವಜೀರ್ ಆಗಾ ಅವರು ಫಾರಸಿ ಭಾಷೆಯ ಜಾನಪದ ಕಾವ್ಯ “ಚಾಮ” ದಿಂದ ಹುಟ್ಟಿದೆ ಎಂದು ಹೇಳುತ್ತಾರೆ. ‘ಕಸೀದ’ ವ್ಯಕ್ತಿ ಪ್ರಶಂಸೆ, ದಾರ್ಶನಿಕತೆ, ಜನರನ್ನು ಉತ್ಸಾಹಗೊಳಿಸುವ ವಿಷಯಗಳಿಂದ ಕೂಡಿದ ಒಂದು ಧೀರ್ಘ ಖಂಡ ಕಾವ್ಯ. ಇಲ್ಲಿ ರಾಜನ ಹೊಗಳಿಕೆ ಮತ್ತು ರಾಜನ ಮನೋಭಿಲಾಸೆಯೆ ಮುಖ್ಯವಾಗುತಿತ್ತು. ಈ ಹಿನ್ನೆಲೆಯಲ್ಲಿ ಗಮನಿಸುವುದಾದರೆ ಶಬಾಬ್, ಶರಾಬ್ ಮತ್ತು ಕಬಾಬ್ ಕಸೀದದ ಸ್ಥಾಯಿ ಭಾವ ಆಗಿದ್ದವು ಎನ್ನುವುದರ ಜೊತೆಗೆ ಅರಸೊತ್ತಿಗೆಯ ಸಂಕೇತವಾಗಿದ್ದವು ಎಂಬುದು ಅಂದಿನ ಕಾಲಚಕ್ರವನ್ನು ಪ್ರತಿನಿಧಿಸುತ್ತದೆ.  ಜೊತೆ ಜೊತೆಗೆ ಇವು ವಿಲಾಸಿ ಜೀವನವನ್ನು ಬಿಂಬಿಸುತ್ತವೆ. ಈ ಕಾರಣಕ್ಕಾಗಿಯೇ ಅಂದಿನ ಕವಿಗಳು ತಮಗೆ ಇಷ್ಟವಿಲ್ಲದಿದ್ದರೂ ರಾಜ- ಮಹಾರಾಜರನ್ನು ಹೊಗಳುತ್ತಿದ್ದರು. ಕೆಲವರಂತೂ ತಮ್ಮ ಉಪಜೀವನಕ್ಕಾಗಿಯೂ ಬರೆಯುತ್ತಿದ್ದರು..!! ಕಸೀದದ ಪೀಠಿಕಾ ದ್ವಿಪದಿ ಎಂದರೆ ‘ತಷಬೀಬ್’ ಪ್ರೀತಿ, ಪ್ರೇಮ ಭಾವಾಭಿವ್ಯಕ್ತಿಯನ್ನು ಒಳಗೊಂಡಿರುತ್ತದೆ. ಪೀಠಿಕೆಯ ದ್ವಿಪದಿ/ ಷೇರ್ ಗಳನ್ನು ಎತ್ತಿ ಬೇರೆ ಮಾಡಿ ಅವುಗಳಿಗೆ ಗಜಲ್ ಎಂದು ಕರೆಯಲಾಯಿತು. ಇದರೊಂದಿಗೆ ಇರಾನ್ ದೇಶದ ಹಳ್ಳಿಗಳಲ್ಲಿ ಹೆಂಗಸರು ರಚಿಸಿ ಹಾಡುತ್ತಿದ್ದ ‘ಚಾಮ’ ಎಂಬ ಜಾನಪದ ಕಾವ್ಯ ಪ್ರಕಾರ ದಿಂದ ಗಜಲ್ ಹುಟ್ಟಿದೆಯೆಂದೂ ಹೇಳಲಾಗುತ್ತಿದೆ. ಇರಾನ್ ದೇಶವು ಅತಿಥಿಗಳ ಸತ್ಕಾರಕ್ಕೆ ತುಂಬಾ ಹೆಸರುವಾಸಿ. ತಮ್ಮ ಮನೆಗೆ ಬಂದ ಅತಿಥಿಗಳ ಮನೋರಂಜನೆಗಾಗಿ ಹಾಡು ಕಟ್ಟಿ ಹಾಡುತ್ತಿದ್ದರು. ಆ ನೆಲೆಯಲ್ಲಿ ಚಾಮ ಕಾವ್ಯವೂ ಹೌದು, ಸಂಗೀತವೂ ಹೌದು. ಇರಾನ್ ದೇಶದ ಹಳ್ಳಿಗಳಲ್ಲಿ ಅದು ಬಹಳ ಜನಪ್ರಿಯವಾಗಿತ್ತು,  ಅತ್ಯಂತ ಮನೋಹರವಾಗಿತ್ತು. ಈ ಸೆಲೆಯಲ್ಲಿ “ಗಜಲ್ ಸ್ವಭಾವತಃ ಗೀತದ ಬುನಾದಿಯ ಮೇಲೆ ನಿಂತಿರುವುದರಿಂದ ಗಜಲ್ ಅನ್ನು ಅರಬ್ಬಿ ತಷಬೀಬ್ (ಕಸೀದ್ ದ ಪೀಠಿಕೆ) ದಿಂದ ಹುಟ್ಟಿತು ಎನ್ನುವುದಕ್ಕೆ ಬದಲಾಗಿ ಅದನ್ನು ಇರಾನದ ಚಾಮ ಕಾವ್ಯಕ್ಕೆ ಸಂಬಂಧ ಪಟ್ಟುದೆಂದು ಹೇಳುವುದು ಸೂಕ್ತ” ಎಂಬ ಪಾಕಿಸ್ತಾನದ ಕವಿ, ವಿಮರ್ಶಕ ಡಾ. ವಜೀರ್ ಆಗಾರವರ ಹೇಳೀಕೆ ಮುಖ್ಯವೆನಿಸುತ್ತದೆ. ‌        ಈ ಗಜಲ್ ಎನ್ನುವುದು ಮುಂಜಾವಿನ, ನಸುಕಿನ ಸಮಯದ ಸವಿ ನಿದ್ದೆ, ಕಂದಮ್ಮಗಳ ನೆಚ್ಚಿನ ಚಂದಮಾಮ, ತಾಯಿಯ ವಾತ್ಸಲ್ಯಮಯ ಲಾಲಿ ಹಾಡು ಹಾಗೂ ಅಬಲೆಯರ ಆಕ್ರಂದನವನ್ನೂ ಸಶಕ್ತವಾಗಿ ಅಭಿವ್ಯಕ್ತಿಸುತ್ತದೆ. ಇದೊಂದು ಪ್ರೀತಿಸುವ ಜೀವಿಗಳ ಭಾವಪರವಶತೆಯ ಸುಂದರ ಸಂಭ್ರಮ. ಇದು ನಿರಂತರವಾದ ಮತ್ತು ಆಳವಾದ ಅನುಭೂತಿಯನ್ನು ಸಹ ನೀಡುತ್ತದೆ. ಅಂತೆಯೇ “Ghazal is all about desire, Journey to love and light” ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿಯೇ ಗಜಲ್ ಇಂದು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕಾವ್ಯಗಳ ರಾಣಿ ಎಂಬ ನವಿಲು ಗರಿಯನ್ನು ಹೊತ್ತು ನಿಂತಿದೆ. ****************************************

ಗಜಲ್ ಮದುಶಾಲೆಯ ಹೊಸ್ತಿಲಲ್ಲಿ… Read Post »

You cannot copy content of this page

Scroll to Top