ಬಾಲ್ಯದ ನೆನಪುಗಳೆಂದರೆ ಹಾಗೇ……. ತುಂತುರು ಮಳೆಗೆ ಮುಖವೊಡ್ಡಿದ ಹಾಗಿನ ಅಪ್ಯಾಯತೆ .ಮಗು ಚಾಕಲೇಟನ್ನು ಕಾದಿಟ್ಟುಕೊಂಡು ತುಣುಕು ತುಣುಕಾಗಿ ಸವಿಯುವಂತೆ . ಈ ಚಿಕ್ಕಂದಿನ ನೆನಪುಗಳು ನೆನೆಸಿಕೊಳ್ಳಲು ಬರೆಯಲು ವಿಶೇಷ ಸಂದರ್ಭಗಳ ನೆವ ಅಷ್ಟೇ …
ನಿಮಗೆಲ್ಲಾ ಖಂಡಿತ ಗೊತ್ತಾಗಿದೆ ಅನ್ಕೋತೀನಿ. ಕರೆಕ್ಟ್ ಅದೇ ರೀ ನಮ್ಮ ಬೀಸುವಕಲ್ಲು!
ಈಗಿನ ಮಕ್ಕಳಿಗೆ ಒಗಟಿಗೆ ಉತ್ತರ ಇರಲಿ ಬೀಸುವ ಕಲ್ಲುಅಂದರೆ ಏನೂ ಅಂತಲೇ ಗೊತ್ತಿಲ್ಲ
ಅಂಕಣ ಸಂಗಾತಿ ನೆನಪಿನದೋಣಿಯಲಿ ದಸರಾ ಮೈಸೂರು ದಸರಾ ಎಷ್ಟೊಂದು ಸುಂದರಾ ಚೆಲ್ಲಿದೆ ನಗೆಯಾ ಪನ್ನೀರ ಎಲ್ಲೆಲ್ಲೂ ನಗೆಯಾ ಪನ್ನೀರ ಬಾಲ್ಯ ಎಂದರೆ ಹಬ್ಬಗಳ ಆಚರಣೆ ಮನದಲ್ಲಿ ಎಂದಿಗೂ ಹಸಿರು . ಅದರಲ್ಲೂ ಮೈಸೂರಿನಲ್ಲಿ ಹುಟ್ಟಿ ಬೆಳೆದ ನನಗೆ ದಸರಾ ಎಂದರೆ ಜೀವನದ ಒಂದು ಅವಿಭಾಜ್ಯ ಅಂಗದಂತೆ. ದಸರೆಯನ್ನು ನೆನಪು ಮಾಡಿಕೊಳ್ಳದ ನೆನಪಿನ ದೋಣಿಯ ಪಯಣ ಅರ್ಥಹೀನ ಅನ್ನಿಸಿಬಿಡುತ್ತದೆ. ಹಾಗಾಗಿಯೇ ಇಂದಿನ ನೆನಪಿನ ದೋಣಿಯ ಯಾನವಿಡೀ ದಸರೆಯ ಸ್ಮರಣೆ. ನವರಾತ್ರಿ ದಸರಾ ಎಂದರೆ ಧಾರ್ಮಿಕ ಆಧ್ಯಾತ್ಮಿಕ ಸಾಂಸ್ಕೃತಿಕ ಸಂಭ್ರಮಗಳ ಸಂಗಮ.ಬಾಲ್ಯದಲ್ಲಿ ಆಧ್ಯಾತ್ಮಿಕ ಆಯಾಮದ ಬಗ್ಗೆ ಬಿಡಿ. ಅಂತಹದ್ದೇನೂ ಇಲ್ಲ . ಆದರೆ ಧಾರ್ಮಿಕ ಆಚರಣೆಗಳು ಹಾಗೂ ಸಾಂಸ್ಕೃತಿಕ ಸಂಭ್ರಮಗಳು! ಇಡೀ ಬಾಲ್ಯದ ಸೊಗಸನ್ನು ಇಮ್ಮಡಿಗೊಳಿಸಿದ ಶ್ರೀಮಂತವಾಗಿಸಿದ ಅನುಭವಗಳು ಅವು. ಮೊದಲನೆಯ ಅರ್ಧವಾರ್ಷಿಕ ಪರೀಕ್ಷೆಗಳು ಮುಗಿದು ರಜೆ ಶುರುವಾಗಿ ಬಿಡುತ್ತಿತ್ತು. ಮೈಸೂರು ಅಂದಮೇಲೆ ಮಹಾಲಯ ಅಮಾವಾಸ್ಯೆಯಿಂದಲೇ ರಜೆ . ದಸರೆ ಎಂದರೆ ಮನೆಯೊಳಗಿನ ಸಂಭ್ರಮ ಹೊರಗಿನ ಸುತ್ತಾಡುವ ಸಂಭ್ರಮ ಎರಡೂ. ಮೈಸೂರಿನ ನಿವಾಸಿಯಾದ ನನಗೆ ದಸರೆಯೆಂದರೆ ಆಗಮಿಸಿದ ನೆಂಟರಿಷ್ಟರ, ದಿನವೂ ಮಾಡುವ ಹಬ್ಬದಡಿಗೆಗಳ ಸಂಜೆಯ ಸಾಂಸ್ಕೃತಿಕ ಸಮಾರಂಭಗಳ ನೆನಪು ಸಾಲಾಗಿ ಬರುತ್ತದೆ. ಮೊದಲಿಗೆ ಗೊಂಬೆ ಕೂಡಿಸುವ ಸಂಭ್ರಮದ ಬಗ್ಗೆ ಹೇಳಿಬಿಡುವೆ. ನಮ್ಮ ಮನೆಯಲ್ಲಿ ಮೂಲಾನಕ್ಷತ್ರ ಸಪ್ತಮಿಯ ದಿನದಿಂದ ಗೊಂಬೆ ಕೂರಿಸುವ ಸಂಪ್ರದಾಯ. ಹಾಗಾಗಿ ಪಾಡ್ಯದ ದಿನದಿಂದಲೇ ರಾಗಿ ಮೊಳಕೆ ಹಾಕುವ ಕೆಲಸ . ಅಟ್ಟದಲ್ಲಿದ್ದ ಹಸಿರು ಟ್ರಂಕ್ ಕೆಳಗಿಳಿದ ಕೂಡಲೇ ನಾವು ಮೂವರೂ ಅದರ ಸುತ್ತ. ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಒಂದೊಂದೇ ಗೊಂಬೆಗಳು ಈಚೆಗೆ ಬರುತ್ತಿದ್ದಂತೆ ಒಂದೊಂದು ರೀತಿಯ ಉದ್ಗಾರದ ಸ್ವಾಗತ. ದೇವರ ಮಣ್ಣಿನ ವಿಗ್ರಹಗಳು ಬಂದಾಗ ಸ್ವಲ್ಪ ಮೌನವೇ. ಆದರೆ ಶೆಟ್ಟ ಶೆಟ್ಟಿ ಗೊಂಬೆಗಳು ಬಂದವೆಂದರೆ ಓ ಎಂಬ ಉದ್ಗಾರ. ವಿದೂಷಕ ಗೊಂಬೆಗಳು ಬಂದಾಗ ಹಾಹಾ ಹೋ ಹೋ. ಕಿರುಚಬೇಡಿರೇ ಎಂಬ ಅಮ್ಮನ ಎಚ್ಚರಿಕೆಯ ಮಾತು ನಮ್ಮ ಅಬ್ಬರದ ಮಧ್ಯೆ ಉಡುಗಿಹೋಗುತ್ತಿತ್ತು. ಇದು ಹೊಸದು ಅದು ಹೊಸದು ಅಂಥ ಹಣಕಿ ಹಾಕುವುದು. ಮುಟ್ಟಬೇಡಿ ಒಡೆಯಬೇಡಿ ಅಂಥ ಮಧ್ಯೆಮಧ್ಯೆ ತಾಕೀತು . ಇವುಗಳ ಮಧ್ಯೆ ಪ್ರತಿವರ್ಷವೂ ಅಮ್ಮ ಪ್ರತಿಯೊಂದು ಗೊಂಬೆಯನ್ನು ಅದು ಅಲ್ಲಿ ತಗೊಂಡಿದ್ದು ಇದು ಇಲ್ಲಿ ತಗೊಂಡಿತ್ತು ಎನ್ನುವ ಪರಿಚಯದ ಪ್ರಸ್ತಾವನೆ . ಹಳೆಯ ನೆಂಟರನ್ನು ಬರಮಾಡಿಕೊಂಡಂತೆ .ಈಗಿನ ಹಾಗೆ ಥೀಮ್ ಪ್ರಕಾರ ಜೋಡಿಸುವುದೇನೂ ಇರುತ್ತಿರಲಿಲ್ಲ .ಸ್ವಲ್ಪ ಮಟ್ಟಿನ ಬದಲಾವಣೆ ವರ್ಷದಿಂದ ವರ್ಷಕ್ಕೆ ಅಷ್ಟೇ. ಅತಿಶಯವಾಗಿ ಹೊಸ ಗೊಂಬೆಗಳು ಏನೂ ಸೇರುತ್ತಿರಲಿಲ್ಲ .ನನಗೆ ನೆನಪಿದ್ದಂತೆ ಬಳಪದ ಕಲ್ಲಿನ ದೇಗುಲದ ಗೋಪುರದ ಒಂದು ಮಾದರಿ ಇತ್ತು .ಮರಳು ತಂದು ಬೆಟ್ಟದ ರೀತಿ ಮಾಡಿ ಮೆಟ್ಟಿಲು ಕಲ್ಲುಗಳನ್ನು ಜೋಡಿಸಿ ತುದಿಯಲ್ಲಿ ದೇಗುಲದ ಮಾದರಿ ಇಟ್ಟರೆ ಅದೇ ಚಾಮುಂಡಿ ಬೆಟ್ಟ .ಟ್ರೇಗಳಲ್ಲಿ ಹಾಕಿದ ರಾಗಿ ಮೊಳಕೆ ಬಂದಿರುತ್ತಿದ್ದವು. ಅವುಗಳ ಮಧ್ಯೆ ಗಾಜಿನ ಬಿಲ್ಲೆ ಇಟ್ಟರೆ ಅದೇ ಮದ್ಯದ ಕೆರೆ ಕಟ್ಟೆಗಳು .ಆಗ ಬಿನಾಕಾ ಟೂತ್ಪೇಸ್ಟಿನ ಜೊತೆ ಪ್ಲಾಸ್ಟಿಕ್ಕಿನ ಸಣ್ಣ ಸಣ್ಣ ಪ್ರಾಣಿಯ ಆಕೃತಿಗಳನ್ನು ಕೊಡುತ್ತಿದ್ದರು. ಅವುಗಳನ್ನು ಮಧ್ಯೆ ಮಧ್ಯೆ ಇಡುತ್ತಿದ್ದೆವು..ಜೇಡದ ಮಣ್ಣಿನ ಗೊಂಬೆಗಿರುತ್ತಿದ್ದವು. ಅದರಲ್ಲಿ ಒಂದು ಶೆಟ್ಥರ ಗಂಡ ಹೆಂಡತಿ ಗೊಂಬೆ .ಅವುಗಳ ಮುಂದೆ ಪುಟ್ಟ ಪುಟ್ಟ ಪ್ಲಾಸ್ಟಿಕ್ ತಟ್ಟೆಯಲ್ಲಿ ಅಕ್ಕಿ ಬೇಳೆ ಎಲ್ಲ ತುಂಬಿ ಇಟ್ಟು ರಟ್ಟಿನ ಬೋರ್ಡ್ ತಗುಲಿ ಹಾಕಿ ಪ್ರಾವಿಷನ್ ಸ್ಟೋರ್ .ಬಳಪದ ಕಲ್ಲಿನ ಪ್ಲಾಸ್ಟಿಕ್ಕಿನ ಹಾಗೂ ಹಿತ್ತಾಳೆಯ ಅಡಿಗೆ ಪಾತ್ರೆಗಳ ಮಿನಿಯೇಚರ್ ಸೆಟ್ ಇದ್ದು ಅವುಗಳನ್ನು ಜೋಡಿಸುತ್ತಿದ್ದೆವು.ನಾವೇ ತಯಾರಿಸಿದ ಮಣಿಯಿಂದ ಮಾಡಿದ ಸಾಮಾನುಗಳೂ. ಆಗ ಸಿಗುತ್ತಿದ್ದ ಟಿನ್ನಿನ ಡಬ್ಬಿಗಳನ್ನು ಜೋಡಿಸಿ ಅವುಗಳ ಮೇಲೆ ಮಂಚದ ಹಲಿಗೆಗಳ ಹಂತಗಳನ್ನು ಮಾಡಿ ಬಿಳಿ ಪಂಚೆ ಹಾಸಿ ಗೊಂಬೆ ಜೋಡಿಸುತ್ತಿದ್ದು. ಮಧ್ಯದಲ್ಲಿ ಪಟ್ಟದ ಗೊಂಬೆಗಳು ಮತ್ತು ಕಳಶ .ಅಮ್ಮನ ಮನೆಯಲ್ಲಿ ಸಪ್ತಮಿ ಮೂಲಾ ನಕ್ಷತ್ರದಿಂದ ಬೊಂಬೆ ಕೂಡಿಸುವ ಪರಿಪಾಠ .ಅಯ್ಯೋ ಮೊದಲಿನಿಂದ ಕೂಡಿಸಬಾರದೇ ಅಂತ ಬೇಸರ .ಈಗಿನ ಹಾಗೆ ವರ್ಷವರ್ಷವೂ ಹೊಸ ಸೆಟ್ ತೆಗೆದುಕೊಳ್ಳುವ ಪರಿಪಾಠವೂ ಇರಲಿಲ್ಲ ಅಷ್ಟು ಹಣವೂ ಇರಲಿಲ್ಲ. ಇದ್ದುದರಲ್ಲೇ ಸಂತೋಷಪಡುವ ಬುದ್ದಿಯಂತೂ ಸಮೃದ್ಧಿಯಾಗಿತ್ತು. ಮುಖ್ಯ ಆಡಂಬರ ವೈಭವ ತೋರಿಸಿಕೊಳ್ಳುವ ಬುದ್ಧಿ ಇರಲಿಲ್ಲ ಸಾಂಪ್ರದಾಯಿಕ ಧಾರ್ಮಿಕ ಆಚರಣೆ ಎಂಬುದು ಆಗಿನ ಅಭ್ಯಾಸ . ಸಂಜೆಗೆ ಕುಂಕುಮಕ್ಕೆ ಕರೆದವರ ಮನೆಗೆಲ್ಲ ಗುಂಪು ಕಟ್ಟಿಕೊಂಡು ಹೋಗುವುದು .ಹಾಗೆ ನಮ್ಮ ಮನೆಗೆ ಬಂದಾಗ ನಾವು ಆತಿಥೇಯರು .ಎಲ್ಲರ ಮನೆಯ ಗೊಂಬೆ ಬಾಗಿನ ಹಾಕಿಸಿಕೊಳ್ಳಲು ಒಂದು ಡಬ್ಬಿ. ಪ್ರತಿಯೊಬ್ಬರ ಮನೆಯಲ್ಲೂ ಹಾಡು ನೃತ್ಯ ಏಕಪಾತ್ರ ಅಭಿನಯ ಶ್ಲೋಕ ಹೇಳುವುದು ಯಾವುದಾದರೂ ಒಂದು ಮಾಡಿದ ಮೇಲೇ ಅವರ ಮನೆಯಲ್ಲಿ ಬಾಗಿನ ಕೊಡುತ್ತಿದ್ದುದು. ಒಂದು ರೀತಿಯ “ಪ್ರತಿಭಾ ಕಾರಂಜಿ”. ನಾವು ಮೂವರೂ ಸತ್ಯು ಮತ್ತು ಅವಳ ಮೂವರು ತಮ್ಮಂದಿರು ಎದುರುಮನೆಯ ಹರ್ಷ ಅವನ ಇಬ್ಬರು ತಮ್ಮಂದಿರು ಭಾರತಿ ಹಾಗೂ ಅವಳ ಮೂವರು ತಂಗಿಯರು ಜೊತೆಗೆ ಬಂದ ನೆಂಟರಿಷ್ಟರ ಮಕ್ಕಳು ಮೊದಲಾದಂತೆ 1ದೊಡ್ಡ ಪಟಾಲಮ್ಮೇ ಹೊರಡುತ್ತಿತ್ತು . ಈ ಕುಂಕುಮಕ್ಕೆ ಕರೆಯುವ ಪದ್ದತಿ ಇದು 1 ರೀತಿಯ ಬೈ ಡಿಫಾಲ್ಟ್ . 1ದಿನ ಕರೆದರೆ ಇಡೀ ನವರಾತ್ರಿಗೆ ಆಹ್ವಾನ ಅಂತ ಅರ್ಥ. ನಮ್ಮ ಮನೆಯ ಚರುಪುಗಳು ಮೊದಲೇ ಡಿಸೈಡೆಡ್ .ಸರಸ್ವತಿ ಹಬ್ಬದ ದಿನ ಎರೆಯಪ್ಪ, ಅಷ್ಟಮಿಯ ದಿನ ಆಂಬೊಡೆ ನವಮಿಯ ದಿನ ರವೆ ಉಂಡೆ ಹಾಗೂ ವಿಜಯದಶಮಿಗೆ ಕೊಬ್ಬರಿಮಿಠಾಯಿ ಅಥವಾ ಸೆವೆನ್ಕಪ್ .ಮೊದಲೇ ಮಾಡಿಟ್ಟುಕೊಂಡಿದ್ದರೆ ದಸರಾ ಜಂಬೂಸವಾರಿಯಿಂದ ಬಂದ ತಕ್ಷಣ ಸುಲಭ ಎಂದು. ಇನ್ನೂ ಕೆಲವರು ಬಿಸ್ಕತ್ತು ಚಾಕಲೇಟು ಬಾಳೆಹಣ್ಣು ಕೊಡುತ್ತಿದ್ದುದೂ ಉಂಟು . ಸರಸ್ವತಿ ಹಬ್ಬದ ದಿನ ಎಲ್ಲ ಪುಸ್ತಕಗಳನ್ನು ಪೂಜೆಗಿಟ್ಟು ಬಿಡುತ್ತಿದ್ದೆವು. ನಾಲ್ಕು ದಿನ ಓದು ಅಂತ ಅನ್ನಬಾರದು ಹಾಗೆ. ಆಯುಧ ಪೂಜೆಯಲ್ಲಿ ಕತ್ತರಿ ಚಾಕು ಎಲ್ಲದಕ್ಕೂ ಪೂಜೆ. ದಿನಾಲೂ ಅರಮನೆಯಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳಿಗೆ ಭೇಟಿ . ಆಚೆ ಹುಲ್ಲ ಮೇಲೆ ಕುಳಿತು ದೊಡ್ಡ ತೆರೆಯಲ್ಲಿ ಒಳಗಿನ ಕಲಾಪಗಳನ್ನು ವೀಕ್ಷಿಸುವುದು ಜೊತೆಗೆ ಕುರುಕುಲು ಬಿಸಿ ಬಿಸಿ ಕಡಲೆ ಕಾಯಿ ಚುರುಮುರಿ ಒಗ್ಗಗರಣೆ ಪುರಿಗಳು ದಸರೆಯ ಗೊಂಬೆ ಬಾಗಿನದ ಚರುಪುಗಳು. ಅಬ್ಬಾ ಎಂಥ ಸವಿ ಗಳಿಗೆಗಳು. ಒಂದು ದಿನ ಫಲಪುಷ್ಪ ಪ್ರದರ್ಶನದ ಭೇಟಿ.ಅಲ್ಲಿ ಸಮೋಸ ತುಂಬಾ ಚೆನ್ನಾಗಿರ್ತಿತ್ತು .ಈಗಲೂ ನೆನೆಸಿಕೊಂಡರೆ ಬಾಯಲ್ಲಿ ನೀರು. ಎಲ್ಲದಕ್ಕಿಂತ ಹೆಚ್ಚು ಕಾತರದಿಂದ ಕಾಯ್ತಾ ಇದ್ದಿದ್ದು ದಸರಾ ಜಂಬೂ ಸವಾರಿಗೆ. ಮೆರವಣಿಗೆ ನೋಡಲು ಫಲಾಮೃತ ಮಹಡಿ ಮೇಲೆ ಜಾಗ ಕಾದಿರಿಸಿಕೊಂಡು ರಾಶಿ ತಿಂಡಿಗಳನ್ನು ಹೊತ್ತು ಅಕ್ಕಪಕ್ಕದ ಮನೆಯವರ ಜೊತೆ ನಮ್ಮ ತಂಡ ಹೊರಡುತ್ತಿತ್ತು. ಊರಿನಿಂದ ತಂದ ಬಂದ ನೆಂಟರು ತಂದ ತಿಂಡಿ ಉಳಿದ ಚರುಪು ಗಳು ಹಾಗೂ ಇದಕ್ಕಾಗಿಯೇ ವಿಶೇಷವಾಗಿ ಮಾಡಿಕೊಂಡಅವಲಕ್ಕಿ ಪುರಿ ಒಗ್ಗರಣೆ ಕಡಲೆಪುರಿ ಒಗ್ಗರಣೆಗಳು. ಎಲ್ಲಾ ತಿಂಡಿಗಳು ಬರುವಷ್ಟರಲ್ಲಿ ಖಾಲಿ . ಅಕ್ಕಪಕ್ಕದ ಸ್ನೇಹಿತರು ನಾಲ್ಕೈದು ಮನೆಯವರು ಕೂಡಿ ಸಿಟಿ ಬಸ್ ನಲ್ಲಿ ಅಲ್ಲಿಗೆ ತಲುಪಿ ಜಾಗ ಹಿಡಿದುಕೊಂಡು ಪಟ್ಟಾಂಗ ಹೊಡೆಯುತ್ತ ಮೆರವಣಿಗೆ ಬರುವ ತನಕ ಸಮಯ ದೂಡಿ ನಂತರ ಕೃಷ್ಣರಾಜ ಸರ್ಕಲ್ ಸುತ್ತುತ್ತಿದ್ದ ಆಕರ್ಷಕ ದೃಶ್ಯ ಕಣ್ಣು ತುಂಬಿಕೊಳ್ಳುತ್ತಿದ್ದವು ಮೊದಲು ಆ ಅಜಾನುಬಾಹು ಗೊಂಬೆಗಳ ಕುಣಿತ ಕುದುರೆ ವೇಷ ನಂದಿಕೋಲು ಕೋಲಾಟ ಡೊಳ್ಳು ಮದ್ದಳೆಯ ಎಷ್ಟು ಹೊತ್ತು ಬಾರಿಸುತ್ತಾ ಕುಣಿಯುತ್ತಿದ್ದರು. ವಿವಿಧ ರೀತಿಯ ಸ್ತಬ್ಧಚಿತ್ರಗಳನ್ನು ನೋಡಿ ನಮ್ಮ ವಿಮರ್ಶೆ ಮೌಲ್ಯಮಾಪನ .ನಾವು ಹೇಳಿದ ತರಹವೇ ಮಾರನೆಯ ದಿನ ಬಹುಮಾನ ಪ್ರಕಟವಾಗಿದ್ದರಂತೂ ನಮ್ಮನ್ನು ಹಿಡಿಯುವವರೇ ಇರಲಿಲ್ಲ. ಕಡೆಯಲ್ಲಿ ತಾಯಿ ಚಾಮುಂಡಿಯ ಬಂಗಾರದ ಪಲ್ಲಕ್ಕಿ ಪಲ್ಲಕ್ಕಿ ದರ್ಶನ. ಮಧ್ಯೆ ಮಧ್ಯೆ ತಿಂಡಿ ತೀರ್ಥ ಸೇವನೆ ಅಂತೂ ಸಾಂಗವಾಗಿ ನಡೆದೇ ಇರುತ್ತಿತ್ತು. ವಾಪಸ್ಸು ಬರುವಾಗ ಮಾತ್ರ ಫಲಾಮೃತ ಐಸ್ ಕ್ರೀಂ ಕೊಡಿಸುವ ಭರವಸೆ .ಪ್ರತಿ ವರ್ಷ ಮೆರವಣಿಗೆಗೂ ಮಳೆಗೂ ಏನೋ ನಂಟು ಕೆಲವೊಮ್ಮೆ ಮಧ್ಯದಲ್ಲೇ ಧಾರಾಕಾರ ಮಳೆ ಸುರಿದು ತೊಯ್ದು ಮುದ್ದೆಯಾದರೂ ಚೆಲ್ಲಾಪಿಲ್ಲಿಯಾಗದ ಕದಲದ ಜನಸ್ತೋಮ .ಮಳೆಯಲ್ಲಿ ಐಸ್ಕ್ರೀಮ್ ತಿನ್ನುವ ಅಭ್ಯಾಸ ಶುರುವಾದದ್ದು ಆಗಲೇ ಅನ್ನಿಸುತ್ತೆ .ಇನ್ನು ಮನೆಗೆ ನೆಂಟರು ಬಂದಿದ್ದಂತೂ ಇನ್ನೂ ಮಜಾ .ಅಮ್ಮ ಪ್ರತಿ ವಿಜಯದಶಮಿಯಂದು ಜಾಮೂನ್ ಬಿಸಿ ಬೇಳೆ ಬಾತ್ ಮಾಡುತ್ತಿದ್ದರು. ಹನ್ನೊಂದು ಮೂವತ್ತಕ್ಕೆ ಊಟ ಮುಗಿಸಿ ಹನ್ನೆರಡು ಮೂವತ್ತಕ್ಕೆ ಫಲಾಮೃತ ಬಳಿ ಹಾಜರು ಅಲ್ಲಿಂದ ತುಂಬಾ ಚಂದ ಕಾಣುತ್ತಿತ್ತು ಮೆರವಣಿಗೆ. ಸುಮಾರು ವರ್ಷಗಳವರೆಗೂ ಇದೇ ಪರಿಪಾಠ ಇತ್ತು .ಈ ಪರಿಪಾಠ ಹೆಚ್ಚುಕಡಿಮೆ ದೂರದರ್ಶನದಲ್ಲಿ ಮೆರವಣಿಗೆ ತೋರಿಸುವ ತನಕವೂ ನಡೆಯಿತು ನಂತರ ಮನೆಯಲ್ಲೇ ಕುಳಿತು ದೂರದರ್ಶನದಲ್ಲಿ ನೋಡುವ ಅಭ್ಯಾಸ ಆರಂಭವಾಯಿತು. ಈಗ ಗೋಲ್ಡನ್ ಪಾಸ್ ಇದ್ದರೂ ಹೋಗಲು ಮನಸ್ಸಿಲ್ಲ. ಸಣ್ಣ ಸಣ್ಣ ಸಂತೋಷಗಳಿಗೆ ಉಲ್ಲಾಸ ಪಡುವುದನ್ನು ಕಳೆದುಕೊಂಡು ಬಿಟ್ಟಿದ್ದೇವೆ ಅನ್ಸುತ್ತೆ . ಇನ್ನು ಮೈಸೂರಿನ ದಸರಾ ವಸ್ತು ಪ್ರದರ್ಶನ ಅದು ವಿಜಯದಶಮಿ ಕಳೆದ ಮೇಲಿನ ಭೇಟಿ ಕೊಡುವ ವಾಡಿಕೆ ಏಕೆಂದರೆ ಆ ವೇಳೆಗೆ ಎಲ್ಲಾ ಅಂಗಡಿಗಳು ಬಂದಿರುತ್ತಿದ್ದವು. ಪ್ರತಿವರ್ಷ 2ಅಥವಾ 3ಬಾರಿ ಭೇಟಿ . ಶುರುವಲ್ಲೇ ಸಿಗುವ ಕಾಟನ್ ಕ್ಯಾಂಡಿ ಇಂದ ಹಿಡಿದು ಕಡೆಯಲ್ಲಿನ ಮಸಾಲೆ ದೋಸೆಯ ತನಕ ಸಿಕ್ಕಿದ್ದನ್ನೆಲ್ಲಾ ಮೆಲ್ಲುವ ಪರಿಪಾಠ .ದೊಡ್ಡ ದೊಡ್ಡ ಹಪ್ಪಳ ಚುರುಮುರಿ ಮೆಣಸಿನಕಾಯಿ ಬಜ್ಜಿ ಐಸ್ಕ್ರೀಮ್ ಒಂದೇ ಎರಡೇ ಅಷ್ಟೆಲ್ಲ ತಿನ್ನುತ್ತಿದ್ದುದು ನಾವೇನಾ ಅಂತ ಈಗ ಯೋಚಿಸಿದರೆ ಆಶ್ಚರ್ಯವಾಗುತ್ತೆ. ಸಂಜೆ 4ಗಂಟೆಗೆ ಒಳಗೆ ಪ್ರವೇಶವಾದರೆ 8 ಎಂಟೂವರೆ ತನಕ ಸುತ್ತು ಸುತ್ತಿ ನಂತರ ಮನೆಗೆ ವಾಪಸ್ . ಆಗ ಈಗಿನಷ್ಟು ಆಟಗಳೇ ಇರಲಿಲ್ಲ. ಜಯಂಟ್ ವೀಲ್ ಮಾತ್ರ . ಅದರಲ್ಲೂ ನಾವು ಕುಳಿತುಕೊಳ್ಳ ದಿದ್ದುದರಿಂದ ಸೇಫ್ . ಆದರೆ ಸರಕಾರಿ ವಿಭಾಗಗಳು ಹಾಕಿದ ಎಲ್ಲ ಸ್ಟಾಲ್ ಗಳನ್ನು ಪಾರಂಗತವಾಗಿ ನೋಡುತ್ತಿದ್ದೆವು ಅದರಲ್ಲಿ ಕಾಡು ಅರಣ್ಯ ಇಲಾಖೆಯ ಕೊಡುಗೆ ತುಂಬಾ ವಿಶೇಷ ಆಕರ್ಷಣೆ. ಗೌರಿ ಹಬ್ಬಕ್ಕೆ ಕೊಟ್ಟ ದುಡ್ಡು ಮತ್ತು ವರ್ಷದ ಇಡೀ ಉಳಿತಾಯಗಳು ಖರ್ಚಾಗುತ್ತಿದ್ದು ವಸ್ತುಪ್ರದರ್ಶನದಲ್ಲಿ . ಬಿಂದಿ ಕ್ಲಿಪ್ಪು ಬಳೆ ಸರ ಒಂದೇ ಎರಡೇ ಈ ಹಣದಲ್ಲಿ ಯಾವುದು ತೆಗೆದುಕೊಳ್ಳಬೇಕು ಎಂದು ಪ್ರಾಮುಖ್ಯತೆ ಮತ್ತು ಮೂವರು ಬೇರೆ ಬೇರೆಯದನ್ನು ತೆಗೆದುಕೊಂಡು ವಿನಿಮಯ ಮಾಡಿಕೊಳ್ಳುವ ಪದ್ಧತಿ . ಈಗ ವಸ್ತುಪ್ರದರ್ಶನಕ್ಕೆ ಭೇಟಿ ಕೊಡಲೇ ಬೇಸರ .ಇನ್ನೂ ಹೋದರೂ ಸುಮ್ಮನೆ 1 ಸುತ್ತು ಹಾಕಿ ಬರುವುದೇ ವಿನಃ ಸರಕಾರಿ ವಿಭಾಗಗಳ ಕಡೆ ಹೋಗುವುದೇ ಇಲ್ಲ ಏಕೆ ಈ ನಿರಾಸಕ್ತಿ ಅಂತ ಮಾತ್ರ ಗೊತ್ತಿಲ್ಲ. ಇನ್ನೂ ಮನೆಗೆ ಬಂದ ನೆಂಟರ ಜೊತೆ ನಂಜನಗೂಡು ಶ್ರೀರಂಗಪಟ್ಟಣ ಚಾಮುಂಡಿಬೆಟ್ಟ ಭೇಟಿಗಳು ದಸರೆಯ ಸಮಯದಲ್ಲಿ ಕಡ್ಡಾಯ ನಡೆಯುತ್ತಿದ್ದವು ಅಂತೂ ಕಾಲ ಕಳೆಯಲು ದೈನಂದಿನ ಏಕಾ ಗಿ ಏಕತಾನತೆಯಿಂದ ಪಾರಾಗಲು ಇವು ಆಗ ಇದ್ದ ಮಾರ್ಗಗಳು .ಅದನ್ನು ಪೂರ್ಣಪ್ರಮಾಣದಲ್ಲಿ ಅನುಭವಿಸಿ ಖುಷಿಯ ಸ್ಮರಣೆಗಳನ್ನು ಮೆಲುಕಬುತ್ತಿ ಗಳನ್ನಾಗಿಸಿಕೊಂಡು ಈಗ ಸವಿಯುವುದು. ಪ್ರತಿ ದಿನ ದೇವಿ ಗೀತೆಗಳನ್ನು ಕೀರ್ತನೆಗಳನ್ನು ಹಾಡುವುದು ಲಲಿತಾ ಸಹಸ್ರನಾಮ ಪಠಣೆ ಮಹಿಷಾಸುರ ಮರ್ದಿನಿ ಸ್ತೋತ್ರ ಇವು ಆಗಿನ ಆಧ್ಯಾತ್ಮಿಕ ಆಚರಣೆಗಳು ಅನ್ನಬಹುದೇನೋ . ಮದುವೆಯ ನಂತರ ಅತ್ತೆ ಮನೆಯಲ್ಲಿ
ಅಂಕಣ ಸಂಗಾತಿ ನೆನಪಿನದೋಣಿಯಲಿ ವರ್ತನೆಯವರು ಪ್ರಲಾಪಿಸಬೇಡ ನೆನೆದು ಹಪಹಪಿಸಿ ಕಳೆದುಹೋದದ್ದನ್ನ ಕಾಲ ಏಕಾಏಕಿ ಬಂದು ಮೇದದ್ದನ್ನ ನೆನೆ ಇದನು ಮರೆಯದೆ ಲುಕ್ಸಾನಿಗೆದೆ ಮರುಗದೆ ಕಳೆದುಕೊಂಡದ್ದು ನಿನ್ನೊಡನೆ ಇದ್ದಷ್ಟು ದಿನ ಹಿಗ್ಗ ನೀಡಿದ್ದನ್ನ ಕೆ ಎಸ್ ನಿಸಾರ್ ಅಹ್ಮದ್ ಅಂದು ವಾಯುವಿಹಾರ ಮುಗಿಸಿ ಬಂದ ರವೀಶ್ “ನೋಡು ದಿನಾ ಹಾಲಿನ ಪ್ಯಾಕೆಟ್ ತೊಗೋತಿದ್ನಲ್ಲ ಪಾಪ ಆ ವ್ಯಕ್ತಿ ಕರೋನಾ ಬಂದು ಹೋಗಿ ಬಿಟ್ನಂತೆ ಪಾಪ” ಎಂದು ಪೇಚಾಡಿಕೊಂಡರು. ಯಾಕೋ ನನಗೆ ಥಟ್ಟಂತ ನನ್ನ ಬಾಲ್ಯ ನೆನಪಾಯಿತು. ಅಂದು ನನ್ನ ಹುಟ್ಟಿದ ಹಬ್ಬ. ಅಂದೇ ಬೆಳಿಗ್ಗೆ ನಮ್ಮ ಮನೆಗೆ ಮೊಸರು ವರ್ತನೆಗೆ ಹಾಕುತ್ತಿದ್ದವಳ ಮರಣದ ಸುದ್ದಿಯೂ ಬಂತು.ಅಮ್ಮ ಹುಟ್ಟುಹಬ್ಬವನ್ನೇ ಮರುದಿನಕ್ಕೆ ಪೋಸ್ಟ್ ಪೋನ್ ಮಾಡಿ ಅವಳ ಮರಣದ ಶೋಕಾಚರಣೆ ಆಚರಿಸಿದರು. ನನ್ನ ಮುಖ ಕೊಂಚ ಗಡಿಗೆ ಗಾತ್ರ ಆಗಿದ್ದು ಸುಳ್ಳಲ್ಲ. ವರ್ತನೆಯೆಂದರೆ ನಿಘಂಟಿನಲ್ಲಿ ನಡವಳಿಕೆ ರೂಢಿ ಎಂದು ಅರ್ಥ . ಆದರೆ ಜನಸಾಮಾನ್ಯರ ಭಾಷೆಯಲ್ಲಿ ದಿನವೂ ಅಥವಾ ನಿಯಮಿತವಾಗಿ ವಸ್ತುಗಳನ್ನು ಸರಬರಾಜು ಮಾಡಿ ತಿಂಗಳಿಗೊಮ್ಮೆ ಹಣ ಪಡೆಯುವವರಿಗೆ ವರ್ತನೆಯವರು ಎಂದು ಕರೆಯುವ ಅಭ್ಯಾಸ. ಪ್ರತಿಯೊಂದಕ್ಕೂ ಅಂಗಡಿಯನ್ನು ಅವಲಂಬಿಸದ ಕಾಲ ಅದು. ಮನೆಯ ಬಾಗಿಲಿಗೆ ಹಾಲು ಮೊಸರು ಹೂವು ತರಕಾರಿ ಎಲ್ಲವನ್ನೂ ಒದಗಿಸುತ್ತಿದ್ದರು. ಒಮ್ಮೊಮ್ಮೆ ಈಗಿನ ಆನ್ ಲೈನ್ ಸೇವೆಗಳನ್ನು ನೋಡಿದಾಗ ಅದೇ ನೆನಪಾಗುತ್ತದೆ .ಆದರೆ ಆಗಿನ ಆತ್ಮೀಯತೆ ಪರಿಚಯದ ಭಾವ ಇಂದಿನ ತಲುಪಿಸುವ ವ್ಯವಸ್ಥೆಗಳಿಗೆಲ್ಲಿ ಬರಬೇಕು? ಹಾಲಿನ ಗಡಿಗೆಗಳನ್ನು ಬಿದಿರಿನ ಬುಟ್ಟಿಯಲ್ಲಿ ಇಟ್ಟುಕೊಂಡು ಬರುತ್ತಿದ್ದ ಹಾಲಿನ ಮಹದೇವಮ್ಮ ನನ್ನ ನೆನಪಿನಿಂದ ಏಕೋ ಇನ್ನೂ ಮರೆಯಾಗಿಯೇ ಇಲ್ಲ .ಹಸಿರು ಅಥವಾ ಕೆಂಪು ಚೌಕಳಿಯ ಹತ್ತಿ ಸೀರೆ ಎಲ್ಲದಕ್ಕೂ ಬಿಳಿ ರವಿಕೆಯನ್ನೇ ತೊಟ್ಟು ಹಣೆತುಂಬ ಕಾಸಗಲ ಕುಂಕುಮ ಇಟ್ಟ ನಲ್ವತ್ತೈದು ಐವತ್ತರ ಆಸುಪಾಸಿನ ಮಹಿಳೆ. ಸಾಸಿವೆ ಎಳ್ಳು ಬೆರೆಸಿದಂಥ ಬಣ್ಣದ ನೆರೆತಲೆ. ಕಾಡು ಹೂವಾದರೂ ಸರಿ ಹೂ ಮುಡಿಯದೆ ಇರುತ್ತಿರಲಿಲ್ಲ. ಕೈತುಂಬಾ ಜರುಗಲು ಸಾಧ್ಯವಿರದಷ್ಟು ಗುತ್ತನಾಗಿ ಹಸಿರುಬಳೆ ತೊಡುತ್ತಿದ್ದಳು .ತಪ್ಪದೆ ರೇಡಿಯೋದ 7 ಮೂವತ್ತೈದರ ಕನ್ನಡ ವಾರ್ತೆಯ ಸಮಯಕ್ಕೆ ಹಾಲು ತರುತ್ತಿದ್ದ ಅವಳ ಸಮಯಪಾಲನೆ ನಿಜಕ್ಕೂ ಆಶ್ಚರ್ಯ . ಆಗ ಲೀಟರ್ ಕಾಲ ಅಲ್ಲ ಪಾವು ಸೊಲಿಗೆ ಗಳಲ್ಲಿ ಅಳತೆ. ಹೆಚ್ಚು ಹಾಲು ತೆಗೆದುಕೊಂಡ ದಿನ ಒಂಟಿಕೊಪ್ಪಲ್ ಕ್ಯಾಲೆಂಡರ್ನಲ್ಲಿ + ಚಿಹ್ನೆ ಹಾಕಿ ಎಷ್ಟು ಹೆಚ್ಚು ಎಂದು ಬರೆಯುವ ಕೆಲಸ ಹಾಗೆಯೇ ತೆಗೆದುಕೊಳ್ಳದ ,ಕಡಿಮೆ ತೆಗೆದುಕೊಂಡಾಗ _ ಚಿಹ್ನೆ ಹಾಕಿ ಗುರುತು ಮಾಡುತ್ತಿದ್ದುದು . ತಿಂಗಳ ಕೊನೆಯಲ್ಲಿ ಅವಳು ಹೇಳಿದ ಲೆಕ್ಕ ನಮ್ಮದಕ್ಕೆ ತಾಳೆಯಾಗುತ್ತಿತ್ತು ಅಷ್ಟೊಂದು ಮನೆಗಳ ಲೆಕ್ಕಾಚಾರ ಬಾಯಿಯಲ್ಲೇ ನೆನಪಿಡುವ ಅವಳ ಬುದ್ದಿವಂತಿಕೆ ನಿಜಕ್ಕೂ ಶ್ಲಾಘನೀಯವೇ. ಮಕ್ಕಳ ಮದುವೆ ಮಾಡಿದಾಗಲೆಲ್ಲ ನವವಧುವರರನ್ನು ಕರೆದುಕೊಂಡು ಬಂದು ಆಶೀರ್ವಾದ ಕೊಡಿಸುತ್ತಿದ್ದಳು . ವಾರದಲ್ಲಿ ಒಂದೋ ಎರಡೋ ದಿನ ಹನ್ನೊಂದು ಗಂಟೆಗೆ ವಾಪಸ್ಸು ಹೋಗುವಾಗ ಅಮ್ಮ ಕೊಟ್ಟ ತಿಂಡಿ/ಊಟವನ್ನು ಮಾಡಿ ಹೋಗುತ್ತಿದ್ದಳು. ಬೆಳಿಗ್ಗೆ ಬಂದಾಗ ಒಮ್ಮೊಮ್ಮೆ ಕೇಳಿ ಕಾಫಿ ಕುಡಿಯುತ್ತಿದ್ದಳು. ನಾನು ದೊಡ್ಡವಳಾದಾಗ ಕೊಬ್ಬರಿ ತುಪ್ಪ ಆರೈಕೆಗೆಂದು ಅಕ್ಕರೆಯಿಂದ ತಂದುಕೊಟ್ಟದ್ದು ಇನ್ನೂ ಹಸಿರು . ನನ್ನ ಕಡೆಯ ತಂಗಿಗೆ 1ಪುಟ್ಟ ಗಿಂಡಿಯ ತುಂಬಾ ಹಾಲು ಕೊಡುತ್ತಿದ್ದಳು; ಅದಕ್ಕೆ ಲೆಕ್ಕವಿಡುತ್ತಿರಲಿಲ್ಲ. ಮೊಸರಿನ ಗಂಗಮ್ಮ ಇವಳಿಗಿಂತ ಭಿನ್ನ ಸ್ವಲ್ಪ ನಾಜೂಕಿನ ನಾರಿ ..ಆಗಿನ ಕಾಲದ ಲೆಕ್ಕದಲ್ಲಿ ಸ್ಟೈಲ್ ವಾಲಿ . ಮೂವತ್ತರ ಒಳಗಿನ ವಯಸ್ಸು .ಮಧ್ಯಾಹ್ನ ಹನ್ನೊಂದು ಗಂಟೆ ಸಮಯಕ್ಕೆ ಬರುತ್ತಿದ್ದಳು .ನಾವು ಶಾಲೆಗೆ ಹೋಗದ ದಿನಗಳಲ್ಲಿ ಮಾತ್ರ ಅವಳ ದರ್ಶನ ಭಾಗ್ಯ . ಮೊಸರು ಮಜ್ಜಿಗೆಯ ಗಡಿಗೆಗಳನ್ನು ಬಿದಿರಿನ ಬುಟ್ಟಿಯಲ್ಲಿ ಒಪ್ಪವಾಗಿ ಇಟ್ಟು ಕೊಂಡು ಬಂದು ಅಚ್ಚುಕಟ್ಟಾಗಿ ಅಳೆದುಕೊಡುತ್ತಿದ್ದಳು. ಇವಳಿಗೋ ಲೆಕ್ಕದ ಗಂಧವೇ ಇಲ್ಲ .ಅದನ್ನು ಮುಚ್ಚಿಟ್ಟುಕೊಳ್ಳಲು “ನೀವು ಕೊಟ್ಟಷ್ಟು ಕೊಡಿ ಮೋಸ ಮಾಡೋರಲ್ಲ ಬಿಡಿ” ಅಂದುಬಿಡುತ್ತಿದ್ದಳು. ಪಾಪ 9 ತಿಂಗಳು ತುಂಬುವವರೆಗೂ ಗರ್ಭಿಣಿ ಹೆಂಗಸು ಬಂದು ಮೊಸರು ವ್ಯಾಪಾರ ಮಾಡ್ತಿದ್ದಳು. ಹೆರಿಗೆಯಲ್ಲಿ ಕಷ್ಟವಾಗಿ ಸತ್ತುಹೋದಳು. ಈ ಪ್ರಸಂಗವನ್ನೇ ನಾನು ಮೇಲೆ ಹೇಳಿದ್ದು. ಮನೆಯ ತೋಟದಲ್ಲಿ ರಾಶಿ ಹೂ ಬಿಟ್ಟಿದ್ದರಿಂದ ಹೂವಿಗೆ ವರ್ತನೆಯವರಿರಲಿಲ್ಲ . ಆದರೆ ಒಬ್ಬ ಹಣ್ಣು ಮುದುಕಿ ಹತ್ತಿರದ ಹಳ್ಳಿಯಿಂದ ಸಂಪಿಗೆ ಕೆಂಡ ಸಂಪಿಗೆ ಹೂ ತರುತ್ತಿದ್ದರು. ಬಂದಾಗಲೆಲ್ಲ ಅಮ್ಮ ಬೋಣಿ ಮಾಡಬೇಕು ಕಾಫಿ ತಿಂಡಿ ತೀರ್ಥ ಕೊಡಬೇಕು ಅವರಿಗೆ .ಪೈಸೆಗೆ 1ಸಂಪಿಗೆ ಹೂವು ಹತ್ತು ಇಪ್ಪತ್ತು ಸಂಪಿಗೆ ಹೂಗಳನ್ನು ಪೋಣಿಸಿ ದಿಂಡೆ ಮಾಡಿ ಮುಡಿದು ಕೊಳ್ಳುತ್ತಿದ್ದೆವು. ಆಕೆಯ ಹೆಸರೇನೋ ಮರೆತು ಹೋಗಿದೆ . ಆದರೆ ಏಕವಚನದಲ್ಲಿ ಮಾತನಾಡಿಸಿ ಆನಂತರ ನಮ್ಮ ತಂದೆಯಿಂದ ಬೈಗುಳ ಮತ್ತು ಹಾಗೆ ಮಾಡಬಾರದೆಂಬ ಧೀರ್ಘ ಲೆಕ್ಚರ್ ಕೇಳಿದ್ದು ಮರೆತಿಲ್ಲ. ಭಿಕ್ಷುಕರನ್ನೂ ಬಹುವಚನದಿಂದ ಮಾತನಾಡಿಸುವ ನನ್ನ ಅಭ್ಯಾಸಕ್ಕೆ ಇದು ನಾಂದಿಯಾಗಿತ್ತು. ಹಾಗೆಯೇ ದೂರದ ಎಲೆತೋಟದ ಬಳಿಯಿಂದ ತಂದು ವಿಳ್ಳೆಯದೆಲೆ ಕವಳಿಗೆ ಲೆಕ್ಕದಲ್ಲಿ ಕೊಡುತ್ತಿದ್ದ ಎಲೆಯ ನಂಜಮ್ಮ ಸಹ ಒಬ್ಬರು ವರ್ತನೆಯವರು . ಅವರ ಕಿವಿಯ ತೂತು ತುಂಬಾ ದೊಡ್ಡದಾಗಿದ್ದು ಈಗ ನಾವು ಗೌರಿ ಬಾಗಿನಕ್ಕೆ ಇಡುವ ಬಳೆಬಿಚ್ಚೋಲೆಯನ್ನೇ ಕಿವಿಗೆ ಧರಿಸಿಕೊಳ್ಳುತ್ತಿದ್ದುದು ನಮ್ಮ ಬೆರಗಿಗೆ ಆಗ ಕಾರಣವಾಗಿತ್ತು. ಆಕೆಯೂ ಬಂದಾಗಲೆಲ್ಲಾ ಕಾಫಿ ಕೇಳಿ ಕುಡಿಯುತ್ತಿದ್ದರು. ಒಮ್ಮೊಮ್ಮೆ ಮಾತ್ರ ಊಟ ಮಾಡುತ್ತಿದ್ದರು. ಇನ್ನೊಬ್ಬ ವ್ಯಕ್ತಿ ಸೈಕಲ್ ನಲ್ಲಿ ಬೇರೆ ಬೇರೆ ಡಬ್ಬಗಳನ್ನು ಕಟ್ಟಿಕೊಂಡು ಬಂದು ಎಣ್ಣೆ ಮಾರುತ್ತಿದ್ದುದು ನೆನಪು . ಕಡಲೆಕಾಯಿ ಎಣ್ಣೆ, ಎಳ್ಳೆಣ್ಣೆ, ಕೊಬ್ಬರಿಎಣ್ಣೆ, ಹರಳೆಣ್ಣೆ ಇದೆಲ್ಲಾ ಆತನ ಬಳಿಯೇ ತೆಗೆದುಕೊಳ್ಳುತ್ತಿದ್ದುದು. ಪ್ರತೀ ಶನಿವಾರ ಬರುತ್ತಿದ್ದರು ಅನ್ನಿಸತ್ತೆ . ಆತನ ತಿಳಿನೀಲಿ ಷರಟು ಹಾಗೂ ತಲೆಗೆ ಕಟ್ಟಿಕೊಳ್ಳುತ್ತಿದ್ದ ಟವಲ್ ಇನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇದೆ . ಇನ್ನೊಬ್ಬಾತನೂ ಹಾಗೆ ಸೈಕಲ್ಲಿನಲ್ಲಿ ಬರುತ್ತಿದ್ದರು. ಆಯಾ ಕಾಲದಲ್ಲಿ ಸಿಗುವ ಹಣ್ಣುಗಳನ್ನು ತಂದು ಮಾರುತ್ತಿದ್ದರು . ಆಗೆಲ್ಲಾ ಕೆಜಿಯ ಲೆಕ್ಕವೇ ಇಲ್ಲ ಇಡೀ ಹಲಸು, ಗೂಡೆಗಟ್ಟಲೆ ಮಾವು ಕಿತ್ತಳೆ, ಗೊನೆಬಾಳೆ ಹೀಗೆಯೇ. ತೆಂಗಿನಕಾಯಿಯಂತೂ ಪ್ರತಿ ಬಾರಿಯೂ ತರುತ್ತಿದ್ದರು . ಸೊಪ್ಪು ತರಕಾರಿಯ ತಾಯಮ್ಮ, ಪೌರಕಾರ್ಮಿಕ ನಾಗಿ, ತೋಟದ ಕೆಲಸ ಮಾಡಲು ಬರುತ್ತಿದ್ದ ರಂಗಯ್ಯ ಎಲ್ಲರೂ ನೆನಪಿನಲ್ಲಿದ್ದಾರೆ .ಮನೆಗೆ ಬರುವ ಅತಿಥಿಗಳಿಗೆ ಕೊಡುವಂತೆ ಕಾಫಿ ತಿಂಡಿ ಊಟ ಕೊಟ್ಟು ಆದರಿಸುತ್ತಿದ್ದ ಅಮ್ಮ ಅವರಿಗೆಲ್ಲಾ ಅನ್ನಪೂರ್ಣೆಯೇ. ಹಬ್ಬಗಳ ವಿಶೇಷ ಭಕ್ಷ್ಯಗಳು, ಗೋಕುಲಾಷ್ಟಮಿ ತಿಂಡಿ, ಸಂಕ್ರಾಂತಿಯ ಎಳ್ಳು ಎಲ್ಲದರಲ್ಲೂ ಅವರಿಗೆ ಪಾಲು ಇದ್ದೇ ಇರುತ್ತಿತ್ತು. ಅದರ ಜೊತೆಗೆ ಮಕ್ಕಳನ್ನು ಚೆನ್ನಾಗಿ ಓದಿಸಿರಿ ಎಂಬ ಬೋಧನೆಯೂ ಕೂಡ. ಹಳೆಯ ಬಟ್ಟೆಗಳು, ಉಪಯೋಗಿಸಿದ ವಸ್ತುಗಳು ಇವನ್ನೆಲ್ಲಾ ನೆನಪಿನಲ್ಲಿಟ್ಟುಕೊಂಡು ಇವರಿಗೆ ಇವರಿಗೆ ಎಂದು ವಿತರಿಸುತ್ತಿದ್ದುದು, ಅವರ ಮನೆಯ ಸಮಾರಂಭಗಳಿಗೆ ಉಡುಗೊರೆ ಹಣ ಕೊಡುತ್ತಿದ್ದುದು ಆಗ ಏನೂ ಅನಿಸದಿದ್ದರೂ ಈಗ ಅಮ್ಮ ಅಪ್ಪನ ವಿಶಾಲ ಮನೋಭಾವದ ಅರಿವಾಗಿಸುತ್ತಿದೆ. ತೀರ ಬಡತನದ ಹಾಲು ಕೊಳ್ಳಲು ಶಕ್ತಿಯಿರದ ಕುಟುಂಬವೊಂದಿತ್ತು. ಆ ಮನೆಯ ಮಗುವಿಗೆ ಅಂತ 1 ಲೋಟ ಹಾಲು ಕೊಟ್ಟು ಹೋಗ್ತಿದ್ದರು ವರ್ತನೆಯವರು ಆಗೆಲ್ಲಾ. ಈಗ ಆ ರೀತಿಯ ಜನರನ್ನು ಕಾಣಲು ಸಾಧ್ಯವೇ? ಈಗಿನ ಹಾಗೆ ಸದಾ ಕೈಯಲ್ಲಿ ಹಣ ಓಡಾಡದ ಅಂದಿನ ದಿನಗಳಲ್ಲಿ ಸಂಬಳ ಬಂದ ಕೂಡಲೇ ಇವರಿಗೆಲ್ಲ ಹಣಪಾವತಿ .ಒಮ್ಮೆ ಹೆಚ್ಚು ಲೆಕ್ಕವಾದಾಗ ಸ್ವಲ್ಪ ಉಳಿಸಿಕೊಂಡು ಮುಂದಿನ ತಿಂಗಳಿಗೂ ಕ್ಯಾರಿ ಫಾರ್ವರ್ಡ್ ಮಾಡುತ್ತಿದ್ದುದು. ಸಾವು ಮದುವೆ ಊರಿನ ಓಡಾಟ ಅಂತ ಹೆಚ್ಚುವರಿ ಖರ್ಚುಗಳು ಇದ್ದಾಗಲೂ ಅಷ್ಟೇ. ಎಲ್ಲ ಸಮಯಕ್ಕೂ ಫ್ಲೆಕ್ಸಿಬಲ್. ಹಾಗೆಯೇ ಅವರಿಗೆ ಹೆಚ್ಚಿನ ಅಗತ್ಯವಿದ್ದಾಗ ನಮ್ಮಿಂದ ಮುಂಗಡವಾಗಿ ಹಣ ತೆಗೆದುಕೊಂಡು ತಿಂಗಳು ತಿಂಗಳು ಉತ್ತಾರ ಹಾಕ್ಕೊಳ್ತಾ ಹೋಗುವುದು. ಆ ಲೆಕ್ಕಾಚಾರಗಳನ್ನು ಕೇಳಿದರೆ ಒಂಥರಾ ಖುಷಿಯ ಅನುಭವ .ಎಲ್ಲಾ ಬಾಯಿಮಾತಿನ ಗಣಿತ ವಿಶ್ವಾಸದ ಲೆಕ್ಕಾಚಾರ . ಬರೀ ವ್ಯಾವಹಾರಿಕವಾಗಿಯಲ್ಲದೆ ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆಗಳಿಂದ ಕೂಡಿದ ಸಂಬಂಧಗಳು ಅವು. ಒಬ್ಬರಿನ್ನೊಬ್ಬರ ಹರ್ಷಕ್ಕೆ ಸಂತಸಪಟ್ಟು ಸಂಕಟದಲ್ಲಿ ಸಹಾನುಭೂತಿ ತೋರುತ್ತಿದ್ದ ಅಂದಿನ ಕಾಲ ಸಮರಸದ ಪಾಠವನ್ನು ಸೋದಾಹರಣ ಕಲಿಸುತ್ತಿತ್ತು. ನಿಜ! ಜಾತಿಯ ಕಟ್ಟುಪಾಡುಗಳು ಆಗ ಸಮಾಜದಲ್ಲಿ ಇನ್ನೂ ಬಿಗಿಯಾಗಿತ್ತು. ಅದನ್ನು ಮೀರದೆಲೆಯೇ ಸೌಹಾರ್ದದ ನಂಟಿತ್ತು ಮಿಡಿಯುವ ತುಡಿತವಿತ್ತು. ಜಾತಿಯ ಬೇಲಿಯನ್ನೂ ಮೀರಿ ಅಂತಃಕರಣದ ಸರಿತೆ ಹರಿಯುತ್ತಿತ್ತು . ಬರುಬರುತ್ತಾ ಅಂಗಡಿಗಳು ಮಾಲ್ ಗಳು ಹೆಚ್ಚಿದಂತೆಲ್ಲಾ ವರ್ತನೆಯವರು ಕಡಿಮೆಯಾಗಿದ್ದಾರೆ . ಇದ್ದರೂ ಮೊದಲಿನಂತೆ ವ್ಯವಧಾನದಿಂದ ಕೂತು ಮಾತನಾಡುವಷ್ಟು ಕಷ್ಟಸುಖ ವಿಚಾರಿಸುವಷ್ಟು ಸಮಯ ತಾಳ್ಮೆ ಯಾರಿಗಿದೆ? ಕಾಲನ ನಾಗಾಲೋಟದಲ್ಲಿ ನಾವೂ ರೇಸಿಗೆ ಬಿಟ್ಟ ಕುದುರೆಗಳಂತೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಓಡುತ್ತಲೇ ಇದ್ದೇವೆ . ವರ್ತನೆಯವರು ಇರಲಿ ಮನೆಯವರ ಜತೆ ತಾನೆ ಸಮಾಧಾನದಿಂದ ಕುಳಿತು ಮಾತನಾಡುವ ಹರಟೆ ಹೊಡೆಯುವ ಕಷ್ಟಸುಖ ಹಂಚಿಕೊಳ್ಳುವ ಪುರುಸೊತ್ತಾದರೂ ನಮಗಿದೆಯೇ? ವಿಲಾಪಿಸಬೇಡ ಕಳೆದುಕೊಂಡದ್ದಕ್ಕೆ ನೀನೇ ಕಳೆದು ಹೋಗುವ ಮುನ್ನ ಮೃತ್ಯು ಹೊತ್ತೊಯ್ದು ಮತ್ತೊಬ್ಬನಿಗೆ ಅರ್ಪಿಸುವ ಮುನ್ನ ನಿನ್ನ ಜೀವದನರ್ಘ್ಯ ಅಪರಂಜಿಯನ್ನ ನಿಸಾರ್ ಅಹ್ಮದ್ ನಿಜ! “ಪುರಾಣಮಿತ್ಯೇವ ನ ಸಾಧುಸರ್ವಂ” ಎಂಬಂತೆ ನೆನಪಿನ ಭಿತ್ತಿಯ ಹರಳುಗಳನ್ನು ನೋಡಿ ನೆನೆದು ಖುಷಿ ಪಡಬೇಕು. ಇಲ್ಲದುದಕ್ಕೆ ಪರಿತಪಿಸಬಾರದು. ಕಾಲಪ್ರವಾಹದಲ್ಲಿ ಸಾಗಿಹೋಗುವ ಹುಲ್ಲು ಕಡ್ಡಿಯಂತೆ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಾ ಹಳೆಯ ನೆನಪಿನ ಮೆಲುಕಿನ ಬೇರುಗಳಲ್ಲಿ ಹೊಸ ಅನುಭವದ ಚಿಗುರು ಪಲ್ಲವಿಸುತ್ತಿರಬೇಕು. ಇದುವೇ ಜೀವನ ಇದು ಜೀವ ತಾನೇ? “ಕಾಲಾಯ ತಸ್ಮೈ ನಮಃ “. ಸುಜಾತಾ ರವೀಶ್ ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ ಬಯಕೆ ಲೇಖಕಿಯವರದು.
ಅಂಕಣ ಸಂಗಾತಿ ನೆನಪಿನದೋಣಿಯಲಿ ಜಟಕಾ ವಿಧಿಯೆಂಬ ಚಾಲಕನು ಓಡಿಸುತಿಹ ಬಂಡಿಯಲಿ ಕುಳಿತು ನಡೆದಿದೆ ಬಾಳಪಯಣ. ಅಲ್ಲಿಷ್ಟು ಇಲ್ಲಿಷ್ಟು ಒಂದಷ್ಟು ನೆನಪುಗಳ ಬುತ್ತಿ ಔತಣ . ** ಕಾಲನ ನಾಗಾಲೋಟದ ಪಯಣವು ಗಾಡಿಗೆ ಕಟ್ಟಿದ ಕುದುರೆಗಳು ನಾವು ವಿಧಿಯ ಕಡಿವಾಣದ ಬಿಗಿ ಅಂಕೆ ನಡೆದಿಹೆವು ಆಮಿಷಕೆ , ಚಾಟಿಯಾ ಭಯಕೆ “ಹಾಯ್ ಹಾಯ್ ಬಾಜೂ ಬಾಜೂ” ಟಕ್ ಟಕ್ ಅನ್ನುವ ಕುದುರೆಗಳ ಖರಪುಟದ ಶಬ್ದದೊಂದಿಗೆ ಈ ಪದಗಳು ಕಿವಿಗೆ ಬಿತ್ತೆಂದರೆ ರಸ್ತೆಯಲ್ಲಿ ಆಡುತ್ತಿದ್ದ ಮಕ್ಕಳೆಲ್ಲ ಬದಿಗೆ ಸರಿದು ಗೌರವ ಸಲ್ಲಿಸುವಂತೆ ನಿಲ್ಲುತ್ತಿದ್ದೆವು. ಬೀದಿಯ ಕೊನೆಯಲ್ಲಿ ತಿರುಗುವವರೆಗೂ ಅದನ್ನೇ ನೋಡುತ್ತಾ ಅಥವಾ ನಿಂತರೆ ಯಾರ ಮನೆಗೆ ಎಂದು ಮಾತನಾಡುತ್ತಾ. ಆ ಪಕ್ಕಕ್ಕೆ ನಿಲ್ಲುವ ಕ್ರಿಯೆಯೋ! ಎಲ್ಲರೂ ಹೇಳಿ ಹೇಳಿ ಅಚ್ಚೊತ್ತಿಬಿಟ್ಟಿತ್ತು. ಓಡುವ ಕುದುರೆಯಡಿ ಮಕ್ಕಳು ಸಿಕ್ಕಿ ಗಾಯಗೊಳ್ಳುತ್ತಿದ್ದ ಪ್ರಕರಣಗಳು ಆಗ ಅಪರೂಪವೇನಲ್ಲ. ಇದೆಲ್ಲಾ ಅರುವತ್ತರ ದಶಕದ ಮೊದಲಿನ ವರ್ಷಗಳ ಮೈಸೂರಿನ ದೃಶ್ಯ. ತೀರ ಇತ್ತೀಚೆಗೆ 8 ವರ್ಷದ ತಂಗಿಯ ಮಗ ಸುಧನ್ವನಿಗೆ ಕುದುರೆಗಾಡಿ ಅನುಭವ ಕೊಡಿಸಲೆಂದು ಜಟಕಾ ಸವಾರಿಗೆ ಕರೆದೊಯ್ದಿದ್ದೆವು. ಟಾಂಗಾ ಸವಾರಿಯ ಹಳೆಯ ನೆನಪುಗಳೆಲ್ಲ ರೀಲಿನಂತೆ ಬಿಚ್ಚಿಕೊಂಡವು. ಅರಮನೆಯ ಎದುರಿಗಿನ ಟಾಂಗಾ ನಿಲ್ದಾಣದಿಂದ ಸಯ್ಯಾಜಿರಾವ್ ರಸ್ತೆ ಮತ್ತು ಸುತ್ತಲ ಪಾರಂಪರಿಕ ಕಟ್ಟಡಗಳನೆಲ್ಲಾ ನೋಡಿ ಬರುವಾಗ ಹಳೆಯ ಸಂಗತಿಗಳು ಸ್ಮರಣೆಯ ಕೋಶದಲ್ಲಿ ಅಡಗಿದ್ದವು. ಗೂಡು ಚದುರಿಸಿದಾಗ ಚೆಲ್ಲಾಪಿಲ್ಲಿಯಾಗುವ ಇರುವೆಗಳ ತರಹ ಸರಿದಾಡತೊಡಗಿದ್ದವು . ಅವುಗಳನ್ನು ಹಾಗೆಯೇ ಇಲ್ಲಿ ಹಿಡಿದಿಡುವ ಪ್ರಯತ್ನ . ನನಗೆ ನೆನಪಿರುವಷ್ಟು ಹಿಂದಕ್ಕೆ ಅಂದರೆ 5 ಅಥವಾ 6 ವರ್ಷದವಳಿದ್ದಾಗ ಮೈಸೂರಿನಲ್ಲಿ ಆಂತರಿಕ ಸಾರಿಗೆಯೆಂದರೆ ಜಟಕಾನೇ ಆಗಿತ್ತು. ಸಿಟಿ ಬಸ್ಸುಗಳು ಇರದಿದ್ದ ಕಾಲ. ಪುಟ್ಟಮಕ್ಕಳು ನಡೆಯಲು ಹಾಗೂ ಸ್ವಲ್ಪ ದೂರದ ಪಯಣ ಇದ್ದಾಗಲೆಲ್ಲಾ ಆಶ್ರಯಿಸುತ್ತಿದ್ದುದು ಜಟಕಾವನ್ನೇ. ಮೈಸೂರಿನ ಮಹಾರಾಜರು ೧೮೯೭ ರಲ್ಲಿ ಟಾಂಗಾವನ್ನು ಮೈಸೂರಿಗೆ ತಂದರಂತೆ. ಸುಮಾರು ಐನೂರು ಆರುನೂರು ಜಟಕಾ ಗಳಿದ್ದ ಕಾಲವೂ ಇತ್ತು ಎಂದು ಹೇಳುತ್ತಾರೆ. ಈಗ ಅವುಗಳ ಸಂಖ್ಯೆ ಶತಕ ದಾಟಿಲ್ಲ. ಅವುಗಳಿಗೆಲ್ಲಾ ನೋಂದಣಿ ಸಂಖ್ಯೆ, ಚಾಲಕರಿಗೆ ಗುರುತಿನ ಬಿಲ್ಲೆ ಕೊಡುತ್ತಿದ್ದರು. ಮುನಿಸಿಪಾಲಿಟಿಯ ಅಧಿಕಾರವ್ಯಾಪ್ತಿಗೆ ಬರುತ್ತಿದ್ದವು. ಈಗಿನ ಆಟೋಗಳ ಹಾಗೆ ಅವುಗಳಿಗೆಂದೇ ಪ್ರತ್ಯೇಕ ಸ್ಟ್ಯಾಂಡ್ ನಿಲ್ದಾಣಗಳು ಇರುತ್ತಿತ್ತು .ನಾನೇ ಕಂಡಂತೆ ಚಾಮುಂಡಿಪುರಂ ಸರ್ಕಲ್, ಅಗ್ರಹಾರ, ಅರಮನೆಯ ಮುಂದುಗಡೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಕೆ ಆರ್ ಆಸ್ಪತ್ರೆಯ ಮುಂದೆ ಇಲ್ಲೆಲ್ಲಾ ಕುದುರೆ ಗಾಡಿಗಳು ಸಾಲಾಗಿ ನಿಂತಿರುತ್ತಿದ್ದವು . ಸಾಮಾನ್ಯವಾಗಿ ಜಟಕಾ ಮತ್ತು ಟಾಂಗಾ ಎರಡೂ ಕುದುರೆ ಗಾಡಿಗೆ ಬಳಸುವ ಪದಗಳಾದರೂ ಎರಡರ ರಚನೆಯಲ್ಲಿ ಸ್ವಲ್ಪ ವ್ಯತ್ಯಾಸವಿದೆ .ಎತ್ತಿನಗಾಡಿಯದೇ ಸ್ವಲ್ಪ ಪರಿಷ್ಕೃತ ಸುಧಾರಿತ ರೂಪ ಜಟಕಾ. ಆದರೆ ಟಾಂಗಾ ನವೀನ ಮಾದರಿಯ ಐಶಾರಾಮಿ ತರಹದ್ದು. ಮೈಸೂರು ಮಹಾರಾಜರಿಗೆಂದೇ ವಿಶೇಷ ವಿನ್ಯಾಸದಲ್ಲಿ ಮಾಡಿರುವ ಇಬ್ಬರೇ ಕೂರುವ ಇದನ್ನು ಅರಸರು ಬಹಳವಾಗಿ ಮೆಚ್ಚಿದ್ದರಿಂದ “ಷಾ ಪಸಂದ್” ಟಾಂಗಾಗಳು ಎನಿಸಿಕೊಂಡಿದ್ದವು . ಈಗೀಗ ಬರುತ್ತಿರುವ ಸಾರೋಟುಗಳು ಮತ್ತು ಐಷಾರಾಮಿ ಹಾಗೂ ವೈಭವೋಪೇತವಾಗಿರುವವು. ಆಗಲೇ ಹೇಳಿದೆನಲ್ಲ ದೂರ ಹೋಗುವುದಿದ್ದರೆ ಜಟಕಾದಲ್ಲಿ ಅಂತ . ಆಗೆಲ್ಲ ನಿಲ್ದಾಣಕ್ಕೆ ಬರುವುದು . ಆಗಲೂ ಈಗಿನ ಆಟೊ ಚಾಲಕರ ಹಾಗೆ ಸಾಹೇಬರುಗಳು (ಸಾಮಾನ್ಯ ಜಟಕಾ ಓಡಿಸುತ್ತಿದ್ದವರು ಮುಸಲ್ಮಾನರೇ ಆಗಿದ್ದರಿಂದ ಆ ಪದ ವಾಡಿಕೆಗೆ ಬಂದಿರಬಹುದು) ಆ ಕಡೆ ಬರಲ್ಲ ಅನ್ನುವುದು, ಜನ ಜಾಸ್ತಿಯಾಯಿತು ಅನ್ನುವುದು, ಆಣೆ ಕಾಸುಗಳಿಗೆ ಚೌಕಾಶಿ ಮಾಡುವುದು ಸಾಮಾನ್ಯವಾಗಿತ್ತು. ಇನ್ನೂ ಆ ಚೌಕಾಶಿಯೋ… ಜುಗ್ಗಾಡಿ ಜುಗ್ಗಾಡಿ ಇಬ್ಬರೂ ಅವರವರ ಬೆಲೆಗಳಲ್ಲಿ ನಿಂತು ಕಡೆಗೆ 1 ಮದ್ಯದ ಬೆಲೆಗೆ ಒಪ್ಪಿತವಾಗುತ್ತಿತ್ತು . ಚೌಕಾಶಿ ಮಾಡದೇ ಏನನ್ನೂ ವ್ಯವಹರಿಸುತ್ತಿರಲಿಲ್ಲ ಅಂದಿನ ಹಿರಿಯರು . ನಮಗೋ ಮಕ್ಕಳಿಗೆ ಬೇಗ ಕುದುರೆಗಾಡಿ ಏರುವ ಆಸೆ .ಕೆಲವೊಮ್ಮೆ ಏರಿದ ಕುದುರೆಗಾಡಿಯವನೊಂದಿಗಿನ ಚೌಕಾಶಿ ಗಿಟ್ಟದೆ ಮತ್ತೆ ಇಳಿದು ಬೇರೆ ಗಾಡಿಯಲ್ಲಿ ಕುಳಿತ ಪ್ರಸಂಗಗಳೂ ಇದೆ . ನಮಗೆ ಮಕ್ಕಳಿಗೆ ನೋಡಲು ಬಣ್ಣಬಣ್ಣವಾಗಿ ಅಂದವಾಗಿ ಕಾಣುತ್ತಿದ್ದ ಜಟಕಾದಲ್ಲಿ ಹೋಗುವ ಆಸೆ .ಹಿರಿಯರು ಕಟ್ಟುಮಸ್ತಾಗಿ ಆರೋಗ್ಯವಾಗಿ ಕುದುರೆ ಇರುವ ಗಾಡಿ ಆರಿಸುತ್ತಿದ್ದರು ಈ ರೀತಿ ತುಂಬಾ ಓಡಿಯಾಡಿದ ನೆನಪುಗಳು. ಒಂದೆರಡು ಘಟನೆ ನೆನಪಿದೆ ಎಷ್ಟರಮಟ್ಟಿಗೆ ಮೆದುಳಲ್ಲಿ ಹೂತಿದೆ ಎಂದರೆ ಇತ್ತೀಚೆಗೆ ಕುದುರೆಗಾಡಿಯಲ್ಲಿ ಕೂತಾಗಲೂ ಎಡಕ್ಕೆ ವಾಲಿದರೇ ಬಿದ್ದೇಬಿಟ್ಟೆನೇನೋ ಅಂತ ಹೃದಯ ಬಾಯಿಗೆ ಬಂದಿತ್ತು. ಓಂದು ಬಾರಿ ಜೂ ಗಾರ್ಡನ್ನಿಗೆ ಹೊರಟಿದ್ದೆವು. ನನಗೆ ಆಗ 4 / 5 ವರ್ಷ ಇರಬಹುದು. ಮನೆಗೆ ಬಂದ ನೆಂಟರೆಲ್ಲ ಸೇರಿ ಒಂದೇ ಜಟಕಾದಲ್ಲಿ ಹೇರಿಕೊಂಡೆವು. ಚಿಕ್ಕವಳೆಂದು ಚಾಲಕನ ಪಕ್ಕದ ಸೀಟು ಖಾಯಂ ಆಗ ನನಗೆ . ಮುಂಭಾರ ಹಿಂಭಾರ ಎಲ್ಲ ಸರಿದೂಗಿಸಿ ಹೊರಟ . ಖುಷಿಯಾಗಿಯೇ ಇತ್ತು . ಅರಮನೆಯ ಹಿಂದಿನ ದ್ವಾರದ ರಸ್ತೆಯಲ್ಲಿ ಬಂದು ಬಲಗಡೆಗೆ ತಿರುಗಬೇಕಿತ್ತು . ಎಡಗಡೆಗೆ ಸ್ವಲ್ಪ ತಗ್ಗಿನಲ್ಲಿ ಅರಮನೆಯ ಮಾರಮ್ಮನ ದೇವಸ್ಥಾನದ ಅವರಣ. ಬಲಗಡೆಗೆ ದೊಡ್ಡಕೆರೆ ಏರಿ ಇನ್ನೂ ಕೆರೆ ಮುಚ್ಚಿರಲಿಲ್ಲ. ನೀರಿತ್ತು. ಧಡ್ ಧಡ್ ಗಾಡಿಯ ಸದ್ದು, ಒಳಗಡೆ ದೊಡ್ಡವರ ಮಾತು, ಮಕ್ಕಳ ಕೇಕೆ, ಸಾಹೇಬನ ಬಾಜೂ ಬಾಜೂ ಇವುಗಳ ಮಧ್ಯೆ ಎಡ ಚಕ್ರದ ಕಡಾಣಿ ಕಳಚಿ ಬಿದ್ದ ಸದ್ದು ಯಾರಿಗೂ ಕೇಳಿಲ್ಲ . ಮುಂದೆ ಅಷ್ಟು ದೂರ ಓಡಿ ಗಾಡಿಯ ಚಕ್ರ ಕಳಚಿ ಮಾರಮ್ಮನ ಗುಡಿ ಹಳ್ಳಕ್ಕೆ ಗಾಡಿ ಒಮ್ಮೊಗವಾಗಿ ರಸ್ತೆಯಲ್ಲಿ ಉರುಳಿತ್ತು . ಮುಂದೆ ಕುಳಿತ ನಾನು ರಸ್ತೆಗೆ….. ಒಳಗಿದ್ದವರು ಒಬ್ಬರ ಮೇಲೊಬ್ಬರು. ಎಲ್ಲರದೂ ಕಿರುಚಾಟ .ಸಣ್ಣಪುಟ್ಟ ತರಚು ಗಾಯ ನೆನಪಿನಲ್ಲಿ ಅವತ್ತಿನವೇ ಕ್ಷಣಗಳು ಇನ್ನೂ ಗಿರಕಿ ಹೊಡೆಯುತ್ತೆ .ಅಕಸ್ಮಾತ್ ಬಲ ಬದಿಯ ಕೆರೆಗೆ ಬಿದ್ದಿದ್ದರೆ ಏನು ಗತಿ?ಇದನ್ನು ಬರೆಯಲು ನಿಮ್ಮ ಮುಂದೆ ನಾನೇ ಇರುತ್ತಿರಲಿಲ್ಲವೇನೋ ? ಮುಂದೆ ಎಷ್ಟೋ ದಿನ ಜಟಕಾ ಹತ್ತಲು ಭಯಪಡುತ್ತಿದ್ದೆನಂತೆ . ಅಣ್ಣ 1 ಬಾರಿ ಪಕ್ಕದಲ್ಲಿ ಕೂರಿಸಿಕೊಂಡು 1 ಸುತ್ತು ಹೊಡೆಸಿಕೊಂಡು ಬಂದಮೇಲೆ ಸರಿ ಹೋದೆನಂತೆ. ಇನ್ನೊಂದು ಸ್ವಲ್ಪ ನಗೆಯ ಪ್ರಸಂಗ .ಆಗೆಲ್ಲ ಶ್ರೀರಂಗಪಟ್ಟಣ ಪ್ರವಾಸ ಅಂದರೆ ಬಸ್ ನಲ್ಲಿ ಅಲ್ಲಿಗೆ ಹೋಗಿ 1 ಜಟಕಾ ಮಾತಾಡಿಕೊಂಡು ದೇವಸ್ಥಾನ ನಂತರ ದರಿಯಾದವಲತ್ ಗುಂಬಜ್ ಮತ್ತು ಸಂಗಮಗಳಿಗೆ ಭೇಟಿ (ನಿಮಿಷಾಂಬ ಆಗಿನ್ನೂ ಪ್ರಸಿದ್ಧವಾಗಿರಲಿಲ್ಲ) . ಹಾಗೆ ಗಾಡಿಯಲ್ಲಿ ಯಥಾಪ್ರಕಾರ ಡಬಲ್ ಜನ ತುಂಬಿದ್ದೆವು . ದೇವಸ್ಥಾನ ಮುಗಿಸಿ ದರಿಯಾದೌಲತ್ ಕಡೆಗೆ ಹೊರಟರೆ ದಾರಿಯಲ್ಲಿ 1 ಸಿನಿಮಾ ಟೆಂಟ್ . ಕುದುರೆ ಅಲ್ಲಿಂದ ಮುಂದಕ್ಕೆ ಹೋಗ್ತಾನೇ ಇಲ್ಲ .ಪೂಸಿ ಹೊಡೆದರೂ ಇಲ್ಲ ಚಾಟಿ ಏಟಿಗೂ ಬಗ್ತಿಲ್ಲ. ಸಾಹೇಬ ಹೇಳಿದ್ದು ಬರೀ ಅಲ್ಲಿ ತನಕ ಮಾತ್ರ ಸವಾರಿ ಬರ್ತಿದ್ದಂತೆ. ಮುಂದೆ ಹೋಗ್ಲಿಲ್ಲ ಅದಕ್ಕೆ ಅಂತ . ಕಡೆಗೆ ಕುದುರೆ ಹಟಾನೇ ಗೆದ್ದು ನಮ್ಮನ್ನೆಲ್ಲ ಬೇರೆ ಗಾಡಿಗೆ ಹತ್ತಿಸಲಾಯಿತು. ಮನುಷ್ಯರಷ್ಟೇ ಅಲ್ಲ ಕುದುರೆಗಳಿಗೂ ಎಂತಹ “ಅಭ್ಯಾಸಬಲ” ನೋಡಿ ! ಆಗೆಲ್ಲ ಹೊಸ ಮದುವಣಿಗರು ಮೈಸೂರಿಗೆ ದಸರಾಗೆ ಬರುವ ವಾಡಿಕೆ . ಹೊಸಜೋಡಿಗಳು ಯಾವಾಗಲೂ ಷಾಪಸಂದ್ ಟಾಂಗಾದಲ್ಲಿ ಇಬ್ಬರೇ ಕೂತು ದೀಪಾಲಂಕಾರ ನೋಡಲು ಹೋಗುವುದು ಒಂದು ರಿವಾಜು. ಹೆಮ್ಮೆಯಿಂದ ನೆಂಟರಿಷ್ಟರಿಗೆಲ್ಲಾ ಕೊಚ್ಚಿಕೊಳ್ಳುವ ವಿಷಯವಾಗಿತ್ತು ಆಗ ಅದು. ಹಾಗೆ ಆ ಬಾರಿ ನಮ್ಮ ಮನೆಗೂ ನವ ವಿವಾಹಿತ ಜೋಡಿ ಬಂದಿತಂತೆ .ಹೊರಡುವ ಮೊದಲು ಸುಮ್ಮನೆ ಸೌಜನ್ಯಕ್ಕೆಂದು ನನ್ನ ಕರೆದರೆ ಹೋಗಿಯೇ ತೀರುವೆನೆಂದು ನನ್ನ ಹಠವಂತೆ . ಅಪ್ಪ ಅಮ್ಮ ಎಷ್ಟು ಹೇಳಿದರೂ ಕೇಳದೆ ಅತ್ತು ಕರೆದು ಅವರ ಜತೆ ಹೊರಟೇಬಿಟ್ಟೆನಂತೆ. ಪಾಪ ನನ್ನನ್ನು ಎಷ್ಟು ಬಯ್ದುಕೊಂಡಿದ್ದರೋ ಏನೋ ..ಆದರೆ ಇದೆಲ್ಲಾ ಒಂದು ಚೂರೂ ನೆನಪಿಲ್ಲ ನನಗೆ. ಅಮ್ಮ ಹೇಳುತ್ತಿದ್ದುದು ಅಷ್ಟೆ ಬರಬರುತ್ತಾ ಪೆಟ್ರೋಲ್ ವಾಹನಗಳು ಹೆಚ್ಚಾಗಿ ದ್ವಿಚಕ್ರ ವಾಹನ, ಚತುಷ್ಚಕ್ರ ವಾಹನಗಳ ಭರಾಟೆ ಹೆಚ್ಚಿದ ಮೇಲೆ ಸಮಯದ ಹಿಂದಿನ ಓಟದ ಸ್ಪರ್ಧೆಯಲ್ಲಿ ನಿಧಾನಗತಿಯ ಈ ಸಂಚಾರ ಸಾಧನ ಮೂಲೆಗುಂಪಾಯಿತು. ಒಂದಷ್ಟು ದಿನ ಸರಕು ಸಾಗಾಣಿಕೆ ವಾಹನವಾಗಿ ಮುಂದುವರಿಯಿತು. ಈಗ ಸವಾರಿಯ ಶೋಕಿಯ ಅನುಭವಕ್ಕಷ್ಟೇ ಬಳಕೆ. ಪ್ರವಾಸಿಗರೇ ಹೆಚ್ಚಿನ ಸಂಖ್ಯೆಯ ಗ್ರಾಹಕರು . ಇದನ್ನೇ ಉದರಂಭರಣಕ್ಕಾಗಿ ನೆಚ್ಚಿದ್ದ ಕುಟುಂಬಗಳಲ್ಲಿ ಎಷ್ಟೋ ಕುಟುಂಬಗಳು ಬೇರೆ ಉದ್ಯೋಗವನ್ನರಸಿ ಹೋಗಿವೆ . ಜಟಕಾದ ಬಗ್ಗೆ ಹೇಳಿದ ಮೇಲೆ ಕುದುರೆಯ ಬಗ್ಗೆ ಒಂದೆರಡು ಮಾತು ಹೇಳದಿದ್ದರೆ ಪೂರ್ಣವಾಗುವುದಿಲ್ಲ .ಮುಂಚೆ ಈ ಕುದುರೆಗಳನ್ನು ದೂರದ ಗಳಿಂದ ತರಿಸಿಕೊಳ್ಳುತ್ತಿದ್ದರಂತೆ . ಕುದುರೆಯ ಮಾಲೀಕರು ಗಳಂತೂ ಅದನ್ನು ತಮ್ಮ ಮಕ್ಕಳಷ್ಟೇ ಪ್ರೀತಿಯಿಂದ ಸಾಕಿ ಹುರುಳಿ ಹಸಿಹುಲ್ಲು ಒಣಹುಲ್ಲುಗಳನ್ನು ಕೊಡುತ್ತಿದ್ದರು. ಅವುಗಳಿಗೆ ಅಲಂಕಾರ ಅಂತೂ ಪೈಪೋಟಿಯಲ್ಲಿ ಮಾಡುತ್ತಿದ್ದರು. ಬಣ್ಣಬಣ್ಣದ ಮುತ್ತಿನ ಗೆಂಡೆಗಳು ಕುಚ್ಚುಗಳು ನೋಡಲು 2 ಕಣ್ಣು ಸಾಲ್ತಿರಲಿಲ್ಲ . ಹಾಗೆಯೇ ಬಡಕಲಾದ ನಿಶ್ಶಕ್ತವಾದ ಕಾಲು ಮುರಿದುಕೊಂಡ ವಯಸ್ಸಾದ ಕುದುರೆಗಳನ್ನು ಹಾಗೆಯೇ ಬೀದಿಗೆ ಬಿಟ್ಟು ಬಿಡುತ್ತಿದ್ದರಿಂದ ಬೀದಿ ಹಸುಗಳ ತರಹ ಬೀದಿ ಕುದುರೆಗಳ ಕಾಟವೂ ಇರುತ್ತಿತ್ತು ಆಗೆಲ್ಲ . ಮೇರಾ ರಾಜ ಬೇಟಾ, ಮೇರಾ ಸೋನಾ ಬೇಟಾ ಎಂದೆಲ್ಲಾ ಮುದ್ದಿಸುವಂತೆಯೇ ಚಾಟಿಯೇಟು ಹೊಡೆಯುವಾಗ ಹರಾಮ್ ಜಾದೇ ಬೈಗುಳವೂ ಇರುತ್ತಿತ್ತು. ಒಟ್ಟಿನಲ್ಲಿ ಕುದುರೆ ಗಾಡಿ ಓಡಿಸುವವರ ಮನೆಯ ಸದಸ್ಯನಂತೆಯೇ ಆಗಿಬಿಟ್ಟಿರುತ್ತಿತ್ತು ಕುದುರೆಗಳೂ. ಪಾರಂಪರಿಕ ವಸ್ತುಗಳನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಮೈಸೂರು ಅಂದರೆ ಅರಮನೆ, ಮಲ್ಲಿಗೆ, ವೀಳೆಯದೆಲೆ, ಬದನೆಕಾಯಿಗಳ ಹಾಗೆ ಟಾಂಗಾಗಳು ನೆನಪಿನ ಬೆಸುಗೆಗೆ ಜೋಡಿಸಿಕೊಳ್ಳುತ್ತದೆ. ಪ್ರವಾಸಿಗರಿಗೆ ಇದರ ಪರಿಚಯಕ್ಕೆಂದು NERM ಯೋಜನೆಯಡಿ ಹೊಸ ಕುದುರೆಗಾಡಿಗಳನ್ನು ಕೊಳ್ಳಲು ಸಾಲ ರೂಪದಲ್ಲಿ ಧನಸಹಾಯ ಮಾಡಿ ಈ ಸಾಂಸ್ಕೃತಿಕ ಸಂಚಾರಿ ರಾಯಭಾರಿಗೆ ಕಾಯಕಲ್ಪ ಕಲ್ಪಿಸಲಾಗುತ್ತಿದೆ ಅದೇನೇ ಆದರೂ ಜನತೆಯೂ ಸಹ ಇದನ್ನು ಪ್ರೋತ್ಸಾಹಿಸುವ ಮೂಲಕ ಮೈಸೂರಿನ ಹೆಮ್ಮೆಯ ಪ್ರಸಿದ್ಧಿಯ ಟಾಂಗಾಗಳು ಉಳಿಯುವಂತೆ ಮಾಡಬೇಕು . ಇವು ಈಗ ವಿರಳವಾಗಿದ್ದರೂ ಪಳೆಯುಳಿಕೆಯಾಗಿಲ್ಲ ಎಂಬುದಷ್ಟೇ ನೆಮ್ಮದಿ ತರುವ ವಿಷಯ . ಇನ್ನೂ ಜಟಕಾ ಅಂದರೆ ಕನ್ನಡ ಸಾಹಿತ್ಯ ಪ್ರೇಮಿಗಳಿಗೆಲ್ಲ ಡಿವಿಜಿಯವರ ಈ ಪ್ರಸಿದ್ಧ ಮಂಕುತಿಮ್ಮನ ಕಗ್ಗ ನೆನಪಿಗೆ ಬಾರದೆ ಇರದು . ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ ಕುದುರೆ ನೀನಂ ಅವನು ಪೇಳ್ದಂತೆ ಪಯಣಿಗರು ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು ಪದಕುಸಿಯೆ ನೆಲವಿಹುದು ಮಂಕುತಿಮ್ಮ _ ಡಿ ವಿ ಜಿ ಇಲ್ಲಿ ಕುದುರೆ ಗಾಡಿಗೂ ಮನುಷ್ಯನ ಜೀವನಕ್ಕೂ ಸಾಮ್ಯತೆಯನ್ನು ಹೇಳುತ್ತಾ ಹಿರಿದಾದ ಬಾಳ ತತ್ವವನ್ನು ಅನಾವರಣಗೊಳಿಸಿದ್ದಾರೆ. ನಿಜ! ನಮ್ಮ ಬದುಕು ಒಂದು ಜಟಕಾ ಗಾಡಿಯೇ. ನಾವೆಲ್ಲಾ ಹೇಳಿದಂತೆ ಮಾತ್ರ ನಡೆಯಬೇಕಾದ ಕುದುರೆಗಳು. ಓಡಿಸುವ ಸಾಹೇಬ ವಿಧಿ! ಆ ದೇವರು. ಅವನ ಮರ್ಜಿ ಇದ್ದೆಡೆಗೆ ನಮ್ಮ ಪಯಣ. ನಲಿವು ಸಂತೋಷದ ಮದುವೆ ಮನೆಗಾದರೂ ಆಗಿರಬಹುದು ; ನೋವು ಸಂಕಟದ ಸ್ಮಶಾನಕ್ಕಾದರೂ ಕರೆದೊಯ್ಯಬಹುದು . ಕರ್ತವ್ಯಗಳ ಛಡಿ ಏಟಿನ ಜವಾಬ್ದಾರಿಗಳ ಭಯ ಕೆಲವೊಮ್ಮೆ ಮುನ್ನಡೆಸಿದರೆ, ಹುರುಳಿ ಹುಲ್ಲು ವಿರಾಮದ ಆಮಿಷಗಳು ವೇಗ ಹೆಚ್ಚಿಸಬಹುದು. ಆದರೆ ಪಯಣವಂತೂ ನಿರಂತರ . ಇನ್ನು ನಡೆಯಲಾರೆ ನನ್ನಿಂದಾಗದು ಎಂದು ಕುಸಿಯಲೂ ಬಹುದು . ಆಶ್ರಯ ಕೊಡಲು ಭೂಮಿತಾಯಿ ಇದ್ದಾಳೆ ತಾತ್ಕಾಲಿಕ ವಿರಾಮದ ಸಾವರಿಸಿ ಏಳುವವರೆಗೂ ಆಸರೆಯಾಗಿ ಅಥವಾ ಮುಂದೆ ಏಳಲೇ ಆಗದು ಎಂದಾಗ ಶಾಶ್ವತವಾಗಿ ಮಲಗಲು ತಾವು