ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಗಝಲ್ ಲೋಕ

ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ. ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ ಗಝಲ್ ಲೋಕ ನಾಲ್ಕನೆ ಅದ್ಯಾಯ ಕನ್ನಡಕ್ಕೆ ಗಜಲ್ ಬಂದ ರೀತಿ ಪ್ರಪಂಚದಲ್ಲಿ ಗಜಲ್ ಹುಟ್ಟಿದ ರೀತಿ, ಅದು ಬೆಳೆದು ಬಂದ ಬಗೆ ಮೊದಲಾದ ಸಂಗತಿಗಳ ನಂತರ ಈಗ ನಮ್ಮ ಕನ್ನಡ ಗಜಲಗಳಿಗೆ ಬರೋಣ ಕನ್ನಡದ ಜಾಯಮಾನ ಒಂದು ಮಟ್ಟಿಗೆ ಕಷ್ಟಕರವಾದ ಮತ್ತು ವಿದೇಶಿಯ ಪರ್ಷಿಯನ್, ಅರಬ್ಬೀ, ಉರ್ದು ಭಾಷೆಗೆ ಒಗ್ಗಿದ ಸಾಹಿತ್ಯ ಪ್ರಕಾರವಾದ ಗಜಲ್ ಎಪ್ಪತ್ತನೇ ದಶಕದಲ್ಲಿ ನಮ್ಮ ಕನ್ನಡ ಭಾಷೆಯಲ್ಲಿಯೂ ಸಹ ಆರಂಭಗೊಂಡಿತು. ಅತ್ಯಂತ ವಿಶಾಲ, ಪುರಾತನ, ಅಗಾಧ ಸಾಹಿತ್ಯದ ಪಟ್ಟುಗಳು ಮತ್ತು ಅತ್ಯಂತ ಮಧುರತೆಯಿಂದ ಕೂಡಿದ ಕನ್ನಡ ಭಾಷೆಯ ಜಾಯಮಾನಕ್ಕೆ ಗಜಲ್ ಸುಲಭವಾಗಿಯೇ ಒಗ್ಗಿಕೊಂಡಿತು. ಪ್ರಪಂಚದ ಯಾವುದೇ ಸಾಹಿತ್ಯದ ಪ್ರಕಾರವೇ ಆಗಲಿ, ಆ ಸಾಹಿತ್ಯದ ಸೂತ್ರಗಳ ಅನುಸಾರ ಹೋದರೆ ಎಂತಹ ಕಾವ್ಯವನ್ನು ಸಹ ಹುಟ್ಟಿ ಹಾಕುವಂತಹ ಸಾಮರ್ಥ್ಯ ಕನ್ನಡಕ್ಕೆ ಇರುವುದು ಭಾಷೆಯ ಹಿರಿಮೆಯನ್ನು ತೋರಿಸುತ್ತದೆ. ಇತರ ಕೆಲವು ಭಾಷೆಗಳಲ್ಲಿ ಆದ ಆರಂಭದ ಆಭಾಸ ಕನ್ನಡದಲ್ಲಿ ಆಗದೆ ಸಹಜವಾಗಿಯೇ ಮೂರ್ತರೂಪ ತಾಳಿತು. ಕನ್ನಡ ಸಂಸ್ಕೃತಿ, ಸಮುದಾಯ, ಜನ ಜೀವನದೊಂದಿಗೆ ಹೋದಾಗ ಗಜಲ್ ತನ್ನ ಮೊದಲನೇ ಮೆಟ್ಟಿಲನ್ನು ಕನ್ನಡದಲ್ಲಿ ಯಶಸ್ವಿಯಾಗಿ ಇಟ್ಟಿತು‌. ಮಧುಶಾಲೆ, ಮಧುಪಾತ್ರೆ, ಸಾಕಿ ಮೊದಲಾದವುಗಳನ್ನು ಗಜಲ್ ಆರಂಭದಲ್ಲಿಯೇ ಕಳೆದುಕೊಂಡು ತನ್ನ ಔಪಚಾರಿಕತೆಯನ್ನು ಮಾತ್ರ ಉಳಿಸಿಕೊಂಡಿದಕ್ಕೆ ಆ ಯಶಸ್ಸು ಸಾಧ್ಯವಾಯಿತು. ಅನುಭವ, ಅನುಭಾವ ಮತ್ತು ಭಾವಾಭಿವ್ಯಕ್ತಿಯ ಸಾಧ್ಯತೆಗಳು ಕನ್ನಡದಂತಹ ಭಾಷೆಯಲ್ಲಿ ಮಾತ್ರ ಅತಿ ಹೆಚ್ಚು ಗೋಚರವಾಗುತ್ತವೆ. ಕನ್ನಡ ಗಜಲಗಳ ಜನಕ ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಚರಿತ್ರೆ, ಛಂದಸ್ಸು, ಚೌಕಟ್ಟು ಮೊದಲಾದ ಎಲ್ಲಾ ಪಟ್ಟುಗಳನ್ನು ಅರಿತು ಅದರ ಲಕ್ಷಣಗಳ ಅನುಸಾರ ನಿಯಮಬದ್ಧವಾಗಿ ಗಜಲ್ ಬರೆದ ಶಾಂತರಸವರು ಕನ್ನಡ ಗಜಲಗಳ ಜನಕರಾಗಿದ್ದಾರೆ.  ಅವರ “ಗಜಲ್ ಮತ್ತು ಬಿಡಿ ದ್ವೌಪದಿಗಳು” ಕನ್ನಡದ ಮೊಟ್ಟ ಮೊದಲ ಗಜಲ್ ಸಂಕಲನವಾಗಿದೆ. ಶಾಂತರಸ ಎನ್ನುವುದು ಕಾವ್ಯನಾಮ ಹೊಂದಿರುವ ಇವರ ಮೂಲ ಹೆಸರು ಶಾಂತಯ್ಯ ಹಿರೇಮಠ. ಆದರೆ ಇವರು ಶಾಂತರಸ ಹೆಂಬೇರಾಳ ಎಂದೇ ಪ್ರಸಿದ್ಧಿ. ಇವರು ಜನಿಸಿದ್ದು ರಾಯಚೂರು ಜಿಲ್ಲೆಯಲ್ಲಿ ಮತ್ತು ಇದು ಆಗ ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿ ಇತ್ತು. ಆದ ಕಾರಣ ಮಾತೃಭಾಷೆ ಕನ್ನಡದ ಶಿಕ್ಷಣದಿಂದ ವಂಚಿತರಾದ ಇವರು ಉರ್ದು ಮಾಧ್ಯಮದಲ್ಲಿ ಓದಬೇಕಾಗಿ ಬಂತು. ಹೆಸರಿಗೆ ಅಷ್ಟೇ ಶಾಂತರಸರಾದ ಇವರು ಪ್ರಾಥಮಿಕ ಶಿಕ್ಷಣದಲ್ಲಿಯೇ ಮುಸ್ಲಿಂ ಅಧ್ಯಾಪಕರ ಬೇಧ ಭಾವದಿಂದ ಸಿಡಿದೆದ್ದು ನಿಂತರು ಮತ್ತು ಅವರಲ್ಲಿ ಹೋರಾಟದ ಕೆಚ್ಚು ಹುಟ್ಟಿನಿಂದಲೇ ಬಂದಿತ್ತು. ಆದ ಕಾರಣ ಅವರು ಜೀವನ ಪೂರ್ತಿ ನಾನಾ ವಿಷಯಗಳಿಗಾಗಿ ಹೋರಾಡಿರುವ ಕಾರಣಕ್ಕೂ ಸಹ ಸ್ಮರಣೀಯರಾಗಿದ್ದಾರೆ. ಹೀಗೆ ಉರ್ದು ಸಂಪರ್ಕದಿಂದ ಬಂದ ಅವರು ಕನ್ನಡದೊಂದಿಗೆ ಉರ್ದುವನ್ನು ಸಹ ಕರಗತ ಮಾಡಿಕೊಂಡರು. ಉರ್ದು ಸಾಹಿತ್ಯದ ಕುರಿತು ಸಾಕಷ್ಟು ಆಳವಾದ ಅಧ್ಯಯನ ಮಾಡಿರುವ ಇವರು ಗಜಲನ್ನು ಅತ್ಯಂತ ಪರಿಣಾಮಕಾರಿಯಾಗಿ ಕನ್ನಡಕ್ಕೆ ತಂದರು. ಋತುವರ್ಣನೆ ಸೇರಿದಂತೆ ಹಲವಾರು ಉರ್ದು ಕಾವ್ಯ, ಗಜಲಗಳನ್ನು ಸಹ ಕನ್ನಡಕ್ಕೆ ಕರೆ ತಂದರು. ಗಜಲ್ ಮಾತ್ರವಲ್ಲದೆ ಹಲವಾರು ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದರು. ಇವರ ಮಗಳಾದ ಹೆಚ್ ಎಸ್ ಮುಕ್ತಾಯಕ್ಕ ಸಹ ಅವರ ಕಾರ್ಯಗಳಲ್ಲಿ ಸಹಾಯಕರಾಗಿದ್ದರು. ಶಾಂತರಸ ಅವರು ಗಜಲಗೆ ಸಂಬಂಧಿಸಿದಂತೆ ಒಂದು ಅರ್ಥಪೂರ್ಣ ವಾಕ್ಯವನ್ನು ನೀಡಿದ್ದಾರೆ ಮತ್ತು ಅದು ಹೀಗಿದೆ “ಇರುವಿಕೆಯೇ ಇಲ್ಲದಿರುವಿಕೆ ಮತ್ತು ಇಲ್ಲದಿರುವಿಕೆಯೇ ಇರುವಿಕೆ” ಜಂಬಣ್ಣ ಅಮರಚಿಂತ ಶಾಂತರಸರು ಹಾಕಿದ ಭದ್ರ ಬುನಾದಿಯ ಮೇಲೆ ಗಜಲ್ ಬರವಣಿಗೆಗಳಿಗೆ ಹೊಸ ಮಜಲನ್ನು ಸೃಷ್ಟಿಸಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದವರಲ್ಲಿ ಜಂಬಣ್ಣ ಅಮರಚಿಂತರು ಪ್ರಮುಖರಾಗಿದ್ದಾರೆ. ತೀಕ್ಷ್ಣವಾದ ಭಾಷಾ ಪ್ರಯೋಗಗಳು ಹಾಗೂ ಅಭಿವ್ಯಕ್ತಿಯ ಭಾವಗಳಿಗೆ ಹೆಸರಾದ ಇವರು ದಮನಿತರ ಧ್ವನಿಯಾಗಿ ಮೂಡಿ ಬಂದಿದ್ದರು. ಸಮಾಜದ ಅನಿಷ್ಟ ಪಿಡುಗುಗಳ ವಿರುದ್ಧ ಹೋರಾಡಿದ ಇವರು ಅದನ್ನು ತಮ್ಮ ಕಾವ್ಯಗಳಲ್ಲಿ ಸೊಗಸಾಗಿ ಹೊರ ತಂದಿದ್ದಾರೆ. ನಲ್ಲೆಯೊಂದಿಗಿನ ಸಂವಾದವಾದ ಗಜಲನ್ನು ಜನ ಸಾಮಾನ್ಯರ ಸಂವಾದವನ್ನಾಗಿಸಿ ವಿಭಿನ್ನ ನೆಲೆಯನ್ನು ಒದಗಿಸಿದರು. ಇವರ ಝೆನ್ ಆಧಾರಿತ ಗಜಲಗಳು ಅತಿ ಯಶಸ್ಸು ಕಂಡವು. “ರಕ್ತಸಿಕ್ತ ಖಡ್ಗ ನಿಮ್ಮ ಓಣಿಯಲ್ಲಿ, ಹಂತಕರು ಯಾರೆಂದು ಮತ್ತೆ ಕೇಳುವಿರಿ  ಬಿತ್ತುವ ಬೀಜ ನಿಮ್ಮ ಉಗ್ರಾಣದಲ್ಲಿ, ಬೆಳೆ ಯಾಕೆ ಬರಲಿಲ್ಲವೆಂದು ಮತ್ತೆ ಕೇಳುವಿರಿ” ಜಂಬಣ್ಣ ಅಮರಚಿಂತ ಅವರ ಬರಹದ ಪ್ರಖರತೆ ಎಷ್ಟು ತೀಕ್ಷ್ಣ ಮತ್ತು ಸೂಕ್ಷ್ಮವಾಗಿತ್ತು ಎನ್ನುವುದಕ್ಕೆ ಮೇಲಿನ ಒಂದು ಗಜಲನ ಮತ್ಲಾದ ಉದಾಹರಣೆಯ ಸಾಕು, ಅವರ ಸಾಹಿತ್ಯ ಎಷ್ಟು ಅಗಾಧವಾಗಿತ್ತು ಎನ್ನುವುದನ್ನು ತೋರಿಸುತ್ತದೆ ಕನ್ನಡದಲ್ಲಿ ಗಜಲ್ ಆರಂಭವಾಗಿ ಈಗಾಗಲೇ ಐವತ್ತು ವರ್ಷ ಕಳೆದರೂ ಸಹ ಅದು ಇನ್ನೂ ಮಾಧ್ಯಮಿಕ ಹಂತದಲ್ಲಿಯೇ ಇದೆ. ಶಾಂತರಸರಿಂದ ಹಿಡಿದು ಡಾ|ರಾಜಶೇಖರ್ ನೀರಮಾನ್ವಿ, ಡಾ| ಅಮರೇಶ ನುಗಡೋಣಿ, ಕಾಶಿನಾಥ್ ಅಂಬಲಗಿ, ಚಿದಾನಂದ ಸಾಲಿ, ಡಾ| ಗೋವಿಂದ ಹೆಗಡೆ, ಪ್ರಭಾವತಿ ದೇಸಾಯಿ, ಹೇಮಲತಾ ವಸ್ತ್ರದ ಅಂತಹ ಮೊದಲಾದ ಉತ್ತಮ ಗಜಲಕಾರರನ್ನು ಕಾಣುತ್ತಿರುವ ಗಜಲ್ ಸಾಹಿತ್ಯ ಇನ್ನೂ ಪರಿಶುದ್ಧವಾದ ತೀವ್ರತೆಯ ಬರಹಗಳು ಹೆಚ್ಚು ಹೆಚ್ಚು ಮೂಡಿ ಬರಬೇಕಿದೆ. ಇದೇ ಸಂದರ್ಭದಲ್ಲಿ ದಿಕ್ಕು ತಪ್ಪಿಸುವ ಗಜಲ್ ಎನ್ನುವ ಹೆಸರಲ್ಲಿ ಬರುವ ಕೆಲವು ಕಲಬೆರಕೆಯ ಬರಹಗಳು ಮೂಲೆ ಸೇರಬೇಕಿದೆ ********* ಬಸವರಾಜ ಕಾಸೆ

ಗಝಲ್ ಲೋಕ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-5 ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಯಾರದ್ದೋ ತಪ್ಪಿಗೆ ಯಾರಿಗೋ ಶಿಕ್ಷೆ. ‘ಅಮ್ಮಾ ನನ್ನ ಜೊತೆ ಆಟಾ ಆಡು ಬಾ ಎಂದು ನಾಲ್ಕು ವರ್ಷದ ಪುಟ್ಟ ಶಿಶಿರನ ಕರೆ ಕೂಗಾಟ ಚೀರಾಟವಾದರೂ ಆ ಅಮ್ಮನಿಗೆ ಅಡುಗೆ ಮನೆಯಲ್ಲಿ ಕೆಲಸ ಮುಗಿಯುವುದಿಲ್ಲ. ತೊಳೆದಷ್ಟೂ ಮುಗಿಯದ ಮುಸುರೆ ಪಾತ್ರೆಗಳು, ಬಟ್ಟೆಗಳು …ಬಿಡುವೆಲ್ಲಿದೆ?ಈಗಿನ್ನೂ ತಿಂಡಿ ತಿಂದಾಗಿದೆ ಆದರೆ ಮತ್ತೆ ಅಡುಗೆ ಮಾಡುವ ಸಮಯ ಬಂದೇ ಹೋಯ್ತು ಎನ್ನುವ ಟೆನ್ಶನ್ ನಲ್ಲಿ ಮಗುವಿನೊಂದಿಗೆ ಸಂತೋಷವಾಗಿ ಆಟ ಆಡಲಾಗುವುದೇ.. ಮೊದಲಿನಂತೆ ಗಂಡನೂ ಆಫೀಸಿಗೆ ಹೋಗುತ್ತಿಲ್ಲ. ಮೊಬೈಲ್ ನೋಡುತ್ತ ನ್ಯೂಸ್ ಕೇಳುತ್ತ ಟೈಂಪಾಸ್ ಮಾಡುವ ಬದಲು ಮಗನ ಜೊತೆ ಕೊಂಚ ಆಟ ಆಡಿದರೆ ಆಗುವುದಿಲ್ಲವೇ? ಎಂಬ ಸಿಡಿಮಿಡಿಯನ್ನು ಮನದಲ್ಲೇ ಹುಗಿದು ‘ಕಳ್ಳ ಪೋಲಿಸ್ ಆಡೋಣವೇ ಮಗನೇ?’ ಕೇಳಿದಳು. ಅಮ್ಮ ಆಟಕ್ಕೆಂದು ಬಂದೊಡನೆ ಮಗುವಿನ ಮೂಡ್ ಬದಲಾಗಿ ಹೋಯ್ತು ಆ ಪುಟ್ಟ ಮನೆಯ ಮೂಲೆ ಮೂಲೆಯಲ್ಲಿ ಅವಿತು ಕುಳಿತ ಕಳ್ಳನನ್ನು ಅಮ್ಮ ಪೋಲೀಸ್ ಹುಡುಕಿದ್ದೇ ಹುಡುಕಿದ್ದು. ಒಂದೆರಡು ದಿನ ಪ್ರೇಕ್ಷಕನಾದ ಅಪ್ಪನೂ ಕ್ರಮೇಣ ಆಟದಲ್ಲಿ ಸೇರಿಕೊಂಡ.. ಎಲ್ಲಾ ಲಾಕ್ ಡೌನ್ ಮಹಾತ್ಮೆ.. ಮನೆಯ ಬಾಗಿಲು ಕಿಟಕಿ ಮುಚ್ಚಿದರೆ ಪುಟ್ಟ ಮಕ್ಕಳ ಕ್ರಿಯಾಶೀಲತೆ ಮುಚ್ಚಿಡಲಾಗುವುದೇ? ದಿನವಿಡೀ ಆಡುವ ಉತ್ಸಾಹ, ಪ್ರಶ್ನೆ ಕೇಳುವ ಕುತೂಹಲ, ಅತ್ತಾದರೂ ತನಗೆ ಬೇಕಾಗಿದ್ದನ್ನು ಗಿಟ್ಟಿಸಿಕೊಳ್ಳುವ ಮಕ್ಕಳಿಗೆ ಲಾಕ್ ಡೌನ್ ಒಂದರ್ಥದಲ್ಲಿ ಶಿಕ್ಷೆ ಎನಿಸಿದರೂ ಇನ್ನೊಂದು ಅರ್ಥದಲ್ಲಿ ಸಂತೋಷವನ್ನೂ ತಂದಿದೆ. ನಗರವಾಸಿಗಳಲ್ಲಿ ಅಪ್ಪ ಅಮ್ಮ ಇಬ್ಬರೂ ಉದ್ಯೋಗಿಗಳಾಗಿದ್ದರಂತೂ ಇಬ್ಬರೂ ಮಗುವಿಗೆ ಕೊಡುವುದು ಸಂಜೆಯಿಂದ ಮುಂಜಾನೆಯವರೆಗೆ ಮಾತ್ರ. ಉಳಿದಂತೆ ಪುಟ್ಟ ಮಕ್ಕಳು ಶಾಲೆ, ಬೇಬಿಸಿಟ್ಟಿಂಗ್ ನಲ್ಲೇ ಕಳೆಯಬೇಕು. ದಿನವಿಡೀ ದುಡಿದು ದಣಿವ ಅಪ್ಪ ಅಮ್ಮಂದಿರಿಗೆ ಆಟ ಅಡುವ ಹುಮ್ಮಸ್ಸಿರುವುದು ಅಷ್ಟಕ್ಕಷ್ಟೇ. ಕೊನೆಪಕ್ಷ ಈ ಬಿಡುವಿನಲ್ಲಾದರೂ ಹೆತ್ತವರು ಮಕ್ಕಳ ಕುತೂಹಲಕ್ಕೆ ತಕ್ಕ ಉತ್ತರ ಕೊಡಲಿ. ಮುಚ್ಚಿದ ಬಾಗಿಲ ಮನೆಯಲ್ಲಿ ಮಕ್ಕಳ ಜೊತೆ ಮೈದಣಿಯುವಂತಹ ಆಟ ಆಡಲಿ, ಹಾಡು ಹೇಳಲಿ, ಮತ್ತೊಮ್ಮೆ ಬಾಲ್ಯವನ್ನು ಸವಿಯುವಂತಾಗಲಿ, ಅಮ್ಮಂದಿರ ಕಷ್ಟವನ್ನು ಅಪ್ಪಂದಿರೂ ಅರಿಯುವಂತಾಗಲಿ.. ಎಂದು ಹಾರೈಸುವಷ್ಟರಲ್ಲಿ ಪಕ್ಕದ ಮನೆಯಲ್ಲಿ ಎಳೆಯ ಕಂಠವೊಂದು ‘ಮನೆಯ ಬಾಗಿಲು ತೆಗೆಯಮ್ಮಾ.. ಪಾರ್ಕಿಗೆ ಹೊಗೋಣಾ ಎಂದು‌ ಹೇಳಿದ್ದು ಕೇಳಿತು.. ಬೇಡ ಮಗು ಅಲ್ಲೆಲ್ಲಾ ಕೊರೋನಾ ಹುಳು ಇರುತ್ತೆ ಕಚ್ಚಿದರೆ ಜ್ವರಾ ಬರುತ್ತೆ ಹೋಗಬಾರದು ಮಗು ಎಂದು ಅಮ್ಮ ನಂಬಿಸುತ್ತಿರುವುದೂ ಕೇಳಿ ಬಂತು.. ಅಂತ್ಯವರಿಯದ ಈ ದಾರಿಯಲ್ಲಿ ಸಾಗುವುದೆನಿತು ದಿನ? ಹಿಂದೆಲ್ಲ ಮುಂದಿನ ತಲೆಮಾರಿನವರು ತಿನ್ನಲೆಂದು ಒಳ್ಳೆಯ ಹಣ್ಣಿನ ಗಿಡಗಳನ್ನು, ತೆಂಗಿನ ಗಿಡಗಳನ್ನು ನೆಡುತ್ತಿದ್ದರು. ನಾವೇಕೆ ಎಳೆಯರಿಗೆ ಇಂತಹ ದಿನಗಳನ್ನು ತಂದಿಟ್ಟೆವು? ***************************************** ಮುಂದುವರಿಯುವುದು ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಬಸವಣ್ಣನ ಕಾಲದ ಗೌಪ್ಯ ವಚನಕಾರ್ತಿಯರು..! ಕೆ.ಶಿವು ಲಕ್ಕಣ್ಣವರ  ಬಸವಣ್ಣನ ಕಾಲದ ಗೌಪ್ಯ ವಚನಕಾರ್ತಿಯರು..! ವಚನ ಸಾಹಿತ್ಯದಲ್ಲಿ ಬಸವಯುಗದ ವಚನಕಾರ್ತಿಯರಂತೆ ಕೊಡುಗೆಯಿತ್ತವರನ್ನು ಬಹುಶ: ಯಾವ ಶತಮಾನವೂ ಕಂಡಿರಲಿಲ್ಲ. ಈ ಕಾಲಘಟ್ಟದಲ್ಲಿ ಹಲವಾರು ಶರಣೆಯರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿರುವುದನ್ನು ಯಾರು ಹೆಚ್ಚಾಗಿ ಪ್ರಚುರ ಪಡಿಸದೆ ಇರುವುದು ಅಚ್ಚರಿ ಯನ್ನುಂಟು ಮಾಡುತ್ತದೆ. ಇಂತಹವರನ್ನು ‘ಅಪ್ರಸಿದ್ದ ಶರಣೆಯರು/ವಚನಕಾರ್ತಿಯರು’ ಅಥವಾ ‘ಗೌಪ್ಯವಚನಕಾರ್ತಿಯರೆಂದು ‘ಕರೆಯ ಬಹುದಾಗಿದೆ. ವಚನಯುಗವು ಮಹಿಳೆಯರ ಆಂತರ್ಯದಲ್ಲಿ ನವ ಜಾಗೃತಿ, ನವಸಾಕ್ಷರತೆಯ ಅರಿವು ಮೂಡಿಸಿ, ಎಲ್ಲಾ ವರ್ಗದ ಮಹಿಳೆಯರಿಗೂ ವಿದ್ಯಾಭ್ಯಾಸ ಕಲಿಸಿ ೩೬ಕ್ಕೂ ಹೆಚ್ಚು ಜನ ಶರಣೆಯರು ವಚನರಚನೆ ಮಾಡುವ ಅವಕಾಶ ಕಲ್ಪಿಸಿ ಕೊಟ್ಟಿತು. ಅವರಲ್ಲಿ ಕೆಲವು ಶರಣೆಯರು ತಮ್ಮ ಗಂಡನ ಹೆಸರನ್ನೇ ವಚನದ ಅಂಕಿತವಾಗಿಟ್ಟು ಕೊಂಡರೆ, ಮತ್ತೆ ಕೆಲವರು ತಮ್ಮ ಇಷ್ಟದೈವವನ್ನು ವಚನದ ಅಂಕಿತವಾಗಿಟ್ಟು ಕೊಂಡಿದ್ದಾರೆ… ಕನ್ನಡ ಸಾಹಿತ್ಯದ ಪರ್ವಕಾಲ, ಸುವರ್ಣಯುಗ ‘ವಚನ ಸಾಹಿತ್ಯ ಕಾಲ’. ಹಾಗಾಗಿ ಕರ್ನಾಟಕ ಸಾಹಿತ್ಯ ಚರಿತ್ರೆಯಲ್ಲಿ ೧೨ನೇ ಶತಮಾನಕ್ಕೆ ವಿಶಿಷ್ಟ ಸ್ಥಾನವಿದೆ. ವೇದಗಳ ಕಾಲದಿಂದಲೂ ಸಾಹಿತ್ಯ ಪಂಡಿತರ, ವಿದ್ವಾಂಸರ ಸ್ವತ್ತಾಗಿ, ಸಂಸ್ಕೃತ ಭೂಯಿಷ್ಠವಾಗಿತ್ತು. ಶ್ರೀಸಾಮಾನ್ಯರಿಗೆ ಅವರ ರಚನೆಗಳೊಂದು ಅರ್ಥವಾಗುತ್ತಿರಲಿಲ್ಲ. ಭಾರತೀಯ ಮಹಿಳೆಯರ ಪಾಲಿಗೆ ಪುರಾಣ ಹಾಗೂ ಧರ್ಮಶಾಸ್ತ್ರಗಳ ಕಾಲ ‘ಕಗ್ಗತ್ತಲ ಯುಗ’ವಾಗಿತ್ತು. ಹಾಗೆ ನೋಡಿದರೆ ಆರ್ಯ ಸಂಸ್ಕೃತಿಯ ಪೂರ್ವ ಕಾಲದಲ್ಲಿ ಮಹಿಳೆಯರು ಸ್ವತಂತ್ರರಾಗಿದ್ದರು. ವೇದಗಳ ಕಾಲದಲ್ಲಿ ಗಾರ್ಗಿ, ಮೈತ್ರೇಯಿ ಯಂತಹ ಮಹಿಳಾ ವಿದ್ವಾಂಸರು ಪಂಡಿತರೊಂದಿಗೆ ಆಧ್ಯಾತ್ಮಿಕ ಚರ್ಚೆಗಳಲ್ಲಿ ಪಾಲ್ಗೊಂಡಿರುವುದಕ್ಕೆ ಅಲ್ಲಲ್ಲಿ ನಿದರ್ಶನಗಳಿವೆ. ಅಲ್ಲಿಂದ ಹೆಣ್ಣು ಮತ್ತೆ ಸ್ವತಂತ್ರಳಾಗಲು ಹಲವಾರು ಶತಮಾನಗಳವರೆವಿಗೂ ಕಾಯಬೇಕಾಯಿತು. ಶತ ಶತಮಾನಗಳಿಂದಲೂ ಸಮಾಜದಲ್ಲಿ ಹೆಣ್ಣಿನ ಬಗೆಗಿದ್ದ ಪೂರ್ವಾ ಗ್ರಹಪೀಡಿತ ದೃಷ್ಠಿ ದೋಷವನ್ನು ಸರಿಪಡಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಬಸವಯುಗದ ವಚನಕಾರ್ತಿಯರಂತೆ ಕೊಡುಗೆಯಿತ್ತವರನ್ನು ಬಹುಶ: ಯಾವ ಶತಮಾನವೂ ಕಂಡಿರಲಿಲ್ಲ. ಆ ಕಾಲ ಘಟ್ಟದಲ್ಲಿ ಜಾತಿ, ಮತಗಳ ಬೇಧ ವಿಲ್ಲದೆ ಹೆಣ್ಣು-ಗಂಡು ಸಂಯುಕ್ತವಾಗಿ ‘ಅನುಭವ ಮಂಟಪ’ದಲ್ಲಿ ಸೇರಿ ವಾದ-ಸಂವಾದ, ಚರ್ಚೆಗಳಲ್ಲಿ ಪಾಲ್ಗೊಂಡಿರುವುದು ಕಂಡು ಬರುತ್ತದೆ. ವಚನಕಾರ್ತಿಯರೆಂದೊಡನೆ ತಟ್ಟನೆ ನೆನಪಿಗೆ ಬರುವವರು ಅಕ್ಕಮಹಾದೇವಿ ಮತ್ತು ಮುಕ್ತಾಯಕ್ಕ. ಇವರಿಬ್ಬರೂ ಪ್ರಸಿದ್ದ ವಚನಕಾರ್ತಿಯರೆನಿಸಿದ್ದಾರೆ. ಆದರೆ ಇವರ ಕಾಲದಲ್ಲೇ ಹಲವಾರು ಶರಣೆಯರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿರುವುದನ್ನು ಯಾರು ಪ್ರಚುರ ಪಡಿಸದೆ ಇರುವುದು ಅಚ್ಚರಿಯನ್ನುಂಟು ಮಾಡುತ್ತದೆ. ಇಂತಹವರನ್ನು ‘ಅಪ್ರಸಿದ್ದ ವಚನಕಾರ್ತಿಯರು’ ಅಥವಾ ‘ಗೌಪ್ಯವಚನ ಕಾರ್ತಿಯರೆಂದು ‘ಕರೆಯ ಬಹುದಾಗಿದೆ. ವಚನಯುಗವು ಮಹಿಳೆಯರ ಆಂತರ್ಯದಲ್ಲಿ ನವ ಜಾಗೃತಿ, ನವ ಸಾಕ್ಷರತೆಯ ಅರಿವು ಮೂಡಿಸಿ, ಎಲ್ಲಾ ವರ್ಗದ ಮಹಿಳೆ ಯರಿಗೂ ವಿದ್ಯಾಭ್ಯಾಸ ಕಲಿಸಿ ೩೬ಕ್ಕೂ ಹೆಚ್ಚು ಜನ ಶರಣೆಯರು ವಚನ ರಚನೆ ಮಾಡುವ ಅವಕಾಶ ಕಲ್ಪಿಸಿ ಕೊಟ್ಟಿತು. ಇವರಲ್ಲಿ ಬಹುಪಾಲು ಶರಣೆಯರು ಸಂಸಾರದ ಸತ್ಯವನ್ನು ಅರಿತು, ಬದುಕಿನ ಶುದ್ದತೆಗಾಗಿ ಹಂಬಲಿಸಿ, ಸಂಸಾರವೆಂಬುದು ಆಧ್ಯಾತ್ಮಕ್ಕೆ ಬಾಧಕವಲ್ಲ, ಪ್ರೇರಕ, ಪೋಷಕವೆಂಬುದನ್ನು ಶ್ರುತ ಪಡಿಸಿದರು. ಇವರು ವ್ರತಾಚರಣೆ, ಜಾತೀಯತೆ, ಕುಲ ಭೇಧ, ಭಕ್ತಿ, ಜ್ಞಾನ, ಆಚರಣೆ,ನೀತಿ-ನಿಯಮಗಳ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿದ್ದರು. ಇವರಲ್ಲಿ ಬಹಳಷ್ಟು ಜನ ಶರಣೆಯರು ತಮ್ಮ ಗಂಡನ ಕಾಯಕವೆಂಬ ಹಣತೆಯಲ್ಲಿ ಎಣ್ಣೆಯಾಗಿ, ಬತ್ತಿಯಾಗಿ ಪತಿಗೆ ಮಾರ್ಗಜ್ಯೋತಿಯಾಗಿದ್ದಾರೆ. ಅವರಲ್ಲೆ ಕೆಲವರು ಎಚ್ಚರ ತಪ್ಪಿದ ತಮ್ಮ ಗಂಡನನ್ನು ಸರಿದಾರಿಗೆ ತರಲು ಶ್ರಮಿಸಿ ಯಶಸ್ವೀಯಾಗಿದ್ದಾರೆ. ಕೆಲವು ಶರಣೆಯರು ತಮ್ಮ ಗಂಡನ ಹೆಸರನ್ನೇ ವಚನದ ಅಂಕಿತವಾಗಿಟ್ಟು ಕೊಂಡರೆ, ಮತ್ತೆ ಕೆಲವರು ತಮ್ಮ ಇಷ್ಟದೈವವನ್ನು ವಚನದ ಅಂಕಿತವಾಗಿಟ್ಟು ಕೊಂಡಿದ್ದಾರೆ. ಶರಣೆಯರು ತಮ್ಮ ವಚನಗಳಲ್ಲಿ- ಪ್ರಚಲಿತ ವಿದ್ಯಮಾನಗಳ ವಿಮರ್ಶೆ, ಕಾಯಕ ಪ್ರೀತಿ, ಧರ್ಮನಿಷ್ಠೆ, ಕರುಣೆ, ಮಾನವೀಯತೆ, ವಿಶ್ವಮಾನವ ಪರಿಕಲ್ಪನೆ, ನೇರನುಡಿ, ಆತ್ಮವಿಶ್ವಾಸದಿಂದ ವಚನಗಳನ್ನು ರಚಿಸಿರುವುದು ಕಂಡು ಬರುತ್ತದೆ… ಬಸವಣ್ಣನವರ ಕಾಲದಲ್ಲಿ ವಚನಕಾರ್ತಿಯರು..! ಸುಮಾರು ೮೦೦ವರ್ಷಗಳ ಹಿಂದೆ ಅಂದರೆ ೧೨ನೇ ಶತಮಾನದ ಮಧ್ಯಭಾಗದಲ್ಲಿದ್ದ ಬಸವಣ್ಣ ಜಗತ್ತಿನ ಪ್ರ ಪ್ರಥಮ ವಿಚಾರವಾದಿ, ಕ್ರಾಂತದರ್ಶಿ, ವಿಭೂತಿಪುರುಷ,ದಾರ್ಶನಿಕ, ಅನುಭಾವಿ, ಕ್ರಿಯಾಶೀಲ ಹೋರಾಟಗಾರ, ದೂರಗಾಮಿ ಚಿಂತಕ, ಮಹಿಳಾವಾದಿ, ಸತ್ಯ ಸಾಮ್ರಾಜ್ಯದ ಸಾರ್ವ ಭೌಮ. ತಾವು ಬೆಳೆಯುವುದು ಮಾತ್ರವಲ್ಲದೆ, ಲೋಕವು ತಮ್ಮೊಡನೆ ಬೆಳೆಯಬೇಕೆಂಬ ಸಂಕಲ್ಪ ತೊಟ್ಟ ವಿಶ್ವಕುಟುಂಬಿ. ವಿಶ್ವದಲ್ಲಿ ಎಲ್ಲಾ ಜಾತಿ-ಜನಾಂಗಗಳ ನಿಜ ಸಂಸ್ಕೃತಿಯ ತಾಯಿ ಬೇರು ಅಂತ:ಕರಣದಿಂದ ಕೂಡಿದ ಜೀವನ ಪ್ರೀತಿ. ಈ ಲೋಕ ಮಾನವ ಕೇಂದ್ರಿತವಲ್ಲ, ಜೀವ ಕೇಂದ್ರಿತವಾದುದು. ಅಹಿಂಸೆ, ನಿಸ್ವಾರ್ಥ ಪ್ರೇಮದಿಂದ ಕೂಡಿದ ಪ್ರಪಂಚವನ್ನು ಸೃಷ್ಠಿಸುವುದೇ ಬಸವಣ್ಣನವರ ಕನಸಾಗಿತ್ತು. ಅವರ ದೃಷ್ಟಿಯಲ್ಲಿ ಹೆಣ್ಣು ಪ್ರತಿಭೆಯಲ್ಲಿ, ಬೌದ್ಧಿಕತೆಯಲ್ಲಿ ಪುರುಷನಷ್ಟೇ ಸರಿ ಸಮಾನಳು. ಜೀವನದ ಸಕಲ ವ್ಯವಹಾರದಲ್ಲಿ ಅವಳಷ್ಟು ಕುಶಾಗ್ರಮತಿ ಬೇರ್ಯಾರಿಲ್ಲ. ಬಸವಣ್ಣ ಮಹಿಳೆಯರ ಅಂತ:ಕರಣವನ್ನು ಓರೆಗಚ್ಚಿ ನೋಡಿದರು. ಹಾಗಾಗಿ ‘ಗೌಪ್ಯ ವಚನಕಾರ್ತಿಯರು’ ವಚನ ಸಾಹಿತ್ಯ ರಚನೆಯಲ್ಲಿ ಉತ್ಸುಕರಾಗಿ ವಚನಗಳನ್ನು ರಚಿಸಿದರು. ಅವರಲ್ಲಿ ಪ್ರಮುಖರಾದವರೆಂದರೆ-ಅಮುಗೆ ರಾಯಮ್ಮ, ಅಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ, ಕೇತಲದೇವಿ, ಕದಿರ ರೆಮ್ಮವ್ವೆ, ಕಾಳವ್ವೆ, ಕಾಮವ್ವೆ, ಗಂಗಮ್ಮ, ಗೊಗ್ಗವ್ವೆ, ಬೊಂತಾದೇವಿ, ನೀಲಾಂಬಿಕೆ, ಲಿಂಗಮ್ಮ, ಮಸಣಮ್ಮ, ವೀರಮ್ಮ, ಲಕ್ಷಮ್ಮ, ರೆಮ್ಮವ್ವೆ, ರೇಕಮ್ಮ, ಸತ್ಯಕ್ಕ, ವೊದಲಾದವರು. ಇನ್ನು ಇರುವ ಬಹುತೇಕ ವಚನಕಾರ್ತಿಯರ ಹೆಸರಿದ್ದರೂ ಅವರ ವಚನಗಳು ಸಿಕ್ಕಿಲ್ಲ. ಉದಾ: ಕಲ್ಯಾಣಮ್ಮ, ಕದಿರ ಕಾಳವ್ವೆ ಮುಂತಾದವರು. ವಚನ ಸಾಹಿತ್ಯವು ಕನ್ನಡ ದೇಸಿಯ ಪದ್ಯಜಾತಿ. ವಚನಕಾರರು ಅಚ್ಚ ಕನ್ನಡ ಕೃಷಿಕರು… ಗೌಪ್ಯ ವಚನಕಾರ್ತಿಯರ ಸಂಕ್ಷಿಪ್ತ ಪರಿಚಯ/ವಚನಗಳು ಅಮುಗೆರಾಯಮ್ಮ— ಈಕೆ ಸೊನ್ನಲಿಗೆ(ಈಗಿನ ಸೊಲ್ಲಾಪುರ) ಊರಿನವಳು, ನೇಕಾರ ಕುಲದವಳು, ಅಮುಗೆ ದೇವಯ್ಯನ ಧರ್ಮಪತ್ನಿ. ಇವಳ ಲಿಂಗನಿಷ್ಠೆ ಗಾಢವಾದುದು. ಈಕೆಯ ಪಾಲಿಗೆ ಗುರು, ಲಿಂಗ, ಪತಿ ಮೂರು ಒಂದೇ. ಇವಳ ವಚನಗಳಲ್ಲಿ ಕೆಚ್ಚು, ಧ್ಯೆರ್ಯ,ಛಲ, ನಿಷ್ಟುರತೆ, ಆಧ್ಯಾತ್ಮ ಅಭಿಮಾನ, ವಿಡಂಬನೆ, ವಿರಾಗಿಗಳ ಕಟುಟೀಕೆ ಇತ್ಯಾದಿ ಮೂಡಿ ಬಂದಿವೆ. ರಾಯಮ್ಮನ ಅಂಕಿತ “ಅಮುಗೇಶ್ವರ”… ‘ಎನ್ನ ಕಣ್ಣೊಳಗಿನ ಕಟ್ಟಿಗೆಯ ಮುರಿದವರಾರನೂ ಕಾಣೆ ಎನ್ನ ಕಾಲೊಳಗಿನ ಮುಳ್ಳ ತೆಗೆದವರಾರನೂ ಕಾಣೆ ಎನ್ನ ಅಂಗದಲ್ಲಿಪ್ಪ ಅಹಂಕಾರವ ಸುಡುವವರಾರನೂ ಕಾಣೆ ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ ಕೆಡಿಸುವರಾರನೂ ಕಾಣೆನಯ್ಯಾ ಆದ್ಯರ-ವೇದ್ಯರ ವಚನಗಳಿಂದ ಅರಿದೆವೆಂಬುವರು ಅರಿಯಲಾರರು ನೋಡಾ! ಎನ್ನ ಕಣ್ಣೊಳಗಿನ ಕಟ್ಟಿಗೆಯ ನಾನೇ ಮುರಿಯಬೇಕು ಎನ್ನ ಕಾಲೊಳಗಿನ ಮುಳ್ಳ ನಾನೇ ತೆಗೆಯಬೇಕು ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೇ ಸುಡಬೇಕು ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ ನಾನೇ ಕಳೆಯಬೇಕು ಅಮುಗೇಶ್ವರಲಿಂಗವ ನಾನೇ ಅರಿಯಬೇಕು’. ಅಕ್ಕಮ್ಮ– ಈಕೆ ‘ರೆಮ್ಮವ್ವೆ’ ಎಂದೂ ಗುರ್ತಿಸಲ್ಪಟ್ಟಿದ್ದಾಳೆ. ಅಕ್ಕಮಹಾದೇವಿಯ ಪ್ರಭಾವಕ್ಕೆ ಒಳಗಾಗಿ ಸಂಸಾರ ಬಂಧನಕ್ಕೆ ಸಿಲುಕದೆ, ಸ್ವತಂತ್ರವಾಗಿ ಬದುಕಲು ಹಂಬಲಿಸಿ ವೈವಾಹಿಕ ಜೀವನವನ್ನು ಧಿಕ್ಕರಿಸಿದವಳು. ವ್ರತಾಚರಣೆಗೆ ಸಂಬಂಧಿಸಿದಂತೆ ಕೆಲವು ವಚನಗಳನ್ನು ಸರಳ, ಸುಂದರ, ಸ್ಪಷ್ಟ ವಾಗಿ ಪ್ರೌಢಭಾಷೆಯಲ್ಲಿ ನಿರೂಪಿಸಿರುವಳು. ಇವಳ ಅಂಕಿತನಾಮ “ಆಚಾರ ವೇ ಪ್ರಾಣವಾದ ರಾಮೇಶ್ವರಲಿಂಗ”… ‘ಬತ್ತಲೆಯಿದ್ದವರೆಲ್ಲ ಕತ್ತೆಯ ಮರಿಗಳು ತಲೆ ಬೋಳಾದವರೆಲ್ಲ ಮುಂಡೆಯ ಮಕ್ಕಳು ತಲೆ ಜೆಡೆಗಟ್ಟಿದವರೆಲ್ಲ ಹೊಲೆಯರ ಸಂತಾನ ಆವ ಪ್ರಕಾರವಾದಡೇನು, ಅರಿವೆ ಮುಖ್ಯವಯ್ಯಾ ಆಚಾರವೇ ಪ್ರಾಣವಾದ ರಾಮೇಶ್ವರಲಿಂಗದಲ್ಲಿ’. ಅಕ್ಕನಾಗಮ್ಮ– ಅಕ್ಕನಾಗಮ್ಮನು ಬಸವಣ್ಣನವರ ಸಹೋದರಿ, ಚನ್ನಬಸವಣ್ಣನ ತಾಯಿ, ಶಿವದೇವ/ಶಿವಸ್ವಾಮಿ ಎಂಬುವರ ಪತ್ನಿ. ಈಕೆಗೆ ನಾಗಮ್ಮ, ನಾಗಲಾಂಬಿಕೆ, ನಾಗಾಂಬಿಕೆ, ನಾಗಾಯಿ ಮುಂತಾದ ಹೆಸರುಗಳಿವೆ. ಇವಳು ಧಿರೋದಾತ್ತ ಶರಣೆ. ಮಹಾ ಮನೆಯ ಸೂತ್ರಧಾರಿಣಿಯಾಗಿ, ಮಹಾ ಶಕ್ತಿಯಾಗಿ, ಅನ್ನಪೂರ್ಣೆಯಾಗಿ ‘ಅನುಭವ ಮಂಟಪದ’ ಜ್ಞಾನ ಹಾಗೂ ಅನುಭಾವ ದಾಸೋಹದಲ್ಲಿ ಭಾಗಿಯಾಗಿ ತಮ್ಮನ ಅಭ್ಯುದಯಕ್ಕೆ ನೆರವಾದವಳು. ನಾಗಮ್ಮನ ವಚನಗಳ ವಸ್ತು-ಬಸವಭಾವ, ವ್ರತಾಚಾರ, ಶರಣಸತಿ, ಲಿಂಗಪತಿ ಮನೋಧರ್ಮ, ಅದರೊಂದಿಗೆ ಜೀವನದಲ್ಲಿ ಎದುರಿಸಿದ ಎಡರು-ತೊಡರುಗಳು. ತನ್ನ ಸಮಕಾಲೀನ ಶಿವಶರಣ, ಶಿವಶರಣೆಯರನ್ನು ಕುರಿತು ಪ್ರಸ್ತಾಪಿಸಿದ್ದಾಳೆ. ಈಕೆಯ ವಚನಗಳ ಅಂಕಿತ “ಬಸವಣ್ಣ ಪ್ರಿಯ ಚನ್ನಸಂಗಣ್ಣ”… ಗುರು ಸಂಬಂಧಿ ಗುರುಭಕ್ತಯ್ಯನು ಲಿಂಗ ಸಂಬಂಧಿ ಪ್ರಭುದೇವರು ಜಂಗಮ ಸಂಬಂಧಿ ಸಿದ್ಧರಾಮನು ಪ್ರಸಾದ ಸಂಬಂಧಿ ಮರುಳ ಶಂಕರದೇವರು ಪ್ರಾಣಲಿಂಗ ಸಂಬಂಧಿ ಅನಿಮಿಷದೇವರು ಶರಣ ಸಂಬಂಧಿ ಘಟ್ಟಿವಾಳಯ್ಯನು ಐಕ್ಯ ಸಂಬಂಧಿ ಅಜಗಣ್ಣಯ್ಯನು ಸರ್ವಾಚಾರ ಸಂಬಂಧಿ ಚನ್ನಬಸವಣ್ಣನು ಇಂತಿವರ ಸಂಬಂಧ ಎನ್ನ ಸರ್ವಾಂಗದಲಿ ನಿಂದು ಬಸವಣ್ಣಪ್ರಿಯ ಚನ್ನಸಂಗಣ್ಣಯ್ಯನ ಹೃದಯ ಕಮಲದಲಿ ನಿಜ ನಿವಾಸಿಯಾಗಿದ್ದೆನು ಆಯ್ದಕ್ಕಿ ಲಕ್ಕಮ್ಮ– ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೋಕಿನ ‘ಅಮರೀಶ್ವರಿ ಗ್ರಾಮ’ದವಳು. ದಲಿತ ಕುಟುಂಬದ ಸ್ವಾಭಿಮಾನಿ ಹೆಣ್ಣು. ಅವಳ ಪತಿ ‘ಮಾರಯ್ಯ’. ‘ಬಡತನ’ವೆಂಬ ದಿವ್ಯ ಅನುಭವವೇ ಲಕ್ಕಮ್ಮನಲ್ಲಿ ಸೂಕ್ಷ್ಮ ಚಿಂತನೆ ಮತ್ತು ಗಾಂಭೀರ್ಯದ ಬದುಕನ್ನು ಕಲಿಸಿತು. ದಂಪತಿಗಳು ಬಸವಣ್ಣನವರ ತತ್ವಕ್ಕೆ, ವ್ಯಕ್ತಿತ್ವಕ್ಕೆ ಮಾರು ಹೋಗಿ, ‘ಅಮರೀಶ್ವರಿ ಗ್ರಾಮ’ದಿಂದ ಕಲ್ಯಾಣಕ್ಕೆ ಬಂದು ನೆಲೆಸಿದರು. ಕಾಯಕ ಮಾಡಿ, ಜನರಿಗೆ ನೀಡಿ ಬದುಕ ಬೇಕೆ ಹೊರತು, ಹೆಚ್ಚೆಚ್ಚು ಶೇಖರಿಸಿಡಬಾರದು ಎಂಬ ನಿಲುವಿನವಳು. ಲಕ್ಕಮ್ಮ ‘ಹಿಡಿಯಕ್ಕಿ’ಯಿಂದಲೇ ಒಂದು ಲಕ್ಷದ ತೊಂಬತ್ತಾರು ಸಾವಿರದ ಜಂಗಮರಿಗೆ ಊಟ ನೀಡಿ ಬಸವಣ್ಣನವರಿಂದ “ಸೈ”ಎನಿಸಿಕೊಂಡವಳು. ಶರಣರೆಲ್ಲ ಆಕೆಯ ಪವಾಡಕ್ಕೆ ಮೂಕ ವಿಸ್ಮಿತ ರಾಗಿ ‘ಭಕ್ತಿಯ ಮುಂದೆ ಎಲ್ಲವೂ ಮಿಥ್ಯ’ವೆಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಒಮ್ಮೆ ಸಾಕ್ಷಾತ್ ಶಿವನೇ ಜಂಗಮ ರೂಪದಲ್ಲಿ ಬಂದು, ಅಸಾಧ್ಯ ಚಳಿಯನ್ನೂ ಸೃಷ್ಠಿಸಿ ನಡುಗುತ್ತಾ, ಶಿವಭಕ್ತರಾದ ಇವರಿಬ್ಬರು ಉಟ್ಟ ಬಟ್ಟೆಯೇ ಬೇಕೆಂದು ಕೇಳಿ ತೊಟ್ಟುಕೊಂಡು ಅವರ ಭಕ್ತಿಗೆ ಮೆಚ್ಚುಗೆ ಸೂಚಿಸಿದನಂತೆ. ಆಯ್ದಕ್ಕಿ ಲಕ್ಕಮ್ಮನ ವಚನಗಳಲ್ಲಿ ಆತ್ಮೋದ್ಧಾರ, ಲೋಕೋ ದ್ಧಾರಗಳೆಂಬ ದ್ವಿಮುಖ ಆಶಯ, ಕಾಯಕತತ್ವ , ನಿಶ್ಚಲ ನಿಲುವು, ಜ್ಞಾನದ ಅರಿವು, ಸಮತಾಭಾವ, ಇತರರ ಒಳ್ಳೆತನವನ್ನೇ ಪ್ರಶ್ನಿಸುವ ದಿಟ್ಟತನ, ಅತಿಯಾಸೆ ಒಳ್ಳೆಯದಲ್ಲವೆಂಬ ನಿಲುವು, ಆಕೆಯ ಅಚಲ ಆತ್ಮವಿಶ್ವಾಸ, ನಿರ್ಮಲ ವ್ಯಕ್ತಿತ್ವದ ಅನಾವರಣವಿದೆ. ಆಕೆಯ ಅಂಕಿತನಾಮ ‘ಮಾರಯ್ಯಾ ಪ್ರಿಯ ಅಮರೇಶ್ವರಲಿಂಗ’… ‘ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳ್ದನೆ ಭಾವ ಶುದ್ಧವಾಗಿ ಮಹಾ ಶರಣರ ತಿಪ್ಪೆಯ ತಪ್ಪಲು ಅಕ್ಕಿಯ ತಂದು ನಿಶ್ಚೈಸಿ ಮಾಡಬೇಕು ಮಾರಯ್ಯಾಪ್ರಿಯ ಅಮರೇಶ್ವರಲಿಂಗಕ್ಕೆ ಬೇಗ ಹೋಗು ಮಾರಯ್ಯಾ ಅಂಗವರಿತ ಅರುವೆಯ ಅಂಗದಲ್ಲಿ ಕಟ್ಟಿ ಬಯಕೆಯರಿತ ಕೈಯಲ್ಲಿ ತಂಡುಲವನಾಯ್ದುಕೊಂಡು ಬನ್ನಿರಿ’ ಕದಿರ ರೆಮ್ಮವ್ವೆ– ನೂಲುವ ಕಾಯಕದವಳು. ತನ್ನ ಕಾಯಕದೊಂದಿಗೆ ಆಧ್ಯಾತ್ಮವನ್ನು ಸಮನ್ವಯಗೊಳಿಸಿ ಪ್ರೌಢವೆನಿಸುವ ‘ಬೆಡಗಿನ ವಚನ’ಗಳನ್ನೂ ರಚಿಸಿದ್ಧಾಳೆ. ತನಗೆ ಜೀವನ ರೂಪಿಸಿ ಕೊಳ್ಳಲು, ಸ್ವತಂತ್ರವಾಗಿ ಬದುಕಲು ಅವಕಾಶ ಕಲ್ಪಿಸಿಕೊಟ್ಟ ಶರಣರನ್ನು ಕೃತಜ್ಞತೆಯಿಂದ ಸ್ಮರಿಸಿರುವಳು. ಸೃಷ್ಠಿ, ಸ್ಥಿತಿ ,ಲಯಕಾರರಾದ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳನ್ನು ತನ್ನ ಕದಿರ ಕಾಯಕದ ದೃಷ್ಟಾಂತಗಳೊಂದಿಗೆ ಅಂತರ್ಗತಗೊಳಿಸಿರುವಳು. ಈಕೆಯ ವಚನಗಳ ಅಂಕಿತ “ಗುಮ್ಮೇಶ್ವರ”… ನಾ ತಿರುಗುವ ರಾಟೆಯ ಕುಲ-ಜಾತಿ ಕೇಳಿರಣ್ಣಾ ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು ನಿಂದ ಬೊಂಬೆ ಮಹಾರುದ್ರ ರುದ್ರನ ಬೆಂಬಳಿಯವೆರಡು ಸೂತ್ರಕರ್ಣ ಅರಿವೆಂಬ ಕದಿರು ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ ಸುತ್ತಿತು ನೂಲು ಕದಿರು ತುಂಬಿತ್ತು ರಾಟೆಯ ತಿರುಹಲಾರೆ ಎನ್ನ ಗಂಡ ಕುಟ್ಟಿಹ ಇನ್ನೇವೆ ಕದಿರರೆಮ್ಮಿಯೊಡೆಯ ಗುಮ್ಮೇಶ್ವರ ? ಕನ್ನಡಿ ಕಾಯಕದ ರೇಮವ್ವ– ಈಕೆ ಸಾಮಾನ್ಯ ಜನವರ್ಗದಿಂದ ಬಂದವಳು. ಲಿಂಗಾಯತಧರ್ಮದಲ್ಲಿ ಇವಳಿಗಿದ್ದ ನಿಷ್ಠೆ, ಶ್ರದ್ಧೆ, ನೇರ ನಡೆ-ನುಡಿ, ನಿಷ್ಠುರ ಮನೋಭಾವ ಅವಳ ವಚನಗಳಲ್ಲಿ ವ್ಯಕ್ತಗೊಂಡಿವೆ. ಕೆಲವೆಡೆ ಈಕೆ ಅಹಂಕಾರಿಗಳ ವರ್ತನೆಯ ವಿಡಂಬನೆ ಮಾಡಿದ್ದಾಳೆ. ಇವಳ ವಚನಗಳ ಅಂಕಿತ “ನಿರಂಗಲಿಂಗ”… ಕೈಯಲ್ಲಿ ಕನ್ನಡಿಯಿರಲು ತನ್ನ ತಾ ನೋಡಬಾರದೆ ? ಲಿಂಗ-ಜಂಗಮದ ಪ್ರಸಾದಕ್ಕೆ ತಪ್ಪದಲ್ಲಿ ಕೊಲ್ಲಬಾರದೆ ? ಕೊಂದಡೆ ಮುಕ್ತಿಯಿಲ್ಲವೆಂಬುವರ ಬಾಯಲ್ಲಿ ಪಡಿಹಾರನ ಪಾದರಕ್ಷೆಯನಿಕ್ಕುವೆ ಮುಂಡಿಗೆಯನೆತ್ತಿರೊ ಭ್ರಷ್ಟ ಭವಿಗಳಿರಾ! ಎತ್ತಲಾರದಡೆ ಸತ್ತ ಕುನ್ನಿ ನಾಯ ಬಾಲವ ನಾಲಗೆಯ ಮುರುಟಿರೊ ಸದ್ಗುರುಸಂಗ ನಿರಂಗಲಿಂಗದಲ್ಲಿ ಉರಿಲಿಂಗ ಪೆದ್ದಿಗಳ ಪತ್ನಿ ಕಾಳವ್ವೆ — ಈ ದಂಪತಿಗಳು ಮಹಾರಾಷ್ಟೃದ ಕಡೆಯಿಂದ ಬಂದವರು. ಒಂದೆಡೆ ಕಿತ್ತು ತಿನ್ನುವ ಬಡತನ, ಮತ್ತೊಂದೆಡೆ ಕಳ್ಳನಾಗಿದ್ದ ಗಂಡನೊಡನೆ ಕಾಳವ್ವೆ ಪ್ರಯಾಸದ ಜೀವನ ನಡೆಸುತ್ತಿರುತ್ತಾಳೆ. ಒಂದು ದಿನ ಕಳ್ಳತನ ಮಾಡಲು ಹೋದ ಉರಿಲಿಂಗಪೆದ್ದಿ

ಸ್ವಾತ್ಮಗತ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-4 ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು ಎಂದಿಗೂ ತೆರೆಯದಿರಲಿ! ರಾತ್ರಿ ಮುಚ್ಚಿದ ಬಾಗಿಲನ್ನು ಬೆಳಂಬೆಳಿಗ್ಗೆ ತೆಗೆದು, ಕಸ ಗುಡಿಸಿ ಮನೆಯ ಮುಂದೆ ನೀರು ಚಿಮುಕಿಸಿ, ರಂಗೋಲಿ ಹಾಕುವುದೆಂದರೆ ನನಗೆ ಒಂದು ಬಗೆಯ ಸಂಭ್ರಮ. ಅಂಗಳದಲ್ಲಿ ಮೊಗ್ಗು ಬಿರಿದು ಹೂವಾಗುವ ಚೆಂದ, ಚಿಲಿಪಿಲಿ ಕೂಗುತ್ತ ಹಕ್ಕಿಗಳು ಹಾರಾಡುವ ಸಡಗರ, ಮೂಡಣ ರಂಗಾಗಿಸಿ ಬರುವ ನೇಸರನ ಅಂದ…ಎಲ್ಲವುಗಳ ಮೇಲೆ ಕಿರುನೋಟ ಬೀರುವ, ತಂಗಾಳಿಗೆ ಮೈಮನ ಪುಳಕಿತವಾಗುವ ಕಾಲ ಮುಂಜಾವು. ಈಗ ಅದಕ್ಕೂ ಬಂದಿದೆ ಸಂಚಕಾರ. ಬಿಡುಬೀಸಾಗಿ ಅಂಗಳದಲ್ಲಿ ಕೆಲಸ ಮಾಡಲೂ ಭಯ. ಹೊಟ್ಟೆ ಪಾಡಿಗೆ ತರಕಾರಿ ಮಾರಲು ಬರುವವರತ್ತಲೂ ಸಂಶಯ.. ಅಯ್ಯೋ ಬದುಕೇ.. ಮತ್ತದೇ ಮುಚ್ಚಿದ ಬಾಗಿಲ ಹಿಂದೆ ಸೇರಿಕೊಂಡೆ. ‘ಅಮ್ಮಾ ಇವತ್ತು ದೋಸೆಗೆ ಪುದಿನಾ ಚಟ್ನಿ ಮಾಡು, ಶೇಂಗಾ ಚಟ್ನಿಪುಡಿ ಮಾಡು’ ಎಂದು ಒಬ್ಬೊಬ್ಬ ಮಗ ಒಂದೊಂದು ಬೇಡಿಕೆ ಇಟ್ಟರು. ಕೆಲಸ ಮಾಡುವಾಗಲೂ ಆತಂಕ. ಈಗ ಅವರು ಇಟ್ಟ ಬೇಡಿಕೆ ಪೂರೈಸಲು ಬೇಕಾದದ್ದೆಲ್ಲ ಸಿಗುತ್ತದೆ ಮುಂದೇನು ಕತೆಯೋ..ಅಯ್ಯೋ ಮುಂದಿನ ದಿನಗಳ ಭಯದಲ್ಲಿ ನಾನು ಇಂದಿನ ಖುಷಿಯನ್ನೇಕೆ ಕಳೆದುಕೊಳ್ಳುತ್ತಿದ್ದೇನೆ? ಈ ಕ್ಷಣ, ಈ ದಿನವನ್ನು ಆನಂದವಾಗಿ ಕಳೆಯುವ ಅವಕಾಶ ಇದೆಯಲ್ಲ ಅದನ್ನುಉಪಯೋಗಿಸಿಕೊಳ್ಳೋಣ ಎಂದು ನೆನಪಾದ ಹಾಡು ಗುನುಗುತ್ತ ಆನಂದದಿಂದ ಮನೆಗೆಲಸದಲ್ಲಿ ತೊಡಗಿದೆ. ತಿಂಡಿ ತಿಂದು ಮುಗಿದೊಡನೆ ಪೇಪರ್ ಪುಟ ತಿರುಗಿಸಿದರೆ ಮದ್ಯಪಾನ ವ್ಯಸನಿಯೊಬ್ಬ ಕುಡಿಯಲು ಹೆಂಡ ಸಿಗದೇ ಇರುವುದರಿಂದ ನೇಣಿಗೆ ಶರಣಾದ ಎನ್ನುವ ಸುದ್ದಿ ಕಂಡಿತು. ಹಳ್ಳಿಯಲ್ಲಿ ವಾಸಿಸುವ ಅಕ್ಕನಿಗೆ ಪೋನ ಮಾಡಿದಾಗ ತಂಗಿ ಈಗ ನೋಡು ನಮ್ಮ ಮನೆಗೆ ಬರುವ ಕೆಲಸಕ್ಕೆ ಬರುವ ಹೆಂಗಸರ ಖುಷಿ ನೋಡಲೆರಡು ಕಣ್ಣು ಸಾಲದು.. ಹೆಂಡದಂಗಡಿ ಬಾಗಿಲಾ ಬಂದ ಮಾಡಿರಲ್ರಾ. ಓಣಿ ಒಳಗೆ ಜಗಳ ಇಲ್ಲಾ. ಗಂಡಸರು ದುಡಿದ ದುಡ್ಡು ಮನೆ ತಂಕಾ ಬರ್ತದೆ. ಕುಡಿದು ಮಯ್ಯಿ ನುಗ್ಗಾಗು ಹಾಂಗೆ ಬಡಿಸ್ಗಳದು ತಪ್ಪೇತೆ. . ಕೊರೋನಾ ಬಂದಿದ್ದು ಒಂದ ನಮೂನಿ ಚೊಲೋನೆ ಮಾಡ್ತಾ ಐತ್ರಾ’ ಎನ್ನುತ್ತಾ ಕಿಲಕಿಲನಗುವ ಅವರ ಮಾತು ಕೇಳಲು ಮೋಜು. ಮದ್ಯಪಾನ ಮೈಮುರಿದು ದುಡಿಯುವ ವರ್ಗಕ್ಕೆ ಅಲ್ಪ ನೆಮ್ಮದಿ ತರುತ್ತದೆ ಎನ್ನುವದು ಭ್ರಮೆಯಷ್ಟೇ. ಮತ್ತಷ್ಟು ಜನ ಪ್ರೆಸ್ಟಿಜಿಗಾಗಿ ಕುಡಿಯುವವರು. ಒಟ್ಟಾರೆ ಕುಡುಕರು ಎಬ್ಬಿಸುವ ಸಾಮಾಜಿಕ ತಲ್ಲಣಗಳನ್ನು ಲೆಕ್ಕ ಹಾಕಿದರೆ ಅದರಿಂದ ಬರುವ ಆದಾಯ ಸರಕಾರಕ್ಕೆ ಲಾಭ ಎನ್ನುವುದೂ ಸುಳ್ಳೆಂಬುದು ಸಾಬೀತಾಗುತ್ತದೆ. ಎಷ್ಟೋ ಜನರ ಬಾಳನ್ನು ಹೈರಾಣಾಗಿಸುವ ದುಶ್ಚಟಗಳಿಗೆ ಖಾಯಂ ಆಗಿ ಪೂರ್ಣ ವಿರಾಮ ಇಡುವತ್ತ ಸರಕಾರ ದಿಟ್ಟ ಹೆಜ್ಜೆ ಇಟ್ಟರೆ ಅದೆಷ್ಟು ಜೀವಗಳು ಸಂತಸ ಪಡಬಹುದು. ಅದೆಷ್ಟು ಕುಟುಂಬಗಳು ನೆಮ್ಮದಿಯಿಂದ ಬದುಕಬಹುದು ಅಲ್ಲವೇ? ****** ಮುಂದುವರಿಯುವುದು… ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-3 ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಅರಿವು ವಿಸ್ತರಿಸಲಿ.. ಮನೆ ಬಾಗಿಲು ದಾಟಬೇಡಿ.. ಮನೆಯೊಳಗೇ ಸುರಕ್ಷಿತವಾಗಿರಿ ಎಂದಕೂಡಲೇ ಮನಸ್ಸು ತರಾವರಿ ಚಿಂತಿಸುತ್ತದೆ. ಇಷ್ಟಪಟ್ಟು ಸಾಲ ತೆಗೆದು, ಕಷ್ಟಬಿದ್ದು ಕಟ್ಟಿಸಿದ ನಮ್ಮ ಮನೆಯೂ ನಮಗೆಸೆರೆಮನೆಯೆನಿಸುತ್ತದೆ. ಯಾಕೆ ಹೀಗೆ? ಯಾವುದು ಬೇಡ ಎಂದು ಹೇಳುತ್ತಾರೆಯೋ ಅದನ್ನು ಮೀರುವುದು ಸಾಹಸ… ಆದರೆ ಈಗ ಅದು ದುಃಸ್ಸಾಹಸ. ವಿವೇಚನೆ ಇಲ್ಲದ ನಡೆ. ಸುರಕ್ಷಿತತೆಯ ಪ್ರಶ್ನೆ ಎದ್ದಾಗ ಅದಕ್ಕೇ ನಮ್ಮ ಮೊದಲ ಆದ್ಯತೆ. ಮನೆ ಬಾಗಿಲು ದಾಟುವುದು ಹಾಗಿರಲಿ ನಮ್ಮ ಮುಖವನ್ನೇ ನಾವು ಬೇಕಾದಷ್ಟು ಸಲ ಮುಟ್ಟುವಂತಿಲ್ಲ! ಕೈ ತೊಳೆದು ಮುಖ ಮುಟ್ಟಬೇಕೋ, ಮುಖ ಮುಟ್ಟಿದ ನಂತರ ಕೈ ತೊಳೆಯಬೇಕೋ ಗೊಂದಲ! ಒಂದರ್ಥದಲ್ಲಿ ನಮಗೆ ನಾವೇ ಅಸ್ಪ್ರಶ್ಯರಾಗೋದು. ಇನ್ನು ರೋಗಿಗಳಾದರೆ ಅಥವಾ ಕ್ವಾರಂಟೇನ್ ಅನುಭವಿಸಿದರೆ ಸಮಾಜವೇ ( ವೈದ್ಯರು, ಆರೋಗ್ಯ ಇಲಾಖೆ ಹೊರತುಪಡಿಸಿ)ಒಂದು ಹಂತಕ್ಕೆ ಅಂತವರನ್ನು ದೂರವಿಡುತ್ತದೆ…ಇದನ್ನು ತಪ್ಪು ಎನ್ನುವಂತೆಯೂ ಇಲ್ಲ… ಬದುಕಿನಲ್ಲಿ ಇಂತವುಗಳನ್ನೆಲ್ಲ ಎದುರಿಸದ ಅನೇಕ ಜನರಿಗೆ ವ್ಯಥೆ, ನೋವು ಆಗಬಹುದು. ಆದರೆ ಇದು ಕೆಲ ದಿನಗಳು ಮಾತ್ರ ನೆನಪಿರಲಿ. ಆದರೆ ಇಡೀ ಬದುಕನ್ನು ಅಸ್ಪೃಶ್ಯತೆಯ ನೋವಿನಲ್ಲಿ ಕಳೆದ, ಅದರ ವಿರುದ್ಧ ಹೋರಾಡುವುದರಲ್ಲಿಯೇ ಬದುಕನ್ನು ಎದುರಿಸಿದ ಅಂಬೇಡ್ಕರ ಅವರ ಕಷ್ಟ ಎಷ್ಟಿರಬಹುದು? ಇಂದಿಗೂ ಎಷ್ಟೋ ಊರುಗಳಲ್ಲಿ ದಲಿತರನ್ನು ಅಸ್ಪೃಶ್ಯರೆಂಬಂತೆಯೇ ಕಾಣುವುದಿದೆ. ಕೊರೋನಾ ಸಂಕಷ್ಟ ನಮ್ಮ ಮಾನವೀಯತೆಯ ಅರಿವನ್ನು ವಿಸ್ತರಿಸುವಂತಾಗಲಿ. ಮನೆಯ ಬಾಗಿಲು ಮುಚ್ಚಿದರೂ ಮನದ ಬಾಗಿಲು ಎಂದೂ ಮುಚ್ಚದಿರಲಿ. ******* ಮುಂದುವರಿಯುವುದು…. ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-2 ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಸಮಾನ ಶಿಕ್ಷೆ ಸರಿಯೇ ಹರಿಯೇ? ಅಷ್ಟರಲ್ಲಿ ಹೊರಗಡೆಯಿಂದಲೇ ನಾಯ್ಕ ಮಾಸ್ತರು ಬಾಗಿಲು ತೆರೆದರು. ಅವರ ಕಂಗಳು ಕೋಪದಿಂದ ಕೆಂಪಾಗಿದ್ದವು. ರೌದ್ರಾವತಾರ ತಾಳಿ ಒಳಗೆ ಬಂದವರೆ ಎಲ್ಲರೂ ಅವರವರ ಜಾಗದಲ್ಲಿ ನಿಲ್ಲಿ, ಎರಡೂ ಕೈ ಮುಂದೆ ಚಾಚಿ ಎಂದರು. ಎಲ್ಲರೂ ಹೆದರುತ್ತ ಅವರವರ ಜಾಗಕ್ಕೆ ಹೋಗಿ ನಿಂತೆವು. ಬೋರ್ಡ ಹಿಂದಿಟ್ಟ ಬೆತ್ತ ತೆಗೆದು ಎಲ್ಲರ ಕೈಮೇಲೂ ಎರಡೇಟು ಬಿಗಿದರು. ಉರಿ ತಾಳದೇ ಅನೇಕರು ಚೀರಿದರು, ಅಳಲಾರಂಭಿಸಿದರು. ಕೆಲವರು ‘ನಾನು ಗಲಾಟೆ ಮಾಡಲಿಲ್ಲಾಗಿತ್ತು’ ಎನ್ನುತ್ತಾ ತಾವು ಬರೆದಿದ್ದನ್ನು ತೋರಿಸಿದರು. (ಶಾಲಾಧ್ಯಕ್ಷರು ಬಂದಾಗಲೇ ನಾವು ಗಲಾಟೆ ಮಾಡಿದ್ದರಿಂದ ಅವರಿಗೆ ಅವಮಾನವಾಗಿ ಸಿಟ್ಟು ಬಂದಿತ್ತು. ಆದರೆ ನಮ್ಮ ಬಾಲ ಬುದ್ಧಿಗೆ ಆಗ ಅದು ಅರ್ಥ ಆಗಿರಲಿಲ್ಲ) ಎಂದೂ ಮಕ್ಕಳ ಮೇಲೆ ಸಿಟ್ಟು ಮಾಡದ ಮಾಸ್ತರು ಅಂದು ತಾಳ್ಮೆ ಕಳೆದುಕೊಂಡಿದ್ದರು. ಗಲಾಟೆ ಮಾಡಿದವರಿಗೆ, ಮಾತಾಡಿದವರಿಗೆ, ಮೌನವಾಗಿ ಕುಳಿತವರಿಗೆ ಸಮಾನವಾದ ಶಿಕ್ಷೆ ಕೊಟ್ಟರು. ಕೆಲವರು ಶಾಲೆಯಲ್ಲಿ ಅತ್ತು ಮನೆಗೆ ಹೋಗಿ ಹೇಳದೆ ವಿಷಯ ಮುಚ್ಚಿಟ್ಟರು. ಕೆಲವರು ಮನೆಗೆ ಹೋಗುವಾಗ ದಾರಿಯುದ್ದಕ್ಕೂ ಮಾಸ್ತರು ಹೊಡೆದಿದ್ದು ಸರಿಯೋ ತಪ್ಪೋ ಎನ್ನುವ ಕುರಿತು ತಮಗೆ ತಿಳಿದಂತೆ ವಿಮರ್ಶೆ ಮಾಡಿದರು. ಕೆಲವರು ಅಪ್ಪ ಅಮ್ಮನವರೆಗೆ ದೂರನ್ನು ಕೊಂಡೊಯ್ದರು. ರಾತ್ರಿ ಎಲ್ಲ ಮಕ್ಕಳ ಮನೆಗಳಲ್ಲಿ ಚರ್ಚೆ ಆಯಿತು. ಮರುದಿನ ಒಬ್ಬ ಪಾಲಕರು ಶಾಲೆಗೆ ಬಂದು ಮಾಸ್ತರರಿಗೇ ‘ಹುಡುಗರಿಗೆ ಹಿಂಗೆಲ್ಲ ಹೊಡೆಯುದೆಂತಕ್ಕೆ? ಮಕ್ಕಳಿಗೆ ನಾವೇ ಹೊಡೆಯೋದಿಲ್ಲ. ನೀವೆಂತಕ್ಕೆ ಹೊಡೆದಿದ್ದು? ಬಾಸುಂಡೆ ಬರೋ ಹಂಗೆ ಹೊಡೆದು ಬಿಟ್ಟೀರಿ. ಊಟ ಮಾಡಲಿಕ್ಕು ಆಗಲಿಲ್ಲ ನಮ್ಮ ಮಗನಿಗೆ…’ ಎಂದು ಬೈದು ಹೋದರು. ಇನ್ನೊಬ್ಬ ಪಾಲಕರು ‘ತಪ್ಪು ಮಾಡಿದ್ರೆ ನಮ್ಮ ಮಕ್ಕಳಿಗೆ ನಾಲ್ಕು ಬಿಗೀರಿ ಬುದ್ದಿ ಬರ್ತದೆ ಎಂದರು! ಕರೋನಾ ಶಿಕ್ಷೆಯೂ ಥೇಟ್ ಮಾಸ್ತರು ಕೊಟ್ಟ ಶಿಕ್ಷೆಯಂತೆನಿಸುತ್ತದೆ. ಭುವಿಯ ಮೇಲಿನ ಎಲ್ಲ ಜೀವಿಗಳಂತೆ ನಾವು ಎನ್ನುವುದನ್ನು ಒಪ್ಪದೇ ನಾವೇ ಶ್ರೇಷ್ಠರೆಂಬ ಹಮ್ಮಿನಲ್ಲಿ ಮೆರೆದೆವು. ಚೀನಿಯರಂತೂ ಆಧುನಿಕ ಬಕಾಸುರರಂತೆ ಸಿಕ್ಕಿದ್ದನ್ನೆಲ್ಲ ಮೆದ್ದು ಕೋವಿಡ್ ೧೯ ವೈರಸ್ಸನ್ನು ಪ್ರಾಣಿಗಳಿಂದ ಮನುಕುಲಕ್ಕೆ ವರ್ಗಾ ಯಿಸಿದರು. ನೆಲ ಜಲ, ಗಾಳಿಯನ್ನು ಮಲಿನಗೊಳಿಸುವಲ್ಲಿ, ನಮ್ಮ ಅಗತ್ಯಕ್ಕೆ ಮೀರಿ ಸಂಗ್ರಹಿಸುವುದರಲ್ಲಿ ಎಲ್ಲರೂ ನಾ ಮುಂದೆ, ತಾ ಮುಂದೆ.. ಸೋಂಕನ್ನು ತಿಳಿದೋ ತಿಳಿಯದೆಯೋ ಹಬ್ಬಿಸುತ್ತಿರುವವರು, ಅರಿತೋ ಅರಿಯದೆಯೋ ಅವರ ಸಂಪರ್ಕಕ್ಕೆ ಬಂದವರು.. ಹೀಗೆ ಎಲ್ಲರಿಗೂ ತಪ್ಪಿಗೆತಕ್ಕ ಶಿಕ್ಷೆಯೋ ಅಥವಾ ಮಾಸ್ತರರ ಹೊಡೆತದಂತೆಯೋ? ತಪ್ಪು ಮಾಡಿದವರಿಗೆ ತಪ್ಪಿನ ಅರಿವಾದರೂ ಇದೆಯೋ? ಇಲ್ಲವೋ ?ಕನಿಷ್ಟ ಪಕ್ಷ ಪಶ್ಚಾತ್ತಾಪವಾದರೂ ಇದೆಯೋ? ಕಾಲವೇ ಉತ್ತರಿಸಬೇಕು… ********** (ಮುಂದುವರಿಯುವುದು….) ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ (ಭಾಗ-1) ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಕಾಣಿಸದೇ ಕಾಡುತಿದೆ ವೈರಾಣು ಕರೋನಾ… ಕಳವಳದಿ ಕಂಗಾಲು ಮನುಜಕುಲ ಸಂಪೂರ್ಣ.. ‍ ಮಾರ್ಚ ತಿಂಗಳಿಂದ ಕರೋನಾ ಎನ್ನುವ ಪದವೇ ಎಲ್ಲರ ಸ್ಥಾಯಿ ಭಾವವಾಗಿದೆ. ಎಲ್ಲಾ ಮುಗಿತು. ಕಲಿತಾಯ್ತು ಮದುವೆಯಾಯ್ತು ಮಕ್ಕಳನ್ನು ಓದಿಸಿ, ಉದ್ಯೋಗಕ್ಕೆ ಸೇರಿಸಿ, ಮದುವೆ ಮಾಡಿ ಸೆಟಲ್ ಮಾಡಿದ್ದಾಯ್ತು ಇನ್ಯಾವಾಗ ದೇವರು ಕರೆಸಿಕೊಂಡರು ಹೋಗಲು ಸಿದ್ಧ ಎಂದು ದಿನಾ ಡೈಲಾಗ್ ಹೇಳುತ್ತಿದ್ದ ಸುತ್ತಮುತ್ತಲ ಮನೆಗಳ ಅಂಕಲ್ ಆಂಟಿಗಳೆಲ್ಲ ನಗು ಮಾತು ಮರೆತು ಜೀವಭಯದಲ್ಲಿ ಮಾಸ್ಕ ಧರಿಸಿ ಅಂಗಳಕ್ಕಿಳಿಯಲು ಭಯಪಡುವುದನ್ನು ನೋಡುವಾಗ ಸಾವು ಯಾರಿಗೂ ಸ್ವೀಕಾರಾರ್ಹ ಸಂಗತಿಯೇ ಅಲ್ಲ ಎನ್ನುವ ಸರ್ವಕಾಲಿಕ ಸತ್ಯ ಸುತ್ತೆಲ್ಲ ಗೋಚರವಾಗುತ್ತಿದೆ. ಬಂದ ಕಷ್ಟವನ್ನು ಎದುರಿಸಲಾರದೇ ಕಂಗಾಲಾದವರು, ಬಂದಿದ್ದನ್ನು ಸ್ವೀಕರಿಸಿದವರು, ಅದನ್ನು ಧೈರ್ಯದಿಂದ ಎದುರಿಸಿದವರು, ತಮ್ಮ ಕಷ್ಟವನ್ನು ಕಟ್ಟಿಟ್ಟು ಇತರರಿಗಾಗಿ ತುಡಿಯುವವರು…ಹೀಗೆ ಹಲವು ಬದುಕುಗಳು,ಕೆಲವು ಘಟನೆಗಳು ಕಾಡುತ್ತವೆ.. ಕೆಲವಷ್ಟನ್ನು ನಿಮ್ಮೆದುರಿಗಿಡುವ ಯತ್ನ ನನ್ನದು. ಇದೇ ಸಮಾಜದ ಭಾಗವೇ ಆದ ನನಗೂ ಮೊದಲೆರಡು ದಿನ ಕರೋನಾ ಲಾಕ್ ಡೌನ್ ಶಿಕ್ಷೆ ಎನಿಸಿತು. ಶಿಕ್ಷೆ ಎಂದುಕೊಂಡಾಗ ಬಾಲ್ಯದ ಒಂದು ಘಟನೆಯೂ ನೆನಪಾಯ್ತು. ಮಲೆನಾಡಿನ ಪುಟ್ಟ ಹಳ್ಳಿಯೊಂದರಲ್ಲಿ ನಾಲ್ಕನೆಯ ತರಗತಿ ಓದುತ್ತಿದ್ದೆ. ಏಕೋಪಾಧ್ಯಾಯ ಶಾಲೆಯಾಗಿತ್ತು ಅದು. ಒಂದೊಂದು ತರಗತಿಯವರಿಗೆ ಒಂದೊಂದು ವಿಷಯವನ್ನು ಕಲಿಸುತ್ತ, ಎಲ್ಲವನ್ನೂ ತೂಗಿಸಿಕೊಂಡು ಹೋಗುತ್ತಿದ್ದ ನಾಯ್ಕ ಮಾಸ್ತರರ ತಾಳ್ಮೆ ದೊಡ್ಡದಿತ್ತು. ಒಂದು ದಿನ ನಾಲ್ಕು ಗಂಟೆಯ ಹೊತ್ತಿಗೆ ಉಳಿದ ಕ್ಲಾಸಿನವರಿಗೆ ಕಲಿಸಿ ನಮಗೆ ಅವರಿಗೆ ವಿವಿಧ ಚಟುವಟಿಕೆ ಕೊಟ್ಟು ಅವರ ಮೇಜಿನ ಸುತ್ತ ನಿಲ್ಲಿಸಿ ನಮಗೆ ಪಾಠ ಮಾಡುತ್ತಿದ್ದರು. ಅಷ್ಟರಲ್ಲಿ ಬಂದ ಶಾಲಾ ಕಮೀಟಿಯ ಅಧ್ಯಕ್ಷರು ‘ಮಾಸ್ತರೇ ಐದು ನಿಮಿಷ ಬನ್ನಿ ಮಾತನಾಡೋದಿದೆ’ ಎಂದರು. ಇವತ್ತಿಗೆ ಪಾಠ ಸಾಕು. ನೀವು ಇಪ್ಪತ್ತರವರೆಗೆ ಮಗ್ಗಿ ಬರೆಯಿರಿ. ಯಾರೂ ಗಲಾಟೆ ಮಾಡಬೇಡಿ ಅಧ್ಯಕ್ಷರು ಬಂದಿದ್ದಾರೆ. ಎಂದು ಮಕ್ಕಳಿಗೆ ಹೇಳಿ ಶಾಲೆಯ ಕದ ಎಳೆದುಕೊಂಡು ಹೋದರು. ಇಪ್ಪತ್ತಾರು ಜನರಿದ್ದ ಶಾಲೆಯಲ್ಲಿ ಮೂರು ಜನ ಮಾಸ್ತರರು ಹೇಳಿದಂತೆ ಬರೆಯುತ್ತ ಕುಳಿತರು. ಉಳಿದಂತೆ ಕೆಲವರು ಗುಸು ಕುಸು ಮಾತು, ಪಿಸು ಪಿಸು ನಗು ಶುರು ಮಾಡಿದರು, ಕ್ರಮೇಣ ಕೆಲವರು ಕುಳಿತ ಬೇಂಚ ಬಡಿದರು. ಯಾವ್ಯಾವಾಗಿನದೋ ಸಿಟ್ಟನ್ನು ನೆನಪಿಸಿಕೊಂಡು ಕೆಲವರು ಜಗಳ ಆಡಲಾರಂಭಿಸಿದರು. ಕೆಲವರು ಸಣ್ಣ ಹೊಡೆದಾಟ ಶುರು ಮಾಡಿದರು, ಅನೇಕರು ಪ್ರೇಕ್ಷಕರಾದರು. ಕೂಗಾಟ, ಕಿರುಚಾಟ ಎಲ್ಲವೂ ಜೋರಾಯ್ತು. ಮಾನಿಟರ್ ಸುಮಂಗಲಾ ರೂಲ್ ಕಟ್ಟಿಗೆ ಹಿಡಿದು ಕೀರಲು ದ್ವನಿಯಲ್ಲಿ ಎಲ್ಲರನ್ನೂ ಸುಮ್ಮನಿರಿಸಲು ಯತ್ನಿಸಿ ಸೋತು ಒಂದೆಡೆ ಕುಕ್ಕರಿಸಿದಳು. ಅಷ್ಟರಲ್ಲಿ ಒಬ್ಬ ಹುಡುಗ ‘ಇದು ಆಟದ ಸಮಯ’ ಎಂದು ಕಟ್ಟಿಗೆಯಿಂದ ಬೆಲ್ ಮೇಲೊಂದು ಬಾರಿಸಿದರು. ನಾವೆಲ್ಲ ಪಾಟಿ ಪುಸ್ತಕಗಳನ್ನು ಪಾಟೀಚೀಲದೊಳಗೆ ತುರುಕಿ ಮಾಸ್ತರರ ಎಚ್ಚರಿಕೆಯ ಮಾತು ಮರೆತು ಆಟದ ಮೈದಾನಕ್ಕೆ ಧಾವಿಸಬೇಕೆಂದು ಮುಚ್ಚಿದ ಬಾಗಿಲಿನತ್ತ ನಡೆದೆವು *******. ಮುಂದುವರೆಯುವುದು..

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಅಂಕಣ ಸಂಗಾತಿ

ಗಝಲ್ ಲೋಕ

ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ. ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ ಮೂರನೆ ಅದ್ಯಾಯ ಗಜಲ್ ಎನ್ನುವ ನಶೆ ಗಜಲ್ ಎನ್ನುವ ನಶೆ ಯಾವುದೇ ಒಂದು ಸಾಹಿತ್ಯ ಪ್ರಕಾರ ಜನಪ್ರಿಯ ಆಗುತ್ತಿದೆ ಅಂದರೆ ಅದು ಜನ ಜೀವನವನ್ನು ಸರಳವಾಗಿ ತನ್ನತ್ತ ಸೆಳೆದುಕೊಂಡು ಒಂದು ಅವಿನಾಭಾವ ಬಂಧ ಬೆಸೆಯುತ್ತಿದೆ ಎಂದೇ ಅರ್ಥ. ಹೌದು ಅರಮನೆಗಳಿಂದ ಕೊಳಚೇರಿಗಳ ಗಲ್ಲಿ ಗಲ್ಲಿ ತಲುಪಿದ ಗಜಲ್ ಬದುಕಿನ ಹೊಸದೊಂದು ಅಭಿವ್ಯಕ್ತಿಯ ತೀವ್ರತೆಯನ್ನು ಸೃಜಿಸಿತು. ಗಜಲ್ ಇಷ್ಟೊಂದು ಯಶಸ್ಸು ಸಾಧಿಸುತ್ತಿದಂತೆ ಆಕರ್ಷಿತರಾದ ಸಾಕಷ್ಟು ಜನ ಅದರ ಪಟ್ಟು, ಚೌಕಟ್ಟು ಮೊದಲಾದವುಗಳನ್ನು ಅರಿತು ತಮ್ಮದೇ ಆದ ವಿಭಿನ್ನ ರೀತಿಯ ಬದುಕಿನ ಒಳ ಹೊರ ಸಂಗತಿಗಳನ್ನು ಹೊರ ಹಾಕತೊಡಗಿದರು. ಪರಿಣಾಮವಾಗಿ ಗಜಲ್ ಇನ್ನಷ್ಟು ದಾಪುಗಾಲು ಇಟ್ಟು ತನ್ನೊಳಗೆ ದೊಡ್ಡ ದೊಡ್ಡ ಗಜಲ್ ರಚನಕಾರರನ್ನು ತುಂಬಿಕೊಳ್ಳತೊಡಗಿತು. ಸೂಫಿ ಸಂತರಿಂದ ಹೆಚ್ಚೆಚ್ಚು ಪಸರಿಸಿದ ಗಜಲನ ವಿಷಯ ಯಾವಾಗಲೂ ಪ್ರಧಾನವಾಗಿ ಮೋಹ, ಪ್ರೇಮ, ವಿರಹವೇ ಆಗಿರುತ್ತಿತ್ತು. ಇದೇ ಸಂದರ್ಭದಲ್ಲಿ ಪರ್ಷಿಯನ್ ಭಾಷೆಯಿಂದ ಉರ್ದು ಕಡೆಗೆ ಹೊರಳಿದ ಮೊಘಲರು ಈ ಪ್ರೇಮಕಾವ್ಯಕ್ಕೆ ಆಸರೆಯಾಗಿ ನಿಂತ ಕಾರಣ ಲೌಕಿಕ ಅಲೌಕಿಕ ಅನುರಾಗಗಳ ಸಂಬಂಧ ಅಧ್ಯಾತ್ಮಿಕದೆಡೆಗೆ ತುಡಿಯುವಂತೆ ಮೂಡಿ ಬಂದಿದ್ದು ಮಹತ್ವ ಪಡೆದಿತ್ತು. ತನ್ನನ್ನು ತಾನು ಮರೆತು ಉನ್ಮಾದದಲ್ಲಿ ಒಂದಾಗುವ ಸೂಫಿ ಸಂತರ ಗಜಲಗಳು ಭಾರತೀಯ ಗಜಲ್ ಇತಿಹಾಸದ ಮೊದಲ ಮೈಲುಗಲ್ಲುಗಳಾಗಿವೆ. ಗಜಲ್ ಎನ್ನುವುದೇ ಒಂದು ನಶೆ, ಅದರ ಒಳ ಹೋದವನು ನಶೆಯ ಗುಂಗಿನ ಸವಿಯನ್ನು ಸವಿಯದೇ ಹೊರ ಬರಲಾರ. ಆದ್ದರಿಂದ ಗಜಲ್ ಮಾಡಿದ ಮೋಡಿಯು ದೊಡ್ಡ ಯಶಸ್ಸು ಕಾಣಲು ಮತ್ತೊಂದು ಮಗ್ಗುಲಿನತ್ತ ಹೊರಳಿತು. ಗಜಲದಿಂದ ಅವರು ಬೆಳೆದರಾದರೂ ಗಜಲ್ ಎಂದೊಡನೆ ಅವರೇ ನೆನಪಾಗುವಷ್ಟು ಕೆಲವರು ಗಜಲ್ ಹೆಸರಿಗೆ ಪರ್ಯಾಯವಾದರು. ಗಜಲ್ ಲೋಕ ಕಂಡ ಅಂತಹ ಮಹಾನ್ ಗಜಲ್ ಮಾಂತ್ರಿಕರ ಬಗ್ಗೆ ಚಿಕ್ಕ ಚೊಕ್ಕ ವಿವರಣೆ ನಿಮಗಾಗಿ.. ಅಮೀರ್ ಖುಸ್ರೋ ಭಾರತದ ಗಿಳಿ ಎಂದೇ ಖ್ಯಾತರಾದ ಇವರನ್ನು ಖವಾಲಿಯ ಜನಕ ಎಂದೇ ಪರಿಗಣಿಸಿಲಾಗಿದೆ. ಉತ್ತಮ ಸಂಗೀತಗಾರರೂ ಆದ ಇವರು ಖಾಯಲ್ ಮತ್ತು ತಾರಾನಾ ಎಂಬ ಶೈಲಿಯ ಸಂಗೀತಕ್ಕೂ ಜನಕರಾಗಿದ್ದಾರೆ. ಸೂಫಿ ಪಂಥಕ್ಕೆ ಸೇರಿದ ಇವರು ಅರಬ್ ರಾಷ್ಟ್ರಗಳ ಮುಖ್ಯ ಅಂಶಗಳನ್ನು ಭಾರತೀಯ ಸಂಸ್ಕೃತಿಯಲ್ಲಿ ಅಳವಡಿಸುವ ಮೂಲಕ ಹೆಸರು ಮಾಡಿದ್ದಾರೆ. ಗಜಲನ್ನು ತಮ್ಮ ವಿಶಿಷ್ಟ ಸಂಗೀತದಲ್ಲಿ ಅಳವಡಿಸಿಕೊಂಡ ಇವರು ಗಜಲಗೆ ಒಂದು ಹೊಸ ಮೆರುಗು ನೀಡಿ ದೇಶಭಿಮಾನದ ಮೂಲಕ ಮತ್ತೊಂದು ಮಜಲಿನೆಡೆಗೆ ಒಯ್ದರು. ಮೀರ್ ತಖೀ ಮೀರ್ ಗಜಲ್ ಲೋಕದ ರಾಜನಾಗಿ ಮೆರೆದ ಮೀರ್ ತಖೀ ಮೀರ್ ಸೂಫಿ ಸಂತನಾಗಿ ಗಜಲ್ ಪ್ರಕಾರವನ್ನು ಅತ್ಯಂತ ಪ್ರಖರವಾಗಿ ಬೆಳಗಿದವರು. ಪಾರ್ಸಿ, ಟರ್ಕಿಶ್, ಅರಬ್ ಭಾಷೆಯನ್ನು ಸಹ ಬಲ್ಲ ಈತನ ಅಂತರಾಳದ ಸೂಕ್ಷ್ಮ ತುಡಿತಗಳೇ ಆತನ ಗಜಲ್ ವಸ್ತುಗಳಾಗಿದ್ದವು. ಆದ್ದರಿಂದಲೇ ಆತನ ಗಜಲಗಳು ಹೆಚ್ಚು ಆಪ್ತವಾಗಿ ಜನ ಸಾಮಾನ್ಯರು ಗುನುಗುನಿಗಿಸುವಂತಾದವು. ಮಹಮ್ಮದ್ ಇಕ್ಬಾಲ್ ಪಾಕಿಸ್ತಾನದ ರಾಷ್ಟ್ರಕವಿ ಆದ ಮಹಮ್ಮದ್ ಇಕ್ಬಾಲ್ ಅವರನ್ನು ಭಾರತೀಯರು ನೆನಪಿಸಿಕೊಳ್ಳಲು ಇರುವ ಒಂದೇ ಒಂದು ಮುಖ್ಯ ಕಾರಣ ಎಂದರೆ ಅದು “ಸಾಂರೇ ಜಹಾಂಸೇ ಅಚ್ಚಾ, ಹಿಂದುಸ್ತಾನ ಹಮಾರಾ ಹಮಾರಾ” ಎಂಬ ಭಾರತದಾದ್ಯಂತ ಜನರ ನಾಲಿಗೆಯ ತುದಿಯಲ್ಲಿ ನಲಿದಾಡುವ ಗೀತೆ. ಈ ಗೀತೆಯನ್ನು ರಚಿಸಿದ ಕವಿಯಾದ ಇವರ ಮಹತ್ವವನ್ನು ಸಾರಲು ಆ ಗೀತೆಯ ಉದಾಹರಣೆವೊಂದೇ ಸಾಕು. ಇನ್ನೂ ವಿಶೇಷ ಎಂದರೆ ಆ ಗೀತೆ ಒಂದು ಗಜಲ್ ಆಗಿದೆ. ಮಹಮ್ಮದ್ ಇಕ್ಬಾಲ್ ಅವರ ಧೋರಣೆಗಳು, ಪ್ರತಿಪಾದನೆಗಳು ಏನೇ ಇರಬಹುದಾದರೂ ಗಜಲಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ ಅವರನ್ನು ಗಜಲ್ ಲೋಕ ಸದಾ ನೆನೆಯುತ್ತದೆ. ಮಿರ್ಜಾ ಗಾಲಿಬ್ ತನ್ನ ಬದುಕಿನಲ್ಲಿ ಸಾಕಷ್ಟು ಕಷ್ಟ ನೋವುಗಳನ್ನು ಕಂಡು ಸೆರೆವಾಸವನ್ನು ಸಹ ಅನುಭವಿಸಿದ ಮಿರ್ಜಾ ಅಸಾದುಲ್ಲಾ ಬೇಗ್ ಖಾನ್ ಎನ್ನುವುದು ಮಿರ್ಜಾ ಗಾಲಿಬನ ನಿಜವಾದ ಹೆಸರು ಮತ್ತು ಗಾಲಿಬ್ ಎನ್ನುವುದು ಈತನ ಕಾವ್ಯನಾಮವಾಗಿದೆ. ಮೊಘಲರು ಭಾರತಕ್ಕೆ ನೀಡಿದ ಪ್ರಮುಖ ಕೊಡುಗೆ ಎಂದರೆ ಮೂರು ಒಂದು ಉರ್ದು ಭಾಷೆ, ಇನ್ನೊಂದು ತಾಜ ಮಹಲ್ ಆದರೆ ಮತ್ತೊಂದು ಮಿರ್ಜಾ ಗಾಲಿಬ್ ಆಗಿದ್ದಾನೆ. ಉರ್ದು ಕಾವ್ಯ ಮತ್ತು ಗಜಲ್ ಸಾಹಿತ್ಯದಲ್ಲಿ ಸಾಕಷ್ಟು ಪ್ರಭಾವಿಸಿದ ಪ್ರಮುಖರಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಈತ ಒಂದು ಯುಗದ ಮತ್ತೊಂದು ಜಗತ್ತೇ ಆಗಿ ಹೋಗಿದ್ದ. ಗಜಲ್ ಅಮೀರ್ ಖುಸ್ರೋನ ಗುಟ್ಟು, ಮೀರ್ ತಖೀ ಮೀರನ ಒಗ್ಗಟ್ಟು, ಇಕ್ಬಾಲನ ಒಗಟು ಮತ್ತು ಗಾಲಿಬ್ ಮನದಾಳದ ಕಟ್ಟುಗಳಿಂದ ಹೊಸ ಹೊಳಪು ಪಡೆದು ಜಗವನ್ನು ಆವರಿಸಿದೆ. ಇವರಷ್ಟೇ ಅಲ್ಲದೇ ಗಜಲ್ ಲೋಕ ಕಂಡ ಅನೇಕ ದಿಗ್ಗಜರು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದು ಗಜಲ್ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ******* ಬಸವರಾಜ ಕಾಸೆ

ಗಝಲ್ ಲೋಕ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಶರಣೆ ನೀಲಾಂಬಿಕೆ..! ವಿಶಿಷ್ಟ ದಿಟ್ಟ ನಿಲುವಿನ ಚಿಂತಕಿ, ಅನುಭಾವಿ ಶರಣೆ ನೀಲಾಂಬಿಕೆ..! ಹನ್ನೆರಡನೆಯ ಶತಮಾನದಲ್ಲಿ ಅನೇಕ ಶರಣರು, ಸಾಧಕರು ತಮ್ಮ ಅನುಭಾವದಿಂದ ಕಲ್ಯಾಣ ಕ್ರಾಂತಿಗೆ ಕೊಡುಗೆಯಾದವರು. ಅವರಲ್ಲಿ ವಿಶಿಷ್ಟ, ಪ್ರಮುಖ ಚಿಂತಕಿ, ಅನುಭಾವಿ ದಿಟ್ಟ ನಿಲುವಿನ ಶರಣೆ ನೀಲಾಂಬಿಕೆ. ನೀಲಮ್ಮ ಬಸವಣ್ಣನವರ ಎರಡನೆಯ ಹೆಂಡತಿ. ಮೊದಲ ಪತ್ನಿ ಸೋದರ ಮಾವ ಬಲದೇವರ ಮಗಳು. ನೀಲಾಂಬಿಕೆ, ನೀಲಲೋಚನೆ, ನೀಲಮ್ಮ, ಮಾಯಾದೇವಿ ಎಂತೆಲ್ಲ ಹೆಸರಿರುವ ನೀಲಮ್ಮನ ಅಪ್ಪ ಅಮ್ಮ ಇವರ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಹರಿಹರ ಮತ್ತು ಭೀಮ ಕವಿಗಳು ಬಸವಣ್ಣನವರ ಮಡದಿ ನೀಲಾಂಬಿಕೆಯವರನ್ನು ಮಾಯಿದೇವಿ ಎಂದೂ ಕರೆದಿದ್ದಾರೆ. ಅಲ್ಲದೆ ಹರಿಹರನು ಸಿದ್ಧರಸ ಮಂತ್ರಿಗಳ ಆಸ್ತಿಗೆ ಬಸವಣ್ಣನೇ ವಾರಸುದಾರರಾದವರು ಎಂದು ಹೇಳಿದ್ದಾನೆ. ಲಕ್ಕಣ್ಣ ದಂಡೇಶನು ನೀಲಮ್ಮ ಬಿಜ್ಜಳನ ತಂಗಿ ಎಂದು ಹೇಳಿದ್ದಾನೆ. ಬಿಜ್ಜಳನ ತಾಯಿ ಸತ್ತ ಮೇಲೆ ಬಿಜ್ಜಳ ಮತ್ತು ಆತನ ತಮ್ಮ ಕರ್ಣದೇವನು ಸಿದ್ಧರಸ ಮತ್ತು ಪದ್ಮಗಂಧಿಯವರ ಮನೆಯಲ್ಲಿ ಬೆಳೆದರು ಎನ್ನುವ ಐತಿಹಾಸಿಕ ಸಂಗತಿಗಳಿವೆ. ಹೀಗಾಗಿ ನೀಲಮ್ಮ ಬಿಜ್ಜಳನ ಸಾಕು ತಂಗಿ ಎಂದು ಗೊತ್ತಾಗುತ್ತದೆ. ಬ್ರಾಹ್ಮಣ ಕುಟುಂಬದ ಗಂಗಾಂಬಿಕೆಯವರಿಗಿಂತ ಜೈನ ಧರ್ಮದ ನೀಲಾಂಬಿಕೆಯವರ ವಚನ ರಚನಾ ಶೈಲಿ, ಅನುಭಾವ ಅರ್ಥಪೂರ್ಣ ಮತ್ತು ಪ್ರಭಾವಿಶಾಲಿಯಾಗಿವೆ… ಗಂಗಾಂಬಿಕೆಯವರಿಗೆ ಸಿದ್ಧರಸನೆಂಬ ಹಾಗೂ ನೀಲಾಂಬಿಕೆಯವರಿಗೆ ಬಾಲಸಂಗಯ್ಯನೆಂಬ ಮಕ್ಕಳಿದ್ದರೆಂದು, ಗಂಗಾಂಬಿಕೆಯವರ ಮಗ ಬಾಲ್ಯದಲ್ಲಿಯೇ ತೀರಿಕೊಂಡನೆಂದೂ ತಿಳಿದುಬರುತ್ತದೆ. ಅಂತೆಯೇ ಗಂಗಾಂಬಿಕೆಯವರನ್ನು ಸಂತೈಸುತ್ತ ಬಸವಣ್ಣನವರು, “ಅವಳ ಕಂದ ಬಾಲ ಸಂಗಾ ನಿನ್ನ ಕಂದ ಚೆನ್ನಲಿಂಗ” ಎಂದಿದ್ದಾರೆ. “ಪೃಥ್ವಿದಗ್ಗಳ ಚೆಲುವೆ ನೀಲಲೋಚನೆ” ಎಂದು ಒಂದೆಡೆ ತಮ್ಮ ಪತ್ನಿ ನೀಲಾಂಬಿಕೆಯವರ ಬಗ್ಗೆ ಹೇಳಿದ್ದಾರೆ… ನೀಲಾಂಬಿಕೆ ಬಸವಣ್ಣನವರ ವಿಚಾರ ಕ್ರಾಂತಿಯಲ್ಲಿ ಸಹಧರ್ಮಿಣಿ. ಗಂಗಾಂಬಿಕೆ ಆಶ್ರಯದಲ್ಲಿ ಬಾಲ ಸಂಗಯ್ಯ ಬೆಳೆಯುತ್ತಾ ಅವರನ್ನೇ ಹೆಚ್ಚು ಅವಲಂಬಿಸುತ್ತಾನೆ. ನೀಲಾಂಬಿಕೆ ಮಹಾಮನೆಯ ಎಲ್ಲ ವ್ಯವಹಾರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುತ್ತಾರೆ. ಮಹಾಮನೆಯ ದಾಸೋಹ ಪ್ರಸಾದ ಸಿದ್ಧಪಡಿಸುವುದು, ಜಂಗಮರ ಸೇವೆ ಒಟ್ಟಾರೆ ಬಸವಣ್ಣನವರ ಎಲ್ಲ ಕಾರ್ಯಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡಿರುತ್ತಾರೆ. ಬಸವಣ್ಣನವರ ಜೀವನದಲ್ಲಿ ಇವರ ಪಾತ್ರ ಬಹು ದೊಡ್ಡದು. ಅವರ ಹೆಜ್ಜೆ ಹೆಜ್ಜೆಯಲ್ಲಿ ನೀಲಮ್ಮ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ… ವರ್ಣ ಸಂಕರದಿಂದ ಕಲ್ಯಾಣದ ಐಕ್ಯತೆಗೆ ಧಕ್ಕೆ ಬರ ಹತ್ತಿತು. ಬಸವಣ್ಣನವರು ಕಲ್ಯಾಣ ತೊರೆದು ಕೂಡಲ ಸಂಗಮಕ್ಕೆ ಪಯಣ ಬೆಳೆಸಿದರು. ಮುಂದೆ ಕೆಲ ದಿನಗಳಲ್ಲಿ ಅಸ್ಥಿರತೆ ಅರಾಜಕತೆ ವ್ಯಾಪಿಸಿತು. ಬಸವಣ್ಣನವರು ಹಡಪದ ಅಪ್ಪಣ್ಣನವರ ಮೂಲಕ ನೀಲಮ್ಮನವರನ್ನು ಕರೆದುಕೊಂಡು ಬರಲು ಆಜ್ಞಾಪಿಸುತ್ತಾರೆ. ಆಗ ನೀಲಮ್ಮ ಬಸವಣ್ಣನಂತಹ ಮಹಾ ಘನಮಹಿಮ ತನ್ನನ್ನು ಕೊನೆಗಳಿಗೆಯಲ್ಲಿ ಕೂಡಲ ಸಂಗಮಕ್ಕೆ ಕರೆ ಹೇಳಿದರೆ? ಎಂದು ಅವರನ್ನೇ ಪ್ರಶ್ನಿಸಿದ್ದಾರೆ. ಬಸವಣ್ಣನವರ ಅನುಭಾವವನ್ನು ಕಂಡು ವಿಚಾರಪತ್ನಿಯಾದೆನು ಎಂದು ಹೇಳಿಕೊಂಡಿದ್ದಾರೆ. ಅನುಭಾವದ ಎತ್ತರ ಮತ್ತು ಅಭಿವ್ಯಕ್ತಿಯ ಬಿತ್ತರವನ್ನು ಏಕಕಾಲಕ್ಕೆ ವ್ಯಕ್ತಗೊಳಿಸುವ ಕಾವ್ಯ ಕೌಶಲ್ಯ ಅನುಪಮವಾದದ್ದು. “ಮಾತಿನ ಹಂಗೇಕೆ ಮನವೇಕಾಂತದಲ್ಲಿ ನಿಂದಬಳಿಕ ” ಎಂದೆನ್ನುವ ನೀಲಮ್ಮ ತಾಯಿಯ ವಚನದಲ್ಲಿ ಬಸವಣ್ಣನವರ ಸ್ತುತಿ ವರ್ಣನೆ ಮತ್ತು ಅವರ ಅಗಲುವಿಕೆಯ ನೋವು ಕಳವಳ ಕಾಣಬಹುದು… ಕೊನೆಯ ಆ ದಿನಗಳು…– ಹರಳಯ್ಯನವರ ಮಗ ಶೀಲವಂತನಿಗೂ ಬ್ರಾಹ್ಮಣರ ಮಧುವರಸರ ಲಾವಣ್ಯಳಿಗೂ ಮದುವೆ ಏರ್ಪಟ್ಟಾಗ ಆದ ಜಾತಿ ಸಂಕರವು ಕಲ್ಯಾಣದಲ್ಲಿ ತಲ್ಲಣವನ್ನು ಹುಟ್ಟು ಹಾಕಿತು. ನಾರಾಯಣ ಕ್ರಮಿತ ಮತ್ತು ವಿಷ್ಣು ಭಟ್ಟರ ಕಪಟತನದಿಂದ ಬಸವಣ್ಣನವರಿಗೆ ಕಲ್ಯಾಣದಿಂದ ಗಡಿಪಾರು ಮಾಡುವ ಘೋರ ಶಿಕ್ಷೆಗೆ ಆದೇಶಿಸಲಾಗುವುದು. ಹಡಪದ ಅಪ್ಪಣ್ಣನವರ ಜೊತೆಗೆ ಕೂಡಲ ಸಂಗಮಕ್ಕೆ ಪ್ರಯಾಣ ಬೆಳೆಸಿದ ಬಸವಣ್ಣನವರು ಅತ್ಯಂತ ನೋವಿನಿಂದ ತಾವು ಮಾಡಿದ ಕ್ರಾಂತಿಯ ಕಲ್ಯಾಣವು ತಮ್ಮ ಕಣ್ಣ ಮುಂದೆಯೇ ಹಾಳಾಗುತ್ತಿರುವುದನ್ನು ನೋಡಿ ಮುಮ್ಮಲ ಮರುಗಿದರು. ಕೂಡಲ ಸಂಗಮದಲ್ಲೊಮ್ಮೆ ಹಡಪದ ಅಪ್ಪಣ್ಣವರನ್ನು ಕರೆದು ತಮ್ಮ ವಿಚಾರ ಪತ್ನಿ ನೀಲಮ್ಮನವರನ್ನು ಬರಹೇಳುತ್ತಾರೆ… ಕಲ್ಯಾಣಕ್ಕೆ ಬಂದ ಅಪ್ಪಣ್ಣನವರು ನೀಲಮ್ಮನವರಿಗೆ ಬಸವಣ್ಣನವರ ಇಂಗಿತವನ್ನು ಅರಹುತ್ತಾರೆ. ಆ ಸಂದರ್ಭದಲ್ಲಿ ನೀಲಮ್ಮನವರು ಹೇಳುವ ಈ ವಚನಗೀತೆ ತುಂಬಾ ಅರ್ಥಪೂರ್ಣವಾದುದು… “ನೋಡು ನೋಡು ನೋಡು ನೋಡು ಲಿಂಗವೇ ನೋಡು ಬಸವಯ್ಯನವರು ಮಾಡುವಾಟವ ಸಂಗಮಕ್ಕೆ ಬಸವಯ್ಯನವರು ನಮ್ಮನು ಬರ ಹೇಳಿದರಂತೆ. ಅಲ್ಲಿರುವ ಸಂಗಯ್ಯ ಇಲ್ಲಿಲ್ಲವೇ?” ಈ ವೈಚಾರಿಕ ದಿಟ್ಟತನಕ್ಕೆ ಅವರ ಈ ನಿಲುವೇ ಸಾಕ್ಷಿ. ಅಲ್ಲಿ ಇಲ್ಲಿ ಎಂಬ ಉಭಯ ಭಾವವು ಶರಣರಿಗೆ ಸಲ್ಲದು. ಅದೇ ರೀತಿ ನೀಲಮ್ಮ ತಾಯಿಯವರು ಈ ವಚನದಲ್ಲಿ ಹೀಗೆ ಹೇಳಿದ್ದಾರೆ: “ನಾನಾರ ಸಾರುವೆನೆಂದು ಚಿಂತಿಸಲೇತಕ್ಕಯ್ಯಾ ಬಸವಾ ? ನಾನಾರ ಹೊಂದುವೆನೆಂದು ಭ್ರಮೆಬಡಲೇತಕ್ಕಯ್ಯಾ ಬಸವಾ ? ನಾನಾರ ಇರವನರಿವೆನೆಂದು ಪ್ರಳಾಪಿಸಲೇತಕ್ಕಯ್ಯಾ ಬಸವಾ ? ಪರಿಣಾಮಮೂರ್ತಿ ಬಸವನರೂಪು ಎನ್ನ ಕರಸ್ಥಲದಲ್ಲಿ ಬೆಳಗಿದ ಬಳಿಕ ಸಂಗಯ್ಯನ ಹಂಗು ನಮಗೇತಕ್ಕಯ್ಯಾ ಬಸವಾ ?” ತಾನು ಯಾರನ್ನಾದರೂ ಸೇರುವೆನೆಂದು ಚಿಂತಿಸುವರೇ, ತಾನು ಯಾರನ್ನಾದರೂ ಹೊಂದುವೆನೆಂದು ಬಸವಣ್ಣನವರು ಅನುಮಾನ ಪಡುವರೇ ? ಯಾರಾದರೂ ಆಶ್ರಯದಲ್ಲಿ ಬಂಧನದಲ್ಲಿ ಇರುವೆನೆಂಬ ಪ್ರಲಾಪವು ಬಸವಣ್ಣನವರನ್ನು ಕಾಡುತ್ತಿರುವುದೇ? ಬಸವಣ್ಣನವರ ರೂಪವು ತನ್ನ ಕರಸ್ಥಲದಲ್ಲಿರಲು ಕೂಡಲ ಸಂಗಯ್ಯನ ಹಂಗೇಕೆ ಎಂದು ಪ್ರಶ್ನಿಸುತ್ತಾರೆ. ದೇವರ ಹಂಗೂ ತನಗಿಲ್ಲವೆಂಬ ಅವರ ಗಟ್ಟಿಮಾತು ಅಚ್ಚರಿ ಮೂಡಿಸುವಂತಿದೆ… ತಾನು ಬಿಜ್ಜಳನ ಕುಟುಂಬದವಳು ಎಂದು ಸೂಕ್ಷ್ಮವಾಗಿ ಹೇಳುತ್ತಾ: “ನಾಡನಾಳಹೋದರೆ, ಆ ನಾಡು ಆಳುವ ಒಡೆಯಂಗೆ ನಾಡೆ ಹಗೆಯಾಯಿತ್ತು. ಹಗೆಯಳಿದು ನಿಸ್ಸಂಗವಾಯಿತ್ತು. ನಿಸ್ಸಂಗ ವೇದ್ಯವಾಗಿ ಸಂಗಯ್ಯನಲ್ಲಿ ಮುಕ್ತಳಾದೆನು ನಾನು.” ನಾಡನ್ನು ಆಳ ಹೋದರೆ ಅದು, ಆ ನಾಡಿನ ಕೋಪಕ್ಕೆ ಕೆಂಗಣ್ಣಿಗೆ ಗುರಿಯಾಗಿ ನಾಡು ಹಾಳಾಯಿತ್ತು ಎಂದು ಬಿಜ್ಜಳನ ವೈಫಲ್ಯವನ್ನು ಎತ್ತಿ ತೋರುತ್ತಾರೆ. ಹಗೆಯು ಅಳಿದು ನಿಸ್ಸಂಗವಾಯಿತ್ತು, ಮುಂದೆ ನಿಸ್ಸಂಗವೇ ವೇದ್ಯವಾಗಿ ಸಂಗಯ್ಯನಲ್ಲಿ ಮುಕ್ತಳಾದೆನು ಎಂದು ಹೇಳಿದ್ದಾರೆ… ಕೊನೆಕಾಲದಲ್ಲಿ ಬಸವಣ್ಣನವರನ್ನು ಭೇಟಿಯಾಗಿ ಅವರ ಮುಂದಿನ ಗೊತ್ತು ಗುರಿಗಳನ್ನು ಅರಿತು ಅದರಂತೆ ಸಮಾಜ ಕಟ್ಟುವ ಕೆಲಸಕ್ಕೆ ಬದ್ಧಳಾಗಬೇಕೆಂದು ನೀಲಮ್ಮ, ಹಿರಿಯ ಶರಣ ಹಡಪದ ಅಪ್ಪನವರ ಜೊತೆಗೆ ಕೂಡಲ ಸಂಗಮಕ್ಕೆ ಪಯಣ ಬೆಳೆಸುತ್ತಾರೆ. ಆದರೆ ರಕ್ಕಸ ತಂಗಡಗಿ ಮುಟ್ಟುವಷ್ಟರಲ್ಲಿ ಬಸವಣ್ಣನವರು ಸಂಗಮದಲ್ಲಿ ಐಕ್ಯರಾದ ಸುದ್ದಿ ಬರ ಸಿಡಿಲಿನಂತೆ ಅಪ್ಪಳಿಸುತ್ತದೆ. ನೀಲಮ್ಮನವರಿಗೆ ಅಗಾಧ ನೋವು ಕಳವಳ ಆತಂಕವಾಗುತ್ತದೆ… “ನಾಡಿನ ಹೆಣ್ಣುಗಳೆಲ್ಲಾ ಬನ್ನಿರೆ ಅಕ್ಕಗಳಿರಾ, ಅಕ್ಕನರಸ ಬಸವಯ್ಯನು ಬಯಲ ಕಂಡು ಬಟ್ಟಬಯಲಾದನು. ಅಕ್ಕನರಸನಿಲ್ಲದೆ ನಿರಕ್ಕರನಾದನು ಬಸವಯ್ಯನು. ನಮ್ಮ ಸಂಗಯ್ಯನಲ್ಲಿ ಬಸವಯ್ಯನೈಕ್ಯ ಬಯಲಿಲ್ಲದ ಬಯಲು.” ಸ್ತ್ರೀ ಕುಲೋದ್ಧಾರಕ ಬಸವಣ್ಣನವರು ಐಕ್ಯವಾದ ಸುದ್ದಿಯನ್ನು ನೀಲಮ್ಮ ತನ್ನ ವಚನದಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ. ನಾಡಿನ ಅಕ್ಕ ತಂಗಿಯರೆಲ್ಲರನ್ನು ಕೂಗಿ ಕರೆಯುತ್ತಾರೆ. ನೋಡ ಬನ್ನಿ, ಅಕ್ಕನರಸ ಅಂದರೆ ಗಂಗಾಂಬಿಕೆಯ ಒಡೆಯ ಬಸವಣ್ಣನವರು ಬಯಲ ಕಂಡು ಬಟ್ಟ ಬಯಲಾದರು. ನಮ್ಮ ಸಂಗಯ್ಯನಲ್ಲಿ ಬಸವಣ್ಣನವರ ಐಕ್ಯವು ಬಯಲಿಲ್ಲದ ಬಯಲು ಎಂದು ನೋವಿನೊಂದಿಗೂ ಅಷ್ಟೇ ಆಧ್ಯಾತ್ಮಿಕ ಪ್ರಬುದ್ಧತೆಯನ್ನು ತೋರಿದ್ದಾರೆ. ಬಯಲಿಲ್ಲದ ಬಯಲು ಎಂದಿರುವುದು ಅವರ ಸ್ಥಿತ ಪ್ರಜ್ಞೆಗೆ ಸಾಕ್ಷಿಯಾಗುತ್ತದೆ… “ನಾನಾರ ಹೆಸರ ಕುರುಹಿಡಲಯ್ಯಾ ಬಸವಾ ? ನಾನಾರ ರೂಪ ನಿಜವಿಡಲಯ್ಯಾ ಬಸವಾ ? ನಾನಾರ ಮಾತ ನೆಲೆಗೊಳಿಸಲಯ್ಯಾ ಬಸವಾ ? ನಾನಾರ ಮನವನಂಗೈಸಲಯ್ಯಾ ಬಸವಾ ? ಎನ್ನ ಸುಖಾಕಾರಮೂರ್ತಿ ಬಸವನಡಗಿದಬಳಿಕ ಎನಗೆ ಹೆಸರಿಲ್ಲ. ರೂಪು ನಿರೂಪವಾಯಿತ್ತಯ್ಯಾ ಸಂಗಯ್ಯಾ, ಬಸವನಡಗಿದಬಳಿಕ.” ಬಸವಣ್ಣನವರು ಐಕ್ಯವಾದ ಬಳಿಕ ತಾನು ಯಾರ ಹೆಸರನ್ನು ಕೂಗಿ ಕರೆಯಲಿ, ಬಸವಣ್ಣನವರಿಲ್ಲದ ಬದುಕಿನಲ್ಲಿ ಯಾರ ಭಾವ ರೂಪವನ್ನು ನಿಜ ಮಾಡಲಿ, ಬಸವಣ್ಣನಿಲ್ಲದ ಜೀವನದಲ್ಲಿ ತಾನು ಯಾರ ಮಾತನ್ನು ನೆಲೆಗೊಳಿಸಲು ಸಾಧ್ಯ? ಬಸವಣ್ಣನವರೇ ತನ್ನ ಸರ್ವಸ್ವವಾದ ಕಾರಣ ತಾನು ಯಾರ ಮನವನ್ನು ಅಂಗೈಸಲಿ ಎಂದು ಕಳವಳ ವ್ಯಕ್ತ ಪಡಿಸುತ್ತಾ ತನ್ನ ಸಾಕಾರಮೂರ್ತಿ ಸುಖ ದುಃಖ ಹಂಚಿಕೊಂಡ ಮಹಾಮಣಿಹನಿಲ್ಲದ ಬಳಿಕ ತನಗೆ ಹೆಸರಿಲ್ಲ ತನ್ನ ರೂಪು ನಿರೂಪವಾಯಿತ್ತು ಸಂಗಯ್ಯನೊಳಗೆ ಬಸವನಡಗಿದ ಬಳಿಕ ಎಂದಿದ್ದಾರೆ ನೀಲಮ್ಮ… ಪರಿವರ್ತನೆಯ ಹರಿಕಾರ ಬಸವಣ್ಣನವರು ಕೂಡಲ ಸಂಗಮದಲ್ಲಿ ಐಕ್ಯವಾದ ನೋವನ್ನು ನೀಲಮ್ಮ ತಮ್ಮ ಇನ್ನೊಂದು ವಚನದಲ್ಲಿ ಅತ್ಯಂತ ಅರ್ಥಬದ್ಧವಾಗಿ, ಮಾರ್ಮಿಕವಾಗಿ ನಿರೂಪಿಸಿದ್ದಾರೆ: “ಬಸವನರಿವು ನಿರಾಧಾರವಾಗಿತ್ತು ಬಸವನ ಮಾಟ ನಿರ್ಮಾಟವಾಗಿತ್ತು ಬಸವನ ಭಕ್ತಿ ಬಯಲನೆ ಕೂಡಿ ನಿರ್ವಯಲಾಯಿತ್ತು ಬಸವಾ ಬಸವಾ ಬಸವಾ ಎಂಬ ಶಬ್ದವಡಗಿ ನಿಶಬ್ದವಾಯ್ತಯ್ಯ ಸಂಗಯ್ಯಾ.” ಬಸವಣ್ಣನವರು ಅನುಭಾವದ ನೆಲೆಯಲ್ಲಿ ನೀಡಿದ ಕಾಯಕ ದಾಸೋಹದ ಸಿದ್ಧಾಂತಗಳು, ಅವರು ನೀಡಿದ ಅರಿವು ನಿರಾಧಾರವಾಯಿತ್ತು. ಎಲ್ಲೆಡೆ ಶೂನ್ಯ ಭಾವ ಆವರಿಸಿತ್ತು. ಬಸವಣ್ಣನವರು ಕಲ್ಯಾಣವನ್ನು ಒಂದು ಸಮತೆಯ ಸುಂದರ ಮಾಟವನ್ನಾಗಿ ಮಾಡಿದ್ದರು. ಬಸವಣ್ಣನವರಿಲ್ಲದ ಕಾರಣ ಆ ಸುಂದರ ಮಾಟವು ನಿರ್ಮಾಟವಾಗಿತ್ತು. ಮಹಾಮನೆ ಹಾಳಾಯಿತ್ತು, ಅನುಭವ ಮಂಟಪವು ಬೆಂಕಿಗೆ ಗುರಿಯಾಗಿತ್ತು ಎಂದು ಸೂಕ್ಷ್ಮವಾಗಿ ಹೇಳುತ್ತಾರೆ. ಬಸವಣ್ಣನವರು ಭಕ್ತಿ ಮಾರ್ಗದಲ್ಲಿ ಧರ್ಮವನ್ನು ಕಟ್ಟಿ, ಬಯಲು ಶೂನ್ಯ ಮಹಾಬೆಳಗು ಚಿದ್ಬೆಳಕು ಎಂಬರ್ಥದಲ್ಲಿ ನಿರೂಪಿಸಿ ಸಾಧಿಸಿದವರು. ಅವರಿಲ್ಲದ ಕಾರಣ ಅವರ ಭಕ್ತಿ ಬಯಲೊಳಗೆ ಕೂಡಿ ನಿರ್ವಯಲಾಯಿತ್ತು. ಬಸವಣ್ಣನವರ ಧರ್ಮದ ಧ್ಯೇಯ ಉದ್ದೇಶಗಳು, ಸಮತೆಯ ಪರಿಕಲ್ಪನೆ ಹಾಳಾದವೇ ಎಂದು ಆತಂಕವನ್ನೂ ವ್ಯಕ್ತಪಡಿಸುತ್ತಾರೆ ನೀಲಮ್ಮ… ಕಲ್ಯಾಣದ ತುಂಬೆಲ್ಲ ಬಸವಾ ಬಸವಾ ಬಸವಾ ಎಂಬ ಶಬ್ದವು ಅಧಿಕವಾಗಿತ್ತು. ಬಸವಾಕ್ಷರಗಳೆ ಮಂತ್ರವಾಗಿತ್ತು. ಇಂತಹ ಬಸವಾ ಬಸವಾ ಎಂಬ ಶಬ್ದವು ಅಡಗಿ ನಿಶಬ್ದವಾಯಿತ್ತು ಸಂಗಯ್ಯಾ ಎಂದು ಸಾಂದರ್ಭಿಕವಾಗಿ ತನ್ನ ಅಳಲನ್ನು ತೋಡಿಕೊಂಡ ನೀಲಮ್ಮನವರಿಗೆ ಬಸವಣ್ಣನವರೇ ಕರಸ್ಥಲದ ಲಿಂಗವಾಗಿದ್ದರು. ಬಸವಣ್ಣನವರಿಲ್ಲದ ಬದುಕು ತನಗೂ ಬೇಡವೆಂದು ತೀರ್ಮಾನಿಸಿ ನದಿಯ ಆಚೆಗೆ ಬಸವಣ್ಣನವರು ಐಕ್ಯವಾದರೆ ನೀಲಮ್ಮನವರು ಹಡಪದ ಅಪ್ಪಣ್ಣನವರ ಜೊತೆ ನದಿಯ ಈಚೆಗೆ ಇಂದಿನ ಮುದ್ದೇಬಿಹಾಳ ತಾಲೂಕಿನ ತಾಳಿಕೋಟೆ ಬಳಿಯಿರುವ ರಕ್ಕಸ ತಂಗಡಗಿಯಲ್ಲಿ ಐಕ್ಯರಾಗುತ್ತಾರೆ… ಮಹಾ ನಿಲುವಿನ ದಿಟ್ಟ ಶರಣೆ ಕಲ್ಯಾಣದ ಕ್ರಾಂತಿಯಲ್ಲಿ ಅಚ್ಚು ಹಾಕಿದ ಹೆಸರು, ಮಹಿಳೆಯರಿಗೆ ಸ್ಫೂರ್ತಿ ಚೇತನವಾದ ಸಾಕ್ಷಿ ಪ್ರಜ್ಞೆಯಾಗಿದ್ದಾರೆ ನೀಲಮ್ಮ. ರಕ್ಕಸ ತಂಗಡಗಿಯಲ್ಲಿ ಅವರ ಗದ್ದುಗೆಯಿದೆ. ಜಂಗಮ ಜ್ಯೋತಿಗೆ ಅರಿವಿನ ಸಾಕಾರಕ್ಕೆ ಹಚ್ಚಿದ ಅಮರ ಜ್ಯೋತಿ ನೀಲಮ್ಮ..! (ಲೇಖನ ಸಹಾಯ– ಡಾ.ಶಶಿಕಾಂತ ಪಟ್ಡಣ) ******* ಕೆ.ಶಿವು.ಲಕ್ಕಣ್ಣವರ                                      

ಸ್ವಾತ್ಮಗತ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಮಹಾವೀರ ಜಯಂತಿ ಕೆ.ಶಿವುಲಕ್ಕಣ್ಣವರ ಈ ಲೇಖನ ಮಹಾವೀರ ಜಯಂತಿಯ ವಿಶೇಷದ‌ ವಿಷಯವಾಗಿದೆ. ಸರ್ವಸಂಘ‌‌ ಪರತ್ಯಾಗಿ ಮತ್ತು ಅಹಿಂಸಾ ಮೂರ್ತಿ ಮಹಾವೀರರು..! ಜಗತ್ತಿನ ಯಾವುದೇ ಧರ್ಮದಲ್ಲಿಯೂ ಹಿಂಸೆಯನ್ನು ಪ್ರೋತ್ಸಾಹಿಸಿಲ್ಲ. ಹಿಂಸೆಯ ಬೋಧನೆ ಸಹ ಕಂಡುಬರುವುದಿಲ್ಲ. ಆದರೆ ಇಂದಿನ ದಿನಗಳಲ್ಲಿ ಧರ್ಮದ ಹೆಸರಿನಲ್ಲಿ ಹಿಂಸೆ ಹಾಗೂ ಕೊಲೆಗಳಂತಹ ಹೀನಾಯ ಕೃತ್ಯಗಳು ಕೆಲವೆಡೆ ಕಂಡು ಬರುತ್ತಿರುವುದು ವಿಪರ್ಯಾಸ. ರಾಜ್ಯ, ಸಿರಿ, ಸಂಪತ್ತು ಹಾಗೂ ಚಕ್ರವರ್ತಿಯ ಪದವಿಗಾಗಿ ಯುದ್ಧವೇ ಅನಿವಾರ್ಯವೆನ್ನುವ ಪ್ರಸಂಗದಲ್ಲಿಯೂ ಸಹ ಜೀವಹಿಂಸೆ ಮತ್ತು ಆಸ್ತಿ ಪಾಸ್ತಿಗಳ ಹಾನಿಯಾಗದಂತೆ ಅಹಿಂಸಾತ್ಮಕ ಯುದ್ಧವನ್ನು ಮಾಡಬಹುದು ಎಂದು ಜಗತ್ತಿಗೇ ಭರತ, ಬಾಹುಬಲಿಯವರು ತೋರಿಸಿಕೊಟ್ಟಿದ್ದಾರೆ. ಅವರಿಬ್ಬರ ನಡುವೆ ನಡೆದ ದೃಷ್ಟಿಯುದ್ಧ, ಜಲಯುದ್ಧ ಮತ್ತು ಮಲ್ಲಯುದ್ಧಗಳಲ್ಲಿ ಬಾಹುಬಲಿಯು ಜಯಶಾಲಿಯಾಗಿ ಚಕ್ರೇಶ್ವರ ಪದವಿಯನ್ನು ತನ್ನದಾಗಿಸಿಕೊಂಡರೂ ಸಹ ಭರತನಿಗೆ ಎಲ್ಲವನ್ನೂ ಅರ್ಪಿಸಿ ತಾನು ಸತ್ಯ, ಅಹಿಂಸೆ, ತ್ಯಾಗ ಮತ್ತು ಮೈತ್ರಿಗಾಗಿ ದಿಗಂಬರ ಮುನಿಯಾಗಿ ತಪಸ್ಸಿಗೆ ನಡೆಯುತ್ತಾನೆ. ಜಗದ್ವಂದ್ಯನಾದ ಬಾಹುಬಲಿಯು ಇದೇ ದಿವ್ಯ ಸಂದೇಶವನ್ನು ಸಾರುತ್ತ ಶ್ರವಣಬೆಳಗೊಳದ ವಿಂಧ್ಯಗಿರಿಯ ಮೇಲೆ ನಿಂತಿರುವ ಆ ಮಹಾಮಹಿಮನಿಗೆ ಇತ್ತೀಚೆಗಷ್ಟೇ ಮಹಾಮಜ್ಜನ ಮಹೋತ್ಸವವು ನಡೆದು, ಅವನ ಸಂದೇಶಗಳು ಅಭಿಷೇಕದ ದ್ರವ್ಯಗಳೊಂದಿಗೆ ವಿಂಧ್ಯಗಿರಿಯ ಕಡೆಯಿಂದ ಬೀಸಿ ಬರುತ್ತಿರುವ ಗಾಳಿಯೊಂದಿಗೆ ತೇಲಿ ಬಂದು ನಮ್ಮನ್ನು ಎಚ್ಚರಿಸುತ್ತಿರುವಂತೆ ಈಗಲೂ ಭಾಸವಾಗುತ್ತಿದೆ. ಅವಿನ್ನೂ ನಮ್ಮ ಮನದಿಂದ ಮಾಸುವ ಮುನ್ನವೇ ಈಗ ಜೈನ ಧರ್ಮದ ವರ್ತಮಾನ ಕಾಲದ 24ನೇ ತೀರ್ಥಂಕರ ಮಹಾವೀರರ ಜಯಂತ್ಯುತ್ಸವವು ಬಂದಿದೆ… ಸತ್ಯ, ಅಹಿಂಸೆ, ಅಪರಿಗ್ರಹ, ಅಚೌರ್ಯ ಮತ್ತು ಬ್ರಹ್ಮಚರ್ಯಗಳೆಂಬ ಪಂಚವ್ರತಗಳನ್ನಾಗಿ ಮಹಾವೀರ ಬೋಧಿಸಿದ್ದು ಅಹಿಂಸೆಯೇ ಶ್ರೇಷ್ಠ ಧರ್ಮವೆಂದು ಸಾರಿದ್ದಾರೆ… ಜೈನ ಧರ್ಮದ ತತ್ವಸಿದ್ಧಾಂತಗಳು ಜಗತ್ತಿನ ಎಲ್ಲ ಧರ್ಮಗಳಿಗಿಂತಲೂ ಅತ್ಯಂತ ಕಠಿಣವೆನಿಸುತ್ತಿದ್ದರೂ ಸಹ, ಅವುಗಳನ್ನು ಎರಡು ವಿಧವಾಗಿ ಬೋಧಿಸಿ, ಎಲ್ಲರಿಗೂ ನಿಕಟವಾಗುವಂತೆ ಅಣುವ್ರತಹಾಗೂ ಮಹಾವ್ರತಗಳನ್ನಾಗಿ ತಿಳಿಸಿರುವುದು ಒಂದು ಜೈನ ಧರ್ಮದ ವಿಶೇಷ… ಅಂದರೆ ಶ್ರಾವಕ (ಸಂಸಾರಿ) ಆದವನು ಪಂಚವ್ರತಗಳನ್ನು ಸ್ಥೂಲವಾಗಿ ಆಚರಣೆಯಲ್ಲಿ ತಂದುಕೊಂಡು ಸಾಧನೆಯ ಮೆಟ್ಟಿಲನ್ನು ಏರುತ್ತಾ ಹೋಗಬಹುದು. ಇಲ್ಲಿ ಸಾಧಕನಿಗೆ ಹನ್ನೊಂದು ನೆಲೆಗಳನ್ನು ಬೋಧಿಸಲಾಗಿದ್ದು, ಕೊನೆಯ ಹಂತದಲ್ಲಿ ಉತ್ತಮ ಶ್ರಾವಕ ಸ್ಥಾನಕ್ಕೇರಿ, ತ್ಯಾಗಿ ಧರ್ಮ ಪರಿಪಾಲನೆಯ ಸಾಮರ್ಥ್ಯ ಹೊಂದಿದವನು ಪಂಚವ್ರತಗಳನ್ನು ಮಹಾವ್ರತಗಳನ್ನಾಗಿ ಆಚರಿಸಲಾರಂಭಿಸುತ್ತಾನೆ. ಮಹಾವ್ರತಿಯಾದ ತ್ಯಾಗಿಯ ಆಚರಣೆಗಳು ಇನ್ನೂ ಕಠೋರವಾಗುತ್ತವೆ. ಕರ್ಮಬಂಧನದಿಂದ ಬಿಡುಗಡೆ ಪಡೆದು ಆತ್ಮ ಪರಿಶುದ್ಧತೆಯೊಂದಿಗೆ ಮುಕ್ತಿ ಹೊಂದುವುದು ಪರಮಗುರಿಯಾಗಿದೆ… ಹಾಗೆಯೇ, ಅನೇಕಾಂತವಾದ ಎಂದು ಹೇಳಲಾಗುವ ಸಿದ್ಧಾಂತದ ಪ್ರಕಾರ, ‘ನಾನು ತಿಳಿದುಕೊಂಡಿರುವುದೇ ಸರಿ, ಅದುವೇ ಕೊನೆಯ ಸತ್ಯ, ಮತ್ತು ಅದೇ ಅಂತಿಮ’ ಎನ್ನುವ ಅಹಂಕಾರದ ವಾದಕ್ಕೆ ಇಲ್ಲಿ ಸ್ಥಾನವಿಲ್ಲ. ಅನ್ಯರ ಹಾಗೂ ಅನ್ಯಧರ್ಮೀಯರ ವಿಚಾರ, ದೃಷ್ಟಿದರ್ಶನಗಳಿಗೂ ಗೌರವ ನೀಡಬೇಕು ಎನ್ನುವ ವಿಶಾಲ ಹಾಗೂ ಸಮತಾ ಭಾವ ಅನೇಕಾಂತದಲ್ಲಿದೆ. ಹೀಗೆ ಜೈನ ಸಿದ್ಧಾಂತದಲ್ಲಿ ಇದು ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದ್ದು ಪ್ರೀತಿ, ಪ್ರೇಮ ಹಾಗೂ ಸಹಬಾಳ್ವೆಗೆ ಸ್ಥಾನವಿದೆ… ಜೈನ ಧರ್ಮ ಭಾರತದ ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದಾಗಿದೆ. ಅದರ ತತ್ವ ಸಿದ್ಧಾಂತಗಳ ಪ್ರಖರತೆಯು ಬೆಳಗಿದ್ದು ಭಗವಾನ ಮಹಾವೀರರ ಕಾಲದಲ್ಲಿಯೇ ಎಂದು ಹೇಳಬಹುದು. ಕ್ರಿ.ಶ.ಪೂ. 599ರಲ್ಲಿ ಬಿಹಾರದ ಕುಂಡಲಪುರದಲ್ಲಿ ಚಕ್ರವರ್ತಿ ಸಿದ್ಧಾರ್ಥ ಮತ್ತು ಮಹಾರಾಣಿ ತ್ರಿಶಲಾ ಇವರ ಪುತ್ರನಾಗಿ ಮಹಾವೀರರ ಜನನ. ವರ್ಧಮಾನ, ಮಹಾವೀರ, ವೀರನಾಥ, ಸನ್ಮತಿ ಹೀಗೆ ಅನೇಕ ಹೆಸರುಗಳಿಂದ ಪ್ರವರ್ಧಮಾನಕ್ಕೆ ಬಂದ ಮಹಾವೀರರು ಚಿಕ್ಕಂದಿನಲ್ಲಿಯೇ ಅನೇಕ ಲೀಲೆಗಳನ್ನು ತೋರಿಸಿದರು. ಆದರೆ ಬಾಲ್ಯದಿಂದಲೇ ಅಲೌಕಿಕದೆಡೆಗೆ ಒಲುಮೆ ತೋರುತ್ತ, ರಾಜಭೋಗ, ಸೇವಕರ ಸೇವೆ, ಸಿರಿಸಂಪತ್ತು ಹಾಗೂ ಬಾಹ್ಯ ಸುಖದತ್ತ ಆಕರ್ಷಿತರಾಗದೇ ಅವುಗಳಿಂದ ನಿರ್ಲಿಪ್ತರಾಗಿದ್ದರು… ಮಹಾವೀರರು ತಾರುಣ್ಯಾವಸ್ಥೆಗೆ ಬಂದಾಗ, ‘ಸಂಸಾರ ಬಂಧನಕ್ಕೆ ಕಾರಣವಾಗುವ ವಿವಾಹ ನನಗೆ ಬೇಡ. ಅವೆಷ್ಟೋ ಭವಗಳನ್ನು ಕಳೆದ ನಂತರ ಈಗ ನಾನು ಮಾನವ ಜೀವಿಯಾಗಿ ತಮ್ಮ ಪುಣ್ಯ ಗರ್ಭದಲ್ಲಿ ಜನಿಸಿರುತ್ತೇನೆ. ಈಗಲಾದರೂ ನನ್ನ ಮೋಕ್ಷ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ. ಸಮ್ಯಕ್‌ ತತ್ವದಿಂದ ಲೋಕಕಲ್ಯಾಣ ಹಾಗೂ ಆತ್ಯಕಲ್ಯಾಣದ ಗುರಿಯು ನನ್ನ ಮುಂದಿವೆ. ಅದಕ್ಕಾಗಿ ನಾನು ಅಣಿಯಾಗಬೇಕಾಗಿದೆ’ ಎಂದು ಮಹಾವೀರರು ನುಡಿದರು… ಕ್ರಿ.ಶ.ಪೂ. 569ನೆಯ ಮಾರ್ಗಶಿರ ಮಾಸದ ಕೃಷ್ಣಪಕ್ಷದಲ್ಲಿ ದಶಮಿ ತಿಥಿಯ ದಿನದಂದು, ಮಹಾವೀರರು ಸನ್ಯಾಸಿ ದೀಕ್ಷೆ ಪಡೆಯಲು ಕಾಡಿನೆಡೆಗೆ ನಡೆದರು. ಕಾಲಾಂತರದಲ್ಲಿ ಮಹಾವೀರರು ದೇಶದಲ್ಲೆಡೆ ವಿಹಾರಗೈದು ಶ್ರೇಣಿಕ, ಚೇಟಕರಂತಹ ಅನೇಕ ರಾಜ –ಮಹಾರಾಜರನ್ನು ತಮ್ಮ ಶಿಷ್ಯ ಪಡೆಯಲ್ಲಿ ಹೊಂದಿ ಜೈನ ಧರ್ಮದ ತತ್ವ ಸಿದ್ಧಾಂತಗಳನ್ನು ಬೋಧಿಸಿದರು… ‘ಆತ್ಮ ಪರಿಶೋಧನೆಯ ಸಾಧನೆಯಿಂದ ಪರಿಶುದ್ಧ ಆತ್ಮ ಪರಮಾತ್ಮನಾಗುತ್ತಾನೆ. ಆದ್ದರಿಂದ ನಿನ್ನೊಳಗಿನ ಆತ್ಮವನ್ನು ಅರಿಯಲು ನೀನು ಸಾಧನೆ ಮಾಡು. ನಾನು ಎಂದುಕೊಂಡಿರುವ ಈ ದೇಹ ನಾನಲ್ಲ, ದೇಹವೇ ಬೇರೆ, ಆತ್ಮವೇ ಬೇರೆ ಎಂದು ಭೇದವಿಜ್ಞಾನ ಬೋಧಿಸಿದರು. ಹೀಗೆ ಅವರ ತತ್ವಸಿದ್ಧಾಂತಗಳು ಜನರ ಮನಸ್ಸಿಗೆ ಹತ್ತಿರವಾಗುತ್ತಿದ್ದಂತೆ ಅವು ಜನರ ಮನದಾಳದಲ್ಲಿ ಬೇರೂರಿದವು. ಮಹಾವೀರರು ಬೋಧನಾಮೃತವನ್ನು ದೇಶದೆಲ್ಲಡೆ ಹರಡಿತು. ತಮ್ಮ 72ನೆಯ ವಯಸ್ಸಿನಲ್ಲಿ ಸಂಪೂರ್ಣ ಅನ್ನಾಹಾರವನ್ನು ತ್ಯಾಗ ಮಾಡಿ ಶುಕ್ಲಧ್ಯಾನದಲ್ಲಿ ತೊಡಗಿದರು. ಅಷ್ಟಕರ್ಮಗಳನ್ನು ದಹಿಸಿದ ಅವರು ಕ್ರಿ.ಶ.ಪೂ. 527ನೆಯ ಕಾರ್ತೀಕ ಮಾಸದ ಕೃಷ್ಣಪಕ್ಷ ಚತುರ್ದಶಿಯ ರಾತ್ರಿಯಲ್ಲಿ ಮೋಕ್ಷ ಪದವಿಯನ್ನು ಪಡೆದರು. ಅಂದಿನ ದಿನವನ್ನು ಜೈನರು ಶ್ರದ್ಧಾಭಕ್ತಿಯಿಂದ ಒಂದು ವಿಶೇಷ ಪರ್ವವನ್ನಾಗಿ ಆಚರಿಸುತ್ತಾರೆ..! **********

ಸ್ವಾತ್ಮಗತ Read Post »

You cannot copy content of this page

Scroll to Top